Oplus_131072

ನಮ್ಮ ಧ್ರುವತಾರೆಗಳು

ಗಾಂಧಿ ಶಾಸ್ತ್ರಿ ನಾಯಕರಿವರು
ದೇಶಕ್ಕಾಗಿ ದುಡಿದವರು
ಜೀವದ ಹಂಗನು ತೊರೆದು
ಪ್ರಾಣವೇ ಪಣಕಿಟ್ಟವರು

ಹಗಲಿರುಳೆನ್ನದೆ ಸಮರ ಗೈದರು
ನಾಡಿನ ಜನರ ಹಿತ ಬಯಸಿ
ಸವಿಯಲಿತ್ತರು ಗೆಲುವಿನ ಜೇನು
ದೇಶದ ಜನರಿಗೆ ಆದರಿಸಿ

ಅಹಿಂಸೆ ಐಕ್ಯತೆ ತತ್ವವ ಬೋಧಿಸಿ
ಅವರಾಗಿಹರು ಪ್ರೀತಿಯ ಬಂಧು
ಜೈ ಜವಾನ ಜೈ ಕಿಸಾನ ಘೋಷಣೆ
ಅವರ ಸಿದ್ಧಾಂತ ಎಂದೆಂದು

ಭಾರತಾಂಬೆಯ ನೆಚ್ಚಿನ ಕುವರರು
ಧ್ರುವ ತಾರೆಗಳು ಅನವರತ
ಜಾತಿ ಧರ್ಮದ ಕೊಂಡಿಯ ಕಳಚಿ
ಬೀರಿದರವರು ಮನುಜಮತ

ಮಹನೀಯರ ಮಾರ್ಗದಿ ನಡೆದರೆ
ದೇಶದ ಏಳಿಗೆಯಾಗುವುದು
ನುಡಿಗಳು ನಿಷ್ಠೆಯಲನುಸರಿಸಲು
ಅಮೃತವಲ್ಲಿ ದೊರಕುವುದು.

ಮಾಣಿಕ ನೇಳಗಿ ತಾಳಮಡಗಿ.
ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ