ಆಧಾರ್ ಕಾರ್ಡ್
ಕಾಯೋದೆ ಕೆಲಸ ಈ ಆಧಾರ್ ಕಾರ್ಡ್ ನೋಂದಾವಣೆ ಮಾಡಿಸಲು ಸರದಿ ಸಾಲಿನಲ್ಲಿ ನಿಂತು ನಿಂತು ಸುಸ್ತಾಗೋಯ್ತು ಇಡಿ ದಿನದ ಕೆಲಸವೇ ಸರಿ ನಮಗೆಲ್ಲಾ
ಬೆರಳುಗಳ ಒತ್ತಿ ಒತ್ತಿ ಹೋಗಿವೆ ಅದರ ರೇಖೆಗಳು ಆದರೂ ಮೂಡಿ ಬರಲೇಬೇಕು ಹೆಬ್ಬೆಟ್ಟಿನ ಗುರುತು ನಮ್ಮೆಲ್ಲರದು ಗಣಕಯಂತ್ರಕೆಲ್ಲಾ
ನಮಗೆ ಇಲ್ಲದ ಬೆಲೆ ನಮ್ಮ ಬೆರಳಿನ ಗುರುತಿಗೆ ಎಷ್ಟೊಂದು ಮಹತ್ವವಿದೆ ಎಲ್ಲ ಕೆಲಸ ಕಾರ್ಯಗಳು ನಡೆಯುವುದು ಇದರಿಂದಲೇ ಅಲ್ಲವೇ ಇನ್ನು ಇದರ ಜೊತೆಯಲ್ಲೇ ಸಾಗಲೇಬೇಕು ನಾವುಗಳೆಲ್ಲ
ಜನನದಿಂದ ಹಿಡಿದು ಮರಣದವರೆಗೂ ಬೇಕೇ ಬೇಕು ಈ ಆಧಾರ್ ಕಾರ್ಡ್ ನೊಂದಾವಣೆ ಅದಕ್ಕಾಗಿ ಕಾಪಾಡಿಕೊಳ್ಳಿ ನಿಮ್ಮ ಅಮೂಲ್ಯ ಬೆರಳುಗಳನ್ನು ನಮ್ಮ ಬದುಕಿನ ಪಯಣದಲ್ಲಿ ಆಧಾರವೇ ಮುಂದಾಯಿತಲ್ಲ.
– ರಾಧಾ ಹನುಮಂತಪ್ಪ.ಟಿ.
ಹರಿಹರ