ಭಾರತದ ಸಂವಿಧಾನ.
ಸಂವಿಧಾನ ಸರ್ವ ಜನರು ಬದುಕುವ ವಿಧಾನ
ಸಮಾನತೆಯನ್ನು ಎತ್ತಿ ಹಿಡಿದು
ಲಿಂಗ ತಾರತಮ್ಯವನ್ನು ಕಿತ್ತೆಸೆದು
ಸರ್ವರಿಗೂ ಬೆಳಕಾದ ಸಂವಿಧಾನ
ಭಾರತದ ಸಂವಿಧಾನ
ಸರ್ವರಿಗೂ ಒಂದು ಮತ, ಒಂದು ಮೌಲ್ಯ ನೀಡಿ
ಮೇಲು-ಕೀಳು ಭಾವನೆಯನ್ನ ದೂರ ಸರಿಸಿ
ಉದ್ಯೋಗದಲ್ಲಿಯೂ, ದಿನನಿತ್ಯದಲ್ಲಿಯೂ
ಸಮಾನರು ಭರತ ಖಂಡದ ಜನರು ಬಹುಜನರು ಎಂದ ಲಿಖಿತ ಸಂವಿಧಾನ. ಭಾರತದ ಸಂವಿಧಾನ
ಶೋಷಿತರು ತಪ್ಪಿದಸ್ಥರಲ್ಲ, ಅಪ್ಪಿದವರು
ಮನನೊಂದವರು ಜಾತಿ ಸಂಕೋಲೆಯಲ್ಲಿ ಸುಟ್ಟು ಭಸ್ಮವಾದವರು ಅವರಿಗೆ ಪ್ರಾತಿನಿಧ್ಯ ಕೊಡಿ
ಅವರ ಕಲ್ಯಾಣಕ್ಕಾಗಿ ಸರ್ಕಾರದಿಂದ ಅನುದಾನ ನೀಡಿ
ಎಂದ ಬೃಹತ್ ಸಂವಿಧಾನ ಭಾರತದ ಸಂವಿಧಾನ
ವೈಜ್ಞಾನಿಕತೆಗೆ, ವೈಚಾರಿಕತೆಗೆ
ಕಲೆ, ಸಾಹಿತ್ಯ-ಸಂಸ್ಕೃತಿಗೆ
ಬೆಲೆ ಕೊಡಿ – ನೆಲೆ ಕೊಡಿ
ಎಂದು ಹೆಸರಾದ ಜನಮಾನಸದ ಸಂವಿಧಾನ
ಭಾರತದ ಸಂವಿಧಾನ
ಮಕ್ಕಳಿಗೆ ಮುಕ್ತವಾಗಿ ಬಿಡಿ
ದೇಶದ ಪ್ರತಿಯೊಬ್ಬರು ತಮ್ಮ ವಿಚಾರಗಳನ್ನು
ಪ್ರಸ್ತುತಪಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡಿ
ಎಂದ ಪ್ರಜೆಗಳ ಸಂವಿಧಾನ
ಭಾರತದ ಸಂವಿಧಾನ
ಬುದ್ಧ ಗುರುವಿನ ಸಂವಿಧಾನ
ಅಣ್ಣ ಬಸವಣ್ಣನ ಸಂವಿಧಾನ
ಬಾಬಾಸಾಹೇಬ್ ರ ಸಂವಿಧಾನ
ಭಾರತದ ಸಮಾನತೆಯ ಸಂವಿಧಾನ
– ಮಾದೇವ ಕುಂಚನೂರ
ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ