ಅಮ್ಮ
– ವಿಜಯಲಕ್ಷ್ಮಿ ಚ ಸಿಂಗೋಡಿ
ಅಮ್ಮನೇ ಮಕ್ಕಳಿಗೆ ಸಾಕ್ಷಾತ್ ದೇವರು
ಕಣ್ಣಿಗೆ ಕಾಣುವುದಿಲ್ಲ ಬೇರೆ ಯಾರೂ
ಹಗಲು ರಾತ್ರಿ ಸಂಸಾರಕ್ಕಾಗಿ ದುಡಿದರೂ
ಅಪ್ಪ ಮಾತ್ರ ಯಾರಿಗೂ ಗೋಚರಿಸರು
ಮನೆ ಮಂದಿಯ ಬೇಡಿಕೆ ತಿಳಿದು
ತರುವರು ಪುತಿಯೊಂದು ಬೀದಿ ಅಲೆದು
ಮಕ್ಕಳ ಹಗಲಗೇರಿಸಿ ನಲಿ ನಲಿದು
ನಡೆಸುವರು ಹೆಜ್ಜೆ ಕಲಿಸಿ ಕೈಹಿಡಿದು
ಬೇಕು ಬೇಡಗಳು ಕಡಿಮೆಯೇ ಮಕ್ಕಳದ್ದು ?
ಬಟ್ಟೆ ಬರೆ ಶಾಲೆ ಪುಸ್ತಕದಿಂದ ಹಿಡಿದು
ಹಬ್ಬ ಹರಿದಿನಗಳಲ್ಲಿ ಬೇಡಿಕೆ ಪಟಾಕಿಯದ್ದು
ಮಕ್ಕಳು ನಲಿಯುವರು ಮಿಠಾಯಿ ಬತ್ತಾಸು ತಿಂದು
ಪುವಾಸ ಹೋಗಬೇಕು ರಜೆ ಬಂದಾಗ
ಆಸ್ಪತ್ರೆ ಸೇರಿಸಬೇಕು ಆರೋಗ್ಯ ತಪ್ಪಿದಾಗ
ಸೈಕಲ್ಲು ಕಲಿಸಬೇಕು ಬೆಳೆದಾಗ
ಆಸರೆಯಾಗಬೇಕು ಅವಶ್ಯಕತೆ ಬಂದಾಗ
ಅಮ್ಮನ ಹೆಚ್ಚುಗಾರಿಕೆ ಎಷ್ಟೇ ಇದ್ದರೂ
ಮರೆಯಬಾರದು ಅಪ್ಪನ ಬೆವರು
ಮಕ್ಕಳ ಭವಿಷ್ಯ ಕಟ್ಟಿಕೊಡುವರು ಅವನಿಗೆ ಸೇರಬೇಕು
ಪ್ರಣಾಮಗಳು ನೂರು ನೂರು.
– ವಿಜಯಲಕ್ಷ್ಮಿ ಚ ಸಿಂಗೋಡಿ. ಕಲಬುರಗಿ