Category: ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ

ಸಂತೃಪ್ತಿ (ಮಕ್ಕಳ ಕತೆ)

ಸಂತೃಪ್ತಿ (ಮಕ್ಕಳ ಕತೆ) ಒಂದೂರಲ್ಲಿ ಒಂದು ಕಾಗೆ ಇತ್ತು.ಕರಿ ಬಣ್ಣ. ಕೆಟ್ಟದ್ವನಿ. ಆದರೆ ಕಾಗೆ ಅರಣ್ಯಕ್ಕೆ ಹೋಗುವುದಿಲ್ಲ ಮನುಷ್ಯ ಇರುವಲ್ಲೇ ಇರುತ್ತದೆ. ಅವನ ಮನೆ ಮೇಲೆ ಕೂತಿರುತ್ತದೆ. ಆದರೆ ಮನುಷ್ಯನಂತೆ ಆಗಿಲ್ಲ. ಅದು ವೈಶಿಷ್ಟ್ಯ. ಅದು ಮನುಷ್ಯನ ಕೈಗೆ ಸಿಕ್ಕಿಲ್ಲ. ಆದರೆ…

ಥಟ್ಟಂತ ಹೊಳೆವ ಸರಳ ಉಪಾಯ. (ಮಕ್ಕಳ ಕತೆ)

ಥಟ್ಟಂತ ಹೊಳೆವ ಸರಳ ಉಪಾಯ. (ಮಕ್ಕಳ ಕತೆ) ಒಂದು ಊರಿನಲ್ಲಿ ಶ್ರೀಮಂತ ಜಮೀನ್ದಾರನಿದ್ದ. ಆಗಿನ ಕಾಲಕ್ಕೆ ಕೋಟ್ಯಾಧಿಪತಿ. ಆದರೆ ದುರಹಂಕಾರಿ, ಊರಿಗೆ ಊರೇ ಅವನಿಗೆ ಹೆದರುತಿತ್ತು. ಅವನ ಮಾತೆ ಶಾಸನ. ಇಂತಿಪ್ಪ ಮನುಷ್ಯಗೆ ಒಮ್ಮೆ ‘ಕಣ್ಣು’ ಬೇನೆ ಬಂತು. ದೊಡ್ಡ ದೊಡ್ಡ…

ನಿಜವಾದ ಭಕ್ತನ ಬೇಡಿಕೆ. (ಮಕ್ಕಳ ಕತೆ)

ನಿಜವಾದ ಭಕ್ತನ ಬೇಡಿಕೆ. (ಮಕ್ಕಳ ಕತೆ) ರಾಜನೊಬ್ಬ ಬಹಳ ವರ್ಷಗಳ ಯುದ್ಧದ ನಂತರ, ತನ್ನ ರಾಜ್ಯಕ್ಕೆ ಹಿಂದಿರುಗಿ ಬರುತ್ತಿದ್ದ. ಅವನಿಗೆ ಬಹಳಷ್ಟು ಪತ್ನಿಯರಿದ್ದರು. ಆತ ತನ್ನ ಪತ್ನಿಯರೆಲ್ಲರಿಗೂ , ತಾನು ಹಿಂದಕ್ಕೆ ಬರುವಾಗ, ಯಾರಿಗೆ ಏನು ಬೇಕು ಎಂಬುದನ್ನು ತಿಳಿಸಿ, ನಾನು…

ಮೌನವೇ ಲೇಸು (ನೀತಿ ಕತೆ)

ಮೌನವೇ ಲೇಸು. ಒಂದು ಹಾವು ವಿಶ್ರಾಂತಿ ಪಡೆಯಲು ಮರದ ಹತ್ತಿರವಿದ್ದ ಹುತ್ತದ ಕಡೆ ಹೋಗುತ್ತಿತ್ತು. ಮರ ಕತ್ತರಿಸಲು ಬಂದವರು ಕೆಲಸ ಮುಗಿಸಿ ಹೋಗುವಾಗ ಗರಗಸವನ್ನು ಮರದ ಹತ್ತಿರವೇ ಬಿಟ್ಟು ಹೋಗಿದ್ದರು. ಹರಿದು ಹೋಗುತ್ತಿದ್ದ ಹಾವಿಗೆ ಗರಗಸ ಇರುವುದು ತಿಳಿಯಲಿಲ್ಲ. ಅದರ ಮೇಲೆ…

ಹನುಮನ ಜಾತ್ರೆ.

ಹನುಮನ ಜಾತ್ರೆ ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ// ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ// ಅಜ್ಜ ಕೊಡಿಸಿದ…

ಕಣ್ಣು ಕಂಡದ್ದೇ ಸತ್ಯ.

ಕಣ್ಣು ಕಂಡದ್ದೇ ಸತ್ಯ. ಒಂದು ದಿನ ಕೃಷ್ಣದೇವರಾಯರು ತನ್ನ ಆಸ್ಥಾನ ಪಂಡಿತರೊಂದಿಗೆ ಮಾತನಾಡುತ್ತ ಕುಳಿತಿದ್ದಾಗ ‘ಪಂಡಿತರೆ, ನನಗೊಂದು ಸಂಶಯ ಬಂದಿದೆ. ಸತ್ಯ ಮತ್ತು ಅಸತ್ಯಗಳ ಬಗೆಗೆ ನಾವುಗಳೆಲ್ಲ ಏನೇನೋ ಹೇಳಿಕೊಳ್ಳುತ್ತೇವೆ, ಆದರೆ ಸತ್ಯ ಅಸತ್ಯಗಳಲ್ಲಿ ಎಷ್ಟು ಅಂತರವಿದೆ? ಯಾಕೆ ಇವುಗಳಿಗೆ ಪ್ರಾಧಾನ್ಯತೆ…

ಕಲಾವಿದನ ಬದುಕು.(ಮಕ್ಕಳ ಕತೆ)

ಕಲಾವಿದನ ಬದುಕು.(ಮಕ್ಕಳ ಕತೆ) ಒಂದು ಊರಿನಲ್ಲಿ ಒಬ್ಬ ಕಲಾವಿದ ಇದ್ದ. ಅವನನ್ನು ನೋಡಲು ಮಕ್ಕಳು ಕಾತರದಿಂದ ಹವಣಿಸುತ್ತಿದ್ದರು. ಏಕೆಂದರೆ ಆತ ಮಾಡುವ ಕಲೆಯ ಕೈ ಚಳಕವನ್ನು ಮಕ್ಕಳನ್ನು ಮೆಚ್ಚುವಂತೆ ಆತ ಕಲೆಯನ್ನು ಮಾಡಿ ಬಣ್ಣಗಳನ್ನು ಬಳಿದು ನೋಡಲು ಇಡುತ್ತಿದ್ದನು. ಒಮ್ಮೆ ಶಾಲೆಯಲ್ಲಿ…

ನಾಲಿಗೆ ಕುಲ ಹೇಳಿತು (ಮಕ್ಕಳ ಕತೆ)

ನಾಲಿಗೆ ಕುಲ ಹೇಳಿತು (ಮಕ್ಕಳ ಕತೆ) ಒಂದು ರಾಜಧಾನಿ. ಅಲ್ಲಿ ರಾಜ ವಿಕ್ರಮ ಸಿಂಹ. ಅವನು ತುಂಬ ದಯಾಳು. ದಾನ, ಧರ್ಮ ಮಾಡುವಲ್ಲಿ ತುಂಬ ಪ್ರಸಿದ್ಧನಾಗಿದ್ದ. ಊರಿನ ಜನರಿಗೆ ರಾಜನೆಂದರೆ ಅಚ್ಚುಮೆಚ್ಚು. ಒಮ್ಮೆ ರಾಜ ತನ್ನ ಮಂತ್ರಿ, ಸೇನಾಧಿಪತಿ, ಸೇವಕರೊಂದಿಗೆ ಬೇಟೆಯಾಡಲು…

ಸಿಹಿ ಮಾವು. ( ಮಕ್ಕಳ ನೀತಿ ಕಥೆ)

ಸಿಹಿ ಮಾವು. ( ಮಕ್ಕಳ ನೀತಿ ಕಥೆ) ‘ಸಿಹಿ ಮಾವು‘ ಎಂಬ ಒಂದು ಹಳ್ಳಿ, ಆ ಹಳ್ಳಿಯಲ್ಲಿ ರಾಮಣ್ಣ ಎಂಬುವನು ಕಾಲಕಾಲಕ್ಕೆ ಸಿಗುವ ಹಣ್ಣುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು, ಒಮ್ಮೆ ಹೀಗೇ……ಮಾವಿನ ಹಣ್ಣಿನ ಕಾಲವಾದ್ದರಿಂದ ಅವನು ಮಾವಿನ‌ ತೋಟಗಳಿಗೇ ಹೋಗಿ…

ಬಣ್ಣದ ಹಕ್ಕಿ

ಬಣ್ಣದ ಹಕ್ಕಿ ಬಾರಲೇ ಹಕ್ಕಿ ಹಾರುವ ಹಕ್ಕಿ ಬಣ್ಣದ ಹಕ್ಕಿ ಬಾ ಬಾ ಬಾ ಬಾ ! ನನಗೂ ಹಾರಲು ಕಲಿಸು ನನಗೂ ಹಾಡಲು ಕಲಿಸು ಬಾರಲೆ ಹಕ್ಕಿ ಹಾರುವುದಕ್ಕೆ ಕಲಿಸು ಬಾ ಬಾ ಬಾ ಬಾ ! ನನಗೂ ಗೆಳೆಯರಿಲ್ಲ…

ನಾವೇ ಸಂಪತ್ತು.(ಮಕ್ಕಳ ಕವನ)

ನಾವೇ ಸಂಪತ್ತು ಬನ್ನಿರೆಲ್ಲರು ನಲಿಯುತ ಆಡುವ ಬಗೆಬಗೆ ತೆರದ ಆಟಗಳು ಕೂಡಿ ಆಡುತ ಹಂಚಿ ತಿನ್ನುತ ಅರಳಿಸುವ ಮನದ ಭಾವಗಳು ಸ್ನೇಹ ಬೀರುತ ಜ್ಞಾನ ಹರಡುತ ಕಲಿಯುವ ನಾವು ಜೊತೆಯಲ್ಲಿ ಸಹೋದರ ಭಾವದ ಕಂಪು ಪಸರಿಸುವ ನಾವುಗಳು ನಿತ್ಯದಲಿ ಭಾರತ ದೇಶವೆ…

ಮಕ್ಕಳ ಕವಿತೆಗಳು.

ಶಾಲೆಯ ಮಗು. ಶಾಲೆಯ ತೋಟದ ಅದ್ಭುತ ಹೂಗಳು; ಮಕ್ಕಳು ಎಳೆ ಮನದಲ್ಲಿ ಕಳೆ ತಂದಿವೆ ಸುಂದರ ಚಿತ್ರಗಳು ಹೊಸ ಹೂದೋಟವಾಗಲಿ ಮಕ್ಕಳ ಬಾಳು ನನಸಾಗಲಿ ಸೊಗಸಾಗಲಿ ಕಂಡಂತ ಕನಸುಗಳು ನಮಗದು ನೀತಿ ಜೀವನ ಜ್ಯೋತಿ ಹೊಸತನದಿ ಕೇಳು ಎಳೆ ಮನದಲ್ಲಿ ಕಳೆತಂದಿವೆ…

ಮಕ್ಕಳಿಗೆ ಕಿವಿಮಾತು

ಮಕ್ಕಳಿಗೆ ಕಿವಿಮಾತು ಇರಬೇಕು ಮಕ್ಕಳೇ ಒಳಿತು ಕೆಡುಕಿನ ಅರಿವು ಕೊನೆತನಕ ಜೀವನದ ಪಯಣದಲ್ಲಿ ಇದನರಿತು ನಡೆದಾಗ ಯಾರಿಗೂ ಸಿಗದಿರುವ ಸುಖವು ದೊರೆವುದು ನಿಮ್ಮ ಬದುಕಿನಲ್ಲಿ. ತಂದೆ ತಾಯಿಯ ಪ್ರೀತಿ ನಿಮ್ಮ ಜೀವನದಲ್ಲಿ ಹಿರಿದೆಂಬ ಸತ್ಯವನು ಅರಿಯಬೇಕು ಗುರುಹಿರಿಯರನು ಗೌರವಿಸುವ ರೀತಿಯ ತಿಳಿದು…

ಹರಟೆ ಹೊಡೆದ ಗುರುತಿತ್ತು .

ಹರಟೆ ಹೊಡೆದ ಗುರುತಿತ್ತು ಮನದ ನಿತ್ಯದ ನಿಲ್ಲದ ವಿಲಾಪವದು ಬಾಳು ತಾಗಿಸಿಕೊಂಡ ಕಡು ಹೊಡೆತಕ್ಕೆ ಬೇಸಿಗೆ ಆತುರದುಸಿರದು ಬಾಳ ಬೇಗುದಿಗೆ ಅಶಾಂತಿಯ ಗಾಳಿ ಹಡದಿಯಾಸಿತ್ತು ಬಿಡದೆ ಕಾಡಿ ಬೇಡಿದರು ಬಿಡದ ಮಾತುಗಳಿಂದು ಮಾತು ಬಾರದೆ ಮೂಕವಾಗಿವೆ ಮುಂಗತ್ತಲೆಯಲ್ಲಿ ಬಾಡುವ ಹೂವಂತೆ ಮನವು…

ನನ್ನ ಕುದುರೆ. (ಮಕ್ಕಳ ಕವನ)

ನನ್ನ ಕುದುರೆ. ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ ಕಾಲಿಲ್ಲದೆಯೇ ನಡೆಯುವ ಕುದುರೆ ಕೂಳಿಲ್ಲದೆಯೇ ಬದುಕುವ ಕುದುರೆ ನಾಲನು ಬಡಿಸದ ಜೂಲವ ಹೊದಿಸದ ಲಾಲನೆ ಪಾಲನೆ ಬಯಸದ ಕುದುರೆ ಅಜ್ಜನ ಕೋಲಿದು ನನ್ನಯ ಕುದುರೆ ಚಂದಪ್ಪನಿಗೆ ಚಿಗರೆಯೆ…

ಚುಕ್ಕಿ. (ಕವಿತೆ)

ಚುಕ್ಕಿ. ಚುಕ್ಕಿಯೇ ಚುಕ್ಕಿಯೇ ದೂರದೂರಿನ ಬೆಳ್ಳಕ್ಕಿಯೇ ನಕ್ಕರೆ. ನೀನೆಷ್ಟು ಅಂದವೋ ಬಲು ಚೆಂದವೋ ।। ನಿನ್ನ ಹಾಗೆ ಹೊಳೆಯುವರು, ಯಾರಿಲ್ಲ ಈ ಮೊಗದಿ ಕತ್ತಲ ಹೊತ್ತಲ್ಲಿ ಬರುವೆ ನೀ ಹಿತ್ತಲಿನಲ್ಲಿ ಈ ಜಗದಿ ।। ಆಗಸದ ಸಾಗರದಲ್ಲಿ, ಹೊಳೆಯುವ ಮೀನಿನಂತೆ ದೂರದ…

ಬಣ್ಣದ ಕೊಡೆ (ಕಥೆ)

ಬಣ್ಣದ ಕೊಡೆ (ಕಥೆ) ಮಹೇಶ ಐನೋರು ರಾಮಾಪುರದ ದೊಡ್ಡ ಕುಳ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಳ್ಳೆ ಹೆಸರು ಪಡೆದಿದ್ದ,ನಾಲ್ಕಾರು ಜನರಿಗೆ ಬೇಕಾದ ವ್ಯಕ್ತಿ.ನಾಲ್ಕು ತಲೆಮಾರು ಕುಳಿತು ತಿಂದರೂ ಸವೆಯಷ್ಟು ಆಸ್ತಿ ಬೇರೆ ….ಕೇಳಬೇಕೆ ಬೆಲ್ಲ ಇರುವವರೆಗೆ ಇರುವ ಬದುಕಿಗೆ ಭಯವೇ? ….ಇವರಿಗೆ’ ರವೀಶ ‘ಎಂಬ…

ಕುತಂತ್ರ ಬುದ್ದಿ ಅವಮಾನಕ್ಕೆ ದಾರಿ (ನೀತಿ ಕತೆ)

ಕುತಂತ್ರ ಬುದ್ದಿ ಅವಮಾನಕ್ಕೆ ದಾರಿ (ನೀತಿ ಕತೆ) ರಾಮಪ್ಪನ ಬಳಿ ಮಾವಿನ ತೋಟವಿತ್ತು. ಮಾವಿನ ಮರಗಳ ಬಗ್ಗೆ ರಾಮಪ್ಪನಿಗೆ ತುಂಬಾ ಜ್ಞಾನವಿತ್ತು . ಒಮ್ಮೆ ಮಾವಿನ ಮರದಲ್ಲಿ ಕೊಂಚು ಕೊಂಚಲಾಗಿ ನೇತಾಡುತ್ತಿದ್ದ ಹಣ್ಣಾದ ನೂರಾರು ಮಾವುಗಳು ಖುಷಿಯಾಗಿ ಇದ್ದವು. ಕಾಯದ ಮತ್ತು…

ಗಾಂಧಿ ತಾತ (ಕವಿತೆ)

ಗಾಂಧಿ ತಾತ ತಾತ ತಾತ ನಮ್ಮ ತಾತ ಇವರೆ ನಮ್ಮ ಗಾಂಧಿ ತಾತ ಶಾಂತಿ ದೂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ತಾತ . ಕೈಯಲ್ಲಿ ಕೋಲು ಹಿಡಿದು ತನ್ನ ಕರಾಮತ್ತು ತೋರಿಸಿದಾತ ಬರಿ ಗಾಲಿನಲ್ಲಿ ನಡೆದು ಬ್ರಿಟಿಷರಿಗೆ ಬೆವರಿಳಿಸಿದಾತ. ಬಿಸಿಲು ಮಳೆ…

ಇವರೆ ನೋಡು ಗಾಂಧಿ ತಾತ

ಇವರೆ ನೋಡು ಗಾಂಧಿ ತಾತ ಇವರೆ ನೋಡು ಗಾಂಧಿ ತಾತ ದೇಶಕ್ಕೆಂದೆ ಮಡಿದರು ನಾಡ ಜನರ ಬದುಕಿಸಲೆಂದು ಅಹಿಂಸಾ ಮಾರ್ಗ ಹಿಡಿದರು. ಜನರ ನೋವು ಜನರ ಹಸಿವು ದಾಸ್ಯದ ಬೇಗೆ ಸಹಿಸುತ ನಾಡ ಜನರ ಒಗ್ಗೂಡಿಸಿ ದೇಶಕೆ ಮುಕ್ತಿ ತಂದರು ಗುಜರಾತಿನ…