ಋಣ ಭಾರ
ಪಡೆದ ಸಹಾಯಕ್ಕೆ ಪ್ರತಿಯಾಗಿ
ಮತ್ತೊಬ್ಬರ ಹಂಗಿನಲ್ಲಿ ನಾನಿರಬಾರದೆಂದು
ಋಣ ತೀರಿಸುವ ಸಲುವಾಗಿ
ಹಾತೊರೆಯುವ ಮನಸು ಮಿಗಿಲಾಗಿ.
ಅದೆಷ್ಟು ಹೊತ್ತು ತಂದರು
ಜೀವನ ಪೂರ್ತಿ ನಿಂತರು
ಮಣ್ಣಲ್ಲಿ ಮಣ್ಣಾಗಿ ಹೋದರೂ
ಕೆಲವು ಋಣಗಳು ತೀರದು.
ಹೊತ್ತು ನಿಂತ ಭೂಮಿಯ
ಹೆತ್ತು ಸಲುಹಿದ ತಂದೆ ತಾಯಿಯ
ಒಡ್ಡಹುಟ್ಟಿದವರ ಪ್ರೀತಿ ಬಾಂಧವ್ಯ
ವಿದ್ಯೆ ಕಲಿಸಿದ ಗುರುಗಳ
ಋಣ ಯಾವತ್ತೂ ತೀರಿಸಲಸಾಧ್ಯ.
ಹಸಿದಾಗ ಅನ್ನ ಇಕ್ಕಿ
ಹೊಟ್ಟೆ ತುಂಬಿಸಿದ ಕೈಗಳ
ನಮ್ಮ ನೋವು ನಲಿವುಗಳ
ಹಂಚಿಕೊಂಡು ಸಂತೈಸುವ ಕೈಗಳ
ಋಣವನ್ನು ಎಂದೂ ತೀರಿಸಲಾಗದು.
ರೇಣುಕಾ ವಾಯ್.ಎ.
ಹಟ್ಟಿ ಚಿನ್ನದ ಗಣಿ.