ಅರಳು ಮಲ್ಲಿಗೆ .
ನೀಲ ಮೇಘಗಳ ಮಧುರ ಮೈತ್ರಿಯಲಿ
ಭೂಮಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತು
ವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲೆ
ಹಬ್ಬದ ವಾತಾವರಣ ಕಂಗಳಲಿ ತುಂಬಿತ್ತು
ತಂಪೆರೆದು ನೋಡುತಿರಲು ಮೇಘಗಳು ಬಾನಲ್ಲಿ
ಹಸಿರು ಹೊದಿಕೆಯ ಹೊತ್ತು ನಳನಳಿಸುತ್ತಿರಲು
ಸಂಪಿಗೆ, ಮಲ್ಲಿಗೆ, ಸೇವಂತಿ, ದುಂಡು,ಜಾಜಿಗಳಿಲ್ಲಿ
ಅರಳುತ ಸೂಸುವ ಕಂಪು ಬೀರುತ ಸ್ವಾಗತಿಸಿರಲು
ನೊರೆಹಾಲಂತೆ ದುಮ್ಮುಕ್ಕುತ ಮುಂದೆ ಸಾಗಿವೆಯಿಲ್ಲಿ
ಒಡಲ ನದಿಗಳು ನಾಮುಂದು ತಾ ಮುಂದೆನೆತ
ನಭದ ಮೋಡಕು,ಭಾನ ಒಲವಿನ ಪ್ರೇಮ ಸಾಕ್ಷಿಯಲ್ಲಿ
ಕಂಕಣಕಟ್ಟಿ ಮೇಳವನ್ನೇ ಸೃಷ್ಟಿಸಿವೆ ಈ ಲೋಕವೆಲ್ಲನುತ
ಸವಿತಾ ಮುದ್ಗಲ್
ಬಳ್ಳಾರಿ