ಉತ್ತರ ಹೇಳಿ ಗಾಂಧಿ.
ಅಹಿಂಸೆ ,ಅಹಿಂಸೆ ,ಎಂದು ಹೋರಾಡಿದೆ ಗಾಂಧಿ
ಆದರೆ ನೀ ತೀರಿದ್ದು ಮಾತ್ರಹಿಂಸೆಯಿಂದ ಏಕೆ ಗಾಂಧಿ?
ಇದಕ್ಕೂತ್ತರವ ಹೇಳಿ ಗಾಂಧಿ.
ಚರಕ ಹಿಡಿದು ನೂಲು ತೆಗೆದು ಬಟ್ಟೆ ನೆಯಿದಿ ಗಾಂಧಿ.
ಆದರೆ ನೀನು ಮಾತ್ರ ಅರೆ ಬಟ್ಟೆ ಏಕೆ ಗಾಂಧಿ?
ಇದಕ್ಕೆ ಉತ್ತರ ಹೇಳಿ ಗಾಂಧಿ.
ತನ್ನ ದೇಶ ಜನರಿಗಾಗಿ ಹಗಲಿರಳು ಹೋರಾಡಿದೆ ಗಾಂಧಿ.
ಆ ಜನರಿಂದಲೇ ನಿನ್ನ ಅಂತ್ಯ ಏಕಾಯ್ತು ಗಾಂಧಿ? ಇದಕ್ ಉತ್ತರ ಹೇಳಿ ಗಾಂಧಿ.
ಎದೆಯಲ್ಲಿ ನೂರು ನೋವು ಸಾವಿರ ಅವಮಾನವ ಅಡಗಿಸಿಕೊಂಡಿರುವೆ ಗಾಂಧಿ. ಆದರೂ ನೋಟಿನ ಮೇಲೆ ನಿನ್ನ ಮುಗ್ಧ ನಗು ಏಕೆ ಗಾಂಧಿ?
ಇದಕ್ ಉತ್ತರ ಹೇಳಿ ಗಾಂಧಿ.
ಪಾಪುನಿಂದ ಬಾಪು ನೀ ಆದೆ ಗಾಂಧಿ ಸತ್ಯ ಅಹಿಂಸೆ ನಿನ್ನ ಮೂಲ ಮಂತ್ರ ವಾದವು ಗಾಂಧಿ.
ನಿನ್ನ ಯೋಚನೆಗಳಾದವು ಮಹಾತ್ಮ
ಅದಕ್ಕೆ ನೀ ಆದೆ ಮಹಾತ್ಮ ಗಾಂಧಿ.
ಜಗತ್ತಿಗೆ ಸೂರ್ಯ ಚಂದ್ರರು ಒಬ್ಬರೇ ಇರುವಂತೆ ಗಾಂಧಿ ನಮಗೆ ನೀನೊಬ್ಬನೇ ರಾಷ್ಟ್ರಪಿತ ಗಾಂಧಿ. ನಿನ್ನ ಆತ್ಮ ಪರಮಾತ್ಮ ಮಹಾತ್ಮ
ಅದಕ್ಕೆ ನೀನಾದೆ ಮಹಾತ್ಮ ಗಾಂಧಿ.
–ಸುಮಂಗಲ ಸಹ ಶಿಕ್ಷಕಿ GHPS ವರ್ಕ್ ನಳ್ಳಿ. ಯಾದಗಿರಿ
ಸುಂದರ ಬರಹ