ಅಮಲಿನ ಮಜಲು.
ಅರಿವಿದ್ದರು ಅರಿವಿಲ್ಲದಂತೆಯೇ ಕುಣಿದು ಕುಪ್ಪಳಿಸಿದಂತೆಯೇ ನಟಿಸುತ್ತಾ ರಾಗವು ಬರದಿದ್ದರು ಹಾಡಿಸುವುದು ಧ್ವನಿಯಲಿ ಈ ಮದ್ಯದ ಅಮಲು
ಕಷ್ಟಸುಖಗಳಲಿ ಏನೇ ಇರಲಿ ಒಂದು ಪೇಗ್ಗ್ ಎಲ್ಲವನ್ನು ಮರೆಸಿ ಸಂತೋಷವ ತರಿಸುವುದು ಎಂದು ನಂಬಿದರೆ ನಿಜದಲಿ ಸತ್ಯ ಸುಳ್ಳಿನ ಅರಿವಿನ ಘಮಲು
ಪೈಸೆ ಪೈಸೆಗಳ ಲೆಕ್ಕಾಚಾರವು ಮನೆಯಲ್ಲಿ ಬಾರ್ ಗಳಲ್ಲಿ ರಾತ್ರಿ ಯಾದರೂ ಲೆಕ್ಕಕ್ಕೆ ಸಿಗದೇ ಉತ್ತರಕ್ಕೆ ಕಾಯದೆ ಖಾಲಿಮಾಡುವ ಬಾಟ್ಲಿಗಳ ನರ್ತನದ ಮಜಲು
ಕುಡಿದು ಕುಡಿದು ಕಿಡ್ನಿ ಲಿವರ್ ಗಳು ಹಾಳಾಗಿ ಹೋಗಿ ಆಸ್ಪತ್ರೆಯಲಿದ್ದರೂ ಮತ್ತೆ ಬೇಕೂಂದು ನೈಂಟಿ ಎನ್ನುವ ಕ್ಯಾತೆಯು ಇಲ್ಲಿ ಹೆಂಡತಿ ಮಕ್ಕಳು ಆಸ್ಪತ್ರೆಯ ಓಡಾಟದ ಪರಿಪಾಟಲು
ಮದ್ಯವ ಮಾರುವನು ಸಿರಿವಂತನಾಗುವ ಮದ್ಯವ ಕುಡಿಯುವ ರಸ್ತೆಗಳ ಉದ್ದವ ಎಣಿಸುತ್ತಾ ಬೀದಿಯ ಬಿಕಾರಿಯಾಗಿ ಮಸಣದ ಹಾದಿಯೇ ಇದೂ ಕೊನೆಯಲಿ ಎನ್ನಲು
– ರಾಧಾ ಹನುಮಂತಪ್ಪ ಟಿ ಹರಿಹರ