ಭಾರತದ ಆತ್ಮಾಭಿಮಾನದ ಸಂಕೇತ ರತನ್ ಜಿ ಟಾಟಾ…
ಅಸ್ತಂಗತ
(28-12-1937 ರಿಂದ 9-10-2024)
ಒಂದು ಸೂಜಿಯನ್ನು ತಯಾರಿಸಲು ಕೂಡ ಸಾಧ್ಯವಾಗದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ಜಾಗತಿಕ ಮನ್ನಣೆ ಗಳಿಸಲು ತನ್ನ ಅಹರ್ನಿಶಿ ಕಾಣಿಕೆ ನೀಡಿರುವ ಕೆಲವೇ ಕೆಲವು ಜನರಲ್ಲಿ ಟಾಟಾ ಗ್ರೂಪ್ಸ್ ನ ರತನ್ ಟಾಟಾ ಕೂಡ ಒಬ್ಬರು.
ತಮ್ಮ 87ರ ಹರಯದಲ್ಲಿ ಟಾಟಾ ಸಂಸ್ಥೆಯ ಅಭ್ಯುದಯಕ್ಕೆ ಅಹರ್ನಿಶಿ ದುಡಿದ ವ್ಯಕ್ತಿ ರತನ ಜಿ ಟಾಟಾ ಕಳೆದ ರಾತ್ರಿ ನಿಧನರಾಗಿದ್ದಾರೆ.
ಮುಂಬೈಯ ಬ್ರಿಟಿಷರು ಮುಂಬೈಯನ್ನು ಆಳುತ್ತಿರುವ ಅವಧಿಯಲ್ಲಿ 28 ಡಿಸೆಂಬರ್ 1937 ರಂದು ರತನ ಜಿ ಅವರು ಸೂರತ್ ನಲ್ಲಿ ಜನಿಸಿದರು. ಟಾಟಾ ಕುಟುಂಬಕ್ಕೆ ದತ್ತು ಪಡೆದ ಟಾಟಾ ಮತ್ತು ಸೋದರ ಸೊಸೆ ಸೂನಿ ಟಾಟಾ ಅವರ ಮಗ. ಟಾಟಾ ಸಮೂಹದ ಸಂಸ್ಥಾಪಕ ಜಮ್ ಶೇಡ್ಜಿ ಟಾಟಾ ಅವರ ಮೊಮ್ಮಗ. 10ನೇ ವಯಸ್ಸಿನಲ್ಲಿ ಪೋಷಕರು ಬೇರೆಯಾದ ಕಾರಣ ಅಜ್ಜಿಯ ಆಶ್ರಯದಲ್ಲಿ ರತನ್ ಜಿ ಬೆಳೆದರು.
ಮುಂಬೈನ ಕೆಂಪಿಯನ್ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದಿದ ರತನ್ ಟಾಟಾ ಮುಂದೆ ಶಿಮ್ಲಾದ ಬಿಷಪ್ ಕಾಟನ್ ಶಾಲೆಯಲ್ಲಿ ಓದಿದರು. ನ್ಯೂಯಾರ್ಕ್ ನ ರಿವರ್ ಡೈಲ್ ಸ್ಕೂಲ್ ನಲ್ಲಿ 1955 ರಲ್ಲಿ ಪದವಿ ಪಡೆದರು. 1959ರಲ್ಲಿ ಕಾನೆ೯ಲ್ ಕಾಲೇಜಿನಿಂದ ವಾಸ್ತು ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1977 ರಲ್ಲಿ ಹಾರ್ವರ್ಡ್ ಮ್ಯಾನೇಜ್ಮೆಂಟ್ ಸ್ಕೂಲನಿಂದ ಏಳು ವಾರಗಳ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ತರಬೇತಿಯನ್ನು ಪಡೆದರು.
1970ರಲ್ಲಿ ತಮ್ಮ ಟಾಟಾ ಮಾತೃ ಸಂಸ್ಥೆಯಲ್ಲಿ ವ್ಯವಸ್ಥಾಪಕ ಹುದ್ದೆಯನ್ನು ಪಡೆದು ನೆಲ್ಕೋ (nelco) ದಲ್ಲಿ ಕಾರ್ಯಾರಂಭಿಸಿದರು. ಮುಂದೆ ಟಾಟಾ ಸಂಸ್ಥೆ ನಷ್ಟ ಅನುಭವಿಸುವುದನ್ನು ಕೂಡ ಕಂಡರು. 1991 ರಲ್ಲಿ ಜೆ ಆರ್ ಡಿ ಟಾಟಾ ಅವರು ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ತಮ್ಮ ಜಾಗದಲ್ಲಿ ರತನ್
ಟಾಟಾರವರನ್ನು ಕೂರಿಸಿದರು. ಆರಂಭದಲ್ಲಿಯೇ ರತನ್ ಜಿ ಅವರು ಸಾಕಷ್ಟು ಪ್ರತಿರೋಧವನ್ನು ತಮ್ಮದೇ ಸಂಸ್ಥೆಯ ಸಹೋದ್ಯೋಗಿಗಳಿಂದ ಅನುಭವಿಸಬೇಕಾಯಿತು. ರತನ್ ಟಾಟಾ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಯುವ ಪಡೆಗಳಿಗೆ ಪ್ರೋತ್ಸಾಹ ತುಂಬುತ್ತಾ ಅವರಿಗೆ ಹೆಚ್ಚಿನ ಸಹಾಯ ಸಹಕಾರ ನೀಡುತ್ತಾ ಟಾಟಾ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಗುಂಪು ಜಾಗತೀಕರಣವನ್ನು ತುಂಬಿಕೊಳ್ಳಲು ಅನವಶ್ಯಕ ಕಾರ್ಯಗಳಿಂದ ತಮ್ಮನ್ನು ತಾವೇ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಿದರು. ಪ್ರಸ್ತುತ 31 ವರ್ಷಗಳಲ್ಲಿ ರತನ್ ಜಿ ಟಾಟಾ ಸರಿಸುಮಾರು 50 ಶೇಕಡ ಕಂಪನಿಯ ಆದಾಯವನ್ನು ಹೆಚ್ಚಿಸಿದರು.
ಟಾಟಾ ಸಂಸ್ಥೆಯನ್ನು ರತನ್ ಜಿ ಸೇರಿದಾಗ ಸರಕುಗಳ ಮಾರಾಟದಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯು ರತನ ಜಿಯವರ ಅಧಿಕಾರದ ಕೊನೆಯ ಸಮಯದಲ್ಲಿ ಬ್ರಾಂಡ್ ಗಳ ಮೇಲೆ ಆಧರಿತವಾಯಿತು. ಟಾಟಾ ಟಿ ಟೆಟ್ಲಿ, ಟಾಟಾ ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ಟಾಟಾ
ಸ್ಟೀಲ್ ಕೊರಸಗಳನ್ನು ತಮ್ಮ ಸ್ವಾಧೀನಪಡಿಸಿಕೊಂಡರು ರತನ್ ಟಾಟಾ. ಈ ಸ್ವಾಧೀನೀಕರಣದಿಂದ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಟಾಟಾ ಸಂಸ್ಥೆಯು ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿತು.
ಮುಂದೆ ಅತ್ಯಂತ ಕಡಿಮೆ ಬೆಲೆಯ, ಎಲ್ಲರ ಕೈಗೆಟಕುವ ದರದಲ್ಲಿ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ರತನ್ ಟಾಟಾ ಅವರು ಕೆಳ ಮಧ್ಯಮ ವರ್ಗದವರು ಕೂಡ ವೈಯುಕ್ತಿಕ ವಾಹನವನ್ನು ಹೊಂದುವ ಅವಕಾಶವನ್ನು ಪಡೆಯುವಂತೆ ಮಾಡುವಲ್ಲಿ ಸಫಲರಾದರು.
ಮುಂದೆ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ಗುಜರಾತ್ ನ ಸಾನಂದ್ ನಲ್ಲಿ ಉತ್ಪಾದಿಸಲು ಪ್ರಾರಂಭಿಸಿತು. ಇದನ್ನು ಭಾರತದ ಕನಸಿನ ವಾಹನ ಎಂದು ಟಾಟಾ ಸಂಸ್ಥೆ ಕರೆಯಿತು. ತಮ್ಮ 75 ನೇ ವಯಸ್ಸಿನಲ್ಲಿ ರತನ ಜಿ ಟಾಟಾ ಡಿಸೆಂಬರ್ 28 2012ರಂದು ಸ್ವಯಂ ನಿವೃತ್ತಿ ಹೊಂದಿದರು. ಆದರೆ ಸಂಸ್ಥೆಯ ಉತ್ತರಾಧಿಕಾರದಲ್ಲಿ ಗೊಂದಲ ಉಂಟಾದ ಕಾರಣ 2016ರಲ್ಲಿ ಮತ್ತೆ ರತನ್ ಜಿ ಟಾಟಾ ಅವರನ್ನೂ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಟಾಟಾ ಅವರು ತಮ್ಮ ಸ್ವಂತ ಸಂಪತ್ತಿನಿಂದ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಭಾರತದ ಪ್ರಮುಖ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಒಂದಾದ ಸ್ನ್ಯಾಪ್ಡೀಲ್ನಲ್ಲಿ ಹೂಡಿಕೆಮಾಡಿದ್ದಾರೆ. ಜನವರಿ 2016 ರಲ್ಲಿ, ಅವರು ಆನ್ಲೈನ್ ಪ್ರೀಮಿಯಂ ಇಂಡಿಯನ್ ಟೀ ಮಾರಾಟಗಾರರಾದ ಟಿ ಬಾಕ್ಸ್ ನಲ್ಲಿ ಹೂಡಿಕೆ ಮಾಡಿದರು, ಮತ್ತು ಕ್ಯಾಶ್ ಕರೋ ಡಾಟ್ ಕಾಮ್, ರಿಯಾಯಿತಿ ಕೂಪನ್ಗಳು ಮತ್ತು ಕ್ಯಾಶ್-ಬ್ಯಾಕ್ ವೆಬ್ಸೈಟ್. ಭಾರತದಲ್ಲಿ ಆರಂಭಿಕ ಮತ್ತು ಕೊನೆಯ ಹಂತದ ಕಂಪನಿಗಳಲ್ಲಿ ಸಣ್ಣ ಹೂಡಿಕೆಗಳನ್ನು ಮಾಡಿದ್ದಾರೆ, ಓಲಾ ಕ್ಯಾಬ್ಸ್ನಲ್ಲಿ ಏಪ್ರಿಲ್ 2015 ರಲ್ಲಿ, ಟಾಟಾ ಚೀನೀ ಸ್ಮಾರ್ಟ್ಫೋನ್ ಸ್ಟಾರ್ಟ್ಅಪ್ ಕ್ಸಿಯಾಮಿ ಯಲ್ಲಿ ಪಾಲನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. 2016 ರಲ್ಲಿ, ಅವರು ಆನ್ಲೈನ್ ರಿಯಲ್-ಎಸ್ಟೇಟ್ ಪೋರ್ಟಲ್ನಲ್ಲಿ ನೆಸ್ಟಾವೇನಲ್ಲಿ ಹೂಡಿಕೆ ಮಾಡಿದರು, ಅದು ನಂತರ ಆನ್ಲೈನ್ ರಿಯಲ್-ಎಸ್ಟೇಟ್ ಮತ್ತು ಪೆಟ್-ಕೇರ್ ಪೋರ್ಟಲ್ ಡಾಗ್ಸ್ಪಾಟ್ ಅನ್ನು ಪ್ರಾರಂಭಿಸಲು ಜೆನಿಫೈ ಯನ್ನೂ ಸ್ವಾಧೀನಪಡಿಸಿಕೊಂಡರು. ಟಾಟಾ ಹಿರಿಯ ನಾಗರಿಕರಿಗಾಗಿ ಭಾರತದ ಒಡನಾಡಿ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿತು, ಗುಡ್ಫೆಲೋಸ್, ಅಂತರ್ಜನಾಂಗೀಯ ಸ್ನೇಹವನ್ನು ಉತ್ತೇಜಿಸುವ ಸಲುವಾಗಿಯೂ ಕೂಡ ಅವರು ಕಾರ್ಯನಿರ್ವಹಿಸಿದರು.
ಭಾರತ ದೇಶದಲ್ಲಿ ಟಾಟಾ ಸಂಸ್ಥೆಯು ತನ್ನ ಉತ್ಪನ್ನದ ಅತಿ ಹೆಚ್ಚಿನ ಪಾಲನ್ನು ಶಿಕ್ಷಣ, ಆರೋಗ್ಯ,ವೈದ್ಯಕೀಯ ಮತ್ತಿತರ ಕಾರ್ಯ ಚಟುವಟಿಕೆಗಳಿಗೆ ವಿನಿಯೋಗಿಸಿದೆ.
ಜೈವಿಕ ಮತ್ತು ಭೌತಿಕ ವಿಜ್ಞಾನಗಳಿಗೆ ಸೌಲಭ್ಯಗಳನ್ನು ಹೊಂದಿದೆ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿಯ ನೆಲೆಯಾಗಿದೆ. ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿಯು ಯುಸಿ ಸ್ಯಾನ್ ಡಿಯಾಗೋ ಮತ್ತು ಭಾರತದಲ್ಲಿನ ಸಂಶೋಧನಾ ಕಾರ್ಯಾಚರಣೆಗಳ ನಡುವಿನ ಸಂಶೋಧನೆಯನ್ನು ಸಂಘಟಿಸುವ ದ್ವಿ-ರಾಷ್ಟ್ರೀಯ ಸಂಸ್ಥೆಯಾಗಿದ್ದು, ವೆಕ್ಟರ್-ಹರಡುವ ರೋಗಗಳನ್ನು ಎದುರಿಸುವ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ಟಾಟಾ ಟ್ರಸ್ಟ್ನಿಂದ ಉದಾರವಾದ 70 ಮಿಲಿಯನ್ ಡಾಲರ್ ಉಡುಗೊರೆಯನ್ನು ಗುರುತಿಸಿ ಟಾಟಾ ಹಾಲ್ ಅನ್ನು ಹೆಸರಿಸಲಾಗಿದೆ.
ಟಾಟಾ ಗ್ರೂಪ್ನ ಲೋಕೋಪಕಾರಿ ಅಂಗಸಂಸ್ಥೆಯಾದ ಟಾಟಾ ಎಜುಕೇಶನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ 28 ಮಿಲಿಯನ್ ಡಾಲರ್ ನ ಸ್ಕಾಲರ್ಶಿಪ್ ನಿಧಿಯನ್ನು ನೀಡಿತು, ಇದು ಕಾರ್ನೆಲ್ ವಿಶ್ವವಿದ್ಯಾಲಯವು ಭಾರತದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿವೇತನ ನಿಧಿಯು ಯಾವುದೇ ಸಮಯದಲ್ಲಿ ಸರಿಸುಮಾರು 20 ವಿದ್ವಾಂಸರನ್ನು ಬೆಂಬಲಿಸುತ್ತದಲ್ಲದೆ ಅವರ ಹಣಕಾಸಿನ ಪರಿಸ್ಥಿತಿಗಳನ್ನು ಲೆಕ್ಕಿಸದೆಯೇ ಅತ್ಯುತ್ತಮ ಭಾರತೀಯ ವಿದ್ಯಾರ್ಥಿಗಳು ಕಾರ್ನೆಲ್ಗೆ ಪ್ರವೇಶವನ್ನು ಹೊಂದಿದ್ದಾರೆ ಎಂದು ಖಚಿತಪಡಿಸುವ ಈ ವಿದ್ಯಾರ್ಥಿವೇತನವನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
2010 ರಲ್ಲಿ, ಟಾಟಾ ಸಮೂಹ ಸಂಸ್ಥೆಗಳು ಮತ್ತು ಟಾಟಾ ಚಾರಿಟಿ ಸಂಸ್ಥೆಗಳು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ (HBS) ನಲ್ಲಿ ಕಾರ್ಯನಿರ್ವಾಹಕ ಕೇಂದ್ರದ ನಿರ್ಮಾಣಕ್ಕಾಗಿ 50 ಮಿಲಿಯನ್ ಡಾಲರ್ ದೇಣಿಗೆ ನೀಡಿದರು.ಟಾಟಾ ಸಂಸ್ಥೆಯಗೌರವಾನ್ವಿತ ಅಧ್ಯಕ್ಷ ರತನ್ ಟಾಟಾ ನಂತರ ಕಾರ್ಯನಿರ್ವಾಹಕ ಕೇಂದ್ರವನ್ನು ಟಾಟಾ ಹಾಲ್ ಎಂದು ಹೆಸರಿಸಲಾಗಿದೆ . ಒಟ್ಟು ನಿರ್ಮಾಣ ವೆಚ್ಚವನ್ನು 100 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಟಾಟಾ ಹಾಲ್ ಕ್ಯಾಂಪಸ್ನ ಮೂಲೆಯಲ್ಲಿದ್ದು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನ ಮಿಡ್-ಕಾರ್ಯನಿರ್ವಾಹಕ ಶಿಕ್ಷಣ ಕಾರ್ಯಕ್ರಮಕ್ಕೆ ಮೀಸಲಾಗಿದೆ. ಇದು ಏಳು ಅಂತಸ್ತಿನ ಎತ್ತರ ಮತ್ತು ಸುಮಾರು 155,000 ಒಟ್ಟು ಚದರ ಅಡಿ ಇದ್ದು ಶೈಕ್ಷಣಿಕ ಮತ್ತು ಬಹುಪಯೋಗಿ ಸ್ಥಳಗಳ ಜೊತೆಗೆ ಸರಿಸುಮಾರು 180 ಮಲಗುವ ಕೋಣೆಗಳನ್ನು ಹೊಂದಿದೆ.
ಟಿಸಿಎಸ ಸಂಸ್ಥೆಯ ಮೂಲಕ ಕಾರ್ನೆಗಿ ಮೆಲನ್ ವಿಶ್ವವಿದ್ಯಾನಿಲಯಕ್ಕೆ ಅರಿವಿನ ವ್ಯವಸ್ಥೆಗಳು ಮತ್ತು ಸ್ವಾಯತ್ತ ವಾಹನಗಳನ್ನು ಸಂಶೋಧಿಸುವ ಸೌಲಭ್ಯಕ್ಕಾಗಿ ಕಂಪನಿಯಿಂದ ಇದುವರೆಗೆ ಅತಿದೊಡ್ಡ ದೇಣಿಗೆ ನೀಡಿದೆ . ಟಿಸಿಎಸ್ ಹಾಲ್ ಎಂದು ಕರೆಯಲ್ಪಡುವ ಈ ಭವ್ಯವಾದ 48,000 ಚದರ ಅಡಿ ಕಟ್ಟಡಕ್ಕೆ ಟಿಸಿಎಸ್ ಸಂಸ್ಥೆಗೆ 35 ಮಿಲಿಯನ್ ದೇಣಿಗೆ ನೀಡಿದೆ.
2014 ರಲ್ಲಿ ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ ಸೀಮಿತ ಸಂಪನ್ಮೂಲಗಳೊಂದಿಗೆ ಜನರು ಮತ್ತು ಸಮುದಾಯಗಳ ಅಗತ್ಯಗಳಿಗೆ ಸೂಕ್ತವಾದ ವಿನ್ಯಾಸ ಮತ್ತು ಎಂಜಿನಿಯರಿಂಗ್ ತತ್ವಗಳನ್ನು ಅಭಿವೃದ್ಧಿಪಡಿಸಲು ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (TCTD) ಅನ್ನು ರಚಿಸಿತು. ಅವರು ಸಂಸ್ಥೆಗೆ ₹ 950 ಮಿಲಿಯನ್ ನೀಡಿದರು, ಇದು ಆ ಸಂಸ್ಥೆಯ ಇತಿಹಾಸದಲ್ಲಿ ಪಡೆದ ಅತಿದೊಡ್ಡ ದೇಣಿಗೆಯಾಗಿದೆ.
ರತನ್ ಟಾಟಾ ಅವರ ಅಧ್ಯಕ್ಷತೆಯಲ್ಲಿ ಟಾಟಾ ಟ್ರಸ್ಟ್ಗಳು ಆಲ್ಝೈಮರ್ನ ಕಾಯಿಲೆಗೆ ಕಾರಣವಾದ ಕಾರ್ಯವಿಧಾನಗಳನ್ನು ಅಧ್ಯಯನ ಮಾಡಲು ಮತ್ತು ಅದರ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸೆಂಟರ್ ಫಾರ್ ನ್ಯೂರೋಸೈನ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ 750 ಮಿಲಿಯನ್ ಡಾಲರ್ ನಷ್ಟು ಅನುದಾನವನ್ನು ನೀಡಿತು. ಈ ಅನುದಾನವು 2014 ರಲ್ಲಿ ಪ್ರಾರಂಭವಾಗಿ 5 ವರ್ಷಗಳವರೆಗೆ ಹರಡಬೇಕಿತ್ತು.
ಟಾಟಾ ಸಂಸ್ಥೆಯು ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಸೆಂಟರ್ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ ಅನ್ನು ಮೆಸಾಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಭಾರತದ ಮೇಲೆ ಆರಂಭಿಕ ಗಮನ ಕೇಂದ್ರೀಕರಿಸುವ ಮೂಲಕ ಸಂಪನ್ಮೂಲ-ನಿರ್ಬಂಧಿತ ಸಮುದಾಯಗಳ ಸವಾಲುಗಳನ್ನು ಎದುರಿಸುವ ಉದ್ದೇಶದೊಂದಿಗೆ ರಚಿಸಿತು.
ರತನ್ ಟಾಟಾ ಅವರು 2000 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು, ಇದು ಭಾರತ ಸರ್ಕಾರದಿಂದ ನೀಡಲ್ಪಟ್ಟ ಮೂರನೇ ಮತ್ತು ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. 2021 ರಲ್ಲಿ ಅಸ್ಸಾಂನ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಸ್ಸಾಂ ವೈಭವ ‘ ಅನ್ನು ಅಸ್ಸಾಂನಲ್ಲಿ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸುವಲ್ಲಿ ಅವರ ಅಸಾಧಾರಣ ಕೊಡುಗೆಗಾಗಿ ಪಡೆದರು. ಟಾಟಾ ಅವರ ಅದ್ವಿತೀಯ ಕಾರ್ಯನಿರ್ವಹಣೆಗೆ ಅನೇಕ ಗೌರವ ಡಾಕ್ಟರೇಟ್ ಗಳು ಗೌರವ ಫೆಲೋಶಿಪ್ ಗಳು ವಿಶ್ವದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ದೊರಕಿವೆ. ಫ್ರಾನ್ಸ್ ಸರ್ಕಾರವು ಅವರಿಗೆ ಉನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬ್ರಿಟಿಷ್ ಸರ್ಕಾರದ ರಾಣಿ ವಿಕ್ಟೋರಿಯಾ ಕೂಡ ಅವರಿಗೆ 2014ರಲ್ಲಿ ಉನ್ನತ ಗೌರವ ನೀಡಿ ಸತ್ಕರಿಸಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿರುವ ರತನ್ ಜಿ ಟಾಟಾ ಅವರು ಅತ್ಯಂತ ಸರಳ ಜೀವಿ ಅವರು ಮದುವೆಯಾಗದೆ ಇದ್ದರೂ ಲಕ್ಷಾಂತರ ಮಕ್ಕಳನ್ನು ಬೆಳೆಸಿದ್ದಾರೆ ಅವರ ಅಭ್ಯುದಯಕ್ಕಾಗಿ ದುಡಿದಿದ್ದಾರೆ. ದಾರಿ ದೀಪವಾಗಿದ್ದಾರೆ ಸ್ಪೂರ್ತಿಯಾಗಿದ್ದಾರೆ, ಪ್ರೇರಣೆಯಾಗಿದ್ದಾರೆ.
ಒಂದು ಬಾರಿ ಪತ್ರಕರ್ತರು ರತನ್ ಜಿ ಟಾಟಾ ರವರಿಗೆ ಅಂಬಾನಿಯವರ ವ್ಯವಹಾರ ಮತ್ತು ಟಾಟಾ ಸಂಸ್ಥೆಯ ವ್ಯವಹಾರದ ಕುರಿತು ಪ್ರಶ್ನಿಸಿದಾಗ ರತನ್ ಜಿ ಟಾಟಾ ಉತ್ತರಿಸಿದ್ದು ಹೀಗೆ… ಅಂಬಾನಿಯವರು ವ್ಯವಹಾರವನ್ನು ಮಾಡುತ್ತಾರೆ ಮತ್ತು ನಾವು ಉದ್ಯಮವನ್ನು ನಡೆಸುತ್ತೇವೆ. ಉದ್ಯಮಗಳನ್ನು ನಡೆಸುವವರು ಎಂದಿಗೂ ಲಾಭ ನಷ್ಟಗಳ ಕುರಿತು ಯೋಚನೆ ಮಾಡುವುದಕ್ಕಿಂತ ಆ ಉದ್ಯಮಗಳಿಂದ ನಮ್ಮ ದೇಶಕ್ಕೆ,ಜನರಿಗೆ ದೊರೆಯಬಹುದಾದ ಆರ್ಥಿಕ ಸೌಲಭ್ಯಗಳು ಕುರಿತು ನಾವು ಯೋಚಿಸುತ್ತೇವೆ ಎಂದು.
ಭಾರತದ ಉತ್ತುಂಗತೆಯನ್ನು ಎತ್ತಿ ಹಿಡಿಯುವಲ್ಲಿ ರತನ ಜಿ ಟಾಟಾ ಯಾವತ್ತು ತಮ್ಮ ಪೂರ್ವಿಕರ ಶ್ರದ್ಧೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಮೊಟ್ಟ ಮೊದಲು ಭಾರತದಲ್ಲಿ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ ಜಂಶೆಡ್ ಜಿ ಟಾಟಾ….ಇಂದು ಭಾರತದ ಇಂಡಿಯನ್ ಏರ್ಲೈನ್ಸ್ ಸಂಕಷ್ಟದಲ್ಲಿರುವಾಗ ಮತ್ತೆ ಅದರ ಚುಕ್ಕಾಣಿಯನ್ನು ಹಿಡಿದಿರುವ ರತನ್ ಜಿ ಟಾಟಾ ಇಂದಿಗೂ ಭಾರತದಲ್ಲಿ ಟಾಟಾ ಸಂಸ್ಥೆಯು ನಮ್ಮ ಭಾರತೀಯತೆಯ ಪ್ರತೀಕವಾಗಿ ನೆಲೆ ನಿಲ್ಲುವಲ್ಲಿ ಆದರ್ಶದ ಪಥದಲ್ಲಿ ನಡೆಯಲು ಭವ್ಯ ರಹದಾರಿಯನ್ನು ತೋರಿಸಿದ್ದಾರೆ. ರತನ್ ಜಿ ಟಾಟಾ ಅವರು ಈ ದೇಶ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರು. ಯಾವುದೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ, ನಿರಾಡಂಬರತೆ, ಸರಳ ಜೀವನ ಶೈಲಿ ಮತ್ತು ಭಾರತದೆಡೆಗಿನ ಅವರ ಅನನ್ಯ ಶ್ರದ್ಧೆ ದಂತ ಕಥೆಯಾಗಿದ್ದು ಇದೀಗ ಅವರ ಮರಣದ ಸುದ್ದಿ ಜಗತ್ತಿನ ಉದ್ಯಮ ವಲಯಕ್ಕೆ ನೋವಿನ ಸಂಗತಿಯಾಗಿದ್ದು ಭಾರತೀಯರ ಪಾಲಿಗೆ ಕಾಲ ಕೆಳಗಿನ ನೆಲ ಕುಸಿದಂತಹ ಅನುಭವ.
ರತನ್ ಟಾಟರಂತವರು ವಿರಳ. ಮಾನವೀಯತೆ ಇರುವವರೆಗೂ ರತನ್ ಟಾಟಾ ಹೆಸರು ಅಜರಾಮರ.ಇದೋ ಉದ್ಯಮ ರಂಗದ ದೈತ್ಯ ಶಕ್ತಿ, ಮಾನವೀಯ ಮಿಡಿತಗಳ ಸ್ಪೂರ್ತಿ ರತನ್ ಟಾಟಾ ಅವರಿಗೆ ಇದೋ ನಮ್ಮ ನುಡಿ ನಮನ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಲೇಖಕಿಯರ ಪರಿಚಯ:
ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ ಚೈತನ್ಯ ‘ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯ ಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಇವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
‘ ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.