ಭ್ರೂಣ ಹೇಳಿದ ಸತ್ಯ
ಅಮ್ಮನ ಗರ್ಭಗುಡಿಯಲಿ
ರುಧಿರ ಅಭಿಷೇಕದಲಿ
ಪುಟ್ಟ ಕಂದನಾಗುತಲಿ
ಕನಸುಗಳ ಕಾಣುತಲಿ
ನಾ ಬೆಳೆಯುತ್ತಿದ್ದೆ ಹೆಣ್ಣು ಮಗುವಾಗಿ
ನನ್ನೆದೆಯ ಹೃದಯದ
ಮಿಡಿತಕೆ ತಾಯ ನಗೆಗೆ
ನಾನೂ ಮುಗುಳ್ನಕ್ಕೆ
ಅಜ್ಜಿ ಅಜ್ಜಿ ತಂದೆಯರ
ಒತ್ತಡಕೆ ಪರದೆಮೇಲೆನಾಕಾಣಿಸಿಕೊಂಡೆ
ನನ್ನ ಹತ್ಯೆಗೈಯ್ಯಲು
ಎಲ್ಲರೂ ಮುಂದಾದರು
ನನ್ನವ್ವನ ಅಳು ಕೇಳಿಸಲಿಲ್ಲ
ನಾನು ಮೂಕಳಾಗಿದ್ದೆ
ನನ್ನ ಜೊತೆ ಅವ್ವನಮನವ ಹತ್ಯೆಗೈದರು
ನನಗೆ ಬಾಳಲು ಹಕ್ಕಿಲ್ಲವೆ
ಹೆಣ್ಣೆಂದರೆ ಕೊಲ್ಲುವಷ್ಟು
ತಾತ್ಸಾರವೇ ತಿರಸ್ಕಾರವೇ
ಮರುಳು ಮಾನವರೇ
ಪ್ರಾಣಿ ಪಶುಪಕ್ಷಿಗಳ ನೋಡಿ ಕಲಿಯಿರಿ
ನೀವು ಹುಟ್ಟಿದ್ದೇ ಹೆಣ್ಣಿನಿಂದ
ಭೋಗದ ವಸ್ತುವೇ ಅವಳು
ಹೆಣ್ಣಿಲ್ಲದ ಊರಾಗಿ ಹಾಳಾಗಿ
ನರಕವಾಗುವುದು ಜೀವನ
ಇನ್ನಾದರೂ ಹತ್ಯೆಗೈಯ್ಯದಿರಿ ಭ್ರೂಣವ
ಗಂಡುಗಲಿ ರಾಣಿಯರು
ವಚನಾಮೃತದ ಶರಣೆಯರು
ವಿಜ್ಞಾನಿಗಳು ಸೈನ್ಯದಲಿರುವ
ಮಹಿಳಾ ಶಕ್ತಿಗಳು ಹೆಣ್ಣಲ್ಲವೆ
ಶಿವನನ್ನೇ ಮೆಟ್ಟಿ ನಿಂತ ಕಾಳಿಯ ನೆನೆಸಿ
– ಅನ್ನಪೂರ್ಣ ಸುಭಾಷ್ಚಂದ್ರ ಸಕ್ರೋಜಿ ಪುಣೆ