ಬ್ರೂಸ್ ಲೀ ಮತ್ತು ಬದುಕಿನ ಪಾಠಗಳು
ನಾವು ಚಿಕ್ಕವರಿದ್ದಾಗ ಕೈ ಎರಡನ್ನು ಮುಷ್ಟಿ ಮಾಡಿ ಕಾಲುಗಳನ್ನು ಹಿಂದೆ ಮುಂದೆ ಮಾಡಿ ಪೋಸ್ ಕೊಟ್ಟು ನಿಂತರೆ ಮನದ ಮುಂದೆ ಬರುತ್ತಿದ್ದ ಒಂದೇ ಮಾತು ಬ್ರೂಸ್ ಲೀ. ಯಾರಾದರೂ ಹೊಡೆದಾಟ ಮಾಡಿಕೊಂಡು ಬಂದರೆ ನಿನ್ನನ್ನು ನೀನು ಬ್ರೂಸ್ಲಿ ಅಂತ ತಿಳ್ಕೊಂಡೆ ಅಂತ ಕೇಳ್ತಾ ಇದ್ರು. ಅಷ್ಟಿತ್ತು ಆತನ ಹವಾ!
ವಿದೇಶಿ ಚಲನಚಿತ್ರ ನಟ ಬ್ರೂಸ್ ಲೀ ಹಾಂಕಾಂಗ್ ಮೂಲದ ಅಮೆರಿಕನ್ ನಟ. ಈತ ನಟಿಸಿದ ಚಿತ್ರಗಳು ಹಲವಾರು. ಮಾರ್ಷಲ್ ಆರ್ಟ್ ನಲ್ಲಿ ಪರಿಣಿತನಾಗಿದ್ದ ಈತ ಜೀತ್ ಕೊನೆ ದೋ ಎಂಬ ಹೈಬ್ರಿಡ್ ಮಾರ್ಷಲ್ ಆರ್ಟ್ ಅನ್ನು ಆ ಕಲೆಗೆ ಇರಬೇಕಾದ ಹಲವಾರು ಶಿಸ್ತುಗಳನ್ನು ಅಳವಡಿಸಿ ಪರಿಚಯಿಸಿದಾತ.70ರ ದಶಕದಲ್ಲಿ ಮಾರ್ಷಲ್ ಆರ್ಟನ್ನು ಚಲನಚಿತ್ರಗಳಲ್ಲಿ ತೋರಿಸುವ ಮೂಲಕ ಈ ಕಲೆಯನ್ನು ಜನಪ್ರಿಯಗೊಳಿಸಿದ.
ತಾನು ಬದುಕಿರುವಷ್ಟು ಕಾಲವೂ ಜನರ ಬಾಯಲ್ಲಿ ದಂತಕತೆಯಾಗಿ ಉಳಿದಿದ್ದ ಬ್ರೂಸ್ಲಿ ಒಂದೊಮ್ಮೆ ತಾನು ಚಲನಚಿತ್ರದಲ್ಲಿ ರಕ್ತವನ್ನು ಕುಡಿದು ತೋರಿಸಿದ್ದನ್ನು ಮತ್ತೆ ತೋರಿಸಲು ಆತನ ಮುಂದೆ ರಕ್ತ ತುಂಬಿದ ಗ್ಲಾಸ್ ಅನ್ನು ತಂದಿಟ್ಟ ಅಭಿಮಾನಿಯೊಬ್ಬರು ಅದನ್ನು ಕುಡಿಯಲು ಕೇಳಿಕೊಂಡಾಗ ಮರು ಮಾತಿಲ್ಲವೇ ಕುಡಿದು ತೋರಿಸಿದ ನಿಷ್ಠ ನಟ.
ಕೇವಲ ಚಲನಚಿತ್ರ ರಂಗದಲ್ಲಿ ಮಾತ್ರವಲ್ಲದೇ ಬ್ರೂಸ್ ಲೀ ಹಲವಾರು ಸ್ಪೂರ್ತಿದಾಯಕ ವಿಷಯಗಳನ್ನು,ಹೇಳಿಕೆಗಳನ್ನು ನೀಡಿದ್ದ. ಆತನ ಹೇಳಿಕೆಗಳು ಹಲವಾರು ಸೂಕ್ಷ್ಮ ಒಳನೋಟಗಳನ್ನು
ಹೊಂದಿದ್ದು ಮಾರ್ಮಿಕವಾಗಿದ್ದವು.
ಅವುಗಳಲ್ಲಿ ಕೆಲವು ಹೀಗಿದೆ .
1. “ಬಿ ವಾಟರ್ ಮೈ ಫ್ರೆಂಡ್, ಎಂಪ್ಟಿ ಯುವರ್ ಮೈಂಡ್, ಬಿ ಫಾರ್ಮಲೆಸ್”
ಮೇಲಿನ ವಾಕ್ಯವು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಅವಶ್ಯಕತೆಯ ಕುರಿತು ಸೂಚಿಸುತ್ತದೆ, ನೀರಿನಂತೆ ನಿಮ್ಮ ಮನಸ್ಥಿತಿ ಇರಲಿ. ನೀರನ್ನು ನೀವು ಲೋಟ, ಬಿಂದಿಗೆ, ಪಾತ್ರೆ, ಬಾಟಲಿ ಹೀಗೆ ಯಾವುದರಲ್ಲಿ ಹಾಕಿದರೂ ಅದು ಆ ವಸ್ತುವಿನ ಆಕಾರಕ್ಕೆ ತಕ್ಕಂತೆ ತನ್ನನ್ನು ಹೊಂದಿಸಿಕೊಳ್ಳುತ್ತದೆ. ಅಂತೆಯೇ ನಾವು ಕೂಡ ನಮ್ಮ ಮನಸ್ಸಿನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲದೆ ಹೊಂದಾಣಿಕೆಯ ಮನೋಭಾವವನ್ನು ರೂಡಿಸಿಕೊಳ್ಳಬೇಕು. ನೀರು ಹೊಂದಾಣಿಕೆಯ ಮನೋಭಾವವನ್ನು ಸೂಚಿಸುತ್ತದೆ ನಿಜ ಆದರೆ ತನ್ನ ಅಸ್ಮಿತೆಯನ್ನು, ನೀರಿನ ಸಹಜವಾದ ಹರಿಯುಕೆಯ ಗುಣವನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಗಮನಾರ್ಹ.
2. “ಅಬ್ಸಾರ್ಬ್ ವಾಟ್ ಇಸ್ ಯೂಸ್ ಫುಲ್, ಡಿಸ್ಕಾರ್ಡ್ ವಾಟ್ ಇಸ್ ನಾಟ್, ಆಡ್ ವಾಟ್ ಇಸ್ ಯೂನಿಕ್ ಲಿ ಯುವರ್ ಓನ್”
ವೈಯುಕ್ತಿಕ ಭಾವಗಳ ಹೇಳಿಕೊಳ್ಳುವಿಕೆ ಮತ್ತು ವೈಯುಕ್ತಿಕತೆಯ ಕುರಿತು ಮಾರ್ಷಲ್ ಆರ್ಟ್ ಹೆಚ್ಚು ಒತ್ತು ನೀಡುತ್ತದೆ. ಯಾವುದೇ ವಸ್ತು, ವ್ಯಕ್ತಿ, ವಿಷಯಗಳಲ್ಲಿ ನಮಗೆ ಅವಶ್ಯಕ, ಉಪಯೋಗಕರವಾದ ವಿಷಯಗಳನ್ನು ಅರಗಿಸಿಕೊಳ್ಳಬೇಕು.ಅವಶ್ಯಕವಿಲ್ಲದ್ದನ್ನು ಮಾನಸಿಕವಾಗಿ, ಭೌತಿಕವಾಗಿ ಹೊಲದಲ್ಲಿ ಬೆಳೆಯುವ ಕಳೆಯಂತೆ ಕಿತ್ತು ಹಾಕಬೇಕು. ಮತ್ತು ನಮ್ಮ ವೈಯುಕ್ತಿಕ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು.
3. ನೋಯಿಂಗ್ ಇಸ್ ನಾಟ್ ಎನಫ್, ಅಪ್ಲೈ ವಿಲ್ಲಿಂಗ್ ಇಸ್ ನಾಟ್ ಎನಫ್ ವಿ ಮಸ್ಟ್ ಡು *
ಹೊಸ ವಿಷಯಗಳ ಕುರಿತು ಬರಿ ಅರಿತುಕೊಂಡರೆ ಮಾತ್ರ ಸಾಲದು ಬದುಕಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು, ಅಂದುಕೊಂಡರೆ ಸಾಲದು ಕಾರ್ಯರೂಪಕ್ಕೆ ತರಬೇಕು.ಪುಸ್ತಕಗಳಲ್ಲಿ ಓದಿ, ಬಲ್ಲವರಿಂದ ತಿಳಿದುಕೊಳ್ಳುವಷ್ಟೇ ಮುಖ್ಯ ಹಾಗೆ ತಿಳಿದುಕೊಂಡ ವಿಷಯಗಳಲ್ಲಿ ಕೆಲವಷ್ಟನ್ನಾದರೂ ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಪಾಲಿಸಬೇಕು ಎಂಬುದು.
ಬ್ರೂಸ ಲಿಯ ಈ ವಾಕ್ಯದಲ್ಲಿ ಜ್ಞಾನದ ಅರಿವಿಗಿಂತ ಆ ಅರಿವನ್ನು ಕ್ರಿಯೆಗೆ ತರುವ ಮೂಲಕ ಹೆಚ್ಚಿನ ಫಲವಿದೆ ಎಂಬುದನ್ನು ಕಾಣಬಹುದು.
4. ಡು ನಾಟ್ ಪ್ರೇ ಫಾರ್ ಎನ್ ಈಸಿ ಲೈಫ್, ಫ್ರೀ ಫಾರ್ ದ ಸ್ಟ್ರೆಂತ್ ಟು ಎಂಡ್ಯೂರ್ ಎ ಡಿಫಿಕಲ್ಟ್ ಒನ್
ಸರಳ ಮತ್ತು ಸುಗಮವಾಗಿ ಜೀವನ ಸಾಗಲಿ ಎಂದು ಪ್ರಾರ್ಥಿಸದಿರಿ. ಕಷ್ಟಕರ ಜೀವನವನ್ನು ಕೂಡ ನಿಭಾಯಿಸುವ ಸಾಮರ್ಥ್ಯವನ್ನು ನೀಡು ಎಂದು ಕೇಳಿಕೊಳ್ಳಿ.
ಸಮತಟ್ಟಾದ ರಸ್ತೆಯಲ್ಲಿ ಸಾಗುವುದರಲ್ಲಿ ಆನಂದವಿದೆ, ನಿಜ. ಆದರೆ ಏರಿಳಿತಗಳು ತಿರುವುಗಳು ಸವಾಲುಗಳನ್ನು ಒಡ್ಡುವ ರಸ್ತೆಗಳು ಕೊಡುವ ರೋಮಾಂಚನವನ್ನು ಸಮತಟ್ಟಾದ ರಸ್ತೆಗಳು ಕೊಡುವುದಿಲ್ಲ ಅಂತೆಯೇ ಬದುಕಿನ ನಿಜವಾದ ಸವಿ ಇರುವುದು ಹಲವಾರು ಏರಿಳಿತಗಳನ್ನು ನಾವು ಬದುಕಿನಲ್ಲಿ ಅನುಭವಿಸಿದಾಗ ಮಾಗಿದ ಅನುಭವ, ಸಾಧನೆಯ ತೃಪ್ತಿ ನಮ್ಮದಾಗುತ್ತದೆ ಎಂಬ ಮಾತನ್ನು ಬ್ರೂಸ್ ಲಿ ಹೇಳುತ್ತಾರೆ. ಶ್ರದ್ಧೆ ಮತ್ತು ದೃಢತೆಯಲ್ಲಿ ನಂಬಿಕೆ ನೆಟ್ಟ ಬ್ರೂಸ್ ಲೀ ಬದುಕುವ ಒಡ್ದುವ ಸವಾಲುಗಳನ್ನು ಮುಖಾಮುಖಿಯಾಗಿ ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
5 “ದ ಸಕ್ಸಸಫುಲ್ ವಾರಿಯರ್ ಇಸ್ ದಿ ಆವರೇಜ್ ಮ್ಯಾನ್ ವಿತ್ ಲೇಸರ್ ಲೈಕ್ ಫೋಕಸ್”
ಯಶಸ್ಸನ್ನು ಪಡೆಯುವಲ್ಲಿ ನಿಖರವಾದ ಗುರಿ ಮತ್ತು ಬದ್ಧತೆ ಇರುವ ಮನುಷ್ಯ ಖಂಡಿತವಾಗಿಯೂ ಗೆಲುವನ್ನು ಸಾಧಿಸುತ್ತಾನೆ.
6. ಇಫ್ ಯು ಲವ್ ಲೈಫ್ ಡೋಂಟ್ ವೇಸ್ಟ್ ಟೈಮ್, ಫಾರ್ ಟೈಮ್ ಈಸ್ ವಾಟ್ ಲೈಫ್ ಇಸ್ ಮೇಡ ಅಪ್ ಆಫ್ ನಮ್ಮ ಬದುಕಿನಲ್ಲಿ ಸಮಯದ ಪಾತ್ರ ನಿರ್ಣಾಯಕವಾದದ್ದು. ಬದುಕನ್ನು ಹೆಚ್ಚಿಸುವ ವ್ಯಕ್ತಿ ಸಮಯವನ್ನು ವ್ಯರ್ಥಗೊಳಿಸಬಾರದು. ಸಮಯ ಪ್ರಜ್ಞೆ ಮತ್ತು ಶಿಸ್ತುಗಳು ನಮ್ಮ ಬದುಕಿನ ಮೌಲ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.
7.ಮಿಸ್ಟೇಕ್ಸ್ ಆರ್ ಆಲ್ವೇಸ್ ಫರ್ಗಿವೆಬಲ್ ಇಫ್ ಒನ್ ಹ್ಯಾಸ್ ದ ಕರೇಜ್ ಟು ಅಡ್ಮಿಟ್ ದೆಮ್.
ತಪ್ಪು ಮಾಡುವುದು ಮನುಷ್ಯ ಸಹಜ ಗುಣ… ಬಹುತೇಕ ಸಮಯ ವ್ಯಕ್ತಿಯು ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅದುವೇ ಆತ ಮಾಡುವ ತಪ್ಪು.ತನ್ನ ತಪ್ಪನ್ನು ಒಪ್ಪಿಕೊಳ್ಳುವ ವ್ಯಕ್ತಿ ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅಂತಹ ಸಮಯದಲ್ಲಿ ಆತನ ತಪ್ಪನ್ನು ಉದಾರವಾಗಿ ಕ್ಷಮಿಸಿದರೆ ಕಾತನ ವ್ಯಕ್ತಿತ್ವದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು ಎಂದು ಬ್ರೂಸ್ ಲೀ ಹೇಳುತ್ತಾನೆ.
8 ಟು ಹೆಲ್ ವಿತ್ ಸರ್ಕಮಸ್ಟನ್ಸಸ್ ಐ ಕ್ರಿಯೇಟ್ ಅಪಾರ್ಚುನಿಟೀಸ್
ಪರಿಸ್ಥಿತಿಗಳು ಯಾವುದೇ ಇರಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು… ಎಂದು ಲೀ ಹೇಳುತ್ತಾರೆ.
ಬದುಕಿನಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದಾಗಲೂ ಕೂಡ ಎದೆಗುಂದದೆ ತನಗಾಗುವ ತೊಂದರೆಯಲ್ಲಿಯೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಾಧಿಸಿ ತೋರಿಸಬೇಕು ಎಂಬುದನ್ನು ಒತ್ತಿ ಹೇಳುವ ಬ್ರೂಸ್ ಲೀ ನಮ್ಮ ಬದುಕನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಾವು ಹೊಂದಿರಲೇಬೇಕಾದ ಅವಶ್ಯಕತೆಯನ್ನು ಹೇಳುತ್ತಾನೆ.
ಒಬ್ಬ ಮಾರ್ಷಲ್ ಆರ್ಟ್ ತಜ್ಞನಾಗಿ, ಓರ್ವ ನಟನಾಗಿ ಜನರನ್ನು ಸೆಳೆಯುವ ಬ್ರೂಸ್ ಲೀ
ಬದುಕಿನ ತತ್ವವೇ ಚೆನ್ನಾಗಿ ಬದುಕಿ ಬಾಳಬೇಕು ಎಂಬುದು. ಬ್ರೂಸ್ಲಿ ಕೇವಲ ಮೇರು ನಟನಾಗಿ ಮಾತ್ರವಲ್ಲ ಮೌಲ್ಯಯುತ ಜೀವನ ಪಾಠ ಹೇಳಿಕೊಡುವ ಗುರುವಾಗಿ ಪರಿಣಮಿಸಿದ್ದಾನೆ.
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್