ಅಸಹನೆ
ಸಹೋದ್ಯೋಗಿಯ ಮದುವೆಗೆ ರೆಡಿಯಾಗಿ ನಿಂತಿದ್ದ ವಸುಂಧರ ಪರ್ಸ್ ತೆರೆದು ನೋಡಿದರೆ ಬರಿ 300 ರೂ ಇದೆ …ಅಯ್ಯೊ ದೇವರೆ ಎನ್ನುತ್ತ ….ಹೋಗುವಾಗ ದುಡ್ಡು ಬಿಡಿಸಿಕೊಂಡು ಹೋಗುವ ಎಂದು atm ಕಾರ್ಡ್ ನೋಡುತ್ತಾಳೆ …ಇಲ್ಲಾವೆ ಇಲ್ಲಾ …. ಎಷ್ಟು ಕಷ್ಟ ಪಟ್ಟು ಹುಡುಕಿದರು atm ಕಾರ್ಡ್ ಸಿಗುತ್ತಿಲ್ಲ .. ಎಲ್ಲಿ ಇಟ್ಟದ್ದೆಂಧೂ ನೆನಪು ಆಗುತ್ತಿಲ್ಲ .ಹಾಳಾದೋಳು ಮೋನಿಕಾ ಬೇರೆ ನೆನ್ನೆ ಸಂಜೆ ಇಂದ ನಾಪತ್ತೆ ಏನು ಮಾಡೋದು ಎಂದು ಸೋಫಾ ಮೇಲೆ ಕುಳಿತಳು .ಅದೇ ಸಮಯಕ್ಕೆ ಸರಿಯಾಗಿ 70 ಸಾವಿರ ಡ್ರಾ ಆಗಿರುವ msg ಬೇರೆ ಬರತ್ತದೆ .ವಸುಂಧರ ಕುಂತಲ್ಲಿಯೇ ಬೆವೆತು ಹೋದಳು .
ಬೆಂಗಳೂರಿನ ಅಪಾರ್ಟ್ಟ್ಮೆಂಟಿನಲ್ಲಿ ಒಬ್ಬಂಟಿಯಾಗಿಯೆ ಬದುಕುತ್ತಿದ್ದ ವಸುಂದರಳ ಜೊತೆಯಾಗಿ ಇತ್ತೀಚೆಗಷ್ಟೇ ಅವಳ ದೂರದ ಸಂಬಂಧಿ ಮೋನಿಕಾ ಬಂದಿದ್ದಳು .ಮೋನಿಕಾ ಸ್ಪುರದ್ರೂಪಿ ಹಾಗು ಸ್ವಲ್ಪ ಹೈ ಫೈ ಹುಡುಗಿ .ವಸುಂಧರ ಪರವಾಗಿಲ್ಲ ಎನ್ನಬಹುದಾದರೂ ಮೋನಿಕಾಳಷ್ಟು ಸೌಂದರ್ಯವತಿಯಾಗಿರಲಿಲ್ಲ …ಆದರೂ ವಸುಂಧರಳಿಗೇ ಅದನ್ನು ಒಪ್ಪುವ ಮನಸಿಲ್ಲ…ರೂಮಿಗೆ ಬಂದಾಗಿ ನಿಂದಲೂ ಅವಳನ್ನು ಕಂಡರೆ ವಸುಂದರಳಿಗೆ ಅಷ್ಟಕ್ಕಷ್ಟೇ ,ಮನೆಯವರ ಅದರಲ್ಲೂ ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಒಲ್ಲದ ಮನಸಿನಿಂದಲೇ ಜೊತೆಯಲ್ಲಿ ಇರಿಸಿ ಕೊಂಡಿದ್ದಳು.
ಅನುಮಾನದ ಭೂತ ಮೋನಿಕಾಳನ್ನು ಗುರಿಯಾಗಿಸಿ ವಸುಂಧರಳ ಬೆನ್ನೇರಿಯಾಗಿತ್ತು .ಏನು ಮಾಡುವುದೆಂದು ತೋಚದೆ ಚಡಪಡಿಸುತ್ತ , ಈ ಪೀಡೆಯನ್ನು ಗಂಟು ಹಾಕಿದ ತನ್ನ ಮನೆಯವರನ್ನು ಶಫಿಸುತ್ತ ಕುಳಿತಿದ್ದಳು. ಬಾಗಿಲಿನ ಕರೆಗಂಟೆ ಸದ್ದಾಯಿತು ,ಎದ್ದು ಬಾಗಿಲು ತೆರೆದಳು …..ಆಯಾಸಗೊಂಡು ಮುಖ ಬಾಡಿಡಂತಾಗಿ ಮೋನಿಕಾ ಒಳಬಂದಳು .ಬಂದವಳೇ ತನ್ನ ಬ್ಯಾಗ್ ಇಟ್ಟು ಸೀದಾ ವಾಷ್ ರೂಮ್ಗೇ ಹೋದಳು , ವಸುಂಧರ ಒಳ್ಳೆಯ ಅವಕಾಶ ಎಂದು ಅವಳ ಬ್ಯಾಗ್ ಅನ್ನು ತಡಕಿದಳು …atm ಕಾರ್ಡ್ ಹಾಗು ಹಣ ಬಿಡಿಸಿದ ರೆಸಿಪ್ಟ್ ಸಿಕ್ಕಿಬಿದ್ದವು .ಮೊದಲೇ ಅಸಹನೆಯಿಂದ ಕುದಿಿಯುತ್ತಿದ್ದ ವಸುಂದರಳ ಕೋಪ ನೆತ್ತಿಗೇೆರಿತು. ಮೋನಿಕಾ ಆಚೆ ಬಂದದ್ದೇ ತಡ ಹೋಗಿ ಕೆನ್ನೆಗೆ ಚಟಾರನೆ ಬಾರಿಸಿದಳು. ಈ ಅನಿರೀಕ್ಷಿತ ಆಘಾತ ಹಾಗು ಏಟು ಕಿವಿ ಭಾಗಕ್ಕೆ ಬಿದ್ದಿದ್ದ ರಿಂದ ರಕ್ತ ಸುರಿಯಲಾರಂಬಿಸಿ ಪ್ರಜ್ಞೆ ತಪ್ಪಿ ಬಿದ್ದುಳು.
ವಸುಂಧರಳಾ ಮೊಗದಿ ತಾಂಡವವಾಡುತ್ತಿದ್ದ ಕೋಪ ಇಳಿದು ಒಮ್ಮೆಲೆ ಭಯ ಆವರಿಸಿ ಕೊಳ್ಳತೊಡಗಿತು.ಕಣ್ಣೀರಿನ ಹನಿಗಳು ಕೆನ್ನೆಯ ಸವರಿ ತಂಪು ಮಾಡು ತ್ತಿರುವಾಗಲೆ ಮೋನಿಕಾಳ ಫೋನು ರಿಂಗಾಯಿತು.ಹೆದರಿ ನಡುಗುತ್ತಾ ರಿಸೀವ್ ಮಾಡಿದಳು, ಅತ್ತಲಿಂದ ಹೆಣ್ಣು ಧ್ವನಿಯೊಂದು ಪೇಶೇಂಟ್ ಕಂಡೀಷನ್ ಸ್ವಲ್ಪ ಬಿಗಡಾಯಿಸಿದೆ ಮತ್ತೊಂದು ಬಾಟಲ್ ರಕ್ತ ಬೇಕು ಬೇಗ ವ್ಯವಸ್ಥೆ ಮಾಡಿ ಎಂದು ಫೋನಿಕ್ಕಿತು .
ವಸುಂಧರ ,ನಿಸ್ತೇಜವಾಗಿ ಬಿದ್ದೀದ್ದ ಮೋನಿಕಾಳೆಡೆ ನೋಡಿ ಭಯದಿಂದ ನಡುಗಲಾರಂಭಿಸಿದಳು.ಕಣ್ಣು ಮಂಜಾದಂತಾಯ್ತು ದಿಕ್ಕು ತೋಚದೆ ದಿಗ್ಬ್ರಾಂತಳಾಗಿ ಕುಸಿದು ಬಿದ್ದಳು .
ಏನೋ ಜೋರಾಗಿ ಸದ್ದು ಕೇಳಿದಂತಾಯ್ತು , ಯಾರೊ ಒಂದೇ ಸಮನೆ ಬಾಗಿಲು ಬಡಿಯುತ್ತಿದ್ದಾರೆ .ಕಣ್ಣು ಬಿಟ್ಟು ಮೋನಿಕಾಳತ್ತ ನೋಡುತ್ತಾಳೇ ಬರೀ ರಕ್ತದ ಕಲೆಯಷ್ಟೇ ಇದೇ ಅವಳ ದೇಹವೇ ಕಾಣುತ್ತಿಲ್ಲ .. ಬಾಗಿಲು ಬಡಿಯುವ ಸದ್ದು ಜೊರಾಗುತ್ತಲೇ ಇದೇ….ಸಾಲು ಸಾಲು ದೇವರುಗಳನೆಲ್ಲ ಮನದಲ್ಲಿ ನೆನೆಸುವ ಮೂಲಕ ದೈರ್ಯವನ್ನು ಒಟ್ಟು ಮಾಡಿ ಎದ್ದು ಮೆಲ್ಲನೆ ಬಾಗಿಲು ತೆರೆದು …. ಆಚೆ ನೋಡಿ ಒಂದೆ ಸಮನೆ ಅಳಲಾರಂಭಿಸಿದಳು ….ಅಪ್ಪನ ಕೈ ಹಾಗು ಹೊಟ್ಟೆಗೆ ಬ್ಯಾನ್ಡೆಜ್ ಸುತ್ತಲಾಗಿದೆ ..ಅಣ್ಣ ಅವರ ಆಸರೆಯಾಗಿ ಬೀಳದಂತೆ ಹಿಡಿದು ನಿಂತಿದ್ದಾನೆ .ಏನಾಯಿತೆಂದು ಬಿಕ್ಕಳಿಸಿ ಅಳುತ್ತಲೇ ಅಪ್ಪನನ್ನು ಸಾವಕಾಶವಾಗಿ ವಸುಂಧರ ತನ್ನ ಅಣ್ಣನ ನೆರವಿನಿಂದ ಸೋಫಾದ ಮೇಲೆ ತಂದು ಕೂರಿಸಿದಳು.
ಮೋನಿಕಾ ಎಲ್ಲಿ ಎಂದು ಕೇಳಿದ ಅಪ್ಪ ಅವಳನ್ನು ಕರೆ ಎಲ್ಲಾವನ್ನು ಹೇಳುತ್ತೇನೆ ಎಂದರೆ ವಸುಂಧರ ಭಯ ಹಾಗು ಅಪರಾಧಿ ಮನೊಭಾವನೆ ಯಿಂದ ತಲೆ ತಗ್ಗಿಸಿ ನಿಂತಿದ್ದಳು …. ನಡೆದ ಎಲ್ಲವನ್ನು ಹೇಳಿಬಿಡಲು ಮತ್ತೊಮ್ಮೆ ಇದೇ ಪ್ರಶ್ನೆಯ ನಿರೀಕ್ಷಿಸಿ.
ಅಷ್ಟರಲ್ಲಿಯೇ ಮೋನಿಕಾ ಏನು ನಡೆದೇ ಇಲ್ಲಾ ಎನ್ನು ವಂತೆ ಅಡುಗೆ ಕೋಣೆಯಿಂದ ಎಲ್ಲರಿಗು ಬಿಸಿ ಬಿಸಿ ಕಾಫಿ ತಂದು ಕೊಟ್ಟಳು …..ವಸುಂದರಳ ಅಪ್ಪ ಮೋನಿಕಾಳ ಕೈ ಹಿಡಿದು ನಿನ್ನ ಉಪಕಾರ ಯಾವತ್ತು ಮರೆಯುವುದಿಲ್ಲಾ ,
ನೀನು ನೆನ್ನೆ ಸರಿಯಾದ ಸಮಯಕ್ಕೆ ಬಂದು ,ರಕ್ತ ನೀಡಿ ನನ್ನ ಪ್ರಾಣ ಉಳಿಸಿದ್ದೀಯ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಮನಸಾರೆ ಹರಸಿದರು.
ಮಗಳತ್ತ ತಿರುಗಿ ನೆನ್ನೆ ಇವಳು ಎಷ್ಟು ಕಷ್ಟ ಪಟ್ಟಳು ಗೊತ್ತ ….ಅಪಘಾತವಾಗಿ ಬಿದ್ದಿದ್ದ ನನ್ನ ಯಾರೊ ಆಸ್ಪತ್ರೆಗೆ ಸೇರಿಸಿದರು , ನಿನಗೆ ಫೋನು ಮಾಡಿದರೇ ಬರಿ swichof ,ಮೋನಿಕಾಳಿಗೆ ಕರೆ ಮಾಡುವಂತೆ ಆಸ್ಪತ್ರೆ ಯವರಿಗೆ ತಿಳಿಸಿದೆ ಪಾಪ ಹಾ ಹುಡುಗಿ ಉಟ್ಟ ಬಟ್ಟೆ ಯಲ್ಲೇ ಓಡೋಡಿ ಬಂದು ಆರೈಕೆ ಮಾಡಿತು . ನೀನು ಊರಿಂದ ಬರುವಾಗ ಮರೆತು atm ಕಾರ್ಡ್ ಬಿಟ್ಟು ಬಂದಿದ್ದೆ …ನೆನ್ನೆ ತಾನೇ ಸಿಕ್ಕಿತು ಮಂಚದ ಕೆಳಗೆ…
….ಹೇಗೋ urjent ಗೆ ದುಡ್ಡು ಬಿಡಿಸಿಕೊಟ್ಟೆವು ,ನಿನ್ನ ಅಣ್ಣನಿಗೆ ಕರೆ ಮಾಡಿ ಅವನು ಬರುವ ವರೆಗೂ ಆಸ್ಪತ್ರೆಯಲ್ಲೇ ಇದ್ದು ನನ್ನ ನೋಡಿಕೊಂಡಳು..
ರೂಮಿಗೆ ಹೋಗಿರು, ವಸುಂಧರಗೆ ಏನು ಹೇಳಬೇಡ ಗಾಬರಿ ಯಾಗುತ್ತಾಳೆ ಎಂದು ನಿನ್ನ ಅಣ್ಣನೇ ಬೆಳಿಗ್ಗೆ ಅವಳನ್ನು ಕಳುಹಿಸಿದ್ದ . ಸದ್ಯ ದೇವರು ಕಾಪಾಡಿದ ಎಂದು ನಿಟ್ಟುಸಿರು ಬಿಟ್ಟರು .
ಬಿಟ್ಟ ಕಣ್ಣು ಬಿಟ್ಟಂತೆಯೇ ಮೋನಿಕಾಳನ್ನು ನೋಡುತ್ತ ನಿಂತ್ತಿದ್ದ ವಸುಂಧರ ಒಂದು ಕ್ಷಣ ತನ್ನ ಬಗ್ಗೇ ತಾನೇ ಅಸಹ್ಯ ಪಟ್ಟು ಕೊಂಡಳು .ಕೆನ್ನೆ ಊದಿದ್ದರು ಸಹ ಮೋನಿಕಾ ವಸುಂಧರಳಿಗೇ ಇಂದು ಸುಂದರವಾಗಿ ಕಾಣುತಿದ್ದಳು .
-ಮನು ಪುರ
ಲೇಖಕರ ಪರಿಚಯ:
ಮನು ಪುರ ‘ ಎಂಬ ಕಾವ್ಯ ನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಮನೋಜ್ ಕುಮಾರ ರವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ‘ಪುರ’ ಎಂಬ ಊರಿನವರು. ಸದ್ಯ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ 300ಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ ಶ್ರೀಮಂತ ಸಂತ, ಶೋಷಿತಳ ಸ್ವಗತ, ಪಾಪದ ಮೂಟೆ, ಹಾಸಿಗೆ ಖಾಲಿ ಇದೆ, ಕಂಬನಿಯ ಹೆರಿಗೆ ಪ್ರಮುಖವಾಗಿವೆ.