ಬೀದರ ಜಿಲ್ಲಾ ಸಾಹಿತಿಗಳ ಪರಿಚಯ.
ಲೇಖಕರು- ಮಚ್ಚೇಂದ್ರ ಪಿ ಅಣಕಲ್.
ಬೀದರ ಜಿಲ್ಲೆಯ ಎಂಟು ತಾಲ್ಲೂಕಿನ ಸುಮಾರು 585 ಹಿರಿ-ಕಿರಿಯ ಲೇಖಕರ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿಯ ಲೇಖಕರ ಮಾಹಿತಿಯು 2019 ರಲ್ಲಿ ಮುದ್ರಣಗೊಂಡ ‘ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಆ ಬರಹಗಳು ನಮ್ಮ ಕನ್ನಡ ಸಾಹಿತ್ಯ ಆಸಕ್ತರ ಓದುಗಾರಿಕೆಯ ಅನುಕೂಲಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ.
– ಸಂಪಾದಕರು.
ಬಸವಕಲ್ಯಾಣ ತಾಲೂಕಿನ ಲೇಖಕರು:
ಪೂಜ್ಯ. ಶ್ರೀ. ಷ.ಬ್ರ. ಡಾ.ಚೆನ್ನವೀರ ಶಿವಾಚಾರ್ಯರು
ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದು ಭಕ್ತರ ಪ್ರೀತಿ ಪಾತ್ರಕ್ಕೆ ಒಳಗಾಗಿ, ಅಪಾರ ಕನ್ನಡ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಿ, ನಿರ್ಮಲ ಮನಸ್ಸಿನಿಂದ ಸದಾ ಒಂದಿಲೊಂದು ರೀತಿಯ ಸಾಮಾಜಿಕ ಕಳಕಳಿ ಉಳ್ಳ ಮಠಾಧೀಶರು ಹಾಗೂ ಸಾಹಿತಿಗಳಾಗಿ ನಾಡಿನಾದ್ಯಂತ ಚಿರಪರಿಚಿತರಾದವರೆಂದರೆ ಪೂಜ್ಯ. ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ವೇದಮೂರ್ತಿ.ಶ್ರೀ. ಕರಬಸಯ್ಯಾ ಹಿರೇಮಠ ಮತ್ತು ಸುಭದ್ರಾಬಾಯಿ ತಾಯಿಯವರ ಉದರದಲ್ಲಿ ದಿನಾಂಕ ೧-೭-೧೯೬೩ರಲ್ಲಿ ಜ£ಸಿದ್ದಾರೆ. ಇವರ ಮೂಲನಾಮ ರೇವಣಸಿದ್ದಯ್ಯ ಎಂದಾಗಿದೆ.
ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾರಕೂಡದಲ್ಲಿ, ಪ್ರೌಢ ಶಿಕ್ಷಣ, ಶರಣಬಸವೇಶ್ವರ ಪ್ರೌಢ ಶಾಲೆ ಕಲಬುರಗಿಯಲ್ಲಿ, ಪದವಿಯನ್ನು ೧೯೮೪ರಲ್ಲಿ ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪೂರೈಸಿ ೧೯೮೬ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ರಾಜಯೋಗಿಂದ್ರ ಜಗದ್ಗುರುಗಳು ಅತ್ಯಾನಂದದಿAದ ಶ್ರೀಮಠದಲ್ಲಿ ಪೂಜಾ ಪ್ರಸಾದಕ್ಕೆ ಅನುಕೂಲ ಮಾಡಿಕೊಡುವುದರೊಂದಿಗೆ ಉತ್ತಮ ಆಚಾರ-ವಿಚಾರ, ಚಿಂತನೆಗಳು ಬೋಧಿಸಿ, ಪರಿಸರ ಪ್ರಜ್ಞೆ, ಧರ್ಮ ಶಿಕ್ಷಣ, ಸಂಸ್ಕೃತಿ ಸಂವರ್ಧನೆ ಬಲಪಡಿಸುವುದರ ಮೂಲಕ ೧೯೯೬ ಎಪ್ರಿಲ್ ೨೫ರಂದು ಹಾರಕೂಡ ಹಿರೇಮಠ ಸಂಸ್ಥಾನಕ್ಕೆ ಪಟ್ಟಾಧಿಕಾರ ಹೊಂದಿ ಶ್ರೀ ರೇವಣಸಿದ್ದ ದೇವರು ಶ್ರೀ ಷಟಸ್ಥಲ ಬ್ರಹ್ಮ. ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳಾಗಿ ದಕ್ಷಿಣ ಭಾರತದಲ್ಲಿಯೆ ಕೋಟಿ ಕೋಟಿ ಭಕ್ತರ ಪ್ರೀತಿಯ ಸ್ವಾಮಿಗಳಾಗಿ ಹೆಸರುವಾಸಿಯಾಗಿದ್ದಾರೆ.
ಶ್ರೀಮಠದ ಏಳಿಗೆಯೊಂದಿಗೆ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಪ್ರೇಮಿಯಾಗಿ ‘ಚೆನ್ನ ಚಿಂತನ’ ಎಂಬ ಪುಸ್ತಕದಿಂದ ಲೇಖಕರಾಗಿ ಖ್ಯಾತರಾಗಿದ್ದಾರೆ. ತುಂಬ ಮೌಲಿಕ ವಿಚಾರಗಳು ಹೊಂದಿರುವ ಈ ಕೃತಿ ಪ್ರಜಾವಾಣಿಯ ಅಂಕಣ ಬರಹವಾಗಿ ಅಪಾರ ಜನಮೆಚ್ಚುಗೆಯು ಗಳಿಸಿದೆ. ಮತ್ತು ‘ಹಡಪದ ಅಪ್ಪಣ್ಣನ ನೂರೊಂದು ವಚನಗಳು’ (ಸಂಪಾದನೆ) ಮತ್ತು ‘ಚನ್ನಚಂದ್ರಾಹಾರ’ (ಕವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಧರ್ಮ, ಸಮಾಜ, ಶಿಕ್ಷಣ ಮತ್ತು ಸಾಹಿತ್ಯದೊಂದಿಗೆ ನಿಕಟ ಸಂಬAಧ ಹೊಂದಿರುವುದರಿAದ ಧಾರ್ಮಿಕ ತಳಹದಿಯಲ್ಲಿ ಚಿಂಚೋಳಿ, ದುಬಲಗುಂಡಿ, ಸೇಡೊಳ್ ಸರಜವಳಗಾ, ಗದಲೇಗಾಂವ, ತರೂರಿ, ಜೀವಣಗಿ ಶಾಖಾ ಮಠಗಳೊಂದಿಗೆ ಭಕ್ತರ ಒಡನಾಡಿಯಾಗಿ ಗುರುತಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ತುಂಬ ಕಾಳಜಿ ಹೊಂದಿದ ಶ್ರೀಗಳು ಹಾರಕೂಡ, ಭಾಲ್ಕಿ, ಚಿಂಚೋಳಿ, ಮುಂತಾದ ಕಡೆಗಳಲ್ಲಿ ಶಿಶುವಿಹಾರ, ಪ್ರಾಥಮಿಕ, ಪ್ರೌಢ ಶಾಲಾ ಕಾಲೇಜುಗಳು ನಡೆಸುವಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಶ್ರಮಿಸುತ್ತಿದ್ದಾರೆ. ಮತ್ತು ಸಾಹಿತ್ಯಿಕವಾಗಿಯು ನಾಡಿನಾದ್ಯಂತ ಹಲವಾರು ಹಿರಿ-ಕಿರಿಯ ಲೇಖಕರ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿ ವರ್ಷ ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೆಯ ಅಂಗವಾಗಿ ಅನುಭಾವ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ ನಡೆಸುವುದರೊಂದಿಗೆ ಲೇಖಕರ ಪುಸ್ತಕಗಳು ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೆ ೮೯ ಕೃತಿಗಳು ಹೊರ ಬಂದಿರುವುದು ನೋಡಿದರೆ ಅವರ ಸಾಹಿತ್ಯದ ಪ್ರೀತಿ, ಕಾಳಜಿ ಇಲ್ಲಿ ಎದ್ದು ತೊರುತ್ತದೆ. ಅಷ್ಟೇಯಲ್ಲದೆ ನಾಡಿನಾದ್ಯಂತ ಉತ್ತಮ ಸಾಹಿತ್ಯ ರಚಿಸಿ ಖ್ಯಾತರಾದ ಹಿರಿಯ ಸಾಹಿತಿಗಳಿಗೆ ೨೦೧೧ರಿಂದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀ ಮಠದಿಂದ ಕೊಡುವ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದು ಒಂದು ಲಕ್ಷ ರೂಪಾಯಿ ನಗದು, ಒಂದು ತೊಲೆ ಚಿನ್ನದ ಪದಕ ಒಳಗೊಂಡಿದೆ. ಮತ್ತು ಸಂಗೀತದಲ್ಲಿ ಸಾಧನೆ ಮಾಡಿದವರಿಗೆ ೨೦೧೮ರಿಂದ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀಗಳ ಪಿತಾಮಹ ದಿ.ವೇ.ಶ್ರೀ. ಕರಬಸಯ್ಯಾ ಸ್ವಾಮಿ ಹಿರೇಮಠ ಅವರ ಸ್ಮರಣಾರ್ಥವಾಗಿ ೧೦ ಸಾವಿರ ನಗದು, ಪ್ರಶಸ್ತಿ ಫಲಕ £Ãಡಿ ಗೌರವಿಸಿದರೆ, ಚಿಂಚೋಳಿ ಶಾಖಾ ಮಠದಿಂದ ಯುವ ಲೇಖಕರಿಗೆ ‘ಚೆನ್ನ ಶ್ರೀ’ ಪ್ರಶಸ್ತಿ ನೀಡಿ ೫ಗ್ರಾಂ.ಚಿನ್ನ ಪ್ರಶಸ್ತಿ ಫಲಕದೊಂದಿಗೆ ಗೌರವಿಸುತ್ತಿದ್ದಾರೆ. ಅಷ್ಟೇಯಲ್ಲದೆ ೨೦೨೦ರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ, ಮತ್ತು ಭಜನಾ ಸಂಘ ಸಂಸ್ಥೆಗಳಿಗೆ ಭಜನ ಸೇವಾ ರತ್ನ ಪ್ರಶಸ್ತಿ, ನೀಡಿ ಗೌರವಿಸಿದರೆ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ‘ಶ್ರೀ ಚೆನ್ನರತ್ನ’ ಪ್ರಶಸ್ತಿಯು ನೀಡುತ್ತಿದ್ದಾರೆ. ಮತ್ತು ಪ್ರತಿವರ್ಷ ಹಾರಕೂಡ ಜಾತ್ರೆಯ ಕೊನೆಯ ದಿನದಂದು ‘ಉತ್ತಮ ಜೋಡೆತ್ತು’ ಪ್ರದರ್ಶನ ಮಾಡಿದ ರೈತರಿಗೆ ಒಂದು ತೊಲೆ ಚಿನ್ನದ ಉಡುಗೊರೆಯು ನೀಡಿ ಗೌರವಿಸುತ್ತಾರೆ.
ಇವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಹಾರಕೂಡ ಮಠದ ಪ್ರಕಾಶನದಿಂದ ೪೦ ಲಕ್ಷ ಖರ್ಚಿನಲ್ಲಿ ೧೫ ವಿಷಯ ವಚನ ಸಂಪುಟಗಳು ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿ ಮಠ ಅವರಿಂದ ಸಂಪಾದಿಸಿ ಪ್ರಕಟಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಕಾರ್ಯ ಸಾಧನೆಗೆ ಗುಲ್ಬರ್ಗ ವಿಶ್ವವಿದ್ಯಾಲಯವು ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದರೆ ಕರ್ನಾಟಕ ಸರ್ಕಾರ ೨೦೧೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ಅಪಾರ ಭಕ್ತ ವರ್ಗ ಹೊಂದಿದ ಇವರಿಗೆ ಗದಲೇಗಾಂವ, ಸೇಡಂ, ಬಸವಕಲ್ಯಾಣದಲ್ಲಿ ಹುಟ್ಟು ಹಬ್ಬದ ನಿಮಿತ್ತವಾಗಿ ಚಿನ್ನದ ಕಿರಿಟವು ತೊಡಿಸಿ ಗೌರವಿಸಿದ್ದಾರೆ. ಬಾಳೆಹೊನ್ನೂರಿನ ಜಗದ್ಗುರು ರಂಭಾಪುರಿ ಶ್ರೀಗಳು ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರೆ, ಉತ್ತರ ಪ್ರದೇಶದ ಕಾಶಿ ಜಗದ್ಗುರು ಪೀಠದಿಂದ ‘ಧರ್ಮ ರತ್ನ’ ನೀಡಿದ್ದಾರೆ. ಉಜ್ಜಯಿನಿ ಪೀಠದಿಂದ ‘ಸದ್ಧರ್ಮ ಶಿಖಾಮಣಿ’ ಪ್ರಶಸ್ತಿ, ಕಮಲಾಪೂರದಿಂದ ‘ಮನುಕುಲ ರತ್ನ’ ಪ್ರಶಸ್ತಿ, ಕಲಬುರಗಿಯಿಂದ ‘ದಾಸೋಹ ಜ್ನಾನ ರತ್ನ’ ಪ್ರಶಸ್ತಿ, ಹುಲಸೂರಿನಿಂದ ‘ಕಲ್ಯಾಣ ಕರ್ನಾಟಕ ರತ್ನ’ ಪ್ರಶಸ್ತಿ, ಎನ್.ಆರ್.ಜಿ.ಪೌಂಡೆಷನ್ ವತಿಯಿಂದ ‘ಕಲ್ಯಾಣ ಕರ್ನಾಟಕ ಅಧ್ಯಾತ್ಮ ಸಿರಿ’ ಪ್ರಶಸ್ತಿ, ಮುಂಡರಗಿಯಿAದ ‘ಜಗದ್ಗುರು ಅನ್ನದಾನೇಶ್ವರ ಪ್ರತಿಷ್ಠಾನದ ಪ್ರಶಸ್ತಿ’ ಕಲಬುರ್ಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯದಿಂದ ‘ಸ್ವರ ಮಾಧುರಿ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದು ಖ್ಯಾತರಾಗಿದ್ದಾರೆ. ೨೦೦೩ರಲ್ಲಿ ಇವರ ದಿವ್ಯ ಸಾನಿಧ್ಯದೊಂದಿಗೆ ಹಾರಕೂಡ ಸಂಸ್ಥಾನ ಮಠದ ಆವರಣದಲ್ಲಿ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ನಡೆದು ಬಂದಿದೆ.
ಇವರ ಕುರಿತು ಮುಸ್ಲಿಂ ಸಾಹಿತಿಗಳಾದ ಹುಸೇನ್ ಸಾಬ ಮಾಸ್ತರ್, ಕೊಹಿನೂರಿನ ಮಲಂಗ ಶಾ ಬಾಬಾ, ರಸೂಲ್ ಸಾಬ್ ಬಾಬಾ ,ಲಾಲ ಮಹಮ್ಮದ್ ಶಾ, ನಬಿಲಾಲ, ಎಲ್.ಬಿ.ಕೆ.ಅಲ್ದಾಳ, ಮುಂತಾದವರು ಭಕ್ತಿಯಿಂದ ಸಾಹಿತ್ಯ ರಚಿಸಿದ್ದರೆ. ಮಚ್ಚೇಂದ್ರ ಪಿ.ಅಣಕಲ್ ಅವರು ‘ಹರ ಹರಾ ಹಾರಕೂಡೆಶ್ವೇರ’ ಎಂಬ ಅಂಕಿತನಾಮದಿAದ ನೂರಾರು ಅಧುನಿಕ ವಚನಗಳು ಬರೆದರೆ ಡಾ.ಶಿವಶರಣಯ್ಯಾ ಎಂ.ಮಠಪತಿಯವರು ‘ಹಾರಕೂಡದೀಶ ಶ್ರೀ ಚನ್ನವೀರ ಪ್ರಿಯ ಚನ್ನಬಸವೇಶ್ವರ’ ಎಂಬ ಅಂಕಿತನಾಮದಿAದ ಹಲವಾರು ವಚನಗಳು ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರ ೫೭ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಪತ್ರಕರ್ತ, ಸಾಹಿತಿ ಮಾಣಿಕ ಆರ್.ಭುರೆಯವರು ‘ನುಡಿಚೆನ್ನ’ ಎಂಬ ಅಭಿನಂದನಾ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಮುಸ್ಲಿಂರು ದಲಿತರಿಗೆ ಈ ಮಠದಲ್ಲಿ ಸರ್ವಧರ್ಮ ಸಮಾನತೆ ಸಾರಲು ಪೂಜ್ಯ. ಡಾ. ಚನ್ನವೀರ ಶಿವಾಚಾರ್ಯರು ಕಾರಣಿಭೂತರಾಗಿದ್ದಾರೆ.
ಶರಣಯ್ಯಾ ಕಲ್ಯಾಣ.
ಬಸವಕಲ್ಯಾಣದ ಶರಣಯ್ಯಾ ಕಲ್ಯಾಣ ಇವರು ಲಿಂಗಪ್ಪ ಮತ್ತು ಚನ್ನಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೨೧ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಅಧ್ಯಯನ ಮಾಡಿದ ಇವರು ೧೯೬೬ರಲ್ಲಿ `ಕಲ್ಯಾಣ ಕನ್ನಡಿ’ ಮತ್ತು `ಶೂನ್ಯ ಸಿಂಹಾಸನ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಪ್ರೊ.ಭಾಲಚಂದ್ರ ಜಯಶೆಟ್ಟಿ
ಖ್ಯಾತ ಹಿರಿಯ ಸಾಹಿತಿ ಹಾಗೂ ಅಗ್ರಗಣ್ಯ ಅನುವಾದಕ ಪ್ರೊ. ಭಾಲಚಂದ್ರ ಜಯಶೆಟ್ಟಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಭೀಮಣ್ಣಾ ಮತ್ತು ಜಯಮ್ಮ ದಂಪತಿಗಳಿಗೆ ದಿನಾಂಕ ೨೨-೧೧-೧೯೩೯ರಲ್ಲಿ ಜನಿಸಿದ್ದಾರೆ. ಹಿಂದಿ ಎಂ.ಎ.ಸ್ನಾತಕೋತ್ತರ ಪದವಿಧರರಾಗಿ ೧೯೬೫ರಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೭ರಲ್ಲಿ ನಿವೃತ್ತರಾಗಿದ್ದಾರೆ.
ಇವರು ೧೯೯೧ರಲ್ಲಿ `ಮಿರ್ಚಿ ಬಾಬಾ ಮತ್ತು ಇತರ ಕತೆಗಳು’ (ಕಥಾಸಂಕಲನ) ೨೦೦೩ರಲ್ಲಿ `ಯುಗಾಂತ’ (ನಾಟಕ) ೨೦೦೨ರಲ್ಲಿ `ನಮ್ಮ ಮನೆ’ (ಲಲಿತ ಪ್ರಬಂಧ) ೨೦೦೩ರಲ್ಲಿ `ಚಿಂತನ -ಮಂಥನ’ (ವೈಚಾರಿಕ) ೨೦೦೪ರಲ್ಲಿ `ಭಗತ್ ಸಿಂಗ’ (ಚರಿತ್ರೆ) ೨೦೦೫ರಲ್ಲಿ `ಕನ್ನಡ ವ್ಯಾಕರಣ ಕೈಪಿಡಿ’ ೧೯೭೩ರಲ್ಲಿ `ಲೀಲಾವತಾರಿ ವೀರಭದ್ರ’ ೧೯೯೧ರಲ್ಲಿ `ಕೊಡ್ಗಲ್ಲಿನ ಕೂಗು’ ೧೯೯೩ರಲ್ಲಿ `ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಎಸ್.ಖಾಂಡೆಕರ್’ ೧೯೮೪ರಲ್ಲಿ ಹಿಂದಿಯಲ್ಲಿ `ವಿಭೂತಿಯಂ’ ೨೦೧೪ರಲ್ಲಿ `ಅಷ್ಟಾವರಣ ಕಿ ವೈಜ್ಞಾನಿಕತಾ’ ೨೦೧೬ರಲ್ಲಿ `ಶರಣ ಆಂದೋಲನ’ ೨೦೦೫ರಲ್ಲಿ `ಪ್ರಯೋಗಿಕ ಕನ್ನಡ ವ್ಯಾಕರಣ’ ಮತ್ತು `ಡಾ.ಸಿದ್ದಲಿಂಗ ಸ್ವಾಮಿಗಳು’ `ಹರಳಯ್ಯಾ’ ಎಂಬ ಕೃತಿಗಳು ಪ್ರಕಟಿಸಿದರೆ ೨೦೦೬ರಲ್ಲಿ `ಹೈದರಾಬಾದ ಕರ್ನಾಟಕದ ವಿಮೋಚನಾ ಚಳವಳಿ, ಕಬೀರದಾಸರು, ಪಂ.ಶಿವಚAದ್ರಜಿ, ೨೦೧೦ರಲ್ಲಿ `ಮಹಾಪ್ರಸಾದಿ ಕಕ್ಕಯ್ಯ, ಶರಣ ಸಾಹಿತ್ಯ ಸುತ್ತಮುತ್ತ, ೨೦೧೧ರಲ್ಲಿ ಆನುದೇವ ಒಳಗಣವನು, ಅಮ್ಮಾವ್ರ ಗಂಡ, ೨೦೧೨ರಲ್ಲಿ ಸಂತ ಕಬೀರದಾಸರು, ಶರಣ ಚಿಂತನೆಯ ನೆಲೆಯಲ್ಲಿ, ೨೦೧೩ರಲ್ಲಿ `ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ’ ಮತ್ತು `ಚುರುಕು ಚಟಾಕಿ, ೨೦೧೪ರಲ್ಲಿ ಬಸವಣ್ಣ ಮತ್ತು ಲೋಹಿಯಾ, ಬಸವಣ್ಣ ಮತ್ತು ತುಳಸಿದಾಸ, ಆಮುಗಿ ದೇವಯ್ಯ, ಮೇದಾರ ಕೇತಯ್ಯ, ಎಂಬ ಕೃತಿಗಳು ೨೦೧೫ರಲ್ಲಿ `ದಂಡಕಾರುಣ್ಯದಲ್ಲಿ ಗಣತಂತ್ರ’ `ಶರಣಾ ಲೋಕ’ ಮತ್ತು ಶರಣು ಶರಣಾರ್ಥಿ- ಭಾಗ-೧.೨.೩. ಇವು ಅವರ ಸಮಗ್ರ ಶರಣ ಸಾಹಿತ್ಯದ ಕೃತಿಗಳಾದರೆ, ೨೦೧೬ರಲ್ಲಿ `ಸೃಜನ’ ೨೦೧೭ರಲ್ಲಿ `ಸಂಕೀರ್ಣ’ ಎಂಬ ಕೃತಿಗಳು ಇವರ ಸಮಗ್ರ ಸಾಹಿತ್ಯ ಸಂಪುಟಗಳು ಭಾಗ -೧.೨.ರಲ್ಲಿ ಮುದ್ರಣಗೊಂಡಿವೆ. `ಸಂಪ್ರಾಪ್ತಿ’ ಎಂಬುದು ಇವರು ಹಿಂದಿಯಿAದ ಕನ್ನಡಕ್ಕೆ ಅನುವಾದಿಸಿದ ಸಮಗ್ರ ಸಾಹಿತ್ಯ ಸಂಪುಟವಾಗಿದೆ. ೨೦೧೬ರಲ್ಲಿ `ಡೊಹರ ಕಕ್ಕಯ್ಯ’ ೨೦೧೭ರಲ್ಲಿ `ಶರಣಿ ಸತ್ಯಕ್ಕ’ ೨೦೧೮ರಲ್ಲಿ `ಅಪರಿಮಿತದ ಕತ್ತಲೆಯೊಳಗೆ ವಿಪರಿತದ ಬೆಳಕು’ ಮತ್ತು `ಪೂರ್ವೋತ್ತರ ಪರಿಣಯ’ ೨೦೧೯ರಲ್ಲಿ `ಬಾಚಿ ಕಾಯಕದ ಬಸವಯ್ಯ’ ಎಂಬ ಕೃತಿಗಳು ರಚಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಮತ್ತು ಕಲಬುರ್ಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಭಾಲ್ಕಿ ಹಿರೇಮಠ ಮಠದಿಂದ ಹಲವಾರು ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಕನ್ನಡದ ಪ್ರಮುಖ ೩೦ ಸಾಹಿತಿಗಳ ಕೃತಿಗಳು ಹಿಂದಿ ಭಾಷೆಗೆ, ಮರಾಠಿಯಿಂದ ಕನ್ನಡಕ್ಕೆ ಒಂದು, ಹಿಂದಿಯಿAದ ಕನ್ನಡಕ್ಕೆ ಮೂರು ಕೃತಿಗಳು ಅನುವಾದಿಸಿದ್ದಾರೆ. ಇವರ `ದುಃಖ ಭರಾ ರಾಗ’ ಅನುವಾದ ಕೃತಿಗೆ ೧೯೮೧ರಲ್ಲಿ ಶಿಕ್ಷ ಮಂತ್ರಾಲಯ ಪರವಾಗಿ ದೆಹಲಿಯ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಹಾಗೂ ಕರ್ನಾಟಕ ಸರ್ಕಾರದ ಪ್ರಶಸ್ತಿ, ೨೦೦೨ರಲ್ಲಿ ಯು.ಆರ್.ಅನಂತಮೂರ್ತಿಯವರ `ಅವಸ್ಥಾ’ ಕೃತಿ ಹಿಂದಿಗೆ ಅನುವಾದಿಸಿದ್ದರಿಂದ ಕರ್ನಾಟಕ ರಾಜ್ಯ ಪ್ರಶಸ್ತಿ, ೧೯೯೩ರಲ್ಲಿ ಬಿ.ಎಂ.ಶ್ರೀ ಯವರ `ಭಾರತೀಯ ಕಾವ್ಯ ಮೀಮಾಂಸೆ’ ಹಿಂದಿಗೆ ಅನುವಾದಿಸಿದ್ದರಿಂದ ೧೯೯೪ರಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ, ೧೯೯೫ರಲ್ಲಿ, ಎಸ್.ಎಲ್.ಬೈರಪ್ಪನವರ ಅನುವಾದಿತ `ಛೋರ್’ ಕೃತಿಗೆ ಉತ್ತರಾಂಚಲದಿAದ ಅಂತರಾಷ್ಟ್ರೀಯ ಪ್ರಶಸ್ತಿ, ೨೦೧೦ರಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ ಹಿಂದಿ ಅನುವಾದಿತ ಕೃತಿಗೆ ೨೦೦೯ನೇ ವರ್ಷದ ಅನುವಾದಿತ ಕೃತಿಗಳಿಗಾಗಿ ನೀಡುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೫ರಲ್ಲಿ ವಿಭೂತಿಯಂ ಮತ್ತು ೧೯೯೫ರಲ್ಲಿ `ಮೋಡ್’ ಎಂಬ ಹಿಂದಿ ಕೃತಿಗಳಿಗೆ, ಹಾಗೂ ೨೦೦೧ರಲ್ಲಿ `ಯುಗಾಂತ’ ಎಂಬ ಕನ್ನಡ ನಾಟಕ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ೨೦೧೪ರಲ್ಲಿ `ಶರಣರ ಚಿಂತನೆಯ ನೆಲೆಯಲ್ಲಿ’ ಎಂಬ ಕೃತಿಗೆ ಕಾವ್ಯಾನಂದ ಪ್ರಶಸ್ತಿ, ೨೦೦೫ರಲ್ಲಿ ಕಲಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗದಿಂದ ಕಾಯಕ ಸಮ್ಮಾನ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೧೯೯೮ರಲ್ಲಿ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೭ರಲ್ಲಿ ಪುಣೆಯಲ್ಲಿ ಜರುಗಿದ ಮಹಾರಾಷ್ಟ್ರದ ಮೊದಲನೇ ಮರಾಠಿ ಬಸವೇಶ್ವರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೬ರಲ್ಲಿ ೭೫ವರ್ಷ ತುಂಬಿದ ಪ್ರಯುಕ್ತ ಭಾಲ್ಕಿ ಹಿರೇಮಠದಿಂದಲೂ ಇವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ೨೦೦೪ರಲ್ಲಿ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದಿಂದ `ನಮ್ಮ ಅನುವಾದಕ’ ಎಂಬ ಅಭಿನಂದನಾ ಗ್ರಂಥವು ಸಮರ್ಪಿಸಲಾಗಿದೆ. ವಿ.ಸಿ.ಸಂಪದ ಬೆಂಗಳೂರು ವತಿಯಿಂದ ೨೦೧೭ರಲ್ಲಿ `ಪ್ರತಿಭಾ ಸಂಪನ್ನರು’ ಎಂದು ನಗದು ಬಹುಮಾನದೊಂದಿಗೆ ಸನ್ಮಾನ, ಮತ್ತು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ವತಿಯಿಂದ ಇವರ ಜೀವಮಾನ ಸಾಧನೆಗಾಗಿ ೨೦೧೯ರಲ್ಲಿ ಗೌರವ ಪ್ರಶಸ್ತಿ, ನಗದು ಬಹುಮಾನ ನೀಡಿ ಸತ್ಕರಿಸಲಾಗಿದೆ. ಇವರ ಬದುಕು ಬರಹ ಕುರಿತು ಸಾಹಿತಿ ಪತ್ರಕರ್ತರಾದ ಸಂಗಮನಾಥ ರೇವತಗಾಂವ ಅವರು `ಭಾಲಚಂದ್ರ ಜಯಶೆಟ್ಡಿ’ ಎಂಬ ಪರಿಚಯಾತ್ಮಕ ಕೃತಿಯೊಂದು ಹೊರತಂದಿದ್ದಾರೆ. ಇವರ ಕುರಿತು ಡಾ.ಹಣಮಂತ ಮೇಲಕೇರಿಯವರು ಎಂ.ಫೀಲ್ ಪದವಿ ಪಡೆದರೆ, ಸಾವಿತ್ರಿ ಎನ್ನುವವರು ಪಿ.ಎಚ್.ಡಿ.ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಇವರು ಕಲಬುರಗಿಯ ನಿವಾಸಿಯಾಗಿದ್ದಾರೆ.
ರೇವಣಸಿದ್ದಪ್ಪಾ ವಾಂಜರಖೇಡೆ
ಮಕ್ಕಳ ಸಾಹಿತಿ ರೇವಣಸಿದ್ದಪ್ಪಾ ವಾಂಜರಖೇಡೆಯವರು ಬೀದರ ಜಿಲ್ಲೆಯ ಬಸವಕಲ್ಯಾಣದ ಬಸವಲಿಂಗಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧೦-೬-೧೯೪೨ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಟಿ.ಸಿ.ಎಚ್.ಶಿಕ್ಷಣ ಪಡೆದು ೧೯೬೨ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೦೦ರಲ್ಲಿ ನಿವೃತ್ತರಾಗಿದ್ದಾರೆ.
ಇವರು ೧೯೬೭ರಲ್ಲಿ `ಕಡುಕನ ಸಂಸಾರ’ ೧೯೯೨ರಲಿ `ಗೀತಾಳ ಜ್ಯೋತಿ’ ೧೯೯೩ರಲ್ಲಿ `ನಾರಿ ತೋರಿದ ದಾರಿ’ ೧೯೯೭ರಲ್ಲಿ `ಹೇಮರೆಡ್ಡಿ ಮಲ್ಲಮ್ಮ’ ಎಂಬ ನಾಟಕಗಳು, ೧೯೯೪ರಲ್ಲಿ `ಮಕ್ಕಳ ಪರಿಮಳ’ ಎಂಬ ಮಕ್ಕಳ ಕವಿತೆಗಳು, ೧೯೯೫ರಲ್ಲಿ `ಚಿಣ್ಣರ ಚುಟುಕು’ ಎಂಬ ಶಿಶುಪ್ರಾಸ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೦೪ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೦೩ರಲ್ಲಿ ಹಾರಕೂಡದ ೭ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ೨೦೧೯ರಲ್ಲಿ ಗದಲೇಗಾಂವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ರತ್ನ ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ. ಮತ್ತು ೨೦೧೦ರಲ್ಲಿ ಬಸವೇಶ್ವರ ದೇವಸ್ಥಾನದ ನಂದಿಧ್ವಜ ತರಬೇತಿಯವರಿಂದ ಇವರಿಗೆ ಕಲ್ಲುಸಕ್ಕರೆಯಿಂದ `ತುಲಾಭಾರ’ ಮಾಡಿ ಸತ್ಕರಿಸಿದ್ದಾರೆ.
ಮಾತೆ ಸುಜ್ಞಾನಿದೇವಿ
ಬಸವಕಲ್ಯಾಣದ ಮಾತೆ ಸುಜ್ಞಾನಿದೇವಿ ಇವರು ಓಬಯ್ಯ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೧-೧೨-೧೯೪೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಧರ್ಮ ಪ್ರಚಾರಕರಾಗಿ ೧೯೮೧ರಲ್ಲಿ `ಶರಣ ಶಕ್ತಿಯ ಸಂದೇಶ ಭಾಗ- ೧.೨.೩.೪.೫. ಎಂಬ ಕೃತಿ ಐದು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಪಿ.ಬಸವರಾಜ
ಕನ್ನಡ ಪಂಡಿತರೆAದೆ ಖ್ಯಾತರಾಗಿ ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚಿಸಿದ ಕವಿಯೆಂದರೆ ಪಿ.ಬಸವರಾಜ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಗುರಪ್ಪಾ ಮತ್ತು ಗುರುಸಿದ್ದಮ್ಮಾ ದಂಪತಿಗಳಿಗೆ ದಿನಾಂಕ ೨೦-೦೬-೧೯೪೪ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್., ಬಿ.ಇಡಿ, ಎಂ.ಎ., ಸ್ನಾತಕೊತ್ತರ ಪದವಿಧರರಾದ ಇವರು ೧೯೬೨ರಲ್ಲಿ ಶಿಕ್ಷರಾಗಿ ಸೇವೆಗೆ ಸೇರಿ ಸಹಾಯಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾಗಿದ್ದಾರೆ.
`ಹೃನ್ನಾದ’, `ಕಮ್ಮಟದ ಕಾರಣಿಕ’ (ಭಾಮಿನಿ ಷಟ್ಪದಿ) `ವಿವೇಚನೆ,’ `ವಚನ ಚಿಂತನೆ’, `ಸ್ವಾತಂತ್ರ‍್ಯ ಹೋರಾಟಗಾರ ಲಿಂಗಶೆಟ್ಟೆಪ್ಪ ಸಾಹು’, ‘ಹೇಮರೆಡ್ಡಿ ಮಲ್ಲಮಾಂಬೆಯ ಪುರಾಣಂ’ (ಸರಳಾನುವಾದ) `ವಚನ ಸಂಪದ’ (ಸಂಪಾದನೆ) `ಸಂಸ್ಕೃತಿ ಸಿಂಚನ’ `ಕಲಿಗಾಲದ ತಿವದಿಗಳು’ (ಅಂಶಗಣ ಪ್ರಧಾನವಾದ ತ್ರಿಪದಿ) ಇವು ಇವರ ಪ್ರಮುಖ ಕೃತಿಗಳಾಗಿವೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ `ಧರಿನಾಡ ಸಿರಿ’ ಮತ್ತು `ವ್ಯಾಕರಣ ಶ್ರೀ ರತ್ನ’ ಎಂಬ ಪ್ರಶಸ್ತಿ ನೀಡಿ ನಾರಾಯಣಪುರದಲ್ಲಿ ನಡೆದ ೪ನೇ ವಲಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಿದ್ದಾರೆ. ೧೯೮೩ರಲ್ಲಿ ಕೈವಾರದಲ್ಲಿ ನಡೆದ ೫೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಹಾಗೂ ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ೬೨ನೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಚಂದ್ರಕಾಂತ ಪೊಸ್ತೆ
ದಲಿತ ಬಂಡಾಯ ಲೇಖಕರಾದ ಚಂದ್ರಕಾAತ ಪೊಸ್ತೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದ ಶ್ರೀ ವಿಠಲರಾವ ಪೊಸ್ತೆ ಮತ್ತು ಶ್ರೀಮತಿ ನರಸಾಬಾಯಿ ದಂಪತಿಗಳಿಗೆ ದಿನಾಂಕ ೫-೮-೧೯೫೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿ ಪಡೆದು ೧೯೭೪ರಲ್ಲಿ ಕರ್ನಾಟಕ ಸರ್ಕಾರದ ರಾಯಚೂರು ಭೂ ಮಾಪನ ಇಲಾಖೆಯಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸಿ ೨೦೧೦ರಲ್ಲಿ ಕಲಬುರಗಿಯ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿ ಇವರು ಶೋಷತ ಜನಾಂಗದ ಧ್ವನಿಯಾಗಿ ಚಂಪಾ, ದ್ಯಾವನೂರರ ಒಡನಾಟದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ೧೯೮೭ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಾಲಿ ಭಾಷೆಯಿಂದ ಮರಾಠಿಗೆ ಅನುವಾದಿಸಿದ್ದ `ಬುದ್ಧ ವಂದನಾ’ ಎಂಬ ಕೃತಿಯು ಕನ್ನಡಕ್ಕೆ ಅನುವಾದಿಸಿ ಅದರ ೧೦ ಸಾವಿರ ಪ್ರತಿಗಳು ನಾಡಿನಾದ್ಯಂತ ಉಚಿತವಾಗಿ ಹಂಚಿದ್ದಾರೆ. ೨೦೧೭ರಲ್ಲಿ `ವೈಚಾರಿಕ ಸಂಘರ್ಷ’ ಎಂಬ ಮತ್ತೊಂದು ಕೃತಿ ಬಹಳ ವರ್ಷಗಳ ನಂತರ ಪ್ರಕಟಿಸಿ ಇದು ಕೂಡ ಉಚಿತವಾಗಿ ಹಂಚಿದ್ದಾರೆ.
ದಲಿತ ಮತ್ತು ಬಂಡಾಯ ಸಾಹಿತ್ಯ ಸಂಘಟನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಕೆಲ ಸಭೆ ಸಮಾರಂಭಗಳನ್ನು ಆಯೋಜಿಸಿ ೧೯೮೬ರಲ್ಲಿ ದ್ಯಾವನೂರ ಮಹಾದೇವ ರವರ ಜೋತೆಗೂಡಿ ಕರ್ನಾಟಕದಿಂದ ಇವರಿರ್ವರು ಮಾತ್ರ ಪ್ರತಿನಿಧಿಯಾಗಿ ಹೈದರಾಬಾದಿನಲ್ಲಿ ನಡೆದ ವಿಶ್ವ ಬರಹಗಾರರ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಸಾಹಿತಿ, ಉತ್ತಮ ವಾಗ್ಮಿಗಳು, ಕ್ರಾಂತಿಕಾರಿ ಭಾಷಣಕಾರರು ಆದ ಇವರಿಗೆ ೧೯೮೭ರಲ್ಲಿ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ `ಡಾ.ಅಂಬೇಡ್ಕರ್ ಫೀಲ್ಲೊಷಿಪ್ ಪ್ರಶಸ್ತಿ, ೧೯೯೭ರಲ್ಲಿ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
೧೯೮೮ರಲ್ಲಿ ನಾಗಪುರದಲ್ಲಿ ಜರುಗಿದ ನಾಟ್ಯ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ್ದರಿಂದ ತಾಮ್ರಪಟವು ನೀಡಿ ಸತ್ಕಾರಿಸಿದ್ದಾರೆ. ಮತ್ತು ಮಧ್ಯ ಪ್ರದೇಶದ ಬಾಲ ವಿಶ್ವವಿದ್ಯಾಲಯ ನಾಗಪುರ, ಬೀದರ, ಗುಲಬರ್ಗಾ, ಧಾರವಾಡ, ಮೈಸೂರು, ಪುಣೆ, ಬೆಂಗಳೂರು ಮೊದಲಾದ ವಿಶ್ವವಿದ್ಯಾಲಗಳಿಂದ ಗೌರವ ಸಮ್ಮಾನ ಪಡೆದಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಸರಸ್ವತಿ ವಿ.ಪಾಟೀಲ್
ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವೂ ಸಾಹಿತ್ಯ ರಚಿಸುತ್ತಿರುವ ಲೇಖಕಿಯೆಂದರೆ ಸರಸ್ವತಿ ವಿ.ಪಾಟೀಲ್ ರವರು. ಇವರು ಕಲಬುರಗಿಯ ಗಣಪತರಾವ ಲಿಂಗನವಾಡಿ ಪಾಟೀಲ್, ಮತ್ತು ಗಂಗಾಬಾಯಿ ದಂಪತಿಗಳಿಗೆ ದಿನಾಂಕ- ೪-೧೨-೧೯೫೧ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು, ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಎಂ.ಎ.ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪಡೆದು, ೧೯೭೬ರಲ್ಲಿ ಕಲಬುರಗಿಯ `ಗೋದುತಾಯಿ ಮಹಿಳಾ ಮಹಾವಿದ್ಯಾಲಯ’ ಹಾಗೂ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಭಾರತದ ಸಂವಿಧಾನ’ `ಭಾರತದ ಸರಕಾರ ಹಾಗೂ ರಾಜಕೀಯ’ `ರಾಜಕೀಯ ಸಿದ್ಧಾಂತ’ `ರಾಜನೀತಿ ವಿವೇಚಕರು’ `ಭಾರತದ ರಾಜಕೀಯ ಪ್ರಕ್ರಿಯೆ’ `ಸಾರ್ವಜನಿಕ ಆಡಳಿತ ಭಾಗ -೧ ‘ `ಸಾರ್ವಜನಿಕ ಆಡಳಿತ ಭಾಗ-೨ . ಇವು ಅವರು ‘ರಾಜ್ಯ ಶಾಸ್ತ್ರ’ ಪದವಿ ಪಠ್ಯ ವಿಷಯಕ್ಕೆ ಸಂಬAಧಿಸಿದAತೆ ಬರೆದು ಪ್ರಕಟಿಸಿದ್ದಾರೆ. `ರುಚಿಕರ ಅಡುಗೆ’ `ಜನಪದ ಹಾಡುಗಳು’ `ಮನೆಮದ್ದು’ `ಕೋಹಿನೂರು ಕುಸುಮ’ `ಚನ್ನ ಸಂಭ್ರಮ -೫೭.’ ಎಂಬ ಕೃತಿಗಳು ಸಂಪಾದಿಸಿದ್ದಾರೆ. ಮತ್ತು ಹಾರಕೂಡ ಸಂಸ್ಥಾನ ಮಠದ ಪೂಜ್ಯ ಷ.ಬ್ರ.ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಕುರಿತು ಕೆಲ ಕವನಗಳು ರಚಿಸಿದ್ದಾರೆ. ಇವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಿAದ `ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ಡಾ.ಬಾಬುರಾವ ಮುಡಬಿ
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲ ಕೃತಿಗಳು ಪ್ರಕಟಿಸಿದ ಲೇಖಕರೆಂದರೆ ಡಾ.ಬಾಬುರಾವ ಮುಡಬಿ.ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ದಿ.ಚಂದ್ರಪ್ಪಾ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೧೩-೫-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ೧೯೭೬ರಲ್ಲಿ ತಹಶಿಲ್ದಾರರಾಗಿ ಸೇವೆಗೆ ಸೇರಿ ಸುಮಾರು ಸತತವಾಗಿ ೨೦ ಇಲಾಖೆಗಳಲ್ಲಿ ಉನ್ನತ ಅಧಿಕಾರಿಯಾಗಿ, ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ, ಕೆ.ಎಸ್.ಆರ್.ಟಿ.ಸಿ. ಕೃಷಿ, ಭೂ ಮಾಪನ, ಮತ್ತು ಸಮಾಜಕಲ್ಯಾಣ ಇಲಾಖೆಯ ಆಯುಕ್ತರಾಗಿ ಸೇವೆ ಸತತ ೩೬ ವರ್ಷ ಸೇವೆ ಸಲ್ಲಿಸಿ ೨೦೧೨ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ, ಹಲವಾರು ಲೇಖನಗಳನ್ನು ಬರೆದು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. `ಮಹಿಳಾ ಸಬಲಿಕರಣ ಮತ್ತು ಅಂಬೇಡ್ಕರ್ ದೃಷ್ಟಿಕೋನ’ ಎಂಬುದು ಅವರ ಪಿ.ಎಚ್.ಡಿ. ಪ್ರಬಂಧ ಪುಸ್ತಕ ಪ್ರಕಟಿಸಿದ ಇವರು `ಸಾರ್ವಜನಿಕ ಆಡಳಿತ ನಿರ್ವಹಣೆ’ ಕುರಿತು ಕೆಲ ಪುಸ್ತಕಗಳು, ಹಾಗೂ ತಮ್ಮ ಜೀವನದಲ್ಲಿ ನಡೆದು ಬಂದ ಕಾಲಘಟ್ಟಗಳ ಕುರಿತು `ಆತ್ಮಕತೆ’ಯು ಬರೆಯುತ್ತಿದ್ದಾರೆ. ಇವರು ಲಕ್ಷ್ಮಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯೊAದು ಹುಟ್ಟು ಹಾಕಿ ಅದರ ಮೂಲಕವು ಕೆಲ ಲೇಖಕರ ಕೃತಿಗಳು ಪ್ರಕಟಿಸಿದ್ದಾರೆ. ಇವರು ಶಿಕ್ಷಣ ಕ್ಷೇತ್ರದಲ್ಲಿಯು ತುಂಬ ಆಸಕ್ತರಾಗಿದ್ದರಿಂದ ಶ್ರೀ ಲಕ್ಷ್ಮಿ ವಿದ್ಯಾವರ್ಧಕ ಶಿಕ್ಷಣ ಸಂಘದ ವತಿಯಿಂದ ಬಸವಕಲ್ಯಾಣದಲ್ಲಿ ಶ್ರದ್ಧಾಂಜಲಿ ಕಿವುಡು ಮಕ್ಕಳ ವಸತಿಯುತ ಶಾಲೆ ತೆರದು, ಆ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಮತ್ತು ಬಸವಕಲ್ಯಾಣದಲ್ಲಿ ಬಿ.ಎಡ್.ಶಿಕ್ಷಕರ ತರಬೇತಿ ಸಂಸ್ಥೆಯು ೨೦೦೪ರಲ್ಲಿ ತೆರೆದು ಶಿಕ್ಷಣ ನೀಡುತ್ತಿದ್ದಾರೆ. ಹಾಗೂ ಪದವಿ ಮಹಾವಿದ್ಯಾಲಯಗಳು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಮತ್ತು ತಮ್ಮ ಹುಟ್ಟೂರಿನಲ್ಲಿ ಮಾಜಿ ಶಾಸಕ ಗೋಪಾಳರಾವ ಪಾಟೀಲ್ ರವರ ಹೆಸರಿನಲ್ಲಿ ಪ್ರೌಢ ಶಾಲೆಯೊಂದು ತೆರೆದು ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಊರಲ್ಲಿ ಪ್ರಾಥಮಿಕ ಪ್ರೌಢ ಶಾಲೆಗಳು ಸರ್ಕಾರಿ ಅನುದಾನಿತಗೊಂಡಿವೆ. ಕಲಬುರಗಿಯಲ್ಲಿಯು ಸರ್ವೋದಯ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯೊಂದಿಗೆ,ವಿವಿಧ ಶಾಲಾ ಕಾಲೇಜುಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆಯಬೇಕಾದರೆ ಅವರು ಮಾಡಬೇಕಾದ ಸತತ ಅಧ್ಯಯನದ ಕುರಿತು ಕೈಪಿಡಿಗಳು ಬರೆದು ಮುದ್ರಿಸುವ ವಿಚಾರದಲ್ಲಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದು ವಿಶ್ರಾಂತಿ ಜೀವನದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರ ಕುರಿತು ಶಿವಮೊಗ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜೋಗನ್ ಶಂಕರ ಅವರು ಪ್ರಧಾನ ಸಂಪಾದಕರಾಗಿ, ಹಂಪಿಯ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಮಲ್ಲಿಕಾ ಘಂಟಿಯವರ ಸಂಪಾದಕತ್ವದಲ್ಲಿ `ಕಪ್ಪು ಕಾಲಿನ ಖಡ್ಗ’ ಎಂಬ ಅಭಿನಂದನಾ ಗ್ರಂಥವು ಪ್ರಕಟಗೊಂಡು ಬಿಡುಗಡೆಯಾಗಿದೆ.
ಪ್ರೊ. ಸೂರ್ಯಕಾಂತ ಶೀಲವಂತ
ಸೃಜನೇತರ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರೊ. ಸೂರ್ಯಕಾಂತ ಶೀಲವಂತ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಶಂಕರೆಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೮-೧೨-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ.ಸ್ನಾತಕೋತ್ತರ ಪದವೀಧರರಾದ ಇವರು ಶ್ರೀ ಬಸವೇಶ್ವರ ಪ.ಪೂ. ಮತ್ತು ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜಿನಲ್ಲಿ ೨೦ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಸದ್ಯ ಪುಣ್ಯ ಕೋಟಿ ಕಲಾ ಮತ್ತು ವಾಣಿಜ್ಯ ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ೨೦೦೪ರಲ್ಲಿ `ಸ್ವತಂತ್ರ ಭಾರತದಲ್ಲಿ ಶಿಕ್ಷಣ ಮತ್ತು ಶ್ರೇಷ್ಠ ಶಿಕ್ಷಣ ತಜ್ಞರು’ ಎಂಬ ಕೃತಿ ಪ್ರಕಟಿಸಿದ್ದು ಅದು ಪಠ್ಯ ಪುಸ್ತಕವಾಗಿದೆ. ಮತ್ತು ಇವರ ಬರಹಗಳು ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಪ್ರಕಟವಾಗುವ `ರಂಭಾಪುರಿ ಬೆಳಗು’ ಮತ್ತಿತರ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಇವರಿಗೆ ೨೦೦೫ರಲ್ಲಿ ಬಸವಕಲ್ಯಾಣ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೧೨ರಲ್ಲಿ ಉತ್ತರಾಂಚಲ ರಾಜ್ಯದ ಶ್ರೀ ಹಿಮವತ್ತೆ ದಾರ ಪೀಠದಿಂದ `ವೃತ್ತಿ ಶ್ಚೆöÊತನ್ಯ ರತ್ನ ಪ್ರಶಸ್ತಿ, ೨೦೧೫ರಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಿಂದ `ಶಿಕ್ಷಣ ತಜ್ಞ ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಲಕ್ಷ್ಮಣ ಬಾಬಶೆಟ್ಟಿ
ಸಾಹಿತಿ ಲಕ್ಷ್ಮಣ ಬಾಬಶೆಟ್ಟಿಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸಂಬಾಜಿರಾವ ಮತ್ತು ರೇವಮ್ಮಾ ದಂಪತಿಗಳಿಗೆ ದಿನಾಂಕ ೧-೮-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಇAಗ್ಲೀಷ್ ಸ್ನಾತಕೋತ್ತರ ಪದವೀಧರರಾದ ಇವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ ಬರಹಗಳು ಬರೆದಿದ್ದಾರೆ. ಮತ್ತು ೧೯೮೯ರಲ್ಲಿ `ವಿನಯ ಸಶ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಭಾಲ್ಕಿಯ ಭೀಮನಗರದಲ್ಲಿ ವಾಸವಾಗಿದ್ದಾರೆ.
ಡಾ.ಮಯಾದೇವಿ ಜಿ. ಮಾಲಿ ಪಾಟೀಲ್.
ಸಾಹಿತಿ ಹಾಗೂ ಕವಯತ್ರಿಯಾದ ಡಾ.ಮಹಾದೇವಿ ಜಿ.ಮಾಲಿಪಾಟೀಲ್. ಇವರು ಬಸವಕಲ್ಯಾಣ ತಾಲೂಕಿನ ಸಿರಗಾಪೂರದ ಜಿ.ಎಸ್.ಮಾಲಿಪಾಟೀಲ್ ರವರ ಧರ್ಮ ಪತ್ನಿಯಾಗಿದ್ದು, ಕಮಲಾಪೂರ ತಾಲೂಕಿನ ಮಹಾಗಾಂವದ ಶ್ರೀಮಂತರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೪-೫-೧೯೫೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವೀಧರರಾದ ಇವರು ಕಲಬುರಗಿಯ ಶ್ರೀನಿವಾಸ ಸರಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಅಂಬಲಗಿ ಚನ್ನಮಲ್ಲ ಕವಿ, ಜೀವನ ಕೃತಿಗಳ ಒಂದು ಅಧ್ಯಯನ’ ಎಂಬುದು ಅವರ ಪಿ.ಎಚ್.ಡಿ.ಮಹಾ ಪ್ರಬಂಧವಾಗಿದೆ.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ೧೯೯೯ರಲ್ಲಿ `ಸಾರ್ಥಕ ಬದುಕು, ೨೦೦೦ರಲ್ಲಿ `ಸೋಲರಿಯದ ಸರದಾರ ರಾಮಚಂದ್ರ ವೀರಪ್ಪ, ಶರಣಯ್ಯಾ ಸ್ವಾಮಿ ಮಹಾಗಾಂವ, ೨೦೧೨ರಲ್ಲಿ `ಅಂಬಲಗಿಯ ಚನ್ನಮಲ್ಲ ವಿರಚಿತ ಶಿಬಿರಾಯನ ಸುತ್ತಿ, ೧೯೯೭ರಲ್ಲಿ `ಆಳಂದ ತಾಲೂಕಿನ ಕವಿಗಳು, ೨೦೦೦ರಲ್ಲಿ `ಆಳಂದ ತಾಲೂಕಿನ ದರ್ಶನ, ೨೦೦೨ರಲ್ಲಿ `ಆಳಂದ ತಾಲೂಕಿನ ಸ್ವತಂತ್ರ ಹೋರಾಟಗಾರರು, ವಿಮೋಚನಾ ಹೋರಾಟಕ್ಕೆ ಮಹಿಳೆಯರ ಕೊಡುಗೆ, ಹಾಗೂ ೨೦೦೩ರಲ್ಲಿ `ಹೈದರಾಬಾದ ಕರ್ನಾಟಕ ವಿಭಾಗ ಶಿಕ್ಷಣದಲ್ಲಿ ಹಿಂದುಳಿಯಲು ಕಾರಣ, ಷಡ್ವರ್ಗಗಳು ಅರಿಗಳೇ ? ಮಿತ್ರರೇ ? ೨೦೦೮ರಲ್ಲಿ `ಆದರ್ಶ ದಂಪತಿ, ೨೦೧೨ರಲ್ಲಿ `ವೀರಶೈವ ಧರ್ಮಾಚರಣೆಗಳು, `ಗುರುಗಳನ್ನು ನಾನು ಕಂಡAತೆ, ಸಿಂಗಾಪುರದ ತತ್ವಪದಕಾರ ನಾಗೇಂದ್ರ ಬಿರಾದಾರ. ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಚರ್ಚೆ, ಉಪನ್ಯಾಸಗಳು ಕನ್ನಡದ ವಿವಿಧ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕೆಲವರ್ಷ ಆಳಂದ ತಾಲೂಕಿನ ಕಸಾಪ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ೨೦೦೩ರಲ್ಲಿ ಕಲಬುರಗಿಯಿಂದ `ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ೨೦೧೮ರಲ್ಲಿ ಕಲಬುರಗಿಯ ಕಸಾಪದ ವತಿಯಿಂದ `ಉತ್ತಮ ಶಿಕ್ಷಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀ ಚೆನ್ನರತ್ನ’ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ವೇದಿಕೆಯ ಕವಿಗೋಷ್ಠಿಯಲ್ಲಿ `ಹಳದಿಯ ಹಾಲು’ ಕಾವ್ಯ ವಾಚನವು ಮಾಡಿದ್ದಾರೆ.
ದಿ. ಶ್ರೀಕಾಂತ ಪಾಟೀಲ್
ಗ್ರಾಮೀಣ ಸೋಗಡಿನ ಕತೆಗಳು ಬರೆದು ನಾಡಿನಾದ್ಯಂತ ಚಿರಪರಿಚಿತರಾದ ಕತೆಗಾರರೆಂದರೆ ಶ್ರೀಕಾಂತ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ವೀರಪ್ಪಾ ಪೋಲಿಸ್ ಪಾಟೀಲ್ ಮತ್ತು ನಿಜಗುಣ ಪೋಲಿಸ್ ಪಾಟೀಲ್ ದಂಪತಿಗಳಿಗೆ ದಿನಾಂಕ ೧೭-೭-೧೯೫೯ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಅಗ್ರಿಕಲ್ಚರ್ ಪದವಿ ಪಡೆದು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆಗೆ ಸೇರಿದ ಇವರು ೧೯೯೭ರಲ್ಲಿ `ಬೆಂಕಿ ಮರೆಯ ತಂಪು’ (ಕಥಾ ಸಂಕಲನ) `ಸರಣಿ ಕಥೆಗಳು’ (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ.
ಇವರು ಬರೆದವುಗಳಲ್ಲಿ `ಹಕ್ಕಲ ಸೆಂಗಾ’ `ಮಣ್ಣು’ `ಜರ್ದಾರಿ ರುಮಾಲು’ `ಸಂಬAಧ’ `ಮೂಡಲದಾಗ ಕೆಂಪ ರಾಶಿ ಮೂಡಿತ್ತು’ `ಸಾಲ’ `ಗಟ್ಟಿ ಎಳೆ’ `ಧರ್ಮ ಬೆಲಿ ಬದುಕು’ `ದಾರಿ’ `ಚಿತ್ತಿಗಳು’ `ಬೆಂಕಿ ಮರೆಯ ತಂಪು’ `ಭೂಮಿ ತಾಯಿ ಮುಣದಾಳ’ ಎಂಬ ಕತೆಗಳು ಪ್ರಮುಖವಾಗಿವೆ. `ಭೂಮಿ ತಾಯಿ ಮುಣದಾಳ’ ಕತೆ ೧೯೯೮ರಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ತೃತಿಯ ಬಹುಮಾನ ಪಡೆದರೆ, `ಬೆಂಕಿ ಮರೆಯ ತಂಪು’ ೨೦೦೨ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. ೧೯೯೧ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತರ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಜರ್ದಾರಿ ರುಮಾಲು’ ಕತೆ ಪ್ರಥಮ ಸ್ಥಾನ ಪಡೆದಿದೆ. ಮತ್ತು ೧೯೯೩ರಲ್ಲಿ ಇದೇ ಕಥಾ ಸ್ಪರ್ಧೆಯಲ್ಲಿ `ಮೂಡಲದಾಗ ಕೆಂಪು ರಾಶಿ ಮೂಡಿತ್ತು’ ಎನ್ನುವ ಕತೆಗೆ `ಅತ್ಯುತ್ತಮ ಕತೆ’ ಎಂಬ ಪುರಸ್ಕಾರ ಪಡೆದುಕೊಂಡಿದೆ.
೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದ ಅಮರೇಶ್ವರ ನುಗಡೋಣಿಯವರು ಸಂಪಾದಿಸಿದ ಹೈದರಾಬಾದ್ ಕರ್ನಾಟಕ ಲೇಖಕರ ಪ್ರಾತಿನಿಧಿಕ ಕಥಾಸಂಕಲನ `ಬಿಸಿಲ ಹನಿಗಳು’ ಎಂಬ ಪುಸ್ತಕದಲ್ಲಿ ಇವರದೊಂದು ಕತೆಯು ಪ್ರಕಟವಾಗಿದೆ. ೨೦೦೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕನ್ನಡ ಐಚ್ಛಿಕ ವಿಷಯದಲ್ಲಿ ಇವರ `ಸಾಲ’ ಎಂಬ ಕತೆ ಪಠ್ಯವಾಗಿತ್ತು. ಇವರ ಕತೆಗಳು ತುಷಾರ, ಸುಧಾ,ಪ್ರಜಾವಾಣಿ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮತ್ತು ಕಲಬುರಗಿ ಆಕಾಶವಾಣಿಯಿಂದ ಅವು ರೇಡಿಯೋ ನಾಟಕ ರೂಪಾಂತರವಾಗಿಯೂ ಪ್ರಸಾರವಾಗಿವೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ೨೦೦೨ ರಲ್ಲಿ ಕರ್ನಾಟಕ ಸರ್ಕಾರವು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಿತ್ತು. ದುರಾದೃಷ್ಟವೆಂದರೆ ಇವರು ೨೦೦೪ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದಿನಾಂಕ ೫-೧-೨೦೦೪ರಲ್ಲಿ ಇಹಲೋಕ ತ್ಯಜಿಸಿದರಿಂದ ಕನ್ನಡ ಕಥಾ ಸಾಹಿತ್ಯದ ಕೊಂಡಿಯೊAದು ಕಳಚಿದಂತಾಗಿದೆ.
ಹಣಮಂತ ರಾವ ವಿಸಾಜಿ
ಸಾಹಿತಿ ಹಣಮಂತರಾವ ವಿಸಾಜಿಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರ ಗ್ರಾಮದ ಬಸವಣಪ್ಪಾ ಮತ್ತು ಸಂಗಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೯ರಲ್ಲಿ ಜನಿಸಿದ್ದಾರೆ. ಕತೆ ಕವನ ನಾಟಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡು ಬಂದ ಇವರು `ಬದುಕು ಬಂಡಿ’ ಮತ್ತು `ಐವತ್ತಾರು ಸಹೋದರರು’ (ಕವನ ಸಂಕಲನಗಳು) `ಬಡವನ ನಿರ್ಧಾರ ‘ (ನಾಟಕ) `ನುಡಿ ಮುತ್ತುಗಳು’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನರತ್ನ ಪ್ರಶಸ್ತಿ’ ಭಾಲ್ಕಿಯ ತಾಲೂಕು ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ’ `ಬಸವಕಲ್ಯಾಣದ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯವು ಕೊಡುವ `ಸಾಹಿತ್ಯ ರತ್ನ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದ ಇವರು ಸದ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಎಂ.ಡಿ.ಕಾಡಾದಿ
ಅಧ್ಯಾತ್ಮಿಕ ನೈತಿಕ, ಭಕ್ತಿ ಭಾವದ ಕವಿತೆಗಳು ಬರೆದು ಸಾಮಾಜಿಕ ಪರಿವರ್ತನೆ ಬಯಸುವ ಕವಿಯೆಂದರೆ ಎಂ.ಡಿ.ಕಾಡಾದಿ.ಇವರ ಪೂರ್ಣನಾಮ ಮಲ್ಲಿಕಾರ್ಜುನ ತಂದೆ ಧೂಳಯ್ಯಾ ಕಾಡಾದಿಮಠ ಎಂದಾಗಿದೆ. ಬೀದರ ಜಿಲ್ಲೆ ಬಸವಕಲ್ಯಾಣದ ಧೂಳಯ್ಯಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೬-೧೯೬೦ ರಲ್ಲಿ ಜನಿಸಿದ ಇವರು. ಡಿ.ಇ.ಇ. ಎಂ.ಎ.ಇAಗ್ಲೀಷ್ ಸ್ನಾತಕೋತ್ತರ ಪದವಿಧರರಾಗಿ ವಿದ್ಯುತ್ ಇಂಜಿನಿಯರಿAಗ್ ವಿಭಾಗದ ಉಪನ್ಯಾಸಕ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿ ೧೯೮೦ರಿಂದ ೨೦೧೫ರವರೆಗೆ ಎಸ್.ಎಸ್.ಕೆ.ಬಿ.ಕಾಲೇಜು ಬಸವಕಲ್ಯಾಣ, ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಬೀದರನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಇವರು ೨೦೦೩ರಲ್ಲಿ `ಮೂಡಣ’ ಮತ್ತು ೨೦೦೮ರಲ್ಲಿ `ನಿಸರ್ಗ’ ಎಂಬ ಕವನ ಸಂಕಲನಗಳು ಹೊರ ತಂದಿದ್ದಾರೆ. ಮತ್ತು `ಹತ್ತು ಮುಖಗಳ ನೂರು ಭಾವಗಳು’ ಎಂಬ ಕೃತಿಯಲ್ಲಿ ಇತರ ಹತ್ತು ಕವನಗಳು ಪ್ರಕಟವಾಗಿವೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಅಧ್ಯಾತ್ಮಿಕ ಕವಿತೆಗಳು ಭಜನೆ ಗೀತೆಗಳಾಗಿ ಜನಪ್ರಿಯವಾಗಿವೆ. ಇವರರಿಗೆ ತಾಲೂಕಾ `ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಅಭಿವೃದ್ಧಿ ಬಳಗದಿಂದ `ಸುವರ್ಣ ಕನ್ನಡಿಗ ಪ್ರಶಸ್ತಿ, ಮತ್ತು ಹಾರಕೂಡ ಮಠದಿಂದ `ಶ್ರೀಚೆನ್ನ ರತ್ನ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಜಿ.ಎಸ್.ಮಾಲಿ ಪಾಟೀಲ್
ಸಾಹಿತ್ಯ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡು ಪುಸ್ತಕ ಪ್ರಕಟಿಸಿದ ಕವಿ, ಸಾಹಿತಿಯೆಂದರೆ, ಜಿ. ಎಸ್. ಮಾಲಿ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಸಿರಗಾಪುರ ಗ್ರಾಮದ ಸಿದ್ರಾಮಪ್ಪ ಮಾಲಿ ಪಾಟೀಲ್ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಸ್ನಾತಕೋತ್ತರ ಪದವಿಧರರಾದ ಇವರು ೧೯೯೦ರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಸೇವೆಗೆ ಸೇರಿ ಆಳಂದ ತಾಲೂಕಿನ ವಿ. ಕೆ. ಸಲಗರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೯೯ರಲ್ಲಿ `ಒಳ ದನಿ’ ಎಂಬ ಕವನ ಸಂಕಲನವು ಪ್ರಕಟಸಿದ್ದಾರೆ. ಇವರ ಕವನ, ಲೇಖನ, ಚಿಂತನ ಬರಹಗಳು `ಸಾಹಿತ್ಯ ಸಾರಥಿ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಕಲಬುರಗಿ ಆಕಾಶವಾಣಿಯಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಹಾಗೂ ಹಾರಕೂಡ ಶ್ರೀಗಳ `ನುಡಿ ಚನ್ನ’ ಅಭಿನಂದನಾ ಗ್ರಂಥ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಸಾಹಿತ್ಯದೊಂದಿಗೆ ಸಂಘಟನಾ ಚಾತುರ್ಯತೆಯು ಹೊಂದಿದ ಇವರು ಕನ್ನಡ ಭಾಷೆ, ನಾಡು- ನುಡಿಗಾಗಿ ಸಾಕಷ್ಟು ದುಡಿದಿದ್ದಾರೆ. ೧೯೯೬-ರಿಂದ ೧೯೯೮ರ ವರೆಗೆ ಆಳಂದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೧೯೯೯ರಿಂದ ೨೦೦೧ರವರೆಗೆ ಕಸಾಪ ಅಧ್ಯಕ್ಷರಾಗಿ, ೨೦೧೩ರಿಂದ ೨೦೧೫ರ ವರೆಗೆ ಕಲಬುರಗಿ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಇದಕ್ಕೂ ಮೊದಲು ೧೯೯೨ರಿಂದ ೨೦೦೪ರ ವರೆಗೆ ರಾಷ್ಟ್ರೀಯ ಬಸವ ಕೇಂದ್ರ, ಮತ್ತು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಆಳಂದ ಪತ್ರಕರ್ತರಾಗಿ ಸೇವೆ ಸಲ್ಲಿಸಿ ೨೦೧೦ ರಿಂದ ೨೦೧೪ರ ವರೆಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಮಹಾಂತ ಜ್ಯೋತಿ ಪ್ರಶಸ್ತಿ’ `ಕರ್ನಾಟಕ ಚೇತನ ಪ್ರಶಸ್ತಿ’ `ಜನಪ್ರಿಯ ಶಿಕ್ಷಕ ಪ್ರಶಸ್ತಿ’ `ಸೇವಾ ರತ್ನ ಪ್ರಶಸ್ತಿ’ `ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಖಜೂರಿ, ಹಾರಕೂಡ, ನರೋಣ ಇತ್ಯಾದಿ ಶ್ರೀಗಳಿಂದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿ ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಮಲ್ಲಿಕಾರ್ಜುನ ಎಂ.ಪಂಚಾಳ
ಸುಮಾರು ೧೯೮೨ರಿಂದ ssಸಾಹಿತ್ಯ ಕ್ಷೇತ್ರದಲ್ಲಿ ತೋಡಗಿಸಿಕೊಂಡು ಬಹಳ ವರ್ಷಗಳ ನಂತರ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮಲ್ಲಿಕಾರ್ಜುನ ಎಂ.ಪAಚಾಳ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಆರ್) ಗ್ರಾಮದ ಮೋನಪ್ಪಾ ಮತ್ತು ಈರಮ್ಮಾ ದಂಪತಿಗಳಿಗೆ ದಿನಾಂಕ ೧-೭-೧೯೬೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿ ಪಡೆದು ೧೯೯೪ರಲ್ಲಿ ಹುಮನಾಬಾದ ತಾಲೂಕಿನ ಕೊಡಂಬಲ್‌ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಹಲವು ವರ್ಷಗಳ ನಂತರ ಬಡ್ತಿ ಹೊಂದಿ ಅದೇ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಕವನ ಕುಸುಮ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ನನ್ನ ತಂಗಿ’ ಎಂಬ ಕಾದಂಬರಿ, `ಅಮೃತ ಸ್ವಾದ’ ಎಂಬ ಚೌಪದಿ ಪದ್ಯಗಳು, ನೂರಾರು ತ್ರಿಪದಿಗಳು, ಕತೆ, ಕವನ, ಭಾಷಣ, ಲೇಖನಗಳನ್ನು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರಿಗೆ ೨೦೧೧ರಲ್ಲಿ ಬೀದರ ಜಿಲ್ಲಾ ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಮಾಣಿಕರೆಡ್ಡಿ ಕೌಡಾಳೆ.
ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಿರುವ ಮಾಣಿಕರೆಡ್ಡಿ ಕೌಡಾಳೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ತಿಪ್ಪಾರೆಡ್ಡಿ ಮತ್ತು ರಂಗಮ್ಮಾ ದಂಪತಿಗಳಿಗೆ ದಿನಾಂಕ ೧೨-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎA.ಇAಗ್ಲೀಷ್ ಸ್ನಾತಕೊತ್ತರ ಪದವಿಧರರಾದ ಇವರು ಕೆ.ಎ.ಎಸ್ ಪರೀಕ್ಷೆಯು ಪಾಸು ಮಾಡಿ ಇಂಗ್ಲೀಷ್‌ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಮತ್ತು ಇಂಗ್ಲೀಷ್ ಭಾಷೆಯಲ್ಲಿ `ಒಡಿಸಿ ಪವರೆಡ್ ಬಾಯ್ ಪಾಜಿಟಿವ್ ವಿಬ್ರೆಶನ್ಸ ‘ ಎಂಬ ಕಾದಂಬರಿ ಬರೆದಿದ್ದು ಅದು ‘ಇಂಡಿಯನ್ ಎಕ್ಸಪ್ರೆಸ್’ಎಂಬ ಆಂಗ್ಲ ಭಾಷೆ ಪತ್ರಿಕೆಯಲ್ಲಿ ವಿಮರ್ಶೆಯು ಪ್ರಕಟವಾಗಿದೆ. ಇವರು ಕೆಲವರ್ಷ ಮಧ್ಯ ಪ್ರದೇಶ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದು, ಸೇವೆ ಸಲ್ಲಿಸಿ ನಂತರ ಆ ಹುದ್ದೆ ತೊರೆದು ಬೆಂಗಳೂರಿನ ಎನ್.ಡಿ.ಡಿ.ಬಿ.ಮೈಯ್ಕೊ ಸಿಡ್ಸ,,ಜೆಕೆ, ಗ್ರೂಪ್ಸ ಸುಕುಮಾ ಎಂಬ ಕೆಲವು ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆಗಳು ನಿರ್ವಹಿಸಿ ೫೦ಕ್ಕೂ ಹೆಚ್ಚು ದೇಶಗಳನ್ನು ಕಂಪನಿ ಕೆಲಸದ ನಿಮಿತ್ತ ಸುತ್ತಾಡಿದ್ದಾರೆ. ಮತ್ತು ವೀದೆಶಾಂಗ ವ್ಯವಹಾರದಲ್ಲಿ `ಕನ್ಸಲಂಟ್’ ಕೆಲಸ ಮಾಡಿದ್ದಾರೆ. ಹಾಗೂ ಹಲವಾರು ಕಾಲೇಜಿನ ವಿಶ್ವವಿದ್ಯಾಲಯದ ಇಂಜಿನಿಯರಿAಗ್ ಪದವಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿ `ಎಕ್ಸಫರ್ಟ ಇಂಪರ್ಟ ಕನ್ಸಲ್ಟ’ ಎಂಬ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ.
ಡಾ. ನೀಲಾಂಬಿಕಾ ಶೇರಿಕಾರ
ಜನಪದ ಮತ್ತು ಶರಣ ಸಾಹಿತ್ಯದಲ್ಲಿ ಸಂಶೋಧನಾತ್ಮಕ ಕಾರ್ಯ ಚಟುವಟಿಕೆ ನಡೆಸಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಡಾ.ನೀಲಾಂಬಿಕಾ ಶೇರಿಕಾರ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಶೇರಿಕಾರ ಎಂಬ ದೊಡ್ಡ ಮನೆತನದ ನಾಗಶೆಟ್ಟೆಪ್ಪಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಹಾಡಿದೇನು ಹಾಡು’ `ಮಹಾ ಮನೆಯ ಮಹಿಮಾ’ `ನನ್ನವ್ಬ’ ಎಂಬ ಕವನ ಸಂಕಲನಗಳು, `ಬಹುರೂಪಿ ಚೌಡಯ್ಯ , `ಪೂಜ್ಯ ಚನ್ನಬಸವ ಪಟ್ಟದ್ದೆವರು’. ‘ಕಲ್ಯಾಣ ಕಣ್ಮಣಿ ಬಾಬಾಸಾಹೇಬ ವಾರದ, ‘ `ಪೂಜ್ಯ ದೊಡ್ಡಪ್ಪ ಅಪ್ಪ’ `ನಿರವತಾರೆ ಅಕ್ಕ ನಾಗಮ್ಮ’ `ವೈದ್ಯ ನಕ್ಷತ್ರ’. ‘ಅಷ್ಟಾವರಣೆ’. `ಅನುಭವ ಮಂಟಪ’. `ಮಹಾಮನೆ’. ಎಂಬ ಶರಣ ಸಾಹಿತ್ಯ ಕೃತಿಗಳು `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು’ `ಶರಣಬಸವರ ಹಂತಿಯ ಹಾಡು’. `ಶರಣಬಸರ ಲಾವಣಿ ಪದಗಳು’ `ಜನಪದ ಜ್ಯೋತಿ ಶರಣಬಸವ’ `ಶರಣಬಸವರ ಶಿವಲೀಲೆಗಳು ‘ ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು’ ಕೃತಿಗೆ ಮುಖ್ಯ ಮಂತ್ರಿಯಿAದ ಪ್ರಶಸ್ತಿಯು ಲಭಿಸಿದೆ. ಮತ್ತು ಇವರ `೭೭೦ ಅಮರ ಗಣಂಗಳು’ `ಬಸವಕಲ್ಯಾಣ ಶರಣರ ನೆಲೆಗಳು’ `ತಾಯಿಯ ಪದ’ `ಹೇಮರೆಡ್ಡಿ ಮಲ್ಲಮ್ಮ’ ಈ ಕೃತಿಗಳು ಮುದ್ರಣದ ಹಂತದಲ್ಲಿವೆ. `ದಾಸೋಹ ಬಂಡಾರಿ ಶರಣಬಸವ’ ಎಂಬ ಜನಪದ ಮಹಾಕಾವ್ಯ ರಚಸಿದ ಇವರು ತ್ರಿಪದಿಯಲ್ಲಿ ಭಾಲ್ಕಿ ಶ್ರೀಗಳ ಕುರಿತು ಮತ್ತು ಜನಪದ ಜ್ಯೋತಿ ಶರಣಬಸವ ಕೃತಿಗಳನ್ನು ರಚಿಸಿದ್ದಾರೆ. ಹಂಪಿ, ಗುಲ್ಬರ್ಗ ವಿಶ್ವವಿದ್ಯಾಲಯಗಳ ಎಂ.ಫಿಲ್.ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಇವರ ಮನೆತನದ ಇನ್ನೊಂದು ಹೆಮ್ಮೆಯ ವಿಷಯವೆಂದರೆ ನಿಜಾಮ ಆಡಳಿತದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರ ಕುಟುಂಬವು ಬಡವರಿಗೆ ಅನ್ನ ಅರಿವೆ ಆಶ್ರಯ ನೀಡಿ ಹಿಂದು ಮುಸ್ಲಿಂ ಎನ್ನದೆ ಎಲ್ಲ ಸಮೂದಾಯದವರ ಜೀವ ರಕ್ಷಣೆ ಮಾಡಿರುವುದು ಈಗ ಐತಿಹ್ಯವಾಗಿದೆ.
ಡಾ.ಕೆ.ಎಂ.ಮೇತ್ರಿ
ಕಲ್ಯಾಣ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪುಸ್ತಕಗಳು ಬರೆದು ಖ್ಯಾತರಾದ ಲೇಖಕರೆಂದರೆ ಡಾ.ಕೆ.ಎಂ.ಮೇತ್ರಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೌರ ಗ್ರಾಮದ ಮಾರುತಪ್ಪಾ ಮತ್ತು ಮಲ್ಲವ್ವ ದಂಪತಿಗಳಿಗೆ ದಿನಾಂಕ ೧-೮-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಸಮಾಜ ಶಾಸ್ತ್ರ, ಎಂ.ಎ.ಮಾನವ ಶಾಸ್ತ್ರ, ಎಂ.ಎಡ್. ಪಿ.ಎಚ್.ಡಿ. ಮತ್ತು ೧೫ವಿವಿಧ ಡಿಪ್ಲೊಮಾ ಪದವಿಧರರಾದ ಇವರು ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರವಾಚಕ ಮುಖ್ಯಸ್ಥರಾಗಿ ಸೇವೆಗೆ ಸೇರಿ ೨೦೦೪ರಿಂದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಸೂಕ್ಷ್ಮ ಆದಿವಾಸಿಗಳು’, `ಗೊಂಡಮಾನ ಗೊಂಡಿ ಶಬ್ದಕೋಶ’, `ಹಾಲು ಮತ ಬುಡಕಟ್ಟುಗಳು’, `ತುಳುನಾಡು ಹೆಗ್ಗಡೆ ಸಮೂದಾಯ’, `ಮರಗು ಭಾಷೆ’, `ಅಲಕ್ಷಿತರ ಸಮಾಜ ಶಾಸ್ತ್ರ’, ಎಂ.ಎ ಪ್ರಥಮ ಕೋರ್ಸು-೪, ಮತ್ತು `ಕುರುಗೋಡು ನೀಲಮ್ಮನವರ ಸಾಂಸ್ಕೃತಿಕ ಅಧ್ಯಯನ ‘ ಎಂಬ ಕೃತಿಗಳು ಮತ್ತು `ಬುಡ್ಗ ಜಂಗಮ’, `ದಕ್ಕಲಿಗ’, `ಗೋಸಂಗಿ’, `ಹಂಡಿ ಜ್ಯೋಗಿ’, `ಸುಡುಗಾಡು ಸಿದ್ದ’, `ಡುಂಗ್ರಿ ಗರಾಸಿಯ’, `ಹಕ್ಕಿ ಪಿಕ್ಕಿ’, `ಪಾರಧಿ’, `ಹೆಳವರು’, `ಕೊರಮ’, `ಶಿಳ್ಳೆಕ್ಯಾತ’, `ಸಿಂಧೋಳ್ಳು’, `ರಾಜಗೊಂಡ’ `ಬೈಲಪತ್ತಾರ’ `ದೊಂಬಿದಾಸ’ `ಘಿಸಾಡಿ’ `ಗೊಂಧಳಿ’. `ಕಂಜರ ಭಾಟ’. `ಸಿಕ್ಲಿಗರ ಅಲೆಮಾರಿ ಕುರುಬ ‘ `ಕಾಡುಗೊಲ್ಲ’, `ಎಲ್ಲಮನ ಕಥನ ಕಾವ್ಯ’, `ಬುಡ್ಗ ಜಂಗಮ ದರ್ಶಿನಿ’, `ಬುಡ್ಗ ಜಂಗಮರು’, `ಬುಡಕಟ್ಟು ಕುಲಕಸುಬುಗಳು’, `ಕೃಷ್ಣ ಗೊಲ್ಲರ ಕಥನ ಕಾವ್ಯಗಳು’, `ಕುಮಾರ ರಾಮ ಮತ್ತೆ ಕೃಷ್ಣ ಗೊಲ್ಲರ ಮಹಾಕಾವ್ಯ’ ಎಂಬ ಸಂಪಾದಿತ ಕೃತಿಗಳು . ಮತ್ತು ಸುಲ್ತಾನ ಸುರಳಿ, ಸೇರಿದಂತೆ ಒಟ್ಟು ೪೨ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರು ಬರೆದ ನೂರಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೨೦ರಲ್ಲಿ ಬಿರ್ಸಾ ಮುಂಡ ರಾಷ್ಟಿçÃಯ ಪ್ರಶಸ್ತಿ, ಲಭಿಸಿದೆ. ಸದ್ಯ ಇವರು ಹಂಪಿಯಲ್ಲಿ ವಾಸವಾಗಿದ್ದಾರೆ.
ಡಾ.ಚಿತ್ಕಳಾ ಜಿ.ಮಠಪತಿ
ಸಾಹಿತಿ ಹಾಗೂ ಕವಯತ್ರಿಯಾದ ಡಾ.ಚಿತ್ಕಳಾ ಜಿ.ಮಠಪತಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಚನ್ನವೀರಯ್ಯ ಮತ್ತು ಸರ್ವಮಂಗಳಾ ದಂಪತಿಗಳಿಗೆ ದಿನಾಂಕ ೧೬-೧೦-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ ಪದವಿಧರರಾದ ಇವರು ಬಸವಕಲ್ಯಾಣದ ಜಯಚನ್ನವೀರ ಸ್ವಾಮಿಯವರ ಧರ್ಮಪತ್ನಿಯಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದ ವಿಜ್ಞಾನೇಶ್ವರ ಸರ್ಕಾರಿ ಮಹಾವಿದ್ಯಾಲಯ ಮರತೂರಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಹಲವಾರು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, `ಶರಣರ ಕೌಟುಂಬಿಕ ಮೌಲ್ಯಗಳು,’ `ಮಂತ್ರ ಯೋಗ’ ಎಂಬ ವೈಚಾರಿಕ ಸಾಹಿತ್ಯ, ಮತ್ತು `ಡಾ.ಶೈಲಜಾ ಉಡಚಣರ ಸಮಗ್ರ ಸಾಹಿತ್ಯ ಒಂದು ಅಧ್ಯಯನ’ `ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮರು’ ಎಂಬ ಸಂಶೋಧನಾ ಕೃತಿಗಳು ಹಾಗೂ `ಜೇಡರ ದಾಸಿಮಯ್ಯ’ `ಶಕ್ತಿ ಸ್ವರೂಪಣಿದೇವಿ ಶಿವಬಸಮ್ಮ’ `ಮೋಳಿಗೆಯ ಮಹಾದೇವಿ’ ಎಂಬ ಚರಿತ್ರೆಗಳು.ಮತ್ತು `ಬೀದರ ಜಿಲ್ಲೆಯ ಸೃಜನೇತರ ಸಾಹಿತ್ಯ’ `ಆಧುನಿಕ ಕನ್ನಡ ಕಾವ್ಯ’ `ಕನ್ನಡ ಭಾಷಾ ವಿಜ್ಞಾನ’ ಎಂಬ ಕೃತಿಗಳು ಸಂಪಾದಿಸಿದ್ದಾರೆ. ಮತ್ತು `ಮಹಿಳಾ ಸಾಹಿತ್ಯ ಸಂಕಥನ’ ಎಂಬ ಕೃತಿ ಮುದ್ರಣದ ಹಂತದಲ್ಲಿದೆ. ಇವರ `ಆಧುನಿಕ ಕನ್ನಡ ಕಾವ್ಯ’ ಮತ್ತು `ಕನ್ನಡ ಭಾಷಾ ವಿಜ್ಞಾನ’ ಎಂಬ ಕೃತಿಗಳು ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಯಗಳಿಗೆ ಪಠ್ಯ ಪುಸ್ತಕಗಳಾಗಿ ಮುದ್ರಣಗೊಂಡಿದವು. ಇವರಿಗೆ ಚಿತ್ರದುರ್ಗ ಮಠದಿಂದ ಬಸವಶ್ರೀ, ಬಸವ ಚೇತನ, ಬಸವ ಜ್ಯೋತಿ ಎಂಬ ಪ್ರಶಸ್ತಿ ಲಭಿಸಿದರೆ, ಬೀದರ ಜಿಲ್ಲೆಯ ಪ್ರಥಮ ಮಹಿಳಾ ಸಮ್ಮೇಳನದಲ್ಲಿ `ಸಾಹಿತ್ಯ ಸಾಧಕಿ’ ಎಂಬ ಪ್ರಶಸ್ತಿ, ಜೇವರ್ಗಿಯಿಂದ `ಸಾಹಿತ್ಯ ರತ್ನ’ ಪ್ರಶಸ್ತಿ, ಭಾಲ್ಕಿ ಮಠದಿಂದ ಆಯ್ದಕ್ಕಿ ಮಾರಯ್ಯ ಲಕ್ಕಮರ ಕೃತಿಗೆ `ಉತ್ತಮ ಪುಸ್ತಕ ಪ್ರಶಸ್ತಿ, ಸೇಡಂನ ಹಾರಕೂಡ ಶ್ರೀಗಳ ೫೬ನೇ ಹುಟ್ಟು ಹಬ್ಬದ ಸಮಿತಿಯಿಂದ `ಸಾಹಿತ್ಯ ಸಾಧಕಿ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹ, ರೂಪಕ, ಭಾಷಣ, ಪುಸ್ತಕ ಪರಿಚಯ ಮೊದಲಾದ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನದಿಂದಲೂ ಪ್ರಸಾರವಾಗಿವೆ.
ಡಾ.ರೋಳೆಕರ ನಾರಾಯಣ
`ದಾಸೋಹ ಮತ್ತು ಸರ್ವೋದಯ’ ಎಂಬ ಸಂಶೋಧನಾ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕರೆಂದರೆ ಡಾ.ರೋಳೆಕರ್ ನಾರಾಯಣ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಿರಗುಡಿ ಗ್ರಾಮದ ದೇವರಾಯ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨-೮-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಪಿ.ಎಚ್.ಡಿ. ಪದವಿಧರರಾದ ಇವರು ೧೯೯೨ರಲ್ಲಿ ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸದ್ಯ ಕಲಬುರ್ಗಿಯ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ದಾಸೋಹ ಸೂತ್ರಗಳು’ ಎಂಬ ವಿಮರ್ಶಾ ಕೃತಿಯೊಂದನ್ನು ಹೊರತಂದಿದ್ದಾರೆ. ಹಾಗೂ `ಕಥಾ ಕುಸುಮ’, `ಕಥಾ ಸಂಗ್ರಹ’, `ಹಳೆಗನ್ನಡ ಕಾವ್ಯ ಸಂಗ್ರಹ’, `ವಚನ ಕೀರ್ತನ ಸಂಗ್ರಹ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಅವು ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಬಿ.ಕಾಂ. ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಾಗಿವೆ. ಮತ್ತು ಇವರು ಬರೆಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಇವರು ಮಹಾರಾಷ್ಟ್ರ ಸರ್ಕಾರದ ಮಾಧ್ಯಮಿಕ ಶಿಕ್ಷಣ ಮಂಡಳಿಯ ೧೧ನೇ ಮತ್ತು ೧೨ನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ಸಂಪಾದಕ ಮಂಡಳಿಯ ಸದಸ್ಯರಾಗಿ, ಸೋಲಾಪೂರ ವಿಶ್ವವಿದ್ಯಾಲಯ ಕನ್ನಡ ಸ್ನಾತಕ, ಸ್ನಾತಕೋತ್ತರ ವಿಭಾಗ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ `ಶಿಕ್ಷಕ ರತ್ನ’ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ನಾರಾಯಣ ರಾಂಪುರೆ.
ಸಾಹಿತಿ ಹಾಗೂ ಕಲಾವಿದ ರಾಜಕೀಯ ದುರಿಣ, ಸಮಾಜ ಸೇವಕರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ನಾರಾಯಣ ರಾಂಪೂರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಂಪೂರ ಗ್ರಾಮದ ಹೊನ್ನಪ್ಪಾ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೯-೪-೧೯೬೫ ರಲ್ಲಿ ಜನಿಸಿದ್ದಾರೆ. ಬಿ.ಎ. ಎಲ್.ಎಲ್.ಬಿ ಪದವಿಧರರಾದ ಇವರು ೨೦೦೭ರಲ್ಲಿ `ಕೋರ್ಟ್ ಗೇಟ್’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. `ಗುರು ಶಿಷ್ಯ’ ಎಂಬ ನಾಟಕದೊಂದಿಗೆ ಕೆಲ ಬೀದಿ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೧೯೯೪ರಲ್ಲಿ ಗ್ರಾಂ.ಪA. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೯೪, ಮತ್ತು ೨೦೦೪ರಲ್ಲಿ ಜಿ.ಪಂ.ಚುನಾವಣೆಗೆ ಸ್ಪರ್ಧಿಸಿದ್ದರು. ೨೦೦೮ರಿಂದ ಬಿ.ಜೆ.ಪಿ. ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರಾಗಿ, ೨೦೧೧ರಿಂದ ೨೦೧೪ರವರೆಗೆ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೧ರಲ್ಲಿ ರಾಜೇಶ್ವರದಲ್ಲಿ ಭವಾನಿ ಗ್ರಾಮೀಣಭೀವೃದ್ದಿ ಸೊಸೈಟಿಯನ್ನು ಸ್ಥಾಪಿಸಿ ಭವಾನಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ. ಲೂಜ್ ಮಾದಾ ಯೋಗೇಶರೊಂದಿಗೆ `ಮತ್ತೆ ಸತ್ಯಾಗ್ರಹ’ ಎಂಬ ಚಿತ್ರದಲ್ಲಿ ನಟಿಸಿ ೨೦೦೩ರಲ್ಲಿ ದೆಹಲಿಯಲ್ಲಿ ನಡೆದ ಐತಿಹಾಸಿಕ ಮಹಾನ್ ಪುರುಷರ `ಸಾಕ್ಷ್ಯ ಚಿತ್ರ’ ತ್ರಿಪ ಆ್ಯಂಡ್ ಸೌಂಡ ಕಾರ್ಯಕ್ರಮದಲ್ಲಿ ೯ ಜನರ ವೇಷಭೂಷಣದ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ೨೦೦೩ರಲ್ಲಿ ಬೀದರದಿಂದ ಉತ್ತಮ ಕಲಾವಿದ ಪ್ರಶಸ್ತಿಯು ಪಡೆದಿದ್ದಾರೆ. ೧೯೮೬ರಿಂದ ಹೋರಾಟದ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಕೆ ನೀಲಾ
ಜನವಾದಿ ಮಹಿಳಾ ಸಂಘಟನೆ ಹೋರಾಟಗಾರರು ಹಾಗೂ ಕತೆಗಾರರಾಗಿ ಹಲವು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಕೆ.ನೀಲಾ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಕಾಶಿನಾಥ ಸ್ವಾಮಿ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೬೬ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ಬರಿ ಪಿ.ಯು.ಸಿ.ವರೆಗೆ ಮಾತ್ರ. ಆದರೆ ಕನ್ನಡ, ಹಿಂದಿ,ಮರಾಠಿ, ಆಂಗ್ಲ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೧೯೯೫ರಲ್ಲಿ `ಬದುಕು ಬೀದಿಯ ಪಯಣ’ ೨೦೧೬ರಲ್ಲಿ `ಜಾತಿ ಸೂತಕವಳಿದು’ ಎಂಬ ಕವನ ಸಂಕಲನಗಳು, ೨೦೦೯ರಲ್ಲಿ `ಜ್ಯೋತಿಯೋಳಗಣ ಕಾಂತಿ’ ೨೦೧೧ರಲ್ಲಿ `ತಿಪ್ಪೆಯನ್ನರಸಿ’ ಎಂಬ ಕಥಾಸಂಕಲನಗಳು, ೨೦೦೯ರಲ್ಲಿ `ಬಾಳಕೌದಿ’ ಮತ್ತು `ನೆಲದ ಪಿಸುಮಾತು’ ಎಂಬ ಅಂಕಣ ಬರಹಗಳ ಸಂಕಲನಗಳು, ೨೦೦೧ರಲ್ಲಿ `ಬದುಕು ಬಂದಿಖಾನೆ’ ೨೦೦೫ರಲ್ಲಿ `ಮಹಿಳಾ ಶೋಷಣೆ ನೆಲೆಗಳು’ ೨೦೧೯ರಲ್ಲಿ `ನೆಲದ ನಂಟು’ ಮತ್ತು `ಬೇವರ ಬದುಕು’ ಎಂಬ ಲೇಖನ ಸಂಕಲನಗಳು, ೨೦೧೭ರಲ್ಲಿ `ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ’ ಜೀವನ ಚರಿತ್ರೆ, `ರಾಮಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು’ `ಎಲೆ ರಾಜೊಳಿ ಕರಿಗೂಳೇಶ ಮತ್ತು ಇತರರ ತತ್ವಪದಗಳು’ ಕನ್ನಡ ತತ್ವಪದಗಾರ್ತಿಯ ವಾಚಿಕೆ, ಮತ್ತು `ಭಾರತದ ಮೇಲೆ ಧಾಳಿ’ ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಕರುಳಿರಿಯುವ ನೋವು’ ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮತ್ತು `ತಿಪ್ಪೆಯನ್ನರಸಿ’ ಎಂಬ ಕತೆಯು ೨೦೧೦ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಮತ್ತೆರಡು ಕತೆಗಳು ಮೆಚ್ಚುಗೆ ಪಡೆದಿವೆ. `ಕೊಂದಹರುಳಿದರೆ’ ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿನ್ನದ ಪದಕ ಪಡೆದಿದೆ. ೨೦೦೯ರಲ್ಲಿ ಸೇಡಂ ಮುನ್ನೂರು ಪ್ರತಿಷ್ಠಾನದ ವತಿಯಿಂದ `ಅಮ್ಮಾ’ ಪ್ರಶಸ್ತಿ, ೨೦೧೧ರಲ್ಲಿ ಮೈಸೂರಿನ `ಶ್ರೀಮತಿ ರಾಗೌ ಪ್ರಶಸ್ತಿ’ ೨೦೧೯ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಮತ್ತು ಶಿವಮೊಗ್ಗ ದಿಂದ `ಹಾಮಾನಾ ಪ್ರಶಸ್ತಿ, ಪಡೆದಿದ್ದಾರೆ. ೨೦೧೨ರಲ್ಲಿ ಬಸವಕಲ್ಯಾಣದ ಬೇಲೂರಿನಲ್ಲಿ ನಡೆದ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ೨೦೧೩ರಲ್ಲಿ ಬೀದರನಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೬ರಿಂದ ೨೦೧೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ರುಕ್ಮೋದಿನ್ ಇಸ್ಲಾಂಪೂರ.
ಬೀದರ ಜಿಲ್ಲೆಯ ಮುಸ್ಲಿಂ ಕನ್ನಡ ಸಾಹಿತಿ ಎಂದರೆ ರುಕ್ಮೋದಿನ್ ಇಸ್ಲಾಂಪೂರ. ಇವರನ್ನು ಕನ್ನಡದ ಎರಡನೇ ಸಂತ ಶಿಶುನಾಳ ಷರೀಫ್’ ಎಂದರೆ ತಪ್ಪಾಗಲಾರದು. ಯಾಕೆಂದರೆ ಶಿಶುನಾಳ ಷರೀಫರು ಹಿಂದು ಧರ್ಮದ ಗುರುಗೊವಿಂದ ಭಟ್ಟರ ಶಿಷ್ಯರಾಗಿ ಸಾಹಿತ್ಯ ರಚಿಸಿದರೆ ಇವರೂ ಹಿಂದು ಧರ್ಮದ `ಲಾಲ್ ಧರಿ’ ಶ್ರೀಗಳ ಪರಮ ಶಿಷ್ಯರಾಗಿ ಸರ್ವಧರ್ಮ ಸಮಾನತೆಗಾಗಿ ಸಾಹಿತ್ಯ ರಚಿಸುತ್ತಿದ್ದಾರೆ. ಇವರು ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರದ ಪಾಶಮೀಯ ಮತ್ತು ಮಸ್ತಾನಬೀ ದಂಪತಿಗಳಿಗೆ ದಿನಾಂಕ ೧೮-೦೭-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ.ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎನ್.ಇ.ಕೆ.ಆರ್.ಟಿ. ನೌಕರರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. `ಕಾರ್ಗತ್ತಲೆಯಿಂದ ಮಂಜು ಬೆಳಕಿನೆಡೆಗೆ’ (ಕಥಾ ಸಂಕಲನ) `ಕಣ್ಣಂಚಿನ ನೀರು’, ‘ಕರುಳ ಬಳ್ಳಿ’ (ಕಾದಂಬರಿಗಳು) `ಎನ್ನೊಡಲಿನಿಂದ ತಮ್ಮಡಿಲಿಗೆ …’ (ಕವನ ಸಂಕಲನ) `ಮಾನಸ ಗಂಗೋತ್ರಿಯ ಮಡಿಲಲ್ಲಿ’ (ಲೇಖನ ಸಂಕಲನ,) `ಈ ಯೋಗಿ ವಾಸ್ತವವಾದಿ’ ಎಂಬ ಲಾಲಧರಿ ಶ್ರೀಗಳ ಕುರಿತಾದ ಜೀವನ ಚರೀತ್ರೆಯು ಬರೆದು ಪ್ರಕಟಿಸಿದ್ದಾರೆ.
ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂವಾದಕರಾಗಿ ಕವಿಗೊಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಇವರಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ `ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ಹಾರಕೂಡ ಶ್ರೀಮಠದ `ಶ್ರೀಚೆನ್ನ ರತ್ನ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ನಾಗೇಂದ್ರ ಆರ್.ಬಿರಾದಾರ
ಸಾಹಿತಿ ನಾಗೇಂದ್ರ ಆರ್.ಬಿರಾದಾರ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಮಂಠಾಳದ ರಾಚಣ್ಣಾ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೨೨-೪-೧೯೬೬ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಬಿ.ಎ .ಬಿ.ಎಡ್.ಎಂ.ಎ. ಪದವಿಧರರಾಗಿ ೧೯೯೦ರಿಂದ ಸರ್ಕಾರಿ ಪ್ರಾ.ಶಾ.ಶಿಕ್ಷಕರಾಗಿ ನಂತರ ೨೦೧೨ರಲ್ಲಿ ಬಡ್ತಿ ಹೊಂದಿ ಈಗ ಬಸವಕಲ್ಯಾಣ ಬೋಸಗಾ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೨ರಲ್ಲಿ `ಜೀವನ ಜೋಕಾಲಿ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ ಮತ್ತು `ನಾನು ಬದುಕಬೇಕು’ `ಎಚ್ಚರ ತಂಗಿ ಎಚ್ಚರ’. `ನಾನೇಕೆ ವರದಕ್ಷಿಣೆ ಕೊಡಬೇಕು’ (ಮಕ್ಕಳ ನಾಟಕಗಳು) `ತಾನಾಗಿ ಬಂದವಳು’ ಎಂಬ ಕಿರು ಕಾದಂಬರಿ, ಕೆಲ ಕತೆಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಆಕಾಶವಾಣಿ ಪ್ರಕಟ, ಪ್ರಸಾರವಾಗಿವೆ. ಮತು ್ತಕುಕನೂರಿನ ದೇವಚಂದ್ರ ರಾಜ್ಯ ಚುಟುಕು ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನ ಲಭೀಸಿದೆ. ಮತ್ತು ೨೦೦೨ರಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾದೆಮಿಯವರು ಏರ್ಪಡಿಸಿದ ಕಥಾ ಕಮ್ಮಟ, ಹಾಗೂ ಕಲಬುರಗಿ ಬರಹಗಾರÀ ಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ. ಹಾಗೂ ಮೈಸೂರಿನ ರಂಗಾಯಣ, ಕೊಪ್ಪಳದ ಚುಟುಕು ಸಾಹಿತ್ಯ, ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದು ಡಿ.ಪಿ.ಇ.ಪಿ, ಎಸ್.ಎಸ್.ಎ. ಮತ್ತು ಆರ್.ಎಂ.ಎಸ್.ನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಿ.ಆರ್.ಪಿ.ಯಾಗಿ, ಬಸವಕಲ್ಯಾಣ ಬಿ.ಆರ್.ಪಿ.ಯಾಗಿ ಜಿಲ್ಲಾ ಡಿ.ಪಿ.ಇ.ಪಿ.ಕಲಾಜಾತÀ ನಿರ್ದೇಶಕರಾಗಿ ಹಳ್ಳಿ ಹಳ್ಳಿಗಳಲ್ಲಿ ಅಕ್ಷರ ಕಲಿಕೆಯ ಹಾಡು ಹಾಡಿ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ.
ಮಲ್ಲಿನಾಥ ಕೆ.ಹಿರೇಮಠ
ಗ್ರಾಮೀಣ ಪ್ರದೇಶದ ಜನರಿಂದ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಗೀತೆ, ಹಾಡುಗಳನ್ನು ಸಂಪಾದಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡವರೆAದರೆ ಮಲ್ಲಿನಾಥ ಕೆ.ಹೀರೆಮಠ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶ್ರೀ. ವೇದಮೂರ್ತಿ ಕರಬಸಯ್ಯಾ ಹೀರೆಮಠ ಮತ್ತು ಸುಭದ್ರಾಬಾಯಿ ಹೀರೆಮಠ ದಂಪತಿಗಳಿಗೆ ದಿನಾಂಕ ೧-೧-೧೯೬೭ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಹಾರಕೂಡದಲ್ಲಿ, ಪಿ.ಯು.ಮತ್ತು ಪದವಿ ಶಿಕ್ಷಣವು ಎಸ್.ಎಸ್.ಕೆ.ಬಿ. ಕಾಲೇಜು ಬಸವಕಲ್ಯಾಣದಲ್ಲಿ ಅಧ್ಯಯನ ಮಾಡಿ, ಎಂ.ಎ.ಸ್ನಾತಕೋತ್ತರ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪೂರೈಸಿ, ಬಿ.ಇಡಿ.ಶಿಕ್ಷಕರ ತರಬೇತಿಯು ಬೀದರದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಹಾರಕೂಡ ಹೀರೆಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶಿವಾಚಾರ್ಯ ರತ್ನ ಧರ್ಮ ರತ್ನ, ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರ ಕಿರಿಯ ಸಹೋದರಾದ ಇವರು ೧೯೯೮ ರಲ್ಲಿ ಬಸವಕಲ್ಯಾಣ ತಾಲೂಕಿನ ಹತ್ಯಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಹಲವಾರು ವರ್ಷ ಉತ್ತಮ ಸೇವೆ ಸಲ್ಲಿಸಿ, ೨೦೦೬ ರಲ್ಲಿ ಕೊಹಿನೂರು ಗ್ರಾಮದ ಸರಕಾರಿ ಹಿರಿಯ ಮಾದರಿ ಶಾಲೆಗೆ ಬಡ್ತಿ ಹೊಂದಿ, ನಂತರ ೨೦೦೯ ರಲ್ಲಿ ಕೊಹಿನೂರು ವಾಡಿ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮತ್ತೆ ೨೦೧೨ ರಲ್ಲಿ ಮುಖ್ಯ ಗುರುಗಳ ಹುದ್ದೆಯಿಂದ ಬಡ್ತಿ ಹೊಂದಿ ಕೊಹಿನೂರು ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾರಕೂಡ ಶ್ರೀ ಮಠದ ಕುರಿತು ಗ್ರಾಮೀಣ ಪ್ರದೇಶದ ಭಕ್ತ ಜನರು ಸಾಕಷ್ಟು ಜಾನಪದ ಗೀತೆ,ಭಜನೆ ಹಾಡುಗಳು ಈ ಭಾಗದಲ್ಲಿ ತುಂಬ ಚಾಲ್ತಿಯಲ್ಲಿವೆ .ಅವುಗಳು ಮುಂದೊAದು ದಿನ ನಶಿಸಿ ಹೋಗಬಾರದೆಂಬ ಉದ್ದೇಶದಿಂದ ಜನಪದ ಸಾಹಿತ್ಯ ಉಳಿಸಿ ಬೆಳೆಸಬೇಕೆಂಬ ಕಾಳಜಿಯಿಂದ ಇವರು `ಕಲ್ಯಾಣ ನಾಡಿನ ಪರಂಜ್ಯೋತಿ’ ಮತ್ತು `ಮಂಗಳ ಮಂಗಳಾರತಿ’ ಎಂಬ ಎರಡು ಕೃತಿಗಳನ್ನು ಎಚ್.ಕಾಶಿನಾಥ ರೆಡ್ಡಿಯವರೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಬಿಡುವಿನ ಸಮಯದಲ್ಲಿ ಹಾರಕೂಡ ಶ್ರೀ ಮಠದ ಸಕಲ ಕಾರ್ಯ ಚಟುವಟಿಕೆಗಳಲ್ಲಿ ನಿರಂತರ ಕ್ರೀಯಶೀಲರಾಗಿ,ಶ್ರೀ ಮಠದ ಸತ್ಕಾರ್ಯಗಳಿಗೆ ಚಾಚು ತಪ್ಪದೆ ನಡೆಸಿಕೊಂಡು ಬರುವ ಇವರು ಸಾಹಿತ್ಯ ಸಂಪಾದನೆ ಮತ್ತು ಸಂಘಟನೆಯಲ್ಲಿಯೂ ತುಂಬ ಆಸಕ್ತರಾಗಿದ್ದರಿಂದ ಸತತ ೯ವರ್ಷ ಮೂರು ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮುಡಬಿ ಹೊಬಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯ ೨೦೦೩ರಲ್ಲಿ, ಹಾರಕೂಡ ಸುಕ್ಷೇತ್ರದಲ್ಲಿ ನಡೆದ ೭ನೆ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದು ಬರಲು ಇವರೂ ಕಾರಣಿ ಭೂತರಾಗಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಇವರ ಸಾಧನೆಗೆ ಬಸವಕಲ್ಯಾಣ ತಾಲೂಕು ಆಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ’ `ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಮತ್ತು ಕಲ್ಯಾಣ ಕರ್ನಾಟಕದ `ಶಿಕ್ಷಕ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರವು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರು ಹಾರಕೂಡ ಶ್ರೀ ಮಠದ ಪ್ರಕಾಶನದಿಂದಲೂ ಹಲವಾರು ಹಿರಿ- ಕಿರಿಯ ಸಾಹಿತಿಗಳ ಪುಸ್ತಕಗಳು ಪ್ರಕಟಿಸಿ ಅವರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ಪ್ರತಿವರ್ಷ ಕವಿ,ಸಾಹಿತಿ, ಕಲಾವಿದರಿಗೆ `ಶ್ರೀ ಚೆನ್ನ ರತ್ನ’ ಪ್ರಶಸ್ತಿಯು ನೀಡಿ ಗೌರವಿಸುತ್ತಿರುವಲ್ಲಿ ಇವರ ಕೊಡುಗೆಯು ಅಪಾರವಾಗಿದೆ.
ಡಾ.ಸತೀಶಕುಮಾರ ಹೊಸಮನಿ
ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ, ಡಾ.ಸತೀಶಕುಮಾರ ಎಸ್. ಹೊಸಮನಿ. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಶಂಬುಲಿAಗ ಹಾಗೂ ಮಾಪಮ್ಮಾ ಅವರ ಉದರದಲ್ಲಿ ದಿನಾಂಕ ೦೧-೦೬-೧೯೬೯ರಲ್ಲಿ ಜನ್ಮತಳೆದಿದ್ದಾರೆ. ಎಂ.ಎ. ಎಂ.ಎಲ್.ಐ.ಎಸ್.ಸಿ. ಎಂ.ಫೀಲ್. ಪಿ.ಎಚ್.ಡಿ. ಡಿ.ಲಿಟ್. ಪದವಿಧರರಾದ ಇವರು ೧೯೯೩ರಲ್ಲಿ ಅಸಿಸ್ಟೆಂಟ್ ಪೊಸ್ಟ ಮಾಸ್ಟರ್ ಆಗಿ ಸೇವೆಗೆ ಸೇರಿ ನಂತರ ಬಸವಕಲ್ಯಾಣದ ಪೊಸ್ಟ ಮಾಸ್ಟರ್À ಆಗಿ ಮುಂದೆ ಕೆಲವರ್ಷ ಶಹಪೂರದ ಹೊಸಪೇಟೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ, ಕಲಬುರಗಿ ಗ್ರಂಥಾಲಯ ವಿಭಾಗದ ಅಧಿಕಾರಿಯಾಗಿ, ೧೯೯೫ ರಿಂದ ೨೦೦೪ರ ವರೆಗೆ ಸೇವೆ ಸಲ್ಲಿಸಿ ಅಪಾರ ಓದುಗ ಬಳಗದ ಸಾಹಿತಿಗಳಿಗೆ ಸ್ನೇಹಜೀವಿಯಾಗಿ ಬೆಳೆದಿದ್ದಾರೆ.ಇವರು ೨೦೦೬ರಿಂದ ಬೆಂಗಳೂರಿನ ಆರ್.ಟಿ.ನಗರದ ಕೇಂದ್ರ ಗ್ರಂಥಾಲಯದ ಉಪನಿರ್ದೆಶಕರಾಗಿ ೨೦೧೧ರವರೆಗೆ ಸೇವೆಸಲ್ಲಿಸಿ ೨೦೧೧ರಿಂದ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ೨೦೧೪ರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮತ್ತು ಸಾಹಿತ್ಯ ಬಳಗದೊಂದಿಗೆ ಕರ್ನಾಟಕದ ಲೇಖಕ ಹಾಗೂ ಪ್ರಕಾಶಕರ ಪುಸ್ತಕ ಸಂಸ್ಕೃತಿಗೆ ಪ್ರೊತ್ಸಾಹಿಸುತ್ತಾ `ಉತ್ತಮ ಗ್ರಂಥಾಲಯ ನಿರ್ದೇಶಕರು’ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರ ಕುರಿತು ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ ಮೊದಲಾದವರು `ಸತೀಶಕುಮಾರ ಅವರೊಬ್ಬ ದಕ್ಷ ಅಧಿಕಾರಿ’ ಎಂದು ಪ್ರಶಂಸಿಸಿದ್ದಾರೆ. ಇವರು ಪ್ರಕಟಿಸಿದ ಕೃತಿಗಳೆಂದರೆ `ಗ್ರಂಥಾಲಯ ಸಂಸ್ಕೃತಿ’, `ಗ್ರಂಥಾಲಯ ಸಂದರ್ಭ ಸೇವೆ’, `ಸಾಗರದಾಚೆ ಕನ್ನಡದ ಕಂಪು’, `ಡಾ.ಎಸ್.ಆರ್.ರಂಗನಾಥನ್’, `ಗ್ರಂಥಾಲಯಗಳ ಲೋಕದಲ್ಲಿ’, `ಸಕ್ಕರೆಯ ಸವಿನೆನಪು’ ಎಂಬ ಒಟ್ಟು ೧೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಸುಮಾರು ೫೦ಕಿಂತ ಹೆಚ್ಚು ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯ ಮತ್ತು ಗ್ರಂಥಾಲಯ ಇಲಾಖೆಯ ಸಾಧನೆ ಕುರಿತು ಸಾಹಿತಿ ಎ.ಜಿ.ರತ್ನ ಕಾಳೆಗೌಡ ಪ್ರಧಾನ ಸಂಪಾದಕತ್ವದಲ್ಲಿ `ಕಲ್ಯಾಣ ಪ್ರಭೆ’ ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ. ಈ ಗ್ರಂಥದಲ್ಲಿ ನಾಡಿನಲ್ಲಿ ಹಲವಾರು ಲೇಖಕರು ಇವರ ಕುರಿತು ಲೇಖನ, ಕಾವ್ಯ ಬರೆದು ಅಭಿನಂದಿಸಿದ್ದಾರೆ.
ಡಾ.ವೆಂಕಟರೆಡ್ಡಿ ರಾಮರೆಡ್ಡಿ
ಕವಿ, ಸಾಹಿತಿ, ವಿಮರ್ಶಕ ಸಂಶೋಧಕರಾಗಿ ಹಲವಾರು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ವೆಂಕಟರೆಡ್ಡಿ ರಾಮರೆಡ್ಡಿಯವರು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ರಾಮರೆಡ್ಡಿ ಮತ್ತು ಹಿರಕನಬಾಯಿ ದಂಪತಿಗಳಿಗೆ ದಿನಾಂಕ ೨೦-೭-೧೯೬೯ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ.ಪದವಿಧರರಾದ ಇವರು ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು
ಸ್ನಾತಕೋತ್ತರ ಕನ್ನಡ ವಿಭಾಗದ ವಿಶೇಷಧಿಕಾರಿಯಾಗಿ,ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಉಪಕುಲಸಚಿವರಾಗಿ,ಸಹಾಯಕ ನಿರ್ದೇಶಕರಾಗಿ, ಪ್ರಸಾರಾಂಗದ ಹಿಂದುಳಿದ ವರ್ಗಗಳ ಸಂಯೋಜಕರಾಗಿಯೂ, ಸೇವೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. `ಛಂದೋತ್ಸವ’, `ಬಿಸಿಲ ಹನಿಗಳು ಒಂದು ಅಧ್ಯಯನ,’ `ತುಮಕೂರು ಜಿಲ್ಲೆಯ ಜನಪದ ವೈದ್ಯ’ ಇತ್ಯಾದಿ ೨೨ ಸೃಜನಶೀಲ ಮತ್ತು ೪೦ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ತುಮಕೂರಿನ ಯಕ್ಷ -ದೀವಿಗೆ ಸಾಂಸ್ಕೃತಿಕ ಸಂಘಟನೆಯ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಮೊದಲಾದ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರಿಗೆ ನಾರಾಯಣಪುರ ವಲಯ ಮಟ್ಟದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಬರಹಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ತುಮಕೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಾಗಿವೆ. ಇವರಿಗೆ ರಾಜ್ಯ ಮಟ್ಟದ ಬರಹಗಾರರ ಬಳಗದಿಂದ `ಕುವೆಂಪು ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಭೀಮಶೇನ್ ಗಾಯಕವಾಡ
`ಬಿ.ಎಂ.ಜಿ’ ಕಾವ್ಯನಾಮ ಹೊಂದಿರುವ ದಲಿತ ಕವಿಯೆಂದೆ ಹೆಸರಾದ ಭೀಮಸೇನ್ ಎಂ.ಗಾಯಕವಾಡ . ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೬-೦೧-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಇಡಿ. ಎಂ.ಎ.ಎA.ಫೀಲ್. ಪದವಿಧರರಾದ ಇವರು ಬಸವಕಲ್ಯಾಣ ತಾಲೂಕಿನ ರಾಜೋಳಾ ಸರ್ಕಾರಿ ಪ್ರೌಢ ಶಾಲಾ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೫ರಲ್ಲಿ `ನಲಿದಾಡಿ ಹೊಳೆಯುವ ಮುತ್ತುಗಳೆ’ ಮತ್ತು `ಬುದ್ಧನೊಲುಮೆಯ ಆಧುನಿಕ ವಚನಗಳು’ ೨೦೧೯ರಲ್ಲಿ `ಭೀಮನೊಲುಮೆಯ ಶಾಯಿರಿ ಗಜಲ್‌ಗಳು’ (ಕವನ ಸಂಕಲನಗಳು) `ಸಮರಸ ಜೀವಿ’ (ಸಂಪಾದನೆ) `ಬೆಸಗರಹಳ್ಳಿ ರಾಮಣ್ಣನವರ ಕತೆಗಳು’ (ವಿಮರ್ಶೆ) ಕೃತಿಗಳು ರಚಿಸಿದ್ದಾರೆ. ಮತ್ತು `ಬಸವನೊಲುಮೆಯ ಕಾವ್ಯಗಳು’, `ಕನಕನೊಲುಮೇಯ ಹಾಯ್ಕುಗಳು’ ಎಂಬ ಕೃತಿಗಳು ರಚಿಸಿದ್ದು ಅವು ಮುದ್ರಣ ಹಂತದಲ್ಲಿದೆ. ಇವರ `ಬೆಸಗರಹಳ್ಳಿ ರಾಮಣ್ಣನವರ ಕತೆಗಳು’ ಎಂಬ ವಿಮರ್ಶೆ ಕೃತಿಗೆ ೨೦೧೭ರಲ್ಲಿ ಹುಮನಾಬಾದ ತಾಲೂಕಿನ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಿಂದ `ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ `ಕಾವ್ಯ ಚೇತನ ರತ್ನ’ ಪ್ರಶಸ್ತಿ, ೨೦೨೦ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿಯು ಪಡೆದಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಿವಾಗಿವೆ. ಇವರು ಸಿರಿಗನ್ನಡ ವೇದಿಕೆಯ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ. ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ರವೀಂದ್ರನಾಥ ನಾರಾಯಣಪುರ
ಸಾಹಿತಿಗಳಾದ ಡಾ.ರವೀಂದ್ರನಾಥ ನಾರಾಯಣಪುರ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರದ ಗುರಪ್ಪ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧೫-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ವಿ.ಎಸ್.ಸಿ, ಎಂ.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದ ಇವರು ೧೯೯೩ರಲ್ಲಿ ಬಸವಕಲ್ಯಾಣದ ಪಶುಪಾಲನ ಇಲಾಖೆಯ ಪಶುವೈಧ್ಯಾಧಿಕಾರಿಯಾಗಿ ಸೇವೆಗೆ ಸೇರಿ ಕೆಲವರ್ಷಗಳ ನಂತರ ಈಗ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಹುಮನಾಬಾದಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ೨೦೧೦ರಲ್ಲಿ ಸಾಹಿತಿ ಓಂ ಪ್ರಕಾಶ ದಡ್ಡೆಯವರ ಕುರಿತು `ಗೀತೋಪಾಸಕ’ ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ೧೯೯೫ರಲ್ಲಿ ಇವರು ಉತ್ತರ ಪ್ರದೇಶದಲ್ಲಿ ಐವಿಆರ್‌ವಿ ಕನ್ನಡ ಸಂಘವು ಕಟ್ಟಿ ಅಲ್ಲಿಯ ಕನ್ನಡಿಗರಿಗೆ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಮತ್ತು ವೈದ್ಯರಾಗಿ ಸಾಹಿತ್ಯ ಸೇವೆಯನ್ನು ಮಾಡಿರುವುದರಿಂದ ೨೦೧೩ರಲ್ಲಿ ಬೆಂಗಳೂರಿನ ಹೆಗಡೆ ಕಲ್ಚರಲ್ ಆ್ಯಂಡ್ ಸೋಶಿಯಲ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ೨೦೧೯ರಲ್ಲಿ ಬಸವಕಲ್ಯಾಣ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನರತ್ನ’ ಪ್ರಶಸ್ತಿ, ಸುರಪುರ ತಾಲೂಕಿನ ತಿಂಥಣಿಯಿAದ ಪ್ರಕಟವಾಗುವ ಕನಕ, ಕನಕಲೋಕ, ಕನಕಸುಧಾ ಎಂಬ ಪತ್ರಿಕೆಗಳಿಗೆ ಹವ್ಯಾಸಿ ವರದಿಗಾರರಾಗಿ ಸೇವೆ ಸಲ್ಲಿಸಿದರಿಂದ ಆ ಪತ್ರಿಕಾ ಸಮೂಹ ಸಂಸ್ಥೆಯಿAದ ಸತ್ಕರಿಸಿ ಗೌರವಿಸಲಾಗಿದೆ.
ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ
ಚಿತ್ರಕಲಾವಿದ, ಸಾಹಿತಿ, ಪತ್ರಕರ್ತರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರಭುಲಿಂಗಯ್ಯಾ ಟಂಕಸಾಲಿಮಠ ಇವರು ಬೀದರ ಜಿಲ್ಲೆ ಹುಮನಾಬಾದಿನ ಬಸಯ್ಯಾ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ ೧೯-೯-೧೯೭೩ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿಧರರಾದ ಇವರು ೨೫ವರ್ಷಗಳಿಂದ ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಚಿತ್ರ-ಚಿತ್ತ’, `ಕಲ್ಯಾಣ ಕಲಾಶ್ರೀ’, `ಚಿಣ್ಣರ ಚುಟುಕು’, `ಕಲ್ಯಾಣದ ಕಲಾ ಪ್ರತಿಭೆ’, `ಹತ್ತು ಮುಖಗಳ ನೂರು ಭಾವಗಳು’, `ಸಾಲು- ದೀಪ’ ಎಂಬ ಕೃತಿಗಳು ತಮ್ಮ ಕಲಾನಿಕೇತನ ಪ್ರಕಾಶನದಿಂದ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೦೭ರಿಂದ ೨೦೧೦ ರವರೆಗೆ ಬಸವಕಲ್ಯಾಣ ಕಸಾಪ ಅಧ್ಯಕ್ಷರಾಗಿ, ಉತ್ತರ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕಲಬುರಗಿಯ ಮಹಾನ್ ಚಿತ್ರಕಲಾವಿದ `ಡಾ.ಜೆ.ಎಸ್.ಖಂಡೇರಾವ ಪ್ರಶಸ್ತಿ, ಭಾಲ್ಕಿ ಮಠದಿಂದ ಡಾ.ಚನ್ನಬಸವ ಪಟ್ಟದೇವರ ಪ್ರಶಸ್ತಿ, ಹಾರಕೂಡ ಮಠದಿಂದ `ಶ್ರೀಚನ್ನ ರತ್ನ ಪ್ರಶಸ್ತಿ, ಹುಲಸೂರು ಮಠದಿಂದ `ಕಲಾ ಪ್ರೇಮಿ’ ಭಾತಂಬ್ರಾ ಮಠದಿಂದ `ಕಲಾ ರತ್ನ’ ಮತ್ತು ಬಸವಕಲ್ಯಾಣ ತಾಲೂಕಾ `ಗಣರಾಜ್ಯೋತ್ಸವ’ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದಲ್ಲಿ ವಾಸವಾಗಿದ್ದು, ಅಪಾರ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹ ಮಾಡಿರುವುದರೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಮಾಣಿಕ ಆರ್.ಭುರೆ
ಸಾಹಿತಿ ಹಾಗೂ ಪತ್ರಕರ್ತರಾಗಿ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮಾಣಿಕ ಆರ್ ಭುರೆ. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದ ರಾಮ ಭುರೆ ಮತ್ತು ಸಂಪತಾಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ಬಸವಕಲ್ಯಾಣದ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೦೩ರಲ್ಲಿ `ಶರಣ ಸಂಸ್ಕçತಿ ದರ್ಶನ’ ೨೦೦೮ರಲ್ಲಿ `ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು’ ೨೦೧೦ರಲ್ಲಿ `ದಲಿತ ಪೀಠಾಧಿಪತಿ’ ಎಂಬ ೨೦೧೫ರಲ್ಲಿ `ಹುಲಸೂರು ತಾಲೂಕು ದರ್ಶನ’ ೨೦೧೮ರಲ್ಲಿ `ಸಂಗೀತ ರತ್ನ ವಿರೂಪಾಕ್ಷಯ್ಯ ಗೋರ್ಟಾ’ ೨೦೧೯ರಲ್ಲಿ `ಚಾಲುಕ್ಯ ನಾಡು’ ಎಂಬ ಕೃತಿಗಳು ಪ್ರಕಟಿಸಿ, ಹಾರಕೂಡದ ಪೂಜ್ಯ..ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಕುರಿತು `ನುಡಿಚೆನ್ನ’ ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿದ್ದಾರೆ ಇವರ `ದಲಿತ ಪೀಠಾಧಿಪತಿ’ ಕೃತಿಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಜಿ.ಆರ್.ರೇವಯ್ಯ’ ದತ್ತಿ ಪ್ರಶಸ್ತಿ ದೊರಕಿದೆ.
ಕಾಲೇಜು ದಿನಗಳಲ್ಲಿಯೇ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಇವರು ೧೯೯೩ರಲ್ಲಿ `ಉತ್ತರ ಕರ್ನಾಟಕ’ ೧೯೯೫ರಲ್ಲಿ `ಬಹಿರಂಗ ಸುದ್ದಿ’ `ಜನಬೆಂಬಲ’ ೧೯೯೬ರಲ್ಲಿ `ಬಿಸಿಲ ಬದುಕು’ ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿ ೧೯೯೭ರಲ್ಲಿ `ಪ್ರಜಾವಾಣಿ’ ವರದಿಗಾರರಾಗಿ ಸೇವೆಗೆ ಸೇರಿ ೨೭ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಬಸವಕಲ್ಯಾಣ ತಾಲ್ಲೂಕಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪ್ರಥಮ ತಾಲ್ಲೂಕು ಜಾನಪದ ಸಮ್ಮೇಳನ ಹಾಗೂ ೩ ರಾಷ್ಟ್ರೀಯ ಜಾನಪದ ಉತ್ಸವಗಳನ್ನು ಆಯೋಜಿಸಿದ್ದರು. ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕಸಾಪದ ಜಿಲ್ಲಾ ಪ್ರತಿನಿಧಿ, ತಾಲ್ಲೂಕು ಕಾರ್ಯದರ್ಶಿ, ಗಡಿನಾಡು ಪ್ರತಿನಿಧಿ ಆಗಿ ಸೇವೆ ಸಲ್ಲಿಸಿದ್ದಾರೆ.
ದಿ. ಕವಿತಾ ಮಲ್ಲಪ್ಪ
ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿ ಕೆಲ ಕೃತಿಗಳು ರಚಿಸಿದ ಕವಯತ್ರಿಯೆಂದರೆ ದಿ.ಕವಿತಾ ಮಲ್ಲಪ್ಪ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರದವರು. ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.,ಬಿ.ಇಡಿ ಪದವಿಧರರಾದ ಇವರು ಗ್ರಾಂ.ಪA. ಕಾರ್ಯದರ್ಶಿಯಾಗಿ ಸೇವೆಗೆ ಸೇರಿ ಕೆಲ ವರ್ಷ ರಾಯಚೂರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ ಔರಾಧ ತಾಲೂಕಿನ ಚಿಂತಾಕಿ ಮತ್ತು ಬಸವಕಲ್ಯಾಣದ ತಡೋಳ ಗ್ರಾಮ ಪಂಚಾಯಿತನಲ್ಲಿ ಸೇವೆ ಸಲ್ಲಿಸುತ್ತಿರುವಾಗ ೨೦೧೨ರಲ್ಲಿ ಇಹಲೋಕ ತ್ಯಜಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರು `ಸಾಹಿತ್ಯ ಸಂಪ್ರೀತಿ’, `ದಲಿತ ಸಾಹಿತ್ಯ ಪಿತಾಮಹ ಬಿ.ಶ್ಯಾಮಸುಂದರ ಜೀವನ ಚರಿತ್ರೆ’, `ಪ್ರಜಾಧ್ವನಿ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಸಾಹಿತ್ಯ ಸಂಪ್ರೀತಿ’ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದು ಪ್ರಕಟವಾಗಿದೆ. ಮತ್ತು ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ದೆಹಲಿಯ ದಲಿತ ಸಾಹಿತ್ಯ ಅಕಾದೆಮಿಯ ವತಿಯಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ಬಸವಕಲ್ಯಾಣದ ಲೋಹಿಯಾ ಪ್ರತಿಷ್ಠಾನದ ಶ್ಯಾಮಸುಂದರ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ವೀರಣ್ಣ ಮಂಠಾಳಕರ್
ಎರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕ ವೀರಣ್ಣ ಮಂಠಾಳಕರ್ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವೈಜಿನಾಥ ಹಾಗೂ ಶರಣಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿವರೆಗೆ ಓದಿದ ಇವರು ಕೆಲವರ್ಷ ಬೆಂಗಳೂರಿನ ನಂದಿನಿ ಹಾಲಿನ ಡೈರಿಯಲ್ಲಿ ಸೇವೆ ಸಲ್ಲಿಸಿ, ನಂತರ ದಿಕ್ಸೂಚಿ ಪತ್ರಿಕೆಯ ಪ್ರೂಫ್ ರೀಡರ್ ಆಗಿ ಬಸವಕಲ್ಯಾಣದ ಕನ್ನಡ ಪ್ರಭ, ವಿಜಯ ಕರ್ನಾಟಕ ವರದಿಗಾರರಾಗಿ `ಸಂಕಲ್ಪ’ ಮಾಸಿಕದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿ, ಸದ್ಯ ವೀರ ಸಂಕಲ್ಪ ಯು ಟ್ಯೂಬ್‌ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಭಾವಾಂತರAಗ’ (ಚುಟುಕು ಸಂಕಲನ) `ಗಾಂಧಿ ಆಗ್ಬೇಕಂದುಕೊAಡಾಗ’, `ಕಾಯುವ ದೇವರ ವರ’ (ಕವನ ಸಂಕಲನಗಳು) `ಬದುಕಿನ ಬೆನ್ನೇರಿ’ (ಕಥಾಸಂಕಲನ) `ಸುಳಿಗಳು’ (ಹನಿಗವನ ಸಂಕಲನ) `ಮಾಧ್ಯಮದೊಳಗಣ’ (ಅಂಕಣ ಬರಹ) `ಗಜಲ್ ಗೆಜ್ಜೆನಾದ’ (ಗಜಲ್ ಸಂಕಲನ) `ಮೌನ ಪ್ರತಿಭೆ’ (ವ್ಯಕ್ತಿ ಪರಿಚಯ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ.
ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಮೈಸೂರಿನ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುವ ಇವರಿಗೆ ಮೇ ೮, ೨೦೧೯ರಂದು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಜರುಗಿದ ಬಸವಕಲ್ಯಾಣ ತಾಲೂಕಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೯ರಲ್ಲಿ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನ ರತ್ನ’ ಪ್ರಶಸ್ತಿಯು ನೀಡಲಾಗಿದೆ.
ಈಶ್ವರ ತಡೋಳಾ
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ ತಡೋಳಾ ರವರು ಸಾಹಿತಿಯಾಗಿ ಉತ್ತಮ ಬರಹಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಚಂದ್ರಪ್ಪಾ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಂದು ಜನಿಸಿದ್ದು, ಡಿ,ಎಂ,ಎಲ್.ಟಿ. ಮತ್ತು ಎಂ,ಎ,ಸ್ನಾತಕೋತ್ತರ ಪದವಿಧರರಾಗಿ ಕೆಲವರ್ಷ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ, ನಂತರ ೨೦೦೩ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಟೆಕ್ನಾಲಜಿಸ್ಟ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸಮತೆಯ ಹಾಡು’, `ಕಾವ್ಯ ಚೇತನ’ (ಕವನ ಸಂಕಲನ) `ಸಮರಸ ಜೀವಿ’, `ನುಡಿ ಬೆಳಕು’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಬರೆದ ಕವಿತೆಗಳು ನಾಡಿನ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಲ್ಲಿ ಅವು ಪ್ರಕಟವಾಗಿವೆ. ಇವರು ಮೈಸೂರು ದಸರಾ ಕವಿಗೊಷ್ಠಿ ಸೇರಿದಂತೆ ನಾಡಿನ ವಿವಿಧ ಕಡೆ ಕವನವಾಚನ ಮಾಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಮೊದಲ ಕವನ ಸಂಕಲನ `ಸಮತೆಯ ಹಾಡು’ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ.
ಡಾ.ಜಯದೇವಿ ಗಾಯಕವಾಡ
ಸಾಹಿತಿ ಡಾ.ಜಯದೇವಿ ಗಾಯಕವಾಡ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೭-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಪದವಿ ಪಡೆದು ೨೦೦೧ರಿಂದ ೨೦೦೯ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ ಹುದ್ದೆ ನಿರ್ವಹಿಸಿ, ನಂತರ ಚಿಟಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಹುಮನಾಬಾದ ಕಾಲೇಜಿನ ಕನ್ನಡ ಎಂ.ಎ.ವಿಭಾಗದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ `ಹೇಗೆ ಹೇಳಲಿ ನಾನು’, `ಮರುಭೂಮಿ ಮಾಡದಿರಿ’, `ಕಪ್ಪು ಹುಡುಗಿಯ ಹಾಡು’ (ಕವನಸಂಕಲನಗಳು) `ಯಜ್ಣ ಸೇನಿಯ ಆತ್ಮ ಕಥನ’ (ಕಾದಂಬರಿ) `ಮೂವತ್ತೊಂದು ಗಜಲ್’, `ಪ್ರಜ್ಞೆ,ಶೀಲ ಕರುಣೆಯ ಗಜಲ್ ಗಳು’, `ವೈಶಾಖ ಪೂರ್ಣಿಮೆಯ ಗಜಲ್ ಗಳು’, `ಚಿಂತಕರು ಮತ್ತು ಮಹಿಳೆ’, `ಉರಿಲಿಂಗ ಪೆದ್ದಿ ವಚನಗಳು ವಿಶ್ಲೇಷಣೆ’, `೫೦೧ ಹಾಯ್ಕುಗಳು’, ‘ಬೋಧಿ ವೃಕ್ಷದ ಹಾಯ್ಕುಗಳು’ ಹೀಗೆ ಸುಮಾರು ೨೭ಕ್ಕೂ ಹೆಚ್ಚು ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಬೆಂಗಳೂರಿನ ಕಸಾಪದ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಅಮ್ಮಾ ಪ್ರಶಸ್ತಿ, ರಮಾಬಾಯಿ, ಅಂಬೇಡ್ಕರ್ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭೀಸಿದ್ದು, ಬಸವಕಲ್ಯಾಣ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹುಮನಾಬಾದ ತಾಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಾಗೂ ಬೇಲೂರಿನ ಉರಿಲಿಂಗ ಪೆದ್ದಿ ಮಠದಲ್ಲಿ ನಡೆದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರ ಬರಹ ಭಾಷಣಗಳು ಅನೇಕ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗೃಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಹಿಸಿದ್ದಾರೆ.
ಡಾ.ಸಾರಿಕಾದೇವಿ ಕಾಳಗಿ
ಸಾಹಿತಿ ಡಾ.ಸಾರಿಕಾದೇವಿ ಕಾಳಗಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ನಂದಗಾAವ ಗ್ರಾಮದ ಲಕ್ಷ್ಮಣರಾವ್ ಮತ್ತು ನಿರ್ಮಲಾದೇವಿ ದಂಪತಿಗಳಿಗೆ ದಿನಾಂಕ ೧೦-೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್, ಸಿನಿಯರ್ ಪದವಿ ಪಡೆದ ಇವರು ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಪಿ.ಎಚ್.ಡಿ. ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಸವಕಲ್ಯಾಣ ತಾಲೂಕಿನ ನಿರಗುಡಿಯ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ.ರೋಳೆಕರ ನಾರಾಯಣ ರವರ ಧರ್ಮಪತ್ನಿಯಾಗಿದ್ದಾರೆ.
ಇವರು `ಕಾಯಕ’, `ದಾಸೋಹ’ (ಲೇಖನ) `ಕನಕದಾಸರ ಕೀರ್ತನೆಗಳು’, `ಪಂಚಾಕ್ಷರಿ ಮಂತ್ರ’, `ಅನುಭಾವ ಪದಗಳ ಸಂಗ್ರಹ’, `ಪೂಜ್ಯ ಶರಣಬಸಪ್ಪ ಅಪ್ಪ ವಿರಚಿತ ಮಹಾದಾಸೋಹ ಸೂತ್ರಗಳು ಒಂದು ಚಿಂತನೆ’, `ಶರಣ ಸಂಪದ’, `ಗಂಗಿ ಗೌರಿ ಹಾಡು’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಕಲಬುರಗಿಯ ಶರಣಬಸವ ಮತ್ತು ಸೋಲಾಪೂರ ವಿಶ್ವವಿದ್ಯಾಲಯದ ಕನ್ನಡ ವಿದ್ಯಾರ್ಥಿಗಳಿಗೆ ಕೆಲವು ಪಠ್ಯ ಪುಸ್ತಕಗಳಾಗಿವೆ. ಮತ್ತು ಅನೇಕ ಬರಹಗಳು ನಾಡಿನ ಪತ್ರಿಕೆ ಹಾಗೂ ದೂರದರ್ಶನ ಆಕಾಶವಾಣಿಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಅಷ್ಟೇಯಲ್ಲದೆ ಬೆಂಗಳೂರು ದೂರದರ್ಶನದವರು ನಿರ್ಮಿಸಿದ `ಬುರ್ರಕಥಾ ಈರಮ್ಮ’ ಎಂಬ ಸಾಕ್ಷ್ಯಚಿತ್ರದಲ್ಲಿಯು ಭಾಗವಹಿಸಿದ್ದಾರೆ. ಮತ್ತು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದ `ಕವಿಜನಮಾರ್ಗ’ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಎಂ. ಆರ್. ಶ್ರೀಕಾಂತ
ಉದಯೋನ್ಮುಖ ಬರಹಗಾರ ಶ್ರೀಕಾಂತ ಮದರಗಾಂವಕರ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೫-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಕಾಲಜ್ಞಾನ’ (ಕವನಸಂಕಲನ) `ಶುಭೋದಯ’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕಾವ್ಯನಾಮ ಶ್ರೀರಾಮ ಕವಿ. ವಚನಾಂಕಿತ ಕಾಲಜ್ಞ ಎಂದಾಗಿದೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ ಆಕಾಶವಾಣಿಯಿಂದ ಪ್ರಕಟ, ಪ್ರಸಾರವಗಿವೆ. ಮತ್ತು ೨೦೦೨ರಲ್ಲಿ ಬಸವಕಲ್ಯಾಣ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರಿಗೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕವಿರತ್ನ ಶ್ರೀ ಪ್ರಶಸ್ತಿ, ೨೦೧೫ರಲ್ಲಿ `ಕನ್ನಡ ಕಾವ್ಯರತ್ನ ಪ್ರಶಸ್ತಿ’ ನೀಡಿದ್ದಾರೆ. ೨೦೧೬ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ `ಕನ್ನಡ ಸೇವಾ ರತ್ನ, ಹಾಗೂ ೨೦೧೭ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ `ಕನಕ ಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಮಚ್ಚೇಂದ್ರ ಪಿ.ಅಣಕಲ್
ದಲಿತ ಬಂಡಾಯ ಕತೆಗಾರರಾಗಿ ನಾಡಿನಾದ್ಯಂತ ಪರಿಚಿತರಾದ ಸಾಹಿತಿ ಮಚ್ಚೇಂದ್ರ ಪಿ ಅಣಕಲ್. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಪಂಡಿತ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೧೨-೬-೧೯೭೯ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಇಡಿ. ಎಂ.ಎ. ಎಂ.ಇಡಿ. ಎಂ.ಎ. ಪತ್ರಿಕೊದ್ಯಮ ಪದವಿಧರರಾದ ಇವರು ೧೨ವರ್ಷ ಪೋಟೋಗ್ರಾಫರಾಗಿ ೫ವರ್ಷ ಮುಡಬಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ೪ವರ್ಷ ಮುಡಬಿ ಪಿ.ಯು.ಕಾಲೇಜಿನ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಎಪ್ರೀಲ್ ೧. ೨೦೧೬ರಿಂದ ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಬರಹಗಳು ಬರೆದು ೧೯೯೯ರಲ್ಲಿ `ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು’ (ಕವನಸಂಕಲನ) ೨೦೦೦ರಲ್ಲಿ `ಜ್ಞಾನ ಸೂರ್ಯ’ (ಸಂಪಾದಿತ ಕಾವ್ಯ) ೨೦೦೯ರಲ್ಲಿ `ಲಾಟರಿ’ ೨೦೧೧ರಲ್ಲಿ `ಮೊದಲ ಗಿರಾಕಿ’ ೨೦೧೯ರಲ್ಲಿ `ಹಗಲುಗಳ್ಳರು’ (ಕಥಾ ಸಂಕಲನಗಳು) ೨೦೧೨ರಲ್ಲಿ `ಜನಪದ ವೈದ್ಯರ ಕೈಪಿಡಿ’ (ಸಂಪಾದನೆ) ೨೦೨೦ರಲ್ಲಿ `ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ (ಅಂಕಣ) ಎಂಬ ಕೃತಿಗಳು ಪ್ರಟಿಸಿದ್ದಾರೆ. ಮತ್ತು `ಗೌರ್ಮೆಂಟ ಸರ್ವೆಂಟನ ಹೆಂಡತಿ’ (ಲಲಿತ ಪ್ರಬಂಧ) `ಇವಾ ನಮ್ಮವನಾಗಲಿಲ್ಲ’ (ಕವನಸಂಕಲನ) `ಬೀದರ ಜಿಲ್ಲೆಯ ಬಹುಮಾನಿತ ಕತೆಗಳು’ (ಸಂಪಾದನೆ) ಇತ್ಯಾದಿ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಕತೆ ಕವನ ಲೇಖನ ಪ್ರಬಂಧಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಉದಯವಾಣಿ, ತುಷಾರ, ತರಂಗ, ಕರ್ಮವೀರ ಸಂಯುಕ್ತ ಕರ್ನಾಟಕ, ಮುಂಬೈಯ ಕರ್ನಾಟಕ ಮಲ್ಲ, ಸಾಹಿತ್ಯ ಸಿಂಚನ, ಹಸಿರು ಕ್ರಾಂತಿ, ಕರ್ನಾಟಕ ಸಂಧ್ಯಾ ಕಾಲ, ಕೆಂಡ ಸಂಪಿಗೆ, ಬುಕ್ ಬ್ರಹ್ಮ ಮೊದಲಾದ ವಿದ್ಯುನ್ಮಾನ ಮಾದ್ಯಮಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿಯೂ ಅವು ಪ್ರಕಟ ಪ್ರಸಾರಗೊಂಡಿವೆ.
ಹಾಗೂ ೨೦೦೨ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ `ಲಾಟರಿ’ ಕತೆ ಬಹುಮಾನ ಪಡೆದು ಪ್ರಕಟಗೊಂಡಿದೆ. .ಮತ್ತು ೨೦೧೦ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೬ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಇವರ ‘ಡಾಂಬಾರು ದಂಧೆ’ ಕತೆ ಬಹುಮಾನ ಪಡೆದು ‘ದೀಪಾತೊರಿದೆಡೆಗೆ’ ಎಂಬ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ. ೨೦೧೨ರಲ್ಲಿ ಬೆಳಗಾವಿಯಲ್ಲಿ ನಡೆದ ೪ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ `ಮೊದಲ ಗಿರಾಕಿ’ ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದ ವತಿಯಿಂದ ೨೦೦೭ರಿಂದ ಪ್ರತಿವರ್ಷ ಕೊಡಲ್ಪಡುತ್ತಿರುವ ರಾಜ್ಯ ಮಟ್ಟದ ಮೊದಲ ಉರಿಲಿಂಗ ಪೆದ್ದಿ ಪ್ರಶಸ್ತಿ ಪಡೆದಿದ್ದಾರೆ. ಮತ್ತು ೨೦೦೩ರಲ್ಲಿ ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ೨೦೨೦ರ ಸೆಪ್ಟೆಂಬರ ತಿಂಗಳಲ್ಲಿ ಬುಕ್ ಬ್ರಹ್ಮ ಅಂತರಜಾಲ ತಾಣವು ಏರ್ಪಡಿಸಿದ ರಾಜ್ಯ ಮಟ್ಟದ ಜನ ಮೆಚ್ಚಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ `ಗೌರ್ಮೆಂಟ್ ಸರ್ವೇಂಟನ ಹೆಂಡ್ತಿ’ ಎಂಬ ಪ್ರಬಂಧಕ್ಕೆ ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರ ಲಭೀಸಿದೆ. ಹೀಗೆ ಹಲವಾರು ರಾಜ್ಯ ಮಟ್ಟದ ಕತೆ ಕವನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಲಕ್ಷ್ಮೀಕಾಂತ ಸಿ. ಪಂಚಾಳ
ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪತ್ರಿಕೆಯ ಕುರಿತು ಸ್ಪರ್ಧಾತ್ಮಕವಾಗಿ ಕೆಲ ಕೃತಿಗಳು ಪ್ರಕಟಿಸಿದ ಲೇಖಕರೆಂದರೆ ಲಕ್ಷ್ಮೀಕಾಂತ ಸಿ. ಪಂಚಾಳ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯಳವಂತಗಿ ಗ್ರಾಮದ ಚಂದ್ರಕಾAತ ಪಂಚಾಳ ಮತ್ತು ಸರಸ್ವತಿ ಪಂಚಾಳ ದಂಪತಿಗಳಿಗೆ ದಿನಾಂಕ ೧೬-೬-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಪ.ಪೂ,ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಬೀದರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಭಾಷೆ ಮತ್ತು ವ್ಯಾಕರಣ, ಛಂದಸ್ಸುಗಳಲ್ಲಿ ಪ್ರಾವೀಣ್ಯತೆ ಹೊಂದಿದ ಇವರು ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅವರೊಂದಿಗೆ ಸೇರಿ `ಸರಳ ಛಂದಸ್ಸು’ `ಕನ್ನಡ ಸಾಹಿತ್ಯ ಸ್ಪರ್ಧಾ ಕೈಪಿಡಿ’ `ಕಡ್ಡಾಯ ಕನ್ನಡ’ `ಕನ್ನಡ ಕೈ ದೀವಿಗೆ’ `ಕನ್ನಡ ಕೈ ಗನ್ನಡಿ’ ಎಂಬ ಸಂಪಾದಿತ ಕೃತಿಗಳು ಮತ್ತು `ಸಾಹಿತ್ಯ ದೀಪ್ತಿ’ ಎಂಬ ವಿಮರ್ಶಾ ಲೇಖನಗಳ ಕೃತಿಯು ಹೊರತಂದಿದ್ದಾರೆ. ಇವರ ಕತೆ,ಕವನ,ಲೇಖನ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೯ರಲ್ಲಿ ಯುವಜನೋತ್ಸವ ಬಹುಮಾನವು ಲಭಿಸಿದೆ.
ಮೇನಕಾ ಪಾಟೀಲ್
ಉದಯೋನ್ಮುಖ ಯುವ ಬರಹಗಾರ್ತಿಯಾದ ಮೇನಕಾ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ದಿ.ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದ ಪಿ.ಯು.ಸಿ (ವಿಜ್ಞಾನ)ವರೆಗೆ ಅಧ್ಯಯನ ಮಾಡಿ, ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಪಡೆದು ಕೆಲ ವರ್ಷ ಮಂಗಳೂರಿನ `ಸ್ತ್ರೀ ಶಕ್ತಿ’ ಮಾಸ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ತನ್ನ ತಂದೆಯ ಡೈರಿಯಿಂದ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಇವರು ೨೦೧೮ರಲ್ಲಿ `ಬಸವ ರಕ್ಷಾ’ (ಕವನ ಸಂಕಲನ) ೨೦೧೯ರಲ್ಲಿ ಹುಲಸೂರು ಶ್ರೀಗಳ ಕುರಿತು `ಒಂದು ಜೀವನ ಚರಿತ್ರೆ’ ಎಂಬ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಹಲವಾರು ಕವನ,ಲೇಖನ, ಹನಿಗವನಗಳು ಬರೆದಿದ್ದರಿಂದ `ಸ್ತ್ರೀ ಶಕ್ತಿ’ ಪ್ರಜಾವಾಣಿ, ಉದಯವಾಣಿ, ವಿಜಯವಾಣಿ ಮತ್ತು ಬಸವ ಟಿವಿ, ಮೊದಲಾದವುಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ಬೀದರದ ಕೆಲ ಕನ್ನಡ ಪರ ಸಾಹಿತ್ಯ ಸಂಘಟನೆಯವರು ಸತ್ಕರಿ ಗೌರವಿಸಿದ್ದಾರೆ. ಮತ್ತು ಇವರು ಬೀದರದ ಜಿಲ್ಲಾ ಮಹಿಳಾ ಕಸಾಪ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ದೇವೆಂದ್ರ ಕಟ್ಟಿಮನಿ
ಸೃಜನಶೀಲ ಉದಯೋನ್ಮುಖ ಬರಹಗಾರರೆಂದರೆ ದೇವೆಂದ್ರ ಕಟ್ಟಿಮನಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಭಾಗ ಗ್ರಾಮದ ಶ್ರೀ ಅಂಬಣ್ಣ ಮತ್ತು ಶ್ರೀಮತಿ ಕಾಶಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೮೩ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಎಂ.ಎ. ಸ್ನಾತಕೋತ್ತರ ಪದವೀಧರರಾದ ಇವರು ರಾಯಚೂರು ಜಿಲ್ಲೆಯ ಇಡಪನೂರು ಸರ್ಕಾರಿ ಉರ್ದು ಪ್ರೌಢ ಶಾಲಾ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೨೦ರಲ್ಲಿ `ಭೀಮಾಮೃತ’ (ಕವನ ಸಂಕಲನ) `ಅರಳಿ ನೆರಳು, ಸುಣ್ಣದ ಸಾಲು’ (ಗಜಲ್ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೪ರಲ್ಲಿ ಕಲಬುರಗಿಯ ಡಾ.ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಲಭಿಸಿದೆ. ೨೦೧೫ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ, ೨೦೧೯ರಲ್ಲಿ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ. ಅಷ್ಟೇಯಲ್ಲದೆ ಇವರು ತಮ್ಮ ಹುಟ್ಟೂರಿನಲ್ಲಿ ಶ್ರೀಅಂಬಣ್ಣಾ ಕಟ್ಟಿಮನಿ ಸ್ಮರಣಾರ್ಥ `ಅಭಿಜ್ಞಾನ’ ಪ್ರಶಸ್ತಿಯು ನೀಡಿ ಗೌರವಿಸುತ್ತಿದ್ದಾರೆ.
ಅರವಿಂದ ಚಾಂದೆ
ಸೃಜನಶೀಲ ಉದಯೋನ್ಮುಖ ಬರಹಗಾರ ಅರವಿಂದ ಚಾಂದೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ಶಂಕರ ಚಾಂದೆ ಮತ್ತು ಜ್ಞಾನಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೯೦ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್.ಮತ್ತು ಎಂ.ಎ.ಪತ್ರಿಕೋದ್ಯಮ, ಮತ್ತು ಸಿನಿಮಾ ನಾಟಕದಲ್ಲಿ ಡಿಪ್ಲೊಮಾ ಪದವಿ ಪಡೆದು ಬಾಹ್ಯವಾಗಿ ಪಿ.ಎಚ್.ಡಿ.ಅಧ್ಯಯನದೊಂದಿಗೆ ಬಸವಕಲ್ಯಾಣ ತಾಲೂಕಿನ ಹಾಮುನಗರದ ಹಿರಿಯ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು `ಉಲಿದ ಮೌನ’, `ಚುಕ್ಕಿಯ ಚಿತ್ತಾರ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮೈಸೂರಿನ `ಮೈಸೂರು ಧ್ವನಿ’ ಎಂಬ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ, ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದವತಿಯಿAದ ಬೀದರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ.
ನೀತಿನ್ ನೀಲಕಂಠೆ
ಉದಯೋನ್ಮುಖ ಯುವ ಬರಹಗಾರಾದ ನೀತಿನ್ ನೀಲಕಂಠೆಯವರು ಬೀದರ ಜಿಲ್ಲೆ ಬಸವಕಲ್ಯಾಣದ ಶಿವರಾಜ ನೀಲಕಂಠೆ ಮತ್ತು ಸೋನಾಲಿ ಎಂಬ ದಂಪತಿಗಳಿಗೆ ದಿನಾಂಕ ೨೬-೩-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ.ಪದವಿ ಪಡೆದು ಮುರಾರ್ಜಿ ದೇಶಾಯಿ ವಸತಿ ಶಾಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೮ರಲ್ಲಿ `ಕೂಲಿಂಗ್ ಗ್ಲಾಸ್ ಕನಸ್ಸುಗಳು’ ೨೦೨೦ರಲ್ಲಿ `ದಿಲ್ ಕಾ ದುಕಾನ’ (ಕವನ ಸಂಕಲನಗಳು) ಪ್ರಕಟಿಸಿದ್ದಾರೆ. ಮತ್ತು `ಕಾವ್ಯ ಮಿತ್ರ ಪ್ರಕಾಶನದಿಂದ ರಾಜ್ಯದ ವಿವಿಧ ಲೇಖಕರ ೧೫ಕೃತಿಗಳು ಪ್ರಕಟಿಸಿದ್ದಾರೆ. ೨೦೧೮ರಲ್ಲಿ ಬೆಂಗಳೂರಿನ ಕವಿ ವೃಕ್ಷ ಬಗಳದಿಂದ ಇವರ ವಿಮರ್ಶಾ ಲೇಖನಕ್ಕೆ ಗೌರವ ಸಮ್ಮಾನ, `ಪ್ರೇತಾತ್ಮದ ಮನೆಯಲ್ಲಿ’ ಪುಸ್ತಕಕ್ಕೆ `ಉತ್ತಮ ಪ್ರಕಾಶಕನೆಂಬ ಪ್ರಶಸ್ತಿ, ಕವಿವೃಕ್ಷ ಬಳಗಳವು ನೀಡಿದೆ. ಮತ್ತು ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿರುವ ಇವರು ಜಿಲ್ಲೆಯ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಬೆಳಕು ಸಂಸ್ಥೆಯು ತಮ್ಮ `ತ್ರಿವಳಿ’ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕಾವ್ಯಮಿತ್ರ ಪ್ರಕಾಶನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯು ನೀಡಿ ಗೌರವಿಸಿದೆ.
ಬಸವೇಶ್ವರಿ ಕೆ.ದೇಗಲೂರೆ
ಉದಯೋನ್ಮಖ ಕವಯತ್ರಿ ಬಸವೇಶ್ವರಿ ಕೆ.ದೇಗಲೂರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಕಲ್ಲಪ್ಪಾ ಮತ್ತು ಮೀನಾಕ್ಷಿ ದಂಪತಿಗಳಿಗೆ ದಿನಾಂಕ ೪-೫-೧೯೯೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎಸ್ಸಿ. ಬಿ.ಇಡಿ. ಪದವಿಧರರಾದ ಇವರು ಹಿಂದಿ ವಿಷಯದಲ್ಲಿಯು ಪದವಿ ಪಡೆದು ಬಸವ ಪ್ರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಬೆಳೆದ ಇವರು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ, ವಚನ, ಜೀವನ ಚರಿತ್ರೆ ಮೊದಲಾದವು ರಚಿಸಿ ಕೆಲ `ಅಪ್ಪಾಜಿ’ (ಕವನಸಂಕಲನ) `ಶ್ರೀ ಸರಡಗಿಯ ಸಂಭ್ರಮ’ (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರು ಬರಹಗಳು ಬೀದರದ ಜನಪ್ರಿಯ ಪ್ರಕಾಶನದ ವತಿಯಿಂದ ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ನೂರು ಆಧುನಿಕ ವಚನಗಳು, ಒಂದು ಸಾವಿರ ಸ್ವರಚಿತ ನುಡಿಗಟ್ಟುಗಳು ರಚಿಸಿ ಇಂಗ್ಲಿಷ್ ಭಾಷೆಯಲ್ಲಿಯು ನೂರಾರು ಕವನಗಳು ರಚಿಸಿರುವ ಇವರು ಬೆಂಗಳೂರಿನ ಬಸವ ಸಮಿತಿಯವರು ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಹಾಗೂ ಬೆಂಗಳೂರಿನ ದಾಸರಹಳ್ಳಿಯ ಸುನಂದಾ ಸಾಹಿತ್ಯ ವೇದಿಕೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೀದರದ ದಾಸ ಸಾಹಿತ್ಯ ಸಮ್ಮೇಳನದ ನಿಮಿತ್ತವಾಗಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ ೨೦೧೧ರಲ್ಲಿ ಸುನಂದ ಸಾಹಿತ್ಯ ವೇದಿಕೆಯು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ ಪ್ರಬಂಧಕ್ಕೆ `ಭಲೆ ಬಸವ ಪ್ರಶಸ್ತಿ’ ಯು ನೀಡಿ ಗೌರವಿಸಿದೆ. ಹಾಗೂ ಚಂದ್ರ ಸ್ನೇಹ ಸೇತು ಸಾಮಾಜಿಕ ಸಾಂಸ್ಕೃತಿಕ ಸೇವಾ ಸಂಸ್ಥೆ ಶಿಲ್ಪನಾದ ಮಧುರ ಸಂಗೀತ ಮಹಾವಿದ್ಯಾಲಯ ರಂಗAಪೇಟ ಸುರಪುರದಿಂದ ಕಲಾಣ ನಾಡಿನ ಕಲಾರಾಧನ ಪ್ರಶಸ್ತಿಯು ನೀಡಿ ಗೌರವಿಸಿದೆ.
ವಿವೇಕಾನಂದ ಸಜ್ಜನ
ಯುವ ವಿಮರ್ಶಕ ಹಾಗೂ ಲೇಖಕರಾದ ವಿವೇಕಾನಂದ ಸಜ್ಜನ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಜಗನ್ನಾಥ ಸಜ್ಜನ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧೮-೭-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೨೦೧೮ರಲ್ಲಿ `ವಚನ ವೈವಿಧ್ಯ’ (ವಿಮರ್ಶಾ) ೨೦೧೯ರಲ್ಲಿ `ಕನ್ನಡ ರಾಮಾಯಣಗಳಲ್ಲಿ ರಾವಣ’ ಎಂಬ ತೌಲನಿಕ ಅಧ್ಯಯನ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಇವರ ಚೊಚ್ಚಲ ಕೃತಿ `ವಚನ ವೈವಿಧ್ಯ’ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದುಕೊಂಡಿದೆ. ಇವರ ಬರಹಗಳು `ಶ್ರೀ ಅರವಿಂದರ ಸಂದೇಶ’ `ಇಂಟರ್ ನ್ಯಾಶನಲ್ ಜರ್ನಲ್ ಆಫ್ ಕನ್ನಡ ರಿಸರ್ಚ್’ ಅರುಹು ಕುರುಹು, ಕವಿಮಾರ್ಗ, ರಚನಾ ತ್ರೈಮಾಸಿಕ ಮೊದಲಾದ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೯ರಲ್ಲಿ ಇವರ `ವಚನ ವೈವಿಧ್ಯ’ ಕೃತಿಗೆ ಬಹುಮಾನ ಲಭೀಸಿದೆ.
ಔರಾದ ತಾಲೂಕಾ ಲೇಖಕರು
ಪೂಜ್ಯ. ಶ್ರೀ. ಸಿದ್ದರಾಮ ಶರಣರು ಬೆಲ್ಲಾಳ
೧೯ನೇ ಶತಮಾನದ ನಂತರದಲ್ಲಿ ವಚನ ಸಾಹಿತ್ಯ ಮತ್ತು ಅವುಗಳ ದೈತ್ಯ ವಿಶ್ಲೇಷಣೆಯ ಮೂಲಕ ಬೀದರ ಜಿಲ್ಲೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಅಗ್ರಗಣ್ಯ ಲೇಖಕರು, ಚಿಂತಕರು, ಮತ್ತು ಶರಣರು ಎಂದರೆ ಪೂಜ್ಯ. ಶ್ರೀ. ಸಿದ್ದರಾಮ ಶರಣರು ಬೆಲ್ಲಾಳ. ಇವರ ಮೂಲನಾಮ `ವಿಠ್ಠಲ’ ಎಂದಾಗಿದ್ದು, ಅದು ಮುಂದೆ ಇವರ ಶರಣತತ್ವ ಆಚಾರ ವಿಚಾರಗಳಲ್ಲಿಯ ಪ್ರಬುದ್ಧತೆಯನ್ನು ಅರಿತ ಕನ್ನಡದ ಸಂತ ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಭಕ್ತಿಗೆ ಮೆಚ್ಚಿ ಸೊನ್ನಲಾಪುರದ ಸಿದ್ದರಾಮೇಶ್ವರರೆ ನೀವೆಂದು ತೋಳ ತೆಕ್ಕೆಯಲ್ಲಿ ಅಪ್ಪಿಕೊಂಡು `ಸಿದ್ದರಾಮ’ ಎಂದು ಮರುನಾಮಕರಣ ಮಾಡಿದ್ದರೆಂದು ಭಾಲ್ಕಿ ಶ್ರೀಗಳ ಚರಿತ್ರೆಯಿಂದ ತಿಳಿದುಬರುತ್ತದೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಮಧ್ಯದಲ್ಲಿ ಬರುವ ಬೆಳ್ದಾಳ ಗ್ರಾಮದ ಶ್ರೀ ಲಾಲಪ್ಪ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ದಂಪತಿಗಳ ಉದರದಲ್ಲಿ ೧೯೪೭ ಫೆಬ್ರುವರಿ ತಿಂಗಳ ಮಹಾಶಿವರಾತ್ರಿ ದಿನದಂದು ಜನ್ಮ ತಳೆದಿದ್ದಾರೆ. ಕನ್ನಡ ಭಾಷೆ ಮತ್ತು ವಚನ ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ ಇವರು ಓದಿದ್ದು ಕೇವಲ ಮೂರನೇ ತರಗತಿಯವರೆಗೆ ಮಾತ್ರ. ಆದರೆ ಶ್ರೀಗಳು ಸತತ ವಚನ ಸಾಹಿತ್ಯದ ಅಧ್ಯಯನದ ಮೂಲಕ ಸ್ವತಃ ಅವರೇ ಬರೆವಣಿಗೆಯಲ್ಲಿ ತೊಡಗಿಸಿಕೊಂಡು ಮೌಲ್ಯಧಾರಿತ ವಚನ ಸಂಪುಟಗಳೊAದಿಗೆ ೧೫ ಕೃತಿಗಳು ಹೊರತಂದು ನಾಡಿನಾದ್ಯಂತ ತುಂಬ ಹೆಸರು ವಾಸಿಯಾಗಿದ್ದಾರೆ. ಇವರು ಬರೆದ ಕೃತಿಗಳೆಂದರೆ , ಶೂನ್ಯ ಸಂಪಾದನೆಯ ರಹಸ್ಯ-೧.೨.೩.೪. ಸಂಪುಟಗಳು, `ವಚನ ತತ್ವಾನುಭವ, ಭಗವಾನ್ ಬುದ್ಧ, ಶರಣರ ಬೆಡಗಿನ ವಚನಗಳು, ಷಟಸ್ಥಲ ಸಂಪತ್ತು, ಬೆಳಗಿನ ಇಷ್ಟಲಿಂಗಾರ್ಚನೆ ವಿಧಾನ, ಕರುಳ ಕಲೆ, ಬಸವಣ್ಣನವರ ವಚನಕ್ಕೆ ವ್ಯಾಖ್ಯಾನ, ವಚನಗಳಲ್ಲಿ ಶಿವಯೋಗ’ ಇವು ಅವರ ಪ್ರಮುಖ ಕೃತಿಗಳಾಗಿವೆ. ಇವರ ಶರಣ ಸಾಹಿತ್ಯ ಮತ್ತು ಅದರ ತತ್ವನಿಷ್ಠೆಗೆ ಮೆಚ್ಚಿ, ಚಿತ್ರದುರ್ಗದ ಶ್ರೀ ಮುರುಘಾ ಮಠದಿಂದ ಮೊಟ್ಟ ಮೊದಲನೆಯ ಬಸವಶ್ರೀ ಪ್ರಶಸ್ತಿ ಮತ್ತು ೧ ಲಕ್ಷ ರೂಪಾಯಿ ಗೌರವಧನವು ನೀಡಿ ಗೌರವಿಸಿದ್ದಾರೆ. ಮತ್ತು ಅನುಭವ ಮಂಟಪ ಪ್ರಶಸ್ತಿ, ಕಂಬಳಿವಾಲೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.
೧೯೮೧ರಲ್ಲಿ ಕೌಠಾ (ಬಿ) ಗ್ರಾಮದಲ್ಲಿ ಬಸವ ಯೋಗಾಶ್ರಮವು ಸ್ಥಾಪಿಸಿ ಅದಕ್ಕೆ `ಮಾದರ ಚನ್ನಯ್ಯ ಪ್ರಸಾದ್ ನಿಲಯ’ ಎಂಬ ಮರುನಾಮಕರಣವು ಮಾಡಿದ್ದಾರೆ. ಅಷ್ಟೇಯಲ್ಲದೆ ತಮ್ಮ ಆಶ್ರಯದಲ್ಲಿಯೇ ಶರಣ ಹರಳಯ್ಯನ ಹೆಸರಿನಲ್ಲಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಮತ್ತು ಪದವಿ ಮಹಾವಿದ್ಯಾಲಯಗಳನ್ನು ತೆರೆದು ಬಡ ಮತ್ತು ಮಾಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣವು ನೀಡುವುದರೊಂದಿಗೆ ತಮ್ಮ ವಚನ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ದಿ.ನರಸಿAಗ ಮಾಸ್ತರ
ಹವ್ಯಾಸಿ ಬರಹಗಾರರಾದ ದಿ.ನರಸಿಂಗ ಮಾಸ್ತರ ಅವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಅಂಬಾಜಿ ಮತ್ತು ಜಳಬಾಯಿ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದ ಇವರು `ಸತ್ಯಹರಿಶ್ಚಂದ್ರ, ಧನಪಾಲರಾಜ, ತಾಯಿಯ ಕರುಳು, ನೀಲಕಂಠ ರಾಜ, ಮಡದಿ ಮಾಂಗಲ್ಯ,’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮತ್ತು ಮೊಹರಮ್ ಪದ, ಜಾನಪದ, ಭಜನೆ ಹಾಡುಗಳನ್ನು ಬರೆದಿದ್ದು ಅಷ್ಟೇಯಲ್ಲದೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ನಾಟಕ ರೂಪಾಂತರ ಮಾಡಿ ಪ್ರದರ್ಶನ ಮಾಡಿದ್ದಾರೆ. ಶ್ರೀ ಕೃಷ್ಣ ಲೀಲೆ, ರಾಮ- ಲಕ್ಷ್ಮಣ, ಕೊಳಲಿನ ಪ್ರಸಂಗಗಳು ತುಂಬ ಪ್ರಸಿದ್ಧಿ ಪಡೆದಿದ್ದವು. ತಮ್ಮ ೮೮ರ ಇಳಿವಯಸ್ಸಿನಲ್ಲೂ ಸುಮಧುರ ಕಂಠದಿAದ ಹಾಡುವ ಕಲೆಯನ್ನು ಉಳಿಸಿಕೊಂಡಿದ್ದರು. ಇವರು ೨೦೧೨ರಲ್ಲಿ ನಿಧನ ಹೊಂದಿದ್ದಾರೆ.
ಬಿ.ಜಿ.ಸಿದ್ದಬಟ್ಟೆ
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಕರಾಗಿ ಗುರುತಿಸಿಕೊಂಡು ಕೆಲ ಕೃತಿಗಳು ಪ್ರಕಟಿಸಿದ ಹಿರಿಯ ಲೇಖಕರೆಂದರೆ, ಬಿ.ಜಿ.ಸಿದ್ದಬಟ್ಟೆಯವರು. ಇವರು ಬೀದರ ಜಿಲ್ಲೆಯ ಬಾರಹಳ್ಳಿ ಔರಾದನ ಗಳಂಗಳಪ್ಪ ಸಿದ್ದಬಟ್ಟೆ ಮತ್ತು ಶಂಕರಮ್ಮ ದಂಪತಿಗಳಿಗೆ ದಿನಾಂಕ ೧೪-೮-೧೯೪೦ ರಲ್ಲಿ ಜನಿಸಿದ್ದಾರೆ. ಹಿಂದಿ ಭಾಷೆಯ ವಿದ್ವಾಂಸರಾದ ಇವರು ಬಿ.ಎಡ್, ಡಿಪ್ಲೊಮಾ ಇನ್ ತೆಲುಗು ಲಾಂಗ್ವೇಜ್ ನಲ್ಲಿ ಮುಕ್ತ ವಿಶ್ವವಿದ್ಯಾಲಯದ ಮೂಲಕ ಅಧ್ಯಯನ ಮಾಡಿ ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು ಭಾಷಾ ಪಾಂಡಿತ್ಯವನ್ನು ಹೊಂದಿದ್ದಾರೆ. ಮತ್ತು ಕರ್ನಾಟಕ ಏಕೀಕರಣ ಸಂಧರ್ಭದಲ್ಲಿ ಕನ್ನಡಕ್ಕಾಗಿ ಹೋರಾಡಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗ ‘ಯುವ ಘರ್ಜನೆ’ ಪತ್ರಿಕೆಯನ್ನು ಹುಟ್ಟು ಹಾಕಿ ಕನ್ನಡ ಏಕಿಕರಣ ಸಂದರ್ಭದಲ್ಲಿ ಬರವಣಿಗೆಯ ಮೂಲಕ ಛಾಪು ಮೂಡಿಸಿ ಬೀದರ ಜಿಲ್ಲೆಯಲ್ಲಿ ಮೊದಲ ಕನ್ನಡ ಪತ್ರಿಕೆ ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಆ ಪತ್ರಿಕೆಯ ಮೂಲಕ ಎಡಪಂಥೀಯ ವಿಚಾರಧಾರೆಗೆ ಮಾರುಹೋಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. `ನಾಮಾಂತರ ‘ ಮತ್ತು `ಘಟಸ್ಪೋಟ’ ಎಂಬ ಮರಾಠಿ ಭಾಷೆಯ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ,ಪ್ರೌಢ ಶಾಲಾ ಭಾಷಾ ಪಂಡಿತರಾಗಿ, ಶಾಲಾ ತನಿಖಾಧಿಕಾರಿಯಾಗಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ `ಕಾವ್ಯ ಕಿಶೋರ್’ ಎಂಬ ಕಾವ್ಯನಾಮದಿಂದ ಬರಹಗಳನ್ನು ಬರೆದ ಇವರು ಕರ್ನಾಟಕ ಸ್ಟೇಟ್ ಎಜುಕೇಶನ್ ಪೇಡ್ರೆಶನ, ಬೆಂಗಳೂರು. ಮತ್ತು ಆಲ್ ಇಂಡಿಯಾ ಪೆಡ್ರೇಶನ್ ಆಫ್ ಎಜುಕೇಷನಲ್, ಆಶೋಸಿಯಷನ್ ಎಗ್ಜಿಗೇಟಿವ್ ಕೌನ್ಸಿಲರ್ ಆಗಿ ಕೆ.ಎಸ್.ಇ.ಎ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೦ ರಲ್ಲಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದ `ಕಾಮನ್ ವೆಲ್ತ್ ರಾಷ್ಟ್ರಗಳ ಕೌನ್ಸಿಲ್ ಆಫ್ ಎಜುಕೇಶನ್ ಅಡ್ಮಿನಿಸ್ಟ್ರೇಶನ್’ ಎಂಬ ಅಂತರಾಷ್ಟ್ರೀಯ ಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡು ಕರ್ನಾಟಕ ಮೂಲದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇಯಲ್ಲದೆ ದೆಹಲಿಯಲ್ಲಿ ನಡೆದ `ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಜಾಗತಿಕ ಮಟ್ಟದಲ್ಲಿ ಸನ್ಮಾನಿತರಾಗಿದ್ದರಿಂದ ಇವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಯಶೋದಮ್ಮ ಸಿದ್ದಬಟ್ಟೆ
ಕಾದಂಬರಿ ಕ್ಷೇತ್ರದಲ್ಲಿ ಕೃಷಿ ಮಾಡಿ ಓದುಗರ ಮನಗೆದ್ದಿರುವ ಕಾದಂಬರಿಕಾರರೆAದರೆ ಯಶೋದಮ್ಮ ಸಿದ್ದಬಟ್ಟೆಯವರು . ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಜೈಪುರ ಗ್ರಾಮದ ಶಿವಪ್ಪ ಎಡ್ಕೆ ಮತ್ತು ಶಾರದಮ್ಮ ದಂಪತಿಗಳಿಗೆ ದಿನಾಂಕ ೮-೬-೧೯೪೩ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿ ಪಡೆದು ಶಿಕ್ಷಕಿಯಾದ ಇವರು ಬೀದರ ಜಿಲ್ಲೆಯ ಔರಾದನ ಬಿ.ಜಿ.ಸಿದ್ದಬಟ್ಟೆಯವರ ಧರ್ಮ ಪತ್ನಿಯಾಗಿದ್ದು ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ್ ಅವರ ತಾಯಿಯಾಗಿ ಚಿರಪರಿಚಿತರಾದ ಇವರು ದಿನಾಂಕ ೧೭-೩-೨೦೦೮ ರಲ್ಲಿ ಇಹಲೋಕ ತ್ಯೆಜಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಕಾದಂಬರಿಕಾರರಾಗಿ ಗುರುತಿಸಿಕೊಂಡ ಇವರು ಕತೆ,ಕವನ,ಲೇಖನ,ಹರಟೆ, ಪ್ರಬಂಧ ಮೊದಲಾದ ಸಾಹಿತ್ಯ ರಚಿಸಿದ್ದಾರೆ. `ಮಂಗಳಾ’ `ವಿಶ್ವಮೇಘ’ ‘ಹೊಸಹೆಜ್ಜೆ’ ಇವು ಅವರ ಕಾದಂಬರಿಗಳು. `ಬೀದರ ಜಿಲ್ಲೆಯ ಮಹಿಳಾ ಸಾಹಿತಿಗಳು’ ಇದು ಅವರ ಲೇಖನ ಸಂಕಲನವಾಗಿದೆ. `ಸಾಹಿತ್ಯ ಸೌರಭ’ `ಚೈತನ್ಯ ಶ್ರೀ’ ಇವು ಅವರ ಸಂಪಾದಿತ ಕೃತಿಗಳಾಗಿವೆ.
ಇವರು ಶಿಕ್ಷಣ ಕ್ಷೇತ್ರದಲ್ಲಿ ೧೯೭೦ ರಿಂದ ೨೦೦೮ರವರೆಗೆ ಕಾರ್ಯನಿರ್ವಹಿಸಿ ಸಾಹಿತ್ಯಿಕ ಮತ್ತು ಸಾಮಾಜಿಕವಾಗಿಯು ಸೇವೆ ಸಲ್ಲಿಸಿದ್ದಾರೆ. ಇವರು ಶಿಕ್ಷಕರಾಗಿ ಮಾಡಿದ ಶೈಕ್ಷಣಿಕ ಸೇವೆಗೆ ಅತ್ಯುನ್ನತವಾದ `ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಯು ಲಭಿಸಿದೆ. ಇದು ಬೀದರ ಜಿಲ್ಲೆಗೆ ಪ್ರಥಮ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕಿಯೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಆದ್ದರಿಂದ ಇವರಿಗೆ ೨೦೦೩ರಲ್ಲಿ ಬಸವಕಲ್ಯಾಣದ ಹಾರಕೂಡದಲ್ಲಿ ನಡೆದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಅಷ್ಟೇಯಲ್ಲದೆ ಇವರು ಉತ್ತಮ ವಾಗ್ಮಿಗಳು, ಸಂಘಟನಾಕಾರರು ಆಗಿದ್ದರಿಂದ `ಕರ್ನಾಟಕÀ ಲೇಖಕಿಯರ ಸಂಘದ ಸಂಸ್ಥಾಪಕರಾಗಿ, ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲ ಸಾಹಿತ್ಯಿಕ ಕಾರ್ಯಕ್ರಮಗಳು ಮಾಡಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಆಕಾಸವಾಣಿ ದೂರದರ್ಶನದಿಂದಲೂ ಪ್ರಸಾರವಾಗಿವೆ.
ಮಚ್ಚೇಂದ್ರನಾಥ ಸೋನಕಾಂಬಳೆ
ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಪಾಂಡಿತ್ಯ ಹೊಂದಿ ಸಾಹಿತ್ಯ ರಚಿಸಿದ ಕವಿಯೆಂದರೆ ದಿ.ಮಚ್ಚೇಂದ್ರನಾಥ ಸೋನಕಾಂಬಳೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಎಂ.ಡೋಣಗಾAವ ಗ್ರಾಮದ ವಿಶ್ವನಾಥ ಮತ್ತು ಮಾಪವ್ವ ದಂಪತಿಗಳಿಗೆ ೧೯೪೫ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಅನೇಕ ಹಾಡುಗಳನ್ನು ಹಾಡಲು ಕರಗತ ಮಾಡಿಕೊಂಡು ಬುದ್ಧ ಮತ್ತು ಅಂಬೇಡ್ಕರ್ ಕುರಿತಾದ ಸಾಹಿತ್ಯ ರಚಿಸಿದ್ದಾರೆ. ೧೯೯೩ರಲ್ಲಿ ಇವರ ಮಗಳು ಸುಪ್ರೀತಾ ಸಾಕ್ಷರತಾ ಅಭಿಯಾನದಲ್ಲಿ ತೊಡಗಿಸಿಕೊಂಡಾಗ ಇವರ ಇಡಿ ಕುಟುಂಬವೆ ಸಾಕ್ಷರತೆಯ ಆಂದೋಲನಕ್ಕೆ ಯಶಸ್ವಿ ಕಾರಣಿಭೂತರಾದರು. ನಂತರ ದಲಿತ ಜನಜಾಗೃತಿಗಾಗಿ ಬುದ್ಧ ಮತ್ತು ಅಂಬೇಡ್ಕರ್ ತತ್ವ ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ. ಮತ್ತು `ಜಯ ಭೀಮ ಗೀತ ಮಾಲಾ’ ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಇವರ ಪತ್ನಿ ಬುದ್ದನ ತತ್ವಗಳಿಗೆ ಮಾರುಹೋಗಿ ಬೌದ್ಧ ಭಿಕ್ಷುಣಿಯಾಗಿ ಬೌದ್ಧ ಗಯಾಕ್ಕೆ ಹೋದಾಗ ಇತ್ತ ಮಚ್ಚೇಂದ್ರನಾಥರು ಅನಾರೋಗ್ಯಗ್ಯಕ್ಕೆ ತುತ್ತಾಗಿ ಕಾಯಿಲೆಯಿಂದ ನರಳುತ್ತ ದಿನಾಂಕ ೧೦-೯-೨೦೦೮ರಲ್ಲಿ ನಿಧನರಾಗಿದ್ದರು.
ವಿಠಲರಾವ ಯೋಗಿ
ವಚನ ಮತ್ತು ತತ್ವಪದಗಳನ್ನು ಬರೆದು ಪುಸ್ತಕ ಪ್ರಕಟಿಸಿದ ದಲಿತ ಸಾಹಿತಿಯೆಂದರೆ ವಿಠಲರಾವ ಯೋಗಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಲಾದಾ ಗ್ರಾಮದ ಶ್ರೀ ಹೊನ್ನಪ್ಪ ಮತ್ತು ಶ್ರೀಮತಿ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧-೩-೧೯೪೮ ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ, ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ೧೯೭೫ರಲ್ಲಿ ಔರಾದ ತಾಲೂಕಿನ ಬೀರಿ (ಬಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ನಂತರ ಎಕಲಾರ ಗ್ರಾಮದ ಸಂಯುಕ್ತ ಪ್ರೌಢ ಶಾಲೆಯಲ್ಲಿ ೯ ವರ್ಷ ಸೇವೆ ಸಲ್ಲಿಸಿ, ದೋಧನ ಗ್ರಾಮದ ಮುಖ್ಯಗುರುಗಳಾಗಿ ಬಡ್ತಿ ಹೊಂದಿ, ಸಂತಪೂರದ ಶಿಕ್ಷಣ ಸಂಯೋಜಕರಾಗಿ ೨೦೦೬ರಲ್ಲಿ ದೋಧನಾ ಗ್ರಾಮದ ಶಾಲೆಯಿಂದ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿದ್ದರಿಂದ ಅಧ್ಯಾತ್ಮಿಕ ದೃಷ್ಟಿಕೋನದಿಂದ ಕೆಲ ತತ್ವಪದ, ವಚನಗಳು ಬರೆದು ನಿವೃತ್ತಿಯ ನಂತರ ೨೦೧೪ರಲ್ಲಿ `ಯೋಗೇಶ್ವರ ವಚನಗಳು’ ಎಂಬ ಆಧುನಿಕ ವಚನ ಸಂಕಲನವು ಪ್ರಕಟಿಸಿದ್ದಾರೆ. ಮತ್ತು ೨೦೦೦ ಇಸ್ವಿಯಲ್ಲಿ ಇವರಿಗೆ ಜಿಲ್ಲಾ ಮಟ್ಟದ `ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯೊಂದಿಗೆ ಮೂರು ಸಾವಿರ ಗೌರವಧನವು ಪಡೆದಿದ್ದು, ಇವರು ನೂರಾರು ತತ್ವಪದ ಆಧುನಿಕ ವಚನಗಳು ಬರೆದಿದ್ದಾರೆ.
ದಿ.ಗುರುನಾಥ ಬೇಂದ್ರೆ
ಕವಿ,ಸಾಹಿತಿ ಲೇಖಕರಾದ ದಿ. ಗುರುನಾಥ ಬೇಂದ್ರೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಲಾದಾ ಗ್ರಾಮದ ಇಸ್ಮಾಯಿಲಪ್ಪಾ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಬೆಂಗಳೂರಿನಲ್ಲಿ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ದಿನಾಂಕ ೩೦-೮-೨೦೦೨ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಾಲ್ಯದಿಂದಲೇ ಕಲೆ, ಸಾಹಿತ್ಯದ ಬಗ್ಗೆ ಆಸಕ್ತರಾದ ಇವರು ದಿ. ಪಂಚಶೀಲ ಗವಾಯಿಗಳ ಪ್ರಭಾವದಿಂದಾಗಿ ಅನೇಕ ಬುದ್ಧ, ಅಂಬೇಡ್ಕರ್ ರವರ ಕುರಿತಾದ ಹಾಡುಗಳು ಬರೆದಿದ್ದಾರೆ. ಮತ್ತು ೧೯೮೧ರಲ್ಲಿ `ಬುದ್ಧ, ಅಂಬೇಡ್ಕರ್ ಪದ್ಯಗಳು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಅನೇಕ ಕವನ, ಲೇಖನ, ಹಾಡುಗಳು ಬರೆದಿದ್ದು, ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಕಾಶಿನಾಥ ಮಹಿಮಾಕರ್
ಕವಿ, ಸಾಹಿತಿ, ನಾಟಕಕಾರ ಕಾಶಿನಾಥ ಮಹಿಮಾಕರ್. ಇವರು ಬೀದರ ಜಿಲ್ಲೆ ಔರಾದ ಶಾಸ್ತ್ರೀ ಗಂಜಿನ ಮಾದಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೪-೬-೧೯೫೪ರಲ್ಲಿ ಜನಿಸಿದ್ದಾರೆ. ಪ್ರೌಢ ಶಾಲಾ ಶಿಕ್ಷಣ ಪಡೆದ ಇವರು ನಗರ ಸಭೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೯೭ರಲ್ಲಿ `ಶೀಲವತಿಗೆ ಸುಖ ಯಾವಾಗ’ (ನಾಟಕ) ೧೯೯೭ರಲ್ಲಿ `ಸತ್ಯ ಶೋಧನೆ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.
ಬಸವರಾಜ ಸ್ವಾಮಿ
ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಮರಾಠಿ ಭಾಷಿಕರ ನಡುವೆ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಸಾಹಿತಿಯೆಂದರೆ ಬಸವರಾಜ ಸ್ವಾಮಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಸಂತಪೂರ ಗ್ರಾಮದ ಶಿವಮೋರ್ತೆಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧೦-೧೨-೧೯೫೫ ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಬಿ.ಎಡ್ ಶಿಕ್ಷಕರ ಪ್ರಶಿಕ್ಷಣ ತರಬೇತಿಯನ್ನು ಉತ್ತರ ಪ್ರದೇಶದ ಕಾನಪೂರದಲ್ಲಿ ಅಧ್ಯಯನ ಮಾಡಿ ಬಂದಿದ್ದಾರೆ. ಬದುಕಿಗಾಗಿ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಂತಪೂರದ `ಜನತಾ ಪ್ರವೀಣ ಪದವಿ ಪೂರ್ವ ಕಾಲೇಜಿನಲ್ಲಿ ೧೯೯೨ ರಿಂದ ೨೦೧೫ ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿಯನ್ನು ಹೊಂದಿದ ಇವರು ಬಹುದಿನಗಳ ನಂತರ ೨೦೧೪ ರಲ್ಲಿ `ಬೆಂಗಳೂರೆAಬ ಮಾಯಾ ನಗರಿ ಮತ್ತು ಇತರ ಕಾವ್ಯಗಳು’ ಎಂಬ ಕವನಸಂಕಲನ ಪ್ರಕಟಿಸಿ ಜಾನಪದ ಕ್ಷೇತ್ರದಲ್ಲಿ ದೊಡ್ಡಾಟ, ಬಯಲಾಟಗಳ ಹವ್ಯಾಸಿ ರಂಗಭೂಮಿ ಕಲಾವಿದರಾಗಿ, ನಾಟಕÀ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ `ದಲಿತ ಕಳ್ಳ’ `ಗೌರಿ ಗೆದ್ದಳು’ `ಸಂಗಮ’ ಎಂಬ ಸಾಮಾಜಿಕ ನಾಟಕಗಳಲ್ಲಿ ಖಳನಾಯಕ, ಪೊಷಕ ನಟನಾಗಿ, ನಟಿಸಿ ಉತ್ತಮ ಕಲಾವಿದರಾಗಿಯೂ ಗುರುತಿಸಿ ಕೊಂಡಿದ್ದಾರೆ. ಇವರ ಕವನಸಂಕಲನದಲ್ಲಿ ಬುದ್ದ ಬಸವ,ಅಂಬೇಡ್ಕರ್ ಮತ್ತು ನಾವದಗಿ ರೇವಪ್ಪಯ್ಯ ಮುತ್ಯಾನವರ ಕುರಿತಾದ ೫೦ ಕವನಗಳಿದ್ದು ಅವು ತುಂಬ ಅರ್ಥಪೂರ್ಣವಾಗಿವೆ. ಅಷ್ಟೇಯಲ್ಲದೆ ಭಜನೆ ಗೀತೆಗಳು ಕೂಡ ಬರೆದು ಹಾಡುವ ಸಂಗೀತಗಾರರು ಇವರಾಗಿದ್ದಾರೆ.
ಸಿದ್ರಾಮಪ್ಪಾ ಮಾಸಿಮಾಡೆ
ಬೀದರ ಜಿಲ್ಲೆಯ ಸಾಹಿತಿ ಹಾಗೂ ಸಂಘಟಕರಾಗಿ ಹೆಚ್ಚು ಗುರುತಿಸಿಕೊಂಡ ಲೇಖಕರೆಂದರೆ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಹೆಡಗಾಪೂರ ಗ್ರಾಮದ ವಿಶ್ವನಾಥ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧೪-೧೨-೧೯೬೦ರಲ್ಲಿ ಬೀದರದ ಬಿ.ವಿ.ಬಿ.ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ ೩೧ ಮೇ ೨೦೨೦ ರಂದು ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿಯಾಗಿದಾಗಿನಿಂದಲೂ ಕನ್ನಡಪರ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿ, ೨೦೦೧-೦೪, ೨೦೦೮-೧೨, ೨೦೧೨-೧೫ ರ ಮೂರು ಅವಧಿಗೆ ಬೀದರ ಜಿಲಾ ಕಸಾಪ ಅಧ್ಯಕ್ಷರಾಗಿ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡಿ ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಬೀದರ ಜಿಲ್ಲಾ ಕಥಾಸಂಕಲನ, ಹೀಗಿದೆ ನಮ್ಮ ಬೀದರ, ಬಾಳಬುತ್ತಿ, ಸಿಡಿಲು,ಪ್ರಬಂಧ ಲೋಕ, ವಿಜ್ಞಾನ ಕಿರಣ, ಹೊನ್ನುಡಿ, ವಸುಂಧರೆ, ಕೂಕ್ಕೆನ ಹೂ , ಭಾಲ್ಕಿ ಸಾಹಿತ್ಯ ಸಂಭ್ರಮ, ಶೃಂಗ, ವಚನ ಸುಧೆ, ಚಂದವೆಟ್ಟಾ, ಅಮರವಾಡಿ, ಸಾಹಿತ್ಯ ಸಂಜೀವಿನಿ, ಸಂಪ್ರೀತಿ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ `ವಚನ ಸುಧೆ ’ ಎಂಬ ಕೃತಿಯು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಮುದ್ರಣವಾಗಿದೆ. ಮತ್ತು ಇವರು ಲೇಖನ, ಚಿಂತನಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಇವರು ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ೧೪ ವಿವಿಧ ಕೃತಿಗಳು ಪ್ರಕಟಿಸಿ ೭ ಜಿಲ್ಲಾ ೨ ಮಹಿಳಾ ೧೫,ತಾಲೂಕು ೧೪ ವಲಯ ೭.ಗಡಿನಾಡು ೪ ಗ್ರಾಮ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ೨೩ ದತ್ತಿ ೨೦೦ ಪ್ರತಿಭಾ ಪರಿಚಯ ೭೫ ಬೇಂದ್ರೆ ಸ್ಮರಣೋತ್ಸವ ೧೩ ಜಿಲ್ಲಾ ಕವಿಗೊಷ್ಠಿಗಳು ನಡೆಸಿ, ಸಂಶೋಧನಾ ಕಮ್ಮಟವು ಮಾಡಿದ್ದಾರೆ. ಮತ್ತು ೨೦೦೪ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರ ಕಾರ್ಯಸಾಧನೆಗೆ ಬೆಂಗಳೂರಿನ ಬೇಂದ್ರೆ ಕಾವ್ಯಕೂಟದಿಂದ `ದ.ರಾ.ಬೇಂದ್ರೆ ಪ್ರಶಸ್ತಿ’ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ’ ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಾಚಾರ್ಯ ಸೇವಾ ಸಮಿತಿಯಿಂದ `ಶ್ರೀ ಚೆನ್ನರತ್ನ ಪ್ರಶಸ್ತಿ’ ಬೆಂಗಳೂರು ಕುವೆಂಪು ಕಲಾನಿಕೇತನದಿಂದ `ಕುವೆಂಪು ಕನ್ನಡ ಸಾಹಿತ್ಯ ರತ್ನ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕುರಿತು ಡಾ.ರಾಮಚಂದ್ರ ಗಣಾಪೂರ ಮತ್ತು ಡಾ.ಜಗದೇವಿ ತಿಬಶೆಟ್ಟಿಯವರು `ಸೌಮ್ಯ ಸಿರಿ’ ಎಂಬ ಅಭಿನಂದನಾ ಗ್ರಂಥವು ಹೊರ ತಂದಿದ್ದಾರೆ.
ಸಮಧಾನ ಬಲ್ಲೂರ್
ಬೀದರ ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ, ಲೇಖನ, ಪ್ರಬಂಧ, ಹನಿಗವನ, ಚುಟುಕು ಮೊದಲಾದ ಬರಹಗಳು ಬರೆದು ಕವಯತ್ರಿಯಾಗಿ ಗುರ್ತಿಸಿ ಕೊಂಡವರೆAದರೆ ಸಮಧಾನ ಬಲ್ಲೂರ್. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ನಿಂಗದಳ್ಳಿ ಗ್ರಾಮದ ಶ್ರೀ ಮಾದಪ್ಪ ಮತ್ತು ಶ್ರೀಮತಿ ರತ್ನಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೬೨ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕರಾಗಿ ಸೇವೆಗೆ ಸೇರಿ ಮುಖ್ಯೋಪಾಧ್ಯಾಯನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿ ನೂರಾರು ಕವನಗಳು ಬರೆದು ೨೦೦೬ ರಲ್ಲಿ `ಕಾವ್ಯ ಸ್ಪೂರ್ತಿ’ ಎಂಬ ಕವನ ಸಂಕಲನವು ಹೊರತಂದಿದ್ದಾರೆ. ಈ ಕೃತಿಗೆ ಬೆಂಗಳೂರಿನ ಬೆಳ್ಳಿ ದೀಪ ಸಂಘದ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವು ಲಭಿಸಿದೆ. ಅಷ್ಟೇಯಲ್ಲದೆ ಇವರಿಗೆ ಬೀದರ ಮತ್ತಿತರ ಕಡೆಗಳಿಂದ ಕನ್ನಡಪರ ಸಂಘ ಸಂಸ್ಥೆಗಳು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿವೆ. ಇವರ ಕವನ ಲೇಖನ ಬರಹಗಳು ನಾಡಿನ ಕೆಲ ಪ್ರಮುಖ ಪತ್ರಿಕೆಗಳಲ್ಲಿ, ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿ ಓದುಗರ ಮೆಚ್ಚುಗೆಯು ಗಳಿಸಿವೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುವ ವಿವಿಧ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹಾಗೂ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಮೆಥೋಡಿಸ್ಟ್ ಚರ್ಚ್ ಕೇಂದ್ರದಲ್ಲಿ ೯ ವರ್ಷಗಳಿಂದ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಹಂಶಕವಿ
‘ಹAಶಕವಿ’ ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕರೆಂದರೆ ಹಣಮಂತಪ್ಪಾ ತಂದೆ ಶಂಕರೆಪ್ಪ ವಲ್ಲೆಪೂರೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಶಂಕರೆಪ್ಪಾ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೫-೧೯೬೫ ರಲ್ಲಿ ಜ£ಸಿದ್ದಾರೆ. ಬಿ.ಎ.ಬಿ.ಇಡಿ.ಪದವಿಧರರಾಗಿ ೧೯೯೩ರಲ್ಲಿ ಪೋಲಿಸ್ ಪೆದೆ ಹುದ್ದೆಗೆ ಸೇರಿ ಕತೆ ಕವನ ವಚನ ಲೇಖನಗಳು ಬರೆದು ಕವಿ ಸಾಹಿತಿಯಾಗಿ ಗುರ್ತಿಸಿಕೊಂಡಿದ್ದಾರೆ.
೨೦೦೧ರಲ್ಲಿ ‘ಹಾಹಾಕಾರ’ ಎಂಬ ಕವನ ಸಂಕಲನ ಪ್ರಕಟಿಸಿ ನಂತರ ‘ಬದುಕು’ ‘ಕಾವ್ಯ ಲಹರಿ’ ‘ಬದುಕು ಬೆಳಕು’ ಕೃತಿಗಳು ಹೊರತಂದಿದ್ದಾರೆ. ಮತ್ತು ‘ಸಂತ ಗುಂಡಯ್ಯ’ ‘ಜ್ಯೋರ್ತಿಲಿಂಗಾಶ್ರಮದಲ್ಲಿ ಸದ್ಗುರು ಬಸವಲಿಂಗರು’ ‘ಶ್ರೀಗುರು ಚರಿತ್ರೆ’ ‘ದತ್ತ ದರ್ಶನ’ ‘ಅಪರೂಪದ ಶರಣರು’ ‘ನನ್ನಪ್ಪ ನನ್ನವ್ವೆ’ ‘ಅಪೂರ್ವಸಂತ ಶ್ರೀ ಗಜಾನನ ಮಹಾರಾಜ’ ‘ಚಮತ್ಕಾರಿ ಸಂತ ತಾಜ ಬಾಬಾ’ ‘ಚತುರ್ಥಿ ದತ್ತಾವತಾರಿ ಶ್ರೀ ಮಾಣಿಕ ಪ್ರಭು’ ಇವು ಅವರು ರಚಿಸಿದ ಜೀವನ ಚರಿತ್ರೆಗಳಾದರೆ, ‘ಸಿರಿಧಾನ್ಯಗಳು’ ಮತ್ತು ‘ವ್ಯಕ್ತಿ ಚಿತ್ರ ದರ್ಶನ’ ಇವು ಅವರ ಲೇಖನಗಳ ಕೃತಿಗಳಾಗಿವೆ.
‘ಶ್ರೀದತ್ತ ಭಾಗವತ್’ ಎನ್ನುವುದು ಅವರ ಇತ್ತೀಚಿನ ೧೨೦೦ ಪುಟಗಳ ಬೃಹತ್ ಸಂಪುಟವಾಗಿದೆ. ಮತ್ತು ೩೬ ಆಧು£ಕ ವಚನಗಳ ಸಂಪುಟಗಳು, ಅಭಿನಂದನಾ ಗ್ರಂಥಗಳು, ಸ್ಮರಣ ಸಂಚಿಕೆಗಳು ಒಟ್ಟು ಸೇರಿ ೧೨೫ ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಸಸ್ತಾಪೂರದ ಯಲ್ಲಾಲಿಂಗೇಶ್ವ ಮಠದ ವತಿಯಿಂದ ನಡೆದ ೩ನೇ ಆಧು£ಕ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನ ಹಾಗೂ ೨೦೧೮ ರಲ್ಲಿ ನಡೆದ ಬೀದರ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಳಕಟ್ಟಿ ಪ್ರಶಸ್ತಿ, ವಚನಶ್ರೀ ಪ್ರಶಸ್ತಿ, ಕಲ್ಯಾಣ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಸದ್ಯ ಭಾಲ್ಕಿಯ ನಗರ ಪೋಲಿಸ್ ಠಾಣೆಯಲ್ಲಿ ಎ.ಎಸ್.ಐ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಗನಾಥ ಚಿಟಮೆ
ಬೀದರ ಜಿಲ್ಲೆಯ ಸಾಹಿತಿಗಳಲ್ಲಿ ಒಬ್ಬರಾಗಿ ಮಕ್ಕಳ ಕತೆ, ಲೇಖನಗಳ ಮೂಲಕ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಅನೇಕ ಬರಹಗಳು ಪ್ರಕಟಿಸಿದ ಶಿಕ್ಷಕರು ಮತ್ತು ಲೇಖಕರೆಂದರೆ ನಾಗನಾಥ ಚಿಟಮೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಶ್ರೀ ತೋಟೆಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೬೫ ರಲ್ಲಿ ಜ£ಸಿದ್ದಾರೆ. ಬಿ.ಎಸ್ಸಿ.ಎಂ.ಇಡಿ.ಪದವೀಧರರಾದ ಇವರು ೧೯೮೯ ರಲ್ಲಿ ಔರಾದ ತಾಲೂಕಿನಲ್ಲಿರುವ (ಅನುದಾ£ತ) ನಳಂದಾ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಶಿಕ್ಷಕ ಹುದ್ದೆಗೆ ಸೇರಿದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಮಕ್ಕಳ ಕತೆ, ಕವನ,ಲೇಖನ ಬರಹಗಳ ರಚನೆಯಲ್ಲಿ ತೊಡಗಿ ೨೦೧೪ರಲ್ಲಿ ‘ಸ್ಫೂರ್ತಿಯ ಚಿಲುಮೆ’ ಎಂಬ ಕತೆಗಳು ಮಕ್ಕಳಿಗಾಗಿ ೧೩೦ ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಘಟನೆಗಳಾಧರಿಸಿ ಬರೆದು ಪ್ರಕಟಿಸಿದ್ದಾರೆ.
ಇವರ ಕತೆ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕದ ಬೋಧಿವೃಕ್ಷ ಪುರವಣಿ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಸೇವೆಯನ್ನು ಕಂಡು ಅನೇಕ ಕನ್ನಡಪರ ಸಂಘ ಸಂಸ್ಥೆಯವರು ಸನ್ಮಾನಿಸಿ ಸತ್ಕಾರಿಸಿದ್ದಾರೆ. ಮತ್ತು ಇವರಿಗೆ ೨೦೧೭ ರಲ್ಲಿ ಔರಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿಯೂ ನೀಡಿ ಗೌರವಿಸಲಾಗಿದೆ.
ಪರಮೇಶ್ವರ ಶಟಕಾರ
ವೃತ್ತಿಯಲ್ಲಿ ಔಷಧ ವ್ಯಾಪಾರಸ್ಥರಾಗಿ ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡವರೆAದರೆ ಪರಮೇಶ್ವರ ಶಟಕಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಬೆಳಕುಣಿ (ಚೌದ್ರಿ) ಗ್ರಾಮದ ಶಿವರುದ್ರಪ್ಪ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ. ಡಿ.ಫಾರ್ಮಸಿ ಪದವಿ ಪಡೆದು ಕಲಬುರಗಿಯಲ್ಲಿ ಮೆಡಿಕಲ್ ಔಷಧೀಯ ವ್ಯಾಪಾರಸ್ಥರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ, ಹಾಸ್ಯ ಬರಹಗಳು ಬರೆದು ೧೯೯೩ರಲ್ಲಿ `ಮುನ್ನುಡಿ’ ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ.ಮತ್ತು `ಪ್ರೇಮ ಸರಿಗಮ, ಓ ನಲ್ಲೆ, ನನ್ನವ್ವ, ಬಸವ ಜ್ಯೋತಿ, ಕನ್ನಡ ಶಾಯಿರಿ’ ಎಂಬ ಕೃತಿಗಳು. ರಚಿಸಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಉಪನ್ಯಾಸ ಹಾಗೂ ಕವನ ವಾಚನೆ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಇವರು ಸಾಮಾಜಿಕ ಕಳಕಳಿಯಿಂದ ೪೦ಕ್ಕೂ ಹೆಚ್ಚು ಸಲ ರಕ್ತದಾನ ಮಾಡಿದ್ದಾರೆ. ಇವರ ಸೇವೆ ಪರಿಗಣಿಸಿ ಹಲವಾರು ಕನ್ನಡಪರ ಸಂಘ ಸಂಸ್ಥೆ ಹಾಗೂ ಮಠಾಧೀಶರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ವಿಜಯಕುಮಾರ್ ಎಸ್.ಗೌರೆ
ಕಾವ್ಯ ಕ್ಷೇತ್ರದಲ್ಲಿ ತಮ್ಮದೆ ಆದ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಕತೆ, ಕವನ, ಲೇಖನಗಳು ಬರೆಯುತ್ತಿರುವ ಸಾಹಿತಿಯೆಂದರೆ ವಿಜಯಕುಮಾರ್ ಎಸ್.ಗೌರೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ನಿಟ್ಟೂರ ಕೆ ಗ್ರಾಮದ ಶರಣಪ್ಪ ಮತ್ತು ಕಾಶಮ್ಮ ಎಂಬ ದಂಪತಿಗಳಿಗೆ ದಿನಾಂಕ ೦೧-೦೬-೧೯೬೬ ರಂದು ಜನ್ಮ ತಳೆದು ಎಂ.ಎ.ಕನ್ನಡ ಹಾಗೂ ಎಂ.ಎ.ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ೧೯೯೬ ರಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೦೬ ರಿಂದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ೨೦೧೧ ರಲ್ಲಿ `ಆಡದೆ ಉಳಿದ ಮಾತುಗಳು’ ಎಂಬ ಕವನ ಸಂಕಲನ ೨೦೧೪ರಲ್ಲಿ `ಬಯಲು ಬಯಲಾಯ್ತು ನೋಡ’ ಎಂಬ ಆಧುನಿಕ ವಚನ ಸಂಕಲನ ಮತ್ತು `ಮುಸ್ಸಂಜೆ ರಂಗೇರಿದಾಗ’ ಎಂಬ ಗಜಲ್, `ಶಿಕ್ಷಣ ಸಿರಿ’ ಎಂಬ ಸಂಪಾದಿತ ಕೃತಿ ಸೇರಿ ಒಟ್ಟು ನಾಲ್ಕು ಪುಸ್ತಕಗಳು ಹೊರತಂದಿದ್ದಾರೆ. ಕಲಬುರಗಿಯ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಕೆಲ ಉಪನ್ಯಾಸಗಳನ್ನು ನೀಡಿದ ಇವರು ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ಬೀದರ ತಾಲೂಕು ಅಧ್ಯಕ್ಷರಾಗಿ, ಕರ್ನಾಟಕ ಪರಿಸರ ವೇದಿಕೆಯ ಕಾರ್ಯದರ್ಶಿಯಾಗಿ, ಕೆಲ ಸಂಘ ಸಂಸ್ಥೆಯ ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ ಇವರಿಗೆ ೨೦೨೦ರ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಸೋಮನಾಥ ಮುದ್ದಾ
ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕವನ ಲೇಖನ, ಬರಹಗಳು ಬರೆದು ಪುಸ್ತಕ ಪ್ರಕಟಿಸಿ ಲೇಖಕರಾಗಿ ಗುರುತಿಸಿಕೊಂಡವರೆAದರೆ ಸೋಮನಾಥ ಮುದ್ದಾ . ಇವರು ಬೀದರ ಜಿಲ್ಲೆಯ ಔರಾದ (ಬಿ) ತಾಲೂಕಿನ ಗಣಪತಿ ಮುದ್ದಾ ಮತ್ತು ಬಾಯಾಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೬೬ ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ, ಎಂ.ಎ.ಸಮಾಜಶಾಸ್ತ್ರ, ಎಂ.ಎ.ಪತ್ರಿಕೋದ್ಯಮ, ಎಂ.ಎಡ್. ಸ್ನಾತಕೋತ್ತರ ಪದವಿಧರರಾದ ಇವರು ೧೯೯೮ರಲ್ಲಿ ಭಾಲ್ಕಿಯ ಪರದಾಪೂರ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸೇರಿ, ಸದ್ಯ ಭಾಲ್ಕಿಯ ತಾಲೂಕಿನಲ್ಲಿ ಬಿ.ಆರ್.ಪಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು ಹದಿನೈದು ವರ್ಷ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ವಿಶ್ವವಾಣಿ ಪತ್ರಿಕೆಯ ವರದಿಗಾರರಾಗಿದ್ದಾರೆ. `ಜ್ಞಾನ ದೀಪ್ತಿ’ `ಭಾಲ್ಕಿ ತಾಲೂಕು ದರ್ಶನ’ `ಸದ್ಗುರು ಚನ್ನಬಸವ ನಾಮಾವಳಿಯಲ್ಲಿ ಜೀವನ ದರ್ಶನ’ ಎಂಬ ಪುಸ್ತಕಗಳು ಪ್ರಕಟಿಸಿದ್ದು, ಇವರ ಕವನ, ಲೇಖನಗಳು ಪ್ರಜಾವಾಣಿ ಸುಧಾ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ದೂರದರ್ಶನದಲ್ಲಿಯು ಪ್ರಸಾರವಾಗಿವೆ.
`ಶಿವಶರಣ ನನ್ನಯ್ಯ’ ಎಂಬ ನಾಟಕದಲ್ಲಿ ನಟಿಸಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಭಾಲ್ಕಿ ಮಠದ `ಉತ್ತಮ ಲೇಖಕ ಪ್ರಶಸ್ತಿಗಳು ಪಡೆದ ಇವರು ಭಾಲ್ಕಿ ತಾಲೂಕಿನ ಕಸಾಪ ಗೌರವ ಕಾರ್ಯದರ್ಶಿಯಾಗಿ, ಬೀದರ ಕಸಾಪದ ಗಡಿನಾಡು ಪ್ರತಿನಿಧಿಯಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸಿದ್ದಾರೆ. ಹಾಗೂ ಸದ್ಗುರು ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿ, ಸದ್ಗುರು ವಿದ್ಯಾಲಯವನ್ನು ಪ್ರಾರಂಭಿಸಿ, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಅಷ್ಟೇಯಲ್ಲದೆ ಸದ್ಗುರು ಪ್ರತಿಭಾ ಶೋಧ ಪ್ರತಿಷ್ಠಾನವು ಸ್ಥಾಪಿಸಿ ಅದರ ಮೂಲಕ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆÀ ಪ್ರತಿ ವರ್ಷ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದಾಗಿದೆ.
ಗುರುನಾಥ ವಡ್ಡೆ
ಸಾಹಿತಿ ಹಾಗೂ ಪತ್ರಕರ್ತರಾಗಿ ಅನೇಕ ಹೋರಾಟಗಳೊಂದಿಗೆ ಲೇಖನಗಳು ಬರೆದು ಸಾಮಾಜಿಕ ಪರಿವರ್ತನೆಯೊಂದಿಗೆ ಶರಣರ ತತ್ವನಿಷ್ಠೆಯನ್ನು ಮೈಗೂಡಿಸಿಕೊಂಡು ಕೆಲ ಅಧ್ಯಾತ್ಮಿಕ ಶರಣ ಸಾಹಿತ್ಯ ಕೃತಿಗಳು ರಚಿಸಿದ ಲೇಖಕರೆಂದರೆ ಗುರುನಾಥ ವಡ್ಡೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಶ್ರೀ ವೈಜಿನಾಥ ಮತ್ತು ಶ್ರೀಮತಿ ಶಕುಂತಲಾ ದಂಪತಿಗಳಿಗೆ ದಿನಾಂಕ ೩-೨-೧೯೬೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ೧೯೯೨ರಿಂದ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು `ಸೀಮಾವಾರ್ತೆ’ ಎಂಬ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಪ್ರಜಾಪ್ರಭುತ್ವ ಉಳಿಸಿ’ ಎಂಬ ಹೋರಾಟ, ಮತ್ತು ಅನೇಕ ಸಾರ್ವಜನಿಕ ಹಿತಾಸಕ್ತಿಯಿಂದ ಗ್ರಾಮೀಣ ಪ್ರದೇಶದ ಜನಜೀವನದ ಏಳಿಗೆಗಾಗಿ ರಾಜ್ಯಾದ್ಯಂತ ಹೋರಾಟ, ಸತ್ಯಾಗ್ರಹ, ಉಪವಾಸ, ಪ್ರತಿಭಟನೆಗಳನ್ನು ಮಾಡುತ್ತಾ ಉತ್ತಮ ಸಮಾಜಿಕ ಕಾರ್ಯಕರ್ತರಾಗಿ, ಸಾಹಿತಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ಇವರು `ವಿಭೂತಿ ಮಹಿಮಾ, ಲಿಂಗಾಚಾರ, ವೀರಶೈವ ಪಂಚಾಚಾರ, ಅಷ್ಟಾವರಣ, ವೀರಶೈವ ಧರ್ಮ ಪರಿಚಯ, ಓಂ.ನಮಃಶಿವಾಯ, ಶ್ರೀ ಕ್ಷೇತ್ರ ಭವಾನಿ ಬಿಜಲಗಾಂವ, ಶರಣ ವಚನಾಮೃತ, ಸಹಕಾರ ಮಹರ್ಷಿ ಶ್ರೀ ಗುರುಪಾದಪ್ಪಾ ನಾಗಮಾರಪಳ್ಳಿ, ಮತ್ತು `ಡಾ.ನಾಗಮಾರಪಳ್ಳಿ ನೆನಪುಗಳು’ ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರ ಲೇಖನ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರ ಸಾಹಿತ್ಯ ಹಾಗೂ ಹೋರಾಟಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಶಿವರಾಜ ಪಾಟೀಲ್
ಕವಿ ಸಾಹಿತಿಯಾದ ಶಿವರಾಜ ಪಾಟೀಲ್ ಇವರು ಔರಾದ ತಾಲೂಕಿನ ಭೀಮರಾವ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೨೫-೮-೧೯೬೮ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪದವೀಧರರಾದ ಇವರು ಔಷಧ ಅಂಗಡಿಯ ವ್ಯಾಪಾರಸ್ಥರಾಗಿ ಸೇವೆ ಸಲ್ಲಿಸುವುದರೊಂದಿಗೆ ೨೦೦೧ರಲ್ಲಿ `ಮನಸ್ಸು’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.
ಕಾವ್ಯಶ್ರೀ ಮಹಾಗಾಂವಕರ್
‘ಸಿಕಾ’ ಎಂಬ ಕಾವ್ಯನಾಮದಿಂದ ಕತೆ ಕವನ ಕಾದಂಬರಿಗಳನ್ನು ಬರೆದು ನಾಡಿನಾದ್ಯಂತ ಚಿರಪರಿಚಿತರಾಗಿ ಗುರುತಿಸಿಕೊಂಡ ಲೇಖಕಿಯೆಂದರೆ ಕಾವ್ಯಶ್ರೀ ಮಹಾಗಾಂವಕರ್. ಇವರು ಬೀದರ ನಗರದ ಬಿ.ಜಿ.ಸಿದ್ದಬಟ್ಟೆ ಮತ್ತು ಯಶೋದಮ್ಮ ಸಿದ್ದಬಟ್ಟೆ ದಂಪತಿಗಳಿಗೆ ದಿನಾಂಕ ೧೧-೪-೧೯೬೯ರಲ್ಲಿ ಜ£ಸಿದ್ದಾರೆ. ಡಿ.ಇ.ಮತ್ತು ಸಿ.ಇ. ಎಂ.ಎ.ಸ್ನಾತಕೋತ್ತರ ಪದವಿ ಪಡೆದು ಕಲಬುರಗಿಯ ಸುರೇಶ ಮಹಾಗಾಂವಕರ್ ಅವರೊಂದಿಗೆ ವಿವಾಹವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಬಾಲ್ಯದಿಂದಲೂ ತಮ್ಮ ತಾಯಿಯ ಮಾರ್ಗದರ್ಶನದ ಮೂಲಕ ಸಾಹಿತ್ಯದ ಗೀಳು ಹಚ್ಚಿಕೊಂಡು ಹಲವಾರು ಕತೆ ಕವನ ಕಾದಂಬರಿ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಹಲವಾರು ಪತ್ರಿಕೆಗೆ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು ರಚಿಸಿದ ಕೆಲವು ಕೃತಿಗಳೆಂದರೆ ‘ಪ್ರೇಮ ಕಾವ್ಯ’ ‘ಬೆಳಕಿನೆಡೆಗೆ’ ‘ಪ್ರಳಯದಲೊಂದು ಪ್ರಣತಿ’ ‘ಜೀವ ಜಗತ್ತಿಗೆ’ ‘ಜೇನಹ£’ ‘ಪಿಸುಮಾತುಗಳ ಜುಗಲ್’ ‘ಒಳ್ಕಲ್ಲ ಒಡಲು’ ‘ಬ್ಯಾಸರಿಲ್ಲದ ಜೀವ’ ಇವು ಇವರ ಪ್ರಮುಖ ಕೃತಿಗಳಾಗಿವೆ. ಹೀಗೆ ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಸದ್ಯ ಇವರು ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ಕೃಷಿ ಮುಂದುವರಿಸಿದಳ್ಟೆಯಲ್ಲದೆ ೨೦೧೯ರಿಂದ ಪಿ.ಎಚ್.ಡಿ.ಅಧ್ಯಯನವು ಮುಂದುವರೆಸಿದ್ದಾರೆ. ಇವರು ಬೀದರದ ಖ್ಯಾತ ಸಾಹಿತಿ ಯಶೋದಮ್ಮ ಸಿದ್ದಬಟ್ಟೆಯವರ ಪುತ್ರಿ ಎನ್ನುವುದು ಹೆಮ್ಮೆಯ ವಿಳಯವಾಗಿದೆ.
ಡಾ.ಮನ್ಮಥ ಎಚ್.ಡೊಲೆ.
ಬೀದರ ಜಿಲ್ಲೆಯ ಸಾಹಿತಿಗಳಲ್ಲಿ ಒಬ್ಬರಾಗಿ ಕವನ, ಲೇಖನ, ಚಿಂತನೆ, ಹನಿಗವನ,ಪ್ರಬಂಧ, ಸಂಶೋಧನೆ ಸೇರಿದಂತೆ ಮೊದಲಾದ ಬರಹಗಳು ಬರೆದ ಲೇಖಕರೆಂದರೆ ಡಾ.ಮನ್ಮಥ ಎಚ್.ಡೊಲೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಹುಲ್ಲಪ್ಪಾ ಡೊಳೆ ಮತ್ತು ಜೀಜಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವೀಧರರಾದ ಇವರು ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವು ಔರಾದನ ನಳಂದಾ ವಿದ್ಯಾಲಯದಲ್ಲಿ, ಪದವಿಯನ್ನು ಬೀದರದ ಕರ್ನಾಟಕ ಕಾಲೇಜಿನಲ್ಲಿ, ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಯು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. `ಬಸವೇಶ್ವರ ಅಂಬೇಡ್ಕರ್ ಒಂದು ತೌಲನಿಕ ಅಧ್ಯಯನ’ ಇದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ಬಹುದಿನಗಳ ನಂತರ ಕೆಲ `ಮಿಡಿ ಮಾವು’ ಎಂಬ ಹನಿಗವನ ಸಂಕಲನವನ್ನು ಪ್ರಕಟಿಸಿ ನಂತರ `ಬಸವೇಶ್ವರ,ಅಂಬೇಡ್ಕರ್ ಚಿಂತನೆಯ ನೆಲೆ ಮತ್ತು ನಿಲುವು’ ಎಂಬ ಚಿಂತನಾತ್ಮಕ ಸಂಶೋಧನಾ ಕೃತಿಯೊಂದು ಹೊರ ತಂದಿದ್ದಾರೆ. `ಭೀಮರಾಯ ಕಂಡ ರೂಪಗಳು’ `ಬುದ್ಧ ಕಟ್ಟ ಬಯಸಿದ ಸಮಾಜದ ಕಲ್ಪನೆ’ ಸೇರಿದಂತೆ ಹಲವಾರು ಲೇಖನಗಳು ಪ್ರಕಟಿಸಿದ್ದಾರೆ. ಇವರ ಕತೆ, ಕವನ,ಲೇಖನ, ಹನಿಗವನಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಡಾಯ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಇವರು ಬೀದರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೯ರಲ್ಲಿ ಅರವಿಂದ ಮಾಲಗತ್ತಿಯವರ ಸರ್ವಾಧ್ಯಕ್ಷತೆಯಲ್ಲಿ ಬೀದರನಲ್ಲಿ ನಡೆದ ೨ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಮತ್ತು ಇವರ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಸದ್ಯ ಇವರು ಔರಾದನಲ್ಲಿ ವಾಸವಾಗಿದ್ದು ಅಲ್ಲಿಯ ನಳಂದಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾವತಿ ಬಿ.ಬಲ್ಲೂರ್
ಬೀದರ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಲೇಖನ,ಪ್ರಬಂಧ, ವಿಮರ್ಶೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ ಕವಯತ್ರಿಯೆಂದರೆ, ವಿದ್ಯಾವತಿ ಬಿ.ಬಲ್ಲೂರ್. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಠಾಣಾಕುಸನೂರು ಗ್ರಾಮದ ಚಂದ್ರಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೬-೧೯೭೦ ರಲ್ಲಿ ಜ£ಸಿದ್ದಾರೆ. ಎಂ.ಎ.ಎA.ಇಡಿ.ಸ್ನಾತಕೋತ್ತರ ಪದವಿಧರರಾದ ಇವರು ಸಾಹಿತಿ ಡಾ.ಬಸವರಾಜ ಬಲ್ಲೂರ್ ಅವರ ಧರ್ಮ ಪತ್ನಿಯಾಗಿದ್ದಾರೆ. ೧೯೯೬ರಿಂದ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಕೊಂಡು ಕಲಬುರ್ಗಿಯ ಮೊಹಮ್ಮದಿ ಬಿ.ಇಡಿ ಮತ್ತು ಆಶಾಜ್ಯೋತಿ ಟಿ.ಸಿ.ಹೆಚ್ ಹಾಗೂ ಬಸವಕಲ್ಯಾಣದ ಶ್ರೀ ಶರಣಬಸವೇಶ್ವರ ಖೂಬಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರದ ಎಂ.ಎಸ್.ಮುದ್ದಣ್ಣ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.
ಬಾಲ್ಯದಿಂದಲೂ ಓದು ಬರಹಗಳ ಕಡೆಗೆ ಹೆಚ್ಚು ಆಸಕ್ತಿ ತೋರಿ ಅಧ್ಯಾತ್ಮಿಕ ತಳಹದಿಯಲ್ಲಿ ಶರಣರ ಕಾಯಕ ಜೀವನ, ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುವುದರೊಂದಿಗೆ, ಕವನ ಲೇಖನ, ಚಿಂತನ, ವಿಮರ್ಶೆ ಮೊದಲಾದವು ಬರೆಯುತ್ತಿದ್ದಾರೆ. ಮತ್ತು ‘ಅಕ್ಷರ ಕಲ್ಯಾಣ’ ಎಂಬ ಪುಸ್ತಕ ಪ್ರಕಟಿಸಿ, ನಾಗಶೆಟ್ಟಿ ಪಾಟೀಲರ ‘ಪವಾಡಗಳು £ಜವೆ ?’ ಎಂಬ ಕೃತಿಗೆ ವಿಮರ್ಶೆಯು ಬರೆದಿದ್ದಾರೆ. ಇವರ ಸಾಹಿತ್ಯ ಕೃಷಿಗೆ ೨೦೧೮ ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ‘ಅಮೃತ ಪ್ರಿತಮ್’ ಪ್ರಶಸ್ತಿ , ದೇಶಪಾಂಡೆ ಪ್ರತಿಳ್ಠಾನದ ‘ಕಾವ್ಯ ರತ್ನಾಂಜಲಿ’ ಪ್ರಶಸ್ತಿಗಳು ಲಭೀಸಿವೆ. ಸದ್ಯ ಇವರು ತಮ್ಮ ವೃತ್ತಿಯೊಂದಿಗೆ ಬೀದರ ಜಿಲ್ಲಾ ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುವುತ್ತಿದ್ದಾರೆ.
ರಮೇಶ ಬಿರಾದಾರ
ಬೀದರ ಜಿಲ್ಲೆಯಾದ್ಯಂತ ವಿವಿಧ ಹೋರಾಟಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿಸಿಕೊಂಡ ಸಾಹಿತಿಯೆಂದರೆ ರಮೇಶ ಬಿರಾದಾರ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಗಡಿಕುಶನೂರು ಗ್ರಾಮದ ವೀರಬಸಪ್ಪ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೮೪ರಿಂದ ಪೋಟೊಗ್ರಾಫರ್ ಆಗಿ, ಪತ್ರಕರ್ತ, ಸಾಹಿತಿಯಾಗಿ ಗುರ್ತಿಸಿಕೊಂಡು ೨೦೦೯ರಲ್ಲಿ `ಜೀವನದಿ ಬತ್ತಿದಾಗ’ ಎಂಬ ಕವನಸಂಕಲನ, ೨೦೧೬ ರಲ್ಲಿ `ನೀಲಮ್ಮನ ಬಳಗದ ವಚನಗಳು’ ಎಂಬ ಸಂಪಾದಿತ ಕೃತಿಯು ಹೊರತಂದಿದ್ದಾರೆ. ಮತ್ತು `ಪಾಪನಾಶ ಲಿಂಗದೇವನ ವಚನಗಳು’ `ಗವೀರನ ತತ್ವಗಳು’ ‘ಮುಂಜಾವಿಗೆ ಮಂಜು ಕವಿದಾಗ’ `ಬಾಬಾಸಾಹೆಬ ಅಂಬೇಡ್ಕರ್, ಹಿಂದು ಕೊಡ್ ಬಿಲ್ ‘ (ಹಿಂದಿ ಅನುವಾದ) `ಬೀದರ ತಾಲೂಕು ದರ್ಶನ’ ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಇವರ ಬರಹಗಳು ಜನಪದ, ಜಾಣಗೇರೆ , ಗ್ರೀನೊಬಲ್ಸ,ಸಂಯುಕ್ತ ಕರ್ನಾಟಕ, ದೂರದರ್ಶನ, ಆಕಾಶವಾಣಿಯಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಹಾಗೂ `ಬಿರಾದಾರ’ ಎಂಬ ವಾರಪತ್ರಿಕೆಯು ಸ್ಥಾಪಿಸಿದ ಇವರು ಅದರ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇತ್ತಿಚಿಗೆ ಬಿ.ಜೆ.ವಿಷ್ಣುಕಾಂತ ನಿರ್ದೇಶನದ ಚಲನಚಿತ್ರವೊಂದರಲ್ಲಿ ನಟಿಸಿದ್ದಾರೆ.
ಬೀದರ ಜಿಲ್ಲಾ ವಿಕಾಸ ವೇದಿಕೆಯ ವತಿಯಿಂದ ಅನೇಕ ಹೋರಾಟಗಳನ್ನು ಮಾಡಿ ಅಕ್ರಮವಾದ ಭೂ ಕಬಳಿಕೆಯನ್ನು ತಡೆದಿದ್ದಾರೆ. ಇವರ ಹೋರಾಟ ಹಾದಿಗೆ ಮೆಚ್ಚಿ ೧೯೯೩ ರಲ್ಲಿ `ಜಿಲ್ಲಾ ಸಾಮಾಜಿಕ ಸೇವಾ ಪ್ರಶಸ್ತಿ, ಮತ್ತು ೧೯೯೭ ರಲ್ಲಿ `ಕನ್ನಡ ಯುವ ಹೋರಾಟಗಾರ ಪ್ರಶಸ್ತಿ, ಭಾಲ್ಕಿ ಮಠದಿಂದ ೧೯೯೭ ರಲ್ಲಿ ‘ಕನ್ನಡ ಸೇವಕ ‘ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ೨೦೧೫ ರಲ್ಲಿ ಬೀದರದ ೩ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ರಾಜ್ಯ ಮಟ್ಟದ ಹಲವಾರು ಕವಿಗೊಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದಾರೆ.
ಸುನೀತಾ ಬಿರಾದಾರ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ ಲೇಖನ, ಹನಿಗವನ, ಆಧುನಿಕ ವಚನಗಳು ಸೇರಿದಂತೆ ಮೊದಲಾದ ಬರಹಗಳು ಬರೆದ ಕವಯತ್ರಿಯೆಂದರೆ ಸುನೀತಾ ಬಿರಾದಾರ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಚಾಂದೊರಿ ಗ್ರಾಮದ ಉದಯಭಾನು ಮತ್ತು ಸುಶಿಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಅಧ್ಯಯನ ಮಾಡಿದ ಇವರು ೧೯೯೩ ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ ನಂತರ ೧೯೯೭ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕಗೊಂಡು ಔರಾದ ತಾಲೂಕಿನ ಠಾಣಾ ಕುಸನೂರಿನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಸಿದ ಇವರು ಸದ್ಯ ಬೀದರ ತಾಲೂಕಿನ ಆನಂದನಗರ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಕತೆ, ಕವನ, ಕಾದಂಬರಿ ಓದುವ ಹವ್ಯಾಸ ಬೆಳೆಸಿಕೊಂಡ ಇವರು ಆ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿ `ಒಲಿದ ಜೀವ’ ಎಂಬ ಕಾದಂಬರಿ ಮತ್ತು `ಹೂದೋಟ’ ಎಂಬ ಮಕ್ಕಳ ಕವನಸಂಕಲನ ಪ್ರಕಟಿಸಿದ್ದಾರೆ. ಇವರ ಕತೆ ಕವನ ಲೇಖನಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ಠಾಣಾ ಕುಸನೂರು ಗ್ರಾಮಸ್ಥರಿಂದ ನಿಂದ `ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ’ ಔರಾದ ತಾಲೂಕಿನ `ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಉತ್ತಮ ಮಹಿಳಾ ಬರಹಗಾರ್ತಿಯರಿಗೆ ನೀಡುವ `ಸುರಬಿ’ü ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಚನ್ನಮ್ಮಾ ವಲ್ಲೆಪೂರೆ
`ಚಿನ್ನಾ’ ಎಂಬ ಕಾವ್ಯನಾಮ ಮತ್ತು `ಚನ್ನಬಸವ ಲಿಂಗೇಶ್ವರ’ ಎಂಬ ವಚನಾಂಕಿತದಲ್ಲಿ ಬರೆಯುತ್ತಿರುವ ಲೇಖಕಿಯೆಂದರೆ ಚನ್ನಮ್ಮಾ ವಲ್ಲೆಪೂರೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಕೋಟಗ್ಯಾಳ ಗ್ರಾಮದ ಕಾಶೆಪ್ಪ ಕಾಡೊದೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೦-೧೦-೧೯೭೦ ರಲ್ಲಿ ಜನಿಸಿದ್ದಾರೆ.. ಬಿ.ಎ.ಬಿ.ಎಡ್.ಪದವಿಧರರಾಗಿರುವ ಇವರು ಸಾಹಿತಿ ಹಂಸಕವಿಯವರ ಧರ್ಮಪತ್ನಿಯಾಗಿದ್ದು, ಕಂಪ್ಯೂಟರ್ ಆಪರೇಟರ್ ಆಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ೨೦೦೫ರಲ್ಲಿ `ಬೆಳಕು’ ಮತ್ತು ೨೦೧೬ರಲ್ಲಿ `ಬದುಕು ಬೆಳಕು’ ಎಂಬ ಕವನ ಸಂಕಲನಗಳು, ೨೦೦೮ರಲ್ಲಿ `ಸಿದ್ದೇಶ್ವರ ಉವಾಚ’ ಎಂಬ ಸಿದ್ದೇಶ್ವರ ಶ್ರೀಗಳ ಸಂದೇಶ ಕೃತಿ, ೨೦೧೫ರಲ್ಲಿ `ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು’ ಎಂಬ ಚರಿತ್ರೆ, ೨೦೧೬ ರಲ್ಲಿ `ಚಂದ್ರಬಿAಬ’ ಎಂಬ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್‌ರ ಜೀವನ ಚರಿತ್ರೆಯನ್ನು ಬರೆದು, `ಸಮಕಾಲೀನ ಹಿರಿಯ ಸಾಹಿತಿಗಳು’ ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ `ಆಧುನಿಕ ವಚನಗಳು’ ಕೂಡ ಬರೆದಿದ್ದು ಅವು ಕೆಲ ಸಂಪುಟಗಳಲ್ಲಿ ಪ್ರಕಟವಾಗಿವೆ.
ಇವರ ಸಾಹಿತ್ಯ ಸಾಧನೆಗೆ ೨೦೦೮ ರಲ್ಲಿ ಹುಮನಾಬಾದಿನ ಧರಿನಾಡು ಕನ್ನಡ ಸಾಹಿತ್ಯ ಸಂಘದಿAದ ಸುವರ್ಣ ಕನ್ನಡಿಗ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಬೆಳಕು ಶ್ರೀ’ ೨೦೧೧ರಲ್ಲಿ ಭಾಲ್ಕಿ ಶ್ರೀಗಳಿಂದ `ಸಾಹಿತ್ಯ ಜ್ಯೋತಿ’ ೨೦೧೭ರಲ್ಲಿ ಪಂಜಾಬಿನ ಚಂಡಿಗಡದಲ್ಲಿ ನಡೆದ ಅಖಿಲ ಭಾರತ ಕವಯತ್ರಿ ಸಮ್ಮೇಳನದಲ್ಲಿ `ಮೈತ್ರೇಯಿ ಪ್ರಶಸ್ತಿ, ೨೦೧೯ರಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿ ಸಮ್ಮೇಳನದಲ್ಲಿ `ಲಾಲದೇನ್ ‘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಬೀದರ ಮಹಿಳಾ ಲೇಖಕಿಯರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮರಣದ ನಂತರ ತಮ್ಮ ದೇಹದಾನ ಮಾಡಿರುವುದು ನೋಡಿದರೆ, `ಪರೋಪಕಾರಂ ಇದಂ ಶರೀರಂ’ ಎನ್ನುವಂತ ಇವರ ತ್ಯಾಗ ಮೆಚ್ಚುವಂತಹದ್ದು.
ಡಾ. ಬಸವರಾಜ ಬಲ್ಲೂರ
ಸರಳ ಸಜ್ಜನಿಕೆಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಸಾಹಿತಿಗಳ ಬಳಗದಲ್ಲಿ ವಿಶಾಲ ಮನೋಭಾವದಿಂದ ಯಾರ ಮನಸ್ಸು ನೊಯಿಸದೆ ಮೃದು ಸ್ವಾಭಾವದವರಾಗಿ ವೈಚಾರಿಕತೆಯ ನೆಲೆಯಲ್ಲಿ ಸಂಶೋಧನಾತ್ಮಕ ಕೃತಿಗಳು ನೀಡಿದ ಲೇಖಕರೆಂದರೆ ಡಾ.ಬಸವರಾಜ ಬಲ್ಲೂರ್. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಬಲ್ಲೂರ ಗ್ರಾಮದ ಮಲ್ಲಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೭೧ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ ಮತ್ತು ವಚನಾ ಡಿಪ್ಲೊಮಾ ಪದವಿ ಪಡೆದು ಕೆಲವರ್ಷ ಪದವಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ೨೦೦೫ರಿಂದ ಬೀದರದ ಕರ್ನಾಟಕ ಪದವಿ ಮಹಾವಿದ್ಯಾಲಯದಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಕೆಲ ಕೃತಿಗಳು ಪ್ರಕಟಿಸಿದ್ದು ಅವುಗಳೆಂದರೆ, `ಶ್ರೀ ಗುರುಬಸವ ಪಟ್ಟದ್ದೆವರು’ ಎಂಬುದು ಭಾಲ್ಕಿ ಶ್ರೀಗಳ ಜೀವನ ಚರಿತ್ರೆಯಾದರೆ, `ಅಕ್ಷರ ಕಲ್ಯಾಣ’ ಇದು ಭಾಲ್ಕಿ ಮಠದ ಪರಿಚಯಾತ್ಮಕ ಕೃತಿಯಾಗಿದೆ. `ಅನುಭವ ಮಂಟಪದ ಚಾರಿತ್ರಿಕ ನೆಲೆಗಳು’ ಎನ್ನುವುದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ವೀರೆಂದ್ರ ಸಿಂಪಿ ಸಮಗ್ರ ಸಾಹಿತ್ಯ ಸಂಪುಟ’ `ವೀರೆಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳು’ `ದಾಂಪತ್ಯ ಗೀತೆ’ `ಸಮರಸ ದಾಂಪತ್ಯ’ `ಪುಲಿಚೆರು ಸಂಸ್ಕೃತಿ’ `ಸಮಷ್ಟಿ’ `ಯುಗದ ಉಲ್ಲಾಸ’ `ಭಾಹತ್ತರ’ ಮೊದಲಾದ ಹದಿನೇಳು ಕೃತಿಗಳು ಸಂಪಾದಿಸಿದ್ದಾರೆ. ಮತ್ತು ೫೦ಕಿಂತ ಹೆಚ್ಚು ಲೇಖನಗಳು ಬರೆದಿದ್ದು ಅವು ಪ್ರಜಾವಾಣಿ,ಕನ್ನಡಪ್ರಭ, ಉದಯವಾಣಿ, ವಿಜಯಕರ್ನಾಟ, ಶಾಂತಿ ಕಿರಣ ಮೊದಲಾದವುಗಳಲ್ಲಿ ಪ್ರಕಟವಾಗಿವೆ.
ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ೪ ಪ್ರಕಟಣೆಯ ಸಂಚಾಲಕರಾಗಿ, ಬಸವಕಲ್ಯಾಣ ಕಸಾಪದ ಕಾರ್ಯದರ್ಶಿಯಾಗಿ, ಭಾಲ್ಕಿ ಶಾಂತಿ ಕಿರಣ ಪತ್ರಿಕೆಯ ಸಂಪಾದಕರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರಿಗೆ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ, ಭಾಲ್ಕಿ ಮಠದಿಂದ `ಉತ್ತಮ ಓದುಗ ಪ್ರಶಸ್ತಿ’ ಗಳು ಲಭಿಸಿವೆ. ಮತ್ತು ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತಿನಿಂದ ಔರಾದ ತಾಲೂಕಿನ ಖೇಡ ಸಂಗಮದಲ್ಲಿ ನಡೆದ ಪ್ರಥಮ ಶರಣಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಮಲ್ಲೇಶ್ವರಿ ಉದಯಗಿರಿ
ಭಾವ ತುಂಬಿ ಮನದಾಳದಿಂದ ಕಾವ್ಯ ರಚಿಸುವ ಕವಯತ್ರಿಯೆಂದರೆ ಮಲ್ಲೇಶ್ವರಿ ಉದಯಗಿರಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಮುಧೋಳ (ಬಿ) ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರೆಯಾಗಿದ್ದು ಸದ್ಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾದ ಇವರು ಕೆಲ ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ `ಭಾವ ಕಾರಂಜಿ’ `ಭಾವ ಸ್ಪರ್ಶ’ `ಭಾವಂಕರ್ಷ’ ಇವು ಅವರ ಪ್ರಕಟಿತ ಕವನ ಸಂಕಲನಗಳಾಗಿವೆ. ಮತ್ತು `ಭಾವದುನ್ಮಿಲನ’. `ಗಜಲ್ ಗಳು’ `ಆಧುನಿಕ ವಚನಗಳು’. `ಹನಿಗವನಗಳು’ `ಹಿಂದಿ ಕವಿತೆಗಳು’ `ಮಕ್ಕಳ ಹಾಡು’ ಇವು ಇವರ ಅಪ್ರಕಟಿತ ಕೃತಿಗಳಾಗಿವೆ. ಹೀಗೆ ಇವರು ಕಾಲೇಜು ದಿನಗಳಲ್ಲಿಯೆ ಕತೆ, ಕವನ, ಚುಟುಕು, ಲೇಖನ ಮೊದಲಾದ ಬರಹಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡು ಬರೆದ ಕೆಲ ಕವನ ಹನಿಗವನ ಲೇಖನ ಬರಹಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಸ್ಥಳಿಯ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ, ಹಾಗೂ ವಿವಿಧ ಸ್ಮರಣ ಸಂಚಿಕೆಗಳಲ್ಲಿಯೂ ಪ್ರಕಟವಾಗಿವೆ.
ಇವರ ಸಾಹಿತ್ಯ ಸೇವೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ರತ್ನ’ ಪ್ರಶಸ್ತಿ ಮತ್ತು ಬಸವಕಲ್ಯಾಣ ತಾಲೂಕು ಬೇಲೂರಿನ `ಉರಿಲಿಂಗ ಪೆದ್ದಿ ಪ್ರಶಸ್ತಿ’ ಲಭಿಸಿವೆ. ಇವರು ಹಲವಾರು ಹೊಬಳಿ, ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಮತ್ತು ಬೀದರ ಜಿಲ್ಲಾ ಧರಿನಾಡು ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ
ಪ್ರಭು ಮಾಲೆ
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಲೇಖಕರೆಂದರೆ ಪ್ರಭು ಮಾಲೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ತುಳಜಾಪೂರ ಗ್ರಾಮದ ಗಣಪತಿ ಮಾಲೆ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೨ ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೬ ರಲ್ಲಿ ಪೋಲಿಸ್ ಪೇದೆ ಹುದ್ದೆಗೆ ಸೇರಿ ಸದ್ಯ ಬೀದರದ ಜನವಾಡ ಪೋಲಿಸ್ ಠಾಣೆಯ ಮುಖ್ಯ ಪೇದೆಯಾಗಿ ಸೇವೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ ೨೦೧೪ ರಲ್ಲಿ `ಮಹಾತ್ಮ ಜ್ಯೋತಿಬಾ ಪುಲೆ ‘ ಎಂಬ ನಾಟಕ, ೨೦೧೬ ರಲ್ಲಿ `ಮಕ್ಕಳಿಗಾಗಿ ಭೀಮವಾಣಿ’ ಎಂಬ ಅಂಬೇಡ್ಕರ್ ನುಡಿಮುತ್ತಗಳ ಸಂಪಾದಿತ ಕೃತಿ ಹೊರತಂದಿದ್ದಾರೆ.
ಮೈಸೂರು ಪೋಲಿಸ್ ಎದೆಯಂತರಾಳದಿAದ ರಾಜ್ಯ ಮಟ್ಟದ ಕವಿಗೊಷ್ಠಿ, ೨೦೧೭ ರಲ್ಲಿ ನಡೆದ ಬೀದರನಲ್ಲಿ ನಡೆದ `ಜನಪರ ಉತ್ಸವ’ ಕವಿಗೊಷ್ಠಿ, ಬೀದರ ಜಿಲ್ಲಾ ಬಹುಭಾಷಾ ಕವಿಗೊಷ್ಠಿ , ಕಲಬುರಗಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಬೀದರ ಜನಪರ ಉತ್ಸವ ಕಾರ್ಯಕ್ರಮದಲ್ಲಿ ೩ ಸಾವಿರ ಗೌರವಧನವು ಪಡೆದಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ನಾಟಕ ರತ್ನ’ ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ಬಸವಕಲ್ಯಾಣ ಬೇಲೂರಿನ ಉರಿಲಿಂಗ ಪೆದ್ದಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾಸಿದ್ದಾರೆ. ಇವರು ತಮ್ಮ ತಾಯಿ ಹಾಡುತ್ತಿದ್ದ ಜಾನಪದ ಗೀತೆಗಳಿಗೆ ಮಾರುಹೋಗಿ ಕೆಲ ಜಾನಪದ ಕೃತಿಗಳು ಸಂಪಾದಿಸುವುದರೊAದಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.
ಜ್ಯೋತಿ ಡಿ.ಬೊಮ್ಮಾ
ಉದಯೋನ್ಮುಖ ಯುವ ಬರಹಗಾರ್ತಿಯರಲ್ಲಿ ಒಬ್ಬರಾಗಿ ಕತೆ ಕವನ, ಲೇಖನ ಬರಹಗಳು ಬರೆದು ಕೆಲ ಪುಸ್ತಕ ಪ್ರಕಟಿಸಿರುವ ಕವಯತ್ರಿಯೆಂದರೆ ಜ್ಯೋತಿ ಡಿ.ಬೊಮ್ಮಾ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಡಾ.ಸುಭಾಷ ಮೀಸೆ ಮತ್ತು ವಿಜಯಲಕ್ಷ್ಮಿ ಮೀಸೆ ದಂಪತಿಗಳಿಗೆ ದಿನಾಂಕ ೧೪-೭-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಮತ್ತು ಎಲ್.ಎಲ್.ಬಿ ಪದವಿಧರರಾದ ಇವರು ಗೃಹಿಣಿಯಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
೨೦೧೯ರಲ್ಲಿ `ನಮ್ಮೊಳಗಿನರಿವು’ ಮತ್ತು `ಪರಿಧಿ’ ಎಂಬ ಕವನಸಂಕಲನಗಳು ಪ್ರಕಟಿಸಿದ ಇವರು ಕೆಲ ಹಾಸ್ಯ, ವೈಚಾರಿಕ ಲೇಖನ, ಲಲಿತ ಪ್ರಬಂಧಗಳು `ಶರಣ ಮಾರ್ಗ’ ಮತ್ತು ಬಿ.ಎಚ್.ನಿರಗುಡಿಯವರ `ಸಾಹಿತ್ಯ ಸಾರಥಿ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಸಮ್ಮೇಳನಗಳಲ್ಲಿಯು ಪಾಲ್ಗೊಂಡಿರುತ್ತಾರೆ. ಬೀದರನಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿಯರ ಸಾಹಿತ್ಯ ಸಮ್ಮೇಳನ, ಮತ್ತು ಕಲಬುರಗಿಯ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ ಕವಿಗೊಷ್ಠಿಗಳಲ್ಲಿಯೂ ಪಾಲ್ಗೊಂಡು ಕವನ ವಾಚನವು ಮಾಡಿರುತ್ತಾರೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ವಾಸವಾಗಿದ್ದು ಪತಿ ಪಶು ಸಂಗೋಪನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಪಂಚಶೀಲ ಮಾಂಜ್ರೇಕರ್
ಕವಯತ್ರಿ ಪಂಚಶೀಲ ಮಾಂಜ್ರೇಕರ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರು (ಬಿ) ಗ್ರಾಮದ ನರಸಿಂಗ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೧-೨-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರೆಯಾದ ಇವರು ಮದುವೆಯ ನಂತರ ಕೆಲಕಾಲ ಹೈದರಾಬಾದನಲ್ಲಿ ವಾಸವಾಗಿ, ೨೦೧೨ರಲ್ಲಿ ಆಕಸ್ಮಿಕ ನಿಧನ ಹೊಂದಿದ್ದಾರೆ. ಇವರ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಅನೇಕ ಕವನ, ಲೇಖನ, ಬರಹಗಳು ಬರೆದಿದ್ದಾರೆ. ಸ್ತ್ರೀ ಸಂವೇದನೆ, ಸಾಕ್ಷರತೆ, ನಾಡು-ನುಡಿ, ಪ್ರಕೃತಿ ವಿಕೋಪ, ಕಿಲ್ಲಾರಿ ಭೂಕಂದ ಸುನಾಮಿ ಮೊದಲಾದವುಗಳ ಕುರಿತು ಕವನ ರಚಿಸಿದ್ದಾರೆ. ಮತ್ತು `ಭಾವನೆಗಳ ಬಳ್ಳಿ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಹಾಗೂ ಹಲವಾರು ಕವನ ಲೇಖನ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಶಾಂತಮ್ಮಾ ಬಲ್ಲೂರ್
ಬೀದರ ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಹನಿಗವನ, ಲೇಖನ, ಆಧುನಿಕ ವಚನಗಳು ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಶಾಂತಮ್ಮಾ ಬಲ್ಲೂರ್. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಸಂಗ್ರಾಮ್ ಮತ್ತು ತುಳಸಮ್ಮ ದಂಪತಿಗಳಿಗೆ ದಿನಾಂಕ ೫-೪-೧೯೭೬ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಸ್ನಾತಕೋತ್ತರ ಪದವಿ ಹಾಗೂ `ಕನ್ನಡ ರತ್ನ’ ತತ್ಸಮಾನ ಪದವಿ ಪಡೆದ ಇವರು ಬೀದರದ ಸುದರ್ಶನಿ ಬಲ್ಲೂರ್ ಶಿಕ್ಷಣ ಸಂಸ್ಥೆಯ ಆರ್.ಆರ್.ಬಲ್ಲೂರ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ೨೦೦೮ರಲ್ಲಿ `ನೆರಳು’ ಎಂಬ ಕವನಸಂಕಲನ, ೨೦೧೫ರಲ್ಲಿ `ವಚನ ಗೊಂಚಲು’ ಎಂಬ ಆಧುನಿಕ ವಚನಗಳ ಸಂಕಲನ ಪ್ರಕಟಿಸಿ ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ತಮ್ಮ ತಾಯಿ ಹಾಡಿದ ೩೦೦ ಕಿಂತಲೂ ಹೆಚ್ಚು ಜಾನಪದ ಹಾಡುಗಳು ಸಂಗ್ರಹಿಸಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಮತ್ತು ಹಲವಾರು ಕವನ, ಲೇಖನಗಳು ಬರೆದಿದ್ದು ಅವು ಕೆಲವು ಪ್ರಮುಖ ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನ, ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಬೀದರ ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘ ಮತ್ತು ಜಾನಪದ ಸಂಘದ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಸಂತೋಷ ಶಿಕ್ಷಣ ಸಂಸ್ಥೆಯ ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಚರ್ಚಿನ ಮಹಿಳಾ ವಿಭಾಗದ ಏರಿಯಾ ಕಾರ್ಯದರ್ಶಿಯಾಗಿ ಕ್ರೈಸ್ತ ಧಾರ್ಮಿಕ ಚಟುವಟಿಕೆಯೊಂದಿಗೆ ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅನೀಲಕುಮಾರ ಪಾಟೀಲ್
ಕವಿ ಸಾಹಿತಿ ಲೇಖಕರಾದ ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ದುಪತಮಹಾಗಾಂವ ಗ್ರಾಮದ ಕಾಕಿನಾಥ ಮತ್ತು ಲಲಿತಾಬಾಯಿ ದಂಪತಿಗಳಿಗೆ ದಿನಾಂಕ ೫-೪-೧೯೭೯ರಲ್ಲಿ ಜನಿಸಿದ್ದಾರೆ. ಪದವೀಧರರಾದ ಇವರು ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಹಾಗೂ ೨೦೦೨ರಲ್ಲಿ `ಶಾಂತಿ ಭೋದಿತ’ಎಂಬ ಜೀವನ ಚರಿತ್ರೆ ಬರೆದು ಪ್ರಕಟಿಸಿದ್ದಾರೆ.
ಡಾ.ಶಿವಶರಣಯ್ಯಾ ಎಂ.ಮಠಪತಿ
`ವಚನ ವಾರಿದಿ’ ಎಂಬ ಹಾರಕೂಡ ಶ್ರೀಗಳ ಕುರಿತು ವಚನಗಳು ಬರೆದು ಪುಸ್ತಕ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕರೆಂದರೆ ಡಾ.ಶಿವಶರಣಯ್ಯಾ ಎಂ.ಮಠಪತಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಮಡಪಳ್ಳಿ ಗ್ರಾಮದಲ್ಲಿ ಕೌಠ (ಬಿ) ಗ್ರಾಮದ ಮಲ್ಲಯ್ಯ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೯-೧೯೮೩ ರಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಮಡಪಳ್ಳಿ ಗ್ರಾಮವಾದರು ಬೆಳೆದದ್ದು, ಓದಿದ್ದು ಕೌಠಾ (ಬಿ) ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಪಿ.ಯು. ಶಿಕ್ಷಣ ಬೀದರನಲ್ಲಿ, ಹಾಗೂ ಬಿ.ಎ.ಎಂ.ಎಸ್ .ಪದವಿಯು ಕಲಬುರಗಿಯ ಹಿಂಗೂಲಾAಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಮತ್ತು ಬೀದರದ ಎನ್.ಕೆ.ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ `ಶರೀರ ರಚನೆ’ ಎಂಬ ವಿಷಯದಲ್ಲಿ ಅಧ್ಯಯನ ಮಾಡಿ ಎಂ.ಡಿ.ಯಾಗಿದ್ದಾರೆ.
ಕೆಲವರ್ಷ ಕಲಬುರ್ಗಿಯ ಹಿಂಗೂಲಾAಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೀದರದ ಅಕ್ಕ ಮಹಾದೇವಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯರಾಗಿ, `ಶರೀರ ರಚನೆ’ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುವುದರೊಂದಿಗೆ ಕಪಲಾಪುರ, ನೌಬಾದಿನಲ್ಲಿ ಹಾರಕೂಡ ಶ್ರೀಗಳ ಹೆಸರಿನಲ್ಲಿ ಕ್ಲಿನಿಕಲ್ ತೆಗೆದು ವೈದ್ಯಕೀಯ ವೃತ್ತಿಯೊಂದಿಗೆ ಹಾರಕೂಡ ಶ್ರೀಗಳ ಕುರಿತು ಆಧುನಿಕ ವಚನಗಳು ಬರೆದು ಶ್ರೀಗಳಿಗೆ ಆಪ್ತರು, ಸಂಬAಧಿಕರು ಆಗಿರುವುದರಿಂದ ಅವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ.
ಇವರ ಭಕ್ತಿಯಿಂದ ಮೂಡಿ ಬಂದ `ವಚನ ವಾರಿದಿ’ ಸಂಕಲನಕ್ಕೆ ೨೦೧೮ರಲ್ಲಿ `ಶ್ರೀ ಚೆನ್ನರತ್ನ’ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮೀಕ ವಚನ ಸಾಹಿತ್ಯ ರಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ಬರೆದ ‘ಭಾರತ ದರ್ಶನ’ ಎಂಬ ಕವನ ಸಂಕಲನ ಮತ್ತು `ಚೆನ್ನವೀರ’ ಎಂಬ ತ್ರಿಪದಿ ಕೃತಿಗಳು ಮುದ್ರಣದ ಹಂತದಲ್ಲಿವೆ.
ಬಿ.ಎA.ಅಮರವಾಡಿ
ಉದಯೋನ್ಮುಖ ಬರಹಗಾರರಾಗಿ ಕತೆ,ಕವನ,ಚುಟುಕು,ಹನಿಗವನ ಲೇಖನಗಳು ಬರೆದು ಗುರುತಿಸಿಕೊಂಡ ಲೇಖಕರೆಂದರೆ ಬಿ.ಎಂ.ಅಮರವಾಡಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಭೀಮಗೊಂಡ್ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೮-೬-೧೯೮೭ ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರಸ್ತುತ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
`ಸಂಪ್ರತಿ’ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಚುಟುಕು, ಲೇಖನಗಳ ಕೃತಿಗಳು ಹೊರ ತರುತ್ತಿದ್ದಾರೆ. ಮತ್ತು ಇವರÀ ಕವನ, ಲೇಖನಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟವಾಗಿವೆ. ಶಿಕ್ಷಣ ಕ್ಷೇತ್ರದೊಂದಿಗೆ ಸಾಹಿತ್ಯ ಕೃಷಿ ಮಾಡಿದ ಇವರ ಕಾರ್ಯ ಸಾಧನೆಗೆ ಮೆಚ್ಚಿ, ರಾಜ್ಯ ಮಟ್ಟದ `ಕನಕ’ ಪ್ರಶಸ್ತಿ, ಮತ್ತು ರೇವಣಸಿದ್ದೇಶ್ವರ ಮಠ ಧಾರವಾಡದಿಂದ ಜಿಲ್ಲಾ ಮಟ್ಟದ `ಕನಕ ಶ್ರೀ’ ಪ್ರಶಸ್ತಿ, ಬೀದರ್ ಜಿಲ್ಲಾಡಳಿತದಿಂದ `ಹೈದ್ರಾಬಾದ್ ಕರ್ನಾಟಕ ಯುವ ಚೇತನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ.
೨೦೦೯ರಲ್ಲಿ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದರ ಮೂಲಕ ದಾಸ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ೨೦೧೩ರಲ್ಲಿ ಸಾಹಿತಿ ಪ್ರೋ. ವಸಂತ ಕುಷ್ಟಗಿ ಮತ್ತು ೨೦೧೪ ರಲ್ಲಿ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿಯವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಪ್ರಥಮ ಮತ್ತು ದ್ವೀತಿಯ ದಾಸ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದ ಇವರು ಎರಡು ಅವಧಿಗೆ ಔರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಿಂದ ಮಕ್ಕಳ ಕಾವ್ಯ ಕಮ್ಮಟವು ನಡೆಸಿದ್ದಾರೆ.
ನಾಗೇಶ್ ಸ್ವಾಮಿ
`ನಾಸಾಕವಿ’ ಎಂಬ ಕಾವ್ಯನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಯುವಕವಿ ಎಂದರೆ ನಾಗೇಶ ಸ್ವಾಮಿಯವರು. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಮಸ್ಕಲ್ ಗ್ರಾಮದ ಮಹಾದಯ್ಯ ಸ್ವಾಮಿ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೭-೧೯೮೮ ರಲ್ಲಿ ಜನಿಸಿದ್ದಾರೆ. ಎಂ.ಎ .ಬಿ.ಎಡ್.ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
`ಆದಿಬಸವ’ ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು ಹಲವಾರು ಕವನ, ಚುಟುಕು, ಲೇಖನ, ಬರಹಗಳನ್ನು ಬರೆದು `ಸಂಜೀವಿನಿ’ ಮತ್ತು `ಮನ ಮೆಚ್ಚಿದ ಹುಡುಗಿ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. `ಭಾರತೀಯ ಸಂಸ್ಕೃತಿಯಲ್ಲಿ ಗೋವು’ ಇದು ಇವರ ಅಪ್ರಕಟಿತ ಸಂಶೋಧನಾ ಕೃತಿಯಾಗಿದೆ. ಇವರ ಕತೆ ಕವನ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಹಲವಾರು ಸಾಹಿತ್ಯ ಸಮ್ಮೇಳನ ಮತ್ತು ಕಮ್ಮಟಗಳಲ್ಲಿಯು ಇವರು ಪಾಲ್ಗೊಂಡಿದ್ದಾರೆ.
ಕತೆ,ಕವನ ,ನಾಟಕ, ವಚನ, ವಿಮರ್ಶೆ ,ಚುಟುಕು ಮತ್ತೀತರ ಸಾಹಿತ್ಯ ಕೃಷಿಯಲ್ಲಿ ತೊಡಗಿದ ಇವರು ನೋರಾರು ಕವಿ ಗೋಷ್ಠಿ ಹಾಗೂ ಅನೇಕ ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೇಯಲ್ಲದೆ ಇವರು ವಿವೇಕ ಗ್ಲೋಬಲ್ ಟ್ರಸ್ಟ್ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿ, ಮಂದಾರ ಕಲಾವಿದರ ವೇದಿಕೆ ಬೀದರದ ಸಂಸ್ಥಾಪಕ ಸದಸ್ಯರಾಗಿ, ಸಿರಿಗನ್ನಡ ವೇದಿಕೆಯ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಕಾರ್ಯ ಸಾಧನೆ ಕಂಡು ವಿವಿಧ ಸಂಘ ಸಂಸ್ಥೆಗಳಿAದ `ಜನಸೇವಾ’ ರಾಜ್ಯ ಪ್ರಶಸ್ತಿ. ‘ಕಾವ್ಯ ಚಂದ್ರಿಕೆ’ ಪ್ರಶಸ್ತಿ, `ಕನ್ನಡ ರತ್ನ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದು ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಬಾಲಾಜಿ ಕುಂಬಾರ
ಉದಯೋನ್ಮುಖ ಯುವ ಬರಹಗಾರರ ಸಮೂಹದಲ್ಲಿ ಎದ್ದು ಕಾಣುವ ಮತ್ತೊಂದು ಹೆಸರೆಂದರೆ ಬಾಲಾಜಿ ಕುಂಬಾರ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅಮೃತ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೯೦ ರಲ್ಲಿ ಜನಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ.ಕಂಪ್ಯೂಟರ್ ಪದವಿಧರರಾದ ಇವರ ಮಾತೃಭಾಷೆ ತೆಲುಗುವಾಗಿದ್ದು, ವ್ಯಾವಹಾರಿಕ ಭಾಷೆ ಕನ್ನಡವಾಗಿದೆ . ಆದರೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ ಇವರು ಕಾಲೇಜು ದಿನಗಳಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು `ಪ್ರೀತಿ ಹುಟ್ಟುವ ಹೊತ್ತು’ ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಸುಮಾರು ೫೦ಕಿಂತಲೂ ಹೆಚ್ಚು ಶರಣರ ವಚನ ವಿಶ್ಲೇಷಣೆ ಮಾಡುತ್ತಿದ್ದು, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. `ಇವ ನಮ್ಮವ ಎಂದೇನಿಸಯ್ಯಾ’ ಎಂಬ ಸಂಪಾದಿತ ಕೃತಿಯೊಂದಿಗೆ ಕೆಲ ಕವನÀಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನೆಳ್ಳಿ ಗ್ರಾಮದಿಂದ `ಸಗರನಾಡು ಯುವ ಚೇತನ’ ಪ್ರಶಸ್ತಿಯು ಪಡೆದಿರುವ ಇವರು `ಉದಯಕಾಲ, ವಿಜಯ ಕರ್ನಾಟಕ.ಉದಯವಾಣಿ,ಪ್ರಜಾವಾಣಿ. ವಿಶ್ವವಾಣಿ, ಬಿಂದಾಸ ಬೀದರ, ಕಣ್ಣಿದ್ದು ಕುರುಡ, ನ್ಯಾಯಪಥ, ಜಾಗೃತಿ ನ್ಯೂಜ್. ಮೊದಲಾದವುಗಳಲ್ಲಿ ಕವನ, ಲೇಖನ, ಬರಹಗಳು ಬರೆದು ಚಿರಪರಿಚಿತರಾಗಿದ್ದಾರೆ. ಮತ್ತು ಔರಾದ ತಾಲೂಕಿನ ಸಂತಪೂರ ವಲಯದ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರಗಿಯಲ್ಲಿ ಏರ್ಪಡಿಸಿದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಹಾಗೂ ವಿವಿಧ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ, ಕವಿ ಗೊಷ್ಠಿಯಲ್ಲಿಯೂ ಪಾಲ್ಗೊಂಡಿದ್ದಾರೆ. ಹೀಗೆ ಇವರು ಕ್ರಿಯಾಶೀಲ ಸೃಜನಾತ್ಮಕ ಬರಹಗಳ ಮೂಲಕ ಗುರುತ್ತಿಸಿಕೊಂಡು ಗ್ರಾಮ ಪಂಚಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುರಬಿ
`ಸುರಬಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಿರುವ ಉದಯೋನ್ಮುಖ ಕವಯತ್ರಿ ಯೆಂದರೆ ಸುಧಾರಾಣಿ ಬಿರಾದಾರ. ಇವರ ವಚನಾಂಕಿತ `ಅಣ್ಣ ಬಸವಣ್ಣ’ ಎಂದಾಗಿದೆ. `ಸುರಬಿ’ ಎಂದರೆ ಸುಧಾರಾಣಿ ತಂದೆ ರಮೇಶ ಬಿರಾದಾರ.’ ಎಂದಾಗಿದೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಸ್ತಾಪೂರ ಗ್ರಾಮದ ಶ್ರೀರಮೇಶ ಮತ್ತು ಶ್ರೀಮತಿ ಅನೀತಾ ದಂಪತಿಗಳಿಗೆ ದಿನಾಂಕ ೨-೧೦-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ೨೦೧೮ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಕಮಲನಗರ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಇವರು ೨೦೧೪ರಲ್ಲಿ `ವಚನಾಂಜಲಿ’ ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಕವನ, ಹಾಡು, ಶಾಹಿರಿ, ಲೇಖನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಅಷ್ಟೇಯಲ್ಲದೆ ಇವರು ರಾಜ್ಯ ಮಟ್ಟದ ಹಲವು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಗಳಿAದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಅನಿಲ್ ಕುಮಾರ ಸೂರ್ಯವಂಶಿ
ವಾಲಿಬಾಲ್ ಕ್ರೀಡಾ ಪಟುವಾಗಿದ್ದುಕೊಂಡು ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಉದಯೋನ್ಮುಖ ಯುವ ಸಾಹಿತಿಯೆಂದರೆ ಅನೀಲ್ ಕುಮಾರ ಸೂರ್ಯವಂಶಿ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ‘ಮಸ್ಕಲ್’ ಗ್ರಾಮದ ನರಸಿಂಗರಾವ ಮತ್ತು ಶಕುಂತಲಾ ದಂಪತಿಗಳಿಗೆ ದಿನಾಂಕ ೧-೭-೧೯೯೯ ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮುಧೋಳ್ ನಲ್ಲಿ ಮುಗಿಸಿ ನಂತರ ಬೆಂಗಳೂರ್ ನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಯಪ್ರಕಾಶ್ ನಾರಾಯಣ್ ಕ್ರೀಡಾ ವಸತಿ ಕೇಂದ್ರದಲ್ಲಿ ಪ್ರೌಢ ಮತ್ತು ಪಿ.ಯು.ಶಿಕ್ಷಣ ಪಡೆದು ಸದ್ಯ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ವಾಲಿಬಾಲ್ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿಯು ಆಸಕ್ತರಾಗಿ ‘ಸೂಜಿ ಮಲ್ಲಿಗೆ’ ಮತ್ತು `ಅಪ್ಪನ ಹೆಗಲು ‘ ಎಂಬ ಎರಡು ಕೃತಿಗಳು ೨೦೧೫ ರಲ್ಲಿ ಪ್ರಕಟಿಸಿದ್ದ ಇವರು ‘ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ, ಗುಜರಾತ್ ನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯವಳಿಯಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಾವ್ಯ ರಚಿಸುವ ಆಸಕ್ತಿಯಿರುವುದರಿಂದ ಆಗಾಗ ಸಾಹಿತ್ಯ ರಚನೆಯು ಮಾಡುತ್ತಾರೆ. ಬೀದರನಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನ, ಹಾಗೂ ಬೆಂಗಳೂರ್ ಉತ್ತರದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರ ಕವನ ಲೇಖನ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಬೀದರ ತಾಲೂಕಿನ ಲೇಖಕರು
ಶ್ರೀ. ವೇ.ಶಾಂತಲಿAಗಸ್ವಾಮಿ ಹಿರೇಮಠ
ಅಧ್ಯಾತ್ಮಿಕ, ನೈತಿಕ, ವ್ಯಕ್ತಿತ್ವ ವಿಕಾಸನದ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಲೇಖಕರೆಂದರೆ ಶ್ರೀ.ವೇ.ಶಾಂತಲಿAಗಸ್ವಾಮಿ ಹಿರೇಮಠ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಳಕೇರಿ ಗ್ರಾಮದ ಶ್ರೀ.ವೇ. ಬಸ್ಸಯ್ಯಾಸ್ವಾಮಿ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೧೭-೯-೧೯೪೨ರಲ್ಲಿ ಜನಿಸಿದ್ದಾರೆ. ಇವರು ಐದನೇ ತರಬೇತಿಯವರೆಗೆ ಮಾತ್ರ ಕನ್ನಡದಲ್ಲಿ ಅಧ್ಯಯನ ಮಾಡಿದ್ದು, ಮುಂದೆ ತಮ್ಮ ಅಜ್ಜನವರಾದ ಶ್ರೀ.ವೇ.ರಾಚಯ್ಯ ಸ್ವಾಮಿಯವರಿಂದ ಮೊಡಿ,ಮರಾಠಿ, ಹಿಂದಿ, ಆಂಗ್ಲ ಸಂಸ್ಕçತ ಭಾಷೆಗಳನ್ನು ಕಲಿತು ಪುರೋಹಿತರಾಗಿ, ಜ್ಯೋತಿಷಿಗಳಾಗಿ, ಆಯುರ್ವೇದಕ ನಾಟಿ ವೈದ್ಯರಾಗಿ ಐತಿಹಾಸಿಕ ಸಂಶೋಧಕರಾಗಿ, ಸಾಹಿತಿಯಾಗಿ ಸಾಮಾಜಿಕ ಕಾರ್ಯನಿರ್ವಹಿಸಿದ ಇವರು ೧೯೫೩ರಲ್ಲಿ ಬೀದರದ ತಮ್ಮ ಚಿಕ್ಕಪ್ಪನವರಾದ ಶ್ರೀ ಶ್ರೀ ಶ್ರೀ ಷ.ಬ್ರ.ಪರ್ವತಲಿಂಗ ಶಿವಾಚಾರ್ಯರ ಹಿರೇಮಠ ಸಂಸ್ಥಾನಕ್ಕೆ ಬಂದು ಇಲ್ಲಿಯ ರುದ್ರಮುನಿ ಶಿವಾಚಾರ್ಯರ ಗದ್ದಗೆ ಪೂಜೆ, ಧ್ಯಾನ, ಅರಾಧನೆಯಲ್ಲಿ ತೊಡಗಿ, ಗುರುವಿನ ಆರ್ಶಿವಾದ ಪಡೆದು ೧೯೭೨ರಲ್ಲಿ ಮೇಹಕರದ ರಾಚೋಟೇಶ್ವರರ ಆದೇಶದ ಮೇರೆಗೆ ನೂತನ ಕಮಲಾಪೂರ ತಾಲೂಕಿನ ವಿ.ಕೆ.ಸಲಗರದ ಶ್ರೀ ಸಾಂಬಸ್ವಾಮಿ ಮಠದಲ್ಲಿ ತಪಸ್ಸು ಮಾಡಿ, ಆಧುನಿಕ ವಚನಗಳು ಬರೆಯಲು ಪ್ರಾರಂಭಿಸಿದ ಇವರು ಸುಮಾರು ೨೫೯೦ ವಚನಗಳು ಬರೆದಿದ್ದಾರೆ. ಮತ್ತು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ವೀರ ಸಂಗಯ್ಯನ ಭಜನೆಗಳು’ `ಮೊದಲು ಮಾನವನಾಗು’ `ನೀವು ಒಂದಾಗಿರಿ’. `ಒಂದು ಕಿವಿ ಮಾತು’ `ಜ್ಞಾನ ಪ್ರಸಾದ’. `ಬದುಕಲು ಕಲಿಯಿರಿ’. `ಹೊಸ ಬೆಳಕು’ `ಮಾನವಿಯತೆಯ ಮೌಲ್ಯ’. `ಸಾಧನೆಯ ಗುರಿ’. `ಪರಮಾತ್ಮನ ಪರುಷವಾಣಿ’ ಇವು ಅವರು ಬರೆದ ಅಧ್ಯಾತ್ಮಿಕ, ಪರಮಾರ್ಥಕ ಕೃತಿಗಳಾದರೆ, `ವಚನಾಮೃತ’ `ಬೊಮ್ಮಗೊಂಡೆಶ್ವರ ವಚನಗಳು’ `ತ್ರಿಪದಿ ವಚನಗಳು’ `ಶಾಂತಲಿAಗೇಶ್ವರ ವಚನಗಳು’. `ನೀ ಹಾಡಿಸಿದಂತೆ ಹಾಡುವೆ ‘ ಎಂಬ ಆಧುನಿಕ ವಚನಗಳ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು `ಆರೋಗ್ಯ ದರ್ಶನ’ ಎಂಬ ನಾಟಿ ವೈಧ್ಯ ಪದ್ದತಿ ಕೃತಿಯು ಬರೆದು ಸ್ವತಃ ಜನರಿಗೆ ನಾಟಿವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ `ವೀರಸಂಗಯ್ಯನ ಸಂಕ್ಷಿಪ್ತ ಜೀವನ ಚರಿತ್ರೆ’ `ವೀರ ಸಂಗಯ್ಯನ ರೇಡಿಯೋ ನಾಟಕಗಳು’ ಎಂಬ ಕೃತಿಗಳು ಬರೆದ ಇವರು `ನನ್ನ ಚಿಂತನೆಗಳು ‘ ಎಂಬ ಅಧ್ಯಾತ್ಮಿಕ ಚಿಂತನಾ ಕೃತಿ, ಹಾಗೂ `ಅಮೃತ ಹನಿಗಳು’ `ಅಮೃತ ವಾಣಿಗಳು’ ಎಂಬ ನುಡಿಮುತ್ತುಗಳ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಹಿಂದಿ ಭಾಷೆಯಲ್ಲಿ `ದೇಶ ಭಕ್ತಿ ಗೀತೆಗಳು’ ಎಂಬ ಕೃತಿಯು ಬರೆದಿದ್ದಾರೆ. ಇವರ ಹತ್ತಾರು ಕೃತಿಗಳು ಇನ್ನೂ ಅಪ್ರಕಟಿತವಾಗಿಯೇ ಉಳಿದಿವೆ. ಇವರು ೨೭-೨-೨೦೧೨ರಲ್ಲಿ ಲಿಂಗಕ್ಕೆರಾಗಿದ್ದರಿAದ ಸಾಹಿತ್ಯ ಕ್ಷೇತ್ರದ ಅನರ್ಘ್ಯ ರತ್ನವೊಂದು ಕಳೆದುಕೊಂಡAತಾಗಿದೆ. ಇವರ ಬರಹಗಳು ಮರು ಮುದ್ರಣವಾದರೆ ಮುಂದಿನ ಪೀಳಿಗೆಗೆ ಅನುಕೂಲಕರವಾದಿತ್ತು.
ಬಸವರಾಜ ಹದನೂರೆ
ಹಿರಿಯ ಕವಿಗಳಲ್ಲಿ ಒಬ್ಬರಾಗಿ ಕೆಲ ಕೃತಿಗಳು ರಚಿಸಿದ ಲೇಖಕರೆಂದರೆ ಬಸವರಾಜ ಹದನೂರೆಯವರು. ಇವರು ಬೀದರ ತಾಲೂಕಿನ ಜನವಾಡ ಗ್ರಾಮದ ಅಡಿವೆಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೧೪-೫-೧೯೪೦ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕವನ, ಲೇಖನ, ಪ್ರಬಂಧ, ಚಿಂತನಗಳನ್ನು ಬರೆದು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, ೨೦೧೧ರಲ್ಲಿ `ಗಿರಿಸಿದ್ದಲಿಂಗನ ಪರಮಾನಂದದ ಪಂಚ ನದಿಗಳು’ ೨೦೧೫ ರಲ್ಲಿ `ಎದೆಯೊಳಗಿಂದ ‘ ಎಂಬ ಇದು ಕವನ ಸಂಕಲನಗಳು, ಮತ್ತು `ನಾವದಗಿಯ ರೇವಪ್ಪನವರ ಜೀವನ ಚರಿತ್ರೆ’ ಹಾಗೂ ೨೦೧೭ ರಲ್ಲಿ `ರೇವಪ್ಪನವರ ನಾಮಾವಳಿ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ೨೦೧೩ರಲ್ಲಿ ಅಲಿಯಂಬರ ಗ್ರಾಮದಲ್ಲಿ ನಡೆದ ಜನವಾಡ ವಲಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರ ಕವನ,ಲೇಖನ,ಬ್ರಬಂಧ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಇವರು ದಿನಾಂಕ ೧೧-೫-೨೦೧೮ರಲ್ಲಿ ಇಹಲೋಕವನ್ನು ತ್ಯೆಜಿಸಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ದಿ.ಬಿ.ಆರ್.ಕೊಂಡಾ
ಸಾಹಿತ್ಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಉತ್ತಮ ಕಾರ್ಯನಿರ್ವಾಹಿಸಿದ ಪ್ರಾಧ್ಯಾಪಕ ಹಾಗೂ ಲೇಖಕರೆಂದರೆ ದಿ.ಬಿ.ಆರ್.ಕೊಂಡಾ. ಇವರ ಪೂರ್ಣನಾಮ `ಬಸವಲಿಂಗಪ್ಪ ತಂದೆ ರಾಚಪ್ಪ ಕೊಂಡಾ’ ಎಂದಾಗಿದೆ. ಇವರು ಬೀದರ ತಾಲೂಕಿನ ಹೊಕರಾಣ ಗ್ರಾಮದ ಶ್ರೀ ರಾಚಪ್ಪ ಮತ್ತು ಶ್ರೀಮತಿ ತೇಜಮ್ಮ ದಂಪತಿಗಳಿಗೆ ದಿನಾಂಕ ೧೫-೧-೧೯೪೩ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪದವಿಧರರಾದ ಇವರು ೧೯೬೩ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಪ್ರೌಢ ಶಾಲಾ ಶಿಕ್ಷಕರಾಗಿ, ಪದವಿ ಪೂರ್ವ ಉಪನ್ಯಾಸಕರಾಗಿ, ಹಾಗೂ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೦೧ ರಲ್ಲಿ ನಿವೃತ್ತಿ ಹೊಂದಿದರು.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿ ಮತ್ತು ಪ್ರಾವೀಣ್ಯತೆಯನ್ನು ಹೊಂದಿದ ಇವರು ೧೯೮೦ರಲ್ಲಿ `ಕುಟುಂಬ ಜೀವನ ಶಿಕ್ಷಣ’ ೧೯೮೪ರಲ್ಲಿ `ರಾಷ್ಟ್ರೀಯ ಹಬ್ಬಗಳು’ ೧೯೯೮ರಲ್ಲಿ `ಸಾರ್ವಜನಿಕ ಆಡಳಿv ‘ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಸಾರ್ವಜನಿಕ ಆಡಳಿತ’ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿಯೂ ಪ್ರಕಟವಾಗಿದೆ. `ಆಳಂದೆ ಸಾಸಿರ’ ಮತ್ತು `ಬೀದರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ’ ಎಂಬ ಕೃತಿಗಳು ಕೂಡ ಅವರು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಬರೆದ ಬೀದರ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ, ಕೋಟೆ ಕೊತ್ತಲುಗಳ ಕುರಿತಾದ ಲೇಖನಗಳು ನಾಡಿನಾದ್ಯಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೬ ಮತ್ತು ೧೯೯೯ರಲ್ಲಿ `ಉತ್ತಮ ಉಪನ್ಯಾಸಕ, ಮತ್ತು ಉತ್ತಮ ಪ್ರಾಧ್ಯಾಪಕ ಪ್ರಶಸ್ತಿ ಲಭಿಸಿವೆ. ೨೦೦೩ರಲ್ಲಿ ಕಸಾಪದಿಂದ ಕರ್ನಾಟಕ ಶ್ರೀ ಪ್ರಶಸ್ತಿ, ೨೦೦೩ರಲ್ಲಿ ನಡೆದ ಬೆಳಗಾವಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶ್ರೀ ಪ್ರಶಸ್ತಿ, ೨೦೧೧ರಲ್ಲಿ ಎಂ.ಕೆ.ಕಮಟಗಿ ಮಠ ಶಿಕ್ಷಣ ಸೇವಾ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ. ಇವರು ದಿನಾಂಕ ೨೬-೬-೨೦೧೪ರಲ್ಲಿ ಇಹಲೋಕ ತ್ಯಜಿಸಿದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಎಂ.ಜಿ.ಗAಗನಪಳ್ಳಿ
`ಸಾನೆಟ್ ಕವಿ’ ಎಂದೆ ಖ್ಯಾತಿ ಪಡೆದ ಹಿರಿಯ ಕವಿ,ಸಾಹಿತಿ, ಲೇಖಕ,ಹಾಗೂ ಚಿಂತನಕಾರರೆAದರೆ ಎಂ.ಜಿ.ಗAಗನಪಳ್ಳಿ. ಇವರು ಬೀದರ ತಾಲೂಕಿನ ಸಿಕಂದರಾಪೂರ ಗ್ರಾಮದ ಗುಂಡಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨-೮-೧೯೪೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರಾಗಿ, ಮೊರಾರ್ಜಿ ಶಾಲಾ ಪ್ರಾಚಾರ್ಯರಾಗಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಕಾವ್ಯ ರಚನೆಯಲ್ಲಿಯೆ ಹೆಚ್ಚು ಒಲವು ಹೊಂದಿರುವ ಇವರು ಕಾವ್ಯ ಮತ್ತು ಸಾನೇಟ್ ರಚಿಸಿ ೧೯೭೮ ರಲ್ಲಿ `ಬಾಳ ಹಂದರ’ ೧೯೮೮ರಲ್ಲಿ `ಗೊಮ್ಮಟಗಿರಿಯಲ್ಲಿ’ ೧೯೯೩ರಲ್ಲಿ `ಕಾವ್ಯ ಕುಂಜ’ ೨೦೦೬ರಲ್ಲಿ `ವನಸಿರಿ’ ೨೦೦೭ರಲ್ಲಿ `ಸುನೀತ ಸೌರಭ’ ೨೦೦೮ರಲ್ಲಿ `ಕಾವ್ಯ ಚಂದ್ರಿಕೆ’ ೨೦೦೯ರಲ್ಲಿ `ಕನ್ನಡ ಜನಪದ ಭುವನೇಶ್ವರಿ’ `ಗೀತ ಗುಚ್ಚ’ `ಗೀತಧಾರೆ’ ಎಂಬ ಕವನ ಸಂಕಲನಗಳು, ೨೦೧೦ರಲ್ಲಿ `ಶ್ರೀ ರೇವಪ್ಪಯ್ಯನವರ ಸುಪ್ರಭಾತ’ ೨೦೧೧ರಲ್ಲಿ `ಗಾಂಧಿ ನಮನ’ `ಗಾಂಧಿ ವಂದನೆ’ (ಹಿಂದಿ) `ಧ್ವನಿ ಕೊಟ್ಟ ಧಣಿ’ `ಜನಸ್ಪಂದನ’ ಎಂಬ ಸುಪ್ರಭಾತ ಕೃತಿಗಳು, ೨೦೧೬ರಲ್ಲಿ `ವಿಮರ್ಶಾ ಮಂಜರಿ’ ೨೦೧೭ರಲ್ಲಿ `ವಿಮರ್ಶೆ ವಲ್ಲರಿ’ ೨೦೧೯ರಲ್ಲಿ `ವಿಮರ್ಶೆ ಅಭಿಸಾರಿಕೆ’ ಎಂಬ ವಿಮರ್ಶಾ ಕೃತಿಗಳು, ೧೯೯೨ರಲ್ಲಿ `ತಾಯಿ ನಿನ್ನ ನೆನಪು ಏನೆಂದ ಸೈಪು’ ೨೦೦ರಲ್ಲಿ `ಸ್ಕೌಟ್ ಮತ್ತು ಗೈಡ್ಸ್’ ೨೦೧೩ರಲ್ಲಿ `ಔಷಧಿ ಗಿಡ ಮೂಲಿಕೆಗಳು’ ಎಂಬ ಸಂಪಾದನೆ. `ಸಮತೆಯ ಹಕ್ಕಿಯ ಹಾಡು’ ಎಂಬ ಖಂಡಕಾವ್ಯ, ೧೯೯೯ರಲ್ಲಿ `ಗಾದೆಗಳ ಜೋತೆಗೆ ಗೆಳೆತನ ಮಾಡು’ ೨೦೧೪ರಲ್ಲಿ `ದಿವ್ಯತ್ರಯರ ಕಾವ್ಯ ಗಂಗೆ’ ೨೦೧೭ರಲ್ಲಿ `ವಿವೇಕಾನಂದರಿಗೆ ನನ್ನ ಸುನೀತಗಳು’ ೨೦೧೮ರಲ್ಲಿ `ಶಿವಲಿಂಗ ಶಿವಯೋಗ’ `ಬಕ್ಕಪ್ಪ ನಾಗೂರೆ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಇವರಿಗೆ ೧೯೯೯ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಧಾರವಾಡದ ಚಿಲಿಪಿಲಿ ಪ್ರಕಾಶನದಿಂದ ಶಿಕ್ಷಣ ಸಿರಿ ಪ್ರಶಸ್ತಿ, ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವಿತೆಗಳು ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿಯು ಪ್ರಕಟವಾಗಿವೆ.ಮತ್ತು ಇವರ ಕುರಿತು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯು ಸಾಕ್ಷ್ಯಚಿತ್ರವು ತಯಾರಿಸಿದೆ. ಇವರ `ಕರುನಾಡಿಗೆ ಗಡಿನಾಡಿನಾರತಿ’ ಎಂಬ ಗೀತೆಗಳ ಧ್ವನಿ ಸುರಳಿಯು ಮುದ್ರಣಗೊಂಡಿದ್ದು ಇದು ಗುಲಬರ್ಗಾ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವು ಪಡೆದಿದೆ. ಆಕಾಶವಾಣಿ, ದೂರದರ್ಶನದಲ್ಲಿಯು ಇವರ ಚಿಂತನಗಳು ಪ್ರಸಾರವಾಗಿವೆ. ೨೦೦೯ರಲ್ಲಿ ಬೇಲೂರಿನಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೦ರಲ್ಲಿ ಬೀದರನಲ್ಲಿ ನಡೆದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಶಶಿಕಲಾ ಎಸ್.ಗಿರಿ
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವು ಕೆಲ ಕೃತಿಗಳು ಪ್ರಕಟಿಸಿದ ಲೇಖಕಿಯೆಂದರೆ ಶಶಿಕಲಾ ಎಸ್.ಗಿರಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ವೀರಭದ್ರಪ್ಪ ದುರ್ಗೆ ಮತ್ತು ಕಾಶಿಬಾಯಿ ದುರ್ಗೆ ದಂಪತಿಗಳಿಗೆ ದಿನಾಂಕ ೬-೧೨-೧೯೪೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಓದಿದ ಇವರು ಬೀದರದ ಲಾಡಗೇರಿಯ ಡಾ.ಶರಣಪ್ಪ ಗಿರಿಯವರ ಧರ್ಮ ಪತ್ನಿಯಾಗಿದ್ದಾರೆ.
ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು `ಅಕ್ಕಮಹಾದೇವಿಯ ೧೦೮ ನಾಮಾವಳಿ’ ಮತ್ತು `ಗಿರಿ ಕೋಗಿಲೆ’ ಎಂಬ ಜಾನಪದ ಗೀತೆಗಳ ಸಂಗ್ರಹ, `ಶಶಿ ಶರಣ’ ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಪ್ರವಾಸ ಕಥನವು ಬರೆದಿದ್ದು ಅದು ಅಪ್ರಕಟಿತವಾಗಿವೆ. ಇವರಿಗೆ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಕಲಬುರಗಿಯಲ್ಲಿ ನಡೆದ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮ್ಮಾನ ಮತ್ತು ಕಲಬುರಗಿಯ ಅಡಿಯಲ್ ಸಂಸ್ಥೆಯಿAದ ವುಮನ್ ಸುಭದ್ರ ಕುಟುಂಬ ಮತ್ತು ಆರೋಗ್ಯ ಪೂರ್ಣ ಸಮಾಜಕ್ಕೆ ಮಾದರಿ ಮಹಿಳೆಯೆಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೀದರನಲ್ಲಿ ನಡೆದ ೧೮ನೇ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಮ್ಮೇಳನ ಸೇರಿದಂತೆ ಮೊದಲಾದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೧೮ರಲ್ಲಿ ಕಲಬುರಗಿಯ ಅನುಭವ ಮಂಟಪ ಮತ್ತು ಬಸವ ಸಮಿತಿಯ ಸಹಯೋಗದಲ್ಲಿ ನಡೆದ ಮಹಾದೇವಿಯಕ್ಕಂಗಳ ೧೧ನೇ ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಸದ್ಯ ಇವರು ಕಲಬುರಗಿಯ ವೆಂಕಟೇಶನಗರದ ನಿವಾಸಿಯಾಗಿದ್ದು ತಮ್ಮ ಓಣಿಯಲ್ಲಿಯ ಮುಕ್ತಾಯಕ್ಕ ಅಕ್ಕನ ಬಳಗದ ವತಿಯಿಂದ ಪ್ರತಿ ಸೋಮವಾರ ಶರಣರ ಕುರಿತು ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ಸಂಗ್ರಹಿಸಿದ ಜಾನಪದ ಹಾಡುಗಳು ಕಲಬುರಗಿ ಆಕಾಶವಾಣಿಯಿಂದಲೂ ಹಾಡಿ ಪ್ರಸಾರ ಮಾಡಿದ್ದಾರೆ.
ಕಲಾವತಿ ಬಿರಾದಾರ
ಹಿರಿಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಕಲಾವತಿ ಬಿರಾದಾರ. ಇವರು ಬೀದರದ ಶ್ರೀ ಕಲ್ಲಪ್ಪ ಮತ್ತು ಶ್ರೀಮತಿ ಬಸಮ್ಮ ದಂಪತಿಗಳಿಗೆ ದಿನಾಂಕ ೧೬-೬-೧೯೪೯ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಗೃಹಿಣಿಯಾಗಿ ಕವನ,ಲೇಖನ,ಆಧುನಿಕ ವಚನಗಳು ಬರೆದಿದ್ದಾರೆ.
೨೦೦೨ರಲ್ಲಿ `ಭಾವ ಸಂಗಮ’ ೨೦೦೭ರಲ್ಲಿ `ಭಾವ ಕುಸುಮ’ (ಕವನ ಸಂಕಲನಗಳು) ೨೦೧೫ರಲ್ಲಿ `ನುಡಿ ಬೆಳಗು’ (ಆಧುನಿಕ ವಚನ ಸಂಕಲನ) ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು `ಸ್ತ್ರೀ ಜಾಗೃತಿ’ ಮಾಸಪತ್ರಿಕೆ ಸೇರಿದಂತೆ ಕೆಲ ಸ್ಥಳಿಯ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಮತ್ತು ೨೦೦೬ರಲ್ಲಿ ಬೀದರಿನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ತಾಲೂಕು, ಜಿಲ್ಲಾ, ಹೋಬಳಿ ಮಟ್ಟದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರ ಸಾಹಿತ್ಯ ಸಾಧನೆಗೆ ನಾನಾ ಕಡೆಗಳಿಂದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರಿನಲ್ಲಿ ವಾಸವಾಗಿದ್ದು, ತಮ್ಮ ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ಎಸ್.ಎA.ಜನವಾಡಕರ್
ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪ್ರಕಾರದ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಎಸ್.ಎಂ.ಜನವಾಡಕರ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಮರಿಲಿಂಗಪ್ಪಾ ಮತ್ತು ಮಹಾರುದ್ರಮ್ಮ ದಂಪತಿಗಳಿಗೆ ದಿನಾಂಕ ೩-೧-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಕರಾಗಿ, ಡಯಟ್ ನ ಪ್ರಶಿಕ್ಷಕ, ಉಪನ್ಯಾಸಕರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ, ಉಪನಿರ್ದೇಶಕರ ಕಾರ್ಯಾಲಯದಲ್ಲಿ ಕನ್ನಡ ವಿಷಯ ಪರಿವಿಕ್ಷಕರಾಗಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೦೮ರಲ್ಲಿ ನಿವೃತ್ತರಾಗಿದ್ದಾರೆ.
ತಮ್ಮ ವೃತ್ತಿ ಬದಕಿನೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಹಸಿರು ಕ್ರಾಂತಿ’ ಮತ್ತು `ಬುದ್ಧ ಗೆದ್ದ ಮಾರನ ಯುದ್ಧ’ (ನಾಟಕಗಳು) ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನಸಂಕಲನಗಳು) ಬಣ್ಣದ ಬದುಕು (ಕಥಾ ಸಂಕಲನ) ನಂಟು ಬಿಡದೆ ಅಂಟಿಕೊAಡವರು, ಮಾಸಿದ ಹಾಸಿಗೆ ಕಾದ ಕಂಬನಿ (ಕಾದಂಬರಿಗಳು) ಧಮ್ಮಾವೃತ ಗೀತೆ, ತಥಾಗತ್ ಗಾಥೆಗಳ್’ (ಬುದ್ದ, ಧಮ್ಮ ಚರಿತ ಕಾವ್ಯಗಳು) ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ. (ವೈಚಾರಿಕ ಕೃತಿಗಳು) ಹಿಮ ಸಾಗರ (ಪ್ರವಾಸಕಥನ) ಕಲ್ಯಾಣ ಕಂಡ ಕಲ್ಯಾಣ (ಆಧುನಿಕ ವಚನ ಸಂಕಲನ) ಬೀದರ ಜನಪದ ಸಿರಿ (ಜಾನಪದ) ಬೆಡಗಿನ ಬೀದರ (ಐತಿಹಾಸಿಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹ ಲೇಖನ ಅನೇಕ ಚಿಂತನಗಳು ಕಲಬುರಗಿ ಆಕಾಶವಾಣಿ, ದೂರದರ್ಶನಗಳಲ್ಲಿಯೂ ಪ್ರಸಾರವಾಗಿವೆ. ಇವರಿಗೆ ಇಂದೊರದ ಡಾ.ಅಂಬೇಡ್ಕರ್ ಪ್ರಶಸ್ತಿ, ದೆಹಲಿಯಿಂದ ಭಗವಾನ್ ಬುದ್ದ ರಾಷ್ಟ್ರೀಯ ಫೇಲೊಸಿಪ್, ಧಾರವಾಡದಿಂದ ರಾಷ್ಟ್ರೀಯ ಮಹಾಮಾತಾ ಪ್ರಶಸ್ತಿ,
ಬೆಂಗಳೂರಿನ ಕರ್ನಾಟಕ ಸೇವಾ ಸಂಘದ ವತಿಯಿಂದ ಕನ್ನಡ ರತ್ನ ಪ್ರಶಸ್ತಿ, ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಭಾಲ್ಕಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಬೆಲೂರಿನ ಉರಿಲಿಂಗ ಪೆದ್ದಿ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ಮುಂಬೈನ ಬೌದ್ದ ಮಹಾಸಭಾ ಸದಸ್ಯರಾಗಿ, ಬೀದರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾಗಿ, ಸೇವೆ ಸಲ್ಲಿಸುತ್ತಿದ್ದಾರೆ.
ಶಿರೋಮಣಿ ತಾರೆ
ಹವ್ಯಾಸಿ ಬರಹಗಾರರಾದ ಶಿರೋಮಣಿ ತಾರೆಯವರು ಬೀದರದ ಮಂಗಲಪೇಟೆಯ ರಾಮಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ೨೦೦೪ರಲ್ಲಿ `ಬೀದರ ಜಿಲ್ಲೆಯ ಜನಪದ ಗಾದೆಗಳು’ ಎಂಬ ಕೃತಿ ಹೊರತಂದಿದ್ದಾರೆ. ಇವರಿಗೆ ಜನ ಮೆಚ್ಚಿದ ಶಿಕ್ಷಕ, ಗುರು ಕುಲಾಜ್ಞ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇಂದುಮತಿ ಬಂಡಿ
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಇಂದುಮತಿ ಬಂಡಿ. ಇವರು ಬೀದರದ ವೀರಶೇಟ್ಟಿ ಮನ್ನಳ್ಳಿಕರ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೫೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ.ಪದವಿ ಪಡೆದ ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾದ ಇವರು ದಿನಾಂಕ ೨೫-೯-೨೦೧೯ರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇವರು ೨೦೦೩ರಲ್ಲಿ `ಅರಳು ಮೊಗ್ಗು’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಮತ್ತು ಆ ಕೃತಿಗೆ ೨೦೦೮ರಲ್ಲಿ ಕರ್ನಾಟಕ ಜನಸೇವಾ ಸಾಹಿತ್ಯ ಬಳಗದಿಂದ ಜನಸೇವಾ ಪ್ರಶಸ್ತಿ, ೧೫-೮-೧೯೮೭ರಲ್ಲಿ ಪಬ್ಲಿಕ್ ಪತ್ರಿಕೆ ಏರ್ಪಡಿಸಿದ ಕವನ,ಲೇಖನ ಸ್ಪರ್ಧೆಯಲ್ಲಿ `ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶೋಷಣೆ’ ಎಂಬ ಲೇಖನ ಮತ್ತು `ಒಡಲ ಕರೆ’ ಎಂಬ ಕವಿತೆಗೆ ಪ್ರಥಮ ಬಹುಮಾನಗಳು ಪಡೆದಿದ್ದಾರೆ. ೧೯೯೦ ಮತ್ತು ೨೦೦೮ರಲ್ಲಿ ಹುಮನಾಬಾದ ತಾಲೂಕಿನ ಶಿಕ್ಷಕರ ಕವನ ಸ್ಪರ್ಧೆಯಲ್ಲಿ ಇವರ ಕವಿತೆಗಳಿಗೆ ಎರಡು ಸಲ ದ್ವಿತೀಯ ಬಹುಮಾನ ಲಭೀಸಿವೆ. `ಪ್ಲಾಸ್ಟಿಕ್ ಪ್ರಪಂಚ’ ಎಂಬ ಮಕ್ಕಳ ವಿಜ್ಞಾನ ನಾಟಕಕ್ಕೆ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ಬಂದಿದೆ. ೧೯೯೨ರಲ್ಲಿ ಬೀದರ ದೀಪ ಸಾಕ್ಷರತಾ ಸಮಿತಿಯ ಸದಸ್ಯರಾಗಿದ್ದಾಗ ಬಿಡುಗಡೆಯಾದ `ಬೀದರ ಸಾಕ್ಷರತೆ ಧ್ವನಿ ಸುರುಳಿಯಲ್ಲಿ ಇವರದೊಂದು `ಅಕ್ಷರ ಕಲಿಯುವ’ ಎಂಬ ಕವಿತೆ ಆಯ್ಕೆಯಾಗಿ ಜನಪ್ರಿಯತೆ ಗಳಿಸಿದೆ. `ಧನ ಪಿಶಾಚಿ’ ಎಂಬ ಕತೆ ಪ್ರಪಂಚ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.ಮತ್ತು ಲಿಂಗನುಡಿ, ವಚನಕ್ರಾಂತಿ ಪತ್ರಿಕೆಯಲ್ಲಿ ಕವನಗಳು ಪ್ರಕಟವಾಗಿವೆ. ಇವರಿಗೆ ೨೦೦೦ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ೨೦೦೫ರಲ್ಲಿ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಕನ್ನಡ ರತ್ನ ಪ್ರಶಸ್ತಿ, ಗುರಮಠಕಲ್ ನಿಂದ ಸಿರಿಗನ್ನಡ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ವಿದ್ಯಾ ಶೀತಲ
ಕವಯತ್ರಿಯಾದ ವಿದ್ಯಾಶೀತಲ ಇವರು ಬೀದರದ ಅನಂತಾಚಾರ್ಯ ಮತ್ತು ಮಥುರಾಬಾಯಿ ದಂಪತಿಗಳಿಗೆ ದಿನಾಂಕ ೨೪-೭-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಗೃಹಿಣಿಯಾಗಿದ್ದುಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, ೧೯೮೭ರಲ್ಲಿ `ಜೀವನ ರಸ, ೧೯೯೨ರಲ್ಲಿ `ಅಧೂರಾ ಸಫರ, ೧೯೯೬ರಲ್ಲಿ `ನಿಶಾನ ಯಾದೊಂಕೆ, ೨೦೦೧ರಲ್ಲಿ `ಪ್ರೇರಣಾ ಕೆ ಕಣ’ ಎಂಬ ಕೃತಿಗಳು ರಚಿಸಿದ್ದಾರೆ. ಇವರಿಗೆ ಕಲಬುರಗಿ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.
ದಿ.ಈಶ್ವರ ಕರುಣಾ ಸಾಗರ
ಬೀದರ ಜಿಲ್ಲೆಯ ದಲಿತ ಕವಿಗಳಲ್ಲಿ ಒಬ್ಬರಾಗಿ ಬುದ್ಧ,ಬಸವ,ಅಂಬೇಡ್ಕರ್ ಮೊದಲಾದವರ ಕುರಿತು ಕವಿತೆಗಳು ಬರೆದು ಪುಸ್ತಕ ಪ್ರಕಟಿಸಿದ ಕವಿಯೆಂದರೆ, ದಿ.ಈಶ್ವರ ಕರುಣಾ ಸಾಗರ. ಇವರು ಬೀದರ ತಾಲೂಕಿನ ಅಣದೂರು ಗ್ರಾಮದ ದಿ.ಮೊನಪ್ಪ ಮಾಸ್ತರ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೧೧-೧೯೫೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ, ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ತಮ್ಮ ವೃತ್ತಿ ಬದುಕಿನೊಂದಿಗೆ ನೂರಾರು ಕವಿತೆಗಳನ್ನು ಹಾಡುವ ಧಾಟಿಯಲ್ಲಿ ಬರೆದಿದ್ದಾರೆ. ಇವರು ಬರೆದ ಬುದ್ದ ಬಸವ ಅಂಬೇಡ್ಕರ ಗೀತೆಗಳು ಭಜನೆಯಲ್ಲಿ ಇಂದಿಗೂ ಕೆಲವು ಕಡೆ ಅವರ ಹಾಡು ಹಾಡುತ್ತಾರೆ. ಇವರ ತಂದೆಯು ಒಬ್ಬ ಕವಿ ತತ್ವ ಪದಕಾರರಾಗಿದ್ದರಿಂದ ಅವರ ಮಾರ್ಗದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಗೇಯತೆಯಿಂದ ಕೂಡಿರುವ ಕಾವ್ಯ ರಚನೆ ಮಾಡಿದ್ದಾರೆ. ಮತ್ತು ೧೯೯೭ರಲ್ಲಿ `ಧಮ್ಮ ಸಂದೇಶ ಗೀತೆಗಳು’ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಬೀದರ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಗರಾಗಿ ಕಂಡು ಬರುತ್ತಾರೆ. ಆದರೆ ದುರಾದೃಷ್ಟ ಇವರು ೨೫-೨-೨೦೦೭ರಲ್ಲಿ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರಿಂದ ಬೀದರ ದಲಿತ ಸಾಹಿತ್ಯ ಲೋಕದ ಅಪ್ಪಟ ಕೊಂಡಿಯೊAದು ಕಳಚಿದಂತಾಗಿದೆ.
ಸೂರ್ಯಕಾAತ ನಿನ್ನೇಕರ
ಬೀದರ ಜಿಲ್ಲೆಯ ಬರಹಗಾರರಲ್ಲಿ ಹಲವು ಪ್ರಕಾರದ ಸಾಹಿತ್ಯ ರಚಿಸಿದ ಸೃಜನಶೀಲ ಸಾಹಿತ್ಯ ರಚಿಸಿ ಕವಿಯೆಂದರೆ, ಸೂರ್ಯಕಾಂತ ನಿನ್ನೇಕರ. ಇವರು ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ವೀರೆಂದ್ರ ಮತ್ತು ಸಿಮಿತ್ರಾಬಾಯಿ ದಂಪತಿಗಳಿಗೆ ದಿನಾಂಕ ೨೫-೮-೧೯೫೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೮೨ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಕನ್ನಡ ಕಸ್ತೂರಿ’ `ಬಯಕೆ’. `ಅಮ್ಮ’ `ಜೀವನ ಜೋಕಾಲಿ’ `ಕಾವ್ಯಧಾರೆ’ `ಎದೆಯ ವೀಣೆ’ `ಸಿರಿ ಮಲ್ಲಿಗೆ’ `ಹೊಳೆವ ಕಂಗಳು’ `ಭವ ಪ್ರತಿಭೆ’. `ತಾರುಣ್ಯ ಸಿಂಧು’ `ಶುಭಯೋಗ’ (ಕವನ ಸಂಕಲನಗಳು) `ಶ್ರೀ ಶಿವಶರಣ ಹರಳಯ್ಯಾ ಚರಿತ್ರೆ’ (ಚರಿತ್ರೆ) `ಮಹಾಶರಣ ಹರಳಯ್ಯಾ’ ಮತ್ತು `ನಾ ಕಂಡ ಕನಸಿನಲ್ಲಿ’ (ಲೇಖನ ಸಂಕಲನಗಳು `ಕಾಯಕ ಚೇತನ’ (ಅಭಿನಂದನಾ ಗ್ರಂಥ) ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೧೩ರಲ್ಲಿ ಬೀದರ ತಾಲೂಕಿನ ರಾಜಗೀರಾ ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸೋಲಾಪೂರ, ಜಿಲ್ಲಾ ಸಾಹಿತ್ಯ ಸಮ್ಮೇಳನ ಬೀದರ, ತಾಲೂಕು ಸಾಹಿತ್ಯ ಸಮ್ಮೇಳನ ಭಾಲ್ಕಿ, ಬಸವಕಲ್ಯಾಣ, ಔರಾದ ಮೊದಲಾದ ಕಡೆಗಳಲ್ಲಿ ಭಾಗವಹಿಸಿ ಕವನ ವಾಚನವು ಮಾಡಿದ್ದಾರೆ. ಇವರ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಬೀದರದ ಬಸವಕೇಂದ್ರದ ವತಿಯಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನ ದತಿಯಿಂದ ಶಿಕ್ಷಣ ಸಿರಿ ಪ್ರಶಸ್ತಿ, ಪಡೆದಿದ್ದಾರೆ ಇವರ ಕವನ ಲೇಖನ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಡಾ. ವಜ್ರಾ ಪಾಟೀಲ್
ಸ್ತಿçÃಯರ ನೋವು-ನಲಿವು ಮತ್ತು ಅವರ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ಕಾವ್ಯ ರಚಸಿದ ಮಹಿಳಾ ಸಾಹಿತಿಯೆಂದರೆ ಡಾ.ವಜ್ರಾ ಪಾಟೀಲ್. ಇವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ ಇವರ ತಂದೆ ವಿರೂಪಾಕ್ಷಗೌಡ ತಾಯಿ ಪಾರ್ವತಿದೇವಿಯ ಉದರದಲ್ಲಿ ದಿನಾಂಕ ೨೩-೬-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಬೀದರದ ದೇವಿ ಕಾಲೋನಿಯ ವಕೀಲರಾದ ಕೈಲಾಸನಾಥ ಪಾಟೀಲ್ ಅವರ ಧರ್ಮಪತ್ನಿಯಾಗಿರುವ ಇವರು ಬೀದರ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಷಯದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಮರ’ `ಮನದಾಳ’. `ಚೈತ್ರ’. `ಚೈತನ್ಯ’ ಎಂಬ ಕವನ ಸಂಕಲನ ಮತ್ತು `ಆಧುನಿಕ ವಚನಗಳು’ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕುರಿತು ಸಾಹಿತಿ ವಿಜಯಲಕ್ಷ್ಮಿ ಮುಜುಮದಾರ ಅವರು `ಸ್ನೇಹ’ ಕವನ ಸಂಕಲನ ಹಾಗೂ ರಘುಶಂಖ ಭಾತಂಬ್ರಾ ಅವರು `ವಜ್ರಾ ಬಿಂಬ’ ಎಂಬ ಕೃತಿಗಳು ಇವರು ಪಾರ್ವತಿ ಪ್ರಕಾಶನದಿಂದ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. ಹಾಗೂ ಕೆಲ ವಿದ್ಯಾರ್ಥಿಗಳು ಇವರ ಸಾಹಿತ್ಯದ ಮೇಲೆ ಎಂ.ಫೀಲ್.ಪಿ.ಎಚ್.ಡಿ. ಸಂಶೋಧನಾ ಕಾರ್ಯಕೈಗೊಂಡಿದ್ದಾರೆ. ಮತ್ತು ಇವರು ಸಾಹಿತ್ಯ, ಸಂಘಟನೆಯಲ್ಲೂ ಕ್ರೀಯಾಶೀಲರಾಗಿ ೨೦೦೭ರಿಂದ ೨೦೧೦ರವರೆಗೆ ಬೀದರ ಜಿಲ್ಲಾ ಮಹಿಳಾ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ೨೦೧೦ರಿಂದ ೨೦೧೩ರವರೆಗೆ ಆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ನೇಪಾಳದಲ್ಲಿ ನಡೆದ ಅಖಿಲ ಭಾರತ ಕವಯತ್ರಿರ ಸಮ್ಮೇಳನದಲ್ಲಿ ಪಾಲ್ಗೊಂಡು ಕವನವಾಚನವು ಮಾಡಿದ್ದಾರೆ. ಹಾಗೂ ಬಸವಕಲ್ಯಾಣದ ಸಸ್ತಾಪೂರದಲ್ಲಿ ನಡೆದ ೬ನೇ ತಾಲೂಕು ಮಟ್ಟದ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯಾಗಿ ಆಯ್ಕೆಯಾಗಿದರು. ಅಷ್ಟೇಯಲ್ಲದೆ ೨೦೧೭ರಲ್ಲಿ ಕನ್ನಡಾಂಬೆಯ ಕಲಾನಿಕೇತನದ `ರಾಜ್ಯೋತ್ಸವ ಪ್ರಶಸ್ತಿ,’ ಬೀದರ ಜಿಲ್ಲಾ ೧೧ನೇ ಕಸಾಪ ಸಮ್ಮೇಳನದಲ್ಲಿ `ಉತ್ತಮ ಕವಯತ್ರಿ’ ಸನ್ಮಾನ ಮತ್ತು ಮುಕ್ತಿ ಮಂದಿರ ಬೀದರದಿಂದ `ಮನಶಾಸ್ತ್ರಜ್ಞೆ’ ಗೌರವ ಸನ್ಮಾನ, ೨೦೧೩ರಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಸ್ನೇಹಿತರ ಒಕ್ಕೂಟ ನವದೆಹಲಿಯಿಂದ `ಶಿಕ್ಷಾರತ್ನ’ ಪ್ರಶಸ್ತಿ , ಕಸಾಪ ಮಹಾರಾಷ್ಟ್ರ ಗಡಿನಾಡು ಘಟಕದಿಂದ `ಮಹಾಲೇಖಕಿ ಪ್ರಶಸ್ತಿ ಸೇರಿದಂತೆ ಮೊದಲಾದ ೨೦ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಶಿವಕುಮಾರ ನಾಗವಾರ
ಬೀದರ ಜಿಲ್ಲೆಯ ಕಥಾ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಹಿರಿಯ ಕತೆಗಾರರೆಂದರೆ ಶಿವಕುಮಾರ ನಾಗವಾರ. ಇವರು ಬೀದರ ತಾಲೂಕಿನ ಮರಕುಂದಾ ಗ್ರಾಮದ ಮಡಿವಾಳಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೨-೮-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಡಿ.ಫಾರ್ಮ ಸ್ನಾತಕೋತ್ತರ ಪದವಿ ಪಡೆದು ಬೀದರದ ಕಾಶಿನಾಥರಾವ ಬೆಲೂರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಹಣದಿ’ `ಏಳೂರ ಸರಪಂಚ’ `ಮನಸ್ಸು ಮಾತಾಡಿದಾಗ’ (ಕಥಾಸಂಕಲನಗಳು) `ಚೆನ್ನಬಸವಣ್ಣನವರು’ (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಹಲವು ಕತೆಗಳು ರಾಜ್ಯ ಮಟ್ಟದ ಕಥಾಸ್ವರ್ಧೆಯಲ್ಲಿ ಬಹುಮಾನಗಳು ಪಡೆದು ಹೆಸರುವಾಸಿಯಾಗಿವೆ. ಅವುಗಳೆಂದರೆ,೧೯೮೭ ರಲ್ಲಿ ತರಂಗ ಕಥಾ ಸ್ಪರ್ಧೆಯಲ್ಲಿ ಇವರ `ಬನ್ಯಾ’ ಕತೆ, `೧೯೯೪ರಲ್ಲಿ ಉತ್ಥಾನ ಮಾಸಪತ್ರಿಕೆಯಲ್ಲಿ `ಹಗಲುಗಳಾಗಿ ರಾತ್ರಿಗಳು’ ಮತ್ತು ಅದೆ ಪತ್ರಿಕೆಯು ೧೯೯೬ರಲ್ಲಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಹುಳುಚು’ ಎಂಬ ಕತೆ. ಹಾಗೂ ೨೦೦೨ ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯವರ ತಿಂಗಳ ಕಥಾ ಸ್ಪರ್ಧೆಯಲ್ಲಿ `ಹಡದಿ’ ಕತೆ ಇವುಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರೆ, ೧೯೯೫ರಲ್ಲಿ ಉತ್ಥಾನ ಮಾಸಪತ್ರಿಕೆಯವರು ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಬಾಬಡಿ’ ಎಂಬ ಕತೆ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ೧೯೮೮ರಲ್ಲಿ ಪ್ರಜಾವಾಣಿಯ ಕಥಾ ಸ್ಪರ್ಧೆಯಲ್ಲಿ `ಟುಮ್ಯಾ’ ಮತ್ತು ೧೯೯೭ರಲ್ಲಿ `ನೆಲ ಹಿಡಿಯುವ ಮುನ್ನ’ ಕತೆಗಳು ಬಹುಮಾನ ಪಡೆದು ಪ್ರಕಟವಾಗಿವೆ. ೧೯೯೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಏರ್ಪಡಿಸಿದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಸತ್ಯ’ ಕತೆ ಬಹುಮಾನ ಪಡೆದಿದೆ. ಇವರ ಕತೆಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ತರಂಗ, ಸಂಕ್ರಮಣ, ಹೊಸತು,ಉತ್ಥಾನ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ೧೯೯೬ರಲ್ಲಿ ಅಮರೇಶ ನುಗಡೊಣಿಯವರು ಪ್ರಕಟಿಸಿದ ಹೈದರಾಬಾದ್ ಕರ್ನಾಟಕ ಕತೆಗಾರರ `ಬಿಸಿಲ ಹನಿಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನದಲ್ಲಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿದ `೧೯೯೭ ಸಣ್ಣ ಕತೆಗಳು’ ಮತ್ತು ೨೦೦೪ರಲ್ಲಿ ಕಸಾಪ ಬೆಂಗಳೂರಿನಿAದ ಪ್ರಕಟವಾದ `ಬೀದರ ಜಿಲ್ಲೆಯ ಕಥಾ ಸಂಕಲನ, ೨೦೦೫ರಲ್ಲಿ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದ `ಸರಣಿ ಕತೆಗಳು’ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಕಟಿಸಿದ `ಸಣ್ಣಕಥೆಗಳು, ಸೇರಿದಂತೆ ಮೊದಲಾದವರ ಪ್ರಾತಿನಿಧಿಕ ಕಥಾಸಂಕಲನದಲ್ಲಿ ಇವರ ಕತೆಗಳು ಪ್ರಕಟವಾಗಿವೆ. ಮತ್ತು ೨೦೦೦ ಇಸ್ವಿಯಲ್ಲಿ ಇವರ `ಹಣದಿ’ ಕಥಾಸಂಕಲನಕ್ಕೆ ಉದಯವಾಣಿ ಪತ್ರಿಕೆಯವರಿಂದ ಪುಸ್ತಕ ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಇವರ `ಏಳೂರು ಸರಪಂಚ’ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, ೨೦೦೯ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮನಸ್ಸು `ಮಾತಾಡಿದಾಗ ‘ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ೨೦೦೩ರಲ್ಲಿ ಇವರ `ಹಗಲುಗಳಾಗಿ ರಾತ್ರಿಗಳು’ ಎಂಬ ಕತೆ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು `ಹರಿದ ಕಾಗದದ ಚೂರುಗಳು’ ಎಂಬ ಕತೆ ಬಿ.ಬಿ.ಎಂ.ವಿದ್ಯಾರ್ಥಿಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಠ್ಯ ಪುಸ್ತಕಗಳಾಗಿವೆ. ೨೦೧೪-೧೫ ನೇ ಸಾಲಿನ ಪಿ.ಯು.ಸಿ.ದ್ವಿತೀಯ ವರ್ಷದ ಕನ್ನಡ ಪಠ್ಯಕ್ರಮದ ರಚನಾ ಸಮಿತಿಯ ಸದಸ್ಯರಾಗಿ, ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯು ಇವರು ೨೦೧೪ರಿಂದ ೨೦೧೭ ರವರೆಗೆ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ತಮ್ಮ ಹುಟ್ಟೂರಿನಲ್ಲಿ ಚಾಲುಕ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ.
ಗಂಧರ್ವ ಸೇನಾ
ಪತ್ರಕರ್ತ ಹಾಗೂ ಸಾಹಿತಿಗಳಾದ ಗಂಧರ್ವ ಸೇನಾ ಇವರು ಬೀದರದ ಗಂಗಾಧರ ಮತ್ತು ಚಂದ್ರಕಲಾಬಾಯಿ ದಂಪತಿಗಳಿಗೆ ದಿನಾಂಕ ೧೬-೭-೧೯೫೭ರಲ್ಲಿ ಜನಿಸಿದ್ದಾರೆ. ಇವರು ೧೯೯೬ರಲ್ಲಿ `ಬಿಗಿ ಬಂದೋಬಸ್ತಿನಲ್ಲಿ ಪ್ರಜಾಪ್ರಭುತ್ವ’ ಎಂಬ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಮತ್ತು ಇವರಿಗೆ ೧೯೯೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿಗಿದೆ..
ಶಂಬುಲಿAಗ ವಾಲ್ದೊಡ್ಡಿ
ರಂಗಭೂಮಿ ಕಲಾವಿದ, ಗಾಯಕ, ಕವಿ, ಸಾಹಿತಿಯೆಂದರೆ ಶಂಭುಲಿAಗ ವಾಲ್ದೊಡ್ಡಿ. ಇವರು ಬೀದರ ತಾಲೂಕಿನ ವಾಲ್ದೊಡ್ಡಿ ಗ್ರಾಮದ ನರಸಪ್ಪ ಮತ್ತು ಚಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೫೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಎಲ್.ಎಲ್.ಬಿ. ಹಿನ್ನೆಲೆ ಗಾಯನ, ಪದವಿಧರರಾದ ಇವರು ೧೯೯೦ರಲ್ಲಿ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದಾರೆ.
ಗಾಯನ ಕಲೆಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ೨೦೧೦ರಲ್ಲಿ `ವ್ಯಾಕರಣ ಕುಂಜ’ (ವ್ಯಾಕರಣ) ೨೦೧೬ರಲ್ಲಿ `ಮಹಾತಾಯಿ’ (ಚರೀತ್ರೆ) ೨೦೧೩ರಲ್ಲಿ `ಕನ್ನಡದಲ್ಲಿ ಹೊಸ ಸಂವೇದನೆಯ ಹಾಡುಗಳು’ ೨೦೧೪ರಲ್ಲಿ `ಜೀವನ ದರ್ಶನ’ (ಸಂಪಾದನೆ) ೨೦೧೯ರಲ್ಲಿ `ಹೊಂಗನಸ್ಸಿನ ಹಾಯಿಕುಗಳು’ (ಹಾಯ್ಕುಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ಕೆರೆಗೆ ಹಾರ’ `ಏಳು ಎಚ್ಚರವಾಗು’. `ಅಕ್ಷರ ಗೀತೆಗಳು’ `ಬೆಳಗುವ ಬೆಳ್ಳಿ’ `ಹಕ್ಕಿಗೂಡು’ ಎಂಬ ಧ್ವನಿ ಸುರುಳಿಗಳು ಹೊರತಂದಿದ್ದಾರೆ. ಇವರ ಸಂಗೀತ ಮತ್ತು ಸಾಹಿತ್ಯ ಸಾಧನೆಗೆ ೧೯೯೩ರಲ್ಲಿ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿಯಿಂದ ಡಾ.ಅಂಬೇಡ್ಕರ್ ಫೆಲೋಷಿಪ್ ಪ್ರಶಸ್ತಿ, ೧೯೯೮ರಲ್ಲಿ ಬೆಂಗಳೂರಿನ ನಾಟಕ ಅಕಾಡೆಮಿಯಿಂದ ರಂಗಭೂಮಿ ಸೇವಾ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ೨೦೦೬ರಲ್ಲಿ ಇವರ ಕುರಿತು `ಸ್ನೇಹ ಜೀವಿ’ ಎಂಬ ಅಭಿನಂದನಾ ಗ್ರಂಥವು ಹೊರತರಲಾಗಿದೆ. ಇವರು ಆಕಾಶವಾಣಿ ದೂರದರ್ಶನದ ಕಲಾವಿದರಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿಕ್ಷಣ ಇಲಾಖೆಯಿಂದ ನೂರಾರು ಬಿದಿ ನಾಟಕಗಳನ್ನು ಮಾಡಿ ಜನಜಾಗೃತಿ ಮೂಡಿಸಿದ್ದಾರೆ. ಇವರ ಕೆರೆಗೆ ಹಾರ ರೂಪಕ ೨೦೦ ಪ್ರದರ್ಶನ ಕಂಡಿದೆ. ಇವರು ತಮ್ಮ ಹುಟ್ಟೂರಿನಲ್ಲಿ `ಶೋಭಾ ಕಲೆ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಹಾತಾಯಿ ಕೃತಿಗೆ ೨೦೧೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಿAದ `ಆರ್.ರೇವಯ್ಯ’ ದತ್ತಿ ಪ್ರಶಸ್ತಿ ಪಡೆದಿದೆ. ಮತ್ತು ಈ ಕೃತಿ ಸಾಹಿತಿ ಇಂದುಮತಿ ಸುತಾರ ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಇವರು ಕೆಲ ಕನ್ನಡ,ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ೨೦೧೧ರಲ್ಲಿ `ಎದೆ ತುಂಬಿ ಹಾಡಿದೇನು’ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಅತಿಥಿಗಳಾಗಿ ಭಾಗವಹಿಸಿದ್ದಾರೆ.೨೦೧೫ರಲ್ಲಿ ಅಮೆರಿಕಾದಲ್ಲಿ ನಡೆದ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಮತ್ತು ನೆಹರು ಯುವ ಕೇಂದ್ರದ ವತಿಯಿಂದ ಹಲವು ದೇಶಗಳ ಪ್ರವಾಸ ಮಾಡಿದ್ದಾರೆ.
ಮಾಣಿಕರಾವ ಚಿಲ್ಲರ್ಗಿ
ಬಂಡಾಯ ಕವಿಗಳಾಗಿ ಗುರ್ತಿಸಿಕೊಂಡ ಲೇಖಕ ಮಾಣಿಕರಾವ ಚಿಲರ್ಗಿಯವರು. ಬೀದರ ತಾಲೂಕಿನ ಚಿಲರ್ಗಿ ಗ್ರಾಮದ ಕಲ್ಲಪ್ಪ ಮತ್ತು ರುಕ್ಕಮ್ಮ ದಂಪತಿಗಳಿಗೆ ದಿನಾಂಕ ೧೧-೪-೧೯೫೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ, ಧಮ್ಮ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ದಿ.ಕಾಶಿನಾಥ ಗವಾಯಿಗಳ ಪ್ರಭಾವದಿಂದಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು `ಜಯ ಭೀಮ ಲೀಲಾ, ಹಾಗೂ `ಗೀತಾ ಮಾಲಾ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಕಲ್ಯಾಣರಾವ ದಾವಣಗಾವೆ
ಕವಿ ಸಾಹಿತಿ ಹಾಗೂ ಲೇಖಕರಾದ ಕಲ್ಯಾಣರಾವ ದಾವಣಗಾವೆಯವರು ಬೀದರ ಶಿವನಗರದ ಮಾರುತೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೭-೮-೧೯೫೯ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಸರ್ಕಾರಿ ಸೇವೆಯಿಂದ ನಿವೃತ್ತಿರಾಗಿದ್ದಾರೆ. ಇವರು ೧೯೭೨ರಲ್ಲಿ `ಹೂ ಬೇಕೆ ಹೂ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.
ಪೂಜ್ಯ ಶ್ರೀ.ಅಕ್ಕ ಅನ್ನಪೂರ್ಣ ತಾಯಿ
ಬಸವ ತತ್ವ ಮತ್ತು ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿ ಪೂಜ್ಯ. ಶ್ರೀ. ಅಕ್ಕ ಅನ್ನಪೂರ್ಣ ತಾಯಿಯವರು. ಬೀದರದ ಹಾರೂರಗೇರಿಯ ಬಂಡೆಪ್ಪಾ ಮತ್ತು ಸೂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಎಲ್.ಎಲ್.ಬಿ.ಪದವಿಧರರಾದ ಇವರು ಕೆಲವರ್ಷ ಶ್ರೀ ಶಿವಕುಮಾರೇಶ್ವರ ಗುರುಕುಲದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಂತರ ಸರ್ಕಾರಿ ಶಿಕ್ಷಕ ಹುದ್ದೆಗೆ ಸೇರ್ಪಡೆಯಾಗಿ ನಂತರ ವೈರಾಗ್ಯ ತಾಳಿ ಶಿಕ್ಷಕ ಹುದ್ದೆ ತೊರೆದು ೧೯೮೬ರಲ್ಲಿ ಬಸವ ದಳದ ಸಂಘಟನೆ ಸೇರಿ ಬಸವ ಧರ್ಮ ಮತ್ತು ಶರಣತತ್ವ ಪ್ರಸಾರದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ `ಮಹಾ ಮಹಿಮಾ ಸಂಗನ ಬಸವಣ್ಣ, (ನಾಟಕ) ದೇವನೆಡೆಗೆ, ಸುಖ ಯಾವುದು ? ಬಸವಾಜ್ಞೆ, ಭಕ್ತ, ಇಷ್ಟ ಲಿಂಗ ಪೂಜಾ ವಿಧಾನ, ಮಹೇಶ ಸ್ಥಳ, ನಿಷ್ಪತ್ತಿ, ಮಹಿಳೆ ಲೋಕಾಯುಕ್ತವಾದಾಗ (ರೇಡಿಯೋ ನಾಟಕಗಳು) ಭಕ್ತಿ ಗೀತೆಗಳು ‘ ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು `ಶ್ರೀ ಗುರು ಬಸವೇಶ್ವರ ಪೂಜಾ ವೃತ್ತ’ ಮತ್ತು `ವಚನ ಜೀವನ’ ಎಂಬ ಕೃತಿಗಳು ಅವರು ಮರಾಠಿಗೆ ಅನುವಾದಿಸಿದ್ದಾರೆ. ಹಾಗೂ `ಬಸವ ಸಂಪದ ಭಾಗ -೧.೨. ಚನ್ನ ಸಂಪದ, ಅಕ್ಕನ ಸಂಪದ, ಪ್ರಭು ಸಂಪದ, ಮಾಚಿದೇವ, ಸಿದ್ದ, ಶಿವ ಶರಣೆಯರು, ಅಂಬಿಗರ ಚೌಡಯ್ಯ ಸಂಪದಗಳು, ಬಸವ ಸಂದೇಶ, ಲಿಂಗಾಯತ ಧರ್ಮ ಗೃಂಥ ಗುರು ವಚನ, ಯೋಗಿನಾಥ ತ್ರಿವಿಧಿ, ಗುರು ಕರುಣ ತ್ರಿವಿಧಿ, ಪ್ರಾರ್ಥನೆ, ಇಷ್ಟ ಲಿಂಗ ಪೂಜಾ ವಿಧಾನ, ಮಹಾದೇವಿಯಕ್ಕಂಗಳ ಸಮಗ್ರ ಸಾಹಿತ್ಯ, ಜನಪದರು ಕಂಡ ಶರಣರು, ಇತ್ಯಾದಿ ಕೃತಿಗಳು ಸಂಪಾದಿಸಿದ್ದಾರೆ. ಅಷ್ಟೇಯಲ್ಲದೆ `ಎದ್ದೇಳಿ ಬಂಧುಗಳೆ ಎಚ್ಚರಾಗಿ, ನಾವೇಲ್ಲ ಒಂದೇ, ಶರಣರು ಉದಿಸಿ ಬಂದ ನಾಡಲ್ಲಿ, ವಚನ ಸಾಹಿತ್ಯ ನಮ್ಮದು, ನಡೆಯಿರಿ ಸಾಗಿರಿ ಬಸವ ದಳದ ವೀರರೇ’ ಎಂಬ ಬೀದಿ ನಾಟಕಗಳು ರಚಿಸಿ ನಿರ್ದೇಶಿಸಿದ್ದಾರೆ. ಇವರು ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಆಸ್ಟ್ರೇಲಿಯಾದ ಸಿಡ್ನಿ ಅಮೆರಿಕಾದ ಕ್ಯಾಲಿಫೋರ್ನಿಯಾ ಮೊದಲಾದ ವಿದೇಶಗಳಲ್ಲಿ ಬಸವ ತತ್ವ ಪ್ರಸಾರ ಮಾಡಿದ್ದಾರೆ. ೨೦೧೧ರಲ್ಲಿ ನೀಲಮ್ಮನ ಬಳಗ ಸ್ಥಾಪಿಸಿದ ಇವರು ಪ್ರತಿ ಹುಣ್ಣಿಮೆಗೆ ಶರಣ ಸಂಗಮ, ಪ್ರತಿ ಭಾನುವಾರ ವ್ಯಕ್ತಿ ಕಲ್ಯಾಣ ಲೋಕ ಕಾರ್ಯಕ್ರಮ ನಡೆಸುವರು. ಮತ್ತು ಬೀದರದ ಪಾಪನಾಶದ ಹಿಂದುಗಡೆ ೧೦ ಎಕರೆ ಪ್ರದೇಶದಲ್ಲಿ ಬಸವಗಿರಿಯನ್ನು ಸ್ಥಾಪಿಸಿ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇವರ ಪ್ರವಚನಗಳು ರಮೇಶ ಸ್ವಾಮಿ ಕನಕಟ್ಟಾ ರವರು ೮ ಕೃತಿಗಳಲ್ಲಿ ಹೊರತಂದಿದ್ದಾರೆ. ಇವರು ೬ ಧ್ವನಿ ಸುರುಳಿಗಳು ಹೊರ ತಂದಿದ್ದು, ಅವರ ಚಿಂತನೆಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಮತ್ತು ಇವರು ತಮ್ಮ ಸೇವಾಶ್ರಮದಲ್ಲಿ ೧೯೯೮ರಲ್ಲಿ ಜಯದೇವಿ ತಾಯಿ ಲಿಗಾಡೆಯವರ ಹೆಸರಿನಲ್ಲಿ ಗ್ರಂಥಾಲಯವು ಸ್ಥಾಪಿಸಿದ್ದಾರೆ. ಮತ್ತು ೨೦೧೧ರಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ಸಾಧಕರಿಗೆ `ಗುರು ಬಸವ ಪುರಸ್ಕಾರ’ ನೀಡಿ ಗೌರವಿಸುತ್ತಿದ್ದಾರೆ. ಮತ್ತು ೨೦೧೪ರಿಂದ ವೀರಮಾತೆ ಅಕ್ಕ ನಾಗಮ್ಮ ಪ್ರಶಸ್ತಿಯು ನೀಡುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಶ್ರದ್ಧಾ ಕೇಂದ್ರ ಬಸವಗಿರಿಯಲ್ಲಿ ತಾತ್ವಿಕ ಗುರು ವಚನ ಪರುಷ ಕಟ್ಟೆಯನ್ನು ಸ್ಥಾಪಿಸಿದ ಇವರು ಬಸವ ತತ್ವ ಧಾರ್ಮಿಕ ಚಟುವಟಿಕೆಯೊಂದಿಗೆ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಕಂಟೆಪ್ಪ ಗುಮ್ಮೆ
ಕತೆ, ಕವನ, ಲೇಖನಗಳು ಬರೆದು ಪುಸ್ತಕ ಪ್ರಕಟಿಸಿದ ಕಂಟೆಪ್ಪ ಗುಮ್ಮೆಯವರು. ಬೀದರ ತಾಲೂಕಿನ ಸಿಪ್ಪಗೇರಾ ಗ್ರಾಮದ ತಿಪ್ಪಣ್ಣ ಮತ್ತು ಕಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವೀಧರರಾದ ಇವರು ಸಮಾಜ ಸೇವಕರಾಗಿ ದುಡಿಯುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯವನ್ನು ಹವ್ಯಾಸಿವಾಗಿ ಬೆಳೆಸಿಕೊಂಡು `ಬದುಕಲು ಬೇಕು ಬಂಗಾರದ ಬಾಳು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ. ಇವರು ಸಮತಾ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಅಧ್ಯಕ್ಷರಾಗಿದ್ದಾರೆ.
ನಾಗೇಂದ್ರ ದಂಡೆ
ಬAಡಾಯ ಬರಹಗಾರರಾಗಿ ಕೆಲ ಕೃತಿಗಳು ರಚಿಸಿದ ಕವಿ ಸಾಹಿತಿ ನಾಗೇಂದ್ರ ದಂಡೆ, ಬೀದರದ ಸಿದ್ರಮಪ್ಪ ಮತ್ತು ಹಿರಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಸಮಾಜ ಸೇವಕರಾಗಿ ಹಲವು ಸಾಹಿತ್ಯ ರಚನೆ ಮಾಡಿದ್ದಾರೆ. ಅವುಗಳೆಂದರೆ `ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಾವಿನ ಸುತ್ತ, `ಮತಾಂತರ ಬೌದ್ಧ ಸವಲತ್ತುಗಳು ಮತ್ತು ಭಾರತ ಸಂವಿಧಾನ, ಬೌದ್ಧ ಶಾಸನದ ರತ್ನಗಳು, ಬೋಧಿಸತ್ವ ಡಾ.ಬಾಬಾಸಾಹೇಬ ಅಂಬೇಡ್ಕರ್’ ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು `ಭೀಮನ ಮರೆತರೆ ನಿಂಗಾ, ಬುದ್ಧ ವಂದನಾ’ ಎಂಬ ಧ್ವನಿ ಸುರುಳಿಗಳು ಹೊರತಂದಿದ್ದಾರೆ. ಅಷ್ಟೇಯಲ್ಲದೆ ನೂರಾರು ಗಜಲ್ ಗಳು ಕೂಡ ರಚಿಸಿದ್ದಾರೆ.
ಡಾ.ಜಗನ್ನಾಥ ಹೆಬ್ಬಾಳೆ
ಜಾನಪದ ವಿಷಯಗಳಲ್ಲಿ ಹಲವಾರು ಪುಸ್ತಕಗಳು ಪ್ರಕಟಿಸಿದ ಹಿರಿಯ ಸಾಹಿತಿಯೆಂದರೆ ಡಾ.ಜಗನ್ನಾಥ ಹೆಬ್ಬಾಳೆ. ಇವರು ಬೀದರ ತಾಲೂಕಿನ ನಾವದಗೇರಿ ಗ್ರಾಮದ ಶಿವರಾಯ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್,ಪಿಎಚ್.ಡಿ.ಪದವಿಧರರಾದ ಇವರು ಬೀದರ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಕೆಂಪು ಮಣ್ಣಿನ ವಾಸನೆ’ (ಕವನ ಸಂಕಲನ) `ಹೈದರಾಬಾದ ಕರ್ನಾಟಕದ ಜಾತ್ರೆಗಳು ಧರಿನಾಡಿನ ಬಿಂಬ ಪ್ರತಿಬಿಂಬ, `ಧರಿನಾಡಿನ ಜನಪದ ಹಾಡುಗಳು’ `ಸತ್ತವರ ಹಾಡುಗಳು’ `ಬೀದರ ಜಿಲ್ಲೆಯ ಬುಲಾಯಿ ಹಾಡುಗಳು’ `ಓ ! ದೊರೆ ! ಬಾ ಧರೆಗೆ ‘ `ಹಳೆಗನ್ನಡ ಸಾಹಿತ್ಯ ಸಂಗ್ರಹ’ `ಜನಪದ ಕತೆಗಳ ಸಂಗ್ರಹ’ `ಆರ್.ವಿ.ಬಿಡಪ್ ಜೀವನ ಮತ್ತು ಹೋರಾಟ’ `ಧರಿನಾಡಿನ ಕಾವ್ಯ’ `ಬೀದರ ಜಿಲ್ಲೆಯ ಗ್ರಾಮ ಚರಿತೆ ಕೋಶ’ `ಜಾತ್ರೆಗಳು’ `ವೀರಭದ್ರ ಜಾತ್ರೆ’ `ಬಸವಪ್ರಭೆ’ `ಭಾಹತ್ತರ’ `ಬೀದರ ಜಿಲ್ಲೆಯ ಚಿತ್ರಕಲಾವಿದರು’ `ಜಾನಪದ ಚಿಂತನೆ’ `ಬೀದರ ಜಿಲ್ಲೆಯ ನಾಟಿ ವೈದ್ಯ ಪದ್ದತಿ’. `ಮದುವೆ ಆಗುವ ಹುಡುಗನಿಗೆ’. `ಬೀದರ ಜಿಲ್ಲೆಯ ಸಾಹಿತ್ಯಾವಲೋಕನ’ `ಅಕ್ಷರ ಪ್ರೀತಿ’ `ಶಿಖರಗನ್ನಡಿ’. ‘ಬೆಳಕಿಂಡಿ’ `ಲೋಕಶ್ರೀ’ `ಜಾನಪದ ದರ್ಪಣ’ `ಜಾನಪದ ಶಿಲೆ’ `ಸತ್ಯದ ನಿಲವ’ `ಜಾನಪದ ಸಾಹಿತ್ಯ ಚಿಂತನೆ’ `ಲೋಕ ಸಂಸ್ಕೃತಿ’ `ಜಾನಪದ ದೃಷ್ಟಿ’ ಸೇರಿದಂತೆ ೬೭ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಮತ್ತು ಗುಲಬರ್ಗಾ, ಕೊಲ್ಹಾಪುರ, ಸೊಲ್ಲಾಪುರ, ನಾಂದೇಡ, ಬೆಂಗಳೂರು,ಹAಪಿ ವಿಶ್ವವಿದ್ಯಾಲಯಗಳಿಗೆ ಪದವಿ ಪಠ್ಯ ಪುಸ್ತಕಗಳಾಗಿ, ಆಕಾರ ಗ್ರಂಥಗಳಾಗಿ ಪ್ರಕಟಗೊಂಡಿವೆ
ಇವರು ೩ ಅವದಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಭಾರತ ಸರ್ಕಾರ ಜಾನಪದ ತಜ್ಞ ಸಮಿತಿಯ ಸದಸ್ಯರಾಗಿ, ಜಾನಪದ ಅಕಾಡೆಮಿ ಸದಸ್ಯರಾಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರಾಗಿ, ಕೆಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಮಂಡಳಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದಾರೆ. ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ಮತ್ತು ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ `ಶಿಕ್ಷಕ ರತ್ನ ಪ್ರಶಸ್ತಿ, ಕಸಾಪದಿಂದ ಕನ್ನಡ ಶ್ರೀ ಪ್ರಶಸ್ತಿ, ಅಂತರಾಷ್ಟ್ರೀಯ ರಿಫಾರಮ್ಸ್ಸಂಸ್ಥೆಯಿAದ ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನಿಂದ ಡಾ.ಜಿ.ಶಂ.ಪರಮಶಿವಯ್ಯಾ ಪ್ರಶಸ್ತಿ, ಬೆಂಗಳೂರಿನಿAದ ಡಿ.ಎನ್.ಮ್ಯಾಕ್ಸ್ ಸಾಹಿತ್ಯ ಶ್ರೀ ಪ್ರಶಸ್ತಿ, ಮತ್ತು ದಕ್ಷಿಣ ಅಮೆರಿಕದ ವಿಶ್ವವಿದ್ಯಾಲಯವು ಗೌರವ ಡಿ.ಲಿಟ್.ಪದವಿ ಪಡೆದಿದ್ದಾರೆ. ಇವರು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದ ಜಾನಪದ ಸಮ್ಮೇಳನ, ವಿಚಾರ ಸಂಕಿರಣ, ಕವಿಗೊಷ್ಠಿಗಳನ್ನು ಆಯೋಜಿಸಿದ್ದಾರೆ. ಜಾನಪದ ಭಾಷಾ ಭಾವೈಕ್ಯತೆ ಸಮಾವೇಶಗಳು, ನೃತ್ತೋತ್ಸವಗಳು, ಗಡಿನಾಡು ಕನ್ನಡಿಗರ ಸಮಾವೇಶ, ಕಮ್ಮಟಗಳು ಮತ್ತು ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಗೊಳಿಸಿದ್ದಾರೆ. ಇವರ ಜೀವಮಾನ ಸಾಧನೆ ಕುರಿತು ಡಿ.ಡಿ. ಚಂದನ ವಾಹಿನಿಯಲ್ಲಿ ೩೦ ನಿಮಿಷದ ಕಾರ್ಯಕ್ರಮ ಪ್ರಸಾರಗೊಂಡಿದೆ. ಸದ್ಯ ಇವರು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಸಂಘ ಸಂಸ್ಥೆಗಳ ಅನುದಾನ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುರಲಿನಾಥ ಜಿ.ಮೇತ್ರೆ
ಆಧುನಿಕ ವಚನಕಾರರಾಗಿ ನೂರಾರು ವಚನಗಳು ಬರೆದು ಪುಸ್ತಕ ಪ್ರಕಟಿಸಿದ ವಚನಕಾರರೆಂದರೆ ಮುರಲಿನಾಥ ಜಿ.ಮೇತ್ರೆ.. ಇವರು ಬೀದರ ತಾಲೂಕಿನ ಖಾಸೆಂಪೂರ (ಸಿ) ಗ್ರಾಮದ ಶ್ರೀ ಗುಂಡಪ್ಪಾ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾದ ಇವರು ೧೯೯೮ರಲ್ಲಿ ಬೀದರದ ಬೊಪ್ಪಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಅತಿವಾಳ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ವೃತ್ತಿ ಬದುಕಿನೊಂದಿಗೆ ಅಧ್ಯಾತ್ಮಿಕ ಮತ್ತು ವೈಚಾರಿಕ ದೃಷ್ಟಿಕೋನದಿಂದ ಕೆಲ ಆಧುನಿಕ ವಚನಗಳು, ಬರೆದಿದ್ದು ಅವುಗಳು ಒಟ್ಟು ಸೇರಿಸಿ ೨೦೧೩ರಲ್ಲಿ `ಎಚ್ಚರಿಕೆಯ ವಚನಗಳು’ ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ೨೦೦೩ರಲ್ಲಿ ಬೀದರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ೨೦೨೦ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ. ವಚನ ವಿಜಯೋತ್ಸವ ಪ್ರಶಸ್ತಿ, ಕಸಾಪ ಪ್ರಶಸ್ತಿ, ಮತ್ತು ಕೃಷಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಡಾ.ಗಂಗಾAಬಿಕೆ ಪಾಟೀಲ್
ಬೀದರ ಜಿಲ್ಲೆಯ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಲೇಖನ, ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಕವಯತ್ರಿ ಡಾ.ಗಂಗಾAಬಿಕೆ ಪಾಟೀಲ್. ಇವರು ಬೀದರದ ಕಂಟೆಪ್ಪ ಮತ್ತು ಈಶ್ವರಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ.ಪದವೀಧರರಾದ ಇವರು ಬೀದರ ಅಕ್ಕ ಮಹಾದೇವಿ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಶರಣ ಸಾಹಿತ್ಯ ಮತ್ತು ಶರಣ ತತ್ವದಲ್ಲಿ ಆಸಕ್ತರಾಗಿ ೧೯೯೮ರಲ್ಲಿ `ವಚನ ಸಂಸ್ಕೃತಿ’ ಎಂಬ ಕೃತಿ ಹೊರತಂದಿದ್ದು ಅದರ ನಂತರ ಹಲವಾರು ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಕಡೆಗಳಿಂದ ಕೆಲ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಬಸವರಾಜ ಮಯೂರ
ದಲಿತ, ಬಂಡಾಯ ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಪ್ರಗತಿಪರ ಚಿಂತಕ,ಸಾಹಿತಿ ಲೇಖಕರೆಂದರೆ ಬಸವರಾಜ ಮಯೂರ. ಇವರು ಬೀದರ ತಾಲೂಕಿನ ಯಾಕತಪೂರ ಗ್ರಾಮದ ಸಂಬಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ೧೯೯೭ರಿಂದ ಪಿ.ಯು.ಉಪನ್ಯಾಸಕರಾಗಿ ಸೇವೆಗೆ ಸೇರಿ ಸದ್ಯ ಯಾದಗಿರಿ ಜಿಲ್ಲೆಯ ಬಳಿಚಕ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕೆಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳೆಂದರೆ ೨೦೦೫ರಲ್ಲಿ `ತಿಂದವರ ತೇಗು ಹಸಿದವರ ಕೂಗು’ ಎಂಬ ಕವನ ಸಂಕಲನ,೨೦೧೫ರಲ್ಲಿ `ಶಿಕ್ಷಣ ಸುಧಾರಕ ಆರ್ ಮಹಾದೇವಪ್ಪ’ ಎಂಬ ವ್ಯಕ್ತಿ ಚಿತ್ರಣ, `ವಿದ್ಯಾರ್ಥಿಗಳ ದಾರಿ ದೀಪ’ ಎಂಬ ವಿದ್ಯಾರ್ಥಿಗಳ ಮಾರ್ಗದರ್ಶಿ ಕೈಪಿಡಿ, `ಜ್ಞಾನ ಜ್ಯೋತಿ’ ಎಂಬ ವಿಮರ್ಶಾ ಕೃತಿಯು ಹೊರತಂದಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಕವನ,ಲೇಖನ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಸಾಹಿತ್ಯ ರಚನೆಯೊಂದಿಗೆ ಉತ್ತಮ ಸಂಘಟಕರು ಕೂಡ ಆಗಿರುವುದರಿಂದ ಬೀದರ ಜಿಲ್ಲಾ ಸಮನ್ವಯ ಸಮಿತಿಯ ಕಾರ್ಯದರ್ಶಿಯಾಗಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ,ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಮತ್ತು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ, ಸಂಘಟನೆ, ಮತ್ತು ಶೈಕ್ಷಣಿಕ ಸೇವೆಯನ್ನು ಕಂಡು ಕಲಬುರಗಿ ವಿಭಾಗ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ, ಯಾದಗಿರಿ ಜಿಲ್ಲಾ ಉತ್ತಮ ಕನ್ನಡ ಉಪನ್ಯಾಸಕ ಪ್ರಶಸ್ತಿ, ಬೀದರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪ್ರೊ. ಅಶೋಕ ಎ.ಬಿ.
ಕವಿ,ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡವರೆAದರೆ ಪ್ರೊ.ಅಶೋಕ ಎ.ಬಿ. ಇವರು ಬೀದರ ತಾಲೂಕಿನ ಮರಖಲ್ ಗ್ರಾಮದ ಅಂಬಣ್ಣ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೭-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವೀಧರರಾದ ಇವರು ಸಿದ್ದಾರ್ಥ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಉಪನ್ಯಾಸಕರಾದರು ಪ್ರವೃತ್ತಿಯಲ್ಲಿ ಕವಿ ಸಾಹಿತಿಯಾಗಿ ಹಲವಾರು ಕವನ ಲೇಖನಗಳನ್ನು ಬರೆದಿದ್ದು ಅವು ಅಪ್ರಕಟಿತವಾಗಿವೆ. ಮತ್ತು `ವ್ಯವಹಾರಿಕ ಪರಿಸರ ಶಾಸ್ತ್ರ’ ಎಂಬ ಅರ್ಥಶಾಸ್ತ್ರದ ಕುರಿತಾದ ಕೃತಿಯೊಂದು ರಚಿಸಿ ಪ್ರಕಟಿಸಿದ್ದಾರೆ.
ಶಂಕರ ಚೊಂಡಿ
ರAಗ ಕಲಾವಿದ ಲೇಖಕರಾದ ಶಂಕರ ಚೊಂಡಿಯವರು. ಬೀದರ ತಾಲೂಕಿನ ಚೊಂಡಿ ಗ್ರಾಮದ ಮಾಣಿಕಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೨-೬-೧೯೭೨ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ರಂಗ ಕಲಾವಿದರಾಗಿ `ಭಾರತ ಸಂಸ್ಕೃತಿ, ವರದಕ್ಷಿಣೆ ಪಿಡುಗು’ ಎಂಬ ಬೀದಿ ನಾಟಕಗಳು ರಚಿಸಿ ನಿರ್ದೇಶನ ಮಾಡಿ ಪ್ರದರ್ಶಿಸಿದ್ದಾರೆ. ಉತ್ತಮ ಕಂಠಸಿರಿಯಿAದ ಹಾಡುವ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಹಾಗೂ ಪೋಲಿಸ್ ಇಲಾಖೆಯ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಇಲಾಖೆ ಹಾಗೂ ಜನರಿಂದ ಸೈ ಎನಿಸಿಕೊಂಡಿದ್ದಾರೆ.
ಸುಮನ್ ಹೆಬ್ಬಾಳಕರ್
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಸಾಹಿತ್ಯ ರಚಿಸಿ ಕೆಲ ಕೃತಿಗಳು ರಚಿಸಿದ ಕವಯತ್ರಿಯೆಂದರೆ ಸುಮನ್ ಹೆಬ್ಬಾಳಕರ್. ಇವರು ಬೀದರದ ಚಂದ್ರಪ್ಪ ಹೆಬ್ಬಾಳಕರ್ ಮತ್ತು ಶಕುಂತಲಾ ದಂಪತಿಗಳಿಗೆ ದಿನಾಂಕ ೨೪-೧೧-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ತಂದೆ ಚಂದ್ರಪ್ಪ ಹೆಬ್ಬಾಳಕರ್ ಸಾಹಿತಿಗಳಾಗಿದ್ದರಿಂದ ಅವರ ಪ್ರಭಾವದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಪ್ರೀತಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಕಾವ್ಯ ನಿನಾದ’ ಎಂಬ ಇವರ ಇನ್ನೊಂದು ಕೃತಿಯು ಪ್ರಕಟಣೆಯ ಹಂತದಲ್ಲಿದೆ. ಕಾವ್ಯ ಸಾಹಿತ್ಯದಲ್ಲಿ ಗುರ್ತಿಸಿಕೊಂಡ ಇವರಿಗೆ ೨೦೦೮ರಲ್ಲಿ ಸುವರ್ಣ ಸಂಭ್ರಮದ ಕನ್ನಡ ರತ್ನ ಪ್ರಶಸ್ತಿ, ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ೨೦೦೯ರಲ್ಲಿ ಲೋಹಿಯಾ ಪ್ರತಿಷ್ಠಾನದ ಕಲ್ಯಾಣ ರತ್ನ ಪ್ರಶಸ್ತಿ, ಮತ್ತು ೨೦೧೪ರಲ್ಲಿ ಆದರ್ಶಿ ಉಪನ್ಯಾಸಕಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೨೦೧೨ರಲ್ಲಿ ನಡೆದ ಹೈದರಾಬಾದ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ, ಮತ್ತು ವಚನ ಸಾಹಿತ್ಯ ಸಮ್ಮೇಳನ ಸೋಲಾಪೂರದಲ್ಲಿ, ಹಾಗೂ ಅಖಿಲ ಭಾರತ ದ್ವಿತೀಯ ದಲಿತ ಸಾಹಿತ್ಯ ಸಮ್ಮೇಳನ ಬೀದರದಲ್ಲಿ ಪಾಲ್ಗೊಂಡು ಆ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿ ಸನ್ಮಾನಿತರಾಗಿದ್ದಾರೆ. ಇವರ ಬರಹಗಳು ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇತರರು ಪ್ರಕಟಿಸಿದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿಯೂ ಪ್ರಕಟವಾಗಿವೆ.
ಸುಭಾಸ ನೇಳಗೆ
ವಿಜ್ಞಾನ ಬರಹಗಾರರಾಗಿ ವಿಜ್ಞಾನ, ವೈದ್ಯ ಸಾಹಿತ್ಯ, ಪ್ರಚಲಿತ ವೈಜ್ಞಾನಿಕವಾದ ಬರಹ ಲೇಖನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸುಭಾಸ ನೇಳಗೆ. ಇವರು ಬೀದರದ ಶ್ರೀ ನಾಗನಾಥ ಮತ್ತು ರುಕ್ಮಿಣಿ ದಂಪತಿಗಳಿಗೆ ದಿನಾಂಕ ೧೭-೪-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ, (ಸಸ್ಯ ಶಾಸ್ತ್ರ) ಎಂ.ಫೀಲ್. (ಜೀವ ಶಾಸ್ತ್ರ) ಪದವಿಧರರಾದ ಇವರು ೧೯೯೪ರಿಂದ ಬೀದರದ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸುಮಾರು ೧೦ ವರ್ಷಗಳಿಂದ ಭಾಲ್ಕಿಯ ಕರಡ್ಯಾಳದ ಸಿ.ಬಿ.ಗುರುಕುಲ ವಿಜ್ಞಾನ, ಪಿ.ಯು.ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೯೯ರಲ್ಲಿ `ಸಸ್ಯ ಪ್ರಪಂಚದ ಅಧ್ಬುತಗಳು’ ೨೦೦೦ ಇಸ್ವಿಯಲ್ಲಿ `ವಿಚಿತ್ರ ಸಂಗತಿಗಳು’ ೨೦೦೬ರಲ್ಲಿ `ಅಲ್ ಫ್ರೆಡ್ ನೊಬೆಲ್ ಮತ್ತು ಪುರಸ್ಕಾರ’ ೨೦೦೯ರಲ್ಲಿ `ಬೆಳಕು ಚೆಲ್ಲುವ ಜೀವಿಗಳು’ ೨೦೧೫ ರಲ್ಲಿ `ಪರಿಸರ ಸಮಸ್ಯೆಗಳು’ ಎಂಬ ವೈಜ್ಞಾನಿಕವಾದ ಕುತೂಹಲ ಕೆರಳಿಸುವ ಕೃತಿಗಳು ಪ್ರಕಟಿಸಿದ್ದರೆ. ೧೯೯೬ರಲ್ಲಿ `ಎರಡು ಬಳ್ಳಿ ಹೂ ಹಲವು’ ೧೯೯೮ರಲ್ಲಿ `ವಿಜ್ಞಾನ ಸಾಹಿತ್ಯ’ ೧೯೯೯ರಲ್ಲಿ `ಧರಿನಾಡ ಸಿರಿ’ ೨೦೦೬ರಲ್ಲಿ `ಬಸವಪ್ರಭೆ’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೂ ೨೦೦೮ರಲ್ಲಿ `ಪ್ರಾಯೋಗಿಕ ವಿಜ್ಞಾನ ಪ್ರಾಜೆಕ್ಟ್ ಗಳು’ ಎಂಬ ಕೃತಿಯು ಇಂಗ್ಲೀಷ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಬರೆದ ಕವನ,ಲೇಖನ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ಕನ್ನಡ ಪ್ರಭ,ತುಷಾರ,ತರಂಗ, ಮಯೂರ, ಸುಧಾ,ಕರ್ಮವೀರ,ಕಸ್ತೂರಿ, ಪ್ರಜಾಮತ,ದಿಕ್ಸೂಚಿ, ಅಕ್ಷಯ ಕಣಾದ, ಅಂದು-ಇAದು ಜನಪದ,ಬಾಲ ವಿಜ್ಞಾನ, ಬೆಳಗು ಮೊದಲಾದ ಪತ್ರಿಕೆ ಆಕಾಶವಾಣಿಯಲ್ಲಿ ಪ್ರಕಟ,ಪ್ರಸಾರವಾಗಿ ಜನ ಮೆಚ್ಚುಗೆ ಗಳಿಸಿವೆ. ದಿಕ್ಸೂಚಿ ಮತ್ತು ವಾಸನ್ ಜಿಕೆ ಮಾಸಿಕಗಳಲ್ಲಿ `ವಿಜ್ಞಾನವಲೋಕನ’ `ವಿಜ್ಞಾನ ತಿರುಳು’ ಎಂಬ ಅಂಕಣಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಜ್ಞಾನ ಪರಿಷತ್ತು ಮೊದಲಾದವರು ಏರ್ಪಡಿಸಿದ ವಿಜ್ಞಾನ, ಜಾನಪದ, ವಿಮರ್ಶೆ, ವೈಜ್ಞಾನಿಕ ಕತೆ,ಇತ್ಯಾದಿ ರಾಜ್ಯ ಮಟ್ಟದ ಕಮ್ಮಟಗಳಲ್ಲಿಯು ಪಾಲ್ಗೊಂಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ೧೯೯೩ ರಲ್ಲಿ ಮುಂಬಯಿ ಅಕ್ಷಯ ಮಾಸ ಪತ್ರಿಕೆ ಏರ್ಪಡಿಸಿದ ವಿಜ್ಞಾನ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ೧೯೯೪ರಲ್ಲಿ ಧಾರವಾಡದ ವ್ಯಕ್ತಿತ್ವ ವಿಕಾಸ ವೇದಿಕೆಯವರು ಏರ್ಪಡಿಸಿದ ವೈದ್ಯ ಲೇಖನ ಸ್ಪರ್ಧೆಯಲ್ಲಿ ಬಹುಮಾನ, ೧೯೯೫ರಲ್ಲಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ಮಾರಕದವರು ಏರ್ಪಡಿಸಿದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಸೇರಿದಂತೆ ನಾಡಿನ ಹಲವಾರು ಪತ್ರಿಕೆ ಸಂಘ ಸಂಸ್ಥೆಯವರು ಏರ್ಪಡಿಸಿದ ವಿಜ್ಞಾನ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪ್ರಶಸ್ತಿ ಪುರಸ್ಕಾರಗಳು ಪಡೆದ ಇವರು ೧೯೯೧ರಲ್ಲಿ ಬೀದರ ಬಾಂಬ್ ಸ್ಪೋಟದಲ್ಲಿ ಸಿಲುಕಿ ತೀವ್ರವಾದ ಗಾಯಗೊಂಡು ಮೂರು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಾಕಷ್ಟು ನೋವುಗಳನ್ನು ಎದುರಿಸುವ ಸಂದರ್ಭದಲ್ಲಿ ತಮ್ಮ ತಮ್ಮನಿಗೆ ಕಿಡ್ನಿ ವೈಫಲ್ಯವಾದಾಗ ಧರ್ಯ ಮಾಡಿ ಒಂದು ಕಿಡ್ನಿ ದಾನ ಮಾಡಿದ ತ್ಯಾಗ ಜೀವಿಗಳಿವರು. ಆದರೂ ದೇವರು ದೊಡ್ಡವನು ಅಣ್ಣ ತಮ್ಮ ಇಬ್ಬರೂ ಆರೋಗ್ಯವಾಗಿರುವುದರಿಂದ ಈಗ ಇವರು ನೆಮ್ಮದಿಯಿಂದ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ಕಸ್ತೂರಿ ಎಸ್.ಪಟಪಳ್ಳಿ
ಉದಯೋನ್ಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಕಸ್ತೂರಿ ಎಸ್.ಪಟಪಳ್ಳಿ. ಇವರು ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಬಸವರಾಜ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಎಂ.ಫೀಲ್ .ಪದವಿಧರರಾದ ಇವರು ಬೀದರ ತಾಲೂಕಿನ ಬೆಳುರ ಗ್ರಾಮದ ಶಿವಕುಮಾರ್ ಪಟಪಳ್ಳಿ ಧರ್ಮ ಪತ್ನಿಯಾಗಿದ್ದಾರೆ. ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಮರಕುಂದಾ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ತಂತು ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಪುಸ್ತಕವು ಪ್ರಕಟಿಸಿದ್ದಾರೆ. ಇದು ಅವರ ಎಂ.ಫೀಲ್ .ಅಧ್ಯಯನದ ಕೃತಿಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ೨೦೧೮ರಲ್ಲಿ ಪ್ರಕಟಿಸಿದೆ. ಇವರ ಲೇಖನ, ಕವನಗಳು ಭಾಲ್ಕಿಯ `ಶಾಂತಿ ಕಿರಣ’ ಮಾಸಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಕೆಲ ಭಾವ ಗೀತೆಗಳು ಧ್ವನಿ ಸುರುಳಿಯಾಗಿಯು ಜನಪ್ರಿಯವಾಗಿವೆ. ಇವರಿಗೆ ೨೦೧೦ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ೨೦೧೯ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೀದರದ ರೋಟರಿ ಕ್ಲಬ್‌ಯಿಂz ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಕಾವ್ಯ ರತ್ನ, ಪ್ರಶಸ್ತಿ, ಕರ್ನಾಟಕ ಜನಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿAದ ಡಾ.ಅಂಬೇಡ್ಕರ್ ಪ್ರಶಸ್ತಿಯು ಪಡೆದಿದ್ದಾರೆ. ಇವರು ಬೀದರ ಜಿಲ್ಲಾ ಮಹಿಳಾ ಕಸಾಪ ಕಾರ್ಯಕಾರಿ ಸದಸ್ಯರಾಗಿ, ಜಿಲ್ಲಾ ವಿಜ್ಞಾನ ಪರಿಷತ್ತಿನ ಮಹಿಳಾ ನಿರ್ದೇಶಕರಾಗಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾಗಿ, ಅಖಿಲ ಭಾರತ ವಚನ ಸಾಹಿತ್ಯದ ಕೇಂದ್ರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಓಂಪ್ರಕಾಶ ದಡ್ಡೆ
ಸತ್ಯಪರ ಹೋರಾಟದ ದ್ವನಿಯಾಗಿ ಬರೆದಂತೆ ಬದುಕು ನಡೆಸುತ್ತಿರುವ ಲೇಖಕರೆಂದರೆ ಓಂಪ್ರಕಾಶ ದಡ್ಡೆ. ಇವರು ಬೀದರ ತಾಲ್ಲೂಕಿನ ಯರನಳ್ಳಿಯ ವೀರಶೇಟ್ಟಿ ಹಾಗೂ ಸಂಗಮ್ಮ ಎಂಬ ದಂಪತಿಗಳಿಗೆ ೨೦-೧೨-೧೯೭೦ರಲ್ಲಿ ಜನಿಸಿದ್ದಾರೆ. ಎಂ ಎ. ಸ್ನಾತಕೊತ್ತರ ಪದವಿಧರಾದ ಇವರು ೧೯೯೭ರಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿದ್ದ ಇವರು `ಹೆಜ್ಜೆ‘ (ಕವನ ಸಂಕಲನ) `ಮಗು ನೀ ಜ್ಞಾನಿಯಾಗು’ `ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ’ `ಮಕ್ಕಳಿಗಾಗಿ ನಾವು’ (ಮಕ್ಕಳ ಕೃತಿಗಳು) `ಬೇಮಳಖೇಡ ಇತಿಹಾಸ’ (ಐತಿಹಾಸಿಕ) `ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿ’ (ವೈಚಾರಿಕ) ೨೦೧೫ರಲ್ಲಿ `ನಾ ಕಂಡ ಮಥುರಾ’ (ಪ್ರವಾಸ ಕಥನ) `ಕವಿಗಳು ಕಂಡ ಬಸವಣ್ಣ’ (ಸಂಪಾದಿತ) ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ ಲೇಖನ ಬರಹಗಳು ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ೨೦೧೪ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿಯು ಪಡೆದಿದ್ದಾರೆ. ಮತ್ತು ಇವರು ಪಿಯು ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಇಲಾಖೆಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ, ವಿಭಾಗ ಮಟ್ಟದ ಸಂಯೋಜಕರಾಗಿ ಸೇವೆ ಸಲ್ಲಿದ್ದಾರೆ. ೧೯೯೦ರಿಂದ ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿ ಸೈ ಎನಿಸಿಕೊಂಡಿರುವ ಇವರು .೧೯೯೬ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಾಗೂ ೨೦೧೮ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ೨೦೧೬ರಲ್ಲಿ ಡಿ.ಡಿ. ಚಂದನ ವಾಹಿನಿಯ `ಬೆಳಗು’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಇವರು ೨೦೦೨ರಲ್ಲಿ ದೂರದರ್ಶನ ಏರ್ಪಡಿಸಿದ ಕವಿಗೊಷ್ಠಿಯಲ್ಲಿ ಭಾಗಿಯಾಗಿ ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಉಪನ್ಯಾಸಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಇವರ ಕುರಿತು ಡಾ.ರವೀಂದ್ರನಾಥ ನಾರಾಯಣಪುರ ಅವರು ೨೦೧೦ರಲ್ಲಿ `ಗೀತೊಪಾಸಕ ಓಂಪ್ರಕಾಶ ದಡ್ಡೆ’ ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ.
ಜಯಶ್ರೀ ಪ್ರಕಾಶ ಸುಕಾಲೆ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ ಲೇಖನ ರೂಪಕಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಜಯಶ್ರೀ ಪ್ರಕಾಶ ಸುಕಾಲೆ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಶಂಕರರಾವ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೪-೪-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಗೃಹಿಣಿಯಾಗಿ,ಸಾಹಿತಿ ಕಲಾವಿಧರಾಗಿ ಗುರ್ತಿಸಿಕೊಂಡಿದ್ದಾರೆ.
ಇವರು `ಶರಣು ಶರಣಾರ್ಥಿ’ (ಕವನಸಂಕಲನ) `ಕನ್ನಡ ಜಂಗಮ ಡಾ.ಬಸವಲಿಂಗ ಪಟ್ಟದ್ದೆವರು’ (ಚರಿತ್ರೆ) ಎಂಬ ಪುಸ್ತಕಗಳು ಪ್ರಕಟಿಸಿ `ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿ’ ಎಂಬ ಸಾಕ್ಷ್ಯಚಿತ್ರ ಸಾಹಿತ್ಯ ರಚಿಸಿದ್ದಾರೆ.
ಮಹಾಮಹಿಮ ತ್ರಿವಿಧ ದಾಸೋಹಿ ಶಿವಕುಮಾರ ಮಠಪತಿಯವರ ಜೀವನ ಚರಿತ್ರೆಯ ಕುರಿತು ಸಾಕ್ಷ್ಯ ಚಿತ್ರ, ದೃಶ್ಯವಳಿಗಳಿಂದ ಕೂಡಿದ ಚಿತ್ರ ನಿರೂಪಿಸಿ ಪ್ರದರ್ಶನ ಮಾಡಿದ್ದು, ಇದು ಗಲ್ಫ ರಾಷ್ಟ್ರ ಬಹೆರೇನ್ ನಲ್ಲಿ ಬಸವ ಜಯಂತಿಯ ಅಂಗವಾಗಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದಾರೆ. ಮತ್ತು ಅನೇಕ ಶರಣರ ರೂಪಕಗಳು ನಿರ್ದೇಶನ ಮಾಡಿದ ಇವರು ಅಕ್ಕನಾಗಮ್ಮ, ಸಿದ್ದರಾಮೇಶ್ವರ, ಗುರುಲಿಂಗ ದೇವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ಬರಹ ಕಾರ್ಯಕ್ರಮಗಳು ಬಸವಪಥ, ಮಹಾಮನೆ, ಶರಣಮಾರ್ಗ, ಬಸವ ಟಿ.ವಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಬೀದರ ಜಿಲ್ಲಾ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಶಾಮರಾವ ನೆಲವಾಡೆ
ಸಾಹಿತಿ ಪತ್ರಕರ್ತ, ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಶಾಮರಾವ ನೆಲವಾಡೆ. ಇವರು ಬೀದರದ ಗೋಪಾಲರಾವ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೩ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾಗಿದ್ದು ೨೦೧೩ರಲ್ಲಿ `ನೆನಪಾಗಿದೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ವೀರೆಂದ್ರ ಸಿಂಪಿಯವರ ಲಲಿತಾರವಿಂದ ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿ ಸದಸ್ಯರಾಗಿ, ಕಿಡಿನುಡಿ ಪತ್ರಿಕೆಯ ಸಂಪಾದಕರಾಗಿ, ಯುವ ಸಂಸ್ಕ್ರತಿ ಮತ್ತು ವಚನ ಚಂದ್ರಿಕೆ ಸಹಸಂಪಾದಕರಾಗಿ, ಚಿತ್ತಾರ ಸ್ಮರಣ ಸಂಚಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿ, ದಾಸಸಿರಿ ಸ್ಮರಣ ಸಂಚಿಕೆಯ ಸಹಸಂಪಾದಕರಾಗಿ ,ಸೇವೆ ಸಲ್ಲಿಸಿದ ಇವರು ಸಾಹಿತ್ಯ ಸಿಂಚನ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
೨೦೦೨ರಿಂದ ೨೦೦೪ರವರೆಗೆ ಬೀದರ ಕನ್ನಡ ಸಂಘದ ಜಿಲ್ಲಾ ಕಾರ್ಯದರ್ಶಿ, ೨೦೦೪ರಲ್ಲಿ ತಾಲೂಕು ಕಸಾಪ ಕಾರ್ಯಕಾರಿ ಸದಸ್ಯರಾಗಿ, ನೃಪತುಂಗ ಕನ್ನಡ ಬಳಗದ ಕಾರ್ಯದರ್ಶಿಯಾಗಿ, ೨೦೦೯ರಿಂದ ೨೦೧೩ರವರೆಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ೨೦೦೯ರಲ್ಲಿ ಕರ್ನಾಟಕ ಗಡಿಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ,೨೦೦೮ರಿಂದ ೨೦೧೦ರವರೆಗೆ ತಾಲೂಕು ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೧೯೯೨ರಲ್ಲಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಂಘದಿAದ ಸ್ವಯಂ ಸೇವಕ ಪ್ರಶಸ್ತಿ, ಜನಪ್ರಿಯ ಪ್ರಕಾಶನದಿಂದ ಸಾಹಿತ್ಯ ಸಿರಿ ಪ್ರಶಸ್ತಿ ೨೦೧೪ರಲ್ಲಿ ಮಡಿಕೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ನಾಗಮೂರ್ತಿ ಜೆ.ಪಂಚಾಳ
`ಸ್ಪೂರ್ತಿ’ ಎಂಬ ಕವನಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕರೆಂದರೆ, ನಾಗಮೂರ್ತಿ ಜೆ.ಪಾಂಚಾಳ. ಇವರು ಬೀದರ ತಾಲೂಕಿನ ಮರಕುಂದ ಗ್ರಾಮದ ಜರ್ನಾಧನ ಮತ್ತು ಬಕ್ಕಮ್ಮ ದಂಪತಿಗಳಿಗೆ ದಿನಾಂಕ ೩-೫-೧೯೭೪ ರಲ್ಲಿ ಜನಿಸಿದ್ದಾರೆ. ಇವರು ಡಿಪ್ಲೊಮಾ ಇನ್ ಮ್ಯಾಕ್ಯಾನಿಕಲ್ ಇಂಜಿನಿಯರಿAಗ್ ಪದವಿಯನ್ನು ಪಡೆದು ಸದ್ಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕತೆ ಕವನ ಲೇಖನ ಬರೆಯುವ ಗೀಳು ಬೆಳೆಸಿಕೊಂಡ ಇವರು ಸುಮಾರು ಹದಿನೆಂಟು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಕವನಸಂಕಲನ ಬರೆದು ದೂರ ಉಳಿದಿದ್ದರು. ಅವರ ಸ್ನೇಹಿತರ ಒತ್ತಾಸೆಯ ಮೆರೆಗೆ ಮತ್ತೆ ಬರವಣಿಗೆಯಲ್ಲಿ ತೊಡಗಿಸಿಕೊಂಡು, ಹಲವಾರು ಕತೆ ಕವನ, ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಕವನ, ಚುಟುಕು ಹನಿಗವನ, ಲೇಖನ,ಬರಹಗಳು ಹಲವಾರು ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬೀದರ ಜಿಲ್ಲೆಯ ವಿವಿಧ ಕನ್ನಡಪರ ಸಾಹಿತ್ಯ ಸಂಘಟನೆಯವರು ಸೇರಿದಂತೆ ಮೊದಲಾದ ಕಡೆಗಳಿಂದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಹಲವಾರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಕವಿತೆ ವಾಚನವು ಮಾಡಿದ್ದಾರೆ.
ರಶ್ಮಿ ಎಸ್.
ಕವಯತ್ರಿ ಸಾಹಿತಿ ಹಾಗೂ ಪತ್ರಕರ್ತ ಲೇಖಕಿಯೆಂದರೆ ರಶ್ಮಿ ಎಸ್. ಇವರು ಬೀದರ ನಿವಾಸಿ ಶರಣಬಸಯ್ಯಾ ಮತ್ತು ಭಾರತಿ ದಂಪತಿಗಳಿಗೆ ದಿನಾಂಕ ೪-೯-೧೯೭೮ರಲ್ಲಿ ಜನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಪ್ರಜಾವಾಣಿಯಲ್ಲಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು `ಅಂತರಾಳ’ಎAಬ ಕವನ ಸಂಕಲನ, `ಅಂಕುರ’ ಎಂಬ ಪ್ರಜಾವಾಣಿ ಅಂಕಣ ಬರಹದ ಪುಸ್ತಕ ಪ್ರಕಟಿಸಿದ್ದಾರೆ. ಪ್ರಜಾವಾಣಿಯ ಗ್ರಾಮೀಣ ವಿಭಾಗ, ಜನರಲ್ ಡೆಸ್ಕ್ ಪುರವಣಿಗಳಲ್ಲಿ ಕೆಲಸ ಮಾಡಿದ್ದಾರೆ. ಭೂಮಿಕಾ, ಶಿಕ್ಷಣ, ಕ್ಷೇಮಕುಶಲ, ಗುಲ್‌ಮೊಹರ್ ಪುರವಣಿಗಳನ್ನು ರೂಪಿಸಿ, ನಿರ್ವಹಿಸಿದ್ದು, ೨೦೧೬ರಲ್ಲಿ ಶಾಲಾ ಆವೃತ್ತಿ ‘ಸಹಪಾಠಿ’ಯನ್ನು ರೂಪಿಸಿ, ನಿರ್ವಹಿಸಿದ್ದಾರೆ. ೨೦೧೩ರಿಂದ ೨೦೧೫ರ ಮಾರ್ಚ್ವರೆಗೂ ‘ಮೃದುಲಾ’ ಎಂಬ ಹೆಸರಿನಲ್ಲಿ ‘ಮಿದುಮಾತು’ ಅಂಕಣವನ್ನು ನಿರ್ವಹಿಸಿರುತ್ತಾರೆ. ೨೦೦೭ರಿಂದ ೨೦೧೧ರವರೆಗೆ ಕಲಬುರ್ಗಿ ಬ್ಯುರೊ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು, ಗ್ರಾಮೀಣ ಪತ್ರಿಕೋದ್ಯಮ, ಅಭಿವೃದ್ಧಿಪರ ಪತ್ರಿಕೋದ್ಯಮದ ಅನುಭವವು ಹೊಂದಿದ್ದಾರೆ. ಮತ್ತು ಪತ್ರಿಕೋದ್ಯಮದ ಎಲ್ಲ ೨೦೧೮ರ ಮೇ ತಿಂಗಳಿನಿAದ ೨೦೧೯ರವರೆಗೆ ಬೆಂಗಳೂರು ಮೆಟ್ರೊ ತಂಡವನ್ನು ಮುನ್ನಡೆಸಿ. ೨೦೧೧ರಲ್ಲಿ ನಡೆದ ಬೆಳಗಾವಿಯ ೨ನೇ ವಿಶ್ವಕನ್ನಡ ಸಮ್ಮೇಳನ, ಹಾಗೂ ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಉತ್ತಮ ವರದಿಗಾರಿಕೆಯು ಮಾಡಿ ಸೈ ಎನಿಸಿಕೊಂಡಿದ್ದಾರೆ.ಮತ್ತು ೨೦೧೯ರಲ್ಲಿ ಯುವ ಸಂಸದ ರಾಜ್ಯಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿಯು ಸೇವೆ ಸಲ್ಲಿಸಿದ್ದಾರೆ, ೨೦೦೯ರಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರದಿAದ ಮಹಿಳಾ ಸಬಲೀಕರಣಕ್ಕಾಗಿ ‘ಸೂರ್ಯಮುಖಿ’ ಎಂಬ ಸರಣಿ ಕಾರ್ಯಕ್ರಮವನ್ನು ನೀಡಿದ್ದಾರೆ. ಮತ್ತು ಆಕಾಶವಾಣಿಯ ಡ್ರಾಮಾ ಬಿ. ಹೈ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಬರೆದ ಪ್ರಜಾವಾಣಿಯ ಶಿಕ್ಷಣ ಪುರವಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಳಸಿಕೊಂಡಿದ್ದಾರೆ. ಇವರು ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ಆಡಳಿತವು ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಕಲಬುರಗಿಯ ರೋಟರಿ ಕ್ಲಬ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅಂಕಣಕಾರರಾಗಿಯು ಹಲವಾರು ಲೇಖನಗಳನ್ನು ಬರೆದು ಪ್ರಕಟಿಸುತ್ತಿರುವ ಇವರು ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.
ಶೈಲಜಾ ಜಿ.ಹುಡಗೆ
ಉದಯೋನ್ಮುಖ ಕವಯತ್ರಿಯಾಗಿ ಕವನ, ಲೇಖನ ಬರಹಗಳು ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಶೈಲಜಾ ಜಿ.ಹುಡಗೆ. ಇವರು ಬೀದರದ ಅಪ್ಪಾರಾವ ಪಾಟೀಲ್ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೨೯-೧೨-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ಜ್ಞಾನಾಮೃತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸಂಸ್ಥೆಯಡಿಯಲ್ಲಿ ಚಿಟಗುಪ್ಪ ತಾಲೂಕಿನಲ್ಲಿ ವಿದ್ಯಾ ವಿಜ್ಞಾನ ಪ್ರಾಥಮಿಕ ಶಾಲೆ ಮತ್ತು `ಜ್ಞಾನ ದರ್ಶನ ಪ್ರೌಢ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೇ ಕವನ, ಹನಿಗವನ, ಲೇಖನ, ವಿಜ್ಞಾನ ಬರಹಗಳೊಂದಿಗೆ ಹಲವು ವೈಜ್ಞಾನಿಕ ಗೀತೆಗಳು ರಚಿಸುವ ಗೀಳು ಬೆಳೆಸಿಕೊಂಡ ಇವರು ೨೦೧೫ರಲ್ಲಿ `ಭಾವ ಸ್ಪಂದನ’ ೨೦೧೯ರಲ್ಲಿ `ಭಾವ ದೀಪ್ತಿ’ ಎಂಬ ಕವನಸಂಕಲನಗಳು. ‘ಅನುಭಾವ ತರಂಗ’ ಎಂಬ ಆಧುನಿಕ ವಚನ ಸಂಕಲನ, ಹಾಗೂ ‘ಶಿಕ್ಷಣ ಕಿರಣ’ ಎಂಬ ಕಿರುಹೊತ್ತಿಗೆ. (ಇದು ಮಕ್ಕಳು, ಪಾಲಕರಿಗಾಗಿ ರಚಿಸಿದ ಕೈಪಿಡಿಯಾಗಿದೆ) ಮತ್ತು ‘ಕನ್ನಡದ ಹೋರಾಟಗಾರ ಹಣಮಂತಪ್ಪ ಪಾಟೀಲ್’ ಎಂಬ ವ್ಯಕ್ತಿ ಚಿತ್ರಣದ ಪುಸ್ತಕ ಪ್ರಕಟಿಸಿದ್ದಾರೆ. ಇವರ ಲೇಖನ ವೈಜ್ಞಾನಿಕ ಬರಹಗಳು ‘ಬಾಲ ವಿಜ್ಞಾನ’ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಮತ್ತು ಬೀದರ, ಚಿಟಗುಪ್ಪದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳಲ್ಲಿ ನಿರೂಪಣೆಯೂ ಮಾಡಿ ಗಮನ ಸೆಳೆದಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ಅರುಂಧತಿ ಪ್ರಶಸ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಪಂಚಾಕ್ಷರಿ ಗವಾಯಿಗಳ ಸಂಘದಿAದ ಸಾಹಿತ್ಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಷ್ಟೇಯಲ್ಲದೆ ಇವರು ಕತೆ, ಕವನ, ಕಾದಂಬರಿ , ಲೇಖನ, ಆಧುನಿಕ ವಚನ ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯವು ನಿರಂತರವಾಗಿ ಬರೆಯುತ್ತಿದ್ದಾರೆ.
ಸಂಜೀವಕುಮಾರ ಅತಿವಾಳೆ
ವಿವಿಧ ಸಾಹಿತ್ಯಕ ಸಂಘಟರಾಗಿ ಗುರುತಿಸಿಕೊಂಡ ಕೆಲ ಪುಸ್ತಕ ಪ್ರಕಟಿಸಿದ ಸಾಹಿತಿಯೆಂದರೆ ಸಂಜೀವಕುಮಾರ ಅತಿವಾಳೆ. ಇವರು ಬೀದರ ತಾಲೂಕಿನ ಅತಿವಾಳ ಗ್ರಾಮದ ಬಕ್ಕಪ್ಪಾ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ೨೦೦೨ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಅಣದೂರವಾಡಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸಾಹಿತ್ಯ ಕ್ಷೇತ್ರದಲಿ ತುಂಬ ಆಸಕ್ತರಾಗಿರುವುದರಿಂದ ೨೦೦೯ರಲ್ಲಿ `ಸ್ವಾತಂತ್ರ‍್ಯ’ (ಕವನ ಸಂಕಲನ) ೨೦೧೦ರಲ್ಲಿ `ಪ್ರಬಂಧ ಲೋಕ’ ೨೦೧೧ರಲ್ಲಿ `ನುಡಿಕಿಡಿ’ (ಸಂಪಾದನೆ) ೨೦೧೯ರಲ್ಲಿ `ಚೌಕಟ್ಟಿನಾಚೆಯಲ್ಲಿ’ (ಲೇಖನ ಸಂಕಲನ) ಕೃತಿಗಳು ಹೊರ ತಂದಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ, ೧೫ ಸ್ಮರಣ ಸಂಚಿಕೆ, ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.ಇವರು ಜಿಲಾ,್ಲ ರಾಜ್ಯ ಮಟ್ಟದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಚಟುವಟಿಕೆಗಳನ್ನು ಮಾಡಿದ್ದಾರೆ. ಮತ್ತು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸಾಹಿತ್ಯ ಮಾಸಪತ್ರಿಕೆಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ `ಗೌರವ ಡಾಕ್ಟರೇಟ್’ ಪದವಿಯು ನೀಡಿ ಸತ್ಕಾರಿಸಿದ್ದಾರೆ. ಇವರ ಸಾಹಿತ್ಯ ಸಾಮಾಜಿಕ ಸಾಧನೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಬೀದರನಲ್ಲಿ `ಸೃಜನಶೀಲ ಸಾಂಸ್ಕೃತಿಕ-ಶೈಕ್ಷಣಿಕ ಹಾಗೂ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿ ಬಡವರಿಗೆ ಆರ್ಥಿಕ ನೆರವು ನೀಡುವ ಚಿಂತನೆಯೊAದಿಗೆ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿರುವ ಇವರು ೨೦೧೫ರಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ದೇಹದಾನವು ಮಾಡಿ ಮಾನವಿಯತೆ ಮೆರೆದಿದ್ದಾರೆ .
ಡಾ. ನಾಗಶೆಟ್ಟಿ ಪಾಟೀಲ್. ಗಾದಗಿ
ಉದಯೋನ್ಮಖ ಯುª ಬರಹಗಾರರಾಗಿ ಕೆಲ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ನಾಗಶೆಟ್ಟಿ ಪಾಟೀಲ್ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಭಗಂತರಾವ ಮತ್ತು ಪಾರ್ವತಿಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೯ರಲ್ಲಿ ಜನಿಸಿದ್ದಾರೆ. ಬಿ.ಎ .ಪದವಿ ಪಡೆದ ಇವರು ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ.
ಬಾಲ್ಯದಿಂದಲೂs ಸಾಹಿತ್ಯದಲ್ಲಿ ಆಸಕ್ತರಾದ ಇವರು `ಸಾಮ್ರಾಜ್ಯ’ `ಯಾರಿವಳು’ (ಕವನ ಸಂಕಲನಗಳು) `ಬದುಕಿನ ಸುತ್ತ ಸಮನ್ವಯ ಸರಪಳಿ’ `ಭಾನು’ `ಶಿವ ಮಹಿಮೆ’ (ಕಥಾ ಸಂಕಲನಗಳು) `ವಿಜ್ಞಾನ ಮತ್ತು ವೈಚಾರಿಕತೆ’ `ಪವಾಡಗಳು ನಿಜವೇ ?’ (ವೈಚಾರಿಕ) `ಬದುಕಿಗೊಂದು ಸ್ಪೂರ್ತಿಯ ಸೇಲೆ’ `ಜ್ಞಾನ ಪೀಠ ಪ್ರಶಸ್ತಿ ಪಡೆದ ದಿಗ್ಗಜರು ‘ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ೨೦೦೬ರಲ್ಲಿ ಜನಪ್ರಿಯ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಇಲ್ಲಿಯವರೆಗೆ ೫೧ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಧಾರವಾಡದ ಮಾನವ ಧರ್ಮ ವಚನ ಪೀಠದಿಂದ ಸುವರ್ಣ ಕಮಲ ಪ್ರಶಸ್ತಿ, ಬೆಂಗಳೂರಿನ ಸ್ಪಂದನ ಸೇವಾ ಒಕ್ಕೂಟದಿಂದ ಯುವ ಶಕ್ತಿ ಪ್ರಶಸ್ತಿ, ಯಳಂದೂರಿನ ಅಂಬಾ ಪ್ರಕಾಶನದಿಂದ ಸುವರ್ಣ ಸಿರಿ’ ಪ್ರಶಸ್ತಿಗಳು ಪಡೆದಿದ್ದಾರೆ. ಇವರಿಗೆ ೨೦೧೯ರಲ್ಲಿ ನ್ಯಾಶನಲ್ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಸದ್ಯ ಇವರು ದಾರಿ ದೀಪ ಮತ್ತು ಜನಪ್ರಿಯ ಕನ್ನಡ ಟಿವಿ ಎಂಬ ಯೂಟ್ಯೂಬ್ ಚಾನಲ್ ಗಳು ನಡೆಸುತ್ತಿದ್ದಾರೆ. ೨೦೦೬ರಿಂದ ಜನಪ್ರಿಯ ಪ್ರಕಾಶನದ ವತಿಯಿಂದ ಪ್ರತಿ ವರ್ಷ ದೀಪಾವಳಿ ಪ್ರಯುಕ್ತ ವಿವಿಧ ಸಾಹಿತ್ಯಕ ಸ್ಪರ್ಧೆಗಳನ್ನು ಏರ್ಪಡಿಸಿ ಉದಯೋನ್ಮುಖರಿಗೆ ಪ್ರೋತ್ಸಾಹಿಸುತ್ತಿದ್ದಾರೆ.
ಚಂದ್ರಕಲಾ ಜೆ.ಬಡಿಗೇರ
ಉದಯೋನ್ಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ದಾಂತದ ತಳಹದಿಯಲ್ಲಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ , ಚಂದ್ರಕಲಾ ಜೆ.ಬಡಿಗೇರ. ಇವರು ಬೀದರದ ಅರ್ಜುನರಾವ ನವಲಪೂರೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧೦-೬-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಸಮತಾ ಸೈನಿಕ ದಳದ ಕಲಬುರಗಿಯ ವಿಭಾಗಿಯ ಮಟ್ಟದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಮತಾ ಸೈನಿಕ ದಳದಲ್ಲಿ ಉಚಿತವಾಗಿ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಇವರು ಬಾಲ್ಯದಿಂದಲೂ ಬುದ್ಧ, ಬಸವ,ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಕಾಳಜಿಯನ್ನು ಹೊಂದಿದ್ದು ಆ ಮಹಾನುಭಾವರ ತತ್ವ ಸಿದ್ಧಾಂತಗಳು ಮೈಗೂಡಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ,೨೦೧೮ರಲ್ಲಿ `ಬಾಬಾಸಾಹೇಬ ಅಂಬೇಡ್ಕರವರು ಭಾರತದಲ್ಲಿನ ಜನತೆಗೆ ನೀಡಿರುವ ೨೨ ಪ್ರತಿಜ್ಞೆಗಳು’ ಎಂಬ ಪ್ರತಿಜ್ಞಾ ವಿಧಿ ಕೃತಿ, ೨೦೧೯ರಲ್ಲಿ `ಡಾ.ಬಾಬಾಸಾಹೇಬ ಅಂಬೇಡ್ಕರ್ ಮತ್ತು ಅವರ ಸಮತಾ ಸೈನಿಕ ದಳ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಡಾ.ಅಂಬೇಡ್ಕರ್ ವಿಚಾರ ಧಾರೆ ಸಾಹಿತ್ಯದ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಕವನ, ಲೇಖನ ಬರಹಗಳು ಕನ್ನಡದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಇವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಏರ್ಪಡಿಸುವ ಕನ್ನಡ ಕಾರ್ಯಕ್ರಮಗಳ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಗಿರಿಜಾ ಧರ್ಮರಡ್ಡಿ
ಹವ್ಯಾಸಿ ಬರಹಗಾರ್ತಿಯಾದ ಇವರು ಗೃಹಿಣಿಯಾಗಿದ್ದು ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯ ಒಡನಾಡಿಯಾಗಿದ್ದು ಇವರು ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು `ವಚನ ಪುಷ್ಪಾಂಜಲಿ, ಮತ್ತು `ನಾನೊಂದು ಹುಲ್ಲು ಕಡ್ಡಿಯಂದು ಉದಾಸೀನವೇಕೆ ? ‘ ಎಂಬ ವಚನ ಸಂಕಲನಗಳು ಪ್ರಕಟಿಸಿದ್ದಾರೆ.
ಜಗನ್ನಾಥ ಪನಸಾಳೆ
ಹವ್ಯಾಸಿ ಬರಹಗಾರ ಜಗನ್ನಾಥ ಪನಸಾಳೆಯವರು ಬೀದರದ ಜನವಾಡದವರು.ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಾದ ಇವರು ಸಾಹಿತಿಗಳಾಗಿದ್ದಾರೆ. ಕವನ,ಲೇಖನ, ಆಧುನಿಕ ವಚನಗಳು ರಚನೆ ಮಾಡಿದ ಇವರು `ನಾನರಿದಂತೆ ನಾನು’ ಎಂಬ ಆಧುನಿಕ ವಚನ ಕೃತಿ ರಚಿಸಿದ್ದಾರೆ. ಸದ್ಯ ಇವರು ಮಂಗಳೂರಿನಲ್ಲಿ ವಾಸವಾಗಿದ್ದಾರೆ.
ವೀಣಾ ಎಸ್.ಜಲಾದೆ
ಲೇಖಕಿ ವೀಣಾ ಎಸ್.ಜಲಾದೆಯವರು ಪಠ್ಯ ಪುಸ್ತಕ ಲೇಖಕರಾಗಿಯೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಮೂಲತ: ಬೀದರ ನಗರದ ನಿವಾಸಿಯಾದ ಶಿವಲಿಂಗಪ್ಪ ಹಾಗೂ ಪ್ರಭಾವತಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿ ಎಂ.ಎ.ಎA.ಫೀಲ್ .ಪಿ.ಎಚ್.ಡಿ. ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೨ ವರ್ಷಗಳಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳೆಂದರೆ, `ಭಾರತೀಯ ಸಮಾಜದಲ್ಲಿ ಶಿಕ್ಷಣ ಹಾಗೂ ಶಿಕ್ಷಕ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶೈಕ್ಷಣಿಕ ತಂತ್ರ ಶಾಸ್ತ್ರ, `ಭಾರತೀಯ ಸಮಾಜದಲ್ಲಿ ಶಿಕ್ಷಣ, ವಿಷಯಾಧಾರಿತ ಇತಿಹಾಸ ಬೋಧನೆ (ಪ್ರಥಮ ಸೆಮಿಸ್ಟರ್) ವಿಷಯಾಧಾರಿತ ಇತಿಹಾಸ ಮತ್ತು ಪೌರನೀತಿ ಬೋಧನೆ, ಶಿಕ್ಷಕ ಮತ್ತು ಭಾರತೀಯ ಸಮಾಜದಲ್ಲಿ ಶಿಕ್ಷಣ, ಕ್ರೀಯಾ ಸಂಶೋಧನೆ , ತತ್ವ ಶಾಸ್ತ್ರ ಮತ್ತು ಸಮಾಜಶಾಸ್ತ್ರ ಆಧಾರಿತ ಶಿಕ್ಷಣ, ವಿಷಯಾಧಾರಿತ ಬೋಧನಾ ಶಾಸ್ತ್ರ ಮತ್ತು ಸಮಾಜ ವಿಜ್ಞಾನ, ಶೈಕ್ಷಣಿಕ ತಂತ್ರ ಶಾಸ್ತ್ರ ಮತ್ತು ಸಂಘಟನೆ, ಇವು ಇವರ ಪ್ರಮುಖ ಕೃತಿಗಳಾಗಿವೆ. ಮತ್ತು ಸುಮಾರು ಹತ್ತು ಕೃತಿಗಳು ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಅವು ಗುಲ್ಬರ್ಗ, ಕರ್ನಾಟಕ ಮತ್ತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ.ಇಡಿ.ವಿದ್ಯಾರ್ಥಿಗಳಿಗೆ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪಠ್ಯ ಪುಸ್ತಕಗಳಾಗಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಸಾಧನೆಗೆ ಬೀದರ ಜಿಲ್ಲೆಯ ಆಡಳಿತ ಮಂಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿಸಲಾಗಿದೆ. ಮತ್ತು ನಾಡಿನ ಹಲವಾರು ಕಡೆಗಳಿಂದ ಉತ್ತಮ ಲೇಖಕರು ಎಂಬ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಪ್ರೇಮಾ ಹೂಗಾರ
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಪ್ರೇಮಾ ಹೂಗಾರ. ಇವರು ಬೀದರ ತಾಲೂಕಿನ ಅಷ್ಟೂರು ಗ್ರಾಮದ ನಾಗಶೆಟ್ಟಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೨-೫-೧೯೮೩ರಲ್ಲಿ ಜನಿಸಿದ್ದಾರೆ. ಡಿ.ಇಡಿ.ಬಿ.ಇಡಿ.ಎಂ.ಇಡಿ.ಎA.ಎ. ಎಂ.ಫೀಲ್.ಪದವಿಧರರಾದ ಇವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ.
ಇವರು ೨೦೧೨ರಲ್ಲಿ `ಪ್ರೇಮಾಂತರAಗ’ (ಕವನ ಸಂಕಲನ) ೨೦೧೮ರಲ್ಲಿ `ಲಾಲಿ’ (ಮಕ್ಕಳ ಕವನ ಸಂಕಲನ) ೨೦೧೬ರಲ್ಲಿ `ಪ್ರಣೀತೆ’ ೨೦೧೯ರಲ್ಲಿ `ಗಜಲ್ ಬಂಧ’ (ಗಜಲ್ ಸಂಕಲನಗಳು) `ಹಾಯ್ಕುಗಳು’ ಎಂಬ ಕೃತಿ ಪ್ರಕಟಿಸಿದ್ದಾರೆ. ೨೦೧೬ರಲ್ಲಿ `ಗಜಲ್ ಕೂಹೂ ಕೂಹೂ’ ಎಂಬ ಧ್ವನಿ ಸುರುಳಿಯು ಬಿಡುಗಡೆಯಾಗಿದೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ಸೇಡಂದ ಮುನ್ನೂರು ಪ್ರತಿಷ್ಠಾನದ ವತಿಯಿಂದ ಅಮ್ಮ ಪ್ರಶಸ್ತಿ, ಮೇದಕ್ ನಿಂದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ಬೆಂಗಳೂರಿನಿAದ ಅಡ್ವೈಸರ್ ಪತ್ರಿಕಾ ಪ್ರಶಸ್ತಿ, ಧಾರವಾಡದಿಂದ ರತ್ನಮ್ಮ ಹೆಗಡೆ ಪ್ರಶಸ್ತಿ, ಮಲ್ಲೇಪುರಂ ಪ್ರತಿಷ್ಠಾನದ ವತಿಯಿಂದ ರಮಾಬಾಯಿ ಪ್ರಶಸ್ತಿ, ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಸಂಸ್ಥೆಯಿAದ ದೇವನಾಂಪ್ರಿಯ ಪ್ರಶಸ್ತಿ, ಗದಗನಿಂದ ಇವರ ಸಮಗ್ರ ಸಾಹಿತ್ಯ ಸೇವೆಗೆ ನಿರಂತರ ಕಾವ್ಯ ಪುರಸ್ಕಾರ ಲಭಿಸಿದೆ. ಹಾಯ್ಕುಗಳು ಕೃತಿಗೆ ಪಾಳಾದಿಂದ ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಬೀದರ ಜಿಲ್ಲಾ ಯುವ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಗೌರವಿಸಲಾಗಿದೆ. ಪುಷ್ಪಾ ದೀಪಿಕಾ ಮಾಸ ಪತ್ರಿಕೆಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ ಇವರು ಕಲಬುರ್ಗಿಯ ಸಾಹಿತ್ಯ ಸಾರಥಿ ಮಾಸ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಮಹಾದೇವಿ ಹೆಬ್ಬಾಳೆ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕಗಳು ಪ್ರಕಟಿಸಿದ ಲೇಖಕಿಯೆಂದರೆ ಡಾ.ಮಹಾದೇವಿ ಹೆಬ್ಬಾಳೆ. ಇವರು ಬೀದರ ತಾಲೂಕಿನ ನಾವದಗೇರಿ ಗ್ರಾಮದ ಬಸವರಾಜ ಹೆಬ್ಬಾಳೆ ಮತ್ತು ಗುಂಡಮ್ಮಾ ದಂಪತಿಗಳಿಗೆ ದಿನಾಂಕ ೪-೩-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎಡ್.ಎಂ.ಎ. ಎಂ.ಫಿಲ್. ಪಿ.ಹೆಚ್.ಡಿ. ಪದವಿಧರರಾದ ಇವರು ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಹುಮನಾಬಾದನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೧ರಲ್ಲಿ `ಬೀದರ್ ಜಿಲ್ಲಾ ದೇವರೊತ್ಸವಗಳು ’ ಸಂಶೋಧನಾ ಕೃತಿ ಮತ್ತು `ಆಧುನಿಕ ಕವಿತೆಗಳ ಸಂಗ್ರಹ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಆಧುನಿಕ ಕವಿತೆಗಳ ಸಂಗ್ರಹ ಪುಸ್ತಕವು ಗುಲ್ಬರ್ಗ ವಿಶ್ವವಿದ್ಯಾಲಯ ಬಿ.ಎಸಿ.ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿದೆ. ಕಸಾಪ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕೆಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳ ಪುಸ್ತಕಗಳಲ್ಲಿ ಇವರ ಮೂವತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟಗೊಂಡಿವೆ. ಮತ್ತು ವಿವಿಧ ವಿಶ್ವವಿದ್ಯಾಲಯ ಮತ್ತು ಸಂಘ-ಸAಸ್ಥೆಗಳು ಹಮ್ಮಿಕೊಂಡಿದ್ದ ಜಿಲ್ಲಾ, ರಾಜ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಹಲವಾರು ಪ್ರಬಂಧ ಮಂಡಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಪರೀಕ್ಷಾ ಮಂಡಳಿ ಹಾಗೂ ಮೌಲ್ಯಮಾಪನ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ `ಗ್ರಾಮ ಚರಿತ್ರೆ ಕೋಶ ‘ ಸಂಶೋಧನಾ ಯೋಜನೆಯಲ್ಲಿ ಹುಮನಾಬಾದ ತಾಲೂಕಿನ ಕ್ಷೇತ್ರ ತಜ್ಞ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರಿಗೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ `ಪಾರ್ತಿಸುಬ್ಬ’ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನಿಂದ ಅಣ್ಣಾ ಹಜಾರೆ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬಿ.ಎಂ.ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಿದ್ದಮ್ಮ ಸಂಗ್ರಾಮ ಬಸವಣ್ಣನೋರ್
ಆಧುನಿಕ ಸಾಹಿತ್ಯದ ಪ್ರಕಾರಗಳಾದ ಕತೆ, ಕವನ, ಚುಟುಕು, ಹನಿಗವನ, ಲೇಖನಗಳು ಬರೆದು ಪುಸ್ತಕ ಪ್ರಕಟಿಸಿದ ಉದಯೋನ್ಮುಖ ಕವಯತ್ರಿಯೆಂದರೆ ಸಿದ್ದಮ್ಮ ಸಂಗ್ರಾಮ ಬಸವಣ್ಞನೋರ್. ಇವರು ಚಿಂಚೋಳಿ ತಾಲೂನ ಚಂದಾಪೂರ ಗ್ರಾಮದ ಶರಣಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೨೭-೧೧-೧೯೮೬ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್ ಪದವಿಧರರಾಗಿರುವ ಇವರು ಬೀದರ ಚಿಟ್ಟಾವಾಡಿಯ ಸಂಗ್ರಾಮ ಅವರ ಧರ್ಮಪತ್ನಿಯಾಗಿದ್ದು. ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ ಕತೆ ಕವನ ಲೇಖನ ಚುಟುಕು ಪ್ರಬಂಧ, ಲಲಿತ ಪ್ರಬಂಧ ಕಾದಂಬರಿ ನಾಟಕ ರಚನೆಯಂತಹ ಬರವಣಿಗೆಯಲ್ಲಿ ತೊಡಗಿದ್ದಾರೆ. ಮತ್ತು `ಆಶಾ ದೀವಿಗೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ವಿವಿಧ ದಿನಪತ್ರಿಕೆಗಳಲ್ಲಿ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಇವರಿಗೆ ಕಲಬುರಗಿ ಮತ್ತು ಬೀದರ ಜಿಲ್ಲೆಯ ವಿವಿಧ ಸಾಹಿತ್ಯಕ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಆದ್ದರಿಂದ ಇವರು ಬೀದರ ಜಿಲ್ಲೆಯಲ್ಲಿ ನಡೆಯುವವ ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರು ಈಗಾಗಲೇ ಹಲವಾರು ಪುಸ್ತಕಗಳನ್ನು ಪ್ರಕಟಿಸುವ ಹಂತದಲ್ಲಿ ಇದ್ದು ಬರವಣಿಗೆಯನ್ನು ಮುಂದುವರೆಸಿದ್ದಾರೆ.
ವೀರಶೇಟ್ಟಿ ಸಂಗ್ರಾಮ್
`ವಿ.ಎಸ್.ಕೆ.’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಯುವಕವಿ ಎಂದರೆ ವೀರಶೇಟ್ಟಿ ಸಂಗ್ರಾಮ್. ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೩-೫-೧೯೮೯ ರಲ್ಲಿ ಜನಿಸಿದ್ದಾರೆ. ಬಿ.ಕಾಂ,ಎA.ಬಿ.ಎ ಪದವಿಧರರಾದ ಇವರು ಬೆಂಗಳೂರಿನ ಎಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೮ರಲ್ಲಿ `ಮೊದಲ ಹೆಜ್ಜೆ’ ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧನಸಹಾಯವು ಲಭಿಸಿದೆ. ಇವರು ಕತೆ, ಕವನ, ಲೇಖನಗಳನ್ನು ಬರೆಯುವುದರೊಂದಿಗೆ ೨೦೧೭ರಲ್ಲಿ ಸಂಗ್ರಾಮ ಎಜುಕೇಶನಲ್ ಟ್ರಸ್ಟ್ (ರಿ) ಒಂದನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇಯಲ್ಲದೆ ಕರ್ನಾಟಕದ ಧಾರವಾಡ, ಬೆಂಗಳೂರು, ಬೀದರ ಮೊದಲಾದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿ ನಿರಂತರವಾಗಿ ತಮ್ಮ ಸಾಹಿತ್ಯ ರಚನೆಯು ಮುಂದುವರೆಸಿದ್ದಾರೆ.
ವಿಜಯಲಕ್ಷ್ಮಿ ಗೌತಮಕರ್
ಇತ್ತಿಚಿನ ದಿನಗಳಲ್ಲಿ ಕಾವ್ಯ ರಚನೆಯಲ್ಲಿ ತೊಡಗಿ ಹಲವಾರು ಸಭೆ ಸಮಾರಂಭದಲ್ಲಿ, ದಿನಪತ್ರಿಕೆಗಳಲ್ಲಿ ಹಾಗೂ ವಿವಿಧ ಮಾಸಪತ್ರಿಕೆ ಮತ್ತು ಇತರರು ಪ್ರಕಟಿಸಿದ ಪುಸ್ತಕಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಕವಯತ್ರಿಯಾಗಿ ಗುರುತಿಸಿಕೊಂಡ ಲೇಖಕಿಯೆಂದರೆ ವಿಜಯಲಕ್ಷ್ಮಿ ಗೌತಮಕರ್. ಇವರು ಬೀದರ ತಾಲೂಕಿನ ಅಲಿಯಂಬರ ಗ್ರಾಮದ ಶಿವರಾಜ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೧೨-೧೦-೧೯೯೦ ರಲ್ಲಿ ಜನಿಸಿದ್ದಾರೆ. ಡಿ.ಎಡ್ ಶಿಕ್ಷಕರ ತರಬೇತಿ ಕೊರ್ಸು ಮುಗಿಸಿ ಬಿ.ಎ.ಪದವಿಯೊಂದಿಗೆ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿ `ಮನದಾಳದ ಮಿಂಚು’ ಎಂಬ ಒಂದು ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬೀದರ ಜಿಲ್ಲೆಯಾದ್ಯಂತ ಹೊಬಳಿ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿ ಗೊಷ್ಠಿಯಲ್ಲಿ ಪಾಲ್ಗೊಂಡು ಕವನ ಮಾಚನ ಮಾಡಿದ್ದಾರೆ. ಇವರ ಕವನ ಬರಹಗಳು ರಾಜ್ಯಮಟ್ಟದ ಮತ್ತು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಸಂಘ ಸಂಸ್ಥೆಯವರಿAದ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರ ನಗರದ ನಾಗವಂಶ ಕೋ ಆಪರೇಟಿವ್ ಬ್ಯಾಂಕನ ಅಧ್ಯಕ್ಷರಾಗಿ ಬರವಣಿಗೆ ಮುಂದುವರೆಸಿದ್ದಾರೆ.
ರಾಜಹAಸ
ಬೀದರ ಜಿಲ್ಲೆಯ ಯುವ ಉದಯೋನ್ಮುಖ ಬರಹಗಾರರ ಬಳಗದಲ್ಲಿ ಎಲೆಮರೆಯ ಕಾಯಿಯಂತೆ ಉಳಿದು ಕವನ, ಲೇಖನ, ಚುಟುಕು, ಮೊದಲಾದ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಸೃಜನಶೀಲ ಸಾಹಿತಿಯೆಂದರೆ ರಾಜಹಂಸ. ಇವರು ಬೀದರ ತಾಲೂಕಿನ ಕುತ್ತಾಬಾದ ಗ್ರಾಮದ ಜೀವನ್ ಮತ್ತು ಅನೀತಾ ದಂಪತಿಗಳಿಗೆ ದಿನಾಂಕ ೧೬-೧-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎ.ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಸದ್ಯ ಚಲನಚಿತ್ರ ನಟ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿರುವುದರಿಂದ ಕತೆ, ಕವನ, ಲೇಖನ,ಚುಟುಕು, ಹನಿಗವನ ಮೊದಲಾದವು ರಚಿಸಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೨೦೧೨ರಲ್ಲಿ `ಬೆಳದಿಂಗಳ ಚಂದ್ರಮ’ ಎಂಬ ಕವನ ಸಂಕಲನ, ೨೦೧೪ರಲ್ಲಿ `ಕಾವ್ಯ ಕಡಲ ಮುತ್ತುಗಳು’ ೨೦೧೫ರಲ್ಲಿ `ಚಂದನ ಕಸ್ತೂರಿ’ ೨೦೧೬ರಲ್ಲಿ `ಜೇನ ಹನಿಗಳು’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರು ಜೀವನ ಪ್ರಕಾಶನ ಚಿಕ್ಕಬಳ್ಳಾಪುರದ ಪ್ರಕಾಶಕರಾಗಿ, ರಾಜ್ಯ ಮಟ್ಟದ ಯುಗಾದಿ, ದಸರಾ ಕಾವ್ಯ ಸ್ಪರ್ಧೆಗಳ ಆಯೋಜನೆಯು ಮಾಡುತ್ತಾರೆ. ಬೀದರದ ಸವಿಗನ್ನಡ ಸಾಹಿತ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಾವು ಬರೆದು ಪುಸ್ತಕ ಪ್ರಕಟಿಸುವುದರೊಂದಿಗೆ ಇತರ ಉದಯೋನ್ಮುಖ ಬರಹಗಾರರ ಪುಸ್ತಕಗಳು ಪ್ರಕಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಕಪಿಲ ಹುಮನಾಬಾದೆ.
ಬೀದರ ಜಿಲ್ಲೆಯ ಹೊಸ ತಲೆಮಾರಿನ ಯುವ ಸಾಹಿತಿಗಳಲ್ಲಿ ಒಬ್ಬರಾಗಿ, ಕತೆ, ಕಾದಂಬರಿ, ಕವನ, ವಿಮರ್ಶೆ,ಲೇಖನ ಮೊದಲಾದವು ಬರೆದ ಲೇಖಕರೆಂದರೆ ಕಪಿಲ ಹುಮನಾಬಾದೆ. ಇವರು ಬೀದರ ತಾಲೂಕಿನ ನೌಬಾದ ಹತ್ತಿರದ ಅಲಿಯಾಬಾದ್ ಗ್ರಾಮದ ಪ್ರಭು ಮತ್ತು ಬೇಬಾವತಿ ದಂಪತಿಗಳಿಗೆ ದಿನಾಂಕ ೨೫-೧-೧೯೯೬ರಲ್ಲಿ ಜನಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎ. ಅರ್ಥಶಾಸ್ತ್ರ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಇವರು ಬಾಲ್ಯದಿಂದಲೂ ಕತೆ, ಕಾದಂಬರಿ,ಕವನ,ಲೇಖನ ಸಾಹಿತ್ಯ ದಲ್ಲಿ ಆಸಕ್ತರಾಗಿ ೨೦೧೯ರಲ್ಲಿ `ಹಾಣಾದಿ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕತೆ,ಕವನ, ವಿಮರ್ಶಾ ಲೇಖನಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಮಯೂರ, ಸುಧಾ,ಹೊಸತು ಕೆಂಡ ಸಂಪಿಗೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೮ರಲ್ಲಿ ಬೆಂಗಳೂರಿನ ಜಯಲಕ್ಷ್ಮಿ ಪಾಟೀಲ್ ಅವರ `ಈ ಹೊತ್ತಿಗೆ’ ಕಥಾ ಬಹುಮಾನ ಮತ್ತು ವಿಜಯ ಕರ್ನಾಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಟಾಪ್ ೨೫ ಕತೆಗಳಲ್ಲಿ ಇವರ `ಬಾಗಿಲು’ ಎಂಬ ಕತೆ ೫ನೇ ಸ್ಥಾನ ಪಡೆದು ಪುಸ್ತಕ ರೂಪದಲ್ಲಿ ಮುದ್ರಣಗೊಂಡಿದೆ. ಹಾಗೂ ೨೦೨೦ ರ ಪ್ರಜಾವಾಣಿ ಪತ್ರಿಕೆಯ ಯುವ ಕಾದಂಬರಿಕಾರ ಸಾಧಕ ಪ್ರಶಸ್ತಿ , ೨೦೨೦ರಲ್ಲಿ `ಹಾಣಾದಿ’ ಕಾದಂಬರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಯು ಲಭೀಸಿದೆ.
ರಾಮಾ ಪವಾರ
ಚಿಕ್ಕ ವಯಸ್ಸಿನಲ್ಲಿಯೇ ಕವಿತೆಗಳು ಬರೆದು ಪುಸ್ತಕ ಪ್ರಕಟಿಸಿದ ಉದಯೋನ್ಮುಖ ಯುವ ಕವಿಯೆಂದರೆ ರಾಮಾ ಪವಾರ. ಇವರ ನಿಜನಾಮ ರಾಜು ತಂದೆ ಮಾರುತಿ ಪವಾರ ಎಂದಾಗಿದೆ. ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಮಾರುತಿ ಮತ್ತು ರಂಗಾಬಾಯಿ ದಂಪತಿಗಳಿಗೆ ದಿನಾಂಕ ೨-೪-೨೦೦೧ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಅಭ್ಯಾರ್ಥಿಯಾಗಿರುವ ಇವರು ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ `ಅಂಕುರ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಎಳವೆ ಕವಿ ಬಾಲ ರವಿ’ `ವಸಂತಗಾನ’ ‘ಹೂವಿಗೆ ಬಿದ್ದ ಸುಂದರ ಕನಸ್ಸು’ ಎಂಬ ಕವನ, ಹನಿಗವನ ಸಂಕಲನಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರು ಬಾಲ್ಯದಲ್ಲಿಯೆ ಪುಸ್ತಕ ಪ್ರಕಟಿದರಿಂದ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಬಾಲ ಪ್ರತಿಭಾ ರತ್ನ ಪ್ರಶಸ್ತಿ, ಕಲಬುರಗಿಯ ವಿಶ್ವ ಜ್ಯೋತಿ ಪ್ರತಿಷ್ಠಾನದವರು ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆದಲ್ಲಿ ಪೂರ್ತಿ ಅಂಕ ಗಳಿಸಿದ್ದರಿಂದ ಅಂಕವೀರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ರಾಯಚೂರಿನ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಇವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರು ಕೂಡ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಕಷ್ಟು ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಭಾಲ್ಕಿ ತಾಲೂಕಾ ಲೇಖಕರು
ಸಂಗಪ್ಪಾ ಬಿರಾದಾರ
ಧಾರ್ಮಿಕ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಆಧುನಿಕ ವಚನ, ಭಜನೆ ಪದ ಮತ್ತು ಕಿರುನಾಟಕ ಬರೆದು ಎಲೆ ಮರೆಯ ಕಾಯಿಯಂತೆ ಉಳಿದಿರುವ ಹಿರಿಯ ಸಾಹಿತಿಯೆಂದರೆ ಸಂಗಪ್ಪಾ ಬಿರಾದಾರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾಪೂರ ಗ್ರಾಮದ ಶರಣಪ್ಪಾ ಬಿರಾದಾರ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೮-೭-೧೯೩೭ರಲ್ಲಿ ಜನಿಸಿದ್ದಾರೆ. ೪ನೇ ತರಗತಿಯವರೆಗೆ ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ೫ನೇ ತರಗತಿಯನ್ನು ಕನ್ನಡದಲ್ಲಿ ಅಧ್ಯಯನ ಮಾಡಿ ಮುಂದೆ ಕಲಿಯಲಾಗದೆ ಸ್ವಯಂ ವೃತ್ತಿಯಲ್ಲಿ ತೊಡಗಿ, ಸಾಹಿತ್ಯದ ಆಸಕ್ತಿಯನ್ನು ಮೂಡಿಸಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, `ಶ್ರೀ ಮಹಬೂಬ ಮಹಾನಂದ ಪ್ರಭುಗಳು’ ಎಂಬ ಜೀವನ ಚರಿತ್ರೆ. `ಮಾನವ ಧರ್ಮ’ ಎಂಬ ಕಿರುನಾಟಕ. `ನಮ್ಮೂರು ಡೊಣಗಾಪೂರ’ ಎಂಬ ಗ್ರಾಮ ಚರಿತೆ. `ರಂಭಾಪುರಿ ಪ್ರಿಯ ಶ್ರೀ ಗುರು ರಾಚೋಟೆಶ್ವರ ವಚನಾಂಕಿತ ವಚನಗಳು’ ಎಂಬ ಆಧುನಿಕ ವಚನ ಸಂಕಲನ ಹಾಗೂ `ಭಜನಾ ಪದಗಳು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಇವರು ೧೯೬೮ರಿಂದ ೧೯೮೨ರವರೆಗೆ ಮಂಡಲ ಪಂಚಾಯತ್ ಉಪಾಧ್ಯಕ್ಷರಾಗಿ, ೧೯೮೭ರಿಂದ ೧೯೯೨ರವರೆಗೆ ಪ್ರಧಾನರಾಗಿ ಸೇವೆ ಸಲ್ಲಿಸಿ, ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಾಗೂ ಹುಟ್ಟೂರಿನ ಡೋಣೇಶ್ವರ ದೇವಸ್ಥಾನ ಸಂಸ್ಥೆಯ ಕಾರ್ಯದರ್ಶಿಯಾಗಿ,ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಅಷ್ಟೇಯಲ್ಲದೆ ರಂಗ ಕಲಾವಿದರಾಗಿ, ಸಂಗೀತಗಾರರಾಗಿಯು ಹೆಸರುವಾಸಿಯಾಗಿದ್ದಾರೆ. ಇವರ ಕಲೆ, ಸಾಹಿತ್ಯ, ಸಂಗೀತ ಸಾಧನೆಗೆಯನ್ನು ಕಂಡು ೨೦೧೦ ರಲ್ಲಿ ಡೊಣಗಾಪೂರ ಗ್ರಾಮದಲ್ಲಿ ನಡೆದ ಭಾಲ್ಕಿ ತಾಲೂಕಿನ ದ್ವಿತೀಯ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಇವರಿಗೆ ಉತ್ತಮ ಮಂಡಲ ಪಂಚಾಯತ್ ಪ್ರಶಸ್ತಿ, ಹಾಗೂ ತಾಲೂಕು, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿವೆ.
೧೯೯೩-೯೪ರಲ್ಲಿ ಡೋಣೇಶ್ವರ ಶಿಕ್ಷಣ ಸಂಸ್ಥೆಯೊAದು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ರಾಚೋಟೆ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯೊಂದು ತೆರದು ೮೩ನೇ ಇಳಿವಯಸ್ಸಿನಲ್ಲೂ ಗ್ರಾಮ ಶಿಕ್ಷಣಕ್ಕಾಗಿ ಶ್ರಮಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಜಿ.ಬಿ.ವಿಸಾಜಿ
ಹಿರಿಯ ಸಾಹಿತಿ ಜಿ.ಬಿ.ವಿಸಾಜಿ. ಅವರ ಪೂರ್ಣನಾಮ ಗುರುಲಿಂಗಪ್ಪಾ ಭೀಮರಾವ ವಿಸಾಜಿ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಭೀಮರಾವ ಮತ್ತು ಶಿವಗಂಗಾದೇವಿ ದಂಪತಿಗಳಿಗೆ ದಿನಾಂಕ ೫-೧-೧೯೪೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ೧೯೬೮ರಿಂದ ಭಾಲ್ಕಿಯ ಚನ್ನಬಸವೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಕೆಲಕಾಲ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ವರದಿಗಾರರಾಗಿ, ಶಾಂತಿ ಕಿರಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರು `ಮುಂಜಾವು’ ‘ಮುಂಜಾವಿನಿAದ ಮುಸ್ಸಂಜೆವರೆಗೆ’ ಎಂಬ ಕವನ ಸಂಕಲನಗಳು. `ಅನಂತ ಸಂಗಮ’ ಎಂಬ ಕಥಾಸಂಕಲನ, `ಸಾಹಿತ್ಯಾವಲೋಕನ’ `ಭಾವ ಬಿಂಬ’ `ಸಾಲು ದೀಪ’ ಎಂಬ ಪ್ರಬಂಧ ಸಂಕಲನಗಳು. `ಚಿಂತನ ದೀಪಿಕೆ’. `ಬೆಳಕಿನೆಡೆಗೆ’ ಎಂಬ ರೇಡಿಯೋ ಚಿಂತನಗಳು, `ಉದಗಿರ ಸಂಗ್ರಮಪ್ಪನವರು’ ‘ಶ್ರೀ ಚನ್ನಬಸವ ಪಟ್ಟದ್ದೆವರು’ `ಕೇಶವರಾವ ನಿಟ್ಟೂರಕರ್’ `ಉರಿಲಿಂಗಪೆದ್ದಿ’ `ಹರಿಹರ’ `ಡಾ.ಚನ್ನಬಸವ ಪಟ್ಟದ್ದೆವರು’ `ಕಾಶಿರಾಯ ದೇಶಮುಖ’ `ಪೂಜ್ಯ ಚನ್ನಬಸವ ಪಟ್ಟದ್ದೆವರು’ ಎಂಬ ವ್ಯಕ್ತಿ ಚಿತ್ರಗಳು, `ನೆಲದ ನುಡಿ’ `ಹರಿಹರ ದೇವನ ರಗಳೆಗಳು’ `ಚೆಂಬೆಳಕು’. `ಕೊಳ್ಳುರು ಹುಸೆನಾ ಸಾಹೇಬರು’ `ಅಲ್ಲಮಪ್ರಭು ದೇವರ ವಚನಗಳು’ `ವಚನ ಸಂಪದ’ ಎಂಬ ಸಂಪಾದನೆ, `ಭಾಲ್ಕಿ ತಾಲೂಕು ದರ್ಶನ’ `ಹೀರೆಮಠ ಸಂಸ್ಥಾನ ಭಾಲ್ಕಿ’ ಎಂಬ ಪರಿಚಯಾತ್ಮಕ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಹರಿಹರ ದೇವನ ನಾಲ್ಕು ರಗಳೆಗಳು’ ಕೃತಿ ೧೯೯೨ರಿಂದ ೧೯೯೫ ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ.ಎ.ತೃತೀಯ ವಿದ್ಯಾರ್ಥಿಗಳಿಗೆ ಮತ್ತು `ಚನ್ನಬಸವ ಪಟ್ಟದ್ದೆವರು’ ಎಂಬ ಕೃತಿ ನಾಂದೇಡ್‌ದ ಎಸ್.ಆರ್.ಟಿ. ಮರಾಠವಾಡ ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಅಭ್ಯಾರ್ಥಿಗಳಿಗೆ ೨೦೦೦ ಇಸ್ವಿಯಿಂದ ೨೦೧೦ ರವರೆಗೆ ಪಠ್ಯಪುಸ್ತಕವಾಗಿದ್ದವು. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೧೯೮೬ರಲ್ಲಿ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’ ಭಾಲ್ಕಿ ಶ್ರೀ ಮಠದ ಪ್ರಶಸ್ತಿಗಳು ಲಭೀಸಿವೆ. ಮತ್ತು ಇವರಿಗೆ ೧೯೯೩ರಲ್ಲಿ ಬಸವಕಲ್ಯಾಣ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಭಾಲ್ಕಿ ಕಸಾಪ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಬೆಂಗಳೂರು ಜಾನಪದ ಸಮೀಕ್ಷೆ ಉಪಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಬಾಬುರಾವ ಜಾಧವ
ಕವಿ ಸಾಹಿತಿ ಲೇಖಕರಾದ ಬಾಬುರಾವ ಜಾಧವ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾಪೂರ ಗ್ರಾಮದ ಮರೆಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨-೨-೧೯೪೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಧರ್ಮ ಜ್ಯೋತಿ, ಜನ ಜಾಗೃತಿ’ ಎಂಬ ಕವನ ಸಂಕಲನಗಳು ಮತ್ತು `ಮಹಾ ಮಾನವ ಬುದ್ಧ ಚರಿತ್ರೆ’ ಎಂಬ ಕೃತಿಗಳು ರಚಿಸಿದ್ದಾರೆ. ಇವರು ಉತ್ತಮ ಸಂಗೀತ ಕಲಾವಿದ ಹಾಗೂ ಗಾಯಕರಾಗಿದ್ದರು.
ಶರಣಯ್ಯಾ ವಿ.ಮಠಪತಿ
ಹಿರಿಯ ತಲೆಮಾರಿನ ಲೇಖಕರಲ್ಲಿ ಒಬ್ಬರಾಗಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಸಾಹಿತಿಯೆಂದರೆ ಶರಣಯ್ಯಾ ವಿ.ಮಠಪತಿ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದ ವಿಶ್ವನಾಥಯ್ಯಾ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ ೧೨-೧೦-೧೯೪೭ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ೧೯೭೨ರಲ್ಲಿ ಭಾಲ್ಕಿಯ ಸತ್ಯನೀಕೇತನ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆಗೆ ಸೇರಿ ೧೯೮೬ರಲ್ಲಿ ಬಡ್ತಿ ಹೊಂದಿ ಸತ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತರಾಗಿದ್ದಾರೆ.
ಇವರು `ಪಡೆದ ಭೂಮಿ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಮತ್ತು ‘ಪಶ್ಚಾತ್ತಾಪ’ ಎಂಬ ಕಿರುನಾಟಕ, ‘ಆಧುನಿಕ ವಚನಗಳು’ ‘ಭಾಲ್ಕಿ ದೇವಾಲಯಗಳು’ ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ‘ಓಂ ಭಕ್ತಿ ಗುಡ್ಡದ ಯಲದಗುಂಡಿ ಪರಮೇಶ್ವರಾ ! ‘ ಎಂಬ ವಚನಾಂಕಿತದಿAದ ಆಧುನಿಕ ವಚನಗಳನ್ನು ಬರೆದಿದ್ದಾರೆ. ೨೦೦೨ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಮತ್ತು ೧೯೭೫ರಲ್ಲಿ ಬೆಂಗಳೂರು ಕಸಾಪ ಬರಹಗಾರರ ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಇವರಿಗೆ ೨೦೧೨ರಲ್ಲಿ ಬಸವಕಲ್ಯಾಣ ತಾಲೂಕಿನ ಯಲದಗುಂಡಿಯಲ್ಲಿ ನಡೆದ ಕೊಹಿನೂರು ವಲಯ ಮಟ್ಟದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ.
ಪ್ರಯಾಗ ಅ.ಎರೋಳ್ಕರ್
ಕವಯತ್ರಿ ಪ್ರಯಾಗ ಎರೋಳ್ಕರ ಇವರು ಬೀದರ ಜಿಲ್ಲೆ ಭಾಲ್ಕಿಯ ಕಾಶಪ್ಪ ಖಂಡ್ರೆ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೫-೮-೧೯೪೮ರಲ್ಲಿ ಜನಿಸಿದ್ದಾರೆ. ಇವರು ೧೯೯೬ರಲ್ಲಿ `ಯುಗ ಪುರುಷ’ ಎಂಬ ಕೃತಿ ಹೊರ ತಂದಿದ್ದಾರೆ.
ಸುಬ್ಬಣ್ಣ ಅಂಬೆಸAಗೆ
ಬೀದರ ಜಿಲ್ಲೆಯ ‘ಮೊದಲ ಕಾದಂಬರಿಕಾರ ‘ಎಂಬ ಖ್ಯಾತಿಗೆ ಒಳಪಟ್ಟವರು ಸಾಹಿತಿ ಸುಬ್ಬಣ್ಣ ಅಂಬೆಸAಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಎಕಲಾಸಪುರವಾಡಿಯ ಕಂಟೆಪ್ಪಾ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೧೫-೬-೧೯೫೦ ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಗ್ರಾಮ ಪಂಚಾಯತ ಕಾರ್ಯದರ್ಶಿಯಾಗಿ, ಪ್ರೌಢ ಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದಾರೆ.
`ಸಿಂದಿ ಬನದಲ್ಲಿ ಸಿಕ್ಕವಳು’ ಎಂಬ ಕಾದಂಬರಿ ೧೯೭೩ ರಲ್ಲಿ ಪ್ರಕಟಿಸಿದ್ದಾರೆ. ಇದು ಬೀದರ ಜಿಲ್ಲೆಯ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೭೮ರಲ್ಲಿ `ಅರಳು’ ೧೯೮೭ರಲ್ಲಿ ‘ಚೇತನ’ ೨೦೧೦ರಲ್ಲಿ ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು. ೨೦೧೮ರಲ್ಲಿ `ಚಿಂದಿ’ ಎಂಬ ಕಥಾಸಂಕಲನಗಳು,. ‘೨೦೧೪ರಲ್ಲಿ `ಬಳ್ಳಿಯ ಹೂ ಬಾಡದಿರಲಿ ‘ ಎಂಬ ಮಿನಿಕಥಾ ಸಂಕಲನವೊAದು ಹೊರತಂದಿದ್ದಾರೆ. ೧೯೯೬ರಲ್ಲಿ `ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ ೨೦೦೬ರಲ್ಲಿ `ಗುರುತು’ ಹಾಗೂ `ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಇತರ ಪ್ರಬಂಧಗಳು’ ಎಂಬ ಪ್ರಬಂಧ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು `ವಿಚಾರಗಳಿಂದ ಸವಾಯಿಗಳಿಲ್ಲ’ `ಅಡ್ಡಗೊಡೆಯ ಮೇಲಿನ ದೀಪ’ ಇವು ಅವರ ಚಿಂತನಾ ಕೃತಿಗಳು. `ಗಡಿನಾಡು ಭಾಷಾ ಸಮಸ್ಯೆ’ `ವಿನಯ ಭಂಡಾರಿ’ ಎಂಬ ಲೇಖನ ಸಂಕಲನಗಳು ಹಾಗೂ `ನೀನೊಲಿದರೆ ಕೊರಡು ಕೊನರುವುದಯ್ಯಾ ‘ ಎಂಬ ಸತ್ಯ ಘಟನೆಗಳ ಕುರಿತಾದ ಪುಸ್ತಕವು ಪ್ರಕಟವಾಗಿವೆ.
ಇವರ ಕತೆ, ಕವನ, ಲೇಖನ,ಪ್ರಬಂಧಗಳು ತುಷಾರ, ತರಂಗ, ಕಸ್ತೂರಿ, ಕನ್ನಡ ನುಡಿ,ಸಂಯುಕ್ತ ಕರ್ನಾಟಕ, ಶಾಂತಿ ಕಿರಣ, ಮುಂತಾದವುಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ದೂರದರ್ಶನ ಗಳಿಂದಲೂ ಇವರ ಚಿಂತನಗಳು ಮತ್ತು ಚರ್ಚೆ,ಸಂದರ್ಶನಗಳು ಪ್ರಸಾರವಾಗಿವೆ. ೧೯೯೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದವರು ನಡೆಸಿದ ಹೈದರಾಬಾದ ಕರ್ನಾಟಕ ವಿಭಾಗ ಮಟ್ಟದ ಚಿಂತನಾ ಸ್ಪರ್ಧೆಯಲ್ಲಿ ಇವರ `ವಿಚಾರಗಳಿಂದ ಸಹಾಯಿಗಳಿಲ್ಲ ‘ ಎಂಬ ಚಿಂತನಾ ಕೃತಿಗೆ ಒಂದುಸಾವಿರ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪತ್ರವು ಲಭಿಸಿದೆ. ಮತ್ತು ಗುಲಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ೧೯೯೭ರಲ್ಲಿ ` ಶಮದಾನಿಯ ಶೌರ್ಯ’ ಹಾಗೂ ೧೯೯೮ರಲ್ಲಿ `ಕೆಂಪು ಹರಿದು ನೇಸರ ಮೂಡಿದಾಗ ‘ ಎಂಬ ಕತೆಗಳು ಮೆಚ್ಚುಗೆ ಗಳಿಸಿದರೆ,೧೯೯೯ ರಲ್ಲಿ ಇದೇ ಸ್ಪರ್ಧೆಯಲ್ಲಿ ‘ ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು.’ ಎಂಬ ಕತೆಗೆ ಪ್ರಥಮ ಬಹುಮಾನ ೨೦೦೦.ಮತ್ತು ಚಿನ್ನದ ಪದಕ, ಪ್ರಶಸ್ತಿ ಪತ್ರ ಲಭಿಸಿದೆ. ಇವರ ಸಾಹಿತ್ಯ ಸಾಧನೆಗೆ ೨೦೦೩ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭೀಸಿವೆ. ೨೦೧೧ರಲ್ಲಿ ಇವರಿಗೆ ಭಾಲ್ಕಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಮಾಡಿ ಗೌರವಿಸಲಾಗಿದೆ. ಇವರು ೨೦೦೪ರಿಂದ ೨೦೦೮ ರವರೆಗೆ ಭಾಲ್ಕಿ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ದುರಾದೃಷ್ಠ ಇವರು ೮-೧೧-೨೦೨೦ ಇಹಲೋಕ ತ್ಯೇಜಿಸಿದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ.ಸೋಮನಾಥ ನುಚ್ಚಾ
ಜಿಲ್ಲೆಯ ಹಿರಿಯ ಸಾಹಿತಿಗಳ ಒಬ್ಬರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಸೋಮನಾಥ ನುಚ್ಚಾ. ಇವರು ಬೀದರ ಜಿಲ್ಲೆ ಭಾಲ್ಕಿಯ ಸಿದ್ರಾಮಪ್ಪಾ ನುಚ್ಚಾ ಮತ್ತು ನಾಗಮ್ಮ ನುಚ್ಚಾ ದಂಪತಿಗಳಿಗೆ ದಿನಾಂಕ ೬-೭-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಶ್ರೀ ಚನ್ನಬಸವೇಶ್ವರ ಪದವಿ ಕಾಲೇಜಿಗೆ ೧೯೭೯ರಲ್ಲಿ ಸೇವೆಗೆ ಸೇರಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ.
ಇವರು `ಗಾಂಧಿ ಚೌಕ್ ‘ ಎಂಬ ಕವನ ಸಂಕಲನ, `ಕೋಲಾಟದ ಪದಗಳು’ ‘ಚೆನ್ನುಡಿ ಹಾರ’ ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಕೋಲಾಟದ ಪದಗಳು ಕೃತಿಯಲ್ಲಿ ರಾಜ್ಯಾದ್ಯಂತ ಪ್ರಚಲಿತವಿರುವ ಕೋಲಾಟದ ಪದಗಳನ್ನು ಸಂಗ್ರಹಿಸಲಾಗಿದೆ. ಈ ಕೃತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗಿದೆ. `ಚೆನ್ನುಡಿ ಹಾರ ‘ ಕೃತಿಯಲ್ಲಿ ಶ್ರೀ ಚನ್ನಬಸವ ಪಟ್ಟದ್ದೆವರು ಕುರಿತಾದ ೧೦೯ ಕವನಗಳಿರುವ ಸಂಪಾದಿತ ಕೃತಿ. ಇವರ ಬರಹಗಳು ಭಾಲ್ಕಿಯ ಖಡ್ಕೆ ಪತ್ರಿಕೆ, ಕಲಬುರಗಿಯ ವಿಶ್ವಕನ್ನಡ, ಲಿಥೋ ಕೈ ಬರಹ ಪತ್ರಿಕೆ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬೆಂಗಳೂರಿನ ಸ್ವಾಮಿ ವಿವೇಕಾನಂದರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ದೆಹಲಿಯ ವಿದ್ಯಾ ಶಿರೋಮಣಿ ಪ್ರಶಸ್ತಿ, ಮತ್ತು ಎಮಿನೆಂಟ್ ಎಜುಕೇಶನ್ ಅವಾರ್ಡ, ರಾಷ್ಟ್ರೀಯ ಗುರು ಗೌರವ ಬಂಗಾರದ ಪದಕ, ಕಲಬುರ್ಗಿಯ `ಕಾಯಕ ರತ್ನ’ ಪ್ರಶಸ್ತಿಗಳು ಪಡೆದಿದ್ದಾರೆ. ಇವರಿಗೆ ೨೦೧೯ರಲ್ಲಿ ಭಾಲ್ಕಿಯಲ್ಲಿ ನಡೆದ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಡಾ.ಪ್ರೇಮಾ ಸಿರ್ಸೆ
ಬೀದರ ಜಿಲ್ಲಾ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕತೆ, ಕವನ, ಲೇಖನ,ಪ್ರಬಂಧ, ಚಿಂತನೆ,ವಿಮರ್ಶೆ ಮತ್ತು ಸಂಶೋಧನಾ ಬರಹಗಳು ಬರೆದÀ ಲೇಖಕಿಯೆಂದರೆ, ಡಾ.ಪ್ರೇಮಾ ಸಿರ್ಸೆ. ಇವರು ಬೀದರ ಜಿಲ್ಲೆ ಭಾಲ್ಕಿಯ ಶ್ರೀ ಮಹಾರುದ್ರಪ್ಪ ಮತ್ತು ಶ್ರೀಮತಿ ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧೫-೯-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಪದವೀಧರರಾದ ಇವರು ೧೯೭೫ರಿಂದ ೧೯೭೮ ರವರೆಗೆ ಭಾಲ್ಕಿ ಶ್ರೀ ಚನ್ನಬಸವೇಶ್ವರ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ನಂತರ ೧೯೭೮ರಿಂದ ಬೀದರ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೮೦ರಲ್ಲಿ `ಇದು ಒಂದು ಮಹಾಭಾರತ’ ಎಂಬ ಕವನ ಸಂಕಲನ, ೧೯೮೬ರಲ್ಲಿ `ನೂರೊಂದು ನೆನಪು ಎದೆಯಾಳದಲ್ಲಿ’ ಎಂಬ ಮುಕ್ತಕಗಳು, ೧೯೯೦ರಲ್ಲಿ `ಚುಕ್ಕೆಗಳು’ ಎಂಬ ಹನಿಗವನ ಸಂಕಲನ, ೨೦೦೪ರಲ್ಲಿ `ಹೊಸ ಬದುಕು’ ಎಂಬ ಗದ್ಯ ೨೦೦೬ರಲ್ಲಿ `ಮಹಿಳೆ -ಸಮಾಜ ಮತ್ತು ಸವಾಲುಗಳು’ ೨೦೦೯ರಲ್ಲಿ `ಸಾಹಿತ್ಯ ಸಿಂಚನ’ ಮತ್ತು `ಸಾಹಿತ್ಯಾವಲೋಕನ’ ಎಂಬ ಲೇಖನಗಳ ಸಂಕಲನಗಳು, ೨೦೦೫ರಲ್ಲಿ ಡಾ.ಸೋಮನಾಥ ಯಾಳವಾರ ಅವರೊಂದಿಗೆ `ಬೀದರ ಜಿಲ್ಲಾ ದರ್ಶನ’ ಎಂಬ ಕೃತಿಯು ಸಂಪಾದಿಸಿದ್ದಾರೆ. ಇವರ ಬರಹಗಳು ಲಂಕೇಶ್, ಸಂಕ್ರಮಣ, ಶೂದ್ರ ಅನ್ವೇಷಣೆ, ತರಂಗ, ಮಲ್ಲಿಗೆ, ಆಕಾಶವಾಣಿ ಮೊದಲಾದವುಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ಕಸಾಪದ `ರತ್ನಾಕರ ವರ್ಣಿ ಮುದ್ದಣ ಅನಾಮಿಕ ಪ್ರಶಸ್ತಿಯು ಲಭಿಸಿದೆ. ಇವರ `ಇದು ಒಂದು ಮಹಾಭಾರತ’ ಕೃತಿಯು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿಗಳಿಗೆ ದ್ವಿತೀಯ ಸೆಮಿಸ್ಟರ್ ಪಠ್ಯ ಪುಸ್ತಕವಾಗಿದೆ. ಸದ್ಯ ಇವರು ಬೀದರದ ನೌಬಾದನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಎಚ್.ಸಿ.ಖಡ್ಕೆ
ಸಾಹಿತಿ ಹಾಗೂ ಪತ್ರಕರ್ತ ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಭಾಲ್ಕಿ ತಾಲೂಕಿನ ಧನ್ನೂರಾ (ಎಚ್) ಗ್ರಾಮದವರಾಗಿದ್ದು ದಿನಾಂಕ ೨-೧-೧೯೫೪ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ ಪತ್ರಿಕೋಧ್ಯಮ ಪದವಿಧರರಾದ ಇವರು ಭಾಲ್ಕಿಯ ಖಡ್ಕೆ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬಾ ಆಸಕ್ತರಾದ ಇವರು `ಬೀದರ ಬೆಳಕು, ವಂದನಾ, ಹರ್ಷಗುಪ್ತಾ , ಜಮದಾರ, ರಾಮಚಂದ್ರ ವೀರಪ್ಪಾ, ಇತ್ಯಾದಿ ಹಲವಾರು ವೈಚಾರಿಕ, ವಿಮರ್ಶಾ ಲೇಖನ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ಹಲಬರ್ಗಾದಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಡಾ.ವೈಜಿನಾಥ ಭಂಡೆ
ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಲೇಖನ, ವಿಮರ್ಶೆ, ಸಂಶೋಧನಾ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ವೈಜಿನಾಥ ಭಂಡೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಕಪ್ಪೆಕೇರಿ ಗ್ರಾಮದ ಶ್ರೀ ಗುರಪ್ಪ ಭಂಡೆ ಮತ್ತು ಶ್ರೀಮತಿ ಶಿವಮ್ಮ ದಂಪತಿಗಳಿಗೆ ದಿನಾಂಕ ೨೧-೧-೧೯೫೫ ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ.ಮತ್ತು ಪಿ.ಎಚ್.ಡಿ.ಪದವೀಧರರಾದ ಇವರು ೧೯೭೮ರಲ್ಲಿ ಭಾಲ್ಕಿಯ ಸಿ.ಬಿ.ಕಾಲೇಜಿನ ಉಪನ್ಯಾಸಕರಾಗಿ ಸೇವೆಗೆ ಸೇರಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ.
ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಭಾಲಕಿ ತಾಲೂಕಿನ ಸ್ಥಳನಾಮಗಳು’ ಮತ್ತು `ಬೀದರ ಜಿಲ್ಲೆಯ ಸ್ಥಳನಾಮಗಳು’ ಎಂಬ ಸಂಶೋಧನಾ ಕೃತಿಗಳು `ಸರ್ವಜ್ಞನ ವಚನಗಳು’ ಮತ್ತು `ಲೋಕ ನಾಯಕ ಭೀಮಣ್ಣ ಖಂಡ್ರೆ’ ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರಿಗೆÀ ಭಾತಂಬ್ರಾ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಮತ್ತು ೨೦೧೮ರಲ್ಲಿ ಬ್ಯಾಲಹಳ್ಳಿಯಲ್ಲಿ ನಡೆದ ೪ನೇ ಭಾಲ್ಕಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಧನರಾಜ ಪುಲಾರೆ
ಸಂಯುಕ್ತ ಕರ್ನಾಟಕ ಪತ್ರಕರ್ತರಾಗಿದ್ದುಕೊಂಡು ಸಾಹಿತ್ಯ ರಚಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಧನರಾಜ ಪುಲಾರೆಯವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಬಸವಣಪ್ಪಾ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಅರ್ಥಶಾಸ್ತ್ರ ಪದವಿಧರರಾದ ಇವರು ಬಸವಕಲ್ಯಾಣ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಬಾಲ್ಯದಿಂದಲೂ ಹವ್ಯಾಸಿ ಪತ್ರಕರ್ತರಾಗಿ ಗುರ್ತಿಸಿಕೊಂಡು ಬೆಳೆಸಿಕೊಂಡು ಬಸವಕಲ್ಯಾಣದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
೨೦೦೩ರಲ್ಲಿ `ಅಂತರAಗದಾಳ’ ಎಂಬ ಪುಸ್ತಕವು ಪ್ರಕಟಿಸಿದ ಇವರು ಬಸವಕಲ್ಯಾಣ ಕಸಾಪ ಅಧ್ಯಕ್ಷರಾಗಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇವರ ಕಸಾಪ ಅವಧಿಯಲ್ಲಿ ಮುಡಬಿ ವಲಯ ಕಸಾಪ ಅಧ್ಯಕ್ಷರಾದ ಮಲ್ಲಿನಾಥ ಹಿರೇಮಠ ಅವರ ಸಹಾಯದೊಂದಿಗೆ ಸುಕ್ಷೇತ್ರ ಹಾರಕೂಡದ ಹಿರೇಮಠ ಸಂಸ್ಥಾನದಲ್ಲಿ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸನ್ನಿಧಿಯಲ್ಲಿ ಯಶಸ್ವಿಗೊಳಿಸಿದ್ದಾರೆ. ಸದ್ಯ ಇವರು ಅನಾರೋಗ್ಯದಿಂದ ಸಾಹಿತಿಗಳ ಬಳಗದಿಂದ ದೂರ ಉಳಿದಿರುವುದು ನೋವಿನ ಸಂಗತಿಯಾಗಿದೆ.
ಡಾ.ಕೆ.ಎಸ್.ಬAಧು.ಸಿದ್ದೇಶ್ವರ
ದಲಿತ ಬಂಡಾಯ ಸಾಹಿತ್ಯದಲ್ಲಿ ಕೃಷಿ ಮಾಡಿ ಪುಸ್ತಕ ಪ್ರಕಟಿಸಿದ ಹಿರಿಯ ಸಾಹಿತಿಯೆಂದರೆ ಡಾ.ಕೆ.ಎಸ್.ಬಂಧು. ಸಿದ್ದೇಶ್ವರ . ಇವರ ಪೂರ್ಣನಾಮ ಕಾಮಣ್ಣಾ ತಂದೆ ಶಂಕರೆಪ್ಪ ಬಂಧು ಎಂದಾಗಿದೆ. ಇವರು ಬೀದರ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದ ಶಂಕರೆಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೨೮-೧೦-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಏಕಲವ್ಯ’ ಎಂಬ ಎಂಪೌರಾಣಿಕ ನಾಟಕ, `ಅಕ್ಷರ ಕ್ರಾಂತಿ ಅಥವಾ ಜ್ಯೋತಿ’ ಎಂಬ ಕಿರುನಾಟಕ `ಭೀಮವಾಣಿ’ `ಭೀಮ ಘರ್ಜನೆ ‘ `ಅಂಬೇಡ್ಕರ್ ಕ್ರಾಂತಿ ಗೀತೆಗಳು’ `ರಮಾಬಾಯಿ ಅಂಬೇಡ್ಕರ್ ಮಹಿಳಾ ಗೀತೆಗಳು’ `ನಗು-ಮಗು’ ಎಂಬ ಕವನ ಸಂಕಲನಗಳು, `ನನ್ನ ಜೀವನ’ ಎಂಬ ಅಂಬೇಡ್ಕರ್ ಚರಿತ್ರೆ, `ಸಮಾಜ ಮುಖಿ’ ಎಂಬ ಲೇಖನ ಕೃತಿ `ಬಸವೇಶ್ವರ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ತತ್ವಗಳ ಪ್ರಸ್ತುತತೆ `ಬುದ್ಧ ಮತ್ತು ಅವನ ಅನುಯಾಯಿಗಳು ‘ `ಡಾ.ಅಂಬೇಡ್ಕರ್ ಮತ್ತು ಅವನ ಸಹಯೋಗಿ’, `ತೊಂಚಿ’ ಎಂಬ ಅನುಭವ ಕೃತಿ ಸೇರಿದಂತೆ ಮೊದಲಾದ ಕೃತಿಗಳು ಪ್ರಕಟಿಸಿದ್ದಾರೆ.
ಇವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದಲಿತ ಸಾಹಿತ್ಯ ಅಕಾದೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ೨೦೦೨ರಲ್ಲಿ ಕರ್ನಾಟಕ ರಾಜ್ಯ ಹಿಂದಿ ಪ್ರತಿಭಾ ಪ್ರತಿಷ್ಠಾನ ಹುಬಯ- ಬೆಂಗಳೂರಿನಿAದ ರಾಜ್ಯ ಶಿಕ್ಷಕ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ‘ ಉತ್ತಮ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಬೆಂಗಳೂರಿನ ವಾರದ ಸ್ಪೋಟ ಪತ್ರಿಕೆಯವರಿಂದ ೨೦೦೬ರಲ್ಲಿ `ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ೨೦೧೧ ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾದೆಮಿ ಹೊಸ ದೆಹಲಿ ಇವರಿಂದ ರಾಷ್ಟ್ರ ಮಟ್ಟದ ಡಾ.ಅಂಬೇಡ್ಕರ್ ಫೆಲೋಶಿಪ್’ ಬಸವಕಲ್ಯಾಣ ತಾಲೂಕು ಬೇಲೂರು ಮಠದಿಂದ `ಉರಿಲಿಂಗ ಪೆದ್ದಿ ಪ್ರಶಸ್ತಿ, ೨೦೦೮ರಲ್ಲಿ ಹುಬ್ಬಳಿಯ ಬೌದ್ಧ ಮಹಾಸಭಾದಿಂದ ರಾಜ್ಯ ಮಟ್ಟದ ಡಾ.ಅಂಬೇಡ್ಕರ್ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ನಾಗಲಿಂಗ ಕವಿ
`ನಾಗಲಿಂಗ ಕವಿ’ಎಂಬ ಕಾವ್ಯನಾಮದಿಂದಲೇ ಖ್ಯಾತಿ ಹೊಂದಿ ಹಲವಾರು ಶರಣ ಸಾಹಿತ್ಯ ಮತ್ತು ಅನುಭಾವ ತತ್ವ ಪದಗಳನ್ನು ರಚಿಸಿದ ಸಾಹಿತಿ ಹಾಗೂ ಮಠಾಧೀಶರೆಂದರೆ ಪೂಜ್ಯ. ಶ್ರೀ. ಲಿಂಗರಾಜೇಶ್ವರ ಮಹಾಸ್ವಾಮಿಗಳು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದ ಶ್ರೀ ಗದಗೆಪ್ಪ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧೧-೧೦-೧೯೫೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬೀದರ ತಾಲ್ಲೂಕಿನ ಕೈಲಾಸಪುರ (ಖಾಜಾಪುರ) ಗ್ರಾಮದ ಶ್ರೀ ಮಹಾತ್ಮ ರೇವಪ್ಪಯ್ಯ ಮಹಾದಾಸೋಹಿ ಪೀಠಾಧ್ಯಕ್ಷರಾಗಿ ಕೆಲ ಕೃತಿಗಳು ರಚಿಸಿದ್ದಾರೆ.
ಅವುಗಳೆಂದರೆ ೧೯೮೪ರಲ್ಲಿ `ಬಬಲಾದಿ ಶ್ರೀ ಚೆನ್ನವೀರೆಶ್ವರ ಚರಿತ್ರೆ’, ೧೯೯೩ರಲ್ಲಿ `ಕಲ್ಯಾಣ ನಾಡಿನ ಕೊನೆ ಶರಣ ಜ್ಯೋತಿ,’ ೧೯೯೪ ರಲ್ಲಿ `ಶರಣ ಪ್ರಭೆ, `ಪ್ರವಾದಿ ಪ್ರಭೆ ಸಹಸ್ರ ನಾಮಾವಳಿ’, ಮತ್ತು `ಮಹಾಬೆಳಗು’ ಎಂಬ ಕೃತಿಗಳು ರಚಿಸಿ ಪ್ರಕಟಿಸಿದರೆ ೧೯೯೬ರಲ್ಲಿ `ಮನ ಭೋಧೆ ಶ್ರೀ ರೇವಪ್ಪಯ್ಯ’, `ಧರ್ಮ ಜ್ಯೋತಿ, `ಸಾಹಿತ್ಯ ಸಂಗಮ,’ ಎಂಬ ಇತ್ಯಾದಿ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು `ಭಾವ್ಯಕ್ತ ಬೆಳಕು’, `ವಿಶ್ವ ಮಾನವ ವಚನಗಳು, `ಸಿದ್ದಪ್ರಭು ಕಂಡ ರೇವಪ್ಪಯ್ಯ’ ಎಂಬ ಕೃತಿಗಳು ಅಪ್ರಕಟಿತವಾಗಿವೆ. ಮತ್ತು ಇವರ ಕುರಿತು ಶ್ರೀ ಗುರುಸಿದ್ದಪ ಸೊಮರೆಳ್ಳಿಯವರು `ಚರ ಜಂಗಮ’ ಎಂಬ ಕೃತಿಯು ರಚಿಸಿದರೆ ಬೀದರ ಸಾಹಿತಿ ಎಂ.ಜಿ.ದೇಶಪಾAಡೆಯವರು `ನಾಗಲಿಂಗ ಕವಿಯ ತತ್ತ್ವ ತತ್ವಪದಗಳು’ ಎಂಬ ತತ್ವ ಪದಗಳನ್ನು ಸಂಪಾದಿಸಿ ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರು ತಮ್ಮ ಪ್ರಕಾಶನದ ವತಿಯಿಂದ ಕೆಲ ಲೇಖಕರ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೧೯೮೪ರಲ್ಲಿ ಅಫಜಲಪುರದ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ವತಿಯಿಂದ `ಧರ್ಮ ಜ್ಯೋತಿ’ ಎಂಬ ಬಿರುದು ಪಡೆದರೆ, ೧೯೮೫ರಲ್ಲಿ ಕಲಬುರಗಿ ಮುಕ್ತಂಪೂರದ ಬಸವೇಶ್ವರ ಸಂಸ್ಥಾನ ಮಠದಿಂದ `ಸಾಹಿತ್ಯ ಭೂಷಣ ಪ್ರಶಸ್ತಿ, ಕಡಗಂಚಿಯ ಶಾಂತಲಿAಗೇಶ್ವರ ಸಂಸ್ಥಾನ ಕಟ್ಟಿಮಠದಿಂದ `ಶಿವ ಕವಿ’ ಎಂಬ ಬಿರುದು ಪಡೆದುಕೊಂಡಿದ್ದಾರೆ. ೨೦೦೪ರಲ್ಲಿ ವಿಶ್ವ ಭಾರತಿ ಸೇವಾ ಸಂಘಟನೆಯಿAದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೨೦೧೫ರಲ್ಲಿ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಲಾವಿದ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ.
ವೀರಶೆಟ್ಟಿ ಬಾವುಗೆ
ಸೃಜನಶೀಲ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಿ,ಸಾಹಿತಿಯೆಂದರೆ ವೀರಶೆಟ್ಟಿ ಬಾವುಗೆಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ (ಎಸ್) ಗ್ರಾಮದ ಪ್ರಭುಶೆಟ್ಟಿ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎಡ್. ಪದವಿಧರರಾದ ಇವರು ೧೯೮೨ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಡೊಣಗಾಪೂರ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು `ಹೃದಯ ತರಂಗಗಳು’ `ನೊಂದ ಬೆಂದವರು ‘ ಎಂಬ ಕವನ ಸಂಕಲನಗಳು, `ಬೆಳಗಿನೊಳಗಣ ಬೆಳಗು’ `ಮುಗಿಲ ಮರೆಯ ಮಿಂಚು’ ಎಂಬ ಆಧುನಿಕ ವಚನಸಂಕಲನ, `ವೈರಾಗ್ಯ ನಿಧಿ ಲಿಂಗಾAಗಯೋಗಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೆವರು’ ಮತ್ತು ‘ಕಲ್ಯಾಣ ಶ್ರೀ’ ಎಂಬ ಜೀವನ ಚರೀತ್ರೆಗಳು, `ನಮ್ಮೂರು ಧನ್ನೂರು’ (ಗ್ರಾಮ ಚರಿತ್ರೆ) `ಆಧುನಿಕ ವಚನಕಾರರ ದೃಷ್ಠಿಯಲ್ಲಿ ಕಲ್ಯಾಣದ ವಿ.ಸಿದ್ದರಾಮಣ್ಣ ಶರಣರು’ `ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಬೀದರ ಜಿಲ್ಲೆ ಕ್ರಾಂತಿಕಾರಿಗಳು’ `ನೂತನ ವಚನಕಾರರ ದೃಷ್ಠಿಯಲ್ಲಿ ಮಹಾಂತ ಶಿವಯೋಗಿಗಳು ’ `ಶಾಲೆಯಲ್ಲಿ ದಿನಕ್ಕೊಂದು ಶುಭಾಷಿತ’ `ಬೀದರ ಜಿಲ್ಲೆಯ ಉತ್ತಮ ಶಿಕ್ಷಕರು’ `ವಚನ ಜ್ಯೋತಿ’ ‘ವಚನ ಸಿರಿ’ `ದಾಸೋಹದ ವಚನಗಳು’ `ಸಾಹಿತ್ಯ ಜ್ಯೋತಿ’ `ಶಿವಕಳೆ’ `ಕನ್ನಡದ ದಿಗ್ಗಜರು’ `ಸ್ನೆಹದ ಕಡಲಲ್ಲಿ ನೆನಪಿನ ದೋಣಿ-ಪಂಚಯ್ಯ ಸ್ವಾಮಿ’ಎಂಬ ೨೩ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ಕನ್ನಡದ ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ.
ಇವರು ೧೯೯೫ರಲ್ಲಿ ಭಾಲ್ಕಿ ಕಸಾಪದ ಗೌರವ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಮತ್ತು ಸಂಸ್ಕೃತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ೨೦೦೮ರಲ್ಲಿ ಭಾಲ್ಕಿ ಕಸಾಪÀ ಅಧ್ಯಕ್ಷರಾಗಿ, ತಾಲೂಕಿನಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಮತ್ತು ಗ್ರಾಮ, ಹೊಬಳಿ ಸಮ್ಮೇಳನ, ಗಡಿನಾಡು ಉತ್ಸವ ಮೊದಲಾದ ನೂರಾರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಕಸಾಪ ಜಿ.ಆರ್.ರೇವಯ್ಯಾ ದತ್ತಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೧೪ರಲ್ಲಿ ಭಾಲ್ಕಿ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಿದ್ದಾರೆ.
ಡಾ.ಕಾಶಿನಾಥ ಚೆಲುವಾ
ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ತತ್ವ ಸಿದ್ದಾಂತ ಮತ್ತು ಗೌತಮ ಬುದ್ಧನ ಮಾರ್ಗದರ್ಶನದ ಮೇರೆಗೆ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸುತ್ತಿರುವ ಲೇಖಕರೆಂದರೆ ಡಾ.ಕಾಶಿನಾಥ ಚಲುವಾ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದ ಮರೆಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪಿ.ಎಚ್.ಡಿ. ಪದವಿಧರರಾದ ಇವರು ೧೯೮೫ರಲ್ಲಿ ಪ್ರಾಥಮೀಕ ಶಾಲಾ ಶಿಕ್ಷಕರಾಗಿ, ನಂತರ ಮುಖ್ಯ ಗುರುಗಳಾಗಿ, ಪ್ರೌಢ ಶಾಲಾ ಶಿಕ್ಷಣ ಸಂಯೊಜಕರಾಗಿ ಸೇವೆ ಸಲ್ಲಿಸಿ ಸದ್ಯ ಭಾಲ್ಕಿ ತಾಲೂಕಿನ ಭಾಂತಬ್ರಾದಲ್ಲಿ ಪದವಿಧರ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಚೌಚೌ ಬಾತ್’ ಮತ್ತು ‘ತ್ರಿಪದಿ ಚೌಪದಿ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ವಿಶೇಷವಾಗಿ ಬೌದ್ಧ ಧರ್ಮದ ಕಡೆಗೆ ಒಲವು ತೊರಿದ ಇವರು ಭಾಲ್ಕಿಯಲ್ಲಿ ೧೯೯೦ -೨೦೦೩ವರೆಗೆ ಬೌದ್ಧ ಮಹಾಸಭೆಯ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲೆಯಾದ್ಯಂತ ಬೌದ್ಧ ಧರ್ಮ ಪ್ರಚಾರ ಮತ್ತು ಡಾ.ಅಂಬೇಡ್ಕರ್ ವಿಚಾರಧಾರೆ ಪ್ರಚುರಪಡಿಸಿದ್ದಾರೆ. ಮತ್ತು ದಾಡಗಿಯಲ್ಲಿ `ಜ್ಯೋತಿ ಬಾ ಪುಲೆ ಪ.ಪೂ ಕಾಜೇಜು, ಬಾಳೂರಿನಲ್ಲಿ ವಿದ್ಯಾಭಾರತಿ ಪ್ರಾಥಮಿಕ ಶಾಲೆ, ಧನ್ನೂರಿನಲ್ಲಿÀ ಸಿದ್ದಾರ್ಥ ಪ್ರಾಥಮಿಕ ಶಾಲೆ, ಬೊಳೆಗಾಂವದಲ್ಲಿ ಮಿಲಿಂದ ಪ್ರಾಥಮಿಕ ಶಾಲೆ ಇವರ ಕುಟುಂಬದವರು ನಡೆಸುತ್ತಿರುವುದರಿಂದ ಅವರಿಗೆ ಶೈಕ್ಷಣಿಕವಾಗಿ ಮಾರ್ಗದರ್ಶಕರಾಗಿದ್ದಾರೆ. ಇವರು ಭಾಲ್ಕಿ ಶಿಕ್ಷಕರ ಸಂಘದ ತಾಲೂಕಾ ಎಸ್.ಸಿ.ಎಸ್.ಟಿ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಎಸ್.ಸಿ.ಎಸ್.ಟಿ. ತಾಲೂಕು ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಶಿವರುದ್ರಯ್ಯಾ ಸ್ವಾಮಿ
ಶರಣ ಸಾಹಿತ್ಯದಲ್ಲಿ ವಿಶೇಷವಾಗಿ ಆಸಕ್ತಿ ಹೊಂದಿ, ಆಧುನಿಕ ವಚನ ಮತ್ತು ಜಾನಪದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಶಿವರುದ್ರಯ್ಯಾ ಸ್ವಾಮಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಬಂಡಯ್ಯ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೪ ರಲ್ಲಿ ಜನಿಸಿದ್ದಾರೆ. ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ಕಮಲನಗರ ತಾಲೂಕಿನ ಶಾಂತಿವರ್ಧಕ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬಾ ಆಸಕ್ತಿ ಹೊಂದಿ ಕಾಲೇಜು ಓದುವಾಗ ಕತೆ, ಕವನ, ಲೇಖನ ಪ್ರಬಂಧ ಬರೆಯುವ ಗೀಳು ಬೆಳೆಸಿಕೊಂಡು `ಚನ್ನನ ಮಹಿಮೆ’ `ಲಕ್ಷ್ಮಿಬಾಯಿ ಖಂಡ್ರೆ ತಾಯಿ’ ‘ಬಸವಾದಿ ಶರಣರ ಜೋಗುಳ ಪದಗಳು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ‘ಆಧುನಿಕ ವಚನಗಳು’ ಅಪ್ರಕಟಿತವಾಗಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಇತರರು ಹೊರತಂದಿರುವ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಕಸಾಪದ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಗಳಲ್ಲಿ ಕವನವಾಚನ, ಉಪನ್ಯಾಸವು ಮಾಡಿದ್ದಾರೆ ಇವರ ಸಾಹಿತ್ಯ ಸಾಧನೆಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು `ಕನ್ನಡ ಸಿರಿ’ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ಡಾ.ಕಲ್ಯಾಣಮ್ಮ ಲಂಗೋಟಿ
ಹೆಸರಾAತ ಶರಣ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪುಸ್ತಕ ಪ್ರಕಟಿಸಿದ ಮಹಿಳಾ ಲೇಖಕಿಯೆಂದರೆ ಡಾ.ಕಲ್ಯಾಣಮ್ಮ ಲಂಗೋಟಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬೀರಗಿ ಗ್ರಾಮದ ಶ್ರೀ ಹಾವಪ್ಪ ಕೋಟೆನವರ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳಿಗೆ ದಿನಾಂಕ ೫-೨-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಬಿಜಾಪುರದ ಶರಣ ಸಾಹಿತಿ ಪ್ರೊ. ಸಿದ್ಧಣ್ಣ ಲಂಗೋಟಿಯವರ ಧರ್ಮ ಪತ್ನಿಯಾಗಿದ್ದು, ಶರಣ ಸಾಹಿತ್ಯಕ್ಕೆ ಸಾಕಷ್ಟು ಕೃತಿಗಳನ್ನು ನೀಡಿದ್ದಾರೆ. ೧೯೮೦ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆಂಬಳಗಿ ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ೧೯೭೯ರಲ್ಲಿ `ಮರಣವೇ ಮಹಾ ನವಮಿ’ ಎಂಬ ಲೇಖನ ಕೃತಿ, ೧೯೮೦ರಲ್ಲಿ `ಗಣನಾಯಕ ಮಡಿವಾಳ ಮಾಚಿದೇವರು’ ೧೯೮೨ರಲ್ಲಿ `ಷಣ್ಮುಖ ಶಿವಯೋಗಿಗಳು ಕಂಡ ಬಸವಣ್ಣನವರು’ ೧೯೮೫ರಲ್ಲಿ `ಶರಣೆಯರ ವಚನಾಮೃತ’ ೧೯೮೮ರಲ್ಲಿ `ಶರಣೆಯರ ವಚನಗಳು’ ೧೯೮೯ರಲ್ಲಿ `ಸಿದ್ಧಲಿಂಗೇಶ್ವರರು ಕಂಡ ಬಸವಣ್ಣನವರು’ `ದೇವದಾಸಿ ಪದ್ದತಿ ವಿಮೋಚನೆ ಹಾಗೂ ಬಸವಣ್ಣನವರು’ ಮತ್ತು `ಅಕ್ಕ ಮಹಾದೇವಿಯ ವಚನಗಳು’ ೧೯೯೦ರಲ್ಲಿ `ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳು’ ಮತ್ತು `ನೀಲಾಂಬಿಕೆಯ ವಚನಗಳು’ ೨೦೦೦ರಲ್ಲಿ `ಸ್ತ್ರೀ ಸಂವೇದನೆಗಳು’ ಎಂಬ ಕವನ ಸಂಕಲನ, ೨೦೦೧ರಲ್ಲಿ `ಜಯದೇವಿ ತಾಯಿ ಲಿಗಾಡೆ’ ಮತ್ತು `ಕವಿಗಳು ಕಂಡ ಮಹಾಂತ ಶಿವಯೋಗಿಗಳು’ ೨೦೦೪ರಲ್ಲಿ `ಹಡಪದ ಲಿಂಗಮ್ಮ’ ೨೦೦೫ ರಲ್ಲಿ `ಬಸವಾದಿ ಶರಣರ ವಚನಾಂಕಿತಗಳು’ ೨೦೦೬ರಲ್ಲಿ `ನೂತನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು’ ೨೦೦೮ರಲ್ಲಿ `ವರಕವಿ-ಜಗದಕವಿ ಈಶ್ವರ ಸಣ್ಣಕಲ್ಲರು’ ಇವು ಇವರ ಪ್ರಮುಖ ಶರಣ ಸಾಹಿತ್ಯದ ಕೃತಿಗಳಾಗಿವೆ. ಇವರಿಗೆ ೧೯೯೯ರಲ್ಲಿ ಇಳಕಲ್ ಶ್ರೀ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಆದರ್ಶ ಶರಣೆ ದಾಂಪತ್ಯ ಪ್ರಶಸ್ತಿ, ಮತ್ತು ಲಚ್ಚೆಯಬ್ಬರಸಿ’ ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಶ್ರೀಶೈಲದಲ್ಲಿ ಜರುಗಿದ ಬಸವಭೂಮಿ ೫ನೇ ಶರಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಇವರು ನಾಡಿನ ಕೆಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸಗಳು ನೀಡಿದ್ದಾರೆ. ಇವರ ಕುರಿತು ಭಾಲ್ಕಿ ಸಾಹಿತಿ ವೀರಶೆಟ್ಟಿ ಭಾವುಗೆಯವರು ಲೇಖನಗಳು ಬರೆದು ಪ್ರಕಟಿಸಿದ್ದಾರೆ.
ಮಲ್ಲಮ್ಮ ಆರ್ ಪಾಟೀಲ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾದ ಮಲ್ಲಮ ಆರ್.ಪಾಟೀಲ್ ಇವರು ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದ ನಾಗಶೆಟ್ಟಿ ಹಾಗೂ ಚಂದ್ರಮ್ಮ ದಂಪತಿಗಳಿಗೆ ದಿನಾಂಕ ೧೫-೧೦-೧೯೬೫ ರಲ್ಲಿ ಜನಿಸಿದ್ದಾರೆ. ಎಂ.ಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹುಲಸೂರಿನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೧೯೯೮ರಲ್ಲಿ ಭಾಲ್ಕಿಯ ಲಿಂ.ಡಾ.ಚನ್ನಬಸವ ಪಟ್ಟದೇವರ ಕುರಿತು `ಶಿವಯೋಗಿ ಚನ್ನಬಸವ’ ಎಂ ಬ ಕಾದಂಬರಿ `ಶ್ರದಾಂಜಲಿ’ ಎಂಬ ಕವನ ಸಂಕಲನ, ಮಲ್ಲಮ್ಮ ಆರ್ ಪಾಟೀಲರ ವಚನಗಳು ‘ ಎಂಬ ಮೂರು ಆಧುನಿಕ ವಚನಗಳ ಕೃತಿಗಳು ಹೊರತಂದಿದ್ದಾರೆ. ಇವg ಕವನÀ ಲೇಖನಗಳು ರಾಜ್ಯ ಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕಾದಂಬರಿ ಬೀದರದ ಪತ್ರಿಕೆಯೊಂದರಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿದೆ. ಲೇಖಕರು ಉತ್ತಮ ಭಾಷಣಕಾರರಾಗಿಯು ಹಲವಾರು ಕಡೆ ಗುರುತಿಸಿಕೊಂಡಿದ್ದಾರೆ .ಇವರಿಗೆ ಹಲವಾರು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಬಂದಿವೆ. ಮತ್ತು ಅಖಿಲ ಭಾರತ ಕವಯಿತ್ರಿ ಸಮ್ಮೇಳನದ ಗೌರವ ಸದಸ್ಯರಾಗಿ ದೆಹಲಿ ಅಮರಾವತಿ, ಹೈದ್ರಾಬಾದ್, ರಾಯಪುರ, ವಿಜಯಪುರ ಕಲಬುರಗಿ, ಬೀದರ ಇನ್ನಿತರ ಕಡೆಗಳಲ್ಲಿ ಜರುಗಿದ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾಷಣ ಮತ್ತು ಕವನವಾಚನ ಮಾಡಿದ್ದಾರೆ. ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಭಾಲ್ಕಿಯ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇವರ ಪಾಂಡಿತ್ಯದ ಪ್ರೇರಣೆಯಿಂದ ಇವರ ಮಗ ೨೦೧೬ರಲ್ಲಿ ಐ. ಎ. ಎಸ್. ಪರೀಕ್ಷೆ ಬರೆದು ಇಡೀ ರಾಷ್ಟ್ರಕ್ಕೆ ೩೭೬ನೇ ರ‍್ಯಾಂಕ್ ಪಡೆದು. ಕಂದಾಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಯಾದೇವಿ ವಿ.ಗೋಖಲೆ
ಜಾನಪದಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ಹಾಡುವ ಹಾಡುಗಳಾದ ಲಾಲಿಹಾಡು,ಸೋಬಾನೆ ಪದ ಬುಲಾಯಿ ಹಾಡು, ಬಿಸುವ, ಕುಟ್ಟುವ,ಮೊದಲಾದ ಜಾನಪದ ಮತ್ತು ಭಜನೆ ಹಾಡುಗಳನ್ನು ಹಾಡುತ್ತಾ, ಸ್ವತಃ ಗೀತ ರಚನೆಗಳನ್ನು ಮಾಡಿ ರಾಗಸಂಯೋಜನೆಯೊAದಿಗೆ ಹಾಡುತ್ತಾ ಕತೆ,ಕವನ, ಲೇಖನ ಪ್ರವಾಸ ಸಾಹಿತ್ಯ ಬರೆದ ಕವಯತ್ರಿಯೆಂದರೆ ಮಾಯಾದೇವಿ ವಿ.ಗೋಖಲೆ . ಇವರು ಬೀದರ ಜಿಲ್ಲೆ ಭಾಲ್ಕಿ ನಗರದ ಮಾಧವರಾವ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨-೧-೧೯೬೬ ರಲ್ಲಿ ಜನಿಸಿದ್ದಾರೆ. ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ ಇವರು ೧೯೮೪ರಲ್ಲಿ ಮೊದಲು ಅಂಗವಾನವಾಡಿ ಕಾರ್ಯಕರ್ತೆಯಾಗಿ ಸುಮಾರು ೧೫ ಸೇವೆ ಸಲ್ಲಿಸಿ, ನಂತರ ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಭಾಲ್ಕಿ ತಾಲೂಕಿನ ಶಮಶರಪೂರವಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಭಾವನೆಗಳ ಬಳ್ಳಿ’ ಮತ್ತು `ಅಂತರAಗದ ಅಲೆಗಳು’ ಎಂಬ ಕವನಸಂಕಲನಗಳು ಪ್ರಕಟಿಸಿದ್ದಾರೆ. ಇವರು ಸಾಹಿತ್ಯ ರಚನೆಯೊಂದಿಗೆ ಭಗವಾನ್ ಬುದ್ದನ ಬೋಧನೆ, ಆರಾಧನೆ ಭಜನೆಯೊಂದಿಗೆ ಧಮ್ಮ ಪ್ರಚಾರವು ಮಾಡುತ್ತಾ ಬುದ್ಧ, ಬಸವ, ಅಂಬೇಡ್ಕರ್ ರವರ ವಿಚಾರ ಧಾರೆಗಳು ಜನತೆಗೆ ಮುಟ್ಟಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಭಾಲ್ಕಿ ತಾಲೂಕು ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ’ ಬಿಜಾಪೂರದಿಂದ `ಬಸವಶಾಂತಿ ಪ್ರಶಸ್ತಿ’ ಮತ್ತು ದೆಹಲಿಯ ಸಾಹಿತ್ಯ ಸಮ್ಮೇಳನದಲ್ಲಿ `ನ್ಯಾಶನಲ್ ಫೀಲೋಸಫಿ’ ಹಾಗೂ `ಸಾವಿತ್ರಿಬಾಯಿ ಪುಲೆ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇಂದುಮತಿ ಸುತಾರ
ಮರಾಠಿ, ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುವುದರೊಂದಿಗೆ ಕನ್ನಡದಿಂದ ಮರಾಠಿ, ಹಿಂದಿಗೆ ಅನುವಾದ ಮಾಡುತ್ತಿರುವ ಲೇಖಕಿಯೆಂದರೆ ಇಂದುಮತಿ ಸುತಾರ. ಇವರು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ಉಮರ್ಗಾ ತಾಲೂಕಿನ ಔರಾದ ಗ್ರಾಮದ ಶಂಕರರಾವ ಮಾಯಾಚಾರಿ ಮತ್ತು ಮಂಗಲಾ ದಂಪತಿಗಳಿಗೆ ದಿನಾಂಕ ೨೪-೧-೧೯೬೬ ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಭಾಲ್ಕಿ ತಾಲೂಕಿನ ಮೇಹಕರ ಗ್ರಾಮದ ಮಾಜಿ ಸೈನಿಕ ಗುರುನಾಥ ಸುತಾರ ಅವರ ಧರ್ಮ ಪತ್ನಿಯಾಗಿದ್ದಾರೆ. ಉತ್ತರ ಪ್ರದೇಶದ ಬುಂದೆಲ್ ಖಂಡ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಎಂ.ಎ.ಬಿ,ಎಡ್. ಪದವಿ ಪಡೆದು ಕೆಲಕಾಲ ಉತ್ತರ ಪ್ರದೇಶ ಮತ್ತು ಬೀದರನಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರÀ ಏರಪೋ??ð ಶಾಲೆಯ ಪ್ರಾಂಶುಪಾಲರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತರಾದ ಇವರು ಕನ್ನಡ ಕಲಿತು ಮರಾಠಿ ಹಿಂದಿ ಭಾಷೆಗಳಲ್ಲಿ ೧೯೮೫ರಲ್ಲಿಯೆ ಕತೆ ಕವನ ಬರೆಯಲು ಪ್ರಾರಂಭಿಸಿ, ಮರಾಠಿಯಲ್ಲಿ `ಹಿರವಿ ಪಾಠ’ ಎಂಬ ಕವನಸಂಕಲನ ಪ್ರಕಟಿಸಿ, ಶಂಭುಲಿAಗ ವಾಲ್ದೊಡ್ಡಿಯವರ `ಮಹಾತಾಯಿ’ ಕೃತಿ ಹಿಂದಿ ಭಾಷೆಗೆ `ಮಹಾಮಾತಾ’ ಎಂದು ಅನುವಾದಿಸಿದ್ದಾರೆ. ಇವರ ಬರಹಗಳು ಹಿಂದಿ ಮಿಲಾಪ್,ಮಹಾಕಾವ್ಯಸ್, ಬೀದರ ಕಿ ಅವಾಜ್, ದೈನಿಕ ಭಾಸ್ಕರ, ಶೀಲಾ ಅನುಬಂಧ, ಮಾಜಿ ಮರಾಠಿ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಹಾರಾಷ್ಟ್ರದಲ್ಲಿ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ನಡೆದ, ಕರಾಡ ಚಂದ್ರಾಪೂರ,ಮುAಬಯಿ, ಉಸ್ಮನಾಬಾದ,ಮೊದಲಾದ ಕಡೆಯಲೆಲ್ಲ ಪಾಲ್ಗೊಂಡು ಕವಿತಾ ವಾಚನಾ ಮಾಡಿದ್ದಾರೆ. ಕಲಬುರಗಿ ಆಕಾಶವಾಣಿಯಿಂದ ಇವರ ಮರಾಠಿ ಭಾಷೆಯ ಕವನಗಳು ಪ್ರಸಾರವಾಗಿವೆ. ಮತ್ತು ಕಲಬುರಗಿಯ `ಮಾಜಿ ಮರಾಠಿ’ ತ್ರೈಮಾಸಿಕ ಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಿ. ಪ್ರಭುಶೆಟ್ಟಿ ಸೈನಿಕಾರ
ಶರಣ ತತ್ವಗಳನ್ನು ಮೈಗೂಡಿಸಿಕೊಂಡು ವಿವಿಧ ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರಭುಶೆಟ್ಟಿ ಸೈನಿಕಾರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಬೇತಾಳಪ್ಪಾ ಮತ್ತು ನೀಲಾದೇವಿ ದಂಪತಿಗಳಿಗೆ ದಿನಾಂಕ ೧-೭-೧೯೬೬ರಲ್ಲಿ ಜನಿಸಿ, ಬಿ.ಎ.ಪದವಿವರೆಗೆ ಶಿಕ್ಷಣ ಪಡೆದು ಕೆಲಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕವಿ,ಸಾಹಿತಿಯಾಗಿ ಹೊರಹೊಮ್ಮಿದ್ದಾರೆ.
ಇವರು ೧೯೮೧ರಲ್ಲಿ `ಶರಣ ಜ್ಯೋತಿ’ ೧೯೮೫ರಲ್ಲಿ `ಚಿಂತನ ಜ್ಯೋತಿ, `ಯೇಸು ಸ್ವಾಮಿ’ ೧೯೯೦ರಲ್ಲಿ `ಪ್ರೇಮ ಜ್ಯೋತಿ’ ಎಂಬ ಕವನಸಂಕಲನಗಳು, `ಮಕ್ಕಳ ಜ್ಯೋತಿ’ ಎಂಬ ಮಕ್ಕಳ ಕೃತಿ, ೧೯೮೩ರಲ್ಲಿ `ನೀರಿಗೆ ಬರುವಳು ನಾರಿ’ ಎಂಬ ಲಲಿತ ಪ್ರಬಂಧ, ೧೯೮೮ರಲ್ಲಿ `ಡಾ.ಅಂಬೇಡ್ಕರ್’ ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಕರ್ಮವೀರ, ಕಸ್ತೂರಿ, ವಿಜಯವಾಣಿ ಹಾಗೂ ಸ್ಥಳೀಯ ಪತ್ರಿಕೆಯಲ್ಲಿ ಮತ್ತು ರಾಜ್ಯ ಮಟ್ಟದ ಇತರರು ಸಂಪಾದಿಸಿದ ಕೃತಿಗಳಲ್ಲಿಯೂ ಪ್ರಕಟವಾಗಿವೆ.
ಇವರ ವ್ಯಕ್ತಿತ್ವ ಕುರಿತು ೧೯೯೮ರಲ್ಲಿ ಜೈವಂತ ಎಂ.ಜ್ಯೋತಿಯವರು `ಬಡವರ ಬಂಧು ಸೈನಿಕಾರ’ ಎಂಬ ಕೃತಿ ಪ್ರಕಟಿಸಿದ್ದರೆ, ಹಂಶÀಕವಿಯವರು `ಸೈನಿಕರ ಸುತ್ತ-ಮುತ್ತ’ ಎಂಬ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಲೇಖಕಿ ಸಾಧನಾ ರಂಜೋಳಕರ್ ರವರ ಇವರ ಕುರಿತು ಕವಿತೆಯೊಂದು ಬರೆದು ಹಾರೈಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ೧೯೯೬ರಲ್ಲಿ ಕರ್ನಾಟಕ ಸರ್ಕಾರÀ ಯುವಜನಾ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ರಾಜ್ಯ ಮಟ್ಟದ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಭಾಲ್ಕಿ ತಾಲೂಕಿನ ಆಡಳಿತದಿಂದ ಕನಕಶ್ರೀ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ,ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿಯು ಸೇವೆ ಸಲ್ಲಿಸಿದ ಇವರು ೧೭-೮-೨೦೨೦ರಲ್ಲಿ ಇಹಲೋಕ ತ್ಯೇಜಿಸಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರದ ಕೊಂಡಿಯೊAದು ಕಳಚಿದಂತಾಗಿದೆ.
ಡಾ.ವಡ್ಡೆ ಹೇಮಲತಾ
ಜಿಲ್ಲೆಯ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಡಾ.ವಡ್ಡೆ ಹೇಮಲತಾ ರವರು .ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಗಣಪತರಾವ ವಡ್ಡೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೮-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವೀಧರರಾದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿದ್ದ ಇವರು ಬಹುದಿನಗಳ ನಂತರ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೨೦೦೬ರಲ್ಲಿ `ಬೀದರ ಜಿಲ್ಲೆಯ ಹಬ್ಬ ಹರಿದಿನಗಳು’ ೨೦೧೧ರಲ್ಲಿ `ಸಾಹಿತ್ಯ ಚಿಂತನ’ ಎಂಬ ಲೇಖನಗಳ ಸಂಕಲನಗಳು, `ಪ್ರತಿಫಲನ’ ಎಂಬ ಮಕ್ಕಳ ಕಥಾಸಂಕಲನ ೨೦೧೪ರಲ್ಲಿ `ಮಂತ್ರ-ತAತ್ರ’ ಮತ್ತು `ಆಧುನಿಕ ಕನ್ನಡ ಸಾಹಿತ್ಯ ಮಹಿಳಾ ಸಣ್ಣ ಕತೆಗಳ ಅವಲೋಕನ’ ೨೦೧೬ರಲ್ಲಿ `ದೇಶ ವಿದೇಶದ ಪಯಣದ ಪರಿ’ ೨೦೧೮ರಲ್ಲಿ `ನೆರಳ ಬೆಳಕು’ ಮತ್ತು `ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-೨. ಭಾಗ-೨ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಮತ್ತು ಇವರ `ಜನಪದ ಸಾಂಸ್ಕೃತಿಕ ಲೋಕ’ ಮತ್ತು `ಕುಲದ ಗತಿ ಬಲ್ಲಿರಾ….’ ಎಂಬ ಕೃತಿಗಳು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನಾದ್ಯಂತ ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದರಿAದ ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಡಾ. ಚಂದ್ರಪ್ಪ ಭತಮುರ್ಗೆ
ಸೃಜನಶೀಲ ಮತ್ತು ಜಾನಪದ ಸಂಶೋಧನಾ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಚಂದ್ರಪ್ಪ ಭತಮುರ್ಗೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗೋಧಿಹಿಪ್ಪರಗಾ ಗ್ರಾಮದ ಶ್ರೀ ಧೂಳಪ್ಪ ಮತ್ತು ಶ್ರೀಮತಿ ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೬-೧೯೬೮ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವೀಧರರಾದ ಇವರು ೧೯೯೬ರಿಂದ ದಾನಶೀಲ ಚಂದ್ರಪ್ಪ ಗೌರಶೆಟ್ಟಿ ಪದವಿ ಪೂರ್ವ (ಅನುದಾನಿತ) ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ನಿಡವಂಚಿ ಭದ್ರೇಶ್ವರರ ಅನುಭಾವ ಪದಗಳು’ ಎಂಬುದು ಇವರ ಎಂ.ಫೀಲ್ ಪ್ರಬಂಧವಾದರೆ, `ಆರೂಢ ತತ್ವ ಪರಂಪರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿ ೨೦೦೪ರಲ್ಲಿ `ಚೆನ್ನಮಲ್ಲೇಶ್ವರ ತ್ಯಾಗಿಗಳು ಇಟಗಿ’ ಎಂಬ ಜೀವನ ಚರಿತ್ರೆ, ೨೦೧೧ರಲ್ಲಿ `ನನ್ನೂರು-ನನ್ನವ್ವ ಭಾಗ-೧’ ಎಂಬ ಕೃತಿಯು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯಿಂದ `ಅತ್ಯುತ್ತಮ ಪುಸ್ತಕ ಪ್ರಶಸ್ತಿ ಲಭೀಸಿದೆ. ೨೦೧೩ರಲ್ಲಿ `ಬಾನಶೀಲ ಚಂದ್ರಪ್ಪ ಗೌರಶೆಟ್ಟಿ’ ಎಂಬ ವ್ಯಕ್ತಿಚಿತ್ರ, ೨೦೧೪ರಲ್ಲಿ `ನಮ್ಮೂರು -ನನ್ನವ್ವ. ಭಾಗ -೨, ಹಾಗೂ ೨೦೧೫ರಲ್ಲಿ `ಆದರ್ಶ ಉದ್ಯಮಿ ಸಂಗಯ್ಯ ರೇಜಂತಲ್, ಮತ್ತು `ಅಣ್ಣನ ನೆನಪು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಇವರಿಗೆ ೨೦೨೦ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ. ಇವರು ಬೀದರದ `ಕೈವಲ್ಯ ಕೌಸ್ತುಭ’ ಎಂಬ ತ್ರೈಮಾಸಿಕದ ಸಂಪಾದಕರಾಗಿ ಸುಮಾರು ೧೫ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಈಶ್ವರಿ ಶಿವರಾಜ ಪಾಟೀಲ
ಉದಯೋನ್ಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ, ಹಾಡು,ಲೇಖನ ಮೊದಲಾದ ಬರಹಗಳು ಬರೆದ ಕವಯತ್ರಿಯೆಂದರೆ ಈಶ್ವರಿ ಶಿವರಾಜ ಪಾಟೀಲ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಗುರುಪಾದಪ್ಪ ಮತ್ತು ತಾರಾಬಾಯಿ ದಂಪತಿಗಳಿಗೆ ದಿನಾಂಕ ೦೪-೦೭-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ,ಬಿ.ಇಡಿ.ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ೧೯೯೪ರಲ್ಲಿ ತಮ್ಮ ಹುಟ್ಟೂರಿನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೆನಕನಳ್ಳಿ, ನೌಬಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಬೀದರ ತಾಲೂಕಿನ ಅಮಲಾಪೂರ ಶಾಲಾ ಶಿಕ್ಷಕರಾಗಿದ್ದಾರೆ.
ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು ೨೦೧೫ರಲ್ಲಿ `ನೀಲಮನ ಬಳಗದ ವಚನಗಳು’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಗುರುಸ್ತುತ್ತಿ’ ಎಂಬ ಕೃತಿ, ಹಾಗೂ ಕೆಲ ಹಾಡುಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ನಾಟಕ ರೂಪಕಗಳಲ್ಲಿಯೂ ನಟಿಸಿ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ಹುಬ್ಬಳ್ಳಿಯ `ಸಿದ್ದಾರೂಢ ಅಮೃತ’ ಎಂಬ ಮಾಸಪತ್ರಿಕೆಯಲ್ಲಿ ತಮ್ಮ ಬರಹಗಳು ಪ್ರಕಟಿಸಿದ್ದಾರೆ. ೨೦೧೬ರಲ್ಲಿ ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಪ್ರತಿಷ್ಠಾನ ಬೆಂಗಳೂರಿನಿAದ `ಬಸವ ಶಿರೋಮಣಿ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಗಣಪತಿ ಭೂರೆ
`ಸರಿದ ನಕ್ಷತ್ರ’ ಎಂಬ ಕಥಾಸಂಕಲನದಿAದ ಹೆಸರುವಾಸಿಯಾದ ಕತೆಗಾರರೆಂದರೆ ಗಣಪತಿ ಭೂರೆಯವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದ ಚನ್ನಮಲ್ಲಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್ ಪದವಿಧರರಾಗಿದ್ದು ಸದ್ಯ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಅಪಾರ ಸಾಹಿತ್ಯದ ಆಸಕ್ತರಾದ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ `ನನಗೊಂದು ಬಯಕೆ’ `ಬೆಂಕಿಯೊಳಗಿನ ಬೆಳಕು’ ಇವು ಕವನ ಸಂಕಲನಗಳಾದರೆ, `ಸರಿದ ನಕ್ಷತ್ರ’ ಇದು ಅವರ ಕಥಾಸಂಕಲನವಾಗಿದೆ. ಈ ಕೃತಿಗೆ ಜನಸೇವಾ ಸಂಘದಿAದ ಉತ್ತಮ ಕಥಾ ಪ್ರಶಸ್ತಿಯು ಲಭಿಸಿದೆ.ಮತ್ತು `ನಾವು’ ಎನ್ನುವುದು ಇವರು ಬರೆದ ಕಾದಂಬರಿ. ಇದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. `ನಿಗೂಢ ಬದುಕು’ ಇದು ಅವರ ಚಿಂತನಾತ್ಮಕ ಪ್ರಬಂಧ ಸಂಕಲನವಾಗಿದ್ದರೆ, `ವಿದ್ಯೆಗೆ ಒದ್ದವ’ ಎಂಬುದು ನಾಟಕ ಇದು ಅಪ್ರಕಟಿತವಾಗಿದೆ. ಹೀಗೆ ಇವರು ಬರೆದ ಕತೆ, ಕವನ, ಕಾದಂಬರಿ ಸಾಹಿತ್ಯ ಸಾಧನೆಗೆ ಮೈಸೂರಿನಿಂದ ಕುವೆಂಪು ಕಾವ್ಯ ಪುರಸ್ಕಾರ, ಮತ್ತು ವರಕವಿ ಬೇಂದ್ರೆ ಕಾವ್ಯ ಪುರಸ್ಕಾರ ಲಭಿಸಿವೆ. ಅಷ್ಟೇಯಲ್ಲದೆ ನೂತನ ಸಾಹಿತ್ಯ ವಾರಪತ್ರಿಕೆಯವರು ಏರ್ಪಡಿಸಿದ ರಾಜ್ಯ ಮಟ್ಟದ `ಚುಟುಕು’ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಲಭಿಸಿದೆ. ಮತ್ತು ಭಾಲ್ಕಿ ತಾಲೂಕಿನ ಆಡಳಿತ ಮಂಡಳಿವತಿಯಿAದಲೂ ಇವರಿಗೆ `ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಡಾ. ರಘುಶಂಖ ಭಾತಂಬ್ರಾ
`ರಘುಶAಖ ಭಾತಂಬ್ರಾ’ ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರ ನಿಜನಾಮ ರಘುನಾಥ ಖರಾಬೆ ಎಂದಾಗಿದೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರೆಪ್ಪ ಹಾಗೂ ಗುರಮ್ಮ ಎಂಬ ದಂಪತಿಗಳಿಗೆ ದಿನಾಂಕ ೧-೧-೧೯೭೦ ರಲ್ಲಿ ಜನ್ಮ ತಳೆದಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ. ಪದವಿಧರರಾಗಿ ಕೆಲವರ್ಷ ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ೧೯೯೮ರಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಕವಿ,ಸಾಹಿತಿ,ವಿಮರ್ಶಕ,ಸಂಶೋಧಕ ಸಂಪಾದಕರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಎರಡು ಮುಖ’ ಮತ್ತು `ಹೊನ್ನ ದಿವಿಗೆ’ `ಕೊನೆಯೆಂದು ಎಂಬ’ ಕವನ ಸಂಕಲನಗಳು, `ವಚನ ಸಾಹಿತ್ಯ ಹೊಸ ಪರಿಕಲ್ಪನೆ’ `ವಚನ ಸಂಪದ’ `ಭೂಮಿಕೆ’ ಎಂಬ (ಲೇಖನ) `ಓರೆಗಲ್ಲು’ (ವಿಮರ್ಶೆ) `ಚರಿತ್ರೆಯ ಸುತ್ತ’ ಎಂಬ (ಸಂಶೋಧನೆ) `ಶ್ರೀಗಂಧ ಪ್ರಭುರಾವ ಕಂಬಳಿವಾಲೆ ‘ `ಮಹಾದಾಸೋಹಿ ಪಥಿಕ’ `ಶಿಕ್ಷಣ ಸಿರಿ ಡಾ.ಪೂರ್ಣಿಮಾ ಜಿ’ ಎಂಬ ಜೀವನ ಚರೀತ್ರೆಗಳು, `ಕರ್ನಾಟಕೇತರ ಶರಣ ಶರಣೆಯರು’ `ಅಟ್ಟಳೆ ನಾಡಿನ ಅಣಿಮುತ್ತುಗಳು’ `ವರ್ತಮಾನದೊಡಲು’ `ಬೀದರ ಪ್ರಾದೇಶಿಕ ಸ್ವಾತಂತ್ರ‍್ಯ ಸಂಗ್ರಾಮ’ `ನಡೆ-ನುಡಿ ಸಿದ್ದಾಂತವಾದಲ್ಲಿ’ `ಅರ್ಚನೆ ಪೂಜೆ ನೇಮದಲ್ಲಿ’ `ಲೋಕನಾಯಕ ಭೀಮಣ್ಣ ಖಂಡ್ರೆ ’ ಎಂಬ ೨೨ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಕಂಬಳಿವಾಲೆ ಸಮಿತಿ ಸ್ಥಾಪಿಸಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳು ನಡೆಸುತ್ತಿರುವ ಇವರು ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸದ್ಯ ಇವರು ಭಾಲ್ಕಿಯ `ಶಾಂತಿ ಕಿರಣ’ ದ್ವಿಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರ `ಹೊನ್ನ ದಿವಿಗೆ’ ಎಂಬ ಕವನ ಸಂಕಲನ ಸೋಲಾಪುರ ವಿಶ್ವವಿದ್ಯಾಲಯದ ಕನ್ನಡ ಬಿ.ಎ.ವಿದ್ಯಾರ್ಥಿಗಳಿಗೆ ಪಠ್ಯವಾದರೆ `ಶ್ರೀಗಂಧ ಪ್ರಭುರಾವ ಕಂಬಳಿವಾಲೆ ‘ ಎಂಬ ಕೃತಿಯು ನಾಂದೇಡದ ಸ್ವಾಮಿ ರಮಾನಂದ ವಿಶ್ವವಿದ್ಯಾಲಯದ ಬಿ.ಎ.ನಾಲ್ಕನೇ ಸೇಮಿಸ್ಟರ್ ವಿದ್ಯಾರ್ಥಿಗಳಿಗ ಪಠ್ಯ ಪುಸ್ತಕವಾಗಿದೆ.
ನಾಮದೇವ ಜ್ಯಾಂತೆ
ಉದಯೋನ್ಮುಖ ಬರಹಗಾರರಲ್ಲಿ ಒಬ್ಬರಾಗಿ ಕವನ,ಲೇಖನ, ಹನಿಗವನ ಮೊದಲಾದ ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ನಾಮದೇವ ಜ್ಯಾಂತೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾತಂಭ್ರಾ ಗ್ರಾಮದ ಶಂಕ್ರೇಪ್ಪಾ ಮತ್ತು ಇಂದಿರಾಬಾಯಿ ದಂಪತಿಗಳಿಗೆ ದಿನಾಂಕ ೨೦-೭-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ ಪದವಿಧರರಾದ ಇವರು ಭಾಲ್ಕಿಯ ಶಾಂತಿವರ್ಧಕ ಡಿ.ಇಡಿ ಕಾಲೇಜಿನಲ್ಲಿ ೧೪ ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಜೇವರ್ಗಿಯ ಶ್ರೀ ಬಸವೇಶ್ವರ ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯ ರಚಿಸುವ ಗೀಳು ಬೆಳೆಸಿಕೊಂಡು ೨೦೧೧ರಲ್ಲಿ `ಭಾವನೆಗಳೆ ಹೀಗೆ’ ಎಂಬ ಕವನಸಂಕಲನ, ಮತ್ತು ೨೦೧೩ರಲ್ಲಿ `ಆಧುನಿಕ ಶಿಕ್ಷಣದ ಒಲವುಗಳು’ ಎಂಬ ಡಿ.ಇಡಿ ವಿದ್ಯಾರ್ಥಿಗಳಿಗಾಗಿ ಬರೆದ ಪಠ್ಯ ಪುಸ್ತಕ ಆಧಾರಿತ ಕೃತಿ ಪ್ರಕಟಿಸಿದ್ದಾರೆ. ಇವರು ಬರೆದ ಕವನ, ಲೇಖನ ಬರಹಗಳಿಗೆ ಕೆಲ ಪ್ರಶಸ್ತಿ, ಪುರಸ್ಕಾರವು ಲಬಿಸಿವೆ. ೨೦೦೦ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರದ (ಕಿಣ್ಣಿ) ಗ್ರಾಮದ ಜ್ಞಾನ ಸೂರ್ಯ ತರುಣ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಇವರ ಕವನಕ್ಕೆ ಬಹುಮಾನ ಪಡೆದು `ಜ್ಞಾನ ಸೂರ್ಯ’ ಎಂಬ ಮಚ್ಚೇಂದ್ರ ಪಿ ಅಣಕಲ್ ಸಂಪಾದಿಸಿದ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ಮತ್ತು ಬೆಂಗಳೂರಿನ `ವಿಶೂ’ ಎಂಬ ಕವನ ಸಂಕಲನ ಸೇರಿದಂತೆ ಬೀದರ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಹಾಗೂ ಭಾಲ್ಕಿಯಲ್ಲಿ ಏರ್ಪಡಿಸಿದ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ಮತ್ತು ನಾಡಿನ ಹಲವಾರು ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು, ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿ
ಶರಣ ತತ್ವ ಪ್ರಚಾರ ಮತ್ತು ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕರೆಂದರೆ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿಯವರು.ಇವರ ಮೂಲನಾಮ `ಪೂಜ್ಯ ಶ್ರೀ ಶಿವಕುಮಾರ ಡಾಕುಳಗೆ ‘ ಎಂದಾಗಿದೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಸ್ವಾಮಿ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧೪-೧೧-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಕೆಲವರ್ಷ ಉತ್ತರ ಕರ್ನಾಟಕ ಪತ್ರಿಕೆ ವರದಿಗಾರರಾಗಿ, ಕೆಂಪು ನೆಲ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ,ವಿಜಯವಾಣಿಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ ಪೂಜ್ಯರು ಸದ್ಯ ಬೆಂಗಳೂರಿನ ಕುಂಬಳಗೂಡಿನಲ್ಲಿರುವ `ಬಸವ ಗಂಗೋತ್ರಿ’ ಆಶ್ರಮದ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾಗಿದ್ದಾರೆ.
ಇವರು `ಅಂತರAಗ ದಿವ್ಯಜ್ಯೋತಿ’ `ಅನುಭಾವದಮೃತ’ `ಚಿಂತನ ಮಂಥನ’ ಎಂಬ ಕೃತಿಗಳು ಪ್ರಕಟಿಸಿ ೨ ಹಿಂದಿ ಸೇರಿ ೧೫ ಪ್ರವಚನ ಸಿ.ಡಿ.ಗಳು ಹೊರತಂದಿದ್ದಾರೆ. ಇವರ ಕವನ, ಲೇಖನ, ಚಿಂತನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಗುರುಬಸವ ಕಾರುಣ್ಯ’ ಎಂಬ ಇವರ ಜೀವನ ಚರೀತ್ರೆಯು ಮೈಸೂರಿನ ಸಿ.ದೊಡ್ಡ ವೀರಪ್ಪನವರು ಬರೆದು ಪ್ರಕಟಿಸಿದ್ದಾರೆ. ಇವರು ನವದೆಹಲಿ ಬಸವ ಮಂಟಪದ ಪ್ರಧಾನ ಸಂಚಾಲಕರಾಗಿ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾಗಿ, ಫೆಡರೇಶನ್ ಆಫ್ ಇಂಡಿಯನ್ ರಿಲಿಜಸ್ ನ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾರೆ. ಮತ್ತು ಪೂಜ್ಯ ಲಿಂಗಾನAದ ಸ್ವಾಮೀಜಿಯವರ ಪ್ರವಚನದ ಪ್ರಭಾವದಿಂದ ವೈರಾಗ್ಯ ಹೊಂದಿ ಪೂಜ್ಯ ಮಾತೆ ಮಹಾದೇವಿಯವರಿಂದ `ಜಂಗಮ ದೀಕ್ಷೆ’ ಗೈದು ಬಸವಾದಿ ಶರಣರ ಸೇವೆಯಲ್ಲಿ ತೊಡಗಿದ್ದಾರೆ. ಅಷ್ಟೇಯಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ದಿವ್ಯ ಸಾನಿಧ್ಯವಹಿಸಿ ಬಹುಭಾಷಾ ಪ್ರಾವೀಣ್ಯತೆಯಿಂದ ಉಪನ್ಯಾಸ ಪ್ರವಚನಗಳನ್ನು ನೀಡುವ ಇವರ ಸರಳತ ವ್ಯಕ್ತಿತ್ವಕ್ಕೆ ಅಣ್ಣಾ ಹಜಾರೆ, ಸ್ವಾಮಿ ಅಗ್ನಿವೇಶ, ರವಿಶಂಕರ ಗುರೂಜಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾ.ಪುಟ್ಟಮಣಿ ದೇವಿದಾಸ
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪುಸ್ತಕಗಳು ಪ್ರಕಟಿಸಿದ ಲೇಖಕಿಯೆಂದರೆ ಡಾ.ಪುಟ್ಟಮಣಿ ದೇವಿದಾಸ. ಇವರು ಬೀದರ ಜಿಲ್ಲೆ ಭಾಲ್ಕಿಯ ದೇವಿದಾಸ ಪ್ಯಾಗೆ ಮತ್ತು ರತ್ನಮ್ಮ ಪ್ಯಾಗೆ ದಂಪತಿಗಳಿಗೆ ದಿನಾಂಕ ೭-೧೨-೧೯೭೨ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್ . ಪಿ.ಎಚ್.ಡಿ. ಪದವಿಧರರಾದ ಇವರು ಕಲಬುರ್ಗಿಯ ಗೋದುತಾಯಿ ದೊಡ್ಡಪ್ಪ ಅಪ್ಪಾ ಮಹಿಳಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಇವರು `ವಿಚಾರ ವಾಹಿನಿ’ `ವಿ.ಶಿವಾನಂದರ ಹೈದರಾಬಾದ್-ಕರ್ನಾಟಕದ ಕನ್ನಡ ಶಿಲಾ ಶಾಸನಗಳು’ `ಹೈದರಾಬಾದ್-ಕರ್ನಾಟಕದ ಗಾದೆಗಳು’ `ಸಾಹಿತ್ಯ ಸನ್ನಿಧಿ’. ‘ಉರಿಲಿಂಗ ಪೆದ್ದಿ’ `ಬೆಂಕಿಯಲ್ಲಿ ಮಿಂದ ಮಿಸುನಿಯರು’ ಎಂಬ ಕೃತಿಗಳು ರಚಿಸಿದ್ದಾರೆ. `ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ದಂಪತಿಗಳ ಜೀವನ ಸಾಧನೆ ಒಂದು ಅಧ್ಯಯನ’ ಇದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ `ವಿ.ಶಿವಾನಂದರ ಹೈದರಾಬಾದ್-ಕರ್ನಾಟಕದ ಕನ್ನಡ ಶಿಲಾ ಶಾಸನಗಳು’ ಎಂಬ ಕೃತಿಯು ಶರಣಬಸವ ವಿಶ್ವವಿದ್ಯಾಲಯದ ಎಂ.ಎ.ಕನ್ನಡ ಪ್ರಥಮ ವರ್ಷದ ಶಾಸನ ವಿಷಯಕ್ಕೆ ಪರಾಮರ್ಶನ ಗ್ರಂಥವಾಗಿ ಆಯ್ಕೆಯಾಗಿದೆ. ಇವರ ಬರಹಗಳು ರಾಷ್ಟಿçÃಯ ಅಂತರಾಷ್ಟಿçÃಯ ಜರ್ನಲ್ ಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಸುಮಾರು ೪೦ ಲೇಖನಗಳು ಪ್ರಕಟಗೊಂಡು, ಆಕಾಶವಾಣಿಯಲ್ಲಿಯು ಹಲವಾರು ಚಿಂತನಾ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಾಗೂ ಎಫ್.ಎಂ.೯೦.೮ ರೇಡಿಯೋ ಕೇಂದ್ರ ಶರಣಬಸವೇಶ್ವರ ಸಂಸ್ಥಾನ ಕಲಬುರಗಿಯಿಂದ ಇವರ ಅನೇಕ ಸಾಹಿತ್ಯಕ್ಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವರಿಗೆ ಹುಮನಾಬಾದ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಇವರ `ವಿಚಾರ ವಾಹಿನಿ’ ಎಂಬ ಕೃತಿಗೆ ಉತ್ತಮ ಅಂಬೇಡ್ಕರ್ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬನಸಿಧರ ರಾಠೋಡ
ಕವಿ ಸಾಹಿತಿ ಹಾಗೂ ಕಾದಂಬರಿಕಾರ ಬನಸಿಧರ ರಾಠೋಡ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರುದನೂರು ತಾಂಡಾದ ಗಣಪತಿ ಮತ್ತು ಗೋಮಾಬಾಯಿ ದಂಪತಿಗಳಿಗೆ ೧-೬-೧೯೭೩ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ೧೯೯೭ರಲ್ಲಿ `ಮಾಯಾಜಾಲ’ ಎಂಬ ಕಾದಂಬರಿ ಬರೆದು ಪ್ರಕಟಿಸಿದ್ದಾರೆ.
ಪಾರ್ವತಿ ವಿ.ಸೋನಾರೆ
ರಂಗ ಕಲಾವಿದೆ, ನಾಯಕಿ, ನಟಿ, ಸಾಹಿತಿಯಾಗಿ ಗುರ್ತಿಸಿಕೊಂಡ ಲೇಖಕಿಯೆಂದರೆ ಪಾರ್ವತಿ ವಿ. ಸೋನಾರೆಯವರು. ಇವರು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಕೊಂಕಣಗಾAವ ಗ್ರಾಮದ ಜಟಿಂಗರಾಯ ಮತ್ತು ಭೀಮಬಾಯಿ ದಂಪತಿಗಳಿಗೆ ದಿನಾಂಕ ೧೮-೭-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬೀದರ ತಾಲೂಕಿನ ಮೈಲೂರು ಗ್ತಾಮದ ಪ್ರಾಥಮಿಕ ಕಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದ ವಿಜಯಕುಮಾರ್ ಸೋನಾರೆಯವರ ಪತ್ನಿಯಾದ ಇವರು `ನಾವಿಬ್ಬರು’ ಎಂಬ ‘ಕವನ ಸಂಕಲನ, `ಭವರಿ’ ‘ಅವ್ವ ನೀ ಸಾಯಬಾರದಿತ್ತು’ ಎಂಬ ಕಥಾಸಂಕಲನಗಳು, `ಅಂಬಿಗರ ಚೌಡಯ್ಯನವರ ಜೀವನ,ವಚನ, ಭಾವಾರ್ಥ’ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ.
ಇವರು ಬರೆದ `ಗುಜ್ಜೆವ್ವನ ಗುಡಿಸಲು’ ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಮೂರನೇ ಸೆಮಿಸ್ಟರ್ ಗೆ ಪಠ್ಯವಾಗಿದೆ. ಮತ್ತು `ಭವರಿ’ ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಇವರು ‘ಚಾಂದಿನಿ’ ಎಂಬ ಕನ್ನಡ ಹಾಗೂ `ದ ಬ್ಲೇಂಡ್ ಫೇಲ್’ ಎಂಬ ಹಿಂದಿ ಕಿರುಚಿತ್ರಗಳಲ್ಲಿ ಹಾಗೂ `ಸುರ್ಯ ಶಿಖಾರಿ’ `ನಾಗಮಂಡಲ’. `ಕೊಡೆಗಳು ಸರ್ ಕೊಡೆಗಳು’ ಮೊದಲಾದ ನಾಟಕಗಳಲ್ಲಿ ನಟಿಸಿದ್ದಾರೆ. ಇವರ ಕಲೆ ಸಾಹಿತ್ಯವನ್ನು ಕಂಡು ಶಾರದಾ ಪ್ರತಿಷ್ಠಾನದಿಂದ `ಕವಯತ್ರಿ ಕಲಾರತ್ನ ಪ್ರಶಸ್ತಿ .ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಬೀದರನಲ್ಲಿ ನೆಲಿಸಿದ್ದಾರೆ.
ಸುನೀತಾ ದಾಡಗೆ
ಉದಯೋನ್ಮುಖ ಬರಹಗಾರರಾಗಿ ಗುರ್ತಿಸಿಕೊಂಡು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಸುನೀತಾ ದಾಡಗಿಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರರಾವ ಮತ್ತು ಮಲ್ಲಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಬೀದರ ಕೆ.ಎಚ್.ಬಿ.ಕಾಲೋನಿಯ ಶ್ರೀಧರ ಗೌಡರ ಧರ್ಮ ಪತ್ನಿಯಾಗಿದ್ದು, ೧೯೯೮ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ ಕೊಣಮೇಳಕುಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಕನ್ನಡ ವ್ಯಾಕರಣ ಪ್ರವೇಶಿಕೆ ’ ಎಂಬ ವ್ಯಾಕರಣಗ್ರಂಥ `ಈ ಸುದಿನ’ ಎಂಬ ಲೇಖನ ಕೃತಿ, `ಜನಪದ ಕಾಳಜಿಯ ಗೌರಮ್ಮ ಸಿದ್ದಾರೆಡ್ಡಿ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ತಾಲೂಕಾ ಬೆಸ್ಟ್ ಗೈಡ್ ಕ್ಯಾಪ್ಟನ್ ಪ್ರಶಸ್ತಿ, ೨೦೦೯ರಲ್ಲಿ ತಾಲೂಕು ಮಟ್ಟದ ಶಿಕ್ಷಕ ಪ್ರಶಸ್ತಿ, ೨೦೧೦ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗ ಶ್ರೀ ಮುರುಘಮಠದಿಂದ `ಶಿಕ್ಷಕ ರತ್ನ ಪ್ರಶಸ್ತಿ’ ಬಸವಮುಕ್ತಿ ಮಂದಿರದಿAದ `ಸೃಜನಶೀಲ ಬರಹಗಾರ್ತಿ ಪ್ರಶಸ್ತಿ:, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ಸೃಜನಶೀಲ ರತ್ನ ಪ್ರಶಸ್ತಿ, ಚಿತ್ರದುರ್ಗದ ಸಿರಿಗನ್ನಡ ಪ್ರತಿಷ್ಠಾನದಿಂದ `ಕನ್ನಡ ರತ್ನ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ಸಾಕಷ್ಟು ಸಲ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನವಾಚನವು ಮಾಡಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಎಂ.ಪಿ.ಮುದಾಳೆ
ದಲಿತ, ಬಂಡಾಯ ಬರಹಗಳು ಬರೆದು ಲೇಖಕ, ಪತ್ರಕರ್ತರಾಗಿ ಗುರ್ತಿಸಿಕೊಂಡ ಸಾಹಿತಿಯೆಂದರೆ ಎಂ.ಪಿ.ಮುದಾಳೆ. ಇವರ ಪೂರ್ಣನಾಮ ಮಲ್ಲಪ್ಪ ತಂದೆ ಪೀರಪ್ಪ ಮುದಾಳೆ ಎಂದಾಗಿದೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪೂರ ಗ್ರಾಮದ ಪೀರಪ್ಪಾ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧೫-೬-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ೧೯೯೫ರಲ್ಲಿ `ಚಿಗುರಿದ ಕನಸ್ಸು’ ಎಂಬ ಕವನ ಸಂಕಲನ, ೨೦೦೬ರಲ್ಲಿ `ಕನ್ನಡ ಸಿನಿಮಾ ಕ್ವಿಜ್’ ಎಂಬ ಸಿನಿಮಾ ಮಾಧ್ಯಮ ಸಾಮಾನ್ಯ ಜ್ಞಾನ ಕುರಿತಾದ ಕೃತಿ, ೨೦೧೦ರಲ್ಲಿ `ಪ್ರೀತಿಯೆ ನನ್ನುಸಿರು’ ಎಂಬ ಲೇಖನಗಳ ಸಂಕಲನ, ೨೦೧೨ರಲ್ಲಿ ಡಾ.ರಾಜ್‌ಕುಮಾರ ಅವರ ಕುರಿತು `ಡಾ.ರಾಜ್ ಕಾವ್ಯ ಕಂಬನಿ’ ಎಂಬ ಸಂಪಾದಿತ ಕವನಸಂಕಲನ, ೨೦೧೩ರಲ್ಲಿ ಬೀದರದ ಕವಿ ಶಂಭುಲಿAಗ ವಾಲ್ದೊಡ್ಡಿಯವರ ಕುರಿತು `ರಂಗ ಕಲಾವಿದ ಶಂಭುಲಿAಗ ವಾಲ್ದೊಡ್ಡಿ’ ಎಂಬ ಜೀವನ ಚರಿತ್ರೆಯು ಬರೆದು ಪ್ರಕಟಿಸಿದ್ದಾರೆ.
ಇವರು ಪತ್ರಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದು, ನಿಮ್ಮ ದೂತ,ಲಂಕೇಶ್ ಪತ್ರಿಕೆ, ಪೋಲಿಸ್ ವರ್ಲ್ಡ, ಕೆಂಡ ಪತ್ರಿಕೆಗಳ ವರದಿಗಾರರಾಗಿ, `ನಾರಂಜಾ ಎಕ್ಸ್ ಪ್ರೆಸ್’ ಪತ್ರಿಕೆಯ ವ್ಯವಸ್ಥಾಪಕ ಪ್ರಧಾನ ಸಂಪಾದಕರಾಗಿ, `ಬೀದರ ಮಿರಾರ್’ ಎಂಬ ಆಂಗ್ಲ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ನಾರಂಜ್ ಎಕ್ಸ್ ಪ್ರೆಸ್’ ಪತ್ರಿಕೆ ಮತ್ತು ಯೂಟ್ಯೂಬ್ ಚಾನಲ್ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೧೦ರಲ್ಲಿ ಕರ್ನಾಟಕ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಪ್ರತಿವರ್ಷ ರಾಜ್ಯ ಮಟ್ಟದ ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಿ ಅವರಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಮತ್ತು ಜಿಲ್ಲಾ ಮಟ್ಟದ ಜಾನಪದ ಮೇಳವು ಸಂಘಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಕವನ, ಲೇಖನಗಳು ಸಿನಿಮಾ ಪತ್ರಿಕೆ ನಟರಾಜ ಮತ್ತು ಸ್ಥಳೀಯ ಪತ್ರಿಕೆ. ಆಕಾಶವಾಣಿಯಲ್ಲಿಯು ಪ್ರಕಟ,ಪ್ರಸಾರವಾಗಿವೆ. ಇವರು ೨೦೦೫ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ೨೦೧೬ರಲ್ಲಿ ಬೀದರದಲ್ಲಿ ನಡೆದ ಜನಪರ ದಲಿತ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಯೋಜಕರಾಗಿ, ೨೦೧೦ರಲ್ಲಿ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಸಂಚಾಲಕರಾಗಿಯು ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೦೮ರಲ್ಲಿ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ `ಅಗ್ನಿ ಅಸ್ತ್ರ’ ಪತ್ರಿಕೆಯವರಿಂದ `ವಿಶ್ವ ಚೇತನ ಬುದ್ಧ ಶಾಂತಿ ಸದ್ಭಾವನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ಕಲಬುರಗಿಯಲ್ಲಿ ನಡೆದ ೧೨ನೇ ರಾಜ್ಯ ಮಟ್ಟದ ದಲಿತ ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ.
ಡಾ.ವಿಕ್ರಮ ವಿಸಾಜಿ
ಕವಿ, ಸಾಹಿತಿ, ಲೇಖಕ,ವಿಮರ್ಶೆಕ ಹಾಗೂ ಅನುವಾದಕರಾಗಿ ಪರಿಚಿತರಾದ ಲೇಖಕರೆಂದರೆ ಡಾ.ವಿಕ್ರಮ ವಿಸಾಜಿ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೋಹಿನೂರು ಗ್ರಾಮದ ಗುರುಲಿಂಗಪ್ಪ ವಿಸಾಜಿ ಮತ್ತು ಕಲಾವತಿ ವಿಸಾಜಿ ದಂಪತಿಗಳಿಗೆ ದಿನಾಂಕ ೧-೧೨-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯ್ರದಲ್ಲಿ ತುಂಬ ಆಸಕ್ತರಾಗಿ ತಮ್ಮ ೧೨ನೇ ವಯಸ್ಸಿನಲ್ಲಿಯೆ `ಗಾಳಿ ಪಟ’ ಎಂಬ ಮಕ್ಕಳ ಕವನ ಸಂಕಲನ, ೧೯೯೦ರಲ್ಲಿ `ನನ್ನ ಸುತ್ತಲಿನ ಜನರು’ ೧೯೯೪ರಲ್ಲಿ `ನೀವೇಕೆ ಕತ್ತಲೆ ಕಡೆ’ ೨೦೦೦ ಇಸ್ವಿಯಲ್ಲಿ `ತಮಾಷಾ’ ೨೦೦೬ರಲ್ಲಿ `ಗೂಡು ಕಟ್ಟುವ ಚಿತ್ರ’ ಎಂಬ ಕವನ ಸಂಕಲನಗಳು, ೨೦೦೩ರಲ್ಲಿ `ಇಥಕಾ’ ಎಂಬ ಗ್ರೀಕ್ ಕೃತಿ ಇಂಗ್ಲೀಷನಿAದ ಕನ್ನಡಕ್ಕೆ, ೨೦೧೨ರಲ್ಲಿ `ನೌಪಂಖುಡಿಯಾ’ ಎಂಬ ಕೃತಿ ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ. ೨೦೦೪ರಲ್ಲಿ `ಬೆಳಗಿನ ಮುಖ’ ೨೦೧೦ರಲ್ಲಿ `ಮಾತು ಕೃತಿ’ ಎಂಬ ವಿಮರ್ಶೆ ಕೃತಿಗಳು, ಮತ್ತು `ರಸಗಂಗಾಧರ’ ಎಂಬ ನಾಟಕ, ೨೦೦೧ರಲ್ಲಿ `ಕಂಬಾರರ ನಾಟಕಗಳು’ ೨೦೦೬ರಲ್ಲಿ `ಜೀವ ಮಿಡಿತದ ಸದ್ದು’ ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ರಸಗಂಗಾಧರ ನಾಟಕ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ.ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಕವನಗಳು ೨೦೦೪ರಲ್ಲಿ ಪಿ.ಯು.ಸಿ.ಗೆ ೨೦೧೨ರಲ್ಲಿ ಎಂ.ಎ.ತರಗತಿಗಳಿಗೆ ಪಠ್ಯ ಪುಸ್ತಕಗಳಾಗಿವೆ. ಮತ್ತು ಕೆಲ ಕವಿತೆಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೧೦ರಲ್ಲಿ ಭಾರತೀಯ ಭಾಷಾ ಪರಿಷತ್ತು ಕಲ್ಕತ್ತಾದಿಂದ `ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕಾರ’ ಲಭಿಸಿದೆ. ೨೦೧೧ರಲ್ಲಿ ಕಸಾಪದಿಂದ `ಶ್ರೀ ವಿಜಯ ಪ್ರಶಸ್ತಿ, ೨೦೧೧ರಲ್ಲಿ ಭಾಲ್ಕಿ ಮಠದಿಂದ `ಚನ್ನಬಸವ ಕಾಯಕ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜು ಪ್ರಶಸ್ತಿ, ಕ.ರಾ.ಬೆಲ್ಲದ ಕಾಲೇಜು ಮಂಡರಗಿ ಪ್ರಶಸ್ತಿ, ಜಿ.ಎನ್.ಎಸ್.ಕಾಲೇಜು ಧಾರವಾಡ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪಿ. ಕೆ. ಪ್ರಭು
ಉದಯೋನ್ಮುಖ ಬರಹಗಾರ,ಕವಿ,ಗಾಯಕರಾಗಿ, ಸಾಹಿತ್ಯ ಮತ್ತು ಸಂಗೀತ ಉಭಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕರೆಂದರೆ ಪಿ.ಕೆ.ಪ್ರಭು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ಪುಂಡಲೀಕ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ `ಬುದ್ಧ ಭೀಮರ ಭಜನೆ ಗೀತೆಗಳು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಕವನ ,ಹಾಡು,ಭಜನೆ ಗೀತೆ,ಭಾವಗೀತೆ, ಭಕ್ತಿ ಗೀತೆಗಳನ್ನು ಬರೆಯುವ ಇವರು ಸ್ವತಃ ಸಂಗೀತ ಸಂಯೋಜನೆ ಮಾಡಿ ಕರವೇ ಟ್ರಾಕ್, ಮದುವೆ ಮೊದಲಾದ ಸಾರ್ವಜನಿಕ ರಸಮಂಜರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡುವ ಕಲೆ ಬೆಳೆಸಿಕೊಂಡಿದ್ದಾರೆ. ಬೀದರ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳು ನೀಡಿ ಕವಿ ಗಾಯಕರಾಗಿ ಹೆಸರುವಾಸಿಯಾಗಿದ್ದಾರೆ. ಮತ್ತು ಬೀದರನಲ್ಲಿ ನಡೆದ ಜಾನಪದ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಇವರಿಗೆ ೨೦೧೯ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ನ್ಯಾಷನಲ್ ಫಿಲೋಸಫ್ ಅವಾರ್ಡ ಕೂಡ ಲಭೀಸಿದೆ. ಮತ್ತು ಭಾಲ್ಕಿ ತಾಲೂಕು ಉತ್ಸವ ಪ್ರಶಸ್ತಿ, ಜನಪರ ಉತ್ಸವ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಡಾ. ಗಾಂಧಿಜಿ ಮೊಳಕೇರೆ
ಕೆಲ ಐತಿಹಾಸಿ ಮತ್ತು ಸಾಮಾಜಿಕ ಕೃತಿಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಗಾಂಧಿಜಿ. ಸಿ.ಮೊಳಕೇರೆ. ಇವರು ಭಾಲ್ಕಿ ತಾಲೂಕಿನ ಕೊನ ಮೇಳಕುಂದಾ ಗ್ರಾಮದ ಚಂದ್ರಪಾ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೨-೭-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೫ರಿಂದ ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಡಾ. ಬಿ. ಆರ್. ಅಂಬೇಡ್ಕರ್ ಆ್ಯಂಡ್ ವುಮೆನ್ ಎಂಪವರಮೆAಟ್’ `ಸೋಶಿಯಲ್ ಆ್ಯಂಡ್ ಕಲ್ಚರಲ್ ಹಿಸ್ಟರಿ ಆಫ್ ಇಂಡಿಯಾ’ `ಯುಗಪುರುಷ ಮಲ್ಲಿಕಾರ್ಜುನ ಖರ್ಗೆಜಿ’ `ಬೀದರ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ’ `ಮಂಜುಶ್ರೀ’ `ಡಾ.ಬಿ.ಆರ್.ಅಂಬೇಡ್ಕರ್ ಆ್ಯಂಡ್ ಸೋಶಿಯೋ ಪಾಲಿಟಿಕಲ್ ಎಂಪವರಮೆAಟ್’ `ಹೈದರಾಬಾದ್ ಕರ್ನಾಟಕ ಇತಿಹಾಸ ಕಥನ’ `ಆಧುನಿಕ ವಚನ ಸಂಪುಟ-೨೧’ `ಬಸವಶ್ರೀ ಸಿದ್ದರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ’ `ಬಸವ ಬೆಳಗು’ ಎಂಬ ಕೃತಿಗಳು ರಚಿಸಿದ್ದಾರೆ.
ಇವರಿಗೆ ೨೦೦೫ರಲ್ಲಿ ಯುಜಿಸಿಯಿಂದ `ರಾಜೀವಗಾಂಧಿ ಫೀಲೊಶಿಪ್ ಪ್ರಶಸ್ತಿ. ೨೦೧೧ರಲ್ಲಿ `ಪೋಸ್ಟ್ ಡಾಕ್ಟರಲ್ ಫಿಲಾಸಫಿ’ ೨೦೧ ರಲ್ಲಿ `ಕಾಯಕ ರತ್ನ’ ಮತ್ತು ಕಲಬುರಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಹಾಗೂ ೨೦೧೮ರಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿವತಿಯಿಂದ `ಡಾ.ಬಿ.ಆರ್.ಅಂಬೇಡ್ಕರ್ ನ್ಯಾಶನಲ್ ಫಿಲಾಸಫಿ ಪ್ರಶಸ್ತಿ’ ೨೦೨೦ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೨೦ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಡಾ.ಮೀನಾಕುಮಾರಿ ಎಸ್.ಪಾಟೀಲ್
ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ, ಡಾ.ಮೀನಾಕುಮಾರಿ ಎಸ್.ಪಾಟೀಲ್. ಇವರು ಬೀದರ ಜಿಲ್ಲೆ ಭಾಲ್ಕಿಯ ಶ್ರೀ ಸುಭಾಸ ಪಾಟೀಲ್ ಮತ್ತು ಶ್ರೀಮತಿ ಲಲಿತಾಬಾಯಿ ದಂಪತಿಗಳಿಗೆ ದಿನಾಂಕ ೩೦-೧೨-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು ೨೦೦೮ರಲ್ಲಿ ಕಲಬುರಗಿ ಜಿಲ್ಲೆ ಬಿಲಗುಂದಿಯ ಶ್ರೀ ರೇವಣಸಿದ್ದಪ್ಪಾ ಪಾಟೀಲ್ ರವರ ಧರ್ಮ ಪತ್ನಿಯಾಗಿದ್ದು, ೨೦೦೯ರಿಂದ ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ `ಚನ್ನಬಸವ ಪಟ್ಟದೇವರು’ `ಶಿವಶರಣ ಘಟ್ಟಿವಾಳಯ್ಯ’ `ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು’ ಇವು ಅವರು ಪ್ರಕಟಿಸಿದ ಕೆಲ ಪ್ರಮುಖ ಕೃತಿಗಳಾಗಿವೆ. ಇವರು ಬರೆದ ಕವನ,ಲೇಖನ, ಚಿಂತನ,ಬರಹ ಉಪನ್ಯಾಸಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿದ್ದು, ಮತ್ತು ದೂರದರ್ಶನ ಚಂದನ ವಾಹಿನಿಯಲ್ಲಿಯು ಸಂದರ್ಶನ ನೀಡಿರುತ್ತಾರೆ. ಅಷ್ಟೇಯಲ್ಲದೆ ಇವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಉಪನ್ಯಾಸಗಳನ್ನು ಕೂಡ ಮಂಡಿಸಿದ್ದಾರೆ. ಹಾಗೂ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಲ್ಲಿಯು ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿ ಕವಿಗೊಷ್ಠಿಯಲ್ಲಿ ಕವನ ವಾಚನೆಯು ಮಾಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಡಾ. ಎಂ.ಮಕ್ತುAಬಿ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಲೇಖನ, ವಚನ ಮೊದಲಾದವು ಬರೆದ ಕವಯತ್ರಿಯೆಂದರೆ ಡಾ.ಎಂ.ಮಕ್ತುAಬಿ. ಇವರು ಬೀದರ ಜಿಲ್ಲೆ ಭಾಲ್ಕಿಯ ಮಹಬೂಬ್ ಸಾಬ್ ಮತ್ತು ಮಹಬೂಬಿ ಎಂಬ ದಂಪತಿಗಳಿಗೆ ದಿನಾಂಕ ೨೦-೬-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ೨೦೦೮ರಲ್ಲಿ `ಹೃತ್ಕಿರಣಗಳು’ ಎಂಬ ಕವನ ಸಂಕಲನ, `ನನ್ನ ಶಿವ’ ಎಂಬ ಆಧುನಿಕ ವಚನಸಂಕಲನ ೨೦೧೩ರಲ್ಲಿ `ಗೌರಿಯ ಕನಸು’ ಎಂಬ ಲೇಖನ ಸಂಕಲನ, ೨೦೧೪ರಲ್ಲಿ `ಭಾಲ್ಕಿ ತಾಲೂಕಿನ ಚುಟುಕು ಸಾಹಿತ್ಯ ಸಿಂಚನ’ ೨೦೧೫ರಲ್ಲಿ `ಭಾಲ್ಕಿ ಚಂದ್ರನ ಮಹಾ ಬೆಳಗು’ `ಭಾಲ್ಕಿ ಮಠದ ದಿಕ್ಸೂಚಿ’ ಎಂಬ ಕೃತಿಗಳು ಪ್ರಕಟಿಸಿ `ಅಂತರAಗದಾಳ’ `ಶಿವಗಾಂಗೇಯ’ ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಕವನ ಲೇಖನಗಳು ವಿಜಯವಾಣಿ, ಬಸವಪಥ, ಬಸವ ಬೆಳಗು,ಮಹಾಮನೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಕೆಲ ಗೀತೆಗಳು ಧ್ವನಿ ಸುರುಳಿಯಾಗಿ ಮುದ್ರಿತಗೊಂಡಿವೆ.
ಇವರಿಗೆ ಬೀದರ ಧರಿನಾಡು ಕನ್ನಡ ಸಾಹಿತ್ಯ ಸಂಘದಿAದ `ಸುವರ್ಣ ಕನ್ನಡಿಗ’ ದೇಶಪಾಂಡೆ ಪ್ರತಿಷ್ಠಾನದಿಂದ `ಆಧುನಿಕ ವಚನ ವಿದ್ರುಮ’ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ `ರಮಣಶ್ರೀ’ ಇಳಕಲ್ ಮಠದಿಂದ `ಬಸವ ಕಾರುಣ್ಯ’ ಬೆಂಗಳೂರು ಬಸವ ಸಮಿತಿಯಿಂದ `ಬಸವ ಸೇವಾ ರತ್ನ’ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ’ ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನವನ್ನು ಸ್ಥಾಪಿಸಿ ಅದರ ಮೂಲಕ ೫ ವಷಗಳಿಂದ ರಾಜ್ಯಮಟ್ಟದ ಸಾಹಿತಿಗಳಿಗೆ ‘ಬಸವಲಿಂಗ ಪಟ್ಟದ್ದೆವರ’ ಹೆಸರಿನ ಪ್ರಶಸ್ತಿ ಮತ್ತು ೧೦ ಸಾವಿರ ಗೌರವಧನವು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಡಾ.ರೇಣುಕಾ ಎಂ.ಸ್ವಾಮಿ
ಉದಯೋನ್ಮಖ ಬರಹಗಾರ್ತಿಯಾಗಿ ಸಾಹಿತ್ಯ ರಚಿಸಿದ ಲೇಖಕಿಯೆಂದರೆ, ಡಾ.ರೇಣುಕಾ ಎಂ.ಸ್ವಾಮಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪಂಚಯ್ಯಾ ಸ್ವಾಮಿ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪಿ.ಎಚ್.ಡಿ. ಪದವಿಧರರಾದ ಇವರು ೨೦೧೪ರಲ್ಲಿ ರಾಯಚೂರು ಜಿಲ್ಲೆ ಶಕ್ತಿನಗರದ ಸರ್ಕಾರಿ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೫ರಲ್ಲಿ `ಬಸವ ಪರಿಶೋಧ’ ಮತ್ತು `ತೆಲಂಗಾಣ ಕಿರಣ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ, ಉದಯವಾಣಿ, ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ `ಕನ್ನಡ ಮಾಧ್ಯಮ ಪ್ರಶಸ್ತಿ’ ಹಾಗೂ ಔರಾದ ತಾಲೂಕಿನ ಕಾಯಕ ಯೋಗಿ ಟ್ರಸ್ಟ್ ಸಂತಪೂರ ವತಿಯಿಂದ’ `ಕಾಯಕ ಯೋಗಿ ಪ್ರಶಸ್ತಿ, ಬೀದರದ ದಾಸ ಸಾಹಿತ್ಯ ಪರಿಷತ್ತಿನ ವತಿಯಿಂದ. `ತಲ್ಲಣಿಸದಿರು ತಾಳು ಮನವೇ’ ಎಂಬ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ನಡೆದ ೩ನೇ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವ ಹಾಗೂ ತೆಲಂಗಾಣ ಕನ್ನಡ ಸಂಘದ ವತಿಯಿಂದ ಕೃಷ್ಣಾದಲ್ಲಿ ನಡೆದ ಗಡಿನಾಡು ಉತ್ಸವ, ಮತ್ತು ಔರಾದ ಕಸಾಪ ಸಾಹಿತ್ಯ ಸಮ್ಮೇಳನ ಚಿಂತಾಕಿ ಸೇರಿದಂತೆ ಹಲವಾರು ಸಮ್ಮೇಳನಗಳಲ್ಲಿ ಪಾಲ್ಗೊಂಡು ಉಪನ್ಯಾಸ, ಕವನ ವಾಚನ ಮಾಡಿದ್ದಾರೆ, ಮತ್ತು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳು ಮಂಡಿಸಿದ್ದಾರೆ.
ಮಹೇಶ ಬನ್ನಾಳೆ
ಉದಯೋನ್ಮುಖ ಯುವ ಬರಹಗಾರರಾಗಿ ಶರಣ ಸಾಹಿತ್ಯದಲ್ಲಿ ಗುರುತಿಸಿಕೊಂಡವರೆAದರೆ ಮಹೇಶ ಬನ್ನಾಳೆಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ `ಕೋನಮೇಳಕುಂದಾ’ ಗ್ರಾಮದ ಸಂಗಶೆಟ್ಟಿ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಭಾಲ್ಕಿ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಕತೆ, ಕವನ, ಲೇಖನ ಮೊದಲಾದ ಬರಹಗಳನ್ನು ಬರೆಯುವ ಗೀಳು ಬೆಳೆಸಿಕೊಂಡ ಇವರು `ಜ್ಣಾನ ಜ್ಯೋತಿ ಡಾ.ಚನ್ನಬಸವಲಿಂಗ ಪಟ್ಟದ್ದೆವರು’ ಎಂಬ ಕವನ ಸಂಕಲನ, ಇದು ಕೃತಿ. ಭಾಲ್ಕಿ ಶ್ರೀಗಳ ಕುರಿತು ಬರೆದದ್ದಾಗಿದೆ. ಮತ್ತು ‘ಭಾಲ್ಕಿಯ ಬೆಳಗು ಬಸವಲಿಂಗ ಪಟ್ಟದ್ದೆವರು’ ಎಂಬ ಕೃತಿಯು ಇದು ಭಾಲ್ಕಿ ಶ್ರೀಗಳ ಜೀವನ ಚರಿತ್ರೆಯಾಗಿದೆ. `ಗುರುಕುಲ ಕಿರಣ’ ಎಂಬುದು ಲೇಖಕರು ಸೇವೆ ಸಲ್ಲಿಸುತ್ತಿರುವ ಕರಡ್ಯಾಳ ಗುರುಕುಲ ಶಿಕ್ಷಣ ಸಂಸ್ಥೆಯ ಕುರಿತು ಬರೆದಿದ್ದಾರೆ. ಅಷ್ಟೇಯಲ್ಲದೆ ಇವರು ಬರೆದ ಹಲವಾರು ಕವನ ಲೇಖನ ಬರಹಗಳು ಕನ್ನಡದ ಕೆಲ ದಿನಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಶ್ರೀದೇವಿ ಹೂಗಾರ
ಇತ್ತೀಚೆಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಪುಸ್ತಕ ಪ್ರಕಟಿಸುತಿರುವ ಕವಯತ್ರಿಯೆಂದರೆ ಶ್ರೀದೇವಿ ಹೂಗಾರ . ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ವೀರಣ್ಣ ಹಾಗೂ ನೀಲಮ್ಮಾ ದಂಪತಿಗಳಿಗೆ ದಿನಾಂಕ: ೧೫-೧೦-೧೯೮೨ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಸರ್ಕಾರಿ ಪ್ರಾಥಮೀಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಸಿ.ಆರ್.ಪಿ.ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು `ಭಾವಲಹರಿ’. `ಭಾವ ಬುಗುರಿ’ `ಎಲ್ಲರ ಒಡಲಲ್ಲೂ ಕಣ್ಣೀರುಕಡಲು’ ಎಂಬ ಕವನಸಂಕಲನಗಳು, `ಚುಕ್ಕಿ’ ಎಂಬ ಪತ್ರಲೇಖನ ಸಂಕಲನ. ‘ಕನ್ನಡ ಕಟ್ಟಿದವರು ಪಂಚಾಕ್ಷರಿ ಪುಣ್ಯಶೆಟ್ಟಿ ‘ ಎಂಬ ವ್ಯಕ್ತಿಚಿತ್ರಣ ಕೃತಿಯು ಪ್ರಕಟಿಸಿದ್ದಾರೆ. ಇವರು ಮಾಡಿದ ಶೈಕ್ಷಣಿಕ,ಮತ್ತು ಸಾಹಿತ್ಯ ಸಾಧನೆಗೆ ಬೀದರ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ `ಕವಯತ್ರಿ ರತ್ನ ಪ್ರಶಸ್ತಿ, ‘ವಿದ್ಯಾ ವಿಶಾರದೆ ಪ್ರಶಸ್ತಿ’ ‘ಸಾಹಿತ್ಯ ರತ್ನ ಪ್ರಶಸ್ತಿ’. ‘ಗಾಯತ್ರಿಬಾಯಿ ಪುಲೆ ಸ್ಮಾರಕ ಪ್ರಶಸ್ತಿ’. ‘ಅಕ್ಕ ಪ್ರಶಸ್ತಿ’ ‘ಅನುಭವ ಮಂಟಪ ಉತ್ಸವ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ನಾಡಿನ ಸಮೂಹ ಮಾದ್ಯಮಗಳÀಲ್ಲಿ ಪ್ರಕಟವಾಗಿವೆ. ಹೆಚ್ಚು ವಿದ್ಯುನ್ಮಾನ ಮಾದ್ಯಮಗಳಲ್ಲಿ ತಮ್ಮ ಸಾಹಿತ್ಯ ಹಾಗೂ ಉಪನ್ಯಾಸಗಳನ್ನು ಪ್ರಚುರಪಡಿಸುತ್ತಾ ಫೇಸ್ ಬುಕ್ ನಲ್ಲಿ ಪ್ರತಿದಿನ ಸಂಜೆ ೬ಗಂಟೆಗೆ ಪ್ರವಚನ ಮತ್ತು ಉಪನ್ಯಾಸ ನೀಡುತ್ತಾರೆ. ಇವರ ಹೆಸರಿನ ಮೇಲೆ ಅಭೀಮಾನಿ ಬಳಗವು ಹುಟ್ಟಿಕೊಂಡಿರುವುದು ವಿಶೇಷವಾಗಿದೆ. `ನಿವೇದಿತಾ ಹೂಗಾರ ಸಾಹಿತ್ಯಕ ಮತ್ತು ವ್ಯಕ್ತಿ ವಿಕಾಸನ ಟ್ರಸ್ಟ್ ನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಲ್ಲಪ್ಪಾ ಮೊಳಕೇರೆ
`ಬೇಸರಾಗಬೇಡ’ ಎಂಬ ಪುಸ್ತಕ ಪ್ರಕಟಿಸುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಉದಯೋನ್ಮುಖ ಯುವ ಬರಹಗಾರರೆಂದರೆ ಕಲ್ಲಪ್ಪಾ ಮೊಳಕೇರೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊನಮೇಳಕುಂದಾ ಗ್ರಾಮದ ತುಕಾರಾಮ ಮತ್ತು ಕಮಳಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೮೪ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ.ಪದವಿಧರರಾದ ಇವರು ಕೊನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾಲ್ಕಿಯ ಡಾ,ವೈಜಿನಾಥ ಬಂಡೆ ಮತ್ತು ಡಾ.ಗಾಂಧಿಜಿ ಮೋಳಕೇರಾ ಎಂಬ ಸಾಹಿತಿಗಳ ಪ್ರೇರಣೆಯಿಂದ ಕತೆ, ಕವನ, ಲೇಖನಗಳನ್ನು ಬರೆದು `ಬೇಸರಾಗಬೇಡ’ ಎಂಬ ಕವನಸಂಕಲನವು ಪ್ರಕಟಿಸಿದ್ದಾರೆ.
ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೨೦೦೬ರಲ್ಲಿ ಬೀದರನÀಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮತ್ತು ೨೦೧೬ರಲ್ಲಿ ರಾಯಚೂರಿನಲ್ಲಿ ನಡೆದ ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಮತ್ತು ಬೀದರ ಸಮ್ಮೇಳನದಲ್ಲಿ ಪ್ರಕಟವಾದ `ಭಾಹತ್ತರ’ ಕವನಸಂಕಲನದಲ್ಲಿ ಇವರದೊಂದು ಕವಿತೆಯು ಪ್ರಕಟವಾಗಿದೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಮಹಾರುದ್ರ ಡಾಕುಳಗೆ
ವಚನ ಮತ್ತು ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕರೆಂದರೆ ಮಹಾರುದ್ರ ಡಾಕುಳಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೬-೧೦-೧೯೮೪ ರಲ್ಲಿ ಜ£ಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಬೀದರನಲ್ಲಿ ಕಂಪ್ಯೂಟರ್ ಡಿಸೈನರ್ ಮತ್ತು ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶರಣ ಸಾಹಿತ್ಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಇವರು ‘ಎಲ್ಲಿಗೆ ಪಯಣ’ ಎಂಬ ಕವನಸಂಕಲನ, ‘ಪ್ರಥಮಂತು ಬಸವಣ್ಣ’ ಮತ್ತು ‘ಬಸವ ಮಹಾಮನೆ ದರ್ಶನ’ ಎಂಬ ಶರಣ ಸಾಹಿತ್ಯದ ಕೃತಿಗಳು ಬರೆದು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯಕ್ಕೆ ೨೦೧೯ರಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರೀಯ ಜೂ£ಯರ್ ಫೆಲೋಶಿಪ್.ಮತ್ತು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಳತ್ತಿನ ವತಿಯಿಂದ ‘ರಾಷ್ಟ್ರೀಯ ಲೋಕಕಲಾ ಪ್ರಶಸ್ತಿ. ಹುಲಸೂರು ಮಠದಿಂದ ಸೇವಾ ವಿದುರ ಪ್ರಶಸ್ತಿ, ಹಾಗೂ ಬೀದರ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ‘ಶರಣಧರ್ಮ ರತ್ನ ಪ್ರಶಸ್ತಿ. ಸೇರಿದಂತೆ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮತ್ತು ಅನೇಕ ಅಭಿನಂದನಾ ಗ್ರಂಥಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಇವರ ಲೇಖನ. ಕವನಗಳು ಪ್ರಕಟಗೊಂಡಿವೆ. ಅಳ್ಟೇಯಲ್ಲದೆ ಇವರು ನಿರೂಪಕರಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ರೇಣುಕಾ ಎನ್.ಬಿ.
ಉದಯೋನ್ಮಖ ಕವಯತ್ರಿ, ಗಾಯಕಿ,ಹಾಗೂ ಅನುವಾದಕರಾಗಿ ಕೆಲ ಕೃತಿಗಳು ಪ್ರಕಟಿಸಿದ ಲೇಖಕಿಯೆಂದರೆ, ರೇಣುಕಾ ಎನ್.ಬಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದ ನೆಹರು ಭಂಡೆ ಮತ್ತು ಪದ್ಮಾವತಿ ಭಂಡೆ ದಂಪತಿಗಳಿಗೆ ದಿನಾಂಕ ೨೦-೧೧-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ತಾಲೂಕಿನ ಕಂದಗೂಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೦ರಲ್ಲಿ `ಭಾವ ಕಾರಂಜಿ’ ೨೦೧೩ರಲ್ಲಿ `ಗರಿ ಬಿಚ್ಚಿದ ನವಿಲು’ ೨೦೧೫ರಲ್ಲಿ `ವಚನಾಂಜಲಿ.’ ಎಂಬ ಕವನ ಸಂಕಲನಗಳು, ಮತ್ತು ೨೦೧೮ರಲ್ಲಿ ಹಿಂದಿ ಕಾದಂಬರಿಕಾರ ಕುಶಲೋಶ ಶಾಖ್ಯ ರವರÀ `ಸ್ತ್ರೀ ಶಕ್ತಿ ಯಶೋಧರ’ ಎಂಬ ಕಾದಂಬರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೯ರಲ್ಲಿ `ಭೂಮಿಗೆ ಬಂದ ಭಗವಂತ’ ಎಂಬ ಜೀವನ ಚರಿತ್ರೆ ಶಿವರಾಮ ಮಹಾರಾಜರ ಕುರಿತು ಪ್ರಕಟಿಸಿದ್ದಾರೆ. ಇವರ `ಭಾವ ಕಾರಂಜಿ’ ಕವನ ಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಧನ ಪಡೆದುಕೊಂಡಿರುತ್ತದೆ. ಇವರ ಕಲೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೀದರ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಮೊದಲಾದ ಕಡೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಬೀದರ ಕದಂಬ ಕನ್ನಡ ಸಾಹಿತ್ಯ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಗಾನ ಕಲಾವಿದೆಯಾಗಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ `ಗಾನ ಸುಧೆ ’ ಕಾರ್ಯಕ್ರಮವು ನೀಡಿ ಜನಮನ ರಂಜಿಸಿದ್ದಾರೆ. ಇವರ ಕತೆ,ಕವನ,ಲೇಖನ,ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ರೇಣುಕಾ ಎನ್.ಬಿ.
ಉದಯೋನ್ಮಖ ಕವಯತ್ರಿ, ಗಾಯಕಿ,ಹಾಗೂ ಅನುವಾದಕರಾಗಿ ಕೆಲ ಕೃತಿಗಳು ಪ್ರಕಟಿಸಿದ ಲೇಖಕಿಯೆಂದರೆ, ರೇಣುಕಾ ಎನ್.ಬಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದ ನೆಹರು ಭಂಡೆ ಮತ್ತು ಪದ್ಮಾವತಿ ಭಂಡೆ ದಂಪತಿಗಳಿಗೆ ದಿನಾಂಕ ೨೦-೧೧-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ತಾಲೂಕಿನ ಕಂದಗೂಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೦ರಲ್ಲಿ `ಭಾವ ಕಾರಂಜಿ’ ೨೦೧೩ರಲ್ಲಿ `ಗರಿ ಬಿಚ್ಚಿದ ನವಿಲು’ ೨೦೧೫ರಲ್ಲಿ `ವಚನಾಂಜಲಿ.’ ಎಂಬ ಕವನ ಸಂಕಲನಗಳು, ಮತ್ತು ೨೦೧೮ರಲ್ಲಿ ಹಿಂದಿ ಕಾದಂಬರಿಕಾರ ಕುಶಲೋಶ ಶಾಖ್ಯ ರವರÀ `ಸ್ತ್ರೀ ಶಕ್ತಿ ಯಶೋಧರ’ ಎಂಬ ಕಾದಂಬರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೯ರಲ್ಲಿ `ಭೂಮಿಗೆ ಬಂದ ಭಗವಂತ’ ಎಂಬ ಜೀವನ ಚರಿತ್ರೆ ಶಿವರಾಮ ಮಹಾರಾಜರ ಕುರಿತು ಪ್ರಕಟಿಸಿದ್ದಾರೆ. ಇವರ `ಭಾವ ಕಾರಂಜಿ’ ಕವನ ಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಧನ ಪಡೆದುಕೊಂಡಿರುತ್ತದೆ. ಇವರ ಕಲೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೀದರ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಮೊದಲಾದ ಕಡೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಬೀದರ ಕದಂಬ ಕನ್ನಡ ಸಾಹಿತ್ಯ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಗಾನ ಕಲಾವಿದೆಯಾಗಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ `ಗಾನ ಸುಧೆ ’ ಕಾರ್ಯಕ್ರಮವು ನೀಡಿ ಜನಮನ ರಂಜಿಸಿದ್ದಾರೆ. ಇವರ ಕತೆ,ಕವನ,ಲೇಖನ,ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ದಿಲೀಪ ವಿ.ತರನಳ್ಳಿ
ಉದಯೋನ್ಮುಖ ಬರಹಗಾರ ಕವಿ, ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡವರೆAದರೆ ದಿಲೀಪ ವಿ.ತರನಳ್ಳಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಶ್ರೀ ವಿಜಯಕುಮಾರ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಇಡಿ. ಪದವೀಧರರಾದ ಇವರು ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಆಸಕ್ತರಾಗಿ ಕತೆ, ಕವನ ,ಲೇಖನ ,ಪ್ರಬಂಧ, ಚುಟುಕು, ಹನಿಗವನ ಮೊದಲಾದವು ರಚಿಸುತ್ತಿದ್ದಾರೆ. ಮತ್ತು ೨೦೨೦ರಲ್ಲಿ `ಹಸಿದ ಹೊಟ್ಟೆ’ ಎಂಬ ಕವನಸಂಕಲನ ಪ್ರಕಟಿಸಿದ್ದು, ಅದು ೨೦೧೯ನೇ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಧನಕ್ಕೆ ಆಯ್ಕೆಯಾಗಿ ಪ್ರಕಟವಾಗಿದೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಅಜಿತ ನೆಳಗೆ
ಕವಿತೆ ಲೇಖನ ಬರಹಗಳನ್ನು ಬರೆದು ಪುಸ್ತಕ ಪ್ರಕಟಿಸುತ್ತಿರುವ ಉದಯೋನ್ಮುಖ ಲೇಖಕರೆಂದರೆ `ಅಜಿತ ನೆಳಗೆಯವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ `ನೆಳಗಿ’ ಗ್ರಾಮದ ನೀಲಕಂಠ ಮತ್ತು ರಾಜಾಬಾಯಿ ದಂಪತಿಗಳಿಗೆ ದಿನಾಂಕ ೭-೧೦-೧೯೯೩ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಎಡ್.ಪದವಿಧರರಾದ ಇವರು ವಿದ್ಯಾರ್ಥಿಯಾಗಿವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ,ಲೇಖನ,ಹನಿಗವನ,ಆಧುನಿಕ ವಚನ ಮೊದಲಾದವು ಬರೆದು ೨೦೧೬ರಲ್ಲಿ `ಬಯಕೆ’ ಎಂಬ ಕವನ ಸಂಕಲನವನ್ನು ಹೊರ ತಂದು ಲೇಖಕರಾಗಿ ಹೊರಹೊಮ್ಮಿದ್ದಾರೆ.
ಇವರು ಬರೆದ ಕತೆ ಕವನ ಲೇಖನ ಬರಹಗಳು `ಸಾಹಿತ್ಯ ಸಿಂಚನ’ ತ್ರೆöÊಮಾಸಿಕ ಸೇರಿ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರ ಕಾವ್ಯ ರಚನೆಯ ಕಲೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿಷ್ಠಾನದವರು `ಕಾವ್ಯ ರತ್ನಾಕರ’ ಎಂಬ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಉನ್ನತ ಶಿಕ್ಷಣದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಆಕಾಶ ಹಿರಿವಗ್ಗೆ
ಉದಯೋನ್ಮುಖ ಯುವ ಬರಹಗಾರರಾದ ಆಕಾಶ ಹಿರಿವಗ್ಗೆಯವರು ಇಂಜಿನಿಯರಿAಗ್ ಪದವಿಧರರಾಗಿದ್ದರು ಕೂಡ ಕನ್ನಡ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕವನ ಚುಟುಕು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಬಸಪ್ಪಾ ಮತ್ತು ಸವಿತಾ ದಂಪತಿಗಳಿಗೆ ದಿನಾಂಕ ೮-೧-೧೯೯೪ ಜನಿಸಿದ್ದಾರೆ. ಇವರು ಗ್ರಾಮದ ಅವರ ಬಾಲ್ಯ ಸ್ನೇಹಿತರಾದ ಮಾಣಿಕರಾವ ಪಾಟೀಲ್ ಅವರೊಂದಿಗೆ ಸೇರಿ `ದಕ್ಷಿಣ ಕಾಶಿ ದರ್ಶನ’ ಎಂಬ ಪೌರಾಣಿಕ ಹಾಗೂ ಐತಿಹಾಸಿಕ ವಿಷಯ ಒಳಗೊಂಡ ಕೃತಿ ರಚಿಸಿದ್ದಾರೆ. ಇದು ಭಾಲ್ಕಿ ತಾಲೂಕಿನ ಪ್ರಸಿದ್ಧ ಮೈಲಾರ ಮಲ್ಲಣ್ಣ ಚರಿತ್ರೆ ಮತ್ತು ಇತಿಹಾಸವನ್ನು ಹೇಳುತ್ತದೆ.
ಮೈಲಾರ ಮಲ್ಲಣ್ಣನ ಕ್ಷೇತ್ರಕ್ಕೆ ಇತಿಹಾಸದಲ್ಲಿ `ದಕ್ಷಿಣ ಕಾಶಿ’ಎಂದು ಹೆಸರು ಪಡೆದಿದೆ. ಆ ಹೆಸರೆ ಸೂಚಿಸುವ ಪುಸ್ತಕ ಇದಾಗಿದೆ. ಮೈಲಾರ ಮಲ್ಲಣ್ಣ ದೇವಸ್ಥಾನ ಕ್ಷೇತ್ರಕ್ಕೆ ಮೊದಲು ಪ್ರೇಮಾಪೂರ,ಮೈಲಾಪೂರ, ಖಾನಾಪೂರ, ಮತ್ತು ದಕ್ಷಿಣ ಕಾಶಿ,ಎಂಬ ವಿವಿಧ ಹೆಸರಿನಿಂದ ಕರೆಯುತ್ತಿದ್ದರೆಂದು ಆ ಗ್ರಾಮದ ಕುರಿತು ಇತಿಹಾಸ ಹೇಳುವ ಈ ಕೃತಿ ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶಿಯಾಗಿದೆ. ಲೇಖಕರಿಗೆ ಯಾವುದೆ ಪ್ರಶಸ್ತಿಗಳು ಲಭಿಸದೆ ಇದ್ದರು ಕೂಡ ಅವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕತೆ, ಕವನ, ಲೇಖನ, ಪ್ರಬಂಧ ಮೊದಲಾದ ಪ್ರಕಾರದಲ್ಲಿ ಪುಸ್ತಕ ಹೊರತರುವ ಉದ್ದೇಶವಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೇಳವಣಿಗೆಯಾಗಿದೆ.
ಮಾಣಿಕರಾವ ಸಿ.ಪಾಟೀಲ್
ಉದಯೋನ್ಮುಖ ಯುವ ಬರಹಗಾರರಾದ ಮಾಣಿಕರಾವ ಪಾಟೀಲ್ ರವರು ಕನ್ನಡ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕತೆ ಕವನ ಚುಟುಕು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಚಂದ್ರಶೇಖರ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೯೫ರಲ್ಲಿ ಜನಿಸಿದ್ದಾರೆ.
ಇವರು ಬರೆದದ್ದು ಒಂದೇ ಒಂದು ಪುಸ್ತಕ. ಅದು ಅವರ ಬಾಲ್ಯ ಸ್ನೇಹಿತರಾದ ಆಕಾಶ ಹಿರಿವಗ್ಗೆ ಅವರೊಂದಿಗೆ ಸೇರಿ `ದಕ್ಷಿಣ ಕಾಶಿ ದರ್ಶನ’ ಎಂಬ ಪೌರಾಣಿಕ ಹಾಗೂ ಐತಿಹಾಸಿಕ ವಿಷಯ ಒಳಗೊಂಡ ಕೃತಿಯನ್ನು ರಚಿಸಿದ್ದಾರೆ. ಇದು ಭಾಲ್ಕಿ ತಾಲೂಕಿನ ಪ್ರಸಿದ್ಧ ಮೈಲಾರ ಮಲ್ಲಣ್ಣನ ಚರಿತ್ರೆ ಹೇಳುತ್ತದೆ. ಮೈಲಾರ ಮಲ್ಲಣ್ಣನ ಕ್ಷೇತ್ರಕ್ಕೆ ಇತಿಹಾಸದಲ್ಲಿ `ದಕ್ಷಿಣ ಕಾಶಿ’ ಎಂದು ಹೆಸರು ಪಡೆದಿದೆ. ಆ ಹೆಸರೆ ಸೂಚಿಸುವ ಪುಸ್ತಕ ಇದಾಗಿದೆ. ಮೈಲಾರ ಮಲ್ಲಣ್ಣ ದೇವಸ್ಥಾನ ಕ್ಷೇತ್ರಕ್ಕೆ ಮೊದಲು ಪ್ರೇಮಾಪೂರ, ಮೈಲಾಪೂರ,ಖಾನಾಪೂರ, ಮತ್ತು ದಕ್ಷಿಣ ಕಾಶಿ,ಎಂಬ ವಿವಿಧ ಹೆಸರಿನಿಂದ ಕರೆಯುತ್ತಿದ್ದರೆಂದು, ಆ ಗ್ರಾಮದ ಕುರಿತು ಇತಿಹಾಸ ಹೇಳುವ ಈ ಕೃತಿ ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿ ಕಂಡು ಬರುತ್ತದೆ. ಲೇಖಕರಿಗೆ ಯಾವುದೆ ಪ್ರಶಸ್ತಿ, ಪುರಸ್ಕಾರಗಳು ಲಭಿಸದೆ ಇದ್ದರು ಕೂಡ ಅವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರು ಕತೆ, ಕವನ, ಲೇಖನ, ಪ್ರಬಂಧ ಮೊದಲಾದ ಪ್ರಕಾರದಲ್ಲಿ ಪುಸ್ತಕ ಹೊರತರುವ ಉದ್ದೇಶದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ.
ಹುಮನಾಬಾದ ತಾಲೂಕಾ ಲೇಖಕರು
ದಿ.ಕಾಶಿನಾಥ ಪಂಚಶೀಲ ಗವಾಯಿ
ಬೀದರ ಜಿಲ್ಲೆಯ ಹಿರಿಯ ದಲಿತ ಬಂಡಾಯ ಸಾಹಿತಿಗಳಲ್ಲಿ ಪ್ರಮುಖರಾಗಿ ಕಂಡು ಬರುವ ಕವಿ ಹಾಗೂ ನಾಟಕಕಾರರೆಂದರೆ ದಿ.ಕಾಶಿನಾಥ ಪಂಚಶೀಲ ಗವಾಯಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಿಲಾಲ್‌ಪುರ ಗ್ರಾಮದ ಕಾಳಪ್ಪ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೪-೪-೧೯೩೩ರಲ್ಲಿ ಜ£ಸಿದ್ದಾರೆ. ತನ್ನ ತಾಯಿ ತವರೂರಾದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಅಧ್ಯಯನ ಮಾಡುವಾಗಲೇ ಅಂದಿನ ಮಹಾಮಾರಿ ಸಿಡುಬು ರೋಗಕ್ಕೆ ತುತ್ತಾಗಿ ಎರಡೂ ಕಣ್ಣುಗಳು ಕಳೆದುಕೊಂಡ ದುರಾದೃಳ್ಟರು. ಆಗ ಅವರಿಗೆ ಶಿಕ್ಷಣ ಮುಂದಿವರೆಸಲು ಆಗದೆ ತಮ್ಮ ತಂದೆಯೊAದಿಗೆ ಹುಟ್ಟೂರಾದ ಹಿಲಾಲಪುರಕ್ಕೆ ಬಂದು, ಗ್ರಾಮದಲ್ಲಿ ಊರ ಗೌಡರು, ಸಾಹುಕಾರರ ದನ ಕಾಯುವ ವೃತ್ತಿಯಲ್ಲಿ ತೊಡಗಿಕೊಂಡು ಬಾಲ್ಯ ಜೀವನ ಶೋಚ£Ãಯವಾಗಿ ಕಳೆದರು. ಆದರೂ ಕಲೆ ಸಾಹಿತ್ಯ ಸಂಗೀತದಲ್ಲಿ ಆಸಕ್ತರಾದ ಇವರು ಗದುಗಿನ ಭೀಮರಾಯ ಮಾಸ್ತರರಿಂದ ಸಂಗೀತ ಪಾಠ ಕಲಿತು ಮುಂದೆ ಹಳ್ಳಿಗಳಲ್ಲಿ ಊರೂರು ತಿರುಗಿ ತಮ್ಮ ಹಾಡುಗಳನ್ನು ಹಾಡಿ ಜನಮನ ರಂಜಿಸುತ್ತ ಬದುಕು ಕಟ್ಟಿಕೊಂಡವರು. ಭಜನೆ,ತತ್ವಪದ,ಗೀಗೀ ಪದ,ಹಂತಿ ಹಾಡು, ಮೋಹರಂ ಪದ ಸೇರಿದಂತೆ ಮೊದಲಾದವು ಬರೆದು ರಾಗಸಂಯೋಜನೆಯೊAದಿಗೆ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ‘ಲವ-ಕುಶ’ ಎಂಬ ನಾಟಕವನ್ನು ರಚಿಸಿ, ಅಲ್ಲಲ್ಲಿ ಜಾತ್ರೆ ಮತ್ತಿತರ ಕಡೆಗಳಲ್ಲಿ £ರ್ದೇಶನ ಮಾಡಿ ಪ್ರದರ್ಶನವು ಮಾಡಿಸಿದ್ದಾರೆ. ಅದಾದ ನಂತರ ಬೀದರಕ್ಕೆ ಬಂದು ಶ್ರೀ ಮಾಣಿಕರಾವ ಜ್ಯೋತಿಯವರ ಪ್ರೇರಣೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗೌತಮ ಬುದ್ಧರ ಹಾಡುಗಳನ್ನು ಬರೆದು ಮೂಢನಂಬಿಕೆಗಳ ವಿರುದ್ಧ ಬಂಡಾಯದ ಕ್ರಾಂತಿ ಗೀತೆಗಳು ಹಾಡಲು ಸುರು ಮಾಡಿ ಬೀದರ, ಕಲಬುರಗಿ, ಆಂಧ್ರ, ತೆಲಂಗಾಣ, ಮಹಾರಾಳ್ಟ್ರಗಳಲ್ಲಿ ಕವಿ,ಗಾಯಕರಾಗಿ ಖ್ಯಾತಿಯನ್ನು ಪಡೆದಿದ್ದಾರೆ.
ನಾಗಪುರದಲ್ಲಿ ಬೌದ್ಧ ದೀಕ್ಷೆಯನ್ನು ಪಡೆದು ಪಂಚಶೀಲ ಎಂಬ ಬಿರುದಿಗೆ ಪಾತ್ರರಾಗಿ ಮುಂದೆ ಬರು ಬರುತಾ ‘ಕಾಶಿನಾಥ ಗವಾಯಿ’ ಹೋಗಿ ಪಂಚಶೀಲ ಕಾಶಿನಾಥ ಗವಾಯಿಯಾದರು. ಜೀವನದಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡರು ಎದೆಗುಂದದೆ ಸಾಹಿತ್ಯ ರಚನೆ ಮತ್ತು ಹಾಡುಗಾರಿಕೆಯಲ್ಲಿ ತೋಡಗಿ ಜೀವನಪೂರ್ತಿ ಕವಿ, ಪಂಚಶೀಲ ಕಾಶಿನಾಥ ಗವಾಯಿ, ಎಂದೇ ಖ್ಯಾತರಾಗಿದ್ದಾರೆ. ಇವರು ಬರೆದ ಹಾಡುಗಳನ್ನು ೧೯೫೪ರಲ್ಲಿ ‘ಬುದ್ಧ ವಚನಾಮೃತ’ ಮತ್ತು ೧೯೬೪ರಲ್ಲಿ ‘ಬುದ್ಧ, ಬಸವ, ಅಂಬೇಡ್ಕರ್’ ಎಂಬ ಎರಡು ಕವನ ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಈಗಲೂ ಇವರ ಈ ಹಾಡುಗಳು ಬೀದರ, ಕಲಬುರಗಿ,ಯಾದಗಿರಿ, ಜಿಲ್ಲೆಯಾದ್ಯಂತ ಗ್ರಾಮೀಣ ಜನರ ಭಜನೆ ಮೋಹರಂ ಮತ್ತಿತರ ಕಡೆಗಳಲ್ಲಿ ಇವರ ಹಾಡುಗಳನ್ನೆ ಹಾಡುತ್ತಾರೆ. ಗವಾಯಿ ಹಾಡುಗಳು ಎಂದರೆ ಗ್ರಾಮೀಣ ಜನರಿಗೆ ಅದೆಂಥದೋ ನಾಡಿಮಿಡಿತ. ತತ್ವ ಪದ, ಜವಾಲ್- ಜವಾಬ್ ಗೀಗೀ ಪದಗಳ ರಚನೆಯಲ್ಲಿ ಅವರದು ಎತ್ತಿದ ಕೈ. ಉತ್ತಮ ಕಂಠಸಿರಿಯನ್ನು ಹೊಂದಿದ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಕಂಡು ರಾಜ್ಯ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಫೀಲೊಶಿಫ್ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ದಲಿತ ಕವಿ ಮಾಣಿಕರಾವ ಜ್ಯೋತಿಯವರನ್ನು ತಮ್ಮ ಗುರುಗಳೆಂದು ನಂಬಿದರು. ಆದರೆ ದಿನಾಂಕ ೬-೪-೨೦೦೬ರಲ್ಲಿ ಇಹಲೋಕ ತ್ಯಜಿಸಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ದೇಶಾಂಶ ಹುಡಗಿ
`ದೇಶಾಂಶ ಹುಡಗಿ’ ಎಂಬ ಕಾವ್ಯನಾಮದಿಂದ ಖ್ಯಾತರಾದ ಹಿರಿಯ ಸಾಹಿತಿಯೆಂದರೆ ಶಾಂತಪ್ಪಾ ದೇವರಾಯ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶರಣಪ್ಪ ಮತ್ತು ಭೀಮಬಾಯಿ ದಂಪತಿಗಳಿಗೆ ದಿನಾಂಕ ೬-೧೧-೧೯೩೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್, ಪದವಿಧರರಾದ ಇವರು ಹಿಂದಿ ಸಾಹಿತ್ಯ ವಿಶಾರದ, ಸಂಸ್ಕೃತ ಪ್ರಾರಂಭಿಣಿ ಕೋರ್ಸುಗಳನ್ನು ಅಧ್ಯಯನ ಮಾಡಿ, ೭ನೇ ತರಗತಿಯವರೆಗೆ ಉರ್ದು, ಮರಾಠಿ ಭಾಷೆಗಳು ದ್ವಿತೀಯ ತೃತೀಯ ಭಾಷೆಯಾಗಿ ಅಧ್ಯಯನ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ಇವರು ಶಾಲಾ ತನಿಖಾಧಿಕಾರಿಯಾಗಿ ಸೇವೆ ಸಲ್ಲಿಸಿ ೧೯೯೪ ದಲ್ಲಿ ನಿವೃತ್ತರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಉತ್ಸಾಹಿಯಾದ ಇವರು ಕತೆ,ಕವನ, ಮಹಾಕಾವ್ಯ, ಲೇಖನ ಚುಟುಕು, ಹನಿಗವನ ಮೊದಲಾದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ್ದಾರೆ. ಅವುಗಳೆಂದರೆ, ೧೯೮೦ರಲ್ಲಿ `ಗ್ರಾಮಶಿಲ್ಪಿಗಳು’ ಎಂಬ ವ್ಯಕ್ತಿ ಚಿತ್ರಗಳ ಕೃತಿ, `ಬದುಕಿನ ಸುತ್ತ’ `ಜ್ಯೋತಿ ಬೆಳಗುತ್ತಿದೆ’ ಎಂಬ ಕವನ ಸಂಕಲನ, ಮಾಸ್ತರನ ಮನೆ’ ಎಂಬ ಕಥಾಸಂಕಲನ, `ಪುಸ್ತಕಗಳ ಸುತ್ತಮುತ್ತ’ ಎಂಬ ಲಲಿತ ಪ್ರಬಂಧ, `ಇವಳು’ ಎಂಬ ಚುಟುಕು ಸಂಕಲನ ಮತ್ತು `ಸತ್ಯವು ಗಲ್ಲಿಗೆರಿತ್ತು’ ಎಂಬ ರುಬಾಯಿ ಸಂಕಲನ, `ಹನಿ ಹನಿ ಹನಿ ಹನಿ’ ಎಂಬ ಹನಿಗವನ `ಚನ್ನಬಸವ ಚರಿತೆ’ ಎಂಬ ಮಹಾಕಾವ್ಯ . `ಬೀದರ ಕನ್ನಡ ಶಬ್ದ ಕೋಶ’ ಎಂಬ ಬೀದರ ಜನರ ಭಾಷೆಯ ಶಬ್ದಕೋಶ, `ದಿಗಂಬರ ಕಾವ್ಯ’ `ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟಿದವರ ಕಥನ ಗೀತೆಗಳು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಅಕ್ಷರ ಜ್ಯೋತಿ’ ಮತ್ತು `ಬೀದರ ದೀಪ’ ಎಂಬ ಸಾಕ್ಷರತೆಯ ಕೃತಿಗಳು ಭಾಗ ೧.೨.೩. ರಲ್ಲಿ ಕನ್ನಡ,ಮರಾಠಿ, ಉರ್ದು ಭಾಷೆಯಲ್ಲಿ ಸಂಪಾದಿಸಿದ್ದಾರೆ. `ನಾ ಕಂಡ ನನ್ನವರು’ `ಬೀದರ ಜಿಲ್ಲೆಯ ಬರಹಗಾರರು’ `ಬೀದರ ಜಿಲ್ಲೆಯ ತತ್ವ ಪದಕಾರರು,’ `ವ್ಯಕ್ತಿ ಸಂಗ್ರಾಮದ ಮೌಕ್ತಿಕಗಳು’ `ಧರಿನಾಡಿನ ಒಗಟುಗಳು’ `ಜಾನಪದ ಸೊಗಡು’ ಸೇರಿದಂತೆ ಸುಮಾರು ೪೫ಕಿಂತ ಹೆಚ್ಚು ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಬಿ.ಎಸ್.ಗದಗಿಮಠ ಜಾನಪದ ತಜ್ಞ ಪ್ರಶಸ್ತಿ, ಮತ್ತು ಕೆ.ಜಿ.ಕುಂದಣಗಾರ ಗಡಿ ಕನ್ನಡ ಸಾಹಿತ್ಯ ಪ್ರಶಸ್ತಿ, ಸಾಕ್ಷರತಾ ಸಮಿತಿಯಿಂದ `ಸಮಾಜಮುಖಿ’ ಪ್ರಶಸ್ತಿ, ಭಾಲ್ಕಿ ಮಠದಿಂದ `ಡಾ.ಚನ್ನಬಸವ ಪಟ್ಟದ್ದೆವರು ಪ್ರಶಸ್ತಿ, ಹಾರಕೂಡ ಮಠದಿಂದ ಶ್ರೀ ಚನ್ನ ರತ್ನ ಪ್ರಶಸ್ತಿ, ಜಾನಪದ ಕಾರಂಜಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೦೮ರಲ್ಲಿ ಬೀದರ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ೧೯೯೮ರಲ್ಲಿ ಧರಿನಾಡು ಕನ್ನಡ ಸಾಹಿತ್ಯ ಸಂಘವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಬೀದರ ಜಿಲ್ಲೆಯಾದ್ಯಂತ ಸಾಕಷ್ಟು ಸಾಹಿತ್ಯ ಚಟುವಟಿಕೆಗಳನ್ನು ಮಾಡಿದ್ದಾರೆ. ಸದ್ಯ ಇವರ ನಾಲ್ಕೈದು ಪುಸ್ತಕಗಳು ಮುದ್ರಣದ ಹಂತದಲ್ಲಿವೆ ಮತ್ತು ೧೫ ಕೃತಿಗಳು ಅಪ್ರಕಟಿತವಾಗಿವೆ.
ಬಿ.ಎಸ್.ಖೂಬಾ
`ಸರಸ್ವತಿ ತನಯ ಜಿಮ್ಮ’ ಎಂಬ ಕಾವ್ಯನಾಮ ಹೊಂದಿದ ಬಿ.ಎಸ್.ಖೂಬಾ ರವರ ಪೂರ್ಣ ಹೆಸರು ಬಂಡೆಪ್ಪಾ ಶರಣಪ್ಪಾ ಖೂಬಾ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೋಳಾದ ಶರಣಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೮-೭-೧೯೩೮ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಹಿಂದಿ, ಸ್ನಾತಕೊತ್ತರ ಪದವಿಧರರಾದ ಇವರು ವಿವಾಹದ ನಂತರ ತಮ್ಮ ಪತ್ನಿಯ ಹುಟ್ಟೂರಾದ ಹುಮನಾಬಾದ ತಾಲೂಕಿನ ಗಡವಂತಿಯಲ್ಲಿ ನೆಲೆ ನಿಂತು. ೧೯೫೯ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ, ಪ್ರೌಢ ಶಾಲಾ ಶಿಕ್ಷಕರಾಗಿ ೧೯೯೬ರಲ್ಲಿ ನಿವೃತ್ತರಾಗಿದ್ದಾರೆ.
೧೯೯೫ರಲ್ಲಿ `ಅಳು ನಗೆಯ ಸುಳಿಯಲ್ಲಿ ಪೆದ್ದ ಜಿಮ್ಮ’ (ಖಂಡಕಾವ್ಯ,) `ಐವತ್ತೆಂಟರಲ್ಲಿ ಅನುತ್ತರನ ಪೌರುಷ’ (ಕವನ ಸಂಕಲನ) ೧೯೯೭ರಲ್ಲಿ `ಬಿಂಬ ಪ್ರತಿಬಿಂಬ’ (ಕಥಾ ಸಂಕಲನ) ೧೯೯೮ರಲ್ಲಿ `ಯುಗವಾಣಿ’ (ಪ್ರಬಂಧ ಕಾವ್ಯ) ೨೦೦೧ರಲ್ಲಿ `ಶತಕಾಂತ್ಯದ ವಚನ ಶತಕ’ (ಆಧುನಿಕ ವಚನ) ೨೦೦೨ರಲ್ಲಿ `ಧರಿನಾಡಿನ ಗಂಡುಗಲಿ ರಾಮ’ (ಚರಿತ್ರೆ) ೨೦೦೯ರಲ್ಲಿ `ವಿಚಾರ-ವೀಚಿ’ (ಚಿಂತನಾ) ೨೦೧೦ರಲ್ಲಿ `ರಹಸ್ಯ ರಂಜನೆ’ (ಪ್ರಬಂಧ) ೨೦೧೧ರಲ್ಲಿ `ಸಹಯೋಗ ಸ್ನೇಹಿ ಎಂ.ಆರ್.ಗಾದಾ’ (ಚರಿತ್ರೆ) ೨೦೧೨ರಲ್ಲಿ `ದಿವ್ಯ ರಶ್ಮಿ’ (ಚಿಂತನೆಗಳು) ೨೦೧೩ರಲ್ಲಿ `ಸ್ವಗತದೊಂದಿಗೆ ಹುಲಿಯ ಸಿದ್ದೇಶ್ವರ ಮತ್ತು ಮುಗ್ಧ ಸಂಗಯ್ಯ’ (ಸ್ವಗತ ಚರಿತ್ರೆ) ಮುಂತಾದ ಕೃತಿಗಳು ಬರೆದಿದ್ದಾರೆ. ಮತ್ತು ೧೯೯೬ರಲ್ಲಿ `ಪುರಸ್ಕಾರ’ ೨೦೦೪ರಲ್ಲಿ `ವಿಶ್ವ ವಿಖ್ಯಾತ ಬಿದ್ರಿಕಲಾ’ ೨೦೦೮ರಲ್ಲಿ `ವಚನ ಪ್ರಭಾ’ ಮತ್ತು ೨೦೦೮ರಲ್ಲಿ `ಕಥಾ ಭಾರತಿ’, `ಯಜ್ಞ ಸೇನಿಯ ಆತ್ಮಕಥನ’, `ಕನ್ನಡ-ಹಿಂದಿ ಕಾವ್ಯಧಾರೆ’ ಎಂಬ ಕೃತಿಗಳು ಹಿಂದಿಗೆ ಅನುವಾದಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯು ಪ್ರಕಟ,ಪ್ರಸಾರವಾಗಿವೆ. ೧೯೯೪ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ. ಜ್ಯೋತ್ಸವ ಪ್ರಶಸ್ತಿ, ಸುರಭಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿಯು ಪಡೆದಿದ್ದಾರೆ. ೧೯೭೦ರಿಂದ ೧೯೭೩ ರವರೆಗೆ ಹುಮನಾಬಾದ ಕಸಾಪ ಅಧ್ಯಕ್ಷರಾಗಿ, ೧೯೭೮ರಿಂದ ೧೯೮೨ರವರೆಗೆ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ೧೯೯೭ರಲ್ಲಿ ಹುಮನಾಬಾದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಚಂದ್ರಪ್ಪ ಹೆಬ್ಬಾಳಕರ್
ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಪ್ಪ ಹೆಬ್ಬಾಳಕರ್ ಅವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಅಡಿವೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೧೪-೪-೧೯೪೦ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್.ಪದವಿ ಪಡೆದು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷರಾಗಿ ಸೇವೆ ಸಲ್ಲಿಸಿ ಬಸವಕಲ್ಯಾಣ ಮತ್ತು ಚಿಂಚೋಳಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವುದರಿಂದ `ಪ್ರೀತಿ’ ಎಂಬ ಕವನ ಸಂಕಲನ, `ಸತ್ಯ ಕಥಾನಕಗಳು ‘ ಎಂಬ ಕಥಾಸಂಕಲನ `ಚಿಂತನ ಲಹರಿ’ `ಚಿಂತನಾ ಚಂದ್ರಿಕೆ’ ಎಂಬ ಚಿಂತನಾ ಕೃತಿ, `ಜೀವನ ಮೌಲ್ಯ ದೀಪಿಕೆ’. `ಬೀದರ ತಾಲೂಕು ದರ್ಶನ’. `ಬೀದರ ಜಿಲ್ಲೆಯ ಮೊಹರಂ ಪದಗಳು’ `ಜಾನಪದದಲ್ಲಿ ಕಳ್ಳು ಬಳ್ಳಿಯ ಸಂಬAಧಗಳು’ `ಬೀದರ ಜಿಲ್ಲೆಯ ಜಾನಪದ ಸೊಗಡು’ `ಗೆಳೆತನ’ `ಉರಿಲಿಂಗ ಪೆದ್ದಿ ಪರಂಪರೆ’ `ದಲಿತೋದ್ದಾರಕರು’ `ಉರಿಲಿಂಗದೇವ ಉರಿಲಿಂಗಪೆದ್ದಿ ಕಾಳವ್ವೆಯ ವಚನ ಸಂಪದ’ `ಚಂದ್ರಣ್ಣನ ವಚನಗಳು’ :`ಚಿಂತನ ಮಂಥನ’ `ವೃದ್ದರ ವೇದನಾಗಳು’ `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ’ (ಚರಿತ್ರೆ) `ಶೇರ್ -ಎ-ದಖ್ಖನ-ಬಿ.ಶ್ಯಾಮಸುಂದರ’ `ಬೀದರ ಜಿಲ್ಲೆಯ ದಲಿತ ಕವಿ- ಕಾವ್ಯ ಒಂದು ಅವಲೋಕನ ‘ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರು `ತಾಮ್ರದ ಕೊಡ’ ಎಂಬ ಕಾದಂಬರಿ ಬರೆದಿದ್ದು ಅದು ಅಪ್ರಕಟಿತವಾಗಿದೆ. ಇವರ ಸಾಹಿತ್ಯ ಸಾಧನೆಗೆ `ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ. ಸಂಸ್ಕಾರ ಪ್ರಶಸ್ತಿ, ಜನಪದ ಜಟ್ಟಿ ಪ್ರಶಸ್ತಿ ,ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಬೀದರ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಗೂ ೧೩ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ಬೀದರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ, ಇಂಗ್ಲಿಷ್ ಭಾಷಾ ವಿಷಯ ಪರಿವೀಕ್ಷಕರಾಗಿ ಹಾಗೂ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು ಸದ್ಯ ೮೦ರ ಇಳಿವಯಸ್ಸಿನಲ್ಲೂ `ಬೀದರ ಜಿಲ್ಲಾ ಧರಿನಾಡು ಕನ್ನಡ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕವನ,ಲೇಖನ,ಚಿಂತನ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿಯು ಪ್ರಕಟ, ಪ್ರಸಾರವಾಗಿವೆ.
ಆಧುನಿಕ ಒಡೆಯರ್
ಸಾಹಿತಿ ಆಧುನಿಕ ಒಡೆಯರ್ ಇವರು ಬೀದರ ಜಿಲ್ಲೆ ಹುಮನಾಬಾದಿನ ಶಿವಶಂಕರಯ್ಯ ಮತ್ತು ಕಾಸಮ್ಮ ದಂಪತಿಗಳಿಗೆ ದಿನಾಂಕ ೧-೫-೧೯೪೧ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಧರ್ಮ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೧೯೫೮ರಲ್ಲಿ `ಕುರಿಯ ಉಪಕಾರ ಕುರುಬರ ಅಪಕಾರ, ೧೯೬೯ರಲ್ಲಿ `ಕುರಿ ಕುರುಬ ಜ್ಞಾನ ಉಪಾಸನೆ, ೧೯೭೬ರಲ್ಲಿ `ದಕ್ಷಿಣ ಕಾಶಿ ಮೈಲಾರ.’ ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ೧೯೭೪ರಲ್ಲಿ ಅಖಿಲ ಭಾರತ ಪಾಲ ಕ್ಷತ್ರಿಯ ಮಹಾನುಭಾವದಿಂದ `ಪಾಲ ರತ್ನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಬಿ.ಎಸ್. ಸೈನಿರ್
ಕನ್ನಡ ಸಾಹಿತ್ಯದ ನವೋದಯ ಕಾಲ ಘಟ್ಟದಲ್ಲಿ ಮೊಟ್ಟಮೊದಲು ಬೀದರ ಜಿಲ್ಲೆಯಲ್ಲಿ ಕಾವ್ಯ ರಚನೆ ಮಾಡಿ ಪುಸ್ತಕ ಪ್ರಕಟಿಸಿ ಜಿಲ್ಲೆಯ ಮೊದಲ ನವೋದಯ ಕವಿಯೆಂಬ ಖ್ಯಾತಿಗೆ ಪಾತ್ರರಾದ ಕವಿ, ಸಾಹಿತಿ, ಲೇಖಕರೆಂದರೆ ಬಿ.ಎಸ್.ಸೈನಿರ್. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶ್ರೀ ಶರಣಪ್ಪ ಮತ್ತು ಶ್ರೀಮತಿ ಗುರಮ್ಮ ದಂಪತಿಗಳಿಗೆ ೧೯೪೨ರಲ್ಲಿ ಜನಿಸಿದ್ದಾರೆ. ಬಿ.ಎ. ಎಲ್.ಎಲ್.ಬಿ ಮತ್ತು ಎಂ.ಎ ಸ್ನಾತಕೋತ್ತರ ಪದವೀಧರರಾದ ಇವರು ೧೯೬೩ರಲ್ಲಿ ಹುಮನಾಬಾದ ತಾಲೂಕಿನ ಮನ್ನಾಐಖೇಳಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿದರು. ಮತ್ತು ಕೆಲಕಾಲ ಸಮೀಪದ ಬಗದಲ್ ಪ್ರೌಢಶಾಲೆಯಲ್ಲಿಯು ಸೇವೆ ಸಲ್ಲಿಸಿದರು. ಅದಾದ ನಂತರ ಔರಾದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಮತ್ತೆ ಮರಳಿ ಮನ್ನಾಐಖೇಳಿ ಪ್ರೌಢಶಾಲಾ ಮುಖ್ಯೋಪಾಧ್ಯಾ ಯರಾಗಿ ಸೇವೆಯಲ್ಲಿ ಮುಂದುವರೆಯುತ್ತಿರುವಾಗ ದಿನಾಂಕ ೧೮-೬-೧೯೯೧ರಲ್ಲಿ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದ್ದಾರೆ. ೧೯೭೩ರಲ್ಲಿ ಕಾವ್ಯ ರಚಿಸಿ ಪುಸ್ತಕ ಪ್ರಕಟಿಸಿದ ಇವರನ್ನು ಬೀದರ ಜಿಲ್ಲೆಯ ಮೊದಲ ನವ್ಯೋದಯ ಕವಿಯೆಂದು ಹೆಸರುವಾಸಿಯಾಗಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ೧೯೭೩ರಲ್ಲಿ `ಬೆಳಗಾಗುತ್ತಿದೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಮತ್ತು `ಹೇಮಲತಾ’ ಎಂಬ ನಾಟಕವು ಬರೆದು ಪ್ರಕಟಿಸಿದ್ದಾರೆ. ಇವರ ಇನ್ನೂ ಕೆಲ ಕೃತಿಗಳು ಬರೆದಿರುವ ಬಗ್ಗೆ ಮಾಹಿತಿ ಇದೆ . ಆದರೆ ಅವು ಉಪಲಬ್ಧವಿಲ್ಲ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರನ್ನು ಬೀದರ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಮಾಡಿ ಗೌರವಿಸಲಾಗಿದೆ.
ಚಂದ್ರಕಾAತ ಪಾಟೀಲ್
ಕವಿ, ಸಾಹಿತಿ, ಲೇಖಕರಾದ ಚಂದ್ರಕಾAತ ಪಾಟೀಲ್. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿಮಕೋಡ ಗ್ರಾಮದ ಬಂಡೆಪ್ಪಾ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧-೪-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಎಲ್.ಎಲ್.ಬಿ. ಪದವೀಧರರಾದ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೯೦ರಲ್ಲಿ `ಮೊಗ್ಗು’ ಎಂಬ ಕವನ ಸಂಕಲನ, ೧೯೯೩ರಲ್ಲಿ `ಪರಿವರ್ತನೆ’ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ.
ಕೆ.ವೀರಾರೆಡ್ಡಿ
ವ್ಯಕ್ತಿತ್ವ ವಿಕಾಸನ ಕುರಿತು ಲೇಖನಗಳನ್ನು ಬರೆದು `ಯಶಸ್ವಿ ಜೀವನಕ್ಕೆ ಸರಳ ಸೂತ್ರಗಳು’ ಎಂಬ ಸೂಕ್ತಿಯೊಂದಿಗೆ ಕಲುಷಿತ ಮನಸ್ಸುಗಳನ್ನು ಶುದ್ಧಗೊಳಿಸುವಲ್ಲಿ ಪ್ರಯತ್ನಸಿ ಮಾನವ ಜನಾಂಗಕ್ಕೆ ಉತ್ತಮ ಸಂಸ್ಕೃತಿಯನ್ನು ರೂಪಿಸಿಕೊಳ್ಳಲು ವಿವಿಧ ಬರಹಗಳ ಮೂಲಕ ಓದುಗರ ಮನಗೆದ್ದಿರುವ ಲೇಖಕರೆಂದರೆ ಕೆ.ವೀರಾರೆಡ್ಡಿ. ಇವರು ಬೀದರ ಜಿಲ್ಲೆ ಹುಮನಾಬಾದಿನ ನಾಗರೆಡ್ಡಿ ಮತ್ತು ಗುಜ್ಜಮ್ಮ ದಂಪತಿಗಳಿಗೆ ದಿನಾಂಕ ೨೬-೭-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್.ಎಂ.ಎ.ಎA.ಎಡ್ ಪದವಿಧರರಾದ ಇವರು ೧೯೯೯ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ಕೆಲವರ್ಷ ಹುಮನಾಬಾದ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ,ಲೇಖನ,ಬರಹಗಳು ಬರೆದು ೨೦೧೯ರಲ್ಲಿ `ಸ್ಪೂರ್ತಿಯ ಸೆಲೆ’ ಎಂಬ ವ್ಯಕ್ತಿತ್ವ ವಿಕಾಸನ ಕೃತಿ ೨೦೨೦ರಲ್ಲಿ `ಆಚರಣೆಗಳು ಆದರ್ಶಮಯವಾಗಿರಲಿ,ಆಡಂಬರವಲ್ಲ’ ಎಂಬ ಲೇಖನಗಳ ಸಂಕಲನಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಜನಪದ, ಜನಪರ, ನೈರುತ್ಯ ಮಾಸಪತ್ರಿಕೆಗಳು, ಪ್ರಜಾವಾಣಿ, ವಿಜಯ ಕರ್ನಾಟಕ, ಜನಧನಿ,ಮಲ್ಲಮ ನುಡಿ ಮೊದಲಾದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ, ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ ವಿವಿಧ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಹುಮನಾಬಾದ ತಾಲೂಕಿನ ಚಂದನಹಳ್ಳಿ ಗ್ರಾಮದ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಎಚ್.ಕಾಶಿನಾಥ ರೆಡ್ಡಿ
ಸೃಜನಶೀಲ ಬರಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾದ ಹಿರಿಯ ಸಾಹಿತಿಯೆಂದರೆ ಎಚ್.ಕಾಶಿನಾಥ ರೆಡ್ಡಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ಗುಂಡಾರೆಡ್ಡಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೫-೧-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ. ಎಂ.ಎ.ಇತಿಹಾಸ. ಎಂ.ಎ.ಪತ್ರಿಕೋದ್ಯಮ ಪದವಿಧರರಾದ ಇವರು ೧೯೮೦ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಪ್ರೌಢ ಶಾಲಾ ಶಿಕ್ಷಕ ಹಾಗೂ ಪಿ.ಯು.ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತರಾಗಿದ್ದಾರೆ.
ಇವರು ೧೯೯೪ರಲ್ಲಿ `ಕೋರಿಕೆ’ ಎಂಬ ಕವನಸಂಕಲನ, ೨೦೧೭ರಲ್ಲಿ `ಶಿಶು ಕಾವ್ಯ ಶತಕ’ ಎಂಬ ಮಕ್ಕಳ ಕವನಸಂಕಲನ. `ವಚನ ಕಾಶಿ’ ಎಂಬ ಆಧುನಿಕ ವಚನ, `ಸಾಹಿತ್ಯ ಸುರಭಿ’ ಎಂಬ ಲೇಖನ ಸಂಕಲನ, `ಭೂ ಕೈಲಾಸ’ ಮತ್ತು `ಚಂದ್ರ ಶಿರೋಮಣಿ ‘ ಎಂಬ ಸಣ್ಣಾಟಗಳು, `ಕಾಯಕ ವೀರ ಮೊಳಿಗೆ ಮಾರಯ್ಯಾ ‘ `ವೀರಭದ್ರೇಶ್ವರ ಚರಿತ್ರೆ’ ಎಂಬ ಜೀವನ ಚರಿತ್ರೆಗಳು ಮತ್ತು `ಹುಮನಾಬಾದ ತಾಲೂಕು ದರ್ಶನ’ ಎಂಬ ಕೃತಿಗಳು ರಚಿಸಿದರೆ ೧೯೮೭ರಲ್ಲಿ `ಹರ್ಡೇಕರ ಮಂಜಪ್ಪನವರ ಜನಸೇವಕನ ವಚನಗಳು’ `ಶಿಲ್ಲಪ್ಪ ಕವಿಯ ಬದುಕು ಬರಹ ‘ `ನಿಜಲಿಂಗ ಭದ್ರೇಶ್ವರ ಅನುಭವ ಪದಗಳು’ `ಕಲ್ಯಾಣ ನಾಡಿನ ಪರಂಜ್ಯೋತಿ’ `ಆಚರಣೆಯ ಹಾಡುಗಳು’ `ಕುಕ್ಕೆನ ಹೂ’ `ಬಹುಭಾಷಾ ಕಾವ್ಯಧಾರೆ’ `ಮಂಗಳ ಮಂಗಳಾರತಿ ಪದಗಳು’ ಎಂಬ ಕೃತಿಗಳು ಸಂಪಾದಿಸಿ, ಸಂಗೀತ ಕಲಾವಿದ ಶೇಷಪ್ಪಾ ಗಬ್ಬೂರ ಅವರ ಕುರಿತು ‘ಕಲ್ಯಾಣ ಕಲಾ ಶ್ರೀ’ ಮತ್ತು ಹುಮನಾಬಾದಿನ ವಕೀಲರಾದ ವಿರೂಪಾಕ್ಷಪ್ಪಾ ಅಗಡಿಯವರ ಕುರಿತು `ಸಮರಸ’ ಎಂಬ ಕೃತಿ ಹಾಗೂ ಮನ್ನಾಐಖೇಳಿಯ ಮೈತ್ರಾದೇವಿಯವರ ಕುರಿತು `ಮೈತ್ರಾ ಛಾಯಾ’ ಎಂಬ ಅಭಿನಂದನಾ ಗ್ರಂಥಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ಬರೆದ `ಭೂ ಕೈಲಾಸ’ ಮತ್ತು `ಚಂದ್ರ ಶಿರೋಮಣಿ’ ಎಂಬ ಸಣ್ಣಾಟಗಳು ಗುಲ್ಬರ್ಗ ಮತ್ತು ಕೊಲ್ಹಾಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪ್ರಕಟವಾಗಿದ್ದವು. ಮತ್ತು ಕಲಬುರ್ಗಿಯ ಡಾ.ಪಿ.ಕೆ.ಖಂಡೊಬಾ ಅವರು ಸಂಪಾದಿಸಿದ ‘ಜಾನಪದ ವಿಶ್ವಕೋಶ’ ಎಂಬ ಕೃತಿಯಲ್ಲಿ ೨೪ ಜನಪದ ವಿದ್ವಾಂಸರಿದ್ದು ಅವರಲ್ಲಿ ಇವರು ಪ್ರಥಮರೆಂದು ಪರಿಗಣಿಸಿ ಬರೆದಿರುವುದು ಹೆಮ್ಮೆಯ ವಿಷಯವಾಗಿದೆ. ೧೯೭೪ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ರಾಜ್ಯ ಮಟ್ಟದ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ ಇವರು ಸರ್ವಜ್ಞನ ೧೧೧೧ ವಚನಗಳು ಏಕಕಾಲದಲ್ಲಿಯೆ ನಿಂತು ಪಟಪಟಾಂತ ಅರಳು ಹುರಿದಂತೆ ಉಚ್ಚಾರಿಸಿ ಯಾರು ಮಾಡದ ದಾಖಲೆ ಮಾಡಿದ್ದರಿಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದರಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶೇಷ ಗೌರವು ಲಭಿಸಿದೆ. ಇವರಿಗೆ ೧೯೯೨ರಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ೧೯೯೯ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ೨೦೦೪ರಲ್ಲಿ ಆದರ್ಶ ಉಪನ್ಯಾಸಕ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ, ಕಲ್ಯಾಣ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೧೯೮೭ರಿಂದ ೧೯೯೦ ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ ಇವರಿಗೆ ಹುಮನಾಬಾದಿನಲ್ಲಿ ನಡೆದ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಮತ್ತು ೨೦೧೨ರಲ್ಲಿ ನಡೆದ ಬೀದರ ಜಿಲ್ಲೆಯ ೧೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ಹಲವಾರು ವರ್ಷ ಪ್ರಜಾವಾಣಿ, ಕನ್ನಡ ಪ್ರಭ,ಉತ್ತರ ಕರ್ನಾಟಕ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿಯ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಮತ್ತು ಇವರ ಸಾಹಿತ್ಯವು ಆಕಾಶವಾಣಿ ದೂರದರ್ಶನದಿಂದಲೂ ಪ್ರಸಾರವಾಗಿವೆ. ಸದ್ಯ ಇವರು ವಿಶ್ರಾಂತಿ ಜೀವನದಲ್ಲಿ ಕೃಷಿಯೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಎಸ್.ಎಸ್.ಹೊಡಮನಿ
ಶಿಕ್ಷಣ ಶಾಸ್ತ್ರದ ಉಪನ್ಯಾಸಕರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಕತೆ ಕವನ ಕಾದಂಬರಿಗಳನ್ನು ಬರೆದ ಸೃಜನಶೀಲ ಸಾಹಿತಿಯೆಂದರೆ ಎಸ್.ಎಸ್.ಹೊಡಮನಿ ಯವರು. ಇವರ ಪೂರ್ಣನಾಮ ಸುರೇಂದ್ರ ಸಂಗಪ್ಪ ಹೊಡಮನಿಯಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸಂಗಪ್ಪಾ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೫೬ರಲ್ಲಿ ಜನಿಸಿದ್ದಾರೆ. ಬಿ.ಎ.ಎಂ.ಎಡ್.ಪದವಿ ಪಡೆದು ೧೯೮೫ರಲ್ಲಿ ಹಳ್ಳಿಖೇಡ ಬಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ (ಅನುದಾನಿತ) ಪಿ.ಯು.ಕಾಲೇಜಿನಲ್ಲಿ ಶಿಕ್ಷಣ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ.
ಇವರು ಬರೆದ ಕೃತಿಗಳೆಂದರೆ ೨೦೧೬ರಲ್ಲಿ `ಪ್ರೇಮದ ಹೂಗಳು’ ಮತ್ತು ೨೦೧೯ರಲ್ಲಿ `ಪ್ರೇಮದ ಗುಚ್ಚಗಳು’ ಎಂಬ ಕವನಸಂಕಲನಗಳು, ೨೦೧೮ `ಪ್ರೇಮದ ಕುಡಿಗಳು’ ಎಂಬ ಕಾದಂಬರಿ, ೨೦೨೦ರಲ್ಲಿ `ಪ್ರೇಮದ ಪರಿ’ ಎಂಬ ಕಥಾಸಂಕಲನ, ಹಾಗೂ ೨೦೨೦ `ಪ್ರೇಮ,ಪ್ರೀತಿ, ಪ್ರಣಯ’ ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ `ಕಾವ್ಯ ಪ್ರೇಮಾಂಜಲಿ ರತ್ನ’ ಎಂಬ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ೨೯ ಜನೆವರಿ ೨೦೨೦ರಂದು ಹುಮನಾಬಾದ ತಾಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಹಲವಾರು ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿಯು ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಶಿವಶಂಕರ ತರನಳ್ಳಿ
ಪತ್ರಕರ್ತರು ಹಾಗೂ ಸಾಹಿತಿಗಳಾಗಿ ಪುಸ್ತಕ ಪ್ರಕಟಿಸಿದ ಹಿರಿಯ ಲೇಖಕರೆಂದರೆ ಶಿವಶಂಕರ ತರನಳ್ಳಿ. ಇವರು ಬೀದರ ಜಿಲ್ಲೆ ಹುಮನಾಬಾದಿನ ಅಣ್ಣಪ್ಪ ಮತ್ತು ಮಾಣಿಕಮ್ಮ ದಂಪತಿಗಳಿಗೆ ದಿನಾಂಕ ೨೭-೭-೧೯೫೬ರಲ್ಲಿ ಜನಿಸಿದ್ದಾರೆ. ಇಂಗ್ಲೀಷ ಎಂ.ಎ. ಮತ್ತು ಪತ್ರಿಕೋದ್ಯಮ ಪದವಿ ಪಡೆದ ಇವರು ದಶಕಕಿಂತಲೂ ಹೆಚ್ಚು ಕಾಲ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದರಿAದ `ಸಿಂಹನಾದ’ ಎಂಬ ಕೈ ಬರಹ ಪತ್ರಿಕೆಯ ಸಂಪಾದಕರಾಗಿ, ವರದಿ ಲೇಖನಗಳನ್ನು ಬರೆದು ದಿನನಿತ್ಯ ಜನರಿಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು `ಐತಿಹಾಸಿಕ ಜಯಸಿಂಹ ನಗರ’ ಎಂಬ ಹುಮನಾಬಾದ ತಾಲೂಕಿನ ಐತಿಹಾಸಿಕ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ ಸುಧಾ ದೂರದರ್ಶನ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟ ಪ್ರಸಾರವಾಗಿವೆ.
ಇವರು ಹುಮನಾಬಾದಿನಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಆಂಗ್ಲ ಭಾಷಾ ಶಿಕ್ಷಕರಾಗಿ , ಸಂಪನ್ಮೂಲ ವ್ಯಕ್ತಿಯಾಗಿ, ಸರ್ಕಾರಿ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕನ್ನಡ ಭಾಷಾ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಹುಮನಾಬಾದ ಕಸಾಪ ಅಧ್ಯಕ್ಷರಾಗಿ, ಬೀದರ ಜಿಲ್ಲಾ ರಾಷ್ಟ್ರೋತ್ಥಾನ ಪರಿಷತ್ತಿನ ಸಂಚಾಲಕರಾಗಿ, ವಿಕಾಸ ಅಕಾಡೆಮಿ ಶ್ರೀ ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.
ಸಾಧನಾ ರಂಜೋಳಕರ್
ಹೆಸರಿಗೆ ತಕ್ಕಂತೆ ಕಾದಂಬರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರೆಂದರೆ ಸಾಧನಾ ರಂಜೋಳಕರ್. ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದ ಶಾಮರಾವ್ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೨೪-೪-೧೯೫೯ರಲ್ಲಿ ಜನ್ಮ ತಳೆದು ಚಿಕ್ಕಂದಿನಿAದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿ ಕತೆ ಕವನ ಲೇಖನ ಚುಟುಕು ಬರೆಯುವ ಗೀಳು ಹಚ್ಚಿಕೊಂಡು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರು ಹುಮನಾಬಾದ ತಾಲೂಕಿನ ಖೇಣಿ ರಂಜೋಳ ಗ್ರಾಮದ ಅನಂತರಾವ ರಂಜೋಳಕರ್ ರವರ ಧರ್ಮ ಪತ್ನಿಯಾಗಿದ್ದಾರೆ. ಅವರು ಗೃಹಿಣಿಯಾಗಿದ್ದುಕೊಂಡೆ ಕೆಲ ಕಾದಂಬರಿಗಳು ರಚಿಸಿ ೨೦ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ `ಕಥೆಯೊಳಗೊಂದು’ `ಮುಗ್ದ – ಬೆಸುಗೆ’ `ಸ್ವಪ್ನ-ಸಾಗರ’ `ಲೇಖನಿ’ `ಹೂವು-ದುಂಬಿ’ `ಸಿಡಿಲು’ ಎಂಬ ಕಾದಂಬರಿಗಳು, `ವಾಸ್ತವ’ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಮತ್ತು `ಯುದ್ದ ‘ ಎಂಬ ಕಾದಂಬರಿ ಹಾಗೂ ಹಲವು ಕತೆಗಳು ಕೂಡ ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರಿಗೆ ಬೇಲೂರಿನ ಉರಿಲಿಂಗ ಪೆದ್ದಿ ಮಠದ `ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ’ ಹಾಗೂ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾದಂಬರಿ ರತ್ನ ಪ್ರಶಸ್ತಿಗಳು ಲಭೀಸಿವೆ. ಮತ್ತು ಮನ್ನಳಿಯಲ್ಲಿ ನಡೆದ ೬ನೇ ಬೀದರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಚರಾಗಿಯು ಇವರಿಗೆ ಗೌರವಿಸಲಾಗಿದೆ. ಇವರ ಕತೆ ಕವನ ಲೇಖನ ಬರಹಗಳು ತುಷಾರ ಮಲ್ಲಿಗೆ ಕರ್ಮವೀರ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ಬಾನುಲಿಯಿಂದಲೂ ಇವರದೊಂದು ಕಾದಂಬರಿಯು ಪ್ರಸಾರವಾಗಿ ಜನಮೆಚ್ಚುಗೆ ಗಳಿಸಿದೆ.
ಪುಷ್ಪಾ ಜಿ.ಕನಕಾ
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಕವನ,ಲೇಖನ, ಆಧುನಿಕ ವಚನ,ಚುಟುಕು, ಮಕ್ಕಳ ಸಾಹಿತ್ಯ ಮೊದಲಾದ ಪ್ರಕಾರದ ಸಾಹಿತ್ಯ ರಚನೆ ಮಾಡಿದ ಕವಯತ್ರಿಯೆಂದರೆ ಪುಷ್ಪಾ ಜಿ.ಕನಕಾ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸಿದ್ದಪ್ಪಾ ಭುನ್ನಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೫-೭-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬೀದರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣದೂರವಾಡಿಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ಬಹುದಿನಗಳ ನಂತರ ಅಂದರೆ ಇತ್ತಿಚೆಗೆ ಕೆಲವು ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಅವುಗಳೆಂದರೆ, ೨೦೦೮ರಲ್ಲಿ `ವಚನ ಸುಮ’ ಎಂಬ ಆಧುನಿಕ ವಚನಸಂಕಲನ, ೨೦೧೩ ರಲ್ಲಿ `ಪುಟ್ಟಾಣಿ ಬಯಕೆ’ ಎಂಬ ಶಿಶು ಗೀತೆಗಳು, ೨೦೧೭ರಲ್ಲಿ `ಹನಿ ಮಂಜರಿ’ ಎಂಬ ಚುಟುಕು ಸಂಕಲನ ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ `ಚುಟುಕು ಜ್ಯೋತಿ’ ಮತ್ತು `ಚುಟುಕು ರಶ್ಮಿ’ ಹಾಗೂ `ಸಾಹಿತ್ಯ ರತ್ನ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡುವುದರೊಂದಿಗೆ ಹಲವು ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಪತ್ರಿಕೆ ಸೇರಿದಂತೆ ಮೊದಲಾದ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಬೀದರದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಡಾ.ಮಲ್ಲಿಕಾರ್ಜುನ ಅಮ್ಣೆ
ಹೊಸ ತಲೆಮಾರಿನ ಸೃಜನಶೀಲ ಬರಹಗಾರ,ಕವಿ,ಸಾಹಿತಿ ಲೇಖಕರೆಂದರೆ ಡಾ.ಮಲ್ಲಿಕಾರ್ಜುನ ಅಮ್ಣೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಸೋನಕೇರಿ ಗ್ರಾಮದ ಜೆಟ್ಟೆಪ್ಪ ಮತ್ತು ದ್ರೋಪದಿಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಎA.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಕೆಲವರ್ಷ ಕಲಬುರಗಿಯ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಂತರ ೨೦೦೯ರಿಂದ ಬಸವಕಲ್ಯಾಣ ತಾಲೂಕಿನ ಮಂಠಾಳ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ಸದ್ಯ ಆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದರಿಂದ ೨೦೦೨ರಲ್ಲಿ `ಮೂರು ಸಮನಾಂತರ ನಾಟಕಗಳು’ ಎಂಬ ನಾಟಕ ಕೃತಿ, ೧೯೯೭ರಲ್ಲಿ `ಕೆಂಪು ಸೂರ್ಯ ಮತ್ತು ಇತರ ಕವನಗಳು’ ಎಂಬ ಕವನಸಂಕಲನ ೨೦೦೬ರಲ್ಲಿ `ನಾನು-ನೀನು’ ಎಂಬ ಹನಿ ಕವನಸಂಕಲನ, ೨೦೦೮ರಲ್ಲಿ `ದಲಿತ ತತ್ವ ಪದಕಾರ ಕಾಶಿನಾಥ ಗವಾಯಿ’ ಎಂಬ ವ್ಯಕ್ತಿ ಚಿತ್ರಣ, ೨೦೧೧ರಲ್ಲಿ `ಆಧುನಿಕ ಸಾಹಿತ್ಯದಲ್ಲಿ ಬಸವಣ್ಣ’ ಎಂಬ ಶರಣ ಸಾಹಿತ್ಯ, ೨೦೦೯ರಲ್ಲಿ `ದಲಿತ ಸಿರಿ’ ಎಂಬ ಸಂಪಾದನೆ, ೨೦೧೩ರಲ್ಲಿ `ಬೋಧಿಯ ಬೆಳಕಿನಲ್ಲಿ ಎಂಬ ಪ್ರವಾಸ ಕಥನ ಮತ್ತಿತರ ಕೃತಿಗಳು ಪ್ರಕಟಿಸಿದ್ದಾರೆ. ೨೦೦೧ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಬರ’ ಕತೆಗೆ ಉತ್ತಮ ಕಥಾ ಪ್ರಶಸ್ತಿ, ಹುಮನಾಬಾದ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರ ಪ್ರವಾಸ ಕಥನವು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿಗಳಿಗೆ ನಾಲ್ಕನೇ ಸೆಮಿಸ್ಟರ್ ಪಠ್ಯವಾಗಿ ಪ್ರಕಟವಾಗಿದೆ.
ಶಿವಸ್ವಾಮಿ ಚಿನಕೇರಾ
ಕವಿ,ಕಲಾವಿದ ಸಾಹಿತಿಯಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಶಿವಸ್ವಾಮಿ ಚೀನಕೇರಾ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚೀನಕೇರಾ ಗ್ರಾಮದ ಲಿಂಗಪ್ಪ ಮತ್ತು ರೇವಮ್ಮಾ ದಂಪತಿಗಳಿಗೆ ದಿನಾಂಕ ೨೨-೦೫-೧೯೬೭ರಲ್ಲಿ ಜನಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ವಿದ್ವತ್ ಗ್ರೇಡ್ ಪದವಿ ಪಡೆದು ಸರಕಾರಿ ಪ್ರೌಢ ಶಾಲೆ ಮನ್ನಾಏಖೇಳಿಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ದೃಷ್ಟಿದೋಷ ಇರುವುದರಿಂದ ಓದುವುದು, ಬರೆಯುವದು ಕಷ್ಟವಾಗಿದೆ. ಆದ್ದರಿಂದ ಅವರು ತಮ್ಮ ಪತ್ನಿಯ ಸಹಾಯದಿಂದ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಇವರು `ಲಿಂಗದೇವನ ವಚನ ದೀಪ್ತಿ’ `ವಚನಾಂಕುರ’ `ವಚನ ಸಂಜೀವಿನಿ’ ಎಂಬ ವಚನ ಸಂಕಲನಗಳು, `ಹುಲಸೂರು ಶ್ರೀಗಂಧ’ ಎಂಬ ಭಕ್ತಿ ಗೀತೆಗಳು, `ಕನ್ನಡ ಸೌರಭ’ ಎಂಬ ನಾಡಗೀತೆಗಳು, `ಪಂಚಚಾರ ಪ್ರಭೆ’ ಎಂಬ ವಚನಗಳ ವಿಶ್ಲೇಷಣೆ `ಕಣಗಿಲು ಬಾವಿ’ `ಮುಂಬೆಳಕು’ ಎಂಬ ಕಥಾಸಂಕಲನಗಳು. `ಸೀಮೋಲ್ಲಂಘನೆ’ ಎಂಬ ವೈಚಾರಿಕ ಕೃತಿ ಬರೆದು ಪ್ರಕಟಿಸಿದ್ದಾರೆ. ಮತ್ತು ಕೆಲ ಕಾದಂಬರಿ,ನಾಟಕ, ರೇಡಿಯೋ ನಾಟಕಗಳು ಬರೆದಿದ್ದು ಅಪ್ರಕಟಿತವಾಗಿವೆ. ಇವರು ಉತ್ತಮ ಸಂಗೀತ ಕಲಾವಿದರು ಆಗಿ ಸಾಹಿತ್ಯದಲ್ಲಿ ಮಾಡಿದ ಕಾರ್ಯಸಾಧನೆಗೆ ಚಿತ್ರದುರ್ಗದ ಮುರುಘರಾಜೇಂದ್ರ ಶ್ರೀಗಳು `ಜಿ.ಎಸ್ ಶಿವರುದ್ರಪ್ಪ’ ನವರಿಂದ ಗೌರವಿಸಿದ್ದಾರೆ. ಮತ್ತು ಹುಲಸೂರಿನಿಂದ `ಪ್ರವಚನ ರತ್ನ’ ‘ಅಂಬಿಗರ ಚೌಡಯ್ಯ’ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರ ಬರಹಗಳು `ಬೆಳಕಿಂಡಿ’ `ವಚನ ಕ್ರಾಂತಿ, ಉತ್ತರ ಕರ್ನಾಟಕ ಮೊದಲಾದವುಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ ೨೦೧೪ರಲ್ಲಿ ಹುಮನಾಬಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಶೋಭಾ ಔರಾದೆ
ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಶೋಭಾ ಔರಾದೆ. ಇವರು ಬೀದರ ಜಿಲ್ಲೆ ಹುಮನಾಬಾದಿನ ರಾಮಣ್ಣ ಮತ್ತು ಪುತಳಾಬಾಯಿ ದಂಪತಿಗಳಿಗೆ ದಿನಾಂಕ ೧-೮-೧೯೬೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ೧೯೯೭ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೩ರಲ್ಲಿ `ಬಯಲು ಬಯಲನ್ನೆ ಬಿತ್ತಿ’ ಎಂಬ ಅಧ್ಯಾತ್ಮಿಕ ಕೃತಿ, ಮತ್ತು ೨೦೧೮ರಲ್ಲಿ `ವಚನ ಸಿರಿ’ ಮತ್ತು `ವಚನ ವೀಳ್ಯೆ’ ಎಂಬ ವಚನ ಸಂಕಲನಗಳು, ೨೦೧೭ರಲ್ಲಿ `ಸೊಲ್ಲೆತ್ತಿ ಹಾಡೇನ ಮಹಾಂತನ’ ಎಂಬ ತ್ರಿಪದಿ `ಹಳೆ ಹಾಡು ಹೊಸ ಭಾವ’ ಎಂಬ ಜಾನಪದ ಗೀತೆಗಳು. ೨೦೧೮ರಲ್ಲಿ `ವೀರ ಗಣಾಚಾರಿ ಮಡಿವಾಳ ಮಾಚಿದೇವರು’ ಎಂಬ ಚರಿತ್ರೆ, ೨೦೧೯ರಲ್ಲಿ `ನಾನು ದೇವರಲ್ವೇನಮ್ಮಾ’ ಎಂಬ ಮಕ್ಕಳ ಕವನಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು ಬಸವಪಥ, ಬಸವ ಬೆಳಗು ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಿಂದ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೧೬ರಲ್ಲಿ ಬಸವಕಲ್ಯಾಣ ಅನುಭವ ಮಂಟಪದಿAದ ಶರಣೆ ಗಂಗಾAಭಿಕೆ ಪ್ರಶಸ್ತಿ, ೨೦೧೭ರಲ್ಲಿ ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದಿAದ ಬಸವಗುರು ಕಾರುಣ್ಯ ಪ್ರಶಸ್ತಿ, ೨೦೧೮ರಲ್ಲಿ ಹುಮನಾಬಾದ ತಾಲೂಕು ರಾಜ್ಯೋತ್ಸವ, ೨೦೧೯ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದ್ದಾರೆ. ಮತ್ತು ಹುಮನಾಬಾದ ತಾಲೂಕಿನ ಕದಳಿ ವೇದಿಕೆ ಮತ್ತು ನೀಲಮ್ಮನ ಬಳಗದ ಅಧ್ಯಕ್ಷರಾಗಿ, ಬಸವಕಲ್ಯಾಣ ಪ್ರಾಥಮಿಕ ಶಾಲಾ ಶಿಕ್ಷಕ ನೌಕರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶೀಲಾ.ಎಸ್ .ಜೂಜಾ
ಬೀದರ ಜಿಲ್ಲೆಯ ಮಹಿಳಾ ಬರಹಗಾರರಲ್ಲಿ ಒಬ್ಬರಾಗಿ ಪಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಶೀಲಾ. ಎಸ್.ಜೂಜಾ. ಇವರು ಬೀದರ್ ಜಿಲ್ಲೆ ಹುಮನಾಬಾದಿನ ಶ್ರೀ ಸುಭಾಷ ಜೈಶೆಟ್ಟಿ ಶ್ರೀಮತಿ ರಾಚಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ,ಬಿ.ಇಡಿ ಎಂ.ಎ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೯೯೪ ರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕಿಯಾಗಿ ಸೇವೆ ಸೇರಿ ಸದ್ಯ ಕಲ್ಲೂರು ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಬಾಲ್ಯದಿಂದಲೂ ತುಂಬ ಕ್ರಿಯಾಶೀಲರಾಗಿ ತೊಡಗಿಸಿಕೊಂಡು `ವಿದ್ಯಾರ್ಜನೆ ’ ಎಂಬ ಲೇಖನ `ನನ್ನೊಳಗಿನ ಕಾವ್ಯ’ ಮತ್ತು `ಎರಡನೆಯ ಹೆಜ್ಜೆ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿ ಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡಿದ್ದಾರೆ. ಇವರಿಗೆ ಹುಮನಾಬಾದ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘದ ವತಿಯಿಂದಲೂ ಉತ್ತಮ ಶಿಕ್ಷಕಿ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ವೀರಶೇಟ್ಟಿ ಎಂ.ಪಾಟೀ¯
`ವಿ.ಪಾಟೀಲ್’ ಎಂದೇ ಖ್ಯಾತನಾಮ ಹೊಂದಿದ ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ಮಾರುತಿರಾವ ಹಾಗೂ ಕಮಳಾಬಾಯಿ ದಂಪತಿಗಳಿಗೆ ದಿನಾಂಕ ೫-೭-೧೯೭೨ರಂದು ಜನಿಸಿ ಬಾಲ್ಯದಿಂದಲೂ ಬಹುಮುಖ ಪ್ರತಿಭೆಯವರಾಗಿ ಮಾಡಿದ ಕಾರ್ಯ ಮೆಚ್ಚುವಂತಹದ್ದು. ಇವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಉತ್ತಮ ಚಿತ್ರಕಲಾವಿಧರಾಗಿ ಚಿತ್ರಕಲೆ ಶಿಕ್ಷಕರಾಗಿ ಮತ್ತು ಪೋಟೊ ಗ್ರಾಫರಾಗಿ ಗುರುತಿಸಲ್ಪಡುತ್ತಾರೆ ಅನ್ನೋದಕ್ಕೆ ಅವರು ರಚಿಸಿದ ಚಿತ್ರಗಳಿಗೆ ಚಿತ್ರಕಲೆ ಹಾಗೂ ಪೋಟೊ ಗ್ರಾಫಿಯಲ್ಲಿ ಅವರಿಗೆ ಸಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳೆ ಸಾಕ್ಷಿಯಾಗಿವೆ.
ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಅಪಾರ ಆಸಕ್ತಿ ಇರುವುದರಿಂದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ `ಓ ನನ್ನ ಕನ್ನಡ’ `ಮೂರನೇ ಮಹಾಯುದ್ಧ’ ಎಂಬ ಕವನಸಂಕಲನಗಳು, ನಾರಾಯಣಪೂರ ವಾಸ್ತು ಶಿಲ್ಪ ಕಲೆಗಳ ವೈಭವ (ಲೇಖನ) ಸಾತ್ವಿಕ (ಹನಿಗವನ) ವ್ಯಸನಮುಕ್ತ ಸಮಾಜಕ್ಕಾಗಿ ಅಭಿನವ ಘನಲಿಂಗ (ಲೇಖನ) ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ `ನಾರಾಯಣಪುರ ವಾಸ್ತು ಶಿಲ್ಪಗಳ ವೈಭವ’ ಕೃತಿಯು ಬಸವಕಲ್ಯಾಣ ತಾಲೂಕಿನ ಐತಿಹಾಸಿಕ ಲೇಖನಗಳ ಸಮಗ್ರ ಮಾಹಿತಿ ಒದಗಿಸುವ ಪ್ರವಾಸಿಗರ ಕೈಪಿಡಿಯಂತಿದೆ ದೂರದಿಂದ ಬಸವಕಲ್ಯಾಣಕ್ಕೆ ಬರುವ ಪ್ರವಾಸಿಗರಿಗೆ ಇದು ತುಂಬ ಮಾರ್ಗದರ್ಶನ ಒದಗಿಸುತ್ತದೆ. ಇವರು ಹೀಗೆ ಕಲೆ ಸಾಹಿತ್ಯ ಮತ್ತು ಛಾಯಾಗ್ರಾಹಕರಾಗಿ ಬಹುಮುಖ ಪ್ರತಿಭೆ ವ್ಯಕ್ತಿಯಾಗಿ ವಿವಿಧ ಕಡೆಗಳಲ್ಲಿ ಭಾಗವಹಿಸಿ ಸುಮಾರು ೨೦ಕಿಂತ ಹೆಚ್ಚಿನ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳನು ಪಡೆದು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇಯಲ್ಲದೆ ತ್ರೀಪೂರಾಂತದ ಅಭಿನವ ಘನಲಿಂಗ ರುದ್ರಮನಿ ಮಠದಿಂದ ಕೊಡಲ್ಪಡುತ್ತಿರುವ `ಅಭಿನವ ಘನಲಿಂಗ ಶ್ರೀ’ ಪ್ರಶಸ್ತಿಯನ್ನು ಪಡೆದವರಲ್ಲಿ ಇವರು ಮೊದಲಿಗರಾಗಿ ಕಂಡು ಬರುತ್ತಾರೆ.ಇವರ ಕತೆ ಕವನ ಲೇಖನ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದಿವೆ.
ಡಾ.ಜಗದೇವಿ ತಿಬಶೆಟ್ಟಿ
ಉದಯೋನ್ಮಖ ಬರಹಗಾರ್ತಿಯಾಗಿ ಕತೆ,ಕವನ,ಲೇಖನಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಡಾ.ಜಗದೇವಿ ತಿಬಶೆಟ್ಟಿಯವರು. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಕೆಲ ವರ್ಷ ವಿವಿಧ ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಹಾಲಹಳ್ಳಿಯ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೆ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು `ಅನರ್ಘ್ಯ ರತ್ನ’ ಎಂಬ ಲೇಖನ ಸಂಕಲನ, ಮತ್ತು `ಸೋಮನಾಥ ಯಾಳವಾರ’ ರವರ ಜೀವನ ಚರಿತ್ರೆ ಬರೆದಿದ್ದು `ಹೊಂಗಿರಣ’ ಎಂಬ ಕವನ ಸಂಕಲನ ಅಪ್ರಕಟಿತವಾಗಿದೆ. `ಶರಣರ ದಾಂಪತ್ಯ ದರ್ಶನ’ ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬಹುತೇಕ ಬರಹಗಳು ಬಸವಪಥ,ಲೋಕಸಿರಿ,ಶರಣರ ದರ್ಶನ, ವಚನ ಚಂದ್ರಿಕೆ,ಬಸವ ಪರಿಶೋಧ,ಶರಣ ಸೌರಭ, ಸಂಭ್ರಮ, ಮೊದಲಾದ ಮಾಸಪತ್ರಿಕೆ ಮತ್ತು ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವು ಪ್ರಬಂಧಗಳನ್ನು ಮಂಡಿಸಿ ಉಪನ್ಯಾಸವು ನೀಡಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ’ ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ದಿ.ಶಿವಕುಮಾರ ಎಂ.ಲಕ್ಕಾ
ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕವನ,ಲೇಖನ, ಹನಿಗವನ, ಚುಟುಕು, ಪ್ರಬಂಧ ಮೊದಲಾದವು ಬರೆದು ಕವಿ,ಸಾಹಿತಿ, ಲೇಖಕರಾಗಿ ಗುರ್ತಿಸಿಕೊಳ್ಳುವ ಹೊತ್ತಿನಲ್ಲಿಯೆ ಮಿಂಚಿ ಮರೆಯಾದವರೆಂದರೆ ಶಿವಕುಮಾರ ಎಂ.ಲಕ್ಕಾ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಮಹಾರುದ್ರಪ್ಪ ಮತ್ತು ಶ್ರೀಮತಿ ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಕೋರ್ಸ್ ನ್ನು ಪಡೆದ ಇವರು ಬಸವಕಲ್ಯಾಣದ ಶ್ರೀ ಶರಣ ಬಸವೇಶ್ವರ ಖೂಬಾ ಜೆ.ಒ.ಸಿ ಕಾಲೇಜಿನಲ್ಲಿ ಲ್ಯಾಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು ಕೆಲ ವರ್ಷಗಳ ನಂತರ ಅಂದರೆ ದಿನಾಂಕ ೨೯-೧೦-೨೦೧೫ ರಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.
ಇವರು ತಮ್ಮ ವೃತ್ತಿ ಬದುಕಿನೊಂದಿಗೆ ಆಗೊಮ್ಮೆ ಈಗೊಮ್ಮೆ ಬರೆದ ಕೆಲ ಕವನಗಳು ಒಟ್ಟು ಸೇರಿಸಿ ೨೦೦೪ರಲ್ಲಿ `ಮೊಗ್ಗು ಅರಳಿದಾಗ’ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮೊಗ್ಗಾಗಿ ಅರಳುವ ಹೊತ್ತಿನಲ್ಲಿಯೆ ಉದುರಿ ಹೊಂದದ್ದು ತುಂಬ ನೋವಿನ ಸಂಗತಿಯಾಗಿದೆ. ಬದುಕಿನುದ್ದಕ್ಕೂ ಕವನ,ಲೇಖನ, ಹನಿಗವನ ಬರಹಗಳಲ್ಲಿ ತಲ್ಲಿನರಾಗುತ್ತಿದ್ದ ಅವರು ಹಲವಾರು ಕವಿಗೊಷ್ಠಿಯಲ್ಲಿ ಭಾಗವಹಿಸಿ ಚಿರಪರಿಚಿತರಾಗಿದ್ದರು. ಇವರು ಬರೆದ ಹಲವಾರು ಕವನ,ಲೇಖನ, ಬರಹಗಳು ಅಪ್ರಕಟಿತವಾಗಿವೆ.
ಶಿವರಾಜ ಮೇತ್ರೆ
ಕವಿ,ಸಾಹಿತಿ ಹಾಗೂ ಕ್ರೀಯಾಶೀಲ ಲೇಖಕರೆಂದರೆ ಶಿವರಾಜ ಮೇತ್ರೆಯವರು. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ತಾಳಮಡಗಿ ಗ್ರಾಮದ ದವಲಪ್ಪಾ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೨-೭-೧೯೭೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ಶಿಕ್ಷಣ ಪಡೆದು ೨೦೦೨ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ದುಮ್ಮನಸೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೯ರಲ್ಲಿ `ಕಾವ್ಯ ಬುಗ್ಗೆ’ ಎಂಬ ಕವನ ಸಂಕಲನ ಪ್ರಕಟಿಸಿರುವ ಇವರು `ಆಕಾಶದಲ್ಲಿ ಚುಕ್ಕಿ’ ಎಂಬ ಕವನ ಸಂಕಲನ `ಆಧುನಿಕ ವಚನ’ (ವಚನ ಸಂಕಲನ) `ಬೀದರ ಜಿಲ್ಲಾ ಕವಿಗಳು ಕಂಡ ಅಂಬೇಡ್ಕರ್’ (ಸಂಪಾದನೆ) ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ನಾಡಿನ ಕೆಲ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ, ಹಾಗೂ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬೆಂಗಳೂರಿನ ವಿಶ್ವ ವಚನ ಟ್ರಸ್ಟ್ ವತಿಯಿಂದ `ಚಿನ್ಮಯ ಜ್ಣಾನಿ ಪ್ರಶಸ್ತಿ, ಬೀದರಿನ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕವಿಜ್ಯೋðತಿ ಪ್ರಶಸ್ತಿ, ಭಾರತದ ಸೇವಾದಲ ಸಹಾಯಕ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಹುಮನಾಬಾದ ತಾಲ್ಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಪ್ರಥಮ ಹುಮನಾಬಾದ ದಲಿತ ತಾಲೂಕಾ ಸಾಹಿತ್ಯ ಸಮ್ಮೇಳನವು ನಡೆಸಿದ್ದಾರೆ.
ಡಾ.ರೂತಾ ಪ್ರಭುರಾವ
ಉದಯೋನ್ಮುಖ ಕವಯತ್ರಿರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರೆಂದರೆ ಡಾ.ರೂತಾ ಪ್ರಭುರಾವ ಇವರು ಬೀದರ ಜಿಲ್ಲೆ ಹಮನಾಬಾದಿನ ಶಿವರಾಮ ಮತ್ತು ತುಳಸಮ್ಮಾ ದಂಪತಿಗಳಿಗೆ ದಿನಾಂಕ ೯-೧೨-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್.ಪಿಎಚ್.ಡಿ. ವಚನ ಡಿಪ್ಲೋಮಾ.ನೆಟ್.ಪದವಿಧರರಾದ ಇವರು ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ;
ಇವರು ೨೦೦೭ರಲ್ಲಿ `ವಸಂತ ಕುಷ್ಟಗಿಯವರ ಬದುಕು ಬರಹ’ ಎಂಬ ಕೃತಿ ಪ್ರಕಟಿಸಿದ್ದಾರೆ. ಮತ್ತು ಕವನ, ಲೇಖನ ಸಂಕಲನಗಳ ಎರಡು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. ಜಾನಪದ ಕುರಿತಾದ ಬಿಡಿ ಲೇಖನಗಳ ಸಂಪಾದಿತ ಕೃತಿಗಳು ಹೊರಬರಲಿವೆ. ಇವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ `ಕನಕ ಸಿರಿ’ ಮತ್ತು `ಡಾ.ಬಿ.ಆರ್.ಅಂಬೇಡ್ಕರ’ ಪ್ರಶಸ್ತಿಗಳು ಲಭಿಸಿವೆ. ಇವರು ಹುಮನಾಬಾದ ತಾಲೂಕಿನ ವಿಶ್ವ ವಚನ ಫೌಂಡೇಷನ್ ಮತ್ತು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರ ಕವನ ಲೇಖನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಬಸಪ್ಪ ಜಿ.ಬಾವಗೆ
ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಲೇಖಕರೆಂದರೆ ಬಸಪ್ಪ ಜಿ.ಬಾವಗೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕಬೀರಾಬಾದವಾಡಿಯ ಗಣಪತಿ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೨-೬-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಕಲಬುರಗಿ ಜಿಲ್ಲೆ ಜೇವರ್ಗಿಯ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಕೆಲಕಾಲ ಬೀದರ ಜಿಲ್ಲೆಯಲ್ಲಿ ಶಿಕ್ಷಕರಾಗಿ, ಅರ್ಭಿಟ್ ಸಂಸ್ಥೆಯ ವರದಿಗಾರರಾಗಿ `ಜನ ಸನ್ನಿಧಿ’ ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಅರಿವಿನ ಹಾಡುಗಳು’ ಎಂಬ ಹಾಡುಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು `ಬೀದರ ಜಿಲ್ಲೆಯ ಪ್ರಗತಿ ಪಥದತ್ತ ಮಹಿಳೆಯರು’ ಎಂಬ ಕೃತಿಯು ರಚಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ಮೊದಲಾದವುಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರಿಗೆ ಹುಮನಾಬಾದ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಸಪ್ಪ ಜಿ.ಬಾವಗೆ
ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಲೇಖಕರೆಂದರೆ ಬಸಪ್ಪ ಜಿ.ಬಾವಗೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕಬೀರಾಬಾದವಾಡಿಯ ಗಣಪತಿ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೨-೬-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಕಲಬುರಗಿ ಜಿಲ್ಲೆ ಜೇವರ್ಗಿಯ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಕೆಲಕಾಲ ಬೀದರ ಜಿಲ್ಲೆಯಲ್ಲಿ ಶಿಕ್ಷಕರಾಗಿ, ಅರ್ಭಿಟ್ ಸಂಸ್ಥೆಯ ವರದಿಗಾರರಾಗಿ `ಜನ ಸನ್ನಿಧಿ’ ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಅರಿವಿನ ಹಾಡುಗಳು’ ಎಂಬ ಹಾಡುಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು `ಬೀದರ ಜಿಲ್ಲೆಯ ಪ್ರಗತಿ ಪಥದತ್ತ ಮಹಿಳೆಯರು’ ಎಂಬ ಕೃತಿಯು ರಚಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ಮೊದಲಾದವುಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರಿಗೆ ಹುಮನಾಬಾದ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಾಗಮ್ಮ ಎಚ್.ಭಂಗರಗಿ
ಸೃಜನಶೀಲ ಬರಹಗಾರರಾಗಿ ಗುರ್ತಿಸಿಕೊಂಡು ಕವನ, ಲೇಖನ, ಪ್ರಬಂಧ. ಆಧುನಿಕ ವಚನ, ಜಾನಪದ, ಸಾಹಿತ್ಯ ಸೇರಿದಂತೆ ಮೊದಲಾದ ಬರಹಗಳು ಬರೆದು ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸುತ್ತಲಿರುವ ಕವಯತ್ರಿಯಂದರೆ, ನಾಗಮ್ಮ ಎಚ್. ಭಂಗರಗಿ. ಇವರು ಕಲಬುರ್ಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ,ಫೀಲ್ ಪದವಿಧರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ಅವರ ಧರ್ಮ ಪತ್ನಿಯಾಗಿರುವ ಇವರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿರುವ ತಮ್ಮ ತಂದೆಯವರು ಲೇಖಕರು, ಆಧ್ಯಾತ್ಮವಾದಿಗಳು ಹಾಗೂ ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ಸಾಹಿತ್ಯ ರಚಿಸುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರು ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಹಾಗೂ `ಅಚಲ’ ಎಂಬ ಮಾಸಪತ್ರಿಕೆ ಹಾಗೂ ಕೆಲ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇತರರು ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಅನೇಕ ರಾಜ್ಯ, ರಾಷ್ಟ ಮಟ್ಟದ ಕಮ್ಮಟಗಳಲ್ಲಿಯೂ ಉಪನ್ಯಾಸಗಳು ನೀಡಿದ್ದಾರೆ. ಸದ್ಯ ಇವರು ಬೀದರನಲ್ಲಿದ್ದುಕೊಂಡು ತಮ್ಮ ವೃತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಇವರ ಶೃಕ್ಷಣಿಕ ಹಾಗೂ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .
ಕೆ.ವೀರಾರೆಡ್ಡಿ
ವ್ಯಕ್ತಿತ್ವ ವಿಕಾಸನ ಕುರಿತು ಲೇಖನಗಳನ್ನು ಬರೆದು `ಯಶಸ್ವಿ ಜೀವನಕ್ಕೆ ಸರಳ ಸೂತ್ರಗಳು’ ಎಂಬ ಸೂಕ್ತಿಯೊಂದಿಗೆ ಕಲುಷಿತ ಮನಸ್ಸುಗಳನ್ನು ಶುದ್ಧಗೊಳಿಸುವಲ್ಲಿ ಪ್ರಯತ್ನಸಿ ಮಾನವ ಜನಾಂಗಕ್ಕೆ ಉತ್ತಮ ಸಂಸ್ಕೃತಿಯನ್ನು ರೂಪಿಸಿಕೊಳ್ಳಲು ವಿವಿಧ ಬರಹಗಳ ಮೂಲಕ ಓದುಗರ ಮನಗೆದ್ದಿರುವ ಲೇಖಕರೆಂದರೆ ಕೆ.ವೀರಾರೆಡ್ಡಿ. ಇವರು ಬೀದರ ಜಿಲ್ಲೆ ಹುಮನಾಬಾದಿನ ನಾಗರೆಡ್ಡಿ ಮತ್ತು ಗುಜ್ಜಮ್ಮ ದಂಪತಿಗಳಿಗೆ ದಿನಾಂಕ ೨೬-೭-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್.ಎಂ.ಎ.ಎA.ಎಡ್ ಪದವಿಧರರಾದ ಇವರು ೧೯೯೯ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ಕೆಲವರ್ಷ ಹುಮನಾಬಾದ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ,ಲೇಖನ,ಬರಹಗಳು ಬರೆದು ೨೦೧೯ರಲ್ಲಿ `ಸ್ಪೂರ್ತಿಯ ಸೆಲೆ’ ಎಂಬ ವ್ಯಕ್ತಿತ್ವ ವಿಕಾಸನ ಕೃತಿ ೨೦೨೦ರಲ್ಲಿ `ಆಚರಣೆಗಳು ಆದರ್ಶಮಯವಾಗಿರಲಿ,ಆಡಂಬರವಲ್ಲ’ ಎಂಬ ಲೇಖನಗಳ ಸಂಕಲನಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಜನಪದ, ಜನಪರ, ನೈರುತ್ಯ ಮಾಸಪತ್ರಿಕೆಗಳು, ಪ್ರಜಾವಾಣಿ, ವಿಜಯ ಕರ್ನಾಟಕ, ಜನಧನಿ,ಮಲ್ಲಮ ನುಡಿ ಮೊದಲಾದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ, ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ ವಿವಿಧ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಹುಮನಾಬಾದ ತಾಲೂಕಿನ ಚಂದನಹಳ್ಳಿ ಗ್ರಾಮದ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಸುನಿತಾ ಎಸ್. ಪಾಟೀಲ
ಉದಯೋನ್ಮಖ ಮಹಿಳಾ ಕವಯತ್ರಿಯಾಗಿ ಕತೆ ಕವನ ಲೇಖನ ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಸುನೀತಾ ಎಸ್.ಪಾಟೀಲ. ಇವರು ಬಸವಕಲ್ಯಾಣದ ಉಮಾಕಾಂತ ಹಾಗೂ ಮಹಾದೇವಿ ದಂಪತಿಗಳಿಗೆ ದಿನಾಂಕ ೧೫-೦೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಎಡ್ ಎಂ.ಎ. ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಕಂದಗುಳ್ ಗ್ರಾಮದ ಶಂಭುಲಿAಗ ಪೋಲಿಸ್ ಪಾಟೀಲ್ ರವರ ಧರ್ಮ ಪತ್ನಿಯಾಗಿದ್ದಾರೆ.
ಬಾಲ್ಯದಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕಾಲೇಜು ದಿನಗಳಲ್ಲಿ ಸುನೀತಾ ಅಂಬಲಗೆ ಎಂಬ ಹೆಸರಿನಲ್ಲಿ ಕತೆ ಕವನ ರಚನೆ ಮಾಡಿ ಸಾಹಿತಿಯಾಗಿ ಗುರುತಿಸಿಕೊಂಡವರು. ೨೦೦೮ರಲ್ಲಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸಾಹಿತ್ಯ ಕೃಷಿಯಲ್ಲಿ ತೊಡಗಿ ಸುನೀತಾ ಎಸ್,ಪಾಟೀಲ್ ಎಂಬ ಹೆಸರಿನಲ್ಲಿ `ಕಂದಗೂಳದ ಕುಂದನ ಹರಳು’ ಎಂಬ ಕೃತಿಯನ್ನು ರಚಿಸಿ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಕತೆ ಕವನ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಅನುಪಮ, ಹೊಸತು, ಮಲ್ಲಮ್ಮ ನುಡಿ ಮೊದಲಾದವುಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತ್ತು ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಅವು ಪ್ರಕಟಗೊಂಡಿವೆ. ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕಲಬುರಗಿ ವಿಭಾಗ ಮಟ್ಟದ `ಸಾಧಕ ಶಿಕ್ಷಕಿ’ ಹಾಗೂ `ಉತ್ತಮ ಶಿಕ್ಷಕ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ.
ಸಿಂಧೆ ರಾಜಕುಮಾರ ಎ.
ಉದಯೋನ್ಮುಖ ಯುವ ಬರಹಗಾರರ ಸಮೂಹದಲ್ಲಿ ಎದ್ದು ಕಾಣುವ ಮತ್ತೊಂದು ಹೆಸರೆಂದರೆ ಸಿಂಧೆ ರಾಜಕುಮಾರ ಅವರದು. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೊರಂಪಳ್ಳಿ ಗ್ರಾಮದ ಅಣ್ಣಾರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೮-೮-೧೯೮೧ರಲ್ಲಿ ಜನಿಸಿದ್ದಾರೆ. ಸಿಂಧೆಯವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿದರು ಕೂಡ ಕಲೆ ಸಾಹಿತ್ಯದಲ್ಲಿ ತುಂಬ ಆಸಕ್ತಿ ಹೊಂದಿ, ಕತೆ ಕವನ, ಲೇಖನ, ಚುಟುಕು ಮೊದಲಾದ ಪ್ರಕಾರದ ಬರಹಗಳನ್ನು ಬರೆದಿದ್ದಾರೆ. ಮತ್ತು `ಮನದಾಳದ ಮುತ್ತುಗಳು’ ಎಂಬ ಕವನಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ತುಂಬ ಕ್ರೀಯಶೀಲ ಹಾಗೂ ಸಮಯ ಪ್ರಜ್ಞೆಯುಳ್ಳ ಸಿಂಧೆಯವರು ಸದಾ ಒಂದಿಲ್ಲೊAದು ವಿನೂತನದಿಂದ ಕಾರ್ಯಪ್ರವೃತ್ತರಾಗುವ ಮನೋಭಾವದವರು. ಸದ್ಯ ಇವರು ಬೀದರದ ಖಾಸಗಿ ಬಿ.ಎಡ್ ಪದವಿ ಮಹಾವಿದ್ಯಾಲಯವೊಂದರ ಉಪನ್ಯಾಸಕರಾಗಿ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಇವರು ಬರೆದ ಕವನ, ಲೇಖನಗಳು ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಸಾಹಿತ್ಯಿಕ ಕಾರ್ಯಕ್ರಮ ಹಾಗೂ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ, ವಿವಿಧ ಸಮಾರಂಭಗಳ ಗೋಷ್ಠಿಗಳಲ್ಲಿ ಸಾಹಿತ್ಯದ ಕುರಿತು ಉಪನ್ಯಾಸವು ನೀಡಿದ್ದಾರೆ. ಇವರ ಸಾಹಿತ್ಯ ಚಟುವಟಿಕೆಗಳನ್ನು ಕಂಡು ನಾಡಿನ ವಿವಿಧ ಕನ್ನಡ ಪರ ಸಂಘ ಸಂಸ್ಥೆಯವರು ಹಲವು ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಡಾ.ರತ್ನಾಕರ್ ಡಿ.ಹೊಸಮನಿ
ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಉಳಿದು ತಮ್ಮನ್ನು ತಾವು ಬರವಣಿಗೆಯಲ್ಲಿ ತೊಡಗಿಸಿಕೊಂಡು ಲೇಖಕರಾಗಿ ಗುರುತಿಸಿ ಕೊಂಡವರೆAದರೆ ಡಾ.ರತ್ನಾಕರ್ ಡಿ.ಹೊಸಮನಿಯವರು. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಉಡಮನಳ್ಳಿ ಗ್ರಾಮದ ದೇವಿಂದ್ರ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೨-೭-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ (ಇತಿಹಾಸ).ಬಿ.ಎಡ್.ಪಿ.ಎಚ್.ಡಿ. ಪಿ.ಡಿ.ಎಫ್.ಪದವಿಧರರಾಗಿದ್ದು, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು’ ಎಂಬ ಐತಿಹಾಸಿಕ ಕೃತಿ, `ದೇವರಾಜ ಅರಸು’ ಎಂಬ ಜೀವನ ಚರಿತ್ರೆ, `ಕರ್ನಾಟಕ ಅರಚಿಟೆಚರ್ ಬೀದರ’ ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರಿಗೆ ಇಂಡಿಯನ್ ಕೌನ್ಸಿಲ್ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ ನವದೆಹಲಿಯಿಂದ ೨೦೧೮ರಲ್ಲಿ ಸಂಶೋಧನಾ ಶಿಷ್ಯ ವೇತನ ಪ್ರಶಸ್ತಿ, ಮತ್ತು ಯುಜಿಸಿ ನವದೆಹಲಿಯಿಂದ ಉನ್ನತ ಸಂಶೋಧಕ ಪ್ರಶಸ್ತಿ, ಹಾಗೂ ೨೦೧೯ರಲ್ಲಿ ಡಾ.ಅಂಬೇಡ್ಕರ್ ರಾಷ್ಟ್ರೀಯ ಶಿಷ್ಯ ವೇತನ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ಪ್ರಜಾ ರಾಜ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಕನ್ನಡ ಪರ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಶಕೀಲ್ ಐ.ಎಸ್.
ವೃತ್ತಿಯಲ್ಲಿ ಪೋಲಿಸ್ ಪೆದೆಯಾಗಿ ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಕೆಲ ಕೃತಿಗಳು ರಚಿಸಿದ ಲೇಖಕರೆಂದರೆ ಶಕೀಲ್ ಐ.ಎಸ್. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಖೇಣಿ ರಂಜೋಳ ಗ್ರಾಮದ ಎಕ್ಬಾಲ್ ಸಾಬ್ ಸಿದ್ದೇಸೂರವಾಲೆ, ಮತ್ತು ಶಹನಾಜ್ ಬೇಗಂ ಎಂಬ ದಂಪತಿಗಳಿಗೆ ದಿನಾಂಕ ೩-೬-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿವರೆಗೆ ಅಧ್ಯಯನ ಮಾಡಿದ ಇವರು ೨೦೦೫ರಲ್ಲಿ ಪೋಲಿಸ್ ಪೆದೆಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಅಭಿವೃದ್ಧಿ ಪಥ’ ‘ಕರ್ನಾಟಕ ಇತಿಹಾಸ ‘ `ಹುಮನಾಬಾದ ತಾಲೂಕು ಇತಿಹಾಸ’ ಎಂಬ ಲೇಖನ ಕೃತಿಗಳು, `ಮೂರು ನಾಟಕಗಳು ‘ ಎಂಬ ನಾಟಕವು ರಚಿಸಿದ್ದಾರೆ. ಈ ಕೃತಿಯಲ್ಲಿ `ಭ್ರಷ್ಟಾಚಾರ ದೇಹಕ್ಕೂ ಮಾರಕ ‘ `ರೈತನ ಮಗ’ `ಹಳ್ಳಿ ಹುಡುಗಿ ಭತ್ತ’ ಎಂಬ ಮೂರು ಕಿರು ನಾಟಕಗಳಿವೆ. ಮತ್ತು ಇಲ್ಲಿನ ‘ `ಭ್ರಷ್ಟಾಚಾರ ದೇಹಕ್ಕೂ ಮಾರಕ ‘ ಎಂಬ ನಾಟಕ ಕಿರುಚಿತ್ರವಾಗಿ ತಯಾರಿಸಿ ಪುಣೆಯಲ್ಲಿ ನಡೆಯುವ ಕಿರುಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. `ಬೀದರ ಜಿಲ್ಲೆಯ ಸೂಫಿಗಳು’ ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. `ನಳದಮಯಂತಿ’ ಇದು ಪೌರಾಣಿಕ ಕತೆಯಾದರೆ . `ಗರ್ಭಕೋಶದಲ್ಲಿ ಮಹಾಯುದ್ಧ’ (ಕಥಾಸಂಕಲನ) `ಧರಿನಾಡಿನ ಗಂಡುಗಲಿ ‘(ವ್ಯಕ್ತಿ ಚಿತ್ರಣ ) ಇವು ಅವರ ಅಪ್ರಕಟಿತ ಕೃತಿಗಳಾಗಿವೆ. ಇವರ ಬರಹಗಳು ವಿಜಯ ಕರ್ನಾಟಕ,ವಿಜಯವಾಣಿ,ಉದಯವಾಣಿ, ಸಂಜೆವಾಣಿ ಬೀದರ ಬಿಂದಾಸ್,ಜನವಾದಿ,ಮಲ್ಲಮ ನುಡಿ ಸೇರಿದಂತೆ ಮೊದಲಾದ ಪ್ರತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಇವರು ಬರೆದ ಪತ್ರ ಲೇಖನಕ್ಕೆ ವಿಜಯವಾಣಿ ಸಂಪಾದಕರು ೧೦ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಲೇಖನ ಪ್ರಕಟಿಸಿದ್ದಾರೆ.
ಇವರಿಗೆ ವಿವಿಧ ಕನ್ನಡಪರ ಸಂಘ ಸಂಸ್ಥೆಯವರು `ಕನ್ನಡ ರತ್ನ’ `ಕಲ್ಯಾಣ ಚನ್ನಶ್ರೀ, ಕನ್ನಡ ಕಠಿರವ, ಸಾಹಿತ್ಯ ಚೂಡಾಮಣಿ, ಧರಿರತ್ನ, ಯುವಶಕ್ತಿ ಕಲಾ ಶ್ರೀ, ಸಿದ್ದಾರ್ಥ’ ಎಂಬ ಪ್ರಶಸ್ತಿಗಳು ಹಾಗೂ ಪೋಲಿಸ್ ಇಲಾಖೆಯಲ್ಲಿ ಇವರ ಕಾರ್ಯ ಸಾಧನೆಗೆ ಮೆಚ್ಚಿ ಸಾಕಷ್ಟು ಸಲ ಬಹುಮಾನಗಳು ನೀಡಿ ಗೌರವಿಸಿದ್ದಾರೆ. ಇವರು `ಸೂಫಿ ಸಾಹಿತ್ಯ ಪರಿಷತ್ತಿನ ‘ ಸಂಸ್ಥಾಪಕ ಅಧ್ಯಕ್ಷರಾಗಿ, ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಯಾಗಿ, ಬೀದರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಿಯಾ ಲಂಜವಾಡಕರ್
ಉದಯೋನ್ಮುಖ ಕಾದಂಬರಿಗಾರ್ತಿಯಾಗಿ ಖ್ಯಾತಿ ಪಡೆದ ಲೇಖಕಿಯೆಂದರೆ ಪ್ರಿಯಾ ಲಂಜವಾಡಕರ್. ಇವರು ಬೀದರ ಜಿಲ್ಲೆ ಹುಮನಾಬಾದಿನ ಮಾರುತಿರಾವ ಮತ್ತು ಸುಮಂಗಲಾ ದಂಪತಿಗಳಿಗೆ ದಿನಾಂಕ ೧-೪-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಎಂ.ಎ. ಬಿ,ಇಡಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಕಾದಂಬರಿ ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಮುಂದೆ ಸ್ವತಃ ಕಾದಂಬರಿ ಬರೆಯಲು ಸುರುಮಾಡಿ ೨೦೧೫ರಲ್ಲಿ `ತಲ್ಲಣಿಸದಿರು….’ ಎಂಬ ಕಾದಂಬರಿ ಬರೆದು ಪ್ರಕಟಿಸಿದ್ದಾರೆ. ಇವರ ಕವನ,ಲೇಖನ, ಬರಹಗಳು ಬೀದರದ `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಪತ್ರಿಕೆ ಸೇರಿದಂತೆ ಕನ್ನಡದ ಕೆಲ ಸ್ಥಳಿಯ ಪತ್ರಿಕೆಗಳಲ್ಲಿ ಹಾಗೂ ಇತರರು ಪ್ರಕಟಿಸಿರುವ ಪ್ರಾತಿನಿಧಿಕ ಕವನ,ಲೇಖನಗಳ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದ ವತಿಯಿಂದ ಸಿದ್ಧಾರ್ಥ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಅಷ್ಟೇಯಲ್ಲದೆ ಇವರು ದಾಸ ಸಾಹಿತ್ಯ ಸೇರಿದಂತೆ ಮೊದಲಾದ ವಿಷಯಗಳನ್ನಿಟ್ಟುಕೊಂಡು ಹಲವಾರು ಸಭೆ ಸಮಾರಂಭಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಮತ್ತು ಹೊಬಳಿ, ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಗಳಲ್ಲಿ ಕವನ ವಾಚನವು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರು ಕಾವ್ಯ, ಲೇಖನ, ಪ್ರಬಂಧ, ಚುಟುಕು ಮೊದಲಾದ ಪ್ರಕಾರದ ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಪ್ರವೀಣಕುಮಾರ ಕಲ್ಬುರ್ಗಿ
ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕವನ,ಲೇಖನ, ಹನಿಗವನ, ಚುಟುಕು ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರವೀಣಕುಮಾರ ಕಲ್ಬುರ್ಗಿ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದ ಈಶ್ವರ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೦-೧-೧೯೮೮ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ.ಸ್ನಾತಕೋತ್ತರ ಪದವಿ ಹಾಗೂ ನೆಟ್ ಪರೀಕ್ಷೆಯು ಪಾಸು ಮಾಡಿದ ಇವರು ಹುಮನಾಬಾದಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದರಿAದ ಅವರ ಅಜ್ಜನವರಾದ ಹಿರಿಯ ಸಾಹಿತಿ ಬಿ.ಎಸ್.ಖೂಬಾ ಅವರ ಪ್ರೇರಣೆಯಿಂದ ೨೦೧೧ರಲ್ಲಿ `ಕಾವ್ಯ ಸಂಭ್ರಮ’ ಎಂಬ ಕವನ ಸಂಕಲನ ಬರೆದು ಪ್ರಕಟಿಸಿದ್ದಾರೆ. ಇವರು ಹಲವಾರು ಬಿಡಿ ಲೇಖನಗಳು, ನೂರಾರು ಕವನ,ಆಧುನಿಕ ವಚನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೊಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಅಷ್ಟೇಯಲ್ಲದೆ ಇವರು ರಚಿಸಿದ ಕವನ,ಲೇಖನ, ಚುಟುಕು .ಮೊದಲಾದ ಬರಹಗಳು ಕನ್ನಡದ ಕೆಲವು ಪ್ರಮುಖ ಪತ್ರಿಕೆ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಡಾ. ಪೀರಪ್ಪ ಸಜ್ಜನ
ಉದಯೋನ್ಮುಖ ಬರಹಗಾರರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪೀರಪ್ಪ ಸಜ್ಜನ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೋರಂಪಳ್ಳಿ ಗ್ರಾಮದ ಭೂಷಣ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩೧-೭-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ.
ಬಾಲ್ಯದಲ್ಲಿ ವಿದ್ಯಾರ್ಥಿ ದೆಸೆಯಾಗಿರುವಾಗಲೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ಕತೆ, ಕವನ,ಲೇಖನ,ಪ್ರಬಂಧ, ಬರಹಗಳನ್ನು ಬರೆದು ೨೦೧೪ರಲ್ಲಿ `ಬೀದರ ಜಿಲ್ಲಾ ದಲಿತ ಸಾಹಿತ್ಯ’ ೨೦೧೮ರಲ್ಲಿ `ಸಮಾಜ ಮುಖಿ ಮಂಥನ’. ೨೦೧೯ರಲ್ಲಿ `ಮಹಿಳಾ ಬೆಳಕು ಡಾ.ಬಿ.ಆರ್.ಅಂಬೇಡ್ಕರ್’ ಎಂಬ ಲೇಖನ ಕೃತಿಗಳು, ೨೦೧೯ `ಸಮರಸ ಜೀವಿ’ ಎಂಬ ಸಂಪಾದಿತ ಕೃತಿಯು ಪ್ರಕಟಿಸಿದ್ದಾರೆ. ಇವರ `ಸಮಾಜ ಮುಖಿ ಮಂಥನ’ ಮತ್ತು `ಬೀದರ ಜಿಲ್ಲೆಯ ದಲಿತ ಸಾಹಿತ್ಯ’ ಈ ಎರಡು ಕೃತಿಗಳು ಕರ್ನಾಟಕ ಸರ್ಕಾರದ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದಿಂದ ಚೊಚ್ಚಿಲ ಕೃತಿ ಹಾಗೂ ದಲಿತ ಯುವ ಲೇಖಕರಿಗೆ ನೀಡುವ ಯೋಜನೆಯ ಅನುದಾನ ಪಡೆದು ಮುದ್ರಣಗೊಂಡಿವೆ. ಇವರು ಬರೆದ ೩೨ವಿವಿಧ ಪ್ರಕಾರದ ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ದಿನಪತ್ರಿಕೆಗಳಲ್ಲಿ ಮತ್ತು ಭೀಮವಾದ,ಸಂವಾದ,ದಲಿತ ಕ್ರಾಂತಿ, ಹಾಗೂ ಇಂಟರ್ನಾಷನಲ್ ಜನರಲ್ ಆಫ್ ಕನ್ನಡ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಹಲವಾರು ವಿಷಯಗಳ ಮೇಲೆ ಪ್ರಬಂಧ ಮಂಡಿಸಿದ್ದಾರೆ. ಮತ್ತು ಹೊಬಳಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರಿಗೆ ಅನೇಕ ಕನ್ನಡ ಪರ ಸಂಘ ಸಂಸ್ಥೆಯವರು ವಿವಿಧ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಡಾ.ಚಿದಾನಂದ ಚಿಕ್ಕಮಠ
ಉದಯೋನ್ಮುಖ ಬರಹಗಾರರಾಗಿ ಕವನ ಲೇಖನ, ಸಂಶೋಧನೆ, ವಿಮರ್ಶಾ ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ, ಡಾ.ಚಿದಾನಂದ ಚಿಕ್ಕಮಠ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಗಂಗಾಧರಯ್ಯ ಚಿಕ್ಕಮಠ ಮತ್ತು ಶ್ರೀಮತಿ ಸಂಗಮ್ಮ ದಂಪತಿಗಳಿಗೆ ದಿನಾಂಕ ೧೧-೧೦-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ಕೆಲ ವರ್ಷ ಬೀದರ ಭಾಲ್ಕಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ೨೦೧೮ರಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾಲಯ ಅಭ್ಯಾಸ ಮತ್ತು ಪರೀಕ್ಷಾ ಮಂಡಳಿಗಳ ಸದಸ್ಯರಾಗಿ, ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ. `ಕಿನ್ನರಿ ಬ್ರಹ್ಮಯ್ಯ-ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ.
ಬಾಲ್ಯದಿಂದಲೂ ವಚನ ಸಾಹಿತ್ಯ, ವೀರಶೈವ ಸಾಹಿತ್ಯ, ನಡುಗನ್ನಡ, ಹಸ್ತಪ್ರತಿ,ಗ್ರಂಥ ಸಂಪಾದನೆ ಕಾರ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೨೦೧೮ರಲ್ಲಿ `ಕಿನ್ನರಿ ಬ್ರಹ್ಮಯ್ಯ ಕೆಲವು ಒಳನೋಟಗಳು’ ಮತ್ತು ೨೦೧೯ರಲ್ಲಿ `ಕಿನ್ನರಿ ಬ್ರಹ್ಮಯ್ಯ’ ಎಂಬ ಈ ಕೃತಿಗಳು ೧೨ನೇ ಶತಮಾನದ ಶರಣ ಕಿನ್ನರಿ ಬೊಮ್ಮಯ್ಯನ ಕುರಿತು ಬರೆದಿದ್ದಾರೆ. ಮತ್ತು ೨೦೧೯ರಲ್ಲಿ `ನಿರಂಜನ ಪ್ರಭೆ’ ಮತ್ತು `ಭವ್ಯ ಮಾನವ ಸಂಗ್ರಹ’ ಮತ್ತಿತರ ಕೃತಿಗಳು ಸಂಪಾದಿಸಿದ್ದಾರೆ. ಇವರ `ಭವ್ಯ ಮಾನವ’ ಕೃತಿಯು ಕಲಬುರಗಿ ಶ್ರೀ ಶರಣ ಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಮುದ್ರಣದಗೊಂಡಿದೆ. ಅಷ್ಟೇಯಲ್ಲದೆ ಇವರು `ಶರಣನೊರ್ವನ ಸಮಗ್ರ ಸಾಹಿತ್ಯ ಹಾಗೂ ಶೂನ್ಯ ಸಂಪಾದನೆ’ ಮತ್ತು ವಚನ ಸಾಹಿತ್ಯಕ್ಕೆ ಸಂಬAಧಿಸಿದAತೆ ನಾಲ್ಕು ಕೃತಿಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ. ಮತ್ತು ಇವರ ಪ್ರಬಂಧ, ಲೇಖನ, ಸಂಶೋಧನಾ ಬರಹಗಳು ಹಲವಾರು ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಇವರಿಗೆ ೨೦೧೯ರಲ್ಲಿ `ಹಳ್ಳಿಖೇಡ (ಕೆ) ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ ಸಾಹಿತ್ಯ ಕೃಷಿಯನ್ನು ಸಕ್ರಿಯವಾಗಿ ಮುಂದುವರೆಸಿದ್ದಾರೆ.
ಸAಗಪ್ಪಾ ತೌಡಿ
ಬೀದರ ಜಿಲ್ಲೆಯ ಯುವ ಬರಹಗಾರರ ಬಳಗದಲ್ಲಿ ಎಲೆ ಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಯುವ ಸಾಹಿತಿಯೆಂದರೆ ಸಂಗಪ್ಪಾ ತೌಡಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ,ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು’ ಮತ್ತು `ಅವ್ವನಿಗೆ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು’ ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರ ರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಹುಲಸೂರ ತಾಲೂಕಾ ಲೇಖಕರು
ಪೂಜ್ಯ. ಶ್ರೀ. ಡಾ.ರಾಜಶೇಖರ ಶಿವಾಚಾರ್ಯರು
ಅಧ್ಯಾತ್ಮಿಕ, ಧಾರ್ಮಿಕ, ವೈಚಾರಿಕ ತಳಹದಿಯಲ್ಲಿ ಪುಸ್ತಕ ಪ್ರಕಟಿಸಿದ ಸಾಹಿತಿಗಳೆಂದರೆ ಪೂಜ್ಯ.ಶ್ರೀ.ಡಾ.ರಾಜಶೇಖರ ಶಿವಾಚಾರ್ಯರು. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶ್ರೀ.ವೇದಮೂರ್ತಿ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಶ್ರೀಮತಿ ವೀರಮ್ಮ ದಂಪತಿಗಳಿಗೆ ದಿನಾಂಕ ೪-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆಮಳಖೇಡÀ ಹೀರೆಮಠ ಸಂಸ್ಥಾನದ ಪೀಠಾಧೀಪತಿಗಳಾಗಿದ್ದಾರೆ. `ವೀರಶೈವ ಪಂಚಪೀಠಗಳು ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ ಪ್ರಬಂಧವಾಗಿದೆ. ೧೯೯೪ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ವಿದ್ವತ್ ಸಂಗೀತ, ವಿದ್ವತ್ ತಬಲಾ,ಸಂಗೀತ ಮಾರ್ತಾಂಡ’ ಎಂಬ ಪದವಿಗಳು ಪಡೆದು, ಬೆಂಗಳೂರಿನ ಕಸಾಪದಿಂದ `ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾ’ ಪದವಿಯನ್ನು ಪಡೆದಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ಉಭಯ ಕ್ಷೇತ್ರಗಳಲ್ಲಿ ಆಸಕ್ತರಾದ ಶ್ರೀಗಳು ೧೯೯೮ರಲ್ಲಿ `ಹೊಗೆ ಚಿತ್ತಾರ’ ಎಂಬ ಕವನಸಂಕಲನ, ೧೯೯೯ರಲ್ಲಿ `ಶಾಸನಗಳಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರು’ ೨೦೦೩ರಲ್ಲಿ `ಕೊಲ್ಲಿಪಾಕ:ಇತಿಹಾಸ ಮತ್ತು ಉಪಾಸನೆ’ ೨೦೦೪ರಲ್ಲಿ `ರಂಭಾಪುರಿ ಬೆಳಗು’ ೨೦೦೫ರಲ್ಲಿ `ಶಾಸನಗಳಲ್ಲಿ ಪಂಚಪೀಠಗಳು’ ಎಂಬ ಕೃತಿಗಳು ಮತ್ತು `ಮಲಯಾಚಲ ದೀಪ್ತಿ’ `ಮುನೀಂದ್ರ ವಿಜಯ’ `ಕಲ್ಯಾಣ ಕಲ್ಪ’ `ವೀರ ಪ್ರಭೆ’ `ಹೊಂಗಿರಣ’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ.
೨೦೦೩ರಲ್ಲಿ ಬಸವಕಲ್ಯಾಣ ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಗಳು ವೀರಶೈವ ರಕ್ಷಣಾ ವೇದಿಕೆ ಮತ್ತು ರಾಷ್ಟ್ರೀಯ ವೀರಶೈವ ಅಭಿವೃದ್ಧಿ ಸಂಸ್ಥೆ ಹಾಗೂ ಶಾಂಭವಿ ಮಹಿಳಾ ಅಧ್ಯಾತ್ಮ ವೇದಿಕೆಗಳನ್ನು ಸ್ಥಾಪಿಸಿ ಅವುಗಳ ರಾಜ್ಯಾಧ್ಯಕ್ಷರಾಗಿ, ಶ್ರೀಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಂಚಾಲಕರಾಗಿ,ಗೋರ್ಟಾ ಗ್ರಾಮದ ಶ್ರೀ ರುದ್ರೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹುತಾತ್ಮ ಸ್ಮಾರಕ ಹೋರಾಟ ಸಮಿತಿ, ಶ್ರೀ ಸಂಗೀತ ರುದ್ರೇಶ್ವರ ದೇವಾಲಯ ಅಭಿವೃದ್ಧಿ ಸಂಸ್ಥಾನಗಳ ಅಧ್ಯಕ್ಷರಾಗಿ, ಬೀದರ ನೌಬಾದದ ಜ್ಞಾನ ಶಿವಯೋಗಾಶ್ರಮ ಮತ್ತು ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ ಸಂಸ್ಥಾನಗಳ ಅದಿಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಗಳು ಸದ್ಯ ಬೆಮಳಖೇಡ ಹೀರೆಮಠ ಸಂಸ್ಥಾನದ ಶ್ರೀ ತಪೋರತ್ನ ಲಿಂ.ಗುರುಪಾದ ಶಿವಾಚಾರ್ಯರ ಉತ್ತರಾಧಿಕಾರಿಗಳಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಇವರಿಗೆ ಹೀರೆನಾಗಾಂವ ಗ್ರಾಮದಲ್ಲಿ ನಡೆದ ೬ನೇ ಬಸವಕಲ್ಯಾಣ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ವಿರೂಪಾಕ್ಷಯ್ಯ ಶಿವಲಿಂಗಯ್ಯ ಮಠಪತಿ
ಹಿರಿಯ ಸಾಹಿತಿ ವಿರೂಪಾಕ್ಷಯ್ಯ ಗೋರ್ಟಾ ಅವರು ಬೀದರ ಜಿಲ್ಲೆಯ ಹುಲಸೂರ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶಿವಲಿಂಗಯ್ಯ ಹಾಗೂ ಸಂಗಮ್ಮ ದಂಪತಿಗಳ ಉದರದಲ್ಲಿ ೧೯೨೬ರಂದು ಜನಿಸಿದ ಇವರು ಸದ್ಯ ೯೪ ವರ್ಷದ ಇಳಿವಯಸ್ಸಿನವರಾದರೂ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಇರುವ ಆಸಕ್ತಿ ಬಿಟ್ಟು ಕೊಡದೆ ಬದುಕುತ್ತಿದ್ದಾರೆ. ಇವರು ರಚಿಸಿದ ಕೃತಿಗಳೆಂದರೆ ಭಕ್ತಿ ಕುಸುಮಾಂಜಲಿ, ಭುಲಾಯಿ ಪದಗಳು, ಗುರುಗಾನ ಸ್ತುತಿ, ಗುರುಗಾನ , ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳ ಪುರಾಣ, ಹೈದರಾಬಾದ್ ಕರ್ನಾಟಕ ಜಲ್ಲಿಯಾನ ವಾಲಾಬಾಗ ಗೋರ್ಟಾ. ಹಾರಕೂಡ ಚನ್ನಬಸವ ಶಿವಯೋಗಿಗಳ ಲೀಲಾಮೃತ. ರಾಚೋಟಿ ಶಿವಾಚಾರ್ಯರ, ರೇಣುಕಾ ವಿಜಯ (ನಾಟಕ) ಶಿವಲಿಂಗಯ್ಯ ಮಠಪತಿಯವರ ಜೀವನ ಚರಿತ್ರೆ ಕೋಲಾಟದ ಪದಗಳು ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.ಇವರ ಭುಲಾಯಿ ಪದಗಳು ರಜಾಕಾರರು ಗೋರ್ಟಾ ಹತ್ಯಾಕಾಂಡ ಮಾಡಿದ ನೋವಿನ ಕತೆ ಹೇಳುತ್ತವೆ. ಸಂಗೀತದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಇವರು ೧೯೫೭ ರಲ್ಲಿ ‘ಶಾರದಾ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಅಂದಿನ ಕಾಲದಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ ನಡೆಸಿದ್ದಾರೆ. ಇವರಿಗೆ ೨೦೧೨-೧೩ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅಷ್ಟೇಯಲ್ಲದೆ ಶ್ರೀರುದ್ರ ಸಂಗೀತಾಚಾರ್ಯ , ಸಂಗೀತ ರುದ್ರ ಭೂಷಣ, ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ, ಸಂಗೀತ ರುದ್ರ ಸಂಪದ, ಪುರಾಣ ರತ್ನ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ಬೀದರ ಜಿಲ್ಲೆಯ ಕವಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ.ಇವರ ಸಾಹಿತ್ಯ ಮರು ಮುದ್ರಣ ಕಾರ್ಯಮಾಡಬೇಕಾಗಿದೆ.
ವಿರೂಪಾಕ್ಷಯ್ಯ ಸಿದ್ರಾಮಯ್ಯ ಸ್ವಾಮಿ
ಜಾನಪದ ಕಥನ ಗೀತೆಗಳು ಬರೆದು ಪುಸ್ತಕ ಪ್ರಕಟಿಸಿದ ಹಿರಿಯ ಸಾಹಿತಿಯೆಂದರೆ, ವಿರೂಪಾಕ್ಷಯ್ಯ ಸ್ವಾಮಿ ಗೋರ್ಟಾ. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ದರಾಮಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೯-೮-೧೯೨೬ ರಲ್ಲಿ ಜನಿಸಿದ್ದಾರೆ. ನಾಲ್ಕನೇ ತರಗತಿಯವರೆಗೆ ಅಧ್ಯಯನ ಮಾಡಿದ ಇವರು ವೇದಗಾಯಕ,ಸಾಂಸ್ಕೃತಿಕ ಹಾಗೂ ಸ್ವತಂತ್ರ ಹೋರಾಟಗಾರರಾಗಿ ಅಧ್ಯಾತ್ಮಿಕ, ಸಾಹಿತ್ಯಕ ಕ್ಷೇತ್ರದಲ್ಲಿ ಒಲವು ಮೂಡಿಸಿಕೊಂಡು ಸಂಗೀತಗಾರಾಗಿ ಜಾನಪದ, ಕಥನ ಗೀತೆಗಳು ಬರೆದು ಗ್ರಾಮದ ಮತ್ತೊರ್ವ ಸಮಕಾಲಿನ ಸಾಹಿತಿ ವಿರೂಪಾಕ್ಷಯ್ಯ ಸ್ವಾಮಿಯವರೊಂದಿಗೆ ೧೯೪೮ರಲ್ಲಿ `ಭುಲಾಯಿ ಪದಗಳು’ ಎಂಬ ಜಾನಪದ ಕಥನ ಗೀತೆಗಳ ಪುಸ್ತಕವು ಪ್ರಕಟಿಸಿದ್ದಾರೆ. ಇದು ಸ್ವಾತಂತ್ರ‍್ಯ ನಂತರದ ಬೀದರದ ಮೊದಲ ಗ್ರಂಥವೆAಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈದರಾಬಾದ ನಿಜಾಮನ ಆಳ್ವಿಕೆಯ ಕಾಲದಲ್ಲಿ ನಡೆದ ರಜಾಕಾರರ ಗೋರ್ಟಾ ಹತ್ಯಾಕಾಂಡದ ನೋವಿನ ಕತೆಗಳು ಇದರಲ್ಲಿವೆ.
ಇವರು ೧೯೫೭ರಲ್ಲಿ ಶಾರದಾ ಸಂಗೀತ ವಿದ್ಯಾಲಯ ಸ್ಥಾಪಿಸಿ ಉಚಿತ ಊಟ ವಸತಿಯೊಂದಿಗೆ ಸಂಗೀತ ಶಿಕ್ಷಣ ನೀಡಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನವು ಮಾಡಿದ್ದಾರೆ. ೧೯೪೨ರಲ್ಲಿ ಸಂಗೀತ ರುದ್ರ ಸಂಘ ಸ್ಥಾಪನೆ ಮಾಡಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಗಳಲ್ಲಿ ಸಂಚರಿಸಿ ಅನೇಕ ಕಾರ್ಯಕ್ರಮಗಳು ನಡೆಸಿಕೊಟ್ಟಿದ್ದಾರೆ. ಮತ್ತು ಶ್ರೀ. ಷ.ಬ್ರ.ರಾಚೋಟಿ ಶಿವಾಚಾರ್ಯರ ಶ್ರೀರುದ್ರ ಮಂತ್ರಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ದತಿಯಲ್ಲಿ ಸ್ವರ ಸಂಯೋಜನೆಯು ಮಾಡಿ ಸಂಗೀತ ರುದ್ರ ಪಿತಾಮಹ’ ಎನಿಸಿಕೊಂಡಿದ್ದಾರೆ.
ಇವರಿಗೆ ೧೯೭೬ರಲ್ಲಿ ಬೀದರ ಕಸಾಪ ಪ್ರಶಸ್ತಿ, ೧೯೮೨ರಲ್ಲಿ ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಉದಗಿರ ಹಾವಗಿ ಮಠದಿಂದ ಪಂ.ಬಸವರಾಜ ರಾಜಗುರು ಪ್ರಶಸ್ತಿ, ೧೯೮೫ರಲ್ಲಿ `ವೇದಗಾನ ಸಾರ್ವಭೌಮ ಪ್ರಶಸ್ತಿ, ೧೯೯೨ರಲ್ಲಿ ಕಾಶಿ ಜಂಗಮವಾಡಿ ಮಠದಿಂದ ಶ್ರೀ ರುದ್ರ ಸಂಗೀತಚಾರ್ಯ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೯ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಸಂಗೀತ ರುದ್ರ ವಿಶಾರದ ಪ್ರಶಸ್ತಿ, ೨೦೦೭ರಲ್ಲಿ ಬೀದರ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿAದ ಪಂಚಾಕ್ಷರಿ ಪ್ರಶಸ್ತಿ, ೨೦೦೦ ರಲ್ಲಿ ಹರಿಯಾಣ ರಾಜ್ಯದ ಪಾಣಿಪತ್ ಪಟ್ಟಣದ ಜೈಮಿನಿ ಅಕಾಡೆಮಿ ಪಾಣಿಪತ್ ವತಿಯಿಂದ ಬಿಸವೀ ಶತಾಬ್ದಿ ರತ್ನ ಸಮ್ಮಾನ್ ಪ್ರಶಸ್ತಿ, ಹಾಗೂ ಹಾರಕೂಡ ಹೀರೆಮಠ ಸಂಸ್ಥಾನದ ವತಿಯಿಂದ ಪೂಜ್ಯ.ಶ್ರೀ. ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ಗಾನರತ್ನ ಸುಧಾರಕ ಪ್ರಶಸ್ತಿಯು ನೀಡಿ ಗೌರವಿಸಿದರೆ, ೨೦೦೩ರಲ್ಲಿ ಉಜ್ಜಯಿನಿಯ ಪೀಠದಿಂದ ಸಂಗೀತ ರುದ್ರ ವಿಭೂಷಣ ಪ್ರಶಸ್ತಿ, ೨೦೦೬ರಲ್ಲಿ ವೀರಶೈವ ಅರ್ಚಕರ ಮತ್ತು ಪುರೋಹಿತ ಸಂಘದಿAದ ಪುರೋಹಿತ ರತ್ನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೨೦೧೫ರಿಂದ ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ ಸಂಸ್ಥಾನವು ಸಾಹಿತಿ, ಸಂಗೀತಗಾರರು ಮತ್ತು ಸ್ವತಂತ್ರ ಹೋರಾಟಗಾರ ಚಿಂತಕರೊಬ್ಬರಿಗೆ ಪಂ.ವಿರೂಪಾಕ್ಷಯ್ಯ ಸಮ್ಮಾನ್’ ಎಂಬ ಇವರ ಹೆಸರಿನ ಪ್ರಶಸ್ತಿಯು ನೀಡಿ ಗೌರವಿಸುತ್ತಿದೆ. ಇವರ ಏಳು ಜನ ಮಕ್ಕಳಲ್ಲಿ ಪ್ರೊ.ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಇವರು ಖ್ಯಾತ ಸಂಗೀತಗಾರರು ಮತ್ತು ಸಾಹಿತಿಗಳಾಗಿದರೆ, ಇನ್ನೊರ್ವರು ಡಾ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಸಾಹಿತಿ ಹಾಗೂ ಬೆಮಳಖೇಡ ಹೀರೆಮಠ ಸಂಸ್ಥಾನದ ಮಠಾಧಿಪತಿಯಾಗಿದ್ದಾರೆ. ಇವರು ೧೯-೫-೨೦೧೨ ರಲ್ಲಿ ಲಿಂಗೈಕ್ಯರಾಗಿದ್ದು ಬೀದರ ಜಿಲ್ಲೆಯ ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ.ಕಾಶಿನಾಥ ಅಂಬಲಗೆ
ಕವಿ, ಸಾಹಿತಿ, ಅನುವಾದಕರಾಗಿ ಚಿರಪರಿಚಿತರಾದ ಹಿರಿಯ ಲೇಖಕರೆಂದರೆ ಡಾ.ಕಾಶಿನಾಥ ಅಂಬಲಗೆ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಚಳಂಬಿ ಗ್ರಾಮದ ರಾಚಪ್ಪ ಮತ್ತು ಗುರಮ್ಮ ದಂಪತಿಗಳಿಗೆ ದಿನಾಂಕ ೧೦-೭-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿಎಚ್.ಡಿ ಪದವಿಧರರಾದ ಇವರು ಪದವಿ ಕಾಲೇಜು ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಕೌದಿ, ಹುಲ್ಲು ಮೇಲಿನ ಹನಿಗಳು, ಚುಳುಕಾದಿರಯ್ಯ, ಬೇವು-ಬೆಲ್ಲ, ಹಾಡುಗಳು ಉಳದಾವ, ಮೂವತ್ತಕ್ಕೆ ಮುನ್ನೂರು, ಶರಣು ಶರಣಾರ್ಥಿ ಗಜಲ್ ಗಳು. ಎಂಬ ಕವನ ಸಂಕಲನಗಳು, ಕಬೀರದಾಸರು,ಜ್ಞಾನ ಪೀಠ ಪ್ರಶಸ್ತಿ ವಿಜೇತ ಗುಜರಾತಿ ಕವಿ ಉಮಾಶಂಕರ ಜೋಶಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಭಗತ್ ಸಿಂಗ್, ಜಗದ ಮಹಾ ನಟ ಚಾರ್ಲಿಚಾಂಪ್ಲಿನ್, ಮಹಾತ್ಮ ಜ್ಯೋತಿಬಾಪುಲೆ,ನಾರಾಯಣ ಗುರು, ಡಾ.ರಾಜಕುಮಾರ, ಸಾವಿತ್ರಿಬಾಯಿ ಪುಲೆ,ಸ್ವಾಮಿ ವಿವೇಕಾನಂದ, ಬಾಬಾ ಆಮಟೆ,ಜಗದಗಲ ಮುಗಿಲಗಳು,ದಾರಿ ದೀಪಗಳು, ಶಿವಶರಣೆಯರು ಹಾಗೂ ಮಹಿಳಾ ಸಂಪನ್ಮೂಲ, ವಚನ ಸಾಹಿತ್ಯ- ಸಂತ ಸಾಹಿತ್ಯ, ವಚನ ಬೆಳಕು,ಸತಿಯೆ ಸಾಕಿಯಾದ ಕವಿ ಸಮಯ, ವಚನವಿಚಾರೋತ್ಸವ,ಗಾಂಧಿ ವಿಚಾರಧಾರೆ, ಆಯ್ದ ೭೨ ಅನಿಕೇತನ ಕನ್ನಡ ಗಜಲ್ ಗಳು, ಆಯ್ದ ೭೧ ಕವಿತೆಗಳು, ಆಯ್ದ ೭೧ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಅನಿಕೇತನ ಕನ್ನಡ ಕವಿತೆಗಳು, ಇತ್ಯಾದಿ ಅವರ ಕನ್ನಡದ ಪ್ರಮುಖ ಕೃತಿಗಳು ರಚಿಸಿದ್ದಾರೆ.
`ಅಧೂರೆ ಶಬ್ದ, ಸಂತ ಔರ ಶಿವಶರಣೋಂ ಕೆ ಕಾವ್ಯ ಮೇ ಸಾಮಾಜಿಕ ಚೇತನಾ, ಶರಣ ಔರ ಸಂತ: ಸಾಮಾಜಿಕ ಚಿಂತನ, ಬಸವೇಶ್ವರ: ಕಾವ್ಯ ಶಕ್ತಿ ಔರ ಸಾಮಾಜಿಕ ಶಕ್ತಿ, ವಚನ ಸಾಹಿತ್ಯ ಔರ ಸಂತ ಸಾಹಿತ್ಯ ಕಾ ಸಮಾಜ ಶಾಸ್ತ್ರ, ಬಾರವಿ ಶಾದೀ ಕೀ ಕನ್ನಡ ಕವಿತ್ರಿ ಅಕ್ಕಮಹಾದೇವಿ ಔರ ಸ್ತ್ರೀ ವಿಮರ್ಶ, ಬಸವಾದಿ ಶರಣೋಂ ಕೆ ಸಾಹಿತ್ಯ ಕಿ ಸಾಮಾಜಿಕ ಚೇತನಾ, ಸಿದ್ದರಾಮೇಶ್ವರ, ಗಾಂದಿಗಿರಿ, ಬಸವೇಶ್ವರ ಸಮತಾ ಕಿ ಧ್ವನಿ, ಅಲ್ಲಮಪ್ರಭು: ಪ್ರತಿಭಾ ಕಾ ಶಿಬಿರ, ಚೆನ್ನ ಬಸವಣ್ಣ: ಮಹಾಜ್ಞಾನಿ, ಮೋಳಿಗೆ ಮಾರಯ್ಯ : ಮೋಳಿಗೆ ಮಹಾದೇವಿ, ಆಯ್ದಕ್ಕಿ ಮಾರಯ್ಯ- ಲಕ್ಕಮ್ಮ, ಹಡಪದ ಅಪ್ಪಣ- ಲಿಂಗಮ್ಮ, ಉರಿಲಿಂಗ ಪೆದ್ದಿ – ಕಾಳವ್ವೆ, ವಚನ ಚಿಂತನ, ಕಾವ್ಯ ಕೇವಲ ಕಾವ್ಯ. ಇವು ಅವರು ಬರೆದ ಹಿಂದಿ ಭಾಷೆಯ ಕೃತಿಗಳು.
ಅಷ್ಟೇಯಲ್ಲದೆ ಇವರು ಅನುವಾದಕರಾಗಿಯು ಉತ್ತಮ ಕೃಷಿ ಮಾಡಿದ್ದಾರೆ. ಹಿಂದಿ ಭಾಷೆಯಿಂದ ಕನ್ನಡಕ್ಕೆ ೧೯. ಕನ್ನಡದಿಂದ ಹಿಂದಿಗೆ ೫ ಕೃತಿಗಳು ಅನುವಾದಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಸಾಹಿತ್ಯ ರಚಿಸುವುದರೊಂದಿಗೆ ಆ ಎರಡು ಭಾಷೆಗಳಲ್ಲಿ ಒಟ್ಟು ಇಲ್ಲಿಯವರೆಗೆ ೮೭ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕವನಗಳು ಪಂಜಾಬಿ, ಉರ್ದು, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಮತ್ತು ಬೀದರದ ೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಇವರನ್ನು ಗೌರವಿಸಲಾಗಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆರ್.ಕೆ.ಹುಡಗಿ
ಕರ್ನಾಟಕದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾಗಿ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಿಸಿದ ಹಿರಿಯ ಬಂಡಾಯ ಸಾಹಿತಿಗಳೆಂದರೆ ಆರ್.ಕೆ.ಹುಡಗಿ. ಇವರ `ಪೂರ್ಣನಾಮ ರಾಮಶೆಟ್ಟಿ ತಂದೆ ಕರಿಬಸಪ್ಪಾ ಹುಡಗಿ’ ಎಂದಾಗಿದೆ. `ರಾಹು’ ಎಂಬುದು ಇವರ ಕಾವ್ಯನಾಮವಾಗಿದೆ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಕರಿಬಸಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ್ ಸ್ನಾತಕೋತ್ತರ ಪದವಿಧರರಾದ ಇವರು ೧೯೭೪ರಲ್ಲಿ ಕಲಬುರಗಿಯ ಪಿ.ಡಿ.ಎ.ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಎಡಪಂಥೀಯ ವಿಚಾರಗಳಿಂದ ಪ್ರತಿಭಟಿಸುತ್ತಾ ಬೆಳೆದವರು. ಮತ್ತು ಆ ವಿಚಾರಧಾರೆಗಳಿಂದ ಸಾಹಿತ್ಯವು ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಇವರು ಬರೆದ ಕೆಲ ಕೃತಿಗಳೆಂದರೆ, `ಈರೋಬಿ’ (ಗೀತ ನಾಟಕ) ‘ಬಾಯಿಂದ ಬಾದಶಹ ಪುರಾಣ’ `ಹೆಮ್ಮಾರಿಯ ರಸ ಪುರಾಣ’ `ಪ್ರಳಯಾಂತಕ ಪ್ರತಿಕಾರ’ `ಅಸಮಾನತೆಯ ಅಸುರಿ ಮುಖಗಳು’. `ಸಂಸ್ಥಾ’ (ರಂಗನಾಟಕ) `ಬರದ ಬಯಲಾಟ’. `ಅಕ್ಷರ’ `ಒರೆಗಲ್ಲು’. `ಪಾದಚಾರಿಯ ಪುರಾಣ’ `ಸಾಕು ನಾಯಿ’ `ಜ್ಯೊಲ್ಯಾ ನಾಯಿ’ `ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ’ `ಅನ್ನದಾತನ ಅರ್ತನಾದ’ `ಅನಾಮಿ ಪಿಂಡದ ಅರ್ತನಾದ’ `ನರಗುಂದ ರೈತನ ಬಂಡಾಯ’ `ಗುರು ಸಾರಥಿ- ಶಿಷ್ಯ ಅತಿಥಿ’ `ಭಗಾವತ್ ಗೀತೆ’ (ಬೀದಿ ನಾಟಕಗಳು) ಬರೆದು ಪ್ರದರ್ಶಿಸಿದ್ದಾರೆ. ಈ ನಾಟಕಗಳು ಸಂಸ್ಕೃತ ಜಾಥ, ವಿಜ್ಞಾನ ಜಾಥ,ಅಕ್ಷರ ಜಾಥ,ಬರಗಾಲ ಜಾಥ,ಮಹಿಳಾ ಜಾಥಾ,ಭ್ರಷ್ಟಾಚಾರ ವಿರುದ್ಧದ ಜಾಥಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ೧೬೬೫ ಪ್ರದರ್ಶನಗಳು ಕಂಡು ಜನ ಮೆಚ್ಚುಗೆ ಪಡೆದಿವೆ. ಅಷ್ಟೇಯಲ್ಲದೆ ಇವರು ಉತ್ತಮ ಅನುವಾದಕರು ಆಗಿದ್ದರಿಂದ ಇಂಗ್ಲೀಷ್, ಮರಾಠಿ, ಹಿಂದಿ ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನೇಕೆ ನಾಸ್ತಿಕ (ಭಗತ್ ಸಿಂಗ) ವಿಮೋಚನೆಯ ದಾರಿ, (ಇ.ಎಂ.ಎನ್.ಎನ್) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್) ಸಮರ್ಥ ಸಾಮ್ಯವಾದಿ (ಲಿವು-ಶಾವೊಕಿ) ಜ್ಯೋತಿ ಬಸು, (ಸುರಭಿ ಬ್ಯಾನರ್ಜಿ) ದಲಿತ ಸಂಘರ್ಷ: ದಾರಿ-ದಿಕ್ಕು (ಆನಂದ ತೇಲತುಂಬ್ಡೆ), ದಲಿತರು :ಭೂತ-ಭವಿಷ್ಯ, (ಆನಂದ ತೇಲತುಂಬ್ಡೆ) ಜಾತಿ ವ್ಯವಸ್ಥೆ- ಸಮಸ್ಯೆ ಸವಾಲುಗಳು, (ಬಾಬು ಜಗಜೀವನರಾಮ), ಜಾತಿ ವ್ಯವಸ್ಥೆ:- ಉಗಮ-ವಿಕಾಸ-ವಿನಾಶ (ಡಾ.ಬಿ.ಆರ್.ಅಂಬೇಡ್ಕರ್) ಮೈ ಫ್ಯುಡಲ್ ಲಾರ್ಡ್ ತೆಹಮಿನಾ ದುರ್ರಾನಿ ಅವರ ಆತ್ಮಕಥನ ‘ಆರನೆ ಹೆಂಡತಿಯ ಆತ್ಮಕಥನ‘, ಪೀಠಾಧಿಪತಿಯ ಪತ್ನಿ, ತುರಣ್ ತೇಜಪಾಲ್ ಅವರ ‘ದಿ ಅಲ್ಕೆಮಿ ಆಫ್ ಡಿಸೈರ್’ ‘ಕಾಮರಾಸಾಯನ ಶಾಸ್ತ್ರ’ ಬೆಸ್ಟ್ಸೆಲ್ಲರ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರು ೧೯೭೬ ರಲ್ಲಿ ಕಲಬುರಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ,೧೯೮೬ರಲ್ಲಿ ೧೦೦ ಅಡಿಗಳ ಬಣ್ಣದ ಜಾಗದಲ್ಲಿ ಸಂಘಟಕರಾಗಿ,೧೯೯೧ ಸಾಕ್ಷರತೆ ಜಾಥ,೧೯೯೨ರಲ್ಲಿ ಜನವಿಜ್ಞಾನ ಜಾಥ, ೨೦೦೫ ರಲ್ಲಿ ಭ್ರೂಣ ಹತ್ಯೆ ವಿರುದ್ಧ ಪ್ರಚಾರ ಜಾಥ,೨೦೦೯ ರಲ್ಲಿ ರೈತ ಪರ ಜಾಥಗಳಲ್ಲಿ ಲೇಖಕ ಮತ್ತು ಸಂಘಟಕರಾಗಿ ಸೇವೆ ಸಲ್ಲಿಸಿದ ಇವರು ೨೦೧೧ರಲ್ಲಿ ನಾಡಿನ ನೆಲ-ಜಲ ಉಳಿಸಲು ಬೀದರನಿಂದ ಬಳ್ಳಾರಿವರೆಗೆ ಸಂಘಟಕರಾಗಿ ಹೋರಾಟ ಮಾಡಿದ್ದಾರೆ. ಮತ್ತು ೧೯೮೫ರಿಂದ ೧೯೯೩ವರೆಗೆ ೧೯೯೮ರಿಂದ ೨೦೦೫ವರೆಗೆ ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳ ಸಂಘಟಕರಾಗಿ ದುಡಿದಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಶತಮಾನೋತ್ಸವದ ಸಂದರ್ಭದಲ್ಲಿ ೧೧೭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ೧೯೮೭ರಲ್ಲಿ ಬಿಜಾಪುರ ಜಿಲ್ಲೆಯಲ್ಲಿಯ ದೇವದಾಸಿ ಪದ್ದತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗತಿ ನಾಟಕ ಪ್ರದರ್ಶನ ಸಂಘಟರಾಗಿದ್ದರು. ೧೯೭೭ ರಿಂದಲೂ ಸಮುದಾಯ ಸಕ್ರಿಯ ಸದಸ್ಯರಾಗಿ, ಪೀಪಲ್ ಸೋಸಿಯೊ ಕಲ್ಚರಲ್ ಆರ್ಗನೈಸೇಷನ್ ಅಧ್ಯಕ್ಷರಾಗಿ, ಇಂಡೋ-ಸೋವಿಯತ್ ಕಲ್ಚರಲ್ ಸೊಸೈಟಿ ಕಲಬುರಗಿ ವಿಭಾಗದ ಅಧ್ಯಕ್ಷರಾಗಿ ೧೯೮೪ರಿಂದ ೧೯೯೦ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ ಕಾರ್ಯದರ್ಶಿ,ಉಪಾಧ್ಯಕ್ಷ, ಅಧ್ಯಕ್ಷರಾಗಿ ಸುಮಾರು ೨೭ ವರ್ಷ ಸೇವೆ ಸಲ್ಲಿಸಿದ್ದಾರೆ.ಮತ್ತು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ, ಭಾರತ ಜ್ಞಾನ- ವಿಜ್ಞಾನ ಸಮಿತಿಯ ಅಧ್ಯಕ್ಷರಾಗಿ, ಕಲಬುರಗಿ ಸಮುದಾಯ ಘಟಕದ ಅಧ್ಯಕ್ಷರಾಗಿ, ಉತ್ತರ ವಲಯದ ಕಾರ್ಯದರ್ಶಿ, ಹಾಗೂ ೨೦೦೬ರಿಂದ ರಾಜ್ಯ ಸಮುದಾಯದ ಅಧ್ಯಕ್ಷರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಶುದ್ಧೀಕರಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೭೯-೮೦ ರಲ್ಲಿ ಕಲಬುರಗಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ, ಗುಲಬರ್ಗಾ ರಾಜಕೀಯ ಶಾಂತಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೫ರಲ್ಲಿ ಕಲಬುರಗಿ ಮೊದಲ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ಇವರ `ಕಾರ್ಪೊರೇಟ್ ಕಾಲದಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ೨೦೧೫ ರಲ್ಲಿ ಇವರು ಮಾಡಿದ ಭಾಷಾಂತರ ಜೀವಮಾನ ಸಾಧನೆಗೆ `ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ ಯು ಲಭಿಸಿದೆ. ಸದ್ಯ ಇವರು ಕಲಬುರಗಿ ನಿವಾಸಿಯಾಗಿದ್ದು ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು ಸಾವಿರಾರು ಮಹತ್ವದ ಪುಸ್ತಕಗಳು ಸಂಗ್ರಹಿಸಿದ ಮಹಾನ್ ಪುಸ್ತಕ ಪ್ರೇಮಿಯು ಇವರಾಗಿದ್ದಾರೆ.
ಜಗದೇವಿ ದುಬಲಗುಂಡೆ.
‘ಅಪರೂಪದ ಅಪ್ಪ ‘ ಎಂಬ ತಮ್ಮ ತಂದೆಯ ಜೀವನ ಚರಿತ್ರೆ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡವರೆAದರೆ ಜಗದೇವಿ ದುಬಲಗುಂಡೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಗುರುಪಾದಪ್ಪಾ ಮೆಟಗೆ ಮತ್ತು ಭಾಗೀರಥಿಬಾಯಿ ದಂಪತಿಗಳಿಗೆ ದಿನಾಂಕ ೯-೬-೧೯೪೯ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ೮ನೇ ತರಗತಿಯವರೆಗೆ ಮಾತ್ರ ನಂತರ ಖಾಸಗಿ ಅಭ್ಯಾರ್ಥಿಯಾಗಿ ಎಸ್.ಎಸ್.ಎಲ್.ಸಿ.ಪಾಸು ಮಾಡಿದ ಇವರು ೧೯೮೬ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ ೨೦೦೭ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ತೋಟಗಾರಿಕೆ ಇಲಾಖೆಯಿಂದ ನಿವೃತ್ತರಾಗಿದ್ದಾರೆ.
ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ರಾಮಪ್ಪಾ ದುಬಲಗುಂಡೆ ಅವರೊಂದಿಗೆ ವಿವಾಹವಾಗಿ, ಉತ್ತಮ ವೈವಾಹಿಕ ಜೀವನ ನಡೆಸುವ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಪತಿ ದೈವಾಧೀನರಾಗಿದ್ದರಿಂದ ಅವರ ಅನುಕಂಪದ ಹುದ್ದೆಗೆ ಸೇರಿ ಸಾಹಿತ್ಯ ರಚನೆಯಲ್ಲಿ ನೆಮ್ಮದಿಯ ಜೀವನ ಕಂಡುಕೊAಡಿದ್ದಾರೆ. ಇವರು ೨೦೦೮ರಲ್ಲಿ `ಅಪರೂಪದ ಅಪ್ಪ’ ಎಂಬ ಜೀವನ ಚರಿತ್ರೆ, ಹಾಗೂ `ವಚನ ಕುಸುಮ’ ಎಂಬ ಆಧುನಿಕ ವಚನ ಸಂಕಲನ ೨೦೧೨ರಲ್ಲಿ `ಸಂಸ್ಕೃತಿ ಸಿಂಚನ’ ಎಂಬ ಜಾನಪದ ಕೃತಿ, ೨೦೧೫ ರಲ್ಲಿ `ಕಾವ್ಯ ತೊರಣ’ ಎಂಬ ಕೃತಿಗಳು ರಚಿಸಿದ್ದಾರೆ. ಇವರು `ಸಿದ್ದರಾಮ ಪ್ರಿಯ ಬಸವನ ಶಿಶು’ ಎಂಬ ಅಂಕಿತನಾಮದಿAದ ವಚನಗಳು ಮತ್ತು `ಗುರುಸಿದ್ದ ಬಸವ’ ಎಂಬ ಕಾವ್ಯನಾಮದಿಂದ ಬರೆದ ಕವನಗಳು ಉತ್ತರ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಕಲ್ಯಾಣದ ಅನುಭವ ಮಂಟಪದ ೩೭ನೇ ಶರಣ ಕಮ್ಮಟದಲ್ಲಿ ಇವರ `ಸಂಸ್ಕೃತಿ ಸಿಂಚನ’ ಎಂಬ ಕೃತಿಗೆ `ಕ್ರಾಂತಿ ಗಂಗೋತ್ರಿ ಅಕ್ಕನಾಗಾಂಬಿಕಾ’ ಎಂಬ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ೨೦೧೩ರಲ್ಲಿ ಬಸವಕಲ್ಯಾಣದ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದ ೨ನೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಆಯ್ಕೆ ಮಾಡಿ ಗೌರವಿಸಿದ್ದಾರೆ. ಅಷ್ಟೇಯಲ್ಲದೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಶರಣ ರತ್ನ’ ಪ್ರಶಸ್ತಿಯು ಪಡೆದಿದ್ದಾರೆ.
ವಿಶ್ವನಾಥಯ್ಯಾ ಮಠಪತಿ
ಹಸ್ತಪ್ರತಿ ಸಂಶೋಧನೆಯೊAದಿಗೆ ಲೇಖನ ಮತ್ತಿತರ ಬರಹಗಳು ಬರೆದು ಪುಸ್ತಕ ಪ್ರಕಟಿಸಿ, ಲೇಖಕ ಹಾಗೂ ಸಂಪಾದಕರಾಗಿ ಗುರುತಿಸಿಕೊಂಡವರೆAದರೆ ವಿಶ್ವನಾಥಯ್ಯಾ ಮಠಪತಿ. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಹಿರಿಯ ಸಾಹಿತಿ ವಿರೂಪಾಕ್ಷಯ್ಯಾ ಸ್ವಾಮಿ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೧೪-೭-೧೯೫೩ ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ವರೆಗೆ ಅಧ್ಯಯನ ಮಾಡಿದ ಇವರು. ಗೋರ್ಟಾ (ಬಿ) ಗ್ರಾಮದ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆಯಲ್ಲಿ ೧೯೭೪ರಿಂದ ಕರುಣಿಕರಾಗಿ ಸೇವೆಗೆ ಸೇರಿ, ೨೦೧೩ರಲ್ಲಿ ನಿವೃತ್ತರಾಗಿದ್ದಾರೆ.
ತಮ್ಮ ವೃತ್ತಿ ಜೀವನದೊಂದಿಗೆ ೨೦ವರ್ಷ ಸತತವಾಗಿ ಹಳೆ ಮನೆ, ಮಠಗಳಿಗೆ ಬೇಟಿ ನೀಡಿ ೧೦೦ ಕಟ್ಟು ಹಸ್ತಪ್ರತಿಗಳು ಸಂಗ್ರಹಿಸಿದರಿAದ ವಿವಿಧ ವಿಶ್ವವಿದ್ಯಾಲಯದ ಉಪನ್ಯಾಸಕರು, ಸಂಶೋಧಕರು ಹಾಗೂ ಧಾರವಾಡದ ಖ್ಯಾತ ಸಾಹಿತಿ ಎಂ.ಎA.ಕಲ್ಬುರ್ಗಿಯವರು ಸೇರಿದಂತೆ ಮೊದಲಾದವರು ಇವರ ಕಾರ್ಯಕ್ಕೆ ಪ್ರಶಂಸೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರು ಈ ಹಸ್ತಪ್ರತಿಗಳನ್ನು ಸಂಗ್ರಹಿಸಿದಷ್ಟೇಯಲ್ಲದೆ ಅವುಗಳು ಅಧ್ಯಯನ ಮಾಡಿ ಹೊಸಗನ್ನಡ ರೂಪದಲ್ಲಿ ಮುದ್ರಣವು ಮಾಡಿ ಸಂಶೋಧನಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಮತ್ತು ಹೊಸಗನ್ನಡ ಹಸ್ತಪ್ರತಿ ಕಾರ್ಯವನ್ನು ತಮ್ಮ ಮಗ ಡಾ.ರುದ್ರಮಣಿ ಮಠಪತಿ ಅವರೊಂದಿಗೆ ೨೦೦೭ರಲ್ಲಿ `ಹರಿಹರ ಮಹತ್ವ’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಹತ್ತಿರ ಬಸವಗಣ, ಶಿಖಾಮಣಿ ಹಾಗೂ ಅನೇಕ ಅಪ್ರಕಟಿತ ವಚನಗಳು ಮತ್ತು ಕೃತಿಗಳು ಲಭ್ಯ ಇವೆ. ಇವರ ಬರಹ ಲೇಖನಗಳು ಬಸವಪಥ ಮಾಸಪತ್ರಿಕೆಯಲ್ಲಿಯೂ ಪ್ರಕಟವಾಗಿವೆ. ಇವರಿಗೆ ಬೀದರ ಜಿಲ್ಲಾ ಸಂಶೋಧಕರು ಮತ್ತು `ಸಂಶೋಧನಾ ರತ್ನ’ ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಸದ್ಯ ಇವರು ಗೋರ್ಟಾ (ಬಿ) ಗ್ರಾಮದಲ್ಲಿ ನಿವೃತ್ತಿ ಜೀವನ ನಡೆಸುತಿದ್ದಾರೆ.
ಶಿವಪುತ್ರಪ್ಪಾ ಕಣಜೆ
ಆಧುನಿಕ ವಚನಕಾರಾಗಿ ಗುರ್ತಿಸಿಕೊಂಡು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಶಿವಪುತ್ರಪ್ಪ ಕಣಜೆ. ಇವರು ಬೀದರ ಜಿಲ್ಲೆಯ ನೂತನ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಅಣ್ಣೆಪ್ಪಾ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೬ ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಮುಂದೆ ಓದಲು ಆಗದೆ ಕೃಷಿಯಲ್ಲಿ ತೊಡಗಿ ಪ್ರಗತಿಪರ ರೈತ,ಸಮಾಜ ಸೇವಕ, ಬಸವತತ್ವ ಪ್ರಚಾರಕರಾಗಿ ಶರಣರ ಆದರ್ಶ ಜೀವನ ಮತ್ತು ವಚನ ಸಾಹಿತ್ಯಕ್ಕೆ ಮಾರು ಹೋಗಿ ೨೦೧೭ರಲ್ಲಿ `ವಚನ ಪರಿಮಳ’ ಎಂಬ ಆಧುನಿಕ ವಚನ ಸಂಕಲನವು ಪ್ರಕಟಿಸಿದ್ದಾರೆ. `ನಿಮ್ಮ ಶಿವಪುತ್ರ ಗುರುಬಸವ ಭಕ್ತರ ತೊತ್ತು.’ ಎಂಬುದ ಅವರ ಅಂಕಿತನಾಮವಾಗಿದೆ. ವಚನ ಸೌರಭ, ಮತ್ತು ಮುಕ್ತಿ ಪಥ ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರಿಗೆ ಬೀದರದ ಕಂಬಳಿವಾಲೆ ಪ್ರತಿಷ್ಠಾನ ಮತ್ತು ಸಸ್ತಾಪೂರದ ಯಲ್ಲಾಲಿಂಗೇಶ್ವರ ಆಶ್ರಯದಲ್ಲಿ ನಡೆಯುವ ಆಧುನಿಕ ವಚನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಸದ್ಯ ಇವರು ಗೋರ್ಟಾ ಗ್ರಾಮದಲ್ಲಿ ವಾಸವಿದ್ದು ಕೃಷಿಯೊಂದಿಗೆ ವಚನ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಡಾ. ರೇಖಾ ಜ್ಯೊತೆಪ್ಪ (ಮಹಾಜನ್)
ಮಹಿಳಾ ಸಾಹಿತಿಗಳಲ್ಲಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಡಾ.ರೇಖಾ ಜ್ಯೊತೆಪ್ಪ (ಮಹಾಜನ್)ರವರು. ಇವರು ಬೀದರ ಜಿಲ್ಲೆ ನೂತನ ಕಮಲನಗರ ತಾಲೂಕಿನ ಶ್ರೀ ಗುರುನಾಥಪ್ಪ ಮತ್ತು ಶ್ರೀ ಮತಿ ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಲಸೂರು ತಾಲೂಕಿನ ಮುಚಳಂಬದ ಶಿವರಾಜ ಜ್ಯೊತೆಪ್ಪರವರ ಧರ್ಮ ಪತ್ನಿಯಾಗಿದ್ದಾರೆ. ೧೯೮೪ರಲ್ಲಿ ಗೋರ್ಟಾ (ಬಿ)ಯ ಶ್ರೀ ಗುರುಪಾದ ಶಿವಾಚಾರ್ಯ ಪ.ಪೂ. ಕಾಲೇಜಿನಲ್ಲಿ ಸಲ್ಲಿಸಿ ನಂತರ ೧೯೮೫ರಲ್ಲಿ ಭಾಲ್ಕಿಯ ಸತ್ಯಾನಿಕೇತನ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದಾರೆ.
೨೦೦೮ರಲ್ಲಿ `ಸ್ಮೃತಿ ಗಂಧ’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದು, ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಶಾಂತಿ ಕಿರಣ,ಬಸವಪಥ,ಬಸವ ಮಾರ್ಗ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೭ರಲ್ಲಿ ನವದೆಹಲಿಯ ಭಾರತೀಯ ಶಾಂತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಭಾಲ್ಕಿ ಮಠದಿಂದ `ಡಾ.ಚನ್ನಬಸವ ಪಟ್ಟದೇವರು ಪ್ರಶಸ್ತಿ, ೨೦೦೨ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೧೫ರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರತಿಷ್ಠಾನದ ವತಿಯಿಂದ ಆದರ್ಶ ದಾಂಪತ್ಯ ಪ್ರಶಸ್ತಿ, ೨೦೧೬ರಲ್ಲಿ ಬೆಂಗಳೂರಿನ ವಂದೇ ಮಾತರಂ ಸಾಂಸ್ಕೃತಿಕ ಸಂಸ್ಥೆಯಿAದ ಸಮಾಜ ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ, ೨೦೧೧ರಲ್ಲಿ ಜಿಲ್ಲಾ ಕಸಾಪದ ವತಿಯಿಂದ ಗೌರವ ಸಮ್ಮಾನ ಪಡೆದಿದ್ದಾರೆ. ಸದ್ಯ ಇವರು ಭಾಲ್ಕಿಯ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ, ಜಾನಪದ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನ ಮೊದಲಾದವುಗಳಲ್ಲಿ ಭಾಗವಹಿಸಿ ಕವನ ವಾಚನ,ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಕುರಿತು ಸಾಹಿತಿ ಸಿ.ಎಸ್.ಆನಂದ ಮತ್ತು ವೀರಣ್ಣ ಕುಂಬಾರ ರವರು `ಶಿವ-ರೇಖಾ’ ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿ ಗೌರವಿಸಿದ್ದಾರೆ.
ವಿಶ್ವನಾಥ ಬಿರಾದಾರ
ಹವ್ಯಾಸಿ ಬರಹಗಾರ ವಿಶ್ವನಾಥ ಬಿರಾದಾರ ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಮಾಣಿಕಪ್ಪಾ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೮-೭-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಸ್ನಾತಕೋತ್ತರ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕವನ ಲೇಖನ ಬರಹಗಳು ಬರೆದ ಇವರು ೨೦೦೨ರಲ್ಲಿ `ಸರ್ಕಾರಿ ನೌಕರರ ಸ್ಮರಣ ಸಂಚಿಕೆ’ ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಹಲವಾರು ಬರಹಗಳು ಅನೇಕ ಕಡೆ ಪ್ರಕಟವಾಗಿವೆ.
ಪ್ರೊ.ಸಿದ್ದರಾಮಯ್ಯ ಮಠಪತಿ
ಕರ್ನಾಟಕದ ಖ್ಯಾತ ಸಂಗೀತ ಪ್ರಾಧ್ಯಾಪಕರಾಗಿ, ಸಾಹಿತಿ, ಲೇಖಕರಾಗಿ ಕೆಲ ಕೃತಿಗಳು ರಚಿಸಿ ಖ್ಯಾತರಾದವರೆಂದರೆ, ಡಾ. ಸಿದ್ದರಾಮಯ್ಯ ಮಠಪತಿ. ಇವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ಗೊರ್ಟಾ (ಬಿ) ಗ್ರಾಮದ ಪಂ.ವಿರೂಪಾಕ್ಷಯ್ಯ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ ೧-೧೨-೧೯೫೮ರಲ್ಲಿ ಜನಿಸಿದ್ದಾರೆ. ಸಂಗೀತ ಮೇಜರ್ ವಿಷಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರು ಬಾಗಲಕೋಟೆ ಜಿಲ್ಲೆಯ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ೧೯೮೨ರಿಂದ ಸಂಗೀತ ಶ್ರೇಣಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೧೯೯೩ರಲ್ಲಿ `ಸಂಗೀತ ರುದ್ರ’ ೧೯೯೫ರಲ್ಲಿ `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ ಮತ್ತು,೨’ ೨೦೦೧ರಲ್ಲಿ ‘ಸಂಗೀತ ಶ್ರೀ ರುದ್ರ’ (ಕನ್ನಡ) ೨೦೦೪ರಲ್ಲಿ ‘ಸಂಗೀತ ಶ್ರೀ ರುದ್ರ’ (ಹಿಂದಿ) ೨೦೦೬ರಲ್ಲಿ `ವೀರಶೈವ ಸಂಗೀತಗಾರರು’ `ಶ್ರೀ. ಷ.ಬ್ರ.ಗುರುಪಾದ ಶಿವಾಚಾರ್ಯರು’ ೨೦೦೬ರಲ್ಲಿ `ಕರ್ಮಯೋಗಿ ಹುಚ್ಚಪ್ಪಾ ಹತ್ತಿ’ `ಅಕಾಡೆಮಿ ಪ್ರಶಸ್ತಿ ಪುರಸ್ಕೃತರು’ ಎಂಬ ಕೃತಿಗಳು ರಚಿಸಿದ್ದು, ಮತ್ತು `ಭಾವಗುಚ್ಚ ‘ `ನಾದ ಲಹರಿ’ `ವಿಶ್ವ ನಿನಾದ’ `ನಾದೊಪಾಸಕ’ ಎಂಬ ಕೃತಿಗಳು ಸಂಪಾದಿಸಿದ್ದಾರೆ.’ ಇವರ ಸಂಗೀತ ರುದ್ರ ಕೃತಿಗೆ ೧೯೯೩ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ಮತ್ತು ೨೦೦೦ ರೂಪಾಯಿ ಗೌರವ ಧನವು ಪಡೆದರೆ, `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ಕ್ಕೆ ೧೯೯೫ರಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ೨೦೦೦ ರೂಪಾಯಿ ಪ್ರೋತ್ಸಾಹ ಧನಸಹಾಯ ಪಡೆದಿದೆ.
ಇವರ ಕತೆ,ಲೇಖನ, ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ತುಷಾರ, ಸುಧಾ,ತರಂಗ, ಮೊದಲಾದ ಪತ್ರಿಕೆ ಪ್ರಾತಿನಿಧಿಕ ಸಂಕಲನಗಳಲ್ಲಿ ೨೫೦ಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ಕರ್ನಾಟಕದ ಎಲ್ಲ ಬಾನುಲಿ ಕೇಂದ್ರ ಹಾಗೂ ದೂರದರ್ಶನಗಳಲ್ಲಿ ಸಾಕಷ್ಟು ಸಂಗೀತ ಗೀತ ಗಾಯನ ಕಾರ್ಯಕ್ರಮಗಳು ಪ್ರಸಾರಗೊಂಡು ಮನೆ ಮಾತಾಗಿದ್ದಾರೆ. ಇವರು ಹಾಡಿದ ನೂರಾರು ಗೀತೆಗಳು ಕನ್ನಡ, ಹಿಂದಿಯಲ್ಲಿ ಧ್ವನಿ ಸುರುಳಿಯಾಗಿ ಮುದ್ರಣಗೊಂಡು ನಾಡಿನಾದ್ಯಂತ ಜನಪ್ರಿಯವಾಗಿವೆ. ಇವರು ರಂಗಭೂಮಿ ಸಂಗೀತ ನಿರ್ದೇಶಕರಾಗಿ, ಹಲವಾರು ನಾಟಕ,ಧಾರಾವಾಹಿಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.ಇವರ ಸಾಹಿತ್ಯ,ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ೧೯೮೫ರಲ್ಲಿ ನಾಗಮಂಗಲದ ಗ್ರಂಥ ಗಂಗೋತ್ರಿ ಪ್ರಕಾಶನದ ವತಿಯಿಂದ `ನಿಹಾರಿಕಾ’ ಎಂಬ ಕತೆಗೆ ಅಂತರಾಷ್ಟ್ರೀಯ ಯುವ ಕಥಾ ಪ್ರಶಸ್ತಿ, ೧೯೯೨ರಲ್ಲಿ ಜಗದ್ಗುರು ವಾರಣಾಸಿಯ ಪೀಠದಿಂದ ಸಂಗೀತ ವಿಶಾರದ ಪ್ರಶಸ್ತಿ, ೧೯೯೭ರಲ್ಲಿ ಬೆಂಗಳೂರಿನ ವೀರಶೈವ ಸಮನ್ವಯ ವೇದಿಕೆಯಿಂದ ಸ್ವರ ಶ್ರೀ ಪ್ರಶಸ್ತಿ, ೨೦೦೪ರಲ್ಲಿ ಗಾನಯೋಗಿ ಪಂ.ಪAಚಾಕ್ಷರಿ ಗಾನಕಲಾ ಪರಿಷತ್ ಗೋಕಾಕ್ ವತಿಯಿಂದ ಸಂಗೀತ ಝೆಂಕಾರ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ೧೯೯೪ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ೧೯೯೮ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೋರ್ಡ ಆಫ್ ಸ್ಟಡೀಸ್ (ಹಿಂದೂಸ್ತಾನಿ ಸಂಗೀತ) ಸದಸ್ಯರಾಗಿ, ೧೯೯೯ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ೨೦೦೧ರಲ್ಲಿ ಅಲಹಾಬಾದನಲ್ಲಿ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಪ್ರಯಾಗ್ ಸಂಗೀತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಹಲವಾರು ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುವುದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ೧೩ ಉತ್ತಮ ಪುಸ್ತಕಗಳು ಬರೆದಿರುವುದರಿಂದ ಇವರಿಗೆ ಮುಚಳಂಬ ಗ್ರಾಮದಲ್ಲಿ ನಡೆದ ಬಸವಕಲ್ಯಾಣದ ೩ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಡಾ. ಗಣಪತಿ ಝ.ಸಿಂಧೆ
ಪ್ರಬAಧ, ಲೇಖನ ಬರಹಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಗಣಪತಿ ಝ.ಸಿಂಧೆ. ಇವರು ಬೀದರ ಜಿಲ್ಲೆ ನೂತನ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ಝಟಿಂಗರಾವ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ. ೧-೬-೧೯೫೯ರಲ್ಲಿ ಜನಿಸಿದ್ದಾರೆ. ಎಂ.ಎ, ಎಂ.ಫೀಲ್, ಎಲ್.ಎಲ್.ಬಿ. ಎಂ.ಎಲ್.ಐ.ಎಸ್.ಸಿ. ಪದವಿಧರರಾದ ಇವರು ಹತ್ತು ವರ್ಷ ಖಾಸಗಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ನಂತರ ೧೯೯೫ರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಉಪಗ್ರಂಥ ಪಾಲಕರಾಗಿ ಸೇವೆಗೆ ಸೇರಿ, ಮುಖ್ಯ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷಾ ಪಾಂಡಿತ್ಯ ಹೊಂದಿದ ಇವರು ಆಂಗ್ಲ ಭಾಷೆಯಲ್ಲಿ `ರಿಸರ್ಚ್ ಇನ್ ಸೋಷಿಯಲ್ ಸೈನ್ಸ್’ ಎಂಬ ಪುಸ್ತಕ ೨೦೦೪ರಲ್ಲಿ ಬರೆದು ಪ್ರಕಟಿಸಿದ್ದಾರೆ. ಈ ಕೃತಿಗೆ ೨೦೧೨ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. ಇವರ ಬರಹಗಳು ಕೆಲ ಪ್ರಮುಖ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಉತ್ತಮ ಸಂಘಟಕರು ಆಗಿದ್ದರಿಂದ ೨೦೧೧ರಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ವೃತ್ತಿ ಬಾಂಧವರ ಸಂಘವು ಸ್ಥಾಪಿಸಿ, ಅದರ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಹಲವಾರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಗುಲಬರ್ಗಾ, ಮಂಗಳೂರು, ಮೈಸೂರು, ಬೆಂಗಳೂರು, ವಿಶ್ವವಿದ್ಯಾಲಯಗಳ ಆವರಣದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಮಾಡಿದ್ದಾರೆ. ಮಹಾರಾಷ್ಟ್ರದ ನಾಗಪೂರದ ಧಿಕ್ಷಾ ಭೂಮಿಯಲ್ಲಿಯು ಇವರು ಈ ಸಂಘಟನೆಯ ಕಾರ್ಯಕ್ರಮವು ಆಯೋಜನೆ ಮಾಡಿ ಜಾಗೃತಿ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರು ೩೮ ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ಗ್ರಂಥಾಲಯಗಳ ಅನುಭವ ಪಡೆದು ಉತ್ತಮ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಇವರ ಮಿತ್ರ ಬಾಂಧವರು `ಪ್ರೊಫೆಷನಲ್ ಸಸ್ಟೆನನ್ಸ ರಿಚರ್ಸ ಸಪೋರ್ಟ್ ಆ್ಯಂಡ್ ಪ್ರಪ್ರರಿಂಗ್ ಫಾರ್ ನ್ಯಾಕ್ ಇನ್ ಅಕಾಡೆಮಿಕ್’ ಎಂಬ ಅಭಿನಂದನಾ ಗ್ರಂಥವು ಹೊರತಂದಿದ್ದಾರೆ. ಈ ಅಭಿನಂದನಾ ಗ್ರಂಥವನ್ನು ಪಿ.ಎಸ್.ಕಟ್ಟಿಮನಿ ಮತ್ತು ಐ.ಎಸ್.ವಿದ್ಯಾಸಾಗರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ವಿಶ್ವನಾಥ ಮುಕ್ತಾ
ಆಧ್ಯಾತ್ಮಿಕ ಮತ್ತು ವೈಚಾರಿಕ ಬರವಣಿಗೆಯಲ್ಲಿ ತೊಡಗಿಕೊಂಡು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ವಿಶ್ವನಾಥ ಮುಕ್ತಾ .ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಬಾಬುರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೬೦ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ೧೯೮೩ರಲ್ಲಿ ಬಸವಕಲ್ಯಾಣದ ಶ್ರೀ ಬಸವೇಶ್ವರ ಪ್ರಾಥಮೀಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ಕತೆ ಕವನ ಲೇಖನಗಳನ್ನು ಬರೆದು ೧೯೯೪ರಲ್ಲಿ `ಸಮ್ಮಿಲನ’ `ಮರಿಚಿಕೆ ’ `ಮಣ್ಣಿನ ಹೂ’ ಎಂಬ ಕವನ ಸಂಕಲನಗಳು, `ಮುಗಿಲ ಮೆಟ್ಟಿಲು’ `ಅನ್ವೇಷಣೆ‘’ಎಂಬ ಚಿಂತನ ಕೃತಿಗಳು, `ಬೆಳಕಿನ ಸಿರಿ, ಕಲ್ಯಾಣ ಕಲಾಶ್ರೀ’ ಎಂಬ ಸಂಪಾದನೆ ಮತ್ತು `ಮುಕ್ತೇಶ್ವರ ವಚನಗಳು-೧.೨.೩.೪. ಹಾಗೂ `ಮುಕ್ತಿಯ ಸೂತ್ರಗಳು’ `ನೀನಿಲ್ಲದೆ ನಾನಿಲ್ಲ’ ಎಂಬ ಆಧುನಿಕ ವಚನಗಳ ಸಂಕಲನಗಳು ಪ್ರಕಟಿಸಿದ್ದಾರೆ. ಇವರ ಕವನ ಲೇಖನ, ಚಿಂತನ, ಆಧುನಿಕ ವಚನಗಳು ಕನ್ನಡದ ಕೆಲ ಪ್ರಮುಖ ಪತ್ರಿಕೆ ಮತ್ತು ಆಕಾಶವಾಣಿಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಹಾಗೂ ಕೆಲ ಕವನಗಳು ಸಾಕ್ಷರತೆಯ ೧ ಧ್ವನಿ ಸುರುಳಿ ೨ ಸಿಡಿಗಳಾಗಿ ಮುದ್ರಿತಗೊಂಡಿವೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ೨೦೧೯ರಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗದಲೆಗಾಂವ ಗ್ರಾಮದಲ್ಲಿ ನಡೆದ ೮ನೇ ತಾಲ್ಲುಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ಕನ್ನಡ ,ಇಂಗ್ಲೀಷ, ಮರಾಠಿ , ಹಿಂದಿ ಮತ್ತು ಉರ್ದು ಹೀಗೆ ಪಂಚ ಭಾಷೆಗಳಲ್ಲಿ ಸಾಹಿತ್ಯ ರಚಸಿ, ಪಂಚ ಭಾಷಾ ಜನಾಂಗಕ್ಕೆ ಚಿಂತನಾತ್ಮಕ ಸಾಹಿತ್ಯ ಉವಾಚಿಸಿ ದೇಹ ಮತ್ತು ಜೀವ ಸಂಬAಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರು ಗ್ರಾಫಿಕ ಸಾಹಿತ್ಯ ಎಂಬ ಚಿತ್ರ ಸಾಹಿತ್ಯ ರಚಿಸುತ್ತಿದ್ದಾರೆ. ಮತ್ತು ಹಲವು ನಾಟಕಗಳಲ್ಲಿಯು ನಟಿಸಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಪ್ರೊ.ಶAಭುಲಿAಗ ವಿ.ಕಾಮಣ್ಣಾ
ಶರಣ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ,ಲೇಖನ,ಚಿಂತನಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಶಂಭುಲಿAಗ ಕಾಮಣ್ಣಾ. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ವೀರಶೇಟ್ಟೆಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೨೮-೧೧-೧೯೬೦ ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ೧೯೮೬ರಿಂದ ಭಾಲ್ಕಿಯ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಕವನ,ಲೇಖನ, ಚಿಂತನಗಳನ್ನು ಬರೆದಿರುವ ಇವರು ೨೦೦೪ರಲ್ಲಿ `ಚಿಂತನ ಚಿಗುರು’ ೨೦೧೨ರಲ್ಲಿ `ಬಾಂದಳದ ಬೆಳಗು’ ಎಂಬ ಚಿಂತನ ಕೃತಿಗಳು, ೨೦೧೬ರಲ್ಲಿ `ಶರಣ ಸೌರಭ’ ೨೦೧೮ರಲ್ಲಿ `ಶರಣ ದೀಪ್ತಿ’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ಕಾಯಕ ಪ್ರೇಮಿ, ರಾಜೋಳೆ ಸಂಘರ್ಷ, ಉತ್ತರ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಆಕಾಶವಾಣಿಯಲ್ಲಿ ಇವರ ಚಿಂತನಗಳು ಪ್ರಸಾರವಾಗಿವೆ.
ಇವರಿಗೆ ೨೦೦೭ರಲ್ಲಿ ಕಸಾಪ ಬೆಂಗಳೂರಿನಿAದ ಕನ್ನಡ ಶ್ರೀ ಪ್ರಶಸ್ತಿ, ಕನ್ನಡ ಸೇನೆಯಿಂದ ಕನ್ನಡ ರತ್ನ ಪ್ರಶಸ್ತಿ, ಭಾಲ್ಕಿ ತಾಲೂಕು ಆಡಳಿತದಿಂದ ಬಸವ ಶ್ರೀ ಪ್ರಶಸ್ತಿ, ಮತ್ತು ಉತ್ತಮ ಉಪನ್ಯಾಸಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭೀಸಿವೆ. ೨೦೧೭ರಲ್ಲಿ ಇವರಿಗೆ ಭಾಲ್ಕಿ ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ೨೦೦೪ರಲ್ಲಿ ಭಾಲ್ಕಿ ಕಸಾಪದ ಅಧ್ಯಕ್ಷರಾಗಿ, ೨೦೦೮ರಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕಾಶ ಸಿ.ಹರಕುಡೆ
ಕರ್ನಾಟಕದ ಗಡಿನಾಡಿನಲ್ಲಿ ಹುಟ್ಟಿ ಮರಾಠಿ ಭಾಷಿಕರ ಜನಜೀವನ ಸಮುದಾಯದೊಂದಿಗೆ ಕನ್ನಡ ಮರಾಠಿ ಹಿಂದಿ ಉರ್ದು ಬಹುಭಾಷಿಕರಾಗಿ, ಕಲಾವಿದ, ನಾಟಕಕಾರ,ಚಲನಚಿತ್ರ ನಟ ಕವಿ ,ಸಾಹಿತಿ,ಹಾಗೂ ಉನ್ನತ ಅಧಿಕಾರಿಯಾಗಿ ಪರಿಚಿತರಾದವರೆಂದರೆ ಪ್ರಕಾಶ ಸಿ.ಹರಕುಡೆ. ಇವರು ಬೀದರ ಜಿಲ್ಲೆ ಹುಲಸೂರಿನ ಚಂದ್ರಪ್ಪ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೫-೩-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಸಿವಿಲ್, ಎಂ,ಟಿ,ಪಿ, ಎ.ಐ.ಟಿ.ಸಿ.ಪದವಿಧರರಾದ ಇವರು ಕಲಬುರಗಿ ಮಹಾನಗರ ಪಾಲಿಕೆಯ ನಗರ ಯೋಜನೆಯ ಜಂಟಿ ನಿರ್ದೇಶಕರು ಮತ್ತು ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅಮೃತಧಾರೆ’ `ಸುಂದರ ಲೋಕ ‘ `ಬಾಳು ಬಂಗಾರ’ `ಉತ್ಕರ್ಷ’. ‘ಉಜ್ವಲ ಬಾಳಲಿ ಮೂಡಲಿ ಬೆಳಕು’ `ಗಂಗಾಜಲ’ `ಮಾನವ ಜನ್ಮ ದೊಡ್ಡದು’ `ರಾಮನಾಗದಿದ್ದರೆ ನೀರಾವಣನಾಗಬೇಡ ‘ `ನಿತ್ಯ ಸುಖ’, `ಕೂಸನ್ನು ಕೊಂದು ಕಾಶಿಗೆ ಹೋದರೇನು ಫಲ’, `ಭಾಗ್ಯೋದಯ’ `ಹಣಕ್ಕಾಗಿ ನೀನೇಕೆ ಹೆಣವಾಗುವಿ’, `ನಗುತಾ ಮಾಡುವ ಪಾಪ, ಅಳುತಾ ಕಳೆಯ ಬೇಕಾಗುವುದು’ ಇವು ಅವರ ಪ್ರಮುಖ ಕೃತಿಗಳಾಗಿವೆ. ಹೀಗೆ ಸಾಹಿತ್ಯ ರಚನೆಯೊಂದಿಗೆ ಗ್ರಾಮದಲ್ಲಿ ನಡೆಯುವ ನಾಟಕಗಳಲ್ಲೂ ಕೂಡ ನಟಿಸುತ್ತಾ ಬಂದಿದ್ದಾರೆ. ಮುಂದೆ ಇವರು ಆಕಸ್ಮಿಕವಾಗಿ ಬೀದರನಲ್ಲಿ ಬರ ಸಿನಿಮಾ ತಂಡ ಪರಿಚಯ ಮಾಡಿಕೊಂಡು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. `ಇಂದ್ರನ ಗೆದ್ದ ನರೇಂದ್ರ’ ‘ತುಂಗಭದ್ರ’ `ಕೆಂಪಯ್ಯ ಐ.ಪಿ.ಎಸ್’ `ಅಧಿಪತಿ’. `ಲೂಟಿಗ್ಯಾಂಗ್’ `ಈಶ್ವರ’, `ಲಾಕಪಡೆತ್’ ಸಾಂಗ್ಲಿಯಾನ ಭಾಗ-೩, `ಮೀಲ್ಟ್ರಿ ಮಾವಾ’. `ಸಂಭವಾಮಿ ಯುಗೆ ಯುಗೆ ‘. `ಕಪ್ರ‍್ರೂ,’ `ಧೈರ್ಯವಂತ’ ಹೀಗೆ ಮೊದಲಾದ ಸುಮಾರು ಇಪ್ಪತ್ತೈದು ಸಿನಿಮಾಗಳಲ್ಲಿ ಖ್ಯಾತ ನಾಯಕ ನಟರಾದ ವಿಷ್ಣುವರ್ಧನ್, ಅನಂತನಾಗ,ದೇವರಾಜ,ಜಗ್ಗೇಶ್, ಸಾಯಿಕುಮಾರ,ಶಶಿಕುಮಾರ್, ಸುಂದರಕೃಷ್ಣ ಅರಸ, ಧೀರೇಂದ್ರ ಗೋಪಾಲ್ ಮೊದಲಾದವರೊಂದಿಗೆ ನ್ಯಾಯಧೀಶರಾಗಿ, ಉಪನ್ಯಾಸಕರಾಗಿ, ಶಾಸಕರಾಗಿ ಮೊದಲಾದ ಪಾತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ. ಇವರ ಕಾರ್ಯ ಸಾಧನೆಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಕತೆ, ಕವನ, ಲೇಖನ ಬರಹಗಳು ವಿವಿದ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ ಪ್ರಸಾರವಾಗಿವೆ.
ಡಾ.ವಿಜಯಕುಮಾರ ಎಂ. ದೇವಪ್ಪಾ
ಐತಿಹಾಸಿಕ ಮತ್ತು ವೈಚಾರಿಕ ಲೇಖನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ, ಡಾ.ವಿಜಯಕುಮಾರ ಎಂ.ದೇವಪ್ಪಾ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಮಲ್ಲಿಕಾರ್ಜುನ ದೇವಪ್ಪಾ ಮತ್ತು ಗುರಮ್ಮಾ ದಂಪತಿಗಳಿಗೆ ದಿನಾಂಕ ೨೧-೨-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಇ (ಸಿವಿಲ್) ಪಧವಿಧರರಾದ ಇವರು ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಆರ್.ಡಿ.ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಕಲಿತದ್ದು ಇಂಜಿನಿಯರಿAಗ್ ಪದವಿಯಾದರು, ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, ೨೦೦೬ರಲ್ಲಿ `ಚಲನೆ’ ಮತ್ತು ೨೦೧೭ರಲ್ಲಿ `ಜೀವ ಸೇಲೆ’ ಎಂಬ ಕವನ ಸಂಕಲನಗಳು, ೨೦೧೫ರಲ್ಲಿ `ಮಳೆಕೊಯ್ಲು ‘ ಎಂಬ ಲೇಖನ ಸಂಕಲನ, ೨೦೧೬ ರಲ್ಲಿ `ರಜಾಕಾರರ ಹಾವಳಿ ಮತ್ತು ಮುಚಳಂಬಿ ಗ್ರಾಮ’ ೨೦೧೮ರಲ್ಲಿ `ಮುಚಳಂಬಿ ಒಂದು ಐತಿಹಾಸಿಕ ಗ್ರಾಮ’ ಎಂಬ ಐತಿಹಾಸಿಕ ಕೃತಿಗಳು ರಚಿಸಿದ್ದಾರೆ. ಹಾಗೂ ಎಸ್.ಜಿ.ಮೇಳಕುಂದಿಯವರ ಕುರಿತು `ಶಿವರುದ್ರ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದಿದ್ದಾರೆ. ಇವರ ಕವನ,ಲೇಖನ, ಪ್ರಬಂಧ ಮೊದಲಾದ ಬರಹಗಳು ಬೀದರದ ಜನದನಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಹಾಗೂ ೬೦ಕಿಂತ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಮಂಡಿಸಿದ್ದಾರೆ. ಮತ್ತು ಅವು ಕೆಲ ಮಾಸ ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಇವರ `ರಾಜ್ಯೋತ್ಸವ ಪ್ರಶಸ್ತಿ’ ಯು ನೀಡಿ ಗೌರವಿಸಿದ್ದಾರೆ. ಅಷ್ಟೇಯಲ್ಲದೆ ಇವರ `ಮುಚಳಂಬಿ ಒಂದು ಐತಿಹಾಸಿಕ ನೋಟ’ ಎಂಬ ಕೃತಿಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳು `ಉತ್ತಮ ಲೇಖಕರು’ ಎಂಬ ಗೌರವ ಸನ್ಮಾನವು ಮಾಡಿ ಸತ್ಕಾರಿಸಿದ್ದಾರೆ.
ಗುರುನಾಥ ಅಕ್ಕಣ್ಣ
ತೊಂಬತ್ತರ ದಶಕದ ಪೂರ್ವದಲ್ಲಿಯೆ ಕತೆ ಬರೆಯಲು ಪ್ರಾರಂಭಿಸಿ, ಖ್ಯಾತರಾದ ಕತೆಗಾರರೆಂದರೆ ಗುರುನಾಥ ಅಕ್ಕಣ್ಣನವರು. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಕಾಶಪ್ಪಾ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೮-೧೨-೧೯೬೩ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರ ಪದವಿಧರರಾದ ಇವರು ೧೯೮೩ರಲ್ಲಿ ಅಂಚೆ ಇಲಾಖೆಯಲ್ಲಿ ಸೇವೆಗೆ ಸೇರಿ ಸದ್ಯ ಬೀದರದ ಪ್ರಧಾನ ಅಂಚೆ ಕಛೇರಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕತೆಗಳ ರಚನೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದ ಇವರು ದ್ಯಾವನೂರು ಮಹಾದೇವರಂತೆ ಬರೆದದ್ದು ಕಡಿಮೆಯಾದರು ಗಟ್ಟಿ ಸಾಹಿತ್ಯವನ್ನೆ ರಚನೆ ಮಾಡಿ ೧೯೯೦ರಲ್ಲಿ `ಯಾರನ್ನು ಪ್ರೀತಿಸಬೇಡ’ ೧೯೯೬ ರಲ್ಲಿ `ಇದು ಎಂಥ ಲೋಕವಯ್ಯಾ’ ೨೦೦೯ರಲ್ಲಿ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ’ ಎಂಬ ಕಥಾಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ‘ಬಿಸಿಲು ಬೆಳದಿಂಗಳು’ ಎಂಬ ಕತೆಯು ಮಲೆಯಾಳಂ ಭಾಷೆಗೆ ಕೆ.ಟಿ.ರವಿ ಎನ್ನುವರು ಅನುವಾದಿಸಿದ್ದು ಇವರ ನಾಲ್ಕು ಕತೆಗಳು ಮರಾಠಿಗೆ, ಒಂದು ಕತೆ ಹಿಂದಿಗೆ ಭಾಷಾಂತರಗೊAಡಿವೆ. ಇವರ `ಆಯ್ಕೆ’ ಎಂಬ ಕತೆ ಬೆಂಗಳೂರು ದೂರದರ್ಶನದಿಂದ ಡಾ.ಬಸವರಾಜ ನಂದಿಧ್ವಜ ಅವರ ನಿರ್ದೇಶನದಲ್ಲಿ ಧಾರವಾಹಿಯಾಗಿ ಪ್ರಸಾರವಾಗಿದೆ. ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದ ಅಮರೇಶ್ವರ ನುಗಡೋಣಿಯವರು ಸಂಪಾದಿಸಿದ ಹೈದರಾಬಾದ್ ಕರ್ನಾಟಕ ಲೇಖಕರ ಪ್ರಾತಿನಿಧಿಕ ಸಂಕಲನ `ಬಿಸಿಲ ಹನಿಗಳು’ ಎಂಬ ಕಥಾ ಸಂಕಲನದಲ್ಲಿ ಇವರ `ಈ ಸಂಘರ್ಷಕ ಉಂಟೆನಯ್ಯಾ ಕೊನೆ’ ಎಂಬ ಕತೆಯು ಪ್ರಕಟವಾಗಿದೆ.
೧೯೯೦ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಇವರ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ’ ಕತೆಗೆ ಬಹುಮಾನ ಮತ್ತು ೨೦೦೧ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ದತ್ತಿ ಕಥಾಸ್ಪರ್ಧೆಯಲ್ಲಿ ಇವರ `ನೀ ಮಾಯೆಯೊಳಗೊ ! ನಿನ್ನೊಳು ಮಾಯೆಯೋ ! ‘ ಮತ್ತು ೨೦೦೪ ರಲ್ಲಿ ‘ಭವದ ಬೀಜ’ ಎಂಬ ಕತೆಗಳಿಗೆ ಎರಡು ಸಲ ಬಹುಮಾನವು ಪಡೆದಿದ್ದಾರೆ. ಇವರು ೧೯೯೧ರಲ್ಲಿ `ಬೀದರ ಜಿಲ್ಲೆಯ ಬರಹಗಾರರು ಮತ್ತು ಕಲಾವಿದರ ಸಂಘವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ, ೨೦೦೪ರಿಂದ ೨೦೦೭ ರವರೆಗೆ ಬೀದರ ತಾಲೂಕಿನ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕತೆಗಳು ತರಂಗ ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿ, ದೂರದರ್ಶನದಲ್ಲಿಯು ಪ್ರಕಟ, ಪ್ರಸಾರವಾಗಿವೆ.
ಪೂಜ್ಯ. ಶ್ರೀ. ಡಾ.ರಾಜಶೇಖರ ಶಿವಾಚಾರ್ಯರು
ಅಧ್ಯಾತ್ಮಿಕ, ಧಾರ್ಮಿಕ, ವೈಚಾರಿಕ ತಳಹದಿಯಲ್ಲಿ ಪುಸ್ತಕ ಪ್ರಕಟಿಸಿದ ಸಾಹಿತಿಗಳೆಂದರೆ ಪೂಜ್ಯ.ಶ್ರೀ.ಡಾ.ರಾಜಶೇಖರ ಶಿವಾಚಾರ್ಯರು. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶ್ರೀ.ವೇದಮೂರ್ತಿ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಶ್ರೀಮತಿ ವೀರಮ್ಮ ದಂಪತಿಗಳಿಗೆ ದಿನಾಂಕ ೪-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆಮಳಖೇಡÀ ಹೀರೆಮಠ ಸಂಸ್ಥಾನದ ಪೀಠಾಧೀಪತಿಗಳಾಗಿದ್ದಾರೆ. `ವೀರಶೈವ ಪಂಚಪೀಠಗಳು ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ ಪ್ರಬಂಧವಾಗಿದೆ. ೧೯೯೪ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ವಿದ್ವತ್ ಸಂಗೀತ, ವಿದ್ವತ್ ತಬಲಾ,ಸಂಗೀತ ಮಾರ್ತಾಂಡ’ ಎಂಬ ಪದವಿಗಳು ಪಡೆದು, ಬೆಂಗಳೂರಿನ ಕಸಾಪದಿಂದ `ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾ’ ಪದವಿಯನ್ನು ಪಡೆದಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ಉಭಯ ಕ್ಷೇತ್ರಗಳಲ್ಲಿ ಆಸಕ್ತರಾದ ಶ್ರೀಗಳು ೧೯೯೮ರಲ್ಲಿ `ಹೊಗೆ ಚಿತ್ತಾರ’ ಎಂಬ ಕವನಸಂಕಲನ, ೧೯೯೯ರಲ್ಲಿ `ಶಾಸನಗಳಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರು’ ೨೦೦೩ರಲ್ಲಿ `ಕೊಲ್ಲಿಪಾಕ:ಇತಿಹಾಸ ಮತ್ತು ಉಪಾಸನೆ’ ೨೦೦೪ರಲ್ಲಿ `ರಂಭಾಪುರಿ ಬೆಳಗು’ ೨೦೦೫ರಲ್ಲಿ `ಶಾಸನಗಳಲ್ಲಿ ಪಂಚಪೀಠಗಳು’ ಎಂಬ ಕೃತಿಗಳು ಮತ್ತು `ಮಲಯಾಚಲ ದೀಪ್ತಿ’ `ಮುನೀಂದ್ರ ವಿಜಯ’ `ಕಲ್ಯಾಣ ಕಲ್ಪ’ `ವೀರ ಪ್ರಭೆ’ `ಹೊಂಗಿರಣ’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ.
೨೦೦೩ರಲ್ಲಿ ಬಸವಕಲ್ಯಾಣ ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಗಳು ವೀರಶೈವ ರಕ್ಷಣಾ ವೇದಿಕೆ ಮತ್ತು ರಾಷ್ಟ್ರೀಯ ವೀರಶೈವ ಅಭಿವೃದ್ಧಿ ಸಂಸ್ಥೆ ಹಾಗೂ ಶಾಂಭವಿ ಮಹಿಳಾ ಅಧ್ಯಾತ್ಮ ವೇದಿಕೆಗಳನ್ನು ಸ್ಥಾಪಿಸಿ ಅವುಗಳ ರಾಜ್ಯಾಧ್ಯಕ್ಷರಾಗಿ, ಶ್ರೀಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಂಚಾಲಕರಾಗಿ,ಗೋರ್ಟಾ ಗ್ರಾಮದ ಶ್ರೀ ರುದ್ರೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹುತಾತ್ಮ ಸ್ಮಾರಕ ಹೋರಾಟ ಸಮಿತಿ, ಶ್ರೀ ಸಂಗೀತ ರುದ್ರೇಶ್ವರ ದೇವಾಲಯ ಅಭಿವೃದ್ಧಿ ಸಂಸ್ಥಾನಗಳ ಅಧ್ಯಕ್ಷರಾಗಿ, ಬೀದರ ನೌಬಾದದ ಜ್ಞಾನ ಶಿವಯೋಗಾಶ್ರಮ ಮತ್ತು ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ ಸಂಸ್ಥಾನಗಳ ಅದಿಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಗಳು ಸದ್ಯ ಬೆಮಳಖೇಡ ಹೀರೆಮಠ ಸಂಸ್ಥಾನದ ಶ್ರೀ ತಪೋರತ್ನ ಲಿಂ.ಗುರುಪಾದ ಶಿವಾಚಾರ್ಯರ ಉತ್ತರಾಧಿಕಾರಿಗಳಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಇವರಿಗೆ ಹೀರೆನಾಗಾಂವ ಗ್ರಾಮದಲ್ಲಿ ನಡೆದ ೬ನೇ ಬಸವಕಲ್ಯಾಣ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಡಾ. ಶಿವಾಜಿ ಮೇತ್ರೆ
ಉದಯೋನ್ಮುಖ ವಿಮರ್ಶಾಕರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಶಿವಾಜಿ ಮೇತ್ರೆ. ಇವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಂಡಗಾAವ ಗ್ರಾಮದ ತುಕಾರಾಮ ಮೇತ್ರೆ ಮತ್ತು ಸುಗಲಾಬಾಯಿ ದಂಪತಿಗಳಿಗೆ ದಿನಾಂಕ ೨೯-೭-೧೯೭೫ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಬಿ.ಇಡಿ ಪದವಿಧರರಾದ ಇವರು ೨೦೦೭ರಿಂದ ಕಲಬುರಗಿ ನೂತನ ವಿದ್ಯಾಲಯದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಮತ್ತು ವಿಮರ್ಶಾ ಬರವಣಿಗೆಯಲ್ಲಿ ತೊಡಗಿದ್ದ ಇವರು ೨೦೧೨ರಲ್ಲಿ `ಉರಿಯ ಮಂಟಪ’ ಎಂಬ ವಿಮರ್ಶಾ ಕೃತಿಯು ಪ್ರಕಟಿಸಿದ್ದು, ಇವರ ಕವನ, ಲೇಖನ,ವಿಮರ್ಶಾ ಬರಹಗಳು ವಿಜಯವಾಣಿ, ವಿಜಯ ಕರ್ನಾಟಕ, ಕವಿಮಾರ್ಗ ಮೊದಲಾದವುಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟç ಮಟ್ಟದ ವಿಚಾರ ಸಂಕಿರಣಗಳಲ್ಲಿ ಹಾಗೂ ಕೆಲ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಪ್ರಬಂಧ ಮತ್ತು ಉಪನ್ಯಾಸವನ್ನು ಮಂಡಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ವತಿಯಿಂದ ಆಯೋಜಿಸಿದ್ದ ್ಲ ಕುವೆಂಪು ಓದು ಕಮ್ಮಟದ ಸಂಚಾಲಕನಾಗಿ, ಪದವಿ ಪೂರ್ವ. ಶಿಕ್ಷಣ ಇಲಾಖೆ ಕನ್ನಡ ಉಪನ್ಯಾಸಕರ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ರುದ್ರಮಣಿ ಮಠಪತಿ
ಸಾಹಿತಿ ಹಾಗೂ ಸಂಶೋಧಕರಾಗಿ ಗುರ್ತಿಸಿಕೊಂಡು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ರುದ್ರಮಣಿ ಮಠಪತಿ ಇವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ವಿಶ್ವನಾಥಯ್ಯಾ ಮತ್ತು ವಿಮಲಾಬಾಯಿ ದಂಪತಿಗಳಿಗೆ ೫-೭-೧೯೮೧ ರಂದು ಜನಿಸಿದ್ದಾರೆ. ಇವರು ಸಾಹಿತ್ಯ , ಸಂಸ್ಕೃತಿಯ ಪರಿಸರದಲ್ಲಿಯೆ ಬೆಳೆದವರು.ಇವರ ಮುತ್ತಜ್ಜ ಶಿವಲಿಂಗಯ್ಯ ಬೀದರ ಜಿಲ್ಲೆಯ ಪ್ರಥಮ ಡೊಪ್ಪಿನಾಟ ರಚನಾಕಾರರು. ಅಜ್ಜ ವಿರೂಪಾಕ್ಷಯ್ಯಾ ಸ್ವಾಮಿ ಸಾಹಿತಿ ಹಾಗೂ ಸಂಗೀತಕಾರರು ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಇವರ ತಂದೆ ವಿಶ್ವನಾಥಯ್ಯಾ ಕೂಡ ಸಂಗಿತಕಾರರಾಗಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ತಂದೆ ವಿಶ್ವನಾಥಯ್ಯನವರ ಜೊತೆಗೂಡಿ ೨೦೦೬ರಲ್ಲಿ `ಹರಿಹರ ಮಹತ್ವ’ ಮತ್ತು ೨೦೨೦ರಲ್ಲಿ `ಭಕ್ತಿಯ ಬೀಜ’ ಎಂಬ ಆಯ್ದ ವಚನಕಾರರ ೧೦೮ ವಚನಗಳ ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೧೭ ಮಾರ್ಚ ೧೩ರಂದು ಬಸವಕಲ್ಯಾಣ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮೂರು ತಾಲೂಕಾ ಸಾಹಿತ್ಯ ಸಮ್ಮೇಳನ ಒಂದು ಯುವ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಅಷ್ಟೆಯಲ್ಲದೆ ೧೦೦ಕ್ಕಿಂತಲೂ ಹೆಚ್ಚು ಕವಿತೆಗಳನ್ನು ರಚನೆ ಮಾಡಿದ ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಇತರರು ಸಂಪಾಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ನಾಥ ಪಂಥ ಒಂದು ಸಾಂಸ್ಕೃತಿಕ ಅಧ್ಯಾಯನ’ ಇದು ಇವರ ಪಿ.ಎಚ್.ಡಿ ಮಹಾಪ್ರಬಂಧವಾಗಿದೆ. ಸದ್ಯ ಇವರು ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಮಲನಗರ ತಾಲೂಕಿನ ಲೇಖಕರು
ಜಿ.ಎನ್.ಕದಂ
ಗಡಿನಾಡಿನ ಮರಾಠಿ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಜಿ.ಎನ್.ಕದಂ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೩೩ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಜಾಲಂದರನಾಥ ನಾರಾಯಣ ಕದಮ್’ ಎಂದಾಗಿದೆ. ಬಿ.ಎ. ಬಿ.ಇಡಿ. ಪದವೀಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ, ದಿನಾಂಕ ೯-೭-೨೦೧೩ರಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರಿಂದ ಅವರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿದ್ದು ಮತ್ತು ಆ ಭಾಷೆಯಲ್ಲಿಯೆ ಸಾಹಿತ್ಯ ರಚಿಸಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಸುಗಂಧಿ ಸುಮನೆ, ಪಹಾಟ, ನಾಥ ಚಾ ಚುರಾನಿ, ಆಶೆಹಿ ಮಾನಸ ನಾಮ ವಾಜಲೇಲೆ’ ಇತ್ಯಾದಿ ಕೃತಿಗಳು ರಚಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಪುಣ್ಯ ನಗರಿ, ಎಕ್ ಜೂಟ್, ಸಕಾಳ್ ಮೊದಲಾದ ಮರಾಠಿ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಕರ್ನಾಟಕ ರಾಜ್ಯದ ಮರಾಠಿ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಧವರಾವ ನಾರಾಯಣ ಕದಮ್
ಬೀದರ ಜಿಲ್ಲೆಯ ಹಿರಿಯ ಮರಾಠಿ ಕವಿ, ಸಾಹಿತಿ, ಲೇಖಕರೆಂದರೆ ಮಾಧವರಾವ ನಾರಾಯಣ ಕದಮ್. ಇವರು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ ೧೮-೯-೧೯೩೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮರಾಠಿ ಭಾಷೆಯಲ್ಲಿ ಕತೆ, ಕವನ ,ಲೇಖನ, ಕಾದಂಬರಿಗಳನ್ನು ಬರೆದ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಕ್ಷಿತಿಜಾ ಪಿರಗರಗರಾ, ಪಾಟಾಂಚಾ ಪಾನಿ, ಮಾತಿ ಚಾ ಒಲವಾ, ಮಜ ಯಾ ಕವಿತಾ, ಪ್ರಸ್ಥಾನ ಮತ್ತು ಮನತಲ್ಯಾಗೋಷ್ಠಿ ‘ ಎಂಬ ಕವನ ಸಂಕಲನಗಳು, ಹಾಗೂ `ಖುರಾಫ್’ ಎಂಬ ಕಾದಂಬರಿ ರಚಿಸಿ ಪ್ರಕಟಿಸಿದ್ದಾರೆ. ಈ ಕಾದಂಬರಿಯು ಮಹಾರಾಷ್ಟ್ರ ನಾಂದೇಡ ಜಿಲ್ಲೆಯ ಶ್ರೀ ರಾಮಾನಂದ ತೀರ್ಥ ವಿಶ್ವವಿದ್ಯಾಲಯದ ಬಿ.ಎ.ಪ್ರಥಮ ವರ್ಷದ ಮರಾಠಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿದೆ. ಅಷ್ಟೇಯಲ್ಲದೆ ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಸಕಾಳ್, ಎಕ್ ಜೂಟ್ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಸುಮನ್ ಕದಮ್
ಬೀದರ ಜಿಲ್ಲೆಯ ಪ್ರಮುಖ ಮಹಿಳಾ ಮರಾಠಿ ಸಾಹಿತಿಯೆಂದರೆ ಸುಮನ್ ಕದಮ್. ಇವರು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಮರಾಠಿ ಸಾಹಿತಿ ಜಿ.ಎನ್.ಕದಮ್ ಅವರ ಧರ್ಮ ಪತ್ನಿಯಾಗಿದ್ದು, ೧೯೫೦ರಲ್ಲಿ ಜನಿಸಿದ್ದಾರೆ. ಗೃಹಿಣಿಯಾಗಿದ್ದುಕೊಂಡೆ ಮರಾಠಿಯಲ್ಲಿ ಕವನ ಲೇಖನಗಳು ಬರೆದು ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ `ಮಹಿಲಾನೋ ಜಾಗೆವ್ಹಾ ?’ ಮತ್ತು `ಶಿಕ್ ಪಾರೂ ಶಿಕ್’ ಎಂಬ ಮಹಿಳಾ ಪರ ಸಾಮಾಜಿಕ ಕಳಕಳಿಯುಳ್ಳ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಸಕಾಳ್, ಏಕ್ ಜೂಟ್ ಮೊದಲಾದ ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬಾ.ನಾ.ಸೊಲ್ಲಾಪೂರೆ
`ಬಾಲಕ’ ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರ ನಿಜನಾಮ ಬಾಬು ತಂದೆ ನಿಂಗಪ್ಪಾ ಸೊಲ್ಲಾಪೂರೆ. ಎಂದಾಗಿದೆ. ಇವರು ಬೀದರ ಜಿಲ್ಲೆಯ ಕಮಲನಗರ ತಾಲೂಕಿನÀ ನಾಗಪ್ಪ ಹಾಗೂ ಲಕ್ಷಿö್ಮÃಬಾಯಿ ದಂಪತಿಗಳಿಗೆ ದಿನಾಂಕ ೨-೪-೧೯೫೨ ರಲ್ಲಿ ಜನಿಸಿದ್ದಾರೆ. ಎಂ.ಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ಕವಿ, ಸಾಹಿತಿ, ಚಿಂತನಕಾರರಾಗಿ ಗುರುತ್ತಿಸಿಕೊಂಡಿರುವ ಇವರು ಕೆಲ ಕೃತಿಗಳು ರಚಿಸಿದ್ದಾರೆ, ಅವುಗಳೆಂದರೆ, `ಶಿವಾನುಭವ ಗೋಷ್ಠಿಯಲ್ಲಿ ಬಸವಧರ್ಮ’ ಮತ್ತು `ಮನದಳಲು’ `ಪವಿತ್ರ ಶರಣ ಜೀವಿಗಳು’ ಎಂಬ ಲೇಖನ ಕೃತಿಗಳು, `ಗಾದೆ ಮೇಲೆ ಕುಳಿತು ಕೊಂಡು’ ಎಂಬ ಮಕ್ಕಳ ಕೃತಿ. `ಗುರು-ಮೈತ್ರಿ `ಚುಳುಕಿ’ ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ.
ಇವರು ಬರೆದ ಕವನ,ಲೇಖನ, ಚಿಂತನ ಬರಹಗಳು ನಾಡಿನ ಕೆಲ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ಮತ್ತು ದೂರದರ್ಶದಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕಮಲನಗರದಲ್ಲಿ ೧೦೮ ಶಿವಾನುಭವಗೊಷ್ಠಿ ನಡೆಸಿದ್ದಾರೆಂದು ತಿಳಿದು ಬರುತ್ತದೆ. ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಇದ್ದುಕೊಂಡು ಉತ್ತಮ ವಾಗ್ಮಿಯಾಗಿ ಕನ್ನಡ ಸಾಹಿತ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ೨೦೧೨ ರಲ್ಲಿ ನಿವೃತ್ತಿ ಹೊಂದಿ ಸದ್ಯ ಕಮಲನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಸೂರ್ಯಕಾಂತ ದ್ವಾಸೆ
ಗಡಿನಾಡಿನ ಸಾಹಿತ್ಯ ವಲಯದಲ್ಲಿ ಮರಾಠಿ,ಮತ್ತು ಹಿಂದಿಯಲ್ಲಿ ಕವನ, ಲೇಖನ ಬರಹಗಳು ಬರೆದು ಪುಸ್ತಕ ಪ್ರಕಟಿಸಿ ಎಲೆ ಮರೆಯ ಕಾಯಿಯಂತೆ ಉಳಿದ ಸಾಹಿತಿಯೆಂದರೆ ಸೂರ್ಯಕಾಂತ ದ್ವಾಸೆ. ಇವರು ಬೀದರ ಜಿಲ್ಲೆಯ ಕಮಲನಗರದ ಸಿದ್ರಾಮಪ್ಪಾ ಮತ್ತು ಗಂಗಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿ ಬಿ,ಎಸ್ಸಿ.ಎಂ.ಎ.ಹಿAದಿ.ಬಿ,ಇಡಿ ಪದವಿಧರರಾದ ಇವರು ೧೯೭೬ರಲ್ಲಿ ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಮಲನಗರ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೩ ರಲ್ಲಿ ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿಯಾಗಿದಾಗಲೆ ಮರಾಠಿ, ಹಿಂದಿ ಭಾಷೆಯಲ್ಲಿ ಕವನ, ಲೇಖನಗಳು ಬರೆದು ಲಾತೂರಿನ `ಲೋಕಮತ’ ಮರಾಠಿ ಪತ್ರಿಕೆಯಲ್ಲಿ ಹಾಗೂ ಬೀದರದ `ಬೀದರ ಕಿ.ಅವಾಜ’ ಎಂಬ ಹಿಂದಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಆ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದು, ೨೦೧೦ರಲ್ಲಿ ಭಾಲ್ಕಿ ತಾಲೂಕಿನ ನಾವದಗಿಯ ರೇವಪ್ಪಯ್ಯ ಅಜ್ಜನವರ ಕುರಿತು ‘ವಿಶ್ವಗುರು ರೇವಪಯ್ಯಾ’ ಎಂಬ ಜೀವನ ಚರಿತ್ರೆಯು ಹಿಂದಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಮತ್ತು ಕೆಲ ಕವನ ಲೇಖನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ೨೦೧೧ರಲ್ಲಿ ಇವರಿಗೆ ಬೀದರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿದೆ.
ದಿ. ಲೀಲಾ ಮಠಪತಿ
ಕರ್ನಾಟಕ-ಮಹಾರಾಷ್ಟç ಗಡಿನಾಡಿನ ಮರಾಠಿ ಭಾಷಿಕರ ಮಧ್ಯದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳಾ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ ಇವರು ಕಮಲನಗರದಲ್ಲಿ ಶಿಕ್ಷಣ ಸಂಸ್ಥೆಯೊAದನ್ನು ಸ್ಥಾಪಿಸಲು ಕಾರಣಿಭೂತರಾಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾಗಿ ನೂರಾರು ಕಾವ್ಯ ರಚನೆ ಮಾಡಿದ ಕವಯತ್ರಿಯೆಂದರೆ ದಿ.ಲೀಲಾ ಮಠಪತಿ. ಇವರು ಹಾವೇರಿ ಜಿಲ್ಲೆಯ ಡೊಂಬರ ಮತ್ತೂರು ಗ್ರಾಮದ ಬಸವರಾಜ ಪಾಟೀಲ್ ಮತ್ತು ಮುರಿಗೆಮ್ಮ ದಂಪತಿಗಳಿಗೆ ದಿನಾಂಕ ೧೧-೫-೧೯೬೦ ರಲ್ಲಿ ಜನಿಸಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ.ಬಿ.ಇಡಿ.ಪದವೀಧರರಾದ ಇವರು ಕನ್ನಡದ ಖ್ಯಾತ ಬಂಡಾಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ರವರ ಖಾಸ್ ಸಹೋದರಿಯಾಗಿದ್ದು, ಮತ್ತು ಕಮಲನಗರದ ಜಿ.ಜಿ.ಮಠಪತಿಯವರ ಧರ್ಮಪತ್ನಿ ಹಾಗೂ ಕಮಲನಗರ ಕಸಾಪ ಅಧ್ಯಕ್ಷರಾದ ಪ್ರಶಾಂತ ಮಠಪತಿಯವರ ತಾಯಿಯಾಗಿದ್ದಾರೆ.
ಇವರು ಕಮಲನಗರದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಮಹಿಳಾ ಪ್ರೌಢ ಶಾಲಾ ಸ್ಥಾಪನೆಗೆ ಪರಿಕಲ್ಪನೆ ನೀಡಿ ಆ ಶಿಕ್ಷಣ ಸಂಸ್ಥೆಯಲ್ಲಿ ಕೆಲವರ್ಷ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಅಣ್ಣಾ ಡಾ. ಚಂದ್ರಶೇಖರ ಪಾಟೀಲ್ ರವರ ಬಂಡಾಯ ಸಾಹಿತ್ಯಕ್ಕೆ ಮಾರುಹೋಗಿ ನೂರಾರು ಕವಿತೆಗಳು ಬರೆದಿದ್ದು, ಅವು ಓದುಗರ ಮನ ಸೆಳೆಯುವಂತ್ತಿವೆ. ಆದರೆ ದುರಾದೃಷ್ಟ ಇವರು ಆಕಸ್ಮಿಕವಾಗಿ ೧೩-೧೧-೨೦೦೯ ರಲ್ಲಿ ನಿಧನ ಹೊಂದಿದ್ದರಿAದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಂತರ ೨೦೧೦ ರಲ್ಲಿ ಇವರ ಮಕ್ಕಳು ಅಮ್ಮಳ ಪ್ರೀತಿಯ ನೆನಪಿಗಾಗಿ ಅವರ ಸಮಗ್ರ ಕವಿತೆಗಳು ಒಟ್ಟು ಸೇರಿಸಿ ೨೦೧೦ ರಲ್ಲಿ `ಮಿಡಿತ-ತುಡಿತ’ ಎಂಬ ಕವನ ಸಂಕಲನವು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
೨೦೦೬ ರಲ್ಲಿ ಚಂಪಾ ರವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಸಂಧರ್ಭದಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನವು ಮಾಡಿ ಸೈ ಎನಿಸಿಕೊಂಡಿದ್ದಾರೆ. ಮತ್ತು ದೂರದರ್ಶನ ಚಂದನ ವಾಹಿನಿಯವರು ಏರ್ಪಡಿಸಿದ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡಿದ್ದಾರೆ. ಅಷ್ಟೇಯಲ್ಲದೆ ಬೀದರ ಜಿಲ್ಲಾ ಧರಿನಾಡು ಕನ್ನಡ ಸಂಘ ಮತ್ತು ಕಸಾಪದ ಮಹಿಳಾ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಶಿವಕುಮಾರ ಶಿವಣಕರ
ಗಡಿನಾಡಿನ ಸಾಹಿತಿಗಳಲ್ಲಿ ಒಬ್ಬರಾಗಿ ಸಾಮಾಜಿಕ ವೈಚಾರಿಕ ಲೇಖನಗಳು ಬರೆದು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಶಿವಕುಮಾರ ಶಿವಣಕರ. ಇವರು ಬೀದರ ಜಿಲ್ಲೆಯ ನೂತನ ಕಮಲನಗರ ತಾಲೂಕಿನ ಶ್ರೀ ನಾಗಶೆಟ್ಟಿ ಶ್ರೀಮತಿ ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೨೦-೪-೧೯೬೧ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್ ಸ್ನಾತಕೋತ್ತರ ಪದವಿಧರರಾದ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಹುಟ್ಟೂರಿನಲ್ಲಿ, ಪಿ.ಯು ಮತ್ತು ಪದವಿಯನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪೂರೈಸಿ, ಎಂ.ಎ. ಎಂ.ಫೀಲ್ ಪದವಿಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ೧೯೮೫ರಿಂದ ಕಮಲನಗರದ ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ಆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.
ವಿದ್ಯಾರ್ಥಿಯಾಗಿದಾಗಿನಿಂದಲೂ ನಾಯಕತ್ವ ಗುಣಗಳನ್ನು ಹೊಂದಿರುವ ಇವರು ಸಮಾಜಶಾಸ್ತçದಲ್ಲಿ ಅಧ್ಯಯನ ಮಾಡಿ ಸಾಹಿತ್ಯ ಆಸಕ್ತರಾಗಿ ೧೯೯೬ ರಲ್ಲಿ `ಜನಸಂಖ್ಯೆ ಸ್ಪೋಟ’ ಮತ್ತು ೨೦೦೧ ರಲ್ಲಿ `ಭಾರತದಲ್ಲಿ ಮಹಿಳೆಯರ ಸ್ಥಾನಮಾನ.’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ ಲೇಖನ ವೈಚಾರಿಕ ಬರಹಗಳು ಕನ್ನಡದ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ೧೯೮೪ರಲ್ಲಿ ಬೀದರದ ಉತ್ತರ ಕರ್ನಾಟಕ, ಕಲಬುರಗಿಯ ಶಾಸನ ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ, ಬಸವಕಲ್ಯಾಣದ ಬಹಿರಂಗ ಸುದ್ಧಿ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
೨೦೧೦ರಿಂದ ಇಲ್ಲಿಯವರೆಗೆ ಎರಡು ಅವಧಿಗೆ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ೨೦ ವರ್ಷಗಳಿಂದ ಬೀದರ ಜಿಲ್ಲಾ ಚುನಾವಣೆಯ ಮಾಸ್ಟರ್ ಟ್ರೇನರ್ ಆಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ೨೦೦೩ ರಲ್ಲಿ ಬೀದರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಂಡಾಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರು ಉತ್ತಮ ಲೇಖಕರೆಂದು `ಜಿಲ್ಲಾ ಕಸಾಪ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಕಮಲನಗರದ ನಿವಾಸಿಯಾಗಿದ್ದಾರೆ.
ಪೂಜ್ಯ ಮಹಾದೇವಮ್ಮಾ ತಾಯಿ
ವಚನ ಮತ್ತು ಶರಣ ಸಾಹಿತ್ಯದಲ್ಲಿ ಕೆಲ ಕೃತಿಗಳು ರಚಿಸಿ ಪುಸ್ತಕ ಪ್ರಕಟಿಸಿದ ಸಾಹಿತಿಯೆಂದರೆ ಪೂಜ್ಯ ಮಹಾದೇವಮ್ಮಾ ತಾಯಿಯವರು. ಇವರು ಹುಮನಾಬಾದ ತಾಲ್ಲೂಕಿನ ಕಂದಗೂಳ ಗ್ರಾಮದ ಶಾಮರಾವ ಪೋಲಿಸ್ ಪಾಟೀಲ್ ಮತ್ತು ಭಾಗೀರಥಿ ದಂಪತಿಗಳಿಗೆ ೧-೬- ೧೯೬೨ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಟ್ಟಿದ ಒಂದು ವರ್ಷದೊಳಗೆ ಪೋಲಿಯೊ ರೋಗದಿಂದ ಅಂಗವಿಕಲರಾಗಿ ಕಷ್ಟದ ಜೀವನದೊಂದಿಗೆ ಶಿಕ್ಷಣ ಪಡೆದು ೧೯೯೦ ರಲ್ಲಿ ಡಾ.ಚನ್ನಬಸವ ಪಟ್ಟದೇವರಿಂದ ಜಂಗಮ ದಿಕ್ಷೇ ಪಡೆದುಕೊಂಡು ೧೯೯೨ ರಲ್ಲಿ ಬಸವಕಲ್ಯಾಣದ ಶೇಷಪ್ಪ ಗಬ್ಬೂರವರಿಂದ ಸಂಗೀತ ಕಲಿತು `ವಿದ್ವತ್’ ಪಾಸಾಗಿ ೧೯೯೬ರಲ್ಲಿ ಕಮಲನಗರ ತಾಲ್ಲೂಕಿನ ಖೇಡ-ಸಂಗಮದ ನೀಲಾಂಬಿಕಾ ಆಶ್ರಮದಲ್ಲಿ ಅಂಧ ಮಕ್ಕಳ ಸಂಗೀತ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶರಣ ತತ್ವ ಮತ್ತು ಬಸವಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಧ್ಯಾತ್ಮಿಕತೆಯಿಂದ ಅಕ್ಕ ಮಹಾದೇವಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಜನಕಲ್ಯಾಣ ಟ್ರಸ್ಟ್ (ರಿ) ಅನ್ನು ಸ್ಥಾಪಿಸಿ ಅದರ ಮೂಲಕ ಹೆಣ್ಣು ಮಕ್ಕಳಿಗೆ ಭಜನೆ,ಕೋಲಾಟ, ನಾಟಕ, ರೂಪಕಗಳನ್ನು ಕಲಿಸಿ ಪ್ರೋತ್ಸಾಹಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. `ನಾ ಕಂಡ ಶರಣೆಯರು’ `ಅನುಭಾವ ಬುತ್ತಿ’ `ಅಕ್ಕ ಒಲಿದ ಗೀತೆಗಳು’ `ಹೃದಯ ಗೀತೆಗಳು’ `ಮಮತೆಯ ಮಡಿಲು’ `ತಾಯಿ ನೆನಪು’ `ಶರಣರ ಪರಿಮಳ’ `ಬಸವ ಸಂದೇಶ’ ಇವು ಇವರು ಕೃತಿಗಳಾಗಿವೆ.
೨೦೧೮ರಲ್ಲಿ ಬಾಗಲಕೋಟೆಯಿಂದ `ಕರ್ನಾಟಕ ಅಕಾಡೆಮಿ ಗೌರವ ಪ್ರಶಸ್ತಿ’ ಮತ್ತು ಅಕ್ಕಮಹಾದೇವಿ, ಚನ್ನಬಸವ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಔರಾದ ತಾಲೂಕಿನ ಜನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮತ್ತು ಭಾಲ್ಕಿ ತಾಲೂಕಿನ ಜೋಳದಾಬಕಾ ಗ್ರಾಮದಲ್ಲಿ ನಡೆದ ಮಹಿಳಾ ಕದಳಿ ವೇದಿಕೆಯ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ಇವರು ಬರೆದ ಕೆಲ ಹಾಡುಗಳು `ಓ ಚನ್ನಬಸವ’ `ಬೆಳ್ಳಿಯ ಬೆಳಗು’ ಎಂಬ ಧ್ವನಿ ಸುರುಳಿಯಾಗಿ ಮುದ್ರಿತಗೊಂಡಿವೆ.
ಡಾ.ರಾಜೇAದ್ರ ಯರನಾಳೆ
ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿ ಕತೆ,ಕವನ,ಕಾದಂಬರಿ, ಲೇಖನ, ನಾಟಕ, ಪ್ರಬಂಧ, ಆಧುನಿಕ ವಚನ, ಜನಪದ ಮತ್ತು ಸಂಶೋಧನಾ ಕೃತಿಗಳನ್ನು ಬರೆದು ಪ್ರಕಟಿಸಿದ ಲೇಖಕರೆಂದರೆ ಡಾ.ರಾಜೇಂದ್ರ ಯರನಾಳೆಯವರು. ಇವರು ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಠಾಣಾ ಕುಸನೂರ ಗ್ರಾಮದ ೧೫-೧೦-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಡಿ.ಫಾರ್ಮಸಿ, ಡಿ.ಓ.ಎಂ. ಎಚ್. ಡಿ.ಎಂ.ಎA.ಎಚ್. ಪದವಿ ಪಡೆದ ಇವರು ೧೯೯೩ರಲ್ಲಿ ಹುಮನಾಬಾದಿನ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ ಇವರು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಗುರುಮಿಠಕಲ್ ಸ.ಪ.ಪೂ.ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾಗಿ, ೨೦೧೭ರಿಂದ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಸ.ಪ.ಪೂ.ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ೧೧ವರ್ಷ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯದಲ್ಲಿ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೧೯೮೭ರಲ್ಲಿ `ಬಯಕೆ ಒಲವು ನೆನೆಯಿತು.’ ಎಂಬ ಕವನ ಸಂಕಲನ, ೧೯೮೭ರಲ್ಲಿ `ಗೌಡನ ತಂತ್ರ ರಾಣಿಗೆ ಮಂತ್ರ’ ಮತ್ತು ೨೦೦೦ರಲ್ಲಿ `ಹುಗ್ಗಿ ತುಪ್ಪ ಮಜಾ ಮಜಾ ನೋಡಪ್ಪ’ ಎಂಬ ಏಕಾಂಕ ನಾಟಕಗಳು, ೧೯೮೮ರಲ್ಲಿ `ಮೊಮ್ಮಕ್ಕಳ ಭಾಗ್ಯ ಸಂಗ್ಗವ್ವಜ್ಜಿಗ್ಯಾಕ್ಕಿಲ್ಲ’ ಎಂಬ ಮಿನಿ ಕಾದಂಬರಿ, ೨೦೦೪ರಲ್ಲಿ `ಹೆಸರಿಲ್ಲದವನು’ ಎಂಬ ಕಥಾ ಸಂಕಲನ, `ಹುಚ್ಚನ ಗೀಚು’ ಆಧುನಿಕ ವಚನಗಳು, ೧೯೯೦ರಲ್ಲಿ `ಮರೆಯದ ಚಿತ್ರಗಳು’ ಎಂಬ ವ್ಯಕ್ತಿ ಚಿತ್ರ, ೧೯೯೬ರಲ್ಲಿ `ವಿಶ್ವ ವಿಖ್ಯಾತ ಬಿದ್ರಿಕಲೆ’ ಎಂಬ ಸಂಶೋಧನಾ ಕೃತಿಯು ರಚಿಸಿದ್ದು ಈ ಕೃತಿ ಹಿಂದಿ ಭಾಷೆಗೆ ಅನುವಾದಗೊಂಡಿದೆ. ೨೦೦೦ರಲ್ಲಿ `ಬೀದರ ಜಿಲ್ಲೆಯ ಪ್ರಾದೇಶಿಕ ಭಾಷಾ ವೈಶಿಷ್ಟ್ಯ’ ೨೦೦೧ರಲ್ಲಿ `ಪೂರ್ವಜ್ಞ ವಚನಗಳು ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧ, ಮತ್ತು `ರಾಮಪುರದ ಬಕ್ಕಪ್ಪನವರ ತತ್ವ ಪದಗಳು ಹಾಗೂ ನಿಜ ಶರಣನ ತ್ರಿವಿಧಿಯ ವಚನಗಳು, ೨೦೦೪ರಲ್ಲಿ `ಜನಪದ ಹೊಲಿಗೆ ಮತ್ತು ಚಿತ್ರಕಲೆ’ ಎಂಬ ಸಂಶೋಧನೆ, ೧೯೯೪ರಲ್ಲಿ `ಶೀಗಿ ಹಾಡುಗಳು’ ೨೦೦೦ರಲ್ಲಿ `ಜನಪದ ಬಯ್ಗಳ ಪದಗಳು’ ಮತ್ತು `ಐವರ ಐವತ್ತು ಕವನಗಳು,’ ೨೦೦೧ರಲ್ಲಿ `ಬಿಸಿಲು ನಾಡಿನ ಹಸಿರು ಬನದಾಗ’ ೨೦೦೨ರಲ್ಲಿ `ನವಚೇತನ’ ೨೦೦೪ರಲ್ಲಿ `ಬೊಬ್ಬಿ ಹಾಡುಗಳು’ ೨೦೦೬ರಲ್ಲಿ `ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣ’ ೨೦೦೭ರಲ್ಲಿ `ಹಂತಿ ಹಾಡುಗಳು’ ಎಂಬ ಕೃತಿಗಳು ಸಂಪಾಸಿದ್ದಾರೆ. ಇವರ `ಶೀಗಿಯ ಹಾಡುಗಳು’ ಎಂಬ ಕೃತಿಯು ೨೦೧೨ರಿಂದ ೨೦೧೫ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿತ್ತು.. ಅಷ್ಟೇಯಲ್ಲದೆ `ಮುಚ್ಚು ಮರೆ ಇಲ್ಲದ ಬಿಚ್ಚು ಗಾದೆಗಳು, ಕೆಂಪು ಮಣ್ಣಿನ ಕಂಪುಳ್ಳ ಗಾದೆಗಳು, ರಂಗೋಲಿ ಕಲೆ,ಕಲ್ಯಾಣದ ಕಲೆಗಳು ಕಲ ಕಲ ನಗತಾವ, ಹಚ್ಚೆ ಕಲೆ’ ಎಂಬ ಕೃತಿಗಳು ಅಪ್ರಕಟಿತವಾಗಿವೆ. ಜನಪದ ಸಾಹಿತ್ಯದಲ್ಲಿ ಅಗಾಧ ಸಾಧನೆ ಮಾಡಿದ ಇವರು ಕಮಲಾಪೂರ ತಾಲೂಕಿನ ನಾವದಗಿ ಗ್ರಾಮದಲ್ಲಿ ೧೫ ಎಕರೆ ಪ್ರದೇಶದಲ್ಲಿ `ಸಾಂಸ್ಕೃತಿಕ ಲೋಕ’ ಎಂಬ ಜನಪದ ಕಲೆ ಸಾಹಿತ್ಯವನ್ನು ಬಿಂಬಿಸುವ ಸಂಸ್ಥೆಯೊAದು ಸ್ಥಾಪಿಸಿ ಕಲ್ಯಾಣ ಕರ್ನಾಟಕದಲ್ಲಿ ಜನಪದ ಲೋಕಕ್ಕೆ ಮಾದರಿಯಾಗಿದ್ದಾರೆ. ಇವರ ಕುರಿತು ಪ್ರೊ.ಜಗನ್ನಾಥ ಕಮಲಾಪೂರೆಯವರು `ಜಾನಪದ ವಿದ್ವಾಂಸ ಡಾ.ರಾಜೇಂದ್ರ ಯರನಾಳೆ’ ಎಂಬ ಅಭಿನಂದನಾ ಗ್ರಂಥವು ಹೊರ ತಂದಿದ್ದಾರೆ.
ಅನAತ ಕದಮ್
ಹವ್ಯಾಸಿ ಮರಾಠಿ ಉದಯೋನ್ಮುಖ ಬರಹಗಾರರೆಂದರೆ ಅನಂತ ಕದಮ್. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸಾಹಿತಿ ಮಾಧವರಾವ ಮತ್ತು ಚಂಪಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಉದಗಿರ ತಾಲೂಕಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಮರಾಠಿಯಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮತ್ತು `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ’ ಎಂಬ ಕೃತಿಯು ಗ್ರಾಮದ ಸಾಹಿತಿ ಸಂಗಮೇಶ್ವರ ಎಸ್.ಮುರ್ಕೆಯ sವರೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಏಕ್ ಜೂಟ್, ಸಕಾಳ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಉದಗಿರನಗರದಲ್ಲಿ `ಚಲಾ ಕವಿತಾಚ ಬನಾತ’ ಎಂಬ ವೇದಿಕೆಯು ರೂಪಿಸಿಕೊಂಡು ಅದರ ಮೂಲಕ ಸುಮಾರು ೩೦೦ಕ್ಕೂ ಅಧಿಕ ಮರಾಠಿ ಸಾಹಿತ್ಯದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ಇವರಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಡಾ. ಶಿವಲೀಲಾ ಮಠಪತಿ
ಮಹಿಳಾ ಸಾಹಿತಿಗಳಲ್ಲಿ ಸೃಜನಶೀಲ ಬರಹಗಳನ್ನು ಬರೆಯುತ್ತಿರುವ ಲೇಖಕಿಯೆಂದರೆ ಡಾ. ಶಿವಲೀಲಾ ಮಠಪತಿ. ಇವರು ಕಲಬುರಗಿ ಜಿಲ್ಲೆಯ ಚಿತ್ತಾಪೂರದ ವೀರಯ್ಯಾ ಸ್ಥಾವರಮಠ ಮತ್ತು ಸೌಭಾಗ್ಯಮ್ಮ ದಂಪತಿಗಳಿಗೆ ದಿನಾಂಕ ೧೬-೯-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಎಂ.ಫೀಲ್.ಪಿ.ಎಚ್.ಡಿ.ಪದವಿಧರರಾದ ಇವರು ಕಮಲನಗರ ತಾಲೂಕಿನ ಖೇಡ (ಸಂಗಮ) ಶಾಂತಲಿAಗ ಮಠಪತಿಯವರೊಂದಿಗೆ ವಿವಾಹವಾಗಿ ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕವನ, ಲೇಖನ, ಚಿಂತನೆಗಳನ್ನು ಬರೆದು ೨೦೧೮ರಲ್ಲಿ `ಶರಣ ಸಂಸ್ಕೃತಿ ಮತ್ತು ಐತಿಹಾಸಿಕ ಚಿಂತನೆ’ ಎಂಬ ಚಿಂತನ ಕೃತಿಯು ಪ್ರಕಟಿಸಿದ್ದಾರೆ. `ಶ್ರೀರಾಮಚಂದ್ರ ಮಿಷನ್ನಿನ ಚಾರಿತ್ರಿಕ ಅಧ್ಯಯನ’ ಇದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಇವರು ಬರೆದ ಕವನ ಲೇಖನ ಚಿಂತನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ವಿಜಯವಾಣಿ, ಸಂಯುಕ್ತ ಕರ್ನಾಟಕ, ಶಾಂತಿ ಕೀರಣ ಜಂಗಮ ದಾಸೋಹಿ, ಸಹಜ ದೀಪ, ದೃಷ್ಟಿ ಮೊದಲಾದವುಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಇವರು ಸದಾ ಸಂಘಟನಾ ಚಾತುರ್ಯರಾಗಿರುವುದರಿಂದ ಮಹಿಳಾ ಕದಳಿ ವೇದಿಕೆಯ ಉಪಾಧ್ಯಕ್ಷರಾಗಿ, ಬಸವಕಲ್ಯಾಣ ತಾಲೂಕಿನ ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಹುಲಸೂರು ತಾಲೂಕಿನ ಕಸಾಪ ಅಧ್ಯಕ್ಷರಾಗಿ ಸೇವ ಸಲ್ಲಿಸುತ್ತಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಜಿಲ್ಲೆಯ ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ, ಕವಿಗೋಷ್ಠಿಗಳಲ್ಲಿಯೂ ಭಾಗವಹಿಸಿದ್ದಾರೆ. ಸದ್ಯ ಇವರು ಬಸವಕಲ್ಯಾಣದ ನಿವಾಸಿಯಾಗಿದ್ದು ಸಾಹಿತ್ಯ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ.
ಸAಗಮೇಶ್ವರ ಮುರ್ಕೆ
ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಅಚ್ಚಕನ್ನಡಿಗರಾಗಿ ಕವನ, ಹನಿಗವನ, ಲೇಖನ ಮೊದಲಾದವು ರಚಿಸಿ ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸಂಗಮೇಶ್ವರ ಮುರ್ಕೆ. ಇವರು ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸೂರ್ಯಕಾಂತ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ ರಲ್ಲಿ ಜನಿಸಿದ್ದಾರೆ. ಕನ್ನಡ, ಮರಾಠಿ, ಹಿಂದಿ ಭಾಷ್ಯಾ ಪ್ರಾವೀಣ್ಯತೆ ಹೊಂದಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಡೊಣಗಾಂವ (ಎಂ) ದಲ್ಲಿ, ಪಿ.ಯು.ಮತ್ತು ಪದವಿಯು ಕಮಲನಗರದಲ್ಲಿ ಪೂರೈಸಿ, ಡಿ.ಇಡಿ.ಯನ್ನು ಬೀದರನಲ್ಲಿ ಅಧ್ಯಯನ ಮಾಡಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೨ ರಲ್ಲಿ `ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ’ ೨೦೧೧ರಲ್ಲಿ `ಸಂತ ಶ್ರೀ ಹರಿನಾಥ ಚರಿತ್ರೆ’ ಎಂಬ ಕೃತಿಗಳು ಪ್ರಕಟಿಸಿದರೆ, ೨೦೧೧ರಲ್ಲಿ `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ’ ಎಂಬ ಮರಾಠಿ ಕೃತಿಯು ಅನಂತ ಚಂಪಾಯಿ ಮಾಧವ ಕದಂ ಅವರೊಂದಿಗೆ ಸಂಪಾದಿಸಿದ್ದಾರೆ. ೨೦೧೨ರಲ್ಲಿ `ಹನಿ ಹನಿ ಜೇನ ಹನಿ’ ಎಂಬ ಹನಿಗವನ ಸಂಕಲನ, ೨೦೧೭ರಲ್ಲಿ `ಸಾಧಕರು’ ಎಂಬ ವ್ಯಕ್ತಿ ಚಿತ್ರಗಳ ಕೃತಿಯೊಂದು ಪ್ರಕಟಿಸಿದ್ದಾರೆ.
ಇವರ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಉಪನ್ಯಾಸಗಳು ನೀಡಿ ಹಲವಾರು ಕವಿಗೊಷ್ಠಿಯಲ್ಲಿ ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಹೊಳಸಮುದ್ರದಲ್ಲಿ ಕಿರಾಣಿ ಅಂಗಡಿ ಮತ್ತು ಬೇಸಾಯದೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಅರುಣ ವಿ.ಸಿಂಧೆ
ಉದಯೋನ್ಮುಖ ಬರಹಗಾರರÀಲ್ಲಿ ಎಲೆ ಮರೆಯ ಕಾಯಿಯಂತೆ ಉಳಿದ ಯುವ ಸಾಹಿತಿಯೆಂದರೆ ಅರುಣ ವಿ.ಸಿಂಧೆ. ಇವರು ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಹಿಪ್ಪಳಗಾಂವ ಗ್ರಾಮದ ವಿಠಲ ಮತ್ತು ಇಟಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೯೩ ರಲ್ಲಿ ಜನಿಸಿದ್ದಾರೆ. ಎಂ.ಎ. ಹಿಂದಿ, ಬಿ.ಎಡ್. ಪದವಿಧರರಾದ ಇವರು ಔರಾದ ತಾಲೂಕಿನ ಅಮರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ,ಇಂಗ್ಲಿಷ್ ಭಾಷೆಯ ಪ್ರಾವೀಣ್ಯತೆ ಹೊಂದಿದ್ದ ಇವರು ಸಾಹಿತಿ `ಬಾಲಚಂದ್ರ ಜಯಶೆಟ್ಟಿಯವರ ಜೀವನ ಚರಿತ್ರೆ ’ ಎಂಬ ಕೃತಿ ಹಿಂದಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ.
ಇವರ ಕವನ ಲೇಖನ, ಹನಿಗವನUಳು `ಭೀಮವಾದ’ ಎಂಬ ಮಾಸ ಪತ್ರಿಕೆಯಲ್ಲಿ ಮತ್ತು ಕೆಲ ಪ್ರಾತಿನಿಧಿಕ ಸಂಕಲನ ಹಾಗೂ ಕೆಲವರ ಅಭಿನಂದನಾ ಗ್ರಂಥಗಳಲ್ಲಿಯೂ ಇವರ ಬರಹಗಳು ಪ್ರಕಟವಾಗಿದ್ದರಿಂದ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ಕುಸುಮ’ ‘ಜ್ಣಾನ ರತ್ನ’ ಪ್ರಶಸ್ತಿಗಳು ಲಭಿಸಿದ್ದು, ಬಸವಕಲ್ಯಾಣ ಬೇಲೂರಿನ ಉರಿಲಿಂಗ ಪೆದ್ದಿ ಮಠದಿಂದ ಗೌರವ ಪ್ರಶಸ್ತಿ ಪತ್ರವು ಪಡೆದಿದ್ದಾರೆ. ಅಷ್ಟೇಯಲ್ಲದೆ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಚಿಟಗುಪ್ಪ ತಾಲೂಕಿನ ಲೇಖಕರು
ತಿಪರಂತಿ ಮಾಸ್ತರ ಚಿಡಗುಪ್ಪಿ
೧೯ನೇ ಶತಮಾನದ ದಲಿತ ಕವಿ, ನಾಟಕಕಾರ, ತತ್ವ ಪದಕಾರರೆಂದರೆ ತಿಪರಂತಿ ಮಾಸ್ತರ ಚಿಡಗುಪ್ಪಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯವರು .ಇವರ ತಂದೆ ತಾಯಿ ಹೆಸರು ಮತ್ತು ಜನ್ಮ ದಿನಾಂಕ ಲಭ್ಯವಾಗಿಲ್ಲ. ಉಮರಾಯ ಎಂಬುವರು ಇವರ ಗುರುವಾಗಿದ್ದರು. ಇವರು ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೆಂದು ಮತ್ತು ಸಾಹಿತ್ಯದಲ್ಲಿ ಹಲವಾರು ಪ್ರಕಾರದ ಬರಹಗಳು ಬರೆದು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳಲ್ಲಿ ಧನಪಾಲರಾಜ,ನೀಲಕಂಠ ರಾಜ, ಫಕೀರ ಬಾಣಾಸೂರ, ಚಂದ್ರುಣಿ ‘ ಎಂಬ ನಾಟಕಗಳು ಮತ್ತು ತತ್ವ ಪದ, ಜಾನಪದ, ಕಲಗಿ ಪದ, ಎಂಬ ಗೀತೆಗಳು ರಚಿಸಿ. ಸ್ವತಃ ಕವಿಕಟ್ಟಿ ಹಾಡುವ ಇವರಿಗೆ `ಕವಿಶೂರ’ ಎಂಬ ಬಿರುದು ಇತ್ತೆಂದು ಸಾಹಿತಿ. ಚಂದ್ರಪ್ಪ ಹೆಬ್ಬಾಳಕರ್. ಅವರ ಕೃತಿಯಿಂದ ತಿಳಿದು ಬರುತ್ತದೆ. ಇವರು ೧೯೬೮ರಲ್ಲಿ ನಿಧನರಾಗಿದ್ದಾರೆ.
ಅಣ್ಣೆಪ್ಪ ರೊಡ್ಡಾ
ಹಿರಿಯ ಸಾಹಿತಿಗಳಾದ ಇವರು ಮೂಲತಃ ಚಿಟಗುಪ್ಪಾ ತಾಲೂಕಿನ ಮೀನಕೇರಾ ಗ್ರಾಮದ ವೀರಸಂಗಪ್ಪನವರ ಪುತ್ರನಾಗಿ ದಿನಾಂಕ ೮-೧೧-೧೯೪೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮತ್ತು ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ ಕತೆ ಕವನ,ಲೇಖನ ನಾಟಕ ಮೊದಲದವು ಬರೆದು ೧೯೭೧ರಲ್ಲಿ `ಮತಿಗೆಟ್ಟ ಮಡದಿ’ ಎಂಬ ಸಾಮಾಜಿಕ ನಾಟಕ ರಚಿಸಿದ್ದು ಅದು ಅಪ್ರಕಟಿತವಾಗಿದೆ. ಮತ್ತು ೨೦೧೪ರಲ್ಲಿ `ಕಾಗದ ಕುದುರೆ’ ಎಂಬ ಕವನಸಂಕಲನ ಪ್ರಕಟಿಸಿರುವ ಇವರು `ಮೀನಕೇರಾ ಗ್ರಾಮ ದರ್ಶನ’, `ಆಧುನಿಕ ವಚನಗಳು’ `ಚುಟುಕು ಚುಡಾರತ್ನ’ ಎಂಬ ಕೃತಿಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.
ಎಸ್.ವಿ.ಕಲ್ಮಠ
ವಿಜ್ಞಾನ ಬರಹಗಳ ಲೇಖಕರಾಗಿ ಗುರುತಿಸಿಕೊಂಡವರೆAದರೆ ಎಸ್.ವಿ.ಕಲ್ಮಠ. ಇವರ ಪೂರ್ಣನಾಮ ಸಂಗಯ್ಯಾ ವೀರಂತಯ್ಯಾ ಕಲ್ಮಠ ಎಂದಾಗಿದೆ. ಇವರು ಬೀದರ ಜಿಲ್ಲೆಯ ತಾಲೂಕು ಚಿಟಗುಪ್ಪದ ವೀರಂತಯ್ಯಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೩೦-೮-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಜಿ.ಡಿ.ಇ.ಎಂ. ಪದವಿಧರರಾದ ಇವರು ೧೯೭೬ರಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಜನಪ್ರಿಯ ವಿಜ್ಞಾನ ಲೇಖನಗಳು’ ಎಂಬ ಲೇಖನÀ ಕೃತಿ `ಪದವಿ ಪೂರ್ವ ವಿಜ್ಞಾನ ಜೀವಶಾಸ್ತ್ರ-೧’ ಎಂಬ ಪಿ.ಯು.ಸಿ. ಜೀವಶಾಸ್ತ್ರ ವಿಷಯದ ಪಠ್ಯಪುಸ್ತಕ, `ಹೈದರಾಬಾದ್ ಕರ್ನಾಟಕ ಸಂಗೀತ ಪರಂಪರೆ’ ಎಂಬ ಆಕರ ಗ್ರಂಥ ಹಾಗೂ ೧೯೯೨ರಲ್ಲಿ `ಪಂಚಾಕ್ಷರಿ ಸ್ಮರಣ ಸಂಚಿಕೆ’ ಮತ್ತು ೨೦೧೬ರಲ್ಲಿ `ಸ್ಮರಣ ಸಂಚಿಕೆ ಗಾನಯೋಗಿ-೧’ ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಬರಹಗಳು ವಿಜ್ಞಾನ ಸಂಗಾತಿ,ದಿಕ್ಸೂಚಿ, ಬಾಲವಿಜ್ಞಾನ, ಬಾಲವಿಕಾಸ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು ‘ಬಾಲವಿಜ್ಞಾನ’ ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಬೀದರ ಜಿ. ಪಂ.ನ `ಜೀವ ವೈವಿಧ್ಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಜೀವ ವೈವಿಧ್ಯತೆ ಪ್ರಾಧಿಕಾರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತದಲ್ಲಿಯು ತುಂಬಾ ಆಸಕ್ತರಾದ ಇವರು ೨೦೧೧ರಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಗೀತ ವಿದ್ಯಾಲಯ ಸ್ಥಾಪಿಸಿ ಕರ್ನಾಟಕ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಶಿಕ್ಷಣ,ಉಪನ್ಯಾಸವನ್ನು ನೀಡುತ್ತಿದ್ದಾರೆ. ಆದ್ದರಿಂದ ಇವರಿಗೆ ೨೦೧೧ರಲ್ಲಿ ಕರ್ನಾಟಕ ಸರ್ಕಾರ `ಜೀವ ವೈವಿಧ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ. ಮತ್ತು ೨೦೧೫ರಲ್ಲಿ ಗದಗಿನ ಗಾನಗಂಧರ್ವ ಕಲಾ ಟ್ರಸ್ಟ್ ನಿಂದ `ಸಮಾಜ ಸೇವಾ ರತ್ನ’ ಪ್ರಶಸ್ತಿ , ೨೦೧೬ರಲ್ಲಿ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಂಗೀತ ಕ್ರಾಂತಿಕಾರಿ ಚೂಡಾಮಣಿ’ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರಿಗೆ ೨೦೧೭ರಲ್ಲಿ ಚಿಟಗುಪ್ಪ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಕ್ಷಿತಿಜ್ ಬೀದರ್
`ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಕತೆ ಕಾದಂಬರಿಗಳನ್ನು ಬರೆದು ನಾಡಿನಾದ್ಯಂತ ಖ್ಯಾತರಾದ ಇವರ ನಿಜನಾಮ `ಬಸವರಾಜ ಮಠಪತಿ’ ಎಂದಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ನಾಗಯ್ಯ ಸ್ವಾಮಿ ಮಠಪತಿ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಎಂ.ಎ.ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ೧೯೮೩ರಲ್ಲಿ `ನಾನು ಮತ್ತು ನಮ್ಮವರು’ ಎಂಬ ಕವನಸಂಕಲನ ೧೯೮೭ರಲ್ಲಿ `ಹೇಗಾದರೂ ಬದುಕು’ ಎಂಬ ವೈಚಾರಿಕ ಕೃತಿ, `ಅಮಲು’, `ಪ್ರೀತಿಸಿದವನು ನೀನೊಬ್ಬನೆ ಅಲ್ಲ’, `ಕಬ್ಬಿನ ಬನದಲ್ಲಿ’, `ನಿಶ್ಯಬ್ದದೆಡೆಗೆ’, `ಅಪರಿಚಿತರು’, `ಹೊಸ್ತಿಲಾಚೆ’ `ಬೆಲೆ’ `ಕ್ಷಿತಿಜದೆಡೆಗೆ’. `ಕತ್ತಲೋಳಗೆ’ `ಪ್ರೀತಿ ಅರಳಿತ್ತು’. `ಅಮಾತ್ರ’ `ಅಸ್ಪಷ್ಟ’ `ಕೀ-ರಿಂಗ್’ `ಇ-ಮನಸ್ಸು@ವೀರಭದ್ರ’ ಎಂಬ ಕಾದಂಬರಿಗಳು, `ಕಥೆಗಳು ಕಾಯುವುದಿಲ್ಲ ‘ `ಅದ್ರುವ’ ‘ದರ್ಶನ’ `ಅನರ್ಥ’ `ಅಡ್ಡಫಲ’ `ಬೇರಿಲ್ಲದ ಹೂ ಗರಿ’ `ನೆರಳಿನಷ್ಟೇ ಕತ್ತಲು’ ಎಂಬ ಕಥಾ ಸಂಕಲನಗಳು, `ಪತ್ತೆದಾರಿ ಇರುವೆ’ ಮತ್ತು `ಗಿಳಿಮಣಿ’ ಎಂಬ ಮಕ್ಕಳ ಕಥಾಸಂಕಲನಗಳು, `ಭಾವಸುದ್ದಿ’ ‘ದೇಹವೆ ದೇಗುಲ’ `ಕ್ಷಣಿಕ’ `ಪ್ರಜ್ಚಾಯಾನ’ `ಮನತುಂಬಿ’ ಎಂಬ ಚಿಂತನಾ ಕೃತಿಗಳು, ಹಾಗೂ `ಶಿಖರ ಜ್ಯೋತಿ’ `ಹಿಪ್ಪುನೆರಳೆಯಿಂದ ರೇಷ್ಮೆ’ `ಉದ್ಯಮ ಮಾಹಿತಿ’ ಎಂಬ ಲೇಖನ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕತೆ ಕವನ ಲೇಖನ ಕಾದಂಬರಿಗಳು ತುಷಾರ, ಮಯೂರ, ಪ್ರಜಾವಾಣಿ, ಕನ್ನಡ ಪ್ರಭ, ತರಂಗ ಉಷಾ, ಬೆಳಕಿಂಡಿ, ಚಂದನ, ಪ್ರಜಾರಂಗ ಸುಧಾ, ಕರ್ಮವೀರ, ರಾಗಸಂಗಮ, ನವರಾಗಸಂಗಮ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಕೆಲ ಕಾದಂಬರಿ ಬರಹಗಳು ಧಾರಾವಾಹಿ ಅಂಕಣ ಬರಹಗಳಾಗಿಯೂ ಪ್ರಕಟವಾಗಿವೆ. ಸದ್ಯ ಇವರು ತುಮಕೂರಿನಲ್ಲಿ ವಾಸವಾಗಿದ್ದಾರೆ.
ಮಾಣಿಕರೆಡ್ಡಿ ದೇಶದ
ಕವಿ,ಸಾಹಿತಿ ನಾಟಕಕಾರರಾದ ಮಾಣಿಕರೆಡ್ಡಿ ದೇಶದ ರವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೇಮಳಖೇಡ ಗ್ರಾಮದ ವೀರಾರೆಡ್ಡಿ ಮತ್ತು ಗಂಗಮ್ಮಾ ದಂಪತಿಗಳಿಗೆ ೧೯೫೫ರಲ್ಲಿ ಜನಿಸಿದ್ದಾರೆ. ೧೦ನೇ ತರಗತಿಯ ವರೆಗೆ ಅಧ್ಯಯನ ಮಾಡಿದ ಇವರು ಬೇಸಾಯದ ವೃತ್ತಿಯೊಂದಿಗೆ ಕವನ, ನಾಟಕ ಭಜನೆ, ತತ್ವಪದ, ಅಭಂಗಗಳ ರಚನೆ ಮಾಡಿದ್ದಾರೆ. ೨೦೧೬ರಲ್ಲಿ `ವಿಮಳಖೇಡ ಮಾಣಿಕ ನಗರೇಶ’ ಎಂಬ ಅಂಕಿತನಾಮದ ತತ್ವಪದಗಳ ಕೃತಿ, ಹಾಗೂ ೨೦೧೮ರಲ್ಲಿ `ಗಂಗಾಧರ ಬಕ್ಕಪ್ರಭು ಭಜನೆ’ ಎಂಬ ಅಭಂಗ ಕೃತಿಯು ಪ್ರಕಟಿಸಿದ್ದಾರೆ. ಮತ್ತು `ಪ್ರೇಮ ತಂದ ದುರಂತ’ (ನಾಟಕ) `ಶ್ರೀ ಮನ್ನಿರಂಜನ ಗಂಗಾಧರ ಬಕ್ಕ ಪ್ರಭುಗಳ ೧೦೮ ನಾಮಾವಳಿ, ಆದರ್ಶ ವಿದ್ಯಾರ್ಥಿ’ ಎಂಬಿತ್ಯಾದಿ ಕೃತಿಗಳು ರಚಿಸಿರುವ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.
ಕನಕ ಬಕ್ಕಪ್ಪ
ಕವಿ, ಸಾಹಿತಿ ನಾಟಕಕಾರರೆಂದರೆ ಕನಕ ಬಕ್ಕಪ್ಪನವರು. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿಂಗಪ್ಪ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೧೦-೧೦-೧೯೫೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ.ಬಿ.ಇಡಿ. ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿಧನರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ `ಕರಕನಳ್ಳಿಯ ಬಕ್ಕ ಪ್ರಭು’ (ನಾಟಕ) ಮತ್ತು `ಚಾಂಗಲೇರಿಯ ವೀರ ಭದ್ರೇಶ್ವರ ಸುಪ್ರಭಾತ’ ಎಂಬ ಧ್ವನಿ ಸುರಳಿಯು ಮುದ್ರಿಸಿದ್ದಾರೆ. ಇವರ ಕವನ ಲೇಖನ ಬರಹಗಳು ೧೯೯೬ರಿಂದ ಕೆಲವರ್ಷ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿವೆ.
ನರೇಶ ಹಮೀಲಪೂರಕರ್
ಕವಿ, ಸಾಹಿತಿ, ಲೇಖಕರಾದ ನರೇಶ ಹಮೀಲಪೂರಕರ್. ಇವರು ಬೀದರ ಜಿಲ್ಲೆ ಚಿಟಗುಪ್ಪಾದ ಶಿವರಾಮಜಿ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೬-೬-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಡಿಪ್ಲೊಮಾ ಇನ್ ಪೈನ್ ಆರ್ಟ್ಸ್ ಪದವೀಧರರಾದ ಇವರು ೨೦೦೧ರಲ್ಲಿ `ಶಬ್ದ ಸಂಗಮ, ೨೦೦೨ರಲ್ಲಿ `ಶಬ್ದ ಸಾಗರ’ ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ `ಮಹಾತ್ಮ ಪುಲೆ ಸಮಾಜ ಸೇವಕ ಪ್ರಶಸ್ತಿ, ಕವಿರಾಜ ವಿದ್ಯಾ ಶಿರೋಮಣಿ, ಸಾಹಿತ್ಯ ರತ್ನ, ಸೇವಾ ರತ್ನ, ಮೈಥಲಿ ಶರಣ ಗುಪ್ತ’ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಮಂಗಲಾ ವಿ.ಕಪ್ಪರೆ
ಸಾಹಿತಿ ಹಾಗೂ ಕಲಾವಿದೆಯಾಗಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಮಂಗಲಾ ವಿ.ಕಪ್ಪರೆ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಗುರಯ್ಯ ಸ್ವಾಮಿ ಮಾಸ್ತರ್ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨-೩-೧೯೬೩ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ೧೯೯೫ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ ಬೀದರದ ಜ್ಞಾನ ಗಂಗಾ ಹಿರಿಯ ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಸುಪ್ರಭಾತ’ `ಮಧುರ ಮಿಲನ’ `ಜೇಸುದಾಸನ ಕಿಂಡಿ’ `ಅಂಬರದ ಆಚೆ’ ಎಂಬ ಕವನ ಸಂಕಲನಗಳು, `ಹುಚ್ಚಂಬಿ ಮತ್ತು ಇತರ ಕತೆಗಳು’ ಎಂಬ ಕಥಾ ಸಂಕಲನ, `ತೂಗೂಯ್ಯಾಲೆ’ ಎಂಬ ಕಾದಂಬರಿ, `ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಚರಿತ್ರೆ,’ `ಮಾಣಿಕ್ಯ ಜ್ಯೋತಿ’ ಎಂಬ ಚರಿತ್ರೆಗಳು, `ಕಾವ್ಯ ಗುಚ್ಛ’ ಎಂಬ ಸಂಪಾದನೆ, ಹಾಗೂ ಭಾಲ್ಕಿಯ `ಚನ್ನ ಬಸವ ಪಟ್ಟದೇವರು’ ಎಂಬ ಕೃತಿ ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. `ಶಾಹಿನ್ ಕೆ ಸರ್ ತಾಜ್’ `ಮೇರಾ ಗಾಂವ ಮೇರಾ ಜೀವಾಳ್’ `ಚಿಡಿಯಾಕಾ ಘೋಸಲಾ’ ಎಂಬ ಈ ಕೃತಿಗಳು ಹಿಂದಿಯಲ್ಲಿ ಬರೆದು ದ್ವಿಭಾಷಾ ಕವಯತ್ರಿಯಾಗಿ ಕೆಲ ಹಾಡುಗಳು ಸಿ.ಡಿ.ರೂಪದಲ್ಲಿ ಮುದ್ರಿಸಿದ್ದಾರೆ. ಮತ್ತು ಕೆಲ ಧಾರವಾಹಿ ಚಲನ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮೇಘಾಲಯದ ಶಿಲಾಂಗನಲ್ಲಿ ನಡೆದ ಸಮ್ಮೇಳನದಲ್ಲಿ ಅಲ್ಲಿನ ರಾಜ್ಯ ಪಾಲರಿಂದ ಗೌರವ ಸನ್ಮಾನ, ಚಂಡಿಗಡದಲ್ಲಿ ನಡೆದ ಸಮ್ಮೇಳನದಲ್ಲಿ ಇವರ ಕೃತಿ ಬಿಡುಗಡೆಯಾಗಿ ವಿಶೇಷ ಸನ್ಮಾನ, ನೇಪಾಳ ದೇಶದಲ್ಲಿ ನಡೆದ ಸಮ್ಮೇಳನದಲ್ಲಿ ಹಿಂದಿ ಕವನ ವಾಚಿಸಿದ್ದರಿಂದ ಅಲ್ಲಿನ ರಾಷ್ಟ್ರಪತಿಗಳು ಗೌರವ ಸನ್ಮಾನ ಮಾಡಿ `ಮಿಸ್ ನೇಪಾಳ’ ಎಂಬ ಪ್ರಶಸ್ತಿಯು ನೀಡಿದ್ದಾರೆ. ಕಲಬುರಗಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, ಸಂತ ಮೀರಾಬಾಯಿ ಪ್ರಶಸ್ತಿ, `ಸರೋಜಿನಿ ನಾಯ್ಡು ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳು ಪಡೆದ ಇವರು ಸದ್ಯ ಕಲಬುರಗಿಯ ನಿವಾಸಿಯಾಗಿದ್ದಾರೆ.
ಮ.ಮಾ.ಬೊರಾಳಕರ್
ತೊಂಬತ್ತರ ದಶಕದಲ್ಲಿಯೇ ಸೃಜನಶೀಲ ಮತ್ತು ಜಾನಪದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮ.ಮಾ.ಬೊರಾಳಕರ್. ಇವರ ಪೂರ್ಣನಾಮ ಮಲ್ಲಿಕಾರ್ಜುನ ಮಾಣಿಕಪ್ಪಾ ಬೊರಾಳಕರ್ ಎಂದಾಗಿದೆ. ಇವರು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ಮಾಣಿಕಪ್ಪಾ ಮತ್ತು ಸುಶೀಲಮ್ಮಾ ದಂಪತಿಗಳಿಗೆ ದಿನಾಂಕ ೧೨-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್ ಪದವಿಧರರಾದ ಇವರು ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಇವರು ೧೯೯೦ರಲ್ಲಿ `ಚಿಗುರು’ ೧೯೯೨ರಲ್ಲಿ `ಕನ್ನಡಿಗನ ಹಾಡು’ ಮತ್ತು `ಸವಿನೆನಪಿನ ಹಂದರ’ ಎಂಬ ಕವನಸಂಕಲನಗಳು, `ವಿಶ್ವ ಪ್ರಸಿದ್ಧ ಬಿದರಿ ಕಲೆ’ ಎಂಬ ಸಂಶೋಧನಾ ಕೃತಿ ಮತ್ತು `ಎರಡು ಬಳ್ಳಿ ಹೂ ಹಲವು’ (ಸುಭಾಸ ನೇಳಗೆಯೊಂದಿಗೆ) `ಬೀದರ ಜಿಲ್ಲೆಯ ಆಣಿ ಪಿಣಿ ಹಾಡುಗಳು’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಕವನ ಲೇಖನ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ,ತುಷಾರ, ಸುಧಾ,ಪ್ರಜಾಮತ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೬ರಲ್ಲಿ ಕರ್ನಾಟಕ ಸರ್ಕಾರದ ನೆಹರು ಯುವ ಕೇಂದ್ರದ ಬೆಂಗಳೂರಿನಿAದ `ರಾಜ್ಯ ಯುವ ಪ್ರಶಸ್ತಿ’ ಮತ್ತು ಬೀದರ ಜಿಲ್ಲಾಡಳಿತ ದಿಂದ `ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಆದರೆ ದುರದೃಷ್ಟ ಇವರು ೮-೨-೨೦೦೩ ರಲ್ಲಿ ಅಕಾಲಿಕ ಸಾವನ್ನಪ್ಪಿದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಬರೆದ ನೂರಾರು ಅಪ್ರಕಟಿತ ಬರಹಗಳು ಪುಸ್ತಕ ರೂಪದಲ್ಲಿ ಹೊರತರಲು ಅವರ ಧರ್ಮ ಪತ್ನಿ ಮೀನಾಕುಮಾರಿ ಬೊರಾಳಕರ್ ರವರು ಶ್ರಮಿಸುತ್ತಿದ್ದಾರೆ.
ವೀರೇಶಕುಮಾರ್ ಮಠಪತಿ
ಅಂಕಣಕಾರ, ಪತ್ರಕರ್ತ,ಸಂಪಾದಕರಾಗಿ ಗುರ್ತಿಸಿಕೊಂಡು ಸೃಜನಶೀಲ ಬರಹಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಸಾಹಿತಿಯೆಂದರೆ ವೀರೇಶಕುಮಾರ್ ಮಠಪತಿ. ಇವರು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ದಿ.ವೇ.ನಾಗಯ್ಯ ಸ್ವಾಮಿ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧೬-೨-೧೯೭೦ ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಎ.ಎA.ಎಡ್.ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ೨೦೦೪ ರಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ, ನಂತರ `ಕಸ್ತೂರಿ ಕಿರಣ’ ಎಂಬ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಸದ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು `ದಾರಿ ದೀಪ’ ಮತ್ತು `ಮುಕ್ತಿ ಮಠದ ಧರ್ಮ ದೀಪ’ ಎಂಬ ಕೃತಿಗಳು ಹೊರತಂದಿದ್ದಾರೆ. ೧೯೮೪ರಲ್ಲಿ ಸುಧಾ ವಾರ ಪತ್ರಿಕೆಯ ರಾಜ್ಯ ಮಟ್ಟದ `ಮಕ್ಕಳ ಕಥಾ’ ಸ್ಪರ್ಧೆಯಲ್ಲಿ ಇವರ `ಜಾಣ ನರಿ’ ಕತೆ ಪ್ರಥಮ ಬಹುಮಾನ ಪಡೆದು ಪ್ರಕಟವಾಗಿದೆ. ಇವರು ಸಾಹಿತ್ಯ ಹಾಗೂ ಸಂಘಟನೆಯೊAದಿಗೆ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ೧೨ನೇ ಚಿಟಗುಪ್ಪ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ಇವರು ಶಿಕ್ಷಣ ಕ್ಷೇತ್ರದಲ್ಲಿಯು ತುಂಬ ಕಾಳಜಿಯುಳ್ಳವರಾಗಿದ್ದರಿಂದ `ಪೂಜ್ಯ ವೇ.ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಪ್ರಾಥಮೀಕ ಪ್ರೌಢ ಶಾಲೆಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
ಮಾಣಿಕ ನೇಳಗಿ ತಾಳಮಡಗಿ
ಕನ್ನಡ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕಾವ್ಯ ರಚನೆ ಮಾಡುತ್ತಿರುವ ಕವಿ ಸಾಹಿತಿಯೆಂದರೆ ಮಾಣಿಕ ನೇಳಗಿ. ಇವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಕಲ್ಲಪ್ಪಾ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೨೨-೦೭-೧೯೭೦ ರಂದು ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೯ರಲ್ಲಿ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಗದಗ ಜಿಲ್ಲೆಯ ಮುಂಡರಗಿಯಲ್ಲಿ ಸೇವೆಗೆ ಸೇರಿ ಸದ್ಯ ಔರಾದ (ಬಿ) ತಾಲೂಕಿನ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ಕತೆ, ಕವನ, ಲೇಖನ ಬರೆಯುವತ್ತಾ ಅಂದಿನ ದಿನಗಳಲ್ಲಿ ರಾಜ್ಯ ಮಟ್ಟದ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಕವನ ಲೇಖನಗಳನ್ನು ಪ್ರಕಟಿಸಿ ಕವಿ ಸಾಹಿತಿಯಾಗಿ ಹೆಸರುವಾಸಿಯಾದವರು. ಅಷ್ಟೇಯಲ್ಲದೆ ಇವರ ಕವಿತೆ ಮತ್ತು ಚಿಂತನಗಳು ಕಲಬುರಗಿಯ ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಮತ್ತು ೨೦೨೦ರಲ್ಲಿ `ಬದಲಾಗೋಣ. ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. `ಬವಣೆ’ `ಗಾಂಧಿಜಿಗೆ ನಮನ’ ಎಂಬ ಹನಿಗವನ `ರುಕ್ಮಿಣಿಯ ಆತುರ ‘ ಎಂಬ ಕಥಾಸಂಕಲನ, `ಸಂಕೀರ್ಣ’ ಎಂಬ ಲೇಖನ, `ಮಾನವಿಯತೆ’ ಎಂಬ ಚಿಂತನ ಕೃತಿಗಳು ಬರೆದಿದ್ದು ಅವು ಅಪ್ರಟಿತವಾಗಿವೆ. ಇವರ `ಕರುನಾಡ ಸಿರಿ’ ಎಂಬ ಕವನವು ಕಲಬುರಗಿ ಆಕಾಶವಾಣಿಯ ೫೦ನೇ ವಾರ್ಷಿಕೊತ್ಸವದಂದು ರಾಗ ಸಂಯೋಜಿಸಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿAದ ನವೆಂಬರ ೧ ರಂದು ಏಕಕಾಲಕ್ಕೆ ಪ್ರಸಾರವಾಗಿದೆ ಇವರಿಗೆ `ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಮತ್ತು ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವಾರು ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದಷ್ಟೆಯಲ್ಲದೆ ವಿವಿಧ ಕಮ್ಮಟಗಳಲ್ಲಿಯೂ ಪಾಲ್ಗೊಂಡು ಸಕ್ರಿಯವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಡಾ.ಹಣಮಂತ ಮೇಲಕೇರಿ
ಬಾಲ್ಯದಿಂದಲೂ ಸಾಹಿತ್ಯಾಸಕ್ತರಾಗಿ ಕವನ,ಲೇಖನ, ಪ್ರಬಂಧ, ವಚನಗಳು ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ, ಡಾ.ಹಣಮಂತ ಮೇಲಕೇರಿ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮದರಗಿ ಗ್ರಾಮದ ಭೀಮಣ್ಣಾ ಮತ್ತು ಮಾಳಮ್ಮಾ ದಂಪತಿಗಳಿಗೆ ದಿನಾಂಕ ೧೫-೭-೧೯೭೭ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫಿಲ್. ಪಿ.ಜಿ.ಡಿಪ್ಲೊಮಾ, ಪಿ.ಎಚ್.ಡಿ.ಪದವಿ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೦ರಲ್ಲಿ `ಸೃಜನಶೀಲ ಸಾಹಿತಿ ಭಾಲಚಂದ್ರ ಜಯಶೆಟ್ಟಿ ‘ ಎಂಬ ವ್ಯಕ್ತಿಚಿತ್ರಣ, ೨೦೧೪ರಲ್ಲಿ `ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಆಧುನಿಕ ವಚನಕಾರರು’ ೨೦೧೮ರಲ್ಲಿ `ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ’ ಮತ್ತು `ಕಲಬುರಗಿ ಜಿಲ್ಲಾ ಆಧುನಿಕ ವಚನಕಾರರು’ ೨೦೧೯ರಲ್ಲಿ `ಬೀದರ ಜಿಲ್ಲೆಯ ಜನಪದ ಕಲಾ ಪ್ರಕಾರಗಳು ಹಾಗೂ ಅವುಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಗಳು ಪ್ರಕಟಿಸಿ ೨೦೧೮ರಲ್ಲಿ `ಡಾ.ಎಸ್.ಎಸ್.ಅಂಗಡಿ’ `ಕನ್ನಡ ದಲಿತ ಸಾಹಿತ್ಯ ಸಂಪುಟ-೪’ ‘ಸಿದ್ದೇಶ್ವರ ಸ್ವಾಮಿಜಿಯವರ ಅಮೃತವಾಣಿ’ ಎಂಬ ಕೃತಿಗಳು ಸಂಪಾಸಿದ್ದಾರೆ. ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜೋತ್ಸವ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿ, ಜಗಜ್ಯೋತಿ ಕಾಯಕಶ್ರೀ ಪ್ರಶಸ್ತಿ, ರಾಷ್ಟ್ರೀಯ ಜ್ಞಾನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಇವರ ಲೇಖನ ಬರಹಗಳು ದಾಸೋಹ ರತ್ನ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಮೊದಲಾದವುಗಳಲ್ಲಿ ಪ್ರಕಟವಾಗಿವೆ.
ಸುಬ್ಬಣ್ಣ ಕರಕನಳ್ಳಿ
ದಲಿತ ಬಂಡಾಯ ಪ್ರಗತಿಶೀಲ ಬರಹಗಳ ಮೂಲಕ ಕವಿ, ಸಾಹಿತಿಯಾಗಿ ಗುರುತಿಸಲ್ಪಡುವ ಲೇಖಕರೆಂದರೆ ಸುಬ್ಬಣ್ಣ ಕರಕನಳ್ಳಿ. ಇವರು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕರಕನಳ್ಳಿ ಗ್ರಾಮದ ಶಿವಪ್ಪ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೫-೬-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಎA.ಫೀಲ್ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಾ ಬರವಣಿಗೆಯಲ್ಲಿ ತೊಡಗಿ `ಬುದ್ಧ ಬಸವ ಅಂಬೇಡ್ಕರ್ ಬೆಳಕು’ `ರಾಷ್ಟ್ರ ಪ್ರೇಮ’ `ಅಮ್ಮನ ಹರಕೆ’ ಎಂಬ ಕವನ ಸಂಕಲನಗಳು, `ಸಮಾನತೆಗಾಗಿ ಸಂಘರ್ಷ’ ಎಂಬ ಸಂಶೋಧನಾ ಗ್ರಂಥವು ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಬಸವಪಥ, ಬಸವಸಂಪದ, ಕಾರಂಜಾ ಎಕ್ಷಪ್ರೇಸ್, ಉತ್ತರ ಕರ್ನಾಟಕ, ಜನದನಿ, ಮೊದಲಾದ ಪ್ರಾತಿನಿಧಿಕ ಸಂಕಲನ ಮತ್ತು ದೂರದರ್ಶನ ಚಂದನ ವಾಹಿನಿಯಲ್ಲಿಯೂ ಪ್ರಕಟ, ಪ್ರಸಾರವಾಗಿವೆ.
ಇವರಿಗೆ ಬೀದರದ ಕಸಾಪ, ಧರಿನಾಡು ಕನ್ನಡ ಸಂಘ, ದೇಶಪಾಂಡೆ ಪ್ರತಿಷ್ಠಾನ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಜನಸೇವಾ ಸಂಸ್ಥೆ, ಅಂಬಿಗರ ಚೌಡಯ್ಯ ಯುವ ಸೈನ್ಯ ಮೊದಲಾದವರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ವಿಶ್ವ ಕನ್ನಡಿಗರ ಸಂಸ್ಥೆಯನ್ನು ಸ್ಥಾಪಿಸಿ ಅದರ ರಾಜ್ಯಾಧ್ಯಕ್ಷರಾಗಿ, ಬೀದರದ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ, ವೀರ ಕನ್ನಡಿಗರ ಸೈನ್ಯದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾರಿಕಾ ಎಸ್.ಗಂಗಾ
ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದರು ಪ್ರವೃತ್ತಿಯಲ್ಲಿ ಕನ್ನಡ ಸಾಹಿತಿಯಾಗಿ ಕತೆ, ಕವನ,ಚುಟುಕು, ಆಧುನಿಕ ವಚನ,ಲೇಖನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಸಾರಿಕಾ ಎಸ್.ಗಂಗಾ. ಇವರು ಬೀದರ ಜಿಲ್ಲೆ ಚಿಟಗುಪ್ಪದ ಹಣಮಂತರಾವ ಹಾಗೂ ಸರಸ್ವತಿ ದಂಪತಿಗಳಿಗೆ ದಿನಾಂಕ ೨೦-೦೮-೧೯೮೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆನಚಿಂಚೋಳಿ ಸರಕಾರ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ದುಬಲಗುಂಡಿಯ ಸುಧೀರ ಗಂಗಾ ಅವರೊಂದಿಗೆ ವಿವಾಹವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಕ್ರೀಯಶೀಲತೆಯಿಂದ `ನೆನಪಿನ ಕಾರಂಜಿ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಹಲವಾರು ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ವಾಚನ ಮಾಡಿದ್ದಾರೆ .ಮತ್ತು ತಮ್ಮ ಶಾಲಾ ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸಿ ಅವರ ಸಾಹಿತ್ಯ ರಚನೆಗೆ ಪ್ರೊತ್ಸಾಹಿಸಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೇರಣೆ ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಇವರಿಗೆ ತಾಲೂಕಿನ `ಉತ್ತಮ ಶಿಕ್ಷಕಿ ಪ್ರಶಸ್ತಿ, ಹಾಗೂ ಬೀದರ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಪುಲೆ `ಶಿಕ್ಷಕಿ ಪ್ರಶಸ್ತಿ’ `ಕ್ರಿಯೇಟಿವ್ ಸೈನ್ಸ ಟೀಚರ್ ಅವಾರ್ಡ’ ಇತ್ಯಾದಿ ಪಡೆದಿದ್ದಾರೆ .ಮಂಡ್ಯದಲ್ಲಿ ಇವರಿಗೆ ರಾಜ್ಯ ಮಟ್ಟದ `ಕಾವ್ಯಶ್ರೀ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ, ಸಂಘ ಸಂಸ್ಥೆಯ ಪ್ರತಿನಿಧಿಯಾಗಿ, ಬೀದರ ಜಿಲ್ಲೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
ಗೀತಾAಜಲಿ ಎಸ್.ಪಾಟೀಲ್
ಉದಯೋನ್ಮುಖ ಯುವ ಬರಹಗಾರ್ತಿಯಾಗಿ ಕಾವ್ಯ ರಚನೆಯಲ್ಲಿ ತೊಡಗಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ ಗೀತಾಂಜಲಿ ಎಸ್.ಪಾಟೀಲ್. ಇವರು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೇಮಳಖೇಡ ಗ್ರಾಮದ ಚನ್ನಪ್ಪ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವೀಧರರಾದ ಇವರು ೨೦೦೫ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಬಡ್ತಿ ಹೊಂದಿ ಹುಮನಾಬಾದ ತಾಲೂಕಿನ ಉಡಮನಳ್ಳಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿದ್ದ ಇವರು ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ರಚಿನೆಯಲ್ಲಿ ತೊಡಗಿ ೨೦೧೭ರಲ್ಲಿ `ಬಾಡದಿರಲಿ ಭಾವ ಕುಸುಮ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ೨೦೧೬ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೊತ್ಸಾಹಧನವು ಲಭಿಸಿದೆ. ಮತ್ತು ಇವರು ಕನ್ನಡ ಅಷ್ಟೇಯಲ್ಲದೆ ಹಿಂದಿಯಲ್ಲಿಯು ಕೆಲ ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕವನ ಲೇಖನ,ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ.
ಡಾ. ಗೌತಮ್ಮ ಬಕ್ಕಪ್ಪ
ಉದಯೋನ್ಮುಖ ಬರಹಗಾರರಾಗಿ ಕೆಲ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಗೌತಮ ಬಕ್ಕಪ್ಪ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಬಕ್ಕಪ್ಪ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೩-೧೯೮೭ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪಿ.ಜಿ.ಡಿಪ್ಲೊಮಾ, ಪಿ.ಎಚ್ ಡಿ..ಪದವಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯ ರಾಜೇಶ್ವರದಲ್ಲಿ `ವಾರ್ಡನ’ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ,ಆಧುನಿಕ ವಚನ, ಲೇಖನಗಳನ್ನು ಬರೆದು `ದಲಿತ ತತ್ವಗಳ ಚಿಂತನೆ’ ಮತ್ತು `ಶಿಕ್ಷಣ, ಸಂಘಟನೆ, ಹೋರಾಟದ ಗಜಲ್ ಗಳು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ದಲಿತ ಬಂಡಾಯ ಕತೆಗಳಲ್ಲಿ ಭಾಷೆ ಮತ್ತು ಸಂಸ್ಕೃತಿ’ ಇದು ಇವರ ಸಂಶೋಧನಾ ಗ್ರಂಥವಾಗಿದೆ. `ಶ್ರೀಗುರು ಗಂಗಾಧರ ಬಕ್ಕಪ್ರಭು’ ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ರಚಿಸಿದ ಇವರು ೨೦ಕಿಂತ ಹೆಚ್ಚು ನಾಟಕಗಳಲ್ಲಿ ನಟಿಸಿ ಜಾನಪದ ಸಂಗೀತ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಇವರಿಗೆ ಹಾರಕೂಡ ಮಠದಿಂದ `ಕಲ್ಯಾಣ ಚನ್ನಶ್ರೀ’ ಹಾಗೂ `ಸಿದ್ಧಾರ್ಥ’ `ಧರಿಸಿರಿ’ `ಕಾವ್ಯ ರತ್ನಾಂಜಲಿ’ `ಕನ್ನಡ ರತ್ನ’ `ಸಾವಿತ್ರಿ ಬಾಯಿ ಪುಲೆ’ `ಸಾಹಿತ್ಯ ರತ್ನ’ `ಕನಕ ಶ್ರೀ’ `ಕನ್ನಡ ಸೇವಾ ರತ್ನ’ ಮೊದಲಾದ ಪ್ರಶಸ್ತಿಗಳು ವಿವಿಧ ಕನ್ನಡಪರ ಸಂಘ ಸಂಸ್ಥೆಯವರು ನೀಡಿ ಗೌರವಿಸಿದ್ದಾರೆ. ಇವರ ಬರೆಹಗಳು ಸುಧಾ, ಭೀಮವಾದ, ಸ್ಥಿತಿಗತಿ, ಪ್ರಜಾವಾಣಿ, ಸಂಜೆವಾಣಿ ಮೊದಲಾzವುÀಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದ ತಾಲೂಕಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊಹಮ್ಮದ್ ತೈಯಬ್
ಮುಸ್ಲಿಂ ಲೇಖಕರಲ್ಲಿ ಹೆಚ್ಚು ಕನ್ನಡ ಸೃಜನಶೀಲ ಕೃತಿಗಳನ್ನು ಬರೆದದಷ್ಟೆಯಲ್ಲದೆ ಉರ್ದು ಹಿಂದಿ ಭಾಷೆಗಳಲ್ಲಿಯು ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಬಹುಭಾಷಾ ಕವಿಯೆಂದರೆ ಮೊಹಮ್ಮದ್ ತೈಯಬ್ .ಇವರ ಮಾತೃಭಾಷೆ ಉರ್ದುವಾದರು ಕನ್ನಡದಲ್ಲಿ ಬರೆಯುತ್ತಾರೆ. ಇವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಬೇಮಳಖೇಡ ಗ್ರಾಮದ ಎಕ್ಬಾಲಮಿಯ್ಯ ಮತ್ತು ನಸೀಮಾ ಬೇಗಂ ದಂಪತಿಗೆ ದಿನಾಂಕ ೪-೬-೧೯೮೯ರಲ್ಲಿ ಜನಿಸಿದ್ದಾರೆ. ಡಿ.ಎಡ್,ಎಂ.ಎ (ಹಿಂದಿ),ಎA.ಎ (ಇತಿಹಾಸ) ಪದವಿ ಪಡೆದು ಕೆಲಕಾಲ ಪೊಲೀಸ್ ಹುದ್ದೆ ನಿರ್ವಸಿ ಸದ್ಯ ಕಲಬುರ್ಗಿಯ ತೋಟಗಾರಿಕೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ.
ಇವರು ಕನ್ನಡದಲ್ಲಿ `ಭೀಮಗಿರಿ’ `ನವ ಚೈತ್ರ’ `ಹದ್ದಿನ ಗೂಡು’ ಎಂಬ ಕವನ ಸಂಕಲನಗಳು, `ಜನ್ಮ ಕೊಡು ತಾಯಿ’ ಎಂಬ ಕಥಾಸಂಕಲನ, `ಪರೋಪಕಾರ’ `ದಿ ಹೀರೋ ಜಾಕ್ಲೇನ್ ಭಾಗ- ೧ `ಭೂತಗಳ ಹಡಗು’ `ಕುತಂತ್ರ’ ಎಂಬ ಮಕ್ಕಳ ಕಥಾ ಸಂಕಲನಗಳು ಮತ್ತು ಹಿಂದಿಯಲ್ಲಿ `ಮಾನವತಾ ಕೀ ಖೋಜ್ ಮೇ’ ಎಂಬ ಕವನ ಸಂಕಲನ, ಉರ್ದುವಿನಲ್ಲಿ ಬೀದರನ ಪ್ರಮುಖ ಉರ್ದು ಸಾಹಿತಿಗಳ ‘ಗಜಲ್’ ಗಳನ್ನು ಕನ್ನಡಕ್ಕೆ ಲಿಪ್ಯಾಂತರಗೊಳಿಸಿ `ಮೀರ್ ನ ಗಜಲ್ ಗಳು’ ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಇವರ ಮಕ್ಕಳ ಕತೆ ಮಯೂರ ಮಾಸಪತ್ರಿಕೆ ಸೇರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೨೦೧೬ರಲ್ಲಿ ದೂರದರ್ಶನ ಚಂದನ ವಾಹಿನಿಯ `ಬೆಳಗು’ ಕಾರ್ಯಕ್ರಮದಲ್ಲಿ ಇವರ ಸಂದರ್ಶನವು ಪ್ರಸಾರವಾಗಿದೆ,ಇವರು ಹಲವಾರು ಕವಿಗೋಷ್ಠಿ, ಕಾವ್ಯ ಮತ್ತು ಕಥಾ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.
ಬಸವಪ್ರಕಾಶ ಬಿ.ಕೊಡಂಬಲ್
`ಸಮರಸದ ಅಲೆ’ ಎಂಬ ಪುಸ್ತಕ ಪ್ರಕಟಿಸುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಉದಯೋನ್ಮುಖ ಬರಹಗಾರರೆಂದರೆ ಬಸವಪ್ರಕಾಶ ಬಿ.ಕೊಡಂಬಲ್. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ `ಬೇಮಳಖೇಡ’ ಗ್ರಾಮದ ಭದ್ರಶೆಟ್ಟಿ ಮತ್ತು ಮಾಯಾದೇವಿ ದಂಪತಿಗಳಿಗೆ ದಿನಾಂಕ ೨೧-೧೦-೧೯೯೫ ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಎಡ್.ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿ ಇರುವುದರಿಂದ ಕತೆ, ಕವನ, ಚುಟುಕು, ಹನಿಗವನ, ಲೇಖನ ಮೊದಲಾದವು ರಚಸಿ `ಸಮರಸದ ಅಲೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಚಿಂಚೊಳಿಯ ಕಸಾಪ ಮತ್ತು ನೈಜದೀಪ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ `ಪ್ರಶಸ್ತಿ ಪತ್ರ’ ನೀಡಿ ಗೌರವಿಸಿದ್ದಾರೆ. ಇವರು ಬರೆದ ಕವನ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ ಮತ್ತು ಇವರು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಹೊರನಾಡ ಬೀದರ ಲೇಖಕರು
ಡಾ.ತಾತ್ಯೆರಾವ ಕಾಂಬಳೆ
ಹಿAದಿ ಮತ್ತು ಮರಾಠಿ ಭಾಷೆಯಲ್ಲಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ತಾತ್ಯೆರಾವ ಕಾಂಬಳೆ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಮಸಾಜಿ ಕಾಂಬಳೆ ಮತ್ತು ಮಾಲನಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೪೦ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಬಿ.ಎ. ಎಲ್.ಎಲ್.ಬಿ.ಪದವಿ ಪಡೆದು ವಕೀಲರಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು ಪಂಚ ಭಾಷಾ ಪ್ರವೀಣರಾದ ಇವರು ಕ್ರಾಂತಿಕಾರಿ ಭಾಷಣಕಾರರಾಗಿದ್ದಾರೆ. ಡಾ.ಅಂಬೇಡ್ಕರ್ ಸ್ಥಾಪಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿ ಸಾಹಿತಿಯಾಗಿ `ಭಾರತ ಭಾಗ್ಯ ವಿಧಾತ ಡಾ. ಬಿ.ಆರ್.ಅಂಬೇಡ್ಕರ್’ ಎಂಬ ಚರಿತ್ರೆ, `ಯುದ್ದ ಬನಾಮ್ ಬುದ್ಧ’ `ಯುಗ ಪರಿವರ್ತಕ ಡಾ.ಅಂಬೇಡ್ಕರ್’, `ಹೂ ಇಜ್ ಹಿಂದು ?’ ಎಂಬ ಕೃತಿಗಳು ಹಿಂದಿ ಭಾಷೆಯಲ್ಲಿ, `ಚೌನಿ’ ಎಂಬ ಕಥಾ ಸಂಕಲನ ಮರಾಠಿಯಲ್ಲಿ ಬರೆದಿದ್ದಾರೆ. `ಭಾರತ ಭಾಗ್ಯ ವಿಧಾತ ಡಾ.ಬಿ.ಆರ್.ಅಂಬೇಡ್ಕರ್ ’ ಇದು ಕನ್ನಡಕ್ಕೆ ಅನುವಾದಗೊಂಡಿದೆ. ೧೯೭೦ರಲ್ಲಿ ಡಾ. ಅಂಬೇಡ್ಕರ್ ಅವರ ಮಗ ಯಶ್ವಂತರಾವ ಸ್ಥಾಪಿಸಿದ `ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಭಾರತದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರಿಗೆ ೧೯೯೦ರಲ್ಲಿ ಮೀರಾ ತಾಯಿ ಅಂಬೇಡ್ಕರ್ ರವರು ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ಭಾರತದ ಲಿಗಲ್ ಅಡ್ವಿಕೇಟ್ ಆಗಿಯು ನೇಮಕ ಮಾಡಿದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೬೪ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಔರಂಗಾಬಾದನಲ್ಲಿ ಅಂಬೇಡ್ಕರ ಸ್ಥಾಪಿತ ಮಿಲಿಂದ ಕಾಲೇಜ್ ನಿಂದ `ಮಿಸ್ಟರ್ ಮಿಲಿಂದ ಪ್ರಶಸ್ತಿ, ೧೯೯೩ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ರಾಷ್ಟ್ರೀಯ ಸೇವಾ ಪ್ರಶಸ್ತಿ, ೨೦೦೭ರಲ್ಲಿ ಹುಬ್ಬಳ್ಳಿ-ಧಾರವಾಡ ಬೌದ್ಧ ಮಹಾಸಭಾದಿಂದ `ಅಂಬೇಡ್ಕರ್ ಪ್ರಶಸ್ತಿ, ೨೦೧೧ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ೨೦೧೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೪ರಲ್ಲಿ ಭಗವಾನ್ ಬುದ್ಧ ಅಂತರಾಷ್ಟ್ರೀಯ ಫೀಲೋಸಿಫ್ ಅವಾರ್ಡ, ೨೦೧೭ರಲ್ಲಿ ಬೆಂಗಳೂರಿನ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯು ಲಭಿಸಿದೆ. ಇವರು ೧೯೬೭ ಮತ್ತು ೧೯೯೬ರಲ್ಲಿ ಬೀದರ ಲೋಕಸಭಾ, ೧೯೭೮ರಲ್ಲಿ ಹುಲಸೂರು ವಿಧಾನ ಸಭಾ, ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವ ಗೊಂಡಿದ್ದು ಬೆಸರದ ಸಂಗತಿಯಾಗಿದೆ. ಸದ್ಯ ಇವರು ಹೆಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜ ಸೇವಕರಾಗಿ,ಶಿಕ್ಷಣ ಪ್ರೇಮಿ, ಸಾಹಿತಿಯಾಗಿ ಹೈದರಾಬಾದನಲ್ಲಿ ನೆಲೆಸಿದ್ದಾರೆ.
ಮಾಣಿಕರಾವ ಬಿರಾದಾರ
`ಚನ್ನ ಕಿರಣ’ ಎಂಬ ಅಂಕಿತನಾಮದಿAದ ಹೊರನಾಡಿನಲ್ಲಿದ್ದು ಸಾಹಿತ್ಯ ರಚಿಸುತ್ತಿರುವ ಹಿರಿಯ ಲೇಖಕರೆಂದರೆ ಮಾಣಿಕರಾವ ಬಿರಾದಾರ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬಿರಿ (ಬಿ) ಗ್ರಾಮದ ಶರಣಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೧-೧-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪದವಿ ಪಡೆದು ಮಹಾರಾಷ್ಟ್ರ ಲಾತೂರ್ ಜಿಲ್ಲೆ ಉದಗಿರದ ಮಹಾರಾಷ್ಟ್ರ ಉದಯಗಿರಿ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ಮಹಾರಾಷ್ಟ್ರದಲ್ಲಿ ಸೇವೆಗೆ ಸೇರಿ ಮರಾಠಿ ಭಾಷೆ ಕಲಿತು ಕನ್ನಡದ ಶರಣರ ಮತ್ತು ಸರ್ವಜ್ಞನ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ ಇವರ ಕೃತಿಗಳೆಂದರೆ, `ಚನ್ನಬಸವನ ಕರಣ ಹಾಸಿಗೆ’ ಎಂಬ ಶರಣ ಅಧ್ಯಾತ್ಮೀಕ ಕೃತಿ, `ಹಾವಗಿ ಸ್ವಾಮಿ ಚರಿತ್ರೆ’ `ಶಿವದಾಸ ಮುತ್ಯಾನ ಚರಿತ್ರೆ ‘ ಎಂಬ ಚರಿತ್ರೆಗಳು, `ಮಹಾರಾಷ್ಟ್ರ ಗಡಿಯ ಕನ್ನಡ ಜಾನಪದ ಗೀತೆಗಳು’ `ಮಹಾರಾಷ್ಟ್ರ ಗಡಿಯ ಭಕ್ತಿ ಗೀತೆಗಳು’ ಎಂಬ ಸಂಪಾದನೆ, `ಕುವೆಂಪು ವಿಶ್ವಮಾನವ ಸಂದೇಶ’ ಕನ್ನಡದಿಂದ ಮರಾಠಿಗೆ ಅನುವಾದಿಸಿದ್ದಾರೆ. `ವಚನ ವಿಚಾರ ವಾಹಿನಿ’ ಎಂಬ ಮರಾಠಿ ಕೃತಿ. `ವಚನ ಸಂಗಮ’ ಇದು ಕನ್ನಡದಿಂದ ಮರಾಠಿಗೆ ಅನುವಾದಿಸಿದ ಕೃತಿಯಾಗಿದೆ. ಇವರು ಸರ್ವಜ್ಞನ ೫೦೦ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ. ಮತ್ತು `ಬಿಡುಗಡೆ’ `ವ್ಯಸನ ಮುಕ್ತಿ’ `ವಧುದಕ್ಷಿಣೆ’ `ಮುಕ್ತಿ’ `ಶರಣು ಶರಣಾರ್ಥಿ’ `ಮಿಸಲು ಮುಕ್ತಿ’ `ಅತ್ತೆ-ಸೊಸೆ ದರ್ಪ’ `ಒಗ್ಗಟ್ಟು’. `ಭಾವೈಕ್ಯತೆ’ `ಶಿವಶರಣ ನನ್ನಯ್ಯಾ’ `ಸುಂಕಕAಜಿ ನಡೆದೇನು’ `ಅಪಹರಣ ‘ ಇವು ಅವರ ೧೨ ಏಕಾಂಕ ನಾಟಕಗಳಾಗಿವೆ ಇವರ ಬರಹಗಳು ಕನ್ನಡ,ಮರಾಠಿ ಪ್ರಮುಖ ಪತ್ರಕೆಗಳಲ್ಲಿ ಪ್ರಕಟವಾಗಿವೆ. ಇವರು ಕೆಲ ಕಾಲ `ಉದಯ ಕೆಸರಿ ಘರ್ಜನೆ, ಪ್ರಭೆ, ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಮಹಾರಾಷ್ಟçದಲ್ಲಿ ಹಲವು ಕನ್ನಡ ಪರ ಸಂಘಟನೆಗಳನ್ನು ಕಟ್ಟಿ ಬೆಳರೆಸಿದ್ದಾರೆ. ಇವರು ೧೯೭೮ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬಸವಕಲ್ಯಾಣ ಸಸ್ತಾಪೂರದ ೫ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ, ಸದ್ಯ ಇವರು ಮಹಾರಾಷ್ಟç ಉದಗಿರದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಡಾ.ಮಲ್ಲಿಕಾರ್ಜುನ ಎ. ಭಂಡೆ
ಹೊರನಾಡಿನ ಮಹಾರಾಷ್ಟçದ ಲಾರ್ತೂ ಜಿ¯್ಲೆಯ ಉದಗಿರದಲ್ಲಿ ಖಾಸಗಿ ವೈದ್ಯರಾಗಿದ್ದುಕೊಂಡು ಮರಾಠಿ ಸಮುದಾಯದ ನಡುವೆ ಕನ್ನಡದಲ್ಲಿ ಕವನ, ಆಧುನಿಕ ವಚನ, ಲೇಖನ ಮತ್ತು ಇತರೆ ಪ್ರಕಾರದ ಸಾಹಿತ್ಯ ರಚನೆ ಮಾಡುತ್ತಿರುವ ಲೇಖಕರೆಂದರೆ ಡಾ.ಮಲ್ಲಿಕಾರ್ಜುನ ಎ.ಭಂಡೆ. ಇವರು ಬೀದರ ಜಿ¯್ಲÉಯ ನೂತನ ಕಮಲನಗರ ತಾಲೂಕಿನ *ರಂಡ್ಯಾಳ* ಗ್ರಾಮದ ಅಣ್ಣಾರಾವ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧೦-೬-೧೯೫೧ ರಲ್ಲಿ ಜನಿಸಿz್ದÁರೆ.
ಇವರು ತಮ್ಮ ಪ್ರಾಥಮಿಕ ಶಿP್ಷÀಣವನ್ನು ಔರಾದ ತಾಲೂಕಿನ *ಹಕ್ಯಾಳ*,ಮತ್ತು ‘ಖತಗಾಂವ’ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿ, ಪ್ರೌಢ ಶಿP್ಷÀಣವನ್ನು ಕಮಲನಗರದ ಶಾಂತಿವರ್ಧಕ ಶಿP್ಷÀಣ ಸಂಸ್ಥೆಯ ವಿದ್ಯಾಲಯದಲ್ಲಿ ಎಸ್.ಎಸ್.ಎಲï.ಸಿ.ತೇರ್ಗಡೆ ಹೊಂದಿz್ದÁರೆ. ಮತ್ತು ಪಿ.ಯು.ಶಿP್ಷÀಣವು ಬಿ.ವಿ.ಬಿ ಕಾಲೇಜು ಬೀದರನಲ್ಲಿ ಪೂರೈಸಿ, ಎಂ.ಬಿ.ಬಿ.ಎಸ್.ಪದವಿಯನ್ನು ಬಳ್ಳಾರಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಇವರು ೧೯೭೯ ರಲ್ಲಿ ಮಹಾರಾಷ್ಟçದ ಉದಗಿರನಲ್ಲಿ ‘ಚಿರಾಯು ಕ್ಲಿನಿಕ’ ಎಂಬ ಹೆಸರಿನ ಸ್ವಂತ ಖಾಸಗಿ ದವಾಖಾನೆಯೊಂದು ತೆರೆದು ಉದಗಿರ ನಗರದಲ್ಲಿಯೆ ನೆಲೆಸಿ, ೪೧ ವರ್ಷದಿಂದ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಮಹಾರಾಷ್ಟçದ ನೆಲದಲ್ಲಿ ಖಾಯಂ ನಿವಾಸಿಯಾಗಿ ಕನ್ನಡ ಸಾಹಿತ್ಯ ರಚನೆ ಮಾಡುತ್ತಿz್ದÁರೆ. ಇವರು ‘ಶ್ರೀ ಗುರು ಚನ್ನಮ¯್ಲÉÃಶ್ವರ ಇತಿಹಾಸ’ ಎಂಬ ಚರಿತ್ರೆಯನ್ನು ಮತ್ತು ‘ನನ್ನ ಅನುಭಾವದ ವಚನಗಳು’ ಎಂಬ ಎರಡು ಪುಸ್ತಕಗಳನ್ನು ಬರೆದಿz್ದÁರೆ.
ಇವರ ಬರಹಗಳು ಯಾವುದೇ ಪತ್ರಿಕೆ ಸಮೂಹ ಮಾಧ್ಯಮದಲ್ಲಿ ಪ್ರಕಟ ಹಾಗೂ ಪ್ರಸಾರ ಮಾಡುವ ಗೊಜಿಗೆ ಹೋಗದೆ ಸದಾ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿಯಿಂದ ಬರೆಯುತ್ತಿರುವುದು ತುಂಬ ಹೆಮ್ಮೆ ಪಡುವ ವಿಷಯವಾಗಿದೆ. ‘ಮರಾಠಿ’ ಜನ ಸಮುದಾಯದ ನಡುವೆ ವೈಧ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮಿಕ ಆಧುನಿಕ ವಚನಗಳು ತುಂಬ ಸೊಗಸಾಗಿ ಬರೆದಿz್ದÁರೆ. ಇವರಿಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಬಂದಿರುವುದಿಲ್ಲ.s
ಪೂಜ್ಯ.ಶ್ರೀ ಕರುಣಾದೇವಿ ಮಾತಾ
ಧ್ಯಾತ್ಮಿಕ ದೃಷ್ಟಿಕೋನದಿಂದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿ ಹಾಗೂ ಮಾತಾಜಿಯೆಂದರೆ ಪೂಜ್ಯ ಶ್ರೀ ಕರುಣಾದೇವಿ ಮಾತಾಜಿಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರು (ಹೆಚ್) ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಿಪ್ಪಳಗಿಮಠ ಮತ್ತು ಶ್ರೀಮತಿ ಶರಣಮ್ಮನವರ ಉದರದಲ್ಲಿ ದಿನಾಂಕ ೨೨-೨-೧೯೬೧ರಲ್ಲಿ ಜನ್ಮ ತಳೆದಿದ್ದಾರೆ. ಬಿ.ಎ.ಪದವಿಧರರಾದ ಇವರು ಅಪಾರ ಅಧ್ಯಾತ್ಮಿಕ ಪಾಂಡಿತ್ಯವನ್ನು ಹೊಂದಿ, ವೈರಾಗ್ಯ ಜೀವನದೊಂದಿಗೆ ಸಾಹಿತ್ಯ ದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ, ಹಿಂದಿ,ಮರಾಠಿ, ತೆಲುಗು ಚರ್ತುಭಾಷಾ ಪರಿಣಿತರಾದ ಇವರು ಆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಶರಣರ ಶ್ರೀ ಶೈಲ್’ ಮತ್ತು `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ’ ಎಂಬ ಕವನ ಸಂಕಲನಗಳು, `ಚಿದ್ಘನ್ ಚೆನ್ನಬಸವಣ್ಣ ನವರ ವಚನೇತರ ಸಾಹಿತ್ಯ’ ಎಂಬ ಸಂಪಾದಿತ ಕೃತಿಯು ಪ್ರಕಟಿಸಿದ್ದಾರೆ. ಇವರ `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ’ ಎಂಬ ಕೃತಿ ಚಂದ್ರ ಶೇಖರ ರೆಡ್ಡಿ ಎಂಬುವವರು ತೆಲುಗು ಭಾಷೆಗೆ ಅನುವಾದಿಸಿದ್ದಾರೆ.
ಇವರು ಬರೆದ ಅನೇಕ ಹಾಡುಗಳು ಸಿ.ಡಿ.ರೂಪದಲ್ಲಿ ಧ್ವನಿ ಮುದ್ರಿತಗೊಂಡಿವೆ. ಅವುಗಳಲ್ಲಿ `ತೊಗಲಿಲ್ಲದ ಘನ, `ಶಿವನೇ ಬಸವಣ್ಣನ ನಾದ, `ಸಿದ್ದರಾಮೇಶ್ವರ ವಚನಗಳು, `ಶ್ರೀ ಗಿರಿ ಅಕ್ಕಮಹಾದೇವಿ’ ಇವು ಕನ್ನಡದ ಕೆಲ ರಾಗಸಂಯೋಜಿತ ಹಾಡುಗಳ ಸಿಡಿಗಳಾದರೆ, ಮರಾಠಿಯಲ್ಲಿ `ಬಸವವಾಣಿ’ ಹಿಂದಿಯಲ್ಲಿ `ಬ್ರಹ್ಮಾನಂದ ಭಜನ’ ತೆಲುಗಿನಲ್ಲಿ `ಶ್ರೀ ಅಕ್ಕ ಮಹಾದೇವಿ ವಚನಾಲು’ ಎಂಬ ಸಿ.ಡಿ.ಗಳು.ರಚನೆಯಾಗಿ ಭಕ್ತರ ಮನಸೂರೆಗೊಳಿಸಿವೆ. ಇವರ ವೈರಾಗ್ಯ ಜೀವನದ ಕುರಿತು ಡಾ.ನೀಲಮ್ಮ ಕನ್ನಳ್ಳಿಯವರು ಲೇಖನಗಳು ಬರೆದಿದ್ದಾರೆ. ಸದ್ಯ ಮಾತಾಜಿಯವರು ಶ್ರೀಶೈಲದ ಶ್ರೀ ಅಕ್ಕ ಮಹಾದೇವಿ ಚೈತನ್ಯ ಕೇಂದ್ರದ ಮಹಾತಪಸ್ವಿನಿಯಾಗಿ ಅಧ್ಯಾತ್ಮಿಕ ಜೀವನದಲ್ಲಿ ಅಪಾರ ಪಾಂಡಿತ್ಯ ಹೊಂದಿ ವಚನ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರು ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಖ್ಯಾತಿಯನ್ನು ಪಡೆದು `ಮಹಾ ತಪಸ್ವಿನಿ, `ಅಭಿನವ ಅಕ್ಕ’ ಮತ್ತು ಅಧ್ಯಾತ್ಮಿಕ ಕೋಗಿಲೆ ಎಂಬ ಬಿರುದುಗಳು ಪಾತ್ರರಾಗಿದ್ದಾರೆ.
ಎಂ.ಜಯವAತ ಜ್ಯೋತಿ
ಹೊರನಾಡ ಕನ್ನಡಿಗರಾಗಿ ಮುಂಬೈಯಿAದ ಕನ್ನಡ ಸಾಹಿತ್ಯ ರಚಿಸುತ್ತಿರುವ ಲೇಖಕರೆಂದರೆ ಎಂ.ಜಯವAತ ಜ್ಯೋತಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ (ಹೆಚ್) ಗ್ರಾಮದ ಮಾಣಿಕರಾವ ಮತ್ತು ಸುಂದರಮ್ಮಾ ದಂಪತಿಗಳಿಗೆ ದಿನಾಂಕ ೧-೧೦-೧೯೬೪ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಕಮಲನಗರ ಮತ್ತು ಬೀದರನಲ್ಲಿ ಕೆಲ ವರ್ಷ ವಿಲೇಜ್ ಮೆಡಿಕಲ್ ಸರ್ವಿಸ್ ನಲ್ಲಿ ಅಕೌಂಟೆನ್ಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿದ ಇವರು ಆ ಭಾಷೆಗಳಲ್ಲಿ ಕವನ, ಲೇಖನ, ನಾಟಕ, ಬೀದಿ ನಾಟಕಗಳನ್ನು ಬರೆದಿದ್ದಾರೆ. ಮತ್ತು ಸಂಗೀತ ಪ್ರೀಯರಾಗಿ ಮುಂಬಯಿಯ ಸಿನಿಮಾ ಗಾಯಕರೊಂದಿಗೆ ಒಡನಾಟ ಬೆಳೆಸಿಕೊಂಡು, ಹಾಡುಗಳನ್ನು ಹಾಡುವುದು,ಭಜನೆ ಮಾಡುವುದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲ ಪುಸ್ತಕಗಳು ಬರೆದಿದ್ದಾರೆ. ಅವುಗಳೆಂದರೆ , ೧೯೯೬ರಲ್ಲಿ `ಬಡವರ ಬಂಧು ಸೈನಿಕಾರ’ ಎಂಬ ವ್ಯಕ್ತಿ ಚಿತ್ರಣ.ಇದು ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಸಾಹಿತಿ ಪ್ರಭುಶೇಟ್ಟಿ ಸೈನಿಕಾರ ಕುರಿತು ಬರೆದು ಪ್ರಕಟಿಸಿದರೆ `ದಾರಿ ದೀಪ’ ಎಂಬ ಕವನಸಂಕಲನ ಮತ್ತು `ಅರ್ಟಿಕಲ್ ಟು ನ್ಯೂಜ್ ಲೇಟರ್’ ಎಂಬ ಆಂಗ್ಲ ಭಾಷೆಯ ಕೃತಿಯೊಂದು ಹೊರತಂದಿದ್ದಾರೆ. ಇವರ ಬರಹಗಳು ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕೆಲ ಸ್ಮರಣ ಸಂಚಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಇವರು ಸುಮಾರು ೨೦ ವರ್ಷಗಳಿಂದ ಮುಂಬಯಿಯ ಮೇಥೊಡಿಸ್ಟ ಚರ್ಚಿನಿಂದ ಪಾಸ್ಟರಾಗಿ ಕ್ರೈಸ್ತ ಧರ್ಮದ ಕುರಿತು ಪ್ರಚಾರದಲ್ಲಿದ್ದುಕೊಂಡು ಮುಂಬಯಿ ಮಹಾನಗರಿನಲ್ಲಿ ನೆಲೆಸಿ,ಸಾಹಿತ್ಯ ರಚನೆಯು ಮಾಡುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಡಾ.ಗುರುಲಿಂಗಪ್ಪ ಧಬಾಲೆ
ಗಡಿ ಕನ್ನಡಿಗರಾಗಿ ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕರೆಂದರೆ, ಡಾ.ಗುರುಲಿಂಗಪ್ಪ ಧಬಾಲೆ. .ಇವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ತೊಗಲೂರು ಗ್ರಾಮದ ಶೆಂಕರೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್.ಪಿಎಚ್.ಡಿ.ಪದವೀಧರರಾದ ಇವರು ಮಹಾರಾಷ್ಟç ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆಯ ಸಿ.ಬಿ.ಖೇಡಗಿ ಬಸವೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿದೆಸೆಯಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಹುಲಸೂರು ಬಸವಕುಮಾರ ಶಿವಯೋಗಿ, ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು, ಗಡಿ ನಡಿಯ ಬೆಡಗು, ಶರಣ ಸೊಲ್ಲಾಪುರ, ಕಲ್ಯಾಣ ದೀಪ್ತಿ, ಶರಣ ಶ್ರಾವಣ, ಬಸವಯೋಗಿ, ಕನ್ನಡ ಮರಾಠಿ ಭಾಂಧವ್ಯ ಗಡಿ ಕನ್ನಡಿಗರ ಸಮಸ್ಯೆಗಳು, ಚನ್ನಬಸವ ಕಲ್ಯಾಣ, ವೀರಗಣಾಚಾರಿ ಅಂಬಿಗರ ಚೌಡಯ್ಯ, ಪಂಡಿತಾರಾಧ್ಯ ಚಾರಿತ್ರ ಸಂಗ್ರಹ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಇವರ ಕವನ ಲೇಖನ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿ, ದೂರದರ್ಶನದಲ್ಲಿ ಪ್ರಕಟ,ಪ್ರಸಾರವಾಗಿವೆ. ಹಾಗೂ ಅಕ್ಕಲಕೋಟೆ ಪ್ರಜಾವಾಣಿ ಪತ್ರಿಕೆ ವರದಿಗಾರರಾಗಿ, ಮಹಾರಾಷ್ಟ್ರದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಸಮನ್ವಯಕರಾಗಿ, ಸಂಪಾದಕ,ಪ್ರಧಾನ ಸಂಪಾದಕರಾಗಿ, . ಕೊಲ್ಲಾಪುರ,ಮುಂಬೈ,ಸೊಲ್ಲಾಪುರ, ಗುಲಬರ್ಗಾ ವಿ.ವಿ, ಅಭ್ಯಾಸ ಮಂಡಳಿಯ ಸದಸ್ಯರಾಗಿ, ಸೊಲ್ಲಾಪುರ ವಿ.ವಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಗಡಿನಾಡು ಹೊರನಾಡು ಉಪಸಮಿತಿಯ ಸದಸ್ಯರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಸೊಲ್ಲಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಡಾ.ಧನರಾಜ ಧರಂಪುರ
ಹೊರನಾಡಿನ ತೆಲಂಗಾಣ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರೊಂದಿಗೆ, ಸಾಹಿತ್ಯ ರಚನೆಯಲ್ಲಿ ತೊಡಗಿ, ಕೆಲ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ಧನರಾಜ ಧರಂಪುರ. ಇವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೇಟ್ಟಿ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೨-೫-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಎಲ್.ಎಲ್.ಬಿ. ಎಂ.ಎ.ಎA.ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು ೧೯೯೬ರಲ್ಲಿ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಒಪ್ಪಂದದ ಮೇರೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ೧೨ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೪ರಲ್ಲಿ `ನಮ್ಮ ಶರಣರು’ ೨೦೧೪ರಲ್ಲಿ `ಶರಣ ಸಿರಿ’ ೨೦೧೫ರಲ್ಲಿ `ಅಮರ ದರ್ಪಣ’ ೨೦೧೬ರಲ್ಲಿ `ಸಾಹಿತ್ಯ ಶೋಧ’ ೨೦೧೭ರಲ್ಲಿ `ಮಡಿವಾಳ ಮಾಚಿ ದೇವನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’ ಮತ್ತು ೨೦೧೯ರಲ್ಲಿ `ಸಕಲೇಶ ಮಾದರಸನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’(ಸಂಶೋಧನೆ) ೨೦೧೮ರಲ್ಲಿ `ಹೈದರಾಬಾದ ಜಾನಪದ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ತೆಲುಗು ಭಾಷೆ, ಅಕ್ಷರ, ವ್ಯಾಕರಣ ಛಂದಸ್ಸು ಕಲಿತ ಇವರು ಆ ಭಾಷೆಯಲ್ಲಿ ೨೦೧೫ರಲ್ಲಿ `ಕನ್ನಡ ಮಡೆಳು ಪುರಾಣಂ ವಿಶ್ಲೇಷಣೆ’ ಮತ್ತು `ಮಾಚಯ್ಯನ ದೃಷ್ಟಿಲು ಆತ್ಮ ದೇವುಡು’ ಎಂಬ ಕೃತಿಗಳು ಪ್ರಕಟಿಸಿರುವುದು ವಿಶೇಷವಾಗಿದೆ. ಮತ್ತು ಇವರ ಲೇಖನ, ಬರಹಗಳು ಪ್ರಜಾವಾಣಿ, ಬಸವಪಥ, ಕ್ರಾಂತಿ ಭೂಮಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಸಾಧನೆಗೆ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿದರೆ, ಬೀದರದ ಕರ್ನಾಟಕ ಗಡಿ ಹೋರಾಟ ಸಮಿತಿಯಿಂದ ಗಡಿನಾಡು ಕನ್ನಡಿಗ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಹೈದರಾಬಾದ ಆಕಾಶವಾಣಿಯಲ್ಲಿ ಇವರು ಕನ್ನಡ ಸಾಹಿತ್ಯಕ್ಕೆ ಸಂಬAಧ ಪಟ್ಟ ವಿಷಯಗಳ ಕುರಿತು ಚರ್ಚೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ.
ಡಾ.ರಮೇಶ ಮೂಲಗೆ
ಕರ್ನಾಟಕದ ಗಡಿಯಾಚೆಯಲ್ಲಿ ಕನ್ನಡ ಸಾಹಿತ್ಯದ ಪುಸ್ತಕಗಳು ಪ್ರಕಟಿಸಿದ ಲೇಖಕರೆಂದರೆ ಡಾ.ರಮೇಶ ಮೂಲಗೆಯವರು.ಇವರು ಬೀದರ ತಾಲೂಕಿನ ಮಮದಾಪೂರ ಗ್ರಾಮದ ಹಣಮಂತಪ್ಪಾ ಮತ್ತು ತಾರಮ್ಮ ದಂಪತಿಗಳಿಗೆ ದಿನಾಂಕ ೧ ೬-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ ಪದವಿಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗಿರ ತಾಲೂಕಿನ ಉದಯಗಿರಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಹೊರನಾಡಿನಲ್ಲಿದ್ದುಕೊಂಡು ಕೆಲ ಸಾಹಿತ್ಯ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಸಿಡಿದ ಮುತ್ತುಗಳು’ `ಬೀದರ ಜಿಲ್ಲೆಯ ವೀರಶೈವ ಮಠಗಳು’ `ಹಳೆಂಬರ ಶ್ರೀ ವೀರಭದ್ರಪ್ಪಾ’ `ನಾ ಕಂಡ ಮನೆ’ `ಮಾಣಿಕ್ಯ ದೀಪ್ತಿ’ `ಬೀದರ ಜಿಲ್ಲೆಯ ಬಿಸುವ ಪದಗಳು’ `ಕರುನಾಡ ಸಿರಿ’ `ದಸ್ತಗಿರಿ ದೀಕ್ಷಾ ವಿಧಿ ವಿಧಾನ’ `ಲೇಸನ್ನೆ ಬಯಸಿದರು’ `ಶಿವಬಿಂಬ’. `ಲಲಿತಾರವಿಂದ’ `ಬಾಗಿದ ತಲೆ ಮುಗಿದ ಕೈ’ `ನಮ್ಮ ಶರಣರು’. `ಬಸವ ಪರಿಶೋಧ’ `ಗಡಿನಾಡ ಕನ್ನಡಿಗರು’ `ಅಮರ ದರ್ಪಣ’ `ಸಮತಾ ನಾಯಕ ಬಸವಣ್ಣ’, `ಹೊಸ ಬೆಳಕು’ `ಸತ್ಯ ಹುಡುಕಿದಾಗ’ `ನಡುಗನ್ನಡ ಕವಿ-ಕಾವ್ಯ’ ಇವು ಇವರ ಪ್ರಮುಖ ಕೃತಿಗಳಾಗಿವೆ.
ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಡಿನಾಡು ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಮರಾಠವಾಡ ವಿಶ್ವವಿದ್ಯಾಲಯ ನಾಂದೇಡದ ಪಿ.ಎಚ್.ಡಿ ಮಾರ್ಗದರ್ಶಕರಾಗಿ, ಬೊರ್ಡ ಆಪ್ ನಾಂದೇಡ ಶಿವಾಜಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ `ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಇವರಿಗೆ ೬ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂವಾದಕರಾಗಿ ಪಾಲ್ಗೊಂಡಿದ್ದರು.
ಸರ್ವಮAಗಳಾ ಜಯಶೆಟ್ಟಿ
ವಿದೇಶದ ಇಂಗ್ಲೆAಡಿನಲ್ಲಿ ವಾಸವಾಗಿ, ತಮ್ಮ ವೃತ್ತಿ ಬದುಕಿನೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡಲ್ಲೂ ವಿವಿಧ ಪ್ರಕಾರದ ಸಾಹಿತ್ಯ ರಚಿಸಿ, ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ `ಸರ್ವಮಂಗಳಾ ಜಯಶೆಟ್ಟಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ್ರಖ್ಯಾತ ಅಗ್ರಗಣ್ಯ ಹಿರಿಯ ಸಾಹಿತಿ ಪ್ರೊ.ಭಾಲಚಂದ್ರ ಜಯಶೆಟ್ಟಿ ಮತ್ತು ಪುಷ್ಪಾ ದಂಪತಿಗಳಿಗೆ ದಿನಾಂಕ ೨೪-೧೨-೧೯೭೬ ರಲ್ಲಿ ಜನಿಸಿದ್ದಾರೆ. ಸಾಫ್ಟವೇರ್ ಇಂಜಿನಿಯರಿAಗ್ ಪದವೀಧರರಾದ ಇವರು ಮುಂಬೈನಲ್ಲಿ ೧೧ ವರ್ಷ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೆಜರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸುಮಾರು ೧೦ ವರ್ಷಗಳಿಂದ ಇಂಗ್ಲೆAಡಿನಲ್ಲಿ ವಾಸವಾಗಿರುವ ಇವರು ಅಲ್ಲಿಯ `ಮೈಂಡ್ ಹೆಲ್ತ ಚಾರಿಟೇಬಲ್’ ಎಂಬ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿರುವ ಇವರು ಅವರ ನಾಟಕ, ಕತೆ,ಕವನ ಲೇಖನ, ಲಲಿತ ಪ್ರಬಂಧ,ಚರಿತ್ರೆ ,ಅನುವಾದ ಸಾಹಿತ್ಯವನ್ನು ಓದಿ ಬೆಳೆದವರು. ಅಷ್ಟೇಯಲ್ಲದೆ ಆ ತರಹದ ಸಾಹಿತ್ಯ ರಚಿಸುವಲ್ಲಿ ತುಂಬ ಆಸಕ್ತರಾಗಿ ಕೆಲ ಪುಸ್ತಕಗಳು ಪ್ರಕಟಿದ್ದಾರೆ. ಅವುಗಳೆಂದರೆ ೨೦೦೩ರಲ್ಲಿ `ಸಂಗಣಕ ಸಂಗಾತಿ’ ಇದು ೨೦೧೩ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ಜನಸಾಮಾನ್ಯರಿಗೆ ಕಂಪ್ಯೂಟರ್ ಜ್ಞಾನ ಒದಗಿಸಲು ತುಂಬ ಸಹಕಾರಿಯಾದ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದೆ.. ಮತ್ತು ೨೦೦೪ರಲ್ಲಿ `ಝಾಂಸಿ ರಾಣಿ ಲಕ್ಷ್ಮೀಬಾಯಿ’ ಎಂಬ ಪುಸ್ತಕ ಪ್ರಕಟಿಸಿದ್ದು, ಅದು ಕೂಡ ೨೦೦೮ರಲ್ಲಿ ದ್ವಿತೀಯ, ೨೦೧೮ರಲ್ಲಿ ತೃತೀಯ ಮುದ್ರಣವಾಗಿದೆ. ಹಾಗೆಯೇ ೨೦೦೮ರಲ್ಲಿ `ಮದರ ತೆರೆಸಾ’ ಎಂಬ ಕೃತಿಯು ಪ್ರಕಟಿಸಿದ್ದು ,ಇದು ಕೂಡ ಅದೇ ವರ್ಷ ದ್ವಿತೀಯ ಮುದ್ರಣವು ಕಂಡಿದೆ. ಹಾಗೂ ೨೦೦೬ರಲ್ಲಿ `ಶಿರಡಿ ಸಾಯಿಬಾಬಾ’ ಎಂಬ ಕೃತಿಯು ಪ್ರಕಟಿಸಿದ್ದು, ಈ ಕೃತಿಯು ೨೦೦೮ ಮತ್ತು ೨೦೦೯ ರಲ್ಲಿ ಮರು ಮುದ್ರಣವಾಗಿ ಅಪಾರ ಓದುಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವರು ತಮ್ಮ ಬರಹಗಳನ್ನು ಕನ್ನಡ ಮತ್ತು ಇಂಗ್ಲಿಷ ಎರಡು ಭಾಷೆಗಳಲ್ಲಿ ಬರೆದಿದ್ದಾರೆ. ಅವು ಆಕಾಶವಾಣಿಯಿಂದಲೂ ಪ್ರಸಾರವಾಗಿವೆ.ಅಷ್ಟೇಯಲ್ಲದೆ ಹಲವಾರು ಪ್ರಮುಖ ಕನ್ನಡ,ಮತ್ತು ಆಂಗ್ಲ ಭಾಷೆಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಸದ್ಯ ಇವರು ಇಂಗ್ಲೆAಡ್ ನಲ್ಲಿ ವಾಸವಾಗಿದ್ದಾರೆ.
ಧರ್ಮೇಂದ್ರ ಪೂಜಾರಿ ಬಗ್ದೂರಿ
ಹೊರನಾಡಿನ ತೆಲಂಗಾಣ ಪ್ರದೇಶದಲ್ಲಿ `ಶೋಧವಾಣಿ’ ಎಂಬ ಕನ್ನಡ ದಿನಪತ್ರಿಕೆಯ ಮೂಲಕ ಹೊರನಾಡ ಕನ್ನಡಿಗರರಾಗಿ ಪತ್ರಿಕೆಯ ಪ್ರಧಾನ ಸಂಪಾದರಾಗಿ ಲೇಖಕರಾಗಿ ಗುರುತಿಸಿಕೊಂಡವರೆAದರೆ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ಪಂಡಿತರಾವ ಮತ್ತು ದ್ರೌಪತಿ ಎಂಬ ದಂಪತಿಗಳಿಗೆ ದಿನಾಂಕ ೨೪-೬-೧೯೭೮ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪದವಿ ಪಡೆದು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿರುವ ಇವರು ಪತ್ರಕರ್ತ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕದ ತೆಲಂಗಾಣ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಅಧ್ಯಯನ ಮಾಡಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯದ ಕಡೆಗೆ ಆಸಕ್ತರಾಗಿ ಉತ್ತಮ ಬರಹಗಾರರು ಆಗಿದ್ದಾರೆ. ಮತ್ತು ಈಗಾಗಲೇ `ಜೀವನ ಒಂದು ಪಯಣ’ ಎಂಬ ಕವನ ಸಂಕಲನ, `ತೆಲಂಗಾಣ ಕನ್ನಡ ಕಿರಣ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ೧೯೯೮ರಲ್ಲಿ ಬಸವಕಲ್ಯಾಣದ `ಬಹಿರಂಗ ಸುದ್ದಿ’ ಎಂಬ ಪತ್ರಿಯಲ್ಲಿ ಅಕ್ಷರ ಮೊಳೆ ಜೋಡಿಸಲು ಸುದ್ದಿ ಮನೆ ಸೇರಿ ಇವರು ತಮ್ಮ ಪದವಿ ಶಿಕ್ಷಣ ಕಲಿಯುವುದರೊಂದಿಗೆ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿ ನಂತರ ‘ಶೋಧವಾಣಿ’ ಪತ್ರಿಕೆಯನ್ನು ಹುಟ್ಟು ಹಾಕಿ ಅದರ ಪ್ರಾಧಾನ ಸಂಪಾದಕರಾಗಿ ಹೈದರಾಬಾದ್ ಮತ್ತು ಬೆಂಗಳೂರು ನಗರಗಳಿಂದ ಏಕಕಾಲಕ್ಕೆ ಮುದ್ರಣಗೊಳಿಸುತ್ತಿದ್ದಾರೆ. ಮತ್ತು ಹೈದರಾಬಾದಿನ ವಿಜಯವಾಣಿ ಪತ್ರಿಕೆಯ ವರದಿಗಾರರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತೆಲುಗುನಾಡಿನಲ್ಲಿ ೨೦೦೫ರಿಂದ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ನಾಡು ನುಡಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳು ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ.
ಹೊರರಾಜ್ಯಗಳಿಂದ ಬೀದರಿಗೆ ಬಂದ ಸಾಹಿತಿಗಳು
ಡಾ.ಜಯದೇವಿ ತಾಯಿ ಲಿಗಾಡೆ
ಕರ್ನಾಟಕ ಮತ್ತು ಮಹಾರಾಷ್ಟ್ರ ಸಾಹಿತ್ಯ ಚರಿತ್ರೆಗಳಲ್ಲಿ ಸ್ಥಿರ ಸ್ಥಾಯಿಯಾಗಿ ಉಳಿದ ಕನ್ನಡದ ದಿಟ್ಟ ಮಹಿಳಾ ಸಾಹಿತಿಯೆಂದರೆ, ಜಯದೇವಿ ತಾಯಿ ಲಿಗಾಡೆ. ಇವರು ಮಹಾರಾಷ್ಟ್ರದ ಸೊನ್ನಲಾಪೂರ (ಈಗಿನ ಸೊಲ್ಲಾಪುರ)ದ ಚನ್ನಪ್ಪ ಮಡಕಿ ಮತ್ತು ಸಂಗವ್ವ ವಾರದ ದಂಪತಿಗಳಿಗೆ ದಿನಾಂಕ ೨೩-೬-೧೯೧೨ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರೂ ಕಲಿತದ್ದು ಮರಾಠಿ ಮಾಧ್ಯಮದಲ್ಲಿ ಅದು ೪ನೇ ತರಗತಿಯವರೆಗೆ ಮಾತ್ರ. ೧೯೨೬ರಲ್ಲಿ ೧೪ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಮನೆತನದ ಚನ್ನಮಲ್ಲ ಲಿಗಾಡೆಯವರೊಂದಿಗೆ ವಿವಾಹವಾದ ಇವರು ಮೂರು ಮಕ್ಕಳಾದ ಮೇಲೆ ಸ್ವತಃ ಕನ್ನಡ ಕಲಿತು, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಶರಣ ಸಾಹಿತ್ಯವನ್ನು ಅಧ್ಯಯನ ಮಾಡಿದ್ದಾರೆ. ೧೯೪೬ ರಲ್ಲಿ ಪತಿ ಚನ್ನಮಲ್ಲಪನವರು ಅಕಾಲಿಕ ಮರಣ ಹೊಂದಿದ್ದರು ಧೈರ್ಯ ಗುಂದದೆ ಕನ್ನಡದ ನಾಡು-ನುಡಿಗಾಗಿ ಅನೇಕ ಹೋರಾಟಗಳನ್ನು ಮಾಡಿ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೧೯೬೫ರಲ್ಲಿ `ಸಿದ್ದರಾಮೇಶ್ವರ ಪುರಾಣ’ ಎಂಬ ಮಹಾಕಾವ್ಯ. ೧೯೫೨ರಲ್ಲಿ `ಜಯಗೀತ,’ ೧೯೬೨ರಲ್ಲಿ `ಬಂದೇವು ಕಲ್ಯಾಣಕ, ೧೯೬೮ರಲ್ಲಿ `ತಾರಕ ತಂಬೂರಿ,’ ೧೯೮೬ರಲ್ಲಿ `ಸಾವಿರದ ಪದಗಳು,’ ಮತ್ತು `ಅರಿವಿನಾಗರದಲ್ಲಿ.’ ಎಂಬ ಕೃತಿಗಳು ಕನ್ನಡದಲ್ಲಿ ಪ್ರಕಟಿಸಿದರೆ, ಮರಾಠಿ ಭಾಷೆಯಲ್ಲಿ `ಸಮೃದ್ಧ ಕರ್ನಾಟಕಾಂಚಿ, ರೂಪುರೇಷಾ.’ `ಸಿದ್ದವಾಣಿ,’ `ಬಸವದರ್ಶನ,’ `ಮಹಾಯೋಗಿನಿ,’ `ಸಿದ್ದರಾಮಾಂ ಚಿ ತ್ರಿವಿಧಿ,’ `ಬಸವವಚನಾಮೃತ,’ `ಶೂನ್ಯ ಸಂಪಾದನೆ’ ಸೇರಿದಂತೆ ಹಲವಾರು ಶರಣರ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ. ಮತ್ತು ಮರಾಠಿಯಲ್ಲಿ ಬಸವಣ್ಣ ,ನೀಲಮ್ಮನ ವಚನಗಳು ಅನುವಾದಿಸಿ, ೨೧೫೦ ಪದ್ಯಗಳು ಸ್ವತಂತ್ರವಾಗಿ ರಚಿಸಿದ್ದಾರೆ. ಮತ್ತು ಭಾರತದ ಸ್ವತಂತ್ರ ಚಳವಳಿ ಹೈದರಾಬಾದ ಕರ್ನಾಟಕದ ವಿಮೋಚನೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ದಿಟ್ಟ ಮಹಿಳೆಯಾಗಿ ಗುರುತಿಸಿಕೊಂಡ ಇವರು ಮರಾಠಿಗರ ನೆಲದಲ್ಲಿ `ಮಹಿಳಾ ಜ್ಞಾನ ಮಂದಿರ ಜಯದೇವಿ ಕನ್ಯಾ ಶಾಲಾ’ ಎಂಬ ಶಾಲೆಯನ್ನು ಪ್ರಾರಂಭಿಸಿ, ಸೊಲ್ಲಾಪುರದಲ್ಲಿ ಕನ್ನಡ ಕಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮತ್ತು ಕನ್ನಡದ ಏಕೀಕರಣಕ್ಕಾಗಿ ದೆಹಲಿಯವರೆಗೆ ಕಾಲು ನಡಿಗೆಯಲ್ಲಿಯೇ ಪಾದಾರ್ಪಣೆ ಮಾಡಿರುವುದು ಸಾಮಾನ್ಯ ವಿಷಯವೆನಲ್ಲ. ೧೯೫೦ರಲ್ಲಿ `ಕನ್ನಡ ಕೋಟೆ ಪ್ರಕಾಶನ’ ಸಂಸ್ಥೆಯನ್ನು ಸ್ಥಾಪಿಸಿದ ಇವರು, ಅದರ ಮೂಲಕ ಹಲವಾರು ಕನ್ನಡ ಪುಸ್ತಕಗಳು ಪ್ರಕಟಿಸಿ ಕನ್ನಡ ಚಳುವಳಿಯೆ ಮಾಡಿದ್ದಾರೆ. ಇವರು ಬರೆದ ಸಿದ್ದರಾಮೇಶ್ವರ ಪುರಾಣವೆಂಬ ಆಧುನಿಕ ಮಹಾಕಾವ್ಯವನ್ನು ತ್ರಿಪದಿಯಲ್ಲಿ ಬರೆದಿದ್ದು, ಅದು ಮೊದಲ ಮಹಿಳಾ ಮಹಾಕಾವ್ಯವೆಂಬ ಖ್ಯಾತಿಯು ಪಡೆದಿದೆ. ಇವರು ಹುಬ್ಬಳ್ಳಿ, ತುಮಕೂರಿನಲ್ಲಿ ನಡೆದ ಅಖಿಲ ಭಾರತ ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ, ಉಡುಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷೆಯಾಗಿ, ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷೆಯಾಗಿದ್ದರ ಜೋತೆಗೆ ೧೯೭೪ರಲ್ಲಿ ಮಂಡ್ಯದಲ್ಲಿ ನಡೆದ ೪೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿದ್ದರಿಂದ ಇವರು ಆ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ, ನಾಡು- ನುಡಿಗಾಗಿ ಅವಿರತವಾಗಿ ಹೋರಾಟ ಮಾಡಿದ ಸಾಧನೆಯನ್ನು ಕಂಡು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಸೆನೆಟ್ ಸದಸ್ಯರಾಗಿ ಆಯ್ಕೆ ಮಾಡಿದಷ್ಟೆಯಲ್ಲದೆ ೧೯೭೬ರಲ್ಲಿ `ಗೌರವ ಡಾಕ್ಟರೇಟ್,’ ಮತ್ತು `ಡಿ.ಲಿಟ್,’ ಪದವಿಯನ್ನು ನೀಡಿ ಗೌರವಿಸಿದೆ. ಮತ್ತು ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರು ಮಹಾರಾಷ್ಟ್ರದ ಗಡಿಭಾಗಗಳನ್ನು ಕರ್ನಾಟಕಕ್ಕೆ ಸೇರಬೇಕೆಂದು ಸತತ ಹೋರಾಟಗಳನ್ನು ಮಾಡಿದರು. ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದ್ದರಿಂದ, ತಮ್ಮ ಜೀವಿತದ ಕೊನೆಯ ದಿನಗಳನ್ನು ಕನ್ನಡದ ಮಣ್ಣಿನಲ್ಲಿ ಬೆರೆಯಬೇಕೆಂದು ಬಯಸಿ, `ನನ್ನ ಉಸಿರು ಕನ್ನಡದ ಗಾಳಿಯಲ್ಲಿ ತೆಲಾಡಿ, ದೇಹ ಕನ್ನಡದ ಮಣ್ಣಿನಿಂದ ಒಂದಾಗಿಬೇಕು’ ಎಂದು ಹಂಬಲಿಸಿ ೧೯೮೦ರಲ್ಲಿ ಶರಣರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಇಲ್ಲಿ ೧೯೮೬ ಜುಲೈ ೨೪ ರಂದು ಲಿಂಗೈಕ್ಯರಾಗಿದ್ದು ಅವರ ಸಮಾಧಿ ಬಸವಕಲ್ಯಾಣ ತ್ರಿಪೂರಾಂತದ ನೂತನ ಅನುಭವ ಮಂಟಪದ ಹತ್ತಿರದಲ್ಲಿದೆ.
ದಿ.ಚನ್ನಯ್ಯ ಸ್ವಾಮಿ ಹೀರೆಮಠ
ಬಸವತತ್ವ ಶರಣ ಸಿದ್ದಾಂತದ ಮೆರೆಗೆ ಭಾಲ್ಕಿಯ ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರ ಆರಾಧ್ಯ ಭಕ್ತರಲ್ಲಿ ಪ್ರಮುಖರಾಗಿ ಕಂಡು ಬರುವ ಲೇಖಕರೆಂದರೆ ಶ್ರೀ.ಚನ್ನಯ್ಯ ಸ್ವಾಮಿ ಹೀರೆಮಠ. ಇವರು ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಮಡಿವಾಳಯ್ಯ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳಿಗೆ ದಿನಾಂಕ ೧೬-೧೨-೧೯೩೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಕಮಲನಗರದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಹಿಂದಿ ಭಾಷಾ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತರಾಗಿದ್ದಾರೆ.
ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೆವರ ಅಪಾರ ಶಿಷ್ಯವರ್ಗದವರಲ್ಲಿ ಒಬ್ಬರಾದ ಇವರು ಶ್ರೀಗಳೆಂದರೆ ಅವರಿಗೆ ಪಂಚಪ್ರಾಣ. ಅವರ ತತ್ವ ಸಿದ್ದಾಂತ ದಾರಿ ದೀಪದ ಮೆರೆಗೆ ಜೀವನದುದ್ದಕ್ಕೂ ಆಂಧ್ರಪ್ರದೇಶ (ಈಗಿನ ತೆಲಂಗಾಣ) ರಾಜ್ಯ ತೊರೆದು ಭಾಲ್ಕಿ ಮಠದಲ್ಲಿ ಅಧ್ಯಯನ ಮಾಡಿ ಕಮಲನಗರದಲ್ಲಿ ಬಾಳಿ ಬದುಕಿದವರು. ಇವರು ತೆಲಂಗಾಣದಲ್ಲಿ ಹುಟ್ಟಿರುವುದರಿಂದ ಇವರಿಗೆ ತೆಲುಗು, ಕನ್ನಡ, ಮರಾಠಿ, ಉರ್ದು,ಮೋಡಿ,ಹಿಂದಿ ಭಾಷೆಗಳ ಪರಿಜ್ಞಾನ ಹೊಂದಿದ್ದರು. ಮತ್ತು ಕನ್ನಡ ಮಾತೃಭಾಷೆಯಾಗಿದ್ದು ಆ ಭಾಷೆಯ ಶರಣ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೨೦೦೧ರಲ್ಲಿ `ಬಸವ ಹೃದಯಿ ಚನ್ನಬಸವ’ ಎಂಬ ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರ ಜೀವನ ಚರಿತ್ರೆ, ೨೦೦೯ರಲ್ಲಿ `ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ.’ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಆದರ್ಶ ಉತ್ತಮ ಶಿಕ್ಷಕ ಪ್ರಶಸ್ತಿ, ಭಾಲ್ಕಿ ಮಠದ ಪ್ರಶಸ್ತಿಗಳು ಲಭಿಸಿವೆ. ಇವರು ದಿನಾಂಕ ೨೧-೧೦-೨೦೧೯ರಂದು ಇಹಲೋಕ ತ್ಯಜಿಸಿದ್ದರಿಂದ ಕನ್ನಡ ಶರಣ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಲಕ್ಷ್ಮೀಬಾಯಿ ಪಾಟೀಲ್
ಕನ್ನಡ ಮತ್ತು ಮರಾಠಿಯಲ್ಲಿ ಸಾಹಿತ್ಯ ರಚಿಸಿದ ಕವಯತ್ರಿಯೆಂದರೆ ಲಕ್ಷಿö್ಮÃಬಾಯಿ ಪಾಟೀಲ್. ಇವರು ಮಹಾರಾಷ್ಟ್ರ ಲಾತೂರ ಜಿಲ್ಲೆ ಔಸಾದ ಚನ್ನಪ್ಪಾ ಪುಲಾರೆ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೩-೯-೧೯೪೬ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಡಿ.ಎಡ್.ಮತ್ತು ಹಿಂದಿ ಪದವಿ ಪಡೆದ ಇವರು ೧೯೭೭ರಲ್ಲಿ ಶಿಕ್ಷಕರಾಗಿ ನೇಮಕಗೊಂಡು, ಬಸವಕಲ್ಯಾಣ ತಾಲೂಕಿನ ಗಡಿಗ್ರಾಮ ಕೊಟಮಾಳದಲ್ಲಿ ಸೇವೆಗೆ ಸೇರಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಇವರು ಕಲಿತದ್ದು ಮಾರಾಠಿಯಾದರು ಕನ್ನಡ ಸ್ವಂತ ಅಂಕಲಿಪಿ ಮೂಲಕ ಕಲಿತುಕೊಂಡು ಕನ್ನಡ ಭಾಷೆ, ಸಾಹಿತ್ಯವನ್ನು ಅಧ್ಯಯನ ಮಾಡಿ ೨೦೦೭ರಲ್ಲಿ `ಕಾಲಚಕ್ರ’ ಎಂಬ ಕವನ ಸಂಕಲನ ಕನ್ನಡದಲ್ಲಿ ಬರೆದು ಪ್ರಕಟಿಸಿದ್ದಾರೆ. ಮತ್ತು ಸಾಹಿತಿ ವಿ.ಸಿದ್ದರಾಮಣ್ಣನವರು ರಚಿಸಿದ `ವಿಶ್ವಾತ್ಮ ಬಸವಣ್ಣ’. `ಅಕ್ಕ ಮಹಾದೇವಿ’. `ಕ್ರಾಂತಿ ಕಲ್ಯಾಣ’. `ಮೊಳಿಗೆಯ ಮಾರಯ್ಯ’. `ಮಾದಾರ ಚನ್ನಯ್ಯ’ `ವೀರಾ ಗಣಾದೀಶ ಮಡಿವಾಳ ಮಾಚಿದೇವ’ ಎಂಬ ನಾಟಕಗಳು, ಹಾಗೂ ಬಸವ ಟಿವಿ ಮುಖ್ಯಸ್ಥರಾದ ಈ ಕೃಷ್ಣಪ್ಪಾನವರು ಬರೆದ `ದೇವರ ಸ್ವರೂಪ’ `ಇಷ್ಟಲಿಂಗ ಪೂಜಾ ವಿಧಾನ’ ಎಂಬ ಕೃತಿಗಳು ಕನ್ನಡದಿಂದ ಮರಾಠಿಗೆ ಅನುವಾದಿಸಿದ್ದಾರೆ. `ಹೂಗಾರ ಕಂದ’ ಎಂಬ ಅಂಕಿತದಲ್ಲಿ ನೂರಾರು ಆಧುನಿಕ ವಚನಗಳು ರಚಿಸಿದ್ದಾರೆ. ಇವರ ಕವನ,ಲೇಖನ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಆಕಾಶವಾಣಿ, ಬಸವ ಟಿವಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ತಾಲೂಕು, ಜಿಲ್ಲಾ ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ’ ಮತ್ತು ೨೦೧೪ರಲ್ಲಿ ಲಾತೂರಿನಲ್ಲಿ ನಡೆದ ಬಸವ ಮಹಾಮೇಳದ `ಸಮಾಜ ಭೂಷಣ್ ಪ್ರಶಸಿ’್ತ ಸೇರಿದಂತೆ ಮೊದಲಾದವು ಪಡೆದಿದ್ದಾರೆ.
ಪೂಜ್ಯ. ಶ್ರೀ.ಡಾ. ಬಸವಲಿಂಗ ಪಟ್ಟದ್ದೆವರು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಕಾವ್ಯ, ಚಿಂತನಗಳು ವೈಚಾರಿಕತೆಯ ನೆಲೆಯಲ್ಲಿ ವಚನ ಸಾಹಿತ್ಯವನ್ನು ರಚಿಸಿ ಪುಸ್ತಕ ಪ್ರಕಟಿಸಿದ ಸಾಹಿತಿ ಹಾಗೂ ಮಠಾದೀಶರುಗಳೆಂದರೆ, ಪೂಜ್ಯ. ಶ್ರೀ.ಡಾ.ಬಸವಲಿಂಗ ಪಟ್ಟದೇವರು. ಇವರು ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಶ್ರೀ ರಾಚಪ್ಪ ಕಾಡೋದೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಗಳಿಗೆ ದಿನಾಂಕ ೨೫-೮-೧೯೫೦ರಲ್ಲಿ ಜನಿಸಿದ್ದಾರೆ. ಇವರ ಮೂಲನಾಮ ಶಿವರಾಜು ಎಂದಾಗಿದೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಶ್ರೀಗಳು ಭಾಲ್ಕಿಯ ಶ್ರೀ ಚನ್ನಬಸವ ಪಟ್ಟದ್ದೆವರ ಸನ್ನಿಧಿಯ ಹಾನಗಲ್ ಕುಮಾರೇಶ್ವರರ ಉಚಿತ ಗುರುಪ್ರಸಾದ ನಿಲಯದಲ್ಲಿ ವಿದ್ಯೆಯನ್ನು ಸಂಪಾದಿಸಿ, ಶ್ರೀ ಮಠದಲ್ಲಿ ದಿನನಿತ್ಯ ಕಸಗೂಡಿಸುವುದು,ನೀರು ತರುವ ಕಾಯಕದಲ್ಲಿ ತೊಡಗಿ ಅಧ್ಯಯನ ಮಾಡಿದವರು. ಮುಂದೆ ಇವರು ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರು ಗುರುಗಳಿಗೆ ಪ್ರೀತಿಯ ಶಿಷ್ಯರಾಗಿ ಬೆಳೆದು ನಂತರ ಶ್ರೀ ಮಠದ ಉತ್ತರಾಧಿಕಾರಿಯಾಗಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢ ಶಿಕ್ಷಣವು ಔರಾದನಲ್ಲಿ ಪೂರೈಸಿ, ಪಿ.ಯು.ಮತ್ತು ಪದವಿ ಶಿಕ್ಷಣವನ್ನು ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾದ ಶ್ರೀಗಳು ಕೆಲ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಚೆಂಬೆಳಕು’ ಎಂಬ ಕವನ ಸಂಕಲನ, `ಬಸವ ನೈವೇದ್ಯ’ ಎಂಬ ಚಿಂತನಾ ಕೃತಿ. `ಬಸವ ಜ್ಯೋತಿ’ ಎಂಬ ವಚನ ಸಂಗ್ರಹ, `ಇಷ್ಟಲಿಂಗ ಪೂಜಾ ವಿಧಾನ, `ಬಸವಣ್ಣನಿಂದ ಬದುಕಿತ್ತೇ ಲೋಕವೆಲ್ಲ,’ ಎಂಬ ನಲವತ್ತಕ್ಕೂ ಹೆಚ್ಚು ಕೃತಿಗಳು ಬರೆದಿದ್ದಾರೆ. ಇವರು ಬರೆದ ಕೃತಿಗಳಲ್ಲಿ ಒಂದು ಹಿಂದಿ ಭಾಷೆಗೆ, ೧೭ ಮರಾಠಿ, ೬ ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಸುಮಾರು ೫ ಪ್ರಕಾಶನ ಸಂಸ್ಥೆಗಳನ್ನು ಹುಟ್ಟು ಹಾಕಿದ ಶ್ರೀಗಳು ಆ ಪ್ರಕಾಶನಗಳ ವತಿಯಿಂದ ಒಟ್ಟು ೧೫೫ ಕೃತಿಗಳು ಪ್ರಕಟಿಸಿದ್ದು, ಅವುಗಳಲ್ಲಿ ೨೩ ತೆಲುಗು ಭಾಷೆಯ ಕೃತಿಗಳು ಮುದ್ರಣಗೊಂಡಿವೆ. ಮತ್ತು `ಶರಣ ಬಳಗ’ ಸೇರಿದಂತೆ ೧೮ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೀಗಳು ಅವುಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೨-೯೩ರಲ್ಲಿ ಹೀರೆಮಠ ಸಂಸ್ಥಾನದ ವಿದ್ಯಾಪೀಠ (ಟ್ರಸ್ಟ್) ಸ್ಥಾಪಿಸಿ ಅದರಡಿಯಲ್ಲಿ `ಶ್ರೀ ಚನ್ನಬಸವೇಶ್ವರ ಗುರುಕುಲ’ ವನ್ನು ಪ್ರಾರಂಭಿಸಿ ಕರಡ್ಯಾಳದಲ್ಲಿ ನಡೆಸುತ್ತಿದ್ದಾರೆ. ಅಷ್ಟೇಯಲ್ಲದೆ ೧೮ ಶಿಶು ವಿಹಾರ ಪ್ರಾಥಮಿಕ ಶಾಲೆಗಳು, ೯ ಪ್ರೌಢ ಶಾಲೆಗಳು, ೪ ಪದವಿ ಪೂರ್ವ ಕಾಲೇಜುಗಳು, ೨ ಡಿ.ಇಡಿ.೨ ಬಿ.ಇಡಿ. ಕಾಲೇಜುಗಳು, ೨ ಸಂಗೀತ ಶಾಲೆಗಳು ನಡೆಸುವುದರೊಂದಿಗೆ ಒಂದು ಅನಾಥ ಮಕ್ಕಳ ಕೇಂದ್ರವು ತೆರೆದು ಶೈಕ್ಷಣಿಕವಾಗಿ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಕಂಡು ೨೦೧೦ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದರೆ, ೨೦೧೨ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬಸವ ಪುರಸ್ಕಾರ ಹಾಗೂ ೧೦ ಲಕ್ಷ ನಗದು ಗೌರವಧನವು ನೀಡಿ ಪುರಸ್ಕರಿಸಿದೆ. ಮತ್ತು ಬೆಂಗಳೂರಿನ ವಾರದ ಸ್ಫೋಟ ಪತ್ರಿಕೆಯಿಂದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣ ಶ್ರೀ ಶರಣ ಪ್ರಶಸ್ತಿ, ನಾಗಪುರದ ಡಾ.ಸುಧಾಕರ ಬೋಗಲೆವಾಸ ಬಸವಶ್ರೀ, ಬೆಂಗಳೂರಿನ ಡಿನ್.ಎಸ್.ಮ್ಯಾನ್ ಸಾಹಿತ್ಯ ಪುರಸ್ಕಾರ ಲಭಿಸಿವೆ. ಇವರಿಗೆ ೨೦೦೪ರಲ್ಲಿ ಬೀದರನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಕರ್ನಾಟಕ ಸರ್ಕಾರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ಮತ್ತು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಎಂ.ಜಿ.ದೇಶಪಾAಡೆ
ಸೃಜನಶೀಲ ಸಾಹಿತ್ಯ ರಚಿಸಿ ನಾಡಿನಾದ್ಯಂತ ಪರಿಚಿತರಾದ ಲೇಖಕರೆಂದರೆ ಡಾ.ಎಂ.ಜಿ.ದೇಶಪಾAಡೆ. ಇವರು ಮೂಲತಃ ತೆಲಂಗಾಣದ ಮೆದಕ್ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಮೋರಗಿ ಗ್ರಾಮದ ಗೋವಿಂದರಾವ ದೇಶಪಾಂಡೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೨೧-೩-೧೯೫೨ರಲ್ಲಿ ಜನಿಸಿದ್ದಾರೆ. ಬಿ.ಎ.ವರೆಗೆ ಕನ್ನಡ ಮಾದ್ಯಮದ ಪದವಿಧರರಾದ ಇವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕರಾಗಿ ಬೀದರ ಭಾಲ್ಕಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹುಟ್ಟಿನಿಂದ ಬೀದರದಲ್ಲಿದ್ದುಕೊಂಡು ಕನ್ನಡ ಶಾಲೆ ಕಲಿತು ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ನಾಡು ನುಡಿ ಸೇವೆಗಾಗಿ ತಮ್ಮನ್ನು ತೊಡಿಸಿಕೊಂಡು ೧೯೬೬ರಲ್ಲಿಯೆ ಬರೆಯಲು ಪ್ರಾರಂಭಿಸಿ ೧೯೭೭ರಲ್ಲಿ `ಖ್ಯಾತಿ’ ಎಂಬ ಕೈಬರಹದ `ಲಿಥೋ’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಮತ್ತು ೧೯೭೪ರಲ್ಲಿ ಪ್ರಕಾಶ ಜ್ಯೋತಿ, ಹೂ ಬಾಡಿದಾಗ, ಆಶಾಕಿರಣ, ಸಂತ ಗವಾಯತ್ರಿ ಮೀರಾಬಾಯಿ, (ಕಾದಂಬರಿಗಳು) ಭ್ರಮೆ, ದೇವಯಾನಿ, ಶ್ರಾವಣಿ,ಯಾವುದು ಸತ್ಯ !, ಹೂ ಬಿಡದ ಗೂಲಾಬಿ ಗಿಡ, ಪಾರಿಜಾತ, ಕತೆಯಾದ ಬದುಕು, ಒಡೆದ ಕನ್ನಡಿ, (ಕಥಾ ಸಂಕಲನಗಳು) ಜೀವನ ಇಷ್ಟೇನಾ ? ಮಾಣಿಕ್ಯ ದೀಪ್ತಿ, ಕಾವ್ಯ ಸೌರಭ ಭಕ್ತಿ ಕುಸುಮಾಂಜಲಿ, ಗೀತ ಮಾನಸ, ದೇವನ ಜೋಕಾಲಿ , ದವಳಗಿರಿ, ವಿರಹ ಪ್ರೀತಿ, ವಂಶಿ, ಕಾವ್ಯ ಚಿತ್ರಾಂಬರಿ, ಅನ್ವೇಷಣ, (ಕವನ ಸಂಕಲನಗಳು) ಅಜ್ಜನ ಹಳ್ಳಿ,ಕಾಮನ ಬಿಲ್ಲು, ಚಂದ್ರಹಾರ, (ಮಕ್ಕಳ ಕವನಸಂಕಲನಗಳು) ಹನಿ ಹನಿ ಸುಧೆ, ಒಲವಿನ ಚಿತ್ತಾರಗಳು, ಇಂಚರ, ಹನಿ ಹನಿ ಜೇನ ಹನಿ, (ಹನಿಗವನ ಸಂಕಲನ) ಬದುಕು ಸಾಹಿತ್ಯ ಪ್ರಭು, ಸಾಹಿತ್ಯ ರತ್ನಗಳು, ವಿದುರನಗರಿ, ಚಿಂತನ ಮಂದಾರ (ಲೇಖನ ಸಂಕಲನಗಳು) ಮನಃಸಾಕ್ಷಿ (ಅನುವಾದ) ಪ್ರೀತಿ ತಂದ ಫಜಿತಿ (ನಾಟಕ) ಸದ್ಗುರು ಶ್ರೀಪತಾನಂದ ಮಹಾರಾಜ, ವಿಶ್ವಂಭರಾನAದ ಸ್ವಾಮಿಜಿ, ಶ್ರೀ ಜಗನ್ನಾಥ ಮಹಾರಾಜ, ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ, ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ (ಚರಿತ್ರೆಗಳು) ವಚನ ಚಂದ್ರಿಕೆ, (ಆಧುನಿಕ ವಚನಸಂಕಲನ) ಬೆಳಕಿನ ಹೆಜ್ಜೆಗಳು (ಶಾಹಿರಿ) ಜೀವ ಸೇಲೆ (ಹಾಯ್ಕುಗಳು) ರತ್ನಾ ಕಾಳೆಗೌಡ ಮತ್ತು ಕಾಶಿನಾಥ ಪಾಟೀಲ್ ನಾಗಲಿಂಗ ಕವಿ, ಹರಿದತ್ತಾ ಭಜನಾಮೃತ್ ಸೇರಿದಂತೆ ಹಲವಾರು ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ ದರ್ಶನ ಮತ್ತು ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ, ಜಗನ್ನಾಥ ಮಹಾರಾಜ ಈ ಕೃತಿಗಳು ಹಿಂದಿ, ಇಂಗ್ಲೀಷ ಮತ್ತು ತೆಲುಗು ಭಾಷೆಗೆ ಅನುವಾದಗೊಂಡಿವೆ. ಮತ್ತು ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಹಾಗೂ ಮಹಾರಾಷ್ಟç ನಾಂದೇಡ ರಮಾನಂದ ತಿರ್ಥ ವಿಶ್ವವಿದ್ಯಾಲಯ ಮತ್ತು ಕಲಬುರಗಿ ಬಿಜಾಪೂರ ವಿಶ್ವವಿದ್ಯಾಲಯಗಳಿಂದ ಇವರ ಕೃತಿಗಳು ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಮುದ್ರಣಗೊಂಡಿವೆ. ಇವರಿಗೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು ಅಷ್ಟೇಯಲ್ಲದೆ ೧೬ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಸನ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಎರಡನೇ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಕುರಿತು ಬಸವರಾಜ ದಯಾಸಾಗರ ರವರು `ಅಪರೂಪದ ಸಾಹಿತಿ ಎಂ.ಜಿ. ದೇಶಪಾಂಡೆ’ ಎಂಬ ಕೃತಿ ಪ್ರಕಟಿಸಿದ್ದಾರೆ, ಮತ್ತು `ಸಾಹಿತ್ಯ ಮಂದಾರ’ ಎಂಬುದು ಇವರ ಅಭೀನಂದನಾ ಗೃಂಥವಾಗಿದೆ. ಸದ್ಯ ಇವರು ಬೀದರದ ನಿವಾಸಿಯಾಗಿ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕçತಿ ಪ್ರತಿಷ್ಠಾನ ಮೊದಲಾದ ಸಂಸ್ಥೆಯ ಮೂಲಕ ರಾಜ್ಯದ ಹಲವಾರು ಕವಿ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ.
ರಘುನಾಥ ಹಡಪದ
ವಿಶೇಷವಾಗಿ ತತ್ವಪದ ಮತ್ತು ಜಾನಪದ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪುಸ್ತಕ ಪ್ರಕಟಿಸುತ್ತಿರುವ ಲೇಖಕರೆಂದರೆ ರಘುನಾಥ ಹಡಪದ. ಇವರು ಮೂಲತಃ ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆ ನಾರಾಯಣ ಖೇಡ ತಾಲೂಕಿನ ಚಾಪ್ಪಿ (ಚಪ್ಪಾ ಖದೀಮ) ಗ್ರಾಮದ ಮಲ್ಲಪ್ಪ ಮತ್ತು ಸುಂದ್ರಮ್ಮಾ ದಂಪತಿಗಳಿಗೆ ದಿನಾಂಕ ೨೫-೭-೧೯೬೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ತೆಲುಗು ಮಾಧ್ಯಮದಲ್ಲಿ ಶಿಕ್ಷಣ ಪಡೆದ ಇವರು ೧೯೮೦ರಲ್ಲಿ ಬೀದರ ನಗರಕ್ಕೆ ವಲಸೆ ಬಂದು ಇಲ್ಲೆ ತಮ್ಮ ಮೂಲ ಉದ್ಯೋಗವೇ ವೃತ್ತಿಯಾಗಿ ಮಾಡಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿ ಪ್ರದೇಶದಲ್ಲಿ ಹೊಂದಿ ಕೊಂಡಿರುವ ಇವರ ಹುಟ್ಟೂರು ಚಪ್ಪಿಯಲ್ಲಿ ಇವರದು ಕನ್ನಡ ಮಾತೃಭಾಷೆ ಕುಟುಂಬವಾಗಿದೆ ಆದರೆ ಇವರು ಶಿಕ್ಷಣ ಕಲಿತದ್ದು ಮಾತ್ರ ತೆಲುಗು. ಬದುಕಿಗೆ ವ್ಯವಹಾರಿಕ ಭಾಷೆ ಕನ್ನಡವಾಗಿದ್ದರಿಂದ ಇವರು ಅನಿವಾರ್ಯವಾಗಿ ಸ್ವಯಂ ಕಲಿಕೆಯಿಂದ ಕನ್ನಡ ಲಿಪಿ ಮತ್ತು ಭಾಷೆ ಕಲಿತು ಕನ್ನಡ ಸಾಹಿತ್ಯದಲ್ಲಿಯೂ ಕೆಲವು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೨೦೧೩ರಲ್ಲಿ `ನಿರಂಜನರ ತತ್ವಪದಗಳು’ (ತತ್ವಪದ) ಮತ್ತು `ನಿಟ್ಟೂರಿನ ಮಜಿಗೆಪ್ಪ ಮುತ್ಯಾ (ಚರಿತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಯೋಗ ಸಿದ್ದಾಂತ’ `ಬ್ಯಾಲಹಳ್ಳಿಯ ಕರಿಬಸವೇಶ್ವರ ಬದುಕು ಬರಹ’ `ನಿಜಾನಂದ ತತ್ವ ಪದಗಳು ‘ `ಅಲ್ದೀಯ ತತ್ವ ಪದಗಳು’. `ಬೀದರ ಜಿಲ್ಲೆಯ ಆಯ್ದ ತತ್ವಪದಗಳು ‘ `ಜ್ನಾನನಂದಾ ಭಜನ ಮಾಲೆ’ `ಬೀದರ ಜಿಲ್ಲೆಯ ಅಭಂಗ ತತ್ವಪದಗಳು’, `ಜಾನಪದ ಇತಿಹಾಸದಲ್ಲಿ ತತ್ವಪದ ಸಾಹಿತ್ಯ ಪರಂಪರೆ’, `ಧರಿನಾಡಿನ ತತ್ವಪದ ಸಾಹಿತ್ಯ’ `ಮುಗಳಿ ಕಾಶಪ್ಪನವರ ಉಲ್ಲಾಸ ಲಹರಿ’ ಇವು ಅವರು ಸಂಪಾದಿಸಿದ ಕೃತಿಗಳಾಗಿವೆ. ಮತ್ತು `ಮನೋ ಬೋಧಾಮೃತ ‘ `ಮಹಾಮೌನ ಶತಕ’ `ಬೀದರ ಜಿಲ್ಲೆಯ ಮಹಾತ್ಮರು’ `ಸಿದ್ದಪ್ರಭು ಗಳ ಅನುಭವ ಪದಗಳು’ `ಪರಮಾರ್ಥ ಪಥ ಪ್ರದೀಪ’ ಎಂಬ ಕೃತಿಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ. ಇವರ ತತ್ವಪದಗಳು ಕಲಬುರಗಿ ಆಕಾಶವಾಣಿ ದೂರದರ್ಶ ನದಲ್ಲಿಯೂ ಪ್ರಸಾರವಾಗಿವೆ. ಮತ್ತು ಹಲವಾರು ಸಾಹಿತ್ಯ ಸಭೆ ಸಮಾರಂಭಗಳಲ್ಲಿ ತಮ್ಮ ಸಾಹಿತ್ಯವನ್ನು ಪ್ರಸಾರ ಮಾಡಿದ್ದಾರೆ. ಇವರಿಗೆ ೨೦೦೯ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ೨೦೧೨ರಲ್ಲಿ ಧರಿನಾಡು ಕನ್ನಡ ಸಂಘದ ವತಿಯಿಂದ ಪ್ರಥಮ ತತ್ವಪದಕಾರರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರಿಗೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರಿAದ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಇವರು ತಮ್ಮ ಕಾಯಕದೊಂದಿಗೆ ತತ್ವಪದ, ಜಾನಪದ, ಮತ್ತು ಅಧ್ಯಾತ್ಮಿಕ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.
ಗುರುನಾಥ ಗಡ್ಡೆ
ಸಾಹಿತಿ ಹಾಗೂ ಪತ್ರಕರ್ತ ಮತ್ತು ಸಂಪಾದಕರಾಗಿ ಬಹುಕಾಲ ಗುರ್ತಿಸಿಕೊಂಡ ಲೇಖಕರೆಂದರೆ ಗುರುನಾಥ ಗಡ್ಡೆಯವರು. ಇವರು ತೆಲಂಗಣದವರಾಗಿದ್ದು ಅಣ್ಣೆಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೪-೧೯೬೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಬಸವಕಲ್ಯಾಣದ ಎಸ್.ಎಸ್.ಕೆ.ಬಿ. (ಜೆಓಸಿ) ಕಾಲೇಜಿನ ಪ್ರಾಯೋಗಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬಾಲ್ಯದಿಂದಲೂ ಕವನ, ಲೇಖನ, ಬರಹಗಳು ಬರೆದು ಪತ್ರಕರ್ತರಾಗಿ ಹೆಚ್ಚು ಚಿರಪರಿಚಿತರು. ಬಸವಕಲ್ಯಾಣದಲ್ಲಿ `ಬಹಿರಂಗ ಸುದ್ದಿ’ ಎಂಬ ಕನ್ನಡ ದಿನಪತ್ರಿಕೆ ತೆಗೆದು ೩೦ವರ್ಷ ಕ್ಕಿಂತಲೂ ಹೆಚ್ಚು ಕಾಲ ಪತ್ರಕಾ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿ ಹಲವಾರು ಸಾಹಿತ್ಯಿಕ ಕೃತಿಗಳು ಹೊರತಂದಿದ್ದಾರೆ. ೧೯೮೬ರಲ್ಲಿ `ಶರಣರ ನುಡಿ ಮುತ್ತುಗಳು’ ೧೯೯೧ರಲ್ಲಿ `ಕಲ್ಯಾಣ ದರ್ಶನ,’ ೧೯೯೨ರಲ್ಲಿ `ಚೆಂಬೆಳಕು,’ (ಸ್ಮರಣ ಸಂಚಿಕೆಗಳು) ೨೦೦೩ರಲ್ಲಿ `ಶರಣ ಸಂಸ್ಕೃತಿ ದರ್ಶನ’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಕವನ ಲೇಖನ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿದ್ದಾರೆ.
ಪರಮ.ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿ
ಧಾರ್ಮಿಕ, ಅಧ್ಯಾತ್ಮಿಕ ಶರಣ ಸಾಹಿತ್ಯ ಮತ್ತು ಸಂಶೋಧನಾ ಕೃತಿಗಳು ರಚಿಸಿದ ಪ.ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿಯವರು ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ ಸಲಗರ ಗ್ರಾಮದ ಶ್ರೀ ಸಿದ್ರಾಮಪ್ಪಾ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಉದರದಲ್ಲಿ ದಿನಾಂಕ ೭-೮-೧೯೭೮ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ಯಿಂದ ಸಂಸ್ಕೃತ ದಲ್ಲಿ ಅಧ್ಯಯನ ಮಾಡಿದ ಇವರು ಎಂ.ಎ. ಪಿ.ಎಚ್.ಡಿ ಪದವೀಧರರಾಗಿದ್ದಾರೆ. `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಪ.ಪೂಜ್ಯ. ಶ್ರೀ. ಸದಾನಂದ ಮಹಾಸ್ವಾಮಿಗಳು ಇವರ ಗುರುಗಳಾಗಿದ್ದು ೧೯೮೭ರಲ್ಲಿ ಬಸವಕಲ್ಯಾಣ ತಾಲೂಕಿನ ಸಸ್ತಾಪೂರಕ್ಕೆ ಆಗಮಿಸಿ, ಇಲ್ಲಿ ಸದ್ಗುರು ಶರಣ ಶಿವಲಿಂಗೇಶ್ವರ ಮಠ ಸ್ಥಾಪಿಸಿದರು. ಶ್ರೀಗಳು ಸಸ್ತಾಪೂರ ಮತ್ತು ಸುರಪುರ ತಾಲೂಕಿನ ಮುದೆನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದು, ಕನ್ನಡ ಸಾಹಿತ್ಯಯಲ್ಲಿ ಆಸಕ್ತರಾಗಿ ೨೦೧೦ರಲ್ಲಿ `ವಚನ ಸಾಹಿತ್ಯ ದ ಸಾರ್ವಭೌಮ ದೇವರ ದಾಸಿಮಯ್ಯ’, ಮತ್ತು ೨೦೧೪ರಲ್ಲಿ `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ’ (ಸಂಶೋಧನೆ) ೨೦೧೫ರಲ್ಲಿ `ರಮೇಶ ಬಾಬು ಯಾಳಗಿಯವರ ಕೃತಿಗಳ ವಿಮರ್ಶೇ’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹೊರ ಜಿಲ್ಲೆಗಳಿಂದ ಬಂದ ಸಾಹಿತಿಗಳು
ಲಿಂ.ಪೂಜ್ಯ. ಶ್ರೀ. ಸಿ.ಜಿ.ಸ್ವಾಮಿಗಳು
ಜ್ಯೋತಿಷಿ, ಕವಿ, ಕಲಾವಿದ, ಸಾಹಿತಿ ಮಠಾಧೀಶರೆಂದರೆ, ಪೂಜ್ಯ. ಶ್ರೀ. ಸಿ.ಜಿ.ಸ್ವಾಮಿಗಳು. ಇವರು ಮೂಲತಃ ಸೇಡಂ ತಾಲೂಕಿನ ದೇವನೂರಿನ ನರಸಪ್ಪ ಮತ್ತು ಯಂಕಮ್ಮ ದಂಪತಿಗಳಿಗೆ ದಿನಾಂಕ ೨೫-೧೦-೧೯೦೧ರಲ್ಲಿ ಜನಿಸಿದ್ದಾರೆ. ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೆಮಳಖೇಡದ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿಗಳಾಗಿದ್ದರು. ಮತ್ತು ದಲಿತ ಜನರಿಗೆ ಲಿಂಗ ದೀಕ್ಷೆಯನ್ನು ನೀಡಿ ಶರಣ ಸಂಸ್ಕಾರವನ್ನು ನೀಡಿರುವ ಇವರು ಸಾಹಿತಿಗಳಾಗಿ `ರಾಜ ನೀತಿ,’ ಮತ್ತು `ಭಕ್ತ ಮಾರ್ಕಂಡೇಯ’ ಎಂಬ ನಾಟಕಗಳನ್ನು ರಚಿಸಿ ಅವುಗಳ ಪ್ರದರ್ಶನಕ್ಕೆ ನಿರ್ದೇಶನ ಮಾಡಿದ್ದಾರೆ. ಅಷ್ಟೇಯಲ್ಲದೆ ಹಲವಾರು ವಚನ, ತತ್ವಪದಗಳು ಬರೆದಿದ್ದಾರೆ. ಇವರು ಉತ್ತಮ ಸಂಗೀತಗಾರರು ಹಾಗೂ ಹಾರ್ಮೋನಿಯಂ ವಾದಕರಾಗಿದ್ದರಿಂದ ೨೦೦೧ರಲ್ಲಿ ಶ್ರೀಗಳಿಗೆ ತುಲಾಭಾರ ಮಾಡಿ ಅವರ ಕುರಿತಾದ ಕಿರು ಪರಿಚಯ ಪುಸ್ತಕವು ಪ್ರಕಟಿಸಲಾಗಿದೆ.
ಪರಮ ಪೂಜ್ಯ. ಡಾ.ಶಿವಕುಮಾರ್ ಮಹಾಸ್ವಾಮಿಗಳು
ಧಾರ್ಮಿಕ ಮತ್ತು ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಕೃತಿಗಳು ರಚಿಸಿದ ಸಾಹಿತಿ ಹಾಗೂ ಮಠಾಧೀಶರಾದ ಪರಮ ಪೂಜ್ಯ. ಡಾ.ಶಿವಕುಮಾರ ಮಹಾಸ್ವಾಮಿಗಳು. ಇವರ ಮೂಲನಾಮ `ವೀರಕುಮಾರ’ ಎಂದಾಗಿದೆ. ಇವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡನೂರು ಗ್ರಾಮದ ಶ್ರೀ ಕಲ್ಲಪ್ಪ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳ ಉದರದಲ್ಲಿ ದಿನಾಂಕ ೧೬-೧೧-೧೯೪೫ರಲ್ಲಿ ಜನಿಸಿದ್ದಾರೆ. ಎಂ.ಎ.ತತ್ವಶಾಸ್ತ್ರ ಅಧ್ಯಯನ ಮಾಡಿದ ಇವರು ಬೀದರದ ಶ್ರೀ ಸಿದ್ಧರೂಢ ಮಠ ಚಿದಂಬರಾಶ್ರಾಮದ ಪೀಠಾಧ್ಯಕ್ಷರಾಗಿದ್ದು ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಆಳವಾದ ಅಧ್ಯಯನ ಮತ್ತು ವೈಚಾರಿಕ ಚಿಂತನೆಯಿAದ ಉತ್ತಮ ವಾಗ್ಮಿಗಳು ಹಾಗೂ ಪ್ರವಚನಕಾರರು ಆಗಿದ್ದು ತಮ್ಮ ಅನುಭಾವದೊಂದಿಗೆ ಹಲವು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೧೯೭೧ರಲ್ಲಿ `ಗೀತೆಯ ಸ್ಥಿತಿ ಪ್ರಜ್ಯೋಪನಿಷತ್, ೧೯೮೧ರಲ್ಲಿ `ಅಷ್ಟಾವರಣ,’ ೧೯೮೨ರಲ್ಲಿ `ಅನುಭವ ಸಾರ ಭಾಗ-೧, ೧೯೮೩ರಲ್ಲಿ `ಶಿವ ಸ್ತುತಿ, ೧೯೮೭ರಲ್ಲಿ `ಜಪಜ್ಞಾನ, ೧೯೮೮ರಲ್ಲಿ `ಮೃತೋರ್ಮಾಮೃತಂಗಮಯ ಭಾಗ-೧, ೧೯೯೦ರಲ್ಲಿ `ಪೂಜಾಯೋಗ, ೧೯೯೬ರಲ್ಲಿ `ಭಜಗೋವಿಂದA, ೧೯೯೬ರಲ್ಲಿ `ಮೃತೋರ್ಮಾಮೃತಂಗಮಯ ಭಾಗ -೨, ಮತ್ತು `ಶತ ಕಥಾ ಕುಸುಮಾಂಜಲಿ, ಹಾಗೂ `ಅನುಭವ ಸಾರ ಭಾಗ -೨, ೨೦೦೪ರಲ್ಲಿ `ವೇದಾಂತಿ ಸಾರ’ ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ `ವೇದಾಂತ ವಾಗೀಶ, ಗೀತೋತ್ತಮ, ಶಿವಾದ್ವೈತ.’ ಎಂಬಿತ್ಯಾದಿ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಪಂಚಾಕ್ಷರಿ ಜಿ.ಹಿರೇಮಠ
ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಲೇಖಕರೆಂದರೆ ಪಂಚಾಕ್ಷರಿ ಜಿ.ಹಿರೇಮಠ. ಇವರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗರಸಂಗಿ ಗ್ರಾಮದ ಗುರುಸಂಗಯ್ಯಾ ಮತ್ತು ಸಂಗನಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೨೧-೧೨-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು ೧೯೭೪ರಲ್ಲಿ ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿ ೨೦೧೦ರಲ್ಲಿ ನಿವೃತ್ತರಾಗಿದ್ದಾರೆ.
ಇವರು ೧೯೯೧ರಲ್ಲಿ `ಇಷ್ಟಲಿಂಗ ವೈಜ್ಞಾನಿಕ ಸಮೀಕ್ಷೆ’ ೨೦೦೧ರಲ್ಲಿ `ಮಿನುಗು ನಕ್ಷತ್ರಗಳು’ ೨೦೦೪ ರಲ್ಲಿ `ನಮ್ಮ ಶೈಕ್ಷಣಿಕ ಸಮೀಕ್ಷೆ’ ಎಂಬ ಲೇಖನ ಕೃತಿಗಳು, ೨೦೦೪ರಲ್ಲಿ `ಧರಿನಾಡಿನ ಕಥನ ಗೀತೆಗಳು’ ಎಂಬ ಸಂಪಾದನೆ, `ಬಸವಕಲ್ಯಾಣ ಬೆಳಗು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆÀ ೧೯೯೦ರಲ್ಲಿ ನವದೆಹಲಿಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ, ೨೦೨೦ರಲ್ಲಿ ಹಾರಕೂಡ ಸಂಸ್ಥಾನದಿAದ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿಗಳು ಪಡೆದಿದ್ದು, ೨೦೦೪ರಲ್ಲಿ ಬಸವಕಲ್ಯಾಣ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಲೇಖನ, ಬರಹಗಳು ಸತ್ಯಕಾಮ, ಸಂಯುಕ್ತ ಕರ್ನಾಟಕ, ಬಹಿರಂಗ ಸುದ್ದಿ ಮೊದಲಾದ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ದಿ.ವೀರೇAದ್ರ ಸಿಂಪಿ
ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಹಿರಿಯ ಸಾಹಿತಿಯೆಂದರೆ ವೀರೇಂದ್ರ ಸಿಂಪಿ. ಇವರು ಬಿಜಾಪುರ ಜಿಲ್ಲೆಯ ನೂತನ ಚಡಚಣ ತಾಲ್ಲೂಕಿನ ಜಾನಪದ ತಜ್ಞರಾದ ಸಿಂಪಿ ಲಿಂಗಣ್ಣ ಮತ್ತು ಸೊಲಬವ್ವ ದಂಪತಿಗಳಿಗೆ ದಿನಾಂಕ ೧೪-೧೦-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ೧೯೬೨ರಲ್ಲಿ ಬೀದರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೯೯ರಲ್ಲಿ ನಿವೃತ್ತಿರಾಗಿ ನಾಲ್ಕು ವರ್ಷ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ‘ಖೊಟ್ಟಿ ನಾಣ್ಯ’ ಎಂಬ ಮೊದಲ ಕಥೆ ಬರೆದು ‘ಸಂಗಮ’ ಎಂಬ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿತವಾಗಿದೆ. `ಏಕಲವ್ಯ’ ಎಂಬ ಹಿಂದಿ ನಾಟಕ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ‘ಅಸಂತೋಷವೇಕೆ ?’ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದರು. ಇವರು ಬರೆದ ಲೇಖನ, ಪ್ರಬಂಧ, ಅಂಕಣ, ಕಥೆ, ವಿಮರ್ಶೆ ಮೊದಲಾದ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತವಾಗಿವೆ. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ. ಇವರು ಪ್ರಮುಖ ಪ್ರಬಂಧಕಾರರು ಮತ್ತು ಅಂಕಣಕಾರರೆAದೇ ಪ್ರಸಿದ್ಧಿಯಾಗಿದ್ದಾರೆ. ಮತ್ತು `ಕಾಗದದ ಚೂರು,’ `ಭಾವ ಮೈದುನ,’ `ಸ್ವಚ್ಛಂದ ಮನದ ಸುಳಿಗಾಳಿ,’ `ಪರಸ್ಪರ ಸ್ಪಂದನ,’ (ಲಲಿತ ಪ್ರಬಂಧ ಸಂಕಲನಗಳು) `ಆಯ್ದ ಲಲಿತ ಪ್ರಬಂಧಗಳು.,’ `ಚನ್ನಬಸವಣ್ಣನವರ ವಚನಗಳು,’ `ಬೀದರ ಜಿಲ್ಲಾ ದರ್ಶನ,’ `ಬೀದರ ಜಿಲ್ಲಾ ಸ್ವಾತಂತ್ರ‍್ಯ ಹೋರಾಟಗಾರರು,’ (ಸಂಪಾದನೆ) `ಜೀವನವೆಂದರೇನು ?’ (ಅಂಕಣ) `ಸುಖಸಾಧನ’ (ವೈಚಾರಿಕ) `ಚೆನ್ನಬಸವಣ್ಣ ಮತ್ತು ಆಯ್ದಕ್ಕಿ ಲಕ್ಕಮ್ಮ’ (ವಚನ ಸಾಹಿತ್ಯ) `ಯೋಗಾರಂಭ’ ‘ಗಾಯ ಡಿ ಮೊಪಾಸನ ಕಥೆಗಳು’ (ಅನುವಾದ) ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆರ್.ವಿ. ಬೀಡಪ್, (ಚರಿತ್ರೆ) ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ, ಹತ್ತು ಪಾಶ್ಚಾತ್ಯ ಕಾದಂಬರಿಕಾರರು. ಬಣ್ಣಗಾರಿಕೆ ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಭಾವ ಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನವು ಲಭಿಸಿದೆ, `ಸ್ವಚ್ಛಂದ ಮನದ ಸುಳಿಗಾಳಿ’ ಎಂಬ ಪ್ರಬಂಧ ಸಂಕಲನವು ಕರ್ನಾಟಕ,ಗುಲಬರ್ಗಾ, ಶಿವಾಜಿ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ.ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪ್ರಕಟವಾಗಿದೆ. `ಪರಿಸರ ಸ್ಪಂದನ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ. ಬಹುಮಾನ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ಲಭಿಸಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ವಿಜಾಪುರ ಮತ್ತು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ೨೦೦೭ರಲ್ಲಿ ಸಾಹಿತಿ ಡಾ.ರಮೇಶ ಮೂಲಗೆ ಅವರ `ಲಲಿತಾರವಿಂದ’ ಎಂಬ ಅಭಿನಂದನ ಗ್ರಂಥವು ಪ್ರಕಟಿಸಿದ್ದಾರೆ. ಇವರು ದಿನಾಂಕ ೩೧-೫-೨೦೧೭ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊAದು ಕಳಚಿದಂತಾಗಿದೆ.
ಮಾನಶೆಟ್ಟಿ ಬೆಳಕೇರಿ
ಹಿರಿಯ ಮಕ್ಕಳ ಸಾಹಿತಿಗಳಾಗಿ ಕಂಡು ಬರುವ ಕವಿ, ಸಾಹಿತಿ ಲೇಖಕರೆಂದರೆ ಮಾನಶೆಟ್ಟಿ ಬೆಳಕೇರಿ. ಇವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾ ಇದಲಾಯಿ ಎಂಬ ಗ್ರಾಮದ ಶ್ರೀ ಸಿದ್ದಪ್ಪ ಮತ್ತು ಶ್ರೀಮತಿ ಭೋಗಮ್ಮ ದಂಪತಿಗಳಿಗೆ ದಿನಾಂಕ ೧೨-೨-೧೯೪೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್ ಪದವಿಧರರಾದ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೧೯೬೫ರಲ್ಲಿ `ಹೂಗೊಂಚಲು’ ಮತ್ತು ೧೯೮೪ರಲ್ಲಿ `ಮತ್ತೆ ಬಂತು ವಸಂತ’ (ಮಕ್ಕಳ ಕವನಸಂಕಲನಗಳು) ೨೦೧೫ರಲ್ಲಿ `ಕರ್ನಾಟಕ ವಿಮೋಚನೆ’ (ಲೇಖನ ಕೃತಿ) ೨೦೧೬ರಲ್ಲಿ `ಬೆಳಕೇ ರಿ’ (ಚುಟುಕುಗಳ ಸಂಕಲನ) ೨೦೧೭ರಲ್ಲಿ `ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸ’ ಮತ್ತು `ಕನ್ನಡ ಕುಲಗುರು ಬಸಪ್ಪ ಕರಕಾಳೆ’ ಹಾಗೂ ೨೦೧೯ರಲ್ಲಿ ‘ಹನುಮಾಯಣ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ‘ಪೊಲೀಸ್ ಮದುವೆ’ ಎಂಬ ನಾಟಕ, ‘ಹುಗ್ಗಿ- ಸುಗ್ಗಿ’ ಎಂಬ ಕಥಾ ಸಂಕಲನ, ‘ಅಂಕುರ’ ಎಂಬ ಕಾದಂಬರಿ ಬರೆದಿದ್ದು ಅವು ಅಪ್ರಕಟಿತವಾಗಿವೆ. ಹಾಗೂ ಇವರು ಕಾವ್ಯ, ಪದ್ಯ, ಕಥನ ಕವನ, ಅಕರಾದಿ ಪಂದ್ಯ, ವಿಡಂಬನೆ, ಹಾಸ್ಯ, ಮೊದಲಾದ ಸೃಜನಶೀಲ ಬರಹಗಳನ್ನು ಬರೆದಿದ್ದಾರೆ. ಅವು ನಾಡಿನಾದ್ಯಂತ ಹಲವಾರು ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ,ಪ್ರಸಾರವಾಗಿವೆ. ಮತ್ತು ಇವರು ನಟ ಅನಂತನಾಗ ನಟಿಸಿದ `ಬರ’ ಚಲನ ಚಿತ್ರದಲ್ಲಿಯು ನಟಿಸಿ ಕಲಾವಿದರಾಗಿಯು ಗುರ್ತಿಸಿ ಕೊಂಡಿದ್ದಾರೆ. ಆದ್ದರಿಂದ ಇವರ ಕಲೆ, ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೧೯೮೪ರಲ್ಲಿ ಕಲಬುರಗಿಯಿಂದ `ಯುವ ಮಕ್ಕಳ ಸಾಹಿತಿ’ ಎಂಬ ಪ್ರಶಸ್ತಿ, ೨೦೦೬ ರಲ್ಲಿ ಡಾ.ಅಬ್ದುಲ್ ಕಲಾಮ್ ವಿಜನ್ ವತಿಯಿಂದ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕವನವು ವಾಚನ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಇವರು ಬೀದರನಲ್ಲಿ ವಿಶ್ರಾಂತ ಜೀವನ ನಡೆಸುವುದರೊಂದಿಗೆ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ದಿ. ಸೂಗಯ್ಯ ಹಿರೇಮಠ
ಕವಿ, ಸಾಹಿತಿ, ವಿಮರ್ಶಕರಾಗಿ ಕೆಲ ಕೃತಿಗಳು ಪ್ರಕಟಿಸಿದ ಹಿರಿಯ ಸಾಹಿತಿಯೆಂದರೆ, ದಿ..ಸೂಗಯ್ಯ ಹೀರೆಮಠ. ಇವರು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಶರಣಯ್ಯ ಹಿರೇಮಠ, ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೯-೫-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ ಸ್ನಾತಕೋತ್ತರ ಪದವಿಧರಾದ ಚಿಂಚೋಳಿಯ ಶ್ರೀಮತಿ ಚನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ಮತ್ತು ಬೀದರದ ಬಿ.ವಿ ಭೂಮರೆಡ್ಡಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಸಾಹಿತ್ಯ ಮತ್ತು ಜಾನಪದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಹಾಗೂ ಗುಲಬರ್ಗಾ ಯು.ಜಿ.ಸಿ. ಅಡಿಯಲ್ಲಿ ಉತ್ತರ ಕರ್ನಾಟಕದ ಜನಪದ ಸಾಹಿತ್ಯ ಸಂಗ್ರಹದ ಕಾರ್ಯ ಮಾಡಿ `ಗುಲಬರ್ಗಾ ಜಿಲ್ಲೆಯ ಜನಪದ ವೈದ್ಯಕೋಶ, (ಸಂಶೋಧನೆ) `ಉಂಡು ಮಲಗಿದವರು’ `ನೀರುಣಿಲೆ’ (ಕವನ ಸಂಕಲನಗಳು) `ನಿಜಗುಣಾರ್ಯ ವಿರಚಿತ ಪಂಚಾAಗ’ (ಸಂಪಾದನೆ) `ಹುಮನಾಬಾದ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ (ವಿಮರ್ಶೆ) `ಅಂತರ’ (ಕಥಾ ಸಂಕಲನ) `ಉರಿಲಿಂಗಪೆದ್ದಿ’ (ಚರಿತ್ರೆ) ಸೇರಿದಂತೆ ಮೊದಲಾದ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಇವರು ದಿನಾಂಕ ೨೧-೧೧-೨೦೧೭ರಂದು ನಿಧನರಾಗಿರುವುದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಪಂಚಾಕ್ಷರಿ ಜಿ.ಹಿರೇಮಠ
ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಲೇಖಕರೆಂದರೆ ಪಂಚಾಕ್ಷರಿ ಜಿ.ಹಿರೇಮಠ. ಇವರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗರಸಂಗಿ ಗ್ರಾಮದ ಗುರುಸಂಗಯ್ಯಾ ಮತ್ತು ಸಂಗನಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೨೧-೧೨-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು ೧೯೭೪ರಲ್ಲಿ ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿ ೨೦೧೦ರಲ್ಲಿ ನಿವೃತ್ತರಾಗಿದ್ದಾರೆ.
ಇವರು ೧೯೯೧ರಲ್ಲಿ `ಇಷ್ಟಲಿಂಗ ವೈಜ್ಞಾನಿಕ ಸಮೀಕ್ಷೆ’ ೨೦೦೧ರಲ್ಲಿ `ಮಿನುಗು ನಕ್ಷತ್ರಗಳು’ ೨೦೦೪ ರಲ್ಲಿ `ನಮ್ಮ ಶೈಕ್ಷಣಿಕ ಸಮೀಕ್ಷೆ’ ಎಂಬ ಲೇಖನ ಕೃತಿಗಳು, ೨೦೦೪ರಲ್ಲಿ `ಧರಿನಾಡಿನ ಕಥನ ಗೀತೆಗಳು’ ಎಂಬ ಸಂಪಾದನೆ, `ಬಸವಕಲ್ಯಾಣ ಬೆಳಗು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆÀ ೧೯೯೦ರಲ್ಲಿ ನವದೆಹಲಿಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ, ೨೦೨೦ರಲ್ಲಿ ಹಾರಕೂಡ ಸಂಸ್ಥಾನದಿAದ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿಗಳು ಪಡೆದಿದ್ದು, ೨೦೦೪ರಲ್ಲಿ ಬಸವಕಲ್ಯಾಣ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಲೇಖನ, ಬರಹಗಳು ಸತ್ಯಕಾಮ, ಸಂಯುಕ್ತ ಕರ್ನಾಟಕ, ಬಹಿರಂಗ ಸುದ್ದಿ ಮೊದಲಾದ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಎಸ್.ಬಿ.ಕುಚಬಾಳ
ಜಾನಪದ ಮತ್ತು ಸೃಜನಶೀಲ ಸಾಹಿತ್ಯದಲ್ಲಿ ಕೃಷಿ ಮಾಡಿದ ಬಹುಮುಖ ಪ್ರತಿಭೆಯ ಲೇಖಕರೆಂದರೆ ಎಸ್.ಬಿ.ಕುಚಬಾಳ . ಇವರು ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿಯ ಭೀಮರಾವ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೧ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಶಿವರಾಯ ತಂದೆ ಭೀಮರಾವ ಕುಚಬಾಳ’ ಎಂದಾಗಿದೆ. ಬಿ.ಎ.ಬಿ.ಎಡ್.ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಬೀದರದ ಎಸ್.ಎಸ್.ಎ. ಯೋಜನೆಯ ಸಹಾಯಕ ಸಮನ್ವಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು `ಜನಪದ ಜ್ಯೋತಿ’ `ಭೀಮ ಕಿರಣ’ `ಸರ್ವ ಶಿಕ್ಷಣ ಅಭಿಯಾನ’ `ತಿಳಿದು ನಡಿರಿ ಇನ್ನ’ `ರೈತ ಚೂಡಾಮಣಿ’ (ಕವನ ಸಂಕಲನಗಳು) `ಅಚ್ಚು ಮೆಚ್ಚಿನ ಬಿಚ್ಚು ಹೂಗಳು’ (ಹನಿಗವನ ಸಂಕಲನ) `ಕಲಿಯುಗದ ಕಾಲೇಜಿನ ಹುಡಗಿ’ (ಕಾದಂಬರಿ) `ಜಾಗೃತಿ ಜೀವಿ ಪಂಚಶೀಲ ಗವಾಯಿ’ ಮತ್ತು `ಜಾನಪದ ದುಂದುಬಿ ಕುಚಬಾಳ’ (ತತ್ವಪದ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇಲ್ಲಿಯ `ತಿಳಿದು ನಡಿರಿ ಇನ್ನ’ ಕೃತಿ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ. ಅಷ್ಟೇಯಲ್ಲದೆ ಇವರು `ಮಾತೆಯ ಮಮತೆ’ `ಪ್ರೇಮಿಸಿದ ಹೆಣ್ಣು’ `ಸತ್ಯಶೀಲ ಸಂಗಮೇಶ’ `ಪ್ರಪಂಚದ ಹಾಡು’. `ವರದಕ್ಷಿಣೆ ಪಿಡುಗು’ `ಕಲಿಯುಗದ ಕಂತ್ರಾಟ’ `ಹಿಂಗಾದರ ಹಾಂಗ್’ (ಹಾಸ್ಯ) `ಕಳ್ಳರ ಜಾತ್ರೆ’ `ಸಂವಿಧಾನ ಶಿಲ್ಪಿ’ `ಕಲಿಯುಗದ ಡಾಕ್ಟರ್’ ಎಂಬ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ ಮತ್ತು ಬಹಳಷ್ಟು ಕಡೆಗಳಲ್ಲಿ ಪ್ರದರ್ಶನವು ಕಂಡಿವೆ. ಹೀಗೆ ಇವರು ಮಾಡಿದ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ದುಂದುಬಿ ಪ್ರಶಸ್ತಿ, ಸಂಗೀತ ಶ್ರೀ ಪ್ರಶಸ್ತಿ, ನಾಟಕ ರತ್ನಕರ ಪ್ರಶಸ್ತಿ, ಸಂಗೀತ ಕಲಾ ರತ್ನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಕಾವ್ಯ, ನಾಟಕ, ಚಿಂತನೆ, ಮತ್ತು ಆಧುನಿಕ ವಚನ ಸಾಹಿತ್ಯ ರಚಿಸಿ ಕೆಲ ಪುಸ್ತಕ ಪ್ರಕಟಿಸಿದ ಸಾಹಿತಿ ಹಾಗೂ ಮಠಾದೀಶರುಗಳೆಂದರೆ ಹುಲಸೂರು ಮಠದ ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು. ಇವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ಶ್ರೀ ಗುರುಪಾದಯ್ಯ ಮತ್ತು ಶ್ರೀಮತಿ ಕಾಶಮ್ಮ ದಂಪತಿಗಳ ಉದರದಲ್ಲಿ ದಿನಾಂಕ ೨-೧೨-೧೯೫೨ರಲ್ಲಿ ಜನ್ಮ ತಳೆದಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಧಾರ್ಮಿಕ ಶಿಕ್ಷಣವು ಬಾದಾಮಿ ಶಿವಯೋಗಿ ಮಂದಿರ ಮತ್ತು ಹುಬ್ಬಳ್ಳಿಯಲ್ಲಿರುವ ಮೂರು ಸಾವಿರ ಮಠದಲ್ಲಿ ಅಧ್ಯಯನ ಮಾಡಿ ಮೃತುಂಜಯ ಮಹಾಸ್ವಾಮಿಗಳಿಂದ ಶರಣಧರ್ಮ ತರಬೇತಿಯನ್ನು ಪಡೆದಿದ್ದಾರೆ.
ಶ್ರೀಗಳು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೧೯೭೬ರಲ್ಲಿ `ಕನ್ನಡ ಕೋಗಿಲೆ’ (ಕವನ ಸಂಕಲನ) ೧೯೮೧ರಲ್ಲಿ `ಶಿವಾನಂದ ಸ್ವಾಮಿಗಳ ವಚನಗಳು’ (ಆಧುನಿಕ ವಚನ ಸಂಕಲನ) ೨೦೧೩ರಲ್ಲಿ `ಬಸವ ಭಾರತ’ (ಪಾದಯಾತ್ರೆ ಮಾಡಿದ ಚಿಂತನಾ ಕೃತಿ) ಕಲ್ಯಾಣ ಕೈಲಾಸ, ಇಷ್ಟಲಿಂಗ ಪೂಜಾ ವಿಧಾನ, ಸಾಮೂಹಿಕ ಪ್ರಾರ್ಥನೆ’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಹಾಗೂ ೧೯೭೮ರಲ್ಲಿ ಬರೆದ `ಪತಿವೃತೆಯ ಪ್ರಭಾವ’ (ನಾಟಕ) `ಲಿಂಗಾಯತ ಧರ್ಮ ಮತಸ್ಥಾಪಕಕರು: ಬಸವಣ್ಣನವರು.’ ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ವಿಶ್ವಗುರು ಬಸವಧರ್ಮ ಪ್ರಸಾರ ಕೇಂದ್ರ ಎಂಬ ಪ್ರಕಾಶನದ ವತಿಯಿಂದ ಕೆಲ ಲೇಖಕರ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಸಾಹಿತ್ಯಿಕವಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದರಿಂದ ಅವರ ಕಲೆ,ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೨೦೨೦ರಲ್ಲಿ ಚಿತ್ರದುರ್ಗದ ಶ್ರೀ ಮುರುರಾಜೇಂದ್ರ ಮಠದಿಂದ ಶ್ರೀಮುರುಘಶ್ರೀ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ಶ್ರೀಗಳು ತಮ್ಮ ಮಠದಲ್ಲಿ ಸಾಹಿತ್ಯ ಕೃತಿಗಳು ಪ್ರಕಟಿಸುವುದಷ್ಟೇಯಲ್ಲದೆ ಕೆಲವು ಸಲ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ೨೦೧೮ರಲ್ಲಿ ಹಾರಕೂಡದಲ್ಲಿ ನಡೆದ ಬಸವಕಲ್ಯಾಣದ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಡಾ.ಸೋಮನಾಥ ಯಾಳವಾರ
ಕವಿ, ವಿಮರ್ಶಕ, ಸಂಶೋಧಕರಾಗಿ, ಹಲವಾರು ಪುಸ್ತಕಗಳು ಪ್ರಕಟಿಸಿದ ಹಿರಿಯ ಸಾಹಿತಿಯೆಂದರೆ ಡಾ.ಸೋಮನಾಥ ಯಾಳವಾರ. ಇವರು ವಿಜಯಪುರ ಜಿಲ್ಲೆಯ ಆಲಮಟ್ಟಿ ಗ್ರಾಮದ ಸಿದ್ದಪ್ಪ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಪದವಿಧರರಾದ ಇವರು ೧೯೭೯ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ.
ಇವರು ತಮ್ಮ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಹಲವು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಹುಮನಾಬಾದ ತಾಲೂಕು ದರ್ಶನ, ಹರಿಶ್ಚಂದ್ರ ಕಾವ್ಯ, ಕಾವ್ಯ ಸಂಗಮ-೨, ಗಿರಿಜಾ ಕಲ್ಯಾಣ, ವಿವೇಕ ವಾಹಿನಿ, ಗೃಹ ಮಂಗಳ, ಉರಿಲಿಂಗಪೆದ್ದಿ, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲೆಯ ಶರಣರ ಸ್ಮಾರಕಗಳು, ಪುಲಿಗೆರಿಯ ಆದಯ್ಯಾ , ವೀರಭದ್ರ ಸಿರಿ, ಕರಕನಳ್ಳಿ ಬಕ್ಕಪ್ರಭು, ಕುಂಬಾರ ಗುಂಡಯ್ಯಾ, ಕುಮಾರವ್ಯಾಸ, ಶರಣಸಿರಿ, ಮಾಣಿಕ ಪ್ರಭುಗಳು, ಹೊಸಗನ್ನಡ ಕಾವ್ಯ ಸಂಗ್ರಹ, ಸೋಳ್ನುಡಿ ಸಿಂಚನ, ಜಯದೇವಿ ತಾಯಿ ಲಿಗಾಡೆ, ಬಯಲೊಳಗಣ ಬಿಸಿ, ವೈದ್ಯ ಜಾನಪದ, ಡಾ.ಚಂದ್ರಶೇಖರ ಕಂಬಾರ, ಆನು ಒಲಿದಂತೆ ಹಾಡುವೆ, ಹೈದರಾಬಾದ ಕರ್ನಾಟಕ ಶರಣ ಹಾಗೂ ಸೂಫಿ ಚಳವಳಿ, ಅಖಂಡ ಬಿಜಾಪುರ ಜಿಲ್ಲೆಯ ಅನುಭಾವಿ ಕವಿಗಳು, ವಚನದಲ್ಲಿ ನಾಮಾಮೃತ, ಅನನ್ಯ ಅನುಭವ ಮಂಟಪ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ, ವಚನ ಸುದ್ಧಿ ಕರಣ ಸೂತ್ರಗಳು, ಕಾಶ್ಮೀರದ ಶರಣರು, ಜಗಜ್ಯೋತಿ, ಯೋಗಿಗಳ ಯೋಗಿ ಶಿವಯೋಗಿ ಸಿದ್ದರಾಮ, ಸತಿ-ಪತಿಗಳೊಂದಾದ ಬದುಕು, ಕಲ್ಯಾಣ ಕ್ರಾಂತಿ, ಶರಣರ ದಂಡಿನ ದಾರಿ, ಅಯ್ಯಗಳಯ್ಯ ಮಾದಾರ ಚನ್ನಯ್ಯ, ದನಿ ಎತ್ತಿ ಹಾಡೇನ, ಚನ್ನಬಸವ, ತ್ರಿಪದಿ ಕಾವ್ಯ ಸೇರಿದಂತೆ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಮತ್ತು ೨೦೦ಕ್ಕೂ ಹೆಚ್ಚು ಲೇಖನಗಳು ವಿವಿಧ ಸಂಚಿಕೆ, ಪ್ರಾತಿನಿಧಿಕ ಸಂಕಲನ,ಆಕಾಶವಾಣಿ,ದೂರದರ್ಶನಗಳಲ್ಲಿ ಪ್ರಕಟ,ಪ್ರಸಾರವಾಗಿವೆ.
ಇವರು ಹುಮನಾಬಾದ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೌದ್ಧ ಅಧ್ಯಯನ ಕೇಂದ್ರದ ನೀದೇರ್ಶಕರಾಗಿ, ಅನುಭವ ಮಂಟಪ ಪ್ರಸಾರಾಂಗದ ನೀರ್ದೆಶಕರಾಗಿ, ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ, ಡಾ.ಬಸವಲಿಂಗ ಪಟ್ಟದ್ದೆವರ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ಬೀದರ ಜಿಲ್ಲಾ ೫ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬಸವನಬಾಗೆವಾಡಿ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರ ಜಿಲ್ಲಾ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಹುಮನಾಬಾದಿನ ಖಾಯಂ ನಿವಾಸಿಯಾಗಿದ್ದು, ಇವರ ಕುರಿತು ಕೆಲ ವಿದ್ಯಾರ್ಥಿಗಳು ಎಂ.ಫೀಲ್. ಪಿ.ಎಚ್.ಡಿ.ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.
ವೀರಣ್ಣ ಕುಂಬಾರ
ವೀಶೇಷವಾಗಿ ಶರಣ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ವೀರಣ್ಣ ಕುಂಬಾರ. ಇವರು ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮದ ಶ್ರೀ ಬಸಣ್ಣ ಮತ್ತು ಶ್ರೀಮತಿ ಬಸಮ್ಮ ದಂಪತಿಗಳಿಗೆ ದಿನಾಂಕ ೨೫-೨-೧೯೫೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಇಂಜಿನಿಯರಿAಗ್ ಪದವೀಧರರಾದ ಇವರು ಕೆಲವರ್ಷ ಶಹಾಬಾದಿನ ಎ.ಬಿ.ಎಲ್. ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರಿAಗ್ ಸೇವೆ ಸಲ್ಲಿಸಿ ೧೯೯೮ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಸೋಲಾರ್ ಎನರ್ಜಿ ಪ್ರೊಜೆಕ್ಟ್ ನಿಮಿತ್ತವಾಗಿ ಬೀದರಿಗೆ ಆಗಮಿಸಿದ ಇವರು ಇಲ್ಲಿಯ ಕಲೆ ಸಾಹಿತ್ಯ ಬಸವ ಸಂಸ್ಕೃತಿ ಮೈಗೂಡಿಸಿಕೊಂಡು ಶರಣ ಸಾಹಿತ್ಯದಲ್ಲಿ ಕೆಲ ಕೃತಿಗಳು ಹೊರ ತಂದಿದ್ದಾರೆ. ಅವುಗಳೆಂದರೆ, `ಶರಣ ಕುಂಬಾರ ಗುಂಡಯ್ಯ, ಗುರುಪಾದ ಗಂಗೆ, ಶೀವರೇಖಾ, ಚೆನ್ನಯ್ಯನ ಮಗ ನಾನಯ್ಯ, ಸಾತ್ವಿಕ,’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಭಾಲ್ಕಿಯ ಶಾಂತಿ ಕಿರಣ (ದ್ವೈಮಾಸಿಕ) ಜ್ಯೋತಿ ಮುಟ್ಟಿದ ಬುತ್ತಿ, ಬಸವ ಬಳ್ಳಿ, ಇವು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಹಾಗೂ `ಹಿರೇಮಠ ಸಂಸ್ಥಾನ ಒಂದು ಅಧ್ಯಯನ, ಬೀದರ ಜಿಲ್ಲೆಯ ತಾಡೋಲೆ ಮತ್ತು ಹಸ್ತಪ್ರತಿ ಸಂಗ್ರಹ, ಬೀದರ ಜಿಲ್ಲೆಯ ತತ್ವ ಪದಕಾರರ ತತ್ವ ಪದಗಳು,’ ಎಂಬ ಕೃತಿಗಳು ಸಂಪಾದಿಸಿ ನೂರಾರು ಶರಣರ ವಚನಗಳಿಗೆ ವ್ಯಾಖ್ಯಾನಗಳು ಬರೆದಿದ್ದಾರೆ. ಸದ್ಯ ಇವರು ಭಾಲ್ಕಿಯ ನಿವಾಸಿಯಾಗಿದ್ದಾರೆ.
ಅರುಂಧತಿ ಚಾಂದಕವಠೆ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಅರುಂಧತಿ ಚಾಂದಕವಠೆ. ಇವರು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಸೀತಾರಾಮರಾವ ಮತ್ತು ಆರಾಧನಾ ದಂಪತಿಗಳಿಗೆ ದಿನಾಂಕ ೨೨-೬-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಬೀದರದ ಬಿ.ಎಸ್.ಎನ್.ಎಲ್. ನಲ್ಲಿ ಕಛೇರಿಯಲ್ಲಿ ಜ್ಯೂನಿಯರ್ ಟೆಲಿಕಾಂ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೪ರಲ್ಲಿ `ಬಾಂಧವ್ಯ’ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಇದ್ದಿಲು ಪುಡಿ’, `ಮನೆ ಮನೆಯ ಕತೆ’, `ನಿಲ್ಲು’, `ಮಂಗನ ತೀರ್ಪು,’ ಎಂಬ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಆದರೆ, ಆ ನಾಟಕಗಳು ಈಗಾಗಲೇ ಹಲವು ಕಡೆ ಪ್ರದರ್ಶನ ಕಂಡು ತುಂಬ ಜನಪ್ರಿಯತೆಯು ಗಳಿಸಿವೆ.ಮತ್ತು ಇವರು ಒಬ್ಬ ಉತ್ತಮ ಕಲಾವಿದೆಯು ಆಗಿರುವುದರಿಂದ ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾದ `ರಾವಿ ನದಿಯ ದಂಡಯಲ್ಲಿ’, `ಛಲ’, `ಸೌಹಾರ್ದ,’ `ಉಡುಗೊರೆ,’ `ಬಯಸದೆ ಬಂದ ಭಾಗ್ಯ,’ `ಬದುಕು ಜಟಕಾ ಬಂಡಿ’ ಎಂಬ ನಾಟಕಗಳಲ್ಲಿ ನಟಿಸಿ, ಸೈ ! ಎನಿಸಿಕೊಂಡಿದ್ದಾರೆ. ಇವರ ಕತೆ,ಕವನ,ಲೇಖನ, ಪ್ರಬಂಧಗಳು ಪ್ರಮುಖ ಪತ್ರಿಕೆ, ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರ ಕಲೆ ಮತ್ತು ಸಾಹಿತ್ಯ ಸಾಧನೆಗೆ ೨೦೦೧ರಲ್ಲಿ ಬೀದರ ಜಿಲ್ಲಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮನೆ ಮನೆ ಕತೆ’ ,ನಾಟಕ ರಚಿಸಿ ಕುಟುಂಬ ಸದಸ್ಯರೊಂದಿಗೆ ಪ್ರದರ್ಶನ ಮಾಡಿದ್ದರಿಂದ ಗೌರವ ಸನ್ಮಾನ, ೨೦೦೯ರಲ್ಲಿ ಧರಿನಾಡು ಕನ್ನಡ ಸಾಹಿತ್ಯ ಸಂಘ ಮತ್ತು ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದಿಂದ ಧರಿನಾಡು ಸಿರಿ ಪ್ರಶಸಿಯು ನೀಡಿ ಗೌರವಿಸಿದ್ದಾರೆ. ಹಾಗೂ ೨೦೦೬ರಲ್ಲಿ ಬೀದರ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಸೇರಿದಂತೆ ಮೊದಲಾದ ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೦೯ರಲ್ಲಿ ಬೀದರ ತಾಲೂಕಿನ ಅಣದೂರದಲ್ಲಿ ನಡೆದ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಸದ್ಯ ಇವರು ಬೀದರದ ಖಾಯಂ ನಿವಾಸಿಯಾಗಿದ್ದು, ತಮ್ಮ ವಿಶ್ರಾಂತ ಬದುಕಿನೊಂದಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾನುದಾಸ ಪಾಟೀಲ್
ಕವಿ,ಸಾಹಿತಿ, ಲೇಖಕರಾಗಿ ಹಲವಾರು ಬರಹಗಳು ಬರೆದು ಗುರ್ತಿಸಿ ಕೊಂಡವರೆAದರೆ ಭಾನುದಾಸ ಪಾಟೀಲ್. ಇವರು ಕಲಬುರಗಿ ಜಿಲ್ಲೆಯ ನೂತನ ಕಮಲಾಪೂರ ತಾಲೂಕಿನ ಮಡಕಿ ಗ್ರಾಮದ ಉದ್ದವರಾವ ಪಾಟೀಲ್ ಮತ್ತು ವತ್ಸಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಪಿಯುಸಿ, ಟಿ.ಸಿ.ಎಚ್ ಶಿಕ್ಷಣ ಪಡೆದು ೧೯೮೩ರಿಂದ ಬಸವಕಲ್ಯಾಣದ ಅನುದಾನಿತ ಜಿಜಾಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿಯು ತುಂಬ ಆಸಕ್ತಿಯನ್ನು ಬೆಳೆಸಿಕೊಂಡು ೨೦೦೪ರಲ್ಲಿ ಹತ್ತು ಜನ ಲೇಖಕರೊಂದಿಗೆ `ಹತ್ತು ಮುಖಗಳ ನೂರು ಭಾವಗಳು’ ಎಂಬ ಕವನ ಸಂಕಲನದಲ್ಲಿ ತಮ್ಮ ಹತ್ತು ಕವನಗಳು ಪ್ರಕಟಿಸಿದ್ದಾರೆ. ಮತ್ತು ಇತ್ತೀಚೆಗೆ `ನಮ್ಮೂರ’ ಎಂಬ ಗ್ರಾಮ ಚರಿತ್ರೆಯು ಬರೆದಿದ್ದಾರೆ. ಹಾಗೂ ಇವರ ಬರಹಗಳು ಬೆಂಗಳೂರಿನ ಮರಾಠಾ ಧ್ವನಿ ಕನ್ನಡ ಮಾಸಿಕ ಮತ್ತು ಕಲಬುರಗಿಯ `ಗ್ರೀನೊಬಲ್ಸ’ ದಿನ ಪತ್ರಿಕೆಗಳಲ್ಲಿ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಕವನಸಂಕಲನ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಇವರ ಕವನ, ಲೇಖನ, ಬರಹಗಳು ಪ್ರಕಟವಾಗಿವೆ. ಇವರಿಗೆ ೧೯೯೨ರಲ್ಲಿ ಬಸವಕಲ್ಯಾಣ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ,ಯು ನೀಡಿ ಗೌರವಿಸಲಾಗಿದೆ. ಮತ್ತು ಬೀದರದ ಧರಿನಾಡು ಕನ್ನಡ ಸಂಘದ ಪ್ರಶಸ್ತಿಯು ಲಭಿಸಿದೆ. ಮತ್ತು ಹಾರಕೂಡದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮುಚಳಂಬ, ಹುಲಸೂರು, ಬೆಲೂರು ಮಠಗಳಲ್ಲಿ ನಡೆದ ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವುದರಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಸದ್ಯ ಇವರು ನಿವೃತ್ತಿಯ ಅಂಚಿನಲ್ಲಿದ್ದು ಬಸವಕಲ್ಯಾಣದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಭಾರತಿ ವಸ್ತ್ರದ
ಸಾಹಿತಿ ಹಾಗೂ ನಾಟಕ ಕಲಾವಿದರಾಗಿ ಗುರ್ತಿಸಿಕೊಂಡು ಕೆಲ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಭಾರತಿ ವಸ್ತ್ರದ. ಇವರು ವಿಜಯಪುರ ಜಿಲ್ಲೆಯ ಸಿಂದಗಿಯ ಸಿದ್ದಲಿಂಗಯ್ಯಾ ಮತ್ತು ಅನ್ನಪೂರ್ಣದೇವಿ ದಂಪತಿಗಳಿಗೆ ದಿನಾಂಕ ೧-೬-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ. ಎಂ.ಎ.ಇತಿಹಾಸ, ಎಂ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು. ೧೯೮೨ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಡೈಯಟ್ ನ ಪ್ರಾಶಿಕ್ಷಕರಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೨ರಲ್ಲಿ ನಿವೃತ್ತರಾಗಿದ್ದಾರೆ.
ಸಾಹಿತ್ಯದಲ್ಲಿ ಬಾಲ್ಯದಿಂದಲೂ ತುಂಬ ಆಸಕ್ತರಾಗಿದ್ದ ಇವರು `ನಾನು ನನ್ನ ದೇಶ’ ಎಂಬ ಪರಿಚಯಾತ್ಮಕ ಕೃತಿ. `ಒಡಪು ಹೇಳತ್ತಿಯೇನ ಗೆಳತಿ’ ಎಂಬ ಜಾನಪದ ಸಾಹಿತ್ಯ, `ಹಿಪ್ಪು ನೆರಳೆ’ ಎಂಬ ರೇಷ್ಮೆ ಕುರಿತಾದ ಕೃತಿಯು ಬರೆದು ಪ್ರಕಟಿಸಿ ಖ್ಯಾತರಾಗಿದ್ದಾರೆ. ಕಲಬುರಗಿ ಆಕಾಶವಾಣಿಯ ನಾಟಕ ವಿಭಾಗದ ಬಿ.ಗ್ರೇಡ್ ಕಲಾವಿದೆಯಾಗಿ ಹಲವು ನಾಟಕಗಳಿಗೆ ಧ್ವನಿಯು ನೀಡಿ, ಮಕ್ಕಳಿಗಾಗಿ `ಕರುಣಾಳು ಬಾ ಬೆಳಕೆ’, `ವರದಕ್ಷಿಣೆ, ನಿರ್ಮೂಲನೆ’, `ಹರಳಯ್ಯಾ’ ಸೇರಿದಂತೆ ಮೊದಲಾದ ರೇಡಿಯೋ ಕಾರ್ಯಕ್ರಮಗಳು ನಾಟಕ ರೂಪಾಂತರವಾಗಿ ಪ್ರಸಾರವಾಗಿವೆ. ಇವರಿಗೆ ೧೯೯೭ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ಚೂಡಾಮಣಿ ರತ್ನ, ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಇವರು ೧೯೯೯ರಲ್ಲಿ ಬೀದರ ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯದರ್ಶಿಯಾಗಿ, ೨೦೦೦ರಿಂದ ಮೂರಾರ್ಜಿ ಶಾಲಾ ಪ್ರಾಂಶುಪಾಲರಾಗಿ, ಬೀದರ ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನೀರ್ದೆಶಕರಾಗಿ ,ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಮಹಿಳಾ ಸಮಖ್ಯದ ಎಗ್ಜಿಗೇಟಿವ್ ಸದಸ್ಯರಾಗಿ, ವಯಸ್ಕರ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸಲ್ಲಿಸಿದ ಇವರು ಸದ್ಯ ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ರಜಿಯಾ ಬಳಬಟ್ಟಿ
ಕವಯತ್ರಿ ಮತ್ತು ಅಂಕಣಕಾರರಾಗಿ ಗುರ್ತಿಸಿಕೊಂಡ ಲೇಖಕಿಯೆಂದರೆ ರಜಿಯಾ ಬಳಬಟ್ಟಿ. ಇವರು ಬಾಗಲಕೋಟೆಯ ಮಸ್ತಾನಸಾಬ ಮತ್ತು ಅಮಿನಾಬೀ ಎಂಬ ದಂಪತಿಗಳಿಗೆ ದಿನಾಂಕ ೭-೫-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪದವಿಧರರಾದ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಬ್ದುಲ್ ನಜಿರ್ ಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ ಜಿಲ್ಲಾ ಪಂಚಾಯತನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಮೆಹಂದಿ’, `ದಾವಣಿ ಹುಡಗಿ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಂದು ವರ್ಷ `ಆಸರಕಿ ಬ್ಯಾಸರಕಿ’ ಎಂಬ ಅಂಕಣಕಾರರಾಗಿ ಲೇಖನ ಬರೆದು ಖ್ಯಾತರಾಗಿದ್ದಾರೆ. ಇವರ ಬರಹಗಳು ಮಯೂರ, ವಿಜಯ ಕರ್ನಾಟಕದ ಮಹಿಳಾ ಪುರವಣಿ, ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರ `ದಾವಣಿ ಹುಡಗಿ’ ಕವನ ಸಂಕಲನಕ್ಕೆ ಜಿಲ್ಲಾ ಕಸಾಪದ ವತಿಯಿಂದ ಸಮಿರವಾಡಿ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿAದ ವಿಶಿಷ್ಠ ಲೇಖಕಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸೃಜನಶೀಲ ಬರಹಗಾರ್ತಿ ಪ್ರಶಸ್ತಿ, ಪಡೆದಿದ್ದಾರೆ. ಮತ್ತು ಕಸಾಪದಿಂದ ನಡೆಯುವ ವಿವಿಧ ಸಾಹಿತ್ಯ ಸಮ್ಮೇಳನ ಮತ್ತು ಕವಿಗೊಷ್ಠಿಗಳಲ್ಲಿ ಹಲವಾರು ಉಪನ್ಯಾಸ,ಕವನ ವಾಚನವು ಮಾಡಿದ್ದಾರೆ. ಮತ್ತು ಮೈಸೂರಿನ ದಸರಾ ಕವಿಗೊಷ್ಠಿಯಲ್ಲಿಯು ಕವನ ವಾಚನ ಮಾಡಿದ ಇವರು ಸದ್ಯ ಬಿ.ಆರ್.ಜಿ.ಎಫ್. (ಹಿಂದುಳಿದ ಪ್ರದೇಶ ಅನುದಾನ ನಿಧಿ) ಎಂಬ ಕೇಂದ್ರ ಸರ್ಕಾರ ಯೋಜನೆಯ ಮೈಸೂರು ಪ್ರತಿನಿಧಿಯಾಗಿ, ಬೀದರ ಜಿಲ್ಲಾ ಸಂಯೋಜಕಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಗೋಪಾಲಕೃಷ್ಣ ವಂಡ್ಸೆ
ಸೃಜನಶೀಲ ಸಾಹಿತ್ಯ ರಚಿಸಿ ನಾಡಿನಾದ್ಯಂತ ಪರಿಚಿತರಾದ ಕವಿ,ಸಾಹಿತಿ, ಲೇಖಕರೆಂದರೆ, ಗೋಪಾಲಕೃಷ್ಣ ವಂಡ್ಸೆ. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮದ ನಾಗಪ್ಪ ಹೊಳ್ಳ ಮತ್ತು ಮೂಕಾಂಬಿಕಾ ದಂಪತಿಗಳಿಗೆ ದಿನಾಂಕ ೩೧-೧೦-೧೯೬೫ರಲ್ಲಿ ತಮ್ಮ ತಾಯಿ ತವರೂರಾದ `ವಂಡ್ಸೆ’ ಗ್ರಾಮದಲ್ಲಿ ಜನಿಸಿದ್ದಾರೆ. ಇವರು ಪದವಿವರೆಗೆ ಮಾತ್ರ ಅಧ್ಯಯನ ಮಾಡಿ ಕೆಲ ವರ್ಷ ಫೋಟೋಗ್ರಾಫರಾಗಿ ಸೇವೆ ಸಲ್ಲಿಸಿ ನಂತರ ಹೋಟೆಲ್ ಉದ್ಯಮಿಯಾಗಿ ಬೀದರನಲ್ಲಿ ನೆಲೆಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ೧೯೮೭ರಲ್ಲಿ `ಬಣ್ಣದ ಚಿಟ್ಟೆ’ ೧೯೮೮ರಲ್ಲಿ `ನಮ್ಮ ಚಂದಿರ’ ೧೯೮೯ರಲ್ಲಿ `ಕಂದನ ಕನಸು’ ೧೯೯೦ರಲ್ಲಿ `ತರ ತರ ಹೂಗಳು’ ಎಂಬ ಶಿಶು ಗೀತೆಗಳ ಮಕ್ಕಳ ಕವನ ಸಂಕಲನಗಳು , ಹಾಗೂ ೧೯೯೭ರಲ್ಲಿ `ನಕ್ಷತ್ರ ಕಡ್ಡಿ’ ಎಂಬ ಹನಿಗವನ ಸಂಕಲನವು ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನ, ಹನಿಗವನ,ಚುಟುಕು, ಮಕ್ಕಳ ಕವಿತೆ, ಮೊದಲಾದ ಬರಹಗಳು ಪ್ರಜಾವಾಣಿ, ಸುಧಾ,ಮಯೂರ, ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ, ಉದಯವಾಣಿ, ತರಂಗ, ತುಷಾರ, ಪ್ರಜಾಮತ, ಮಲ್ಲಿಗೆ, ಉತ್ಥಾನ, ಕನ್ನಡಪ್ರಭ, ವಿಜಯವಾಣಿ,ವಿಜಯಕರ್ನಾಟಕ,ವಿಶಾಲ ಕರ್ನಾಟಕ, ಹೊಸ ದಿಗಂತ,ಸAಕ್ರಮಣ, ರಾಗಸಂಗಮ ಮಂಗಳ ಮತ್ತು ಪ್ರಜಾವಾಣಿ, ಕರ್ಮವೀರ ದೀಪಾವಳಿ ವಿಶೇಷಾಂಕಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಇವರಿಗೆ ೨೦೧೬ರಲ್ಲಿ ಬೀದರಿನ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ೨೦೨೦ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ದ್ವಿತೀಯ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರಿನ ವತಿಯಿಂದ ಸಿಂಪಿ ಲಿಂಗಣ್ಣ ಪ್ರಶಸ್ತಿ, ಮತ್ತು ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಉಡುಪಿ ಮತ್ತು ಬೀದರ ಸೇರಿದಂತೆ ನಾಡಿನ ವಿವಿಧ ಕಡೆಗಳಲ್ಲಿ ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಲೇಖಕರು ತರುಣರಾಗಿದ್ದಾಗ ಉತ್ತಮ ಫೋಟೋಗ್ರಾಫರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಕೆಲ ಬಡ ದಲಿತ ಯುವಕರಿಗೆ ಆ ಪೋಟೋಗ್ರಾಫಿ ಕಲೆಯನ್ನು ಕರಗತ ಮಾಡಿಸಿ, ಅವರಿಗೆ ಸಾಹಿತ್ಯಿಕವಾಗಿಯು ಹುರಿದುಂಬಿಸಿ, ಲೇಖಕ ಪತ್ರಕರ್ತರಾಗಿಯು ಅವರ ಬೆಳವಣಿಗೆಗೆ ಕಾರಣಿ ಭೂತರಾಗಿದ್ದು, ನೋಡಿದರೆ ಇವರಲ್ಲಿ ಆ ದಲಿತಪರ ಕಾಳಜಿ ಇರುವುದು ಎದ್ದು ತೋರುತ್ತದೆ. ೩೫ ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡ ಇವರು ಸದ್ಯ ೨೩ ವರ್ಷಗಳಿಂದ ಬೀದರದ ನಿವಾಸಿಯಾಗಿ, ಖಾಸಗಿ ಉದ್ಯಮದೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಕರುಣಾ ಸಲಗರ
`ಶಿವಲಿಂಗೇಶ್ವರ ‘ ಎಂಬ ಅಂಕಿತನಾಮದಿAದ ಆಧುನಿಕ ವಚನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಕರುಣಾ ಸಲಗರ. ಇವರು ಕಲಬುರಗಿ ಜಿಲ್ಲೆ ಕುರಿಕೋಟಾ ಗ್ರಾಮದ ಚನ್ನಬಸಪ್ಪ ಮತ್ತು ಹಿರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಶಿಕ್ಷಣ ಪಡೆದ ಇವರು ೧೯೮೯ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು ಕೆಲ ಕೃತಿಗಳು ಪ್ರಕಟಿಸಿದ್ದಾರೆ . ಅವುಗಳೆಂದರೆ `ಶಿವಲಿಂಗೇಶ್ವರ ವಚನಗಳು’ (ಆಧುನಿಕ ವಚನಗಳ ಸಂಕಲನ) `ಭಾವಧಾರೆ’. `ಕಾವ್ಯ ಕಿರಣ’ (ಕವನ ಸಂಕಲನಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಂದ ಆದರ್ಶ ಶರಣ ಜೀವಿ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ಕಾವ್ಯಾಂಜಲಿ ಪ್ರಶಸ್ತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಕಾಯಕ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್, ದಲಿತ ಸಾಹಿತ್ಯ ಪರಿಷತ್ ಹಾಗೂ ಧರಿನಾಡು ಕನ್ನಡ ಸಂಘ, ಹುಮನಾಬಾದ್ ವತಿಯಿಂದ `ಕನ್ನಡ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ಮತ್ತು ದಾಸ ಸಾಹಿತ್ಯ ಪರಿಷತ್ ವತಿಯಿಂದ `ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಹುಮನಾಬಾದನಲ್ಲಿ ೨೦೧೭ರಲ್ಲಿ ನಡೆದ ಪ್ರಥಮ ತಾಲೂಕು ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ ಬಸವ ಟಿ.ವಿ.ಯಲ್ಲಿ ಕವನ ಲೇಖನ ಚಿಂತನ ಬರಹಗಳು ಪ್ರಕಟ ಪ್ರಸಾರಗೊಂಡಿವೆ. ಇವರು ಬಸವ ಸೇವಾ ಪ್ರತಿಷ್ಠಾನದ ಸದಸ್ಯರಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದು ಸದ್ಯ ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಕುಸುಮಾ ಹತ್ಯಾಳ
ಮಹಿಳಾ ಲೇಖಕಿಯರಲ್ಲಿ ಒಬ್ಬರಾಗಿ ಕವನ,ಲೇಖನ, ಗಜಲ್, ಚುಟುಕು,ಪ್ರಬಂಧ, ಹನಿಗವನ ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಕೆಲ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ , ಕುಸುಮಾ ಹತ್ಯಾಳ. ಇವರು ಕಲಬುರಗಿ ನಗರದ ಶ್ರೀ ಸಿದ್ದಣ್ಣ ಮತ್ತು ಶ್ರೀಮತಿ ನಾಗಮ್ಮ ದಂಪತಿಗಳಿಗೆ ದಿನಾಂಕ ೧೨-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಎಂ.ಎ. ಕನ್ನಡ. ಎಂ.ಎ ಇತಿಹಾಸ ಮತ್ತು ಎಂ.ಇಡಿ ಪದವಿದರರಾಧ ಇವರು ಬೀದರದ ಮಂಗಲಪೇಟೆಯ ಭೀಮಣ್ಣಾನವರ ಧರ್ಮ ಪತ್ನಿಯಾಗಿದ್ದು, ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ಇತ್ತೀಚಿನ ದಿನಗಳಲ್ಲಿ ಕವನ, ಲೇಖನ, ಗಜಲ್, ಹಾಯ್ಕುಗಳ ರಚನೆಯಲ್ಲಿ ತೊಡಗಿ `ಅಂತರAಗದ ಹಾಯ್ಕುಗಳು’ ಮತ್ತು `ಮೌನ ಮೃದಂಗ’ ಎಂಬ ಕೃತಿಗಳು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಸಾಹಿತ್ಯ ಸಂಪದ ನೆನಪಿನ ಸ್ಪರ್ಧೆಯಲ್ಲಿ ಅತ್ಯುತ್ತಮ ಲೇಖನ ಪ್ರಶಸ್ತಿ, ಕೊಡಗಿನ ಗೆಳತಿಯರ ಬೆಳದಿಂಗಳ ನಕ್ಷತ್ರಗಳು ವತಿಯಿಂದ ಜೀವನದಲ್ಲಿ ಅಪ್ಪ ಪಾತ್ರ ಎಂಬ ಲೇಖನಕ್ಕೆ ಅತ್ಯುತ್ತಮ ಪ್ರಶಸ್ತಿ, ಸಾಹಿತ್ಯ ಕುಸುಮ ವೇದಿಕೆಯಿಂದ ಕನ್ನಡ ಕಲಾ ಕುಸುಮ ಪ್ರಶಸ್ತಿ, ಮತ್ತು ಗಣಕರಂಗ ಪ್ರಶಸ್ತಿ, ಹಾಗೂ ಸಾಂಸ್ಕೃತಿಕ ಸಾರಥಿ ಪ್ರಶಸ್ತಿ, ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ,ಉಪನ್ಯಾಸವು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮಲ್ಲಿನಾಥ ಚಿಂಚೋಳಿ
ಸೃಜನಶೀಲ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಿ, ಸಾಹಿತಿಯೆಂದರೆ , ಮಲ್ಲಿನಾಥ ಚಿಂಚೋಳಿ. ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚನ್ನೂರು ಗ್ರಾಮದ ಹಣಮಂತರಾವ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೫-೯-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ,ಇಡಿ. ಪದವಿಧರರಾದ ಇವರು ೧೯೯೫ರಿಂದ ಹುಮನಾಬಾದಿನ ರಾಮ ಮತ್ತು ರಾಜ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅದೇ ಕಾಲೇಜಿನ ಪ್ರಾಚಾರ್ಯರಾಗಿದ್ದಾರೆ.
೧೯೮೬ರಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ಕತೆ, ಕವನ ,ಲೇಖನ ಪ್ರಬಂಧ, ಹನಿಗವನ ಮೊದಲಾದವು ಬರೆದು ಕವಿ, ಸಾಹಿತಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು `ಚಂದ್ರ ಚನ್ನೂರು’ ಎಂಬ ಕಾವ್ಯನಾಮದಲ್ಲಿ ನೂರಾರು ಕವಿತೆಗಳು ಕೂಡ ಪ್ರಕಟಿಸಿ ಓದುಗರಿಂದ ಮೆಚ್ಚುಗೆಯು ಗಳಿಸಿದ್ದಾರೆ. ಆದರೆ ಬಹಳ ವರ್ಷಗಳಿಂದ ಪುಸ್ತಕ ಪ್ರಕಟಿಸದೆ ಉಳಿದ ಇವರು ೨೦೧೮ರಲ್ಲಿ `ಮುಂಜಾವಿನ ಮಲ್ಲಿಗೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ, ಮಯೂರ, ಗ್ರೀನೊಬಲ್ಸ್, ಕನ್ನಡ ನಾಡು, ಕೆಸರಿ ಘರ್ಜನೆ,ಸತ್ಯಕಾಮ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಹಾಗೂ ಕೆಲ ರಾಜ್ಯ ಮಟ್ಟದ ಕಮ್ಮಟಗಳಲ್ಲಿಯು ಪಾಲ್ಗೊಂಡು ಅನೇಕ ಉಪನ್ಯಾಸವು ನೀಡಿದ್ದಾರೆ. ಸದ್ಯ ಇವರು ಹುಮನಾಬಾದಿನ ನಿವಾಸಿಯಾಗಿದ್ದುಕೊಂಡು ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ೧೦೦೦ಕ್ಕಿಂತ ಹೆಚ್ಚು ಕವನಗಳು, ೧೫. ಕತೆಗಳು, ಹಲವಾರು ಲೇಖನ, ಬಿಡಿ ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬಸವರಾಜ ದಯಾಸಾಗರ
ವೃತ್ತಿಯಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಸಹಾಯಕ ಜೈಲರ್ ಆಗಿ ಮತ್ತು ಸದ್ಯ ಹುಮನಾಬಾದಿನ ಉಪಗೃಹದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಗುರುತಿಸಿ ಕೊಂಡವರೆAದರೆ ಬಸವರಾಜ ದಯಸಾಗರ . ಇವರು ಹುಟ್ಟಿದ್ದು ಇಂಡಿ ತಾಲ್ಲೂಕಿನಲ್ಲಿ ಆದರೂ ಇವರು ಬೀದರ ಜಿಲ್ಲೆಯಲ್ಲಿ ೧೨ ವರ್ಷದಿಂದ ಸೇವೆ ಸಲ್ಲಿಸುತ್ತಾ ಇಲ್ಲಿಯ ನಿವಾಸಿಯಾಗಿದ್ದಾರೆ.ಇವರ ತಂದೆ ಅರ್ಜುನ ತಾಯಿ ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೨-೧೯೭೨ ರಲ್ಲಿ ನಿಂಬಾಳ ಗ್ರಾಮದಲ್ಲಿ ಜನಿಸಿ ಬಿ.ಎ ಪದವಿ ಪಡೆದಿದ್ದಾರೆ. ಇವರು ವಿದ್ಯಾರ್ಥಿಯಾಗಿದಾಗಲೆ ಸಾಹಿತ್ಯದ ಅಭಿರುಚಿ ಹಚ್ಚಿಕೊಂಡು ಬರವಣಿಗೆಯಲ್ಲಿ ತೊಡಗಿ ಬೆಂಗಳೂರಿನ ಜಾಣಗೆರೆ ವೆಂಕಟರಾಮಯ್ಯನವರ `ಮಾರ್ಧನಿ’ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾಗಿ ಸೇವೆಸಲ್ಲಿಸಿದ್ದಾರೆ. ಮತ್ತು ಆ ಪತ್ರಿಕೆಗೆ ಹಲವಾರು ಬರಹ ಲೇಖನಗಳನ್ನು ಬರೆಯುತ್ತಾ ಸಾಹಿತಿಯಾಗಿ ಗುರುತಿಸಿ ಕೊಂಡಿದ್ದಾರೆ. ಇವರು `ಅಪರೂಪದ ಸಾಹಿತಿ ಎಂ.ಜಿ.ದೇಶಪಾAಡೆ’ ಎಂಬ ವ್ಯಕ್ತಿ ಚಿತ್ರಣ ಕೃತಿ ಪ್ರಕಟಿಸಿದ್ದಾರೆ. . ಇವರ ಬರಹಗಳು ಸುಧಾ,ಕರ್ಮವೀರ, ತುಷಾರ, ಇತ್ಯಾದಿಗಳಲ್ಲಿ ಪ್ರಕಟವಾಗಿವೆ. ಮತ್ತು ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪ್ರಕಟಿಸಿದ `ಭಾಹತ್ತರ’ ಕವನ ಸಂಕಲನದಲ್ಲಿ ಇವರ ಕವಿತೆ ಪ್ರಕಟವಾಗಿದೆ. ಇವರಿಗೆ ಹುಲಸೂರು ತಾಲೂಕಿನ ಬೇಲೂರಿನಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಕಾರಾಗೃಹ ರತ್ನ ಪ್ರಶಸ್ತಿ, ಮಂದಾರ ಕಲಾವಿದರ ವೇದಿಕೆಯಿಂದ ಬೇಂದ್ರೆ ಕಾವ್ಯ ರತ್ನ ಪ್ರಶಸ್ತಿ, ಬೀದರನಲ್ಲಿ ನಡೆದ ಅಖಿಲ ಭಾರತ ದ್ವಿತೀಯ ಕವಿಕಾವ್ಯ ಸಮ್ಮೇಳನದಲ್ಲಿ ಕಾವ್ಯ ಕಲಾ ಭೂಷಣ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದಿಂದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜರತ್ನಂ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ.
ಡಾ.ಚಿತ್ರಶೇಖರ ಚಿರಳ್ಳಿ
ಕವಿ, ಸಾಹಿತಿ, ಲೇಖಕರಾಗಿ ಗುರ್ತಿಸಿಕೊಂಡ ಬರಹಗಾರರೆಂದರೆ ಡಾ.ಚಿತ್ರಶೇಖರ ಚಿರಳ್ಳಿ. ಇವರು ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ರಾಜಾಪೂರ ಗ್ರಾಮದ ಸಿದ್ರಾಮಪ್ಪಾ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೭-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ ಪದವಿಧರರಾದ ಇವರು ೧೯೯೯ರಲ್ಲಿ ಕಲಬುರಗಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ೨೦೦೧ರಿಂದ ಸೇವೆಗೆ ಸೇರಿ ಎರಡು ವರ್ಷ ಕಾರ್ಯನಿರ್ವಹಿಸಿದ್ದಾರೆ. ಮತ್ತು ಬಾನುಲಿಯಿಂದ ಹಾಸ್ಯ-ಲಾಸ್ಯ, ಮಹಿಳಾ ಕಾರ್ಯಕ್ರಮ, ಸಂದರ್ಶನಗಳು ನಡೆಸಿ ಕೇಳುಗರ ಮನೆ ಮಾತಾಗಿದ್ದರು. ನಂತರ ೨೦೦೧ರಿಂದ ೨೦೦೯ ರವರೆಗೆ ಬಸವಕಲ್ಯಾಣದ ಖಾಸಗಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಇವರು ೨೦೦೯ರಿಂದ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ,ಕವನ,ಲೇಖನ, ಚುಟುಕು ಆಧುನಿಕ ವಚನ ಸೇರಿದಂತೆ ಮೊದಲಾದ ಬರಹಗಳು ಬರೆದಿದ್ದಾರೆ. ಮತ್ತು `ಬಸವೇಶ್ವರ ಮತ್ತು ಅಸ್ಪೃಶ್ಯತೆ ನಿರ್ಮೂಲನೆ’ ಎಂಬ ಕೃತಿಯು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಕರ್ಮವೀರ, ಬಸವಪಥ,ಸಿದ್ದಗಂಗಾ, ಶಾಂತಿ ಕಿರಣ ಮಾಸಪತ್ರಿಕೆಗಳಲ್ಲಿ ಹಾಗೂ ಕೆಲ ಸ್ಮರಣೆ ಸಂಚಿಕೆ, ಅಭಿನಂದನಾ ಗ್ರಂಥ, ಪ್ರಾತಿನಿಧಿಕ ಸಂಕಲನ, ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಇವರು ಬಸವಕಲ್ಯಾಣ ತಾಲೂಕಿನ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ,ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದ ನಿವಾಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಗವಿಸಿದ್ಧಪ್ಪ ಪಾಟೀಲ
ಕವಿ, ಸಾಹಿತಿ ವಿಮರ್ಶಕರಾಗಿ ಪರಿಚಿತರಾದ ಲೇಖಕರೆಂದರೆ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್. `ಗವೀಶ್’ ಎಂಬುದು ಇವರ ಕಾವ್ಯನಾಮವಾದರೆ ವಚನಾಂಕಿತ `ಪಾಟೀಲ ಗವಿಸಿದ್ಧ’ ಎಂದಾಗಿದೆ. ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿ ಗ್ರಾಮದ ಹನುಮಂತಗೌಡ ಪಾಟೀಲ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ:೧೬-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೭ರಿಂದ ಬಸವಕಲ್ಯಾಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ, ಪ್ರಭಾರಿ ಪ್ರಾಂಶುಪಾಲರಾಗಿ, ಸೇವೆ ಸಲ್ಲಿಸಿ, ೨೦೧೭ರಿಂದ ಹುಮನಾಬಾದ ಕಾಲೇಜಿನ ಪಿಜಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೇ ಸಾಹಿತ್ಯದ ಆಸಕ್ತರಾದ ಇವರು `ಕನಸುಗಣ್ಣಿನ ಹುಡುಗಿ’ (ಕವನಸಂಕಲನ) `ಕಾಗದದ ಚೂರು’ (ಕಥಾಸಂಕಲನ). `ಜನಜಾನಪದ’, `ಹೊತ್ತರಳಿ’, `ಜಾನಪದ ಕೈದೀವಿಗೆ’, `ರಂಗ ಸಿರಿ’, `ವಚನ ಸಿರಿ’, `ಶಿವದಾಸ ಚಿಂತನೆ’, `ಅರಿವಿನ ಬೆಳಕಲ್ಲಿ’ ಇವು ಅವರ ಪ್ರಮುಖ ಕೃತಿಗಳಾಗಿವೆ. ಮತ್ತು ವ್ಯಕ್ತಿ ಚಿತ್ರಣ, ಜೀವನ ಚರಿತ್ರೆ, ವಿಮರ್ಶೆ, ,ಪಠ್ಯ ಪುಸ್ತಕ,ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆ, ದಾಸ ಸಾಹಿತ್ಯ, ಸಂಪಾದನೆ ಸೇರಿ ಒಟ್ಟು ೯೪ಕೃತಿಗಳಲ್ಲಿ ೫೨ಸೃಜನಶೀಲ ಮತ್ತು ೪೨ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ೫೦ಕ್ಕೂ ಹೆಚ್ಚು ಅಭಿನಂದನ ಗ್ರಂಥ ೧೦೦ಕ್ಕೂ ಹೆಚ್ಚು ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ, ಪ್ರಸಾರವಾಗಿವೆ. ಇವರಿಗೆ ಕರ್ನಾಟಕ ಸರಕಾರದ ಕನಕ ಯುವ ಪುರಸ್ಕಾರ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ೪೦ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಮತ್ತು ಇವರಿಗೆ ಬೇಲೂರಿನಲ್ಲಿ ಜರುಗಿದ `ಹೈದರಾಬಾದ ಕರ್ನಾಟಕ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ ಇವರು ಧರಿನಾಡು ಕನ್ನಡ ಸಂಘ,ದಾಸ ಸಾಹಿತ್ಯ ಪರಿಷತ್ತು, ಲೋಹಿಯಾ ಪ್ರತಿಷ್ಠಾನ, ಬೀದರ ಜಿಲ್ಲಾ ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷರಾಗಿದ್ದಾರೆ. ಮತ್ತು ಸಾಕ್ಷಿ ಪ್ರತಿಷ್ಠಾನದ ಮೂಲಕ ಅನೇಕ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರವು ನೀಡುತ್ತಿದ್ದಾರೆ.
ಡಾ. ರಾಮಚಂದ್ರ ಗಣಾಪೂರ
ಸಾಹಿತ್ಯ ಕ್ಷೇತ್ರದಲ್ಲಿ ಕತೆ,ಕವನ,ಲೇಖನ ಪ್ರಬಂಧ ಮೊದಲಾದ ಪ್ರಕಾರದ ಬರಹಗಳನ್ನು ಬರೆದು ಉದಯೋನ್ಮುಖ ಲೇಖಕರಾಗಿ ಗುರುತಿಸಿಕೊಂಡವರೆAದರೆ ಡಾ.ರಾಮಚಂದ್ರ ಗಣಾಪೂರ. ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಗ್ರಾಮದ ಭೀಮಣ್ಣ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೫-೦೨-೧೯೭೫ರಲ್ಲಿ ತನ್ನ ತಾಯಿ ತವರುಮನೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀüಲ್., ಪಿ.ಹೆಚ್.ಡಿ. ಪದವಿಧರರಾದ ಇವರು ಬೀದರದ ಜ್ಞಾನಕಾರಂಜಿ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ನಿಮ್ಮೊಡನಿದ್ದೂ ನಿಮ್ಮಂತಾಗದೆ’ `ತನುವೆಂಬ ಮನೆಯೊಳಗೆ:’ `ಸಾಹಿತ್ಯ ಸಮೀಕ್ಷೆ ‘. `ಶಿಷ್ಯನೆಂಬಾ ವನಕ್ಕೆ’ `ನಿತ್ಯೋತ್ಸವದ ಕವಿ ನಿಸಾರ್ ಅಹಮದ್’, `ನಾಗಾರ್ಜುನ ಕಾಳಗ’, `ಗುಲಬರ್ಗಾ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ’, `ಸುವರ್ಣ ದಾಂಪತ್ಯ’, `ಕ್ವಾಟಿ ಜಾನಪದ’ ಇತ್ಯಾದಿ ೧೪ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕಲಬುರಗಿ ಹಾಗೂ ರಾಯಚೂರು ಆಕಾಶವಾಣಿಯಿಂದ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಮತ್ತು ರಾಷ್ಟಿçÃಯ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು ಸೇರಿದಂತೆ ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯ ವತಿಯಿಂದ ಡಾ. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಕವಿ ಸೂರ್ಯ ಪ್ರಶಸ್ತಿ, ಕಲ್ಯಾಣ ಚನ್ನ ಶ್ರೀ ಪ್ರಶಸ್ತಿ, ಕನ್ನಡ ಕಾವ್ಯ ರತ್ನ ಪ್ರಶಸ್ತಿ, ‘ಧರಿಶ್ರೀ ‘ ಪ್ರಶಸ್ತಿ, ‘ಕಾರಂತ ರತ್ನ’ ಪ್ರಶಸ್ತಿ, ‘ತನುವೆಂಬ ಮನೆಯೊಳಗಿನ ಕವಿ’. ‘ಉಪನ್ಯಾಸ ರತ್ನ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ. ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು `ಸ್ನೇಹಗಂಗಾ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ನಿಜಲಿಂಗ ಆರ್ ರಗಟೆ
ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಸಾಹಿತಿ ನಿಜಲಿಂಗ ಆರ್.ರಗಟೆಯವರು. ಮೂಲತಃ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚುಮ್ಮನಚೋಡ ಗ್ರಾಮದ ರಾಜಗುರು ಮತ್ತು ಇರಮ್ಮಾ ದಂಪತಿಗಳಿಗೆ ದಿನಾಂಕ ೪-೧೧-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಎ.ಮತ್ತು ಡಿ.ಸಿ.ಎ.ಪದವಿ ಪಡೆದ ಇವರು ಭಾಲ್ಕಿಯ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, `ಕನ್ನಡ ಒಡಲು’ `ಕನ್ನಡ ಕಣಜ’ `ನನ್ನ ಕವನ’ (ಕವನ ಸಂಕಲನಗಳು) `ಕಥಾಗುಚ್ಚ’ (ಕಥಾ ಸಂಕಲನ) `ಸಿರಿವಂತನ ದರ್ಪ’ (ನಾಟಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಬೀದರ ರಹಸ್ಯ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರು ೨೦೦೧ರಿಂದ ೨೦೦೫ರವರೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಾಹಿತ್ಯ ಸಿಂಚನ ಬೆಂಗಳೂರು ಮತ್ತು ಬಿಜಾಪುರ ಲೇಖಕರ ಬಳಗದಿಂದ ರಾಜ್ಯ ಮಟ್ಟದ ಪ್ರಶಸ್ತಿ, ಶಹಾಪೂರ ಸಾಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಕವಿರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ನ್ಯಾಷನಲ್ ವರ್ಚುಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯು ನೀಡಿ ಗೌರವಿಸಲಾಗಿದೆ. ಹಾಗೂ ನೈಜದೀಪ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ ಹಾಗೂ ಚಿಂಚೋಳಿ ತಾಲೂಕಿನ ಚಿಮ್ಮನಚೋಡದಲ್ಲಿ ಕೆಲವು ಕಾರ್ಯಕ್ರಮಗಳು ಮಾಡಿ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಉಮೇಶ ಬಾಬು ಮಠದ
`ಉಬಾಮ’ ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ಉದಯೋನ್ಮುಖ ಲೇಖಕರೆಂದರೆ ಉಮೇಶ ಬಾಬು ಮಠದ್. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಲ್ಲಹಳ್ಳಿ ಗ್ರಾಮದ ಬಸ್ಸಯ್ಯಾ ಮತ್ತು ಏಕಾಂತಮ್ಮ ದಂಪತಿಗಳಿಗೆ ದಿನಾಂಕ ೨೩-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪದವಿಧರಾದ ಇವರು ಹುಮನಾಬಾದ ನ್ಯಾಯಾಲಯದ ಡಿ.ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬೀದರ ಜಿಲ್ಲೆಯ ಸಾಹಿತಿಗಳ ಒಡನಾಟದಿಂದಲೇ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿ ಲೇಖಕರಾಗಿ ಹೊರಹೊಮ್ಮಿದರಿಂದ “ನಾನು ಸಾಹಿತಿಯಾಗಬೇಕಾದರೆ ಬೀದರ ಜಿಲ್ಲೆಯ ಪರಿಸರವೆ ಕಾರಣ ’’ ಎಂದು ಹೇಳುತ್ತಾರೆ. ಮತ್ತು `ವಸುಧೆಯೊಳಗಿನ ಅರ್ಭಟ’ (ಕವನಸಂಕಲನ) `ಚಿಗುರೆಲೆಗಳು ‘ (ಚುಟುಕು ಸಂಕಲನ) `ಸೋತ ಮನಸ್ಸಿಗೆ ಸಮಾಧಾನ’ (ಕಥಾಸಂಕಲನ) `ಬೆವರ್ಸಿ ಬದುಕಿನ ಬರಹಗಳು’ (ಲೇಖನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ನಿತ್ಯ ಸಂಜೀವಿನಿ ಮಂಗಳಾರತಿ’ ಎಂಬ ಸಂಪಾದಿತ ಕೃತಿ ಮುದ್ರಣದ ಹಂತದಲ್ಲಿದೆ. ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್
ಕನ್ನಡ ಮತ್ತು ಆಂಗ್ಲ ಯುವ ಬರಹಗಾರ್ತಿಯರಾಗಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ, ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್. ಇವರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಪಾಂಡುರAಗರಾವ ಮತ್ತು ನಾಗರತ್ನ ದಂಪತಿಗಳಿಗೆ ದಿನಾಂಕ ೧-೪-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಎಂ.ಎಸ್.ಡಿ.ಎನ್.ಎಚ್.ಇ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದರವಿಧರರಾದ ಇವರು ಕೆಲ ವರ್ಷ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬೆಂಡಿಗಾನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ಮೆಡಿಕಲ್ ಆಫಿಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ವಿವಾಹವಾದ ನಂತರ ಪತಿ ಡಾ. ಯಶಪಾಲ್ ಮಹಿಂದ್ರಕರ್ ಅವರೊಂದಿಗೆ ಬೀದರಗೆ ಬಂದು ಇಲ್ಲಿಯು ಕೆಲವರ್ಷ ದಿಲ್ಲಿ ಪ್ಯಾರಾ ಮೇಡಿಕಲ್ ಇನ್ಸ್ಟಿಟ್ಯೂಟ್‌ನ ಪ್ರಿನ್ಸಿಪಾಲ್ ರಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಯತ್ರಿಯಾಗಿ ಗುರುತಿಸಿಕೊಂಡ ಇವರು ತಮ್ಮ ಪತಿ ಬ್ರೀಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ೧೫ ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಬೀದರನಲ್ಲಿ ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿ ೨೦೨೦ರಲ್ಲಿ ಫೆಬ್ರವರಿ `ಚೈತ್ರದ ಚಿಗುರು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಬೀದರದ ಮಂದಾರ ಕಲಾವಿದರ ವೇದಿಕೆ ಹಾಗೂ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ರತ್ನ, ಕಾವ್ಯ ಪಂಕಜ, ಕಾವ್ಯ ಕುಸುಮಾಂಜಲಿ, ಮತ್ತು ಅನುಪಮ ನಿರಂಜನ ಪ್ರಶಸ್ತಿಗಳು ಲಭಿಸಿವೆ. ಇವರು ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಗಳಿಲ್ಲಿಯು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು
ವಿಶೇಷವಾಗಿ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದವರೆಂದರೆ, ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು. ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಳೆನೂರು ಗ್ರಾಮದ ದರಗಪ್ಪ ಮತ್ತು ಈರಮ್ಮ ದಂಪತಿಗಳ ಉದರಲ್ಲಿ ದಿನಾಂಕ ೧-೬-೧೯೮೬ರಲ್ಲಿ ಜನಿಸಿದ್ದಾರೆ. ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಬಸವಣ್ಣ, ಬುದ್ದ,ಅಂಬೇಡ್ಕರರ ವಿಚಾರಧಾರೆಗೆ ಮಾರುಹೋಗಿ, ಶರಣರ ತತ್ವನಿಷ್ಠೆಯ ಅಧ್ಯಾತ್ಮಿಕ ವೈಚಾರಿಕ ನೆಲೆಗಟ್ಟಿನಲ್ಲಿ, ವಚನ ಸಾಹಿತ್ಯ ಅಧ್ಯಯನ ಮಾಡಿದ ಇವರು ಲಿಂ. ಡಾ.ಮಾತೆ ಮಹಾದೇವಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಬಸವಕಲ್ಯಾಣದ ಬಸವಧರ್ಮ ಪೀಠದ ಬಸವ ಮಹಾಮನೆಯಿಂದ ನಾಡಿನಾದ್ಯಂತ ಬಸವತತ್ವ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಮಾತಾಜಿಯವರ ಸಾಹಿತ್ಯ ಸೇರಿದಂತೆ ಕಲ್ಯಾಣದ ಶರಣರ ವಚನಗಳನ್ನು ಅಧ್ಯಯನ ಮಾಡಿದ ಇವರು `ಚಿಂತನ ತವನಿಧಿ’ (ಚಿಂತನ) `ಶೋಧಿಸಿ ನೋಡು’ (ಕವನ ಸಂಕಲನ) `ದಾಂಪತ್ಯ ಧರ್ಮ’ (ಲೇಖನ ಸಂಕಲನ) `ಮೂಕ ಯೋಗಿ’ (ಆತ್ಮಕತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಶ್ರೀಗಳು ಧಾರ್ಮಿಕ ಸಾಮಾಜಿಕ ಸಂಘಟಕರು ಆಗಿರುವುದರಿಂದ ಅನ್ಯಾಯ ಅಪಪ್ರಚಾರದ ವಿರುದ್ಧ ಲೇಖನಗಳು ಬರೆದು ಆ ಮೂಲಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ನಾಡಿನಾದ್ಯಂತ ರಾಷ್ಟ್ರೀಯ ಬಸವದಳದ ಶಾಖೆಗಳನ್ನು ತೆರೆದು ಹಳ್ಳಿಗಳಲ್ಲಿ ಬಸವತತ್ವ ಪ್ರಚಾರೋಪನ್ಯಾಸ ಮಾಡುವುದರೊಂದಿಗೆ ಅನಾಥ ಮಕ್ಕಳಿಗೆ ಉಚಿತ ಆಶ್ರಯ ನೀಡಿ `ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಲ್ಪಟ್ಟ ಅಕ್ಕನಾಗಲಾಂಬಿಕ ಮಕ್ಕಳ ಮಹಾಮನೆ’ ಎಂಬ ಅನಾಥ, ನಿರ್ಗತಿಕ,ಎಚ್.ಐ.ವಿ.ಪೀಡಿತ ಮಕ್ಕಳಿಗೆ ಸುಮಾರು ೧೫ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಇವರು ಬರೆದ ಲೇಖನ, ಕವನ, ಚಿಂತನ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಹೊಸ ದಿಂಗತ, ದಿ.ಹಿಂದೂ, ಕಲ್ಯಾಣ ಕಿರಣ, ಲಿಂಗಾಯತ ಕ್ರಾಂತಿ, ಶಾಂತಿ ಕಿರಣ, ಬಸವ ಮಾರ್ಗ, ಬಸವ ಪಥ, ನ್ಯಾಯಪಥ, ಶೋಧವಾಣಿ ಮತ್ತು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಬೀದರ ಮೂಲದ ಸಾಹಿತಿಗಳು
ವಿ.ರಾ.ಚಾಂಬಾಳ
ದಲಿತ ಸಂವೇದನೆಯ ಸಾಹಿತ್ಯ ರಚಿಸಿ ಬೀದರ ಜನತೆಗೆ ಎಲೆ ಮರೆಯ ಕಾಯಿಯಂತೆ ಉಳಿದ ಕವಿಯೆಂದರೆ ವಿ.ರಾ.ಚಾಂಬಾಳ. ಇವರ ಪೂರ್ಣ ನಾಮ ವಿಠಲ ತಂದೆ ರಾಮಚಂದ್ರ ಚಾಂಬಾಳ ಎಂದಾಗಿದೆ. ಇವರು ಬೀದರ ತಾಲೂಕಿನ ಚಾಂಬಾಳ ಗ್ರಾಮದ ರಾಮಚಂದ್ರ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೬-೧೯೪೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ೧೯೬೯ರಲ್ಲಿ ಕಲಬುರಗಿಯ ಸರ್ಕಾರಿ ಮುದ್ರಣಾಲಯದಲ್ಲಿ ಸಹಾಯಕ ಯಂತ್ರ ಚಾಲಕರಾಗಿ, ಅಗ್ರ ಕಾರ್ಮಿಕ, ಪೊರಮನ್ ಆಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತಿಯಾಗಿದ್ದಾರೆ.
ಇವರು ಬುದ್ಧ,ಭೀಮ ಅಂಬೇಡ್ಕರ್ ರ ತತ್ವ ವಿಚಾರಗಳಿಗೆ ಮಾರು ಹೋಗಿ ೧೯೮೦ರಲ್ಲಿ ಭೀಮ ಗೀತೆ, ೧೯೮೮ರಲ್ಲಿ ಭೀಮನಾಮ ಗೀತಾವಳಿ, ೧೯೮೯ರಲ್ಲಿ ಭೀಮ ಭಜನೆ, ೧೯೯೦ರಲ್ಲಿ ಭೀಮ ಜ್ಯೋತಿ, ೧೯೯ರಲ್ಲಿ ಭೀಮ ಬೆಳಕು, ೨೦೦೨ರಲ್ಲಿ ಭೀಮ ಧ್ವನಿ, ೨೦೦೩ರಲ್ಲಿ ಭೀಮ ಶಕ್ತಿ, ೨೦೦೫ರಲ್ಲಿ ಭೀಮ ಸ್ವಾಭಿಮಾನಿ, ೨೦೦೬ರಲ್ಲಿ ಭೀಮ ಸಿಡಿಲು, ೨೦೦೭ರಲ್ಲಿ ಭೀಮ ಮಂಗಲ. ಎಂಬ ಅಂಬೇಡ್ಕರ್ ಕುರಿತಾದ ಗೀತೆಗಳು ಮತ್ತು ೨೦೧೧ರಲ್ಲಿ ಬುದ್ಧ-ಭಾನು ಭೀಮ-ಕಿರಣ, ೨೦೧೨ರಲ್ಲಿ ಮಾನವ ಯಾರು ? ೨೦೧೩ರಲ್ಲಿ ಸ್ವರ್ಗ ಮತ್ತು ನರಕ, ೨೦೧೪ರಲ್ಲಿ ಪ್ರೀತಿ ಮತ್ತು ಸಂಬAಧಗಳು, ೨೦೧೫ರಲ್ಲಿ ಶಾಂತಿಯ ಕೇಂದ್ರ, ಮತ್ತು ಬೌದ್ಧ ಧರ್ಮದ ತಿರುಳು. ಎಂಬ ವೈಚಾರಿಕ ಬೌದ್ಧ ಸಾಹಿತ್ಯ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೧೨ರಲ್ಲಿ ಭಾರತೀಯ ದಲಿತ ಸಾಹಿತ್ಯ ಪರಿಷತ್ತು ನವದೆಹಲಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ, ಕಲಬುರಗಿ ಕಸಾಪದಿಂದ ಭೀಮ ಕವಿ ಪ್ರಶಸ್ತಿ, ಖರ್ಗೆ ೭೨ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಕುಶಾಗ್ರಮತಿ ಖರ್ಗೆ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ೨೦೧೪ರಲ್ಲಿ ಮೈಸೂರು ದಸರಾ ಕವಿಗೊಷ್ಠಿಯಲ್ಲಿ, ೨೦೨೦ರಲ್ಲಿ ಕಲಬುರಗಿಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.
ಡಾ.ಕಾಶಿನಾಥ ಅಂಬಲಗೆ
ಕವಿ,ಸಾಹಿತಿ, ಅನುವಾದಕರಾಗಿ ಚಿರಪರಿಚಿತರಾದ ಹಿರಿಯ ಲೇಖಕರೆಂದರೆ ಡಾ.ಕಾಶಿನಾಥ ಅಂಬಲಗೆ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಚಳಂಬಿ ಗ್ರಾಮದ ರಾಚಪ್ಪ ಮತ್ತು ಗುರಮ್ಮ ದಂಪತಿಗಳಿಗೆ ದಿನಾಂಕ ೧೦-೭-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿಎಚ್.ಡಿ ಪದವಿಧರರಾದ ಇವರು ಪದವಿ ಕಾಲೇಜು ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು `ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಕೌದಿ, ಹುಲ್ಲು ಮೇಲಿನ ಹನಿಗಳು, ಚುಳುಕಾದಿರಯ್ಯ, ಬೇವು-ಬೆಲ್ಲ, ಹಾಡುಗಳು ಉಳದಾವ, ಮೂವತ್ತಕ್ಕೆ ಮುನ್ನೂರು, ಶರಣು ಶರಣಾರ್ಥಿ ಗಜಲ್ ಗಳು. ಎಂಬ ಕವನ ಸಂಕಲನಗಳು, ಕಬೀರದಾಸರು,ಜ್ಞಾನ ಪೀಠ ಪ್ರಶಸ್ತಿ ವಿಜೇತ ಗುಜರಾತಿ ಕವಿ ಉಮಾಶಂಕರ ಜೋಶಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಭಗತ್ ಸಿಂಗ್, ಜಗದ ಮಹಾ ನಟ ಚಾರ್ಲಿಚಾಂಪ್ಲಿನ್, ಮಹಾತ್ಮ ಜ್ಯೋತಿಬಾಪುಲೆ,ನಾರಾಯಣ ಗುರು, ಡಾ.ರಾಜಕುಮಾರ, ಸಾವಿತ್ರಿಬಾಯಿ ಪುಲೆ,ಸ್ವಾಮಿ ವಿವೇಕಾನಂದ, ಬಾಬಾ ಆಮಟೆ,ಜಗದಗಲ ಮುಗಿಲಗಳು, ದಾರಿ ದೀಪಗಳು, ಶಿವಶರಣೆಯರು ಹಾಗೂ ಮಹಿಳಾ ಸಂಪನ್ಮೂಲ, ವಚನ ಸಾಹಿತ್ಯ- ಸಂತ ಸಾಹಿತ್ಯ, ವಚನ ಬೆಳಕು,ಸತಿಯೆ ಸಾಕಿಯಾದ ಕವಿ ಸಮಯ, ವಚನವಿಚಾರೋತ್ಸವ,ಗಾಂಧಿ ವಿಚಾರಧಾರೆ, ಆಯ್ದ ೭೨ ಅನಿಕೇತನ ಕನ್ನಡ ಗಜಲ್ ಗಳು, ಆಯ್ದ ೭೧ ಕವಿತೆಗಳು, ಆಯ್ದ ೭೧ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಅನಿಕೇತನ ಕನ್ನಡ ಕವಿತೆಗಳು, ಇತ್ಯಾದಿ ಅವರ ಕನ್ನಡದ ಪ್ರಮುಖ ಕೃತಿಗಳು ರಚಿಸಿದ್ದಾರೆ.
`ಅಧೂರೆ ಶಬ್ದ, ಸಂತ ಔರ ಶಿವಶರಣೋಂ ಕೆ ಕಾವ್ಯ ಮೇ ಸಾಮಾಜಿಕ ಚೇತನಾ, ಶರಣ ಔರ ಸಂತ: ಸಾಮಾಜಿಕ ಚಿಂತನ, ಬಸವೇಶ್ವರ: ಕಾವ್ಯ ಶಕ್ತಿ ಔರ ಸಾಮಾಜಿಕ ಶಕ್ತಿ, ವಚನ ಸಾಹಿತ್ಯ ಔರ ಸಂತ ಸಾಹಿತ್ಯ ಕಾ ಸಮಾಜ ಶಾಸ್ತ್ರ, ಬಾರವಿ ಶಾದೀ ಕೀ ಕನ್ನಡ ಕವಿತ್ರಿ ಅಕ್ಕಮಹಾದೇವಿ ಔರ ಸ್ತ್ರೀ ವಿಮರ್ಶ, ಬಸವಾದಿ ಶರಣೋಂ ಕೆ ಸಾಹಿತ್ಯ ಕಿ ಸಾಮಾಜಿಕ ಚೇತನಾ, ಸಿದ್ದರಾಮೇಶ್ವರ, ಗಾಂದಿಗಿರಿ, ಬಸವೇಶ್ವರ ಸಮತಾ ಕಿ ಧ್ವನಿ, ಅಲ್ಲಮಪ್ರಭು: ಪ್ರತಿಭಾ ಕಾ ಶಿಬಿರ, ಚೆನ್ನ ಬಸವಣ್ಣ: ಮಹಾಜ್ಞಾನಿ, ಮೋಳಿಗೆ ಮಾರಯ್ಯ : ಮೋಳಿಗೆ ಮಹಾದೇವಿ, ಆಯ್ದಕ್ಕಿ ಮಾರಯ್ಯ- ಲಕ್ಕಮ್ಮ, ಹಡಪದ ಅಪ್ಪಣ- ಲಿಂಗಮ್ಮ, ಉರಿಲಿಂಗ ಪೆದ್ದಿ – ಕಾಳವ್ವೆ, ವಚನ ಚಿಂತನ, ಕಾವ್ಯ ಕೇವಲ ಕಾವ್ಯ. ಇವು ಅವರು ಬರೆದ ಹಿಂದಿ ಭಾಷೆಯ ಕೃತಿಗಳು.
ಅಷ್ಟೇಯಲ್ಲದೆ ಇವರು ಅನುವಾದಕರಾಗಿಯು ಉತ್ತಮ ಕೃಷಿ ಮಾಡಿದ್ದಾರೆ. ಹಿಂದಿ ಭಾಷೆಯಿಂದ ಕನ್ನಡಕ್ಕೆ ೧೯. ಕನ್ನಡದಿಂದ ಹಿಂದಿಗೆ ೫ ಕೃತಿಗಳು ಅನುವಾದಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಸಾಹಿತ್ಯ ರಚಿಸುವುದರೊಂದಿಗೆ ಆ ಎರಡು ಭಾಷೆಗಳಲ್ಲಿ ಒಟ್ಟು ಇಲ್ಲಿಯವರೆಗೆ ೮೭ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕವನಗಳು ಪಂಜಾಬಿ, ಉರ್ದು, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ,ಪ್ರಸಾರವಾಗಿವೆ. ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಮತ್ತು ಬೀದರದ ೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಇವರನ್ನು ಗೌರವಿಸಲಾಗಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆರ್.ಕೆ.ಹುಡಗಿ
ಕರ್ನಾಟಕದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾಗಿ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಿಸಿದ ಹಿರಿಯ ಬಂಡಾಯ ಸಾಹಿತಿಗಳೆಂದರೆ ಆರ್.ಕೆ.ಹುಡಗಿ. ಇವರ `ಪೂರ್ಣನಾಮ ರಾಮಶೆಟ್ಟಿ ತಂದೆ ಕರಿಬಸಪ್ಪಾ ಹುಡಗಿ’ ಎಂದಾಗಿದೆ. `ರಾಹು’ ಎಂಬುದು ಇವರ ಕಾವ್ಯನಾಮವಾಗಿದೆ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಕರಿಬಸಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ್ ಸ್ನಾತಕೋತ್ತರ ಪದವಿಧರರಾದ ಇವರು ೧೯೭೪ರಲ್ಲಿ ಕಲಬುರಗಿಯ ಪಿ.ಡಿ.ಎ.ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಎಡಪಂಥೀಯ ವಿಚಾರಗಳಿಂದ ಪ್ರತಿಭಟಿಸುತ್ತಾ ಬೆಳೆದವರು. ಮತ್ತು ಆ ವಿಚಾರಧಾರೆಗಳಿಂದ ಸಾಹಿತ್ಯವು ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಇವರು ಬರೆದ ಕೆಲ ಕೃತಿಗಳೆಂದರೆ, `ಈರೋಬಿ’ (ಗೀತ ನಾಟಕ) ‘ಬಾಯಿಂದ ಬಾದಶಹ ಪುರಾಣ’ `ಹೆಮ್ಮಾರಿಯ ರಸ ಪುರಾಣ’ `ಪ್ರಳಯಾಂತಕ ಪ್ರತಿಕಾರ’ `ಅಸಮಾನತೆಯ ಅಸುರಿ ಮುಖಗಳು’. `ಸಂಸ್ಥಾ’ (ರಂಗನಾಟಕ) `ಬರದ ಬಯಲಾಟ’. `ಅಕ್ಷರ’ `ಒರೆಗಲ್ಲು’. `ಪಾದಚಾರಿಯ ಪುರಾಣ’ `ಸಾಕು ನಾಯಿ’ `ಜ್ಯೊಲ್ಯಾ ನಾಯಿ’ `ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ’ `ಅನ್ನದಾತನ ಅರ್ತನಾದ’ `ಅನಾಮಿ ಪಿಂಡದ ಅರ್ತನಾದ’ `ನರಗುಂದ ರೈತನ ಬಂಡಾಯ’ `ಗುರು ಸಾರಥಿ- ಶಿಷ್ಯ ಅತಿಥಿ’ `ಭಗಾವತ್ ಗೀತೆ’ (ಬೀದಿ ನಾಟಕಗಳು) ಬರೆದು ಪ್ರದರ್ಶಿಸಿದ್ದಾರೆ. ಈ ನಾಟಕಗಳು ಸಂಸ್ಕೃತ ಜಾಥ, ವಿಜ್ಞಾನ ಜಾಥ,ಅಕ್ಷರ ಜಾಥ,ಬರಗಾಲ ಜಾಥ,ಮಹಿಳಾ ಜಾಥಾ,ಭ್ರಷ್ಟಾಚಾರ ವಿರುದ್ಧದ ಜಾಥಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ೧೬೬೫ ಪ್ರದರ್ಶನಗಳು ಕಂಡು ಜನ ಮೆಚ್ಚುಗೆ ಪಡೆದಿವೆ. ಅಷ್ಟೇಯಲ್ಲದೆ ಇವರು ಉತ್ತಮ ಅನುವಾದಕರು ಆಗಿದ್ದರಿಂದ ಇಂಗ್ಲೀಷ್, ಮರಾಠಿ, ಹಿಂದಿ ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನೇಕೆ ನಾಸ್ತಿಕ (ಭಗತ್ ಸಿಂಗ) ವಿಮೋಚನೆಯ ದಾರಿ, (ಇ.ಎಂ.ಎನ್.ಎನ್) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್) ಸಮರ್ಥ ಸಾಮ್ಯವಾದಿ (ಲಿವು-ಶಾವೊಕಿ) ಜ್ಯೋತಿ ಬಸು, (ಸುರಭಿ ಬ್ಯಾನರ್ಜಿ) ದಲಿತ ಸಂಘರ್ಷ: ದಾರಿ-ದಿಕ್ಕು (ಆನಂದ ತೇಲತುಂಬ್ಡೆ), ದಲಿತರು :ಭೂತ-ಭವಿಷ್ಯ, (ಆನಂದ ತೇಲತುಂಬ್ಡೆ) ಜಾತಿ ವ್ಯವಸ್ಥೆ- ಸಮಸ್ಯೆ ಸವಾಲುಗಳು, (ಬಾಬು ಜಗಜೀವನರಾಮ), ಜಾತಿ ವ್ಯವಸ್ಥೆ:- ಉಗಮ-ವಿಕಾಸ-ವಿನಾಶ (ಡಾ.ಬಿ.ಆರ್.ಅಂಬೇಡ್ಕರ್) ಮೈ ಫ್ಯುಡಲ್ ಲಾರ್ಡ್ ತೆಹಮಿನಾ ದುರ್ರಾನಿ ಅವರ ಆತ್ಮಕಥನ ‘ಆರನೆ ಹೆಂಡತಿಯ ಆತ್ಮಕಥನ‘, ಪೀಠಾಧಿಪತಿಯ ಪತ್ನಿ, ತುರಣ್ ತೇಜಪಾಲ್ ಅವರ ‘ದಿ ಅಲ್ಕೆಮಿ ಆಫ್ ಡಿಸೈರ್’ ‘ಕಾಮರಾಸಾಯನ ಶಾಸ್ತ್ರ’ ಬೆಸ್ಟ್ಸೆಲ್ಲರ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರು ೧೯೭೬ ರಲ್ಲಿ ಕಲಬುರಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ,೧೯೮೬ರಲ್ಲಿ ೧೦೦ ಅಡಿಗಳ ಬಣ್ಣದ ಜಾಗದಲ್ಲಿ ಸಂಘಟಕರಾಗಿ,೧೯೯೧ ಸಾಕ್ಷರತೆ ಜಾಥ,೧೯೯೨ರಲ್ಲಿ ಜನವಿಜ್ಞಾನ ಜಾಥ, ೨೦೦೫ ರಲ್ಲಿ ಭ್ರೂಣ ಹತ್ಯೆ ವಿರುದ್ಧ ಪ್ರಚಾರ ಜಾಥ,೨೦೦೯ ರಲ್ಲಿ ರೈತ ಪರ ಜಾಥಗಳಲ್ಲಿ ಲೇಖಕ ಮತ್ತು ಸಂಘಟಕರಾಗಿ ಸೇವೆ ಸಲ್ಲಿಸಿದ ಇವರು ೨೦೧೧ರಲ್ಲಿ ನಾಡಿನ ನೆಲ-ಜಲ ಉಳಿಸಲು ಬೀದರನಿಂದ ಬಳ್ಳಾರಿವರೆಗೆ ಸಂಘಟಕರಾಗಿ ಹೋರಾಟ ಮಾಡಿದ್ದಾರೆ. ಮತ್ತು ೧೯೮೫ರಿಂದ ೧೯೯೩ವರೆಗೆ ೧೯೯೮ರಿಂದ ೨೦೦೫ವರೆಗೆ ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳ ಸಂಘಟಕರಾಗಿ ದುಡಿದಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಶತಮಾನೋತ್ಸವದ ಸಂದರ್ಭದಲ್ಲಿ ೧೧೭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ೧೯೮೭ರಲ್ಲಿ ಬಿಜಾಪುರ ಜಿಲ್ಲೆಯಲ್ಲಿಯ ದೇವದಾಸಿ ಪದ್ದತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗತಿ ನಾಟಕ ಪ್ರದರ್ಶನ ಸಂಘಟರಾಗಿದ್ದರು. ೧೯೭೭ ರಿಂದಲೂ ಸಮುದಾಯ ಸಕ್ರಿಯ ಸದಸ್ಯರಾಗಿ, ಪೀಪಲ್ ಸೋಸಿಯೊ ಕಲ್ಚರಲ್ ಆರ್ಗನೈಸೇಷನ್ ಅಧ್ಯಕ್ಷರಾಗಿ, ಇಂಡೋ-ಸೋವಿಯತ್ ಕಲ್ಚರಲ್ ಸೊಸೈಟಿ ಕಲಬುರಗಿ ವಿಭಾಗದ ಅಧ್ಯಕ್ಷರಾಗಿ ೧೯೮೪ರಿಂದ ೧೯೯೦ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ ಕಾರ್ಯದರ್ಶಿ,ಉಪಾಧ್ಯಕ್ಷ, ಅಧ್ಯಕ್ಷರಾಗಿ ಸುಮಾರು ೨೭ ವರ್ಷ ಸೇವೆ ಸಲ್ಲಿಸಿದ್ದಾರೆ.ಮತ್ತು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ, ಭಾರತ ಜ್ಞಾನ- ವಿಜ್ಞಾನ ಸಮಿತಿಯ ಅಧ್ಯಕ್ಷರಾಗಿ, ಕಲಬುರಗಿ ಸಮುದಾಯ ಘಟಕದ ಅಧ್ಯಕ್ಷರಾಗಿ, ಉತ್ತರ ವಲಯದ ಕಾರ್ಯದರ್ಶಿ, ಹಾಗೂ ೨೦೦೬ರಿಂದ ರಾಜ್ಯ ಸಮುದಾಯದ ಅಧ್ಯಕ್ಷರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಶುದ್ಧೀಕರಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೭೯-೮೦ ರಲ್ಲಿ ಕಲಬುರಗಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ, ಗುಲಬರ್ಗಾ ರಾಜಕೀಯ ಶಾಂತಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೫ರಲ್ಲಿ ಕಲಬುರಗಿ ಮೊದಲ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ಇವರ `ಕಾರ್ಪೊರೇಟ್ ಕಾಲದಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ೨೦೧೫ ರಲ್ಲಿ ಇವರು ಮಾಡಿದ ಭಾಷಾಂತರ ಜೀವಮಾನ ಸಾಧನೆಗೆ `ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ ಯು ಲಭಿಸಿದೆ. ಸದ್ಯ ಇವರು ಕಲಬುರಗಿ ನಿವಾಸಿಯಾಗಿದ್ದು ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು ಸಾವಿರಾರು ಮಹತ್ವದ ಪುಸ್ತಕಗಳು ಸಂಗ್ರಹಿಸಿದ ಮಹಾನ್ ಪುಸ್ತಕ ಪ್ರೇಮಿಯು ಇವರಾಗಿದ್ದಾರೆ.
ಕ್ಷಿತಿಜ್ ಬೀದರ್
`ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಕತೆ ಕಾದಂಬರಿಗಳನ್ನು ಬರೆದು ನಾಡಿನಾದ್ಯಂತ ಖ್ಯಾತರಾದ ಇವರ ನಿಜನಾಮ `ಬಸವರಾಜ ಮಠಪತಿ’ ಎಂದಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ನಾಗಯ್ಯ ಸ್ವಾಮಿ ಮಠಪತಿ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಎಂ.ಎ.ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ೧೯೮೩ರಲ್ಲಿ `ನಾನು ಮತ್ತು ನಮ್ಮವರು’ ಎಂಬ ಕವನಸಂಕಲನ ೧೯೮೭ರಲ್ಲಿ `ಹೇಗಾದರೂ ಬದುಕು’ ಎಂಬ ವೈಚಾರಿಕ ಕೃತಿ, `ಅಮಲು’ `ಪ್ರೀತಿಸಿದವನು ನೀನೊಬ್ಬನೆ ಅಲ್ಲ’. `ಕಬ್ಬಿನ ಬನದಲ್ಲಿ’ `ನಿಶ್ಯಬ್ದದೆಡೆಗೆ’ `ಅಪರಿಚಿತರು’ `ಹೊಸ್ತಿಲಾಚೆ’ `ಬೆಲೆ’ `ಕ್ಷಿತಿಜದೆಡೆಗೆ’. `ಕತ್ತಲೋಳಗೆ’ `ಪ್ರೀತಿ ಅರಳಿತ್ತು’. `ಅಮಾತ್ರ’ `ಅಸ್ಪಷ್ಟ’ `ಕೀ-ರಿಂಗ್’ `ಇ-ಮನಸ್ಸು@ವೀರಭದ್ರ’ ಎಂಬ ಕಾದಂಬರಿಗಳು, `ಕಥೆಗಳು ಕಾಯುವುದಿಲ್ಲ ‘ `ಅದ್ರುವ’ ‘ದರ್ಶನ’ `ಅನರ್ಥ’ `ಅಡ್ಡಫಲ’ `ಬೇರಿಲ್ಲದ ಹೂ ಗರಿ’ `ನೆರಳಿನಷ್ಟೇ ಕತ್ತಲು’ ಎಂಬ ಕಥಾ ಸಂಕಲನಗಳು, `ಪತ್ತೆದಾರಿ ಇರುವೆ’ ಮತ್ತು `ಗಿಳಿಮಣಿ’ ಎಂಬ ಮಕ್ಕಳ ಕಥಾಸಂಕಲನಗಳು, `ಭಾವಸುದ್ದಿ’ ‘ದೇಹವೆ ದೇಗುಲ’ `ಕ್ಷಣಿಕ’ `ಪ್ರಜ್ಚಾಯಾನ’ `ಮನತುಂಬಿ’ ಎಂಬ ಚಿಂತನಾ ಕೃತಿಗಳು, ಹಾಗೂ `ಶಿಖರ ಜ್ಯೋತಿ’ `ಹಿಪ್ಪುನೆರಳೆಯಿಂದ ರೇಷ್ಮೆ’ `ಉದ್ಯಮ ಮಾಹಿತಿ’ ಎಂಬ ಲೇಖನ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕತೆ ಕವನ ಲೇಖನ ಕಾದಂಬರಿಗಳು ತುಷಾರ, ಮಯೂರ, ಪ್ರಜಾವಾಣಿ, ಕನ್ನಡ ಪ್ರಭ, ತರಂಗ ಉಷಾ, ಬೆಳಕಿಂಡಿ, ಚಂದನ, ಪ್ರಜಾರಂಗ ಸುಧಾ, ಕರ್ಮವೀರ, ರಾಗಸಂಗಮ, ನವರಾಗಸಂಗಮ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಕೆಲ ಕಾದಂಬರಿ ಬರಹಗಳು ಧಾರಾವಾಹಿ ಅಂಕಣ ಬರಹಗಳಾಗಿಯೂ ಪ್ರಕಟವಾಗಿವೆ. ಸದ್ಯ ಇವರು ತುಮಕೂರಿನಲ್ಲಿ ವಾಸವಾಗಿದ್ದಾರೆ.
ಡಾ.ವಿಜಯಶ್ರೀ ಸಬರದ
ಮಹಿಳಾ ಹಿರಿಯ ಸಾಹಿತಿಗಳಾದ ಡಾ.ವಿಜಯಶ್ರೀ ಸಬರದ ಇವರು ಮೂಲತಃ ಬೀದರ ಜಿಲ್ಲೆ ಔರಾದ ತಾಲೂಕಿನ ಹಕ್ಯಾಳ ಗ್ರಾಮದವರು .ಇವರು ದಿನಾಂಕ ೧೦-೨-೧೯೫೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವೀಧರರಾಗಿ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಖ್ಯಾತ ಸಾಹಿತಿ ಡಾ. ಬಸವರಾಜ ಸಬರದ ಅವರ ಧರ್ಮಪತ್ನಯಾಗಿದ್ದಾರೆ. `ವಿಜಯ ಪ್ರಿಯ ಬಸವ’ ಎಂಬ ವಚನಾಂಕಿತದಿAದ ಆಧುನಿಕ ವಚನ ಬರೆದು ಕವನ, ಲೇಖನ, ಪ್ರಬಂಧ ಮೊದಲಾದವು ಬರೆದು ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಕಡೆಗಳಿಂದ ಪ್ರಶಸ್ತಿ, ಹಾಗೂ ಬಹುಮಾನ ಪುರಸ್ಕಾರಗಳು ಲಭಿಸಿವೆ.
ಡಾ.ನೀಲಾಂಬಿಕಾ ಶೇರಿಕಾರ
ಜನಪದ ಮತ್ತು ಶರಣ ಸಾಹಿತ್ಯದಲ್ಲಿ ಸಂಶೋಧನಾತ್ಮಕ ಕಾರ್ಯ ಚಟುವಟಿಕೆ ನಡೆಸಿ ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಡಾ.ನೀಲಾಂಬಿಕಾ ಶೇರಿಕಾರ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಶೇರಿಕಾರ ಎಂಬ ದೊಡ್ಡ ಮನೆತನದ ನಾಗಶೆಟ್ಟೆಪ್ಪಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಕಲಬುರಗಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ರಚಿಸಿದ ಕೃತಿಗಳೆಂದರೆ `ಹಾಡಿದೇನು ಹಾಡು’ `ಮಹಾಮನೆಯ ಮಹಿಮಾ’, `ನನ್ನವ್ಬ’ ಎಂಬ ಕವನ ಸಂಕಲನಗಳು, `ಬಹುರೂಪಿ ಚೌಡಯ್ಯ’ `ಪೂಜ್ಯ ಚನ್ನಬಸವ ಪಟ್ಟದ್ದೆವರು’, ‘ಕಲ್ಯಾಣ ಕಣ್ಮಣಿ ಬಾಬಾಸಾಹೇಬ ವಾರದ’ ‘ಪೂಜ್ಯ ದೊಡ್ಡಪ್ಪ ಅಪ್ಪ’, `ನಿರವತಾರೆ ಅಕ್ಕ ನಾಗಮ್ಮ’, `ವೈದ್ಯ ನಕ್ಷತ್ರ’, ‘ಅಷ್ಟಾವರಣೆ’. `ಅನುಭವ ಮಂಟಪ’, `ಮಹಾಮನೆ’, ಇವು ಅವರ ಪ್ರಮುಖ ಶರಣ ಸಾಹಿತ್ಯ ಕೃತಿಗಳಾಗಿವೆ. `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು’, `ಶರಣಬಸವರ ಹಂತಿಯ ಹಾಡು’, `ಶರಣಬಸರ ಲಾವಣಿ ಪದಗಳು’, `ಜನಪದ ಜ್ಯೋತಿ ಶರಣಬಸವ’ `ಶರಣಬಸವರ ಶಿವಲೀಲೆಗಳು’ ಇವು ಅವರ ಸಂಪಾದಿತ ಕೃತಿಗಳಾಗಿವೆ. `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು’ ಕೃತಿಗೆ ಮುಖ್ಯ ಮಂತ್ರಿಯಿAದ ಪ್ರಶಸ್ತಿಯು ಲಭಿಸಿದೆ. ಮತ್ತು `೭೭೦ ಅಮರ ಗಣಂಗಳು’ `ಬಸವಕಲ್ಯಾಣ ಶರಣರ ನೆಲೆಗಳು’ `ತಾಯಿಯ ಪದ’ `ಹೇಮರೆಡ್ಡಿ ಮಲ್ಲಮ್ಮ’ ಈ ಕೃತಿಗಳು ಮುದ್ರಣದ ಹಂತದಲ್ಲಿವೆ.
`ದಾಸೋಹ ಬಂಡಾರಿ ಶರಣಬಸವ’ ಎನ್ನುವುದು ಇವರ ಜನಪದ ಮಹಾಕಾವ್ಯವಾಗಿದೆ. ಅಷ್ಟೇಯಲ್ಲದೆ ಇವರು ತ್ರಿಪದಿಯಲ್ಲಿ ಭಾಲ್ಕಿ ಶ್ರೀಗಳ ಕುರಿತು ಮತ್ತು ಜನಪದ ಜ್ಯೋತಿ ಶರಣಬಸವ ಕೃತಿಗಳನ್ನು ರಚಿಸಿz ªಇವರು ಉತ್ತಮ ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಹಂಪಿ,ಗುಲ್ಬರ್ಗ ವಿಶ್ವವಿದ್ಯಾಲಯಗಳ ಎಂ.ಫಿಲ್.ಪಿ.ಎಚ್. ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರ ಮನೆತನದ ಇನ್ನೊಂದು ಹೆಮ್ಮೆಯ ವಿಷಯವೆಂದರೆ ನಿಜಾಮ ಆಡಳಿತದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರ ಕುಟುಂಬವು ಬಡವರಿಗೆ ಅನ್ನ ಅರಿವೆ ಆಶ್ರಯ ನೀಡಿ ಹಿಂದು ಮುಸ್ಲಿಂ ಎನ್ನದೆ ಎರಡು ಸಮೂದಾಯದವರ ಜೀವ ರಕ್ಷಣೆ ಮಾಡಿರುವುದು ಈಗ ಐತಿಹ್ಯವಾಗಿದೆ.
ಡಾ.ಕಲ್ಯಾಣಮ್ಮ ಲಂಗೋಟಿ
ಹೆಸರಾಂತ ಶರಣ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪುಸ್ತಕ ಪ್ರಕಟಿಸಿದ ಮಹಿಳಾ ಲೇಖಕಿಯೆಂದರೆ ಡಾ.ಕಲ್ಯಾಣಮ್ಮ ಲಂಗೋಟಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬೀರಗಿ ಗ್ರಾಮದ ಶ್ರೀ ಹಾವಪ್ಪ ಕೋಟೆನವರ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳಿಗೆ ದಿನಾಂಕ ೫-೨-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಬಿಜಾಪುರದ ಶರಣ ಸಾಹಿತಿ ಪ್ರೊ. ಸಿದ್ಧಣ್ಣ ಲಂಗೋಟಿಯವರ ಧರ್ಮ ಪತ್ನಿಯಾಗಿದ್ದು, ಶರಣ ಸಾಹಿತ್ಯಕ್ಕೆ ಸಾಕಷ್ಟು ಕೃತಿಗಳನ್ನು ನೀಡಿದ್ದಾರೆ. ೧೯೮೦ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆಂಬಳಗಿ ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ೧೯೭೯ರಲ್ಲಿ `ಮರಣವೇ ಮಹಾ ನವಮಿ’ ಎಂಬ ಲೇಖನ ಕೃತಿ, ೧೯೮೦ರಲ್ಲಿ `ಗಣನಾಯಕ ಮಡಿವಾಳ ಮಾಚಿದೇವರು’ ೧೯೮೨ರಲ್ಲಿ `ಷಣ್ಮುಖ ಶಿವಯೋಗಿಗಳು ಕಂಡ ಬಸವಣ್ಣನವರು’ ೧೯೮೫ರಲ್ಲಿ `ಶರಣೆಯರ ವಚನಾಮೃತ’ ೧೯೮೮ರಲ್ಲಿ `ಶರಣೆಯರ ವಚನಗಳು’ ೧೯೮೯ರಲ್ಲಿ `ಸಿದ್ಧಲಿಂಗೇಶ್ವರರು ಕಂಡ ಬಸವಣ್ಣನವರು’ `ದೇವದಾಸಿ ಪದ್ದತಿ ವಿಮೋಚನೆ ಹಾಗೂ ಬಸವಣ್ಣನವರು’ ಮತ್ತು `ಅಕ್ಕ ಮಹಾದೇವಿಯ ವಚನಗಳು’ ೧೯೯೦ರಲ್ಲಿ `ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳು’ ಮತ್ತು `ನೀಲಾಂಬಿಕೆಯ ವಚನಗಳು’ ೨೦೦೦ರಲ್ಲಿ `ಸ್ತ್ರೀ ಸಂವೇದನೆಗಳು’ ಎಂಬ ಕವನ ಸಂಕಲನ, ೨೦೦೧ರಲ್ಲಿ `ಜಯದೇವಿ ತಾಯಿ ಲಿಗಾಡೆ’ ಮತ್ತು `ಕವಿಗಳು ಕಂಡ ಮಹಾಂತ ಶಿವಯೋಗಿಗಳು’ ೨೦೦೪ರಲ್ಲಿ `ಹಡಪದ ಲಿಂಗಮ್ಮ’ ೨೦೦೫ ರಲ್ಲಿ `ಬಸವಾದಿ ಶರಣರ ವಚನಾಂಕಿತಗಳು’ ೨೦೦೬ರಲ್ಲಿ `ನೂತನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು’ ೨೦೦೮ರಲ್ಲಿ `ವರಕವಿ-ಜಗದಕವಿ ಈಶ್ವರ ಸಣ್ಣಕಲ್ಲರು’ ಇವು ಇವರ ಪ್ರಮುಖ ಶರಣ ಸಾಹಿತ್ಯದ ಕೃತಿಗಳಾಗಿವೆ. ಇವರಿಗೆ ೧೯೯೯ರಲ್ಲಿ ಇಳಕಲ್ ಶ್ರೀ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಆದರ್ಶ ಶರಣೆ ದಾಂಪತ್ಯ ಪ್ರಶಸ್ತಿ, ಮತ್ತು ಲಚ್ಚೆಯಬ್ಬರಸಿ’ ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಶ್ರೀಶೈಲದಲ್ಲಿ ಜರುಗಿದ ಬಸವಭೂಮಿ ೫ನೇ ಶರಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಇವರು ನಾಡಿನ ಕೆಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸಗಳು ನೀಡಿದ್ದಾರೆ. ಇವರ ಕುರಿತು ಭಾಲ್ಕಿ ಸಾಹಿತಿ ವೀರಶೆಟ್ಟಿ ಭಾವುಗೆಯವರು ಲೇಖನಗಳು ಬರೆದು ಪ್ರಕಟಿಸಿದ್ದಾರೆ.
ಮುಡಬಿ ಗುಂಡೆರಾವ್
ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿಯವರಾದ ಇವರು `ಮುಡಬಿ ಗುಂಡೆರಾವ್’ ಎಂದೇ ಖ್ಯಾತರಾಗಿ ಸಂಶೋಧನಾ ಸಾಹಿತ್ಯ ರಚಿಸಿ, ಮೂರು ದಶಕಗಳಿಂದ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲ್ಲೂಕಿನ ಹೊಡಲ್ ಗ್ರಾಮದ ಶ್ರೀ ಅಂಬಾರಾಯ ಪೋಲಿಸ್ ಪಾಟೀಲ್. ಮತ್ತು ಶ್ರೀಮತಿ ಮಹಾಂತಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್ ಪದವೀಧರರಾದ ಇವರು ಸೇಡಂ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೨೦ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. `ಸೇಡಂ ತಾಲ್ಲೂಕಿನ ಸ್ಮಾರಕಗಳ ಸಾಂಸ್ಕೃತಿಕ ಒಂದು ಅಧ್ಯಯನ’ ಎಂಬುದು ಇವರ ಎಂ.ಫೀಲ್ ಪ್ರಬಂಧವಾಗಿದೆ. ವಿದ್ಯಾರ್ಥಿಯಾಗಿರುವಾಗಲೇ ಸಂಶೋಧನಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಲೇಖಕರಾಗಿ ಚಿರಪರಿಚಿತರಾಗಿದ್ದಾರೆ. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ `ಸೇಡಂ ಐತಿಹಾಸಿಕ ಸ್ಮಾರಕಗಳು, ಸೇಡಿಂಬ ದುರ್ಗದ ಶಾಸನಗಳು, ಸೇಡಂ ತಾಲ್ಲೂಕು ದರ್ಶನ, ಮನ್ನೆದಡಿ ಸಾಸಿರ ನಾಡು, ಮಾನ್ಯಖೇಟದ ಸಿರಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಮಾನ್ಯಖೇಟ’. ಎಂಬ ಸಂಶೋಧನಾ ಕೃತಿಗಳಾದರೆ, ಸ್ವತಂತ್ರ ಹೋರಾಟಗಾರರ ಕುರಿತು `ಸ್ವಾಭಿಮಾನ- ೧.೨, ಹಾಗೂ `ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿ,’ ಮತ್ತು `ಆಲ್ಲೂರಿನ ಕೆಂಚ ವೃಷಭೇಂದ್ರ ಶ್ರೀಗಳು’ ಎಂಬ ಜೀವನ ಚರಿತ್ರೆಗಳು, `ಸಂಗೀತ ಸಂಪದ’ ಎಂಬ ವ್ಯಕ್ತಿ ಚಿತ್ರಗಳು, `ಭಾವೈಕ್ಯದ ಕ್ಷೇತ್ರ ಮಳಖೇಡ ದರ್ಗಾ’ ಎಂಬ ಲೇಖನ ಕೃತಿ, `ಸಾಹಿತ್ಯ ಚಿಲುಮೆ’ ಎಂಬ ಸಂಪಾದನೆ ಸೇರಿ ಒಟ್ಟು ೧೮ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಂಶೋಧನಾ, ಲೇಖನ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ೨೦ವರ್ಷಗಳಿಂದ ಸೇಡಂ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಮತ್ತು ಒಂದು ಅವಧಿಗೆ ಕಸಾಪ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಸಾಪ ಅವಧಿಯಲ್ಲಿ ಒಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಲವು ಹೋಬಳಿ, ಗ್ರಾಮ ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇವರಿಗೆ ೨೦೦೯ರಲ್ಲಿ ಕಲಬುರಗಿ ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೯ರಲ್ಲಿ ಸೇಡಂ ತಾಲ್ಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಅಷ್ಟೇಯಲ್ಲದೆ ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಸೇಡಂ ತಾಲ್ಲೂಕಿನಲ್ಲಿ ವಾಸವಾಗಿದ್ದು, ತಮ್ಮ ವೃತ್ತಿ ಜೀವನದೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಕೆ. ನೀಲಾ
ಜನವಾದಿ ಮಹಿಳಾ ಸಂಘಟನೆ ಹೋರಾಟಗಾರರು ಹಾಗೂ ಕತೆಗಾರರಾಗಿ ಹಲವು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಕೆ.ನೀಲಾ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಕಾಶಿನಾಥ ಸ್ವಾಮಿ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೬೬ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ಬರಿ ಪಿ.ಯು.ಸಿ.ವರೆಗೆ ಮಾತ್ರ. ಆದರೆ ಕನ್ನಡ, ಹಿಂದಿ,ಮರಾಠಿ, ಆಂಗ್ಲ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ೧೯೯೫ರಲ್ಲಿ `ಬದುಕು ಬೀದಿಯ ಪಯಣ’ ೨೦೧೬ರಲ್ಲಿ `ಜಾತಿ ಸೂತಕವಳಿದು’ ಎಂಬ ಕವನ ಸಂಕಲನಗಳು, ೨೦೦೯ರಲ್ಲಿ `ಜ್ಯೋತಿಯೋಳಗಣ ಕಾಂತಿ’ ೨೦೧೧ರಲ್ಲಿ `ತಿಪ್ಪೆಯನ್ನರಸಿ’ ಎಂಬ ಕಥಾಸಂಕಲನಗಳು, ೨೦೦೯ರಲ್ಲಿ `ಬಾಳಕೌದಿ’ ಮತ್ತು `ನೆಲದ ಪಿಸುಮಾತು’ ಎಂಬ ಅಂಕಣ ಬರಹಗಳ ಸಂಕಲನಗಳು, ೨೦೦೧ರಲ್ಲಿ `ಬದುಕು ಬಂದಿಖಾನೆ’ ೨೦೦೫ರಲ್ಲಿ `ಮಹಿಳಾ ಶೋಷಣೆ ನೆಲೆಗಳು’ ೨೦೧೯ರಲ್ಲಿ `ನೆಲದ ನಂಟು’ ಮತ್ತು `ಬೇವರ ಬದುಕು’ ಎಂಬ ಲೇಖನ ಸಂಕಲನಗಳು, ೨೦೧೭ರಲ್ಲಿ `ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ’ ಜೀವನ ಚರಿತ್ರೆ, `ರಾಮಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು’, `ಎಲೆ ರಾಜೊಳಿ ಕರಿಗೂಳೇಶ ಮತ್ತು ಇತರರ ತತ್ವಪದಗಳು’ ಕನ್ನಡ ತತ್ವಪದಗಾರ್ತಿಯ ವಾಚಿಕೆ, ಮತ್ತು `ಭಾರತದ ಮೇಲೆ ಧಾಳಿ’ ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಕರುಳಿರಿಯುವ ನೋವು’ ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮತ್ತು `ತಿಪ್ಪೆಯನ್ನರಸಿ’ ಎಂಬ ಕತೆಯು ೨೦೧೦ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಮತ್ತೆರಡು ಕತೆಗಳು ಮೆಚ್ಚುಗೆ ಪಡೆದಿವೆ. `ಕೊಂದಹರುಳಿದರೆ’ ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿನ್ನದ ಪದಕ ಪಡೆದಿದೆ. ೨೦೦೯ರಲ್ಲಿ ಸೇಡಂ ಮುನ್ನೂರು ಪ್ರತಿಷ್ಠಾನದ ವತಿಯಿಂದ `ಅಮ್ಮಾ’ ಪ್ರಶಸ್ತಿ, ೨೦೧೧ರಲ್ಲಿ ಮೈಸೂರಿನ `ಶ್ರೀಮತಿ ರಾಗೌ ಪ್ರಶಸ್ತಿ’ ೨೦೧೯ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಮತ್ತು ಶಿವಮೊಗ್ಗ ದಿಂದ `ಹಾಮಾನಾ ಪ್ರಶಸ್ತಿ, ಪಡೆದಿದ್ದಾರೆ. ೨೦೧೨ರಲ್ಲಿ ಬಸವಕಲ್ಯಾಣದ ಬೇಲೂರಿನಲ್ಲಿ ನಡೆದ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ೨೦೧೩ರಲ್ಲಿ ಬೀದರನಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೬ರಿಂದ ೨೦೧೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ಕಾವ್ಯಶ್ರೀ ಮಹಾಗಾಂವಕರ್
`ಸಿಕಾ’ ಎಂಬ ಕಾವ್ಯನಾಮದಿಂದ ಕತೆ ಕವನ ಕಾದಂಬರಿಗಳನ್ನು ಬರೆದು ನಾಡಿನಾದ್ಯಂತ ಚಿರಪರಿಚಿತರಾಗಿ ಗುರುತಿಸಿಕೊಂಡ ಲೇಖಕಿಯೆಂದರೆ ಕಾವ್ಯಶ್ರೀ ಮಹಾಗಾಂವಕರ್. ಇವರು ಬೀದರ ನಗರದ ಬಿ.ಜಿ.ಸಿದ್ದಬಟ್ಟೆ ಮತ್ತು ಯಶೋದಮ್ಮ ಸಿದ್ದಬಟ್ಟೆ ದಂಪತಿಗಳಿಗೆ ದಿನಾಂಕ ೧೧-೪-೧೯೬೯ರಲ್ಲಿ ಜನಿಸಿದ್ದಾರೆ. ಡಿ.ಇ.ಮತ್ತು ಸಿ.ಇ. ಎಂ.ಎ.ಸ್ನಾತಕೋತ್ತರ ಪದವಿ ಪಡೆದು ಕಲಬುರಗಿಯ ಸುರೇಶ ಮಹಾಗಾಂವಕರ್ ಅವರೊಂದಿಗೆ ವಿವಾಹವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಬಾಲ್ಯದಿಂದಲೂ ತಮ್ಮ ತಾಯಿಯ ಮಾರ್ಗದರ್ಶನದ ಮೂಲಕ ಸಾಹಿತ್ಯದ ಗೀಳು ಹಚ್ಚಿಕೊಂಡು ಹಲವಾರು ಕತೆ ಕವನ ಕಾದಂಬರಿ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಹಲವಾರು ಪತ್ರಿಕೆಗೆ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು ರಚಿಸಿದ ಕೆಲವು ಕೃತಿಗಳೆಂದರೆ `ಪ್ರೇಮ ಕಾವ್ಯ’, `ಬೆಳಕಿನೆಡೆಗೆ’, `ಪ್ರಳಯದಲೊಂದು ಪ್ರಣತಿ’, `ಜೀವ ಜಗತ್ತಿಗೆ’ `ಜೇನಹನಿ’, `ಪಿಸುಮಾತುಗಳ ಜುಗಲ್’, `ಒಳ್ಕಲ್ಲ ಒಡಲು’ `ಬ್ಯಾಸರಿಲ್ಲದ ಜೀವ’ ಇವು ಇವರ ಪ್ರಮುಖ ಕೃತಿಗಳಾಗಿವೆ. ಹೀಗೆ ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಸದ್ಯ ಇವರು ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ಕೃಷಿ ಮುಂದುವರಿಸಿದಷ್ಟೆಯಲ್ಲದೆ ೨೦೧೯ರಿಂದ ಪಿ.ಎಚ್.ಡಿ.ಅಧ್ಯಯನವು ಮುಂದುವರೆಸಿದ್ದಾರೆ. ಇವರು ಬೀದರದ ಖ್ಯಾತ ಸಾಹಿತಿ ಯಶೋದಮ್ಮ ಸಿದ್ದಬಟ್ಟೆಯವರ ಪುತ್ರಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ.
ಡಾ.ಇಂದುಮತಿ ಪಾಟೀಲ್
ಐತಿಹಾಸಿಕ ಮತ್ತು ಶರಣ ಸಾಹಿತ್ಯದ ಕುರಿತು ಕೆಲ ಕೃತಿಗಳು ರಚಿಸಿದ ಸಾಹಿತಿಯೆಂದರೆ ಡಾ.ಇಂದುಮತಿ ಪಾಟೀಲ್. ಇವರು ಬೀದರದ ಶ್ರೀ ಪದ್ಮಣ ಪಾಟೀಲ್ ಮತ್ತು ಶ್ರೀಮತಿ ಪ್ರೇಮಿಳಾ ಪಾಟೀಲ್ ದಂಪತಿಗಳಿಗೆ ದಿನಾಂಕ ೧೧-೬-೧೯೭೧ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ. ಪದವೀಧರರಾದ ಇವರು ಕಲಬುರಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತಿಹಾಸ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ವೀರ ಶೈವ ಮಠಗಳು, ಸಾಮಾಜಿಕ ಪರಿವರ್ತನೆ, ಬೀದರ ಜಿಲ್ಲೆಯ ಅರಸು ಮನೆತನಗಳು, ಪ್ರಾಚೀನ ಭಾರತದ ಇತಿಹಾಸ, ಮಧ್ಯ ಕಾಲಿನ ಭಾರತದ ಇತಿಹಾಸ, ಹಿರೇಮಠ ಮತ್ತು ದಲಿತೋದ್ಧಾರ, ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು, ಕ್ಲಸ್ಟರ್ ಹಿಸ್ಟರಿ ಆಫ್ ಚಾಲುಕ್ಯ ಸ್, ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ, ಪ್ರಾಚೀನ ಭಾರತದ ಇತಿಹಾಸ ಮತ್ತು ಪುರಾತತ್ವ, ಆಧುನಿಕ ಭಾರತದ ಇತಿಹಾಸ, ಸುಲಫಲ ಮಠ ಕಲಬುರಗಿ, ಕರ್ನಾಟಕ ಪ್ರವಾಸಿ ತಾಣಗಳು, ಕಲಬುರಗಿ ಜಿಲ್ಲೆಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ, ಇತ್ಯಾದಿ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಅಕ್ಕ ಮಹಾದೇವಿ ಪ್ರಶಸ್ತಿ, ಆದರ್ಶ ದಂಪತಿ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಜ್ಯೋತಿ ಡಿ.ಬೊಮ್ಮಾ
ಉದಯೋನ್ಮುಖ ಯುವ ಬರಹಗಾರ್ತಿಯರಲ್ಲಿ ಒಬ್ಬರಾಗಿ ಕತೆ ಕವನ, ಲೇಖನ ಬರಹಗಳು ಬರೆದು ಕೆಲ ಪುಸ್ತಕ ಪ್ರಕಟಿಸಿರುವ ಕವಯತ್ರಿಯೆಂದರೆ ಜ್ಯೋತಿ ಡಿ.ಬೊಮ್ಮಾ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಡಾ.ಸುಭಾಷ ಮೀಸೆ ಮತ್ತು ವಿಜಯಲಕ್ಷ್ಮಿ ಮೀಸೆ ದಂಪತಿಗಳಿಗೆ ದಿನಾಂಕ ೧೪-೭-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಮತ್ತು ಎಲ್.ಎಲ್.ಬಿ ಪದವಿಧರರಾದ ಇವರು ಗೃಹಿಣಿಯಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
೨೦೧೯ರಲ್ಲಿ `ನಮ್ಮೊಳಗಿನರಿವು’ ಮತ್ತು `ಪರಿಧಿ’ ಎಂಬ ಕವನಸಂಕಲನಗಳು ಪ್ರಕಟಿಸಿದ ಇವರು ಕೆಲ ಹಾಸ್ಯ, ವೈಚಾರಿಕ ಲೇಖನ, ಲಲಿತ ಪ್ರಬಂಧಗಳು `ಶರಣ ಮಾರ್ಗ’ ಮತ್ತು ಬಿ.ಎಚ್.ನಿರಗುಡಿಯವರ `ಸಾಹಿತ್ಯ ಸಾರಥಿ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಸಮ್ಮೇಳನಗಳಲ್ಲಿಯು ಪಾಲ್ಗೊಂಡಿರುತ್ತಾರೆ. ಬೀದರನಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿಯರ ಸಾಹಿತ್ಯ ಸಮ್ಮೇಳನ, ಮತ್ತು ಕಲಬುರಗಿಯ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ ಕವಿಗೊಷ್ಠಿಗಳಲ್ಲಿಯೂ ಪಾಲ್ಗೊಂಡು ಕವನ ವಾಚನವು ಮಾಡಿರುತ್ತಾರೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ವಾಸವಾಗಿದ್ದು ಪತಿ ಪಶು ಸಂಗೋಪನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಅನುಪಮಾ ಗು.ಅಪಗುಂಡೆ
ಸಾಹಿತಿ ಅನುಪಮಾ ಗು.ಅಪಗುಂಡೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ಗುರುಲಿಂಗಪ್ಪಾ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೪-೬-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಎA.ಎಡ್. ಪದವಿಧರರಾದ ಇವರು ಅಫಜಲಪುರ ತಾಲೂಕಿನ ಹಿರೆಜೇವರಗಿಯ ಶ್ರೀ ಶಾಂತಲಿAಗೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಆಸಕ್ತರಾಗಿ `ಹನಿದನಿ’ ಎಂಬ ಚುಟುಕು ಸಂಕಲನ ಪ್ರಕಟಿಸಿದ್ದಾರೆ. ಮತ್ತು ಕೆಲ ಕತೆ, ಕವನ, ಲೇಖನ,ಪ್ರಬಂಧಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರ ಉತ್ತಮ ಶೈಕ್ಷಣಿಕ ಚಟುವಟಿಕೆಗೆ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಹಾಗೂ ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನದಿಂದ ಶಿಕ್ಷಣ ರತ್ನ ಪ್ರಶಸ್ತಿ , ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಇವರ ಕುರಿತು ಈಗಾಗಲೇ ದೂರದರ್ಶನ ಚಂದನ ವಾಹಿನಿಯು ಸಂದರ್ಶನವೊAದು ಪ್ರಸಾರ ಮಾಡಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನಿವಾಸಿಯಾಗಿದ್ದಾರೆ.
ರಶ್ಮಿ ಎಸ್.
ಕವಯತ್ರಿ ಸಾಹಿತಿ ಹಾಗೂ ಪತ್ರಕರ್ತ ಲೇಖಕಿಯೆಂದರೆ ರಶ್ಮಿ ಎಸ್. ಇವರು ಬೀದರ ನಿವಾಸಿ ಶರಣಬಸಯ್ಯಾ ಮತ್ತು ಭಾರತಿ ದಂಪತಿಗಳಿಗೆ ದಿನಾಂಕ ೪-೯-೧೯೭೮ರಲ್ಲಿ ಜನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಪ್ರಜಾವಾಣಿಯಲ್ಲಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು `ಅಂತರಾಳ’ಎAಬ ಕವನ ಸಂಕಲನ, `ಅಂಕುರ’ ಎಂಬ ಪ್ರಜಾವಾಣಿ ಅಂಕಣ ಬರಹದ ಪುಸ್ತಕ ಪ್ರಕಟಿಸಿದ್ದಾರೆ. ಪ್ರಜಾವಾಣಿಯ ಗ್ರಾಮೀಣ ವಿಭಾಗ, ಜನರಲ್ ಡೆಸ್ಕ್ ಪುರವಣಿಗಳಲ್ಲಿ ಕೆಲಸ ಮಾಡಿದ್ದಾರೆ. ಭೂಮಿಕಾ, ಶಿಕ್ಷಣ, ಕ್ಷೇಮಕುಶಲ, ಗುಲ್‌ಮೊಹರ್ ಪುರವಣಿಗಳನ್ನು ರೂಪಿಸಿ, ನಿರ್ವಹಿಸಿದ್ದು, ೨೦೧೬ರಲ್ಲಿ ಶಾಲಾ ಆವೃತ್ತಿ ‘ಸಹಪಾಠಿ’ಯನ್ನು ರೂಪಿಸಿ, ನಿರ್ವಹಿಸಿದ್ದಾರೆ. ೨೦೧೩ರಿಂದ ೨೦೧೫ರ ಮಾರ್ಚ್ವರೆಗೂ ‘ಮೃದುಲಾ’ ಎಂಬ ಹೆಸರಿನಲ್ಲಿ ‘ಮಿದುಮಾತು’ ಅಂಕಣವನ್ನು ನಿರ್ವಹಿಸಿರುತ್ತಾರೆ. ೨೦೦೭ರಿಂದ ೨೦೧೧ರವರೆಗೆ ಕಲಬುರ್ಗಿ ಬ್ಯುರೊ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು, ಗ್ರಾಮೀಣ ಪತ್ರಿಕೋದ್ಯಮ, ಅಭಿವೃದ್ಧಿಪರ ಪತ್ರಿಕೋದ್ಯಮದ ಅನುಭವವು ಹೊಂದಿದ್ದಾರೆ. ಮತ್ತು ಪತ್ರಿಕೋದ್ಯಮದ ಎಲ್ಲ ೨೦೧೮ರ ಮೇ ತಿಂಗಳಿನಿAದ ೨೦೧೯ರವರೆಗೆ ಬೆಂಗಳೂರು ಮೆಟ್ರೊ ತಂಡವನ್ನು ಮುನ್ನಡೆಸಿ. ೨೦೧೧ರಲ್ಲಿ ನಡೆದ ಬೆಳಗಾವಿಯ ೨ನೇ ವಿಶ್ವಕನ್ನಡ ಸಮ್ಮೇಳನ, ಹಾಗೂ ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಉತ್ತಮ ವರದಿಗಾರಿಕೆಯು ಮಾಡಿ ಸೈ ಎನಿಸಿಕೊಂಡಿದ್ದಾರೆ.ಮತ್ತು ೨೦೧೯ರಲ್ಲಿ ಯುವ ಸಂಸದ ರಾಜ್ಯಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿಯು ಸೇವೆ ಸಲ್ಲಿಸಿದ್ದಾರೆ, ೨೦೦೯ರಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರದಿAದ ಮಹಿಳಾ ಸಬಲೀಕರಣಕ್ಕಾಗಿ ‘ಸೂರ್ಯಮುಖಿ’ ಎಂಬ ಸರಣಿ ಕಾರ್ಯಕ್ರಮವನ್ನು ನೀಡಿದ್ದಾರೆ. ಮತ್ತು ಆಕಾಶವಾಣಿಯ ಡ್ರಾಮಾ ಬಿ. ಹೈ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಬರೆದ ಪ್ರಜಾವಾಣಿಯ ಶಿಕ್ಷಣ ಪುರವಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಳಸಿಕೊಂಡಿದ್ದಾರೆ. ಇವರು ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ಆಡಳಿತವು ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಕಲಬುರಗಿಯ ರೋಟರಿ ಕ್ಲಬ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅಂಕಣಕಾರರಾಗಿಯು ಹಲವಾರು ಲೇಖನಗಳನ್ನು ಬರೆದು ಪ್ರಕಟಿಸುತ್ತಿರುವ ಇವರು ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.
ಎಸ್. ಕೆ. ಕಿನ್ನಿ
ವೈಜ್ಞಾನಿಕ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡ ಲೇಖಕ ಎಸ್.ಕೆ.ಕಿನ್ನಿ. ಇವರ ಪೂರ್ಣನಾಮ ಶಿವಕುಮಾರ ತಂದೆ ಕಾಶಿನಾಥ ಕಿನ್ನಿ ಎಂದಾಗಿದೆ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಕಾಶಿನಾಥ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೨೪-೪-೧೯೮೧ರಲ್ಲಿ ಜನಿಸಿದ್ದಾರೆ. ಇವರು ಕಲಬುರಗಿಯಲ್ಲಿ ವಾಸವಿದ್ದು ತಮ್ಮ ಶಿಕ್ಷಣವನ್ನು ಕಲಬುರಗಿಯಲ್ಲಿಯೇ ಅಧ್ಯಯನ ಮಾಡಿ ಎಂ.ಬಿ.ಎ. ಮತ್ತು ಇಂಜಿನಿಯರಿAಗ್ ಪದವಿಧರಾಗಿ, ಸುಮಾರು ೧೫ವರ್ಷಗಳಿಂದ ವಿದ್ಯುತ್ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಬೆಂಗಳೂರಿನ ಪ್ರಸಿದ್ಧ ಕಂಪನಿಯೊAದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು `ಭಾವ ಬಿಂಬ’ (ಕವನ ಸಂಕಲನ) `ವಿಜ್ಞಾನ ಬರಹಗಳು’ (ವೈಚಾರಿಕ ಪ್ರಬಂಧ) `ಚಂದ್ರಶೇಖರ್ ಅಜಾದ್’ (ಚರಿತ್ರೆ) `ಚಿಗುರು ಚೇತನ’, `ಹೊಂಬೆಳಕು’, `ಅವ್ವ’, `ಅಪ್ಪ’, `ಅಭಿವ್ಯಕ್ತಿ’, `ಪ್ರಣತಿ’ (ಸಂಪಾದನೆ) ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ ರಾಜ್ಯ ಮಟ್ಟದ ಸಾಹಿತ್ಯ ಮಂದಾರ ಪ್ರಶಸ್ತಿ, ಹಾಗೂ ಬೆಂಗಳೂರಿನ ಜ್ಞಾನ ಮಂದಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರೆತ್ತಿದೆ. ರಾಜ್ಯ ಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಇವರಿಗೆ ನಾಡಿನ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕಲಬುರಗಿಯಲ್ಲಿ ಯುವ ಅಜಾಧ ವಿಚಾರ ವೇದಿಕೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಕೆಲ ಪ್ರಾತಿನಿಧಿಕ ಕೃತಿಗಳು ಪ್ರಕಟಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಹವ್ಯಾಸಿ ಬರಹಗಾರರು
ನಭೀಲಾಲ್ ಮುಲ್ಲಾ
ಅಧ್ಯಾತ್ಮಿಕ ದೃಷ್ಟಿಕೋನದಿಂದ ಅನುಭಾವ ಸಾಹಿತ್ಯ ರಚನೆಯಲ್ಲಿ ತೊಡಗಿ, ಭಜನೆ ಗೀತೆಗಳು, ಮೊಹರಮ್ ಪದಗಳು, ಗೀ ಗೀ ಪದಗಳು ಭಾವ ಗೀತೆ, ಭಕ್ತಿ ಗೀತೆ, ಜಾನಪದ ಇತ್ಯಾದಿ ಗೇಯತೆಯಿಂದ ಕೂಡಿದ ಹಾಡುಗಳು ಬರೆದು `ನಭೀಲಾಲ್ ಕವಿ’ ಎಂದೇ ಖ್ಯಾತರಾದವರೆಂದರೆ ನಭೀಲಾಲ್ ಮುಲ್ಲಾ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಭಾಗ ಗ್ರಾಮದ ಗುಡುಸಾಬ ಮತ್ತು ಮಹಿಬುಬಿ ಶೇಕ್ ದಂಪತಿಗಳಿಗೆ ೧೯೪೫ರಲ್ಲಿ ಜನಿಸಿದ್ದಾರೆ. ಕನ್ನಡ, ಮರಾಠಿ, ಮೋಡಿ,ಹಿಂದಿ, ಉರ್ದು ಭಾಷಾ ಪಾಂಡಿತ್ಯ ಹೊಂದಿದ ಇವರು ೧೧-೬-೨೦೧೭ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮತ್ತು ಶಿವಲಿಂಗೇಶ್ವರ ಸಾವಳಗಿ ಇವರ ಗುರುಗಳಾಗಿದ್ದು . ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ರಚಿಸಿದ್ದಾರೆ. ಇವರ ಹಾಡುಗಳು ಬೀದರ, ಕಲಬುರಗಿ , ಯಾದಗಿರಿ ಮೊದಲಾದ ಕಡೆಗಳಲ್ಲಿ ತುಂಬ ಜನಪ್ರಿಯವಾಗಿವೆ. ಇವರಿಗೆ ೨೦೦೪ ರಲ್ಲಿ ಕರ್ನಾಟಕ ಸರ್ಕಾರ ಜಾನಪದ ಮತ್ತು ಅಕಾಡೆಮಿ ಬೆಂಗಳೂರು ವತಿಯಿಂದ `ಜಾನಪದ ಯಕ್ಷಗಾನ ಸಾಧನಾ ಪ್ರಶಸ್ತಿ, ನೀಡಿ ಗೌರವಿಸಿದರೆ, ೨೦೧೧ರಲ್ಲಿ ಅಖಿಲ ಭಾರತ ಶರಣ ಸಂಸ್ಕೃತಿ ಉತ್ಸವ ಸಮಿತಿ ಮತ್ತು ವಿಜ್ಞಾನ ಮಟ್ಟದ ಗೀ ಗೀ ಪದಕಾರರ ಸಮ್ಮೇಳನದ ಪ್ರಶಸ್ತಿ, ಹಾಗೂ ಹಾರಕೂಡದ `ಶ್ರೀ ಚನ್ನ ರತ್ನ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ವಿರಚಿತ ಹಾಡು ತತ್ಷಪದ, ಗೀ ಗೀ ಪದ , ಭಜನೆ ಗೀತೆ ಮೊದಲಾದವು ಕಲಬುರಗಿ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಸಾರವಾಗಿವೆ. ಮತ್ತು ಹಲವಾರು ಜನಪದರ ಬಾಯಿಯಲ್ಲಿ ಇಂದಿಗೂ ಅವು ಜೀವಂತವಾಗಿ ಹರಿದಾಡುತ್ತಿವೆ .
ಬಕ್ಕಯ್ಯ ಸ್ವಾಮಿ
ಹಿರಿಯ ತಲೆಮಾರಿನವರಾದ ಬಕ್ಕಯ್ಯ ಸ್ವಾಮಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತದ ಶ್ರೀ.ವೇ.ಮೂ. ಬಸ್ಸಯ್ಯಾ ಸ್ವಾಮಿ ಮತ್ತು ನಿಂಬೆವ್ವ ದಂಪತಿಗಳಿಗೆ ದಿನಾಂಕ ೧-೩-೧೯೪೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್ ಶಿಕ್ಷಣ ಪಡೆದ ಇವರು ೧೯೬೯ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ,ಲೇಖನ, ಚಿಂತನ ಮೊದಲಾದವುಗಳು ಬರೆದಿದ್ದು ಅವು ಕೆಲ ಪತ್ರಿಕೆ, ಪ್ರಾತಿನಿಧಿಕ ಸಂಕಲನ, ಸ್ಮರಣ ಸಂಚಿಕೆ ಮತ್ತು ಹಾರಕೂಡ ಶ್ರೀಗಳ `ನುಡಿ ಚನ್ನ’ ಅಭಿನಂದನಾ ಗ್ರಂಥದಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕಸಾಪ, ಜಾನಪದ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಇವರು ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ. ಇವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸದ್ಯ ಇವರು ತ್ರೀಪೂರಾಂತದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಮಹಮದ್ ಜಾನಿಮಿಯಾ
ನಾಟಕಕಾರ, ನಿರ್ದೇಶಕ, ಕವಿ, ಸಾಹಿತಿ, ಚಿತ್ರಕಲಾವಿದರಾಗಿ ಎಲೆ ಮರೆಯ ಕಾಯಿಯಂತೆ ಉಳಿದ ನಾಟಕಕಾರರೆಂದರೆ ಮಹಮ್ಮದ್ ಜಾನಿಮಿಯಾ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಆರ್) ಗ್ರಾಮದ ವಜಿರಸಾಹೇಬ್ ಮವಜನ್ ಮತ್ತು ಸಜನ್ ಬೀ ದಂಪತಿಗಳಿಗೆ ದಿನಾಂಕ ೧-೧-೧೯೫೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಹವ್ಯಾಸಿ ಚಿತ್ರ ಕಲಾವಿದರಾಗಿ ಸಾಹಿತಿ, ಲೇಖಕ, ನಾಟಕಕಾರರಾಗಿ ಗುರ್ತಿಸಿಕೊಂಡು ವೃತ್ತಿ ಕಲಾವಿದರಾಗಿ ಬದುಕು ಕಟ್ಟಿಕೊಂಡವರು. ಚಿತ್ರ ಕಲೆಯನ್ನು ಹವ್ಯಾಸಿಯಾಗಿ ಕಲಿತುಕೊಂಡು ಉತ್ತಮ ತೈಲ ವರ್ಣ, ಲೈಪ್ ಪೆಟಿಂಗ್ ಮತ್ತು ಪೊಟ್ರೇಟ್ ಚಿತ್ರ ಬಿಡಿಸಿ ಉಪಜೀವನ ನಡೆಸುತ್ತಾರೆ. ಇವರು ಬಿಡಿಸಿದ ಚಿತ್ರಗಳು ಲಾಲಧರಿ ಮಠ ಸೇರಿದಂತೆ ಮೊದಲಾದ ಊರುಗಳ ದೇವಸ್ಥಾನಗಳಲ್ಲಿ ಇಂದಿಗೂ ತೈಲ ವರ್ಣಗಳಿಂದ ರಾರಾಜಿಸುತ್ತವೆ. ನಾಟಕ ಮಂಡಳಿಗಳಿಗೆ ಚಿತ್ರ ಪರದೆ ಬಿಡಿಸಿ ಕೊಡುತ್ತಿದ್ದ ಇವರು ಸ್ವತಃ ನಾಟಕ ರಚನೆಯಲ್ಲಿ ತೊಡಗಿ ಹಲವು ನಾಟಕಗಳು ಬರೆದಿದ್ದಾರೆ. ಅವುಗಳೆಂದರೆ, ೧೯೭೫ರಲ್ಲಿ `ತಾಯಿಯ ಆತ್ಮ ಅರ್ಥಾತ್ ಕಂದನ ಗಿಲಿಗಿಲಿ,’ ೧೯೭೬ರಲ್ಲಿ `ಸತ್ತವನು ಎದ್ದ’ ೧೯೭೮ರಲ್ಲಿ ‘ಮಕ್ಕಳು ಸಾಕೋ ಮಹಾದೇವ’ ೧೯೮೦ರಲ್ಲಿ ‘ಗೆಳೆಯ ಕೊಟ್ಟ ಜ್ಞಾನ’ ೧೯೮೧ರಲ್ಲಿ ‘ತಾಯಿ ಗಂಡ ಅರ್ಥಾತ್ ದೈವಿ ಮದುವೆ’ ೧೯೮೨ರಲ್ಲಿ ‘ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು. ಅರ್ಥಾತ್ ನೇಗಿಲು ಯೋಗಿ’ ೧೯೮೪ರಲ್ಲಿ ‘ತಥ್ ! ನೀ ಎಂಥಹ ಗಂಡಸ ರೀ, !’ ೧೯೮೫ರಲ್ಲಿ `ರಂಜಾನ ಕಾ ಚಾಂದ,’ (ಹಿಂದಿ) ೧೯೮೬ ರಲ್ಲಿ ‘ಗಂಗಾ ಬಂದಳು ಹೊಲದಾಗ’ ಎಂಬ ಕನ್ನಡ ಹಿಂದಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದರೆ, ‘ಜಾನಪದ ಪದ್ಯಗಳು’ ಎಂಬ ಮೊಹರಮ್ ಪದಗಳು ಬರೆದಿದ್ದಾರೆ. ಮತ್ತು ಉರ್ದುವಿನಲ್ಲಿಯು ಭಜನೆ, ರಿಯಾಯಿತಿಗಳು ಬರೆದ ಇವರು ಕನ್ನಡ, ಹಿಂದಿ, ಉರ್ದು ತ್ರೈಭಾಷಾ ಕವಿಯಾಗಿದ್ದಾರೆ. ಇವರ `ಮಕ್ಕಳು ಸಾಕೋ ಮಹಾದೇವ’ ಎಂಬ ನಾಟಕ ೧೯೭೮ರಲ್ಲಿ ಕಲಬುರಗಿ ಆಕಾಶವಾಣಿಯಿಂದ ಜನಸಂಖ್ಯೆ ನಿಯಂತ್ರಣ ಜಾಗೃತಿಗೊಸ್ಕರ ಜಿ.ಎಂ.ಶಿರಹಟ್ಟಿಯವರ ನಿರ್ದೇಶನದಲ್ಲಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿAದ ಏಕಕಾಲಕ್ಕೆ ಹಲವು ಎಪಿಸೋಡ್ ಗಳಲ್ಲಿ ಪ್ರಸಾರವಾಗಿದೆ. ಮತ್ತು `ಕೋಟಿಗಿಂತ ಮೇಟಿ ವಿದ್ಯೆ ಮೇಲು’ ಎಂಬ ನಾಟಕ ೧೯೮೨ರಲ್ಲಿ ಸರ್ಕಾರಿ ಪ್ರೌಢಶಾಲೆ ಹಳ್ಳಿಖೇಡ (ಬಿ) ಗ್ರಾಮದ ಮಕ್ಕಳೊಂದಿಗೆ ನಾಟಕ ಪ್ರದರ್ಶನವು ಆಗಿದೆ. ಇದು ಶ್ರೀ ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿಯವರು ಹಲವಾರು ಕಡೆ ಪ್ರದರ್ಶನವು ಮಾಡಿದ್ದಾರೆ. ಆದರೆ ಹಣಕಾಸಿನ ತೊಂದರೆಯಿAದ ಈ ಲೇಖಕರ ಎಲ್ಲ ಕೃತಿಗಳು ಅಪ್ರಕಟಿತವಾಗಿ ಉಳಿದಿವೆ.
ಮಿಲಿಂದ ಗುರೂಜಿ
`ಮಿಲಿಂದ ಗುರೂಜೆ’ ಎಂದೇ ಖ್ಯಾತರಾದ ಕವಿ, ಸಾಹಿತಿ, ಧರ್ಮ ಪ್ರಚಾರಕರೆಂದರೆ ಮಿಲಿಂದ ಗುರೂಜಿಯವರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಉಮ್ಮಾಪುರ ಗ್ರಾಮದ ಕಿಶನರಾವ ಮತ್ತು ಸಾಕರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೫೫ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಬುದ್ಧ, ಅಂಬೇಡ್ಕರ್ ರವರ ಅನುಯಾಯಿಗಳಾಗಿ ಬೌದ್ಧ ಧಮ್ಮ ಪ್ರಚಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮತ್ತು ಬುದ್ಧ, ಅಂಬೇಡ್ಕರ್ ದಲಿತಪರ ಅನೇಕ ಹಾಡುಗಳು ರಚಿಸಿ ಸ್ವತಃ ಸುಮಧುರ ಕಂಠದಿAದ ಹಾಡುವ ಕವಿಯಾಗಿದ್ದಾರೆ. ಕನ್ನಡ, ಹಿಂದಿ, ಮರಾಠಿ, ತೆಲುಗು ನಾಲ್ಕು ಭಾಷೆಗಳಲ್ಲಿ ಗೀತೆಗಳನ್ನು ರಚಿಸಿ ಹಾಡುತ್ತಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮತ್ತು ಮಹಾರಾಷ್ಟ್ರ, ರಾಜ್ಯಗಳಲ್ಲಿ ಇವರು ಬೌದ್ಧ ಧಮ್ಮ ಪ್ರಚಾರಕ್ಕಾಗಿ ಅನೇಕ ಉಪನ್ಯಾಸಗಳನ್ನು ನೀಡಿ ಜನರಿಂದ ಮೆಚ್ಚುಗೆಯು ಪಡೆದು ಖ್ಯಾತರಾಗಿದ್ದಾರೆ. ಅಷ್ಟೇಯಲ್ಲದೆ ಕರ್ನಾಟಕ ರಾಜ್ಯದ ಬಿ.ಎಸ್.ಐ. ಅಧ್ಯಕ್ಷರಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಇವರ ಹಾಡುಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ.
ಕೆ.ಎಸ್.ರಾಮಬಾಣ
ಸಾಹಿತಿ ನಾಟಕಕಾರರಾಗಿ ಗುರ್ತಿಸಿಕೊಂಡವರೆAದರೆ ಕೆ.ಎಸ್.ರಾಮಬಾಣ. ಇವರ ಪೂರ್ಣನಾಮ ಕಾಶಪ್ಪ ತಂದೆ ಶರಣಪ್ಪಾ ರಾಮಬಾಣ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶ್ರೀ ಶರಣಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೨೬-೬-೧೯೫೫ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ೧೯೮೫ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ.
ವಿದ್ಯಾರ್ಥಿಯಾಗಿದಾಗಲೇ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಬಹುದಿನಗಳ ನಂತರ ೨೦೦೪ರಲ್ಲಿ ಹತ್ತು ಜನ ಲೇಖಕರ ಜತೆಗೂಡಿ `ನೂರು ಭಾವಗಳು ಹತ್ತು ಮುಖಗಳು’ ಎಂಬ ಕವನ ಸಂಕಲನದಲ್ಲಿ ೧೦ ಕವನಗಳು ಪ್ರಕಟಿಸಿದ್ದಾರೆ. `ಒಂದಾಗಿ ಬಾಳೋಣ’ (ನಾಟಕ) `ಮೊಸರು ಮಾರುವವನು’ (ಕತೆ) ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಇತರರ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಇವರಿಗೆ ಭಾಲ್ಕಿ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ದಿ. ಡಾ.ಅಮರನಾಥ ನಾಯಕ
ಕವಿ, ಕಲಾವಿದ, ರಾಜಕೀಯ ದುರಿಣ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಅಧ್ಯಾತ್ಮಿಕ ದೃಷ್ಟಿಕೋನದಿಂದ ಸ್ವತಃ ಕವಿ ಕಟ್ಟಿ ಹಾಡುವ ಕವಿಯೆಂದರೆ ಡಾ.ಅಮರನಾಥ ನಾಯಕ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಮದರಶಾ ಮತ್ತು ತಿಪ್ಪವ್ವಾ ದಂಪತಿಗಳಿಗೆ ದಿನಾಂಕ ೧೫-೩-೧೯೬೨ರಲ್ಲಿ ಜನಿಸಿದರು. ಬಿ.ಎಸ್ಸಿ. ಬಿ.ಇ.ಎಂ.ಎಸ್. ಪದವೀಧರರಾಗಿ ಬೀದರದ ಚಕ್ರಪಾಣಿ ಆಸ್ಪತ್ರೆಯಲ್ಲಿ ೮ವರ್ಷ ಸೇವೆ ಸಲ್ಲಿಸಿ ೧೯೯೦ರಿಂದ ಮಂಠಾಳ ಮತ್ತು ಕೊಹಿನೂರು ಗ್ರಾಮಗಳಲ್ಲಿ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿ, ದಿನಾಂಕ ೨೮-೧೦-೨೦೨೦ರಲ್ಲಿ ಆಕಸ್ಮಿಕ ನಿಧನ ಹೊಂದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಆಸಕ್ತರಾಗಿ ತತ್ವಪದ, ಮೊಹರಮ್ ಪದ, ಭಜನೆ ಗೀತೆ, ಹಂತಿ ಹಾಡುಗಳು ಬರೆದು ಕವಿ ಹಾಗೂ ತತ್ವಪದಕಾರರಾಗಿ ಪರಿಚಿತರಾದವರು. ಅಷ್ಟೇಯಲ್ಲದೆ ೧೯೯೩ರಿಂದ ೧೯೯೭ರ ವರೆಗೆ ಕೊಹಿನೂರು ಗ್ರಾಂ.ಪA. ಅಧ್ಯಕ್ಷರಾಗಿ, ೨೦೦೦ರಿಂದ ೨೦೦೫ರ ವರೆಗೆ ತಾ. ಪಂ. ಸದಸ್ಯರಾಗಿ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ’ಎಂಬ ಕವನ ಸಂಕಲನ ಸೇರಿದಂತೆ ಮೊದಲಾದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಶ್ರೀದೇವಿ ಬಿ.ಹಿರೇಮಠ
ಅಧ್ಯಾತ್ಮಿಕ ದೃಷ್ಟಿಕೋನದಿಂದ ತತ್ವಪದ ಜಾನಪದ ಹಾಡುಗಳು ರಚಿಸಿ ಕವಯತ್ರಿಯರಾಗಿ ಗುರುತಿಸಿಕೊಂಡವರೆAದರೆ ಶ್ರೀದೇವಿ ಬಿ.ಹಿರೇಮಠ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದ ಸಿದ್ದಯ್ಯಾ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೭-೧-೧೯೬೬ರಲ್ಲಿ ಜನಿಸಿದ್ದಾರೆ. ಇವರು ಹಾರಕೂಡ ಶ್ರೀಗಳ ಸಹೋದರರಾದ ಶ್ರೀ ಬಸವರಾಜ ತಂದೆ ಕರಿಬಸಯ್ಯನವರ ಧರ್ಮ ಪತ್ನಿಯಾದ ಇವರು ಓದಿದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಅದು ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಕನ್ನಡ ಕಲಿತದ್ದು ತಮ್ಮ ಮೈದುನ ಮಲ್ಲಿನಾಥ ಹಿರೇಮಠ ಅವರಿಂದ. ಕನ್ನಡ ಲಿಪಿ, ಅಕ್ಷರ ಕಲಿತು ಕನ್ನಡ ಭಾಷೆಯು ಸರಳ ಹಾಗೂ ಸಲಿಲವಾಗಿ ಮಾತನಾಡುವುದು ಕಲಿತು, ಕನ್ನಡ ಸಾಹಿತ್ಯ ರಚಿಸುವಷ್ಟು ಪ್ರಬುದ್ಧತೆ ಹೊಂದಿರುವುದು ನೋಡಿದರೆ ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ.
ಇವರು ಬಾಲ್ಯದಲ್ಲಿ ತಮ್ಮ ದೊಡ್ಡಪ್ಪನವರ ಮನೆಯಲ್ಲಿ ಪ್ರತಿ ಸೋಮವಾರ ಭಜನೆ ಮಾಡುವುದು, ಹಾರಕೂಡ ಶ್ರೀಗಳ ಕುರಿತು ಹಾಡು ಹಾಡುವುದು. ಶರಣ – ಶರಣೆಯರ ವಚನಗಳನ್ನು ಕಂಠಪಾಠ ಮಾಡಿ ಹಾಡುವುದನ್ನು ರೂಢಿಸಿಕೊಂಡು ಸಂಗೀತದಲ್ಲಿಯು ತುಂಬ ಆಸಕ್ತಿ ಬೆಳೆಸಿಕೊಂಡು ಬೆಳೆದವರು. ಮುಂದೆ ಇವರು ಹಾರಕೂಡ ಶ್ರೀಗಳ ಕುಟುಂಬದಲ್ಲಿ ನಾಲ್ಕು ಜನ ಭಾವ ಮೈದುನ ನಾದಿನಿಯರು ಹಾಗೂ ಮಾವ ವೇ. ಕರಿಬಸವಯ್ಯ ಅತ್ತೆ ಸುಭದ್ರಾಬಾಯಿಯವರೊಂದಿಗೆ ತುಂಬ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದರೊಂದಿಗೆ ಕನ್ನಡದಲ್ಲಿ ಕವನಗಳು, ಆಧುನಿಕ ವಚನಗಳು, ಬರೆದಿದ್ದಾರೆ. ಅವು ಎಂ.ಎಸ್.ಲಠ್ಠೆ ಸಂಪಾದಿಸಿರುವ `ಕಲ್ಯಾಣನಾಡಿನ ಪರಂ ಜ್ಯೋತಿ’ ಎಂಬ ಪುಸ್ತಕದಲ್ಲಿ ಇವರು ಬರೆದ ಹತ್ತಾರು ಹಾಡುಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ಕವನಗಳು ಪ್ರಸಾರವಾಗಿವೆ. ಗದಲೇಗಾಂವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೧೦ರಲ್ಲಿ ಕಲಬುರ್ಗಿಯ ಜಯನಗರ ಅನುಭವ ಮಂಟಪದಲ್ಲಿ ಜರುಗಿದ ಅಕ್ಕಗಳ ಸಮ್ಮೇಳನದಲ್ಲಿ ಪಾಲ್ಗೊಂಡು ವಚನ ಸ್ಪರ್ಧೆ, ವಚನ ರೂಪಕದಲ್ಲಿ ಆಯ್ದಕ್ಕಿ ಲಕ್ಕಮ್ಮನ ಪಾತ್ರ ಮಾಡಿದ್ದರಿಂದ ಅಂದಿನ ಮಂತ್ರಿಗಳಾದ ಶ್ರೀಮತಿ ಲೀಲಾವತಿ ಆರ್ ಪ್ರಸಾದ, ಅರವಿಂದ ಜತ್ತಿ, ವಿಲಾಸವತಿ ಖೂಭಾ ಅವರ ಸಮ್ಮುಖದಲ್ಲಿ ವಿಶೇಷ ಪುರಸ್ಕಾರವು ಲಭಿಸಿದೆ. ಕಲಬುರ್ಗಿಯ ಆಕಾಶವಾಣಿಯವರು ಏರ್ಪಡಿಸಿದ ನಾಗರ ಪಂಚಮಿ ಹಬ್ಬದ ಕಾರ್ಯಕ್ರಮದಲ್ಲಿಯು ಪಾಲ್ಗೊಂಡು ಕಾರ್ಯಕ್ರಮ ನೀಡಿ ಹಲವಾರು ಸಂಪ್ರದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇಯಲ್ಲದೆ ಚನ್ನಬಸವ ಶಿವಯೋಗಿಗಳ ಕುರಿತು ಹಾಡುಗಳು ಮತ್ತು ವಚನಗಳು ಬರೆದಿದ್ದರಿಂದ ಮುಂಬರುವ ದಿನಗಳಲ್ಲಿ ಅವು ಪ್ರಕಟಿಸುವ ಹಂತದಲ್ಲಿದ್ದಾರೆ. ಇವರು ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹಾರಕೂಡ ಚನ್ನಬಸವೇಶ್ವರ ಶಿಕ್ಷಣ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಇವರಿಗೆ ಹಾರಕೂಡ ಶ್ರೀಗಳು ದಸರಾ ಮಹೋತ್ಸವದ ಮಹಾನವಮಿಯ ಬ್ರಹತ್ ಸಭೆಯಲ್ಲಿ ಇವರ ಯಜಮಾನರಾದ ಬಿ.ಕೆ.ಹಿರೇಮಠ ದಂಪತಿಸಹಿತ ಸತ್ಕರಿಸಿ ಆರ್ಶಿವದಿಸಿದ್ದಾರೆ. ಅಷ್ಟೇಯಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ನಾಗಪ್ಪ ನಿಣ್ಣೆ
ಪತ್ರಕರ್ತ ನಾಗಪ್ಪ ನಿಣ್ಣೆಯವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವುಳ್ಳ ಉದಯೋನ್ಮುಖ ಹವ್ಯಾಸಿ ಬರಹಗಾರರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಶಹಾಪುರ ಓಣಿಯ ಬಸಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. (ಹಿಂದಿ) ಪದವಿಧರರಾದ ಇವರು ಕೆಲ ವರ್ಷ ಖಾಸಗಿ ಶಾಲಾ ಶಿಕ್ಷಕರಾಗಿ, ಗ್ರೀನೋಬಲ್ಸ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ೧೯೯೭ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ೨೦೦೯ರಲ್ಲಿ ಬಡ್ತಿ ಹೊಂದಿ ಸರಕಾರಿ ಪ್ರೌಢ ಶಾಲೆ ಬೆಟಗೇರಾ ಗ್ರಾಮದಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಕನ್ನಡ ಹಿಂದಿ ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕೆಲ ಬರಹಗಳು ಬಹಿರಂಗ ಸುದ್ದಿ, ಉತ್ತರ ಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉರ್ದುವಿನಲ್ಲಿ ಶಾಹಿರಿ, ಕನ್ನಡದಲ್ಲಿ ನಗೆಹನಿ ಬರೆದ ಹಾಸ್ಯ ಬರಹಗಾರರು. ಹಿಂದಿ ಚಿತ್ರನಟ ಖಾದರಖಾನ್ ಅವರ ಅಭಿಮಾನಿಯಾದ ಇವರು,ಅವರ ಕುರಿತು ಉರ್ದು, ಕನ್ನಡ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಪ್ರಚುರಪಡಿಸಿದ್ದಾರೆ. ಇವರಿಗೆ ಪತ್ರಿಕಾ ರತ್ನ, ಉತ್ತಮ ವರದಿಗಾರ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಮತ್ತು ಮಠಾದೀಶರು ವಿವಿಧ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಇವರು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕ್ರಾಂತಿ ಯುವ ಪರಿಷತ್ತಿನ ಅಧ್ಯಕ್ಷರಾಗಿ, ಕಲ್ಯಾಣ ಕಲಾ ಪ್ರತಿಭೆಯ ಸಂಪಾದಕರಾಗಿ, ಮತ್ತು ಬಸವಕಲ್ಯಾಣ ತಾಲೂಕಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ರಾಜ್ಯ ಮಟ್ಟದ ಪತ್ರಿಕಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಕಾರ್ಯಗಾರ ಸೇರಿದಂತೆ ವಿವಿಧ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.
ಅಂಬಾರಾವ ಉಗಾಜಿ
ಹವ್ಯಾಸಿ ಬರಹಗಾರರಾದ ಅಂಬಾರಾಯ ಉಗಾಜಿಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಸಾಯಬಣ್ಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೨-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಪದವೀಧರರಾದ ಇವರು ಬೊಸಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಗೆ ಸೇರಿದ ನಂತರ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಕವನ,ಲೇಖನ, ಹನಿಗವನ, ಚುಟುಕು, ಆಧುನಿಕ ವಚನಗಳನ್ನು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಉತ್ತಮ ಸಾಹಿತ್ಯಿಕ ಸಂಘಟಕರು ಆಗಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ಅವಧಿ ಕೊಹಿನೂರು ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಜನ ಮೆಚ್ಚಿದ ಉತ್ತಮ ಶಿಕ್ಷಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀ ಚೆನ್ನರತ್ನ ಪ್ರಶಸ್ತಿ, ಕಸಾಪದ ಸಮಾಜ ರತ್ನ ಪ್ರಶಸ್ತಿ, ಎಸ್ಸಿ, ಎಸ್ಟಿ, ಶಿಕ್ಷಕರ ಸಂಘದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಹಾಗೂ ಅಜಿಂ ಪ್ರೇಮಂ ಜಿ ಫೌಂಡೇಶನ್ ವತಿಯಿಂದ ಇವರಿಗೆ ಅಭಿನಂದನಾ ಪತ್ರವು ನೀಡಿ ಗೌರವಿಸಿದ್ದಾರೆ.
ರೇವಣಸಿದ್ದಪ್ಪ ಸೂಗೂರೆ
ಸೃಜನಶೀಲ ಹವ್ಯಾಸಿ ಬರಹಗಾರರಾದ ರೇವಣಸಿದ್ದಪ್ಪ ಸೂಗೂರೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಗುರುಲಿಂಗಪ್ಪ ಮತ್ತು ಸುಗಲಾಬಾಯಿ ದಂಪತಿಗಳಿಗೆ ದಿನಾಂಕ ೧-೮-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಕೃಷಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಜಾನಪದ ಸಾಹಿತ್ಯ. ಕವನ, ಲೇಖನ, ಬರಹಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಹಾಗೂ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಹೊರತಂದ `ಚೆನ್ನ ಸಂಭ್ರಮ-೫೭.’ ಮತ್ತು `ಕೊಹಿನೂರು ಕುಸುಮ’ ಸೇರಿದಂತೆ ಮೊದಲಾದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ರಾಜ್ಯ ಮಟ್ಟದ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ ಹಾಗೂ ವಿವಿಧ ಕಮ್ಮಟಗಳಲ್ಲಿಯೂ ಭಾಗವಹಿಸಿದ್ದಾರೆ. ಇವರಿಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರ ೫೫ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಶ್ರೀ ಚೆನ್ನ ರತ್ನ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ . ಅಷ್ಟೇಯಲ್ಲದೆ ಬಸವಕಲ್ಯಾಣ ತಾಲೂಕಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ರೇಣುಕಾದೇವಿ ದಿಲೀಪಕುಮಾರ ಸ್ವಾಮಿ
ಉದಯೋನ್ಮುಖ ಯುವ ಕವಯತ್ರಿಯೆಂದರೆ ರೇಣುಕಾದೇವಿ ದಿಲೀಪಕುಮಾರ ಸ್ವಾಮಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಶಿವಶರಣಯ್ಯಾ ಮತ್ತು ಶ್ರೀಮತಿ ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೭೬ ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಬಿ.ಎ (ಹಿಂದಿ) ಯಲ್ಲಿ ಪದವಿ ಪಡೆದ ಇವರು ರಾಜೇಶ್ವರ ಗ್ರಾಮದ ಪ್ರೌಢಶಾಲಾ ಶಿಕ್ಷಕರಾದ ಶ್ರೀ ದಿಲೀಪಕುಮಾರ ಸ್ವಾಮಿಯವರ ಧರ್ಮಪತ್ನಿ ಯಾಗಿದ್ದಾರೆ. ವೃತ್ತಿಯಲ್ಲಿ ಗೃಹಿಣಿಯಾಗಿದ್ದುಕೊಂಡು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ಬಾಲ್ಯದಿಂದಲೂ ಹಾರಕೂಡ ಶ್ರೀಗಳ ಪ್ರವಚನ ಮತ್ತು ಅವರ ಸಾಹಿತ್ಯದ ಪ್ರಭಾವದಿಂದ ಬರವಣಿಗೆಯಲ್ಲಿ ತೊಡಗಿದ ಇವರು ಕವನ, ಲೇಖನ, ಜಾನಪದ ಹಾಡು, ಮೊದಲಾದವು ಬರೆದು ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಮತ್ತು ಹಾರಕೂಡ ಹಿರೇಮಠ ಸಂಸ್ಥಾನದ ಆರಾಧ್ಯ ದೈವ ಭಕ್ತರಾದ ಇವರು ಹಾರಕೂಡ ಶ್ರೀಗಳ ಕುರಿತು ಕವನ, ಹಾಡುಗಳನ್ನು ಬರೆದು ಲೇಖಕಿಯಾಗಿ ಹೊರಹೊಮ್ಮಿದ್ದಾರೆ. ಇವರ ಕಾವ್ಯ, ಲೇಖನ, ಗೇಯತೆಯಿಂದ ಕೂಡಿದ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕವನ ವಾಚನೆ ಮಾಡಿ ಸಭಿಕರಿಂದ ಸೈ ಎನಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರು ವಿಶೇಷ ದಂಪತಿ ಸಹಿತವಾಗಿ ಸನ್ಮಾನ ಮಾಡಿ ಸತ್ಕಾರಿಸಿದ್ದಾರೆ. ಅಷ್ಟೇಯಲ್ಲದೆ ಇವರು ಹಾರಕೂಡ ಶ್ರೀಗಳ ಕುರಿತು, ಮತ್ತು ಶರಣ ಸಾಹಿತ್ಯದ ಕುರಿತಾದ ಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ.
ಕಲ್ಯಾಣರಾವ ಮದರಗಾಂವಕರ್
ಯುವ ಬರಹಗಾರ ಪತ್ರಕರ್ತರೆಂದರೆ ಕಲ್ಯಾಣಿ ಮದರಗಾಂವಕರ್ ಇವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ ಪದವಿಧರರಾದ ಇವರು ಸುಮಾರು ಇಪ್ಪತ್ತು ವರ್ಷಗಳಿಂದ ಕಾರಂಜಾ ಎಕ್ಷಪ್ರೇಸ್, ಕನ್ನಡಪ್ರಭ,ವಿಶ್ವವಾಣಿ, ದಿನಪತ್ರಿಕೆಗಳಲ್ಲಿ ಸಲ್ಲಿಸಿ ಸದ್ಯ ಉದಯಕಾಲ ಪತ್ರಿಕೆಯ ವರದಿಗಾರರಾಗಿದ್ದಾರೆ ಇವರ ಲೇಖನ ಕವನ ಚುಟುಕು ಮೊದಲಾದ ಬರಹಗಳು ನಾಡಿನ ವಿವಿಧ ಪತ್ರಿಕೆ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ತಮ್ಮ ಪತ್ರಿಕೆಗಳಲ್ಲಿ ಹಲವಾರು ಪ್ರಚಲಿತ ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ೨೦೧೨ರಲ್ಲಿ ರಾಜ್ಯ ಮಟ್ಟದ ಕಲಾಂಜಲಿ ಸಾಹಿತ್ಯ ಪ್ರಶಸ್ತಿ, ಕನ್ನಡ ಕಾವ್ಯ ರತ್ನ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸಮಾಜರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ರಾಜ್ಯ ಮಟ್ಟದ ಪತ್ರಿಕೆಗಳ ವಿವಿಧ ವರದಿಗಾರರ ಸಂಘದ ಬಸವಕಲ್ಯಾಣ ತಾಲೂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರಬಸಯ್ಯ ಚನ್ನವೀರಯ್ಯ ಸ್ವಾಮಿ
ಹವ್ಯಾಸಿ ಬರಹಗಾರರಾದ ಕರಬಸಯ್ಯ ಸಿ. ಸ್ವಾಮಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಚೆನ್ನವೀರಯ್ಯ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೪-೧೯೭೭ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಬೇಸಾಯದ ವೃತ್ತಿ ಮಾಡುತ್ತಿದ್ದಾರೆ. ಕವನ, ತತ್ವಪದ, ಭಜನೆ ಗೀತೆಗಳನ್ನು ಬರೆಯುತ್ತಿರುವ ಇವರು ಅನೇಕ ರಾಜ್ಯ ಮಟ್ಟದ ಜಾನಪದ ಮೇಳ ಮತ್ತು ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ಸಾಹಿತ್ಯ ಪ್ರಚುರ ಪಡಿಸಿದ್ದಾರೆ. ಅಷ್ಟೇಯಲ್ಲದೆ ಹುಟ್ಟೂರಿನಲ್ಲಿಯ ಶ್ರೀ ಚನ್ನಮಲ್ಲೇಶ್ವರ ಭಜನಾ ಸಂಘದ ಮೂಲಕ ತಮ್ಮ ಸಾಹಿತ್ಯ ಪ್ರಸಾರ ಗೈಯುತ್ತಿದ್ದಾರೆ. ಇವರ ಬರಹ, ತತ್ವಪದ ಹಾಡುಗಳು ಹಾರಕೂಡ ಹಿರೇಮಠ ಸಂಸ್ಥಾನ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ’ ಎಂಬ ಪ್ರಾತಿನಿಧಿಕ ಕವನ ಸಂಕಲನ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಏರ್ಪಡಿಸಿದ ಚರ್ಮವಾದ್ಯಗಳ ಸಮಾವೇಶ ಹಾಗೂ ಹಂಪಿ ಉತ್ಸವದಲ್ಲಿ ಜಾನಪದ ಹಾಡುಗಾರಿಕೆಯಲ್ಲಿ ಪ್ರಶಸ್ತಿ ಪತ್ರ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಶಿವಕುಮಾರ ಸ್ವಾಮಿ ಯರಬಾಗ
ಸೃಜನಶೀಲ ಬರಹಗಾರರಾಗಿ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಬರಹಗಾರರೆಂದರೆ ಶಿವಕುಮಾರ ಸ್ವಾಮಿ ಯರಬಾಗ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಶ್ರೀ ಚನ್ನವಿರಯ್ಯಾ ಮತ್ತು ಶ್ರೀಮತಿ ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪತ್ರಿಕೋದ್ಯಮ, ವಾಣಿ ಸರ್ಟಿಫಿಕೇಟ್ ಕೋರ್ಸ್, ಮತ್ತು `ಜ್ಯೋತಿಷ್ಯ ಆಚಾರ್ಯ ಕೋರ್ಸ್’ ಅಧ್ಯಯನ ಮಾಡಿದ ಇವರು ೨೦೦೪ರಿಂದ ೨೦೦೮ರ ವರೆಗೆ ಕಲಬುರಗಿ ಆಕಾಶವಾಣಿಯಲ್ಲಿ ನಿರೂಪಕ, ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿ, ೯೩.೫ ರೆಡ್ ಎಫ್. ಎಂ.ನಲ್ಲಿಯು ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದ ಎಲ್.ಐ.ಸಿ. ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಬರಹ ರೂಪಕಗಳು ಪ್ರಮುಖ ಪತ್ರಿಕೆ, ಪ್ರಾತಿನಿಧಿಕ ಸಂಕಲನ, ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೦ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯವರು ಏರ್ಪಡಿಸಿದ ವಿಜ್ಞಾನ ಬರಹ ಶಿಬಿರ, ಮತ್ತು ಕಲಬುರಗಿಯಲ್ಲಿ ಕಸಾಪದವರು ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಚಯಿಸುವ ವ್ಯಾಖ್ಯಾನ ಶಿಬಿರ, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯವರು ಏರ್ಪಡಿಸಿದ ಯುವ ಸಂವಹನ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಸಾಹಿತ್ಯ ರಚನೆಯೊಂದಿಗೆ ವಾಸ್ತು ಶಾಸ್ತ್ರದ ಕುರಿತು ವೈಚಾರಿಕ ಬರಹಗಳು ಬರೆದಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ಹಂತದಲ್ಲಿದ್ದಾರೆ. ಮತ್ತು ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ೨೦೧೨ರಿಂದ ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ನಡೆಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಮಧುಕರ ಎನ್.ಘೋಡಕೆ
ಕವಿ,ಕಲಾವಿದ ನಾಟಕಕಾರರಾಗಿ ಗುರುತಿಸಿಕೊಂಡ ಯುವ ಬರಹಗಾರರೆಂದರೆ ಮಧುಕರ ಎನ್.ಘೋಡಕೆಯವರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ನರಸಿಂಗರಾವ ಮತ್ತು ಸುಗಂಧಬಾಯಿ ದಂಪತಿಗಳಿಗೆ ದಿನಾಂಕ. ೮-೬-೧೯೭೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ಮತ್ತು ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ.
ಕವನ, ತತ್ವಪದ,ಜಾನಪದ, ಭಜನೆ ಗೀತೆಗಳು ಬರೆದು ಸ್ವತಃ ರಾಗ ಸಂಯೋಜನೆಯಲ್ಲಿ ಹಾಡುವ ಇವರು ವಾರ್ತಾ ಇಲಾಖೆಯ ಸರ್ಕಾರಿ ಯೋಜನೆಯ ಕುರಿತು ಬೀದಿ ನಾಟಕ, ರೂಪಕಗಳನ್ನು ರಚಿಸಿದ ಇವರು ನೂರಾರು ವೇದಿಕೆಯಲ್ಲಿ ಅವುಗಳನ್ನು ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಾಗಿ ಗುರುತಿಸಿಕೊಂಡ ಇವರು ಬೀದರ ಜಿಲ್ಲಾ ವಿಭಾಗ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯ, ಸಕಾಲ ಮಾಹಿತಿ, ಭಾನಾಮತಿ ನಿರ್ಮೂಲನ ಜನಾಂದೊಲನ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ಸರ್ಕಾರದಿಂದ ಪಡೆದು, ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಲಾವಿದ, ಕವಿಯಾಗಿ ಬೀದಿ ನಾಟಕಗಳನ್ನು ಮಾಡುವ ನಾಟಕಕಾರ ಹಾಗೂ ನಟನಾಗಿ ಹೆಸರುವಾಸಿಯಾಗಿದ್ದಾರೆ. ಅಷ್ಟೇಯಲ್ಲದೆ ತಾವೆ ಬರೆದ ತಮ್ಮ ಹಲವಾರು ಹಾಡುಗಳನ್ನು ಹಾಡಿ ಜನಜಾಗೃತಿ ಮೂಡಿಸುತ್ತಾರೆ. ಆದ್ದರಿಂದ ಇವರು ಇತ್ತೀಚೆಗೆ ತಮ್ಮದೇ ಆದ ಕೆಲವು ಕವನಗಳು ಒಟ್ಟು ಸೇರಿಸಿ ಸಂಕಲನವೊAದು ಹೊರ ತರುವ ನಿಟ್ಟಿನಲ್ಲಿದ್ದಾರೆ.ಇವರ ಸಾಹಿತ್ಯ ರಚನೆಗೆ ಮತ್ತು ಕಲೆ ನಾಟಕ ನಟನೆಗೆ ಮೆಚ್ಚಿ ಹಲವಾರು ಮಠಾದೀಶರು ಹಾಗೂ ಕನ್ನಡ ಪರ ಸಂಗಸAಸ್ಥೆಯವರು ಇವರಿಗೆ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಕೊಹಿನೂರುವಾಡಿಯ ನಿವಾಸಿಯಾಗಿದ್ದಾರೆ.
ಶಾಂತಕುಮಾರ ಹಡಪದ
ಕವನ,ಆಧುನಿಕ ವಚನ,ಭಜನೆ ಹಾಡು, ತತ್ವ ಪದಗಳನ್ನು ಬರೆಯುತ್ತಿರುವ ಉದಯೋನ್ಮುಖ ಬರಹಗಾರರೆಂದರೆ ಶಾಂತಕುಮಾರ ಹಡಪದ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶಿವಲಿಂಗಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೫-೧೦-೧೯೮೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಅಧ್ಯಯನ ಮಾಡಿದ ಇವರು ಸ್ವಯಂ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ,ಆಧುನಿಕ ವಚನ,ಭಜನೆ ಹಾಡು, ತತ್ವ ಪದಗಳನ್ನು ಬರೆದು `ನನ್ನವ್ವ’ ಎಂಬ ಕವನ ಸಂಕಲನವು ಪ್ರಕಟಿಸುವ ಹಂತದಲ್ಲಿದ್ದಾರೆ. ನೂರಾರು ಆಧುನಿಕ ವಚನಗಳು ಬರೆದಿದ್ದಾರೆ. ಇವರ ಬರಹಗಳು ವಿಜಯವಾಣಿ ಪತ್ರಿಕೆ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಕವನ ವಾಚನವು ಮಾಡಿದ್ದಾರೆ. ಇವರು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಯಾಗಿ, ಮತ್ತು ಹೀರೆನಾಗಾಂವ ಗ್ರಾಮದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಇವರಿಗೆ ಬಸವಕಲ್ಯಾಣದ ಹಡಪದ ಸಮಾಜದ ವತಿಯಿಂದ ಹಡಪದ ಅಪ್ಪಣ್ಣ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ನಾಗೇಂದ್ರ ಎಲ್.ಗಾಯಕವಾಡ
ಉದಯೋನ್ಮುಖ ಕಾದಂಬರಿಕಾರರೆAದೆ ಪ್ರಸಿದ್ಧರಾಗಿ `ನವರಾಗ ಸಂಗಮ’ `ರಾಗಸಂಗಮ’ ಮತ್ತು `ಥ್ರೀಲ್’ ಮಾಸ ಪತ್ರಿಕೆಗಳಲ್ಲಿ ಹತ್ತಾರು ಕಾದಂಬರಿಗಳನ್ನು ಬರೆದು ನಾಡಿನಾದ್ಯಂತ ಚಿರಪರಿಚಿತರಾದ ಸೃಜನಶೀಲ ಕಾದಂಬರಿಕಾರರೆAದರೆ ನಾಗೇಂದ್ರ ಎಲ್.ಗಾಯಕವಾಡ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ್ (ಆರ್) ಗ್ರಾಮದ ಲಾಲಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಡತನದಲ್ಲಿ ಮುಂದೆ ಕಲಿಯಲು ಆಗದೆ ಹೊಲದಲ್ಲಿ ಎತ್ತುಗಳು ಕಾಯುವುದು, ಕೃಷಿ ಕೆಲಸ ಮಾಡುವುದರೊಂದಿಗೆ ಸುಮಾರು ೪೬ಕ್ಕೂ ಹೆಚ್ಚು ಕಾದಂಬರಿಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲ ಕಾದಂಬರಿಗಳು ರಾಗಸಂಗಮ, ನವರಾಗಸಂಗಮ, ಥ್ರೀಲ್ ಮಾಸಪತ್ರಿಕೆಗಳಲ್ಲಿ `ಖ್ಯಾತ ಕಾದಂಬರಿಕಾರ ನಾಗೇಂದ್ರ ಗಾಯಕವಾಡ’ ಎಂಬ ಮುಖಪುಟದ ಶೀರೊನಾಮೆಯಲ್ಲಿ ಇವರ ಕಾದಂಬರಿಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾಗಿ `ನಾ ನಿನ್ನ ಕ್ಷೇಮಿಸಿದ್ದೇನೆ ‘ `ಭ್ರಮೆ’ `ಅಮರ ಜ್ಯೋತಿ’ `ಪ್ರೇಮ’ `ವಿಷಕನ್ಯೆ’ `ಸಮಯ’ `ವಿಲಕ್ಷಣ’. `ರಕ್ತ ದಾಹದ ನಾಗ’ `ಸೈಕೊ ಕಿಲ್ಲರ್’ `ಅನುರಾಗ ಅಳಿಸದು’ `ನನ್ನನ್ನು ಕ್ಷಮಿಸು’. `ಬಾಡಿದ ಹೂ’ `ದಡ ಸೇರದ ನೌಕೆ’. `ಪವಿತ್ರ’. `ಇಂಚರ’ `ನಿನ್ನ ಪ್ರೀತಿಗಾಗಿ’ `ಕಗ್ಗತ್ತಲೆ ಕರಗಿಸಿದ ಸೂರ್ಯ’. `ಮೊಡ ಸರಿದ ರವಿ’ :`ಭ್ರಮೆ ಬದುಕು’ `ವಿಪರ್ಯಾಸ’ `ನಿಕೃತಿ’ `ತೆರೆ ಮರೆಯ ಹಿಂದೆ’ ಹೀಗೆ ಇವರ ಕಾದಂಬರಿ ಪಟ್ಟಿ ಬಹುದೊಡ್ಡದಿದೆ. ಇಲ್ಲಿಯ ಬಹುತೇಕ ಕಾದಂಬರಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿವೆ. ಇವರ `ವಿಷಕನ್ಯೆ’ ಮತ್ತು `ಸಮಯ ‘ ಕಾದಂಬರಿಗಳು ಥ್ರೀಲ್ ಮಾಸಪತ್ರಿಕೆಯ ೧೦೬ನೇ ಸಂಚಿಕೆಯಲ್ಲಿ `ಖ್ಯಾತ ಕಾದಂಬರಿಕಾರ ನಾಗೇಶ ಗಾಯಕವಾಡ ಅವರ ಎರಡು ಕಾದಂಬರಿಗಳು ‘ ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿ ಇವರಿಗೆ ಕಾದಂಬರಿಕಾರರಾಗಿ ಹೆಸರು ತರಲು ಕಾರಣವಾಗಿವೆ . ಮತ್ತು ಇವರು ಎರಡು ಕಥಾಸಂಕಲನಗಳು ಹಾಗೂ ಒಂದು ಸತ್ಯ ಘಟಕಗಳ ಕಥಾಸಂಕಲನ ಬರೆದಿದ್ದಾರೆ. ಇಷ್ಟು ಕಾದಂಬರಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಪುಸ್ತಕ ಮಾಡದೆ ಹಳ್ಳಿಯಲ್ಲಿ ಉಳಿದ ಇವರು ಎಲೆಮರೆಯ ಬಲಿತ ಕಾಯಿಯಾಗಿ ಕಂಡು ಬರುತ್ತಾರೆ. ಇವರ ಕುರಿತು ೨೦೧೦ರಲ್ಲಿ ಸಂಯುಕ್ತ ಕರ್ನಾಟಕದ ಮುಡಬಿ ವರದಿಗಾರರಾಗಿದ್ದ ಮಚ್ಚೇಂದ್ರ ಪಿ ಅಣಕಲ್ ಅವರು `ಕಲ್ಯಾಣ ಕರ್ನಾಟಕ ‘ ಪುರಾವಣಿಯಲ್ಲಿ ವ್ಯಕ್ತಿ ಪರಿಚಯ ಬರೆದಾಗ ಬಸವಕಲ್ಯಾಣ ತಾಲೂಕಿನ ಆಡಳಿತ ಮಂಡಳಿಯವರು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು ಇವರಿಗೆ ಉರಿಲಿಂಗಪೆದ್ದಿ ಉತ್ಸವದಲ್ಲಿ ಸನ್ಮಾನಿಸಿದ್ದಾರೆ.
ಅಂಬರೀಶ್ ಎಂ.ಭಿಮಾಣಿ
ಹವ್ಯಾಸಿ ಸೃಜನಶೀಲ ಬರಹಗಾರ ಅಂಬರೀಶ್ ಎನ್.ಭಿಮಾಣಿ ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಿತ್ತಕೊಟಾ (ಕೆ) ಗ್ರಾಮದ ಸುಬ್ಬಣ್ಣ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೨-೬-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಸ್ನಾತಕೋತ್ತರ ಪದವೀಧರರಾದ ಇವರು ಬಸವಕಲ್ಯಾಣದ ಖಾಸಗಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಪ್ರಬಂಧ, ಚುಟುಕು, ಗಜಲ್, ಹನಿಗವನ, ಮೊದಲಾದವು ರಚಿಸುತ್ತಿದ್ದಾರೆ. ಇವರ ಬರಹಗಳು ಕಲಬುರಗಿಯ `ದಾಸೋಹ ರತ್ನ’ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಮತ್ತು ಇವರು ಅನೇಕ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೯ರಲ್ಲಿ ಬಸವಕಲ್ಯಾಣ ತಾಲೂಕಾ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಂಗಮೇಶ್ವರ ವ್ಹಿ.ಹಿರೇಮಠ
ಹವ್ಯಾಸಿ ಬರಹಗಾರರಾದ ಇವರು ಬಸವಕಲ್ಯಾಣ ತಾಲೂಕಿನ ಯರಬಾಗಿಯವರಾಗಿದ್ದು ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚಿಸಿದ್ದು ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಔರಾದ ತಾಲೂಕಿನ ಹವ್ಯಾಸಿ ಬರಹಗಾರರು
ರತ್ನಪ್ಪ ಜೀರ್ಗಾ
ಅನುಭಾವಿ ಕವಿ, ತತ್ವಪದಕಾರರಾದ ರತ್ನಪ್ಪ ಜೀರ್ಗಾರವರು ಬೀದರ ಜಿಲ್ಲೆ ಔರಾದ ತಾಲೂಕಿನ ಜೀರ್ಗಾ (ಕೆ) ಗ್ರಾಮದ ಘಾಳೆಪ್ಪಾ ಮತ್ತು ತುಳಜಮ್ಮಾ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸಿದ ಇವರು ಹಲವಾರು ತತ್ವಪದ, ಭಜನೆ ಪದ, ಮೊಹರಮ್ ಪದಗಳನ್ನು ರಚಿಸಿದ್ದಾರೆ. ಇವರ ಬರಹಗಳು ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಮುಕುಂದರಾವ ಖಾನಾಪುರ
ಸ್ವತಂತ್ರ ಪೂರ್ವದಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿ ಕತೆ, ಕವನ, ಲೇಖನಗಳನ್ನು ಬರೆದ ಸಾಹಿತಿಯೆಂದರೆ ಮುಕುಂದರಾವ ಖಾನಾಪುರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಖಾನಾಪುರ ಗ್ರಾಮದ ಪುಂಡಲೀಕರಾವ ಮತ್ತು ವಿಠಾಬಾಯಿ ದಂಪತಿಗಳಿಗೆ ದಿನಾಂಕ ೫-೩-೧೯೩೫ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಬಿ.ಎ.ಎಲ್.ಎಲ್.ಬಿ. ಪದವೀಧರರಾದ ಇವರು ಬಿ.ಶ್ಯಾಮಸುಂದರ ಅವರ ಅನುಯಾಯಿಗಳಾಗಿದರು. ಮತ್ತು ನಾಂದೇಡದಲ್ಲಿ ಬಿ.ಶ್ಯಾಮಸುಂದರ ಹೆಸರಿನಲ್ಲಿ ಶಾಲೆಯೊಂದು ತರೆದು ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅದು ಇಂದಿಗೂ ಕಾರ್ಯರಂಭ ಮಾಡುತ್ತಿದೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಹಲವಾರು ಕತೆ ಕವನ ಲೇಖನಗಳನ್ನು ಬರೆದಿದ್ದಾರೆ. ಮತ್ತು ಅವು ಕೆಲ ಕಡೆ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ೧೯೮೯ರಲ್ಲಿ ಬೀದರ ಸಂಸದ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಸಿದ್ದಮ್ಮಾ ಹಳಕಾಯಿ
ಉದಯೋನ್ಮುಖ ಕವಯತ್ರಿಯೆಂದರೆ ಸಿದ್ದಮ್ಮಾ ಹಳಕಾಯಿಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಧೋಳ ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೫-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಸ್ನಾತಕೋತ್ತರ ಪದವೀಧರರಾದ ಇವರು ಕೊಳ್ಳುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಹಲವಾರು ಕವನ, ಲೇಖನ, ಹನಿಗವನ ಇತ್ಯಾದಿ ಬರಹಗಳು ಬರೆದಿದ್ದು , ಅವು ಕನ್ನಡದ ಕೆಲ ಪತ್ರಿಕೆ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಕಸಾಪದ ಹಲವಾರು ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲಕಾಲ ಶಿಕ್ಷಣ ಇಲಾಖೆಯಲ್ಲಿ ಸಿ.ಆರ್.ಪಿಯಾಗಿ ಸೇವೆ ಸಲ್ಲಿಸಿದ ಇವರು ಉತ್ತಮ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಜಾನಪದ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ಬುಲಾಯಿ ಪದಗಳನ್ನು ರಚಿಸಿ ಬೀದರ ಜಿಲ್ಲಾ ಜಾನಪದ ಪರಿಷತ್ತಿನ ಸದಸ್ಯರಾಗಿ, ಹಾಗೂ ಬೀದರ ತಾಲೂಕಿನ ಕದಳಿ ವೇದಿಕೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಇವರಿಗೆ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕಡೆಗಳಲ್ಲಿ ಸತ್ಕರಿಸಿ ಗೌರವಿಸಲಾಗಿದೆ.
ಉಮಾ ಬಾಪುರೆ
ಸೃಜನಶೀಲ ಹವ್ಯಾಸಿ ಬರಹಗಾರ್ತಿಯೆಂದರೆ ಉಮಾ ಬಾಪುರೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಧೋಳ ಗ್ರಾಮದ ಶಿವರಾಜ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೭-೧೨-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಮನ್ನಳಿ ಗ್ರಾಮದ ಹಣಮಂತರಾಯ ಸಿಂದೋಲ್ ರವರ ಧರ್ಮ ಪತ್ನಿಯಾಗಿದ್ದು, ಗೃಹಿಣಿಯಾಗಿದ್ದುಕೊಂಡೆ ಸಾಹಿತ್ಯ ರಚನೆಯಲ್ಲಿ ಸುಮಾರು ಮೂರು ದಶಕಗಳಿಂದಲೂ ಹೆಚ್ಚು ಕಾಲ ಕತೆ, ಕವನ, ಲೇಖನ, ಹನಿಗವನ ಮೊದಲಾದ ತರಹದ ಸಾಹಿತ್ಯ ರಚಿಸಿದ್ದಾರೆ. ಇವರ ಕತೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಶೋಭಾವತಿ ಸೋಮರೆ
ಉದಯೋನ್ಮಖ ಬರಹಗಾರ್ತಿಯಾಗಿ ಗುರುತಿಸಿಕೊಂಡ ಕವಯತ್ರಿಯೆಂದರೆ ಶೋಭಾವತಿ ಸೋಮರೆಯವರು. ಇವರು ಬೀದರ ಜಿಲ್ಲೆ ಔರಾದ (ಬಿ) ಯ ಸಂಗಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೨-೨-೧೯೭೧ರಲ್ಲಿ ಜನಿಸಿದ್ದಾರೆ. ಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿ ಬಿ.ಎ.ಪದವಿ ಪಡೆದ ಇವರು ನರ್ಸರಿ ಶಿಕ್ಷಕಿಯರ ತರಬೇತಿಯನ್ನು ಪಡೆದು ಸುಮಾರು ೧೩ ವರ್ಷಗಳ ಕಾಲ ಬಸವಮುಕ್ತಿ ಮಂದಿರದ ಗುರುಕುಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ನಾರಾಯಣರಾವ ಅವರೊಂದಿಗೆ ವಿವಾಹವಾದ ಇವರು ಸುಖ ದಾಂಪತ್ಯದ ಜೀವನದಲ್ಲಿಯೆ ಗಂಡನನ್ನು ಮತ್ತು ಐದಾರು ವರ್ಷದ ಮಗಳನ್ನು ಕಳೆದುಕೊಂಡು ಒಂಟಿ ಜೀವನದಲ್ಲಿ ನೊಂದು, ಬೆಂದು, ಶೋಕ ಸಾಗರದಲ್ಲಿ ಮುಳುಗಿ ತಮ್ಮ ಮಗಳ ಗಂಡನ ನೆನಪಿನಲ್ಲಿಯೆ ಸಾಕಷ್ಟು ಸಾಹಿತ್ಯವನ್ನು ರಚಿಸಿದ್ದಾರೆ. ತಮ್ಮ ಮಗಳು `ಚೈತನ್ಯ’ ಳ ಕುರಿತಾದ ೫೦ ಪುಟದ ನೋವಿನ ಕತೆಯೊಂದು ಬರೆದಿರುವುದು ಹೆತ್ತ ಕರುಳಿನ ಭಾವ ಇವರ ಸಾಹಿತ್ಯದಲ್ಲಿ ಸೇರಿಕೊಂಡಿದೆ. ಇವರ ಬರಹಗಳು ಕನ್ನಡದ ಕೆಲ ಪತ್ರಿಕ ಹಾಗೂ ಚೈತನ್ಯ ಸಿರಿ ಪ್ರಾತಿನಿಧಿಕ ಕವನ ಸಂಕಲನದಲ್ಲಿ `ಹಾರೈಕೆ’ ಮತ್ತು `ನೊಂದ ಮನ’ ಸೇರಿದಂತೆ ಮೊದಲಾದವು ಪ್ರಕಟವಾಗಿವೆ. ಬೀದರ ಲೇಖಕಿಯರ ಬಳಗದ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ಆ ಸಂಘದಿAದ ಮಾನವತಾವಾದಿ ಪ್ರಶಸ್ತಿ, ಉತ್ತಮ ಶಿಕ್ಷಕಿ ಪ್ರಶಸ್ತಿಗಳು ನೀಡಿ ಗೌರವಿಸಿದ್ದಾರೆ. ಇವರು ಖಾಸಗಿ ಶಾಲಾ ಶಿಕ್ಷಕ ಹುದ್ದೆಯನ್ನು ತೊರೆದು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕವನ ಸಂಕಲವೊAದು ಸದ್ಯದಲ್ಲಿಯೇ ಹೊರಬರುತ್ತಲಿದೆ.
ದಶವಂತ ಬಂಡೆ
ಹವ್ಯಾಸಿ ಯುವ ಬರಹಗಾರರಾದ ದಶವಂತ ಬಂಡೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಹಿಪ್ಪಳಗಾಂವ ಗ್ರಾಮದ ಮಾರುತಿ ಮತ್ತು ಖಂಡೋಬಾಯಿ ದಂಪತಿಗಳಿಗೆ ದಿನಾಂಕ ೨೫-೫-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ ಪದವೀಧರರಾದ ಇವರು ೨೦೦೯ರಿಂದ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಸಾಹಿತ್ಯದ ರಚನೆಯಲ್ಲಿ ತೊಡಗಿರುವ ಇವರು ಹಲವಾರು ಕವನ, ಲೇಖನ, ಹನಿಗವನ, ಪ್ರಬಂಧ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. `ಕಲ್ಲುಬಂಡೆ’ ಎಂಬುದು ಇವರ ವಚನಾಂಕಿತವಾಗಿದೆ. ಉತ್ತಮ ವಾಗ್ಮಿಗಳಾಗಿರುವ ಇವರು ಅನೇಕ ಕಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಅಷ್ಟೇಯಲ್ಲದೆ ಇವರು ಬಸವಕಲ್ಯಾಣದ ಚುಟುಕು ಕನ್ನಡ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘ, ಲೋಹಿಯ ಪ್ರತಿಷ್ಠಾನ, ದಲಿತ ಸಾಹಿತ್ಯ ಪರಿಷತ್ತು ಮೊದಲಾದ ಸಂಘ ಸಂಸ್ಥೆಗಳ ಸಂಚಾಲಕರಾಗಿ, ಗಮಕಕಲಾ ಪರಿಷತ್ತಿನ ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾಗಿದ್ದಾರೆ.
ಬೇಬಿರಾಣಿ ಬಡಿಗೇರ
ಜಾನಪದ ಹಾಡುಗಳಾದ ತೊಟ್ಟಿಲು,ಸೋಬಾನೆ, ಬುಲಾಯಿ ಪದ ಕುಟ್ಟುವ, ಬಿಸುವ ಮತ್ತು ಭಜನೆ ಪದಗಳನ್ನು ಬರೆದು ಸ್ವತಃ ರಾಗ ಸಂಯೋಜನೆಯೊAದಿಗೆ ಹಾಡುವ ಕವಯತ್ರಿಯೆಂದರೆ ಬೇಬಿರಾಣಿ ಬಡಿಗೇರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಬಲ್ಲೂರ್ ಗ್ರಾಮದ. ದಶರಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೪-೭-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಮೈಲೂರದ ಅಭಿಮನ್ಯು ಬಡಿಗೇರ ಅವರ ಧರ್ಮಪತ್ನಿಯಾಗಿದ್ದು, ಗೃಹಿಣಿಯಾಗಿದ್ದುಕೊಂಡು ವಿದ್ಯಾನಗರದಲ್ಲಿ ರಮಾಬಾಯಿ ಸಂಗೀತ ಕಲಾ ಮಂಡಳಿಯ ಮೂಲಕ ಗಾಯನ ಮತ್ತು ಪದ್ಯ ಬರೆಯುವುದರಲ್ಲಿ ಸಿದ್ದಹಸ್ತರು. ಇವರು ಜನಪದ ಗೀತೆಗಳನ್ನು ಹಾಡುವುದಷ್ಟೆಯಲ್ಲದೆ ಇತರ ಹಾಡುಗಾರರಿಗೂ ಪದ್ಯಗಳನ್ನು ಬರೆದು ಹಾಡುವುದು ಹೇಗೆ ಎಂದು ಸ್ಪೂರ್ತಿ ನೀಡುತ್ತಾರೆ. ಇವರ ಪುಸ್ತಕವೊಂದು ಪ್ರಕಟಣೆಯ ಹಂತದಲ್ಲಿದೆ. ಇವರ ಜನಪದ ಸಾಹಿತ್ಯ ಚಟುವಟಿಕೆಗೆ ಹಲವು ಕಡೆಗಳಿಂದ ಸನ್ಮಾನ, ಪುರಸ್ಕಾರಗಳು ಲಭಿಸಿವೆ.
ಡಾ.ಸುರೇಖಾ ಪಾಟೀಲ್
ಉದಯೋನ್ಮುಖ ಯುವ ಕವಯತ್ರಿಯೆಂದರೆ ಡಾ.ಸುರೇಖಾ ಪಾಟೀಲ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಲಾಧಾ ಗ್ರಾಮದ ಅಂಬಾದಾಸರಾವ ಮತ್ತು ಪರೇಗಬಾಯಿ ದಂಪತಿಗಳಿಗೆ ದಿನಾಂಕ ೧-೯-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್, ಪಿ.ಎಚ್.ಡಿ.ಪದವಿಧರರಾದ ಇವರು ಕಾಲೇಜು ದಿನಗಳಿಂದಲೆ ಕತೆ, ಕವನ, ಲೇಖನ, ಹನಿಗವನ, ಪ್ರಬಂಧ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ, ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಬರೆದ ಪ್ರಬಂಧಗಳು ಹಲವಾರು ವಿಚಾರ ಸಂಕಿರಣ. ಸಭೆ ಸಮಾರಂಭಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ.ಮತ್ತು ಜಾನಪದ ಮಹಿಳೆಯರ `ಜನಪದ’ ಗೀತೆಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಅಷ್ಟೇಯಲ್ಲದೆ ಇವರು ಉತ್ತಮ ಸಂಘಟನಾಕಾರರು ಆಗಿದ್ದು ಹಲವಾರು ಮಹಿಳಾ ಜಾನಪದ ಸಂಘ ಸಂಸ್ಥೆಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಲ್ಲಿ, ಹಾಗೂ ಕನ್ನಡ ಪರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನ ವಾಚನವು ಮಾಡಿದ್ದಾರೆ. ಇವರಿಗೆ ಬೀದರದ ಕರ್ನಾಟಕ ಕಾಲೇಜಿನಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ.
ಪರಮೇಶ್ವರ ಬಿ.ಬಿರಾದಾರ
ಉದಯೋನ್ಮುಖ ಯುವ ಬರಹಗಾರರೆಂದರೆ ಪರಮೇಶ್ವರ ಬಿ.ಬಿರಾದಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ಬಸವರಾಜ ಬಿರಾದಾರ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೬-೧-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ, ಹನಿಗವನ ಮೊದಲಾದವು ಬರೆದು ನಾಡಿನ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯ ವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಉದಯಕಾಲ,ಕರ್ನಾಟಕ ಸಂಧ್ಯಾ ಕಾಲ, ಲೋಕ ದರ್ಶನ, ಬಳ್ಳಾರಿ ಬೆಳಗಾಯಿತು, ಪರಿಶ್ರಮ ವಾರ್ತೆ, ಸಂಪದ ವಿಶ್ವ ಕನ್ನಡಿ, ಸುವರ್ಣ ಪ್ರಗತಿ, ಬೀದರ ಕೂಗು, ಔರಾದ ವಾಣಿ, ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು `ನಿನ್ನಂತರAಗ’ ಹಾಗೂ `ಅನನ್ಯ’ ಎಂಬ ನಿಯತಕಾಲಿಕೆಗಳು ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಇವರ ಕವನ,ಲೇಖನ, ಪ್ರಬಂಧಗಳಿಗೆ ನಾಡಿನಾದ್ಯಂತ ನಡೆಯುವ ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಬೀದರ ಜಿಲ್ಲೆಗೆ ಸಂಬAಧಿಸಿದ ಕೆಲ ಸಾಕ್ಷ್ಯಚಿತ್ರಗಳು ಕೂಡ ಇವರು ತಯಾರಿಸಿದ್ದು ಅವು ತುಮಕೂರಿನ ಸಿದ್ಧಾರ್ಥ್ ಟಿ.ವಿ.ಚಾನಲ್ ನಲ್ಲಿ ಇವರ ಸಂದರ್ಶನದೊAದಿಗೆ ಪ್ರಸಾರವಾಗಿವೆ. ಹಾಗೂ ೯೦.೮. ಎಫ್.ಎಂ. ರೇಡಿಯೋ ನಲ್ಲಿಯೂ ಇವರ ಕೆಲ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಸದ್ಯ ಇವರು ಈ ವರ್ಷ ಕೆಲ ಕೃತಿಗಳು ಪ್ರಕಟಿಸುವ ತಯಾರಿಯಲ್ಲಿದ್ದಾರೆ.
ಪೂಜಾ ಪಟ್ನೆ
ಉದಯೋನ್ಮುಖ ಯುವ ಕವಯತ್ರಿಯೆಂದರೆ ಪೂಜಾ ಪಟ್ನೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ವಡಗಾಂವ (ದೇ) ಗ್ರಾಮದ ಶಂಕರರಾವ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ ೩೧-೭-೧೯೯೭ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರಿAಗ್ ಪದವಿಧರರಾದ ಇವರು ಕೆ.ಎ.ಎಸ್. ಮತ್ತು ಐ.ಎ.ಎಸ್ ಪರೀಕ್ಷೆಗೊಸ್ಕರ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ತುಂಬ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಸುಮರು ಮುನ್ನೂರಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಇವರ ಕೆಲ ಕವನ, ಲೇಖನ ಬರಹಗಳು ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನಗಳು ಪಡೆದಿವೆ. ಮತ್ತು ಇವರಿಗೆ `ಕಾವ್ಯ ಚೂಡಾಮಣಿ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಹಲವರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಬೀದರದ ಕೆ.ಬಿ.ಕಾಲೋನಿಯ ನಿವಾಸಿಯಾಗಿ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ಚಿದಾನAದ ತಾಳಮಡಗೆ
`ಸಚ್ಚಿದಾನಂದ’ ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಮೂಲತಃ ಔರಾದ ತಾಲೂಕಿನ ಸಿರ್ಸಿ ಗ್ರಾಮದವರಾಗಿದ್ದು ಅನೇಕ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಗುರುಶಾಂತಪ್ಪ ನಿಂಗದಳ್ಳಿ
`ಬಸವ ಪ್ರಿಯ ಮಿತ್ರ’ ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು ಬೀದರ ಕೃಷಿ ಕಾಲೋನಿ ನಿವಾಸಿಯಾಗಿದ್ದಾರೆ. ಸದ್ಯ ಇವರು ವಿಜಯಪುರದ ಕೃಷಿ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ ,ಲೇಖನ ಆಧುನಿಕ ವಚನ ಮೊದಲಾದವು ಬರೆದಿದ್ದು ,ಅವು ಕೆಲವು ಕಡೆ ಪ್ರಕಟವಾಗಿವೆ.
ಜೈ ಸಮೀನಾ. (ಜಯರಾಜ .ಎಸ್.)
ಹವ್ಯಾಸಿ ಬರಹಗಾರರಾದ ಇವರು ಔರಾದ ತಾಲೂಕಿನ ನಾಗೂರ (ಬಿ) ಗ್ರಾಮವರು. ಎಂ.ಎ. ಎಂ.ಪೀಲ್.ಪದವೀಧರರಾದ ಇವರು ಅನೇಕ ಕತೆ. ಕವನ ಲೇಖನ, ಆಧುನಿಕ ವಚನ ಮೊದಲಾದವು ರಚಿಸಿದ್ದು ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಜಯದೇವಿ ಯದಲಾಪುರೆ
ಹವ್ಯಾಸಿ ಬರಹಗಾರ್ತಿಯಾದ ಜಯದೇವಿ ಯದಲಾಪುರೆಯವರು ಔರಾದ ತಾಲೂಕಿನ ಸುಂದಾಳ ಗ್ರಾಮದವರು. ಬೀದರಿನ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಅನೇಕ ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.
ನಿತ್ಯಾನಂದ ಘೂಳೆ
ಮೂಲತಃ ಬೀದರ ಜಿಲ್ಲೆ ಔರಾದನವರಾದ ಇವರು ಹಲವಾರು ಕವನ, ಲೇಖನ, ಆಧುನಿಕ ವಚನಗಳನ್ನು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಸಂಗೀತಾ ಎನ್.ಕಲಬುರ್ಗೆ
ಉದಯೋನ್ಮುಖ ಕವಯತ್ರಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರವ ಹವ್ಯಾಸಿ ಯುವ ಬರಹಗಾರ್ತಿ ಸಂಗೀತಾ ಎನ್.ಕಲಬುರ್ಗೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಕರಕ್ಯಾಳ ಗ್ರಾಮದ ಸಿದ್ರಾಮ ಮತ್ತು ಕಲಾವತಿ ದಂಪತಿಗಳಿಗೆ ದಿನಾಂಕ ೮-೯-೨೦೦೬ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಎಸ್.ಎಸ್.ಎಲ್.ಸಿ ಅಧ್ಯಯನ ಮಾಡುತ್ತಿದ್ದಾರೆ. ಸದಾ ಒಂದಿಲ್ಲೊAದು ಪತ್ರಿಕೆ ಅಂತರಜಾಲ ತಾಣಗಳಲ್ಲಿ ಕವನ, ಲೇಖನ, ಹನಿಗವನಗಳನ್ನು ರಚನೆ ಮಾಡುತ್ತಿರುವ ಇವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ, ಕತೆ, ಕವನ, ಲೇಖನ ಬರಹಗಳು ರಚಿಸುತ್ತಿದ್ದಾರೆ. ಇವರ ಬರಹಗಳಿಗೆ ಅನೇಕ ಕಡೆಯ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿವೆ. ಮತ್ತು ಕೆಲ ಪತ್ರಿಕೆ ಹಾಗೂ `ಸಂಪಿಗೆ’ ಸೇರಿದಂತೆ ಮತ್ತಿತರ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ.
ಭಾಲ್ಕಿ ತಾಲೂಕಿನ ಹವ್ಯಾಸಿ ಬರಹಗಾರರು
ದಿ.ಶಾಂತಪ್ಪಾ ಸೊನಾರೆ
ತತ್ವ ಪದ, ಭಜನೆ ಗೀತೆಗಳನ್ನು ಬರೆದಿರುವ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯ ಶ್ರೀ ನಿಂಗಪ ಮತ್ತು ಶ್ರೀಮತಿ ದ್ರೌಪದಿ ದಂಪತಿಗಳಿಗೆ ೧೯೦೬ರಲ್ಲಿ ಜನಿಸಿದ್ದಾರೆ. ಮತ್ತು ನೂರಾರು ತತ್ವ ಪದಗಳನ್ನು ರಚಿಸಿ ಖ್ಯಾತರಾಗಿದ್ದಾರೆ. `ಲಂಕ ಹಾರಿದನೆ ಹನುಮಂತ, ಭಜಿಸಣ್ಣ ಭಜಿಸಣ್ಣ, ಗಜಮುಖನೆ ! ಝನನನನ ನಾದ ನೋಡಣ್ಣಾ ! ‘ ಎಂಬ ಮೊದಲಾದ ಹಾಡುಗಳು ಜನಪ್ರಿಯವಾಗಿವೆ. ಇವರು ದಿನಾಂಕ ೨೪-೫-೧೯೮೯ರಲ್ಲಿ ನಿಧನಹೊಂದಿದ್ದು, ಇವರ ಶವವನ್ನು ಊರೆಲ್ಲ ಮೆರವಣಿಗೆ ತೆಗೆದು ಜನ ಅವರ ಮನೆಯಲ್ಲಿಯೇ ಸಮಾಧಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಅಂದರೆ ಅವರು ಗ್ರಾಮದ ಜನರಿಗೂ ಸಂಬAಧಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರೆಂಬುದು ಈ ಸಂಸ್ಕಾರದಿAದ ಅರ್ಥವಾಗುತ್ತದೆ.
ಚಂದ್ರಪ್ಪ ಭಾವಿಕಟ್ಟಿ
ಅಧ್ಯಾತ್ಮಿಕ ಭಕ್ತಿ, ಭಾವಗೀತೆಗಳನ್ನು ಬರೆದಿರುವ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ರುದ್ರಪ್ಪ ಮತ್ತು ಸಮವ್ವ ದಂಪತಿಗಳಿಗೆ ೧೯೨೭ರಲ್ಲಿ ಜನಿಸಿದ್ದಾರೆ. ಇವರ ವಿದ್ಯಾರ್ಹತೆ ವೃತ್ತಿ ಮತ್ತಿತರ ವಿವರ ತಿಳಿದು ಬಂದಿಲ್ಲ ಆದರೆ ಸಾಹಿತ್ಯ ರಚನೆಯಲ್ಲಿ ಇವರು ಬರೆದ ಹಾಡು ಭಜನೆ ಗೀತೆಗಳು ಇಂದು ಜನರ ನಾಲಿಗೆಯ ಮೇಲೆ ಹರಿದಾಡುತ್ತಿವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸಬೇಕೆಂಬ ಉದ್ದೇಶದಿಂದ ಹಲವಾರು ಭಾವ ಭಂಗಿಗಳೊಡನೆ ಕೀರ್ತನೆಗಳನ್ನು ಹೇಳುತ್ತಿದ್ದರು.
ಮಾಣಿಕಪ್ಪಾ ಏಣಕೂರ
ನಾಟಕ ಮಾಸ್ತರೆಂದೆ ಖ್ಯಾತರಾದ ಕವಿ, ಕಲಾವಿದ, ಸಂಗೀತ ಸಾಹಿತಿಯೆಂದರೆ ಮಾಣಿಕಪ್ಪ ಏಣಕೂರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಏಣಕೂರ ಗ್ರಾಮದ ರುದ್ರಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೨೯ರಲ್ಲಿ ಜನಿಸಿದ್ದಾರೆ. ತತ್ವಪದಗಳು ಬರೆದ ನಾಟಕ ನಿರ್ದೇಶಕರಾಗಿ ಹಲವಾರು ಕಡೆ ಅವು ಪ್ರದರ್ಶನ ಮಾಡಿದ್ದಾರೆ. ಮತ್ತು ಉತ್ತಮ ಹಾಡುಗಾರರು, ತಬಲವಾದಕರು, ಡೊಳ್ಳು ಕುಣಿತ ಜಾನಪದ ಕಲಾವಿದರಾಗಿಯು ಗುರ್ತಿಸಿಕೊಂಡ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಮಾಣಿಕರಾವ ಕರಡ್ಯಾಳ
ತತ್ವಪದ, ಹಾಡು, ಪದ್ಯಗಳನ್ನು ರಚನೆ ಮಾಡಿರುವ ಕವಿ ಮಾಣಿಕರಾವ ಕರಡ್ಯಾಳ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ತುಕಾರಾಮ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೪-೨-೧೯೩೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್. ವರೆಗೆ ಶಿಕ್ಷಣ ಪಡೆದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೀದರ ತಾಲೂಕಿನ ಚಿಲ್ಲರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೯೩ರಲ್ಲಿ ನಿವೃತ್ತರಾಗಿ ಸಾಹಿತ್ಯ ರಚಿಸಿ ಹಲವಾರು ತತ್ವಪದ ಹಾಡು ಪದ್ಯಗಳನ್ನು ಬರೆದಿದ್ದಾರೆ. ಅವು ಕೆಲ ಕಡೆ ಪುಸ್ತಕಗಳಲ್ಲಿಯೂ ಪ್ರಕಟವಾಗಿವೆ.
ನೀಲಕಂಠ ಕಾಂಬಳೆ
ಕವನ ಹಾಡು ಪದ್ಯಗಳನ್ನು ರಚಿಸಿರುವ ನೀಲಕಂಠ ಕಾಂಬಳೆಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಬಸಪ್ಪ ಮತ್ತು ಕಾಶೇಮ್ಮ ದಂಪತಿಗಳಿಗೆ ದಿನಾಂಕ ೧೬-೮-೧೯೪೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ವರೆಗೆ ಅಧ್ಯಯನ ಮಾಡಿದ ಇವರು ಸುಮಾರು ೨೫೦ ಕ್ಕೂ ಹೆಚ್ಚು ಕವನ, ಹಾಡುಗಳು ಬರೆದಿದ್ದಾರೆ. ಪಂಚಶೀಲ ಗವಾಯಿಯವರ ಮಾರ್ಗದಲ್ಲಿ ಸಾಹಿತ್ಯ ರಚಿಸಿ ಅವರನ್ನು ಗುರುಗಳೆಂದು ಹೇಳಿಕೊಳ್ಳುವ ಇವರು ಜ್ಯಾಂತಿ ಗ್ರಾಮದಲ್ಲಿ ವಾಸವಾಗಿದ್ದಾರೆ.
ಗುರುಲಿಂಗಪ್ಪ ಜೈರಾಮಕರ್
ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿದ ಕವಿಯೆಂದರೆ ಗುರುಲಿಂಗಪ್ಪ ಜೈರಾಮಕರ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ರುದ್ರಪ್ಪ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧೫-೮-೧೯೩೫ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಶಿಕ್ಷಣ ಪಡೆದ ಇವರು ಬಾಲ್ಯದಿಂದಲೇ ಹಾಡುವ ಕಲೆಯನ್ನು ಕರಗತ ಮಾಡಿಕೊಂಡು ಸ್ವತಃ ಹಾಡು ಪದ್ಯ ಭಜನೆ ಗೀತೆಗಳನ್ನು ರಚಿಸಿದ್ದಾರೆ.
ವಿ.ಎಂ.ಡಾಕುಳಗಿ
`ಕವಿಮಡಾ’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸಿದ ಬರಹಗಾರರೆಂದರೆ ವಿ.ಎಂ.ಡಾಕುಳಗಿಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಗ್ರಾಮದ ಮಹಾರುದ್ರಯ್ಯ ಮತ್ತು ಪಾರ್ವತಿದೇವಿ ದಂಪತಿಗಳಿಗೆ ೫-೩-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್.ಪದವಿಧರರಾದ ಇವರು ೧೯೮೩ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ.
ತಮ್ಮ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ತುಂಬ ಆಸಕ್ರರಾಗಿ ಕವನ,ಆಧುನಿಕ ವಚನ, ಲೇಖನ,ಚಿಂತನ,ವಿಮರ್ಶೆ,ಚರೀತ್ರೆ ಮೊದಲಾದ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರಗೊಂಡಿವೆ. ಇವರು ೪೦ಕಿಂತ ಹೆಚ್ಚು ವ್ಯಕ್ತಿ ಚಿತ್ರ ಲೇಖನಗಳು, ೧೦೦ಕಿಂತ ಹೆಚ್ಚು ವ್ಯಕ್ತಿ ಚರಿತ್ರೆಯನ್ನು ಹೇಳುವ ಕವಿತೆಗಳು, ೨೦೦ಕಿಂತ ಹೆಚ್ಚು ಆಧುನಿಕ ವಚನಗಳು, ಹತ್ತಾರು ಕತೆಗಳು ೫೦೦ಕಿಂತ ಹೆಚ್ಚು ಕವನಗಳನ್ನು ರಚಿಸಿದ್ದು ಅವು ಅಪ್ರಕಟಿತವಾಗಿವೆ. ಇವರು ಬರೆದ `ಮುದ್ದು ಕೊಟ್ಟ ತಪ್ಪು’, `ಸಂಚಲನಾ ‘ ಎಂಬ ಕತೆಗಳು ಕಮಲಾಕರ್ ಜೋಶಿ ಎಂಬ ಲೇಖಕರು ಹಿಂದಿ ಭಾಷೆಗೆ ಅನುವಾಸಿದ್ದಾರೆ. ಇವರ `ಕರಾಳ ದಿನ’ ಕಾವ್ಯಕ್ಕೆ ರಾಜ್ಯ ಪ್ರಶಸ್ತಿ. ಮಂತ್ರ ಸ್ವಾತಂತ್ರ‍್ಯ ಕಾವ್ಯಕ್ಕೆ ವಿಭಾಗಿಯ ಪ್ರಶಸ್ತಿ, ಹಾಗೂ ಗದಗದಿಂದ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ಯುನೆಸ್ಕೋ ಸಮಿತಿಯ ನಿರ್ದೇಶಕರಾಗಿ ,ಜಿಲ್ಲಾ ಪಂಚಾಯತ್ ನಾಮನಿರ್ದೇಶನ ಸದಸ್ಯರಾಗಿ, ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಚಳುವಳಿಗಾರರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಭಾಗಿರಥಿ ಎಸ್.ಸೋಮನೋರ
ಹವ್ಯಾಸಿ ಬರಹಗಾರ್ತಿ ಹಾಗೂ ಜಾನಪದ ಕಲಾವಿದೆಯಾದ ಭಾಗೀರಥಿಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬುದನಪೂರ ಗ್ರಾಮದ ನಿಂಗಪ್ಪ ಮತ್ತು ಪರೇಗಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೫೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಹಿಂದಿ ಬಿ.ಇಡಿ ಅಧ್ಯಯನ ಮಾಡಿದ ಇವರು ಗೃಹಿಣಿಯಾಗಿದ್ದುಕೊಂಡು ಕವನ, ಜಾನಪದ ಹಾಡುಗಳ ರಚನೆಯೊಂದಿಗೆ ಸುಮಧುರವಾಗಿ ಹಾಡುವ ಕಲಾವಿದರು ಆಗಿದ್ದಾರೆ. ಇವರ ಬರಹಗಳು ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದಿನ ಸಿದ್ದಾರ್ಥ ನಗರದಲ್ಲಿ ವಾಸವಾಗಿದ್ದಾರೆ.
ಡಾ.ಸುರೇಶ ಮುಳೆ
ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿರುವ ಡಾ.ಸುರೇಶ ಮುಳೆ. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಅಂಬೆಸಾAಗವಿ ಗ್ರಾಮದ ಮಾರುತಿರಾವ ಮತ್ತು ಪಾರ್ವತಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.(ಹಿಂದಿ) ಪದವೀಧರರಾದ ಇವರು ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಕಚ್ಚಿದಿವಾರ, ನಯಾಡ್ರೆಸ್,ಏಕಬುನೌತಿ ಚುನೌತಿ, ಗುರುದೇವೋ ಭವ, ದುಸರಿ ಶಾದಿ’ ಎಂಬ ಹಲವಾರು ಕತೆಗಳನ್ನು ಬರೆದಿದ್ದಾರೆ. ಇವರ ಕತೆ, ಕವನ ,ಲೇಖನ , ಚಿಂತನ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ದೆಹಲಿಯಿಂದ ಡಾ.ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಬೂಸಾವಳದ ವತಿಯಿಂದ ರವೀಂದ್ರನಾಥ ಟ್ಯಾಗೋರ್ ಲೇಖಕ ಪ್ರಶಸ್ತಿ, ದೆಹಲಿಯ ದಲಿತ ಸಾಹಿತ್ಯ ಅಕಾದೆಮಿ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಗಣಪತಿ ಕಲ್ಲೂರೆ
ಕತೆ ,ಕವನ,ಲೇಖನ, ಸಾಕ್ಷರ ಗೀತೆಗಳನ್ನು ರಚಿಸಿದ ಸಾಹಿತಿಯೆಂದರೆ ಗಣಪತಿ ಕಲ್ಲೂರೆ. ಇವರು ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಂಬಾಜಿ ಮತ್ತು ಚಂದ್ರಮ ದಂಪತಿಗಳಿಗೆ ದಿನಾಂಕ ೧೧-೩-೧೯೬೪ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವೀಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಭಾಲ್ಕಿ ತಾಲೂಕಿನ ಸಾಕ್ಷರತಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾರತೀಯ ದಲಿತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ಹಲವಾರು ಪ್ರಕಾರದ ಸಾಹಿತ್ಯ ರಚಿಸಿದ್ದು ಅವು ಅಪ್ರಕಟಿತವಾಗಿವೆ.
ಬಾಲಾಜಿ ತಾಡಮಲ್ಲೆ
ಹವ್ಯಾಸಿ ಬರಹಗಾರ ಬಾಲಾಜಿ ತಾಡಮಲ್ಲೆಯವರು ಭಾಲ್ಕಿಯ ಪಂಡರಿನಾಥ ಮತ್ತು ಗಂಗಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಅನೇಕ ಕವನ ಲೇಖನ ಬರಹಗಳು ಬರೆದಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ಶಿಕ್ಷಕ ಶ್ರೀ ಪ್ರಶಸ್ತಿ, ಮತ್ತು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಶೋಕ ಸಿಂಧೆ
ಚಿತ್ರ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರಾಗಿ ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಲೇಖಕರೆಂದರೆ ಅಶೋಕ ಸಿಂಧೆಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ಲಕ್ಷ್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೭-೧೯೭೦ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಡಿ.ಎಂ.ಸಿ. ಮತ್ತು ಎ.ಎಂ.ಸಿ. ಶಿಕ್ಷಣ ಪಡೆದು ಭಾಲ್ಕಿ ತಾಲೂಕಿನ ಬಾಳೂರಿನ ಸರ್ಕಾರಿ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯದಲ್ಲಿ ಆಸಕ್ತರಾಗಿ ಕವನ,ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಕಸಾಪದ ವಿವಿಧ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ೨೦೧೧ರಲ್ಲಿ ಭಾಲ್ಕಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೩ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೪ರಲ್ಲಿ ರಾಜ್ಯ ಕಲಾ ರತ್ನ ಮಾರ್ಗದರ್ಶನ ಪ್ರಶಸ್ತಿ, ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.
ವಿಜಯಲಕ್ಷ್ಮಿ ಹೂಗಾರ
ವೃತ್ತಿಯಲ್ಲಿ ವಕೀಲರಾಗಿ ಪ್ರವೃತ್ತಿಯಲ್ಲಿ ಕವಯತ್ರಿಯಾಗಿ, ಸಾಹಿತ್ಯ ರಚಿಸುತ್ತಿರುವ ಬರಹಗಾರ್ತಿಯೆಂದರೆ ವಿಜಯಲಕ್ಷ್ಮಿ ಹೂಗಾರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಮಾರುತಿರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ ಪದವಿಧರರಾದ ಇವರು ಸಂಗೀತ ಶಿಕ್ಷಕರಾದ ರಾಜಕುಮಾರ ಮದಕಟ್ಟಿಯವರ ಧರ್ಮ ಪತ್ನಿಯಾಗಿದ್ದು ಕೆಲ ವರ್ಷ ಬಸವಕಲ್ಯಾಣದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ವ್ಯಾಜ್ಯಗಳ ಜಂಜಡದಲ್ಲಿಯೂ ಕೆಲ ಸಮಯ ಕವಿ ಸಮಯವಾಗಿ ಉಳಿತಾಯ ಮಾಡಿ ಕವಿತೆಗಳನ್ನು ಬರೆಯುವ ಗೀಳು ಬೆಳೆಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಉತ್ತಮ ವಾಗ್ಮಿಗಳು ಆಗಿದ್ದು ಹಲವು ಕಡೆಗಳಲ್ಲಿ ಸಾಹಿತ್ಯ ಮತ್ತು ಕಾನೂನು ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಬರಹಗಳು ಉತ್ತರ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನೆಯು ಮಾಡಿದ್ದಾರೆ.
ಪರಮೇಶ್ವರಯ್ಯ
`ನಿತ್ಯ ನಿರಂಜನ ಮೃತ್ಯುಂಜಯ’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಕವಿ ಸಾಹಿತಿಯೆಂದರೆ ಪರಮೇಶ್ವರಯ್ಯನವರು. ಇವರು ಭಾಲ್ಕಿ ತಾಲೂಕಿನ ಶರಣಯ್ಯ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೧೧-೧೯೭೭ ರಲ್ಲಿ ಜನಿಸಿದ್ದಾರೆ. ಇವರು ೧೯೯೯ರಿಂದ ಕವನ, ಲೇಖನ, ಹನಿಗವನ, ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಡಾ. ರವೀಂದ್ರ ಲಂಜವಾಡಕರ್
ದಾಸ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಹವ್ಯಾಸಿ ಬರಹಗಾರರೆಂದರೆ ಡಾ.ರವೀಂದ್ರ ಲಂಜವಾಡಕರ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ವಿಲಾಸರಾವ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅನುಭಾವ ಸಾಹಿತ್ಯ ಪ್ರಚಾರ ಮತ್ತು ದಾಸ ಸಾಹಿತ್ಯದ ಹೊಸ ಆಯಾಮಗಳ ಚಿಂತನೆ ಹಾಗೂ ದಾಸರ ಕ್ಷೇತ್ರ ದರ್ಶನಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಮೆರಿಕಾದ ಯುಗಾ ಯುನಿವರ್ಸಿಟಿಯ ಹುಬ್ಬಳ್ಳಿ ಶಾಖೆಯಲ್ಲಿ `ದಾಸ ಸಾಹಿತ್ಯದ ಮಹತ್ವ ಮತ್ತು ಪ್ರಸ್ತುತತೆ’ ಎಂಬ ವಿಷಯದ ಮೇಲೆ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. `ಕನಕದಾಸರ ಪ್ರತಿಮಾ ಲೋಕ’ ಎಂಬುದು ಇವರು ರಚಿಸಿದ ಕೃತಿಯಾಗಿದ್ದು ಅದು ಅಪ್ರಕಟಿತವಾಗಿದೆ. ಅಷ್ಟೇಯಲ್ಲದೆ ಕೆಲ ಅನುಭಾವ ಲೇಖನಗಳು ಇತರರು ಸಂಪಾದಿಸಿದ ಸ್ಮರಣ ಸಂಚಿಕೆ, ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಸಮಾಜ ಮುಖಿ ಕೀರ್ತನೆಗಳು’ ಎಂಬ ನಾಲ್ಕು ಸಂಪುಟಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿರುವ ಇವರು ಬೀದರದಿಂದ ಪ್ರಕಟವಾಗುತ್ತಿರುವ `ಸಾಹಿತ್ಯ ಸಿಂಚನ’ ತ್ರೈಮಾಸಿಕ ಪತ್ರಿಕೆಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜನಿವಾದ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸತ್ಕರಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಜೀವಕುಮಾರ ವೈ. ಕಂಟೆ
ಸೃಜನಶೀಲ ಯುವ ಬರಹಗಾರರೆಂದರೆ ಸಂಜೀವಕುಮಾರ ವೈ.ಕಂಟೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ವೈಜಿನಾಥ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೪-೪-೧೯೮೪ ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಸುಮಾರು ಐವತ್ತಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು ಅವು ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ ಇವರು ಇತ್ತೀಚೆಗೆ ಕನ್ನಡ ಚಲನ ಚಿತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ಇವರು ಬರೆದ ಚೊಚ್ಚಲ ಕೃತಿ `ನನ್ನ ಮುತ್ತುಗಳು ‘ ಕವನಸಂಕಲನ ಪ್ರಕಟಣೆಯ ಹಂತದಲ್ಲಿದೆ. ೨೦೦೪ರಲ್ಲಿ ಅಂದಿನ ತಾಲೂಕಾ ಕಸಾಪ ಅಧ್ಯಕ್ಷರು ಇವರನ್ನು ಖಟಕಚಿಂಚೋಳಿ ಹೊಬಳಿ ಕಸಾಪ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ನಿರುದ್ಯೋಗಿಯಾಗಿದ್ದ ಇವರು ಕಸಾಪ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಬೆರಳಿಗೆ ಅಪ್ಪ ತೊಡಿಸಿದ ಅರ್ಧತೊಲೆ ಚಿನ್ನದುಂಗುರ ಮಾರಿ ಕಾರ್ಯಕ್ರಮ ಮಾಡಿ ಕನ್ನಡಾಭಿಮಾನ ಮೆರದಿದ್ದಾರೆ. ಇವರ ಅವಧಿಯಲ್ಲಿ `ಶಾಲೆಗೊಂದು ಕನ್ನಡ ಕಾರ್ಯಕ್ರಮ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ಮಾಡಿದ್ದರಿಂದ ಇವರಗೆ ಕೆಲ ಕನ್ನಡಪರ ಸಂಘ-ಸAಸ್ಥೆಯವರು ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.ಮತ್ತು ಕ್ರಾಂತಿ ಗಣೇಶ ಯುವಕ ಸಂಘವು ಅತ್ಯುತ್ತಮ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.
ವಿನೋದ ಬ್ಯಾಲಹಳ್ಳಿ
ಹವ್ಯಾಸಿ ಬರಹಗಾರ ಹಾಗೂ ಫೋಟೋಗ್ರಾಫರ್ ಆಗಿ ಕನ್ನಡ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಯುವ ಕವಿಯೆಂದರೆ ವಿನೋದ ಬ್ಯಾಲಹಳ್ಳಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಗ್ರಾಮದ ನಾಗಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಐಟಿಐ ಮತ್ತು ಪಿ.ಜಿ.ಡಿ.ಸಿ.ಎ. ಅಧ್ಯಯನ ಮಾಡಿದ ಇವರು ವೃತ್ತಿಪರ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಹನಿಗವನ, ಆಧುನಿಕ ವಚನ ಮೊದಲಾದವು ರಚಿಸಿದ್ದಾರೆ. ಇವರ ಕವನ, ಲೇಖನ ಬರಹಗಳು ಕನ್ನಡದ ಕೆಲ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಪ್ರಾತಿನಿಧಿಕ ಕವನ, ಲೇಖನ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಹಲವಾರು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮತ್ತು ಹಲವಾರು ಕನ್ನಡಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಕೆಲವು ಸಲ ಸತ್ಕರಿಸಿ ಗೌರವಿಸಲಾಗಿದೆ.
ಮಂಜುನಾಥ ಬೆಳಕೆರೆ
ಹವ್ಯಾಸಿ ಬರಹಗಾರ ಮಂಜುನಾಥ ಬೆಳಕೆರೆಯವರು. ಬೀದರ ಜಿಲ್ಲೆ ಭಾಲ್ಕಿಯ ಪ್ರಭಾಕರ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೫-೫-೧೯೮೭ರಲ್ಲಿ ಜನಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿ ಅನೇಕ ಕತೆ, ಕವನ,ಲೇಖನ, ಹನಿಗವನ ಮತ್ತು ವಿಜ್ಞಾನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಹಲವಾರು ಕನ್ನಡಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಸತ್ಕರಿಸಿ ಗೌರವಿಸಲಾಗಿದೆ.
ಅಂಬಿಕಾ ಠಮಕೆ
ಯುವ ಕವಯತ್ರಿಯಾದ ಅಂಬಿಕಾ ಠಮಕೆಯವರು ಬೀದರ ಜಿಲ್ಲೆ ಭಾಲ್ಕಿಯ ಬಸವರಾಜ ಮತ್ತು ಸುನಂದಾ ದಂಪತಿಗಳಿಗೆ ದಿನಾಂಕ ೨೫-೩-೧೯೮೮ರಲ್ಲಿ ಜನಿಸಿದ್ದಾರೆ. ಪದವೀಧರರಾದ ಇವರು ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಸಂಗಮೇಶ ಜ್ಯಾಂತೆ
ಸಾಹಿತ್ಯ ಕ್ಷೇತ್ರದಲ್ಲಿ ಕವನ ಲೇಖನ ಚುಟುಕುಗಳನು ಬರೆದು ಉದಯೋನ್ಮುಖ ಬರಹಗಾರರಾಗಿ ಗುರುತಿಸಲ್ಪಡುವ ಯುವ ಸಾಹಿತಿಯೆಂದರೆ ಸಂಗಮೇಶ ಜ್ಯಾಂತೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪೂರ ಗ್ರಾಮದ ಬಾಬುರಾವ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೧೪-೧೧-೧೯೮೮ ರಲ್ಲಿ ಜನಿಸಿ ಒಃಂ ಪದವಿಧರರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಸಂಗಮೇಶ ಅವರು ನೂರಾರು ಕವನ ಲೇಖನಗಳನ್ನು ಬರೆದು ಚಿರಪರಿಚಿತರಾಗಿದ್ದಾರೆ . ಅಷ್ಟೇಯಲ್ಲದೆ ಇವರು ಒಂದು ಕವನ ಸಂಕಲನ ಕೂಡ ಮುದ್ರಿಸುವ ತವಕದಲ್ಲಿದ್ದಾರೆ. ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ , ಭಾಲ್ಕಿ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಆರೇಳು ಸಂಘಸAಸ್ಥೆಗಳಲ್ಲಿ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿ ಮೊದಲಾದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಕೆರಳದ ಕಾಸರಗೋಡಿನಿಂದ ‘ ಕಾಯಕ ರತ್ನ ಪ್ರಶಸ್ತಿ’ ಮತ್ತು ಹಾಸನದ ಕವಿ ಸಮ್ಮೇಳನದ ರಾಜ್ಯ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಸ್ವಯಂ ಬಿಜಿನೆಸ್ ವೃತ್ತಿಯಲ್ಲಿ ತೊಡಗಿದ್ದಾರೆ.
ಗೀತಾ ಪಾಟೀಲ್
ಹವ್ಯಾಸಿ ಬರಹಗಾರ್ತಿ ಗೀತಾ ಪಾಟೀಲ್ ರವರು ಭಾಲ್ಕಿಯ ರಾಮಲಿಂಗೇಶ್ವರ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೯೧ರಲ್ಲಿ ಜನಿಸಿದ್ದಾರೆ. ಇವರು ಹಲವಾರು ಕವನ ಲೇಖನಗಳು ಬರೆದಿದ್ದು ಅವು ಕೆಲಪತ್ರಿಕೆ ಹಾಗೂ ವಿವಿಧ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಚಂದ್ರಮ್ಮಾ ಬಬಚೌಡಿ
ತತ್ವಪದ, ಜಾನಪದ, ಮೊಹರಮ್ ಪದಗಳನ್ನು ಬರೆದ ಹಿರಿಯ ಕವಯತ್ರಿ ಚಂದ್ರಮ್ಮಾ ಬಬಚೌಡಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರುದನೂರು ಗ್ರಾಮದ ತುಳಜಪ್ಪಾ ಮತ್ತು ಶಿವಮ್ಮ ದಂಪತಿಗಳ ಜೇಷ್ಠ ಪುತ್ರಿಯಾಗಿ ಜನಿಸಿದರು. ಇವರು ಬೀದರ ತಾಲೂಕಿನ ಬಬಚೌಡಿಯ ಸಂಬಣ್ಣ ತಂದೆ ತಿಪ್ಪಣ್ಣ ರವರ ಧರ್ಮ ಪತ್ನಿಯಾಗಿದ್ದು. ಇವರ ಮಾವ ತಿಪ್ಪಣ್ಣ ಚಿಡಗುಪ್ಪಿ ತಿಪರಂತಿ ಮಾಸ್ತರ ರವರ ಶಿಷ್ಯರಾಗಿದ್ದರು. ಅವರಿಂದ ಅನೇಕ ಹಾಡುಗಳನ್ನು ಕಲಿತು ಸ್ವತಃ ಹಾಡು,ಪದ್ಯ,ಭಜನೆ ಪದಗಳನ್ನು ಬರೆದಿದ್ದಾರೆ. ಇವರ ಕಲೆ ಸಾಹಿತ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಜ್ಞಾನ ಸಮಿತಿ, ಹಾಗೂ ಸಾಕ್ಷರತಾ ಸಮಿತಿಯವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಮೈಲಾರ (ಖಾನಾಪುರ) ದಲ್ಲಿ ವಾಸವಾಗಿದ್ದಾರೆ.
ಕೆ.ಎಸ್.ಕರಂಜೆ
ಹವ್ಯಾಸಿ ಬರಹಗಾರರಾದ ಇವರು ಅಧ್ಯಾತ್ಮಿಕದಲ್ಲಿ ಅಪಾರ ಆಸಕ್ತರಾಗಿ ಸಾಹಿತ್ಯ ರಚಿಸುತ್ತಿರುವ ಇವರ ಮೂಲ ನಾಮ ಕಾಶಿನಾಥ ಕರಂಜೆಯಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದವರಾಗಿದ್ದು `ಗುಪ್ತಲಿಂಗ’ ಎಂಬ ಅಂಕಿತನಾಮದಲ್ಲಿ ಹಲವಾರು ವಚನಗಳು ಬರೆದು ಕೆಲವು ಕಡೆ ಪ್ರಕಟಿಸಿದ್ದಾರೆ.
ದಿ.ರುದ್ರಪ್ಪ ಕುರನೆ
ಕವಿ,ಕಲಾವಿದ, ನಾಟಕಕಾರರಾದ ದಿ. ರುದ್ರಪ್ಪ ಕುರನೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಸಂಬಣ್ಣ ಮತ್ತು ಸಮವ್ವ ದಂಪತಿಗಳಿಗೆ ಜನಿಸಿದ್ದಾರೆ. ಇವರ ಜನ್ಮ ದಿನಾಂಕ, ವಿದ್ಯಾರ್ಹತೆ ತಿಳಿದು ಬಂದಿಲ್ಲ. ಆದರೆ ಇವರು ಸಾಹಿತಿ ತಿಪರಂತಿ ಮಾಸ್ತರ ಅವರ ವಿದ್ಯಾರ್ಥಿಯಾಗಿದ್ದು, ಮತ್ತು ಅಣದೂರಿನ ಮೊನಪ್ಪ ಮಾಸ್ತರ ಅವರ ಸಹಪಾಠಿ ಸ್ನೇಹಿತರಾಗಿದ್ದರೆಂದು ತಿಳಿದು ಬರುತ್ತದೆ. ಕವಿ ಸಾಹಿತಿಯಾಗಿ ಗುರ್ತಿಸಿಕೊಂಡ ಇವರು ಮಹಾಭಾರತ, ಪಾಂಡವ ಪ್ತತಾಪ, ರಾಮಾಯಣ’ ಎಂಬ ನಾಟಕಗಳು ಹಾಗೂ ಮೊಹರಮ್ ಪದ,ಭಕ್ತಿ ಗೀತೆ, ಭಜನೆ ಪದಗಳು ಬರೆದಿದ್ದಾರೆ.
ವೀರಶೆಟ್ಟಿ ಶಹಾಪುರೆ
`ವಿಶ್ವಗುರು ಸಂಗನ ಬಸವ’ ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದವರು. ಇವರು ಹವ್ಯಾಸಿ ಬರಹಗಾರರಾಗಿ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.
ಗೀತಾ ಎಸ್.ಪಾಟೀಲ್
ಹವ್ಯಾಸಿ ಬರಹಗಾರ್ತಿಯಾದ ಗೀತಾ ಎಸ್.ಪಾಟೀಲ್ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ನೀಲಮನಳ್ಳಿಯವರು .ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಕತೆ ಕವನ ಲೇಖನ ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.
ಬೀದರ ತಾಲೂಕಿನ ಹವ್ಯಾಸಿ ಬರಹಗಾರರು
ದಿ.ಮೋನಪ್ಪ ಮಾಸ್ತರ
ಕವಿ, ಸಾಹಿತಿ ಲೇಖಕರಾಗಿ, ನಾಟಕ ರಚನೆ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಿರಿಯ ಸಾಹಿತಿ ದಿ. ಮೊನಪ್ಪ ಮಾಸ್ತರ ಇವರು ಸಾಹಿತಿ ದಿ. ಈಶ್ವರ ಕರುಣಾ ಸಾಗರ ಅವರ ತಂದೆಯಾಗಿದ್ದು, ಬೀದರ ತಾಲೂಕಿನ ಅಣದೂರು ಗ್ರಾಮದ ಶ್ರೀ ಸಾಯಬಣ್ಣಾ ಮತ್ತು ಶಿವಮ್ಮ ದಂಪತಿಗಳಿಗೆ ೧೯೨೦ರಲ್ಲಿ ಜನಿಸಿದ್ದಾರೆ. ಸಾಹಿತ್ಯ ನಾಟಕ ನಿದರ್ಶನದಲ್ಲಿ ಆಸಕ್ತರಾದ ಇವರು `ಬಾಣಾಸೂರ, ಶ್ರಾವಣಕುಮಾರ, ಶ್ರೀ ಕೃಷ್ಣ ಬಾಲ ಲೀಲೆ’ ಎಂಬ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದರು ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಹಲವಾರು ಕಡೆ ನಾಟಕಗಳು ರಚಿಸಿ ಪ್ರದರ್ಶಿಸಿದ್ದಾರೆ. ಮತ್ತು ದಿನಾಂಕ ೨೧-೧೦-೧೯೯೧ರಲ್ಲಿ ನಿಧನರಾಗಿದ್ದು. ಇವರ ಸಮಾಧಿ ಅಣದೂರಿನಲ್ಲಿದೆ.
ದಿ.ಸಂಬಣ್ಣ ಅಣದೂರು
ಹವ್ಯಾಸಿ ಬರಹಗಾರರಾಗಿ ಅನೇಕ ಪದ್ಯ ಹಾಡುಗಳನ್ನು ಬರೆದ ಕವಿಯೆಂದರೆ ದಿ.ಸಂಬಣ್ಣ ಅಣದೂರು. ಇವರು ಬೀದರ ತಾಲೂಕಿನ ಅಣದೂರು ಗ್ರಾಮದ ತಿಪ್ಪಣ್ಣ ಮತ್ತು ಗೌರಮ್ಮ ದಂಪತಿಗಳಿಗೆ ೧೯೩೦ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆದ ಇವರು ಗ್ರಾಮದ ಜಹೂರಶಹ ಕವಿಯ ಪ್ರಭಾವಕ್ಕೆ ಒಳಗಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿ ಸವಾಲ್ -ಜವಾಬ ಹಾಡು, ತತ್ವಪದ, ಭಜನೆ,ಮೊದಲಾದವು ರಚಿಸಿದ್ದಾರೆ. ಇವರಿಗೆ ನಾನಾ ಕಡೆಯಿಂದ ಬಹುಮಾನ ಸನ್ಮಾನ ಕೂಡ ಲಭಿಸಿವೆ. ಇವರು ೧೯೮೫ರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಗುಂಡಪ್ಪ ಬೆಳ್ಳೂರು
ತತ್ವಪದಕಾರ, ಗಾಯಕ, ಹಾಗೂ ಕವಿಗಳಾದ ಗುಂಡಪ್ಪ ಬೆಳ್ಳೂರು. ಇವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಕಲ್ಲಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ೧೯೩೦ರಲ್ಲಿ ಜನಿಸಿದ್ದಾರೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಇವರು ಹಳ್ಳಿಯಲ್ಲಿ ಕೆಲಸವಿಲ್ಲದೆ ಬದುಕು ದುಸ್ಥರವಾದಾಗ ಬೇರೆ ಊರಿನಿಂದ ಬೀದರಗೆ ವಲಸೆ ಬಂದು ಹಾರೂರಗೇರಿಯಲ್ಲಿ ನೆಲೆಸಿದ್ದಾರೆ. ಇವರು ತಿಪರಂತಿ ಮಾಸ್ತರರ ಶಿಷ್ಯರಾಗಿದ್ದು ಅನೇಕ ಹಾಡು, ಪದ್ಯ, ಅಧ್ಯಾತ್ಮಿಕ ಅನುಭಾವ ಗೀತೆಗಳನ್ನು ರಚಿಸಿದ್ದಾರೆ.
ಮಾಣಿಕರಾವ ಜ್ಯೋತಿ
`ಭೀಮಕವಿ’ ಎಂದೇ ಖ್ಯಾತರಾದ ಕವಿ, ತತ್ವ ಪದಕಾರ ಹಾಗೂ ಚಿಂತಕರೆAದರೆ ಮಾಣಿಕರಾವ ಜ್ಯೋತಿ. ಇವರು ಬೀದರ ತಾಲೂಕಿನ ಖಾಸೆಂಪೂರ ಗ್ರಾಮದ ನರಸಪ್ಪ ಮತ್ತು ಹಣಮವ್ವ ದಂಪತಿಗಳಿಗೆ ೧೯೩೩ರಲ್ಲಿ ಜನಿಸಿದ್ದಾರೆ. ಮತ್ತು ಕೆಲಕಾಲ ಹೈದರಾಬಾದ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಸರ್ಕಾರಿ ವಸತಿ ಗೃಹ ಇಲಾಖೆಯಲ್ಲಿ ಮತ್ತು ಬೀದರ ಏರ್ ಫೋರ್ಸ್ ನಲ್ಲಿ ಸೇವಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು ಬೀದರ ಹತ್ತಿರದ ಪಾತರಪಳ್ಳಿಯಲ್ಲಿ ಬಹುಕಾಲ ಜೀವನ ಕಳೆದಿದ್ದು ದಿ. ಪಂಚಶೀಲ ಗವಾಯಿ ಕಾಶಿನಾಥ ಅವರೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮ ದೀಕ್ಷೆ ಪಡೆದು ಹಿಂದೂ ದೇವತೆಗಳ ಆರಾಧನೆ ಗೀತೆಗಳನ್ನು ಕೈ ಬಿಟ್ಟು ಸ್ವತಃ ಬುದ್ದ ಬಸವ ಅಂಬೇಡ್ಕರ್ ಕುರಿತಾದ ಗೀತೆಗಳು ರಚನೆ ಮಾಡಿ ಹಾಡುವ ಕಲಾವಿದರಾಗಿದ್ದರು. ಮೊದಲು ತತ್ವಪದಗಳು ಬರೆದಿದ್ದ ಇವರು ನಂತರದಲ್ಲಿ ಅಂಬೇಡ್ಕರ್ ಬುದ್ದ ಬಸವಣ್ಣನವರ ಬಗ್ಗೆ ಬರೆದ ಹಾಡುಗಳು ಬೀದರ ಕಲಬುರಗಿ ಯಾದಗಿರಿ ಜಿಲ್ಲೆಯಾದ್ಯಂತ ಅವು ಭಜನೆ ಪದಗಳಾಗಿ ತುಂಬ ಜನಪ್ರಿಯವಾಗಿವೆ. ಮತ್ತು ಇವರು ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹೆಚ್ಚು ಸಾಹಿತ್ಯ ರಚನೆ ಮಾಡಿದ್ದರಿಂದ ಇವರಿಗೆ `ಭೀಮ ಕವಿ’ ಎಂದು ಜನರೆ ನೀಡಿದ ಬಿರುದಾಗಿದೆ. ಹಾಗಾಗಿ ಇವರ ಕುರಿತು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಅವರು `ಭೀಮ ಕವಿ ಮಾಣಿಕರಾವ ಜ್ಯೋತಿ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇವರ ತತ್ವಪದ, ಅಂಬೇಡ್ಕರ್, ಬುದ್ಧ, ಬಸವರ ಬಗ್ಗೆ ಬರೆದ ಹಾಡುಗಳು ಅಲ್ಲಲ್ಲಿ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಕಲ್ಲಪ ಬಲಂಡೆ
ತತ್ವಪದ, ಮತ್ತು ಜಾನಪದ ಸವಾಲ್- ಜವಾಬ್ ಹಾಡುಗಳು ಬರೆದ ಕವಿ ಕಲ್ಲಪ್ಪ ಬಲಂಡೆಯವರು. ಬೀದರ ತಾಲೂಕಿನ ಮಿರ್ಜಾಪೂರ ಗ್ರಾಮದ ಶಿವಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಮಾತ್ರ ಅಧ್ಯಯನ ಮಾಡಿದ ಇವರು ಅಲ್ಪ ಸ್ವಲ್ಪ ಹಿಂದಿ ಬರವಣಿಗೆ ಕಲಿತು ಮಾಟ ಮಂತ್ರ ಪೀಡಿತರಿಗೆ ಗುಣಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಿಕ ಸೇವೆ ಮಾಡುತ್ತಿದ್ದರು. ಸಾಹಿತ್ಯದಲ್ಲಿ ಆಸಕ್ತರಾಗಿ ಹಲವು ತತ್ವಪದ, ಭಜನೆ ಹಾಡುಗಳು ಬರೆದು ಗಾಯನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸಾಹಿತ್ಯ ರಚನೆಯಿಂದ ಇವರಿಗೆ ಹಲವಾರು ಬಹುಮಾನಗಳು ಲಭಿಸಿವೆ.
ಪ್ರೊ. ದೇವೇಂದ್ರ ಕಮಲ
ಹವ್ಯಾಸಿ ಬರಹಗಾರರಾದ ಪ್ರೊ. ದೇವೇಂದ್ರ ಕಮಲ. ಇವರು ಬೀದರ ರಾಂಪುರೆ ನಗರದ ವಿಠಲರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೧೭-೫-೧೯೩೫ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕವನ ಲೇಖನ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ದಿ.ಸಿದ್ರಾಮಪ್ಪ ಹೊಸಮನಿ
ಮೊಹರಮ್ ಮತ್ತು ತತ್ವಪದಗಳನ್ನು ಬರೆದ ಸಿದ್ರಾಮಪ್ಪ ಹೊಸಮನಿಯವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಜ್ಯೋತೆಮ್ಮ ದಂಪತಿಗಳಿಗೆ ೧೯೩೭ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಹಾಡುವುದನ್ನು ರೂಢಿಸಿಕೊಂಡ ಇವರು ತಿಪರಂತಿ ಮಾಸ್ತರರಿಂದ ಹಾಡು ಕಲಿತು ಸ್ವತಃ ಬರೆದು ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ತತ್ವಪದ, ಭಜನೆ, ಮೊಹರಮ್ ಪದಗಳನ್ನು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿದ್ದು ಅಷ್ಟೇಯಲ್ಲದೆ ಇವರ ಹಾಡುಗಳು ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ಹಾಡುತ್ತಾರೆ. ಇವರ ಮಗ ಈಶ್ವರ ಹೊಸಮನಿ ಕೂಡ ಉತ್ತಮ ಕವಿ ಗಾಯಕರಾಗಿದ್ದಾರೆ. ಇವರು ೧೯೭೬ರಲ್ಲಿ ನಿಧನರಾಗಿದ್ದಾರೆ.
ದಿ.ಸಂಬಣ್ಣ ಬಬಚೌಡಿ
ತತ್ವಪದ ಮೊಹರಮ್ ಪದಗಳನ್ನು ಬರೆದ ಇವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿಗಳಿಗೆ ೧೯೩೮ರಲ್ಲಿ ಜನಿಸಿದ್ದಾರೆ. ತಿಪರಂತಿ ಮಾಸ್ತರ ಅವರ ಶಿಷ್ಯರಾದ ಇವರು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವು ಕೆಲವು ಕಡೆ ಪ್ರಕಟ ಕೂಡ ಆಗಿವೆ. ಇವರು ೧೯೮೬ರಲ್ಲಿ ನಿಧನರಾಗಿದ್ದಾರೆ.
ತಿಪ್ಪಣ್ಣ ಜ್ಯೋತಿ
ಬಂಡಾಯ ಕವಿಯಾಗಿ ಧಮ್ಮ ಗೀತೆಗಳನ್ನು ರಚನೆ ಮಾಡಿದ ಕವಿಯೆಂದರೆ ತಿಪ್ಪಣ್ಣ ಜ್ಯೋತಿಯವರು. ಇವರು ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಸಂಬಣ್ಣ ಮತ್ತು ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧೫-೮-೧೯೪೭ರಂದು ನಮ್ಮ ದೇಶಕ್ಕೆ ಸ್ವತಂತ್ರ ಬಂದ ದಿನವೇ ಜನಿಸಿದ್ದಾರೆ. ದಲಿತ ಕವಿ ದಿ. ಪಂಚಶೀಲ ಗವಾಯಿಗಳ ಪ್ರಭಾವದಿಂದಾಗಿ ಬುದ್ದ, ಬಾಬಾ ಸಾಹೇಬ ಅಂಬೇಡ್ಕರ್ ರವರ ತತ್ವಕ್ಕೆ ಮಾರು ಹೋಗಿ ಮೂಢ ನಂಬಿಕೆಗಳ ವಿರುದ್ಧ ಬಂಡೆದ್ದು ಕ್ರಾಂತಿಕಾರಿ ಸಾಹಿತ್ಯ ರಚಿಸಿದ್ದಾರೆ. ಅವರಿಗೆ `ಬೌದ್ಧಾಚಾರ್ಯ’ ಎಂಬ ಬಿರುದು ನೀಡಲಾಗಿದೆ.
ದೇವೇಂದ್ರ ನವಲಸ್ ಪೂರ್
ತತ್ವಪದ, ಭಜನೆ ಪದಗಳನ್ನು ಬರೆದ ಕವಿ ದೇವೇಂದ್ರ ನವಲಸ್ ಪೂರ ಇವರು ಬೀದರ ತಾಲೂಕಿನ ನವಲಸ್ ಪೂರ ಗ್ರಾಮದ ಶರಣಪ್ಪ ರತ್ನಮ್ಮ ದಂಪತಿಗಳಿಗೆ ೧೯೫೦ರಲ್ಲಿ ಜನಿಸಿದ್ದಾರೆ. ಮೊಹರಮ್ ತತ್ವಪದ ಭಜನೆ ಹಾಡುಗಳನ್ನು ಬರೆದು ಸ್ವತಃ ಕವಿ ಗಾಯಕರಾಗಿದ್ದು ಇವರ ಗಾಯನ ಕಲೆಗೆ ಸಾಕಷ್ಟು ಕಡೆಗಳಿಂದ ಬಹುಮಾನವು ಬಂದಿರುತ್ತವೆ.
ಮಾರುತಿ ಬಬಚೌಡಿ
ಕವಿ, ತತ್ವಪದಕಾರ ಮಾರುತಿ ಬಬಚೌಡಿಯವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ಬಸಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೬-೪-೧೯೫೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿರುವ ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಪಿ.ಕೆ.ಪಿ.ಎಸ್.ಸೋಸಾಯಿಟಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಹಾಡುವ ಕಲೆಯನ್ನು ಕರಗತ ಮಾಡಿಕೊಂಡ ಇವರು ತಮ್ಮ ಗಾಯನದೊಂದಿಗೆ ಅನೇಕ ಮೋಹರಮ್ ಪದ ತತ್ವ ಪದಗಳನ್ನು ರಚನೆ ಮಾಡಿದ್ದಾರೆ. ಅವು ಕೆಲವು ಕಡೆ ಪ್ರಕಟವಾಗಿವೆ.
ಡೇವಿಡ್
ಹವ್ಯಾಸಿ ಬರಹಗಾರರಾದ ಡೇವಿಡ್ ರವರು ಬೀದರ ಮಂಗಲ ಪೇಟೆಯ ತಿಮೋಥಿ ಮತ್ತು ಸಮಧಾನಮ್ಮ ದಂಪತಿಗಳಿಗೆ ದಿನಾಂಕ ೧೬-೪-೧೯೫೬ ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವೀಧರರಾದ ಇವರು ಮೆಥೋಡಿಸ್ಟ್ ಬಾಲಕಯರ ವಸತಿ ಗೃಹದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಅನೇಕ ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ.
ಡಾ.ಸಿ.ಆನಂದರಾವ
ಹವ್ಯಾಸಿ ಬರಹಗಾರರಾದ ಡಾ.ಸಿ.ಆನಂದರಾವ ಇವರು ಬೀದರದ ಮಲ್ಲಪ್ಪ ಮತ್ತು ಈಶ್ವರಮ್ಮ ದಂಪತಿಗಳಿಗೆ ದಿನಾಂಕ ೧೦-೨- ೧೯೫೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಬಿ.ಎಸ್. ಡಿ.ಸಿ.ಎಚ್. ಪದವೀಧರರಾದ ಇವರು ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು ಅನೇಕ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಅರ್ಜುನರಾವ ಹಾವೆ
ಕವಿ ಸಾಹಿತಿ ಹಾಗೂ ಶಿಕ್ಷಕರಾದ ಅರ್ಜುನರಾವ ಹಾವೆಯವರು ಬೀದರದ ಹಾರೂರಗೇರಿಯ ಹಣಮಂತಪ್ಪಾ ಮತ್ತು ನರಸಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೨ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ.ಪದವೀಧರರಾದ ಇವರು ಸರ್ಕಾರಿ ಅನುದಾನಿತ ಶಾರದಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲ ಪ್ರಾತಿನಿಧಿಕ ಸಂಕಲನ ಮತ್ತು ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಉತ್ತಮ ಹಾರ್ಮೋನಿಯಂ ತಬಲ ವಾದಕರಾಗಿದ್ದಾರೆ.
ಶಿವರಾಜ ಬೋಧಿಸತ್ವ
ಕವಿ ಕಲಾವಿದರಾದ ಶಿವರಾಜ ಬೋಧಿಸತ್ವರವರು ಬೀದರ ತಾಲೂಕಿನ ನಿಡವಂಚಾ ಗ್ರಾಮದ ಪುಂಡಲೀಕಪ್ಪಾ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ.ಅನೇಕ ಕವನ ಲೇಖನಗಳು ಬರೆದಿರುವ ಇವರು ಮಹಾತ್ಮ ಜ್ಯೋತಿಬಾ ಪುಲೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಬಕ್ಕಪ್ಪ ದಂಡಿನ
ಹವ್ಯಾಸಿ ಬರಹಗಾರ ಬಕ್ಕಪ್ಪ ದಂಡಿನ.ಇವರು ಬೀದರ ತಾಲೂಕಿನ ಮಾಳೆಗಾಂವ ಗ್ರಾಮದ ಹಣಮಂತಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೬-೬-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಅನೇಕ ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ. ಇವರು ಬೀದರ ಜಿಲ್ಲಾ ಪಿ.ಯು.ಕೆ ಸಂಚಾಲಕರಾಗಿ, ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ, ಮಾಳೆಗಾಂವ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಮೇಶ ವಾಘಮಾರೆ
ಹವ್ಯಾಸಿ ಬರಹಗಾರ ರಮೇಶ ವಾಘಮಾರೆಯವರು ಬೀದರ ತಾಲೂಕಿನ ಇಸ್ಲಾಂಪೂರ ಗ್ರಾಮದ ಹುಲ್ಲೆಪ್ಪ ಮತ್ತು ಶ್ರೀಮತಿ ಹುಲ್ಲೆಪ್ಪರವರ ಉದರದಲ್ಲಿ ದಿನಾಂಕ ೨೧-೧೧-೧೯೬೭ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಎಂ.ಎ.ಎA. ಇಡಿ.ಎಲ್.ಎಲ್.ಬಿ. ಪದವೀಧರರಾದ ಇವರು ಜಿಲ್ಲಾ ನ್ಯಾಯಾಲಯ ಬೀದರನಲ್ಲಿ ನ್ಯಾಯವಾದಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು `ನಾವು ಕನ್ನಡಿಗರು, ನಾವು ನಮ್ಮವರು, ನಾವೆಲ್ಲರೂ ಒಂದೇ, ನಾವು ನೊಂದವರು, ಹಿತನುಡಿಗಳು’ ಎಂಬ ೫ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ.
ರಮೇಶ ಬಾಬು
ಹವ್ಯಾಸಿ ಬರಹಗಾರರಾದ ರಮೇಶ ಬಾಬು ರವರು ಬೀದರ ತಾಲೂಕಿನ ಅಮಲಾಪೂರ ಗ್ರಾಮದ ಶಿವಪ್ಪ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ.ಪದವೀಧರರಾದ ಇವರು ಸಮಾಜ ಸೇವಕರಾಗಿ ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಕವನ, ಲೇಖನ, ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ.
ನಾಗಶೆಟ್ಟಿ ಧರಮಪೂರ
ಸಾಹಿತಿ ಹಾಗೂ ಪತ್ರಕರ್ತರಾದ ನಾಗಶೆಟ್ಟಿ ಧರಮಪೂರ. ಇವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೆಟ್ಟಿ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨೩-೫-೧೯೬೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಇಂಟ್ರನಶಿಪ್ ಹಾಗೂ ಬಿ.ಎ ಪದವೀಧರರಾದ ಇವರು ಕ್ರಾಂತಿ ಭೂಮಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೀರ ಬಡಕುಟುಂಬದಲ್ಲಿ ಜನಿಸಿದ ಇವರು ಪಿ.ಯು.ವಿದ್ಯಾರ್ಥಿಯಾಗಿರುವಾಗಲೇ ಸುಭಾಶ ಗಾದಗಿಯವರ ಯುವ ಗರ್ಜನೆ ಮತ್ತು ಕಲಬುರ್ಗಿಯ ಗ್ರೀನೋಬಲ್ಸ ಪತ್ರಿಕೆಗಳನ್ನು ಮನೆ ಮನೆಗೂ ವಿತರಿಸಿ ಪತ್ರಿಕಾ ಲೋಕ ಪ್ರವೇಶ ಮಾಡಿದರು. ನಂತರ ಯುವ ಗರ್ಜನೆ, ನವನಾಡು , ಕನ್ನಡಮ್ಮ, ಗ್ರೀನೋಬಲ್ಸ್, ಜನದನಿ,ಉತ್ತರ ಕರ್ನಾಟಕ, ಬಸವ ದನಿ,ವಿಶ್ವಾಸಿಗ, ಈ ಸೂರ್ಯಸ್ಥ, ಕ್ರಾಂತಿ ಕಲ್ಯಾಣ, ಪ್ರಜಾ ಚಳುವಳಿ, ಮೊದಲಾದ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುವುದರೊಂದಿಗೆ ಕ್ರಾಂತಿ ಭೂಮಿ ಪತ್ರಿಕೆಯ ಸಂಪಾದಕರಾಗಿ, ಅನೇಕ ಲೇಖನ, ಬರಹಗಳು ಬರೆದು ಲೇಖಕರಾಗಿ ಹೊರ ಹೊಮ್ಮಿದ್ದಾರೆ. ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಬೀದರನಲ್ಲಿ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ ನಿರಂತರವಾಗಿ ತಿಂಗಳಿಗೊAದು ಸಾಹಿತ್ಯಿಕ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ೧೪ ವರ್ಷಗಳಿಂದ ಬೀದರ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿಯಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಾಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಜಿಲ್ಲಾ ಬರಹಗಾರ ಹಾಗೂ ಕಲಾವಿದ ಬಳಗದ ಕರ್ನಾಟಕ ಗಡಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಮಾತೆ ಮಾಣಿಕೇಶ್ವರಿಯ ಸಾಮಾಜಿಕ, ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರಿಗೆ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ನಿರ್ಹಂಕಾರ ಬಂಡಿ
ಹವ್ಯಾಸಿ ಉದಯೋನ್ಮುಖ ಬರಹಗಾರ ನಿರ್ಹಂಕಾರ ಬಂಡಿಯವರು. ಬೀದರದ ಶ್ರೀ ವೀರಣ್ಣ ಮತ್ತು ಶ್ರೀಮತಿ ಇಂದುಮತಿ ದಂಪತಿಗಳಿಗೆ ದಿನಾಂಕ ೧೭-೫-೧೯೭೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದ ಇವರು ಹಾವೇರಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಜನಪದ ವೈದ್ಯ ಮತ್ತು ಔದ್ಯೋಗಿಕ ತರಬೇತಿ ಪಡೆದು ಸ್ವಯಂ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತಿ ದಿ. ಇಂದುಮತಿ ಬಂಡಿಯವರ ಪುತ್ರರಾದ ಇವರು ತಮ್ಮ ತಾಯಿಯ ಸಾಹಿತ್ಯದ ಪ್ರೇರಣೆಯಿಂದ ಕತೆ ,ಕವನ ,ಲೇಖನಗಳು ಬರೆದಿದ್ದಾರೆ. ಇವರ ಬರಹಗಳು ಪಬ್ಲಿಕ್, ಉತ್ತರ ಕರ್ನಾಟಕ, ಕಲ್ಯಾಣ ಕಿರಣ, ಪ್ರಪಂಚ ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಇವರು ಬೀದರದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಧರಿನಾಡು ಕೇಂದ್ರ ಕನ್ನಡ ಸಂಘದ ಖಜಾಂಚಿಯಾಗಿ, ಕಲ್ಯಾಣ ಕರ್ನಾಟಕ ವಿಭಾಗದ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕೆಲ ಯೂಟ್ಯೂಬ್‌ನ ಕಿರು ಚಿತ್ರಗಳಲ್ಲಿಯೂ ನಟಿಸಿದ ಇವರಿಗೆ ಯಾದಗಿರಿಯ ಕಲಾನಿಕೇತನ ಟ್ರಸ್ಟ್ ವತಿಯಿಂದ `ಬವಸ ಕಾಯಕ ರತ್ನ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ರತ್ನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ವಿಜಯಕುಮಾರ ಕನ್ನಾಡೆ
`ಲಾಂಚನ ಪ್ರಿಯ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ಹವ್ಯಾಸಿ ಬರಹಗಾರರೆಂದರೆ ವಿಜಯಕುಮಾರ ಕನ್ನಾಡೆ. ಇವರು ಬೀದರದ ಮಾಣಿಕಪ್ಪಾ ಮತ್ತು ಗಂಗಮ್ಮಾ ದಂಪತಿಗಳಿಗೆ ದಿಇ ೧-೬-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ವಿದ್ಯುನ್ಮಾನ ಉಪಕರಣಗಳ ದುರಸ್ತಿ ಕಾರ್ಯದ ತೊಡಗಿ ಕವನ ಲೇಖನ ಬರಹಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಡಾ.ಬಂಡಯ್ಯ ಸ್ವಾಮಿ
ಹವ್ಯಾಸಿ ಬರಹಗಾರರಾದ ಡಾ.ಬಂಡಯ್ಯ ಸ್ವಾಮಿಯವರು ಬೀದರ ನಾವದಗೇರಿಯ ಆಡಯ್ಯ ಸ್ವಾಮಿ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೫-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವೀಧರರಾದ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕವನ ಲೇಖನ ಮೊದಲಾದ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ವಿಠಲ (ವಿಕಿ)
`ವಿಕಿ’ ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ವಿಠಲ ರವರು ಬೀದರದ ಕಿಶನರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨೩-೭-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ ಲೇಖನ ಹನಿಗವನಗಳು ಬರೆಯುತ್ತಿರುವ ಇವರ ಬರಹಗಳು ಅನೇಕ ಪತ್ರಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ರೂಪಾ ಪಾಟೀಲ್
ಕವಯತ್ರಿರಲ್ಲಿ ಮತ್ತೊಂದು ಎದ್ದು ತೊರುವ ಖ್ಯಾತ ಹೆಸರೆಂದರೆ ರೂಪಾ ಪಾಟೀಲ್ ಇವರ ಪೂರ್ಣ ಹೆಸರು ಸ್ವರೂಪರಾಣಿ ಪಾಟೀಲ್ ಎಂದಾಗಿದೆ. ಇವರು ಕಲಬುರಗಿ ಜಿಲ್ಲೆಯ ಮಹಾಗಾಂವ ಗ್ರಾಮದ ಡಾ.ಎಸ್.ಆರ್ ಕೊಂಡೆಡ್ ಮತ್ತು ರೇಣುಕಾ ದಂಪತಿಗಳಿಗೆ ದಿನಾಂಕ ೨-೩-೧೯೭೬ ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಲ್.ಎಲ್.ಬಿ. ಪದವಿಧರರಾದ ಇವರು ಬೀದರಿನ ಡಾ.ಜಗದೀಶ್ ಪಾಟೀಲ್ ಮರೂರ ಅವರ ಧರ್ಮ ಪತ್ನಿಯಾಗಿದ್ದಾರೆ. ಗೃಹಿಣಿಯಾಗಿದ್ದುಕೊಂಡೆ ಸಾಹಿತ್ಯ ಸಂಗೀತ,ಯೋಗ,ಮತ್ತು ಕಾರ್ಯಕ್ರಮದ ನಿರೂಪಕರಾಗಿ ಗುರ್ತಿಸಿಕೊಂಡಿರುವ ಇವರ ಕವನ, ಚುಟುಕು, ಲೇಖನ, ನುಡಿಗಟ್ಟುಗಳು ಬರೆದಿದ್ದಾರೆ. ಮತ್ತು `ಆಹಾರ ಮತ್ತು ಆರೋಗ್ಯ’ ಎಂಬ ಪುಸ್ತಕ ಪ್ರಕಟಿಸುತ್ತಿದ್ದಾರೆ .
ಇವರು ಸಾಹಿತ್ಯದೊಂದಿಗೆ ಉತ್ತಮ ಗಾಯಕರು, ನೃತ್ಯಗಾರ್ತಿ, ಯೋಗ ಪಟು, ನೀರೂಪಕರು ಆಗಿದ್ದರಿಂದ ಇವರಿಗೆ `ನಿರೂಪಣಾ ರತ್ನ’ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ಇವರು ರೋಟರಿ ಕ್ಲಬ್ ಸದಸ್ಯರಾಗಿ, ಬೀದರ ಸಿರಿಗನ್ನಡ ವೇದಿಕೆ ಮತ್ತು ವೀರಶೈವ ಲಿಂಗಾಯಿತ ಮಹಿಳಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಬರಹಗಳು ಪ್ರಮುಖ ಪತ್ರಿಕೆ ಹಾಗೂ ವಿವಿಧ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಅಷ್ಟೇಯಲ್ಲದೆ ಬೀದರನಲ್ಲಿ ನಡೆದ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕಾರ್ಯಕ್ರಮ ದಲ್ಲಿ ಬಹುಮುಖ ಪ್ರತಿಭೆಯ ಮಹಿಳೆಯಾಗಿ ನೃತ್ಯ, ಸಂಗೀತ, ಯೋಗ ಸಾಧನೆಯೊಂದಿಗೆ ಪಾಲ್ಗೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.
ಬುದ್ಧದೇವಿ ಸಂಗಮ್ಮ
ಉದಯೋನ್ಮುಖ ಬರಹಗಾರರಾಗಿ ಕವನ ಲೇಖನಗಳನ್ನು ಬರೆಯುತ್ತಿರುವ ಕವಯತ್ರಿಯೆಂದರೆ ಬುದ್ಧದೇವಿ ಸಂಗಮ್ಮ. ಇವರು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಶಂಕರರಾವ ಮೆಲ್ಲದೊಡ್ಡಿ ಮತ್ತು ಘಾಳೆಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಸದ್ಯ ಜನವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಬಹುದಿನಗಳ ನಂತರ ಬರವಣಿಗೆಯನ್ನು ಪ್ರಾರಂಭಿಸಿ ಬುದ್ದ,ಬಸವ, ಅಂಬೇಡ್ಕರ್ ತತ್ವದಡಿಯಲ್ಲಿ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿದ್ದಾರೆ. ಇವರ ಕವನ,ಲೇಖನಗಳು ಹಸಿರು ಕ್ರಾಂತಿ. ಮತ್ತು ಬುಕ್ ಬ್ರಹ್ಮ ಜಾಲತಾಣದಲ್ಲಿ ಪ್ರಕಟವಾಗಿವೆ. ಮತ್ತು ಬುಕ್ ಬ್ರಹ್ಮ ಜಾಲತಾಣದವರು ಏರ್ಪಡಿಸಿದ ೨೦೨೦ ರ ಅಕ್ಟೊಬರ್ ತಿಂಗಳ ಜನ ಮೆಚ್ಚಿದ ಕವನ ಸ್ಪರ್ಧೆಯಲ್ಲಿ ಇವರ ಕವನಕ್ಕೆ ರಾಜ್ಯ ಮಟ್ಟದ ದ್ವಿತೀಯ ಬಹುಮಾನ ಲಭಿಸಿದೆ. ಇವರು ಹಲವು ಕವಿಗೊಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೮ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಇಂಡಿಯನ್ ಲಿಟರೆಸ್ಸಿ ಮಿಷನ್ ರೋಟರಿ ಕ್ಲಬ್ ವತಿಯಿಂದ `ರಾಷ್ಟ್ರ ನಿರ್ಮಾಣ ಪ್ರಶಸ್ತಿ,’ ೨೦೧೯ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ ವತಿಯಿಂದ ಉತ್ತಮ ಗೈಡ್ಸ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯ ನೌಕರರ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ವಿವಿಧ ಕ್ರೀಡೆಗಳಲ್ಲಿ ೧೨ಕ್ಕಿಂತ ಹೆಚ್ಚು ಪ್ರಥಮ ದ್ವಿತೀಯ ಬಹುಮಾನಗಳು ಪಡೆದು ೧ ಚಿನ್ನದ ಪದಕ ಮತ್ತು ೮. ಬೆಳ್ಳಿಯ ಪದಕಗಳು ಪಡೆದು ಉತ್ತಮ ಕ್ರೀಡಾ ಪಟುವಾಗಿಯು ಗುರುತಿಸಿಕೊಂಡಿದ್ದಾರೆ. ಸದ್ಯ ಇವರು ಬೀದರ ನಗರದ ನಿವಾಸಿಯಾಗಿದ್ದು, ಕತೆ ಕವನ ಲೇಖನ ಮೊದಲಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರ ಕವನ ಸಂಕಲನ ಮುದ್ರಣದ ಹಂತದಲ್ಲಿದೆ..
ವಿರೂಪಾಕ್ಷ ಗಾದಗಿ
`ಬಸವ ದನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಬರವಣಿಗೆಯಲ್ಲಿ ತೊಡಗಿರುವ ಬರಹಗಾರರೆಂದರೆ ವಿರೂಪಾಕ್ಷ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಸದಾನಂದ ಹಾಗೂ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೨೪-೧೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಕೃಷಿ. ಎಂ.ಎಸ್ಸಿ.ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಪಡೆದು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕತೆ ಕವನ ಹನಿಗವನಗಳನ್ನು ಬರೆದಿದ್ದಾರೆ. ಅವು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ನಾಡು- ನುಡಿಗಾಗಿ ೨೦೦೦ರಲ್ಲಿ `ಕನ್ನಡಾಂಬೆ ಗೆಳೆಯರ ಬಳಗ’ ರಚಿಸಿ ಯುವ ಜನರನ್ನು ಸಂಘಟಿಸಿ ಅನೇಕ ಹೋರಾಟ ನಡೆಸಿದ್ದಾರೆ. ಕಲಂ ೩೭೧ ಜಾರಿಗಾಗಿ, ಅವಿರತ ಹೋರಾಟ, ಗಡಿ ಭಾಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅಸಮಾನತೆ ವಿರುಧ್ಧ ಧ್ವನಿ ಎತ್ತಿ, ಸರ್ಕಾರವನ್ಮು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ೨೦೦೪ನೇ ಸಾಲಿನಲ್ಲಿ ರಾಜ್ಯ ಅತ್ತ್ಯುತ್ತಮ ಯುವ ಪ್ರಶಸ್ತಿ ಇವರಿಗೆ ನೀಡಿದೆ. ಮತ್ತು ಭಾರತ ಸರ್ಕಾರದ ವತಿಯಿಂದ ಮದ್ಯಪ್ರದೇಶದ ರತಲಾಮ್ ನಲ್ಲಿ ಆಯೊಜಿಸಲಾದ ಯುವ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯುವ ಪ್ರಶಸ್ತಿಯು ಪಡೆದಿದ್ದಾರೆ. ಇವರು ಬಂಡಾಯ ಬರಹಗಾರರಾಗಿ ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರ ತರುವ ನಿಟ್ಟಿನಲ್ಲಿದ್ದಾರೆ. ಇವರು ನಾಲ್ಕು ಶಿಕ್ಷಣ ಸಂಸ್ಥೆಗಳನ್ನು ತೆರೆದು ಬೀದರ ನಗರದ ಕೊಳಚೆ ಪ್ರದೇಶಗಳಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ನಾಗಮ್ಮ ಎಚ್. ಭಂಗರಗಿ
ಸೃಜನಶೀಲ ಬರಹಗಾರರಾಗಿ ಗುರ್ತಿಸಿಕೊಂಡು ಕವನ, ಲೇಖನ, ಪ್ರಬಂದ. ಆಧುನಿಕ ವಚನ, ಜಾನಪದ, ಸಾಹಿತ್ಯ ಸೇರಿದಂತೆ ಮೊದಲಾದ ಬರಹಗಳು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುತ್ತಲಿರುವ ಕವಯತ್ರಿಯಂದರೆ, ನಾಗಮ್ಮ ಎಚ್. ಭಂಗರಗಿ. ಇವರು ಕಲಬುರ್ಗಿ ತಾಲೂಕಿನ ಸಾವಳಗಿ(ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೦೯-೦೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ,ಫೀಲ್ ಪದವಿದರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ಅವರ ಧರ್ಮ ಪತ್ನಿಯಾಗಿದ್ದು, ಬಾಲ್ಯದಿಂದಲೇ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿರುವ ಇವರು ತಮ್ಮ ತಂದೆ ಲೇಖಕರು, ಆಧ್ಯಾತ್ಮವಾದಿಗಳು, ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ವಿದ್ಯಾರ್ಥಿದೆಸೆಯಿಂದಲೆ ಕವನ, ಲೇಖನ, ಪ್ರಬಂಧ, ಹನಿಗವನ ಮೊದಲಾದ ಬರಹಗಳು ಬರೆಯುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರು ಸಂಶೋಧನೆಯನ್ನು ಪೂರ್ಣಗೊಳಿಸಿ ಮಹಿಳಾ ಕವಯತ್ರಿಯರನ್ನು ಒಗ್ಗೂಡಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ತ್ರೆöÊಮಾಸಿಕ, `ಅಚಲ’ ಮಾಸಪತ್ರಿಕೆ, ಹಾಗೂ ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಹಲವಾರು ರಾಜ್ಯ, ರಾಷ್ಟçಮಟ್ಟದ ಕಮ್ಮಟಗಳಲ್ಲಿಯು ಅನೇಕ ಉಪನ್ಯಾಸಗಳು ನೀಡಿದ್ದಾರೆ.
ಸದ್ಯ ಇವರು ಬೀದರನಲ್ಲಿದ್ದುಕೊಂಡು ತಮ್ಮ ವೃತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ, ಇವರ ಶೃಕ್ಷಣಿಕ ಹಾಗೂ ಸಾಹಿತ್ಯ ಸಾಧನೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಬಿಸಿವೆ.
ಡಾ. ಸುನೀತಾ ಕೂಡ್ಲಿಕರ್
ಉದಯೋನ್ಮುಖ ಬರಹಗಾರರಲ್ಲಿ ಒಬ್ಬರಾಗಿ ಕವನ,ಲೇಖನ, ಪ್ರಬಂಧ, ಆಧುನಿಕ ವಚನ, ಚುಟುಕು, ಹನಿಗವನ,ಜಾನಪದ ಸಾಹಿತ್ಯ ಸೇರಿದಂತೆ ಮೊದಲಾದ ಬರಹಗಳು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವ ಕವಯತ್ರಿಯೆಂದರೆ ಡಾ.ಸುನೀತಾ ಕೂಡ್ಲಿಕರ್. ಇವರು ಬೀದರದ ಬಾಬುರಾವ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೬-೬-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿ ಕವನ, ಲೇಖನ, ಪ್ರಬಂಧ, ಹನಿಗವನಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಕೆಲ ಕೃತಿಗಳು ಪ್ರಕಟಣೆಯ ನಿಟ್ಟಿನಲ್ಲಿವೆ. ಅಷ್ಟೇಯಲ್ಲದೆ ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡನೆ ಮಾಡಿದ್ದಾರೆ. ಇವರಿಗೆ ಮಾತೃಶ್ರೀ ಪ್ರಶಸ್ತಿ, ಮತ್ತು ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ, ೨೦೧೮ರಲ್ಲಿ ಆರ್ ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿ, ಸೇರಿದಂತೆ ಮೊದಲಾದವು ಪಡೆದಿದ್ದಾರೆ. ಸಾಹಿತ್ಯದೊಂದಿಗೆ ಸಂಘಟನೆಯಲ್ಲಿಯೂ ೧೨ ವರ್ಷಗಳಿಂದ ತೊಡಗಿಸಿಕೊಂಡಿದ್ದ ಇವರು ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಉಪನ್ಯಾಸ, ಕವನ ವಾಚನವು ಮಾಡಿದ್ದಾರೆ. `ಬೋಮ್ಮಗೊಂಡೆಶ್ವರ ಒಂದು ಅಧ್ಯಯನ’ ಎಂಬುದು ಎಂ.ಫೀಲ್ ಪ್ರಬಂಧವಾದರೆ, `ತಾಯ್ತನದ ವಿಭಿನ್ನ ಗ್ರಹಿಕೆಗಳು’ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ.
ಮಾಣಿಕಾದೇವಿ ಪಾಟೀಲ್
ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಉದಯೋನ್ಮುಖ ಕವಯತ್ರಿಯೆಂದರೆ ಮಾಣಿಕಾದೇವಿ ಎಂ.ಪಾಟೀಲ್.ಇವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪಾ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೯ ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಉತ್ತಮ ಪ್ರತಿಭಾವಂತರಾದ ಇವರು ಡಿ.ಇಡಿ.ಬಿ.ಇಡಿ ಎಂ.ಎ. ಪದವಿ ಪಡೆದು ಕಪಲಾಪೂರ (ತಿ) ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಮಾಡ್ಯೂಲ್ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತರಾಗಿ ನೂರಾರು ಕವಿತೆಗಳನ್ನು ಬರೆದು ಪುಸ್ತಕವೊಂದು ಹೊರ ತರುವ ನಿಟ್ಟಿನಲ್ಲಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಚುಟುಕು ಲೇಖನ ಮೊದಲಾದ ಬರಹಗಳು ವಿವಿಧ ಪತ್ರಿಕೆ ಹಾಗೂ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ವಿವಿಧ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಎನ್.ಪಿ.ಇ.ಜಿ.ಇ.ಎಲ್.ಯೋಜನೆಯಡಿಯಲ್ಲಿ ಬೀದರ ತಾಲೂಕಿನ ಜಂಡರ್ ಕೋ.ಆರ್ಡಿನರಾಗಿ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುವುದರೊಂದಿಗೆ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಗಪ್ಪ ಚಿಟ್ಟಾ
ಜಾನಪದ ಕವಿ ಕಲಾವಿದರಾದ ನಾಗಪ್ಪ ಚಿಟ್ಟಾ. ರವರು ಬೀದರ ತಾಲೂಕಿನ ಚಿಟ್ಟಾ ಗ್ರಾಮದ ಶೇಷಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೮-೧೦-೧೯೮೦ರಲ್ಲಿ ಜನಿಸಿದ್ದಾರೆ. ೭ನೇ ತರಗತಿ ವರೆಗೆ ಅಧ್ಯಯನ ಮಾಡಿದ ಇವರು ೧೯೬೪ರಲ್ಲಿ ಪೋಲಿಸ್ ಪೇದೆಯಾಗಿ ನೇಮಕಗೊಂಡು ೧೯೯೮ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಭಜನೆ ಪದ, ಮೊಹರಮ್ ಪದ, ತತ್ವಪದ, ಜಾನಪದ, ಕೋಲಾಟ ಪದ ಮೊದಲಾದವು ಬರೆದಿದ್ದಾರೆ. ಅವು ಕೆಲ ಕಡೆ ಪ್ರಕಟವಾಗಿವೆ. ಅಷ್ಟೇಯಲ್ಲದೆ ಅವು ಜನಪದರ ನಾಲಿಗೆಯ ಮೇಲೆ ಇನ್ನೂ ಜೀವಂತವಾಗಿವೆ.
ಡಾ. ರಾಜಕುಮಾರ ಹೆಬ್ಬಾಳೆ
ಸಾಹಿತ್ಯ ಹಾಗೂ ಜನಪದ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬರಹಗಾರರೆಂದರೆ ಡಾ.ರಾಜಕುಮಾರ ಹೆಬ್ಬಾಳೆಯವರು. ಇವರು ಬೀದರ ನಾವದಗೇರಿ ಗ್ರಾಮದ ಬಸವರಾಜ ಹೆಬ್ಬಾಳೆ ಮತ್ತು ಗುಂಡಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಬೀದರ ಸರ್ಕಾರಿ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ವೈದ್ಯಕೀಯ ಪ್ರಯೋಗಾಲಯದ ತಂತ್ರಜ್ಞರಾಗಿ, ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ ಲೇಖನ ಹನಿಗವನ ಬರಹಗಳು ಬರೆಯುವ ಹವ್ಯಾಸವುಳ್ಳವರಾಗಿದ್ದಾರೆ.ಮತ್ತು `ಕರುಣಾಮಯ ಯುವಕ ಸಂಘ’ ವನ್ನು ಸ್ಥಾಪಿಸಿ ನಿರಂತರ ಕಲೆ, ಸಾಹಿತ್ಯ, ಸಾಮಾಜಿಕ ಮತ್ತು ಜಾನಪದ ಕ್ಷೇತ್ರದ ಸೇವೆಯಿಂದ ಸಂಘವನ್ನು ದೆಹಲಿವರೆಗೆ ಹೆಸರುವಾಸಿಯಾಗುವಂತೆ ಕಾರ್ಯನಿರ್ವಹಿಸಿದ್ದಾರೆ. ಮತ್ತು ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳೀಯ ಕಾರ್ಯದರ್ಶಿಯಾಗಿ, ೨೦೧೧ರಲ್ಲಿ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಸಂಚಾಲಕರಾಗಿ, ೨೦೧೭ರಲ್ಲಿ ಬೀದg ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ, ಯುನಿಸ್ಕೋ ಧನಸಹಾಯ ಯೋಜನೆಯಡಿ ಬೀದರ್ ಜಿಲ್ಲಾ ಜನಪದ ವೈದ್ಯ ಪದ್ಧತಿ ಸಂಶೋಧಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯೋಜನೆಯಡಿ ಸಂಪ್ರದಾಯ ಜಾನಪದ ಹಾಡುಗಳ ದಾಖಲೀಕರಣ ಸಂಶೋಧಕರಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಮುಖ ಯೋಜನೆಯಾದ ಗ್ರಾಮಚರಿತ್ರೆ ಕೋಶ ಸಂಶೋಧನಾ ಯೋಜನೆಯಲ್ಲಿ ಬೀದರ ತಾಲೂಕಿನ ಕ್ಷೇತ್ರ ತಜ್ಞ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತು `ಕ್ವಾಟಿ ಸಾವಯವ ಸಿರಿ ಮತ್ತು ಕ್ವಾಟಿ ಜಾನಪದ’ ಎಂಬ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು ಹಲವಾರು ಜಾನಪದ ಕಾರ್ಯಚಟುವಟಿಕೆಗಳನ್ನು ಮಾಡಿದ ಇವರಿಗೆ ೧೯೯೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೩ರಲ್ಲಿ ಅತ್ಯುತ್ತಮ ಯುವ ಪ್ರಶಸ್ತಿ, ೨೦೧೧ರಲ್ಲಿ ಸಂಸ್ಕೃತಿ ಮಂತ್ರಾಲಯ ನವದೆಹಲಿ ವತಿಯಿಂದ ಜನಪದ ಸಾಹಿತ್ಯ ಪ್ರಶಸ್ತಿ, ೨೦೧೮ರಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನಿಂದ ಪರಿಷತ್ ಲೋಕಕಲಾ ಪ್ರಶಸ್ತಿ , ೨೦೧೯ರಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ವತಿಯಿಂದ ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿಗಳು ಪಡೆದಿದ್ದಾರೆ. ಇವರು ಹಲವಾರು ಸರ್ಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾರುತಿ ಮಾಸ್ಟರ್
ಉದಯೋನ್ಮುಖ ಯುವ ಬರಹಗಾರರೆಂದರೆ ಮಾರುತಿ ಮಾಸ್ಟರ್. ಇವರು ಬೀದರ ತಾಲೂಕಿನ ಸಿರ್ಸಿ ಗ್ರಾಮದ ಶ್ರೀ ಶಿವರಾಜ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ,ಲೇಖನ, ವಚನ ಹನಿಗವನ, ಮೊದಲಾದವು ಸಾಹಿತ್ಯ ರಚಿಸಿ `ಹಡೆದವ್ವ’ (ಕವನ ಸಂಕಲನ) `ಅಂಬಿಗರ ಚೌಡಯ್ಯ’ (ಚರಿತ್ರೆ) `ಆಧುನಿಕ ವಚನಗಳು’ (ವಚನ ಸಂಕಲನ) ಎಂಬ ಕೃತಿಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ಉತ್ತರ ಕರ್ನಾಟಕ, ಬಿಂದಾಸ್, ಶ್ರೀ ಶಕ್ತಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕಮಠಾಣ,ಬಗದಲ್, ಹೋಬಳಿಗಳ ಕಸಾಪ ಅಧ್ಯಕ್ಷರಾಗಿ, ಸಿರ್ಸಿ ಗ್ರಾಂ.ಪA. ಸದಸ್ಯರಾಗಿ ಸೇವೆ ಸಲ್ಲಿಸಿ ಸದ್ಯ ಔರಾದ (ಎಸ್) ಹೋಬಳಿಯ ಕಸಾಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೀದರ ದಕ್ಷಿಣ ಕಾಂಗ್ರೆಸ್ ಪಕ್ಷ ಮತ್ತು ಶಿಕ್ಷಕ, ಪದವಿಧರ ಮತಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ತಮ್ಮ ಹುಟ್ಟೂರಲ್ಲಿ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆಯ ಮೂಲಕ ಸಿರ್ಸಿ, ಕಾಡವಾದಗಳಲ್ಲಿ ವಿದ್ಯಾ ಪ್ರಾಥಮಿಕ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ.
ಪರಮೇಶ್ವರ ಸಂಗ್ರಾಮ್
ಹವ್ಯಾಸಿ ಬರಹಗಾರ, ಕಲಾವಿದರೆಂದರೆ ಪರಮೇಶ್ವರ ಸಂಗ್ರಾಮ್. ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ್ ಗಿರಣಿ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೧೧-೧-೧೯೮೮ ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರ ನರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಸಿನಿಮಾ ನಿರ್ದೇಶಕರಾಗಿ, ಚಲನಚಿತ್ರ ಸಂಭಾಷಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಮಾಜದ ಅಹಿತಕರ ಘಟನೆಗಳನ್ನು ಕಂಡು ಸಮಾಜಕ್ಕೆ ಸರಿ ತಪ್ಪುಗಳ ಅರಿವು ಮೂಡಿಸಿ ಬದಲಾವಣೆ ತರುವಲ್ಲಿ ಸಿನಿಮಾ ಮಾಧ್ಯಮವೇ ಸರಿ’ ಎಂದು ತಿಳಿದು ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿ ಕಥೆಗಾರ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೬ನೇ ತರಗತಿಯಲ್ಲಿರುವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ, ಕಥೆ ಕವನ, ಲೇಖನ, ಹನಿಗವನ, ಆಧುನಿಕ ವಚನಗಳನ್ನು ಬರೆದಿದ್ದಾರೆ. `ಪರಮೇಶ್ವರ ಸಂಗ್ರಾಮ್.’ ಎಂಬ ಅಂಕಿತನಾಮದಲ್ಲಿ ೩೦೦ಕ್ಕೂ ಅಧಿಕ ಆಧುನಿಕ ವಚನಗಳು ಬರೆದಿದ್ದಾರೆ. `ಹೃದಯ ಸಾಕ್ಷಿ, ಹಾಗೂ `ಕುಂತಿ’ ಧಾರಾವಾಹಿಗಳಿಗೆ ಮೊದಲ ಬಾರಿಗೆ ಸಹಾಯಕ ನಿರ್ದೇಶನ ಕೆಲಸಕ್ಕೆ ಸೇರಿ ನಂತರ ಕೆಲ ಧಾರಾವಾಹಿಗಳಲ್ಲಿ ಮತ್ತು ಸೇವಂತಿ ಸೇವಂತಿ, ಆಟೊ, ಜಾಜಿಮಲ್ಲಿಗೆ, ಶಿವ, ಹೀಗೆ ಕೆಲ ಚಲನಚಿತ್ರಗಳಿಗೂ ಸಹಾಯಕ ಹಾಗೂ ಸಹ ನರ್ದೇಶನ ಮಾಡಿದ್ದಾರೆ. ಪೌರಾಣಿಕ ಮಹಾಕಾವ್ಯ `ಮಾಹಾಭಾರತ’ ಎಂಬ ಕನ್ನಡ ಧಾರವಾಹಿಯಲ್ಲಿಯೂ ಸಹ ನರ್ದೇಶಕರಾಗಿ ಕಾರ್ಯನರ್ವಾಹಿಸಿದ್ದಾರೆ. ಮತ್ತು ಝೀ ಕನ್ನಡ, ಸುರ್ಣ, ಈ ಟಿವಿ ವಾಹಿನಿಗಳಲ್ಲಿ ಕೆಲ ರಿಯಾಲಿಟಿ ಶೋಗಳಿಗೆ ಪ್ರೊಡ್ಯುಸರ್ ಆಗಿ ಕಾರ್ಯನಿರ್ವಹಿಸಿದಲ್ಲದೆ, `ಉದಯ ಕಾಮಿಡಿ’ ವಾಹಿನಿಯಲ್ಲಿ ಬರುತಿದ್ದ ಕಥೆ ಅಲ್ಲ ಕಾಮಿಡಿ. ೧೦೦ನೇ ಸಂಚಿಕೆ ಹಾಗೂ `ಡುಬಾಕ್ ಜೋಡಿ’ ೫೦೦ನೇ ಸಂಚಿಕೆಗಳಿಗೆ ಕಾಮಿಡಿ ಡೈಲಾಗ್ ಬರೆದು ನಿರ್ದೇಶನವು ಮಾಡಿ, ಕೇಂದ್ರ ರ್ಕಾರದ ೫ ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಹಾಗೂ ೯೧.೧. ಎಫ್.ಎಂ. ರೇಡಿಯೋ ಕೇಂದ್ರದ ಕೆಲ ಕರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿಯು ನೀಡಿದ್ದಾರೆ. ಸದ್ಯದಲ್ಲಿಯೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದಾರೆ.
ವಿದ್ಯಾ ಸಾಗರ
ಹವ್ಯಾಸಿ ಉದಯೋನ್ಮುಖ ಯುವ ಬರಹಗಾರ ವಿದ್ಯಾಸಾಗರ ಇವರು ಬೀದರ ತಾಲೂಕಿನ ಮರಖಲ ಗ್ರಾಮದ ಶರಣಪ್ಪಾ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೮ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ಅನೇಕ ಕವನ, ಲೇಖನ, ಹನಿಗವನ, ಚುಟುಕು ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳಿAದ ಸಾಕಷ್ಟು ಸಲ ಸತ್ಕರಿಸಿ ಗೌರವಿಸಲಾಗಿದೆ.
ಅವಿನಾಶ ಸೋನೆ
ಹವ್ಯಾಸಿ ಉದಯೋನ್ಮುಖ ಯುವ ಬರಹಗಾರರೆಂದರೆ ಅವಿನಾಶ ಸೋನೆ. ಇವರು ಬೀದರದ ಅಮೃತರಾವ ಮತ್ತು ಪದ್ಮಿನಿ ದಂಪತಿಗಳಿಗೆ ದಿನಾಂಕ ೩೦-೧-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಸ್ನಾತಕೋತ್ತರ ಪದವೀಧರರಾದ ಇವರು ಕವನ, ಲೇಖನ, ಹನಿಗವನ, ಚುಟುಕು, ಪ್ರಬಂಧ ಮೊದಲಾದ ತರಹದ ಬರಹಗಳು ಬರೆದಿದ್ದಾರೆ. ಮತ್ತು ಅವು ನಾಡಿನ ಕೆಲ ಕನ್ನಡದ ವಿವಿಧ ಸಾಹಿತ್ಯ ಪತ್ರಿಕೆಗಳಲ್ಲಿ ಹಾಗೂ ಇತರರು ಸಂಪಾದಿಸಿದ ಸಾಹಿತ್ಯಿಕ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಬೀದರ ಜಿಲ್ಲೆ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮತ್ತು ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಗಿದೆ.
ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿರುವ ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು ಬೀದರ ಸಮೀಪದ ಯದಲಾಪುರ ಮತ್ತು ಮಹಾರಾಷ್ಟ್ರದ ತೋಳನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಇವರು ಅನೇಕ ತ್ರಿಪದಿಗಳಲ್ಲಿ ಹಾಗೂ ಬಹುಪಾದಗಳಲ್ಲಿ ವಚನಗಳು ಬರೆದಿದ್ದಾರೆ. `ತೋಳನೂರು ಶ್ರೀ ಯದಲಾಪುರ’ ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಆಧುನಿಕ ವಚನ ಸಂಕಲನಗಳಲ್ಲಿ ಪ್ರಕಟವಾಗಿವೆ.
ಪೂಜ್ಯ. ಶ್ರೀ. ಗಣೇಶ್ವರ ಆವಧೂತರು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಸಾಹಿತ್ಯ ರಚಿಸಿದ ಹವ್ಯಾಸಿ ಬರಹಗಾರರೆಂದರೆ ಪೂಜ್ಯ. ಶ್ರೀ. ಗಣೇಶ್ವರ ಅವಧೂತರು.ಇವರು ಬೀದರ ಹತ್ತಿರದ ನೌಬಾದಿನ ಚವಳಿ ಗ್ರಾಮದ ಗಣೇಶ್ವರ ಸುಕ್ಷೇತ್ರದ ಪೀಠಾಧ್ಯಕ್ಷರಾಗಿದ್ದು ಅನೇಕ ಹಾಡು ತತ್ವಪದ ಆಧುನಿಕ ವಚನಗಳನ್ನು ಬರೆದಿದ್ದಾರೆ . ಮತ್ತು ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.
ಜೈ.ಶ್ರೀ. ಮೇತ್ರೆ
ಉದಯೋನ್ಮುಖ ಯುವ ಕವಯತ್ರಿಯಾದ ಜೈ ಶ್ರೀ ಮೇತ್ರೆಯವರು ಬೀದರ ತಾಲೂಕಿನ ಗುನ್ನಳ್ಳಿ ಗ್ರಾಮದ ಶಿವರಾಜ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೫-೫-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಸ್ನಾತಕೋತ್ತರ ಪದವೀಧರರಾದ ಇವರು ಬೀದರದ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ. ಮತ್ತು ಇವರ ಸಾಹಿತ್ಯ ಹಾಗೂ ಸಮಾಜ ಸೇವೆಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸುಪ್ರೀತಾ ಎಸ್.ಶೀಲವಂತ
ಉದಯೋನ್ಮುಖ ಬರಹಗಾರರಾಗಿ ಸೃಜನಶೀಲ ಸಾಹಿತ್ಯ ರಚನೆ ಮಾಡುತ್ತಿರುವ ಕವಯತ್ರಿಯೆಂದರೆ, ಸುಪ್ರೀತಾ ಎಸ್.ಶೀಲವಂತ. ಇವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದ ಭದ್ರಪ್ಪಾ ಶೀಲವಂತ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೬-೩-೧೯೯೦ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಾಹ್ಯವಾಗಿ ಬಿ.ಎ.ಪದವಿ ಅಧ್ಯಯನ ಮಾಡುತ್ತಿದ್ದು, ಬೀದರದ ಶ್ರೀ ಸಪಾನಿ ಶಂಕ್ರೇಪ್ಪಾ ಶೀಲವಂತ ಅವರ ಧರ್ಮ ಪತ್ನಿಯಾಗಿ ಗೃಹಿಣಿಯಾಗಿದ್ದುಕೊಂಡೆ ಡಾ.ಜಯದೇವಿ ತಾಯಿ ಲಿಗಾಡೆಯವರಂತೆ ಮರಾಠಿಗಿಂತ ಹೆಚ್ಚು ಕನ್ನಡ ಸಾಹಿತ್ಯದ ಕಡೆಗೆ ಒಲವು ಹೊಂದಿ ಕತೆ,ಕವನ,ಲೇಖನ, ಹನಿಗವನ, ಚುಟುಕು, ರುಬಾಯಿ,ನ್ಯಾನೊ ಕತೆ ಸೇರಿದಂತೆ ೩೦೦ಕ್ಕೂ ಹೆಚ್ಚು ಬರಹಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ವಿದ್ಯೂನ್ಮಾನ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಇವರಿಗೆ ಕೆಲ ಪ್ರಶಸ್ತಿ ಬಹುಮಾನವು ಲಭಿಸಿವೆ. ಸದ್ಯ ಇವರು `ಭಾವ ಸಮರ್ಪಣೆ’ ಎಂಬ ಕವನ ಸಂಕಲನ ಹೊರ ತರುತ್ತಿದ್ದಾರೆ.
ವೀರಶೆಟ್ಟಿ ವ್ಹಿ ಹಳ್ಳಿ
ಹವ್ಯಾಸಿ ಬರಹಗಾರರಾದ ಇವರು ಬಿ.ಎ.ಬಿ.ಇಡಿ. ಎಂ.ಎ. ಸ್ನಾತಕೋತ್ತರ ಪತ್ರಿಕೋದ್ಯಮ ಪದವೀಧರರಾಗಿ ಬೀದರದ ನೈಟಿಂಗೇಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಅನೇಕ ಕವನ ಲೇಖನ ಆಧುನಿಕ ವಚನಗಳು ರಚಿಸಿದ್ದು ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.
ಸುನೀತಾ ಬಿಕ್ಲೆ
ಹವ್ಯಾಸಿ ಬರಹಗಾರ್ತಿ ಮತ್ತು ಗಾಯನ ಯುವ ಕಲಾವಿದೆಯಾಗಿ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಕವಯತ್ರಿಯೆಂದರೆ ಸುನೀತಾ ಬಿಕ್ಲೆ ಇವರು ಬೀದರ ತಾಲೂಕಿನ ಮರಖಲ್ ಗ್ರಾಮದ ಬಸವರಾಜ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧-೮-೧೯೯೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವೀಧರರಾಗಿ, ವೃತ್ತಿಪರ ಕಲಾವಿದರಾಗಿ ಬದುಕು ಸಾಗಿಸುತ್ತಿದ್ದಾರೆ. ಮತ್ತು ಕತೆ, ಕವನ, ಲೇಖನ, ಹಾಡುಗಳನ್ನು ಬರೆದಿರುವ ಇವರು ಗಾಯಕರಾಗಿ ಹಲವಾರು ವೃತ್ತಿಪರ ಕಾರ್ಯಕ್ರಮಗಳು ನೀಡುತ್ತಾರೆ. ಇವರಿಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ವೈಭವ ದಡ್ಡೆ
ಉದಯೋನ್ಮುಖ ಯುವ ಬರಹಗಾರರೆಂದರೆ ವೈಭವ ದಡ್ಡೆ. ಇವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೧-೪-೧೯೯೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್;ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೮ನೇ ಸ್ಥಾನ ಪಡೆದ ಪ್ರತಿಭಾವಂತರಾಗಿ ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಪ್ರಬಂಧಗಳು ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. `ಗೀತೋಪಾಸಕ’ `ಅಪ್ಪನ ಕೀರ್ತಿ’ `ಬಿಸಿಲು ನಾಡಿನಿಂದ ಹಸಿರು ನಾಡಿಗೆ.’ ಎಂಬ ಲೇಖನಗಳು ಬಾಲ್ಯದ ವಿದ್ಯಾರ್ಥಿಯಾಗಿರುವಾಗಲೇ ಬರೆದಿದ್ದು, ಅವು `ಸತ್ಯ ಜ್ಯೋತಿ’ ಮೊದಲಾದ ಪ್ರಾತಿನೀಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಪಿಯುಸಿ ಓದುತ್ತಿದ್ದಾಗ ವಾಲಿಬಾಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಇವರು ಪಿಯುಸಿಯಲ್ಲಿ ಶೇ.೯೮./. ರಷ್ಟು ಅಂಕಗಳು ಪಡೆದು ಸದ್ಯ ಸರಕಾರಿ ಕಾಲೇಜು ಬೆಳಗಾವಿಯಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಂಗಿತ, ನೃತ್ಯ, ಭಾಷಣಕಾರರು ಆಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಅಭಯಕುಮಾರ
ಹವ್ಯಾಸಿ ಯುವ ಬರಹಗಾರರಾದ ಇವರು ಪಿ.ಯು.ಸಿ ವಿದ್ಯಾರ್ಥಿಯಾಗಿದ್ದು, ಬೀದರದ ಜಗನ್ನಾಥ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೩-೨-೨೦೦೩ರಲ್ಲಿ ಜನಿಸಿದ್ದಾರೆ. ಮತ್ತು ಅನೇಕ ಕವನ, ಲೇಖನ ಬರಹಗಳನ್ನು ಬರೆಯುತ್ತಿರುವ ಇವರು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿಯು ಬರದು ಪ್ರಕಟಿಸುತ್ತಿದ್ದಾರೆ. ಮತ್ತು ಹಲವು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿದ್ದಾರೆ.
ಕೇಶವ ದಡ್ಡೆ
ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೪-೮-೨೦೧೨ ರಲ್ಲಿ ಜನಿಸಿದ ಇವರು ಬಾಲಕರಾದರು ಕನ್ನಡ ಹಿಂದಿ ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುತ್ತ ಜನರ ಪ್ರೀತಿಗೆ ಪಾತ್ರವಾಗಿದ್ದು ಶಾಲೆಯಲ್ಲಿ ಪ್ರತಿಭಾವಂತ ಮಗುವಾಗಿ ಸುಮಾರು ಇಪ್ಪತ್ತು ಕವಿತೆಗಳು ಬರೆದಿದ್ದು ಅವು ಕೆಲ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿದ್ದಾನೆ . ಸಾಮಾಜಿಕ ಜಾಲತಾಣಗಳಲ್ಲಿಯು ಅವು ಪ್ರಕಟ ಮಾಡಲಾಗಿದೆ. ಮೂರನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈತನ ಪ್ರತಿಭೆ ಮೆಚ್ಚುವಂತಹದಾಗಿದೆ.
ಹುಮನಾಬಾದ ತಾಲೂಕಿನ ಹವ್ಯಾಸಿ ಬರಹಗಾರರು
ದಿ.ತುಕಾರಾಮ ಅಲ್ಲೂರ
ಕಾವ್ಯ, ತತ್ವಪದ, ಮೊಹರಮ್ ಪದಗಳು ರಚನೆ ಮಾಡಿರುವ ಸಾಹಿತಿ ದಿ.ತುಕಾರಾಮ ಅಲ್ಲೂರ್. ಇವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಸಾಯಬಣ್ಣಾ ಮತ್ತು ರೇವಮ್ಮಾ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಆಂಧ್ರಪ್ರದೇಶದ ಪಂಚಾಯತ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ೧೯೯೦ರಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳೆರಡರಲ್ಲೂ ಪಾಂಡಿತ್ಯ ಹೊಂದಿದ ಇವರು ಕನ್ನಡದಲ್ಲಿ ತತ್ವಪದ, ಭಜನೆ ಪದ, ಜಾನಪದ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ದಿ.ಕೃಷ್ಣ ಮೂರ್ತಿ ಶಾಸ್ತ್ರಿ
ಕವಿ ಸಾಹಿತಿಯಾದ ದಿ.ಕೃಷ್ಣ ಮೂರ್ತಿ ಶಾಸ್ತ್ರೀಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಕಲ್ಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೩೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ. ಬಿ.ಇ.ಡಿ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಹಾಡು, ತತ್ವಪದ, ಜಾನಪದ, ಮೊದಲಾದವು ರಚಿಸಿದ್ದು , ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ದಿನಾಂಕ ೧೯-೭-೧೯೮೧ರಲ್ಲಿ ನಿಧನರಾಗಿದ್ದಾರೆ.
ಗದಗ ಪುಂಡಲೀಕರಾವ
ಹವ್ಯಾಸಿ ಬರಹಗಾರರಾದ ಗದಗ ಪುಂಡಲೀಕರಾವರವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಮರಿಯಪ್ಪ ಮತ್ತು ಮರಿಯಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೫೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ಪ್ರೌಢ ಶಾಲಾ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾಗಿದ್ದಾರೆ. ಕವನ, ಲೇಖನ, ಹಾಡುಗಳನ್ನು ರಚಿಸಿರುವ ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ರಾಂಪೂರೆ ಕಾಲೋನಿಯಲ್ಲಿ ವಾಸವಾಗಿದ್ದಾರೆ.
ಚ.ರಾ.ವಡ್ಡನಕೇರಿ
ಹವ್ಯಾಸಿ ಬರಹಗಾರರಾದ ಚ.ರಾ.ವಡ್ಡನಕೇರಿಯವರ ಪೂರ್ಣನಾಮ `ಚನ್ನಬಸವ ರಾಚಪ್ಪ ವಡ್ಡನಕೇರಿ’ ಎಂದಾಗಿದೆ. ಇವರು ಹುಮನಾಬಾದ ತಾಲೂಕಿನ ಮೋಳಕೇರಿ ಗ್ರಾಮದಲ್ಲಿ ದಿನಾಂಕ ೨೩-೮-೧೯೫೪ರಲ್ಲಿ ಜನಿಸಿದ್ದಾರೆ. ಮತ್ತು ಬೀದರ ಪ್ರಧಾನ ಅಂಚೆ ಕಚೇರಿಯಲ್ಲಿ ಗ್ರಾಹಕ ಸೌಲಭ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಅನೇಕ ಕವನ, ಲೇಖನ ಆಧುನಿಕ ವಚನಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.
ಶಿವರಾಜ ಪಿ.ಕಿಣಗಿ
ಅಧ್ಯಾತ್ಮಿಕ ತಳಹದಿಯ ತತ್ವ ಪದಗಳ ಶೈಲಿಯಲ್ಲಿ ಪದ್ಯ ಕವಿತೆ ಬರೆಯುತ್ತಿರುವ ಬರಹಗಾರರೆಂದರೆ ಶಿವರಾಜ ಪಿ.ಕಿಣಗಿ. ಇವರು ಬೀದರ ಜಿಲ್ಲೆ ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಪೀರಪ್ಪ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ ೧-೨-೧೯೫೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಮನಾಬಾದಿನ ಶ್ರೀ ಬೀರಲಿಂಗೇಶ್ವರ ಪ.ಪಂ.ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತರಾಗಿರುವುದರಿಂದ ಭಜನೆ ಪದಗಳನ್ನು ಹಾಡುತ್ತಾ ಬೆಳೆದವರು. ಬರು ಬರುತ್ತಾ ಭಜನೆ ಹಾಡುಗಳನ್ನು ಬರೆಯಲು ಸುರುಮಾಡಿ ತಮ್ಮದೆ ರಾಗ ಧಾಟಿಯಲ್ಲಿ ಹಾಡಲು ಸುರುಮಾಡಿ ಅನೇಕ ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಇವರು ಬರೆದ ಕೃತಿಗಳೆಂದರೆ, `ಕೇಳಿಸುತ್ತಿದೆಯೇ ಧರ್ಮದ ಹೂಂಕಾರ’, `ಗುರುವಿನ ಗುರುತು’ `ಯುವಕರಿಗೆ ಕರೆ’ `ಜಾತಿ ವ್ಯವಸ್ಥೆ ಒಂದು ಸಮಸ್ಯೆಯೇ?’, `ದೇವರಾಗುವ ದಾರಿ’, `ನಾನು ಯಾರು?’, `ಪ್ರೇಮವೇ ಪರಮೇಶ್ವರ’, `ಭಜನೆ ಪದಗಳು’ ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಸೂರ್ಯಕಲಾ ಎಸ್. ಹೊಡಮನಿ
ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಸೃಜನಶೀಲ ಸಾಹಿತ್ಯ ರಚಿಸಿದ ಕವಯತ್ರಿಯೆಂದರೆ ಸೂರ್ಯಕಲಾ ಎಸ್.ಹೊಡಮನಿ. ಇವರು ಬೀದರ ಜಿಲ್ಲೆ ನೂತನ ಕಮಲನಗರ ತಾಲೂಕಿನ ಚಾಂಡೆಶ್ವರಿ ಗ್ರಾಮದ ಶಿವಲಿಂಗಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨-೨-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಪದವಿಧರರಾದ ಇವರು ೧೯೯೨ರಲ್ಲಿ ಹುಮನಾಬಾದ ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ಅನುದಾನಿತ ಭಾಯಿ ಬನ್ಸಿಲಾಲ್ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು ವಿವಾಹವಾದ ನಂತರ ತಮ್ಮ ಪತಿ ಎಸ್.ಎಸ್.ಹೊಡಮನಿಯವರ ಸಾಹಿತ್ಯಕ್ಕೆ ಮಾರುಹೋಗಿ ಕವಿತೆ ಬರೆಯಲು ಪ್ರಾರಂಭಿಸಿರುವುದು ಅವರ ಉತ್ತಮ ಸಾಹಿತ್ಯಿಕ ಬೆಳವಣಿಗೆಯಾಗಿದೆ. ಈ ಇಬ್ಬರು ಸತಿಪತಿಗಳು ಕೂಡಿಕೊಂಡು ಹಲವಾರು ಕವನಗಳು ರಚಿಸಿದ್ದು ಅವು ಓದುಗರ ಮನಸೂರೆಗೊಳಿಸಿವೆ. ಇವರು `ಅಮ್ಮಾ’ ಎಂಬ ಕವನ ಸಂಕಲನವನ್ನು ಬರೆದಿದ್ದು, ಅಲ್ಲದೆ ಇನ್ನೂ ಹಲವಾರು ಕವನ,ಲೇಖನ, ಜಾನಪದ ಸಂಪಾದಿತ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಮತ್ತು ಇವರು ಉತ್ತಮ ವಾಗ್ಮಿಗಳು ಚಿಂತಕರು ಆಗಿದ್ದು ಹಲವಾರು ಕಡೆಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಜನಪದ ಶೈಲಿಯಲ್ಲಿ ಕೆಲ ಕತೆಗಳು ಕೂಡ ಬರೆದಿದ್ದಾರೆ. ಅಷ್ಟೇಯಲ್ಲದೆ ಇವರು ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಸದ್ಯ ಇವರು ಹಳ್ಳಿಖೇಡ್ (ಬಿ) ಗ್ರಾಮದಲ್ಲಿ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಬರವಣಿಗೆಯನ್ನು ಮುಂದುವರೆಸಿದ್ದಾರೆ.
ಕನ್ಯಾಕುಮಾರಿ
ಸಾಹಿತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಕವಯತ್ರಿಯಾಗಿ ವಿಶೇಷವಾಗಿ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡವರೆAದರೆ ಕನ್ಯಾಕುಮಾರಿಯವರು. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶಾಂತಪ್ಪಾ ದೇವರಾಯ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೨-೭-೧೯೬೯ ರಲ್ಲಿ ಜನಿಸಿದ್ದಾರೆ. ಇವರು ಎಂ.ಎ ಸ್ನಾತಕೋತ್ತರ ಪದವಿಧರರಾಗಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ತಂದೆ ಶಾಂತಪ್ಪ ದೇವರಾಯ `ದೇಶಾಂಶ ಹುಡಗಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿ ಖ್ಯಾತರಾಗಿದ್ದಾರೆ. ಅವರ ಮಗಳಾದ ಇವರು ಕತೆ, ಕವನ,ಚುಟುಕು, ಲೇಖನ, ಆಧುನಿಕ ವಚನ ಮೊದಲಾದ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರ ಬರಹಗಳು ರಾಜ್ಯ ಮಟ್ಟದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧೀಕ ಸಂಕಲನ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಸಾಹಿತ್ಯಕ ಸಭೆ ಸಮಾರಂಭದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಉತ್ತಮ ನಿರೂಪಕಿಯಾಗಿಯು ಗುರುತಿಸಿಕೊಂಡಿದ್ದಾರೆ.
ಪ್ರೊ.ಜೈರಾಜ ಚಿಕ್ಕ ಪಾಟೀಲ್
ದೃಶ್ಯ ಕಲಾವಿದ, ಚಿತ್ರಕಾರ, ಸಾಹಿತಿ ಹಾಗೂ ಕವಿ ಕಲಾವಿದರಾಗಿ ಎರಡು ದಶಕಗಳ ಹಿಂದೆಯೇ ನಾಡಿನಾದ್ಯಂತ ರಾಜ್ಯ ಮಟ್ಟದ ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಕವನ, ಹನಿಗವನ, ಲೇಖನಗಳ ಮೂಲಕ ತುಂಬ ಚಿರಪರಿಚಿತರಾಗಿ ಗುರ್ತಿಸಿಕೊಂಡ ಲೇಖಕರೆಂದರೆ, ಪ್ರೊ.ಜೈರಾಜ ಚಿಕ್ಕ ಪಾಟೀಲ್. ಇವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಶ್ರೀ ಮಡಿವಾಳಪ್ಪ ಮತ್ತು ಶ್ರೀಮತಿ ವಿಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ದೃಶ್ಯ ಕಲಾ ವಿಷಯದಲ್ಲಿ ಎಂ.ಎಫ್.ಎ. ಮತ್ತು ಪಿ.ಎಚ್.ಡಿ ಪದವಿ ಪಡೆದ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲಾ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕಲೆಯೊಂದಿಗೆ ಕಾವ್ಯ ರಚನೆಯಲ್ಲೂ ಇವರದು ಎತ್ತಿದ ಕೈ ನಾಡಿನಾದ್ಯಂತ ಕವನ ಸ್ಪರ್ಧೆಯಲ್ಲಿ ಹಲವಾರು ಬಹುಮಾನ, ಪ್ರಶಸ್ತಿ ಪಡೆದ ಇವರು ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಿಗೆ ಕವನ, ಹನಿಗವನಗಳು ಪ್ರಕಟಿಸಿ ಖ್ಯಾತಿ ಹೊಂದಿದ್ದಾರೆ. ತೊಂಬತ್ತರ ದಶಕದಲ್ಲಿಯೇ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದ ಬೀದರದ ಕೆಲವೇ ಕೆಲವು ಸಾಹಿತಿಗಳಲ್ಲಿ ಇವರ ಹೆಸರು ಎದ್ದು ತೋರುತ್ತದೆ. ಇವರ ಬರಹಗಳು ಕರ್ಮವೀರ, ತುಷಾರ, ತರಂಗ, ಮಯೂರ, ಸುಧಾ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಮತ್ತು ೧೯೯೧ರಲ್ಲಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ `ಜನ್ಮ ಶತಾಬ್ದಿ’ ಅಂಗವಾಗಿ ಪ್ರಕಟಿಸಿದ ರಾಜ್ಯ ಮಟ್ಟದ ಕವನ ಸಂಕಲನದಲ್ಲಿ ಇವರ `ಜೀವನದ ಅರ್ಥ, ಎಂಬ ಕವನ ಆಯ್ಕೆಯಾದರೆ ೧೯೯೬ರಲ್ಲಿ ಬೆಂಗಳೂರಿನಿAದ ಪ್ರಕಟವಾದ `ಎರಡು ಬಳ್ಳಿ, ಹೂ ಹಲವು, ಎಂಬ ಕವಿತೆ ಆಯ್ಕೆಯಾಗಿ ಪ್ರಕಟಾಗಿದೆ.ಮತ್ತು ೨೦೦೧ರಲ್ಲಿ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣ ನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ, ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ `ಜಗಳ’ ಎಂಬ ಕವಿತೆ ಆಯ್ಕೆಯಾಗಿ `ಜ್ಞಾನಸೂರ್ಯ’ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ಈ ಕೃತಿ ಮಚ್ಚೇಂದ್ರ ಪಿ ಅಣಕಲ್. ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಗಳ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಸದಾಶಿವಯ್ಯಾ ಎಸ್. ಹಿರೇಮಠ
ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಹವ್ಯಾಸಿ ಬರಹಗಾರ ಸದಾಶಿವಯ್ಯಾ ಎಸ್.ಹಿರೇಮಠ. ಇವರು ಹುಮನಾಬಾದ ತಾಲೂಕಿನ ಕಠಳ್ಳಿ ಗ್ರಾಮದ ಸೋಮಶೇಖರಯ್ಯಾ ಮತ್ತು ಶಕುಂತಲಾಬಾಯಿ ದಂಪತಿಗಳಿಗೆ ದಿನಾಂಕ ೪-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವೀಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಕೆಲಕಾಲ ಸಿ.ಆರ್.ಪಿ.ಯಾಗಿ, ಡಿ.ಪಿ.ಇ.ಪಿ.ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಸೇವೆ ಸಲ್ಲಿಸಿದ ಇವರು ಹಳ್ಳಿ ಖೇಡ (ಕೆ) ವಲಯ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಸದ್ಯ ಶಿಕ್ಷಣ ಇಲಾಖೆಯ ಆರ್.ಪಿ.ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಇವರು ಕವನ ,ಲೇಖನ, ಹನಿಗವನ, ಪ್ರಬಂಧ, ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿಯು ಕವನ ವಾಚನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಪ್ರಭು ಬಿ.ಮಾಲೆ
ಉದಯೋನ್ಮುಖ ಕವಿ, ಕಲಾವಿದ ಸಾಹಿತಿಯೆಂದರೆ ಪ್ರಭು ಬಿ.ಮಾಲೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದ ಶ್ರೀ ಬಂಡೆಪ್ಪಾ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ವೃತ್ತಿಪರ ಕಲಾವಿದರಾಗಿದ್ದಾರೆ.
ಮತ್ತು ಸಾಹಿತ್ಯದಲ್ಲಿಯು ಆಸಕ್ತರಾಗಿ ಕವನ ಹಾಡು ವಚನ ಪದ್ಯಗಳನ್ನು ರಚನೆ ಮಾಡಿದ್ದಾರೆ.ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇವರು ಕೆಲ ವರ್ಷ ಸಾಕ್ಷರತಾ ಸಂಯೋಜಕರಾಗಿ, ನವಚೇತನ ಕಲಾ ತಂಡದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸರ್ಕಾರಿ ಇಲಾಖೆಗಳ ವತಿಯಿಂದ ಜನಜಾಗೃತಿಗಾಗಿ ಬೀದಿ ನಾಟಕ,ಹಾಡು, ರೂಪಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಆರೋಗ್ಯ, ಕೃಷಿ, ಶಿಕ್ಷಣ, ಸಾಕ್ಷರತೆ, ಚುನಾವಣೆ, ನೀರು ಮತ್ತು ನೈರ್ಮಲ್ಯ, ಬಾಲ್ಯ ವಿವಾಹ, ವರದಕ್ಷಿಣೆ, ಬಾಲ ಕಾರ್ಮಿಕ, ಜೀತ ಪದ್ಧತಿ, ಮೂಢನಂಬಿಕೆ ಮೊದಲಾದ ವಿಷಯಗಳ ಕುರಿತಾದ ಬೀದಿ ನಾಟಕಗಳನ್ನು ರಚಿಸಿ ಸ್ವತಃ ನಾಟಕಗಳಲ್ಲಿ ಪಾತ್ರವನ್ನು ಮಾಡಿ ಕವಿ, ಸಾಹಿತಿ, ನಾಟಕಕಾರ, ಕಲಾವಿದರಾಗಿ ಗುರ್ತಿಸಿ ಕೊಂಡಿದ್ದಾರೆ. `ಅಪ್ಪ ನನ್ನ ಹೊಡೆಯಬೇಡಪ್ಪ’ ಎಂಬ ಶಿಕ್ಷಣ ಇಲಾಖೆಯಡಿ ಪ್ರದರ್ಶಿಸಿದ ಬೀದಿ ನಾಟಕ ತುಂಬ ಹೃದಯ ಸ್ಪರ್ಶಿ ರೂಪಕವಾಗಿ ನಡೆಸಿಕೊಟ್ಟಿದ್ದಾರೆ. ಅಷ್ಟೇಯಲ್ಲದೆ ಹಲವಾರು ಬೀದಿ ನಾಟಕಗಳನ್ನು ಬರೆದು ಪ್ರದರ್ಶನ ಮಾಡಿದ ಇವರು ನೂರಾರು ಕವನ, ಲೇಖನ, ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕಲೆ ಸಾಹಿತ್ಯ ಸಾಧನೆಗೆ ಹುಮನಾಬಾದ, ಬೀದರ ಸೇರಿದಂತೆ ಮೊದಲಾದ ಕಡೆಯ ಸಂಘ ಸಂಸ್ಥೆಯವರ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ವಿಜಯಕುಮಾರ ಚಟ್ಟಿ
ಸೃಜನಶೀಲ ಹವ್ಯಾಸಿ ಬರಹಗಾರರಾದ ವಿಜಯಕುಮಾರ ಚಟ್ಟಿಯವರು `ವಿಚಂಚೆ’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದಾರೆ. ಮತ್ತು `ಶ್ರೀವಿಜಯಾನಂದ’ ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಬೀದರ ಜಿಲ್ಲೆ ಹುಮನಾಬಾದಿನ ಚಂದ್ರಶೇಖರ ಚಟ್ಟಿ ಮತ್ತು ಜಯಶ್ರೀ ದಂಪತಿಗಳಿಗೆ ದಿನಾಂಕ-೧೧-೭-೧೯೭೪ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವಿಧರರಾದ ಇವರು ಬೋಧಿವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ,ಹನಿಗವನ ಲೇಖನಗಳನ್ನು ಬರೆದಿದ್ದಾರೆ. ಅವು ಕರ್ಮವೀರ,ಸಂಯುಕ್ತ ಕರ್ನಾಟಕ,ವಿಜಯವಾಣಿ ಈ ಭಾನುವಾರ, ಜನಪದ ಮುಂತಾದ ಪತ್ರಿಕೆಯಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಮತ್ತು ಇವರು ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನೆಯು ಮಾಡಿದ್ದಾರೆ. ಇವರ ಕವನ ಲೇಖನ ಹನಿಗವನ ಸಂಕಲನಗಳು ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ.ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಡಾ. ಐಶ್ವರಿ ಶಂಭುಶAಕರ
ಉದಯೋನ್ಮುಖ ಮಹಿಳಾ ಲೇಖಕಿಯರಾಗಿ ಸೃಜಮಶೀಲ ಬರಹಗಳನ್ನು ಬರೆದು ಗುರುತಿಸಿಕೊಂಡವರೆAದರೆ ಡಾ. ಐಶ್ವರಿ ಶಂಭುಶAಕರ. ಇವರು ಬೀದರ ಜಿಲ್ಲೆ ಹುಮನಾಬಾದಿನ ರಾಮಚಂದ್ರಪ್ಪ ವೀರಪ್ಪನವರ ಓಣಿಯ ಶಿವರಾಯ ಮತ್ತು ತುಳಸಮ್ಮರ ದಂಪತಿಗಳಿಗೆ ದಿನಾಂಕ ೧೫-೧-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ.ಪದವಿಧರರಾದ ಇವರು ಹುಮನಾಬಾದಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕತೆ ಕವನ,ಲೇಖನ ಮೊದಲಾದ ಬರಹಗಳು ಬರೆದಿದ್ದಾರೆ. .ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಹೈದ್ರಾಬಾದ ಕರ್ನಾಟಕ ಪ್ರಕಟಿತ ಮಹಿಳಾ ಸಂಶೋಧನೆ, ಬೀದರ ಜಿಲ್ಲೆಯ ದಲಿತ ತತ್ವಪದಕಾರರು, ಹಾಗೂ `ತತ್ವ ಪದ ಸಾಹಿತ್ಯ’ ಕುರಿತ ಇವರ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಮತ್ತು ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಕಸಾಪ ಸಾಹಿತ್ಯ ಸಮ್ಮೇಳನ ಹಾಗೂ ವಿವಿಧ ಕನ್ನಡ ಪರ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿದ್ದಾರೆ.
ಚನ್ನಪ್ಪ ಸಂಗೂಳಗಿ
ಉದಯೋನ್ಮುಖ ಯುವ ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಲೇಖಕರೆಂದರೆ ಚನ್ನಪ್ಪ ಸಂಗೂಳಗಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಗಣಪತರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೫-೧೯೭೭ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ೧೯೯೬ರಿಂದ ಬೀದರದ ಚಿದಂಬರ ಆಶ್ರಮ ಸಂಸ್ಥೆಯ ಎನ್.ಕೆ.ಜೆ.ಆಯುರ್ವೇದಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ,ಕವನ,ಚುಟುಕು, ಲೇಖನ,ಹನಿಗವನಗಳ ರಚನೆಯಲ್ಲಿ ತೊಡಗಿ `ಪ್ರೇಮ ಕಾರಂಜಿ’ ಎಂಬ ಕವನ ಸಂಕಲನ ಮತ್ತು `ನೆನಪಿನ ಅಂಗಳ’ ಎಂಬ ಕಥಾ ಸಂಕಲನ ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಬೆಂಗಳೂರಿನ ಸ್ವರಾಜ ಪತ್ರಿಕೆಯ ಜಿಲ್ಲಾ ವರದಿಗಾರರಾಗಿಯು ಸೇವೆ ಸಲ್ಲಿಸಿದ್ದು ಆ ಪತ್ರಿಕೆ ಸೇರಿದಂತೆ ವಚನ ಕ್ರಾಂತಿ, ಪಬ್ಲಿಕ್ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಅಖಿಲ ಸಾಹಿತ್ಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಧರಿನಾಡು ಕನ್ನಡ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಅಷ್ಟೇಯಲ್ಲದೆ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಲ್ಯಾಣ ಕರ್ನಾಟಕ ವಿಭಾಗಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ಸಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ವಿವಿಧ ಕನ್ನಡ ಪರ ಸಂಘ ಸಂಸ್ಥೆಯವರು ಸೇವಾ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಆರೂಢ ಪ್ರಶಸ್ತಿ, ಚುಟುಕು ಮಂದಾರ ರತ್ನ ಪ್ರಶಸ್ತಿ, ಚುಟುಕು ಚಂದ್ರಿಕೆ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಅನುರಾಧ ಕೆ.ಪೊದ್ದಾರ
ಎಲೆಮರೆಯ ಕಾಯಿಯಂತೆ ಉಳಿದು ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಉದಯೋನ್ಮುಖ ಲೇಖಕಿಯೆಂದರೆ ಅನುರಾಧ ಕೆ.ಪೊದ್ದಾರ . ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಕಂದಗೂಳ ಗ್ರಾಮದ ಗೋಪಾಳ ರಾವ ಕುಲಕರ್ಣಿ ಮತ್ತು ಶೈಲಜಾ ಕುಲಕರ್ಣಿ ದಂಪತಿಗಳಿಗೆ ದಿನಾಂಕ ೨೭-೧೦-೧೯೭೮ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿಎಡ್.ಪದವಿಧರರಾದ ಇವರು ಹುಮನಾಬಾದಿನ ಶ್ರೀ ಕಾಳೂರ ಲಿಂಗೇಶ್ವರ (ಸಿ.ಬಿ.ಎಸ್.ಸಿ) ಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿಯನ್ನು ಹೊಂದಿದ ಇವರು ವಿಶೇಷವಾಗಿ ಕಾವ್ಯ ರಚನೆ ಮಾಡುವುದರಲ್ಲಿ ತೊಡಗಿ ನೂರಾರು ಕವನ, ಆಧುನಿಕ ವಚನ ಲೇಖನಗಳನ್ನು ಬರೆದಿದ್ದಾರೆ. ಇವರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರತಿನಿಧಿಕ ಕವನ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಸದ್ಯ ಇವರು ಕವನ ಸಂಕಲನವೊAದು ಪ್ರಕಟಿಸುವ ತಯಾರಿಯಲ್ಲಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನದಲ್ಲಿಯು ಪಾಲ್ಗೊಂಡು ತಮ್ಮ ಕವನಗಳ ವಾಚನ ಮಾಡಿದ್ದಾರೆ. ಆದ್ದರಿಂದ ಇವರಿಗೆ ವಿವಿಧ ಸಂಘ ಸಂಸ್ಥೆಯವರು ಇವರ ಕಾವ್ಯ ಕೃಷಿಯನ್ನು ಕಂಡು ಹಲವು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಓಂಕಾರ ಪಾಟೀಲ್
ಹವ್ಯಾಸಿ ಬರಹಗಾರರಾದ ಓಂಕಾರ ಪಾಟೀಲ್. ರವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಬಸವರಾಜ ಮತ್ತು ಪ್ರಭಾವತಿ ದಂಪತಿಗಳಿಗೆ ದಿನಾಂಕ ೨೫-೧೧-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಪದವೀಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ , ಲೇಖನ, ಹನಿಗವನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಕಲೆ, ಸಾಹಿತ್ಯದೊಂದಿಗೆ ಸಾಮಾಜಿಕ, ರಾಜಕೀಯವಾಗಿ ಗುರ್ತಿಸಿಕೊಂಡಿರುವ ಇವರು ಬೀದರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮತ್ತು ಚಕೋರ ಕವಿ ಕಾವ್ಯ ವೇದಿಕೆಯ ಪ್ರತಿನಿಧಿಯಾಗಿ. ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಇವರಿಗೆ ಕಸಾಪದ ವತಿಯಿಂದ ಬೆಳ್ಳಿ ಗೌರವ ಸನ್ಮಾನ ಮತ್ತು ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾಸರಗೋಡು ಸಾಹಿತ್ಯ ವೇದಿಕೆಯಿಂದ ಕಾವ್ಯ ಶಿಖಾಮಣಿ, ನೈಜದೀಪ ಸಾಹಿತ್ಯ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಜಗನ್ನಾಥ ಬೇಂದ್ರೆ
ಕವಿ ಕಲಾವಿದರು ಹಾಗೂ ಹವ್ಯಾಸಿ ಬರಹರಾಗಿ ಗುರ್ತಿಸಿಕೊಂಡಿರುವ ಇವರು ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದ ಸಂಬಣ್ಣ ಮತ್ತು ಶಾಂತಾಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ್ದಾರೆ. ಎಂ.ಎ.ಕನ್ನಡ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಮಂಠಾಳ ಪ್ರೌಢಶಾಲಾ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವರಚಿತ ಹಾಡು ಪದ್ಯಗಳನ್ನು ಬರೆದು ಹಾಡುವ ಆಕಾಶವಾಣಿ ಕಲಾವಿದರಾಗಿ ಹೆಸರು ವಾಸಿಯಾಗಿದ್ದಾರೆ.ಇವರು ಕಲಬುರಗಿ ಆಕಾಶವಾಣಿಯಿಂದ ಅನೇಕ ಭಾವ ಗೀತೆ, ಭಕ್ತಿ ಗೀತೆಗಳನ್ನು ಹಾಡಿ ಕೇಳುಗರ ಮನರಂಜಿಸಿದ್ದಾರೆ. ಇವರಿಗೆ ೨೦೦೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ, ಸಂಗೀತ ಶ್ರೀ , ಬಸವ ಬೆಳಗು, ಕನ್ನಡ ಸೇವಾ ರತ್ನ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಗೀತಾ ರೆಡ್ಡಿ
ಉದಯೋನ್ಮುಖ ಯುವ ಹವ್ಯಾಸಿ ಬರಹಗಾರ್ತಿಯೆಂದರೆ ಗೀತಾ ರೆಡ್ಡಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಘಾಟಬೋರಾಳ ಗ್ರಾಮದ ಹನಮಂತರೆಡ್ಡಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೬-೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ ನಿಯಂತ್ರಣ ಘಟಕದ ಆಪ್ತ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾದ ಇವರು ಕವನ,ಲೇಖನ, ಆಧುನಿಕ ವಚನ, ಮೊದಲಾದವು ಬರೆದಿದ್ದು ಅವು ಬೆಳಗಾವಿಯ ಹಸಿರು ಕ್ರಾಂತಿ ಪತ್ರಿಕೆ ಸೇರಿದಂತೆ ಮೊದಲಾದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಇವರು ಹಲವಾರು ಕವಿಗೋಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ವೃತ್ತಿ ಬದುಕಿನೊಂದಿಗೆ ವೈದ್ಯಕೀಯ ಲೇಖನಗಳು, ಹಾಗೂ ಆಹಾರ ಮತ್ತು ಆರೋಗ್ಯದ ಕುರಿತು ಮತ್ತು ದಾಂಪತ್ಯ ಜೀವನಕ್ಕೆ ಸಂಬAಧಿಸಿದ ಸ್ವಚ್ಚತೆಯ ಅರಿವು ಮೂಡಿಸುವ ಲೇಖನ, ಕವನ, ಚುಟುಕು, ಹನಿಗವನ ಸೇರಿದಂತೆ ಮೊದಲಾದ ಬರಹಗಳು ಬರೆಯುತ್ತಿದ್ದಾರೆ.
ಪ್ರದೀಪರೆಡ್ಡಿ ಚಿನಕೇರಾ
ಹೊರ ನಾಡಿನಲ್ಲಿದ್ದುಕೊಂಡು ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಬರಹಗಾರರೆಂದರೆ ಪ್ರದೀಪರೆಡ್ಡಿ ಚಿನಕೇರಾ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೧೨.-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಹೈದ್ರಾಬಾದನ ಕಂಪನಿಯೊAದರ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ,ಚುಟುಕು, ಲೇಖನ ಬರಹಗಳು ಬರೆದಿದ್ದು ಅವು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಯರಬಾಗಿನಲ್ಲಿ ಶಾಯಿರೆಡ್ಡಿ ಸಾಹಿತ್ಯ ಬಳಗವನ್ನು ಸ್ಥಾಪಿಸಿ ಅದರ ಮೂಲಕ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುವುದರೊಂದಿಗೆ ಸಹೋದರ ದಯಾನಂದ ರೆಡ್ಡಿಯವರು ಪ್ರಾರಂಭಿಸಿದ `ಸತ್ಯ ಮಾತು’ ಎಂಬ ಮಾಸ ಪತ್ರಿಕೆಯ ಪ್ರಸಾರಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಸಿರಿಗನ್ನಡ ವೇದಿಕೆಯಿಂದ ಕನ್ನಡ ಕಾವ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಡಾ. ರಾಜಶೇಖರ ಹೂಗಾರ
ಉದಯೋನ್ಮುಖ ಹವ್ಯಾಸಿ ಬರಹಗಾರರೆಂದರೆ ಡಾ.ರಾಜಶೇಖರ ಹೂಗಾರ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಶಿವರಾಜ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೮ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದಿನ ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ,ಲೇಖನ,ಚುಟುಕು, ಹನಿಗವನ, ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಮತ್ತು `ಶ್ರೀ ರಂಜಾನ್ ದರ್ಗಾ ರವರ ಸಾಹಿತ್ಯ ಒಂದು ಅವಲೋಕನ’ ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ರಂಜಾನ್ ದರ್ಗಾ ರವರ ಕಾವ್ಯಾವಲೋಕನ’ ಎಂಬ ಒಂದು ವಿಮರ್ಶಾ ಕೃತಿಯು ಬರೆದಿದ್ದಾರೆ. ಹೀಗೆ ಇವರು ತಮ್ಮ ಸಾಹಿತ್ಯ ರಚನೆಯೊಂದಿಗೆ ಹುಮನಾಬಾದ ತಾಲೂಕಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬೇಲೂರಿನ ಉರಿಲಿಂಗ ಪೆದ್ದಿ ಮಠ, ಹಾಗೂ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದಿಂದ, ಮತ್ತು ಕಸಾಪ, ದಸಾಪದ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ರೋಹಿಣಿ ಬಿರಾದಾರ
ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಹವ್ಯಾಸಿ ಬರಹಗಾರ್ತಿ ಹಾಗೂ ಯುವ ಕವಯತ್ರಿಯೆಂದರೆ ರೋಹಿಣಿ ಬಿರಾದಾರ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಶ್ರೀ ಚಂದ್ರಕಾAತ ಮತ್ತು ಜೈ ಸುಧಾ ದಂಪತಿಗಳಿಗೆ ದಿನಾಂಕ ೨೭-೪-೨೦೦೧ ರಲ್ಲಿ ಜನಿಸಿದ್ದಾರೆ. ಬಿ.ಕಾಂ. ಪದವಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಇವರು ವಿಶೇಷವಾಗಿ ಕಾವ್ಯ ರಚನೆಯಲ್ಲಿ ಹೆಚ್ಚು ಆಸಕ್ತರಾಗಿ ಎರಡು ನೂರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಹಾಗೂ ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಕವನ ವಾಚನೆ ಮಾಡಿದ್ದಾರೆ. ಇವರು `ಅಮ್ಮಾ ನೀನಿಲ್ಲದೆ’ ಮತ್ತು `ಮಾತು ಬರಹವಾಗಿದೆ’ ಎಂಬ ಕವನ ಸಂಕಲನಗಳು ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ.
ಹುಲಸೂರ ತಾಲೂಕಿನ ಹವ್ಯಾಸಿ ಬರಹಗಾರರು
ವೀರಶೇಟ್ಟಿ ವಿ. ಮಲ್ಲಶೇಟ್ಟಿ
ಹವ್ಯಾಸಿ ಬರಹಗಾರ ಹಾಗೂ ಪತ್ರಕರ್ತರಾಗಿ ಲೇಖನ, ಬರಹಗಳನ್ನು ಬರೆಯುತ್ತಿರುವ ಬರಹಗಾರರೆಂದರೆ ವೀರಶೆಟ್ಟಿ. ವಿ. ಮಲಶೆಟ್ಟಿ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ವೈಜಿನಾಥ ಮತ್ತು ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧-೧೧-೧೯೬೬ರಲ್ಲಿ ಜನಿಸಿದ್ದಾರೆ. ಪಿ.ಯುಸಿ ವರೆಗೆ ಅಧ್ಯಯನ ಮಾಡಿದ ಇವರು ಕರ್ನಾಟಕ ಸಂಧ್ಯಕಾಲ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪತ್ರಿಕಾ ವರದಿಗಾರರಾದ ನಂತರ ಕೆಲ ಲೇಖನ ಬರಹಗಳನ್ನು ಬರೆದಿದ್ದು ಅವು ಕರ್ನಾಟಕ ಸಂಧ್ಯಕಾಲ `ಮಾಹಾಕಯಸ, ಕ್ರಾಂತಿ, ಭಾರತ ವೈಭವ, ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಇವರ ಪತ್ರಿಕಾ ರಂಗ ಮತ್ತು ಸಾಹಿತ್ಯ ಸಾಧನೆಗೆ ಬಸವಕಲ್ಯಾಣ ತಾಲೂಕಾ ಆಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ, ಹಾರಕೂಡ ಶ್ರೀಗಳಿಂದ `ಶ್ರೀ ಚನ್ನ ರತ್ನ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬಸವಕಲ್ಯಾಣ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬಸವಕಲ್ಯಾಣದಲ್ಲಿ ವಾಸವಾಗಿದ್ದು , ತಮ್ಮ ವೃತ್ತಿಯೊಂದಿಗೆ ಬರವಣಿಗೆಯನ್ನು ಮುಂದುವರೆಸಿದ್ದಾರೆ.
ಪುಷ್ಪಾವತಿ ಚಿಕುರ್ತೆ
ಉದಯೋನ್ಮಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಸಾಹಿತ್ಯ ರಚನೆ ಮಾಡುತ್ತಿರುವ ಕವಯತ್ರಿಯೆಂದರೆ ಪುಷ್ಪಾವತಿ ಚಿಕುರ್ತೆ. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಖತಗಾಂವ ಗ್ರಾಮದ ಘಾಳೇಪ್ಪಾ ಮತ್ತು ಶಾಂತಮ್ಮಾ ದಂಪತಿಗಳಿಗೆ ದಿನಾಂಕ ೨೦-೭-೧೯೬೯ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಗೋರ್ಟಾ (ಬಿ) ಗ್ರಾಮದ ಅಶೋಕ ಚಿಕುರ್ತೆಯವರ ಧರ್ಮಪತ್ನಿಯಾಗಿದ್ದಾರೆ. ೧೯೯೪ರಲ್ಲಿ ಡೊಣಗಾಂವ(ಎ) ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ನಂತರ ಬಡ್ತಿ ಹೊಂದಿ ಸದ್ಯ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ,ಕವನ,ಲೇಖನ, ಹನಿಗವನ ಮೊದಲಾದವು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಕವನ ಸಂಕಲನ, ಸ್ಮರಣೆ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. `ಜೀವನ ವಿಕಾಸದಲ್ಲಿ ಅನಕ್ಷರಸ್ಥರ ಗೋಳು’ `ಅಕ್ಕರೆಯ ಅಕ್ಕ’ `ಶಿವಾ-ರೇಖಾ’ ಇವು ಅವರ ಪ್ರಮುಖ ಕವನಗಳಾಗಿವೆ. ಇವರಿಗೆ ೨೦೦೩ರಲ್ಲಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ ಸದ್ಯ ಇವರು ಗೋರ್ಟಾ (ಬಿ) ಗ್ರಾಮದ ನಿವಾಸಿಯಾಗಿ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ರೂಪಾ ಗಣೇಶ ಗುಡ್ಡಾ
ಹವ್ಯಾಸಿ ಬರಹಗಾರರಾಗಿ ಕಾವ್ಯ ರಚಿಸುತ್ತಿರುವ ಕವಯತ್ರಿಯೆಂದರೆ ರೂಪ ಗಣೇಶ ಗುಡ್ಡಾ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬೇಲೂರು ಗ್ರಾಮದ ಕಲ್ಲಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೧೦-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಸ್ನಾತಕೋತ್ತರ ಪದವೀಧರರಾದ ಇವರು ಬೀದರ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕವನ, ಲೇಖನ, ಹನಿಗವನ, ಚುಟುಕು, ಪ್ರಬಂಧ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯು ಪ್ರಕಟ, ಪ್ರಸಾರವಾಗಿವೆ. ಅಷ್ಟೇಯಲ್ಲದೆ ಹಲವಾರು ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಂಘ ಸಂಸ್ಥೆಗಳಿAದ ಸಾಕಷ್ಟು ಸಲ ಸತ್ಕರಿಸಿ ಗೌರವಿಸಲಾಗಿದೆ.
ಡಾ.ಭೀಮಾಶಂಕರ ಬಿರಾದಾರ
ಹವ್ಯಾಸಿ ಬರಹಗಾರ, ಯುವ ವಿಮರ್ಶಕರಾದ ಡಾ. ಭೀಮಾಶಂಕರ ಬಿರಾದಾರ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಧೂಳಪ್ಪಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವೀಧರರಾಗಿ ಬಸವಕಲ್ಯಾಣದ ಖಾಸಗಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಸಾಮಾಜಿಕ ಕನ್ನಡ ಸಾಹಿತ್ಯ ವಿಮರ್ಶೆಯ ಗ್ರಹಿಕೆ’ ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಹನಿಗವನ, ಪ್ರಬಂಧ, ಸಂಶೋಧನೆ, ವಿಮರ್ಶೆ, ಮೊದಲಾದವು ಬರೆದಿದ್ದಾರೆ. ಮತ್ತು ಮಯೂರ, ವಿಜಯ ಕರ್ನಾಟಕ, ವಿಜಯವಾಣಿ, ಸಂಗತ, ನ್ಯಾಯಪಥ, ಅರಹು-ಕುರುಹು,ಏನ್ ಸುದ್ಧ, ಬುಕ್ ಬ್ರಹ್ಮ ಮೊದಲಾದ ಅಂತರಜಾಲ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ಅನೇಕ ಕನ್ನಡಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ಬಸವಕಲ್ಯಾಣದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕರಾಗಿ, ಕಸಾಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೀರ್ತಿಲತಾ ಹೊಸ್ಸಾಳೆ
ಉದಯೋನ್ಮಖ ಬರಹಗಾರ್ತಿಯರಲ್ಲಿ ಒಬ್ಬರಾಗಿ ಸೃಜನಶೀಲ ಬರಹಗಳನ್ನು ಬರೆಯುತ್ತಿರುವ ಲೇಖಕಿಯೆಂದರೆ ಕೀರ್ತಿಲತಾ ಹೊಸ್ಸಾಳೆ. ಇವರು ಬೀದರ ಜಿಲ್ಲೆ ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ಈರಣ್ಣಾ ಮತ್ತು ಸರಸ್ವತಿ ದಂಪತಿಗಳಿಗೆ ೧೫-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರದ ಕುಂಬಾರವಾಡ ಕ್ಷೇತ್ರದ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದ ರಚನೆಯ ಗೀಳು ಬೆಳೆಸಿಕೊಂಡು ಕವಿತೆ, ಲೇಖನ, ಚುಟುಕು ಮೊದಲಾದ ಬರಹಗಳು ಬರೆದಿದ್ದಾರೆ. ಮತ್ತು ೨೦೦ಕಿಂತಲೂ ಹೆಚ್ಚು ಕವಿತೆಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ನಾಡಿನ ಹಲವಾರು ಕವಿಗೊಷ್ಠಿಗಳಲ್ಲಿ ಕವನ ವಾಚನೆಯು ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅಷ್ಟೇಯಲ್ಲದೆ ಇವರ ಕವಿತೆಗಳಿಗೆ ವಿವಿಧ ಕಡೆಯಲ್ಲಿ ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನವು ಲಭಿಸಿವೆ. ಮತ್ತು ೨೦೧೮ರಲ್ಲಿ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇವರಿಗೆ ಸತ್ಕರಿಸಲಾಗಿದೆ. ಇವರು ಬರೆದ ಕೆಲ ಕವನ ಸಂಕಲನಗಳು ಮುದ್ರಣದ ಹಂತದಲ್ಲಿವೆ.
ದೇವಿAದ್ರ ವೀ. ಬರಗಾಲೆ
ಉದಯೋನ್ಮುಖ ಯುವ ಬರಹಗಾರ ದೇವಿಂದ್ರ ವೀ.ಬರಗಾಲೆ ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ವೀರಣ್ಣ ಮತ್ತು ಚೆನ್ನಮ್ಮ ದಂಪತಿಗಳಿಗೆ ದಿನಾಂಕ ೪-೭-೧೯೮೦ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ೨೦೦೬ರಲ್ಲಿ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿ, ನಂತರ ೨೦೨೦ರಿಂದ ಕಲಬುರಗಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲೆಕ್ಕ ಅಧಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಕತೆ, ಕವನ, ಲೇಖನ, ಹನಿಗವನ, ಪ್ರಬಂಧ, ಆಧುನಿಕ ವಚನ ಮೊದಲಾದವು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿ ಕೊಂಡಿದ್ದಾರೆ. ಇವರ ಬರಹಗಳು ತುಷಾರ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ೨೦೧೨ರಿಂದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ೫೦ಕ್ಕೂ ಹೆಚ್ಚು ಉಪನ್ಯಾಸ ಕಾರ್ಯಕ್ರಮಗಳು, ೨ ನಾಟಕ ಪ್ರದರ್ಶನ, ೨ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಾಡುತ್ತಿದ್ದಾರೆ. ಮತ್ತು ಬಸವಕಲ್ಯಾಣ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ , ಕಸಾಪದ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಜಗದೇವಿ ಡಿ.ಜವಳಗಿಕರ್
ಉದಯೋನ್ಮುಖ ಕವಯತ್ರಿಯಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಲೇಖಕಿಯೆಂದರೆ ಜಗದೇವಿ ಡಿ.ಜವಳಗಿಕರ್ ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ರಾಮಶೆಟ್ಟಿ ಮತ್ತು ಶಾರದಾಬಾಯಿ ದಂಪತಿಗಳಿಗೆ ದಿನಾಂಕ ೧-೧೨-೧೯೮೧ರಂದು ಜನ್ಮ ತಳೆದು ಬಿ.ಎ.ಬಿ.ಎಡ್.ಮತ್ತು ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ವಿವಿಧ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿಯು ಹಲವಾರು ಪ್ರಕಾರದ ಬರವಣಿಗೆಯಲ್ಲಿಯು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಇವರು ಬರೆದ ಕವಿತೆ, ಚುಟುಕು, ಲೇಖನಗಳನ್ನು ನಾಡಿನ ವಿಜಯವಾಣಿ ಸೇರಿದಂತೆ ವಿವಿಧ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಕನ್ನಡ ಭಾಷಾ ಸಾಮರ್ಥ್ಯಗೆ ೨೦೧೩ರಲ್ಲಿ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರ ಸಾಹಿತ್ಯ ರಚನೆಗೆ ವಿವಿಧ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬರೆದ ಕವಿತೆಗಳ ಪುಸ್ತಕವೊಂದು ಸದ್ಯ ಮುದ್ರಣದ ಹಂತದಲ್ಲಿದೆ. ಜಗದೇವಿಯವರು ರಾಜೇಶ್ವರ ಗ್ರಾಮದ ದತ್ತಾತ್ರಿ ಜವಳಗಿಕರ್ ಅವರೊಂದಿಗೆ ವಿವಾಹವಾಗಿ ಬಸವಕಲ್ಯಾಣದ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿ ಬಸವಕಲ್ಯಾಣದಲ್ಲಿ ನೆಲೆಸಿದ್ದಾರೆ.
ಕಮಲನಗರ ತಾಲೂಕಿನ ಹವ್ಯಾಸಿ ಬರಹಗಾರರು
ಶಿವಾಜಿರಾವ ಕಾಳೆ
ಕರ್ನಾಟಕ- ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಹುಟ್ಟಿ ಮಾರಾಠಿ, ಹಿಂದಿ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಎಲೆ ಮರೆಯ ಕಾಯಿಯಂತೆ ಉಳಿದಿರುವ ಲೇಖಕರೆಂದರೆ ಶಿವಾಜಿರಾವ ಕಾಳೆ. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಹೊಳಸಮುದ್ರ ಗ್ರಾಮದ ಯಾದವರಾವ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೧-೧೯೪೮ ರಲ್ಲಿ ಜನಿಸಿದ್ದಾರೆ. ಇವರು ಮರಾಠಿ ಮಾತೃಭಾಷೆಯಲ್ಲಿ ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿ, ಮರಾಠಿ ಮತ್ತು ಹಿಂದಿಯಲ್ಲಿ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ಹಿಂದಿಯಲ್ಲಿ `ಬೀದರ ಕಾ ಇತಿಹಾಸ’ `ಬಿಜಲಿ ಕಿ ಕರಾಮತ್’ `ಸ್ಟೇಟ್ ಕಾಂಗ್ರೆಸ್ ಹೈದರಾಬಾದ್’ ಎಂಬ ಐತಿಹಾಸಿಕ ಕೃತಿಗಳು, `ಸತಿ ಜಾತೆ ಹೈ ಕ್ಯಾ, ಸತಿ ದಿಲಾತೆ ಹೈ’ `ಜಾನೆ ಹೇ ರಾಮಘಾಟ್’ ಎಂಬ ಕವನ ಸಂಕಲನಗಳು ಬರೆದಿದ್ದಾರೆ.
`ಉಗಡಾ ಬಾಳಾ’ `ಮಾಹೇರ್ ಮರಾಠಿ’ `ಆಯಿ ಹಂಬರಡಾ’ `ಆವಾ ಚಾಲೇಲಿ ಪಂಡರಾಪುರ’ `ಮೀ ತಯಾರ್ ಆಯೆ’. `ಲಗ್ನಾ ಚೆ ಪಂಚಿನ್ ವರ್ಷಾ’. `ಬದಲ್ ಚಾಲತ್ ನಾಯಿ’ `ಭೂಮಿಗೀತ ಕ್ರಾಂತಿ ಕಾರಕ್ ಹೈದರಾಬಾದ್ ಸತ್ಯಾಗ್ರಹ’ `ಕಾಗದಾಳಿ ನ್ಯಾಯ ಸಾಬಡ್ಲಾ ಹಾ ದೇಹ’ `ಸಾಹಸಿ ವೀರ ಹೋಳಸಮುದ್ರ ಚೆ’ `ಗುರು ಮಹಿವi ‘ ಇವು ಅವರ ಮರಾಠಿ ಕವನ ಸಂಕಲನಗಳಾಗಿವೆ . ಇವರ ಬರೆಹಗಳು ಹೈದರಾಬಾದಿನ `ಸ್ವಾತಂತ್ರ‍್ಯ ವಾರ್ತೆ’ ಎಂಬ ಹಿಂದಿ ವಾರ ಪತ್ರಿಕೆ, `ಬೀದರ ಕಿ ಅವಾಜ್’ ಎಂಬ ದೈನಿಕದಲ್ಲಿ ಪ್ರಕಟವಾಗಿವೆ. ಮತ್ತು ಇವರ ಮರಾಠಿ ಬರಹಗಳು ಪುಣೆಯಿಂದ ಪ್ರಕಟವಾಗುವ `ಪುಣ್ಯ ನಗರಿ ‘ ‘ ಲಾತೂರದ `ಏಕ್ ಜೂಟ್’ ಪತ್ರಿಕೆಗಳಲ್ಲಿÀ ಪ್ರಕಟವಾಗಿವೆ.
ಇವರಿಗೆ ೨೦೧೦ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತರವರು ಬೀದರ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಹಾಗೂ ನಿಜಾಮ ಸರ್ಕಾರದ ರಜಾಕಾರರ ಹಾವಳಿಯಲ್ಲಿ ನಡೆದ ಬಾಳುರು ಹತ್ಯಾಕಾಂಡದ ಕುರಿತು ಮರಾಠಿಯಲ್ಲಿ ಪುಸ್ತಕ ಬರೆದಿದ್ದರಿಂದ ಅಂದಿನ ಮಹಾರಾಷ್ಟ್ರ ಮುಖ್ಯ ಮಂತ್ರಿ ವಿಲಾಸರಾವ ದೇಶಮುಖ ರವರು ಇವರ ಸಾಹಿತ್ಯಕ್ಕೆ ಮೆಚ್ಚಿ ಸತ್ಕರಿಸಿದ್ದಾರೆ. ಲೇಖಕರು ಕೆಲವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮತ್ತು ಸಾಹಿತಿಯಾಗಿ, ಮಾಡಿದ ಕಾರ್ಯ ಸಾಧನೆ ಕಂಡು ಮಾಜಿ ಸಚಿವ ಗುರುಪಾದಪ್ಪಾ ನಾಗಮಾರಪಳ್ಳಿಯವರು ಇವರಿಗೆ ಪ್ರೀತಿಯಿಂದ `ಸುಧಾಮ’ ಎಂದು ನಾಮಕರಣ ಮಾಡಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಶ್ರೀದೇವಿ ರಾಜಕುಮಾರ
ಹವ್ಯಾಸಿ ಉದಯೋನ್ಮುಖ ಬರಹಗಾರ್ತಿ ಶ್ರೀದೇವಿ ರಾಜಕುಮಾರ ಇವರು ಔರಾದ ತಾಲೂಕಿನ ವಡಗಾಂವದ ಗುರುನಾಥ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎ. ಬಿ.ಇಡಿ.ಪದವೀಧರರಾದ ಇವರು ಹೊಳಸಮುದ್ರದ ರಾಜಕುಮಾರ ಖಡ್ಕೆಯವರ ಧರ್ಮಪತ್ನಿಯಾಗಿದ್ದು. ಬೀದರಿನ ಮದರ ತೇರೆಸಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕವನ, ಲೇಖನ, ಹನಿಗವನ ಮೊದಲಾದ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಸತ್ಕಾರಿಸಿ ಗೌರವಿಸಲಾಗಿದೆ.
ಚಿಟಗುಪ್ಪಾ ತಾಲೂಕಿನ ಹವ್ಯಾಸಿ ಬರಹಗಾರರು
ಸಿದ್ರಾಮ ಪಂಡಿತಜಿ
ನಿಜಾಮನ ವಿರುದ್ಧ ಬಂಡಾಯದ ಗೀತೆ ರಚಿಸಿ ಹಾಡಿದ ಕವಿಯೆಂದರೆ ಸಿದ್ರಾಮ ಪಂಡಿತಜಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯ ಲಾಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ೧೯೧೦ರಲ್ಲಿ ಜನಿಸಿದ್ದಾರೆ. ಮೋಡಿ,ಬಾಲಬೇಧ ಮತ್ತು ಹಿಂದಿ ಭಾಷೆ ಅರಿತುಕೊಂಡಿದ್ದರೆAದು ಮತ್ತು ಹಾರ್ಮೋನಿಯಂ ವಾದಕರಾಗಿದ್ದರೆಂದು ತಿಳಿದುಬಂದಿದೆ. ಇವರ ವಿದ್ಯಾರ್ಹತೆ ,ವೃತ್ತಿ, ತಿಳಿದು ಬಂದಿರುವುದಿಲ್ಲ. ಇವರು ನಿಜಾಮರ ವಿರುದ್ಧದ ದಂಗೆಯಲ್ಲಿಯು ಭಾಗವಹಿಸಿದ ಬಂಡಾಯ ಕವಿ ಹೋರಾಟಗಾರರಾಗಿದ್ದು ಇವರ ನಿಧನದ ಬಗ್ಗೆಯೂ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ.
ವೀರಭದ್ರಪ್ಪ ಉಪ್ಪಿನ
ಕವಿ,ಕಲಾವಿದ, ನಾಟಕಕಾರಾಗಿ ಪದ್ಯಗಳನ್ನು ರಚಿಸಿ ಸ್ವತಃ ರಾಗ ಸಂಯೋಜನೆಯೊAದಿಗೆ ಹಾಡಿ ಜನ ಮನ ಸೂರೆಗೊಳಿಸುವ ಕವಿಗಳೆಂದರೆ ವೀರಭದ್ರಪ್ಪ ಉಪ್ಪಿನ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಶರಣಪ್ಪ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಬೀದರದ ಕರ್ನಾಟಕ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ, ಕಛೇರಿಯ ಅಧಿಕ್ಷಕರಾಗಿ, ಮತ್ತು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಹಣಕಾಸು ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಕಲೆ,ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತರಾಗಿದ್ದರಿಂದ ಬೆಳೆದಂತೆ ಪದ್ಯಗಳನ್ನು ಬರೆದು ರಾಗಬದ್ದವಾಗಿ ಹಾಡುವುದು ಹಾಗೂ ಭಾಷಣ, ಲೇಖನ ಪ್ರಬಂಧಗಳನ್ನು ಬರೆದು ಕವಿ,ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ೧೯೯೦ರಿಂದ ನಾಡಿನ ಹಲವಾರು ಕನ್ನಡ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಮತ್ತು ಕಲಬುರಗಿ ಆಕಾಶವಾಣಿಯಿಂದ ಇವರ ಚಿಂತನ, ವೈಚಾರಿಕ ಭಾಷಣ ಬರಹಗಳು ಕೂಡ ಪ್ರಸಾರಗೊಂಡಿವೆ. ಹಾಗೂ `ಸಿಂಹಾಸನ ಖಾಲಿ ಇದೆ, ಜಲ, ಯಮನ ದರ್ಬಾರ್’ ಎಂಬ ನಾಟಕಗಳಲ್ಲಿಯು ಅವರು ನಟಿಸಿದ್ದಾರೆ. ಅಷ್ಟೇಯಲ್ಲದೆ ೧೯೮೯ ಮತ್ತು ೧೯೯೨ರಲ್ಲಿ ಬೀದರದ ರಂಗ ಮಂದಿರದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಉಷಾ ಮಂಗೇಶ್ಕರ್ ರವರಿಂದ ರಸಮಂಜರಿ ಕಾರ್ಯಕ್ರಮವು ಆಯೋಜಿಸಿದ್ದ ಇವರು ಸದ್ಯ ಬೀದರನಲ್ಲಿ ವಾಸವಾಗಿದ್ದು ತಮ್ಮ ಸಾಹಿತ್ಯ ಮತ್ತು ಸಂಗೀತ ಕಾರ್ಯ ಮುಂದುವರೆಸಿದ್ದಾರೆ.
ಡಾ.ಎಸ್.ಎಲ್.ದAಡಿನ್
ವೃತ್ತಿಯಲ್ಲಿ ನಾಟಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಕವಿಗಳಾಗಿ ಗುರ್ತಿಸಿಕೊಂಡವರೆAದರೆ ಡಾ.ಎಸ್.ಎಲ್.ದಂಡಿನ್. ಇವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಲಕ್ಷ್ಮಣ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೧-೬-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ನಾಟಿ ವೈದ್ಯರಾಗಿ, ಸಮಾಜ ಸೇವಕರಾಗಿ ದುಡಿದಿದ್ದಾರೆ.ಮತ್ತು ೧೯೭೭ರಿಂದ ೧೯೮೧ರ ವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ದಲಿತಪರ ಕವನ, ಲೇಖನ, ಚುಟುಕು ಮತ್ತು ಬೀದಿ ನಾಟಕಗಳನ್ನು ರಚಿಸಿದ್ದಾರೆ. ನರಗುಂದದ ಬಂಡಾಯದ ವೇಳೆ ಕೆಲ ನಾಟಕಗಳು ಪ್ರದರ್ಶನ ಮಾಡಿದ್ದಾರೆ.
ರಮೇಶ ಸಲಗರ
ಉದಯೋನ್ಮುಖ ಬರಹಗಾರರ ಬಳಗದಲ್ಲಿ ಎಲೆಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚನೆ ಮಾಡುತ್ತಿರುವ ಲೇಖಕರೆಂದರೆ ರಮೇಶ ಸಲಗರ. ಇವರು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ಚಂದ್ರಶೆಟ್ಟಿ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೬೮ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾಗಿರುವ ಇವರು ಮುಸ್ತರಿಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತಮ್ಮ ವೃತ್ತಿ ಬದುಕಿನೊಂದಿಗೆ ಕತೆ ಕವನ ಲೇಖನ ಚುಟುಕು ರೂಪಕಗಳನ್ನು ಬರೆದಿದ್ದಾರೆ. ಇವರು `ಶರಣ ಸಂಸ್ಕೃತಿ’ ಮತ್ತು `ಕಂದಾಚಾರ’ ಎರಡು ರೂಪಕಗಳನ್ನು ಬರೆದು ನಿರ್ದೇಶಕರಾಗಿ ಬಸವಕಲ್ಯಾಣ ಅನುಭವ ಮಂಟಪದ ಶರಣ ಕಮ್ಮಟದಲ್ಲಿ ಹಾಗೂ ಕೊಡಂಬಲ ಮೊದಲಾದ ಹಳ್ಳಿಗಳಲ್ಲಿ ಪ್ರದರ್ಶಿಸಿದ್ದಾರೆ. ಅವು ಪುಸ್ತಕ ಪ್ರಕಟಿಸುವ ಹಂತದಲ್ಲಿವೆ. ಮತ್ತು ಕವನ ಲೇಖನಗಳು ಕೂಡ ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಹಲವಾರು ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ `ಜನ ಮೆಚ್ಚಿದ ಶಿಕ್ಷಕ’ `ಶಿಕ್ಷಕ ರತ್ನ’ `ಶಿಕ್ಷಣ ಸಿರಿ’ `ಆದರ್ಶ ಶಿಕ್ಷಕ ‘ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರು ನೂತನ ಚಿಟಗುಪ್ಪ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಉತ್ತಮ ವಾಗ್ಮಿಗಳು ಆಗಿದ್ದರಿಂದ ಸಾಕಷ್ಟು ಸಭೆ ಸಮಾರಂಭಗಳಲ್ಲಿಯು ಪಾಲ್ಗೊಂಡು ಉಪನ್ಯಾಸಗಳನ್ನು ನೀಡುತ್ತಾರೆ.
ಓಂಕಾರ ಎನ್. ಮಠಪತಿ
ಯುವ ಬರಹಗಾರ ಕವಿ ಸಾಹಿತಿ ಲೇಖಕ ಪತ್ರಕರ್ತರೆಂದರೆ ಓಂಕಾರ ಮಠಪತಿಯವರು. ಇವರು ಬೀದ?? ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ವೇದಮೂರ್ತಿ ಶ್ರೀ ನಾಗಯ್ಯ ಸ್ವಾಮಿ ಮಠಪತಿ ಮತ್ತು ಸಂಗಮ್ಮ ನಾಗಯ್ಯ ಸ್ವಾಮಿ ಮಠಪತಿ ದಂಪತಿಗಳಿಗೆ ದಿನಾಂಕ ೨೫-.೬-೧೯೭೬ರಲ್ಲಿ ಜನಿಸಿದ್ದಾರೆ. ಡಿ.ಫಾರ್ಮಸಿ, ಎಂ.ಎ ಪತ್ರಿಕೋದ್ಯಮ ಪದವಿಧರರಾದ ಇವರು ಕೆಲ ವರ್ಷ ಸಂಯುಕ್ತ ಕರ್ನಾಟಕ, ಸಂಜೆವಾಣಿ, ಪತ್ರಿಕೆಯ ವರದಿಗಾರರಾಗಿ, ನಂತರ ಸುವರ್ಣ, ಸಮಯ ಚಾನಲ್ ಗಳ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ಬಿ.ಟಿವಿಯ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಇತ್ಯಾದಿ ಬರಹಗಳು ಬರೆದಿದ್ದು ಅವು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಮತ್ತು ಪತ್ರಿಕಾ ರಂಗದ ಸೇವೆಯನ್ನು ಕಂಡು ರಾಜ್ಯದಾದ್ಯಂತ ನೂರಾರು ಪ್ರಶಸ್ತಿ ಪುರಸ್ಕಾರಗಳು ಪಡದಿದ್ದಾರೆ. ತೀರ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಸುದ್ದಿ ವಿಷಯದಲ್ಲಿ ಎಂದೂ ರಾಜಿಮಾಡಿಕೊಂಡಿಲ್ಲ ಎಂಬುದು ಮೆಚ್ಚುವಂತಹದ್ದು. ಯಾವುದೇ ವಿಷಯ ಇದ್ದರೂ ತೀರ ಹರಿತವಾಗಿ ಬರೆದು ಬಿತ್ತರಿಸುತ್ತಿರುವುದು ರಾಜ್ಯದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಸಂಗಮೇಶ ಎನ್.ಜವಾದಿ
ಹವ್ಯಾಸಿ ಬರಹಗಾರರಾಗಿ ವಿವಿಧ ಲೇಖನ ಬರಹಗಳನ್ನು ಬರೆಯುತ್ತಿರುವ ಉದಯೋನ್ಮುಖ ಯುವ ಬರಹಗಾರೆಂದರೆ ಸಂಗಮೇಶ ಎನ್.ಜವಾದಿ. ಬೀದರ ಜಿಲ್ಲೆ ನೂತನ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಹಾಗೂ ಸರಸ್ವತಿ ದಂಪತಿಗಳಿಗೆ ದಿನಾಂಕ ೨-೮-೧೯೮೪ ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಎಸ್ಸಿ. ಎಚ್. ಆರ್.ಎಂ.ಕAಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಆಗ್ರಿ ಪದವಿಧರರಾದ ಇವರು ಕೃಷಿ ಮತ್ತು ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡ ಕವನ ಲೇಖನಗಳನ್ನು ಬರೆಯುತ್ತಿದ್ದಾರೆ. ಮತ್ತು ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ್ದು, ನೂರಾರು ಲೇಖನ ಬರಹಗಳನ್ನು ಬರೆದಿದ್ದು ಅವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಚಿಟಗುಪ್ಪ ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹಾಗೂ ಬೀದರ ಜಿಲ್ಲೆಯ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಲೇಖನಗಳ ಪುಸ್ತಕವು ಸದ್ಯದಲ್ಲಿಯೆ ಪ್ರಕಟಿಸಲಿದ್ದಾರೆ. ಇವರಿಗೆ ರಾಜ್ಯ ಮಟ್ಟದ ವಿವಿಧ ೨೩ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ೮೦ಕ್ಕೂ ಹೆಚ್ಚು ಬಹುಮಾನಗಳು ಲಭಿಸಿವೆ.
ಜ್ಞಾನೇಶ್ವರಿ ಹಳ್ಳಿಖೇಡ
ಉದಯೋನ್ಮುಖ ಯುವ ಬರಹಗಾರ್ತಿಯೆಂದರೆ ಜ್ಞಾನೇಶ್ವರಿ ಹಳ್ಳಿಖೇಡ್. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಮಾಣಿಕಪ್ಪ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧೫-೮-೧೯೯೮ರಲ್ಲಿ ಜನಿಸಿದ್ದಾರೆ. ಬಿ.ಎ.ಎಂ.ಎಸ್ .ಪದವಿ ವಿದ್ಯಾರ್ಥಿನಿಯಾದ ಇವರು ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕಾಲೇಜು ಸೇರಿದ ನಂತರ ಕತೆ, ಕವನ,ಲೇಖನ, ಹನಿಗವನ ರಚನೆಯಲ್ಲಿ ತೊಡಗಿ ವೈದ್ಯ ಸಾಹಿತ್ಯಕ್ಕೆ ಸಂಬAಧಿಸಿದ ಶಾರೀರಿಕ ಸಮಸ್ಯೆ ಮತ್ತು ಆಹಾರ ಪದ್ದತಿಯ ಕುರಿತಾದ ಲೇಖನಗಳು ಮತ್ತು ಸಾಮಾಜಿಕ ಶೋಷಣೆಯ ವಿರುದ್ಧದ ಕವಿತೆಗಳು ಬರೆಯುತ್ತಿದ್ದಾರೆ. ಮತ್ತು `ಭಾವದಲೆ’ ಎಂಬ ಕವನ ಸಂಕಲನವೊAದು ಬರೆದಿದ್ದು ಅದು ಅಪ್ರಕಟಿತವಾಗಿದೆ. ಇವರ ಬರಹಗಳು ಶಿವಮೊಗ್ಗದ `ನಿಮಗಾಗಿ ಆಯುರ್ವೇದ’ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರು ಹಲವಾರು ವಿವಿಧ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಬೀದರ ಜಿಲ್ಲಾ ಹೊರನಾಡ ಹವ್ಯಾಸಿ ಬರಹಗಾರರು
ಡಾ.ಚಂದ್ರಕಾAತ ಮೇತ್ರೆ
ಉದಯೋನ್ಮಖ ಬರಹಗಾರರಾಗಿ ಹೊರನಾಡಿನಲ್ಲಿ ಸಾಹಿತ್ಯ ರಚಿಸಿ ಗುರ್ತಿಸಿಕೊಂಡ ಲೇಖಕರೆಂದರೆ ಡಾ.ಚಂದ್ರಕಾAತ ಮೇತ್ರೆ.. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮದ ಮಾರುತಿ ಮತ್ತು ಪದ್ಮಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ. ಪದವಿಧರರಾದ ಇವರು ಉದಯಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ ಕವನ ಲೇಖನ ಹನಿಗವನ ಪ್ರಬಂಧಗಳನ್ನು ಬರೆಯುವ ಪ್ರವೃತ್ತಿ ಹೊಂದಿದ್ದಾರೆ `ಪಿ.ಕೆ.ಖಂಡೋಬಾ ರವರ ಬದುಕು ಬರಹ ಒಂದು ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ಬಸವಣ್ಣನ ವಚನಗಳಲ್ಲಿ ಆಧ್ಯಾರ ಸ್ಮರಣೆ’ `ಆದರ್ಶ ಶರಣೆ ದುಗ್ಗಾಳೆ, ಪ್ರಸ್ತುತ ಬುಡಕಟ್ಟು ಜನಾಂಗದ ಸ್ಥಿತಿ-ಗತಿ, ಜಾನಪದ ಮತ್ತು ಆಧುನಿಕ ಬದುಕು, ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕತೆ, ಪಿ.ಕೆ.ಖಂಡೋಭಾ ರವರ ಸಂಸ್ಕೃತಿ ಶೋಧ’ ಬಸವಣ್ಣನವರ ಆದರ್ಶ ತತ್ವ, ವಿರಕ್ತ ಸಂಪ್ರದಾಯ ಮೂಲ ಒಂದು ಇಣುಕು ನೋಟ, ರನ್ನ ಮತ್ತು ಗದಾಯುದ್ಧ ಒಂದು ಇಣುಕು ನೋಟ ಇತ್ಯಾದಿ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆಗಳಲ್ಲಿ ಹಾಗೂ ಡಾ.ರಮೇಶ ಮೂಲಗೆಯವರ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ.
ಎಚ್.ಬಿ.ಪ್ರಿಯಾಂಕಾ
ಹೊರನಾಡಿನಲ್ಲಿ ಇದ್ದುಕೊಂಡು ಕವಿತೆ,ಲೇಖನ, ಚುಟುಕು ಆಧುನಿಕ ಕಾವ್ಯ ಮೊದಲಾದ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಉದಯೋನ್ಮುಖ ಕವಯತ್ರಿಯೆಂದರೆ ಎಚ್.ಬಿ.ಪ್ರಿಯಾಂಕಾ .ಇವರು ಮೂಲತಃ ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಎಚ್.ಬಿ.ಜೀತಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೧೭-೧-೧೯೯೧ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಶಿಕ್ಷಣವನ್ನು ಪಡೆದು ಹೈದರಾಬಾದ್ ನಲ್ಲಿ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.ಇವರ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಇದ್ದರು ಕೂಡ ಪ್ರವೃತ್ತಿ ಸಾಹಿತ್ಯ ಕ್ಷೇತ್ರದ ಕಡೆಗೆ ಎಳೆದು ತಂದಿದೆ. ಇವರು ಈಗಾಗಲೇ ಕತೆ, ಕವನ, ಲೇಖನ, ಚುಟುಕು, ಪ್ರಬಂಧ ಮೊದಲಾದ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ .ಹಾಗೂ ಇವರು ತಾಲೂಕು, ಜಿಲ್ಲೆ ,ಮೊದಲಾದ ಕಡೆಗಳಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನವಾಚನವು ಮಾಡಿದ್ದಾರೆ.ಮತ್ತು ಸದ್ಯದಲ್ಲಿಯೇ ಒಂದು ಕವನ ಸಂಕಲನವು ಪ್ರಕಟಿಸುವ ತವಕದಲ್ಲಿದ್ದಾರೆ. ಸದ್ಯ ಇವರು ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಹೊರ ಜಿಲ್ಲೆಗಳಿಂದ ಬಂದ ಹವ್ಯಾಸಿ ಬರಹಗಾರರು
ವೀರಂತರೆಡ್ಡಿ ಜಂಪಾ
ಉದಯೋನ್ಮುಖ ಬರಹಗಾರರಾಗಿ ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಸಾಹಿತಿಯೆಂದರೆ ವೀರಂತರೆಡ್ಡಿ ಜಂಪಾ. ಇವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಗುಂಡಾರೆಡ್ಡಿ ಮತ್ತು ಬಕ್ಕಮ್ಮಾ ದಂಪತಿಗಳಿಗೆ ದಿನಾಂಕ ೫-೭-೧೯೬೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಎಂ.ಎ.ಬಿ.ಎಡ್.ಪದವಿಧರರಾದ ಇವರು ೧೯೮೯ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಹುಮನಾಬಾದ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ ಕವನ ಹನಿಗವನ ಲೇಖನಗಳನ್ನು ಬರೆದಿದ್ದು ,ಅವು ಕೆಲ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ೧೯೮೭ರಲ್ಲಿ ಪಿ.ಯು. ವಿದ್ಯಾರ್ಥಿಯಾಗಿದಾಗ ಬೆಂಗಳೂರಿನ ರಾಜ್ಯ ಮಟ್ಟದ ಪರ-ವಿರೋಧ ಚರ್ಚೆ, ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಸಾಹಿತ್ಯದೊಂದಿಗೆ ಉತ್ತಮ ಸಂಘಟಕರು ಆಗಿರುವ ಇವರು ೨೦೦೧ ರಿಂದ ೨೦೦೪. ೨೦೦೮ ರಿಂದ ೨೦೧೧ ರವರೆಗೆ ಹುಮನಾಬಾದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೨೦೦೫ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಶಿಕ್ಷಕ ರತ್ನ ಪ್ರಶಸ್ತಿ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ, ಹಿಂದಿ ಪ್ರತಿಷ್ಠಾನ ಧಾರವಾಡದಿಂದ ಶಿಕ್ಷಕ ಸಾಹಿತ್ಯ ರತ್ನ ಪ್ರಶಸ್ತಿ, ಹುಮನಾಬಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿ, ಬೀದರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕಾ ರಾಜ್ಯೋತ್ಸವ ಪ್ರಶಸಿ, ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಹುಮನಾಬಾದಿನ ಖಾಯಂ ನಿವಾಸಿಯಾಗಿದ್ದು, ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಡಾ.ಮಹಾನಂದಾ ಮಡಕೆ
ಉದಯೋನ್ಮುಖ ಬರಹಗಾರ್ತಿಯಾಗಿ ಸೃಜನಶೀಲ ಸಾಹಿತ್ಯ ರಚಿಸುತ್ತಿರುವ ಕವಯತ್ರಿಯೆಂದರೆ ಡಾ.ಮಹಾನಂದಾ ಮಡಕೆ. ಇವರು ಕಲಬುರಗಿಯ ಶಿವಶರಣಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೯-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ. ಎಂ.ಫೀಲ್. ಪಿಎಚ್.ಡಿ ಪದವಿಧರರಾದ ಇವರು ಬೀದರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಹನಿಗವನಗಳು ಬರೆದು ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. `ಜಾನಪದ ಮಹಿಳೆ’ `ಪ್ರೊ.ವೀರೇಂದ್ರ ಸಿಂಪಿ’ `ಬೆಳ್ಳಿ ದಾಂಪತ್ಯ.’ ಎಂಬ ಕೃತಿಗಳು ರಚಿಸಿದ್ದು ಅವು ಸದ್ಯ ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಅನೇಕ ಪ್ರಬಂಧಗಳು ಮಂಡಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಿಂದ ಶಿಕ್ಷಣ ಶ್ರೀ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿಗಳು, ಕಮಲಾಪೂರದಿಂದ ಮನುಕುಲ ರತ್ನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಕೆ.ಖಂಡೊಬಾ ಪ್ರಶಸ್ತಿ, ಮತ್ತು ಚಿನ್ನದ ಪದಕ, ಮತ್ತು ಎಂ.ಎ. ಸ್ನಾತಕ್ಕೊತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಇವರು ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ. ಆರ್.ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುತ್ತಿದ್ದಾರೆ.
– ಮಚ್ಚೇಂದ್ರ ಪಿ ಅಣಕಲ್.