Oplus_131072

ಭೂಕೈಲಾಸ ಕಲಬುರಗಿ.

ಭೂಕೈಲಾಸ ಕಲಬುರಗಿ
ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

ಶರಣಬಸವ. ಖಾಜಾಬಂದೇನವಾಜರು ಅವತರಿಸಿದ ಪುಣ್ಯ ಭೂಮಿ
ಬುದ್ಧನಾ ನೆಲವಿಡು ಸನ್ನತಿ ಕನಗನಳ್ಳಿ
ಶಾಹಾಬಾದಿನ ವಿಶ್ವ ವಿಖ್ಯಾತ ಸುಂದರ ಕಲ್ಲು
ಸನ್ನತಿ ಚಂದ್ರಲಾಂಬಾ ಪರಮೇಶ್ವರಿ ಸನ್ನಿಧಿ
ಬಿಜನಳ್ಳಿ ಹರಳಯ್ಯ ಕಲ್ಯಾಣಮ್ಮನವರ ಚೆಮ್ಮಾವುಗೆಗಳ ಸುಕ್ಷೇತ್ರ    (1)

ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

ನಾಗವಿಯ ಯಲ್ಲಮ್ಮ.ಘತ್ತರಗಿ ಭಾಗ್ಯಮ್ಮ ಅವತರಿಸಿದ ಭಕ್ತಿಯ ತಾಣವಿದು
ಗಾಣಾಗಾಪುರ ದತ್ತಾತ್ರೇಯ ದೇವರು ನೆಲಿಸಿದ ಕ್ಷೇತ್ರವಿದು
ಕನ್ನಡ ಕಟ್ಟಿದ ಮಾನ್ಯಖೇಟದ ರಾಷ್ಟ್ರಕೂಟ ಅಮೋಘ ವರ್ಷ ಕೀರ್ತಿಯ ತಾಣವಿದು
ಕನ್ನಡ ಮೊದಲ ಕೃತಿ ಶ್ರೀ ವಿಜಯರ ಕವಿರಾಜ ಮಾರ್ಗ ಹೆಮ್ಮೆಯ ನಾಡು  (2)

ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

ಲೋಕ ಕಲ್ಯಾಣ ಸಾರಿದ ಯಾನಾಗುಂದಿ ಮಾತಾಮಾಣಿಕಮ್ಮನವರು ಜನಿಸಿದ ಪುಣ್ಯ ಭೂಮಿ
ಕಲಾ ವೈಭವ ಸಾರುವ ಮಣ್ಣೂರು. ಕಾಳಗಿ. ಮೇದಕ ದೇವಾಲಯಗಳು
ವಚನ ಸಾರಿದ ಜೇವರ್ಗಿ ಷಣ್ಮುಖ ಶಿವಯೋಗಿ (3)

ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

ಮಲೆನಾಡು ಖ್ಯಾತಿ ಹಚ್ಚ ಹಸಿರಿನ ಚಿಂಚೋಳಿ
ಶರಣರು ಮೆಟ್ಟಿದ ಆಳಂದ್ ಏಕಾಂತ ರಾಮಯ್ಯ. ಗಜೇಶ್ ಮಸಣಯ್ಯನವರು ಬಾಳಿ ಬೆಳಗಿದ ಪುಣ್ಯ ಕ್ಷೇತ್ರವಿದು
ದಶರಥ ಶ್ರಾವಣರ ಸನ್ನಿದಿ ಕಮಲಾಪುರ. (4)

ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

ಜಗತ್ತಿಗೆ ನ್ಯಾಯ ಜ್ಞಾನ ಸಾರಿದ ವಿಜ್ಞಾನೇಶ್ವರರು ಮಿತಾಕ್ಷರ ಗ್ರಂಥ ಬರೆದ ಪುಣ್ಯ ಭೂಮಿ ಮರತೂರು
ವಿಶ್ವಕ್ಕೆ ವಿದ್ಯದಾನಗೈದ ನಾಗಾವಿ ಪ್ರಾಚೀನ ಘಟಿಕಾ
ಕಲಾತ್ಮಕ ಕಾಳಗಿಯ ಕಾಳೇಶ್ವರ
ನರೋಣಾದ ಕ್ಷೇಮಲಿಂಗ
ಸೇಡಂ ನ ಪಂಚಲಿಂಗೇಶ್ವರ ಕೊತ್ತಲ ಬಸವ(5)

ಧರೆಯಲ್ಲಿನ ಕೈಲಾಸ
ಅದುವೇ ನಮ್ಮ ಹೆಮ್ಮೆಯ
ಕಲಬುರಗಿಯ ನಾಡು
ಶರಣ. ಸೂಫಿ ಸಂತರ ಬೀಡು

– ಮುಡಬಿ ಗುಂಡೇರಾವ (ಮೂಗು )

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ