Oplus_131072

ಅನ್ನದಾತ.

ಪುಣ್ಯ ದೇಶವಿದು ಭಾರತ
ನೇಗಿಲ ಹಿಡಿದಿರುವನು ರೈತ
ಕೃಷಿಕನೆ ದೇಶದ ಬೆನ್ನೆಲುಬು
ಕೃಷಿಯೇ ಇವನ ಕುಲಕಸುಬು.

ಬೆವರನು ಸುರಿಸಿ ಹೊಲದಲಿ ದುಡಿದು
ಮಣ್ಣಿನ ಮಗನೆಂದೆನಿಸುವನು
ಕಳೆಯನು ತೆಗೆದು ಬೆಳೆಯನು ಬೆಳೆದು
ದೇಶಕೆ ಅನ್ನವ ನೀಡುವನು.

ಕೈ ಕೆಸರಾಗದೆ ಬಾಯ್ಮೊಸರಾಗದು
ಎನ್ನುವ ಸತ್ಯವ ಅರಿತಿಹನು
ಕಾಯಕದಲಿ ಕೈಲಾಸವ ಕಾಣುತ
ಮಣ್ಣಲಿ ಚಿನ್ನವ ಬೆಳೆಯುವನು.

ಬಿಸಿಲೇ ಇರಲಿ ಮಳೆಯೇ ಬರಲಿ
ಬೇಸರಿಸದೆ ದುಡಿವನು ಸತತ
ದೇಶದ ಜನರ ಏಳ್ಗೆಯ ಬಯಸುವ
ಇವನೇ ನಮ್ಮಯ ಅನ್ನದಾತ.

ರೈತನು ಮಾಡುವ ಶ್ರಮದಾನ
ಆಯಿತು ದೇಶಕೆ ವರದಾನ
ಪ್ರತಿಫಲ ಬಯಸದೆ ದುಡಿವ ಅವನಿಗೆ
ಇದುವೇ ನಮ್ಮೆಲ್ಲರ ನಮನ.

ಜಿ.ಎಸ್. ಗಾಯತ್ರಿ.
ಶಿಕ್ಷಕಿ.
ಬಾಪೂಜಿ ಶಾಲೆ.
ಹರಿಹರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ