Oplus_131072

ಅಯ್ಯೋ ದೇವರೆ !  ಇಲ್ಲೊಂದು ಊರಿತ್ತು.

ಸದ್ದು ಗದ್ದಲವಿಲ್ಲದೆ
ಬಿಟ್ಟು ಬಿಡದೆ
ಧಾರಾಕಾರ ಮಳೆ ಸುರಿದು
ಮಳೆ ನೀರಿನಿಂದ
ನದಿ ಪ್ರವಾಹದಿಂದ ಎಲ್ಲೆಂದರಲ್ಲಿ ಹರಿದು
ಊರು ಕೆರೆ ಮಠಗಳು
ಕಟ್ಟಿದ ಮನೆಗಳು
ಕೊಚ್ಚಿ ಹೋದ ರಸ್ತೆಗಳು ಬೆಳಗಾಗುವುದರೊಳಗೆ ಇನ್ನಿಲ್ಲ ವಾದವೂ !

ಮಲಗಿದವರು ನಿದ್ದೆಯಿಂದ ಮೇಲೇಳದೆ
ನದಿಯಲ್ಲಿ ತೇಲುತ್ತಾ
ನೆಲದಡಿಯಲ್ಲಿ ಹುದುಗಿರುವ
ತುಂಡಾದ ಕೈ ಕಾಲುಗಳು
ಕೆಸರಿನಲ್ಲಿ ಸಿಕ್ಕಿ ಬಿದ್ದು
ಉಸಿರು ಬಿಟ್ಟರು

ಮನುಷ್ಯನ ಅದೇಷ್ಟೋ
ರುಂಡಗಳು
ಕೊಚ್ಚಿ ಹೋಗಿರುವ ದೇಹಗಳು
ನಾಯಿ ಬೆಕ್ಕು ಪ್ರಾಣಿಗಳು
ನೂರಾರು ಜೀವಿಗಳು ಜಲಸಮಾದಿಯಾದವು

ನಡು ನೀರಿನಲ್ಲಿ
ಅಯ್ಯೋ ದೇವರೆ !
ಇಲ್ಲೊಂದು ಊರಿತ್ತು ಎಂಬುದಕ್ಕೆ ಕ್ಷಣದಲ್ಲಿಯೇಇ
ಎಲ್ಲವೂ ಕಣ್ಮರೆಯಾಗಿ
ಕೊಚ್ಚಿಹೋಯ್ತೇ ?

ಸಂಗಮೇಶ್ವರ ಎಸ್ ಮುರ್ಕೆ .
ಹೊಳೆಸಮುದ್ರ ತಾ.ಕಮಲನಗರ  ಜಿ.ಬೀದರ.             ಮೊ- 8495861795

ಕವಿ ಪರಿಚಯ:

ಸಂಗಮೇಶ್ವರ ಮುರ್ಕೆ ಕಮಲನಗರ ಬೀದರ.

  ಸಂಗಮೇಶ್ವರ ಮುರ್ಕೆ ಯವರು ಬೀದರ ಜಿಲ್ಲೆ  ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ವರು. ಬಿ,ಎ, ಡಿ.ಇಡಿ, ಪದವಿಧರರಾಗಿದ್ದು ಸದ್ಯ ಕೃಷಿಯಲ್ಲಿ ತೊಡಗಿದ್ದಾರೆ.   ‘ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ’, “ಸಂತ ಶ್ರೀ ಹರಿನಾಥ ಚರಿತ್ರೆ’, ‘ಸಾಧಕರು’ (ವ್ಯಕ್ತಿ ಚಿತ್ರ) ‘ಹನಿ ಹನಿ ಜೇನ ಹನಿ‘ (ಹನಿಗವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.                                                  ಕನ್ನಡ  ಮರಾಠಿ ಹಿಂದಿ ಈ ಮೂರು  ಭಾಷೆಗಳಲ್ಲಿ ತುಂಬ ಪಾಂಡಿತ್ಯ ಹೊಂದಿರುವ ಇವರು ಗ್ರಾಮದ ಮರಾಠಿ ಸಾಹಿತಿ, ಅನಂತ ಚಂಪಾಯಿ ಮಾಧವ ಕದಂ ‘ ಅವರೊಂದಿಗೆ ಸೇರಿ  ‘ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ‘ ಎಂಬ  ಕೃತಿ ಸಂಪಾದಿಸಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ