ಅಪಘಾತ (ಲಲಿತ ಪ್ರಬಂಧ)
ಇತ್ತಿಚಿನ ದಿನಗಳಲ್ಲಿ ಈ ಅಪಘಾತಗಳು ತುಂಬಾ ಸಂಭವಿಸುತ್ತವೆ. ಹಿಂದಿನ ಕಾಲದಲ್ಲಿ ವಾಹನಗಳು ತುಂಬಾ ಕಡಿಮೆ ಇದ್ದವು.
ಹಾಗೆ ಜನರು ತಮ್ಮ ಓಡಾಡುವ ಕೆಲಸಕ್ಕೆ ಸಾಮಾನ್ಯವಾಗಿ ಕಿಲೋ ಮೀಟರ್ ದೂರದಲ್ಲಿದ್ದರು ಕಾಲು ನಡಿಗೆಯಲ್ಲಿ ಹೋಗುತ್ತಿದ್ದರು . ಮತ್ತೆ ತುಂಬಾ ದೂರವಿದ್ದರೆ ಎತ್ತಿನ ಗಾಡಿ.ಸೈಕಲ್. ಹಾಗೆ ಬಸ್ಸುಗಳಲ್ಲಿ ಓಡಾಡುತ್ತಿದ್ದರು. ಈ ಮೋಟಾರ್ ಬೈಕ್ ಕಾರು ಇತ್ಯಾದಿ ಯಾರ ಹತ್ತಿರ ಇರಲಿಲ್ಲ . ಅದು ಇದ್ದರು
ಅವಾಗ ಅದು ದೊಡ್ಡ ದೊಡ್ಡ, ನಾನಾ ಸಿರಿವಂತರ ಮನೆ ಮನೆಗಳಲ್ಲಿಯಲ್ಲಿ ಇರುತ್ತಿದ್ದೆವು. ಈಗಿನಷ್ಟು ರಸ್ತೆ ಸಾರಿಗೆ ನಿಯಮಗಳು ತುಂಬಾ ಕಡಿಮೆ ಇತ್ತು. ಅದು ಎಲ್ಲೂ ರೈಲು ಹಳಿ ತಪ್ಪಿದಾಗ.ಆಥವಾ ಕಂದಕ ವಿದ್ದಲ್ಲಿ ಬಸ್ಸು.ಲಾರಿ ಉರುಳಿ ಬಿದ್ದ ಘಟನೆಗಳನ್ನು ರೇಡಿಯೋ ಅಥವಾ ಟಿವಿಯಲ್ಲಿ ಕೇಳಿದ್ದು ಉಂಟು.
ಆದರೆ ಈಗ ಕಾಲ ಬದಲಾದಂತೆ ಈಗ ಪ್ರತಿಯೊಂದು ಮನೆಯಲ್ಲೂ ಬೈಕ್ಗಳು.ಮತ್ತೆ ಈಗಿಗ ಕಾರುಗಳನ್ನು ಕೊಳ್ಳುವವರಿಗೇನು ಕಡಿಮೆಯಿಲ್ಲ.
ಅದರಂತೆಯೇ ಮನುಷ್ಯರಂತೆ ವಾಹನಗಳು ಹೆಚ್ಚಾಗಿ ಸಂಚಾರವು ಹೆಚ್ಚಾಗಿದೆ. ದುಡಿಮೆಗಾಗಿ ದಿನವು ಬೈಕ್ ಕಾರು ಮತ್ತು ಬಸ್ಸುಗಳಲ್ಲಿ ರೈಲುಗಳಲ್ಲಿ ಓಡಾಡುವ ಜನರು ಒಂದೆಡೆ ಆದರೆ ಇನ್ನೂಂದಡೆ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ಸಂಖ್ಯೆಯು ತುಂಬಾ ಇದೆ. ಹಾಗೆ ಮುಂತಾದ ಕಾರ್ಯಕ್ರಮಗಳಿಗಾಗಿ ಅಥವಾ ಪ್ರವಾಸಕ್ಕಾಗಿ ಮತ್ತೆ ಸತ್ತವರ ಅಂತ್ಯಕ್ರೀಯೆಗಾಗಿ ಓಡಾಡುವವರು ತುಂಬಾ ಜನರಿದ್ದಾರೆ.ಇದರಿಂದ ಸಂಚಾರದಲ್ಲಿ ದಟ್ಟನೆಯು ತುಂಬಾ ಹೆಚ್ಚಾಗಿದೆ.
ಇನ್ನೂ ಹದಿಹರೆಯದ ಹುಡುಗಯರು ಮತ್ತು ಹುಡುಗಿಯರಿಗೆ ಬೈಕ್ ಸವಾರಿ ಮಾಡುವ ಶೂಕಿಯು ತುಂಬಾ ಇದೆ.ಮನೆಯಲ್ಲಿ ಕಾಡಿಬೇಡಿ ಯಾದರೂ ಬೈಕ್ ತೆಗೆದುಕೊಂಡು ಸವಾರಿ ಮಾಡುವ ಶೂಕಿಯು ತುಂಬಾ ಇದೆ.
ಅದರಂತೆ ಈ ರೀತಿಯ ವಾಹನಗಳು ಹೆಚ್ಚಾಗಿ ಸಂಚಾರವು ಹೆಚ್ಚಾಗಿ ಅಲ್ಲಲ್ಲಿ ಅಪಘಾತವು ಸಂಭವಿಸುವುದು ತುಂಬಾ ಹೆಚ್ಚಾಗಿ ಹದಿಹರೆಯದ ಮಕ್ಕಳೇ ಅಪಘಾತ ಸಂಭವಿಸಿ ಮರಣ ಹೊಂದುವರು . ಇಲ್ಲಾಂದ್ರೆ ಕಾಲು ಕೈ ತಲೆ ಪೆಟ್ಟು ಬಿದ್ದು ಜೀವನ ಪೂರ್ತಿ ಬದುಕನ್ನು ಒಂದು ರೀತಿಯ ನೋವುವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದು ಹೇಗೆ ಎಂದು ಒಂದೆರಡು ಉದಾಹರಣೆಗಳನ್ನು ಹೇಳುವೆ.
ಮೊನ್ನೆ ನಾನು ಹೊಸಪೇಟೆಯಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಮ್ಮ ಮುಂದೆ ಬೈಕ್ನಲ್ಲಿ ಸವಾರಿ ಮಾಡುತ್ತಾ ಖುಷಿಯಿಂದ ಮೂವರು ಹೋದರು.
ಅರ್ಧ ಗಂಟೆಯಾಗಿತ್ತು ಆ ಮೂವರಿಗೆ ಆಕ್ಸಿಡೆಂಟ್ ಆಗಿ ಒಬ್ಬವ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ.ಇನ್ನು ಇಬ್ಬರಿಗೆ ಗಾಯಗೊಂಡಿದ್ದರು. ನೋಡು ನೋಡುತ್ತಿದ್ದಂತೆ ರಸ್ತೆಯಲ್ಲಾ ರಕ್ತಮಯವಾಗಿತ್ತು.ನನಗಂತು ತುಂಬಾ ಗಾಬರಿಯಾಯಿತು.
ಮತ್ತೆ ಇನ್ನೊಂದು ಸಲ ನಾನು ದಾವಣಗೆರೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಬಸ್ಸು ರಿಪೇರಿಯಾಗಿ ಸೀದಾ ಹೋಗಿ ಲೈಟಿನ ಕಂಬಕ್ಕೆ ಗುದ್ದಿತು.
ಪುಣ್ಯ ಯಾರಿಗೂ ಏನೂ ಆಗಲಿಲ್ಲ . ಆದರೆ ಒಮ್ಮೆಲೇ ಪ್ರಾಣ ಬಾಯಿಗೆ ಬಂದಂತೆ ಆಯಿತು.ಆಮೇಲೆ ಎಲ್ಲ ಪ್ರಯಾಣಿಕರು ಸೇರಿ ಆ ಬಸ್ಸಿನ ಡ್ರೈವರ್ ಹಾಗೆ ಕಂಡಕ್ಟರ್ ಬೈದು ಬುದ್ಧಿ ಹೇಳಿದ್ದಾಯಿತು.
ಮೊನ್ನೆ ನಮ್ಮ ಓಣಿಯ ಹುಡುಗ ಸ್ನೇಹಿತರ ಜೊತೆ ಬೈಕ್ ನಲ್ಲಿ ಬೇರೆ ಊರಿಗೆ ಹೋಗಿ ಬರುವಾಗ ಸ್ಪೀಡ್ ಗಿ ಬಂದು ಸ್ಕಿಡ್ ಆಗಿ ಬಿದ್ದು ಮೂವರು ಅಲ್ಲೇ ಮರಣಹೊಂದಿದರು. ಪಾಪ ಒಬ್ಬನೇ ಮಗ ಇದ್ದ ಆ ಮೂವರ ಕುಟುಂಬದ ಗೊಳು ನೋಡಲಾಗದೆ ತುಂಬಾ ಸಂಕಟವನ್ನು ಉಂಟು ಮಾಡಿತ್ತು. ಮತ್ತೆ ಒಂದು ಹುಡುಗ ರಾತ್ರಿ ಪ್ರಯಾಣ ಮಾಡುವಾಗ ಬೈಕ್ ಡಿವೈಡರ್ ಗುದ್ದಿ ಅವನು ಹತ್ತು ಅಡಿ ಎತ್ತರಕ್ಕೆ ಹಾರಿ ಬಿದ್ದು.ಅವನ ದೇಹದ ಎಡಗಡೆ ಭಾಗದ ಮೂಳೆ ಪೂರ್ತಿ ಪುಡಿ ಪುಡಿಯಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಡಾಕ್ಟರ್ ಇವನು ಹೆಚ್ಚು ದಿನ ಬದಕಲಾರ ಎಂದು ಮನೆಗೆ ಕಳುಹಿಸಿದರು.ಅವನು ಇರುವಷ್ಟು ಅವನ ತಾಯಿ ತಂಗಿ ಅವನ ಸೇವೆ ಮಾಡಿದರು.ಹೀಗೆ ಒಂದೇ ಎರಡೇ ಹಲವು ರೀತಿಯ ಅಪಘಾತ ದಿನವು ಸಂಭವಿಸುತ್ತವೆ . ಆಮೇಲೆ ಕುಡಿದು ಗಾಡಿ ಓಡಿಸಿ ಅಪಘಾತ ಮಾಡುವರಿಗೇನು ಕಡಿಮೆಯಿಲ್ಲ.ಕುಡಿದು ತಾವು ಸಾಯುವರು ಹಾಗೆ ಇನ್ನೂಬ್ಬರನ್ನು ಸಾಯಿಸುವರು .
ಆಮೇಲೆ ಈಗಂತೂ ಈ ಪೋನ್ ನಲ್ಲಿ ರಿಲ್ಸ್ ಮಾಡಿ ಲೈಕ್ ಪಡಿಯುವ ನೆಪದಲ್ಲಿ ಮೋಜು ಮಸ್ತಿ ಮಾಡೋಣ ಅಂತ ಹೋಗಿ ನದಿಯ ದಡದಲ್ಲಿ.ರೈಲಿನಲ್ಲಿ . ಬಸ್ಸು.ಕಾರುಗಳಲ್ಲಿ ನಟನೆ ಮಾಡುತಾ ಫೇಮಸ್ ಆಗಿಲು ಹೋಗಿ ಕಾಲು ಜಾರಿ ಅಥವಾ ಆಕ್ಸಿಡೆಂಟ್ ಆಗಿ ಸಾಯುವರು.
ಸುಮ್ಮನೆ ವಾಕಿಂಗ್ ಹೋದಾಗ ನಿದ್ರೆ ಮಂಪರಿನಲ್ಲಿ ಡೈವಿಂಗ್ ಮಾಡಿ ಗಾಡಿಯನ್ನು ಹತ್ತಿಸಿ ಅವರ ಪ್ರಾಣವನ್ನು ತೆಗೆದು ಕೊಂಡಿದ್ದಾರೆ.ಕಾರಿನಲ್ಲಿ ಪ್ರವಾಸಕ್ಕೆ ಎಂದು ಹೋಗಿ ಅಪಘಾತಕ್ಕೆ ತುತ್ತಾಗಿ ಮರಣ ಹೊಂದಿ ಇಡೀ ಕುಟುಂಬವೇ ಸರ್ವನಾಶವಾದ ಘಟನೆಗಳು ನಡೆದಿವೆ.ಹೀಗೆ ಹೇಳುತ್ತಾ ಹೋದರೆ ತುಂಬಾ ಇವೆ.
ಆದರೆ ಇವನ್ನೆಲ್ಲಾ ಹೇಗೆ ತಡೆಯಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯು ಸದಾ ಕಾಡುತ್ತಿರುತ್ತದೆ.
ಆ ನಿಟ್ಟಿನಲ್ಲಿ ಯೋಚಿಸುವುದಾದರೆ ಈ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ.ನಾವು ಸಾರ್ವಜನಿಕರಿಗಾಗಿ ಹಾಗೆ ಸಾಮಾನ್ಯರಾಗಿ ತಡೆಯಲು ಸಾಧ್ಯವಿದೆ.ಈಗ ಸಂಚಾರದ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಬಹಳಷ್ಟು ಅಪಘಾತಗಳನ್ನು ತಪ್ಪಿಸಬಹುದು.ಹಾಗೆ ಹೇಗೆ ಎಂದರೆ ಈಗೆಲ್ಲಾ ಕಾನೂನು ಕ್ರಮಗಳು ಒಂದಾಗಿದೆ.ಅದು ಡ್ರೈವಿಂಗ್ ಲೈಸೆನ್ಸ್ ಪಡೆಯದವರು ಹಾಗೆ ಚಿಕ್ಕಮಕ್ಕಳು.ಮತ್ತು ಮದ್ಯಪಾನ ಮಾಡುವವರು ಈ ಯಾವುದೇ ವಾಹನಗಳನ್ನು ಡ್ರೈವಿಂಗ್ ಮಾಡಬಾರದು. ಮತ್ತೆ ಪೋನ್ ನಲ್ಲಿ ಮಾತನಾಡುತ್ತಾ ಯಾವುದೇ ವಾಹನಗಳನ್ನು ಚಲಾಯಿಸಬಾರದು .
ಆಮೇಲೆ ಸಂಚಾ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಬಹಳಷ್ಟು ಅಪಘಾತಗಳನ್ನು ತಡೆಯಬಹುದು.ಹಾಗೆ ಏನಾದರೂ ಈ ನಿಯಮಗಳನ್ನು ಸರಿಯಾಗಿ ಪಾಲಿಸಿದಿದ್ದರೆ . ಅಂತವರಿಗೆ ದಂಡ ವಿಧಿಸಿ ಅವರ ಲೈಸೆನ್ಸ್ ಹಿಂಪಡೆಯಬೇಕು.ಮತ್ತೆ ಇಂತಿಷ್ಟು ವರ್ಷಗಳು ಎನ್ನುವ ಹಾಗೆ ಸೆರೆಮನೆಗೆ ಹಾಕಬೇಕು.
ಮುಖ್ಯವಾಗಿ ಈ ರಾತ್ರಿ ಆಗ್ಲಿ ಹಗಲಿನಲ್ಲಿ ಆಗಲಿ ಪ್ರಯಾಣದಲ್ಲಿ ಮದ್ಯಪಾನ ಮಾಡುವವರ ವಾಹನಗಳನ್ನು ಕಾನೂನಿನ ವಶಕ್ಕೆ ತೆಗೆದುಕೊಂಡು ಅವರ ವಾಹನ ಚಾಲನೆಯ ಪರವಾನಗಿ ರದ್ದು ಮಾಡಬೇಕು.ಹಾಗೆ ಐದು ವರ್ಷಗಳ ಅವಧಿಯಲ್ಲಿ ಸೆರೆಮನೆಗೆ ತಳ್ಳಬೇಕು.ಮತ್ತೆ ಮಕ್ಕಳಿಗೆ ಗಾಡಿಯನ್ನು ಓಡಿಸಲು ಪ್ರೇರಣೆ ನೀಡುವ ತಂದೆ ತಾಯಿಗಳಿಗೆ ಇದೇ ರೀತಿ ಮಾಡಬೇಕು.ಬಹುಶಃ ಅವರನ್ನು ನೋಡಿ ಹಲವರಿಗೆ ತಿಳಿವಳಿಕೆ ಬರಬಹುದು. ಅವರು ಸಂಚಾರದ ನಿಯಮಗಳ ಬಗ್ಗೆ ಜಾಗೃತರಾಗುವರು.ಆಮೇಲೆ ದೂರ ದೂರಕ್ಕೆ ಪ್ರಯಾಣ ಮಾಡುವಾಗ ಡ್ರೈವರ್ ಗೆ ನಿದ್ದೆ ಬಂದಾಗ ಪ್ರಯಾಣ ಮಾಡುವರು ಸ್ಪಲ್ಪ ಸಹಕಾರಿಸಿ ಒಂದು ತಾಸು ನೀನು ನಿದ್ದೆ ಮಾಡಿ ನಾವು ನಿಧಾನವಾಗಿ ಹೋದರಾಯಿತು ಇಲ್ಲವೇ ಅವರಲ್ಲಿ ಯಾರಿಗಾದರೂ ಚಾಲನೆ ಮಾಡುಲು ಬರುತ್ತಿದ್ದರೆ . ಹಾಗೆ ಅವರದು ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅವರು ಗಾಡಿಯನ್ನು ಓಡಿಸಬಹುದು. ಇಲ್ಲದಿದ್ದರೆ ಗಾಡಿಯನ್ನು ಪಕ್ಕದಲ್ಲಿ ನಿಲ್ಲಿಸಿ ಆ ಚಾಲಕನ ಸ್ವಲ್ಪ ನಿದ್ದೆಯ ಮಂಪರು ಕಳೆದ ಮೇಲೆ ಮುಂದಿನ ಪ್ರಯಾಣಕ್ಕೆ ಸಾಗುವುದು ಉತ್ತಮ ಇದರಿಂದ ಮುಖ್ಯವಾಗಿ ಸ್ಪಲ್ಪ ಮಟ್ಟಿಗಾದರೂ ಬಹಳಷ್ಟು ಅಪಘಾತಗಳನ್ನು ತಪ್ಪಿಸಬಹುದು.
ಆಮೇಲೆ ನವ ಯುವಕರು ಯುವತಿಯರು ಲಾರಿ.ಬಸ್ಸು ಮುಂತಾದವುಗಳನ್ನು ಹಿಮ್ಮೇಟ್ಟಿಸುವ ಭರದಲ್ಲಿ ವೇಗವಾಗಿ ಚಲಿಸುತ್ತಾ ಅಪಘಾತಕ್ಕೆ ತುತ್ತಾಗುವರು. ಅದರ ಬದಲು ನಿಧಾನವಾಗಿ ಹೋದರಾಯಿತು ಅಲ್ಲವೇ. ಏನು ವೇಗವಾಗಿ ಹೋಗಿ ಯುದ್ಧವನ್ನು ಗೆಲ್ಲಬೇಕೇ ಇವರು ಇಲ್ಲ ತಾನೇ.
ಆಮೇಲೆ ತಲೆಗೆ ಪೂರ್ಣಪ್ರಮಣದ ಹೆಲ್ಮೆಟ್ನ್ ನ್ನು ಕಡ್ಡಾಯವಾಗಿ ಧರಿಸಬೇಕು.ಇಲ್ಲವಾದರೆ ಅವರ ಗಾಡಿಯ ಲೈಸೆನ್ಸ್ ರದ್ದು ಮಾಡಬೇಕು.ಹಾಗೆ ಸೆರೆಮನೆಗೆ ಹಾಕಬೇಕು.ಆಗಲೇ ಬುದ್ಧಿ ಬರುವುದು.ಆ ಭಯದಿಂದಲೇ ಈ ಸಂಚಾರದ ನಿಯಮಗಳನ್ನು ಪಾಲಿಸುವರು.ಈ ಚಿಕ್ಕ ಚಿಕ್ಕ ಮಕ್ಕಳು ಆಮೇಲೆ ಗಂಡ ಹೆಂಡತಿ ಇಬ್ಬರು ಬೈಕ್ ನಲ್ಲಿ ಕುಳಿತು ಸವಾರಿ ಮಾಡುವಾಗ ಸಾಮಾನ್ಯವಾಗಿ ಗಾಡಿ ಜಂಪ್ ಆಗಿ ಬಿದ್ದು ಪ್ರಾಣವನ್ನು ಕಳೆದ ಕೊಳ್ಳುವ ಬದಲು ಬೈಕ್ ನಲ್ಲಿ ಎಷ್ಟು ಜನ ಕುಳಿತುಕೊಳ್ಳವರು ಅದರಲ್ಲಿ ಮಿತಿ ಇರಬೇಕು.ಮತ್ತೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ಅವರಿಗೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು.ಆಮೇಲೆ ಸಂಚಾರದ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಬಹಳಷ್ಟು ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ.
ಈ ಲಾರಿ.ಬಸ್ಸುಗಳಿಗೆ ವೇಗದ ಚಾಲನೆಯನ್ನು ಕಡಿಮೆ ಮಾಡಿದ್ದಾರೆ ಹೇಗೆ ಹಾಗೆಯೇ ಈ ಕಾರು.ಬೈಕ್.ಮುಂತಾದ ವಾಹನಗಳ ವೇಗವನ್ನು ಮಿತಿಗಳನ್ನು ಕಡಿಮೆ ಮಾಡಬೇಕು.ಇವುಗಳನ್ನು ಪಾಲಿಸದಿದ್ದರೆ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು.
ಈ ಪೋನ್ ನಿಂದ ಶೋಕಿ ಮಾಡಿ ರಿಲ್ಸ್ ಮಾಡುವವರು ಎಚ್ಚರಿಕೆಯಿಂದ ಇರಬೇಕು.ರಸ್ತೆಯಲ್ಲಿ ಹೋಗುವಾಗ ಅತ್ತಿತ್ತ ನೋಡಿ ಸಂಚಾರಿ ನಿಯಮದ ಪ್ರಕಾರ ರಸ್ತೆಯನ್ನು ದಾಟಿಬೇಕು.
ಸ್ಪಲ್ಪ ಸಮಾಧಾನದಿಂದ ಯೋಚನೆ ಮಾಡಿದರೆ
ತಕ್ಕ ಮಟ್ಟಿಗಾದರೂ ಬಹಳಷ್ಟು ಅಪಘಾತಗಳನ್ನು ತಡೆಯಬಹುದು.
ಮನುಷ್ಯ ಜನ್ಮಕ್ಕೆ ಸಾರ್ಥಕತೆ ಪಡೆಯಬೇಕು ಎನ್ನುವುದಾದರೆ.ಅದರಲ್ಲಿ ಪ್ರಾಣವನ್ನು ಕಾಪಾಡವ ಹೊಣೆಯೂ ಅವನದೇ ಆಗಿರುತ್ತದೆ ಅಲ್ಲವೇ ?
ನಮ್ಮ ಪ್ರಾಣವು ನಮ್ಮ ಕೈಯಲ್ಲಿದೆ.ಹಾಗೆ ನಿನ್ನೂಬ್ಬರ ಪ್ರಾಣವನ್ನು ಹಾಗೆ ಪ್ರಾಣಿ ಪಕ್ಷಿಗಳ ಪ್ರಾಣವನ್ನು ತೆಗೆಯು ಹಕ್ಕು ಯಾರಿಗೂ ಇಲ್ಲ ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
– ರಾಧಾ ಹನುಮಂತಪ್ಪ ಟಿ. ಹರಿಹರ
ಲೇಖಕಿಯರ ಪರಿಚಯ:
ರಾಧಾ ಹನುಮಂತಪ್ಪ.ಟಿ ರವರು ದಾವಣಗೆರೆ ಜಿಲ್ಲೆಯ ಹರಿಹರದವರು. ಇವರು ಓದಿದ್ದು,. ಪಿ.ಯು.ಸಿ. ವರೆಗೆ ಮಾತ್ರ. ಗೃಹಿಣಿ ಯಾಗಿದ್ದು ಮನೆಯಲ್ಲಿ ಟೈಲರಿಂಗ್ ವೃತ್ತಿಯೊಂದಿಗೆ ಸಾಹಿತ್ಯ ಕೃಷಿ ಮುಂದುವರೆ ಸಿದ್ದಾರೆ. ಕತೆ,ಕವನ,ಲೇಖನ ನಾಟಕ,ನಗೆಹನಿ. ಪ್ರಬಂಧ, ಭಕ್ತಿಗೀತೆ. ಭಾವಗೀತೆ ಇತ್ಯಾದಿ ಬರಹಗಳು ಬರೆದಿದ್ದಾರೆ. ಅವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಸಾಹಿತ್ಯ ರಚನೆಗೆ ಹಲವಾರು ಬಹುಮಾನ ಮತ್ತು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.