Oplus_131072

ಅನುಭಾವಿ ಕವಿ ಸಾಹಿತಿ-
ವಿ.ಎಂ.ಡಾಕುಳಗಿ.

ಕವಿ,ಸಾಹಿತಿ,ಚಿಂತಕ,
ವಿಮರ್ಶಕರಾಗಿ ‘ಕವಿಮಡಾ ‘ ಎಂಬ ಕಾವ್ಯನಾಮದಿಂದ ಕತೆ,ಕವನ,ಲೇಖನ, ಚಿಂತನಾ,ವಿಮರ್ಶೆ ,ಪ್ರಬಂಧ
ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಖ್ಯಾತರಾದ ಲೇಖಕರೆಂದರೆ ವಿ.ಎಂ.ಡಾಕುಳಗಿಯವರು.

ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಗ್ರಾಮದ ಮಹಾರುದ್ರಯ್ಯ ಮತ್ತು ಪಾರ್ವತಿದೇವಿ ದಂಪತಿಗಳಿಗೆ 5-3-1955 ರಲ್ಲಿ ಜನಿಸಿ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ 1971 ರಲ್ಲಿ SSLC ತೇರ್ಗಡೆ ಹೊಂದಿ ಉನ್ನತ ಶಿಕ್ಷಣವನ್ನು ಬೀದರ ನಗರದ ಬೊಮ್ಮರೆಡ್ಡಿ ಕಾಲೇಜಿನಲ್ಲಿ ಬಿ.ಎ.ಬಿ.ಎಡ್ ಪೂರೈಸಿ ಮುಂದೆ ಕೆ.ಇ.ಎಸ್.ಪಾಸು ಮಾಡಿ
1983 ರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ.

ಇವರು ಬರೆದ ಕತೆ, ಕವನ, ಲೇಖನ, ಚಿಂತನಾ,ಪ್ರಬಂಧ ಭಾಷಣಗಳು ಕಲಬುರಗಿ ಆಕಾಶವಾಣಿಯಿಂದ ಬಿತ್ತರಗೊಂಡಿವೆ.

ಇವರ ಬರಹಗಳು
‘ ಜನಪದ,ಸಂಯುಕ್ತ ಕರ್ನಾಟಕ, ಪ್ರಪಂಚ,ಉತ್ತರಕರ್ನಾಟಕ ಸೇರಿದಂತೆ ಮೊದಲಾದ ರಾಜ್ಯ ಮಟ್ಟದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇವರು ಸುಮಾರು ಮೂವತ್ತು ಲೇಖಕರ ಪುಸ್ತಕಗಳನ್ನು ವಿಮರ್ಶೆ ಮಾಡಿದ್ದಾರೆ. 50 ಕಿಂತಲೂ ಹೆಚ್ಚು ಸಂದರ್ಶನ ಲೇಖನಗಳನ್ನು ಬರೆದಿದ್ದಾರೆ. ಹಾಗೂ 40 ಕಿಂತ ಹೆಚ್ಚು ವ್ಯಕ್ತಿ ಚಿತ್ರ ಲೇಖನಗಳು, ಹಾಗೂ 100 ಕಿಂತಲೂ ಹೆಚ್ಚು ವ್ಯಕ್ತಿ ಚರಿತ್ರೆಯನ್ನು ಹೇಳುವ ಕವಿತೆಗಳು, 200 ಕಿಂತ ಹೆಚ್ಚು ಆಧುನಿಕ ವಚನಗಳು, ಅಷ್ಟೇಯಲ್ಲದೆ
ಹತ್ತಾರು ಕತೆಗಳು ಸೇರಿದಂತೆ ಸುಮಾರು 500 ಕಿಂತ ಹೆಚ್ಚು ಕವನಗಳನ್ನು ಬರೆದು ಪುಸ್ತಕ ಪ್ರಕಟಿಸದೆ ಹಾಗೆ ಉಳಿಸಿರುವುದು ದುರದೃಷ್ಟಕರವಾಗಿದೆ.

ಇವರು ಬರೆದ ಇಷ್ಟು ಸಾಹಿತ್ಯ ಕಣಜ ಎರಡು ಮೂರು ದಶಕಗಳ ಹಿಂದೆಯೇ ರಚಿಸಿದ್ದು . ಅವು ಅಂದಿನ ಕಾಲಾನುಕಾಲ ಪ್ರಕಟಿಸುತ್ತಾ ಬಂದರೆ ಇಂದು ‘ವಿ.ಎಂ.ಡಾಕುಳಗಿ ‘ ಕರ್ನಾಟಕದ ಒಬ್ಬ ದೊಡ್ಡ ಸಾಹಿತಿಯಾಗಿ ಹೊರಹೊಮ್ಮುತ್ತಿದ್ದರು ಎಂದರೆ ತಪ್ಪಾಗಲಾರದು.

ಇವರ ಸಾಹಿತ್ಯದ ಕುರಿತು ಅಧ್ಯಯನ ಮಾಡಿದ ಒಬ್ಬರು ಎಂ.ಫೀಲ್,ಮತ್ತೊಬ್ಬರು ಪಿ.ಎಚ್.ಡಿ.ಪದವಿ ಪಡೆದಿರುವುದು ಮತ್ತೊಂದು ವಿಶೇಷವಾಗಿದೆ.

ಇವರ ಬರೆದ ‘ ಮುದ್ದು ಕೊಟ್ಟ ತಪ್ಪು’ ಮತ್ತು ‘ ಸಂಚಲನಾ ‘ ಎಂಬ ಎರಡು ಕತೆಗಳು ಕಮಲಾಕರ್ ಜ್ಯೋಶಿ ಎಂಬ ಲೇಖಕರು ಹಿಂದಿ ಭಾಷೆಗೆ ಅನುವಾಸಿದ್ದಾರೆ.

ಇವರ ‘ ಕರಾಳ ದಿನ ‘ ಕಾವ್ಯಕ್ಕೆ ರಾಜ್ಯ ಪ್ರಶಸ್ತಿ. ‘ ಮಂತ್ರ ಸ್ವಾತಂತ್ರ್ಯ ಕಾವ್ಯಕ್ಕೆ ‘ ವಿಭಾಗಿಯ ಪ್ರಶಸ್ತಿ, ಹಾಗೂ ಗದಗದಿಂದ ‘ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ’ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

‘ ಬೀದರ ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ ‘ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿವತಿಯಿಂದ ಪ್ರಕಟವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ
‘ವಜ್ರ ಮಹೋತ್ಸವ ‘ದ ಅಂಗವಾಗಿ ಹೊರತಂದ ಪುಸ್ತಕದಲ್ಲಿ ಇವರ
‘ ಶರಣಬಸಪ್ಪನ ಹಾಡು ‘ ಕವಿತೆ ಪ್ರಕಟವಾಗಿದೆ.
ಹೀಗೆ ಇವರು ಶಿಕ್ಷಕರಾಗಿ
ಮೂವತ್ತು ವರ್ಷಕಾಲ ಸೇವೆ ಸಲ್ಲಿಸಿರುವುದರೊಂದಿಗೆ ವಿವಿಧ ಸಂಘ ಸಮಿತಿಯ ಅಧ್ಯಕ್ಷರಾಗಿ ಕಾರ್ಯದರ್ಶಿಯಾಗಿ, ಸದಸ್ಯರಾಗಿ ಉತ್ತಮ ಕಾರ್ಯ ಮಾಡಿದ್ದಾರೆ.
ಇವರು ಯುನೆಸ್ಕೋ ಸಮಿತಿಯ ನಿರ್ದೇಶಕರಾಗಿ ,ಜಿಲ್ಲಾ ಪಂಚಾಯತ್ ನಾಮನಿರ್ದೇಶನ ಸದಸ್ಯರಾಗಿ, ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಚಳುವಳಿಗಾರರ ಸಂಸ್ಥಾಪಕ ಅಧ್ಯಕ್ಷರಾಗಿ ,ಕನ್ನಡ ನಾಡು ನುಡಿಗಾಗಿ ಹೋರಾಡುತ್ತಾ ಕನ್ನಡ ಕಟ್ಟುವಲ್ಲಿ ಕಳಕಳಿಯ ಸಾಹಿತಿಯಾಗಿ ಕಂಡುಬರುತ್ತಾರೆ.

– ಮಚ್ಚೇಂದ್ರ ಪಿ ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ