Oplus_131072

ಬಣ್ಣದ ಹಕ್ಕಿ

ಬಾರಲೇ ಹಕ್ಕಿ
ಹಾರುವ ಹಕ್ಕಿ
ಬಣ್ಣದ ಹಕ್ಕಿ
ಬಾ ಬಾ ಬಾ ಬಾ !

ನನಗೂ ಹಾರಲು ಕಲಿಸು
ನನಗೂ ಹಾಡಲು ಕಲಿಸು
ಬಾರಲೆ ಹಕ್ಕಿ ಹಾರುವುದಕ್ಕೆ
ಕಲಿಸು ಬಾ ಬಾ ಬಾ ಬಾ !

ನನಗೂ ಗೆಳೆಯರಿಲ್ಲ
ನಿನಗೂ ಗೆಳೆಯರಿಲ್ಲ
ಸಮಯವು ಹೇಗೆ ಕಳೆಯುವುದೆಂದು
ನನಗೆ ತಿಳಿಯುತ್ತಿಲ್ಲ.
ಬಾರಲೇ ಹಕ್ಕಿ
ಬಾ ಬಾ ಬಾ ಬಾ !

ಅಪ್ಪನ್ನುದುಡಿಯಲು ಹೋಗಿಹರು
ಅವ್ವನ್ನು ಅಡಿಗೆ ಮಾಡಿಹಳು
ನಮ್ಮ ಮನೆ ಅಡುಗೆಯು ತಿನ್ನಲು ಕೊಡುವೆನು
ಬಾ ಬಾ ಬಾ ಬಾ !

ನಾನು ನೀನು ಆಗಸದಲ್ಲಿ
ಹಾರುತ್ತಾ ಆಡುತ್ತಾ ತೇಲೋಣ
ಬಾರಲೆ ಹಕ್ಕಿ ಬಣ್ಣದ ಹಕ್ಕಿ
ಆಟವ ಆಡೋಣ
ಬಾ ಬಾ ಬಾ ಬಾ. !

ವಿಜಯ ಕುಮಾರ ಚಟ್ಟಿ- ಹುಮನಾಬಾದ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ