ತಾತ ನಗುತ್ತಿದ್ದಾನೆ
ಕಛೇರಿಗಳಲ್ಲಿ ಸತ್ಯ ಕ್ಕೆ ಮೊಳೆಹೊಡೆದು ಗೋಡೆಗೆ ನೇತು ಹಾಕಲಾಗಿದೆ/
ತಾತಾ ನಗುತ್ತಿದ್ದಾನೆ//
ಪ್ರಮುಖ ನಗರಗಳಲ್ಲಿ ವೃತ್ತದಲ್ಲಿ ತಾತನನ್ನು ನಿಲ್ಲಿಸಿದ್ದಾರೆ
ಆತನ ಆದರ್ಶ ಗಳನ್ನು ನಿಲ್ಲಿಸಲಾಗಿದೆ//
ತಾತಾ ನಗುತ್ತಿದ್ದಾನೆ/
ಆರೋಪಿಗಳು ತಾತನಿಗೆ ಹಾರ ಹಾಕಿ ಕೈ ಮುಗಿಯುತ್ತಿದ್ದಾರೆ
ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ
ತಾತಾ ನಗುತ್ತಿದ್ದಾನೆ//
ತಾತನೆದೆಗೆ ಗುಂಡು ಬಿದ್ದಾಗಲೇ
ಆತನೊಂದಿಗೆ ಸತ್ತು ಹೋಯಿತು ಸತ್ಯ ಮೇವ ಜಯತೆ
ತಾತಾ ಈಗಲೂ ನಗುತ್ತಿದ್ದಾನೆ//
ಉಸಿರು ಹಾರಿ ಹೋಗುವ ಮುನ್ನ ನೀ ಹೇ ರಾಮ್ ಎಂದೆಯಲ್ಲ
ಈಗ ಆ ರಾಮನನ್ನೆ ಮರೆತಿದ್ದಾರೆ
ಮತ್ತೇ ತಾತಾ ನಗುತ್ತಿದ್ದಾನೆ//
ತನ್ನ ಹಂತಕರ ಸಂತತಿ ಸಾವಿರವಾಗುತ್ತಿರುವದನ್ನು ನೋಡಿಯೂ
ತಾತಾ ನಗುತ್ತಿದ್ದಾನೆ !
ನಿನ್ನ ನಗುವಿನ ಕಾರಣ ನನಗೆ ಅರ್ಥವಾಗಲಿಲ್ಲ
ಶಬ್ದಕೋಶ ದಲ್ಲೂ ಅರ್ಥ ಸಿಗದೆಂದು
ತಾತಾ ಮತ್ತೇ ನಗುತ್ತಿದ್ದಾನೆ !
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ ಗದಗ
ಅದ್ಭುತವಾದ ಕವಿತೆಗಳು ಸಮಕಾಲಿನ ತಲ್ಲಣಗಳಿಗೆ ಕನ್ನಡ ಹಿಡಿಯುತ್ತವೆ.. ಅನಂತ ಅಭಿನಂದನೆಗಳು ಕವಿಗಳಿಗೆ