Oplus_131072

ಭೀಮಕವಿ ಎಂಬ ಖ್ಯಾತಿಯ ಕವಿ- ಮಾಣಿಕರಾವ ಜ್ಯೋತಿ.

ಭೀಮಕವಿ‘ ಎಂದೇ ಖ್ಯಾತರಾದ ಕವಿ,ತತ್ವ ಪದಕಾರ ಹಾಗೂ ಚಿಂತಕರೆಂದರೆ ಮಾಣಿಕರಾವ ಜ್ಯೋತಿ. ಇವರು ಬೀದರ ತಾಲೂಕಿನ ಖಾಸೆಂಪೂರ ಗ್ರಾಮದ ನರಸಪ್ಪ ಮತ್ತು ಹಣಮವ್ವ ದಂಪತಿಗಳಿಗೆ 1933 ರಲ್ಲಿ ಜನಿಸಿದ್ದಾರೆ. ಮತ್ತು ಕೆಲಕಾಲ ಹೈದರಾಬಾದ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಸರ್ಕಾರಿ ವಸತಿ ಗೃಹ ಇಲಾಖೆಯಲ್ಲಿ ಮತ್ತು ಬೀದರ ಏರ್ ಫೋರ್ಸ್ ನಲ್ಲಿ ಸೇವಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು ಬೀದರ ಹತ್ತಿರದ ಪಾತರಪಳ್ಳಿಯಲ್ಲಿ ಬಹುಕಾಲ ಜೀವನ ಕಳೆದಿದ್ದು.           ದಿ. ಪಂಚಶೀಲ ಗವಾಯಿ ಕಾಶಿನಾಥ ಅವರೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮ ದೀಕ್ಷೆ ಪಡೆದು ಹಿಂದೂ ದೇವತೆಗಳ ಆರಾಧನೆ ಗೀತೆಗಳನ್ನು ಕೈ ಬಿಟ್ಟು ಸ್ವತಃ ಬುದ್ದ ಬಸವ, ಅಂಬೇಡ್ಕರ್ ಕುರಿತಾದ ಗೀತೆಗಳು ರಚನೆ ಮಾಡಿ ಸ್ವರಚಿತ ಗಾಯನ ಕಲಾವಿದರಾಗಿದ್ದರು. ಮೊದಲು ತತ್ವಪದಗಳು ಬರೆದಿದ್ದ ಇವರು ನಂತರದಲ್ಲಿ ಅಂಬೇಡ್ಕರ್ ಬುದ್ದ ಬಸವಣ್ಣನವರ ಬಗ್ಗೆ ಬರೆದ ಹಾಡುಗಳು ಬೀದರ ಕಲಬುರಗಿ ಯಾದಗಿರಿ ಜಿಲ್ಲೆಯಾದ್ಯಂತ ಅವು ಭಜನೆ ಪದಗಳಾಗಿ ತುಂಬ ಜನಪ್ರಿಯವಾಗಿವೆ.ಮತ್ತು ಇವರು ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹೆಚ್ಚು ಸಾಹಿತ್ಯ ರಚನೆ ಮಾಡಿದ್ದರಿಂದ ಇವರಿಗೆ ‘ಭೀಮ ಕವಿ’ ಎಂದು ಜನರೆ ನೀಡಿದ ಬಿರುದಾಗಿದೆ. ಹಾಗಾಗಿ ಇವರ ಕುರಿತು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಅವರು ‘ಭೀಮ ಕವಿ ಮಾಣಿಕರಾವ ಜ್ಯೋತಿ’* ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇವರ ತತ್ವಪದ,ಅಂಬೇಡ್ಕರ್,ಬುದ್ಧ, ಬಸವರ ಬಗ್ಗೆ ಬರೆದ ಹಾಡುಗಳು ಅಲ್ಲಲ್ಲಿ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಮಚ್ಚೇಂದ್ರ ಪಿ ಅಣಕಲ್.

(ಕೃಪೆ: ಬೀದರ ಜಿಲ್ಲಾ ಸಾಹಿತಿಗಳ ಪರಿಚಯ‘ ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ