Oplus_131072

ಅಮ್ಮಾ ನಿನ್ನ ತೋಳಿನಲ್ಲಿ.

ಕರುಳ ಬಳ್ಳಿ ಗೆಳತಿ ಉಸಿರಾಟದ ಒಡತಿ
ಪ್ರತಿ ಎದೆ ಬಡಿತದ ಗುರುತಿನ ಶಬ್ದದಿ
ನಿನ್ನ ಪ್ರೀತಿ ಪ್ರೇಮ ಅಡಗಿರಲು ಜೀವದಿ
ಋಣಿಯಾಗುವೆ ಈ ಜೀವ ನಿನ್ನದೇ ನೆನಪಲಿ

ನಿನ್ನ ರೂಪದ ಪ್ರತಿ ಬಿಂಬದ ದೀಪನಾ
ಪ್ರತಿ ತೊದಲ ನುಡಿಯಲ್ಲಿ ನೀ ದೇವತೆನಾ
ನಾನಿಡುವ ಹೆಜ್ಜೆಯಲ್ಲಿ ಹೆಜ್ಜೆ ಗುರುತುನಾ
ಜಗ ತೋರಿಸಿದ ಮಾತೃ ದೇವತೆನಾ

ನಿನ್ನ ಮಡಿಲಲ್ಲಿ ತೂಗುವ ಕಂದ ನಾನು
ನಿನ್ನ ಎದೆಯ ಗೂಡುನಲ್ಲಿ ಅರಳಿದ ಹೂ ನಾನು
ನಿನ್ನ ಬಿಸಿ ಉಸಿರ ಅಪ್ಪಿಗೆಯಲ್ಲಿ ಬೆಳೆದೆನು ನಾನು
ಅಮ್ಮ ನಿನ್ನ ತೋಳಲ್ಲಿ ಜೀವಿಸಿದೆ ನಾನು

ಜನುಮ ಜನುಮ ಎತ್ತಿ ಬಂದರು ಋಣ ತೀರದು ತಾಯಿ
ನಿನ್ನ ಮಗುವಾಗಿ ಇರುವ ಆಸೆ ಈ ಉಸಿರುವರೆಗೆ ತಾಯಿ
ಜಗತ್ತಿನಲ್ಲಿ ನನಗೆ ಸಿಕ್ಕ ಅಮೂಲ್ಯ ಆಸ್ತಿ ದೇವತೆ ತಾಯಿ
ಕಂದ ಮಗುವಾಗಿ ಮಡಿಲ ತುಂಬಿ ನಗುವೆನು ಸದಾ ತಾಯಿ

ಕವಿತಾ ಎಂ ಮಾಲಿ ಪಾಟೀಲ

ಕವಯತ್ರಿ ಪರಿಚಯ :

ಕವಿತಾ ಎಮ್.ಮಾಲಿಪಾಟೀಲ್

ಕವಯತ್ರಿ  ಕವಿತಾ ಎಮ್. ಮಾಲಿ ಪಾಟೀಲ  ರವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದವರು.
ಇವರು ಡಿ.ಇಡಿ, ಬಿ.ಎ.ಪದವೀಧರರು ಮತ್ತು ಎಂ.ಎ ಸಾತ್ನಕೋತ್ತರ ವಿದ್ಯಾರ್ಥಿನಿಯಾಗಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ ಕವನ ಲೇಖನ ಮೊದಲಾದ ತರಹದ ಬರಹಗಳು ಬರೆದಿದ್ದಾರೆ. ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇವರಿಗೆ ಉತ್ತಮ ಶಿಕ್ಷಕಿ ಮತ್ತು ಆದಶ೯ ಶಿಕ್ಷಕಿ ಎಂಬ ಪ್ರಶಸ್ತಿಯು ಕೂಡ ಪಡೆದಿದ್ದಾರೆ.
ಇವರ ಬರಹಗಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಮಟ್ಟದಲ್ಲಿ ಕೂಡ ಪ್ರಕಟವಾಗಿವೆ. ಹಾಗೂ ಆನ್ಲೈನ್ ನಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳಲ್ಲಿ ಇವರಿಗೆ 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ನಾಡಿನ
ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯದಲ್ಲಿಯೇ ಇವರ ಸಾಹಿತ್ಯವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಲಿವೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ