ಅರಿವು
ಮನಗತ್ತಲು ಕಳೆಯಲು ಬೆಳಕನು ಹರಡಲು
ಜ್ಞಾನದ ದೀವಿಗೆ ಹಚ್ಚೋಣ
ಮೂಢನಂಬಿಕೆ ಕಂದಾಚಾರದ ಬೇರನು
ಬುಡದಿಂದಲಿ ಕಿತ್ತೆಸೆಯೋಣ
ಭೇದ ಭಾವ ವೈಮನಸಿನ ಕಂದಕಕೆ
ಬಾಂಧವ್ಯದ ಬೆಸುಗೆ ಬೆಸೆಯೋಣ
ತಾರತಮ್ಯದ ವೇದನೆಗಳಿಸುತ
ಸಮಾನತೆಯ ಸಂತಸ ಬಡಿಸೋಣ
ಮಡಿಮೈಲಿಗಳ ಮನಗಳ ತೊಳೆಯುತ
ಮನುಷ್ಯತ್ವದ ಮೆರಗನು ಬರಿಸೋಣ
ವೈಚಾರಿಕ ಪ್ರಜ್ಞೆಯ ಕಂಪು ಹರಡುತ
ವೈಜ್ಞಾನಿಕ ಅರಿವು ಬಿತ್ತೋಣ
ಮಾನವರೆಲ್ಲರು ಒಂದೆನ್ನುವ ಮಂತ್ರವು
ಮನದಾಳದಿಂದಲಿ ಉಲಿಯೋಣ
ಸಹಪಂಕ್ತಿಭೋಜನವು ಕೂಡಿಮಾಡುತ
ಭಕ್ಷಗಳ ರುಚಿಯನು ಸವಿಯೋಣ
ಸಮಸಮಾಜದ ನಿರ್ಮಾಣಕೆ ಸಕಲರು
ಬೆವರಿನ ಹನಿಗಳ ಹರಿಸೋಣ
ಸಾಮರಸ್ಯದ ಹೊಸ ಬದುಕನು ಸಾಗಿಸುತ
ನವಬಾಳಿನ ನಾಂದಿಗೆ ಸಂವಿಧಾನವ ನೆನೆಯೋಣ
– ಮಾಣಿಕ ನೇಳಗಿ ತಾಳಮಡಗಿ.ಬೀದರ