ಅಮ್ಮನ ಆಸರೆ
ಅಮ್ಮ ಒಬ್ಬಳು ಇದ್ದರೆ ಸಾಕು
ಮಗುವಿನ ಜೀವಕೆ ಮತ್ತೇನು ಬೇಕು
ತಾಯಿಯ ಕರ ಸ್ಪರ್ಶವೆ ಸಾಕು
ಬೆಳೆಯುವ ಸಿರಿಗೆ ಮತ್ತೇನು ಬೇಕು.
ನವ ಮಾಸಗಳ ಕುಡಿಯ ಹೊತ್ತು
ನೋವ ನುಂಗಿ ನಗುವಳು ಹೆತ್ತು
ಆರೈಕೆ ಮಾಡುವಳು ಇತ್ತು ಮುತ್ತು
ಮೆಲ್ಲಗೆ ಬೆಳೆಯುವೆವು ತಿಂದು ಕೈತುತ್ತು .
ಮಾತೆಯ ಮಮತೆಯ ಒಡಲು
ಪ್ರೀತಿ ತುಂಬಿ ಉಕ್ಕುವ ಕಡಲು
ಜೋಗುಳ ಹಾಡಿ ಜೀಕುವ ಮಡಿಲು
ಹಾಯಾಗಿ ಮಲಗುವ ತೊಟ್ಟಿಲು .
ರೇಣುಕಾ ವಾಯ್.ಎ.