ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು.

 

ಮಚ್ಚೇಂದ್ರ ಪಿ ಅಣಕಲ್.

ಸಖಿ,
ನಿನ್ನ ಸೌಂದರ್ಯದ ನಗುವಿನಾನನ ಪ್ರೇಕ್ಷಿಸಿ
ನನ್ನ ಮನದಾಳದಲ್ಲಿ ಗುಡಿಯೊಂದು ಕಟ್ಟಿದೆ ಕಲ್ಪಿಸಿ
ಆ ಮನದ ಗುಡಿಯ ಪ್ರೀತಿಯೆಂಬ ಭಕ್ತಿಯಲ್ಲಿ ಕುಳಿತು
ನಿನ್ನ ಧ್ಯಾನ ಮಾಡುತ್ತಿದ್ದೆ ನೂರು ಕಾರ್ಯವು ಮರೆತು

ನಿನ್ನ ಧ್ಯಾನದಲ್ಲಿ ಭೋಜನೆ ಮರೆತು ಬಡವಾಗಿತ್ತು ದೇಹ
ನನ್ನ ನರನಾಡಿಗಳಿಗೆಲ್ಲ ಹೆಚ್ಚಾಗಿತ್ತು ಎಲ್ಲಿಲ್ಲದ ದಾಹ
ನಿನ್ನ ಸೊಬಗಿಗೆ ಎನ್ನ ಹೃದಯವೆ ಆಗಿತು ಗೇಹ
ಆ ಅಂತಿಮದಲ್ಲಿ ತೊರೆದು ಹೋಯಿತು ನಿನ್ನಾ ಸ್ನೇಹ

ಅಂದು ನಮ್ಮಿಬ್ಬರ ಸಂಯೋಗದ ಸಂಭಾಷಣೆಯನ್ನರಿತು
ಸುಖವೆಂಬ ಸಾಗರದಲ್ಲಿ ಕಣ್ಣು ಮುಚ್ಚಿ ಅಲೆದಾಡಬೇಕು ಎಂದಿದ್ದೆ ನಾನು
ನನ್ನ ಮನದಂತರಂಗದಲ್ಲಿ ಬರಿ, ಕತ್ತಲೆಂದು ತಿಳಿದಿದ್ದಿಯಾ ನೀನು ?
ಹುಚ್ಚಿ !
ಆ ಕತ್ತಲೆಯ ಮೊಟ್ಟೆಯಲ್ಲಿ ಬೆಳಕಿನ
ಮರಿ ಇದೆಯೆಂದು ಒಮ್ಮೆಯಾದರು ಪರಿಶಿಲಿಸಿ ಯೋಚಿಸಿದ್ದಿ ಏನು ?

ಹಣದಾಸೆಗೆ ಹಣವಂತನ ಮನೆಗೆ ಹಣತೆಯಾಗಿ
ಆತನ ಬಾಳು ಬೆಳಗಲು ಭಾಗ್ಯಳಾದೆಯಾ ?
ಆತನ ಬಾಹುಗಳಲ್ಲಿ ಬಂಧಿಯಾಗಲು ಸಿದ್ಧಳಾದೆಯಾ ?
ಆಗು ಸಖಿ ಏನಾದರೂ ಆಗು ! ನೀ ಮೊದಲು ಸುಖಿ ಆಗು !
ನಿನ್ನ ಬದುಕಿಗೆ ವಿಘ್ನವಾಗಲಾರೆ ಆ ನೆನಪೊಂದಿದ್ದರೆ ಸಾಕು
ನಾ ಬಯಸುತ್ತೇನೆ, ಬದುಕುತ್ತೇನೆ ಆ ಕತ್ತಲೆಯ ಮೊಟ್ಟೆಯೊಡೆದು.

ಮಚ್ಚೇಂದ್ರ ಪಿ ಅಣಕಲ್.

(1999ರಲ್ಲಿ ಬರೆದ ಮೊದಲ ಕವನ ಸಂಕಲನ ದಿಂದ ಆಯ್ದ ಕವಿತೆ)

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ