Oplus_131072

ಭಾವೈಕ್ಯತೆಯ ಸಂಕೇತ ಮೆರೆದ ಹರಿನಾಥ ಮಹಾರಾಜ

– ಸಂಗಮೇಶ್ವರ ಎಸ್ ಮುರ್ಕೆ 

 

ಆಧ್ಯಾತ್ಮ ಪ್ರಪಂಚದಲ್ಲಿ ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಲ್ಲಿ ಸಾಧು ಸಂತರು ಋಷಿಮುನಿಗಳು ಹಾಕಿ ಕೊಟ್ಟಂಥ ಭವ್ಯ ಪರಂಪರೆಯನ್ನು ಇಂದಿಗೂ ಸಮಾಜ ಅನುಕರಣೆ ಮಾಡಿಕೊಂಡು ಬಂದಿದೆ.
ಒಂದು ಸಂವತ್ಸರದಲ್ಲಿ (ವರ್ಷದಲ್ಲಿ) 12 ಹುಣ್ಣಿಮೆಗಳು ಬರುತ್ತವೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆ ಇದೆ ಅದರಲ್ಲಿ ಕಾರ್ತಿಕ ಹುಣ್ಣಿಮೆ ಒಂದು.

ಕಲ್ಯಾಣ ನಾಡಿನ ಗಡಿಭಾಗದಲ್ಲಿ ಸೇರಿರುವ ಕಮಲನಗರ ತಾಲ್ಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಹಾಗೂ ಸರ್ವ ಧರ್ಮ ಸಮನ್ವಯ ತತ್ವವನ್ನು ಸಾರುತ್ತಿರುವ ಶ್ರೀ ಸದ್ಗುರು ಹರಿನಾಥ ಮಹಾರಾಜ ಮಂದಿರವು ತನ್ನದೇ ಆದ ಐತಿಹ್ಯ ಹೊಂದಿದೆ.

ಕ್ಷೇತ್ರದ ಇತಿಹಾಸ ಭಾರತದ ಮಧ್ಯ ಕಾಲಿನ ಇತಿಹಾಸದಲ್ಲಿ ನಾಥ ಪಥವು ಪ್ರಸಿದ್ಧಿಗೆ ಪಾತ್ರವಾಗಿತ್ತು. ಆ ನಾಥ ಪಂಥರಲ್ಲಿ ‘
ಮಚ್ಚೇಂದ್ರನಾಥ, ಗೋರಖನಾಥ, ಕಾನಿಫನಾಥ,ಜಾಲಿಂಧರ ನಾಥ,ಚರ್ಪಟಿನಾಥ,ನಾಗನಾಥ, ಭರ್ತರಿನಾಥ,ರೇವಣನಾಥ,ಗಹನಿನಾಥ ‘ ಎಂಬ ನವನಾಥರು ಹೆಸರುವಾಸಿಯಾಗಿದ್ದರು.

ಶಿವ ವಿಷ್ಣು ಬ್ರಹ್ಮ ಮೂರು ತತ್ವಗಳಲ್ಲಿ ದತ್ತಾತ್ರೇಯನ ಆರಾಧನೆಗೆ ಅಪಾರವಾದ ಭಕ್ತಿ ಉಳ್ಳವರಾಗಿದ್ದು , ಕಾಯಕ ಮತ್ತು ಸೇವೆಯ ಮಾರ್ಗವನ್ನು ತೋರಿಸಿ ಸುಂದರ ಬದುಕು ಕಟ್ಟಿಕೊಳ್ಳಲು ನೆರವಾದವರು ಅಂಥಹವರಲ್ಲಿ ಸಿಧ್ಧಿ ಪುರುಷರಾದ ಮಹಾನ್ ಸಾಧಕರಾದ ಶ್ರೀ ಹರಿನಾಥರು ಒಬ್ಬರು.

ಉತ್ತರ ಭಾರತದ ಉಜ್ಜಯಿನಿಯಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ಹೊಳೆಸಮುದ್ರ ಗ್ರಾಮಕ್ಕೆ ಬಂದು ಕುಟುಂಬ ಸಮೇತವಾಗಿ ಉಳಿದುಕೊಂಡರು. ಶರಣ ದಂಪತಿಗಳು ಈ ನೆಲದಲ್ಲಿ ನಡೆದಾಡಿದರು. ಇಲ್ಲಿರೊಂದು ಆಲದ ಮರದ ಕೆಳಗೆ 12 ವರ್ಷ ಪೂಜೆ ಮತ್ತು ಧ್ಯಾನ ಮಾಡಿ ಕಠಿಣ ತಪಸ್ಸು ಸಿದ್ದಿ ಸಾಧನೆ ಕೈಗೊಂಡರು.

ಇಂತಹ ಸದ್ಗುಣದ ಗಣಿಯಾದ ಶ್ರೀ ಹರಿನಾಥ ಮಹಾರಾಜರ ಧರ್ಮ ಪತ್ನಿ ಮಾತೆ ಸಖುಬಾಯಿ ಇವರು ತಮ್ಮ ಗುರುಗಳಾದ ಗಣೇಶನಾಥರ ಆಣತಿಯಂತೆ ಹೀಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ 36 ವರ್ಷಗಳವರೆಗೆ ತಪಸ್ಸನು ಆಚರಿಸಿ ಕೊಂಡುಕೊಂಡ ದಂಪತಿಗಳು, ಅಂದು ಜನರಲ್ಲಿ ಸದ್ಗುಣಗಳನ್ನು ಬಿತ್ತಿ ಎಲ್ಲರ ಅಂಧಕಾರವನ್ನು ಕಳೆಯಲು ಪ್ರಯತ್ನ ಪಟ್ಟವರು. ಇವರು ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು.

ಭಕ್ತರಿಗೆ ಸನ್ಮಾರ್ಗ ತೋರಿದ ಸಿದ್ದಿ ಪುರುಷರು. ಅಂದು ಹಿಂದೂಗಳ ಮೇಲೆ ಅನ್ಯ ಧರ್ಮೀಯರ ಸದ್ಬಾಳಿಕೆಯಿಂದ ಬೇಸತ್ತ ಸಂತ ಹರಿನಾಥರು ತಮ್ಮ ಕುಟುಂಬ ಸಮೇತ ಸೇರಿ ಕೊಂಡು ಜೀವಂತವಾಗಿರುವಾಗಲೇ ಜೀವಿತ ಸಮಾಧಿ ತೆಗೆದುಕೊಂಡರು. ಅಂದಿನ ಕಾಲದಲ್ಲಿ ಐದು ಜೀವಿಗಳ ಜೀವಂತ ಸಮಾಧಿಯೇ ಸಂಜೀವಿನಿ ಸಮಾಧಿಯಾಗಿದೆ.
೧ ಹರಿನಾಥರು ೨ ಸಖುಬಾಯಿ ೩ ಮಗ ಎರಡು ನಾಯಿಗಳು ಸೇರಿ ಒಟ್ಟು ಐದು ಜೀವಿಗಳು ಈ ಸ್ಥಾನಗಳಲ್ಲಿ ಜೀವಂತ ಸಮಾಧಿಯಾಗಿದುಂಟು.

ಮುಂದಿನ ಪ್ರೀತಿಯ ಶಿಷ್ಯರಾಗಿರುವ ಮಲ್ಲನಾಥಬಾಬಾ ಮಹಾರಾಜರು ಸಮಾಧಿ ಕಟ್ಟಿಸಿದರು.ಈ ಸಮಾಧಿ ಪೂರ್ವಾಭಿಮುಖವಾಗಿದ್ದು ಆಯಾತಾಕಾರದಲ್ಲಿದೆ.
ಸಮಾಧಿ ಗೋಡೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸೂರ್ಯದೇವ ಅಶ್ವಾರೋಹಿ ಸವಾರಿ ಮಾಡುತ್ತಿರುವ ಕುದುರೆಯ ರಥದ ಮೇಲೆ “ಸನ್ ೧೨೦೧ ಕಾರ್ತಿಕ ಪದ ಪ್ರತಿಪದಾ ಸಮಾಧಿಯ ತಳ ಪ್ರಾರಂಭದಲ್ಲಿ ಹರಿನಾಥರ ಶಿಷ್ಯ ಮಲ್ಲನಾಥಬಾಬಾ ಕಟ್ಟಿರುವ ಶಕೆ ೧೭೧೩ ವಿರೋಧಿ ನಾಮ ಸಂವಸ್ತರ ಶನಿವಾರ ಪ್ರಾರಂಭ ಮಾಡಲಾಗಿದೆ *”ಎಂದು ಉಲ್ಲೇಖವಿದೆ.

ದಕ್ಷಿಣ ಮತ್ತು ಉತ್ತರ ಗೋಡೆ ಇನ್ನೊಂದು ಪಟ್ಟಿಯಲ್ಲಿ ಗಂಡ ಬೇರುಂಡ ಕರ್ನಾಟಕ ಸರ್ಕಾರ ಪ್ರಸ್ತುತ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹೋಲುವಂಥ ಶಿಲ್ಪವಿದ್ದು, ಈ ಶೀಲ್ಪದಲ್ಲಿ ಗಂಡ ಬೇರುಂಡ ಪಕ್ಷಿಯು ತನ್ನ ಕೊಕ್ಕು ಮತ್ತು ಕಾಲುಗಳಲ್ಲಿ ಸಿಂಹ ಮತ್ತು ಆನೆಗಳನ್ನು ಹಿಡಿದು ಹಾರುತಿದೆ ಎನ್ನುವಂತೆ ಗೋಚರವಾಗುತ್ತದೆ. ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರ ಹಲವಾರು ರೀತಿಯ ವೀರ ಚಿತ್ರಗಳು ಕಾಣಸಿಗುತ್ತವೆ. ಈ ಚಿತ್ರಗಳು ಹೇಳುವ ಕಥೆಗಳು ಅಸಂಖ್ಯ ಇಂತಹ ಅದ್ಭುತ ಸುಕ್ಷೇತ್ರ ಹೊಳೆಸಮುದ್ರದ ಶ್ರೀ ಹರಿನಾಥ ಮಹಾರಾಜರ ಕ್ಷೇತ್ರವಾಗಿದೆ.

ಅಂತೆಯೇ ಇಂದಿಗೂ ಪಕ್ಕಾ ಕನ್ನಡ ಪ್ರದೇಶವಾಗಿರುವುದು ಸತ್ಯಕ್ಕೆ ದೂರಿಲ್ಲ! ಇಲ್ಲಿಯೂ ಕನ್ನಡ ಡಿಂಡಿಮವ ಬಾರಿಸಿರುವುದು ಎಂದು ಹೇಳುವಲ್ಲಿ ಎರಡು ಮಾತಿಲ್ಲ;

ಕೆಳದಿ ಸಂಸ್ಥಾನ, ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸರ್ಕಾರ, ಕರ್ನಾಟಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹಲವು ಶತಮಾನಗಳ ಹಿಂದೆಯೇ ಶ್ರೀ ಹರಿನಾಥ ಮಹಾರಾಜರ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ಕಂಡು ಕೊಳ್ಳಬಹುದು.

ಕುದುರೆ ಒಂಟೆ ಅಶ್ವಾರೋಹಿ ಸೈನಿಕರು ಹೆಡೆಯುಳ ನಾಗದೇವತೆ ಚಿತ್ರಗಳಿವೆ. ಸಮಾಧಿ ಮೇಲ್ಬಾಗದಲ್ಲಿ ಮಹೆಬೂಬ್ ಸುಭಾನಿ ಸಂಕೇತ ಹೊಂದಿರುವ ಕರಿ ಶಿಲೆಯಲ್ಲಿ ನಿರ್ಮಿಸಿದ ಚಪಟೆ ಗಾತ್ರ ಕಲ್ಲು ಇದೆ.ಈ ಸ್ಮಾರಕ ಮೇಲೆ ಹಿಂದೂ- ಮುಸ್ಲಿಂ ಭಕ್ತರು ಹಸಿರು ಬಣ್ಣದ ಹೊದಿಕೆ (ಗಲಫ್ )ಹಾಕಿ ಭಕ್ತಿ ಸಮರ್ಪಿಸುವುದು ವಿಶೇಷ.
ಇದನ್ನು ಅಂದಿನ ಕಾಲದಲ್ಲಿ ಬೀದರ ಕೋಟಿಯ ಪುರುಷ ಕಟ್ಟೆಯ ಶಿಲೆ ತಂದಿರುವುದು ಶಿಲೆಯಾಗಿದೆ.

ಹರಿನಾಥ ಮಹಾರಾಜರ ಶಿಷ್ಯನಾಗಿರುವ ಮಲ್ಲನಾಥ ಬಾಬಾ ತಮ್ಮ ಗುರುಗಳ ಸವಿ ನೆನಪಿಗಾಗಿ ಇಂತಹ ಒಂದು ಎತ್ತರದ ಆಕಾರದಲ್ಲಿ ಸಮಾಧಿ ಕಟ್ಟಿದ್ದು ನಾದ ಪಂಥದ ಸಮಾಧಿ ರೂಪ ಹೊಂದಿದೆ. ಒಟ್ಟಾರೆ ಈ ಸಂಜೀವಿನಿ ಸಮಾಧಿಯು ಭವ್ಯವಾಗಿದ್ದು, ಈ ಕ್ಷೇತ್ರವು ಪೂಜ್ಯ ಸ್ಥಾನ ಪಡೆದಿದೆಲ್ಲವೇ ಈ ಗ್ರಾಮದ ಗ್ರಾಮ ದೇವತೆ ಆರಾಧ್ಯ ದೇವತೆಯಾಗಿ ಈ ದೇವಸ್ಥಾನವಾಗಿದ್ದು ನಿತ್ಯ ತನ್ನ ಭಕ್ತ ಸಮೂಹಯವನ್ನು ದ್ವಿಗುಣಗೊಳಿಸುತ್ತಿರುವ ಯೋಗಶಕ್ತಿ ಈ ನೆಲಗಿದೆ.

ಹರಿನಾಥ ಮಹಾರಾಜ ಮತ್ತು ಮಾತೆ ಸುಖಬಾಯಿ ಅವರ ಪುಣ್ಯಕ್ಷೇತ್ರದಲ್ಲಿ ಗೌರಿ ಹುಣ್ಣಿಮೆ ಮತ್ತು ಆಷಾಡ ಹುಣ್ಣಿಮೆ ಗಳಲ್ಲಿ ವರ್ಷದಲ್ಲಿ ಎರಡು ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ವರ್ಷದ ಪ್ರತಿ ಗುರುವಾರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ಜರುಗುತ್ತವೆ.ಪ್ರತೀ ಏಕಾದಶಿ ದಿನದಂದು ವಿಶೇಷವಾಗಿ ಸಂತರು ಶರಣರಿಂದ ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮಗಳು ನೆರವೇರುತ್ತವೆ ವಿವಾಹ ಅಭಿಷೇಕ ಜವಳ ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಂದಲ್ಲದೆ ಮಹಾರಾಷ್ಟ,ಆಂಧ್ರಪ್ರದೇಶ, ತೆಲಂಗಾಣ ಮೂಲಗಳಿಂದ ಎಲ್ಲಾ ಸಮುದಾಯ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಇಷ್ಟಾರ್ಥ ಈಡೇರಿಕೆ: ಸದ್ಗುರು ಹರಿನಾಥ್ ಮಹಾರಾಜರು ಬೇಡಿದ ವರವನ್ನು ನೀಡುತ್ತಾರೆ. ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುತ್ತಾರೆ. ಎಂಬ ನಂಬಿಕೆ ಇದೆ ಹೀಗಾಗಿ ನಾನಾ ಕಷ್ಟಗಳನ್ನು ಹೊತ್ತ ಭಕ್ತರ ಸನ್ಮಾರ್ಗ ದೊರೆಯುತಿದೆ.
ಈ ಹಿನ್ನೇಲೆಯಲ್ಲಿ ಮಠಕ್ಕೆ ಭಕ್ತರು ನಾನಾ ಹರಕೆ ಹೊತ್ತು ಜಾತ್ರೆ ದಿನದಂದು ಈಡೇರಿಸಿ ಭಕ್ತಿ ಸಮರ್ಪಿಸುತ್ತಾರೆ.

ಇಲ್ಲಿನ ಅನೇಕ ಅಂಗಡಿಗಳಿಗೆ ತಮ್ಮ ಮಕ್ಕಳಿಗೆ ಹರಿನಾಥ ಎಂದು ಹೆಸರಿಟಿರುವುದು ಉಂಟು

ನೈವೇದ್ಯ ಪ್ರಿಯ: ಹರಿನಾಥ ಮಹಾರಾಜ ದೇವರಿಗೆ ಮಲೋದಿ ಪ್ರಿಯವಾದ ನೈವೇದ್ಯ ಹೀಗಾಗಿ ಗ್ರಾಮದಲ್ಲಿ ಜಾತಿ ಭೇದ ಭಾವ ಇಲ್ಲದೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಗೋಧಿ ಹಿಟ್ಟಿನಿಂದ (ರೊಟ್ಟಿ)ಮಲೋದಿ ನೈವೇದ್ಯ ಸಿದ್ಧಪಡಿಸಿ ಕಾಯಿ ಕರ್ಪೂರ ಊದು ಬತ್ತಿಯೊಂದಿಗೆ ಸಕ್ಕರೆ ಸೇರಿಸಿಕೊಂಡು ದೇವರನ್ನು ಪೂಜಿಸಿ ಹರಿಕೆ ತೀರಿಸಿ ಭಕ್ತಿಭಾವ ಮೆರೆಯುತ್ತಾರೆ.

ಒಂದು ಜಾತಿಗೆ ಸೀಮಿತವಾಗದೆ ಸರ್ವ ರೀತಿಯಲ್ಲಿ ವಿಶೇಷತೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.
ಪ್ರತಿ ವರ್ಷ ನವೆಂಬರ್ ತಿಂಗಳ 15ರಂದು  ಗೌರಿ ಹುಣ್ಣಿಮೆ ನಿಮಿತ್ತ ಜಾತ್ರೆಯನ್ನು ಆಚರಿಸುತ್ತಾರೆ.

ಸಂಗಮೇಶ್ವರ ಎಸ್ ಮುರ್ಕೆ.ಹೊಳೆಸಮುದ್ರ. ಕಮಲನಗರ.ಜಿ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ