Oplus_131072

ಬಹಾದ್ದೂರ್- ಬಾಪೂಜಿ.

ಭಾರತ ಮಾತೆಯ ಪಾಪು
ನೀನೇ ನಮ್ಮಯ ಬಾಪೂಜಿ.
ಭಾರತಾಂಬೆಯ ಶಕ್ತಿಯ ಸೊಂಪು
ನೀನೇ ನಮ್ಮಯ ಶಾಸ್ತ್ರೀಜೀ.

ನಿಮ್ಮಯ ಈ ಜನುಮ ದಿನ
ಭಾರತೀಯರ ಸಂತಸದ ಕ್ಷಣ
ಸಂಭ್ರಮದಿ ಸೇರಿ ನಾವುಗಳೆಲ್ಲ
ಸ್ಮರಿಸೋಣ ಈ ದಿವ್ಯ ಚೇತನಗಳ.

ಜಾತಿ ಧರ್ಮ ಮತಗಳ ಕೊಂದು
ಭಾರತೀಯರು ನಾವೆಲ್ಲ ಒಂದು
ಭಾವೈಕ್ಯತೆಯಲಿ ಕೂಡಿ ಬಾಳುವೆವು
ಭೇಧ ಭಾವಗಳ ತೊರೆದು .

ಶಾಂತಿ ಅಹಿಂಸೆಯ ನಿಮ್ಮ ಪಾಠ
ನಮ್ಮ ಬಾಳಿಗೆ ರಸದೂಟ
ದಾರಿ ದೀಪವು ನಮಗೆಲ್ಲ
ಆ ದಿಟ್ಟತನದ ನಿಮ್ಮ ಹೋರಾಟ.

ರೈತ, ಯುವಪಡೆಯ ಕಾರ್ಯವೈಖರಿ
ದೇಶದ ಬೆನ್ನೆಲುಬು ಎಂದಿರಿ
ಸರಳ ಸಜ್ಜನಿಕೆಯ ವ್ಯಕ್ತಿತ್ವ
ಆಯಿತು ನಮಗೆ ಮಾದರಿ.

ಉಳಿಸುವೆವು ನಿಮ್ಮ ಧ್ಯೇಯಗಳ
ಅನುಸರಿಸುವೆವು ನಿಮ್ಮ ಸಿದ್ದಾಂತಗಳ
ಮಹಾತ್ಮರೇ ಹರಸಿ ನಮಗಿಂದು
ಸುಖವಾಗಿರಲಿ ಭಾರತಾಂಬೆಯ ಕುಡಿಗಳು.

    ✍ಡಾ. ಮಹೇಂದ್ರ ಕುರ್ಡಿ
          ಹಟ್ಟಿ ಚಿನ್ನದ ಗಣಿ.ರಾಯಚೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ