ಸ್ನೇಹಿತರಿಗೊಂದು ಪತ್ರ
ಹಾಯ್ !
ಹೇಗಿದ್ದಿರಾ ?
ಸುಮಾರು ಇಪ್ಪತ್ತು ವರ್ಷಗಳಾಗುತ್ತಾ ಬರುತ್ತಿದೆ ಅಲ್ವಾ ? ಎಲ್ಲಿ ಕಳೆದು ಹೋದವು ಆ ದಿನಗಳು ? ನೀವೆಲ್ಲ ತುಂಬ ಬದಲಾಗಿದ್ದಿರಿ ಅನಿಸುತ್ತಿದೆ. ಮಾತಾಡಿ. ಆ ಆಗ್ರಾದ ತಾಜ್ಮಹಲ್ ಹತ್ತಿರ ತೆಗೆದ ಪೋಟೋ ಅದೇಷ್ಟು ಸುಂದರವಾಗಿದೆ ಅಲ್ವಾ ? ಈ ಪೋಟೋ ನೋಡಿ ನಿಮ್ಮೊಂದಿಗೆ ಒಂದೆರೆಡು ಮಾತುಗಳು ಬರೆಯಬೇಕೆನಿಸುತ್ತಿದೆ.
ಇಲ್ಲಿ ಯಾವುದಕ್ಕೂ ಮುಜುಗರ ಬೇಡ. ಈ ನಮ್ಮ 2005 ರ ಬಿ.ಇಡಿ ಸಹಪಾಠಿಗಳ ಸ್ನೇಹ ಹೀಗೆ ಶಾಶ್ವತವಾಗಿರಲಿ. ಈಗ ನೀವೆಲ್ಲ ಹೇಗಿದ್ದಿರಿ ? ಯಾರು ಎಲ್ಲಿ ? ಯಾವ ಊರಲ್ಲಿ ? ಏನು ಕೆಲಸ ಮಾಡ್ತಾ ಇದ್ದಿರಿ ? ಕುಶಲವೇ ? ಕ್ಷೇಮವೇ ? ಎಲ್ಲರಿಗೂ ಸರ್ಕಾರಿ ನೌಕರಿ ಸಿಗಲಿಕ್ಕಿಲ್ಲ ಆದರೂ ನೀವೆಲ್ಲ ಖುಷಿಯಾಗಿ ಇದ್ದಿರಿ ತಾನೆ ? ಎಲ್ಲರೂ ಈಗ ಮೊದಲಿನಂತ್ತಿಲ್ಲ . ಎಲ್ಲರಿಗೂ ಒಂದಲ್ಲ ಒಂದು ಸಂಸಾರದ ಜಂಜಾಟದಲ್ಲಿ ಬ್ಯೂಜಿಯಾಗಿರಬಹುದು ಅಂತ ಅಂದುಕೊಂಡಿದ್ದೇನೆ.
ಬಹುತೇಕ ಎಲ್ಲರೂ ಈಗ ತಮ್ಮ ತಮ್ಮ ಮುದ್ದು ಮಕ್ಕಳ ಪೋಟೋ ಮೊಬೈಲ್ ಡಿಪಿಗೆ ಇಟ್ಟುಕೊಂಡು ವಾಟ್ಸಪ ಗುಂಪಿನಲ್ಲಿ ಸೇರಿರುವುದರಿಂದ ತಾವು ಯಾರು ? ಏನು ? ಎತ್ತ ? ಅನ್ನೊದೇ ಗೊತ್ತಾಗದಂತಾಗಿದೆ. ಆದ್ದರಿಂದ ತಾವೂಗಳು ಈಗ ಮತ್ತೊಮ್ಮೆ ತಮ್ಮ, ತಮ್ಮ ವೈಯಕ್ತಿಕ ಪೋಟೋದೊಂದಿಗೆ ಸ್ವ ಪರಿಚಯ ಮಾಡಿಕೊಂಡರೆ ಚನ್ನಾಗಿರುತ್ತದೆ ಅಲ್ವಾ ? ಹಾಗೆ ಪರಿಚಯ ಮಾಡಿಕೊಂಡರೆ ಈಗ ನೀವು ಹೇಗೆಲ್ಲ ಇದ್ದಿರಿ ? ಅನ್ನೊದು ತಿಳಿದು ಈ ಸ್ನೇಹದ ಬೆಸುಗೆಗೆ ಅರ್ಥ ಬರುವುದಲ್ಲವೇ ? ತಡವೇಕೆ ? ಎಲ್ಲರೂ ತಮ್ಮ ತಮ್ಮ ಇತ್ತೀಚಿನ ಪೋಟೋದೊಂದಿಗೆ ಹೆಸರು, ಊರು, ವೃತ್ತಿಯ ಬಗ್ಗೆ ತಿಳಿಸಿ. ಮತ್ತು ತಮಗೆ ಈಗ ಎಷ್ಟು ಮಕ್ಕಳು ? ಅವರೆಲ್ಲ ಎನು ಓದುತಿದ್ದಾರೆ ? ಅನ್ನೊದು ಈ ಗುಂಪಿನಲ್ಲಿ ಹಂಚಿಕೊಳ್ಳಬಹುದಲ್ವಾ ? ಹ್ಞಾ! ಇರಲಿ.
ಮೊದಲು ನಾನೇ ಪರಿಚಯ ಮಾಡಿಕೊಳ್ಳುವೆ. ನನ್ನ ಹೆಸರು ಮಚ್ಚೇಂದ್ರ ಅಣಕಲ್. ನಾನೀಗ ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ 2016 ರಿಂದ ಸೇವೆ ಸಲ್ಲಿಸುತ್ತಿರುವೆ. ನನಗೆ ಇಬ್ಬರು ಮಾತ್ರ ಗಂಡು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ 20 ವರ್ಷದವ. ಆತ B.com ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ಮತ್ತೊಬ್ಬನಿಗೆ 14 ವರ್ಷ. ಆತ 8 ನೇ ತರಗತಿಯಲ್ಲಿ ಓದುತಿದ್ದಾನೆ. ಈಗ ನೀವು ನಿಮ್ಮ ಪರಿಚಯ ತಿಳಿಸಿ. ಇನ್ನೂ ಮುಂದೆ ನಾವೆಲ್ಲರೂ ಮತ್ತೆ ಹತ್ತು ವರ್ಷದ ಮೇಲೆ ಹೀಗೆ ಆಕಸ್ಮಿಕ ಸಿಕ್ಕರೆ, ಮಕ್ಕಳು, ಮೊಮ್ಮಗಳು ಸೋಸೆ ಮತ್ತು ಅಳಿಂದಿರ ಬಗ್ಗೆ ಚರ್ಚೆ ಮಾಡೋಣ ! ಎನಂತ್ತಿರಿ ? ಕಾಲ ಈಗ ಮೊದಲಿನಂತ್ತಿಲ್ಲ ! ಎಲ್ಲರೂ ಊಟ ತಿಂಡಿ ಸಮಯಕ್ಕೆ ಸರಿಯಾಗಿ ಮಾಡ್ತಾ ಇರಿ. 40 ವರ್ಷ ದಾಟಿದ ಮೇಲೆ ಬಿಪಿ, ಸುಗರು ಮೊದಲಾದ ಸಣ್ಣ ಪುಟ್ಟ ಕಾಯಿಲೆಯ ಸಮಸ್ಯೆಗಳು ಕಾಡುತ್ತವೆ. ಮೊದಲು ಆರೋಗ್ಯ ಚನ್ನಾಗಿಟ್ಟು ಕೊಳ್ಳಿ. ದಿನ ಯೋಗ,ಧ್ಯಾನ ವ್ಯಾಯಾಮ, ವಾಕಿಂಗ್ ಮಾಡುತ್ತಾ ಇರಿ. ಧೂಮಪಾನ ಮತ್ತು ಮದ್ಯಪಾನದಿಂದ ಶಾಶ್ವತ ದೂರವಾಗಿರಿ. ಯಾರೊಂದಿಗೂ ಅನಾವಶ್ಯಕ ಕಾಲಹರಣ ಮಾಡಬೆಡಿ. ದಿನಾಲು ನಿಮ್ಮ ನಿಮ್ಮ ಕಾಯಕದಲ್ಲಿ ತಲ್ಲಿನರಾಗಿರಿ. ದೇಹ ಆರೋಗ್ಯದಿಂದ ಇದ್ದರೆ ಮಾತ್ರ ಮಾನಸಿಕ ಆರೋಗ್ಯವು ಸುಧಾರಿಸುತ್ತದೆ. ಅನ್ನೊದು ನೆನಪಿರಲಿ.
2019 ರಲ್ಲಿ ಬಂದ ಕೊರೊನಾ ಮಹಾಮಾರಿ ರೋಗದಿಂದ ನೀವು ಎಲ್ಲರೂ ಬಚಾವ್ ಅಗಿದ್ದಿರಿ ಅನ್ನೊದೇ ತುಂಬ ಖುಷಿಯ ವಿಚಾರವಾಗಿದೆ. ಮತ್ತು ನೀವು ರಚಿಸಿದ ಈ ಮೊಬೈಲ್ ವಾಟ್ಸಪ ಗುಂಪಿನಿಂದ ನಿಮ್ಮ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ತಿಳಿದು ತುಂಬ ಸಂತಸವಾಯ್ತು. ದೇವರು ನಿಮ್ಮೇಲ್ಲರಿಗೆ ನೂರಾರು ವರ್ಷಗಳ ಕಾಲ ಅಯುರಾರೋಗ್ಯ ಭಾಗ್ಯ ಕೊಟ್ಟು ಕರುಣಿಸಿ, ಕಾಪಾಡಲೆಂದು ಆ ದೇವರಲ್ಲಿ ವಿನಮ್ರತೆಯಿಂದ ಪ್ರಾರ್ಥಿಸುವೆ.
ನೀವು 2005 ರ ಬಿ.ಇಡಿ.ಸ್ನೇಹಿತರ ಬಳಗದ ವಾಟ್ಸಪ ಗ್ರೂಪಿನ ಡಿಪಿಗೆ ಇಟ್ಟ ಈ ತಾಜಮಹಲ್ ಸ್ನೇಹಿತರ ಗ್ರೂಪ್ ಪೋಟೋ ನನ್ನಲಿನ ಕೊಸಿನಾ SLR Camera ದಿಂದ ಆಗ ತೆಗೆದಿದ್ದ ನೆನಪು 19 ವರ್ಷವಾದರು ಈ ಚಿತ್ರ ಮರೆಯದೆ ಕಣ್ಣಿಗೆ ಕಟ್ಟಿರುವುದರಿಂದ ಕಾಲೇಜಿನ ಆ ಹಳೆಯ ನೆನಪುಗಳು ಶಾಶ್ವತವಾಗಿ ಉಳಿದುಕೊಂಡಿವೆ. ಈ ಪೋಟೋ ಹಾಕಿ ಸ್ನೇಹದ ಜೇನುಗೂಡಿನಂತಹ ನೆನೆಪು ಮತ್ತೆ ಮತ್ತೆ ಮರುಕಳಿಸುವಂತೆ ಮಾಡಿದ್ದಿರಿ. ಹಾಗಾಗಿ ತಮಗೆ ಮತ್ತೊಮ್ಮೆ ತುಂಬು ಹೃದಯದ ಹಾರ್ದಿಕ. ಅಭಿನಂದನೆಗಳು ಸಲ್ಲಿಸುವೆ.
ಇಂತಿ ನಿಮ್ಮ ಸಹಪಾಠಿ ಸ್ನೇಹಿತ.
– ಮಚ್ಚೇಂದ್ರ ಅಣಕಲ್