Oplus_131072

ಬಣ್ಣದ ಕೊಡೆ (ಕಥೆ)

ಮಹೇಶ ಐನೋರು ರಾಮಾಪುರದ ದೊಡ್ಡ ಕುಳ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಳ್ಳೆ ಹೆಸರು ಪಡೆದಿದ್ದ,ನಾಲ್ಕಾರು ಜನರಿಗೆ ಬೇಕಾದ ವ್ಯಕ್ತಿ.ನಾಲ್ಕು ತಲೆಮಾರು ಕುಳಿತು ತಿಂದರೂ ಸವೆಯಷ್ಟು
ಆಸ್ತಿ ಬೇರೆ ….ಕೇಳಬೇಕೆ ಬೆಲ್ಲ ಇರುವವರೆಗೆ ಇರುವ ಬದುಕಿಗೆ ಭಯವೇ? ….ಇವರಿಗೆ’ ರವೀಶ ‘ಎಂಬ ಒಬ್ಬನೇ ಮಗ .ಹೆಂಡತಿಯು ಗಯ್ಯಾಳಿಯೇನಲ್ಲ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಮಹೇಶಯ್ಯರ ಸಂಸಾರ ನೌಕೆ ಪ್ರಶಾಂತವಾಗಿ ಸಾಗುತ್ತಿತ್ತು.

ಮುತ್ತಾತನ ಕಾಲದಿಂದಲೂ ತುಂಬಾ ಧಾರ್ಮಿಕ ಪ್ರವೃತ್ತಿಯ ಕುಟುಂಬ ….ಮಹೇಶ್ ಐನೋರು ಸಹ ಅದನ್ನು ಮುಂದುವರಿಸಿಕೊಂಡು ಟೊಂಕ ಕಟ್ಟಿ ನಿಂತಿದ್ದರು.ಆಧುನಿಕತೆಯ ಅಬ್ಬರವನ್ನು ತಿರಸ್ಕರಿಸಿದವರು….ಆಧುನಿಕತೆಯ ಅಬ್ಬರವನ್ನು ತಿರಸ್ಕರಿಸಿದವರು….ಆಧುನಿಕತೆ ಮನುಷ್ಯನನ್ನು ಸಂಸ್ಕಾರ ರಹಿತನನ್ನಾಗಿ ಮಾಡಿ ಅವರ
ಅಂಬೋಣ ಪುಣ್ಯ ಕಾವ್ಯಗಳ ಜೊತೆಗೆ ಭಗವದ್ಗೀತೆಗಳು ಪಠಣ ಮತ್ತು ಅವರ ತಾತ್ಪರ್ಯವನ್ನು ಮಗನಿಗೆ ವಿವರಿಸುವ ಬಾಲ್ಯದಿಂದಲೇ ಸಂಸ್ಕೃತಿ ಸಂಸ್ಕಾರಗಳ ಅರಿವನ್ನು ಬಿತ್ತುವ ಪ್ರಯತ್ನ ಮಾಡಿತು.

ರವೀಶ ಅದೇ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ.ಮಲೆನಾಡಿನ ಮುಕುಟದಂತಿದ್ದ ಆ ಮಳೆಯಂತು ಬಿಂದಿಗೆಯಲ್ಲಿ ಮೊಗೆದು ಸುರಿದಂತೆ ಧಾರಾಕಾರವಾಗಿರುತಿತ್ತು .ರವೀಶ ಎಂದಿನಂತೆ ತನ್ನ ಪಾಟಿಚೀಲ ಮತ್ತು ಕೊಡೆಯನ್ನು ಹಿಡಿದು ಶಾಲೆಗೆ ಹೋದ.ಮೊನ್ನೆ ತಾನೆ ಶಾಲೆಗೆ ಹೋದಾಗ ಅಪ್ಪ ಈ ಮಳೆಗಾಲಕ್ಕೆಂದು ಪ್ರೀತಿಯಿಂದ ಬಣ್ಣದ ಕೊಡೆ. ಅವನನ್ನು ಅಂಟಿಕೊಂಡೇ ಇರಬೇಕಿತ್ತು ಅಷ್ಟು ಹಚ್ಚಿಕೊಂಡಿದ್ದ ರವೀಶ ಕೊಡೆಯನ್ನ .ಶಾಲೆಯಲ್ಲಿ ಗುರುಗಳು ಸಹಾಯ, ಪರೋಪಕಾರದ ಮಹತ್ವದ ಬಗ್ಗೆ ವಿವರಿಸುತ್ತಾರೆ. ಯಾರೇ ಕಷ್ಟದಲ್ಲಿದ್ದರು ನಮಗೆ ಸಹಾಯ ಮಾಡುವ ಶಕ್ತತೆ ಇದ್ದರೆ- ಹಿಂದೆ ಮುಂದೆ ನೋಡದೆ ಅವರಿಗೆ ಸಹಾಯ ಮಾಡಬೇಡಿ ,ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ನೆರವಾದರೆ ಅದರಿಂದ ಸಿಗುವ ಸಂತೃಪ್ತಿಯ ಬಗ್ಗೆ ಗುರುಗಳು ಹೇಳಿದ ಮಾತು ಅವನ ಮನ ಮುಟ್ಟಿತು.
ಶಾಲೆಯ ಗಂಟೆ ಬಾರಿಸಿದ ನಂತರ ರವೀಶ “ನಾನು ಯಾರಿಗಾದರೂ ಸಹಾಯ ಮಾಡಬೇಕು “ನನಗೂ ಯಾರಾದರು ಕಷ್ಟದಲ್ಲಿರುವವರು ಸಿಗಲೀ ಎಂದು ಮನದಲ್ಲೇ ಪ್ರಾರ್ಥಿಸುತ್ತ ಮನೆಯ ಕಡೆ ಹೊರಟ.

ರವೀಶ ಆಸರಿ ಕುಡಿದು ಜಗುಲಿ ಮೇಲೆ ಕುಳಿತು ಆಡುತ್ತಿದ್ದ .ಅಪ್ಪ ಪೇಟೆಗೆ ಹೋಗಿದ್ದರು .ಅಮ್ಮ ಒಳಗೆ ಅಡುಗೆಗಾಗಿ ಓಲೆಯ ಬಳಿ ಕಟ್ಟಿಗೆ ಒಟ್ಟೂ ಗೂಡಿಸುತಿದ್ದಳು.ಮುಗಿಲು ಬಾಯ್ದೆರೆದಿದೆಯೇನೋ ಎಂಬಂತೆ ಮಳೆಯು ಧೋ ಎಂದು ಸುರಿದಿತ್ತು .ಅವನ ಮನೆ ಬಸ್ ನಿಲ್ದಾಣದ ಹತ್ತಿರವೂ ಇದ್ದುದರಿಂದ ಬಸ್ಸಿನಿಂದ ಇಳಿದು ಮಧ್ಯದಲ್ಲಿ ಇಬ್ಬರು ಹಿರಿಯರು ಆಶ್ರಯಕ್ಕೆ ಬಂದರು. ಎಷ್ಟು ಹೊತ್ತಾದರು ಬಿಡುವ ಸೂಚನೆ ಕಾಣಲಿಲ್ಲ.ಇಳಿಸಂಜೆಯ ಕತ್ತಲು ಮೋಡದ ಕಪ್ಪಿನೊಡಗೂಡಿ ನಿಧಾನವಾಗಿ ಆವರಿಸಿತು.ದಾರಿಹೋಕರೋ ಇನ್ನೂ ಸುಮಾರು ದೂರ ನಡೆಯಬೇಕಿತ್ತು.

ರವೀಶನ ಬಳಿ “ನಾಳೆ ಮರಳಿ ತಂದು ಕೊಡುವೆವು -ಎಂದು ಕೊಡುವಂತೆ” ಕೇಳಿದರು.ಮೊದಲೇ ಕಷ್ಟದಲ್ಲಿರುವವರನ್ನು ಹುಡುಕುತ್ತಿದ್ದ ಅವನ ಮನಸ್ಸು ಅಬ್ಬ ನನ್ನ ಮೊರೆಯ ಕೇಳಿ ದೇವರನ್ನು ಕಳುಹಿಸಿಕೊಟ್ಟಿದ್ದನೆಂದು ಉಬ್ಬಿ ಹೋಯಿತು. ಅಮ್ಮನನ್ನು ಕೇಳದೆ ತನ್ನ ಪ್ರೀತಿಯ ಬಣ್ಣದ ಕೊಡೆಯನ್ನು ಮೊದಲಬಾರಿ ಬೇರೆಯವರಲ್ಲಿ ಅಪರಿಚಿತರ ಕೈಗಿತ್ತು ಅವರು ಹೋಗುವುದನ್ನೆ ಸಾರ್ಥಕತೆಯಿಂದ ನೋಡುತ್ತ ನಿಂತ .ಪುಟ್ಟ ತುಟಿಯಂಚಲ್ಲಿ ತಾನಾಗೆ ಸುಳಿದ ಮುಗುಳುನಗೆಯ ಕಂಡು ಗುರುಗಳು ಹೇಳಿದ ಸಂತೃಪ್ತಿ ಎನಿಸಿತು.

ಸಂತೆಯಿಂದ ಅಪ್ಪನ “ಯಮ(‘ಹ)ಬೈಕು ಮಳೆಯೊಡನೆ ಜೋರಾಗಿ ಗುಡುಗುತಾ ಬಂತು . ಅಪ್ಪನ ದಾರಿಯನ್ನೆ ಕಾಯುತ್ತ ಕುಳಿತಿದ್ದ ರವೀಶನಿಗೆ ಇಂದು ತಾನು ಮಾಡಿದ ಸಹಾಯವನ್ನು ಹೇಳಿ ಮೆಚ್ಚುಗೆ ಪಡೆದು ಸಂಭ್ರಮಿಸುವ ಆತುರ.ಅಪ್ಪನ ಗಾಡಿ ನಿಂತದ್ದೇ ತಡ ಓಡಿ ಹೋಗಿ ಉಸಿರಿನಲಿ ತನ್ನ ಸಾಧನೆಯನ್ನು ವಿವರಿಸಿದೆ. ಬಾಸುಂಡೆ ಬರುವಂತೆ ಬಡಿಯ ತೊಡಗಿದ.ಅಮ್ಮ ಅಡುಗೆ ಕೋಣೆಯಿಂದ ಒಮ್ಮೆ ನೆಗೆತಕ್ಕೆ ಹಾರಿ ರವೀಶನನ್ನು ಬಿಡಿಸಿಕೊಂಡಳು.ನಾಳೆ ಕೊಡೆ ತಂದು ಕೊಡದಿರಲಿ ಎಂದು ಗದರಿ ಒಳನಡೆದ.ಪರೋಪಕಾರಕ್ಕೆ ಸಿಕ್ಕಿದ ಬಹುಮಾನ ರವೀಶನಿಗೆ ತುಂಬಿತು ಎಂದು ಮನನ ಮಾಡಿದರು.

ರಾತ್ರಿಯಿಡೀ ಕನಸೆಲ್ಲ ರವೀಶನಿಗೆ ಕೊಡೆ ಚಿಂತೆ.ಬಣ್ಣಬಣ್ಣದ ಕೊಡೆಗಳ ರಾಶಿರಾಶಿಯಾಗಿ ತಂದು ಅಪ್ಪನಿಗೆ ಕೊಟ್ಟಂತೆ .ತನ್ನ ಮುದ್ದಿನ ಕೊಡೆಯು ತೇಲುತ್ತ ಬಂದು ತನ್ನನ್ನು ಸಂತೈಸುತ್ತಿರುವಂತೆ. ಬೆಳಿಗ್ಗೆ ಶಾಲೆಗೆ ಹೊತ್ತಾಯ್ತು ಎಂಬ ಅಮ್ಮನ ಕೂಗು ಕೇಳಿಯೇ ಎಚ್ಚರವಾಯಿತು .ನಿತ್ಯಕರ್ಮಗಳು ಮುಗಿಸಿದಾಗ ನಿಮಿಷನಿಮಿಷಕ್ಕೆ ಅಂಗಲಾಚಲು ಹೋಗಿ ನೋಡಿ ಬಂದಿದ್ದ, ಕೊಡೆ ಹೋದ ಆಸಾಮಿಗಳ ಪತ್ತೆಯೇ ಇಲ್ಲಾ .ಅಪ್ಪನೇಟಿಗೆ ಬಂದಿದ್ದ ಬಾಸುಂಡೆಯ ನೋಡಿಕೊಂಡೆ ರವೀಶ ಭಾರವಾದ ಹೆಜ್ಜೆಯಿಡುತ್ತ ಶಾಲೆಗೆ ಹೊರಟ.ಅಪರೂಪಕೆಂಬಂತೆ ನೇಸರ ಬಾನಲ್ಲಿ ನಗುತ್ತಿದ್ದ .

ಗುರುಗಳು ಅಂದು ಹೇಳಿದ ಪಾಠಗಳಾವುವುವುವು ತಲೆಯೊಳಗೆ ನುಸುಳುವ ಪ್ರಯತ್ನವನ್ನೇ ಮಾಡಲಿಲ್ಲ .ಬರೀ ಕೊಡೆಯದೆ
ಯೋಚನೆ . ಅಪ್ಪ ಪ್ರೀತಿಯಿಂದ ಕೊಡಿಸಿದ್ದ ಕೊಡೆ,ಬಣ್ಣ ಬಣ್ಣದ ಚಿತ್ತಾರದ ಕೊಡೆ ,ಮೊದಲ ಬಾರಿಗೆ ಅಪ್ಪನಿಂದ ಏಟನ್ನು ಕೊಡೆ,ಕೊಡೆ ಕೊಡೆ ,ಕೊಡೆಯ ಚಿತ್ರಗಳು ಸಾಲು ಸಾಲಾಗಿ ಕಣ್ಮುಂದೆ ಬರತೊಡಗಿದವು.ಗುರುಗಳ ಮಾತನ್ನು ಕೇಳಿ ತನಗೊದಗಿದ ಸಂಕಷ್ಟಕ್ಕೆ ಮನದೊಳಗೆ ಶಪಿಸತೊಡಗಿದ. ಅಂದಿನ ಕೊನೆಯ ಪ್ರಾರ್ಥನೆ ಮುಗಿದೊಡನೆ ರವೀಶನಿಗೆ ಪೀಕಲಾಟ ಶುರುವಾಯಿತು.ಮನೆಯಲ್ಲಿ ಇಂದು ನಡೆಯಬಹುದಾದ ಅಪ್ಪನ ರೌದ್ರಾವತಾರವ ಮನದಲ್ಲೇ ನೆನೆದು ದಾರಿ ದೂರವಾಗಬಾರದೆ ಎನ್ನುತ್ತ ಮೆಲ್ಲನೆ ಹೆಜ್ಜೆ ಕಿತ್ತಿಡತೊಡಗಿದ.

ಅಪ್ಪ ಅಂಗಳದಲ್ಲಿ ಜಾರಿಕೆ ಎಂದು ಗೊಚ್ಚು ತಂದು ಸುರಿಯುತಿದ್ದ ಇವನನ್ನು ಕಂಡರೂ ಕಾಣದವ.ಇವನು ಬಂದು ಹಾಗೆ ನಟಿಸುತ್ತ ಸೀದಾ ಒಳಗೆ ನಡೆದ.ಏನಾಶ್ಚರ್ಯ ರಂಗುರಂಗಿನ ಕೊಡೆ ಹಾಯಾಗಿ ಕುರ್ಚಿಯಲ್ಲಿ ಕುಳಿತಿದ್ದ.ತನ್ನನ್ನು ಬಿಟ್ಟು ಶಾಲೆಗೆ ಒಬ್ಬನೇ ಹೋಗಿದ್ದಕ್ಕೆ ದುರುಗುಟ್ಟಿ ನೋಡಿದಂತೆ ಭಾಸವಾಯಿತು.ಪಕ್ಕದ ಹರಿಜನ ಕೇರಿಯಲಿ ಪೋಸ್ಟ್ ಮಾಸ್ತರರಾದ ನಾರಾಯಣ ಅವರು ಮಧ್ಯದಲ್ಲಿ ಅಯ್ಯೋಪಾರಿಯಂತೆ. ಹೋದರು- ಎಂಬ ಅಮ್ಮನ ಮಾತಿಗೂ ಅಪ್ಪನ ಸಮಾಧಾನದ ಮೌನಕ್ಕೂ ಇರುವ ಸಂಬಂಧ ರವೀಶನಿಗೆ ಅರ್ಥವಾಗಲಿಲ್ಲ. ನಿಜವಲ್ಲ “ಎನ್ನುವ ಹಾಡು ಇಬ್ಬರಿಗೂ ಜೋರಾಗೆ ಕೇಳುತಿತ್ತು . ರವೀಶನೂ ತುಂಬ ಅಗತ್ಯವಾದ ಈ ಸಂಸ್ಕಾರವನ್ನು ಪಾಲಿಸುವ ಪಣತೊಟ್ಟ ಬಣ್ಣದ ಕೊಡೆಯು ಅಂದಿನಿಂದ ಮಡಿ ಮೈಲಿಗೆಯ ಕಲಿತಿತ್ತು .

– ಮನು ಪುರ

ಕವಿ ಪರಿಚಯ:

ಮನು ಪುರ .

ಮನು ಪುರ ‘ ಎಂಬ ಕಾವ್ಯ ನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಮನೋಜ್ ಕುಮಾರ ರವರು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ‘ಪುರ’ ಎಂಬ ಹೆಸರಿನಿಂದ ಬರೆದವರು. ಸದ್ಯ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ 300ಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಹೊಂದಿರುವ ‘ ಶ್ರೀಮಂತ ಸಂತ, ಶೋಷಿತಳ ಸ್ವಾಗತ, ಪಾಪದ ಮೂಟೆ, ಹಾಸಿಗೆ ಖಾಲಿ ಇದೆ, ಕಂಬನಿಯ ಹೆರಿಗೆ ಪ್ರಮುಖ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ