ಭ್ರಮೆ.
[ ಕಿರು ಕಾದಂಬರಿ ]
– ಜಿ ಎಲ್ ನಾಗೇಶ್.
ರವಿ- ಕೃಷ್ಣ!
ಅರಿಬ್ಬರು ಪ್ರಾಣ ಸ್ನೇಹಿತರು.
ರವಿ ವಿಪರೀತ ವಿಸ್ಕಿ ಕುಡಿದು ತೂರಾಡುತ್ತಾ ಮತ್ತೊಂದು ಪೆಗ್ ಖಾಲಿ ಮಾಡಿ ಬಾಯಿಗೆ ಬಂದ ಹಾಗೆ ಬೈಯುತ್ತಾ –
”ಗುರು… ನನಗೆ ಕೋಪ, ತಿರಸ್ಕಾರ, ಅಸಹ್ಯ ಉಂಟಾಗುತ್ತಿದೆ” ಎಂದನು.
ಆಗ ರವಿ-
“ ಯಾರ ಮೇಲೆ ? ”
” ಈ ವಿಚಿತ್ರ ಕಚಡ ಪ್ರಪಂಚದ ಮೇಲೆ!”
“ಯಾಕೆ ಹೀಗಾಡುತ್ತಿದ್ದೀಯ? ಇವತ್ತು ಆಪೀತೊ… ಬೆಳಗ್ಗೆಯಿಂದಲೇ ಕುಡಿಯಲು ಪ್ರಾರಂಭಿಸಿದ್ದಿಯ. ಏನು ನಡೀತು ಅಂತ…?” “ಅದನ್ನು ಹೇಳಲು ನನಗೆ ಅಸಹ್ಯ,
ಮುಜುಗರ ಉಂಟಾಗುತ್ತೆ ಕಣೋ…”ಎಂದು ಹೇಳಿ, ಸಿಗರೇಟ್ ಹತ್ತಿಸಿಕೊಂಡನು ಮತ್ತೆ
ನಿನ್ನೆ ರಾತ್ರಿ ನಡೆದಿದ್ದನು ಹೇಳಿದ ರವಿ.
**********
ರವಿ ಸೆಕೆಂಡ್ ಶೋ ಸಿನಿಮಾ ನೋಡಿ, ಬಾರಿನಲ್ಲಿ ಕಂಠ ಪೂರ್ತಿ ವಿಸ್ಕಿ ಕುಡಿದು ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿದ್ದನು.
ಆಗ ಕಾರೊಂದು ಬಂದು ಅವನ ಪಕ್ಕದಲ್ಲಿ ನಿಂತುಕೊಂಡಿತು.
ಕಾರಿನಲ್ಲಿದ್ದ ಶ್ರೀಮಂತ ಮತ್ತು ತುಂಬು ಪ್ರಾಯದ ಚೆಲುವೆಯರಿಬ್ಬರು ಅಡ್ರೆಸ್ ಕೇಳುವಂತೆ ನಟಿಸುತ್ತಾ ಅವನನ್ನು ಅಪಹರಿಸಿಕೊಂಡು ತಮ್ಮ ಬಂಗಲೆಗೆ ಒಯ್ಯುದಿದ್ದರು.
***********
“ಆಮೇಲೇನು ನಡೀತು ಕಣೋ?” ಎಂದು ಕೃಷ್ಣ ಆಶ್ಚರ್ಯ ಮತ್ತು ಕುತೂಹಲದಿಂದ ಕೇಳಿದನು.
ಆಗ ರವಿ-
“ಸಿನಿಮಾದಲ್ಲಿ ಗೂಂಡಾಗಳು ಹೀರೋಯಿನ್‌ಗೆ ರೇಪ್ ಮಾಡುವ ಹಾಗೆ ಆ ಇಬ್ಬರೂ ಯುವತಿಯರು ಸೇರಿ ನನ್ನನ್ನು ರೇಪ್ ಮಾಡಿದರು.”
“ನೀನು ಹೇಳುತ್ತಿರುವುದು ನಿಜಾನಾ ?”
“ನಂಬಿಕೆ ಬರ್ತಿಲ್ಲ ಅಲ್ವೇ?” “ಹೌದು, ನಂಬಿಕೆ ಬರುತ್ತಿಲ್ಲ ಕಣೋ.”
“ನಂಬಿಕೆ ಬರುತ್ತಿಲ್ಲ ಅಂದರೆ ಪ್ರಾಕ್ಟಿಕಲ್ ಆಗಿ, ಪ್ರೂವ್ ಮಾಡಿ ತೋರಿಸುತ್ತೇನೆ
ಇವತ್ತು
ನನ್ನ ಜೊತೆಗೆ ನಡಿ.”
“ಎಲ್ಲಿಗೆ?”
“ನಾನು ಆ ಕಾಮುಕ ಚೆಲುವೆಯರಿಂದ ಬಿಡುಗಡೆ ಹೊಂದಿ ಬೆಳಗ್ಗೆ ಮನೆಗೆ ಬರುವಾಗ ಅವರುಗಳು ಏನು ಹೇಳಿದರು ಗೊತ್ತಾ? ‘ನಾನು ಸಿನಿಮಾ ಹೀರೋಗಿಂತಲೂ ಚೆನ್ನಾಗಿದ್ದೇನಂತೆ, ನಿನಗೆ ಎಷ್ಟು ಬೇಕು ಅಷ್ಟು ಹಣ, ಸುಖ ಏನು ಬೇಕು ಕೇಳು. ಅದನೆಲ್ಲ ಕೊಡುತ್ತೇವೆ. ಹೊಸ ಪ್ರಪಂಚ ತೋರಿಸುತ್ತೇವೆ. ನೀನು ಇವತ್ತು ರಾತ್ರಿ ಮತ್ತೆ ನಮ್ಮಲ್ಲಿಗೆ ಬಾ.
ನೀನು ಬರ್ತೀಯಾ ಅಂತ ನಿನ್ನ ದಾರಿ
ಕಾಯುತ್ತಿರುತ್ತೇವೆ’ ಎಂದು ಹತ್ತು ಸಲಕ್ಕಿಂತಲೂ ಹೆಚ್ಚಿಗೆ ಹೇಳಿ ಕಳಿಸಿದ್ದಾರೆ ಈ ಮಾಡ್ರನ್
ಯುಗದ ಆ ಮೋಹನಾಂಗಿ ಹೆಂಗಸರು.”
“ಅದಕ್ಕೆ ನೀನು ಏನ್ ಹೇಳಿದ್ದೀಯಾ?”
“ಖಂಡಿತ ಬಂದೇ ಬರುತ್ತೀನಿ ನನ್ನ ರಂಭೆ-ಊರ್ಶಿಯರೆ’ ಎಂದು ಅವರಿಬ್ಬರಿಗೂ ಹೇಳಿ
ಬಂದಿದ್ದೇನೆ.”
“ಅಂದರೆ ಇವತ್ತು ರಾತ್ರಿ ಮತ್ತೆ ಹೋಗ್ತೀಯಾ?”
” ಹುಂ, ಹೋಗ್ತೇನೆ. ನಿನ್ನನ್ನೂ ಸಹ ಕರ್ಕೊಂಡು ಹೋಗುತ್ತೇನೆ. ಬರೀಯಾ? ಇಬ್ಬರೂ ಸೇರಿ ಆ ಕಾಮುಕ ಮತ್ತು ಶ್ರೀಮಂತ ಚೆಲುವೆಯರ ಜೊತೆ ರಾತ್ರಿ ಇಡಿ ಬೇಕಾದಷ್ಟು ಮಜಾ ಮಾಡೋಣ ಅಂತ.”
““ಸಾರಿ ಫ್ರೆಂಡ್, ನಾನು ಬರೋಲ್ಲ.”
” ಅರೆ… ಯಾಕೆ ಬರೋಲ್ಲ ಅಂತಿಯಾ ?”
“ನನಗೆ ಅಂತಹ ಸುಖ ಬೇಕಿಲ್ಲ ಕಣೋ ರವಿ.”
”ಏಯ್ ತಿರುಬೋಕಿ… ಹುಚ್ಚು ಬಡ್ಡಿ ಮಗನೆ! ಆ ಸುಖ ಬೇಡ ಅಂತ ಹೇಳುತ್ತಿಯಲ್ಲ, ಯಾಕೆ ? ನಿನ್ನ ಹತ್ತಿರ ಇಲ್ವೇನೋ?”
”ಪವರ್ ಫುಲ್ ಇದೆ.”
“ಮತ್ತೆ ಯಾಕೆ ಬೇಡ ಅನ್ನುತ್ತಿದ್ದೀಯಾ ?”
“ನೀನು ಕೊಡಿಸಬೇಕೆಂದಿರುವ ಆ ಸುಖದಲ್ಲಿ ಬರೀ ಕಾಮ ತುಂಬಿರುತ್ತದೆ.ಅಂತಹ ಸುಖದಲ್ಲಿ ಥ್ರಿಲ್ ಇರೋಲ್ಲ ಕಣೋ…” ಎಂದೇನೋ
ಹೇಳುತ್ತಿರುವವನ್ನು ತಡೆದು ರವಿ
–
“ಏಯ್ ವಿಚಿತ್ರ ಮುಂಡೇದೆ, ಮೊದಲು ನಾನು ಹೇಳುವುದನ್ನು ಸರಿಯಾಗಿ ಕೇಳು ಇಲ್ಲಿ! ಪ್ರಪಂಚದಲ್ಲಿ ಆ ಸುಖದ ಮುಂದೆ ಯಾವ ಸುಖವೂ ಏನೇನೂ ಅಲ್ಲ. ಎಲ್ಲ ಸುಖಗಳಕ್ಕಿಂತಲೂ ಆ ರತಿಕ್ರೀಡೆ ಸುಖವೇ ಗ್ರೇಟ್! ಆ ಸುಖ ಒಂದಿಲ್ಲ ಅಂದರೆ ಏನೆಲ್ಲ ಇದ್ದರೂ ಏನೇನೂ ಇಲ್ಲ ! ಬದುಕ್ಕಿದ್ದರೂ ಸತ್ತ ಹಾಗೆ ಆ ಜೀವನ, ಆ ಸ್ವರ್ಗ ಸುಖ ಬೇಡ ಅನ್ನುತ್ತಿದ್ದೀಯಲ್ಲ ನೀನು, ಯಾಕೆ?”
“ಅದು…ನಾನು ಬೇಡ ಅಂತ ಯಾಕೆ ಹೇಳಿದೆ ಗೊತ್ತಾ?”
“ಯಾಕೆ… ಯಾಕೆ ಹೇಳಿದೆ?”
“ಕೇವಲ ತೀಟೆ ತೀರಿಸಿಕೊಳ್ಳುವುದಕ್ಕೋಸ್ಕರ ಅದು ಬೇಡ, ನನಗೆ ಪ್ರೇಮ ತುಂಬಿರುವ ಕಾಮ ಸುಖ ಬೇಕು. ಅದನ್ನು ಕೊಡಿಸಲು ನಿನ್ನಿಂದ ಈಗ ಆಗೋಲ್ಲ ಬಿಡು.”
“ನಿನಗೆ ಯಾವ ಸುಖ ಬೇಕು ಅದನ್ನೆಲ್ಲ ಆ ರಂಬೆ ಊರ್ವಶಿಯರ ಹತ್ತಿರ ಸಿಗುತ್ತೆ ಕಣೋ!”
“ಇಲ್ಲ… ನನಗೆ ಬೇಕಾಗಿರುವುದು ಅವರಗಳಲ್ಲಿ ಸಿಗುವುದಿಲ್ಲ. ಸಿಕ್ಕರು ನನಗೆ ಅದು ಬೇಡ. ನನಗೆ ಕೇವಲ ಅವಳು ಬೇಕು. ಈ ನನ್ನ ಮನಸ್ಸು- ಹೃದಯ ಅವಳಿಗೆ ಮಾತ್ರ ಮೀಸಲು…”
“ಈ ಹುಚ್ಚ ಬಡ್ಡಿಮಗನ ಜೊತೆಗೆ ಕುಡಿದು ಮಾತಾಡುತ್ತಿದ್ದೇನಲ್ಲ, ಅದು ನನ್ನದೇ ತಪ್ಪು. ಕುಡಿದಿರುವಾಗ ನೀನು ನನಗೆ ಸೂಟಾಗಲ್ಲ. ಎಲ್ಲಿಗೋ ಹೋಗಬೇಕು ಅನ್ನುತ್ತಿದಿಯಲ್ಲ, ಹಾಳಾಗಿ ಹೋಗು. ಏನೋ ಸ್ನೇಹಿತ ನನ್ನ ಜೊತೆಗೆ ಇವನೂ ಸಹ ಸುಖ ಅನುಭವಿಸಲಿ ಅಂತ ಹೇಳಿದರೆ ಅದೇನೇನೋ ವಿಚಿತ್ರವಾಗಿ ಮಾತಾಡುತ್ತಿದ್ದಾನೆ. ಒಂದೂ ಅರ್ಥ ಆಗ್ತಾ ಇಲ್ಲ. ಈಡಿಯಟ್…!”ಎಂದು ರೇಗುತ್ತಾ ಮತ್ತೊಂದು ವಿಸ್ಕಿ ಸೀಸೆ ಓಪನ್ ಮಾಡಿ ನೀರು ಬೆರೆಸದೆ ಅದನ್ನೂ ಸಹ ಖಾಲಿ ಮಾಡಿದನು ರವಿ.
**********
ಅದು ಕಾಲೇಜು !
”ಸೌಂದರ್ಯ… ನಿನ್ನನ್ನು ನೋಡಿದ ಆ ಮೊದಲು ದಿನದಿಂದಲೂ ಇದೇ ರೀತಿ ಹುಚ್ಚನತರಹ ನಿನ್ನ ಹಿಂದೆ ಓಡಾಡುತ್ತಿದ್ದೇನೆ. ನನ್ನ ಪ್ರೀತಿಯನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ನೀನು ? ಸೌಂದರ್ಯ… ನನಗೆ ಹುಚ್ಚು ಹಿಡಿದಿದೆ… ನಿನ್ನ ಆ ಪ್ರೀತಿಯ ಹುಚ್ಚು! ನನಗೆ ನೀನು ಬೇಕು. ನಿನ್ನ ಆ ಪ್ರೀತಿ ಬೇಕು ನನಗೆ! ನನ್ನ ಪ್ರೀತಿನ ನಂಬು ಸೌಂದರ್ಯ. ಪ್ಲೀಸ್ ಲವ್ ಮೀ ಸೌಂದರ್ಯ. ನಾನು ಮಾತಾಡುತ್ತಿರುವುದು ಕೇಳಿಸುತ್ತಿಲ್ವಾ ಸೌಂದರ್ಯ? ನಿಲ್ಲು ಸೌಂದರ್ಯ!” ಎನ್ನುತ್ತಾ ಅವಳ ಬೆನ್ನಟ್ಟಿ ಬರುತ್ತಿದ್ದರೂ ಅವಳು ನಿಲ್ಲುತ್ತಿಲ್ಲ.
ಅವನು ಪುನ: ಸೌಂದರ್ಯಳ ಹಿಂದೆ ಬರುತ್ತ –
“ಐ ಲವ್ ಯೂ ಸೌಂದರ್ಯ! ನೀನು ಪ್ರೀತಿಸಲಿಲ್ಲ ಅಂದರೆ ನಾನು ಸತ್ಹೋ ಗ್ತೇನೆ ಸೌಂದರ್ಯ. ನೀನು ಇಲ್ಲದೆ ನನ್ನ ಜೀವನ ಇಲ್ಲ ಸೌಂದರ್ಯ. ನಿಲ್ಲು ಸೌಂದರ್ಯ” ಎನ್ನುತ ಕೈಹಿಡಿದು ತಡೆದನು.
ಆಗ ಅವಳು ಕೋಪ ಮತ್ತು ತಿರಸ್ಕಾರದಿಂದ
“ನೀನು ಸತ್ತರೂ ನಾನು ಪ್ರೀತೊಲ್ಲ ಅಂತ ನೂರು ಸಲ ಹೇಳಿದ್ದೇನೆ. ಕೈ ಬಿಡೋ ರಾಸ್ಕಲ್!” ಎಂದು ಅಬ್ಬರಿಸುತ್ತಾ ಅವನಿಂದ ಬಿಡಿಸಿಕೊಂಡು ತನ್ನ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಫೋನ್ ತೆಗೆದು ನಂಬರ್ ಗಳು ಪ್ರೆಸ್ ಮಾಡಿ,
ಫೋನಿನಲ್ಲಿ ಎರಡು ನಿಮಿಷ ಏನೋ ಮಾತಾಡಿ ಡಿಸ್ ಕನೆಕ್ಟ್ ಮಾಡಿದಳು.
**********
ಕಾಡಿನ ಪ್ರದೇಶ!
ಅಲ್ಲಿನ ಪ್ರಕೃತಿ ಸೌಂದರ್ಯ ತುಂಬ ಸೊಗಸಾಗಿತ್ತು.
ಜಲಪಾತ ಹರಿಯುತ್ತಿತ್ತು. ಅಲ್ಲಿ… ನದಿಯ ದಂಡೆಯ ಬಂಡೆ ಒಂದರ ಮೇಲೆ ಅವನು ಕುಳಿತಿದ್ದನು.
ಅವನೇ…ಲೇಖಕ ರವಿ !
ರವಿ ಸಿಗರೇಟ್ ದಮ್ ಹೊಡೆಯುತ್ತ ಗಾಢವಾಗಿ ಯೋಚಿಸುತ್ತ ಕಾದಂಬರಿಯೊಂದನ್ನು ಬರೆಯುತ್ತಿದ್ದನು.
ಸಮಯ ಉರುಳುತ್ತಿತ್ತು.
**********
ಅವರಿಬ್ಬರು ಯುವ ಪ್ರೇಮಿಗಳು!
ಪ್ರಕೃತಿ ಸೌಂದರ್ಯದ ಮಧ್ಯೆ ಕುಳಿತು ಲವ್ ಥ್ರಿಲ್ ಎಂಜಾಯ್ ಮಾಡುತ್ತಿದ್ದರು. ಅವನು ಅವಳ ಗುಲಾಬಿ ಬಣ್ಣದ ಅಧರಗಳನ್ನು ಚುಂಬಿಸಿದನು.
ಅವಳು ಉತ್ಸಾಹದಿಂದ ಸಹಕರಿಸಿದಳು.
ರಸಿಕ… ಪುನಃ ರಸಿಕ ಚೇಷ್ಟೆ ಮಾಡಿದನು.
ಅವಳು ಕಿಲ ಕಿಲ ನಕ್ಕಳು !
ಅದನ್ನು… ಅದನ್ನು ಅವನು ನೋಡಿಬಿಟ್ಟ…
ಕಾದಂಬರಿ ಬರೆಯುತ್ತ ಕುಳಿತಿದ್ದ ಲೇಖಕ ರವಿ !
“ಅಯ್ಯೋ ಪಾಪ… ಇನ್ನೇನು ಆ ಪ್ರೇಮಿಗಳಿಗೆ ಅದೇನು ಗ್ರಹಚಾರ ಕಾದಿದೆಯೇನೊ!”
“ಅರೆ…ಯಾಕೆ ?ಅವನು…ಆ ಲೇಖಕ, ಆ ಪ್ರೇಮಿಗಳ ಪಾಲಿಗೆ ವಿಲನ್…?”
“ಇಲ್ಲ…ಆ ಪ್ರೇಮಿಗಳಿಗೂ ಅವನಿಗೆ ಸಂಬಂಧ ಇಲ್ಲ.
ಇಲ್ಲ ಅಂದ ಮೇಲೆ ಯಾಕೆ ಆ ಪ್ರೇಮಿಗಳಿಗೆ ಗ್ರಹಚಾರ ಕಾದಿದೆ ಅಂತ ಕೇಳುತ್ತೀರಾ? ಹೇಳುತ್ತೇನೆ !
ಆ ಲೇಖಕ ರವಿ… ಸೈಕೋಪಾತ್!
ಅವನು ಹೆಣ್ಣು ಮತ್ತು ಪ್ರೇಮಿಗಳನ್ನು ದ್ವೇಷಿಸುತ್ತಾನೆ.
ಪ್ರೀತಿಸುವ ಪ್ರೇಮಿಗಳನ್ನು ಕಂಡರೆ ಕೆರಳಿಬಿಡುತ್ತಾನೆ.
ಅಯ್ಯೋ… ಎಂತಹ ವಿಚಿತ್ರ!
ಆ ಲೇಖಕ ಸೈಕೋಪಾತ್ ಆಗಿರುವುವನೇ ?
ಹೌದು… ಒಂದು ರೀತಿ ಅವನೊಬ್ಬ ವಿಚಿತ್ರ ಸೈಕೋಪಾತ್!
**********
ಅದು ಕಾಲೇಜು !
ಸೌಂದರ್ಯ ಫೋನ್ ಮಾಡಿದ್ದರಿಂದ ಕೃಷ್ಣನ ಮೂಳೆ ಮುರಿಯಲು ನಾಲ್ಕು ಜನ ಗುಂಡಾಗಳು ಆಗಮಿಸಿದ್ದರು.
ಕೃಷ್ಣನ ಮುಖದ ಮೇಲೆ ಅಪ್ಪಳಿಸಿದನು ಧಡಿಯ.
ಆ ಮೂರು ಜನ ಸಹ ನುಗ್ಗಿದರು.
ಸೌಂದರ್ಯ ಕೋಪ ಮತ್ತು ತಿರಸ್ಕಾರದಿಂದ-
“ಈ ನಾಯಿಗೆ ಹಿಡಿದಿರುವ ಹುಚ್ಚು ಬಾಯಿಂದ ಹೇಳಿದರೆ ಬಿಡ್ತಿಲ್ಲ. ಇವನನ್ನ ಇನ್ನು ಮುಂದೆ ನನ್ನ ತಂಟೆಗೆ ಬರದ ಹಾಗೆ ಮಾಡಿ!”
ಎಂದು ಹೇಳಿ ತನ್ನ ಕಾರಿನತ್ತ ಹೋದಳು.
ಆ ನಾಲ್ಕು ಜನ ದಾಂಡಿಗರು ಕೃಷ್ಣನನ್ನು ದನಕ್ಕೆ ಹೊಡೆಯುವಂತೆ ಹೊಡೆಯುತ್ತಿದ್ದರು.
ಕೃಷ್ಣ ಯಮ ಹಿಂಸೆಯಿಂದ ತತ್ತರಿಸುತ್ತ ವಿಕಾರವಾಗಿ ಅರಚುತ್ತಿದ್ದನು.
ಒಂದು ಗಂಡು ಒಂದು ಹೆಣ್ಣನ್ನು ಇಷ್ಟಪಟ್ಟು ಪ್ರೀತ್ಸೊದು ತಪ್ಪಾ? ಅಯ್ಯೋ… ಎಂತಹ ಹೆಣ್ಣು ಅವಳು!
ಕೃಷ್ಣನ ಬಾಯಿಂದ-
” ಐ ಲವ್ ಯೂ ಸೌಂದರ್ಯ !” ಎಂಬ ಭಯಂಕರ ಆರ್ತ ಹೊರ ಬರುತ್ತಿತ್ತು.
ಸಮಯ ಉರುಳುತ್ತಿತ್ತು.
ಒದೆ ಬೀಳುತ್ತಿದ್ದವು.
**********
ಕಾಡಿನ ಪ್ರದೇಶ.
ರವಿ ತನ್ನ ಭುಜಕ್ಕೆ ನೇತು ಹಾಕಿಕೊಂಡಿದ್ದ ಬ್ಯಾಗಿನಿಂದ ವಿಸ್ಕಿ ಸೀಸೆ ಮತ್ತು ಸಿಗರೇಟ್ ಪ್ಯಾಕ್ ಹೊರ ತೆಗೆದನು.
ಸಿಗರೇಟ್ ಹತ್ತಿಸಿಕೊಂಡು ದಮ್ ಹೊಡೆಯುತ್ತ ಆ ಪ್ರೇಮಿಗಳತ್ತ ಬಂದನು.
ಅವಳು ಗಾಬರಿಯಿಂದ ತನ್ನ ಉಡುಪುಗಳನ್ನು ಸರಿ ಪಡಿಸಿಕೊಂಡಳು. ಅವರುಗಳತ್ತ ಬಂದ ರವಿ –
“ಯಾರು ನೀವು?”
“ಏನಣ್ಣ ಹೀಗೆ ಕೇಳುತ್ತಿದ್ದೀಯಾ, ನೋಡಿದರೆ ಗೊತ್ತಾಗುತ್ತಿಲ್ವಾ? ನಾವು
ಪ್ರೇಮಿಗಳು…”
“ನೀವಿಬ್ಬರೂ ಒಬ್ಬರನ್ನೊಬ್ಬರೂ ತುಂಬ ಪ್ರೀತಿಸಿಕೊಳ್ಳುತ್ತಿದ್ದೀರಾ…?”
“ಹೌದಣ್ಣ… ”
”ಇವಳಿಲ್ಲದೆ ನೀನು ಬಾಳಲು ಇಷ್ಟಪಡಲಾರೆ…”
“ಹೌದಣ್ಣ, ಇವಳು ನನ್ನ ಪ್ರಾಣ.”
“ಏ, ನೀನು ಇವನನ್ನು ಎಷ್ಟೊಂದು ಪ್ರೀತಿಸುತ್ತಿದ್ದೀಯಾ?” ಎಂದು ಕೇಳಿದಾಗ ಅವಳು-
“ನೀವು ಯಾರು ಸಾರ್? ತುಂಬ ವಿಚಿತ್ರವಾಗಿ ಕೇಳುತ್ತಿದ್ದೀರ ? ಯಾಕೆ?”
“ಪ್ಲೀಸ್ ಬೇಬಿ… ಮೊದಲು ನಾನು ಕೇಳಿದಕ್ಕೆ ಉತ್ತರಿಸು.”
“… ….”
”ನಿನ್ನ ಪ್ರಿಯತಮನಾದ ಇವನನ್ನು ನಿಜವಾಗಿಯೂ ನೀನು ಎಷ್ಟೋಂದು ಪ್ರೀತಿಸುತ್ತಿದ್ದೀಯಾ…?”
”ಇವನನ್ನು… ಇವನಿಕ್ಕಿಂತಲೂ ಹತ್ತು ಪಟ್ಟು ಹೆಚ್ಚಿಗೆ ಪ್ರೀತಿಸುತ್ತಿದ್ದೇನೆ.”
“ತುಂಬ ಒಳ್ಳೆ ಹುಡುಗಿ ಕಣಮ್ಮ ನೀನು. ನಿಜಕ್ಕೂ ಮೆಚ್ಚಬೇಕಾದದು ನಿನ್ನ ಪ್ರೀತಿಗೆ. ನಿನ್ನ ಹೆಸರೇನಮ್ಮ?”
“ರೂಪ… ರೂಪ ಅಂತ
ನನ್ನ ಹೆಸರು.”
‘ರೂಪ… ಹೆಸರಿಗೆ ತಕ್ಕಂತೆ ನೀನು ನಿಜಕ್ಕೂ ರೂಪಾವಂತೆ ಅಂತೆ ಇದ್ದೀಯ: ಆದರೆ…”
“ಆದರೇನು ಸಾರ್?’
“ನನಗೆ… ನನಗೆ ತುಂಬ ಸಂದೇಹ ಬರುತ್ತಿದೆ.”
“ಏನೂ ಸಂದೇಹನಾ, ಏನ್ ಸರ್ ಅದು?”
“ನಿನ್ನ ಆ ಪ್ರೀತಿ…?”
“ನನ್ನ ಪ್ರೀತಿ…?”
”ಪರಿಶುದ್ಧ ಇಲ್ಲ.”
”ವಾಟ್ ನಾನ್‌ಸೆನ್ಸ್ ಆರ್ ಯೂ ಟಾಕಿಂಗ್!”
”ಈ ನಿನ್ನ ಅಂದದ ಮುಖದ ಹಿಂದೆ ನಿಗೂಢತೆ ಅಡಗಿದೆ! ನೀನೊಂದು ನೀಚ ಹೆಣ್ಣು!”
ರವಿಯ ಈ ಮಾತುಗಳನ್ನು ಕೇಳಿ ಆ ಲವ್ ಸರ್ಕಲ್ ಹೀರೋಗೆ ರೇಗಿ ಹೋಯಿತು. ಆ ಹೀರೋ ಕೋಪದಿಂದ
–
“ಏ ಯಾರಯ್ಯ ನೀನು!? ಬಾಯಿಗೆ ಬಂದ ಹಾಗೆ ಏನೆಲ್ಲ ಹೇಳುತ್ತಿದ್ದೀಯ, ಇವಳ ಪ್ರೀತಿ ಪರಿಶುದ್ಧ ಇಲ್ವಾ? ಇವಳ ಅಂದದ ಮುಖದ ಹಿಂದೆ ನಿಗೂಢತೆ ಅಡಗಿದೆಯಾ? ಇವಳು ನೀಚ ಹೆಣ್ಣಾ…? ಇವಳು ನನ್ನ ಮಾವನ ಮಗಳು. ಇವಳು ಚಿಕ್ಕಂದಿನಿಂದಲೂ ನನ್ನ ಜೊತೆಗೆ ಕೂಡಿ- ಆಡಿ ಬೆಳೆದವಳು. ಇವಳ ಪ್ರೀತಿ ಏನು, ಇವಳೇನು ಅಂತ ನನಗೆ ಚೆನ್ನಾಗಿ ಗೊತ್ತು! ನಮಗೆ ತೊಂದರೆ ಕೊಡದೆ ಸುಮ್ಮನೆ ಇಲ್ಲಿಂದ ಜಾಗ ಖಾಲಿ ಮಾಡು. ಇಲ್ಲ ಅಂದರೆ…”
”ಇಲ್ಲ ಅಂದರೆ ಏನೋ ಮಾಡ್ತೀಯಾ?”
“ನಿನ್ನ ಮುಸುಡಿ ಪಂಚರ್ ಮಾಡಿ ಆಸ್ಪತ್ರೆಗೆ ಕಳಿಸುತ್ತೇನೆ.”
” ಬರೀ ಬಾಯಿಂದ ಹೇಳಿದರೆ ಆಯಿತಾ? ಅದು ನಿನ್ನಿಂದ ಸಾಧ್ಯವಿಲ್ಲ ಅಂತ ಗೊತ್ತು ಬಿಡು!”
”ಬರೀ ಬಾಯಿಂದ ಹೇಳಿದರೆ ನೀನು ಕೇಳಲ್ಲ ಅಂತ ಕಾಣತ್ತೆ, ಹುಚ್ಚ ಬಡ್ಡಿ ಮಗನೆ ಸುಮ್ ಸುಮ್ಮನೆ ತೊಂದರೆ ಕೊಡುತ್ತಿಯೇನೋ!” ಎಂದು ಅಬ್ಬರಿಸುತ್ತಾ ತನ್ನ ಮೇಲೆ ನುಗ್ಗಲೆತ್ನಿಸಿದಾಗ ರವಿ ತನ್ನ ಜೇಬಿನಿಂದ ರಿವಾಲ್ವರ್ ಹೊರತೆಗೆದವನೆ ಅವಳ ತಲೆಗೆ ಗುರಿಯಿಟ್ಟು ಕವರ್ ಮಾಡಿದಾಗ ಪ್ರೇಮಿಗಳು ಭಯ ಗಾಬರಿಯಿಂದ ಬೆಚ್ಚಿಬಿದ್ದರು.
“ನಾನು ಯಾರು ಅಂತ ಗೊತ್ತಾ?”
“ಇಲ್ಲ… ಗೊತ್ತಿಲ್ಲ ಅಣ್ಣ”
“ನಾನೊಬ್ಬ ಸೈಕೋ! ಹುಚ್ಚ… ನಿಮ್ಮಂಥ ಕಾಮುಕ ಪ್ರೇಮಿಗಳನ್ನು ದ್ವೇಷಿಸುವ ಹುಚ್ಚ-ಕುಡಕ ನಾನು! ನನ್ನಿಂದ ಈಗ ನೀವು ಬದುಕುಳಿಯ ಬೇಕು ಅಂದರೆ ನಾನು ಹೇಳುವುದನ್ನು ಕೇಳಬೇಕು.ಕೇಳಲಿಲ್ಲ ಅಂದರೆ ಸೂಟ್ ಮಾಡಿ ಬಿಡುತ್ತೇನೆ. ಅನ್ಯಾಯವಾಗಿ ದುರಂತಕ್ಕೆ ಬಲಿ ಆಗ್ತೀರ.ನಾನು ಹೇಳಿದ ಹಾಗೆ ಕೇಳಬೇಕು. ಕೇಳ್ತೀರಾ?”
“ಕೇ… ಕೇಳುತ್ತೇವೆ”
“ಅದೇನು ಅಂತ ಹೇಳಿ ಅಣ್ಣ.”
“ಪ್ರೀತಿ ಅಂದರೇನು…?”
” ಸ್ವಲ್ಪ ಹೊತ್ತಿನ ಮುಂಚೆ ಇವಳು ನಾನು ಸೇರಿ ಮಾಡುತ್ತಿದ್ದೆವಲ್ಲ, ಅದನ್ನು ನೀವೂ ಸಹ ನೋಡಿರಬೇಕು. ಅದೇ ಪ್ರೀತಿ.”
“ಅದು ಪ್ರೀತಿ ಅಲ್ಲ… ಅದು ಕಾಮದ ಮುಖವಾಡ. ಪ್ರೀತಿ… ಪ್ರತಿ ಒಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವ ಅಮೂಲ್ಯವಾದ ಮಾನವೀಯ ತುಡಿತ. ಪ್ರೀತಿ ಅನ್ನುವುದು ಇಲ್ಲ ಅಂದರೆ ಮನುಷ್ಯ ಬಾಳಲು ಸಾಧ್ಯ ಇಲ್ಲ. ಮಾನವೀಯತೆಯೇ ಪ್ರೀತಿ….”ಎಂದಿನ್ನೂ ಅದೇನೇನೋ ಹೇಳಿ ಮುಗಿಸಿ –
“ನಿನ್ನ ಹೆಸರು ಏನು ಬ್ರದರ್?”
“ಸುರೇಂದ್ರ ಅಂತ.”
“ಸುರೇಂದ್ರ ನಾನು ನಿನ್ನ ಒಳ್ಳೇದಕ್ಕೆ ಹೇಳುತ್ತಿದ್ದೇನೆ. ನನ್ನ ಮಾತು ಕೇಳ್ತೀಯ ?”
“ಅದು ಏನು ಅಂತ ಹೇಳು ಅಣ್ಣ.”
”ಈ ಪ್ರೀತಿ ಪ್ರೇಮ ಅನ್ನುವುದೊಂದು ಕಾಮದ ಮುಖವಾಡ. ಇದನ್ನು ನಂಬಬೇಡ. ಈ ಪ್ರೀತಿ- ಪ್ರೇಮ ಅಂತ ಈ ಕೊಳಕು ಹೆಣ್ಣನ್ನು ನಂಬಬೇಡ, ನಂಬಿ ಸುಂದರ ಬಾಳು ಬರಡು ಮಾಡಿಕೊಳ್ಳಬೇಡ ಸ್ನೇಹಿತ. ಈ ಪ್ರೀತಿ- ಪ್ರೇಮವನ್ನು ಬಿಟ್ಟು ಜೀವನದಲ್ಲಿ ಮುಂದೆ ಬಾ, ಏನಾದರೂ ಸಾಧನೆ ಮಾಡು. ಬದುಕು ಸಾರ್ಥಕ ಆಗುತ್ತೆ. ನಾನು ಹೇಳುತ್ತಿರುವುದೆಲ್ಲ ಅರ್ಥ ಮಾಡಿಕೊಳ್ಳುತ್ತಿದ್ದೀಯ ಸುರೇಂದ್ರ?”
”ಹುಂ, ಮಾಡಿಕೊಳ್ಳುತ್ತೇನೆ.”
ತರ್ಲೆ ಮಾಡಿದರೆ ಈ ಹುಚ್ಚ ಶೂಟ್ ಮಾಡಲು ಹಿಂಜರಿಯಲಾರ ಎಂದರಿತ ಸುರೇಂದ್ರ ಎಲ್ಲದಕ್ಕೂ ‘ಹೂಂ’ ಎನ್ನುತ್ತಿದ್ದನು.
ರವಿ-
“ಈ ನೀಚ ಹಣ್ಣನ್ನು ಮರೆತು ಬಿಡು.”
“ಆಯಿತು, ನೀನು ಹೇಳಿದ ಹಾಗೆ ಮಾಡ್ತೇನೆ.”
“ನಾನು… ನಾನೊಬ್ಬ ಕಾದಂಬರಿಕಾರ, ನಾನು ಕೆಲವು ಕಾದಂಬರಿಗಳು ಬರೆದಿದ್ದೇನೆ. ಅವುಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಾಳು ನಿನಗೆ ಕೊಡುತ್ತೇನೆ” ಎನ್ನುತ್ತಾ ತನ್ನ ಬ್ಯಾಗಿನಲ್ಲಿದ್ದ ಕೆಲವು ಕಾದಂಬರಿಗಳು ತೆಗೆದನು.
“ನಾನು ಬರೆದಿರುವ ಈ ಕಾದಂಬರಿಗಳನ್ನು ಓದು, ಹೆಣ್ಣು ಹೆಂತವಳು ಅಂತ ನಿನಗೆ ಗೊತ್ತಾಗುತ್ತದೆ” ಎಂದು ಹೇಳುತ್ತಾ ಅವುಗಳನ್ನು ನೀಡಿದನು ರವಿ.
ಸುರೇಂದ್ರನಿಗೆ ರವಿ ಮಾತುಗಳು ಕೇಳಿ ತುಂಬ ಆಶ್ಚರ್ಯವಾಗುತ್ತಿತ್ತು.
ರವಿ –
“ಈಗ ನೀನು ಆರಾಮವಾಗಿ ಮನೆಗೆ ಹೋಗು ಸುರೇಂದ್ರ.”
ಸುರೇಂದ್ರ ತನ್ನ ಪ್ರಿಯತಮೆಯತ್ತ ನೋಡುತ್ತ
–
”ಇ… ಇವಳು.”
“ಇವಳು… ಇವಳು ಈಗ ಮನೆಗೆ ಹೋಗಲಿ ಬಿಡು ಸುರೇಂದ್ರ!”
”ಏಯ್, ಏನೇ ಹಾಗೆ ನೋಡುತ್ತ ನಿಂತಿದ್ದೀಯಾ, ನೀನು ಸಹ ರೈಟ್ ಹೇಳು” ಎಂದಾಗ ಅವಳು ಬೆಚ್ಚಿ ತನ್ನ ಪ್ರಿಯತಮನತ್ತ ಹೋಗುತ್ತಿರುವಾಗ ರವಿ- “ಏಯ್, ಮತ್ತೆ ಯಾಕೆ ಅವನ ಹಿಂದೆ ಹೋಗುತ್ತಿದ್ದೀಯ?”
ಅವಳು ಗಾಬರಿಯಿಂದ-
”ಇಲ್ಲ…ಅವನ ಹಿಂದೆ ಹೋಗುತ್ತಿಲ್ಲ” ಎಂದು ನಿಂತಳು.
”ಮತ್ತೆ ಹೋಗುತ್ತಿದ್ದೀಯಲ್ಲ?”
“ಮನೆಗೆ ಹೋಗುತ್ತಿದ್ದೇನೆ.”
“ಅವನ ಹಿಂದೆ ಪುನ: ಸುತ್ತಾಡುವುದನ್ನು ನಾನು ಏನಾದರೂ ಕಂಡರೆ ನಿಮ್ಮಿಬ್ಬರನ್ನು ಕೊಂದು ಬಿಡುತ್ತೇನೆ… ಹೋಗು, ಅವನ ಹಿಂದೆ ಹೋಗಬೇಡ. ಈ ಕಡೆಯಿಂದ ಹೋಗು” ಎಂದು ವಿರುದ್ದ ದಿಕ್ಕನ್ನು ತೋರಿಸಿದನು.
ಭಯದಿಂದ ಹೆದರಿದ್ದ ಅವಳು ರವಿ ತೋರಿಸಿದ ದಿಕ್ಕನ್ನು ಹಿಡಿದು ಹೋದಳು.
**********
ಕಾಡಿನಲ್ಲಿ ಸೈಕೋಪಾತ್ ರವಿ ನೀಡಿರುವ ಕಾದಂಬರಿ ಪುಸ್ತಕಗಳನ್ನು ನೋಡುತ್ತಿದ್ದರು ರೂಪ – ಸುರೇಂದ್ರ ಎಂಬ ಹೆಸರಿನ ಆ ಯುವ ಪ್ರೇಮಿಗಳು.
ರವಿ ಬರೆದಿರುವ ಕೆಲವು ಪ್ರಕಟಿತ ಕಾದಂಬರಿಗಳು!
1. ವಿಷಕನ್ಯ
2. ಅಂದದ ಮುಖದ ಹಿಂದ ?
3.ಅಬಲೆ
4. ಪ್ರೀತಿ… ಕಾಮದ ಮುಖವಾಡ !
5. ಸೌಂದರ್ಯ ದರ್ಶಿನಿ
6. ರೂಪಜೀವಿ
7. ನೀನು ಹೆಣ್ಣಲ್ಲ… ಡಾಕಿ(ನಿ)ಣಿ!
ಎಂಬ ಹೆಸರಿನ ಕಾದಂಬರಿಗಳು ಬರೆದಿದ್ದನು ರವಿ.
ರವಿ ಬರೆದಿರುವ ಎಲ್ಲ ಕಾದಂಬರಿಗಳು ಹೆಣ್ಣಿನ ವಿರುದ್ಧ ಇದೆ.
ಅವನು… ಆ ಲೇಖಕ ರವಿ ಹೆಣ್ಣನ್ನು ದ್ವೇಷಿಸುತ್ತಾನೆ.
ಯಾಕೆ ?
***********************
ಎರಡು
************************
“ಕೃಷ್ಣ ಯಾರೋ ಅದು ನಿನ್ನನ್ನು ಈ ಸ್ಥಿತಿಗೊಳಿಸಿದವರು? ಅಯ್ಯೋ ದನಕ್ಕೆ ಹೂಡೆದ್ಹಾಗೆ ಹೊಡೆದಿದ್ದಾರಲ್ಲೋ, ಯಾರೋ ಆ ಪಾಪಿ ಬಡ್ಡಿ ಮಕ್ಕಳು? ” ಎಂದು ಕೇಳಿದಾಗ ಕೃಷ್ಣ ಅದೇನೋ ಹೇಳಿದನು.
ರವಿ ಕೋಪದಿಂದ-
“ಆ ಮುಂಡೆಗೆ ಅಷ್ಟೊಂದು ಕೊಬ್ಬು ಏನೋ, ತಾಳು ಅವಳ ಚರ್ಬಿ ಕರಗಿಸುತ್ತೇನೆ. ವಿದ್ಯಾರ್ಥಿಗಳ ಮುಂದೆ ಅವಳನ್ನು ನಿನ್ನಿಂದಲೇ ಅವಮಾನ ಮಾಡಿಸುತ್ತೇನೆ.”
” ಈ ರೀತಿ ಆವೇಶಕ್ಕೆ ಒಳಗಾಗಿ ಮಾತಾಡಬೇಡ ಕಣೋ, ಇದರಲ್ಲಿ ನನ್ನದೆ ತಪ್ಪು…” “ನಿಜ…ತಪ್ಪು ನಿನ್ನದೆ ಬಿಡು! ಆದರೆ ನಿನ್ನ ಪ್ರಕಾರ ಅದು ಹೇಗೆ ಅಂತ…?”
“ಆವಳು ಆಕಾಶ ಪುಷ್ಪ ಈ ನಗರದ ಕೋಟ್ಯಾಧೀಶ್ವರಿ. ನಿಜ… ನಾನು ಅವಳಿಗೆ ತಕ್ಕವನಲ್ಲ. ಅವಳು ನನಗೆ ಪ್ರೀತ್ಸೋಲ್ಲ ಅಂತ ನೂರು ಸಲ ಹೇಳಿದಳು. ಆದರೆ ನಾನು ಕೇಳಲಿಲ್ಲ; ಅದಕ್ಕೆ ಅವಳು…”
“ಕೃಷ್ಣಾ! ನೀನು ಏಳು ತಿಂಗಳಿಗೆ ಜನಿಸಿದೆಯೇನೋ ?”
“ಯಾಕೆ ರವಿ, ವಿಚಿತ್ರವಾಗಿ ಕೇಳುತ್ತಿದ್ದೀಯಾ?”
“ಮತ್ತೆ ಇನ್ನೇನು, ಏಳು ತಿಂಗಳಿಗೆ ಜನಿಸಿದವರ ಹಾಗೆ ಮಾತಾಡ್ತೀಯಲ್ಲಾ ನೀನು. ಪ್ರೀತಿ-ಪ್ರೇಮ ಅನ್ನುವ ಮಾತನ್ನು ನನ್ನ ಮುಂದೆ ಹೇಳಬೇಡ ಅಂತ ನಿನಗೆ ನೂರು ಸಲ ಹೇಳಿದ್ದೇನೆ ನಾನು. ಆದರೂ ಸಹ ನೀನು… ನೀನಂತೂ ಈ ಜನ್ಮದಲ್ಲಿ ಉದ್ಧಾರ ಆಗೋಲ್ಲ ಬಿಡು!”ಎಂದು ರೇಗುತ್ತಾ ಸಿಗರೇಟ್ ಹೊತ್ತಿಸಿಕೊಂಡನು ರವಿ.
ಕೃಷ್ಣ ಮಾತಾಡಲಿಲ್ಲ.
ರವಿ –
” ಕೃಷ್ಣ… ಪ್ರೀತಿ ಅಂದರೇನು ಅಂತ ನನಗೆ ಗೊತ್ತಿಲ್ಲ, ಅಂತ ನೀನು ತಿಳ್ಕೊಂಡಿದ್ದೀಯಾ? ಅದು ನನಗೆ ಗೊತ್ತು ಕಣೋ ಕೃಷ್ಣ! ಅಕ್ಕ-ತಂಗಿ, ಅಣ್ಣ-ತಮ್ಮ, ಅಪ್ಪ – ಅಮ್ಮ, ಸ್ನೇಹಿತ, ಸಂಬಂಧಿಕರ, ಪರಸ್ಪರ ಮನುಷ್ಯರ ಪ್ರೀತಿ… ಈ ಪ್ರೀತಿ ಪ್ರತಿ ಒಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕು. ಈ ಪ್ರೀತಿ ಇಲ್ಲದೇ ಬಾಳಲು ಖಂಡಿತ ಸಾಧ್ಯ ಇಲ್ಲ ಅಂತ ನನಗೆ ಗೊತ್ತು. ಆದರೆ ಆ ಲವ್… ಒಂದು ಹೆಣ್ಣಿನ ಹಿಂದೆ ಪ್ರೀತಿ- ಪ್ರೇಮ ಅಂತ ಓಡಾಡುವ ಯುವಕರ ಆ ಲವ್! ಅದು ಲವ್ ಅಲ್ಲ ಕಣೋ, ಅದು ಕಾಮದ ಮುಖವಾಡ, ಆ ಲವ್ ಎನ್ನುವ ಸುಂದರ ಪದದ ಹಿಂದೆ ಅದು ಎಷ್ಟೊಂದು ಕಚಡ ಇದೆ ಅಂತ ನಿನಗೆ ಗೊತ್ತಿಲ್ಲ ಕೃಷ್ಣ. ನಿನ್ನಂತವರಿಗೆ ಅದು ತಿಳಿ ಹೇಳಿದರೂ ಸಹ ಅರ್ಥ ಆಗೋಲ್ಲ ಬಿಡು” ಎಂದು ಹೇಳುತ್ತಾ ತನ್ನ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ವಿಸ್ಕಿ ಸೀಸೆ ಹೊರ ತೆಗೆದನು.
ಕೃಷ್ಣ ಅವನನ್ನು ವಿಚಿತ್ರವಾಗಿ ನೋಡಿದನು.
ರವಿ ವಿಸ್ಕಿ ಸೀಸೆ ಓಪನ್ ಮಾಡಿ ಅರ್ಧ ಕುಡಿದು ಮುಗಿಸಿ-
”ಪ್ರೀತಿ- ಪ್ರೇಮ ಅಂತ ಈ ಹೆಣ್ಣನ್ನು ನಂಬಿ ನನ್ನ ಹಾಗೆ ನಿನ್ನ ಬಾಳು ದುರಂತಕ್ಕೆ ಬಲಿಯಾಗಬಾರದು ಕೃಷ್ಣ. ನನ್ನ ಕಣ್ಣು ಮುಂದೆ… ನನ್ನ ಸ್ನೇಹಿತನ ಬದುಕು ನನ್ನ ಹಾಗೆ ಆಗಬಾರದು. ಅದಕ್ಕೆ ನಾನು ಅವಕಾಶ ಕೊಡ್ಲಾರೆ ಕೃಷ್ಣ. ನಾನು ನಿನಗೆ ವಿಚಿತ್ರವಾಗಿ ಕಂಡುಬರುತ್ತಿರಬೇಕು ಅಲ್ಲವೇ? ಈ ಪ್ರೀತಿ – ಪ್ರೇಮ ಮತ್ತು ಹೆಣ್ಣನ್ನು… ನಾನು ಯಾಕೆ ದ್ವೇಷಿಸುತ್ತೇನೆ ಅಂತ ನಿನಗೆ ಗೊತ್ತಾ ಕೃಷ್ಣ? ನಾನು ಈ ರೀತಿ ಇದನ್ನೆಲ್ಲ ದ್ವೇಷಿಸಲು ಕಾರಣ ನನ್ನ ಜೀವನದಲ್ಲಿ ನಡೆದ ಆ ಒಂದು ದುರಂತ ಕಥೆ ಮತ್ತು ಈಗಿನ ಈ ವಿಚಿತ್ರ ಪ್ರಪಂಚದಲ್ಲಿ ನನ್ನ ಕಣ್ಣ ಮುಂದೆ ಹೆಣ್ಣಿನಿಂದ ನಡೆಯುತ್ತಿರುವ ಅಸಹ್ಯಕಾರಿ ಕೊಳಕು ಘಟನೆಗಳು ಎಂದು ಹೇಳಿ ಕೈಯಲ್ಲಿದ್ದ ವಿಸ್ಕಿ ಖಾಲಿ ಮಾಡಿ ಸಿಗರೇಟ್ ಹತ್ತಿಸಿಕೊಂಡು ತನ್ನ ದುರಂತ ಬದುಕಿನ ಕಥೆ ಸ್ನೇಹಿತ ಕೃಷ್ಣನಿಗೆ ಹೇಳತೊಡಗಿದನು.
**********
ಫ್ಲ್ಯಾಶ್ ಬ್ಯಾಕ್ ಸ್ಟೋರಿ.
ಅವನು ಕೋಟ್ಯಾಧೀಶ್ವರ ಶಂಕರ್ ಪ್ರಸಾದ್ ಅವರ ಮಗ ರಾಹುಲ್ ಪ್ರಸಾದ್.
ಅವನು…ಕಾಲೇಜಿನ ರೌಡಿ, ಅದರೊಂದಿಗೆ ಮಹಾ ಕುರೂಪಿ, ಧಡಿಯ, ಕಚಡ ನನ್ನಮಗ ಅವನು.
ಆ ಚೆಲುವಿಯನ್ನು ತೊಂದರೆ ಕೊಡುತ್ತಿದ್ದನು
ಲೋಫರ್.
”ಕಮಾನ್ ಬಾ ರಜನಿ, ಈ ದಡಿಯನ ಜೊತೆ ಐದೇ ಐದು ನಿಮಿಷ ಬಾ” ಎನ್ನುತ್ತಾ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಸ್ವಲ್ಪವು ಹೆದರದೆ ಬಲವಂತಗೊಳಿಸುತ್ತಿದ್ದನು. ಅವಳು ಅಸಹಾಯಕಳಂತೆ ಅವನಿಂದ ಬಿಡಿಸಿಕೊಳ್ಳಲು ಹೆಣಗುತ್ತಾ–
“ಯೂ ರಾಸ್ಕಲ್, ಬಿಡೋ ನನ್ನ!” ಎಂದು ಅರಚುತ್ತಿದ್ದಳು.
ಅವನು ಬಿಡುತ್ತಿರಲಿಲ್ಲ.
“ಏಯ್, ಸುಮ್ಮನೆ ಯಾಕೆ ಅರಚಿಕೊಂಡು ಗಂಟಲು ಹರಿದುಕೊಳ್ಳುತ್ತಿದ್ದೀಯಾ? ಈ ರಾಹುಲ್ ಧಡಿಯನ ಮನಸ್ಸು ಚಂಚಲಗೊಳಿಸಿರುವ ಯಾವ ಚೆಲುವಿಯರೂ ಸಹ ಕನ್ಯಾತ್ವ ಉಳಿಸಿಕೊಂಡಿಲ್ಲ. ತರ್ಲೆ ಮಾಡದೆ ಸುಮ್ಮೆ ಒಪ್ಪಿಕೊ, ಕೇವಲ ಮೂರೇ ಮೂರು ನಿಮಿಷದಲ್ಲಿ ನನ್ನ ಏರ್ಕಂಡಿಷನ್ ಕಾರಿನಲ್ಲಿ ಜೈ ಅನ್ನಿಸಿಬಿಡುತ್ತೇನೆ. ಕಮಾನ್, ಬಾ ಚಿನ್ನಾ” ಎನ್ನುತ್ತಾ ಅವಳನ್ನು ಬಲತ್ಕರಿಸಲು ನೋಡುತ್ತಿದ್ದನು.
ಛೀ… ಹೇಸಿಗೆ ಆಯಿತು ಅವಳಿಗೆ!
ಅವಳು ಕೋಪ ಮತ್ತು ತಿರಸ್ಕಾರದಿಂದ ಅವನ ಕುರೂಪ ಮುಖದ
ಮೇಲೆ ಕ್ಯಾಕರಿಸಿ ಉಗಿದಳು.
ಕೆರಳಿಬಿಟ್ಟನು ಕುರೂಪಿ ಧಡಿಯ!
“ನಿನ್ನ ಅಜ್ಜಿ ನಿನಗೆ ಅದೆಷ್ಟೇ ಕೊಬ್ಬು, ನನ್ನ ಪವರ್ ಏನು ಅಂತ ನಿನಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ. ಈಗ ನೋಡು ನನ್ನ ತಾಕತ್ ಏನು ಅಂತ! ಕಾಲೇಜಿನ ಈ ವಿದ್ಯಾರ್ಥಿಗಳ ಮುಂದೆ ನಿನ್ನನ್ನು ಬೆತ್ತಲೆ ಗೊಳಿಸಿ ರೇಪ್ ಮಾಡುತ್ತೇನೆ”
ಎನ್ನುತ್ತಾ ಮುಖದ ಮೇಲೆ ಉಗಿದಿದ್ದನು ಒರೆಸಿಕೊಳ್ಳುತ್ತಾ ರಾಕ್ಷಸನಂತೆ ನುಗ್ಗಿದನು.
ಅವಳು ಅರಚಿದಳು.
ಆ ಧಡಿಯ… ಆ ಕಾಲೇಜು ತನ್ನ ಮಾವನ ಮನೆ ಎಂಬಂತೆ ತಿಳಿದು ಅವಳನ್ನು ಬಲಾತ್ಕರಿಸುತ್ತಿದ್ದನು.
ಅವಳು-
“ದಯವಿಟ್ಟು ನನ್ನನ್ನು ಯಾರಾದರೂ ಕಾಪಾಡಿ, ಪೀಸ್ ಹೆಲ್ಪ್ ಮೀ” ಎಂದು ಅರಚುತ್ತಿದ್ದಳು.
ಆದರೆ ಆ ಕಾಲೇಜಿನಲ್ಲಿ, ಆ ಧಡಿಯನ ಮುಂದೆ ಯಾರೂ ಗಂಡಸು ಇರಲಿಲ್ವೇನೋ ಎಂಬಂತೆ ಕಂಡುಬರುತ್ತಿತ್ತು.
ಅವಳ ಎದೆ ಮೇಲಿನ ಬಟ್ಟೆ ಹರಿಯಿತು.
ತುಂಬದ ಆಕರ್ಷಕ ಎದೆ ಸೌಂದರ್ಯ ದರ್ಶನವಾಯಿತು.
ಗುಲಾಬಿ ಹೂವಿನಂತಿದ್ದ ಅವಳ ದೇಹದ ಜೊತೆ ಮಜಾ ಉಡಾಯಿಸುತ್ತಿದ್ದನು ಕುರೂಪಿ ಧಡಿಯ.
“ಅಣ್ಣ.. ಅಣ್ಣ!!”
ಎಂದು ವಿಕಾರ ಸ್ವರದಲ್ಲಿ ಅರಚುತ್ತ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದಳು.
“ಏಯ್ ಪಾಪಿ ಬಡ್ಡಿ ಮಕ್ಕಳ! ಏನೋ ಹಾಗೆ ನಿಂತುಕೊಂಡು ನೋಡುತ್ತ ನಿಂತಿದ್ದೀರ! ನಿಮ್ಮಲ್ಲಿ ಯಾರೂ ಗಂಡಸು ಇಲ್ಲವೆ? ಅಯ್ಯೋ, ಪಾಪ.. ಅವಳನ್ನು ಯಾರಾದರೂ
ಕಾಪಾಡಬಾರದೇ?”
“ಥೂ… ಷಂಡ ಬಡ್ಡಿ ಮಕ್ಕಳೆ!”
ಅವಳ… ಅವಳ ಕೆಳ ಉಡುಪು ಮೇಲೆ ಸರಿಯಿತು.
ಅವಳ ಕಥೆ… ಇಲ್ಲ ಮುಗಿಯಲಿಲ್ಲ.
ಗಾಡ್ ಈಸ್ ಗ್ರೇಟ್!
ಅವಳ ಅಣ್ಣ ರವಿ ಬಂದು ತನ್ನ ತ೦ಗಿ ಶೀಲ ಉಳಿಸಿಕೊಂಡಿದ್ದನು.
ಧಡಿಯ… ತನ್ನ ಮಂಡಿ ಮೇಲೆ ಪವರ್ ಫುಲ್ ಕಿಕ್ ಒದ್ದಿದಾಗ ಬೆಚ್ಚಿಬಿದ್ದನು.
ಧಡಿಯ ಚೇತರಿಸಿಕೊಂಡು ಅಬ್ಬರಿಸುತ್ತ ನುಗ್ಗುತ್ತಿರುವಾಗ ಅವಳ ಅಣ್ಣ ರವಿ ಅವನ ಮುಖದ ಮೇಲೆ ಮತ್ತು ದೇಹದ ಸುಖದ ಪ್ಲಸ್ ಪಾಯಿಂಟ್ ಗೆ ಪವರ್ ಫುಲ್ ಪಂಚ್ ಅಂಡ್ ಕಿಕ್
ನೀಡಿದನು.
ತತ್ತರಿಸಿದನು ಧಡಿಯ.
ರವಿ ಕೋಪದಿಂದ ರೌಡಿ ರಾಹುಲ್‌ನನ್ನು ಅಡ್ಡಾದಿಡ್ಡಿ ಕಾಲೇಜಿನ ತುಂಬ ಹುಚ್ಚು ನಾಯಿಗೆ ಓಡುಸಾಡಿ ಹೊಡೆದಂತೆ ಹೊಡೆಯುತ್ತಿದ್ದನು.
ಸಮಯ ಓಡುತ್ತಿತ್ತು.
ರವಿಯ ತಂಗಿ ರಜನಿ ತನ್ನ ಎದೆ ಮೇಲಿನ ಬಟ್ಟೆ ಹರಿದಿದ್ದರಿಂದ ಎರಡು ಕೈಗಳು ಅಡ್ಡವಾಗಿ ಹಿಡಿದುಕೊಂಡು ಅಲ್ಲಿ ನಿಂತಿದ್ದಳು.
ಅವಳ ಗೆಳತಿಯರು ಅವಳತ್ತ ಆಗಮಿಸಿದರು.
***********
ಮತ್ತೇರಿಸುವ ರೋಚಕ ದೃಶ್ಯ!
ಕಡುಕಪ್ಪು ಬಣ್ಣದ ಉಬ್ಬು ಹಲ್ಲಿನ ವ್ಯಕ್ತಿ ಅಂದದ ಮುಖದ ಗುಲಾಬಿ ಹೂವಿನಂತಿದ್ದ ಆ ಚೆಲುವಿಯ ಎದೆಯಲ್ಲಿ ಮುಖ ಇರಿಸಿ ಆನಂದ ಅನುಭವಿಸುತ್ತಿದ್ದನು.
ಆ ದೃಶ್ಯವನ್ನು ಕಂಡ
ರವಿಯ ಮುಖದ ರೀತಿ ಬದಲಾಗಲಾರಂಭಿಸಿತು.
ಪ್ರಪಂಚ ಪ್ರಳಯ ಆಗಿ ಹೋದಂತೆ ಭಾಸವಾಗುತ್ತಿತ್ತು ರವಿಗೆ.
ಆವಳು… ರವಿಯ ಪ್ರಿಯತಮೆ. ನೋಡಲಾಗುತ್ತಿಲ್ಲ ಅವನಿಗೆ ಒಳಗಿನ ದೃಶ್ಯ.
ಎಂತಹ ಕಚಡ ಹೆಣ್ಣು
ಅವಳು.. ಅವಳು ಹೆಣ್ಣಲ್ಲ, ಹಸಿದ ಹೆಣ್ಣು ನಾಯಿ ಅವಳು.
ಕಾಮ ಪಿಶಾಚಿ ಅವಳು.
ಈ ಕಾಮ ಮೃಗವನ್ನು ನಂಬಿ… ಇವಳೇ ನನ್ನ ಪ್ರಾಣ ಅಂದುಕೊಂಡಿದ್ದೇನಲ್ಲ ನಾನು. ಅಯ್ಯೋ… ಎಂತಹ ಹೊಲಸು ಹೆಣ್ಣು ಇವಳು!
ಈ ಪ್ರಪಂಚದಲ್ಲಿರುವ ಎಲ್ಲ ಹೆಣ್ಣುಗಳು ಇವಳಂತೆ ಆದರೆ ನನ್ನಂತಹವರ ಬಾಳಿನ ಗತಿ ಏನು…!?
ಛೀ… ಧಿಕ್ಕಾರ ಇರಲಿ ಇವಳಂಥ ಹೊಲಸು ಹೆಣ್ಣುಗಳಿಗೆ!
ಅವನ ಹೃದಯ ಕೆಲಕ್ಷಣ ನಿಂತಂತಾಗಿ ದಢಾರನೆ ನೆಲಕ್ಕೆ ಬಿದ್ದು ಬಿಟ್ಟನು ರವಿ.
*********
ಫ್ಯಾನಿಗೆ ನೇಣು ಹಾಕಿಕೊಂಡು ಜೋತು ಬಿದ್ದ ತನ್ನ ತಂಗಿಯ ಹೆಣವನ್ನು ಕಂಡು ರವಿ-
“ರಜನಿ”ಎಂದು ಕೆಟ್ಟ ಸ್ವರದಲ್ಲಿ ಅರಚಿಕೊಂಡನು.
ಅವನಿಗೆ ಅಲ್ಲಿ ಅದನ್ನು ಕಂಡಿತು
ಅವನು ಅಲ್ಲಿ ಬಿದ್ದಿರುವ ಅದನ್ನು ಕಂಡು ಎತ್ತಿಕೊಂಡು ನೋಡಿದನು.
ರಜನಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ಸಮಯದ ಮುಂಚೆ ಅದನ್ನು ಬರೆದಿದ್ದಳು.
ರವಿ ಪತ್ರ ಓದತೊಡಗಿದನು.
*ಪತ್ರದಲ್ಲಿ-*
‘ಅಣ್ಣ… ನನ್ನ ಪ್ರೀತಿಯ ಅಣ್ಣ, ನಿನ್ನ ಮುದ್ದು ತಂಗಿಯ ಬಾಳಿನಲ್ಲಿ ವಿಧಿ ಎಲ್ಲಾಟವಾಡಿ ಬಲಿ ತೆಗೆದುಕೊಂಡಿತು ಅಂತ ತಿಳಿದು ನಿನಗೆ ಆಘಾತವಾಗದೆ
ಇರಲಾರದು
; ನನ್ನನ್ನು ಕ್ಷಮಿಸು ಅಣ್ಣ. ರಿಲ್ಯಾಕ್ಸ್ ಮೈ ಡಿಯರ್ ಬ್ರದರ್! ಅಣ್ಣ… ನನ್ನ ಕಥೆ ಇಷ್ಟೇ ಬರೆದಿತ್ತೇನೋ. ಅದು ಈಗ ಈ ರೀತಿ ಮುಗಿದು ಹೋಯಿತು.ಆ ರಾಕ್ಷಸ ರಾಹುಲ್ ನನ್ನ ಬಾಳಿನ ಜೊತೆ ಚೆಲ್ಲಾಟವಾಡಿದ. ಅದಕ್ಕೆ ನಾನು ಈ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಣ್ಣ ನೀನು, ನನ್ನ ತಂಗಿ ಹೀಗೆ ಬಾಳಬೇಕು ಹಾಗೆ ಬಾಳಬೇಕು ಅಂತ ಏನೆಲ್ಲ ಹೇಳುತ್ತಿದ್ದಿ , ಆದರೆ ನನ್ನ ಹಣೆಬರಹದಲ್ಲಿ ಇಷ್ಟೇ ಬರೆದಿತ್ತೇನೋ ಅದು ಈಗ ಮುಗಿದು ಹೋಯಿತು. ನನ್ನನ್ನು ಕ್ಷಮಿಸು ಅಣ್ಣ.ಅಣ್ಣ… ನಿನಗೆ ಇನ್ನೊಂದು ಮುಖ್ಯವಾದ ವಿಷಯ ಗೊತ್ತಾ? ನೀನು ಪ್ರೀತಿಸುತ್ತಿರುವ ಹೆಣ್ಣು… ಅವಳು ಹೆಣ್ಣಲ್ಲ! ರಾಕ್ಷಸಿ ಅವಳು!! ಅವಳು ನಿನ್ನನ್ನು ಪ್ರೀತಿಸತ್ತಿಲ್ಲ ಅಣ್ಣ. ಆ ದುಷ್ಟ ರಾಹುಲ್ ತನ್ನ ಸೇಡು ತೀರಿಸಿಕೊಳ್ಳಲ್ಲೆಂದು ಸಂಚು ಮಾಡಿದ. ಅವನ ಸಹೋದರ ಸೊಸೆಯಾದ ಸೌಂದರ್ಯ, ಅವಳು ನಿನ್ನನ್ನು ಪ್ರೀತಿಸುವಂತೆ ನಾಟಕವಾಡುತ್ತಾ ನನ್ನ ಮತ್ತು ನಿನ್ನ ಸ್ನೇಹ ಬೆಳೆಸಿದಳು. ಇವತ್ತು ನನ್ನನ್ನು ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆ ಕಾಮುಕ ರಾಹುಲ್ ನನ್ನನ್ನು ಬಲತ್ಕರಿಸಿ ಸೇಡು ತೀರಿಸಿಕೊಂಡ….ಇದೇ ಅಣ್ಣ, ನನ್ನ ಬದುಕಿನಲ್ಲಿ ನಡೆದ ಅಸಹ್ಯಕಾರಿ ದುರಂತ. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು ಅಣ್ಣ… ಕ್ಷಮಿಸ್ತೀಯಾ? ನಿನಗೆ ನೋವು – ನಿರಾಸೆ ದುಃಖವನ್ನುಂಟು ಮಾಡಿ ನಿನ್ನನ್ನು ಬಿಟ್ಟು ನಿನ್ನಿಂದ ತುಂಬಾ ದೂರ ಹೊರಟು ಹೋಗುತ್ತಿರುವ ನಿನ್ನ ಮುದ್ದು ತಂಗಿ
– ರಜನಿ ‘
ಅವನ ಕೈಯಲ್ಲಿದ್ದ ಪತ್ರ ಕೆಳ ಜಾರಿತು.
ಒತ್ತರಿಸಿ ಬರುತ್ತಿದ್ದ ದುಃಖ ತಡೆದುಕೊಳ್ಳಲಾಗದೆ ರಜನಿ ಎಂದು ಅಳುತ್ತಾ ಫ್ಯಾನಿಗೆ ಜ್ಯೋತಿ ಬಿದ್ದ ತನ್ನ ತಂಗಿಯ ಹೆಣಕ್ಕೆ ಅಪ್ಪಿಕೊಂಡನು ರವಿ.
ನನ್ನ ತಂಗಿಯನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡ ಆ ಕಚಡ ರಾಹುಲ್ ಮತ್ತು ಅವಳು ಬದುಕಿರಬಾರದು.
ನಾನು ಬಿಡಲ್ಲ.
ಆ ಪಾಪಿಗಳ ದೇಹ ಕತ್ತರಿಸಿ ಬಿಸಾಡುತ್ತೇನೆ.
ರವಿ ಕೋಪ – ಆವೇಷದಿಂದ ಅವರಿಬ್ಬರ ದೇಹ ಉಡಿಸ್ ಮಾಡುವ ಇರಾದೆಯಿಂದ ಕೈಯಲ್ಲಿ ಉದ್ದನೆಯ ಕತ್ತಿ ಹಿಡಿದು ಅವರುಗಳತ್ತ ಬರುತ್ತಿದ್ದನು.
ಆದರೆ ಆಗ ಅವನಿಗೆ ಅಲ್ಲಿ ಆಶ್ಚರ್ಯ ಒಂದು ಕಾದಿತ್ತು.
“ರಾಮ್ ನಾಮ್ ಸತ್ಯ”ಎಂದು ಹೇಳುತ್ತಾ ರಾಹುಲ್ ನ ಶವ ಎತ್ತಿಕೊಂಡು ಸ್ಮಶಾನದತ್ತ ಹೋಗುತ್ತಿದ್ದರು.
ಅರೆ…ಈ ರಾಹುಲ್ ಹೇಗೆ ಸತ್ತ?
“ಕುಡಿತದ ಮತ್ತಿನಲ್ಲಿ ಕಾರು ಡ್ರೈವ್ ಮಾಡಿಕೊಂಡು ಬರುತ್ತಿರುವಾಗ ಆಕ್ಸಿಡೆಂಟ್ ನಲ್ಲಿ ರಾಹುಲ್ ಮತ್ತು ಅವನ ತಂದೆ ಇಬ್ಬರೂ ಸತ್ತಿದ್ದಾರೆ”ಎಂದು ತಿಳಿದು ಬಂದಿತ್ತು ರವಿಗೆ.
ರವಿ ಇನ್ನುಳಿದ ಅವಳನ್ನು ಮುಗಿಸುವುದಕ್ಕಾಗಿ ಅವಳ ಬಂಗ್ಲೆಗೆ ಬಂದಿದ್ದನು.
ಆದರೆ ಅವಳು ಅಲ್ಲಿ ಇರಲಿಲ್ಲ.
ಕೆಲ ದಿನಗಳಿಂದ ಆ ಬಂಗಲೆಯಲ್ಲಿ ಯಾರೂ ಸಹ ವಾಸ ಮಾಡುತ್ತಿಲ್ಲವೆಂದು ತಿಳಿದು ಬಂದಿತ್ತು.
ಅವಳು ಎಲ್ಲಿ ಹೋದಳು ಎಂದು ತಿಳಿಯಲಿಲ್ಲ ರವಿಗೆ.
ನಂತರದ ದಿನಗಳಲ್ಲಿ ರವಿ ತನ್ನ ಕಾಲೇಜು, ತನ್ನ ಊರು, ತನ್ನ ಸ್ನೇಹಿತ – ಸಂಬಂಧಿಕರೆಲ್ಲರನ್ನು ಬಿಟ್ಟು ಈ ಮಹಾನಗರಕ್ಕೆ ಬಂದಿದ್ದನು.
ಈ ನಗರದಲ್ಲಿ ಸಹ ರವಿಯ ಕಣ್ಣು ಮುಂದೆ ಕೆಲವು ಕೊಳಕು ಘಟನೆಗಳು ನಡೆದು ಈ ಪ್ರೀತಿ ಪ್ರೇಮ ಮತ್ತು ಹೆಣ್ಣನ ಬಗ್ಗೆ ದ್ವೇಷ ಉಂಟುಮಾಡುವಂತೆ ಪರಿಣಾಮ ಬೀರಿತು.
ರವಿ ತನ್ನ ಬದುಕಿನಲ್ಲಿ ನಡೆದ ಆ ಕಥೆ ಹೇಳಿ ಮುಗಿಸಿದನು.
**********
ರವಿಯ ಕಥೆಯನ್ನು ಕೇಳಿದ್ದ ಕೃಷ್ಣ-
“ರವಿ… ನಿನ್ನ ದುರಂತ ಬದುಕಿನ ಕಥೆ ಕೇಳಿ ನನಗನಿಸುತ್ತಿದೆ ನಿಜಕ್ಕೂ ಅವಳೊಂದು ಕೆಟ್ಟ ಹೆಣ್ಣು ಅಂತ. ನನ್ನ ಸ್ನೇಹಿತನ ದುರಂತ ಬಾಳಿಗಾಗಿ ನಾನು ವಿಷಾದಿಸುತ್ತೇನೆ. ಈ ಪ್ರೀತಿ ಪ್ರೇಮ ಅನ್ನೋದನ್ನು ಮರೆಯಲು ಪ್ರಯತ್ನಿಸುತ್ತೇನೆ. ಆದರೆ ನಿನ್ನ ಹಾಗೆ ದ್ವೇಷಿಸಲಾರೆ. ಯಾಕೆಂದ್ರೆ , ಈ ಪ್ರಪಂಚದಲ್ಲಿರುವ ಎಲ್ಲಾ ಹೆಣ್ಣುಗಳು ನಿನಗೆ ಮೋಸ ಮಾಡಿರುವ ಆ ಮೋಸಗಾತಿ ಹೆಣ್ಣಿನಂತೆ ಇರಲಾರರು ರವಿ”ಎಂದು ಹೇಳಿದನು.
ರವಿ ಸಿಗರೇಟ್ ಹತ್ತಿಸಿಕೊಂಡನು.
*************************
ಮೂರು
*************************
ಸೌ೦ದರ್ಯ ತನ್ನ ಗೆಳತಿಯರ ಜೊತೆ ಸೇರಿ ಮಾತಾಡುತ್ತ ನಿಂತಿದ್ದಳು.
ಆಗ ಹಿಂದಿನಿಂದ ಬಂದ ರವಿ- “ಏಯ್, ನಿನಗೆ ಅದಷ್ಟೇ ಕೊಬ್ಬು , ನನ್ನ ಸ್ನೇಹಿತ ನಿನಗೆ ‘ಐ ಲವ್ ಯೂ’ ಅಂತ ಹೇಳಿದಕ್ಕೆ ಸಾಯುವ ಹಾಗೆ ಹೊಡೆಸ್ತೀಯಾ?” ಎನ್ನುತ್ತಾ ಬಂದು ಕೋಪದಿಂದ ಅವಳ ತೋಳನ್ನು ಹಿಡಿದು ಜಗ್ಗಿದನು. ಗಾಬರಿಯಿಂದ ಬೆಚ್ಚಿ ಹಿಂದೆ ಸರಿದಾಗ ಕಂಡಿತು ಅವಳ ಮುಖ!
ಅದೇಕೋ ಅವರಿಬ್ಬರೂ ಬೆಚ್ಚಿಬಿದ್ದರು!
ಅವಳ ಮುಖ ಚಹರೆ ಬದಲಾಯಿತು.
“ರ… ರವಿ” ಎಂಬ ಆಶ್ಚರ್ಯದ ಉದ್ಗಾರ ಬಂದಿತು ಅವಳ ಬಾಯಿಂದ.
ರವಿ ಕೋಪ ಮತ್ತು ತಿರಸ್ಕಾರದಿಂದ-
“ನೀನು… ನೀನು ಬದುಕಿದ್ದೀಯ?”
ಸೌಂದರ್ಯ ತನ್ನ ಮುಖ ತೋರಿಸಲಾಗದೆ ಅಲ್ಲಿಂದ ಅಳುತ್ತ ತನ್ನ ಕಾರಿನತ್ತ ಓಡಿ ಬಂದು ಕಾರು ಸ್ಟಾರ್ಟ್ ಮಾಡಿಕೊಂಡು ಹೊರಟುಹೋಗಿದ್ದಳು.
*********
ಅದು ಸೌಂದರ್ಯಳ ಬಂಗಲೆ !
ಸಮಯ ರಾತ್ರಿ ಹನ್ನೊಂದು ಗಂಟೆಯಾಗಿತ್ತು.
ರವಿ ದಮ್ ಹೊಡೆಯುತ್ತ ಅಲ್ಲಿ ನಿಂತಿದ್ದನು.
‘ನನ್ನ ಬಾಳು ಬರಡಾಗಲು ಕಾರಣಳಾದ ಅವಳು ಬದುಕಿರಬಾರದು. ಇವತ್ತು ನಿನ್ನ ಕಥೆ ಮುಗಿಸುತ್ತೇನೆ’. ಅಂದುಕೊಳ್ಳುತ್ತಾ ರವಿ ಸೌಂದರ್ಯಳ ಬೆಡ್ ರೂಮ್ ಗೆ ನುಗ್ಗಿದನು.
ಸೌಂದರ್ಯ… ಸೌಂದರ್ಯ ಅದೇಕೊ ಮಂಚದ ಕೆಳಗೆ ಬಿದ್ದುಕೊಂಡಿದ್ದಳು.
ರವಿಗೆ ತುಸು ಆಶ್ಚರ್ಯವಾಯಿತು.
‘ಅರೆ… ಇದೇನಿದು, ಇವಳು ಈ ರೀತಿ ಯಾಕೆ ಕೆಳಗೆ ಬಿದ್ದುಕೊಂಡಿದ್ದಾಳೆ’ ಎಂದುಕೊಳ್ಳುತ್ತಾ ತನ್ನ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ನೈಫ್ ಹೊರ ತೆಗೆದು ಅವಳ ಕಥೆ ಮುಗಿಸುವ ಇರಾದೆಯಿಂದ ಹತ್ತಿರ ಬಂದನು.
ಅಲ್ಲಿನ ದೃಶ್ಯವನ್ನು ಕಂಡು ಭಯ – ಗಾಬರಿಯಿಂದ ಬೆಚ್ಚಿಬಿದ್ದನು.
ಸೌಂದರ್ಯಳ ಕಣ್ಣುಗಳು ವಿಕಾರವಾಗಿ ತೆರೆದುಕೊಂಡಿವೆ.
ಅವಳು… ಅವಳು ಅಲ್ಲಿ ಬಿದ್ದಿದ್ದಾಳೆ.
ಅವಳು ಉಸಿರಾಡುತ್ತಿಲ್ಲ.
ಅವಳ ಕಥೆ ಮುಗಿದಿದೆ.
ಇದು… ಇದ್ಹೇಗಾಯಿತು ?
ರವಿಗೆ ಅವಳ ಪಕ್ಕದಲ್ಲಿ ಬಿದ್ದಿದ್ದ ಅದನ್ನು ಕಂಡಿತು.
ವಿಷದ ಬಾಟಲಿ ಮತ್ತು ಡೈರಿ.
ರವಿ ನಡಗುವ ಕೈಗಳಿಂದ ಆ ಡೈರಿ ಎತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದನು.
*********
ಅದು ರವಿಯ ಕೋಣೆ.
‘ಸೌಂದರ್ಯ ಯಾಕೆ ಸತ್ತಳು ?
ಹೇಗೆ ಸತ್ತಳು ?’ ಎಂದು ತಿಳಿಯಲು ರವಿ ವಿಪರೀತ ವಿಸ್ಕಿ ಕುಡಿದು ಸಿಗರೇಟ್ ಸೇದುತ್ತ ಅವಳು ಬರೆದ ಆ ಡೈರಿ ಓದಲಾರಂಭಿಸಿದನು.
ಆ ಡೈರಿಯಿಂದ ಊಹೆಗೆ ನಿಲುಕದ ತೆರೆಮರೆಯ ರಹಸ್ಯ ಅನಾವರಣಗೊಳ್ಳುವುದರಲ್ಲಿತ್ತು.
ರವಿ ಡೈರಿ ಓದುತ್ತಿದ್ದಾನೆ.
ಡೈರಿಯಲ್ಲಿ…
‘ ನಾನಿರುವುದು ಗೋಮುಖವ್ಯಾಘ್ರ ಲೋಕದಲ್ಲಿ…!
ಆ ವ್ಯಾಘ್ರ ಪ್ರಪಂಚದಲ್ಲಿ ನನ್ನ ಮಾವ ಶಂಕರ ಮತ್ತು ಅವರ ಮಗ ರಾಹುಲ ಎಂಬ
ಇಬ್ಬರು ಕಾಮುಕ ರಾಕ್ಷಸರಿದ್ದಾರೆ.
ಅವರಗಳ ನಡುವೆ ನಾನು…! ಚಿಕ್ಕಂದಿನಲ್ಲಿ
ತಂದೆ-ತಾಯಿಗಳನ್ನು ಕಳೆದುಕೊಂಡಿರುವ ನಾನು, ಆಗ ಕೆಸರಿನ ಕಮಲವಾಗಿದ್ದೆ.ನಂತರ… ಆ ಕಾಮುಕ ರಾಕ್ಷಸರಿಂದ ನನ್ನ ಬಾಳು ಹೊಲಸಾಗಲಾರಂಭಿಸಿತು. ತಂದೆ-ಮಗ
ಅವರಿಬ್ಬರೂ ಮನುಷ್ಯರಲ್ಲ!
ಅವರುಗಳು… ಹೊಲಸು ಹಂದಿಗಳು!! ತಂದೆ-ಮಗ ಕಂಠ ಪೂರ್ತಿ ಹೆಂಡ ಕುಡಿದು ಅಮಲಿನಲ್ಲಿ ಪ್ರತಿ ರಾತ್ರಿ ನನ್ನ ಬಾಳಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ನನಗೆ ಅಸಹ್ಯ-ತಿರಸ್ಕಾರ ಉಂಟಾಗಿ ನಿರಾಕರಿಸದರೆ, ಕುಡಿತದ ಮತ್ತಿನಲ್ಲಿ ನರಕ ತೋರಿಸುತ್ತಾರೆ. ಮಂಚಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡುತ್ತ ತಂದೆ ನಂತರ ಮಗ ವಿಕೃತವಾಗಿ ಲೈಂಗಿಕ ಅತ್ಯಾಚಾರ ನಡೆಸುತ್ತಾರೆ.ನಾನು… ಆ ಕಾಮುಕ ರಾಕ್ಷಸರ ಕಾಮದಾಟದ ಕೈಗೊಂಬೆಯಾಗಿದ್ದೇನೆ. ಅಯ್ಯೋ… ನನ್ನದು ಎಂತಹ ಹೊಲಸು ಬದುಕು!
ಇದು ನನ್ನದೊಂದು ಬದುಕೇ !
ಈ ನನ್ನ ಹೊಲಸು ಬಾಳು ಏತಕ್ಕಾಗಿ?
ಯಾರಿಗಾಗಿ?
ಈ ಪ್ರಪಂಚದಲ್ಲಿ ನನ್ನವರು ಅನ್ನುವರು ಯಾರಿದ್ದಾರೆ ನನಗೆ ? ಓ ದೇವರೆ, ನಾನು ಯಾವ ಜನ್ಮದಲ್ಲಿ ಪಾಪ ಮಾಡಿದ್ದೇನೆ ಅಂತ ಈ ಜನ್ಮದಲ್ಲಿ ನನ್ನನ್ನು ಈ ರೀತಿ…!? ‘
ಮತ್ತೊಂದು ಪುಟದಲ್ಲಿ.
ಆ ದಿನ ಕಾಲೇಜಿನಲ್ಲಿ ನನ್ನ ಕುರೂಪಿ ಮಾವ ರಾಹುಲ್ ರಜನಿಯನ್ನು ಬಲತ್ಕರಿಸಲು ನೋಡಿದ.ರಜನಿಯ ಅಣ್ಣ ರವಿ ಬಂದು ತನ್ನ ತಂಗಿಯ ಶೀಲ ಕಾಪಾಡಿದ. ಕಾಲೇಜಿನ ತುಂಬ ಓಡಾಡಿಸಿ ಹುಚ್ಚು ನಾಯಿಗೆ ಹೊಡೆದಂತೆ ಹೊಡೆದ.ಇದರಿಂದ ಕೋಪಗೊಂಡ ರಾಹುಲ್ ಸೇಡು ತೀರಿಸಿಕೊಳ್ಳಲು ಅದೇನೋ ಸಂಚು ಮಾಡಿದ್ದಾನೆ.
ನಾನು… ನಾನು ನಾಟಕಿಯವಾಗಿ ರವಿಯನ್ನು ಪ್ರೀತಿಸಿ, ಅವನ ಬಾಳು ಹಾಳು ಮಾಡಬೆಕಂತೆ.
‘ಅದು ನನ್ನಿಂದ ಸಾಧ್ಯವಿಲ್ಲ’ಎಂದು ನಿರಾಕರಿಸಿದ್ದಕ್ಕೆ ನನ್ನನ್ನು ಮಂಚಕ್ಕೆ ಕಟ್ಟಿಹಾಕಿ ವಿವಸ್ತ್ರಗೊಳಿಸಿ…ಅಯ್ಯೋ…ಹೆಂಥ ಕಾಮುಕ ಮೃಗ ಅವನು!
ಅವನು ನೀಡಿದ ಆ ಚಿತ್ರಹಿಂಸೆ ನೆನಪಾಗುತ್ತಿದ್ದರೆ ನನ್ನ ಮೈಯಲ್ಲಿ ನಡುಕ ಉಂಟಾಗಿತ್ತದೆ. ಅವನು ಹೇಳಿದ ಹಾಗೆ ಕೇಳಲಿಲ್ಲ. ಅಂದರೆ ಪುನಃ ಚಿತ್ರಹಿಂಸೆ ನೀಡುತ್ತಾನಂತೆ. ಅವನು ಕೊಡುವ ಆ ಚಿತ್ರಹಿಂಸೆಯನ್ನು ನಾನು… ನಾನು ಸಹಿಸಿಕೊಳ್ಳಲಾರೆ.
ಡೈರಿಯ ಬೇರೊಂದು ಪುಟದಲ್ಲಿ.
ನನ್ನ ಮಾವ ಹೇಳಿದಂತೆ ನಾನು ರವಿಯನ್ನು ಪ್ರೀತಿಸುತ್ತಿದ್ದೇನೆ. ರವಿ ತುಂಬ ಒಳ್ಳೆಯವನು, ಪ್ರೀತಿ ಅಂದರೇನು ಅಂತ ನನಗೆ ತೋರಿಸಿಕೊಟ್ಟು ನನ್ನ ಮೇಲೆ ತನ್ನ ಪ್ರಾಣವನ್ನೆ ಇರಿಸಿಕೊಂಡಿದ್ದಾನೆ ರವಿ. ನಾನೂ ಸಹ ರವಿಯನ್ನು ತುಂಬ ಪ್ರೀತಿಸುತ್ತಿದ್ದೇನೆ.ನಾನು ರವಿಯನ್ನು ಪ್ರೀತಿಸುತ್ತಿರುವುದು ಕೇವಲ ನಾಟಕ ಅಲ್ಲ. ನಿಜಕ್ಕೂ ನನ್ನ ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುತ್ತಿದ್ದೇನೆ ನಾನು… ನಾನು ರವಿಯನ್ನು ಮರೆಯಲು ಸಾಧ್ಯವಿಲ್ಲ!
ಆದರೆ… ಇದ್ದೆಗೆ ಸಾಧ್ಯ?
ಇಲ್ಲ… ಇದು ಖಂಡಿತ ಸಾಧ್ಯ ಇಲ್ಲ. ಇಲ್ಲ ನಾನು ರವಿಗೆ ಮೋಸ ಮಾಡಲಾರೆ.ರವಿಗೆ ನನ್ನ ಕೊಳಕು ಬದುಕಿನ ಹಿನ್ನೆಲೆ ಗೊತ್ತಾದರೆ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಾನೆ… ಪಾಪಿಯಾದ ನನಗೆ ಯಾರ ಪ್ರೀತಿ ಸಹ ಸಿಗಲಾರದು.
ಪ್ರೀತಿ ಅನ್ನುವುದು ಈ ನನ್ನ ಬಾಳಿನಲ್ಲಿ ಇಲ್ಲವೇ ಇಲ್ಲ…
ಡೈರಿಯ ಕೊನೆಯ ಹಿಂದಿನ ಪುಟದಲ್ಲಿ.
ನನ್ನ ಕೊಳಕು ಬದುಕಿನ ಹಿನ್ನೆಲೆ ನನ್ನ ಸ್ನೇಹಿತೆ ರಜನಿ ಬಳಿ ಹೇಳಿಕೊಂಡು ಕೊಂಚಮಟ್ಟಿಗಾದರೂ ಮನಸ್ಸು ಹಗುರ ಮಾಡಿಕೊಳ್ಳೋಣ ಅಂತ ತೋಟದ ಬಂಗಲೆಗೆ ಕರೆದುಕೊಂಡು ಬಂದಿದ್ದೆ. ರಜನಿಯ ದುರಾದೃಷ್ಟಕ್ಕಾಗಿ ಅದೇ ಸಮಯದಲ್ಲಿ ಕಾರಿನಲ್ಲಿ ತೋಟದ ಮನೆಗೆ ಬಂದ ರಾಹುಲ್ ನನ್ನನ್ನು ಬೇರೆ ಕೋಣೆ ಒಂದರಲ್ಲಿ ಬಂಧಿಸಿ ರಜನಿಯನ್ನು ಬಲಾತ್ಕಾರ ಮಾಡಿದ. ಶೀಲ ಕಳೆದುಕೊಂಡ ರಜನಿ ಆತ್ಮಹತ್ಯೆ ಮಾಡಿಕೊಂಡಳು…
ಪ್ರತಿ ರಾತ್ರಿ ಆ ಕಾಮುಕ ರಾಕ್ಷಸ ಹಂದಿಗಳಿಗೆ ಮೈ ಅರ್ಪಿಸುತ್ತ ನಾನೇಕೆ ಬದುಕಿರಬೇಕು. ನಾನೂ ಸಹ ರಜನಿಯಂತೆ ಆತ್ಮಹತ್ಯೆ ಮಾಡಿಕೊಂಡು ಸಾಯಬೇಕು.ನಾನು ಸಾಯುತ್ತೇನೆ…! ಇಲ್ಲ… ಈಗಲೇ ನಾನು ಸಾಯಲಾರೆ!ಇನ್ನು ಮುಂದೆ ಆ ಕಾಮುಕ ರಾಕ್ಷಸರಿಗೆ ರಜನಿ ಮತ್ತು ನನ್ನಂಥ ಬೇರೆ ಯಾವ ಹೆಣ್ಣು ಸಹ ಆ ಕಾಮ ಮೃಗಿಗಳಿಗೆ ಬಲಿಯಾಗಬಾರದು.
ಅದಕ್ಕೆ ಆ ರಾಕ್ಷಸರು ಬದುಕಿರಬಾರದು..!. ಎಂದು ನಿರ್ಧರಿಸಿ ಆ ಕಾಮುಕರ ಕಥೆ ಮುಗಿಸಿದ್ದೇನೆ. ಆ ಗೋಮುಖವ್ಯಾಘ್ರ ಲೋಕ ನಾಶಗೊಳಿಸಿದ್ದೇನೆ. ಈಗ ನನ್ನದು ಸ್ವತಂತ್ರ ಲೋಕ…!
ಡೈರಿಯ ಕೊನೆ ಪುಟದಲ್ಲಿ
ಮೂರು ವರ್ಷಗಳ ನಂತರ ನಿನ್ನೆ ಕಾಲೇಜಿನಲ್ಲಿ ರವಿಯನ್ನು ಕಂಡಾಗ ಪುನಃ ನನಗೆ ಆ ಗೋಮುಖವ್ಯಾಘ್ರ ಲೋಕ ನೆನಪಾಯಿತು.ರವಿ… ನನ್ನಿಂದಾಗಿ ನಿನ್ನ ಬಾಳು ಬರಡಾಯಿತು ಅಂತ ತಿಳಿದು ನನಗೆ ತುಂಬ ದು:ಖ ಮತ್ತು ನೋವು ಉಂಟಾಯಿತು. ನೀನು , ನನ್ನ ಬಗ್ಗೆ ಅದೇನು ತಿಳಿದುಕೊಂಡಿದ್ದೀಯೋ ನನಗೆ ಗೊತ್ತಿಲ್ಲ.ಇದರಲ್ಲಿ ನನ್ನದೇನು ತಪ್ಪಿಲ್ಲ ರವಿ, ನಾನು ನಿನಗೆ ಯಾವುದೇ ರೀತಿ ಮೋಸ ಮಾಡಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸು ರವಿ…
ಆದು ವಿಧಿಯ ಚೆಲ್ಲಾಟ… ಕಾಮುಕರ ಅಟ್ಟಹಾಸ!
ಒಂದು ಕಾಲದಲ್ಲಿ ಆ ಗೋಮುಖ ವ್ಯಾಘ್ರ ಲೋಕದಲ್ಲಿ ಕಾಮುಕ ರಾಕ್ಷಸರ ನಡುವೆ ಇದ್ದ
ಸೌಂದರ್ಯ ಎಂಬ ಹುಟ್ಟು ಇನ್ನು ಇರಲಾರದು ರವಿ.ಸಾಧ್ಯವಾದರೆ ನನ್ನನ್ನು ದಯವಿಟ್ಟು ಕ್ಷಮಿಸು ರವಿ.ಗುಡ್ ಬೈ ರವಿ.
ನತದೃಷ್ಟೆ – ಸೌಂದರ್ಯ ‘
ಡೈರಿಯ ಬರಹ ಪೂರ್ಣಗೊಂಡಿತು.
ರವಿಗೆ ದು:ಖ ಉಕ್ಕಿ ಬಂದಿದ್ದರಿಂದ ಕಣ್ಣಂಚಿನಲ್ಲಿ ಕಂಬನಿ ಕಾಣಿಸಿಕೊಂಡಿತು.
‘ಅಯ್ಯೋ… ನಾನೆಂತಹ ಕಚಡ ಬಡ್ಡಿಮಗ, ನನ್ನಿಂದ ತುಂಬ ತಪ್ಪಾಯಿತು ಸೌಂದರ್ಯ.ನಿನ್ನಂಥ ಒಳ್ಳೆ ಹೆಣ್ಣನ್ನು ಅಪಾರ್ಥ ಮಾಡಿಕೊಂಡಿದ್ದೇನಲ್ಲ ನಾನು!ನಾನೆಂಥ ಪರಮಪಾಪಿ.ಈ ಪಾಪಿಯನ್ನು ನೀನು ಕ್ಷಮಿಸಬೇಕು ಸೌಂದರ್ಯ. ನನಗೆ… ನನಗೆ ಮುಸುಕಿದ ಆ *ಭ್ರಮೆ* ಯ ಪೊರೆ ಈಗ ಕಳಚಿತು ಸೌಂದರ್ಯ. ನನಗೆ ಈಗ ಅರ್ಥವಾಯಿತು ಸೌಂದರ್ಯ ಹೆಣ್ಣು ಮೋಸಗಾತಿ ಅಲ್ಲ…
ಬಾಳಿನ ಬೆಳಕು ಅವಳು. ಸಹನಾ ಮೂರ್ತಿ ಅವಳು. ಕ್ಷಮೆಯಾಧರಿತ್ರಿ… ಇತ್ಯಾದಿ ಅವಳು. ಆದರೆ ಈ ಕಾಮುಕ ಪ್ರಪಂಚದಲ್ಲಿ ಹೆಣ್ಣನ್ನು ಬರೀ ಕಾಮದ ದೃಷ್ಟಿಯಿಂದ ನೋಡುತ್ತಿದ್ದಾರೆ, ಕಾಡುತ್ತಿದ್ದಾರೆ ಕಾಮುಕ ರಾಕ್ಷಸರು.
ಈ ಕಚಡ ಪ್ರಪಂಚದಲ್ಲಿ ಗೋ ಮುಖದ ವ್ಯಾಘ್ರ ರಾಕ್ಷಸರು ತುಂಬಿದ್ದಾರೆ. ಇದು ವ್ಯಾಘ್ರ ಲೋಕ. ಹೆಣ್ಣು ಈ ಗೋಮುಖವ್ಯಾಘ್ರ ಲೋಕದ ಹೂವು, ‘ಗಂಡು’ ಎಂಬ – ದುಂಬಿ, ‘ಹೆಣ್ಣು’ ಎಂಬ ಸುಂದರ ಹೂವಿನ ಮಕರಂದ ಹೀರಿ ನಾಶಗೊಳಿಸುತ್ತಿದೆ.ಹೆಣ್ಣು ಎಂಬ ದೇವತೆ ಕಾಮುಕ ರಾಕ್ಷಸರ ನಡುವೆ ಸಿಲುಕಿ ತತ್ತರಿಸುತ್ತಿದ್ದಾಳೆ ಅಂತ ನನಗೆ ತುಂಬ ತಡವಾಗಿ ಅರ್ಥವಾಯಿತು ಸೌಂದರ್ಯ. ನಾನು… ನಾನು ಪಾಪಿ, ಕಚಡ, ನೀಚ, ಲೋಫರ್ ನಾನು!! ನನ್ನನ್ನು ಕ್ಷಮಿಸಿಬಿಡು ಸೌಂದರ್ಯ”ಎಂದು ದುಖಃ ಮತ್ತು ಪಶ್ಚತ್ತಾಪದಿಂದ ಹೇಳಿದನು ರವಿ.
ಸೌಂದರ್ಯಳ ಗೆಳತಿಯರಲ್ಲಿ ಕೆಲವರು ಅತಿಮ ಶ್ರದ್ಧಾಂಜಲಿ ಸಲ್ಲಿಸಿ ಹೊರಟು ಹೋಗಿದ್ದರು.
ಚಿತೆ ಉರಿಯುತ್ತಿತ್ತು.
ಗುಲಾಬಿ ಹೂವಿನಂತಿದ್ಥ ಸೌಂದರ್ಯಳ ದೇಹ ಈಗ ಬೆಂಕಿಯಲ್ಲಿ ಸುಟ್ಟು ಬೂದಿಯ ರೂಪಗೊಳ್ಳುತ್ತಿರುವುದನ್ನು ನೋಡುತ್ತಾ ರವಿ ಮತ್ತು ಕೃಷ್ಣ ಮಂಕಾಗಿ ನಿಂತಿದ್ದರು.
ಒತ್ತರಿಸಿ ಬರುತ್ತಿದ್ದ ದುಃಖ ತಡೆದುಕೊಳ್ಳಲಾಗದೆ ರವಿ ಕೃಷ್ಣನ ಎದೆಯಲ್ಲಿ ಮುಖ ಇರಿಸಿ
ಕಂಬನಿ ಮಿಡಿಯುತ್ತಿದ್ದನು.
ಕೃಷ್ಣ ಸಮಾಧಾನ ಹೇಳುತ್ತಿದ್ದನು. ಪಶ್ಚಿಮದಲ್ಲಿ
ಸೂರ್ಯ ಮುಳುಗತೊಡಗಿದನು.
– ಜಿ.ಎಲ್.ನಾಗೇಶ.
ಧನ್ನೂರ್ (ಆರ್) ಬಸವಕಲ್ಯಾಣ