Oplus_131072
ಗಾಳಿಪಟ

 

 

 

 

ಆಗಸದಲ್ಲಿ ನಾನು

ಅಂದು ನಾನಿನ್ನು ಪುಟ್ಟ ಕಂದಮ್ಮಳು
ಆಗಸಕ್ಕೆ ಕತ್ತು ಎತ್ತಿ ನೋಡುತ್ತಿರುವವಳು
ಬಣ್ಣ ಬಣ್ಣದ ಗಾಳಿಪಟ
ಹಾರಿಸುವ ಚತುರಳು
ಆಸೆಯ ಕಂಗಳಲ್ಲಿ
ಕನಸುಗಳನ್ನು ಹೊತ್ತವಳು

ನನ್ನ ಜೀವನದಲ್ಲಿ ಪಟಪಟನೆ
ನಡೆದು ಹೋದ ಘಟನೆಗಳು
ಎಲ್ಲ ಸೂತ್ರ ಕೈಬಿಡುವುದೋ !
ಎನ್ನುವ ಆತಂಕಗಳು
ದಾರ ತುಂಡಾಗಿ ಬಿದ್ದು ಬಿಡುವ ದುಃಖ ಸನ್ನಿವೇಶಗಳು
ಮರಗಳು, ನೀರಿಗೆ ಬಿದ್ದು
ಹೋಗುವ ಕ್ಷಣಗಳು

ವಿಮಾನದಲ್ಲಿ ಹಕ್ಕಿಯಂತೆ
ಹಾರುವ ಬಯಕೆಯು
ದೂರದೂರಿನಲ್ಲಿ ಆತ್ಮೀಯರಿಲ್ಲದ ಕೊರತೆಯು
ಸಾಕಷ್ಟು ದುಡ್ಡು ಜೋಡಿಸಿ
ಇಡಬೇಕೆಂಬ ಯೋಚನೆಯು
ಬಡವರ ಆಸೆ ಆಕಾಶಕ್ಕೆ
ಇಟ್ಟ ಏಣಿ ಹಿಂಜರಿಕೆಯು

ಬದುಕು ಅಂತರಾತ್ಮನ
ಆಸೆಯಂತೆ ಬಾಳುವೆವು
ಒಂದಲ್ಲ ಒಂದು ದಿನ
ಗುರಿ ತಲುಪಿ ಗೆಲ್ಲುವೆವು
ಅನುದಿನ ಉತ್ತಮ
ಯೋಚನೆಯ ಮಾಡುವೆವು
ಜೀವನ ಸಾರ್ಥಕ
ಮಾಡಿಕೊಂಡು ಬದುಕುವೆವು

ಉತ್ತಮ ಅವಕಾಶಗಳು
ನಮಗೆ ಸಿಗಲಿದೆ
ಮೇಲೆ ನಿಂತು ಕೆಳಗಿನವರ ನೋಡುವುದಿದೆ
ಅಪಾರ ಸಂಪತ್ತು ಗಳಿಸಿ ಹಂಚುವುದಿದೆ
ಭಗವಂತನ ಆಶೀರ್ವಾದ
ನಮಗೆ ಬೇಕಾಗಿದೆ

ಭಾರತಿ ಬಾಯಿ.ಶಿವಮೊಗ್ಗ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ