Oplus_131072

ಚೈತ್ರದ ಚಂದ್ರಮ (ಮಿನಿ ಕಾದಂಬರಿ)

ಮನೆಯ ಹೂದೋಟದಲ್ಲಿ ನೀರು ಹಾಕುತ್ತಿದ್ದಾಳೆ. ಆ ಕಡೆ ಬೈಗುಳಗಳ ಸುರಿಮಳೆ ಸುರಿಯುತ್ತಿವೆ. ಅವಳು ಹೊತ್ತು ತಂದ ಬಿಂದಿಗೆಯ ನೀರನ್ನು ಸಸಿಗಳಿಗೆ ಹಾಕುತ್ತಿದ್ದಾಳೆ. ಜೊತೆಗೆ ಅವಳ ಕಣ್ಣೀರು ಸಹ ಆ ಸಸಿಯ ಮೇಲೆ ಬೀಳುತ್ತಿವೆ. ಎಷ್ಟು ಅತ್ತರು ಕಣ್ಣಲಿನ ನೀರು ಖಾಲಿಯಾಗುತ್ತಿಲ್ಲ. ಆರು ವರ್ಷದ ಪುಟ್ಟ ಬಾಲಕಿ ಓಡಿ ಬಂದು, ಅಮ್ಮನನ್ನು ಅಪ್ಪಿಕೊಂಡಳು. ಆ ಪುಟಣಿಗೆ ಸಾಕಾಗುವಷ್ಟು ಕೆಲಸ. ಕೆಲಸ ಮಾಡದಿದ್ದರೆ ಶಿಕ್ಷಿಸುವ ಸೋದರ ಅತ್ತೆ. ಅಮ್ಮನನ್ನು ಅಪ್ಪಿಕೊಂಡ ಆ ಪುಟಾಣಿ ಕಂದಮ್ಮ ತನ್ನ ತೊದಲ ನುಡಿಯಿಂದ. “ಅಮ್ಮ, ತಲೆ ಸುತ್ತುತ್ತಿದೆ ಕಣಮ್ಮ.” ಎಂದ ಮಗುವನ್ನು ಕಂಡು ತಾಯಿಯ ಹೃದಯ ಬಡಿತ ಹೆಚ್ಚಾಯಿತು. ಮಗಳ ಆರೈಕೆಯಲ್ಲಿ ತೊಡಗುವಳು. ಆದರೇ ದೂರದಿಂದ ಜೋರಾದ ಧ್ವನಿಯಲ್ಲಿ…..
“ತಾಯಿ-ಮಗಳ ಸಂವಾದ ನಡೆದಿದ್ದೀಯಾ? ಮಾಡುವ ಕೆಲಸ ಹಾಗೇ ಉಳಿದಿದೆ, ಮಾಡುವರಾರು?” ಎಂದು ಅವಳ ಅತ್ತೆ ಕೂಗುವಳು. ಅಷ್ಟರಲ್ಲಿಯೆ ಆ ಕಂದ ಪ್ರಜ್ಞೆತಪ್ಪಿ ನೆಲಕ್ಕೆ ಉರಿಳಿತು. ಅವಳ ಅಮ್ಮ ದುಃಖಿತಳಾಗಿ ಮಗಳ ಮುಖದ ಮೇಲೆ ನೀರನ್ನು ಸಿಂಪಡಿಸಿ ಎಚ್ಚರಿಸುತ್ತಿದ್ದಳು. ಎಚ್ಚರವಾಗದ ಮಗಳನ್ನು ಕಂಡು ತಾಯಿ ದುಃಖಿಸಿ, ದುಃಖಿಸಿ ಅಳ ತೊಡಗಿದಳು. ನಂತರ ಕಂದ ಎಚ್ಚರಗೊಂಡಿತು. ಮಗಳನ್ನು ಕರೆದುಕೊಂಡು ಒಳನಡೆದಳು. ಈ ರೀತಿ ದಿನಾಲೂ ನಡೆಯುವಂತಹದಾಗಿತ್ತು. ಆರು ರ್ಷಗಳಿಂದ ಪ್ರಾರಂಭವಾದ ಸ್ಥಿತಿ, ಗಂಡನನ್ನು ಕಳೆದುಕೊಂಡ ಆಕೆಗೆ ಒಂದೇ ಹೆಣ್ಣು ಮಗು. ದಿನಾಲೂ ನರಕದ ಬಾಗಿಲಿಗೆ ಭೇಟಿ ನೀಡುವ ಪರಿಸ್ಥಿತಿ. ಹಾಲು ಬಿಳಿಸೀರೆಯನ್ನು ಉಟ್ಟುಕೊಂಡು, ತುಂಬು ಸೌಮ್ಯವಂತೆ, ಯಾವುದೇ ಒಡವೆಯನ್ನು ಧರಿಸದೆ ಸರಳವಾಗಿರುತ್ತಾಳೆ. ಒಂದು ಹೆಣ್ಣಿನ ತಾಯಿ. ಆ ಮನೆಯಲ್ಲಿ ಮಾವ ಏನಾದರೂ ಕೇಳಿದಾಗ ಬೇಗನೆ ನೀಡದಿದ್ದರೆ ಅವಳಿಗೆ ಶಿಕ್ಷಿಸುವವ. ಇನ್ನು ಅತ್ತೆ ಎಲ್ಲಾದರೂ ಹೊರಗಡೆ ಹೊರಟರೆ ಎದುರಿಗೆ ಬಂದರೆ ಆಕೆಯ ಸ್ಥಿತಿಯನ್ನು ನೋಡಲಾಗದು. ಮತ್ತೆ ಇನ್ನೊಬ್ಬಳು ಇವಳ ನಾದಿನಿ ನಂದಿನಿ. ಅವಳು ವಿಧವೆ ಅಮ್ಮನ ಸ್ಥಿತಿಯನ್ನು ಕಂಡು ಸಹಾಯಕಳಾದ ಮಗಳು ಭೂಮಿಕಾ. ಇವಳು ತುಂಬ ಚುರುಕು, ಬುದ್ದಿವಂತೆ, ಬೇಗ ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅಜ್ಜ-ಅಜ್ಜಿ ಹಾಗೂ ತನ್ನ ಸೋದರ ಅತ್ತೆಯನ್ನು ಕಂಡರೆ ಹೆದರುತ್ತಾಳೆ. ಭೂಮಿಕಾ ತಾನು ಗರ್ಭದಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡವಳು. ತಾಯಿಯ ಹಾಗೂ ಮಗಳ ಯಾತನೆ ನೋಡಿ, ಕೇಳುಗರ ಕಣ್ಣಲ್ಲಿ ನೀರು ಬರುವಂತಿತ್ತು. ಮನೆ ಇದೆ. ಮಾವ ಆಫೀಸಿಗೆ ಹೋಗುತ್ತಾನೆ. ಅತ್ತೆ ಮನೆಯಲ್ಲಿಯೇ ಇರೋದು. ನಾದಿನಿ ಓದುತ್ತಿದ್ದಾಳೆ. ಮನೆಯಲ್ಲಿನ ಎಲ್ಲಾ ಕೆಲಸ ಸೊಸೆ ಚಿತ್ರಸಾಗರ ಮಾಡುತ್ತಾಳೆ. ಅವಳಿಗೆ ಸಹಾಯಕಳಾಗಿ ಮಗಳು ಭೂಮಿಕಾ ಸಾಗರ ಮಾಡುತ್ತಾಳೆ. ಚಿತ್ರಸಾಗರ್ ಅವಳ ಅತ್ತೆಗೆ “ಅತ್ತೆ ಮನೆ ಕೆಲಸ ನಾನೇ ಮಾಡುವೆನು ರಾತ್ರಿ ಹನ್ನೆರಡಾದರೂ ಪರವಾಗಿಲ್ಲ, ಭೂಮಿಕಾಗೆ ಮಾತ್ರ ಕೆಲಸ ಹೇಳಬೇಡಿ” ಎಂದರೇ “ಏನೇ ನಾನು ಹೇಳಿದ ಹಾಗೇ ನೀನು ಕೇಳಬೇಕು ಅಷ್ಟೇ! ನೀನು ಮಾಡಿದ ತಪ್ಪಿಗೆ ಹುಟ್ಟಿದಳಲ್ಲ ದರಿದ್ರ ಕೂಡ ಶಿಕ್ಷೆ ಅನುಭವಿಸಲಿ” ಎಂದು ಅತ್ತೆ ಸಿಡಿಮಿಡಿ ಮಾಡುವಳು. ಆದರೇ ಚಿತ್ರ ಸಾಗರ್ ಅರಿತದ್ದು “ನಾನು ನಿಜವಾಗಿಯೂ ಹೆಣ್ಣು ಮಗುವನ್ನು ಹೆತ್ತದು ತಪ್ಪು ಹಾಗೂ ತನ್ನ ಗಂಡ ಸಾಯಲು ನಾನೇ ಕಾರಣವಿರಬಹುದು’’ ಎಂದು ಭಾವಿಸಿದ್ದಳು. ಗಂಡನ ಮನೆಯಲ್ಲಿ ಏನೇ ಶಿಕ್ಷೆ ಕೊಟ್ಟರೂ ಅನುಭವಿಸುತ್ತಿದ್ದಳು. ಹೊರತಾಗಿ ತನ್ನ ತವರಮನೆಯವರಿಗೆ ತಿಳಿಸಿರಲಿಲ್ಲ.
ಚಿತ್ರ ಸಾಗರಳು ವಿದ್ಯಾವಂತೆ, ಸಮಾಜ ಏನೆಂಬುವುದು ಅರಿತವಳು. ಇನ್ನೂ ಭೂಮಿಕಾಗೆ ಶಾಲೆಗೆ ಕಳುಹಿಸಿಯೇ ಇಲ್ಲ. ವಂಶ ಪರಂಪರೆಯನ್ನು ಮುಂದುವರೆಸಲು ಗಂಡು ಮಗನ ಬದಲಿಗೆ ಹೆಣ್ಣು ಮಗು ಹುಟ್ಟಿದಾಗಿನಿಂದಾಗಿ ಅಜ್ಜ-ಅಜ್ಜಿಗೆ ಮೊಮ್ಮಗಳ ಮೇಲಿನ ಪ್ರೀತಿ ಸುಟ್ಟಿದೆ.
ಇಪ್ಪತ್ನಾಲ್ಕು ವರ್ಷದ ಈ ಯುವಕನು ಗಣಿತ ವಿಷಯದಲ್ಲಿ ತುಂಬ ಬುದ್ಧಿವಂತ, ನೇರ, ದಿಟ್ಟ, ಎದೆಗೆ ಬಿಲ್ಲು ಬಿಟ್ಟಂತೆ ಮಾತನಾಡುತ್ತಿದ್ದ. ಆಗ ಅಂದರೆ ಹದಿನಾರು ವರ್ಷದಿಂದ ಹತ್ತೊಂಬತ್ತರ ವಯಸ್ಸಿನವರೆಗೆ ಇದ್ದ ನಾಲೇಜ್ ಈಗಿಲ್ಲ. ತುಂಬು ಬಡಕುಟುಂಬದಲ್ಲಿ ಹುಟ್ಟಿದ ಯುವಕ ಚಂದ್ರ ಜೋಶಿಯು ತಂದೆ-ತಾಯಿಯ ಮಾತೆಂದರೆ ಸಾಕು ಭೂಮಿ-ಆಕಾಶ ಒಂದಾಗುವAತೆ ಕೂಗಾಡುತ್ತಾನೆ. ಹದಿನೆಳನೇ ವಯಸ್ಸಿನಲ್ಲಿ ಡಿಪ್ಲೋಮಾ ಕಾಲೇಜಿಗೆ ಸೇರಿದನು. ಚೆನ್ನಾಗಿಯೇ ಓದುತ್ತಿದ್ದ ಚಂದ್ರನ ಜೀವನದಲ್ಲಿ ಒಂದು ಬಿರುಗಾಳಿ ಬಂದು ಆವರಿಸಿತು. ಹಾಗಾಗಿ ಡಿಪ್ಲೋಮಾ ಓದಿ ಇಂಜಿನಿಯರಿAಗ್ ಆಗುವ ಚಂದ್ರನು ಎಮ್ಮೆ ಕಾಯುತ್ತಿದ್ದಾನೆ. ಚಂದ್ರ ವಾಸಿಸುತ್ತಿದ್ದು ಪುಟ್ಟ ಹಳ್ಳಿಯಲ್ಲಿ, ಇವನು ಮುಂಜಾನೆ ರಾತ್ರಿ ಎನ್ನದೆ ನಿದ್ದೆ ಮಾಡುವುದರ ಜೊತೆಗೆ ಸಮಯ ವ್ಯರ್ಥ ಮಾಡುತ್ತಿದ್ದಾನೆ. ಸಮಯವಿರುವುದೇ ಏನಾದರೂ ಕೆಲಸ ಮಾಡೋಕೆ ಆದರೇ ಈ ಸಮಯವನ್ನೇ ವ್ಯಯಿಸುವ ಚಂದ್ರ. ಇವನ ಹಳ್ಳಿಯು ಪ್ರಕೃತಿ ವಿಸ್ಮಯ. ತೆಂಗು-ಅಡಿಕೆಗಳ ತವರೂರಾಗಿತ್ತು. ಮಳೆ ಬಾರದ ದಿನವೇ ಇಲ್ಲ. ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿತ್ತು. ಆ ವಾತಾವರಣಕ್ಕೆ ಯಾವುದರ ಕಮ್ಮೀಯೂ ಇಲ್ಲ. ಪುಟ್ಟ ಹಳ್ಳಿಯಾದರೂ ಪರವಾಗಿಲ್ಲ. ಜನಸಂಖ್ಯೆ ಹೆಚ್ಚಳ, ಮುಂಜಾನೆ ಹಕ್ಕಿಗಳ ಕಲರವ. ಚಿಕ್ಕ ಮಕ್ಕಳು ಸಹ ಯಾವುದರ ಬಯಕೆಯು ಇರಲಿಲ್ಲ, ಸದಾ ಕೆಲಸದಲ್ಲಿ ತೊಡಗುವರು. ಅಜ್ಜಂದಿರು, ಅಜ್ಜಿಯಂದಿರು ಯಾವಾಗಲೂ ನಗು ಮನದವರು. ಜನರಲ್ಲಿ ಒಂದೇ ಭಾವನೆ, ಆಸಕ್ತಿ, ಒಗ್ಗಟ್ಟು ತುಂಬಿತ್ತು. ಚಂದ್ರನು ಕೂಡ ಚಿಕ್ಕ ವಯಸ್ಸಿನಲ್ಲಿ ತುಂಬ ತುಂಟ ಹುಡಗ. ಇವನನ್ನು ಊರಲ್ಲಿ ಪ್ರತಿಯೊಬ್ಬರು ಗುರುತು ಹಿಡಿಯುತ್ತಿದ್ದರು. ಅಮ್ಮ ಒಂದು ಮನೆಗೆ ಹೋಗಿ ಬಾ ಅಂದರೆ ಇವನು ಹತ್ತು ಮನೆ ಸುತ್ತಾಡಿ ಬರುವವ. ಆ ಹಳ್ಳಿಯಲ್ಲಿ ಪ್ರತಿಯೊಂದು ಮಗು ಕೂಡ ಶಾಲೆಗೆ ಹೋಗುತ್ತಿತ್ತು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿತ್ತು. ಮುಂದಿನ ವ್ಯಾಸಂಗಕ್ಕಾಗಿ ನಗರಕ್ಕೆ ಹೋಗಬೇಕಾಗಿತ್ತು. ಆ ಹಳ್ಳಿಯಲ್ಲಿ ಚಂದ್ರ ಹೇಗೆಂದರೆ ಶಾಲೆಗೆ ಹೋಗಿ ಬಂದ ನಂತರ ಮನೆಯಲ್ಲಿನ ಎಲ್ಲಾ ಕೆಲಸ ಜಟ್-ಪಟ್ ಅಂತ ಮುಗಿಸುತ್ತಿದ್ದ. ಯಾವಾಗಲೂ ಇವನ ನಾಲಿಗೆಯಂತೂ ಮಾತನಾಡುತ್ತಲೆ ಇರುತ್ತಿತ್ತು. ಅಮ್ಮ-ಅಪ್ಪಂದಿರು ಹೊಲದಿಂದ ಮನೆಗೆ ಬರುವಷ್ಟರಲ್ಲಿ ಹೊಲಕ್ಕೆ – ಮನೆಗೆ ಹತ್ತಾರು ಬಾರಿ ತಿರುಗಾಡುತ್ತಿದ್ದ. ಗದ್ದೆಯಲ್ಲಿ ಇಳಿದು, ಮೈಯಲ್ಲ ಗದ್ದೆಯ ಕೆಸರು ಹಚ್ಚಿಕೊಂಡು ಅಪ್ಪನ ಹತ್ತಿರ ಬೈಯಿಸಿ ಕೊಳ್ಳುತ್ತಿದ್ದ. ಇವನಿಗೆ ಅಣ್ಣ ಒಬ್ಬಾತ, ತಂಗಿ ಒಬ್ಬಾಕೆ. ತಂಗಿ ಪುಟಾಣಿ ಪುಟ್ಟಿ. ಅಣ್ಣ ಸೂರ್ಯ ಜೋಶಿ ತುಂಬ ಸೂಕ್ಷö್ಮ. ಮನೆ ಬಿಟ್ಟು ಹೊರಗಡೆ ಹೋದವನೆ ಅಲ್ಲ. ಆ ಹಳ್ಳಿಯಲ್ಲಿ ಜನರು ಹೇಳುತಿದ್ದರು. “ಆಕಾಶದ ಚಂದ್ರನು ಹದಿನೈದು ದಿವಸಕ್ಕೊಮ್ಮೆ ಬಂದು ಬೆಳದಿಂಗಳು ನೀಡುವನು, ಆದರೆ ಈ ಚಂದ್ರನು ಎಲ್ಲರ ಮನೆಗೂ ದಿನಾಲೂ ಭೇಟಿ ನೀಡಿ ಬೆಳದಿಂಗಳು ಚೆಲ್ಲಿ ಹೋಗುತ್ತಾನೆ” ಎನ್ನುವರು. ಇವನು ಗೆಳೆಯರಿಗಂತೂ ಬಲು ಇಷ್ಟ. ತನ್ನ ಜೊತೆಗೆ ಯಾರಾದರೂ ಮಾತಾಡಲೂ ಇರದೇ ಇದ್ದಾಗ ಹಸುವಿಗೆ, ಮೇಕೆಗೆ ಮಾತನಾಡಿಸುವನು, ತುಂಟ ವಯಸ್ಸಾಗಿತ್ತು. ಅವನು ಒಂದು ದಿನವಾದರೂ ಮುಖ ಸಪ್ಪಗೆ ಇಟ್ಟುಕೊಂಡವನಲ್ಲ. ಇವನ ಅಪ್ಪ-ಅಮ್ಮನಿಗಂತೂ ಬಲು ಪ್ರಿಯ ಚಂದ್ರ. ಎಲ್ಲಾದರೂ ಅಜ್ಜ-ಅಜ್ಜಿ ಕೂತುಕೊಂಡರೆ ಸಾಕು ಅವರ ಹಿಂದೆ ಹೋಗಿ ಅಜಿಯ ಸೀರೆಯ ಸೆರಗಿಗೂ, ಅಜ್ಜನ ಪಂಚೆಯ ಅಂಚಿಗೂ ಗಂಟು ಹಾಕಿ ಅವರ ಮುಂದೆ ನಿಂತುಕೊAಡು ಸುಮ್ಮನೆ ಅಜ್ಜಗೆ ಚಂದ್ರ “ಅಜ್ಜ ನನ್ನ ಕೈಯಲ್ಲಿ ನಿಮ್ಮ ಚಾಳೀಸು ಇದೆ ತೊಗೊಳಿ ಬಂದು” ಎನ್ನುತ್ತಾ ಅಲ್ಲೆ ನಿಂತಿರುವವ. ಅಜ್ಜ ಎದ್ದು ನಿಂತು ಮುಂದಕ್ಕೆ ಬರಬೇಕಾದರೇ ಪಂಚೆಯನ್ನು ಯಾರೋ ಎಳೆದಂತಾಗಿ ಬಲವಾಗಿ ಮುಂದಾದಾಗ ಕೆಳಗೆ ಬಿದ್ದು, ಅಜ್ಜಿಯು ಕೂಡ ಅವರ ಜೋಡಿ ಬೀಳುವಳು. ದೂರ ನಿಂತ ಚಂದ್ರನು ಜೋರಾಗಿ ನಗುತ್ತಾ. ಏನು ಗೊತ್ತಿರದ ಹಾಗೆ ಇದ್ದು ಅವರ ಹತ್ತಿರ ಬಂದು ಅವರನ್ನು ಎಬ್ಬಿಸಿ ಕೂಡಿಸುವವ. ಹೀಗೆ ತುಂಟ ಬುದ್ಧಿ ಅವನದು, ಯಾವಾಗ ಚಂದ್ರನು ಪಟ್ಟಣಕ್ಕೆ ಓದಲು ಹೋದನು ಅವನ ಜೀವನದಲ್ಲಿ ಬಿರುಗಾಳಿ ಬಂದು ಕದ್ಯೋದ ಮನಸ್ಸು, ಹೃದಯ ಇನ್ನೂ ಅವನ ಜೀವನದ ದೇಹಕ್ಕೆ ಸೇರಿಯೇ ಇಲ್ಲ. ಈಗಂತೂ ದೊಡ್ಡವನಾಗಿನಿಂದ ಹೊಲದ ಕಡೆ, ಊರೊಳಗೆ ಸುತ್ತು ಹಾಕದೆ ಮನೆಯ ಗೋಡೆಗೆ ಒರಗಿ ಕೂಡುವ ಚಂದ್ರ. ಅಜ್ಜಿಯ ತೊಡೆಯ ಮೇಲೆ ಮಲಗಿ ಆಕಾಶದ ಚಂದ್ರ, ಚುಕ್ಕಿಯನ್ನು ನೋಡುತ್ತಾ ತನ್ನ ಜೀವನದಲ್ಲಿ ವಾಸಿಯಾಗದ ನೋವಿಗೆ ಕಾರಣ ಏನೆಂದು ಹೇಳುತ್ತಾ, ಅಜ್ಜಿ ಸಮಾಧಾನಪಡಿಸುತ್ತಾ, ಚಂದ್ರ ಮಲಗುವನು. ನೋವಿನ ಕಡಲು, ಸಾಯಲು ಮುಂದಾಗಬೇಕೆAದರೆ ಒಲ್ಲದ ಆಸೆ ಇದೆ. ಅಪ್ಪನಿಗಂತೂ ಬರಿ. ಯೋಚನೆಯಾಗಿದೆ. ‘ತುಂಟ ಬುದ್ಧಿ ಇದ್ದ ನನ್ನ ಮಗನ ಜೀವನ ಏಕೆ ಮಂಕಾಗಿದೆ’?. ಎಂಬುದಷ್ಟೇ ಕಾಡುವುದು. ದುಬಾರಿ ಖರ್ಚಾಗುವ ತಂತ್ರಜ್ಞಾನ ಶಿಕ್ಷಣ ಕ್ಷೇತ್ರಕ್ಕೆ ಹೋದ ಚಂದ್ರ ಅರ್ಧಕ್ಕೆ ತಡೆಹಿಡಿದ ವಿದ್ಯಾಭ್ಯಾಸ. ಹಗಲುಗನಸು ಕಾಣುವ ಚಂದ್ರ ರಾತ್ರಿಗನಸು ಕಾಣುತ್ತಿದ್ದಾನೆ. ದಿನಕ್ಕೊಂದು ರೀತಿಯ ಕನಸ್ಸುಗಳು ಅವನದು. ಚಂದ್ರನಿಗAತೂ ನೆನಪಿನ ಶಕ್ತಿ ಅಪಾರ ಯಾವುದನ್ನು ಮರೆಯುವುದೇ ಇಲ್ಲ. ಪ್ರತಿಯೊಂದು ಕನಸ್ಸನ್ನು ಡೈರಿಯಲ್ಲಿ ಬರೆದಿಡುವ ಚಂದ್ರ. ಈಗಿನ ಕನಸ್ಸುಗಳನ್ನು ಡೈರಿಯಲ್ಲಿ ಸೇರಿಸುವ ಅಭ್ಯಾಸ ಮಾಡಿಕೊಂಡಿಲ್ಲ. ತನ್ನ ಬಾಲ್ಯದಲ್ಲಿ ಬರೆದ ಮುತ್ತು, ಹವಳ, ವಜ್ರದಂತ ಸಿಹಿ-ಸಂದೇಶಗಳನ್ನು ಡೈರಿಯಲ್ಲಿ ನೋಡಿ ಈಗಂತೂ ಗೋಳು ಅಂತ ಅಳುತ್ತಾನೆ. ಅತಿಯಾದ ನೆನಪಿನ ಶಕ್ತಿ ಇರೋದು ಮತ್ತೊಂದು ಕೊರತೆಯಾಗಿದೆ. ಯಾವಾಗಲೂ ನೆನಪುಗಳು ಕಾಡುತ್ತವೆ, ಕಾಯಿಸುತ್ತವೆ, ಕಾಪಾಡುತ್ತವೆ.
ಇವಳ ತಂದೆ ಊರಿಗೆ ಗೌಡ, ಬಡವರ ಬಂಧು. ಇವಳ ಊರು ಅತಿ ದೊಡ್ಡದು ಅಲ್ಲ. ಮೂರು ಅಥವಾ ನಾಲ್ಕು ಸಾವಿರ ಜನಸಂಖ್ಯೆದಿAದ ಕೂಡಿದ ಗ್ರಾಮ. ಇವಳು ಬಾಲ್ಯದಿಂದಲೇ ಬಲು ಚತುರೆ, ಧೈರ್ಯವಂತೆ. ಒಮ್ಮೆ ಇವಳು ಐದನೇ ತರಗತಿಯಲ್ಲಿ ಓದುತ್ತಿರುವಾಗ ಶಿಕ್ಷಕರೊಬ್ಬರು ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅದುವೇ ಪ್ರತಿಯೊಬ್ಬ ವಿದ್ಯಾರ್ಥಿಗಳ ಕೈಯಲ್ಲಿ ಪ್ರತಿಗಳನ್ನು ಕೈಗೆಕೊಟ್ಟು, ಅದನ್ನು ಸ್ಪಷ್ಟವಾಗಿ ಓದಲು ಹೇಳಿ ವೇಗವಾಗಿ ಬರೆಯಲು ತಿಳಿಸಿದಾಗ. ಇವಳು ಸ್ಪರ್ಧೆಯಲ್ಲಿ ಜಯಗಳಿಸುತ್ತಾಳೆ. ಇವಳನ್ನು ಅರ್ಥಮಾಡಿಕೊಳ್ಳುವುದೇ ಒಂದು ವಿಚಿತ್ರ ಅನುಭವ. ತಂದೆಗAತು ಈಕೆ ಮುದ್ದಿನ ಮಗಳು. ಮನೆಯವರೆಲ್ಲ ಅತಿ ಪ್ರೀತಿಯಿಂದ ‘ಚೈತ್ರ’ ಎಂದು ಕರೆಯುತ್ತಿದ್ದರು. ಚೈತ್ರ ಬಹಳ ಬುದ್ಧಿವಂತೆ ಹಾಗೂ ಸ್ವಾರ್ಥಿ, ಅಹಂಕಾರಿ ಸಹ ಹೌದು, ತನ್ನದೇ ಆಗಬೇಕೆಂಬ ಹಠಮಾರಿ ಸ್ವಭಾವದವಳು. ತುಸು ಕಠಿಣವಾಗಿ ಕಂಡರು ಮನಸ್ಸು ತುಂಬ ಮೃದು. ಕೆಟ್ಟವರಿಗೆ ಕೆಟ್ಟವಳಾಗಿದ್ದು, ಒಳ್ಳೆಯವರಿಗೆ ಒಳ್ಳೇಯವಳು. ಚೈತ್ರ ಎಲ್ಲರಂತೆ ಹೇಳಿ ಮಾಡುತ್ತಿರಲಿಲ್ಲ. ಮಾಡಿ ಹೇಳುತ್ತಿದ್ದಳು. ಚರ್ಚೆ, ಭಾಷಣದಲ್ಲೂ ಇವಳು ಮೊದಲಿಗಳು. ಎಲ್ಲಾರಿಗೂ ಆಶ್ಚರ್ಯವಾಗುಂತೆ ಮಾಡುವುದೇ ಇವಳ ಅಭ್ಯಾಸ. ಒಟ್ಟಿನಲ್ಲಿ ಎಲ್ಲರ ಜೋಡಿ ಇರದೆ ತನ್ನದೇ ಆದ ಮೋಡಿನಲ್ಲಿ ಮೆರೆಯುವಂತವಳು. ಸದಾ ಓದಿನಲ್ಲೂ ಅಭಿರುಚಿ. ತುಂಬು ಕುಟುಂಬದಲ್ಲಿ ಓದಿ ಹೆಸರು ಮಾಡುವ ಗುರಿಯನ್ನು ಹೊಂದಿದ್ದಾಳೆ. ಅವಿಭಕ್ತ ಕುಟುಂಬ, ಅಣ್ಣಂದಿರು, ಅಕ್ಕಂದಿರು, ಇವಳೇ ಆ ಅವಿಭಕ್ತ ಕುಟುಂಬಕ್ಕೆ ಚಿಕ್ಕವಳು. ಊರಿಗೆ ಮದಕರಿ ಎಂದು ಹೆಸರುವಾಸಿಯಾದ ತನ್ನ ಅಪ್ಪಾಜಿಗೆ ‘`ಇದು ಹೀಗಲ್ಲ ಅಪ್ಪಾಜಿ, ಹೀಗೆ ಮಾಡಿ ಹಾಗೆ ಮಾಡಿ ಸರಿಹೋಗುತ್ತದೆ’’. ಎಂದೇಳುವಳು. ಚೈತ್ರಳ ಕಂಡರೇ ಅಪ್ಪಾಜಿಗೆ ಬಲು ಪ್ರೀತಿ-ಮನೆಯಲ್ಲಿ ಅಪ್ಪಾಜಿಯನ್ನು ಕಂಡರೇ ಎಲ್ಲಾರಿಗೂ ಹೆದರಿಕೆ ಆದರೆ ಚೈತ್ರಗಳಿಗೆ ಮಾತ್ರ ಸಲುಗೆ ನೀಡಿದ್ದರು. ಒಗ್ಗಟ್ಟಿನ ಸುಂದರವಾದ ಸಂಸಾರ. ಚೈತ್ರಳ ಚಿಕ್ಕಪಂದಿರು, ತಾಯಂದಿರು ಅಣ್ಣಂದಿರು, ಅಕ್ಕಂದಿರು ಅಷ್ಟೇ ಅನ್ಯೋನ್ಯವಾಗಿದ್ದಾರೆ. ಮನೆಯಲ್ಲಿ ಚೈತ್ರಳ ಮೇಲೆ ತಂದೆೆ ದೃಢ ನಂಬಿಕೆ ಹೊಂದಿದ್ದರು. ಅವಳ ಧೈರ್ಯ, ಚತುರತೆಯಿಂದ ‘`ನನ್ನ ಮನೆತನದ ಕೀರ್ತಿ ಹೆಚ್ಚಿಸುತ್ತದೆ’’ ಎಂದು ಹೆಮ್ಮೆ ವ್ಯಕ್ತಪಡಿಸುತ್ತಿದ್ದರು. ಶಾಲೆಯಲ್ಲೂ ಆದರ್ಶ ವಿದ್ಯಾರ್ಥಿನಿ. ಗೆಳತಿಯರಿಗೂ ಬೇಕಾದವಳು ಆದ್ದರಿಂದ ಅವಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಮನೆಯಲ್ಲಿ ಎಲ್ಲರ ಊಟ ಒಂದು ಬಾರಿಯಾದರೆ ಚೈತ್ರಳ ಹಾಗೂ ಅಪ್ಪಾಜಿಯ ಊಟ ಮೊದಲ ಬಾರಿಗೆ, ಶಾಲೆಯ ಅಭ್ಯಾಸದ ಜೊತೆಗೆ ಊರಿನ ತೊಂದರೆಗಳಿಗೆ ಅಪ್ಪಾಜಿ ಹೆದರಿಸುತ್ತಿದ್ದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕಿ ಕೊಡುವಳು. ಅಣ್ಣಂದಿರಿಗೆ, ಒಂದೊAದು ರೀತಿಯ ನೌಕರಿಗೆ ಸೇರಿ ಎಂದು ಒತ್ತಾಯಿಸಿದಳು. ಒಗ್ಗಟ್ಟಿನ ಈ ಕುಟುಂಬ ಕಂಡು ಹೊಟ್ಟೆಕಿಚ್ಚು ಪಡುವ ಆ ಊರಿನ ಇನ್ನೊಂದು ಕುಟುಂಬದ ಸದಸ್ಯರು.
ಚೈತ್ರ ಪ್ರೌಢ ಹಂತ ಮುಗಿದು ಕಾಲೇಜಿನ ಹಂತಕ್ಕಾಗಿ ನಗರಕ್ಕೆ ಹೊರಟಳು. ತಂತ್ರಜ್ಞಾನ ಕ್ಷೇತ್ರದಲ್ಲಿ ಅಭ್ಯಾಸ ಮಾಡ ತೊಡಗಿದಳು. ಹತ್ತಾರು ಪ್ರೆöÊಜ್ ವರ್ಷದಲ್ಲಿಯೇ ತಂದಳು. ಅಪ್ಪಾಜಿಯ ಜೊತೆ ಸುತ್ತಾಡ ತೊಡಗಿದಳು. ಬಾಲ್ಯವಿಹಾಹ, ಅತ್ಯಾಚಾರ, ದೌರ್ಜನ್ಯ ಅಸ್ಪೃಶ್ಯತೆ ಈ ಸಮಸ್ಯೆಗಳ ವಿರುದ್ಧ ಭಾಷಣ ಕಾರ್ಯಕ್ರಮ ಹಮ್ಮಿಕೊಂಡಳು. ಚೈತ್ರಳಿಗೆ ಎಲ್ಲಾ ಆಫೀರ‍್ಸ್ ಪರಿಚಯ ಕೂಡ ಆದಾರು. ಕಾಲೇಜು ಹಂತ ಮುಗಿದಿದೆ ಮುಂದಿನ ವ್ಯಾಸಂಗದಲ್ಲಿದ್ದಾಳೆ. ಒಂದು ದಿನ ಚೈತ್ರ ಅಪ್ಪಾಜಿಗೆ ಹೇಳಿದಳು.
“ಅಪ್ಪಾಜಿ ಇವತ್ತು ನಾನು ನಿಮ್ಮ ಜೊತೆ ಊಟ ಮಾಡುವುದಿಲ್ಲ. ಹಾಗೇ, ಮಾತು ಸಹ ಆಡುವುದಿಲ್ಲ”.
ಅಪ್ಪಾಜಿ “ಯಾಕೋ ಪುಟ್ಟ”.
“ಇಲ್ಲ ಅಪ್ಪಾಜಿ ನೀವು ಒಪ್ಪಿಕೊಳ್ಳಿ”
“ನೀ ಹೇಳಿದ್ದು ಸರಿಯಾಗಿ ಇರುತ್ತೆ ಬಿಡು ಕಣೋ ! ಸರಿ ನಾನು ಒಪ್ಪಿದೆ.
ಮೌನ ಆವರಿಸಿತಿಉ. ನಂತರ ಅಪ್ಪಾಜಿಯೇ ಕೇಳಿದರು.
“ಯಾಕೋ ಚೈತ್ರ ಈ ಸ್ಪರ್ಧೆ ಯಾಕೆ ಏರ್ಪಡಿಸಿದೆ?”
“ಅಪ್ಪಾಜಿ ಈ ಒಂದು ದಿನ ನನ್ನ ಜೊತೆ ಮಾತನಾಡಿ ಬದಲಾಗಿ ನನ್ನೆಲ್ಲ ಅಣ್ಣಂದಿರ, ಅಕ್ಕಂದಿರ ಜೊತೆ ಕಳೆಯಿರಿ.”
ಅಪ್ಪಾಜಿಗೆ ಇಷ್ಟ ಇಲ್ಲದಿದ್ದರೂ ಒಪ್ಪಿದರು. ಚೈತ್ರ ಎಲ್ಲರಂತೆ ಖುಷಿಯಿಂದ ಅಪ್ಪಾಜಿಯನ್ನು ಅಪ್ಪಿಕೊಂಡಳು. ರಾತ್ರಿಯಾಗಿತ್ತು. ಅಪ್ಪಾಜಿ ಆ ದಿನ ಗಡಿಯಾರವನ್ನೇ ನೋಡುತ್ತಾ ಕುಳಿತಿದ್ದರು. ರಾತ್ರಿ ಯಾವಾಗಲೂ ಪ್ರತಿದಿನ ಅಪ್ಪಾಜಿಯ ಹಾಗೂ ಚೈತ್ರ ಒಮ್ಮೆಲೆ ಊಟ ಮಾಡಿ ಮಲಗುವರು. ಅಪ್ಪಾಜಿ ಸೂರ್ಯೋದಯವಾಗುತ್ತಲೆ ‘ಚೈತ್ರ’ ಎಂದು ಕೂಗ ಬೇಕೆನುವುದರಲ್ಲಿಯೇ ಚೈತ್ರ ಅಲ್ಲಿರಲಿಲ್ಲ.
“ಓಹೋ ಚೈತ್ರ ಅವಳ ಅಮ್ಮನ ಕೋಣೆಯಲ್ಲಿ ಮಲಗಿರಬೇಕೆಂದು ಕೊಂಡರು”. ಹಾಗೆಯೇ ಹೊರಟು ನೋಡಿದರು. ಅಲ್ಲಿಯು ಕಾಣಲಿಲ್ಲ. ಎಲ್ಲಾ ಕಡೆ ನೋಡಿದರು ಅಣ್ಣಂದಿರು, ಅಕ್ಕಂದಿರು, ಚಿಕ್ಕಪ್ಪಂದಿರು, ಚಿಕ್ಕಮಂದಿರು ನೋಡಿದರೂ ಕಾಣಲಿಲ್ಲ. ಕೊನೆಗೆ ಅವಳ ಮೊಬೈಲ್ ಗೆ ಕರೆ ಮಾಡಿದರೆ “ವ್ಯಾಪ್ತಿ ಪ್ರದೇಶದಿಂದ ಹೊರಗಿದೆ’’ ಎಂದು ಹೇಳುತ್ತಿತ್ತು.
ಅಮ್ಮ ಹೆದರುತ್ತಿದ್ದರು, “ಇಂತಹ ಸ್ಥಿತಿ ಒಂದು ದಿನ ಕೂಡ ನಮ್ಮ ಮನೆಯಲ್ಲಿ ಒದಗಿದೆ ಇಲ್ಲ.” “ರೀ ಸ್ವಾಮಿ ಚೈತ್ರಗೇ ನೀವು ಬಹಳ ಸಲುಗೆ ಕೊಟ್ಟಿದ್ದೀರಿ. ನೋಡಿ ಈಗ ಹೇಳದೆ ಕೇಳದೇ ಹೊರಟವಳೆ”. ಎಂದರು. ಮನೆಯ ಹಿರಿಮಗ
“ಅಮ್ಮ ಏಕೆ ಹೆದರಿತ್ತೀಯಾ ಅವಳೇನು ಚಿಕ್ಕವಳಾ ? ಇಪ್ಪತ್ನಾಲ್ಕು ವರ್ಷದವಳು” . ಮನೆಯ ವಾತಾವರಣವೇ ಮೌನದಿಂದ ಆವರಿಸಿತ್ತು ಯಾರಿಗೆ ಏನು ಹೇಳಬೇಕೆಂಬುದೇ ತೋಚುತ್ತಿರಲಿಲ್ಲ. ಅಪ್ಪಾಜಿ ದೇವರ ಜಗುಲಿ ಹತ್ತಿರ ಕುಳಿತು “ನನ್ನ ಮಗಳು ನಿನ್ನೆ ಏರ್ಪಡಿಸಿದ ಸ್ಪರ್ಧೆ ಇದಕ್ಕೆ ಇರಬಹುಬದ? ಚೈತ್ರ ಒಂದು ದಿನ ನನ್ನ ಬಿಟ್ಟಿರದೆ ಇರುವವಳಲ್ಲ, ನನ್ನನ್ನೂ ಕೇಳದೆ ಯಾವ ಕೆಲಸ ಮಾಡದವಳು. ನಗರದ ಕಾಲೇಜಿಗೆ ಹೋಗಬೇಕಾದರೆ ಮುನ್ನಾ ದಿನವೆ ಹೇಳುತ್ತಿದ್ದಳು. ಮನೆಯಲ್ಲಿ ಎಲ್ಲಾ ಮಕ್ಕಳನ್ನು ಬಿಟ್ಟು ಇವಳನ್ನೇ ಹೆಚ್ಚು ಪ್ರೀತಿಸಿದ್ದು. ನನ್ನ ಮನಸ್ಸಿಗೆ ಹತ್ತಿರವಾಗಿದ್ದ ನನ್ನ ಉಸಿರು. ಉಸಿರು ಹೇಳದೆ ಹಾರಿದೆ. ಇರಲಿ ನನ್ನ ಮಗಳು ಏನೇ ಮಾಡಿರಲಿ ಅದು ಒಳ್ಳೇಯದಕ್ಕೆ” ಎಂದು ಧೈರ್ಯ ತಂದುಕೊAಡರು. ಕೊನೆಗೆ ಆ ದಿನವೆಲ್ಲ ಮೌನದಲ್ಲಿ ಕಳೆದರು. ಆಗಲೇ ಚೈತ್ರಳ ವಿಷಯ ಊರಿನಲ್ಲಿ ಹರಡಿತ್ತು. ಎಲ್ಲಾ ಗೊತ್ತಿದ್ದ ಕಡೆ ಆಕೆಯನ್ನು ಹುಡುಕಿದರು. ಮರುದಿನ ಪ್ರಾರಂಭವಾಯಿತು. ಆ ದಿನ ಎರಡು ದಿನದ ಹಿಂದಿನ ದಿನದಂತೆ ಕಾಣುತ್ತಿರಲಿಲ್ಲ. ಅಪ್ಪಾಜಿ ರಾತ್ರಿಯಲ್ಲಿ ಧೈರ್ಯ ತುಂಬಿಕೊAಡು ‘ನನ್ನ ಮಗಳ ಮೇಲೆ ಸಂಪೂರ್ಣ ನಂಬಿಕೆ ಇದೆ’. ಎಂದು ಬಾಹ್ಯ ಕೆಲಸದಲ್ಲಿ ತೊಡಗಿದರು, ಆಂತರಿಕವಾಗಿ “ಚೈತ್ರಳು ಎಲ್ಲಿ ಇರಬಹುದು ಅಥವಾ ಏನು ಮಾಡುತ್ತಿರಬಹುದು. ಈ ವರ್ಷ ಬೇರೆ ಹಿರಿಮಗ ಮತ್ತು ಮಗಳ ಮದುವೆ ತಯಾರಿ ಕೂಡ ನಡೆದಿದೆ. ಮಗಳಿಲ್ಲದ ಮನೆಯಲ್ಲಿ ಮದುವೆ ಮಾಡುವುದಾದರೂ ಹೇಗೆ? ನನ್ನ ಮಗಳು ಬರುತ್ತಾಳೆ.” ಎಂದು ತೀರ್ಮಾನ ಕೈಗೊಂಡರು ಮದುವೆಯನ್ನು ಕೂಡ ಮಾಡಿದರು ಮಗನಿಗೆ ಮತ್ತು ಮಗಳಿಗೆ. ಉಲ್ಲಾಸಭರಿತವಾದ ಮನೆಯಲ್ಲಿ ಉಲ್ಲಾಸ ಹೊರಟು ಭರಿತ ಉಳಿದಿದಂತೆ ಕಾಣುತ್ತಿತ್ತು.
ಬಿಳಿ ಅಂಚಿನ ಸೀರೆ ಕೆಂಪು ಬಣ್ಣದ ಸೆರಗು, ಕಿವಿಯಲ್ಲಿ ದುಂಡಗೆ ಇರುವ ಕಿವಿ ಓಲೆ, ಕೈಯಲ್ಲಿ ಬಳೆ, ಉದ್ದನೆ ಜಡೆ ಬಲಗೈಯಲ್ಲಿ ಪುಸ್ತಕಗಳನ್ನು ಹಿಡಿದು ಚೈತ್ರ ನಗರದ ಕಾಲೇಜಿನಿಂದ ತನ್ನ ಊರಿಗೆ ಬರುತ್ತಿದ್ದಾಳೆ. ಅವಳ ಊರಿಗೆ ರೈಲ್ವೆ ವ್ಯವಸ್ಥೆ ಒಂದಿತ್ತು. ರೈಲ್ವೆಯಲ್ಲಿ ಒಂಟಿ ಸೀಟ್‌ಗೆ ಒಂಟಿಯಾದ ಚೈತ್ರ ಕೂತಿದ್ದಳು. ಅವಳು ಯೊಚಿಸುತ್ತಿದ್ದಳು “ನನ್ನ ಡಿಪ್ಲೋಮಾ ವರ್ಷ ಮುಗಿತು, ಈ ವರ್ಷ ಫೈನಲ್ ಇಂಜಿನಿಯರಿAಗ್, ರಜೆ ಪ್ರಾರಂಭಿಸಿವೆ. ಇನ್ನೂ ಒಂದು ತಿಂಗಳವರೆಗೆ ನಗರಕ್ಕೆ ಹೋಗಲ್ಲ. ಫೈನಲ್ ಈಯರ್ ಮುಗಿದ ನಂತರ ಅಪ್ಪಾಜಿಯವರ ಜೊತೆ ಇದ್ದು ಬಿಡೋದು”. ಎಂದು ಏನೇನೊ ಮೌನವಾಗಿ ಕಿಟಕಿಯಲ್ಲಿ ನೋಡುತ್ತಾ, ಯೋಚಿಸುತ್ತಾ ಕೂತಿದ್ದಳು. ಮತ್ತೊಂದು ಸ್ಟೇಷನ ಬಂತು ಅಲ್ಲಿ ಹತ್ತೋರು ಹತ್ತಿದರು ಇಳಿಯುವರು ಇಳಿದರು. ಅಜ್ಜಿಯೊಬ್ಬಳು ಅವಳ ಪಕ್ಕದಲ್ಲಿ ಬಂದು ನಿಂತಿದ್ದಳು ಯೋಚಿಸುತ್ತಾ ಕೂತಿದ್ದ ಚೈತ್ರ ಅಜ್ಜಿಯನ್ನು ನೋಡಿ “ಅಜ್ಜಿ ನೀವು ಇಲ್ಲಿ ಕುಳಿತುಕೊಳ್ಳಿ” ಎಂದು ಚೈತ್ರ ಅಜ್ಜಿಯನ್ನು ತಾನು ಕುಳಿತಿದ್ದ ಸೀಟ್‌ಗೆ ಕುಳಿರಿಸಿ ಬಾಗಿಲ ಬಳಿ ನಿಂತಿದ್ದಳು. ತನ್ನ ಊರು ಇನ್ನು ೪೦ ಕಿ.ಮಿ. ಸಮೀಪ, ಸಮಯ ನೋಡಿದಳು ಸಾಯಂಕಾಲ ೫.೪೫ ನಿಮಿಷ ಸೂರ್ಯಸ್ತವಾಗುವ ಸಮಯ, ಅವಳ ನಯಕ್ಕೆ ತಂಪನೆ ಗಾಳಿಯ ಸ್ಪರ್ಶ, ಸೀರೆಯ ಸೆರಗು ಗಾಳಿಗೆ ಪಟಪಟಾಂತ ಹಾರುತ್ತಿತ್ತು. ಒಂದು ಕಡೆ ಸೂರ್ಯಸ್ತವಾಗುವ ಸಮಯದ ಬಿಸಿಲಿನ ಜೊತೆಗೆ ಜಡಿ ಮಳೆ ಸುರಿಯುತ್ತಿತ್ತು. ಮತ್ತೊಂದು ಸ್ಟೇಷನ್ ಬಂದಿತು. ಬಾಗಿಲ ಬಳಿ ನಿಂತಿದ್ದ ಚೈತ್ರ ಪಕ್ಕಕ್ಕೆ ಸರೆದಳು, ಪ್ರಯಾಣಿಕರು ಹತ್ತಿದರು ಹಾಗೂ ಇಳಿದರು. ಮುಂದೆ ನಿಧಾನವಾಗಿ ಸಾಗುತ್ತಿದ್ದ ರೈಲು. ವೇಗವಾಗಿ ಓಡಿ ಬರುತ್ತ ರೈಲು ಹತ್ತಿದ್ದಳು. ಒಂದು ಕೈಯಲ್ಲಿ ಕೊಡೆ ಮತ್ತೊಂದು ಕೈಯಲ್ಲಿ ಬ್ಯಾಗ್ ಅವರನ್ನು ಚೈತ್ರ ನೋಡಿ ಅವರ ಕೈಯಲ್ಲಿದ ಬ್ಯಾಗನ್ನು ತೆಗೆದುಕೊಂಡು ಅವರ ಬಲಗೈಯನ್ನು ಹಿಡಿದು ರೈಲಿನ ಒಳಗೆ ಎಳೆದರು. ಆಕೆಯ ವಯಸ್ಸು ಮೂವತ್ತು ಇರಬಹುದು. ಆಕೆ ಮುಖ ಕೆಳಗೆ ಹಾಕಿಕೊಂಡು ಉಸಿರು ಬಿಡುತ್ತಾ ‘ಥ್ಯಾಂಕ್ಸ್’ ಎಂದು ಹೇಳುತ್ತಾ ಚೈತ್ರನ ಮುಖ ನೋಡಿದಳು. ತಣ್ಣನೆಯ ಗಾಳಿಯಿಂದಾಗಿ ಚೈತ್ರ ತನ್ನ ಅಪ್ಪಾಜಿಯ ಶಾಲ್‌ನ್ನು ಮೈಮೇಲೆ ಹಾಕಿಕೊಳ್ಳುತ್ತಾ “ಅಲ್ಲಮ್ಮ ರೈಲು ಹೊರಡುತ್ತಿದೆ. ಅಂದ ಮೇಲೆ ಓಡಿ ಬಂದು ಹತ್ತೋಕೆ ಕಷ್ಟ ಆಗಲ್ವ?” ಎನ್ನುತ್ತಿದ್ದಳಾಗಿದ್ದಳು ಹೊರತು ಆಕೆಯ ಮುಖವನ್ನು ನೋಡಿರಲಿಲ್ಲ. ಆಕೆ ಚೈತ್ರನನ್ನು ನೋಡಿ ಬೆರಗಾಗಿ ಅವಳು ಹೇಳಿದ್ದನ್ನು ಕೇಳದೆ ತೋರು ಬೆರಳಿನಿಂದ “ನೀನು ಪ್ರೋಷಿ ಅಲ್ಲವೇ?’’ ರೈಲು ಅಲ್ಲಾಡಿದಂತಾಗಿ ಚೈತ್ರಳ ಮೈಮೇಲೆ ಇದ್ದ ಶಾಲು ಕೆಳಗೆ ಬಿದ್ದು, ರಭಸವಾದ ಮಳೆಗೆ ಆ ಹೆಸರು ಕೇಳಿ ಸಿಡಿಲು-ಗುಡುಗು ಆರ್ಭಟಿಸಿದಂತಾಯಿತು. ಟ್ರೆöÊನ್‌ನ ಗೋಡೆಗೆ ನಿಂತಿದ್ದ ಚೈತ್ರ ನೇರವಾಗಿ ಜಾರುತ್ತಾ ಕೆಳಗೆ ಕೂತಳು. ಕಲ್ಯಾಣಿಯವರು ಚಂದ್ರ ತೋರಿಸಿದ್ದ ಚೈತ್ರಳ ಫೋಟೋವನ್ನು ಒಮ್ಮೆ ನೆನಪಿಸಿಕೊಂಡಳು, ಆವಾಗ ಇವಳು ಚೈತ್ರನೇ ಎಂಬ ನಂಬಿಕೆ ಬಂತು
“ಐದು ವರ್ಷಗಳ ಹಿಂದೆ ಕೇವಲ ಇಬ್ಬರೇ ಇಬ್ಬರೂ ಈ ಹೆಸರನ್ನು ನನಗಾಗಿ ಬಳಸುತ್ತಿದ್ದರು”. ಚೈತ್ರಳಿಗೆ ಮೈನ್ಡ ಸುಟ್ಟು ಹೋದಂತಾಗಿ ದಿಭ್ರಮೆಗೊಂಡಳು. ತಣ್ಣನೆ ಗಾಳಿಗೆ ನಡುಗುತ್ತಿದ್ದ ಚೈತ್ರಳ ಮೈಯಲ್ಲ ಬೆವರು ಸುರಿಯತೊಡಗಿತು. ನೇರವಾಗಿ ಚೈತ್ರ “ನೀವ್ಯಾರು?” ಎಂದು ಕೇಳಿದಳು. ಆಕೆ ನಾನು “ಡಾಕ್ಟರ್ ಕಲ್ಯಾಣಿ”,
ಸಮಾಧಾನಗೊಳ್ಳುತ್ತಾ ಚೈತ್ರ. “ನನ್ನ ಈ ಹೆಸರು ನಿಮಗೆ ಹೇಗೆ ಗೊತ್ತಾಯಿತು?”
“ನಿನ್ನ ಹೆಸರು ಅಷ್ಟೇ ಅಲ್ಲ ನಿನ್ನ ಇತಿಹಾಸ ಕೂಡ ನನಗೆ ಗೊತ್ತು”.
“ನನ್ನ ಇತಿಹಾಸ ನೀವು ತಿಳಿದುಕೊಳ್ಳಬಹುದು ಆದರೇ ಆ ಹೆಸರೊಂದು ಇದೆಯಲ್ಲ ಅದನ್ನ ಮಾತ್ರ ತಿಳಿಯಲು ಅಸಾಧ್ಯ”
“ಎಲ್ಲಾ ಗುಟ್ಟನ್ನು ಗುಬ್ಬಚ್ಚಿ ಗೂಡಲ್ಲಿ ಗುಟ್ಟಾಗಿ ಇಡಲು ಅಸಾಧ್ಯ”
“ನೀವು ಈ ಹೆಸರನ್ನು ತಿಳಿಯಲು ಇರುವೆಯ ಗೂಡಿನಿಂದ ಮೂಟೆ ತೆಗೆದಷ್ಟೆ ಕಷ್ಟವಾಗುತ್ತದೆ. ಮೂಟೆ ತೆಗೆಯಲು ಹೋದರೆ ಹೇಗೆ ಗೂಡು ಕಳಚಿ ಬೀಳುತ್ತದೆ, ಹಾಗೆ ಈ ಹೆಸರು ತಿಳಿಯಲು ಅಷ್ಟೇ ಕಷ್ಟವಾಗುತ್ತದೆ. ಆದರೂ ಅದನ್ನು ನೀವು ತಿಳಿದುಕೊಂಡಿದ್ದೀರಾ ಅಂದ ಮೇಲೆ ನನ್ನ ಮೆದುಳು ಮತ್ತು ಹೃದಯ ನಿಮಗೆ ಗೊತ್ತಿರಲೇಬೇಕು.” ಚೈತ್ರಳು ದೀರ್ಘವಾಗಿ ಉಸಿರುಬಿಡುತ್ತಾ ಹೇಳಿದಳು. ಮತ್ತೆ ಕಲ್ಯಾಣಿಯವರು “ಪ್ರೋಷಿ” ಎಂದರು.
ಚೈತ್ರ “ಆ ಹೆಸರು ನನ್ನದಲ್ಲ ಯಾವೊತ್ತೊ ಸಮುದ್ರದ ಅಲೆ ಬಂದು ಮರಳ ಮೇಲೆ ಬರೆದ ಹೆಸರು ದೋಚಿಕೊಂಡು ತನ್ನೊಳಗೆ ಬಿಗಿಯಾಗಿ ಹಿಡಿದಿಟ್ಟುಕೊಂಡಿದೆ. ನನ್ನ ಹೆಸರು ಚೈತ್ರ ಅಷ್ಟೆ!”.
“ನೋಡು ಚೈತ್ರ ಮರಳ ಮೇಲೆ ಬರೆದ ಹೆಸರು ಪ್ರೋಷಿ ಅಲ್ಲ. ಇದು ಸಾಗರದ ಬಂಡೆಯ ಮೇಲೆ ಅಳಿಸದಂತೆ ಕೆತ್ತಿದ ಹೆಸರು ನೆನಪಿರಲಿ. ಚೈತ್ರ! ನಿನ್ನ ಮೆದುಳಿಗೆ ಮತ್ತು ಹೃದಯಕ್ಕೆ ನಾನು ಭೇಟಿ ಮಾಡಿದೆ ನಿನ್ನ ಹಾಗೆ ಅವರು ಕೂಡ ಕೂಗಾಡುತ್ತಾರೆ”.
“ಸಾಕು ಮುಂದೆ ಮಾತನಾಡಬೇಡಿ ಏಳು ವರ್ಷಗಳಿಂದ ಒಂದು ಕ್ಷಣ ನೆನಸದೆ ವಿಷಯವನ್ನು ನೆನಪಿಸಿದಿರಾ ?”. ಕಲ್ಯಾಣಿಯವರು ಮರಗುತ್ತಾ “ನಿನಗೆ ತೊಂದರೆಯಾದರೇ ಕ್ಷಮೆ ಇರಲಿ ಚೈತ್ರ”. ಅಲ್ಲಿಗೆ ಇವರು ತಣ್ಣಗಾದರು. ಮತ್ತೊಂದು ಸ್ಟೇಶನ ಬಂತು. ಕಲ್ಯಾಣಿ ಇಳಿದರು. ಅವರು ಇಳಿದ ತಕ್ಷಣ ಚೈತ್ರ ಅವರು ಡಾಕ್ಟರ ಅಂತೆ ನನ್ನೆಲ್ಲಾ ವಿಷಯ ಮಾತಾಡುತ್ತಿದ್ದಾರೆ. ಆದರೇ ಅರ‍್ಯಾರು ಇರಬಹುದು? ಏನು ಕೇಳಲೆ ಇಲ್ಲ. ಈಗ ಅವರು ಹೊರಟು ಹೋದರು. ಅವರ ಊರು ಗೊತ್ತಿಲ್ಲ. ಜೀವನದಲ್ಲಿ ಮತ್ತೆ ಸಿಗುವುದು ಕೂಡ ಅಪರೂಪವಾಗಿರಬಹುದು” ಎಂದು ಆಲೋಚಿಸುತ್ತಿರುವಾಗಲೇ…… ಮರಳಿ ಕಲ್ಯಾಣಿ ಬಂದು ಕೂತರು, ವಾಟರ ಬಾಟಲ್ ತರಲು ಹೋದ ಕಲ್ಯಾಣಿ ಸೀಟ್‌ಲ್ಲಿ ಕೂತರು. ಮೂರು ನಿಮಿಷ ಮೌನ. ಇಬ್ಬರ ಮಧ್ಯೆ. ಚೈತ್ರ ತನ್ನ ಮನದಲ್ಲಿ “ಇವರು ಇನ್ನೂ ಲಾಂಗ ಜರ್ನಿ ಹೋಗಬಹುದು. ಮುಂದಿನ ಸ್ಟೇಷನಗೆ ನಾನು ಇಳಿಯುವುದು ಮೂವರ ಬಗ್ಗೆ ಮಾತಾಡುತ್ತಿದ್ದರೆ ಅಂದ ಮೇಲೆ ಇವರನ್ನು ಮಾತನಾಡಿಸಲೇ ? ಛೇ…! ಬೇಡವೇ ಬೇಡ. ಇಂತಿಷ್ಟೆ ಸಾಕು.” ಎಂದು ತೀರ್ಮಾನಿಸಿ ಕಣ್ಣಿನ ರೆಪ್ಪೆ ಮುಚ್ಚುತಿರಬೇಕಾದರೆ ಡಾಕ್ಟರ ಕಲ್ಯಾಣಿ ಅವರ ಬ್ಯಾಗ ಮೇಲೆ ಶ್ರೀಮತಿ ಡಾಕ್ಟರ್ ಕಲ್ಯಾಣಿ ಮತ್ತು ಅವರ ಆಸ್ಪತ್ರೆ ಹೆಸರು ಜೊತೆಗೆ ಸೆಲ್ ನಂಬರ್ ಕೂಡ ಇಂಗ್ಲೀಷನಲ್ಲಿ ಇತ್ತು. ಅದನ್ನು ಒಂದು ನಿಮಿಷ ನಿಟ್ಟುಸಿರು ಬಿಟ್ಟು ನೋಡಿದಳು. ಹಾಗೇ ನೋಡುತ್ತಾ ಕಣ್ಣರೆಪ್ಪೆ ಮುಚ್ಚಿದಳು.
ಕಲ್ಯಾಣಿ ಅವರು ಸುಮ್ಮನೆ ಕೂತಿದ್ದರು. ಚೈತ್ರ ಇಳಿಯುವ ಸ್ಟೇಷನ ಬಂದೇ ಬಿಟ್ಟಿತ್ತು. ಚೈತ್ರ ಇಳಿಯ ತೊಡಗಿದಳು. ಕಲ್ಯಾಣಿ ಅವರು “ಚೈತ್ರ ಹೋಗುತ್ತಿದ್ದಳಲ್ಲ. ಇವಳ ವಿಳಾಸ ಆದರೂ ಬರೆದುಕೊಳ್ಳಲಿಲ್ಲವಲ್ಲ” ಎಂದು ಕಲ್ಯಾಣಿಯವರು ಕಳವಳ ವ್ಯಕ್ತಪಡಿಸಿದರು. ಬಾಗಿಲ ಬಳಿಯಿಂದ ಇಳಿದು ನಡೆಯುತ್ತಿದ್ದ ಚೈತ್ರ ಡಾಕ್ಟರ ಕಲ್ಯಾಣಿ ಕೂತಿದ್ದ ಕಿಟಕಿಯ ಪಕ್ಕ ಬರುತ್ತಿರಬೇಕಾದರೆ,
ಕಲ್ಯಾಣಿಯವರು “ಚೈತ್ರ ನೀನು ಚೆನ್ನಾಗಿದ್ದೀಯಾ ಆದರೇ ಜೊತೆಗೆ ಇಂಜಿನಿಯರಿAಗ್ ಕೂಡ, ನಿನ್ನ ಹೃದಯ ಮತ್ತು ಮೆದುಳು ನಿನ್ನಂತೆ ಇಲ್ಲ. ಅವರ ಸ್ಥಿತಿ ನೋಡಲು ಕಣ್ಣಾದರೂ ಏಕೆ? ಇವೆ. ಪ್ರೋಷಿ” ಎನ್ನುತ್ತಾ ಕಲ್ಯಾಣಿ ಚೈತ್ರಳನ್ನು ನೋಡಿದರೂ ಆಗಲೇ ಚೈತ್ರ ಮುಂದೆ ಸಾಗುತ್ತಿದ್ದಳು.
ಟ್ರೆöÊನ ಮುಂದೆ ಹೊರಟಿತು. ಡಾಕ್ಟರ ಕಲ್ಯಾಣಿ ಹೊರಟರು.
“ಚಂದ್ರ ನಿಂತುಕೊಳ್ಳೊ. ಇನ್ನು ಸ್ವಲ್ಪ ಹೊತ್ತಾದರೂ ಈ ವಿಷಯದ ಕುರಿತು ಮಾತನಾಡು” ಎಂದು ಕಲ್ಯಾಣಿ ಚಂದ್ರನಿಗೆ ಬೇಡಿಕೊಳ್ಳುತ್ತಿದ್ದರು. ಚಂದ್ರ “ಡಾಕ್ಟೆçà ದಯವಿಟ್ಟು ಹೆಚ್ಚು ಆ ವಿಷಯದ ಬಗ್ಗೆ ಕೇಳಬೇಡಿ. ನಿಮಗೆ ಎಲ್ಲಾ ವಿಷಯ ಹೇಳಿದ್ದೆ ತಪ್ಪಾಯಿತು”. ಮುಂದೆ ಸಾಗುತ್ತಿದ್ದ ಚಂದ್ರನಿಗೆ ಕಲ್ಯಾಣಿಯವರು “ನಾನಿ! ನಾನು ನಿನ್ನ ಉಸಿರಾಗಿದ್ದಳಲ್ಲ ಹಿಂದೆ ಅವಳಿಗೆ ಭೇಟಿ ಮಾಡಿದೆ.”
“ನನ್ನ ಉಸಿರಾಗಿ, ಹೃದಯವಿಲ್ಲದ ದೇಹಕ್ಕೆ ಮತ್ಯಾವುದು ಉಸಿರು?”.
“ಈಗ ನಿನ್ನಲ್ಲಿ ನಿನ್ನ ಹೃದಯವಿಲ್ಲದಿರಬಹುದು. ಆದರೇ ಹಿಂದೆ ಒಂದು ದಿನ ಹೃದಯಕ್ಕೆ ಉಸಿರಾದ್ದವಳನ್ನು ನಾ ಕಂಡೆ”. ಸ್ವಲ್ಪ ಸಮಯದ ಬಳಿಕ ಚಂದ್ರ.
“ದಯವಿಟ್ಟು. ಆ ವಿಷಯವನ್ನು ಬಿಟ್ಟು ಬಿಡಿ”. ಎಂದು ಮಾತ್ರೆಗಳನ್ನು ತೆಗೆದುಕೊಂಡು ಬೇಗ ಬೇಗ ಮನೆಕಡೆ ಹೊರಟನು. ಕಲ್ಯಾಣಿಯವರು ಮನದಲ್ಲಿ “ಚೈತ್ರಳು ಹೆಸರು ಅಳಿಸಿ ಹೋಗಿದೆ ಅನ್ನುವಳು. ಇನ್ನೂ ಚಂದ್ರನು ಉಸಿರೇ ಇಲ್ಲದ ಹೃದಯವಿದೆ ಅನ್ನುತ್ತಾನೆ. ಇವರುಗಳ ಮಧ್ಯೆ ನಾನ್ಯಾಕೆ? ನನಗೆ ಬೇರೆ ಕೆಲಸವಿಲ್ಲ ಏನು? ಇವರನ್ನು ಒಬ್ಬರಿಗೊಬ್ಬರನ್ನು ಕೂಡಿಸುವುದೆ ಕಷ್ಟದ ಕೆಲಸ. ಇವರ ವಿಷಯ ಇಲ್ಲಿಗೆ ಬಿಟ್ಟು ನಾನು ಸುಮ್ಮನೆ ಇರುವುದೇ ವಾಸಿ” ಎಂದು ತೀರ್ಮಾನಿಸಿ ಮಲಗಿದರು.
ಚಿತ್ರ ಸಾಗರಳು ಪಡಸಾಲೆಯ ಆವರಣ ಶುಚಿಗೊಳಿಸುತ್ತಿದ್ದಾಳೆ. ಮಗಳು ಭೂಮಿಕಾ ದೇವರ ಜಗುಲಿ ಹತ್ತಿರ ದೀಪ ಹಚ್ಚುತ್ತಿದ್ದಾಳೆ. ಅತ್ತೆ, ಟಿ.ವಿ. ನೋಡುತ್ತಿದ್ದಾರೆ, ಮಾವ ಆಫೀಸಿಗೆ ಹೋಗಲು ತಯಾರಾಗುತ್ತಿದ್ದಾರೆ. ಭೂಮಿಕಾ ಕಾಫಿಯನ್ನು ತಂದು ಅಜ್ಜಿಗೆ ಕೊಡಲು ಹೆದರುತ್ತಿದ್ದಾಳೆ. ನಂದಿನಿಯು ತನ್ನ ರೂಮಿನಿಂದಲೇ “ಅಮ್ಮ ಈ ದಿನ ನನ್ನ ಬರ್ತ್ಡೇ ಕಣಮ್ಮ, ಹುಟ್ಟು ಹಬ್ಬಕ್ಕೆ ಯಾವ ಬಟ್ಟೆ ಹಾಕಿಕೊಳ್ಳಲಿ ಬಾ ಅಮ್ಮ ತೋರಿಸು ಬಾ” ಕೂಗಿದಳು. ಅಮ್ಮ ಕುಳಿತ ಸ್ಥಳದಿಂದ “ಯಾವುದಾದರೂ ಹಾಕಿಕೊ ದೇವಾಲಯಕ್ಕೆ ಹೋಗ ಬೇಕು ಬಾರೇ” ಎಂದರು. ಸ್ವಲ್ಪ ಸಮಯದ ಬಳಿಕ ಬಂದು ನಂದಿನಿಯು “ಅಮ್ಮ ದೇವಾಲಯ, ಗೀವಾಲಯ ಅಂದರೇ ನಾನು ಹೋಗುವುದಿಲ್ಲ. ದೇವರೆಂದರೆ ಅನಿಷ್ಟ”. ಮುಖ ಸಿಡಿಮಿಡಿ ಮಾಡುತ್ತಿದ್ದಳು. ಅವಳ ಅಡ್ಡ ಬಂದು “ಸರಿ ಬಿಡೋ ನಿನಗೆ ದೇವರ ಮೇಲೆ ಭಕ್ತಿ ಇಲ್ಲವೆಂದರೆ ಬೇಡ”, ಎಂದರು. ಅವಳಮ್ಮ “ಹೋಗಿ ಬಾರೇ ದೇವಾಲಯಕ್ಕೆ ಹೋದರೆ ಮನಶಾಂತಿ ಆಗುತ್ತ ಹೋಗಿ ಬಾ ಹೋಗು”.
ನಂದಿನಿ “ಅಮ್ಮ ದೇವರಿದ್ದರೇ, ನನ್ನ ಅಣ್ಣ ಸಾಯುತ್ತಿದ್ದನಾ?”
“ಇರಲಿ ಬಿಡೆ ಅದಕ್ಕೆಲ್ಲಾ ಕಾರಣ ದೇವರಲ್ಲ. ಇದ್ದಳಲ್ಲ ಸೊಸೆ ಬಾರಿಗೆ ಕಾಲಿನವಳು. ಇವಳ ಕಾಲಿನ ಗುಣದಿಂದಾಗಿ ಹೀಗಾಗಿದ್ದು.” ಎಂದು ಚಿತ್ರಳÀನ್ನೇ ನೋಡಿ ಹೇಳುತ್ತಿದ್ದರು.
ಪಡಸಾಲೆಯಲ್ಲಿ ಕೆಲಸ ಮಾಡುತ್ತಿದ್ದ ಚಿತ್ರ ಎಲ್ಲಾನೂ ಕೇಳಿಸಿಕೊಳ್ಳುತ್ತಿದ್ದಳು. “ನನಗೂ ಒಳ್ಳೆಯ ಕಾಲ ಬಂದೇ ಬರಬೇಕು. ಅಲ್ಲಿಯವರೆಗೂ ನಂಬಿಕೆಯಲ್ಲಿ ಇರುವುದೇ ಸೂಕ್ತ” ಎಂದು ಧೈರ್ಯ ತುಂಬಿಕೊಳ್ಳುತ್ತಿದ್ದರು ಆಂತರಿಕವಾಗಿ ಭೂಮಿಕಾಳಿಗೆ ಶಾಲೆಗೆ ಕಳುಹಿಸದಿದ್ದರೇನು? ನಾನು ವಿದ್ಯಾವಂತವಳು ನನ್ನ ಮಗಳಿಗೆ ನಾನೇ ಕಲಿಸಿಕೊಡುವೆ, ಅವಳನ್ನು ವಿದ್ಯಾವಂತಳಾಗಿ ಮಾಡುವೆ ಅವಳನ್ನು ಒಂದು ಹಂತಕ್ಕೆ ತಲುಪಿಸಲು ಪ್ರಯತ್ನಿಸಬೇಕು.” ಯೋಚಿಸುತ್ತಿದ್ದಳು. ಅವಾಗಲೇ ಭೂಮಿಕಾ ಬಳಿ ಬಂದು “ಅಮ್ಮ-ಅಮ್ಮ-ನನ್ನ ಹುಟ್ಟು ಹಬ್ಬ ಯಾವ ದಿನ ? ಅತ್ತೆದು ಈ ದಿನವಂತೆ? ಹೌದಾ? ಹೇಳಮ್ಮಾ”.
ಚಿತ್ರ ಮಗಳನ್ನು ತಬ್ಬಿಕೊಂಡು “ನಿನ್ನ ಬರ್ತಡೇ ಯಾವ ದಿನವಾದರೇನೂ ಆಚರಿಸುವಷ್ಟು ಹಕ್ಕು ನನಗಿಲ್ಲಮ್ಮ.” ಎಂದು ಅಳತೊಡಗಿದರು.
ಸಾಯಂಕಾಲ ಅಜ್ಜ ಬಂದು ಟಿ.ವಿ. ನೋಡುತ್ತಿದ್ದರು. ವಾರ್ತೆಯಲ್ಲಿ ಎಂಟು ವರ್ಷದ ಬಾಲಕನ ಸಾಧನೆಯನ್ನು ಅಜ್ಜ ಕೇಳುತ್ತಿದ್ದರು. ಕೆಲಸದಲ್ಲಿ ತೊಡಗಿದ್ದ ಚಿತ್ರಸಾಗರ್‌ಳು ವಾರ್ತೆ ಕೇಳುತ್ತಿದ್ದಳು. ತನ್ನ ಮಗಳು ಕೂಡ ಬೆಳಕಿಗೆ ಬರಬೇಕು ಅವಳಿಗೆ ನಾನೇ ಜ್ಞಾನಾರ್ಜನೆ ಮಾಡಬೇಕು. ಈ ಮನೆಯಿಂದ ಹೊರಗೆ ಹೋಗಿ ನನ್ನ ಮಗಳು ಕಲಿಯುವುದು ಕಷ್ಟ. ಮನೆಯಲ್ಲಿ ಎಲ್ಲಾ ಇವಳಿಗೆ ಹೇಳಿಕೊಡಬೇಕು’. ಎಂದು ತೀರ್ಮಾನಿಸಿದ್ದಳು.
ಸಂಜೆ ೭.೫೦ಕ್ಕೆ ಭೂಮಿಗೆ ಬೆಂಕಿಯAತಹ ಜ್ವರ, ಚಿತ್ರ ಅತ್ತೆ ಹತ್ತಿರ ಬಂದು “ಅತ್ತೆ ಭೂಮಿಕಾಳಿಗೆ ಜ್ವರ ಬಂದಿದೆ. ಡಾಕ್ಟರನಾದರೂ ಕರೆಯಿರಿ ದಯವಿಟ್ಟು” ಬೇಡುತ್ತಿದ್ದಳು.
“ಹೌದಾ! ಕರೆಯುವೆ ಖುಷಿಯಿಂದ ರೀ, ಮಗಳೇ ನಂದಿನಿ ಬನ್ನಿ ಬೇಗ”. ಚಿತ್ರಳು ಅತ್ತೆಯವರು ಡಾಕ್ಟರನ್ನು ಕರೆಯಲು ಬಿಟ್ಟು ಮಾವ ಮತ್ತು ನಾದಿನಿಯನ್ನು ಕರೆತಿದ್ದಾಳೆ ಯಾಕೆ? ಊಹಿಸುತ್ತಿದ್ದಳು.
“ರೀ ಬನ್ನಿ ಎಂತಹ ಖುಷಿ ಸಂಗತಿ, ಈ ಅನಿಷ್ಟಳಿಗೆ ಬೆಂಕಿಯAತಹ ಜ್ವರ ಬಂದಿದೆ. ಬಹುಶಃ ಸತ್ತರು ಸಾಯಬಹುದು”.
“ಅತ್ತೆ ದಯವಿಟ್ಟು ಹಾಗೆನ್ನಬೇಡಿ. ಮಾವ ಡಾಕ್ಟರನ್ನನಾದರೂ ಕರೆಯಿರಿ”. ನಾದಿನಿಯು….
“ಡಾಕ್ಟರ ಇಲ್ಲ, ಯಾರೂ ಇಲ್ಲ”. ಚಿತ್ರ ಮಾವನ ಹತ್ತಿರ ಕೂಡ ಕೋರಿಕೊಂಡಳು ಎಲ್ಲಾ ವ್ಯರ್ಥ ಮಾವ ಏನು ಉತ್ತರಿಸದೇ ಹೊರಟರು.
ಚಿತ್ರ ಅಳುವ ಸ್ಥಿತಿಯನ್ನು ಕಂಡAತಹ ಅತ್ತೆಗೆ, ನಾದಿನಿಗೂ ಮನಸ್ಸು ಮರಗುವಂತ್ತಿತ್ತು. ಯಾರೂ ಏನು ಉತ್ತರಿಸಿದೆ ಹೊರಟರು. ಚಿತ್ರಳ ಅಳು ಸಾಕಾಯಿತು ಆದರೇ ಮಗಳ ಜ್ವರಾ? ತಡಮಾಡಿ ಚಿತ್ರಳು ಗಂಡನ ಫೋಟೋ ಎತ್ತಿಕೊಂಡಳು ಪಕ್ಕದಲ್ಲಿ ಜ್ವರದಿಂದ ಬೇಯುತ್ತಿದ್ದ ಮಗಳು ‘ಅಮ್ಮ…. ಅಮ್ಮ..’ ಎಂದು ಕನವೆರೆಸುತ್ತಿತ್ತು. ಮಗಳನ್ನು ನೋಡಿ ಅಳುವುದನ್ನು ಬಿಟ್ಟು ಮತ್ಯಾವುದು ಆಕೆ ಮಾಡಲಿಲ್ಲ. ರಾತೊ ರಾತ್ರಿ ಮಗಳ ಹಣೆಗೆ ತಣ್ಣನೆಯ ಬಟ್ಟೆಯಿಂದ ಒರೆಸುತ್ತಾ. ಅಳುತ್ತಾ ಗಂಡನ ಫೋಟೋ ನೋಡಿ ಪ್ರಾರ್ಥಿಸುತ್ತಾ ರಾತ್ರಿಯಲ್ಲಾ ಹಾಗೇ ಕಳೆಯುತ್ತಿದ್ದ ಚಿತ್ರಳು ತನ್ನ ಅರ್ಧ ವ್ಯವಸ್ಥೆಯಲ್ಲಿ ಅರ್ಧಂಗಿಯಾಗಿದ್ದ ಗಂಡನ ಮೇಲೆ ಆಕೆಯ ಕೋಪವೆ ಇರಲಿಲ್ಲ.
“ಪತಿ, ಪತಿದೇವ ಪತಿಯ ಮೇಲೆ ಕೋಪ ಮಾಡಿಕೊಳ್ಳುವುದು ತಪ್ಪು. ನನ್ನ ಸಂಕಷ್ಟ ನನಗಿರಲಿ ಮಗಳ ಆರೋಗ್ಯ ಚೆನ್ನಾಗಾಗಲಿ ಮುಂಜಾನೆ ವೇಳೆಗೆ ನನ್ನ ಮಗಳು ನನ್ನ ಜೊತೆಗೆ ಮಾತಾಡಬೇಕು. ಅದಕ್ಕೆ ನಿಮ್ಮ ಆಶೀರ್ವಾದವಿರಲಿ” ಎಂದು ಗಂಡನ ಭಾವಚಿತ್ರದ ಮುಂದೆ ಮೊಣಕಾಲೂರಿ ಬೇಡುತ್ತಿದ್ದಳು. ಚಿತ್ರ ಅಳುವುದು ಕಂಡರೆ ಅಯ್ಯೋ ! ಎನಿಸುತ್ತದೆ. ಮಲಗಿದ್ದ ಮಾವ ಎದ್ದು ಬಂದು ಕಣ್ಣು ಒರೆಸುತ್ತಾ ಚಿತ್ರಳನ್ನು ನೋಡಿದನು. ಅವಳ ಮುಂದೆ ಮಗನ ಫೋಟೋ ಪಕ್ಕ ಭೂಮಿಕಾಳನ್ನು ಕಂಡಾಗ ಕರುಳು ಕಿತ್ತು ಬರುವಂತಾಯಿತು.
ಸೂರ್ಯೋದಯವಾಯಿತು. ಭೂಮಿಕಾಗೆ ತನ್ನ ತಂದೆಯ ಆಶೀರ್ವಾದದಿಂದಾಗಿ ಹುಷಾರಾಗಿದ್ದÀÄ. ರಾತ್ರಿಯಲ್ಲಾ ಮಗಳ ಸೇವೆ ಮಾಡಿದ ಚಿತ್ರಳಿಗೆ ಮಗಳು ಸ್ವಲ್ಪ ಹುಷಾರಾಗಿದ್ದು ನೋಡಿ ನೆಮ್ಮದಿ ಸಿಕ್ಕಿತ್ತು. ತನ್ನ ತವರ ಮನೆಗೆ ಹೋಗಬೇಕೆಂಬ ಆಸೆ ಉಂಟಾಗಿತ್ತು. ಆದರೇ…. ಚಿತ್ರಳಿಗೆ ಆಸೆ, ಕನಸುಗಳು ಕಾಣುವುದೇ ತಪ್ಪು ಅದು “ನನ್ನ ಪಾಲಿಗೆ ಅದು ನೆರವೇರದ ವಿಷಯ.” ಹೀಗಿರುವಾಗ ಚಿತ್ರಳ ತವರ ಮನೆಯವರು ಯಾರಾದರೂ ಬಂದರೇ ಆ ದಿನ ಚಿತ್ರಳನ್ನು ಮನೆಯವರು ಪ್ರೀತಿಯಿಂದ ಕಾಣುವರು. ಮರುದಿನ ಕ್ರೂರರಂತೆ ವರ್ತಿಸುತ್ತಾರೆ. ಮಾವ, ಅತ್ತೆ, ನಾದಿನಿ ಸಂಬAಧಿಕರ ಮನೆಯ ನಾಮಕರಣ ಸಮಾರಂಭಕ್ಕೆ ಹೋಗಿದ್ದಾರೆ. ಮಗಳ ಭೂಮಿಕಾಳ ಜ್ವರ ಸ್ವಲ್ಪ ಹಾಗೇ ಇದೆ. ತಾಯಿಯು ಮಗಳನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ದೇವರ ಹಾಗೂ ಗಂಡನ ಫೋಟೋದ ಪಕ್ಕ ಕುಳಿತಿದ್ದಾಳೆ. ಏನು ಅರಿಯದ ಕಂದಮ್ಮ.
“ಅಮ್ಮ. ಅಮ್ಮ ! ಜಗುಲಿ ಕಟ್ಟೆ ಮೇಲೆ ಇರುವ ಫೋಟೋ ಯಾರದ್ದು?” ಕೇಳಿತು
“ದೇವರದಮ್ಮ”
“ಹೌದಾ? ಹಾಗಿದ್ದರೆ ಕೈಯಲ್ಲಿ ಹಿಡಿದಿದ್ದೀಯಾ ಅಲ್ವ? ಈ ಫೋಟೋ ಯಾರದ್ದು?” ಆಶ್ಚರ್ಯದಿದ ತಾಯಿ ಮೆಲ್ಲಗೆ,
“ನಿನ್ನ ಅಪ್ಪಂದು ಕಣಮ್ಮ”.
“ಅಪ್ಪ? ಅಪ್ಪ ಅಂದರೆ ಏನು? ಅರ‍್ಯಾರು?”
ತೊದಲು ನುಡಿಯಿಂದ ಕೇಳುತ್ತಿತ್ತು.
“ನಿನ್ನ ಹಾಗೂ ನಿನ್ನ ಪಾಲಿನ ದೇವರು” ಅಳು ತುಂಬಿತ್ತು.
“ಅಜ್ಜ-ಅಜ್ಜಿ, ಅತ್ತೆ ನನಗೆ ಗೊತ್ತಮ್ಮ ಅಪ್ಪ ಅಂದರೇ ನನಗೆ ಗೊತ್ತಿಲ್ವಲ್ಲಮ್ಮ. ಈ ಅಪ್ಪ ಎಲ್ಲಿದ್ದಾರೆ?
ನೋಡೋಕೆ ನನ್ನ ಹಾಗೇ ಇದ್ದಾರ ?’’ ಮಗಳ ಈ ಮಾತು ಕೇಳಿ ಚಿತ್ರ ಆಶ್ಚರ್ಯಚಕಿತಳಾದಳು.

“ಅಮ್ಮ, ಮನೆ ಕೆಲಸ ಎಲ್ಲಾನೂ ನೀನೆ ಮಾಡುತ್ತಾ ಇರುತ್ತೀಯಾ, ಅದು ಬಿಡು ನೀನು ಟಿ.ವಿ.ಯು ನೋಡಲ್ಲ. ಮನೆ ಬಿಟ್ಟು ಅತ್ತೆ ಹೋದ ಹಾಗೇ ಹೊರಗಡೆ ಕೂಡ ಹೋಗುವುದಿಲ್ಲ.” ಎಂದು ಬರಿ ತೊದಲ ನುಡಿಯಿಂದ ಇದಿಷ್ಟೇ ಐದು ನಿಮಿಷ ಹೇಳಿದ ಮಗುವನ್ನು ಕಂಡು ತಾಯಿ ಅಪ್ಪಿಕೊಂಡಳು ಅಳುತ್ತಾ “ಪುಟ್ಟ ನಿನ್ನ ಈ ಮಾತುಗಳನ್ನು ನನ್ನ ಕಿವಿಗಳು ಕೇಳುತ್ತಿವೆ ಆದರೆ ನಂಬೋಕೆ ಆಗುತ್ತಿಲ್ಲ”. ಅಳುವಿನ ಜೊತೆ ಮಾತು ಹೊರಟಿದ್ದವು. ತಬ್ಬಿಕೊಂಡ ಮಗು ತನ್ನ ತಾಯಿಯ ಕೈಗಳನ್ನು ಸ್ವಲ್ಪ ತಳ್ಳಿ
“ಅಮ್ಮ…! ” ಎಂದು ಚೀರಿ. “ಅಳು.. ಅಳು ಇದನ್ನು ಬಿಟ್ಟು ಬರ‍್ಯಾವುದು ಇಲ್ಲ? ಕೆಲಸ ಮಾಡೋದು ಜೊತೆಗೆ ಅಳೋದು. ಒಂದು ದಿನವಾದರೂ ನೀನು ಅತ್ತೆ ಹಾಗೆ ನಗುವುದನ್ನು ನಾ ಕಂಡಿಲ್ಲ.” ಎನ್ನುತ್ತಿದ್ದ ಮಗು ನಿಶಬ್ದವಾಗಿ ನಿಂತಳು. ಬಳಿಕ ಚಿತ್ರಳ ಅತ್ತೆಯು “ಡಾಕ್ಟರ್ ಬಂದಿದ್ದಾರೆ ಭೂಮಿಕಾಳನ್ನು ನೋಡುತ್ತಾರೆ ರೂಮಿಗೆ ಕರೆದುಕೊಂಡು ಹೋಗು” ಎಂದಳು.
ಚಿತ್ರಳಿಗೆ ಇದು ಕನಸ್ಸು ಇರಬಹುದಾ? ಅನಿಸುತ್ತಿತ್ತು ಅಷ್ಟರಲ್ಲಿ ನಾದಿನಿಯು ಡಾಕ್ಟರನ್ನು ಕರೆದುಕೊಂಡು ಹೋಗಿದ್ದಳು ಒಳಗೆ. ಡಾಕ್ಟರ “ಮಗು ತುಂಬ ತೆಳ್ಳಗಾಗಿದೆ. ನೋಡಿದರೆ ಭಯ ಬರುವಂತಿದೆ” ಎಂದರು ನಾದಿನಿಗೆ.
ಚಿತ್ರಳು “ಕ್ರೂರಿಗಳಾದ ಮಾವಂದಿರು ಡಾಕ್ಟರ್‌ನನ್ನು ಕರೆಯಿಸಲು ಕಾರಣವೇನು?” ಯೋಚನೆಯಲ್ಲಿದ್ದರು.
ಡಾಕ್ಟರ ಒಳಗಡೆ ಮಲಗಿರುವ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಇಲ್ಲಿ ಶುರುವಾಗಿತ್ತು.
“ಅಮ್ಮ, ಸೊಸೆ ನೋಡಿ ಹೇಗೆ ಯೋಚನೆಯಲ್ಲಿದ್ದಾಳೆ. ನಾವು ಡಾಕ್ಟರರನ್ನು ಕರೆತಂದದ್ದು ಯೋಚಿಸುತ್ತಿರಬಹುದು? ಎಂದಳು ನಾದಿನಿ ನಂದಿನಿ.
“ಹೌದಮ್ಮ” ಎಂದಳು ಅತ್ತೆ.
“ಅಮ್ಮ ಅವಳಿಗೇನು ಗೊತ್ತು ನಮ್ಮ ಪ್ಲಾನ” ಎಂದು ನಾದಿನಿಯು ದುರುಗುಟ್ಟುತ್ತಾ ನೋಡುತ್ತಿದ್ದಳು. ಮೌನವಾಗಿ ನಿಂತಿದ್ದ ಚಿತ್ರಳಿಗೆ ಗೊತ್ತಾಯಿತು.
“ಮನೆಯಲ್ಲಿ ಕೆಲಸ ಮಾಡಲು ಹಾಗೂ ಭೂಮಿಕಾಳ ತಂದೆಯ ಆಸ್ತಿ ಪತ್ರಗಳ ಹೆಸರು ನನ್ನ ತವರು ಮನೆಯವರು. ಆ ದಿನ ಎಲ್ಲಾನೂ ಭೂಮಿಕಾಳ ಹೆಸರ ಮೇಲೆ ವರ್ಗಾಯಿಸಿದ್ದಾರೆ. ಅವಳ ಮತ್ತು ನನ್ನ ಸಹಿಗಾಗಿ ನನ್ನ ಮಗಳಿಗೆ ಟ್ರಿಟಮೆಂಟ್ ಕೊಡಲು ಡಾಕ್ಟರನ್ನು ಕರೆತಂದಿದ್ದಾರೆ.” ಎಂದು ಆಲೋಚಿಸಿದಳು. ಇತ್ತ ಒಳಗಡೆ ಕಲ್ಯಾಣಿಯವರು ಮಗುವಿನ ಕುರಿತಾಗಿ.
“ಮಗು ನಿನ್ನ ಹೆಸರೇನು?” ಮಗು ಸುಸ್ತಾಗಿ
“ಭೂಮಿಕಾ” ಬಳಿಕ ಡಾಕ್ಟರರು “ಹೌದಾ? ಇಂತಹ ಶ್ರೀಮಂತ ಮನೆಯ ಮೊಮ್ಮಗಳಾದ ಈ ಹುಡಿಗಿಗೆ
ಆರೋಗ್ಯ ಸರಿಯಿಲ್ಲ ಜೊತೆಗೆ ರಕ್ತ ಹೀನತೆ, ತೆಳ್ಳಗೆ ಇದ್ದಳೆ” ಎಂದು ಆಲೋಚಿಸುತ್ತಿದ್ದರು. ಮರಳಿ ಕಲ್ಯಾಣಿ.
“ಭೂಮಿ ನಿನ್ನ ಹೆಸರು ಚೆನ್ನಾಗಿದೆ. ನಿಮ್ಮ ಅಪ್ಪ-ಅಮ್ಮಂದಿರಲ್ಲಿ ಯಾರು ಇಷ್ಟ ನಿನಗೆ?” ಡಾಕ್ಟರರು ತಪಾಸಣೆ
ಮಾಡುತ್ತಾ ಕೇಳಿದರು.
“ಅಮ್ಮ ಇಷ್ಟ. ಆದರೇ ಅಪ್ಪ ಅಂದರೇನು?”
“ಅಪ್ಪ! ಅಪ್ಪ ಅಂದರೇ ಡ್ಯಾಡ್ ಕಣಮ್ಮ”
“ಡ್ಯಾಡ್ ಅಂದರೇ?”
“ಡ್ಯಾಡ ಅಂದರೇ ನಿನಗೆ ದಿನಾಲೂ ಚಾಕಲೇಟ, ಬಿಸ್ಕಟ ತರುತರಲ್ವ? ಅವರು”.
“ಏನು ಅರ್ಥವಾಗುತ್ತಿಲ್ಲ ನಂಗೆ” ಮಗು ಮೌನದಿಂದ ಮಾತು ವ್ಯಕ್ತಪಡಿಸಿತು.”
“ನಿಮ್ಮ ಅಪ್ಪ. ಅಮ್ಮ ಎಲ್ಲಿದ್ದಾರೆ?” ಡಾಕ್ಟರ ಇಂಜಿಕ್ಷನ ಮಾಡಬೇಕಾಗಿತ್ತು. ಹಾಗಾಗಿ ಈ ರೀತಿ ಪ್ರಶ್ನೆ ಕೇಳುತ್ತಿದ್ದರು.
ಅದಕ್ಕೆ ಮಗು,
“ಅಮ್ಮ ಹೊರಗಡೆ ಇರಬಹುದು. ಅಪ್ಪ ಫೋಟೋದಲ್ಲಿ ಇದ್ದಾರೆ, ಥೆಟ್ಟು ನನ್ನ ಹಾಗೇ ಇರೋದು.”
“ಹೌದಾ? ಹಾಗಾದರೆ ಅವರ ಹೆಸರೇನು?”
“ಅಮ್ಮ ಚಿತ್ರ ಸಾಗರ, ಆದರೇ, ಅಪ್ಪ ಅಂದರೆ ನನಗೆ ಗೊತ್ತಿಲ್ಲ. ಹಾಗೆಂದರೇನು ಅಪ್ಪ ಅಂದರೆ ಏನೆಂದು ತಿಳಿಸಿ
ನೀವು ಹೇಳುತ್ತಿಲ್ಲ. ಅಮ್ಮನೂ ಹೇಳುತ್ತಿಲ್ಲ” ಮಗು ಬೇಜಾರಿನಿಂದ ಉತ್ತರ ನೀಡಿತು.
ಖುರ್ಚಿ ಮೇಲೆ ಕುಳಿತಿದ್ದ ಡಾಕ್ಟರ್ ಕಲ್ಯಾಣಿಯವರು “ಗಾಡ್, ನಾನು ಬಂದದ್ದು ಚಿತ್ರಳ ಮನೆಗಾ? ಇದು ಚಿತ್ರಳ ಮಗಳಾ? ಚಿತ್ರಳ ಗಂಡ ಮರಣ ಹೊಂದಿರಬಹುದು ಹಾಗಾಗಿ ಈ ಮಗುವಿಗೆ ತನ್ನ ತಂದೆಯ ಅರಿವಿಲ್ಲ. ಚಂದ್ರ ಹೇಳಿದ್ದು ನಿಜ. ಚಿತ್ರಳದು ಮದುವೆಯಾಗಿದೆ. ತುಂಬ ಮಾತನಾಡುವ ಮಗು”. ಯೋಚಿಸುತ್ತಾ ಡಾಕ್ಟರ ಇಂಜಿಕ್ಷನ್ ಮಾಡುತ್ತಿದ್ದರು. ನೋವಿಗೆ ಹೆದರಿದ ಮಗು “ಅಮ್ಮ” ಎಂದು ಕೂಗಿತು. ಹೊರಗಡೆ ಯೋಚನೆಯ, ಮೌನದ, ದುಃಖದ ಸಮಸ್ಯೆಗಳನ್ನು ಅನುಭವಿಸುತ್ತಿದ್ದ ತಾಯಿ ಮಗುವಿನ ಧ್ವನಿಯನ್ನು ಆಲಿಸಿ ಓಡಿ ಹೋದಳು. ಮಗುವಿಗೆ ಆಯಾಸ ಹೆಚ್ಚದಂತಾಗಿ ನಿದ್ರಿಸತೊಡಗಿತ್ತು.
“ನಿನ್ನ ಮಗಳು ಬಲು ಜಾಣೆ ಬೇಜಾನು ಮಾತನಾಡುತ್ತಾಳೆ.”
ಚಿತ್ರಳು ಮಗುವನ್ನು ಮಲಗಿಸುತ್ತಾ ಕುಳಿತಿದ್ದಳು, ಡಾಕ್ಟರ್‌ಗೆ ಗೊತ್ತಾಗಿ, “ನಿನ್ನ ಬಗ್ಗೆ ನನಗೆ ಸ್ವಲ್ಪ ಮುಂಚೆಯೇ ಗೊತ್ತು. ಹೇಗೆಂದರೆ ಚಂದ್ರ ಸ್ವಲ್ಪ-ಸ್ವಲ್ಪ ಹೇಳಿದ್ದಾನೆ. ಅದಿರಲಿ ಈಗ ನಾನು ಹೊರಗಡೆಯಿಂದ ಒಳ ಬರಬೇಕಾದರೆ ಸ್ವಲ್ಪ ಕಣ್ಣು ಹಾಯಿಸಿದೆ ನಿನ್ನನ್ನು ಈ ಮನೆಯ ಕೆಲಸದವಳು ಅಂತ ತಿಳಿದಿದ್ದೆ. ಆದರೇ…..ಅದು ಬಿಡು. ನೀನೂ ಹಾಗೂ ನಿನ್ನ ಮಗು ಹೀಗೇಕೆ? ಮಗು ತುಂಬ ನೊಂದಿದೆ. ಗಂಡನ ಮರಣದಿಂದ ನೀನು ನೊಂದಿರಬಹುದು ವಿಧಿಯಾಟ ಬಲ್ಲವರಾರು? ಎಷ್ಟು ದಿವಸವಾಯಿತು ನಿನ್ನ ಪತಿಯು ಮರಣ ಹೊಂದಿ.” ಎಂದು ಪಕ್ಕ ನೋಡಿದರು ಚಿತ್ರಳು ಅಳತೊಡಗಿದ್ದಳು. ಬಳಿಕ ಕಲ್ಯಾಣಿಯವರು ಸಮೀಪಕ್ಕೆ ಬಂದು “ಚಿತ್ರ ಇಂತಹ ಶ್ರೀಮಂತರ ಮನೆಯಲ್ಲಿ ಮಗು ಅನಾರೋಗ್ಯದಿಂದ ಬಳಲುತ್ತಿದೆ ಅಂದರೇ ಕಾರಣ?, ಸಮಾಧಾನವಾಗಿರು.” ಎಂದು ವಿಚಾರಿಸುತ್ತಿದ್ದರು.
ಇತ್ತ ಹೊರಗಡೆ ನಾದಿನಿಯು ಅವಳ ಅಮ್ಮಳಿಗೆ “ಅಮ್ಮ ಈ ನಿನ್ನ ಸೊಸೆ ಡಾಕ್ಟರ ಬಳಿ ತನ್ನೆಲ್ಲಾ ಕಷ್ಟ ಹೇಳುತ್ತಿರಬಹುದು.”
“ಕಷ್ಟನೂ ಹೇಳಲ್ಲ. ಸುಖನೂ ಹೇಳಲ್ಲ. ಆ ಗೂಬೆ ಒಂದು ದಿನವಾದರೂ ತನ್ನ ತೊಂದರೆ ತವರ ಮನೆಯವರಿಗೆ ಹೇಳಿಲ್ಲ. ಅದರಲ್ಲಿ ಡಾಕ್ಟರಗೆ ಹೇಳುವುದು ಸುಳ್ಳು ಬಿಡು” ಎಂದು ನಾದಿನಿ ಮತ್ತು ಅತ್ತೆ ಮಾತನಾಡುತ್ತಿದ್ದರು.
ಇದೆಲ್ಲವು ಕಲ್ಯಾಣಿಯವರಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆದಷ್ಟರಲ್ಲಿ ಅರ್ಥ ಮಾಡಿಕೊಂಡರು. “ಇವಳಿಗೆ ಮನೆಯವರ ತೊಂದರೆ ಇದೆ” ಎಂಬುದನ್ನು ತಿಳಿದು ಚಿತ್ರಳಿಗೆ “ಸಮಾಧಾನವಾಗಿರು ಚಿತ್ರ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬುದು ನೆನಪಿರಲಿ” ಎಂದು ಸಮಾಧಾನ ಪಡೆಸಿದರು. ಹೊರಗಡೆ ಬಂದ ಡಾಕ್ಟರಿಗೆ “ನನ್ನ ಮೊಮ್ಮಗಳು ಹುಷಾರಾಗುತ್ತಾಳೆ ತಾನೇ” ಎಂದು ಅಜ್ಜಿ ಗಾಬರಿಯಂತೆ ನಾಟಕ ಮಾಡುತ್ತಿದ್ದರು. “ಡಾಕ್ಟರ್! ಹೌ ಇಸ್ ಹರ್ ಹೆಲ್ತ್” ಎಂದು ನಾದಿನಿ ಕೇಳಬೇಕೆಂದು ಕೇಳಿದಳು.
“ಡಾಕ್ಟರರೇ ದಯವಿಟ್ಟು ನನ್ನ ಮೊಮ್ಮಗಳ ಆರೋಗ್ಯ ಬೇಗ ವಾಸಿಮಾಡಿ ಅವಳು ಆಡುವ ಆಟದ ಸಾಮಾನು ಕುಳಿತ್ತಿವೆ, ಸ್ಕೂಲ್ ಬ್ಯಾಗ ನೋಡುತ್ತಿದೆ ಅವಳ ಹಾದಿ” ಎಂದು ಅಜ್ಜ ನೋವಿನಂತೆ ಹೇಳುತ್ತಿದ್ದರು. ಸ್ವಲ್ಪ ಸಮಯದ ಬಳಿಕ
“ಸರ್, ನಿಮ್ಮ ಮೊಮ್ಮಗಳು ಅಷ್ಟು ತೆಳ್ಳಗಾಗಿರಲು ಕಾರಣ ಏನು? ” ಜೊತೆಗೆ ರಕ್ತಹೀನತೆ ಕಲ್ಯಾಣಿ ಕೇಳಿದರು.
“ಇಲ್ಲ ಡಾಕ್ಟರ್! ಅವಳು ಹಾಗೆ ಅಭ್ಯಾಸ ಮಾಡುತ್ತಿರುತ್ತಾಳೆ. ಯಾವಾಗಲೂ ಊಟ ಮಾಡುವುದಿಲ್ಲ.
ಏನೂ ಇಲ್ಲ.” ಎಂದರು ಅಜ್ಜ, ಸಮಾಧಾನಗೊಳ್ಳುತ್ತಾ
“ಹೌದು ನಿಮ್ಮದೇನು ತಪ್ಪಿಲ್ಲ. ಅವಳ ತಾಯಿ ಇದಳಲ್ಲ ಅವಳದ್ದೇ ತಪ್ಪು. ಇಷ್ಟು ಪ್ರೀತಿ ಇರುವಂತಹ ಅಜ್ಜ-ಅಜ್ಜಿ ಸಿಕ್ಕಿರುವುದು ಭೂಮಿಯ ಅದೃಷ್ಟ” ಎಂದರು. ಕಲ್ಯಾಣಿ ಸುಮ್ಮನೆ. ಕೊನೆಯದಾಗಿ ಮನೆಯ ಮೂವರು ಸದಸ್ಯರಿಗೆ ಕೊಂಬು ಬಂತಾಯಿತು. ಕಲ್ಯಾಣಿಯವರು. “ನಿಮ್ಮ ಮೊಮ್ಮಗಳನ್ನು ನನ್ನ ಆಸ್ಪತ್ರೆಯಲ್ಲಿ ನಾಲ್ಕು ದಿನವಾದರೂ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲವಾದರೇ ಸಾವು ಖಚಿತ”. “ಹೌದಾ? ಹಾಗಾಗಬಾರದು. ಅವಳ ಜೋಡಿ ಅವಳಮ್ಮ ಇರುತ್ತಾಳೆ ಕರೆದುಕೊಂಡು ಹೋಗಿ, ಎಷ್ಟು ಖರ್ಚಾದರೂ ಪರವಾಗಿಲ್ಲ.” ಎಂದರು ಅಜ್ಜ.
“ಸರಿ…..ಸರಿ ಕರೆದುಕೊಂಡು ಹೋಗುವೆ.” ಎಂದು ಶ್ರೀಮತಿ ಡಾಕ್ಟರ್ ಕಲ್ಯಾಣಿ ಜೊತೆಗೆ ಕ್ರೋಷಿ, ಮಗಳು ಹೊರಟಿದು ಆಸ್ಪತ್ರೆಗಲ್ಲ. ಕಲ್ಯಾಣಿಯವರ ಮನೆ ಕಡೆ,
ಉಲ್ಲಾಸಭರಿತವಾದ ಮನೆಯಲ್ಲಿ ಉತ್ಸಾಹ ಹೊರಟು ಹೋಗಿ ಖಾಲಿ ತುಂಬಿದ ಅರಮನೆಯಲ್ಲಿ ಹಿರಿ ಮಕ್ಕಳ ಮದುವೆ ಕೂಡ ನಡೆಯಿತು. ಚೈತ್ರ ಇಲ್ಲದ ಬೇಸರ ಕಾಣುತ್ತಿತ್ತು. ಊರೊಳಗೆ ಚೈತ್ರಳ ಬಗ್ಗೆ ಮಾತಾಡಲೂ ತೊಡಗಿದರು. ಅಪ್ಪಾಜಿ ಮಾತ್ರ ಧೈರ್ಯದಿಂದಿದ್ದರು. ಇತ್ತೀಚೆಗೆ ಅಪ್ಪಾಜಿಗೆ ಊರಿನಲ್ಲಿನ ಒಂದು ಸಮಸ್ಯೆ ಉದ್ಭವವಾಗಿತ್ತು. ಅದು ಊರೊಳಗೆ ಬ್ಯಾಂಕನ ನಿರ್ಮಾಣ ಮಾಡುವುದು ಅಗಲವಾದ ಸ್ಥಳ (ಮೈದಾನ)ದಲ್ಲಿ ಬ್ಯಾಂಕ ನಿರ್ಮಾಣ ಮಾಡುವುದು ಖಚಿತ ಎಂಬುದು ಅಪ್ಪಾಜಿಯ ನಂಬಿಕೆ. ಆದರೇ ಅದೇ ಊರಿನ ಇನ್ನೊಂದು ಕುಟುಂಬಕ್ಕೆ ಬ್ಯಾಂಕ್‌ನ್ನು ಊರಿನ ಮಧ್ಯೆ ಅಗಲವಾದ ಮೈದಾನ ಕೊರತೆಯಲ್ಲಿ ನಿರ್ಮಾಣ ಮಾಡುವುದು. ಆ ಹೋರಾಟ ಹೀಗೆ ಈ ತೊಂದರೆ ಮುಂದುವರೆದಿತ್ತು. ಅಪ್ಪಾಜಿಗೆ ಚೈತ್ರ ಇದ್ದರೆ ಈ ಸಮಸ್ಯೆಯನ್ನು “ನೀರಲ್ಲಿ ಉಪ್ಪು ಕರಗಿದಷ್ಟು ಸುಲಭವಾಗಿ ಸರಿಪಡಿಸುತ್ತಿದ್ದಳು. “ ಓ! ಕೂಸೇ ಬಾರೇ ! ” ಎಂದು ಕನವರೆಸುತ್ತಿದ್ದರು.
ಚೈತ್ರಳು ಫೈನಲ್ ಇಂಜಿನಿಯರಿAಗ ಮುಗಿದ ಬಳಿಕ ನೇರ ತನ್ನ ಹಳ್ಳಿಗೆ ಬರುತ್ತಿದ್ದಳು. ಮಧ್ಯದಲ್ಲಿ ಡಾಕ್ಟರ ಕಲ್ಯಾಣಿಯವರ ಭೇಟಿಯಿಂದಾಗಿ ಊರಿಗೆ ತಲುಪಿದ ಎರಡನೇ ದಿನವೇ ಅಪ್ಪಾಜಿಯ ಜೊತೆಗೆ ಸ್ಪರ್ಧೆಮಾಡಿ ಹೊರಟೋಗಿ ಏಳು ತಿಂಗಳು ಕಳೆಯಿತು. ಈಗಂತೂ ಅಪ್ಪಾಜಿಗೆ ತೀವ್ರವಾದ ದಣಿವು ಕಾಣಿಸುತ್ತಿದೆ. ಊರಲ್ಲಿ ಬ್ಯಾಂಕನ ಸಮಸ್ಯೆ ಕೊನೆಗೂ ಅಪ್ಪಾಜಿಯ ತೀರ್ಮಾನದಂತೆ ನಡೆಯಿತು. ಅವಳು ಈವಾಗ ಒಂದು ಪುಟ್ಟ ಹಳ್ಳಿಯಲ್ಲಿದ್ದಾಳೆÉ ಅಂದು ಅಪ್ಪಾಜಿಗೆ ಏರ್ಪಡಿಸಿದ ಸ್ಪರ್ಧೆಯ ಉದ್ದೇಶ: ಚೈತ್ರ ವಾರ್ತಾ ಪತ್ರಿಕೆಯನ್ನು ಓದುತ್ತಿದ್ದಳು. ಅದರಲ್ಲಿ “ರಾಯಪುರ ಹಳ್ಳಿಯಲ್ಲಿ ವಿಧವೆಯರ ಮೇಲಿನ ಭಯಂಕರ ಶೋಷಣೆ” ಎಂಬುದನ್ನು ಆಕೆ ಓದಿದ್ದಳು. ಅದನ್ನು ಓದಿದ ಮೇಲೆ ಆಕೆ “ಅಪ್ಪಾಜಿ ಹಾಗೂ ನಾನು ಒಂದು ದಿನ ರಾಯಪುರ ಹಳ್ಳೀಗೆ ಭೇಟಿ ನೀಡಿ ಬರಬೇಕು” ಎಂದು ತೀರ್ಮಾನಿಸಿದಳು. ಆ ದಿನ ಮನೆಗೆ ಹೋಗಿ ಅಪ್ಪಾಜಿಯ ಜೊತೆ ಚೆನ್ನಾಗಿ ಮಾತಾಡಿ ಮಲಗಿದ್ದಾಗ ಕಲ್ಯಾಣಿಯವರು ಕಣ್ಣಲ್ಲಿ ನೀರು ತಂದರು. ನಿದ್ದೆ ಹತ್ತಲಿಲ್ಲ. ಕಲ್ಯಾಣಿಯವರು ಕೊನೆಗೆ ಹೇಳಿದ ಮಾತೊಂದು “ಚೈತ್ರ ನೀನು ಚೆನ್ನಾಗಿರುವೆ ಜೊತೆಗೆ ಫೈನಲ್ ಇಂಜಿನಿಯರಿAಗ ಕೂಡ ನಿನ್ನ ಹೃದಯ ಮತ್ತು ಮೆದುಳು ನಿನ್ನಂತೆ ಇಲ್ಲ. ಅವರ ಸ್ಥಿತಿ ನೋಡಲೂ ಕಣ್ಣಾದರೂ ಏಕೆ ಇವೆ.” ಎಂಬ ಮಾತು ಆಕೆಗೆ ನೆನಪು ತರಿಸಿ ದುಗುಡದಿಂದ. “ಪ್ರೋಷಿ, ನಾನಿ ಏನು ಮಾಡುತ್ತಿರಬಹುದು? ಯಾರ ಒಂದು ಕೆಟ್ಟ ದೃಷ್ಠಿಯಿಂದ ನಮ್ಮ ಸಂಬAಧ ಮುರಿಯಿತೋ?. ಪ್ರೋಷಿ ಬಲು ಮೃದು ನನ್ನನ್ನು ಒಂದು ದಿನವಾದರೂ ನೆನಪಿಸಿ ಕೊಂಡಿರುವುದಿಲ್ಲ. ಇನ್ನೂ ನಾನಿನ್ನೂ ಕನಸ್ಸಲ್ಲೂ ನನ್ನ ನೆರಳು ಕಂಡಿರುವುದಿಲ್ಲ. ಇವರನ್ನೊಮ್ಮೆ ಭೇಟಿಯಾಗಲೇ? ಛೇ! ನಾನೇಕೆ ಭೇಟಿಯಾಗಲಿ? ಅವರು ನನಗೆ ಅನ್ಯಾಯ ಮಾಡಿದ್ದಾರೆ. ನಾನಿ ಮಾಡಿದ ತರಲೆ ಕೆಲಸ ನೆನಪು ಬಂದರೂ ಮುಗುಳಗೆ ಮುಖದಲ್ಲಿದ್ದರೂ ಪುನಃ ನಾನಿ ಮೇಲೆ ಕೋಪ ಬಂದಾಯಿತು. ಯಾವ ನೆನಪು ಬಾರದೆಂದು ತಿಳಿದಿದ್ದೆ ಆ ನೆನಪು ಇಂದು ಕಾಡುತ್ತಿದೆ. ದೂರವಾದ ದಿನವೇ ಅವರಿಬ್ಬರೂ ನನ್ನ ದೃಷ್ಠಿಯಲ್ಲಿ ಸತ್ತು ಹೋದರು. ಸತ್ತ ನೆನಪು ಪುನಃ ಜೀವಂತವಾಗಿದೆ. ಈ ಹುಣ್ಣಿಮೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಈ ನೆನಪು ಸಮಾಧಿಯಾಗಬೇಕು.” ಎಂದೂ ಮಲಗಿದಳು ಮರಳಿ ಅದೇ ನೆನಪು ಕಾಣಿಸಿತು.
ಬೆಳಿಗ್ಗೆ ಎದ್ದ ಕೂಡಲೇ ಅವಳಿಗೆ ಗೆಳತಿಯ ಕರೆ ಒಂದು ಬಂದಿತ್ತು. ಗೆಳತಿಯ ಊರು ರಾಯಪುರ ಸಮೀಪವಾಗತ್ತಿತ್ತು. ಹಾಗಾಗಿ ಚೈತ್ರ ರಾಯಪುರ ಹಳ್ಳಿಯ ಸಮಸ್ಯೆ ಕೇಳಿದಳು. ಗೆಳೆತಿಯು ಸಮಸ್ಯೆಯನ್ನು ಬಿಡಿಸಿ ಹೇಳಿದಳು. ವಿಷಯವನ್ನು ಗಂಭೀರವಾಗಿ ಮಾತನಾಡುವ ಸಂದರ್ಭಕ್ಕೆ ಕೋಣೆಯಿಂದ ಅಪ್ಪಾಜಿ “ಅಮ್ಮ ಚೈತ್ರ ತೆರಿಗೆಗಳ ಪ್ರತಿಯಲ್ಲಿವೆ ನೀಡು ಬಾ” ಎಂದು ಕೂಗಿದರು. ಗೆಳತಿಯ ಜೊತೆ ಮಾತನಾಡುವುದನ್ನು ನಿಲ್ಲಿಸಿ ಹೋಗಿ ಪ್ರತಿಗಳನ್ನು ಅಪ್ಪಾಜಿಗೆ ನೀಡಿದಳು. ಪುನಃ ಗೆಳತಿಯ ಜೊತೆಗೆ ರಾಯಪುರದ ಸಮಸ್ಯೆ ಮಾತನಾಡುತ್ತಿರಬೇಕಾದರೆ “ಚೈತ್ರ ಅಣ್ಣ-ಅಕ್ಕಂದಿರ ಮದುವೆ ಕಾರ್ಡ ಸರಿಯಾಗಿದೇನು ನೋಡು ಬಾ. ಸರಿಯಾಗಿದ್ದರೆ ಪ್ರಿಂಟ ಮಾಡಿಸೋಣ” ಎಂದರು. ಮತ್ತೆ ಅರ್ಧಕ್ಕೆ ಮಾತು ನಿಲ್ಲಿಸಿ “ಮದುವೆ ಕಾರ್ಡ ನೋಡಿಯಾಗಿದೆ ಪ್ರಿಂಟ್ ಮಾಡಿ” ಎಂದೇಳಿ ಗೆಳತಿಯ ಮಾತಲ್ಲಿ ತೊಡಗಿದಳು. ಪುನಃ ಅಪ್ಪಾಜಿ “ಪುಟ್ಟ ಚೈತ್ರ ಹಣದ ಪೆಟ್ಟಿಗೆಯಿಂದ ಹಣ ನೀಡಮ್ಮ. ಪ್ರಿಂಟ್ ಮಾಡುವುದಕ್ಕೆ ಹೋಗುತ್ತೇನೆ ” ಎಂದಾಗ ಸಿಟ್ಟು ಬಂದ ಚೈತ್ರ ಮನಸೊಳಗೆ “ಅಪ್ಪಾಜಿಗೆ…. ಮನೆಯಲ್ಲಿ ಯಾರೂ ಇಲ್ಲ? ಸ್ವಲ್ಪ ಹೊತ್ತು ಮಾತನಾಡಲೂ ಬಿಡುತ್ತಿಲ್ಲ.” ಮತ್ತೆ ಕೂಗಿದರು. ಹಾಗಾಗಿ ಚೈತ್ರ ಹೋಗಿ ಹಣ ನೀಡಿದಳು.
“ಅಪ್ಪಾಜಿಗೆ ಅಣ್ಣ, ಹಿರಿ ಅಣ್ಣ, ಹಿರಿ ಅಕ್ಕ ಇದ್ದಾರೆ ಅವರೂ ಕೂಡ ವಿದ್ಯಾವಂತರು. ಇವರುಗಳ ಜೊತೆ ಸ್ವಲ್ಪವಾದರೂ ಕೆಲಸ ಹೇಳುವುದಿಲ್ಲ. ಏಲ್ಲಾನೂ ನನಗೆ ಎಂದು ಕೋಪದಿಂದ ನೇರ ಅಪ್ಪಾಜಿ ಹತ್ತಿರ ಹೋಗಿ, “ಅಪ್ಪಾಜಿ ಈ ದಿನ ನಿಮ್ಮ ಜೊತೆ ಮಾತನಾಡುವುದಿಲ್ಲ.” ಎಂದದ್ದು ಈ ಉದ್ದೇಶಕ್ಕಾಗಿ ಸ್ಪರ್ಧೆ ಏರ್ಪಡಿಸಿದಳು. ಅಂದು ಅಪ್ಪಾಜಿಯ ಕೋಣೆಯಲ್ಲಿಯೇ ಮಲಗಿದ್ದಳು. ಆ ರಾತ್ರಿ ಚಂದಿರನ ಕಂಡ ತಕ್ಷಣ ನಾನಿಯು ನೆನಪಾದನು ನಿದ್ದೆಯೇ ಹತ್ತಲಿಲ್ಲ. ಅಪ್ಪಾಜಿ ಜೊತೆ ಮಾತನಾಡಬೇಕೆಂದರೆ ತಾನೇ ಸ್ಪರ್ಧೆ ಏರ್ಪಡಿಸಿದ್ದಳು. ಅವಳ ಊರಿಗೆ ಟ್ರೆöÊನ ವ್ಯವಸ್ಥೆ ಕಲ್ಪಿಸಿತ್ತು. ಟ್ರೆöÊನ ಶಬ್ದ ಕೇಳಿ “ನಾನು ಈಗಲೇ ರಾಯಪುರಕ್ಕೆ ಹೋದರೆ ಹೇಗೆ? ಅಪ್ಪಾಜಿಯು ತುಂಬ ಕೆಲಸಗಳಿವೆ. ಬೆಳಿಗ್ಗೆ ಹೋಗುತ್ತೆನೆ ಅಂದರೇ ಎಲ್ಲಿಗೆ? ಎಂತಾ? ಪ್ರಶ್ನೆ ಕೇಳಿ ಕಳುಹಿಸುವುದಿಲ್ಲ. ಜೊತೆಗೆ ಅವರೂ ಬರುತ್ತೇನೆ ಅಂತಾರೆ. ಬೆಳಿಗ್ಗೆ ೪.೪೫ ನಿಮಿಷಕ್ಕೆ ಟ್ರೆöÊನ್ ಒಂದಿದೆ ರಾಯಪುರಕ್ಕೆ. ಹೊರಡೋಣ ಪುನಃ ಮೂರು – ನಾಲ್ಕು ದಿವಸಗಳ ನಂತರ ಮರಳಿ ಮನೆಗೆ ಬರುವೆ. ನಾನು ರಾಯಪುರಕ್ಕೆ ಹೋದರೆ ಅಲ್ಲಿನ ಸಮಸ್ಯೆ ತಿಳಿಯಬಹುದು, ನಾನಿಯನ್ನು ಮರೆಯಬಹುದು. ಅಪ್ಪಾಜಿ ಕೂಡ ಅಣ್ಣಂದಿರಿಗೆ ಅವರು ಇಟ್ಟಂತಹ ಪೈಲು, ಹಣ, ಪ್ರತಿಗಳ ಜವಾಬ್ದಾರಿ ತಿಳಿಸಿಕೊಡುವರು”. ಎಂಬ ಆಲೋಚನೆ ಮಾಡಿ ಚೈತ್ರ ಹೊರಟಳು. ಅಪ್ಪಾಜಿ ಬೆಳಗ್ಗೆ ಎಚ್ಚರವಾದ ನಂತರ ಚೈತ್ರ ಎಂದು ಕರೆಯಬೇಕೆಂದು ನೋಡಿದಾಗ ಚೈತ್ರ ಅಲ್ಲಿರಲಿಲ್ಲ. ಆ ದಿನದಿಂದ ಇಲ್ಲಿಯವರೆಗೂ ಚೈತ್ರಳ ಸುಳಿವು ಸಹ ಮನೆಯವರಿಗೆ ತಿಳಿದು ಬಂದಿಲ್ಲ. ಚೈತ್ರ ತಾನೇ ಏನು ಮಾಡುತ್ತಾಳೆ. ಅಲ್ಲಿನ ಸಮಸ್ಯೆ ಕಂಡು ಪ್ರತಿಭಟನೆ ಕಾರ್ಯಕ್ರಮ, ಎಲ್ಲರ ಒಟ್ಟುಗೂಡುವಿಕೆ ಸರ್ಕಾರದ ವಿರುದ್ಧ ಸಿಡಿದೇಳುವ ಹೀಗೆ ಆಕೆ ಅಲ್ಲಿಗೆ ಹೋದ ನಂತರ ಗೆಳತಿಯ ಸಹಾಯ ಪಡೆದು ಸಮಸ್ಯೆಯನ್ನು ಸರಿಪಡಿಸುತ್ತಿದ್ದಳು. ರಾಯಪುರಕ್ಕೆ ಹೋದ ನಂತರ ನಾನಿ ಕೂಡ ನೆನಪು ಬಂದಿಲ್ಲ. ಅಪ್ಪಾಜಿಯ ನೆನಪು ಬಂದರೆ ಊರಿಗೆ ಓಡಿ ಬರಬೇಕೆಂದು ಅನಿಸುತ್ತಿತ್ತು. ಆದರೇ ಏನು ಮಾಡೋದು ಮೂರು-ನಾಲ್ಕು ದಿನದ ನಂತರ ಬರಬೇಕೆಂದು ಹೋದವಳು ಏಳು ತಿಂಗಳು ಮುಗಿಯಿತು. ರಾಯಪುರದ ವಿಧವೆಯರು ಗಂಡನ ಕಳೆದುಕೊಂಡ ಮೂರು ದಿನಕ್ಕೆ ರಾತ್ರಿ ಯಾರಿಗೂ ಹೇಳದಂತೆ ಊರು ಬಿಟ್ಟು ಹೋಗಬೇಕು. ಮನೆ-ಮಕ್ಕಳನ್ನು ಬಿಟ್ಟು ಒಬ್ಬಂಟಿ ಹೋಗಿ ಸಾಯಬೇಕು. ಸಾಯಲು ಇಷ್ಟ ಆಗದಿದ್ದರೆ ಅವಳು ಕಾಡು ಅಥವಾ ಹಿಮಾಲಯಕ್ಕೆ ಹೋಗಬೇಕು. ಯಾರ ಕಣ್ಣಿಗೂ ಕಾಣದಂತೆ ಇರಬೇಕು. ಇಂತಹ ಸ್ಥಿತಿ ಕಂಡAತಹ ಚೈತ್ರ ಬಿಟ್ಟು ಬರುವುದಾದರೂ ಹೇಗೆ? ಅಲ್ಪ ವಿದ್ಯೆ ಅರಿತ ವಿಧವೆಯರು ಹೋರಾಟ ಮಾಡಿದರೆ ಅವರನ್ನೇ ಸೀಮೆ ಎಣ್ಣೆ ಹಾಕಿ ಬೀದಿಯಲ್ಲಿ ಸುಟ್ಟಿದ್ದಾರೆ. ಇದರ ವಿರುದ್ಧ ಚೈತ್ರಳ ಮಾತುಗಳು ಜನರ ಮನಸ್ಸು ಕದಡಿದವು. ಜನರನ್ನು ಒಟ್ಟುಗೂಡಿಸಿ ಸ್ತಿçÃಯರ ತ್ಯಾಗ, ಕಷ್ಟಗಳನ್ನು ಗಂಡಸರಿಗೆ ತಿಳಿ ಹೇಳಿದಳು. ಅಲ್ಲಿನ ಜನರು “ಇದು ನಮ್ಮೂರ ಪದ್ಧತಿ” ಎಂದು ಅವಳ ವಿರುದ್ಧ ಆರೋಪ ವ್ಯಕ್ತಪಡಿಸಿದರು. ಅಲ್ಲಿನ ಎಲ್ಲಾ ಸಮಸ್ಯೆ ಸರಿಪಡಿಸಿ ಅವರಿಗೂ ಮನೆಯಲ್ಲಿರಲು ಜಾಗ ನೀಡಿ ಎಂದು ಪ್ರತಿಭಟಿಸಿದ್ದಳು. ವಾರ್ತಾ ಪತ್ರಿಕೆ, ಟಿ.ವಿಯಲ್ಲಿ ಚೈತ್ರಳ ಹೋರಾಟ ಬಗ್ಗೆ ಬಿತ್ತರಿಸುವುದನ್ನು ಚೈತ್ರಾಳ ಅಪ್ಪಾಜಿ ನೋಡಿದನು. ಅವಳ ಮನೆಯವರಿಗೂ, ಹಳ್ಳಿಯವರಿಗೂ ಚೈತ್ರಳ ಸಾಹಸ ಕಾರ್ಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಳ ತಂದೆಗAತು ಜೀವ ಬಂದAತಾಗಿ ‘ಚೈತ್ರಳ ಮುಂದೆ ನಾ ಸೋತೆ, ನನ್ನ ಮಗಳು ಇಷ್ಟೆಲ್ಲಾ ಬಲ್ಲವಳು’. ಎಂದು ಮನದಲ್ಲಿ ನುಡಿದರು. ಚೈತ್ರಾ ಮರಳಿ ಎಂಟು-ಹತ್ತು ದಿವಸಕ್ಕೆ ಹಳ್ಳಿಗೆ ಬಂದಳು.
ಚAದ್ರನು ಕೊನೆಗೂ ನಿರ್ಧಾರ ಮಾಡಿದ ‘ಎಷ್ಟು ದಿನ ನಾನು ಹೀಗೆ ಕೂರೋದು. ಆ ಡಾಕ್ಟರ ಕಲ್ಯಾಣಿಯವರು ಒಂದಿಷ್ಟು ಡಿಸ್ಟರ್ಬ ಮಾಡುತ್ತಾರೆ. ನನ್ನ ವಿದ್ಯಾ ದಿನಗಳನ್ನು ಹಾಳು ಮಾಡಿಕೊಂಡೆ. ಹಾಳಾದ ಕ್ರೋಷಿ, ಪ್ರೋಷಿ ನನ್ನ ಜೀವನದಲ್ಲಿ ಬಂದದ್ದು ಯಾಕೋ? ಹೀಗೆ ಯೋಚನೆ ಮಾಡಿ ಮಾಡಿ ಐದು ವರ್ಷಗಳು ಉರುಳಿಯೇ ಹೋದವು. ಈ ನಡುವಿಯೇ ಚಂದ್ರನ ಅಣ್ಣನಾ ಮದುವೆ ನಡೆದು ಹೋಯಿತು. ತನ್ನ ಅಜ್ಜ, ಅಜ್ಜಿಯ ಇತರ ಕುಟುಂಬದ ಸದಸ್ಯರೊಂದಿಗೆ ಸಂತೋಷದಿAದ ಕಾಲ ಕಳೆಯುತ್ತಿದ್ದನು. ಗಣಿತ ವಿಷಯದಲ್ಲಿ ಬಲು ಜಾಣ ಇವನು. ತನ್ನ ತಂಗಿಗೆ ಆವಾಗವಾಗ ಗಣಿತದ ವಿಷಯವನ್ನು ತಿಳಿಸಿ ಹೇಳುತ್ತಿದ್ದನು. ದೇವರ ಮುಂದೆ ದೀಪ ಶಾಂತವಾಗಿ ಬೆಳಗುತ್ತಿತ್ತು. ಭೂಮಿಕಾ ಸ್ನಾನ ಮಾಡಿ ಮಲಗಿದ್ದಳು. ತಾಯಿ ಚಿತ್ರ ಹಾಗೂ ಡಾಕ್ಟರ ಕಲ್ಯಾಣಿಯವರು ತಂಪಾನೆ ಗಾಳಿಗೆ ಮರದ ಕೆಳಗೆ ಕೂತಿದ್ದರು. ನಿಧಾನವಾಗಿ ಕಲ್ಯಾಣಿಯವರು
“ಚಿತ್ರ ಹೇಗಿದ್ದೀಯಾ?” ಎಂದು ಕೇಳಿದರು.
“ಚೆನ್ನಾಗಿದ್ದೆನೆ”.
“ಭೂಮಿ ಒಬ್ಬಳೇನೆ ನಿನ್ನ ಮಗಳು?”
“ಹೌದು”, ಎಂದಳು ಚಿತ್ರ.
“ಹೌದಾ…..ಮತ್ತಾö್ಯಕೆ ನಿಮ್ಮ ಅತ್ತೆ-ಮಾವನಿಗೆ ನಿನ್ನ ಮೇಲೆ ಕೋಪ”.
“ನನ್ನ ಮದುವೆಯಾಗಿ ಹತ್ತು ತಿಂಗಳಿಗೆ ನನ್ನ ಗಂಡ ತೀರಿಕೊಂಡರು. ನನ್ನ ಅತ್ತೆ. ಮಾವನಿಗೆ ಒಬ್ಬಳೇ ಮಗಳು, ಒಬ್ಬನೇ ಮಗ. ಮತ್ತೆ ನನಗೆ ಹೆಣ್ಣು ಮಗುವಾಗಿದ್ದು ಅವರಿಗೆ ಸಹಿಸಲಾಗದಷ್ಟು ಕೋಪವಿದೆ ”. ಎಂದು ಚಿತ್ರ ಕಲ್ಯಾಣಿಯವರಿಗೆ ಹೇಳಿದಳು. ಜೊತೆಗೆ ತನ್ನ ಮಗಳನ್ನಾö್ಯಕೆ ಆಸ್ಪತ್ರೆಗೆ ಕರೆದೊಯ್ಯದೆ ತಮ್ಮ ಮನೆಗೇಕೆ ಕರೆತಂದಿದ್ದೀರಾ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಕಲ್ಯಾಣಿಯವರು ಉತ್ತರಿಸಿ. ಮತ್ತೆ ಚಿತ್ರಳ ಜೀವನದ ಬಗ್ಗೆ ವಿಚಾರಿಸಿದಳು. ಆದರೇ ಅವಳು ಆಗಲಿ ತನ್ನ ಮನೆಗೆ ಹೋಗುತ್ತೇನೆಂದು ತಿಳಿಸುತ್ತಾಳೆ. ಕಲ್ಯಾಣಿಯವರು ಅವಳ ಬಳಿ ಹೋಗಿ ತಲೆಯನ್ನು ಸವರುತ್ತಾ.
“ಚಿತ್ರ ನೀನು ತುಂಬ ಸತ್ಯಗಳನ್ನು ನನ್ನಿಂದ ಮುಚ್ಚಿಡುತ್ತಿದ್ದೀಯಾ. ಆವಾಗಿನಿಂದ ನಾನು ಗಮನಿಸುತ್ತಿದ್ದೇನೆ. ಸತ್ಯವನ್ನು ಹೇಳಿ, ಮನಸ್ಸನ್ನು ಹಗುರ ಮಾಡಿಕೋ ! ಸಾಕು. ಅಳುವುದು ನಿಲ್ಲಿಸು. ಧೈರ್ಯದಿಂದ ಬಾಳು, ನೀನೆಲ್ಲಿಗೂ ಹೋಗುವುದು ಬೇಡ. ಇಲ್ಲಿಯೇ ಇದ್ದುಬಿಡು. ಆ ನರಕದ ಮನೆಯಲ್ಲಿ ಹೇಗಾದರೂ ಜೀವನ ನಡೆಸುತ್ತಿಯೋ…..! ಗೊತ್ತಾಗುತ್ತಿಲ್ಲ” ಎಂದು ಅವಳು ಮರುಗಿದಳು. ಅಷ್ಟರಲ್ಲಿಯೇ ಭೂಮಿಕಾಳು ಎಚ್ಚರಗೊಂಡು ಹೊರಗಡೆ ಕುಳಿತಿದ್ದ ಅಮ್ಮನ ಹತ್ತಿರ ಬಂದಳು.
“ಮಗು ಭೂಮಿ ಈವಾಗ ಎಚ್ಚರವಾಯಿತೆ ನಿಂಗೆ?” ಕಲ್ಯಾಣಿಯವರು ಕೇಳುತ್ತಾರೆ.
“ಹೌದು……ಹಸಿವಾಗಿದೆ. ಊಟ ಮಾಡುತ್ತೇನೆ” ಎಂದಿತು ಮಗು. ಹಾಗೆಯೇ ಮುಂದೆ ಹೋಗಿ ಕಲ್ಯಾಣಿಯವರ ಕಪ್ಪಾಳಕ್ಕೆ ಒಂದೇಟು ಹೊಡೆಯುತ್ತಾಳೆ. ಕುಳಿತಿದ್ದ ತಾಯಿ ಭೂಮಿಕಾಳನ್ನು ಎಳೆದು ಹೊಡೆಯಲು ಮುಂದಾದಳು. ಕಲ್ಯಾಣಿಯವರು ತಡೆಯುವರು. ಮಗು ಹೋಗಿ ಮತ್ತೊಂದು ಕೆನ್ನೆಗೆ ಮುತ್ತಿಟ್ಟು
“ಅಮ್ಮ ಇವರು ತುಂಬ ಒಳ್ಳೇಯವರಮ್ಮ. ಕಷ್ಟಕ್ಕೂ ಸಹಿಸಿಕೊಂಡರು; ಇಷ್ಟಕ್ಕೂ ಸಹಿಸಿಕೊಂಡರು”. ಎಂದೇಳಿ “ಕ್ಷಮಿಸಿ ನನ್ನನ್ನು, ನೀವು ನನ್ನ ಅಜ್ಜಿಯ ಹಾಗೆ ಅಲ್ವೆ ಅಲ್ಲ. ತುಂಬ ಒಳ್ಳೆಯವರು.” ಎಂದಾಗ ಕಲ್ಯಾಣಿಯವರು ನಗುತ್ತಾ ಅವಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅವಳಿಗೆ ಊಟವನ್ನು ಮಾಡಿಸಿದರು.
“ನನ್ನ ಅಜ್ಜಿ ನೋಡಿ ನಮ್ಮನ್ನು ಎಲ್ಲಾ ಕೆಲಸವನ್ನು ಮಾಡಿದರು ಸಹಿಸಲ್ಲ. ಮತ್ತೆ ಕೆಲಸ ಮಾಡದಿದ್ದರೂ ಸಹಿಸಲ್ಲ”. ಎಂದು ಮಗು ಕಲ್ಯಾಣಿಯವರಿಗೆ ತಿಳಿಸುತ್ತಿತ್ತು. ಹಾಗೆಯೇ ಊಟ ಮಾಡಿಸುತ್ತಾ ಕಲ್ಯಾಣಿಯವರು ಅದನ್ನು ಕೇಳಿಸಿಕೊಳ್ಳುತ್ತಾ ಮಗುವಿನಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಊಟವಾದ ಬಳಿಕ ಕಲ್ಯಾಣಿಯವರು ಮಗುವನ್ನು ಹಾಗೂ ಅವಳ ತಾಯಿಯನ್ನು ಆಚೆ ಕರೆದುಕೊಂಡು ಹೋಗುವರು. ಭೂಮಿಕಾಳಿಗೆ ಬಟ್ಟೆ ಹಾಗೂ ಆಟದ ಸಾಮಾನುಗಳನ್ನು ಕಲ್ಯಾಣಿಯವರು ನೀಡುತ್ತಾರೆ. ಭೂಮಿಕಾಳು ಅವಳ ತಾಯಿಗೆ ‘ಅಮ್ಮ……! .ಅಮ್ಮ………! ಎಂದು ಕರೆಯುವ ಪದ ಕಲ್ಯಾಣಿಗೆ ಬಲು ಇಷ್ಟವಾಗುತ್ತಿತ್ತು. ಉದ್ಯಾನವನವೊಂದರಲ್ಲಿ ಹೋಗಿ ಕುಳಿತಕೊಳ್ಳುವರು. ಭೂಮಿಕಾ ಅವಳ ಅಮ್ಮನ ಬೆನ್ನ ಮೇಲೆ ಜೋತು ಬಿದ್ದು.
“ಅಮ್ಮ ನನ್ನಮ್ಮ ನೀನು, ಮತ್ತೆ ನಿನ್ನಮ್ಮ ಯಾರು?” ಭೂಮಿಕಾ ಕೇಳುತ್ತಾಳೆ ಚಿತ್ರಳಿಗೆ.
“ನನ್ನಮ್ಮ ಇವರು” ಎಂದು ಚಿತ್ರ ಕಲ್ಯಾಣಿಯವರನ್ನು ತೋರಿಸುತ್ತಾಳೆ. ಆವಾಗ ಭೂಮಿ ಕಲ್ಯಾಣಿಯವರ ಬಳಿ ಹೋಗಿ “ಡಾಕಟ್ರೇ ಹಾಗಾದರೆ ನಿಮ್ಮಮ್ಮ ಯಾರು?” ಎಂದು ಪ್ರಶ್ನಿಸುತ್ತಾಳೆ.
“ನೀನೆ ಅಲ್ವೆನಮ್ಮ ನಮ್ಮಮ್ಮ” ಎಂದು ಕಲ್ಯಾಣಿ ಭೂಮಿಕಾಳಿಗೆ ಮುತ್ತಿಡುತ್ತಾ ಹೇಳುತ್ತಾಳೆ. ಆವಾಗ ಮುಖದಲ್ಲಿ ನಗು ಮೂಡುತ್ತದೆ. ಮುಂದೆ ಚಿತ್ರ ಹಾಗೂ ಕಲ್ಯಾಣಿಯವರ ನಡುವೆ ಸಂಭಾಷಣೆ ನಡೆಯುತ್ತದೆ. ಗೊಂಬೆಯ ಜೊತೆ ಆಟವಾಡಿ ಸುಸ್ತಾದ ಮಗು ಅಮ್ಮನ ಮಡಿಲನ್ನು ಸೇರಿ “ಅಮ್ಮ….. ನಾವು ಮತ್ತಾö್ಯವಾಗ ಅಜ್ಜ-ಅಜ್ಜಿಯ ಹತ್ತಿರ ಹೋಗೋದು”. ಎಂದು ಕೇಳುತ್ತದೆ. ಕಲ್ಯಾಣಿಯವರು
“ಮಗು, ನೀನು ಯಾವತ್ತು ಹೋಗುತ್ತೀನಿ ಅಂತೀಯಾ? ಆ ದಿನ ಹೋಗುವಂತೆ ಸರೀನಾ” ಹೇಳುವರು.
“ಭೂಮಿ, ದಿನಾಲೂ ಮನೆಯಲ್ಲಿ ಏನು ಕೆಲ್ಸ ಮಾಡ್ತೀಯಾ?” ಕಲ್ಯಾಣಿ ಪ್ರಶ್ನಿಸುವರು ಮಗುವಿಗೆ.
“ಬೆಳಿಗ್ಗೆ ೬ ಗಂಟೆಗೆ ಎಚ್ಚೆತ್ತುಕೊಂಡು, ಸ್ನಾನ ಮಾಡಿ, ದೇವರ ಪೂಜೆಯನ್ನು ಮಾಡುತ್ತೇನೆ.”
“ಹೌದಾ? ಮತ್ತೇನು ಮಾಡುವೆ”.
“ಅತ್ತೆಗೆ ಸ್ನಾನಕ್ಕೆ ರೆಡಿ ಮಾಡಿ. ಟವ್ಹೆಲ್ ಹಾಗೂ ಅವರು ಧರಿಸುವ ಬಟ್ಟೆಯನ್ನು ರೆಡಿ ಮಾಡುತ್ತೇನೆ. ಅಜ್ಜಿಗೆ ಸಹ ಸಹಾಯ ಮಾಡುತ್ತೇನೆ. ಅವರ ಮಾತನ್ನು ಕೇಳದಿದ್ದರೆ ಶಿಕ್ಷಿಸುತ್ತಾರೆ”. ಕಲ್ಯಾಣಿಯವರಿಗೆ ಅಯ್ಯೋ! ಅನಿಸುತ್ತದೆ.
“ಸರಿ. ಮನೆಯಲ್ಲಿ ನಿಮ್ಮ ಅಮ್ಮನ ಕೆಲಸವೇನಿದೆ?”
“ಅಮ್ಮ ಮನೆಯಲ್ಲಿ ತುಂಬ ಕೆಲಸಗಳನ್ನು ಮಾಡುತ್ತಾಳೆ. ಬೆಳಗ್ಗೆ ಎದ್ದ ಕೂಡಲೆ ಮನೆಯಲ್ಲಾನೂ ಕ್ಲೀನ ಮಾಡೋದು. ಟಿಫಿನ್ ರೆಡಿ ಮಾಡುತ್ತಾಳೆ. ಅಜ್ಜ-ಅಜ್ಜಿ ಎದ್ದರೇ ಅವರ ಮುಂದೆ ಅಮ್ಮ ಇರಬಾರದು. ಅಮ್ಮನನ್ನು ನೋಡಿದರೆ ಮುಂಜಾನೆ ಅನಿಷ್ಠ ಮುಖ ನೋಡಿದೇವು ಎಂದು ಗೊಣಗುತ್ತಾರೆ. ನಂತರ ಅತ್ತೆ ಹೊರಗಡೆ ಹೊರಟರೆ ಅವರ ಬ್ಯಾಗನ್ನು ಹಾಗೂ ಚಪ್ಪಲ್‌ನ್ನು ತಂದು ಅವರ ಮುಂದಿಡಬೇಕು. ತಾತಾನಿಗೆ ಶೂ….ಪಾಲಿಸ್ ಮಾಡಿಡಬೇಕು. ಅಜ್ಜಿಗೆ ಟಿ.ವಿ. ಆನ ಮಾಡಬೇಕು. ಆವರಣದ ಗಿಡ-ಮರಗಳಿಗೆ ನೀರು ಹಾಕಬೇಕು. ಅಮ್ಮ ಕೆಲವೊಂದು ಬೇಗ ಮಾಡದಿದ್ದರೆ. ಅವರು ಶಿಕ್ಷೆಯನ್ನು ಅನುಭವಿಸಿದ್ದಾಳೆ ಎಷ್ಟೋ ಬಾರಿ”. ಎಂದು ಮಗು ತುಂಬ ಭಯದಿಂದ ಇದನ್ನೆಲ್ಲಾ ಹೇಳುತ್ತಿತ್ತು. ಚಿತ್ರಳು ಕಲ್ಯಾಣಿಯವರಿಗೆ ಸಾಕು ಬಿಡಿ ಎಂದೇಳುತ್ತಾಳೆ. ಆದರೂ ಕಲ್ಯಾಣಿಯವರು ಮಗುವಿಗೆ ಮರು ಪ್ರಶ್ನೆಯನ್ನು ಕೇಳುತ್ತಾರೆ.
“ನಿಮ್ಮ ಮನೆಗೆ ಸಂಬAಧಿಕರು ಬಂದಾಗ ಹೇಗೆ ಇರ್ತಾರೆ ಮನೆಯವರೆಲ್ಲಾ?”.
“ಬೀಗರು ಬಂದರೆ ಅಮ್ಮನನ್ನು ‘ಅಡುಗೆ ಕೋಣೆಯಲ್ಲಿಯೇ ಇರು. ಹೊರಗೆ ಬರಬೇಡ ಅಂತಾರೆ’. ಬೀಗರಿಗೆ ಸೊಸೆ ಮಲಗಿದ್ದಾಳೆ ಅಥವಾ ಹೊರಗಡೆ ಹೋಗಿದ್ದಾಳೆ ಎಂದು ಸುಳ್ಳು ಹೇಳುತ್ತಾರೆ.”
“ಹೌದಾ….ಸರಿ…..ಸರಿ ಅಮ್ಮ ನಿಂಗೇ ಪಾಠ ಹೇಳಲ್ವ?”.
“ಹ್ಹೂಂ…ಹೇಳ್ತಾಳೆ”.
“ಏನು ಹೇಳ್ತಾಳೆ”
“ತಾತ-ಅಜ್ಜಿಯ ಮುಂದೆ ಸುಮ್ಮನಿರಬೇಕು. ಅವರು ಹೊಡೆದರೆ ಹೊಡೆಸ್ಕೋಬೇಕು. ಯಾವಾಗಲೂ ಕೆಲಸ ಮಾಡಬೇಕು ಅಂತ ಅಮ್ಮ ಹೇಳ್ತೀರುತ್ತಾಳೆ”. ಎಂದು ಭೂಮಿ ಉತ್ತರಿಸುತ್ತಾಳೆ ಕಲ್ಯಾಣಿಯವರಿಗೆ ಈ ರೀತಿ ನಿಮ್ಮ ಅಮ್ಮ ಪಾಠ ಹೇಳಿಕೋಡ್ತಾಳ? ನಾನು ಕೇಳಿದ್ದು. ಶಾಲೆ ಪಾಠಗಳನ್ನಾ?”.
“ಶಾಲೆ ಅಂದರೇನು?”
“ಶಾಲೆ ಅಂದರೆ ಶಾಲೆ ಬಿಡು” ಎಂದು ಕಲ್ಯಾಣಿಯವರು ಚಿತ್ರಗಳಿಗೆ “ಚಿತ್ರ ಇವಳನ್ನು ಶಾಲೆಗೆ ಸೇರಿಸಿಲ್ವ” ಎಂದಾಗ ಚಿತ್ರಳಿಂದ ‘ಇಲ್ಲ’. ಎಂಬ ಉತ್ತರ ಬರುತ್ತದೆ.
“ಒಂದು ಬಾರಿ ಅಮ್ಮ ಎ.ಬಿ.ಸಿ.ಡಿ ಹೇಳಿ ಕೊಡ್ತಾ ಇದ್ರು. ಅತ್ತೆ ನೋಡಿ ಅಮ್ಮನಿಗೆ ಕಪಾಳಕ್ಕೆ ಹೊಡೆದ್ರು, ಬೈದಿದ್ರು. ಬೆದರಿಕೆ ಹಾಕಿದ್ರು” ಎಂದು ಭೂಮಿ ಹೇಳುತ್ತಾಳೆ. ಡಾಕ್ಟರ ಕಲ್ಯಾಣಿಯವರಿಗೆ ಮಗು ಹೇಳಿದ್ದು ಕೇಳಿ ತುಂಬ ನೋವಾಗುತ್ತದೆ. ಆದರೆ ಇವರಿಗೆ ಚಿತ್ರಳ ಗಂಡನ ಮರಣಕ್ಕೆ ಕಾರಣ ಏನೆಂಬುದು ತಿಳಿಯುವುದಿಲ್ಲ. ಚಿತ್ರ “ಬನ್ನಿ. ಹೋಗೋಣ” ಎಂದು ಕಲ್ಯಾಣಿಯವರನ್ನು ಕೇಳುತ್ತಾಳೆ.
“ಹೋಗೋಣ. ಆದರೇ ನನಗೊಂದು ವಿಷಯದ ಕುರಿತು ನೀವು ಹೇಳಬೇಕು.” ಅದೇನೆಂದರೆ, ನಿನ್ನ ಗಂಡನ ಮರಣಕ್ಕೆ ಕಾರಣವೇನು? ಯಾಕೆ ನಿನ್ನ ಗಂಡ ಸಣ್ಣ ವಯಸ್ಸಿನಲ್ಲಿ ಸಾಯಬೇಕಾಯಿತು?” ಎಂದಾಗ ಚಿತ್ರಳ ಕಣ್ಣಲ್ಲಿ ನೀರು ಉಕ್ಕಿ ಬಂದವು. ಮೆಲ್ಲ ಧ್ವನಿಯಲ್ಲಿ ಹೇಳ ತೊಡಗುತ್ತಾಳೆ.
“ಅಂದು ಕಾಲೇಜು ದಿನಗಳು, ಹಾಸ್ಟೇಲ್‌ನಲ್ಲಿಯೇ ನಾನಿ ಹಾಗೂ ಪ್ರೋಷಿಯ ಜೊತೆ ಕಲಿತೆ, ಪ್ರಥಮ ವರ್ಷದ ಕೊನೆಯ ದಿನಗಳಲ್ಲಿ ನಮ್ಮೂವರಲ್ಲಿ ಜಗಳವಾಗಿ ಒಡಕುಂಟಾಯಿತು. ನೇರವಾಗಿ ಮನೆಗೆ ಹೋದ ನಾನು ಒಂದುವರೆ ವರ್ಷ ಮನೆಯಲ್ಲಿಯೇ ಸಮಯ ವ್ಯಯಿಸಿದೆ. ಒಮ್ಮೆ ಶ್ರೀಮಂತರ ಮನೆಯಿಂದ ಸಂಬAಧ ಬಂತು. ಅಪ್ಪ-ಅಮ್ಮ ಇಲ್ಲದ ನಾನು ಸೋದರ ಮಾವನ ಆಶ್ರಯದಲ್ಲಿ ಬೆಳೆದನು. ಬೇರೆಯವರಿಗೆ ಬಹಳ ದಿನ ಭಾರವಾಗಿರಬಾರದೆಂದು ಅವರು ತೋರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿದೆನು. ಮದುವೆ ಕೂಡ ಆಯಿತು. ಮನೆಯವರೆಲ್ಲ ಮೊದಲು ನನ್ನ ಮೇಲೆ ತುಂಬ ಪ್ರೀತಿಯನ್ನು ಹೊಂದಿದ್ದರು. ಅವರು ಕೂಡ ಅಷ್ಟೇ ನನ್ನನ್ನೂ ಅವರ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು.
ಒಮ್ಮೆ ನನ್ನ ಗಂಡನಿಗೆ ವಿಪರೀತವಾದ ಜ್ವರ. ಆಸ್ಪತ್ರೆಗೆ ಹೋಗಿದ್ದೇವು. ಅಲ್ಲಿ ಡಾಕ್ಟರ ‘ಇವರಿಗೆ ರಕ್ತ ಇಲ್ಲ. ಹಾಗಾಗಿ ಎರಡು ಬಾಟಲ ರಕ್ತವನ್ನು ಮೈಯೊಳಗೆ ಸೇರಿಸಲೇಬೇಕೆಂದರು. ಆವಾಗ ನಮ್ಮ ಮಾವ ರಕ್ತವನ್ನು ತಂದರು, ದೇಹಕ್ಕೂ ಸೇರಿಸಿಲಾಯಿತು. ಆದರೇ ರಕ್ತವನ್ನು ಸರಿಯಾಗಿ ಪರೀಕ್ಷಿಸಿದ್ದರೂ ಅಥವಾ ಇಲ್ಲವೋ ಗೊತ್ತಿಲ್ಲ. ಆ ಸಮಯದಲ್ಲಿ ನಾನು ಮೂರು ತಿಂಗಳ ಗರ್ಭಿಣಿ. ನಮ್ಮ ಮಾವ ಆಫೀಸು ಅದು. ಇದು ಅಂತ ಕೆಲಸದಲ್ಲಿ ತೊಡಗಿದ್ದರು. ಒಂದು ತಿಂಗಳ ನಂತರ ಇವರ ಆರೋಗ್ಯದಲ್ಲಿ ಮತ್ತಷ್ಟು ಏರು-ಪೇರಾಯಿತೆಂದು ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಇವರಿಗೆ ಕ್ಯಾನ್ಸರ ಎಂದು ರಿಪೋರ್ಟ ಬಂತು. ಇನ್ನಷ್ಟು ತಪಾಸಣೆ ಮಾಡಿಸಿದರು, ದೇವರಲ್ಲಿ ಪ್ರಾರ್ಥಿಸಿದರು. ನನ್ನವರು ಬದುಕುಳಿಯಲಿಲ್ಲ. ಆವತ್ತಿನಿಂದ ಮಗನನ್ನು ಕಳೆದುಕೊಂಡ ನನ್ನ ಅತ್ತೆ-ಮಾವ ನನ್ನನ್ನು ದ್ವೇಷಿಸಲು ಪ್ರಾರಂಭಿಸಿದರು. ನಾನು ಅವರ ಮಗನ ಜೀವನದಲ್ಲಿ ಕಾಲಿಟ್ಟ ಪರಿಣಾಮ ಹೀಗಾಯಿತು ಹಾಗೇ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವರಿಗೆ ಇಷ್ಟವಾಗಲಿಲ್ಲ ಭೂಮಿಕಾ ಹೊಟ್ಟೆಯಲ್ಲಿರುವಾಗಲೇ ಅವಳ ಅಜ್ಜನೇ ಅವಳ ಹಾಗೂ ನನ್ನ ಹೆಸರ ಮೇಲೆ ಆಸ್ತಿಯನ್ನು ಮಾಡಿದನು. ನನ್ನ ತವರ ಮನೆಯಿಂದ ಸೇರಬೇಕಾದ ಆಸ್ತಿ ನನ್ನ ಹೆಸರ ಮೇಲೆ ಸೇರಿತು. ಆ ಆಸ್ತಿಗಾಗಿ ನಮ್ಮನ್ನು ಬದುಕಲು ಬಿಟ್ಟಿದ್ದಾರೆ. ದಿನಾಲು ನರಳಾಟ, ಸಂಕಟ ಜೀವನ ನಾನು ನನ್ನ ಮಗಳು ಅದೇನು ತಪ್ಪು ಮಾಡಿದೇವು ತುಂಬ ಜೀವನ ನರಕವೆನಿಸಿದರು ನಾನು ಬದುಕುವ ಛಲವನ್ನು ಎಂದು ಬಿಡಲಿಲ್ಲ.” ಎಂದೇಳುತ್ತಾ ಚಿತ್ರಳ ಧ್ವನಿ ಕ್ಷೀಣವಾಯಿತು. ಕಣ್ಣು ತುಂಬ ನೀರು ತುಂಬಿ ಹರಿಯುತ್ತಿದ್ದವು. ಭೂಮಿಕಾ ತನ್ನ ತಾಯಿಯ ಕಣ್ಣೀರನ್ನು ಒರೆಸಿದಳು. ಕಲ್ಯಾಣಿಯವರು ಅವರನ್ನು ಸಮಾಧಾನಿಸಿ ಮನೆಕಡೆ ಕರೆದುಕೊಂಡು ಹೊರಡುವರು.
ಮನೆಯಲ್ಲಾ ಮೌನವೋ…..ಮೌನ. ಹಾಗೊಮ್ಮೆ ಹೀಗೊಮ್ಮೆ ಯಾರು ಒಬ್ಬರು ಮಾತ್ರ ಕಿಸಕ್ಕನೆ ನಕ್ಕು ಸುಮ್ಮನಾಗುವರು. ಯಾಕೆ ಹಾಗೆ ಅಂತೀರಾ?
“ಮಾತನಾಡಿಸಬೇಡ ಹೋಗು, ನಾನ್ಯಾರು ನಿನಗೆ?”
“ನೀವು ನನ್ನ ಮುದ್ದು ಮುದ್ದಾದ ಅಪ್ಪಾಜಿ”
“ನಿನ್ನ ಅಪ್ಪಾಜಿಯಾಗಿದ್ದ್ದರೆ? ನನ್ನ ಮೇಲೆ ಪ್ರೀತಿಯಿದ್ದರೆ ಆರೇಳು ತಿಂಗಳು ನನ್ನನ್ನು ಬಿಟ್ಟು ಇರುತ್ತಿರಲಿಲ್ಲ”. ಎಂದು ತುಸು ಕೋಪಗೊಂಡ ಚೈತ್ರಳ ತಂದೆ ಅಲ್ಲಿಂದ ಹೊರ ನಡೆಯುತ್ತಾರೆ. ಅವರನ್ನೇ ಹಿಂಬಾಲಿಸುತ್ತ ಬಂದ ಚೈತ್ರಳು….. “ಅಪ್ಪಾಜಿ……ನೀವೆ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲ್ಲ ಅಂದರೇಗೆ? ದಯವಿಟ್ಟು ನನ್ನ ಜೊತೆ ಮಾತನಾಡಿ”. ಎಂದಳು ಚೈತ್ರ. ಇವರಿಬ್ಬರ ಆಟಕ್ಕೆ ಮನೆಯವರಿಗೆಲ್ಲ ಒಂದು ರೀತಿ ಮಕ್ಕಳಾಟ ಎಂದೇನಿಸುತ್ತಿತ್ತು. ತುಸು ಮುನಿಸಿಕೊಂಡು ಕೋಪದಲ್ಲಿ ಚೈತ್ರ….
“ಏನಿವಾಗ ನನ್ನ ತಪ್ಪಿಗೆ ಶಿಕ್ಷೆ ಹೇಳಿ”
“ತಪ್ಪಿಗೆ ಶಿಕ್ಷೆ ನನ್ನ ಜೊತೆ ಮಾತನಾಡ ಕೂಡದು”
“ನಿಮ್ಮ ಜೊತೆ ಮಾತನಾಡದೆ ಇರುವುದು ನನಗೆ ಅಸಾಧ್ಯ”
“ಹೌದಾ! ನಾನೇಗೆ ಇದ್ದೆ. ಆರೇಳು ತಿಂಗಳು ನೀ ನನ್ನ ಜೊತೆಯಿಲ್ಲದೆ ಇದ್ದಾಗ” ಎಂದ ಅಪ್ಪಾಜಿಯ ಕಣ್ಣಲ್ಲಿ ಕಂಬನಿ ಸದ್ದು ಮಾಡಿದವು. ಚೈತ್ರಳು ಅಪ್ಪಾಜಿಯ ಬಳಿ ಹೋಗಿ ಅವರ ಕೈಯನ್ನು ಹಿಡಿದು.
“ಅಪ್ಪಾಜಿ ನಾನು ರಾಯಪುರಕ್ಕೆ ಹೋಗಿದ್ದು ತಪ್ಪೇ?”
“ತಪ್ಪಲ್ಲ. ಹೇಳಿ ಹೋಗಿದ್ದರೆ ನನಗಿಷ್ಟು ಬೇಸರವಾಗುತ್ತಿರಲಿಲ್ಲ”.
“ಅಪ್ಪಾಜಿ, ನನ್ನ ಯೋಚನೆಯೇ ಬೇರೆಯಾಗಿತ್ತು. ಹೇಳಿದರೆ ನೀವು ನನ್ನನ್ನು ಕಳುಹಿಸುತ್ತಿರಲಿಲ್ಲ. ಮೂರು-ನಾಲ್ಕು ದಿನಗಳಲ್ಲಿ ವಾಪಸಾಗಬೇಕೆಂದು ಹೋದೆ…..ಆದರೇ…..ಅಲ್ಲಿಯ ಪರಿಸ್ಥಿತಿ ಬೇರೆನೆ ಇತ್ತು, ತುಂಬ ಗಂಭೀರವಾಗಿತ್ತು”.
“ನೀನೇನು ಹೇಳಿದರು ನಾನು ಕೇಳುವ ಸ್ಥಿತಿಯಲ್ಲಿ ಇಲ್ಲ ಚೈತ್ರ. ನಿನ್ನ ಬದಲಾಗಿ ಈ ಮನೆಯಲ್ಲಿ ಯಾರಾದರೂ ನಿನ್ನ ಹಾಗೆ ಹೇಳದೆ ಹೋಗಿದ್ದರೆ. ಅವರಿಗೆ ಪುನಃ ಮನೆಯಲ್ಲಿ ಜಾಗ ಇರುತ್ತಿರಲಿಲ್ಲ” ಎಂದು ಸ್ವಲ್ಪ ಕಟುವಾಗಿಯೇ ನುಡಿಯುತ್ತಾರೆ. ಚೈತ್ರಳು ದುಃಖಿತಳಾಗಿ ಅಲ್ಲಿ ನಿಲ್ಲದೆ. ಓಡಿ ಹೋಗಿ ಕೋಣೆ ಬಾಗಿಲನ್ನು ಹಾಕಿಕೊಂಡು ಅಳುವಳು. ಚೈತ್ರಳ ತಾಯಿ ಅದನ್ನು ಕಂಡು ‘ಇವರದ್ದೇನು ಹಠ’ ಎಂದು ತನ್ನ ಪತಿರಾಯನ ಬಳಿ ಹೋಗಿ.
“ಅವಳು ಅಳುತ್ತಿದ್ದಾಳೆ. ಅವಳೇನು ಅಂತಹ ತಪ್ಪು ಮಾಡಿದ್ದಳೆಂದು ಅವಳನ್ನು ಆಡಿಕೊಳ್ಳುತ್ತಿದ್ದೀರಾ. ಹೋಗಿ ಸಮಾಧಾನಿಸಿ.” ಎನ್ನುವರು.
“ಹೂ…….ಸಮಾಧಾನಪಡೆಸುತ್ತೇನೆ. ಇನ್ನೊಮ್ಮೆ ಅವಳು ಹೇಳದೆ. ಕೇಳದೆ ಹೋಗಲಿ ನೋಡುತ್ತೇನೆ”. ಎಂದು ಹಾಗೂ ಅಲ್ಲಿದ್ದ ಎಲ್ಲರನ್ನೂ ತಮ್ಮ…..ತಮ್ಮ ಕೆಲಸಲದಲ್ಲಿ ತೊಡಗಲು ತಿಳಿಸಿ.
“ಹೋಗಿ…ಸಮಾಧಾನ ಮಾಡು ಹೋಗು. ಊಟಕ್ಕೆ ಬರಲು ತಿಳಿಸು”. ಎಂದನು ಹೆಂಡತಿಗೆ.
“ನೀವಂತೂ…..ಊರಿಗೆ ಮದಕರಿ. ಮಗಳ ಮುಂದೆ ಮರಿ. ನನಗೇನು ಗೊತ್ತಿಲ್ವ? ಇದೇನು ಹೊಸತಾ?” ಎಂದು ಚೈತ್ರಳ ಕೋಣೆಗೆ ಹೋಗಿ ಅವಳ ತಾಯಿ “ಚೈತ್ರ. ಅಳಬೇಡ….ಬಾ….ಊಟ ಮಾಡು ಬಾರೆ. ನಿನ್ನ ಅಪ್ಪಾಜಿ ನಿನ್ನ ಮೇಲಿನ ಅತಿಯಾದ ಪ್ರೀತಿಯಿಂದ ಹಾಗೆ ಮಾಡುತ್ತಾರೆ”.
“ಇಲ್ಲ ಅಪ್ಪಾಜಿ…ನನ್ನ ಮೇಲೆ ತುಂಬ ಕೋಪಗೊಂಡಿದ್ದಾರೆ. ನಾನು ಬರಲೊಲ್ಲೆ” ಎಂದಳು ಚೈತ್ರ.
“ಇಲ್ವೆ. ಅವರ ಉದ್ದೇಶವಷ್ಟೇ, ಇನ್ನೊಮ್ಮೆ ಅವರನ್ನು ನೀನು ಬಿಟ್ಟು ಎಲ್ಲಿಗೂ ಹೋಗಬಾರದೆಂದು, ನೀನಿಲ್ಲದಿದ್ದರೆ ಅವರು ತುಂಬ ಮೌನ ಗೊತ್ತಾ?”
“ಹೂಂ…..ಹೂA…..ನಾ ಬರೋಲ್ಲ.”
“ಸರಿ ಅವರನ್ನೇ ಇಲ್ಲಿಗೆ ಕಳುಹಿಸುತ್ತೇನೆ.” ಎಂದು ಹೊರ ಬಂದು.
“ರೀ….ಹೋಗ್ರಿ. ಸಮಾಧಾನ ಮಾಡಿ ಹೋಗಿ ಅಳುತ್ತಿದ್ದಾಳೆ. ನೀವು ಬಲ್ಲ; ನಿಮ್ಮ ಮಗಳು ಬಲ್ಲ. ನಿಮ್ಮಿಬ್ಬರ ಮಧ್ಯೆ ನಾವೆಂದಾದರೂ ಗೆದ್ದಿದ್ದೇವೇನು?” ಎಂದೇಳಿ ಹೊರಟರು. ಚೈತ್ರಳ ಅಪ್ಪಾಜಿ ತುಸು ಗಂಭೀರಗೊAಡAತೆ ಒಳ ಹೋದರು. ಚೈತ್ರ ಕೋಣೆಯಿಂದ ಹೊರ ಬರುತ್ತಿದ್ದಳು.
“ಅಮ್ಮ….ಚೈತ್ರ ಕೋಪನ ನಿನ್ನ ಅಪ್ಪಾಜಿ ಮೇಲೆ.” ಇದನ್ನು ಕೇಳಿದ ಚೈತ್ರಳ ಕಣ್ಣಲ್ಲಿ ನೀರು ಹೊರ ಬಂದವು. ಜಾರಿ ಬೀಳುವ ಕಂಬನಿ ಹನಿಯೊಂದನ್ನು ತಂದೆ ಕೈಯಲ್ಲಿಡಿದು.
“ನಿನ್ನ ಕಣ್ಣ ಹನಿ ಕೆಳ ಜಾರಿ ಬಿದ್ದರೆ. ಹನಿಯ ಮೇಲೆ ಯಾರಾದರೂ ಪಾದವಿಟ್ಟು ಮುನ್ನಡೆಯುವರು. ಅಳಬೇಡ” ಎಂದಾಗ ಚೈತ್ರ ತನ್ನ ಅಪ್ಪಾಜಿಯನ್ನು ಅಪ್ಪಿಕೊಳ್ಳುವಳು. ಅವಳ ತಲೆಯ ಮೇಲೆ ಕೈಯಾಡಿಸುತಾ” ಬಂಗಾರಿ ನೀ ನಿಲ್ಲದಿದ್ದರೆ ಈ ದೇಹ ಒಣಗುತ್ತದೆ. ಅತಿಯಾದ ಪ್ರೀತಿಯಿಂದ ಕೋಪ ಒಮ್ಮೊಮ್ಮೆ ನಮ್ಮನ್ನು ದ್ವೇಷಿಸುತ್ತದಷ್ಟೇ”. ಎಂದೇಳಿದರು.
“ನನ್ನನ್ನು ಕ್ಷಮಿಸಿ ಅಪ್ಪಾಜಿ ಇನ್ನೊಮ್ಮೆ ನಿಮಗೆ ಹೇಳದೆ ಎಲ್ಲೂ ಹೋಗಲ್ಲ.” ಎಂದಳು ಸಮಾಧಾನಗೊಳ್ಳುತ್ತಾ. “ಕ್ಷಮಿಸುವಂತಹ ಕೆಲಸಕ್ಕಿಂತ ದೊಡ್ಡ ಸಾಧನೆ ನೀನು ಮಾಡಿರುವಾಗ, ಈ ಕ್ಷಮೆಯೆಲ್ಲ ಯಾಕಮ್ಮ” ಎನ್ನುವರು. ಇಬ್ಬರೂ ಸಮಾಧಾನಗೊಂಡು ಊಟ ಮಾಡಿ ರಾಯಪುರದ ವಿಷಯದ ಕುರಿತು ಚರ್ಚಿಸುತ್ತಾ ಮಲಗುವರು. ತನ್ನ ಅತ್ತಿಗೆ ಕಾಲ್ಗುಣದಿಂದ ಚಂದ್ರನ ಮನೆಯು ಅತಿ ಸಂತೋಷಕರವಾಗಿತ್ತು. ಅವನ ಊರಿನ ಒಗ್ಗಟ್ಟಿನ ಅಭಿಪ್ರಾಯದಂತೆ, ಹಿರಿಯರ ಆಶೀರ್ವಾದ, ಗೆಳೆಯರ ಬಳಗದಿಂದ, ಕಿರಿಯರ ಪ್ರೋತ್ಸಾಹದಿಂದ, ಅಪ್ಪ-ಅಮ್ಮಂದಿರ ನಂಬಿಕೆಯAತೆ ಚಂದ್ರನು ರಾಜಕೀಯ ವ್ಯಕ್ತಿಯಾಗಿ ಹೆಸರು ಮಾಡಿದ್ದ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಂಡು ಅದನ್ನು ಸಾಧಿಸುವಲ್ಲಿ ಸಫಲನಾಗಿದ್ದನು. ಜನಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡನು. ತನ್ನ ಅತ್ತಿಗೆಯ ಪ್ರೋತ್ಸಾಹವಂತು ಇವನಿಗೆ ಅಪಾರ. ಮನೆಯಲ್ಲಿ ಇವನಿಗೂ ಹೆಣ್ಣು ನೋಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇವನಿಗೆ ಬೇಡವೆನಿಸಿದರು. ಅಪ್ಪ-ಅಮ್ಮನ ಒತ್ತಾಯ ಬಹಳವಿತ್ತು. ಈ ಮಧ್ಯದಲ್ಲಿಯೇ ಚಂದ್ರನಿಗೆ ಡಾಕ್ಟರ ಕಲ್ಯಾಣಿಯವರ ಬಳಿ ಹೋಗಬೇಕೆಂದು ಅನಿಸುತ್ತದೆ. ಹೊರಡಲು ಸಿದ್ಧನಾಗುತ್ತಾನೆ.
ಅಮ್ಮ-ಮಗಳು ಕಲ್ಯಾಣಿಯವರ ಮನೆಗೆ ಬಂದು ಆಗಲೇ ಮೂರು ದಿನಗಳು ಉರುಳಿದ್ದವು. ಚಿತ್ರ ತಾನಿನ್ನು ತನ್ನ ಮನೆಗೆ ಹೋಗುತ್ತೇನೆಂದು ಕಲ್ಯಾಣಿಯವರಿಗೆ ಹೇಳುತ್ತಿದ್ದಳು. ಯಾಕೋ ಭೂಮಿಕಾಳಿಗೆ ತನ್ನ ಮನೆಗೆ ಹೋಗುವುದು ಮನಸ್ಸೇ ಇರಲಿಲ್ಲ. ಡಾಕ್ಟರ ಕಲ್ಯಾಣಿಯವರು ಚಿತ್ರಗಳಿಗೆ “ಚಿತ್ರ….ಇವತ್ತು ಹೋಳಿ ಹಬ್ಬ. ಇವತ್ತೊಂದು ದಿನವಿದ್ದು. ನಾಳೆ ಹೋಗಿವಿರಂತೆ” ಎಂದಾಗ ಚಿತ್ರ ಒಪ್ಪಲು ಸಿದ್ಧವಿರಲಿಲ್ಲ.
“ಅಮ್ಮ…..ನಮ್ಮ ಅತ್ತೆ-ಮಾವನಿಗೆ ನೀವು ಆಸ್ಪತ್ರೆಗೆ ಕರೆದುಕೊಂಡು ಹೋಗ್ತೇನೆ ಎಂದೇಳಿ. ನಿಮ್ಮ ಮನೆಗೆ ಕರೆದುಕೊಂಡು ಬಂದಿದ್ದೀರಾ. ನಮ್ಮ ಅತ್ತೆ-ಮಾವನಿಗೆ ಈ ಸಂಗತಿ ತಿಳಿದರೆ ಏನು ಮಾಡುವುದು.” ಎಂದು ಚಿತ್ರ ಕಲ್ಯಾಣಿಯವರಿಗೆ ಕೇಳುತ್ತಾಳೆ.
“ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಾನಿರುವಾಗ ನಿನಗೇಕೆ ಚಿಂತೆ?” ಎಂದೇಳಿ ಹಬ್ಬದ ಪ್ರಯುಕ್ತ ಹೋಳಿ ಹಬ್ಬದ ಸಿದ್ಧತೆಯಲ್ಲಿ ಕಲ್ಯಾಣಿಯವರು ಹಾಗೂ ಭೂಮಿಕಾ ತೊಡಗಿದ್ದರು. ಇನ್ನೂ ಹೋಳಿ ಹಬ್ಬ ಜೋರಾಗಿಯೇ ನಡೆಯಿತು. ಭೂಮಿಕಾ ಹೊರಗಡೆ ಚಿಕ್ಕ ಮಕ್ಕಳ ಜೊತೆಯಲ್ಲಿ ಬಣ್ಣವಾಡುತ್ತಿತ್ತು. ಕಲ್ಯಾಣಿಯವರು ಭೂಮಿಕಾಳ ಜೊತೆ ಹೋಳಿ ಹಬ್ಬದಲ್ಲಿ ತೊಡಗಿದ್ದರು. ಚಿತ್ರ ಮಾತ್ರ ಮನೆಯಿಂದಾಚೆ ಹೊರಗಡೆ ಬಂದವಳಲ್ಲ. ಮಗಳ ಖುಷಿಯನ್ನೆ ತನ್ನ ಖುಷಿಯೆಂದು ಭಾವಿಸಿದ್ದಳು. ಕಲ್ಯಾಣಿಯವರಿಗೆ ತನ್ನ ಕೃತಜ್ಞತೆ ಹೇಗೆ ತಿಳಿಸಬೇಕೆಂದು ಯೋಚಿಸುತ್ತಿದ್ದಳು. ಕಲ್ಯಾಣಿಯವರು ಅದೆಷ್ಟು ಒಳ್ಳೇಯವರೆಂದು ಗುಣಗಾನ ಮಾಡುತ್ತಿದ್ದಳು ತನ್ನ ಮನದಲ್ಲಿ. ಬಿಳಿ ಅಂಗಿ ಹಾಕಿಕೊಂಡ ಚಂದ್ರನು ಹೊರಗಡೆ ಬರುತ್ತಿರಬೇಕಾದರೆ ಕಲ್ಯಾಣಿಯವರು ಚಂದ್ರನನ್ನು ಕಂಡು ಬಣ್ಣವನ್ನು ಚಂದ್ರನ ಮೈಯಲ್ಲಾ ಸುರಿದು ಮುಖಕ್ಕೆಲ್ಲಾ ಹಚ್ಚಿದರು. ‘ಬೇಡ-ಬೇಡ’ ಎಂದು ಚಂದ್ರ ಕೂಗಿದರು ಕೇಳದ ಕಲ್ಯಾಣಿ ಚಂದ್ರನನ್ನು ಮನೆಯಲ್ಲಾ ಓಡಾಡಿ ಹಾಕಿದರು. ಚಂದ್ರನು ಸಹ ಕಲ್ಯಾಣಿ ಅವರಿಗೆ ಬಣ್ಣ ಹಾಕಬೇಕೆಂದು ಹೊರಗಡೆ ಬರಬೇಕಾದರೆ, ಬಿಳಿ ಸೀರೆಯನ್ನು ಧರಿಸಿದ ಚಿತ್ರಳು ಗೋಡೆಗೆ ಮುಖಮಾಡಿ ರೀಪೇರಿ ಇದ್ದಂತಹ ಗಡಿಯಾರ ನೋಡುತ್ತಿದ್ದಳು. ಚಂದ್ರನು
“ಯಾರು ಇವರು? ಡಾಕ್ಟರ್?. ಹೌದು ಡಾಕ್ಟರ್ ಮನೆಯಲ್ಲಿ ಡಾಕ್ಟರ್ ಇರದೆ ಬೇರೆ ಯಾರು ಇರಲು ಸಾಧ್ಯ?”. ಎಂದು ಶಬ್ದ ಮಾಡದೇ ಮೆಲ್ಲಗೆ ನಡೆಯುತ್ತಾ ಹೋಗುತ್ತಿದ್ದ. ಅರಿಯದ ಚಿತ್ರ ‘ವಾಚ್’ ನೋಡುತ್ತಿದ್ದಳು. ಚಂದ್ರನು ಹೊಳಿಯ ಹಬ್ಬದ ಮೋಜಿನಲ್ಲಿ ಬೆನ್ನು ಮಾಡಿ ನಿಂತAತಹ ಚಿತ್ರಳ ತಲೆಯ ಮೇಲೆ ಬಣ್ಣ ಸುರಿದು ಬಿಟ್ಟ. ಸುರಿದರು ಚಿತ್ರಳನ್ನು ಅವನು ಗುರುತು ಹಿಡಿಯಲಿಲ್ಲ.
“ಅಮ್ಮಾ” ಎಂದು ಜೋರಾಗಿ ಚೀರಿದ ಚಿತ್ರಳು ಭಯಗೊಂಡು ಹಿಂದಕ್ಕೆ ನೋಡುತ್ತಾಳೆ. ಬಣ್ಣ ಹಚ್ಚಿಕೊಂಡ ಚಂದ್ರನನ್ನು ಕಂಡು, ಗುರುತು ಸಿಕ್ಕಂತಹ ನಾನಿಯ ಮುಖ ನೋಡಿ.
“ನಾನಿ….ನಾನಿ….” ಎಂದು ಹಿಂದೆ ಸರಿಯುತ್ತಿದ್ದಳು. ಚಂದ್ರ ಚಿತ್ರಳ ಮುಖ ನೋಡಿದರು, ಕಲ್ಯಾಣಿಯವರ ಮನೆ ಕೆಲಸದವರು ಎಂದು ಭಾವಿಸಿದ್ದ ಆದರೇ ಆಕೆ ಕರೆಯುವ ‘ನಾನಿ’ ಎಂಬ ಧ್ವನಿಯಿಂದ ‘ಕ್ರೋಷಿ’ ಎನ್ನುತ್ತಿದ್ದ. ಕಲ್ಯಾಣಿಯವರು ಹೊರಗಡೆಯಿಂದ ಒಳಗಡೆ ಬರುತ್ತಿರಬೇಕಾದರೆ ಕ್ರೋಷಿಯ ಬಿಳಿ ಸೀರೆ ಬಣ್ಣದ ಸೀರೆಯಾಗಿತ್ತು. ಅದನ್ನು ಕಂಡAತಹ ಅವರು “ಓ ಮೈ ಗಾಡ್” ಎಂದು ಸುಮ್ಮನಾದರು.ಕ್ರೋಷಿ, ನಾನಿ, ಪ್ರೋಷಿ ಮೂವರು ಬೇರೆಯಾದ ದಿನ. ನಾನಿಯು ಕ್ರೋಷಿಯ ಮುಖದ ಕೆನ್ನೆಗೆ ಭಾರಿಸಿದ ಒಂದೇಟು ಈವಾಗ ಮತ್ತೆ ನೆನಪು ಬಂದಿತು ಅವನಿಗೆ, ಅಲ್ಲಿಂದ ಕ್ರೋಷಿ ಒಳಗಡೆ ಓಡಿ ಹೋದಳು. ಕಲ್ಯಾಣಿ ಚಂದ್ರನ ಸಮೀಪ ಬಂದು,
“ಚಂದ್ರ ಇವಳ್ಯಾರು ಗುರುತು ಸಿಕ್ತಾ?”
“ಹೂಂ, ಕ್ರೋಷಿ, ಹೇಗಾಗಿದ್ದಾಳಲ್ಲ? ಗುರುತು ಹಿಡಿಯಲು ಕಷ್ಟ.”
“ಹೌದು, ಚಂದ್ರ ಕ್ರೋಷಿಯು ಈವಾಗ ವಿಧವೆ.” ಚಂದ್ರನ ಕೈಯಲ್ಲಿ ಉಳಿದಿದ್ದ ಬಣ್ಣವು ‘ದಫ್‌ನೆ’ ಕೆಳಗೆ ಬಿತ್ತು.
“ಕ್ರೋಷಿಯ ನೋವು, ಕಷ್ಟ ಅನುಭವಿಸಲು ಬೇರೆ ಯಾರಿಗೂ ಅಸಾಧ್ಯ. ಮದುವೆಯಾದ ಸ್ವಲ್ಪ ದಿನಕ್ಕೆ ಗಂಡನನ್ನು ಕಳೆದುಕೊಂಡು, ಮನೆಯವರು ನೀಡುವ ಚಿತ್ರ ಹಿಂಸೆಗೆ ಬಲಿಯಾಗಿ ನರಕಯಾತನೆ ಅನುಭವಿಸುತ್ತಿದ್ದಾಳೆ.” ಎಂದು ವಿವರಿಸಿದರು ಕಲ್ಯಾಣಿ.
“ಪಾಪ, ದೇವರೆ ಕ್ರೋಷಿಗೆ ಅಷ್ಟೊಂದು ನೋವಿದಿಯಾ?” ಎಂದನು ಚಂದ್ರ. “ಕ್ರೋಷಿ ಹೊರಗಡೆ ಬಾ” ಎಂದು ಕಲ್ಯಾಣಿಯವರು ಕರೆದರು. ಹೊರಗಡೆ ಬಂದು ನಿಂತಿದ ಚಿತ್ರಳ ಮುಂದೆ ಚಂದ್ರನು. ‘ಕ್ಷಮಿಸಿ’ ಎಂದನು.
“ಹೇಗಿದ್ದೀರಾ ಕ್ರೋಷಿಯವರೇ?”
“ಚೆನ್ನಾಗಿಯೇ ಇದ್ದೇನೆ. ನೀವೂ ಹೇಗೆ? ನಿಮ್ಮ ಆರೋಗ್ಯ ಹೇಗಿದೆ?.” ಎಂದಳು ಚಿತ್ರ.
“ನಾನು ಕೂಡ ಚೆನ್ನಾಗಿಯೇ ಇದ್ದೇನೆ.” ಎನ್ನುತ್ತಿದ್ದ ಚಂದ್ರ. ಭೂಮಿಕಾಳು ಓಡಿ ಬಂದು “ಅಮ್ಮ ನಾನು ಎಲ್ಲಾರಿಗೂ ಬಣ್ಣ ಎರಚಿದೆ ಗೊತ್ತಾ?” ಎಂದು ಜೋಶ್‌ನಲ್ಲಿ ಹೇಳಿದಳು.
ಚಂದ್ರ “ಇವಳು ನಿಮ್ಮ ಮಗಳ?” ಎಂದನು.
“ಹೌದು ಚಂದ್ರ, ಒಬ್ಬಳೇ ಮಗಳು, ಎಂಟು ತಿಂಗಳಿನಲ್ಲಿ ಅಮ್ಮನ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದು ಕೊಂಡಿದ್ದಾಳೆ.” ಎಂದರು ಕಲ್ಯಾಣಿ.
“ಮಗಳೇ ಬಣ್ಣ ಆಡುವುದು ಸಾಕಾಯ್ತಾ? ಆವಾಗಲೇ ಒಳಗೆ ಬಂದಿದ್ದೀಯ? ನನ್ನಮ್ಮ ಅಂತೂ ಆಡುವುದಿಲ್ಲ”. ಎಂದು ಭೂಮಿಕಾ ಕಲ್ಯಾಣಿಯವರನ್ನು ಉದ್ದೇಶಿಸಿ ಮಾತನಾಡಿದಳು.
“ಏನೀದು ಡಾಕ್ಟರೇ, ಮಗು ನಿಮಗೆ ಮಗಳೇ ಅಂತಾಳೇ”.
“ಆ ಮಗು ಹಾಗೇ ಚಂದ್ರ. ಚಿತ್ರಳ ಮಗಳು ಅವಳಂತೆ, ಅವಳ ಮಗಳು ನಾನಂತೆ, ನನ್ನ ಮಗಳು ಚಿತ್ರ ಅಂತೆ ಎಂದು ಹೇಳುತ್ತಾಳೆ.”
“ಇಷ್ಟೇ ಇದ್ದಾಳೆ ಪುಟಾಣಿ ಬೇಜಾನು ಮಾತನಾಡುತ್ತಾಳೆ.”
“ಇಲ್ಲ ಚಂದ್ರ. ಆ ಮಗುವಿಗೂ ಕೂಡ ತೀರ ಕಷ್ಟವಿದೆ. ನನ್ನ ಮನೆಗೆ ಇವರು ಬಂದು ಮೂರು ದಿನಗಳಾಯಿತು. ಇಲ್ಲಿ ಇರುವಂತೆ ಅವಳ ಮನೆಯಲ್ಲಿ ಅವಳಿಗೆ ಯಾವುದೇ ಸ್ವಾತಂತ್ರö್ಯ ಇಲ್ಲ”. ಎಂದ ಕಲ್ಯಾಣಿಯವರು ಚಿತ್ರಳ ಗಂಡನ ಮರಣ ಹಾಗೂ ಮನೆಯ ಸದಸ್ಯರ ವರ್ತನೆಯನ್ನು ಚಂದ್ರನಿಗೆ ಮೂರು-ನಾಲ್ಕು ತಾಸು ಕುಳಿತು ಹೇಳಿದಳು. ಚಂದ್ರನ ಮನಸ್ಸಿಗೆ ಬೇಜಾರಾಯಿತು. ನಂತರ ಎಲ್ಲಾರೂ ಪ್ರೇಶ್ ಆಗಿ ಕುಳಿತುಕೊಂಡರು. ತರಲೆ ಮಾಡುವ ಭೂಮಿಯನ್ನು ಚಂದ್ರನೂ ಹತ್ತಿರಕ್ಕೆ ಕರೆದು ಮುದ್ಧಿಸುತ್ತಿದ್ದ.
“ನಾನಿಯವರೇ ಚೈತ್ರಳನ್ನು ಭೇಟಿ ಮಾಡಿದ್ದೀರಾ?” ಚಿತ್ರ ಕೇಳಿದಳು.
“ಇಲ್ಲ. ನೀವೇನಾದರೂ ಭೇಟಿಯಾಗಿದ್ದೀರಾ?”.
“ಇಲ್ಲ, ನಾನು ಮದುವೆಯಾಗಿ ಹೋದ ನಂತರ ಯಾರು ಸಿಕ್ಕಿಲ್ಲ. ಕಾಲ ನೋಡಿ ನಮ್ಮನ್ನು ಹೇಗೆ ಕೂಡಿಸಿದೆ.”
“ಹೌದು. ಕ್ರೋಷಿಯವರೇ ಯಾವ ಸಮಯ ನಮ್ಮನ್ನು ಯಾವ ರೀತಿ ಮಾಡುತ್ತೆ. ಎಂದೇಳಲು ಅಸಾಧ್ಯ. ಚೈತ್ರಳು ಈಗ ಇಂಜಿನಿಯರ ಅಂತೆ ಡಾಕ್ಟೆçà ಹೇಳಿದರು.”
“ನೋಡಿ ಚಂದ್ರ, ನಾವಿಬ್ಬರೂ ತಲೆ ಬಾಗುವವರು. ಆದರೇ ಚೈತ್ರ ಹಾಗಲ್ಲ. ದುರಂಕಾರಿ, ಹಠ ಅವಳದು.”
“ಹೌದು. ಅವಳ ಅಹಂಕಾರದಿAದಲ್ಲವೇ ನಮ್ಮನ್ನು ಅಗಲಿಸಿದ್ದು ?’’
“ನಾವು ಶಿಕ್ಷಣ ಮರೆತು ಬೇರೆ-ಬೇರೆ ದಾರಿಯಲ್ಲಿದ್ದೆವೆ.”
“ಹಾಂ! ನಾನು ಈವಾಗ ರಾಜಕೀಯ ವ್ಯಕ್ತಿ.”
“ಹೌದಾ? ಖುಷಿ ಸಂಗತಿ.” ಎನ್ನುವಳು ಚಿತ್ರ. ಹೀಗೆ ಒಬ್ಬರನ್ನು ಒಬ್ಬರು ವಿಚಾರಿಸಿಕೊಳ್ಳುತ್ತಿದ್ದರು. ಸಾಯಂಕಾಲವಾಯಿತು. ಚಂದ್ರ ಊರಿಗೆ ಹೋಗುತ್ತೇನೆ ಎಂದರು ಹೋಗುವುದು ಬೇಡ. ಎಂದು ತಡೆ ಹಿಡಿದ ಡಾಕ್ಟುç. ರಾತ್ರಿ ಎಲ್ಲರೂ ಮಲಗುವ ಹೊತ್ತು. ಚಂದ್ರನು ಮಲಗುತ್ತಿದ್ದ, ನಿದ್ದೆ ಬಾರದೇ ಹೇಳುತ್ತಿದ್ದಾನೆ. ಕಲ್ಯಾಣಿಯವರಿಗೆ ತಮ್ಮ ಗೆಳೆತನದ ಒಡಕನ್ನು.
– ೧೧ –
ಪ್ರೌಢ ಹಂತ ಮುಗಿಯಿತು. ಕಾಲೇಜು ಹಂತಕ್ಕೆ ಬಂದರು. ಎಲ್ಲರೂ ಡಿಪ್ಲೋಮಾ ಕೋರ್ಸ್ಗೆ ಅಡ್ಮೀಶನ ಮಾಡಿದರು. ಒಬ್ಬಳು ಚೈತ್ರ. ಇನ್ನೊಬ್ಬವಳು ಚಿತ್ರ ಸಾಗರ. ಮತ್ತೊಬ್ಬ ಚಂದ್ರ ಜೋಶಿ. ಆ ಕಾಲೇಜು ಸುಂದರ. ಆವರಣದಲ್ಲಿಯೇ ಹಾಸ್ಟೇಲ್. ಹುಡುಗರ ಹಾಗೂ ಹುಡುಗಿಯರ ಹಾಸ್ಟೇಲ್ ಸಿಸ್ಟಮ್, ವಿಸ್ತಾರವಾದ ಪ್ರದೇಶ, ಕಾಲೇಜು ದಿನಗಳು ಪ್ರಾರಂಭವಾಗಿ ಸ್ವಲ್ಪ ದಿನಕ್ಕೆ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಂದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ. ಮಧ್ಯಾಹ್ನ ಸಮಯದಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಆಶು-ಭಾಷಣ ಕಾರ್ಯಕ್ರಮ. ಅವರಲ್ಲಿ ಪ್ರೋಷಿ, ಕ್ರೋಷಿ ಹಾಗೂ ನಾನಿನ್ನೂ ಚೆನ್ನಾಗಿ ಮಾತನಾಡಿದರು. ಅವರಲ್ಲಿ ಮೂವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಒಬ್ಬರಿಗೊಬ್ಬರು ಪರಿಚಯವಾದರು. ಒಂದು ದಿನ ಬೆಳಗ್ಗೆ ಚೈತ್ರ ಕ್ಲಾಸಿಗೆ ನಡೆದು ಬರಬೇಕಾದರೆ ಅವಳ ಕಾಲಿಗೆ ಪೆನ್ನು ತಾಕಿತು. ಆವರಣದಲ್ಲಿ ಬಾಗಿ ಪೆನ್ನನ್ನು ಕೈಗೆತ್ತಿಕೊಂಡಳು. ಆ ಪೆನ್ನೊಳಗೆ ‘ನಾನಿ’ ಎಂಬ ಹೆಸರು ಬರೆದು ಹಾಕಿದ್ದರು. ಹಾಗೇ ಪೆನ್ನನ್ನು ಎತ್ತಿಕೊಂಡು ಮುಂದಾದಳು. ಬೆಳಿಗ್ಗೆ ಸಮಯ ಇನ್ನೂ ಕ್ಲಾಸ್ ಸ್ಟಾರ್ಟ್ ಆಗಿರಲಿಲ್ಲ. ಆವರಣದ ಹೂ ಗಿಡದ ಎಲೆಗಳ ಮೇಲೆ ಚೈತ್ರ ತನ್ನ ಹೆಸರು ಬರೆಯುತ್ತಿದ್ದಳು. ಗಿಡದ ಎಲೆಗಳು ಎಲ್ಲಾ ಚೈತ್ರ! ಚೈತ್ರ. ಎಂದು ಕಂಗೊಳಿಸುತ್ತಿದ್ದವು. ದೂರದಿಂದ ಚಂದ್ರ ಚೈತ್ರಳನ್ನು ಕಂಡು ಅವಳ ಸಮೀಪ ಬಂದನು. ಚೈತ್ರಳನ್ನು ಕಂಡು ಚಂದ್ರನು.
“ಹಲೋ ಫ್ರೆಂಡ್, ಗುಡ್ ಮಾರ್ನಿಂಗ್”.
“ಗುಡ್ ಮಾರ್ನಿಂಗ್”. ಚಂದ್ರನು ಚೈತ್ರಳ ಕೈಯಲ್ಲಿರುವ ಪೆನನ್ನು ಕಂಡನು.
“ಅಯ್ಯೋ! ಇದು ಎನ್ ಫ್ರೆಂಡ್”.
“ಏನು? ಕ್ಲಾಸ್ ಸ್ಟಾರ್ಟ ಆಗಿಲ್ಲ. ಹಾಗಾಗಿ ಟೈಮ್ ಪಾಸ ಜಸ್ಟ್”.
“ಅದಲ್ಲ. ಫ್ರೆಂಡ್ ಅದು ನೀವು ಕಳ್ಳತನ ಮಾಡ್ತೀರಾ?”.
“ಅಯೋ! ಹೇಗೆ ಕಾಣ್ತಾ ಇದೇನೆ ನಿಮ್ಮ ಕಣ್ಣಿಗೆ?”
“ಹಾಗಲ್ಲ. ಆದರೇ ನನ್ನ ಪೆನ್ನು ನಿಮ್ಮ ಕೈಯಲ್ಲಿ.”
“ನಿಮ್ಮದಾ? ದಾರಿಯಲ್ಲಿ ಸಿಕ್ತು ತಗೊಳ್ಳಿ.” ಎಂದು ಚಂದ್ರನಿಗೆ ನೀಡುವಳು.
“ಥ್ಯಾಂಕ್ಸ್”.
“ಓ.ಕೆ. ಆದರೇ ಅದೇನದು, ಪೆನ್ನೊಳಗೆ ‘ನಾನಿ’ಯೆಂದು ಇದೆ. ನಿಮ್ಮ ಹೆಸರು ‘ಚಂದ್ರ’ ಅಲ್ವ?”.
“’ನಾನಿ’ ಅದು ನನ್ನ ನಿಕ್ ನೇಮ್”.
“ಯಾರಿಟ್ಟ ಹೆಸರು? ‘ನಾನಿ’ ಎಂದರೇನು?”
“ನಾನು ಚಂದ್ರ. ಆಗಸದ ಚಂದ್ರ, ಹಾಗಾಗಿ ನಾನೇ ಸ್ವೀಟ ಆಗಿ ನಾನೊಬ್ಬ. ಅಂಬರದ ಚಂದ್ರನೊಬ್ಬ ಸೇರಿ ನಾನಿ ಎಂದು ಬರೆಯುವೆ.”
“ವ್ಹಾವ್! ಸ್ವೀಟ ಆಗಿದೆ ನಾನಿ.”
“ನಿಮ್ಮ ನಿಕನೇಮ್ ಇಲ್ವ?”
“ಇದೆ. ಈಗ ಬೋರ್, ನಾಳೆ ಹೇಳುತ್ತೇನೆ.” ಎಂದು ಕ್ಲಾಸಿಗೆ ಹೊರಟರು. ಮರುದಿನ ಚಿತ್ರ ಹಾಗೂ ಚೈತ್ರ ಇಬ್ಬರೂ ಜೊತೆಯಾಗಿ ಯೋಗ ಕ್ಲಾಸಿಗೆ ಬೆಳಿಗ್ಗೆ ೬.೩೦ಕ್ಕೆ ಹೋಗುತ್ತಿದ್ದರು. ಚಿತ್ರಳಿಗೆ ಯೋಗ ಅಭ್ಯಾಸವಿಲ್ಲದೆ. ಕೋಪದಿಂದ ‘ಚೈತ್ರ ಕರೆಯುತ್ತಿದ್ದಾಳೆ. ಹೆಣೆಬರಹ’ ಎಂದು ಗುಣಗುತ್ತಾ ಹೋಗುತ್ತಿದ್ದಳು. ರಿಟರ್ನ್ ಹಾಸ್ಟೇಲ್‌ಗೆ ಹೋಗುವುದಪ್ಪ, ಯೋಗ ಕ್ಲಾಸ್ ಬೇಡ,” ಎಂದು ಹಿಂದುರಿಗಿ ಚಿತ್ರ ಬರುತ್ತಿದ್ದಳು. ಚಿತ್ರ ಬರುತ್ತಿರಬೇಕಾದರೆ ಕಾಲಲ್ಲಿ ಕಲ್ಲನ್ನು ನೋಡದೆ ಎಡವಿ ಬಿದ್ದಳು. ಬಿದ್ದ ತಕ್ಷಣ ‘ಅಮ್ಮ, ಅಮ್ಮ’ ಎಂದು ಮೆಲ್ಲ ದ್ವನಿಯಿಂದ ಮೇಲೇಳುತ್ತಿದ್ದಳು. ಯಾರೂ ಇಲ್ಲದ ನಿಶಬ್ದ ಸಮಯದಲ್ಲಿ ಚಂದ್ರ ಹಾಸ್ಟೇಲಿನ ‘ವಾಚ್ ಮೆನ್’ ಆದಂತಹ ನಾಯಿಯ ಜೊತೆ ಆಟವಾಡುತ್ತಿದ್ದ. ಅವನಿಗೂ ಯೋಗ ಕ್ಲಾಸಿಗೆ ಹೋಗಲು ಬೋರ್, ಪ್ರೌಡ ಹಂತದಲ್ಲಿದ್ದ ತುಂಟ ಬುದ್ಧಿ ಹಾಗೆಯೇ ಉಳಿದಿತ್ತು. ನಾಯಿಯ ಜೊತೆ ಸರ್ಕಸ್ ಮಾಡುತ್ತಿದ್ದ.
“ಅಮ್ಮ. ಕಾಲು” ಎಂದು ಚಿತ್ರಳು ಕಾಲು ಹಿಡಿದುಕೊಂಡು ನೋವು ಕಾಣುವುದನ್ನು ಚಂದ್ರ ಕಂಡನು. ನಾಯಿಯನ್ನು ಬಿಟ್ಟು ಅವಳ ಸಮೀಪಕ್ಕೆ ಬಂದು ನೀವು “ಚೈತ್ರಳ ಫ್ರೆಂಡ್ ಅಲ್ವ? ಮಿನ್ಸ ಮೈ ಕ್ಲಾಸಮೆಟ್ಸ್ ರೈಟ.” ಎಂದು ಚಿತ್ರಳನ್ನು ಕರೆದುಕೊಂಡು ‘ಪ್ರಥಮ ಚಿಕಿತ್ಸೆ’ ನೀಡಿದನು. ಮತ್ತೊಂದು ದಿನ ಚೈತ್ರ ಹಾಸ್ಟೇಲ್‌ನಿಂದ ಬರುವ ಮುಂಚೆ ಅವಳು ಬರೆದ ಗಿಡದ ಹತ್ತಿರ ಎಲೆಗಳನ್ನು ನೋಡುತ್ತಿದ್ದ. ‘ಚೈತ್ರ’ ಎಂಬ ಬರೆದ ಹೆಸರು ನೋಡಲು ಮುದವಾಗಿತ್ತು. ದೂರದಿಂದ ಚೈತ್ರಳನ್ನು ಕಂಡನು. ಅವಳ ಹತ್ತಿರ ಹೋಗಿ.
“ನಿಮ್ಮ ಫ್ರೆಂಡ್ ಚಿತ್ರಳಿಗೆ ಗಾಯವಾಗಿದೆ. ನೋಡಿದ್ದೀರಾ?”.
“ಹಾಂ, ನೋಡಿದೆ ಹಾಗೂ ಕೇಳಿದೆ.”
“ಹೇಗಿದೆ, ಗಾಯಾ ಈಗ?”.
“ಪರವಾಗಿಲ್ಲ. ಆದರೇ ನೋವಿದೆಯಂತೆ.”
“ಓ.ಕೆ. ಇರಲಿ, ತಿಂಡಿ ಆಯಿತಾ?”
“ಆಯಿತು”. ಎಂದು ಹೀಗೆ ಮಾತು ಮುಂದುವರೆಸುತ್ತಾ ಹೋಗುತ್ತಿದ್ದರು.ಇವರಿಬ್ಬರು ಮಾತನಾಡುತ್ತಿರುವುದನ್ನು
ಕಂಡAತಹ ಚಿತ್ರ. ಕುಂಟುತ್ತಾ, ಕುಂಟುತ್ತಾ ಅವರ ಹತ್ತಿರ ಬಂದಳು.
“ಏನು ಫ್ರೆಂಡ್ಸ್. ನನ್ನನ್ನು ಬಿಟ್ಟು ಮಾತನಾಡುತ್ತಿದ್ದೀರಾ? ಗುಡ್ ಮಾರ್ನಿಂಗ್ ಚೈತ್ರ. ಗುಡ್ ಮಾರ್ನಿಂ ಚಂದ್ರ.”
“ವೇರಿ ಗುಡ ಮಾರ್ನಿಂಗ್” ಎಂದರು ಚೈತ್ರ ಹಾಗೂ ಚಂದ್ರ.
“ಚೈತ್ರ ನಿನ್ನೆ ನೀವು ನಿಮ್ಮ ನಿಕನೇಮ್ ಹೇಳ್ತೀವಿ. ಅಂದ್ರಲ್ಲ ಹೇಳಿ.” ಚಂದ್ರನು ಚೈತ್ರಗೆ ಕೇಳಿದನು.
“ಯಾರಿಗೂ ಹೇಳಲ್ಲ. ಅಂದರೇ ಹೇಳ್ತೀನಿ.”
“ಆಯಿತು. ಪ್ರಾಮೀಸ ಹೇಳಿ. ಯಾರಿಗೂ ಹೇಳಲ್ಲ.”
“ಪ್ರೋಷಿ”.
“ಪ್ರೋಷಿ ಚೆನ್ನಾಗಿದೆ ಬಿಡಿ.”
“ಪ್ರೋಷಿ ಎಂದು ಯಾರು ನನ್ನನ್ನೂ ಕರೆಯುವುದಿಲ್ಲ. ಆದರೇ ನಾನು ಮಾತ್ರ ಹಾಗೇ ಅಂದುಕೊAಡಿದ್ದೇನೆ.”
“ನನ್ನ ನಿಕನೇಮ್ ಕೂಡ ಯಾರಿಗೂ ಹೇಳಬೇಡಿ. ನಗುತ್ತಾರೆ ಅಷ್ಟೆ ಕೇಳಿದರೆ”.
ಎಂದು ನಗುತ್ತಿದ್ದರು. ಚಿತ್ರ ಸುಮ್ಮನೆ ನಿಂತಿದ್ದಳು. ತುಂಟ ಚಂದ್ರ ಅವಳಿಗೆ.
“ಚಿತ್ರ. ಚೈತ್ರಳ ಇನ್ನೊಂದು ಹೆಸರು, ಪ್ರೋಷಿ.” ಎನ್ನುವನು.
“ಆದರೇ ಚಂದ್ರನ ನಿಕನೇಮ್ ನಾನಿಯಂತೆ” ಎಂದು ಚೈತ್ರ ಮರು ಮಾತನಾಡಿದಳು.
“ನಿನ್ನ ನಿಕನೇಮ್ ಏನು ಚಿತ್ರ”? ಪ್ರೋಷಿ ಕೇಳಿದಳು.
“ನನಗೆ ಯಾವ ನಿಕನೇಮ್ ಇಲ್ಲಪ್ಪ.”
“ನಮಗೆ ಒಂದೊAದು ನಿಕನೇಮ್ ಇದೆ. ಎಂದರೇ ನಿಮಗೂ ಒಂದು ಹೆಸರು. ನಾನೇ ಹೇಳುವೆ.
‘ಕ್ರೋಷಿ’ ಯುವರ ನೇಮ್”.
“ಆದರೇ ಒನ ಕಂಡೀಷನ್. ಮೂವರ ಹೆಸರು ಮೂವರಿಗೆ ಮಾತ್ರ ಗೊತ್ತಿರಬೇಕು” ಎಂದಳು ಚೈತ್ರ. ಅದಕ್ಕೆ ಒಪ್ಪಿಗೆ ಕೂಡ ನೀಡಿದರು.
ಹೀಗೆ ಅವರು ಒಬ್ಬರಿಗೊಬ್ಬರು. ಆತ್ಮೀಯ ಗೆಳೆಯರಾದರೂ. ಓದಿನಲ್ಲೂ ಸಹ ಒಬ್ಬರಿಗಿಂತಲೂ ಒಬ್ಬರು ಮೇಲು. ಒಬ್ಬರ ಬುಕ್ಸ್ ಒಬ್ಬರು ಮತ್ತೊಬ್ಬರು ಉಪಯೋಗಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಓದಿನಲ್ಲಿ ಮಾತ್ರ ಅವರ ಭೇಧ-ಭಾವ. ದೇವಾಲಯ, ಬೀಚ್, ಪಾಲ್ಸ್, ಹಿಲ್ಸ್ ಎಂಬ ಸ್ಥಳಗಳಿಗೆ ಹೋಗಿ ಸುತ್ತಾಡಿ ಬರುತ್ತಿದ್ದರು. ಚಂದ್ರನ ತುಂಟ ಕೆಲಸಕ್ಕೆ ಚೈತ್ರಳಿಗಂತೂ ಬಲು ಬೇಸರ. ಅಪ್ಪಾಜಿಯನ್ನು ಬಿಟ್ಟಿರದ ಅವಳಿಗೆ ಚಿತ್ರಳ ಮತ್ತು ಚಂದ್ರನ ಗೆಳೆತನದಿಂದ ಆರಾಮವಾಗಿದ್ದಳು. ಪರೀಕ್ಷೆ ಸಂದರ್ಭದಲ್ಲಿ ಇವರ ಓದಿನ ತಿಕಲಾಟ ನೋಡಲು ತಮಾಷೆ. ಒಂದು ದಿನ ಹೀಗೆ ಹೊರಗಡೆ ಸುತ್ತಾಡಲು ಹೋಗಿದ್ದರು. ಆದರೇ ಚಿತ್ರ ಹೋಗಿರಲಿಲ್ಲ. ಅವಳು ನಾನಿ ಮತ್ತು ಪ್ರೋಷಿಯನ್ನು ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಳು ಹೊರಗೆ. ತಾನು ಹಾಸ್ಟೇಲಿನಲ್ಲಿಯೇ ಇದ್ದು ಓದುತ್ತಿದ್ದಳು. ಯಾವಾಗ ರಿಟರ್ನ್ ಚಂದ್ರ, ಚೈತ್ರ ವಾಪಸ್ಸಾಗುತ್ತಿರಬೇಕಾದರೆ ಮಲಗಿರುವ ಹಾಗೇ ಆ್ಯಕ್ಟ ಮಾಡುತ್ತಿದ್ದಳು. ಇನ್ನು ಚಂದ್ರ. “ಫ್ರೆಂಡ್ಸ್ ಜೊತೆ ಸುತ್ತಾಡುತ್ತೇನೆ. ಚೈತ್ರ ನೀನು ಹಾಸ್ಟೇಲಿಗೆ ಹೋಗು.” ಎಂದು ಪಾರ್ಕಲ್ಲಿ ಕುಳಿತು ಸ್ಟಡಿಮಾಡಲು ಹೋಗುತ್ತಿದ್ದ. ಚೈತ್ರ ಹಾಸ್ಟೇಲ್‌ಗೆ ಹೋದರೆ ಅಲ್ಲಿ ಓದುವುದನ್ನು ಎಲ್ಲರೂ ನೋಡುತ್ತಾರೆ. ಎಂದು ಯಾರು ಇರದ ದೇವಾಲಯ ಸಮೀಪ ಹೋಗಿ ಓದಲು ಕುಳಿತುಕೊಳ್ಳುವಳು. ಒಬ್ಬರಿಗೆ ಒಬ್ಬರು ಗೊತ್ತಿರದಂತೆ ಓದಿ. ಸಾಯಂಕಾಲ ಮೂವರ ಸೇರಿದಾಗ “ನಾನೇನು ಓದಿಯೇ ಇಲ್ಲ” ಎಂದು ಡ್ರಾಮಾ ಶುರು ಮಾಡುತ್ತಿದ್ದರು. ಹೇಗಿದ್ದರೂ ಪರೀಕ್ಷೆಯಲ್ಲಿ ಚೈತ್ರಳು ಒಂದು ಮಾರ್ಕ್ಸ ಮುಂದೆ. ಅವಳಿಗಿಂತ ಒಂದು ಮಾರ್ಕ್ಸ ಕಡಿಮೆ ಚಂದ್ರನದು, ಚಂದ್ರನಿಗಿAತ ಒಂದು ಮಾರ್ಕ್ಸ ಕಡಿಮೆ ಚಿತ್ರದು. ಓದಿನಲ್ಲೂ ಮಾತ್ರ ಅವರ ವ್ಯತ್ಯಾಸ ಕಾಣಬಹುದು. ಬೇರೆ ಯಾವುದರಲ್ಲೂ ಕಾಣುವುದಿಲ್ಲ. ಎಲ್ಲಾದರೂ ಹೊರಗಡೆ ಶಾಪಿಂಗ್ ಮಾಡಲು ಹೋದರೆ, ಚಿತ್ರ ಎಲ್ಲಾದರ ರೇಟ್ ಕೇಳುತ್ತಿದ್ದಳು. ಆದರೇ ಯಾವುದು ಖರೀದಿ ಮಾಡುತ್ತಿರಲಿಲ್ಲ.
“ಏನೇ ಚಿತ್ರ ಸುಮ್ಮನೆ ಎಲ್ಲಾದರ ‘ರೇಟ್’ ಯಾಕೆ ಕೇಳುತ್ತೀಯಾ?.” ಎಂದು ಚೈತ್ರ ಕೇಳಿದಾಗ
“ಇರಲಿ ಬಿಡೆ. ರೇಟ್ ಕೇಳೋಕು ದುಡ್ಡು ಕೊಡಬೇಕಾ?”. ಚಂದ್ರನ ಹಾಗೂ ಚಿತ್ರಳ ಕೆಲಸಕ್ಕೆ ಚೈತ್ರಗೆ ಬೇಸರವೋ ಬೇಸರ.
ಹೀಗಿರುವಾಗ ಚಿತ್ರ, ಚೈತ್ರ, ಚಂದ್ರ ತೆಗೆಸಿಕೊಂಡಿರುವ ಪೋಟೋ ಒಂದನ್ನು ಚಿತ್ರ ಕೈಗೆತ್ತಿಕೊಂಡು ನೋಡುತ್ತಿದ್ದಳು. ಆ ಫೋಟೋದಲ್ಲಿ ಚೈತ್ರ ಹಾಗೂ ಚಂದ್ರನ ಜೋಡಿ ಚೆನ್ನಾಗಿ ಕಾಣಿಸಿತು ಚಿತ್ರಳ ನಯನಕ್ಕೆ. ‘ಒಂದು ಆಟವಾಡುವುದು ಚೈತ್ರ ಮತ್ತು ಚಂದ್ರನ ಮಧ್ಯೆ’ ಎಂದು ಚಿತ್ರ ನಿರ್ಧಾರಿಸಿದಳು. ಆ ಆಟವೇ ಈ ಮೂವರನ್ನು ಅಗಲಿಸಿದ್ದು.
ರಾತ್ರಿಯಲ್ಲ ಕುಳಿತು ಚಿತ್ರ ಒಂದು ಕವನ ರಚಿಸಿದಳು. ತಯಾರಿಸಿದ ಕವನವನ್ನು ಹೋಗಿ ಚಂದ್ರನ ಡೈರಿಯಲ್ಲಿ ಇಟ್ಟು ಬಂದಳು. ಕವನ ಬರೆದ ಕೆಳಗೆ ‘ಪ್ರೋಷಿ’ ಎಂದು ಸಹಿ ಮಾಡಿದಳು. ಪ್ರೋಷಿ ಹಾಗೂ ಕ್ರೋಷಿಯ ಅಕ್ಷರ ನೋಡಲು ಒಂದೇತ್ತರ ಕಾಣುತ್ತಿದ್ದವು. ಇವಳು ಇಟ್ಟು ಬಂದ ಸಾಯಂಕಾಲ ಚಂದ್ರ ಅದನ್ನು ತೆರೆದು ನೋಡಿದ. ನೋಡಿ ಬೆರಗಾದ.ಅಲೆ, ಅಪ್ಪಳಿಸಿದಂತಾಯಿತು. ‘ಚೈತ್ರ ನನ್ನ ಪ್ರೀತಿಸುತ್ತಿದ್ದಳಾ?’ ಎಂದು ಗುಣಗುತ್ತಿದ್ದ. ಮರುದಿನ ಚೈತ್ರಳಿಗೆ, ಚಿತ್ರಳಿಗೆ ಭೇಟಿಯೇ ಮಾಡಲಿಲ್ಲ. ಏನು ಅರಿಯದ ಚೈತ್ರ ಚಿತ್ರಳಿಗೆ,
“ನಾನಿ ಯಾಕೋ ಇವತ್ತು ಈ ಕಡೆ ಬಂದೇ ಇಲ್ಲ”
“ಹೌದು! ಚೈತ್ರ.” ಚಿತ್ರ ಹೇಳುತ್ತಿರಬೇಕಾದರೆ ಭಯವಿತ್ತು. ನಾನು ತಪ್ಪು ಮಾಡಿದೇನಾ? ನಾಳೆ ನಾನಿ ಬಂದು ಚೈತ್ರಳಿಗೆ ಕೇಳಿದರೆ?” ಎಂಬ ಭಯ ಅವಳಲ್ಲಿ ಒದಗಿತ್ತು. ಮತ್ತೇ ಸಮಾಧಾನಗೊಳ್ಳುತ್ತಾ “ನಾನೇನು ತಮಾಷೆಗೆ ಮಾಡಿದ್ದು. ಆ ಮೇಲೆ ಹೇಳಿದರೆ ಆಯ್ತು” ಎಂದು ಕೊಂಡಳು ಮನದಲ್ಲಿ. ಮತ್ತೊಂದು ಪುಟದಲ್ಲಿ “ನಾನಿ, ನೀನು ಚಂದ್ರ, ನಾನು ಚೈತ್ರ, ಸೇರಿದರೆ ಚೈತ್ರದ ಚಂದ್ರಮ.” ಎಂದು ಬರೆದು ಚಿತ್ರ ಅವನ ಡೈರಿಯಲ್ಲಿಟ್ಟು ಬಂದಳು. ಪುನಃ ಅದನ್ನು ನೋಡಿದ ಚಂದ್ರನಿಗೆ ಕೋಪಗೊಂಡನು. ನೇರ ಇವತ್ತು ‘ಪ್ರೋಷಿ’ಗೆ ಕೇಳಬೇಕೆಂದು ತೀರ್ಮಾನ ಮಾಡಿದ.
ಕಾಲೇಜಿನಿಂದ ೨೦ ಕಿ.ಮಿ. ದೂರ ಬೀಚ್ ಒಂದಿತ್ತು. ಚಿತ್ರ ಹಾಗೂ ಚೈತ್ರ ಅಲ್ಲಿಗೆ ಹೋಗಬೇಕೆಂದು ತೀರ್ಮಾನಿಸಿದರು. ಯಾಕೆಂದರೆ ಆ ದಿನ ಚೈತ್ರಳ ಹುಟ್ಟಿದ ದಿನವಾಗಿತ್ತು. ಚಿತ್ರಳು ಮತ್ತೊಂದು ಪುಟದಲ್ಲಿ “ನಾನಿ ಇವತ್ತು ನನ್ನ ಬರ್ತ್ಡೇ ನಾನು, ಚಿತ್ರ ಬೀಚ ಸಮೀಪ ಹೋಗುತ್ತಿದ್ದೇವೆ. ಕೊನೆಗೆ ಯಾವ ತೀರ್ಮಾನಕ್ಕೆ ಬಂದಿರುವೆ? ಎಂಬುದನ್ನು ತಿಳಿಸಬೇಕು. ಸರೀನಾ?. ನೀನು ಇವತ್ತು ರೆಡ್ ಕಲರ್ ಶರ್ಟ್ನ್ನೆ ಹಾಕಿಕೊಂಡು ಬರಬೇಕು.” ಎಂದು ಬರೆದ ಚಿತ್ರಳು ಡೈರಿಯಲ್ಲಿಟ್ಟು ಬಂದಳು. ಆ ಪುಟ ನಾನಿಯ ಕೈ ಸೇರಿಯೇ ಬಿಟ್ಟಿತ್ತು.
“ಕ್ರೋಷಿ. ಏನೇ ಈ ದಿನ ನನ್ನ ಹುಟ್ಟುಹಬ್ಬ ನಾನೇ ನಿನ್ನಷ್ಟು ಹ್ಯಾಪಿಯಾಗಿಲ್ಲ. ನೀನೇನು ಫುಲ್ ಜೋಶನಲ್ಲಿರುವೆ.” ಎಂದು ಚಿತ್ರಳಿಗೆ ಚೈತ್ರ ಕೇಳಿದಳು. ಚಿತ್ರ ಮನದಲ್ಲಿ ‘ಇವತ್ತು ಒಳ್ಳೇ ಕಾಮಿಡಿ ಬೀಚ ಹತ್ತಿರ ಇರುತ್ತದೆ’. ಎಂದು ಯೋಚನೆ ಮಾಡುತ್ತಿದ್ದಳು.
“ಏ! ಕ್ರೋಷಿ ಚಂದ್ರ ನಮ್ಮ ಹತ್ತಿರ ಬರದೆ ಮೂರು ದಿನ ಕಳೆಯಿತು. ಈ ದಿನವಾದರೂ ಬರಬಾರದೆ? ನನ್ನ ಬರ್ತಡೇ ಎಂದು ಅವನಿಗೆ ಗೊತ್ತಿಲ್ಲ ಅನ್ಸುತ್ತೆ. ಕ್ಲಾಸನಲ್ಲಿ ಕೂಡ ಯಾವ ಬೆಂಚನಲ್ಲಿ ಕಾಣುವುದಿಲ್ಲ. ತುಂಟ ನಾನಿ ನಮಗೆ ಹೇಳದೆ, ಕೇಳದೆ ಅವನ ಊರಿಗೆ ಹೋಗಿರಬೇಕು.” ಎಂದಳು ಚೈತ್ರ.
“ಹೌದು. ಚಂದ್ರ ಊರಿಗೆ ಹೋಗಿರಬೇಕು. ಪ್ರೋಷಿ ಈ ದಿನ ನಿನ್ನ ಹುಟ್ಟಿದ ದಿನ ಅಲ್ವ? ಹಾಗಾಗಿ ರೆಡ ಕಲರ ಡ್ರಸ ಮಾಡ್ಕೋ. ಪ್ಲೀಸ” ಎಂದಳು ಕ್ರೋಷಿ.
ಕೊನೆಗೂ ಬೀಚಗೆ ಹೋಗಲು ತಯಾರಾದರು.’ ಚಂದ್ರ ಬರಲೇ ಇಲ್ಲ. ಚಿತ್ರಳಿಗೆ ಯೋಚನೆ! ‘ನಾ ಬರೆದಿಟ್ಟ ಪುಟ ಚಂದ್ರ ನೋಡಿಲ್ವ?’ ಎಂದು. ಚೈತ್ರ-ಚಿತ್ರ ಹೊರಟರು. ಬೀಚಗೆ ತಲುಪಿ ಅರ್ಧಗಂಟೆಗೆ ನಾನಿ ನೇರವಾಗಿ ಬೀಚಗೆ ಹೋದ. ಚಿತ್ರ, ಚೈತ್ರ ಮಾತನಾಡುತ್ತಿರುವುದನ್ನು ನೋಡಿದ. ‘ಚೈತ್ರಳ ಪಕ್ಕ ಚಿತ್ರ ಇದ್ದಾಳೆ. ಹೋಗುವುದು ಬೇಡ.” ಎಂದು ನಾನಿಯು ಹದಿನೈದು ನಿಮಿಷ ಅಲ್ಲೇ ಕಳೆದ. ಚಿತ್ರ ಕುಳಿತ ಸ್ಥಳದಿಂದ ದೂರ ಕಣ್ಣು ಹಾಯಿಸಿದಳು. ರೆಡ ಕಲರ ಶರ್ಟ ಹಾಕಿಕೊಂಡು ನಿಂತಿರುವ ಚಂದ್ರನನ್ನು ಕಂಡನು. ‘ಕೊನೆಗೂ ಚಂದ್ರ ಬಂದಿದ್ದಾನೆ ತುಂಬ ತಮಾಷೆ’ ಎಂದು ಚಿತ್ರ “ಚೈತ್ರ ನೀನು ಇಲ್ಲೆ ಕೂತಿರು ನಾ ಬರುತ್ತೆನೆ.” ಎಂದು ಚಂದ್ರನನ್ನು ಕರೆಯಲು ಹೋದಳು. ಚೈತ್ರಳ ಪಕ್ಕ ಚಿತ್ರ ಇಲ್ಲದ್ದನ್ನು ನಾನಿಯು ನೋಡಿದ. ಅವಳ ಸಮೀಪಕ್ಕೆ ಬಂದನು. ಭಯದಿಂದ ಕೂಡಿತ್ತು ಹೃದಯ.
“ಪ್ರೋಷಿ, ಹ್ಯಾಪಿ ಬರ್ತ ಡೇ”.
“ವ್ಹಾವ! ಥ್ಯಾಂಕ್ಸ. ನನ್ನ ಹುಟ್ಟು ಹಬ್ಬ ಎಂದು ನಿನಗೆ ಹೇಗೆ ಗೊತ್ತಾಯಿತು. ಚಿತ್ರ ಹೇಳಿರಬೇಕು.”
‘ಚಂದ್ರ ಏನಿದು ಇವಳೇ ಲೆಟರ್ ಬರೆದು, ನನ್ನ ಡೈರಿಯಲ್ಲಿಟ್ಟು, ಬೀಚ ಸಮೀಪ ‘ಬಾ’ ಎಂದು ಕರೆದು ಅವರೇ ಈವಾಗ!’ ಚಂದ್ರ ಯೋಚನೆ ಮಾಡುತ್ತಿದ್ದ.
“ಏನು ಯೋಚಿಸುತ್ತಿರುವೆ ನಾನಿ?’ ಹಾಗೇ ನನ್ನ ಡ್ರೆಸ ಕಲರ ಅಂತೆ ನೀನು ಕೂಡ ರೆಡ ಕಲರ ಡ್ರೆಸ್ ಹಾಕಿಕೊಂಡಿರುವೆ.” ಚಂದ್ರನಿಗೆ ‘ಏನಿದು ಇವರು ಆಟವಾಡುತ್ತಿದ್ದರಾ?’ ಎಂದು
“ಪ್ರೋಷಿ, ನೀವೆ ಹೇಳಿದಿರಲ್ಲ ಬರ್ತಡೇ, ಬೀಚ ಸಮೀಪ ಬನ್ನಿ. ರೆಡ ಕಲರ ಶರ್ಟ ಹಾಕಿಕೊಂಡು ಬನ್ನಿ ಎಂದು ಲೆಟರ ಬರೆದಿರುವೆರಲ್ಲ.” ಎಂದನು ಕೋಪದಿಂದ.
“ಲೆಟರ? ಯಾವ ಲೆಟರ? ಮೂರು ದಿನವಾಯಿತು ಕಂಡು ಇಲ್ಲ ತಾವು”.
“ಆಟವಾಡಬೇಡ ಪ್ರೋಷಿ”.
“ನಾ ಯಾವ ಆಟ ಆಡಲಿ ನಾನಿ. ಬೇಕಾದರೆ ಚಿತ್ರಳನ್ನು ಕೇಳು.” ಚಿತ್ರ ಅಲ್ಲಿರಲಿಲ್ಲ. ‘ಬರಲಿ ಕೇಳೋಣ’ ಎಂದು ಚೈತ್ರ ಕಾಯುತ್ತಿದ್ದಳು. ಆದರೇ ಚಂದ್ರನನ್ನು ಹುಡುಕಿಕೊಂಡು ಬರಲು ಹೋದ ಕ್ರೋಷಿ ಆ ಕಡೆ ಹುಡುಕಿಕೊಂಡು ಹೋಗಿದ್ದಳು.
“ಡ್ರಾಮಾ ಮಾಡಬೇಡ ಪ್ರೋಷಿ” ಚಂದ್ರ ಕೇಳಿದ.
“ಡ್ರಾಮಾ! ನಾನು ಯಾವ ಡ್ರಾಮಾ ಮಾಡಲಿ?”.
ಏನು ಅರಿಯದ ಚೈತ್ರಗೆ ನಾನಿಯ ಆಡುವ ಮಾತಿಗೆ ಕೋಪ ಭಯಂಕರವಾಗಿ ಬರುತ್ತಿತ್ತು.
“ಲುಕ ಪ್ರೋಷಿ ನಿನಗೆ ಅಪಾರ ಧೈರ್ಯ. ಹಾಗಂತ ಹೀಗೆ ಲೆಟರ ಬರೆದು. ನನ್ನನ್ನು ಫೂಲ್ ಮಾಡುತ್ತೀಯಾ?
ಮೂರು ದಿನವಾಯಿತು. ಸರಿಯಾಗಿ ಕ್ಲಾಸಿಗೆ ಹೋಗಿಲ್ಲ ಗೊತ್ತಾ”.
“ಚಂದ್ರ ಪ್ಲೀಸ ಏನಾಗಿದೆ ನಿನಗೆ?”.
“ಏನೂ ಆಗಿಲ್ಲ ನೋಡು. ಈ ಲೆರ‍್ಸ್ ಎಲ್ಲಾ ಸುಳ್ಳಾ ! ನೋಡು.” ಎಂದು ಚಂದ್ರ ಎಲ್ಲಾ ಚಿತ್ರ ಬರೆದಿಟ್ಟ ಪುಟಗಳನ್ನೆಲ್ಲಾ ತೋರಿದ. ಇವರಿಬ್ಬರ ಕಲಹ ಕಂಡು, ಕ್ರೋಷಿ ಬರುತ್ತಿದ್ದಳು. ‘ನಾನೇನು ತಮಾಷೆ ಎಂದು ಮಾಡಿದ್ದೆ. “ಓ ಗಾಡ” ಇದೇನು ಕಿತ್ತಾಡುತ್ತಿದ್ದರಲ್ಲ.’ ಎಂದು ದೂರ ನಿಂತ ಚಿತ್ರ ಚಿಂತಿಸಿದಳು. ಚಂದ್ರ ನೀಡಿದ ಎಲ್ಲಾ ಪುಟಗಳನ್ನು ಓದಿದ ಚೈತ್ರಗೆ ತಲೆ ಸುತ್ತಿದಂತಾಗಿದೆ.
“ನಾನಾ? ಈ ರೀತಿ ಬರೆದದ್ದು ಅಸಾಧ್ಯ” ಎಂದಳು ಚೈತ್ರ.
“ಸಾಧ್ಯ. ನೀನೆ ಬರೆದದ್ದು. ನಿನ್ನ ಸಹಿ ಕೂಡ ಇದೆ ಕೆಳಗೆ”.
“ಇಲ್ಲ. ನಾನಿ ನಾನು ಬರೆದದ್ದಲ್ಲ ಇದು”.
“ನೋಡು ಚೈತ್ರ ಕೊನೆ ಬಾರಿ ಹೇಳ್ತಾ ಇದೇನೆ. ಒಪ್ಪಿಕೋ ನಿನ್ನ ಅಹಂಕಾರವನ್ನು ವ್ಯಕ್ತಪಡಿಸಬೇಡಾ”. ಚೈತ್ರ ಅಳುತ್ತಾ
“ನಾನಿ…. ನೀನೆ ಏಕೆ ಈ ರೀತಿ ಬರೆದುಕೊಂಡಿರಬಾರದು? ನನಗೆ ನೇರವಾಗಿ ಹೇಳಲು ಆಗದೆ ಈ ರೀತಿ ಬರೆದುಕೊಂಡು ಬಂದು ಡ್ರಾಮಾ ಮಾಡ್ತಾ ಇದೆಯಾ ದುರಂಕಾರಿ.” ಎಂದು ಚಂದ್ರನ ಮೇಲೆ ರೇಗುತ್ತಿದ್ದಳು.
“ನನ್ನ ಮೂಡ ಎಲ್ಲಾ ಹಾಳು ಮಾಡಿಬಿಟ್ಟೀಯಾ? ಹುಟ್ಟು ಹಬ್ಬ ದಿನ ಅಳಿಸಿ ಬಿಟ್ಟಿಯಲ್ಲಾ? ಥೂ! ಬೆಸ್ಟ್ ಫ್ರೆಂಡ್ ಎಂದು ಸಲುಗೆ ಕೊಟ್ಟಿರುವೆನಲ್ಲ ಅದಕ್ಕೇನಾ? ನೀ ನೀಡಿರುವ ಗಿಫ್ಟ. ನನ್ನನ್ನೂ ನೀನು ನಿಜವಾಗಿ ಇಷ್ಟಪಟ್ಟಿದ್ದರೆ ನೇರವಾಗಿ ಬಂದು ಕೇಳಬೇಕಾಗಿತ್ತು. ಛೀ!, ನಾಚಿಕೆಯಾಗಲ್ವ?” ಎಂದು ಪ್ರೋಷಿ ಅಳುತ್ತಾ ಹೇಳಿದಳು.
“ನಿನ್ನ ಜನ್ಮಕ್ಕೆ ನಾಚಿಕೆಯಾಗಬೆಕು. ಮಾಡೋದೆಲ್ಲ ಮಾಡಿ ಈ ರೀತಿ ಹೇಳ್ತಾ ಇದೆಯಲ್ಲಾ?”. ಎಂದು ಚಂದ್ರ ಮುಖ ತಿರುಗಿಸಿದನು. “ಒಂದು ದಿನವಾದರೂ ಯಾರ ಹತ್ತಿರ ಬೈಯಿಸಿಕೊಂಡವಳಲ್ಲ. ನೀನ್ಯಾರು ನನಗೆ ಬುದ್ಧಿ ಹೇಳುವವ?” ಎಂದಳು.
ಬೇಸರವಾದ ಚಂದ್ರ ಚೈತ್ರಳ ಕೆನ್ನೆಗೆ ‘ರಫ್‌ನೆ’ ಹೊಡೆದು “ನಾನು ತುಂಟ, ತಮಾಷೆಗಾರ. ಆದರೇ ಇಂತಹ ವಿಷಯಗಳಲ್ಲಿ ಗಂಭೀರ. ಹುಷಾರ! ನಾಟಕ ಮಾಡುವುದಕ್ಕೂ ಮಿತಿ ಇರಬೇಕು ಗುಡ್ ಬೈ” ಎಂದು ಬರುತ್ತಿದ್ದ. ದೂರದಿಂದ ಕಂಡAತಹ ಚಿತ್ರ ಹೆದರುತ್ತಾ ಓಡಿ ಬಂದು ಚಂದ್ರನ ಕೈ ಹಿಡಿದು ನಿಲ್ಲಿಸಿದಳು. ಚೈತ್ರ ಅಳುತ್ತಿದ್ದಳು. ಕೋಪದಲ್ಲಿದ್ದ ಚಂದ್ರ ಭಯದಿಂದ ಚಿತ್ರ……….
“ಚಂದ್ರ ಆ ಲೆರ‍್ಸ್ಗಳನ್ನೆಲ್ಲಾ ಬರೆದದ್ದು ಚೈತ್ರ ಅಲ್ಲ. ನಾನೇ ತಮಾಷೆಗೆ ಅಂತ ಬರೆದಿದ್ದೆ. ಈ ರೀತಿ ಪರಿಣಾಮ ಬೀರುತ್ತದೆ. ಎಂದು ಗೊತ್ತಿರಲಿಲ್ಲ”.
“ಏನು ಹೇಳುತ್ತಿರುವೆ ಚಿತ್ರ?”.
ಕೋಪದಲ್ಲಿದ್ದ ಚಂದ್ರ, ಅಳುವಿನಲ್ಲಿ ಮುಳಗಿದ್ದ ಚೈತ್ರಗೆ ಕೋಪ ಉಕ್ಕಿ ಹರೆದು.
“ಚಂದ್ರ ನೋಡು ಗೊತ್ತಾಯಿತಾ? ನಿಜ ಏನೆಂದು”.
ಚಂದ್ರನ ಕೆನ್ನೆಗೆ ಹೊಡೆದ ಧೈರ್ಯವಂತೆ ಇವಳು.
“ತಾಳ್ಮೆಯಿಲ್ಲದ ನಿನಗೆ ನನ್ನ ಮೇಲೆ ಕೋಪ ಕಾರಿದೀಯಾ? ನನ್ನ ಮೂಡ್ ಎಲ್ಲಾ ಹಾಳು ಮಾಡಿದೆ. ಜೀವನದಲ್ಲಿ ಮತ್ತೊಮ್ಮೆ ಮುಖ ತೋರಿಸಬೇಡ.” ಎಂದು ಮುಂದೆ ಬಂದು ಚಿತ್ರಳ ಮುಂದೆ ನಿಂತು.
“ಥೂ…ಇನ್ನೊಬ್ಬರಿಗೆ ಜಗಳ ಮೂಡಿಸಿ ನೋಡುತ್ತಿದ್ದೀಯಾ? ತಮಾಷೆಗೂ ರೀತಿ ಇರಬೇಕು. ಗುಡ್ ಬೈ” ಎಂದು ಹಿಂದಕ್ಕೆ ನೋಡದೆ ಹೊರಟಳು. ಚಂದ್ರನು ಚಿತ್ರಳಿಗೆ ಒಂದೇಟು ನೀಡಿ. ಬೈದದ್ದು ಮುಗಿದ ಮೇಲೆ. ತಾಳಲಾರದೆ ‘ಜೀವನದಲ್ಲಿ ಮತ್ತೇ ಬರಬೇಡ.’ ಎಂದನು. ಚಿತ್ರಳಿಗೆ ತನ್ನ ತಪ್ಪಿನ ಅರಿವಾಗಿ ಮರುದಿನ ಚಂದ್ರನ ಹತ್ತಿರ ಹೋಗಿ ಕ್ಷಮೆ ಕೇಳಿದಳು. “ಚಿತ್ರ ನನಗೆ ಗೊತ್ತು ನೀನು ತಮಾಷೆಗೆ ಹಾಗೆ ಬರೆದಿರಬೇಕು. ಆದರೇ ತಪ್ಪು ತಪ್ಪೆ.” ಎಂದು ಬ್ಯಾಗ್ ಎತ್ತಿಕೊಂಡು ಕಾಲೇಜು ಗ್ರೌಂಡ್ ದಾಟಿ ಹಳ್ಳಿಗೆ ಹೊರಟ. ಚೈತ್ರಳ ಬಳಿ ಹೋಗಿ ಕ್ಷಮೆ ಕೇಳಬೇಕೆನ್ನುವಷ್ಟರಲ್ಲಿ ಅವಳು ಆಗಲೇ ಊರಿಗೆ ಹೊರಟು ಹೋಗಿದ್ದಳು. ಚಿತ್ರಳ ತಮಾಷೆ ಮೂವರನ್ನು ಒಡಕು ಮಾಡಿತು. ಎಂದು ಮರಗಿ ಮರಗಿ ಅತ್ತದ್ದು ಸಾಕಾಗಿ ತಾನು ತನ್ನ ಊರ ಕಡೆ ಕಾಲೇಜು ಬಿಟ್ಟು ಹೊರಟಳು. ದಿನಗಳು ಉರಳಿದ ಬಳಿಕ ಚಂದ್ರ, ಚಿತ್ರ ಕಾಲೇಜಿಗೆ ಹೋಗಲಿಲ್ಲ. ಚೈತ್ರ ಮಾತ್ರ ಹೋದಳು.” ಎಂದು ಚಂದ್ರನು ಡಾ. ಕಲ್ಯಾಣಿಯವರಿಗೆ ಹೇಳುತ್ತಿರಬೇಕಾದರೆ ಚಂದ್ರನ ಧ್ವನಿ ಸಣ್ಣದಾಯಿತು. ಕಲ್ಯಾಣಿಯವರು ಸೂಕ್ಷö್ಮವಾಗಿ ಚಂದ್ರ ಹೇಳುತ್ತಿರುವುದನ್ನೇ ಆಲಿಸುತ್ತಿದ್ದಳು. ಉಸಿರು ಬಿಡುತ್ತಾ……
“ಹೀಗೆಲ್ಲ ಆಯಿತಾ? ಎಂತಹ ಜಗಳವಾಯಿತಪ್ಪಾ? ಸರಿಯಾದ ಕಾರಣ ಇಲ. ದೂರವಾಗಿ ಜೀವನ ಬೇಸರ ಮಾಡಿಕೊಂಡಿರಲ್ಲ”.
“ಹಾA. ಡಾಕ್ಟೆçà ನೀವು ಹೇಳಿದ್ದು ಸರಿ. ಆಗೈತಿ ನನಗೂ ಅನಿಸುತ್ತಿತ್ತು. ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದೇನಲ್ಲ. ಎಂದು ಅವರ ನೆನಪಿನಿಂದ ವರ್ಷಗಳಾದರೂ ಯಾವ ಕೆಲಸ ಕೂಡ ಮಾಡಲಿಲ್ಲ. ಗೊತ್ತಾ ಡಾಕ್ಟೆçÃ?.” ಎಂದನು ಚಂದ್ರ.
“ಚಂದ್ರ ಚೈತ್ರ ಇನ್ನೂ ಮದುವೆಯಾಗಿಲ್ಲ. ಆದರೇ ಚಿತ್ರಳ ಜೀವನ ನೋಡು ಪಾಪ. ಇಂತಹ ಸ್ಥಿತಿ ಅವಳಿಗೆ ಬರಬಾರದಿತ್ತು. ಏನೇ ಹೇಳಿ ಡಾಕ್ಟೆç ಕ್ರೋಷಿ ಮತ್ತು ಪ್ರೋಷಿಯಂತಹ ಬೆಸ್ಟ್ ಫ್ರೆಂಡ್ಸ್ ಸಿಗೋದು ಅಪರೂಪ. ಪ್ರೋಷಿ ನನ್ನನ್ನು ‘ಹೃದಯ’ ಚಿತ್ರಳನ್ನು ‘ಮೆದುಳು’ ಎಂದು ಕರೆಯುತ್ತಿದ್ದಳು. ಕ್ರೋಷಿ ಭೇಟಿಯಾದಳು. ಆದರೇ ಚೈತ್ರಳನ್ನು ನನ್ನ ಮದುವೆಗೆ ಕರೆಯುತ್ತೇನೆ”.
“ಚಂದ್ರ ಆ ದಿನ ಹೇಳು ಫ್ರೆಂಡ್ಸ್ ಬಗ್ಗೆ ಎಂದು ಕೇಳಿದರೆ ಹೇಳಲಿಲ್ಲ. ಇವತ್ತು ಏನು ನೀನೆ ಹೇಳ್ತಾ ಇದೇಯಾ?.”
“ಏನು ಮಾಡೋದು ಡಾಕ್ಟರ್. ನೆನಪುಗಳು. ಅದರಲ್ಲಿ ಕ್ರೋಷಿನಾ ನೋಡಿದಾಗಿನಿಂದ ಪಾಪ ಅನಿಸುತ್ತಿದೆ”.
“ಸರಿ, ಸರಿ, ಕಳೆದು ಹೋದ ಸಮಯ ಮಾತನಾಡಿದರೆ ಬರುತ್ತದೆಯೇ?. ಸಮಯ ೪.೩೦ ಆಗಿದೆ, ಮಲಗು”.
“ಅಯ್ಯೋ! ಮುಂಜಾನೆ ಸಮಯವಾಯಿತಾ?”.
“ಹೂಂ. ಹೌದು, ಚಿತ್ರ ಮತ್ತು ಅವಳ ಮಗಳು ನಿದ್ರೆಯಿಂದ ಎಚ್ಚರವಾದರು ಆಗಬಹುದು.”
ಎಂದು ಚಂದ್ರ ಮತ್ತು ಕಲ್ಯಾಣಿ ಮಲಗಿದರು. ಸೂರ್ಯೋದಯವಾಯಿತು. ಚಂದ್ರ ಹೊರಡಲು ಸಿದ್ಧನಾಗಿದ್ದ. “ಕ್ರೋಷಿಯವರೇ ಬರುತ್ತೆನೆ ಚೆನ್ನಾಗಿರಿ, ದೇವರು ಒಳ್ಳೇಯದು ಮಾಡುತ್ತಾನೆ. ಧೈರ್ಯವಾಗಿರಿ. ನಿಮ್ಮ ಮಗಳು ಬಲು ಜಾಣೆ.” ಎಂದು ಚಿತ್ರಳಿಗೂ, ಕಲ್ಯಾಣಿಯವರಿಗೂ ತಿಳಿಸಿ ಹೊರಟನು. ಅವನು ಹೋದ ನಂತರ ಚಿತ್ರಳು.
“ಡಾಕ್ಟೆçà ಚಂದ್ರ ನಿಮಗೆ ಹೇಗೆ ಪರಿಚಯ?.”
“ಅದಾ?. ಕಾಯಿಲೆ ಬಂದಾಗ ನನ್ನ ಬಳಿ ಬರುತ್ತಿದ್ದ. ಒಳ್ಳೇಯ ಸಂಬAಧ ಬೆಳೆಯಿತು. ಅವನ ಜೀವನ ಬಗ್ಗೆ ಸ್ವಲ್ಪ-ಸ್ವಲ್ಪ ಹೇಳುತ್ತಿದ್ದ. ನಿನ್ನ ಬಗ್ಗೆ, ಚೈತ್ರಳ ಬಗ್ಗೆ ಹೇಳಿದ್ದ. ಆದರೇ ರಾತ್ರಿಯಲ್ಲಾ, ಎಲ್ಲಾನೂ ಹೇಳಿ ಮುಗಿಸಿದ.
“ಹೌದಾ? ನಾನೇ ತಮಾಷೆ ಮಾಡಬೇಕಂತ ಹಾಗೆ ಮಾಡಿದ್ದೆ, ಆದರೇ ಅದೇನೋ ಆಗಿ ಹೋಯಿತು. ಎಲ್ಲಾದಕ್ಕೂ ಕಾರಣ ನಾನೆ”.
“ಇರಲಿ ಬಿಡು. ಈವಾಗ ಯಾಕೆ ಮತ್ತೆ ಪುನಃ ಟೆನಷನ್À. ಅವರು ತಮಾಷೆ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು. ಅವರದ್ದೂ ನಿನಗಿಂತ ಮಹಾ ತಪ್ಪಿದೆ”.
“ಚಂದ್ರ ನೋಡಿ ಹೇಗೆ ಬದಲಾಗಿದ್ದಾನೆ. ತುಂಟ ಬುದ್ಧಿ ಇತ್ತು. ಈಗ ತುಂಬ ಸೈಲೆಂಟ್ ಆಗಿದ್ದಾನೆ”. ಎಂದಳು ಚಿತ್ರ.
“ಹೂಂ. ಮದುವೆಯಾಗುವುದಕ್ಕೆ ಹೆಣ್ಣು ನೋಡ್ತಾ ಇದಾನೆ. ಮದುವೆಗೆ ನಮ್ಮನ್ನೆಲ್ಲಾ ಕರೆಯುತ್ತಾನೆ ಎಂದೇಳಿದ. ಈಗ ಅವನೊಬ್ಬ ರಾಜಕೀಯ ವ್ಯಕ್ತಿ”.
“ಹೌದಾ?. ಒಳ್ಳೇಯದೆ. ಜನಸೇವೆ ಮಾಡಲು ಉತ್ತಮ ಅವಕಾಶ ಈ ರಾಜಕೀಯ ಕ್ಷೇತ್ರ. ಅಮ್ಮ ನಾವು ಹೊರಡುತ್ತೇವೆ. ನಮ್ಮ ಮನೆಯವರು ನಮ್ಮನ್ನು ನೋಡಲು ಬರುವುದಿಲ್ಲ”.
“ಸರಿ, ನೀವು ಹೋಗಿ ಬಿಡಿ. ಇನ್ನೂ ಮುಂದೆ ನಿನಗೆ ತೊಂದರೆ ತಪ್ಪುತ್ತವೆ. ಸಂತೋಷವಾಗಿ ಹೋಗಿ ಬಾ ಮಗಳೆ.”
“ಪ್ರಾಬ್ಲಂಮ್ಸ್ ಇರಲ್ವ? ಯಾಕೆ?”.
“ಯಾಕಂತ ಆ ಮೇಲೆ. ನಿನ್ನ ಮನೆಯವರಿಗೆಲ್ಲಾ ನನ್ನ ಮನೆಯಲ್ಲಿ ಇದ್ದಂತಹ ಸತ್ಯ ಹೇಳಬೇಡ. ಆಸ್ಪತ್ರೆಯಲ್ಲಿ ಇದ್ದೇವು ಎಂದು ಹೇಳ್ಬೇಕು.”
“ಆಯಿತು ನೀವೆ ಹೇಳಿದ ಹಾಗೆ ಆಗಲಿ.”
ಒಲ್ಲದ ಮನಸ್ಸಿನಿಂದ ಮಗಳು ಭೂಮಿಕಾ ಮತ್ತು ಚಿತ್ರ ತಮ್ಮ ಮನೆಗ ಹೊರಟರು. ಹೆತ್ತವರ ಜವಾಬ್ದಾರಿಯಂತೆ ಕಲ್ಯಾಣಿಯವರು ಬೀಳ್ಕೊಟ್ಟರು.
– ೧೨ –
“ಅಮ್ಮ ಚೈತ್ರ ಇಲ್ಲಿ ಬಾರಮ್ಮ.” ಎಂದು ಅಪ್ಪಾಜಿ ತೂಗು ತೊಟ್ಟಲಿನ ಮೇಲೆ ಕೂತು ಕರೆದರು.
“ಹಾಂ! ಅಪ್ಪಾಜಿ ಬಂದೆ ನಿಲ್ಲಿ.”
ಚೈತ್ರ ಎರಡು ನಿಮಿಷ ತಡವಾಗಿ ಬಂದಳು.
“ಹೇಳಿ ಅಪ್ಪಾಜಿ”.
“ಅಮ್ಮ ಚೈತ್ರ ಊಟ ಆಯ್ತಾ?”
“ನಿಮ್ಮ ಜೊತೆನೇ ಆಯ್ತಲ್ಲಾ. ಕೂರಿ ಅಪ್ಪಾಜಿ ನಿಂತಿದ್ದೀರಾ ಯಾಕೆ?”
“ನೀನೆ ಹೇಳಿದೆ. ಅಪ್ಪಾಜಿ ನಿಲ್ಲಿ ಬರುತ್ತೇನೆ. ಎಂದು ಅದಕ್ಕೆ ನಿಂತಿದ್ದೆನೆ.” ನಗುತಾ ಚೈತ್ರ.
“ಅಯ್ಯೋ, ಅಪ್ಪಾಜಿ ನಾ ಹೇಳಿದ್ದು ಕಾಮಾನ್ ಆಗಿ. ಕುಳಿತುಕೊಳ್ಳಿ.” ಕುಳಿತುಕೊಂಡರು.
“ಅಮ್ಮ ಚೈತ್ರ…..”
“ಹೇಳಿ. ನನ್ನನ್ನೂ ಏನೋ ಕೇಳಲು ಕರೆಸಿದ್ದೀರಾ. ಆದರೇ ಕೇಳ್ತಾ ಇಲ್ಲ ಹೇಳಿ ಏನದು?”
“ಪುಟ್ಟ….ರಾಣಿ….ನಿನಗೆ ಹೈದ್ರಾಬಾದನಿಂದ ಪೊಲೀಸ ವೃತ್ತಿಯಲ್ಲಿದ್ದ ವರ ಬಂದಿದೆ”.
“ಅಪ್ಪಾಜಿ ನನಗೆ ಇವಾಗಲೇ ಮದುವೆ ಬೇಡ. ಎಂದು ವಾರದ ಹಿಂದೆ ಹೇಳಿರಲಿಲ್ವ?”.
“ಅಲ್ವೇ ಬಂಗಾರಿ, ಅವತ್ತು ಒಪ್ಪಿದ್ದೆ”.
“ನೋಡಿ ಅಪ್ಪಾಜಿ ಇನ್ನು ಎರಡು-ಮೂರು ವರ್ಷ ನಿಲ್ಲಿ. ಆ ಮೇಲೆ ನೋಡೋಣ”. ಅಪ್ಪಾಜಿ ಮತ್ತೆ ನಿಂತರು.
“ಚೈತ್ರ ಎರಡು ನಿಮಿಷ ನಿಲ್ಲಲು ಕಾಲು ನೋವು. ಎರಡು-ಮೂರು ವರ್ಷ ನಿಲ್ಲಲ್ಲು ಆಗುವುದಿಲ್ಲ”.
“ಎರಡು-ಮೂರು ವರ್ಷ ನೀವೇಕೆ ನಿಲ್ಲುತ್ತೀರಿ?. ಮುಖ ಗಂಟಾಕಿ ಕೇಳಿದಳು.
“ನೀನೆ ಹೇಳಿದೆ. ಎರಡು-ಮೂರು ವರ್ಷ ನಿಲ್ಲಿ, ಆಮೇಲೆ ನೋಡೋಣ. ಎಂದು ಅದಕ್ಕೆ ನಿಂತಿರುವೆ”.
“ಅಪ್ಪಾಜಿ ನೋಡಿ”. ಅವಳನ್ನೇ ನೋಡುತ್ತಿದ್ದರು.
“ನನ್ನನ್ನು ಏಕೆ ನೋಡುತ್ತಿದ್ದೀರಾ ಅಪ್ಪಾಜಿ”.
“ನೀನೆ ಹೇಳಿದೆ ‘ನೋಡಿ’ ಎಂದು”. ಮೂರು-ನಾಲ್ಕು ನಿಮಿಷ ಚೈತ್ರ ಅಪ್ಪಾಜಿ ಸುಮ್ಮನೆ ನಿಂತರು. ನಂತರ ಇಬ್ಬರ ಮುಖದಲ್ಲಿ ಮುಗುಳ್ನಗೆ ಹೆಚ್ಚಾಗಿ ನಗುತ್ತಿದ್ದರು.
“ನನಗೆ ಗೊತ್ತು ಅಪ್ಪಾಜಿ, ನನ್ನನ್ನು ನಗಿಸಲು ಏನಾದರೂ ಪ್ರಯೋಗ ಮಾಡುತ್ತೀರಾ”.
“ಹಾಗಲ್ಲ ಚೈತ್ರ. ವರ ನೋಡಲು ಬರಬಹುದೇ?”.
“ಬರಲಿ ಬಿಡಿ.” ಮುಖದಲ್ಲಿ ಕೋಪದಿಂದ ಹೇಳಿದಳು.
ಮನೆಯಲ್ಲಿ ಎಲ್ಲಾ ಸಿದ್ಧತೆ ನಡೆಯುತ್ತಿತ್ತು. ಅಪ್ಪಾಜಿ ಮೌನದಿಂದ ತಮ್ಮಂದಿರನ್ನು ಹಾಗೂ ಪತ್ನಿಯನ್ನು ಕರೆದು.
“ಬೀಗರು ಇವತ್ತು ಬರುವುದಿಲ್ಲವಂತೆ ಫೋನ್ ಬಂದಿತ್ತು”.
“ಯಾಕೆ ಅಣ್ಣಾ?.” ಕೊನೆಯ ತಮ್ಮ ಕೇಳಿದ.
“ವರನ ಅಣ್ಣನಿಗೆ ಹೃದಯಘಾತವಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರಂತೆ”.
“ಹೌದ? ಬರದೇ ಇರುವುದು ಒಳ್ಳೇಯದಾಯಿತು. ಯಾಕೆಂದರೆ ಮೊದಲನೆ ಶಾಸ್ತçಕ್ಕೆ ಅಪಶಕುನ. ಬೀಗರಿಗೆ ಹೇಳಿ ಇನ್ನೊಮ್ಮೆ ಬರುತ್ತಿದ್ದರೆ, ಬರಬೇಡಿ ನಮ್ಮ ಮಗಳಿಗೆ ಇಷ್ಟವಿಲ್ಲ, ಇನ್ನೂ ಓದುತ್ತಾಳೆ ಎಂದೇಳಿ”. ಚೈತ್ರಳ ಅಮ್ಮ ಹೇಳಿದಳು.
“ಅತ್ತಿಗೆ ಮೆತ್ತಗೆ ಮಾತನಾಡಿ ಚೈತ್ರಳ ಕಿವಿಗೆ ಬಿದ್ದರೆ ರಂಪ ಮಾಡುತ್ತಾಳೆ ಅಷ್ಟೇ” ಚೈತ್ರಳ ಚಿಕ್ಕಪ್ಪ ಹೇಳಿದ.
“ಇರಲಿ ಬಿಡಿ ದೇವರ ಆಟ. ಅವರು ಸಂಕಷ್ಟದಲ್ಲಿದ್ದಾರೆ. ನಾವು ಅದನ್ನೇ ಅಪಶಕುನ ಅಂದರೇ ಹೇಗೆ?” ಅಪ್ಪಾಜಿ ಹೇಳಿದರು. ಚೈತ್ರಳ ಕೋಣೆಗೆ ತಾಯಿ ಹೋಗಿ.
“ಚೈತ್ರ ವರ ಬರಲ್ವಂತೆ ಕಣೆ”
“ಅಮ್ಮ ಯಾಕೆ? ಅಂತ ಮಾತ್ರ ಕೇಳಲ್ಲ. ಬರಲ್ವಲ್ಲ ಅಷ್ಟೇ ಖುಷಿನಂಗೆ” ಎಂದು ಸಂತೋಷಪಟ್ಟಳು. ಅಮ್ಮನಿಗೆ ತಮಾಷೆ ಮಾಡುತ್ತಿದ್ದಳು. ಚಂದ್ರ, ಭೂಮಿ ಹಾಗೂ ಅವಳ ತಾಯಿ. ಎಲ್ಲರೂ ಮನೆಯಿಂದ ಹೋದದ್ದಕ್ಕಾಗಿ ಕಲ್ಯಾಣಿಯವರಿಗೆ ಬೇಸರ. ಡಾಕ್ಟರು ಮಲಗಿದರು ನಿದ್ದೆಯೇ ಹತ್ತಲಿಲ್ಲ. ಚಂದ್ರ, ಚಿತ್ರ ಜೀವನದ ಬಗ್ಗೆ ತಿಳಿತು. ಆದರೇ ಚೈತ್ರ ಹೇಗಿರಬಹುದು? ಆ ದಿನ ಅವಳ ಆಡ್ರೇಶ ಆದರೂ ಕೇಳಲಿಲ್ಲ. ಇತ್ತ ಚೈತ್ರ ಹಾಸಿಗೆ ಮೇಲೆ ಅವಳ ಮನೆಯಲ್ಲಿ ಮಲಗಿ, ‘ಇನ್ನೂ ಒಂದು, ಒಂದುವರೆ ವರ್ಷದಲ್ಲಿ ನನ್ನ ಮದುವೆ ಅಪ್ಪಾಜಿಯವರ ಒತ್ತಾಯ ಪೂರ್ವಕವಾಗಿ ಆದರೂ ಆಗಬಹುದು, ನನ್ನ ಮದುವೆಗೆ ನನ್ನೆಲ್ಲಾ ಗೆಳತಿ-ಗೆಳೆಯರನ್ನು ಕರೆಯಬೇಕು. ಎಲ್ಲಾ ಗೆಳೆಯರನ್ನು ನೆನಪಿಸಿಕೊಳಳುತ್ತಿದ್ದಳು. ಸಡನ್ ಆಗಿ ಚಂದ್ರ, ಚಿತ್ರ ನೆನಪಿಗೆ ಬಂದರು. ಕೋಪ ಬಂತಾಗಿ ಎದ್ದು ಕುಳಿತಳು. ಸಮಾಧಾನಗೊಳ್ಳುತ್ತಾ. ‘ನನಗೆ ಅವರನ್ನು ನೆನಪಿಸಿಕೊಂಡರೆ ಬರುವುದೇಕೆ ಕೋಪ?. ಚಂದ್ರನದAತು ತಪ್ಪಿಲ್ಲ. ನನ್ನ ಹುಟ್ಟು ಹಬ್ಬದಿನದಂದು ಅಳಿಸಿದನಂತ ಕೋಪ, ‘ಪ್ರೋಷಿ ನಿನ್ನದೆ ತಪ್ಪು ಎಂದು ವಾದ ಮಾಡಿದ.’ ಅದಕ್ಕಾಗಿ ಸಿಟ್ಟು, ಕ್ರೋಷಿ ತಮಾಷೆಗೆ ಎಂದು ತನ್ನ ತಪ್ಪು ಒಪ್ಪಿಕೊಂಡಳು. ನನ್ನದೇ ತಪ್ಪಿರಬಹುದು. ಅವರು ಈಗ ಏನು ಮಾಡುತ್ತಿರಬಹುದು?. ಅವರನ್ನು ಹುಡುಕುವುದಾದರೂ ಎಲ್ಲಿ?’ ಎಂದು ಯೋಚಿಸುತ್ತಿದ್ದಳು. ಆ ದಿನ ಟ್ರೆöÊನ್‌ನಲ್ಲಿ ಕುಳಿತಾಗ ಕಲ್ಯಾಣಿಯವರ ಬ್ಯಾಗ್ ಮೇಲೆ ಇಂಗ್ಲೀಷನಲ್ಲಿ ಬರೆದ ಡಾಕ್ಟçರ ಹೆಸರು ಹಾಗೂ ಅವರ ಫೋನ್ ನಂಬರ್ ದಿಟ್ಟಿಸಿ ನೋಡಿದ್ದು. ಹಾಗೇ ಚೈತ್ರಳ ಮೆದುಳಿನಲ್ಲಿ ಉಳಿದಿತ್ತು. ಬೇಗನೆ ಎದ್ದು ಹೋಗಿ ನೀರು ಕುಡಿದು. ‘ಕಲ್ಯಾಣಿಯವರಿಗೆ ನಾನಿ ಮತ್ತು ಕ್ರೋಷಿಯ ಬಗ್ಗೆ ಗೊತ್ತಿರಬೇಕು. ಹೌದು ಸರಿ ಕರೆ ಮಾಡೋಣ’ ಎಂದು ಟೈಮ್ ನೋಡಿದಳು. ರಾತ್ರಿ ೧೦ ಗಂಟೆಯಾಗಿತ್ತು. ಚೈತ್ರಳ ಬಗ್ಗೆಯೇ ಯೋಚನೆ ಮಾಡುತ್ತಾ ಮಲಗಿದ್ದ ಡಾಕ್ಟರ್‌ಗೆ ಚೈತ್ರöಳ ಕರೆ ಬಂದೇ ಬಿಟ್ಟಿತ್ತು, ಕಲ್ಯಾಣಿಯವರು ಚೈತ್ರಳ ಕರೆಯನ್ನು ರಿಸೀವ್ಹ್ ಮಾಡಿದರು. ‘ತಾನು ಚೈತ್ರ ಎಂದು ಹೇಳಿದ ತಕ್ಷಣ’ ಕಲ್ಯಾಣಿಯವರಿಗೆ ಅರ್ಧ ಜೀವ ಬಂದAತಾಗಿ ಹಾಗೇ ಮಾತು ಮುಂದುವರೆಸಿದರು.
“ಚೈತ್ರ ನನ್ನ ಮನೆಗೆ ಬರುವೆಯಾ?”.
“ಆಯ್ತು, ಡಾಕ್ಟರೇ ಬರುವೆ”.
“ಯಾಕೆಂದರೆ ನಿನ್ನಿಂದ ನನಗೊಂದು ಸಹಾಯವಾಗಬೇಕು”.
“ನನ್ನಿಂದ ನಿಮಗೆ ಸಹಾಯವೇ ಡಾಕ್ಟೆçÃ?”.
“ಹೌದು, ಎಲ್ಲಾ ಫೋನ್‌ನಲ್ಲಿ ಹೇಳಲಾಗುವುದಿಲ್ಲ”. ಸರಿ ಎಂದು ಒಪ್ಪಿಕೊಂಡ ಚೈತ್ರ ಮರುದಿನ ಹೊರಟಳು. ಹೋದ ದಿನವೆ ಚೈತ್ರಳಿಗೆ ಕಲ್ಯಾಣಿಯವರು ಚಂದ್ರನ ಬಗ್ಗೆ, ಚಿತ್ರಳ ಬಗ್ಗೆ ತಿಳಿಸಿ ಹೇಳಿದರು. ಚಿತ್ರಳ ವಿಷಯ ಕೇಳಿದ ಚೈತ್ರ ನೊಂದಳು.
“ಚೈತ್ರ. ನೀನು ರಾಯಪುರ ಹಳ್ಳಿಯ ಸಮಸ್ಯೆಯನ್ನೇ ಬಗೆಹರಿಸಿದೆ. ಆದರೇ ನಿನ್ನ ಗೆಳತಿಯ ಸಮಸ್ಯೆ ಪರಿಹರಿಸುವುದಿಲ್ಲವೆ?”
“ಆಯುತು ಡಾಕ್ಟೆçÃ. ನನ್ನ ಕೈಲಾಗುವ ಪ್ರಯತ್ನ ಮಾಡುವೆ. ನಾನು ಈಗ ಹೊರಡುವೆ. ಅಪ್ಪಾಜಿಗೆ ಗೊತ್ತಾದರೆ ತೊಂದರೆ, ನಾಳೆ ಚಿತ್ರಳ ಮನೆಗೆ ಹೋಗಿ ಬರುವೆ.” ಎಂದು ಚೈತ್ರ ತನ್ನ ಮನೆಗೆ ಹೊರಡಲು ಸಿದ್ಧಳಾದಳು. ಚೈತ್ರಳ ಮನೆಯಲ್ಲಿ ‘ಚೈತ್ರನನ್ನು ನೋಡಲು ಮತ್ತೊಬ್ಬ ವರ ಬರುತ್ತಾನೆ ನಾಳೆ.’ ಎಂದು ಮಾತನಾಡುತ್ತಿರುವ ಸುದ್ಧಿ ಚೈತ್ರ ಮನೆಯಲ್ಲಿ ಕಾಲಿಡಲು ಅವಳ ಕಿವಿಗೆ ಬಿತ್ತು. ಮೊದಲೇ ಚಿತ್ರಳ ಯೋಚನೆಯಲ್ಲಿದ್ದ ಅವಳಿಗೆ ತೀರಾ ಕೋಪಬಂತಾಗಿ ಏನು ದಾರಿಯಿಲ್ಲದೆ ಕೂತಿದ್ದಳು. ‘ಅದು ನಾಳೆಯೇ ವರ ಬರುತ್ತಾನೆ. ನಾಳೆಯೇ ಚಿತ್ರಳ ಮನೆಗೆ ಹೋಗಬೇಕು.’ ಎಂದು ಯೋಚಿಸಿದಳು. ಕೊನೆಗೂ ರಾಜಕೀಯ ವ್ಯಕ್ತಿ ಚೈತ್ರಳನ್ನು ನೋಡಲು ಬಂದನು. ಆದರೇ ಚೈತ್ರ. ಚಿತ್ರಳ ಮನೆಗೆ ಹೋಗಿದ್ದಳು. ಅವಳ ಬದಲಿಗೆ ವರನನ್ನು ನೋಡಲು ಗೆಳತಿಯನ್ನು ಕೂರಿಸಿ ಹೋಗಿದ್ದಳು. ಗೆಳತಿಯನ್ನು ಕೂರಿಸಿದ ವಿಷಯ ಅಮ್ಮನಿಗೆ ಮಾತ್ರ ಗೊತ್ತಿತ್ತು. ರಾಜಕೀಯ ನಾಯಕ ಚಂದ್ರವರ ಎಂದು ಚೈತ್ರಳಿಗೆ ಗೊತ್ತಿರಲಿಲ್ಲ. ಇಂಜಿನಿಯರ ಚೈತ್ರಳು ವಧು ಎಂದು ಚಂದ್ರನಿಗೆ ಗೊತ್ತಿರಲಿಲ್ಲ. ಬಂದು, ಕುಳಿತಂತ ಚಂದ್ರನೂ ದಿಟ್ಟ ಆಗಸದ ಹುಣ್ಣಿಮೆ ಚಂದ್ರ, ಮುಖದಲ್ಲಿ ಹೊಳಪು. ಬಿಳಿ ಬಣ್ಣದ ಇಂದಿರಾ. ಅಪ್ಪಾಜಿಗೆ ವರ ಇಷ್ಟವಾದನು. ಮನೆಯವರಿಗಂತೂ ಚಂದ್ರನ ಸ್ವಭಾವ ಕಂಡು ‘ಇಂತಹ ವರ ಚೈತ್ರಳಿಗೆ ಸಿಗುವುದು ಸಂದೇಹ,’ ಎಂದು ಮಾತನಾಡುತ್ತಿದ್ದರು ಚಂದ್ರನನ್ನು ಸೀರೆಯ ಸೆರಗಿನ ಮುಸುಕು ತೆಗೆದು ನೋಡಿದ ಚೈತ್ರಳ ಗೆಳತಿ “ಚೈತ್ರ ಇವರನ್ನು ನೋಡದೆ ಇರುವುದು ನಿನ್ನ ದುರದೃಷ್ಟ”. ಎಂದು ಯೋಚಿಸಿದಳು. ಚಂದ್ರನು ಸಹ ಚೈತ್ರಳ ಗೆಳತಿಯನ್ನು ನೋಡಿ ಇವರೆ ವಧು ಎಂದು ಭಾವಿಸಿ “ಪರವಾಗಿಲ್ಲ”. ಎಂದು ಕೊಂಡಿದ್ದ. ಚಂದ್ರನಿಗೇನು ಗೊತ್ತು ಇದು ಚೈತ್ರಳ ಮನೆಯೆಂದು. ಚೈತ್ರಳು ಚಿತ್ರಳ ಮನೆಯ ಗ್ರೌಂಡ್‌ನಲ್ಲಿ ಕಾಲಿಟ್ಟಳು. ದೊಡ್ಡದಾದ ಬಿಲ್ಡಿಂಗ್ ಹಾಗೂ ಹೂ. ವಿವಿಧ ರೀತಿಯ ಮರ-ಗಿಡಗಳು ಕಂಡವು. ಚಿತ್ರಳಿಗೆ ಅನುಮಾನ ಶುರುವಾಯಿತು. ‘ಕಲ್ಯಾಣಿಯವರೆ ನನಗೆ ಸುಳ್ಳು ಹೇಳಿರಬಹುದಾ? ಏಕಂದರೆ ಇಂತಹ ಮನೆಯಲ್ಲಿ ಚಿತ್ರ ಕಷ್ಟದಿಂದಿರಲು ಹೇಗೆ ಸಾಧ್ಯ?” ಎಂದು ಭಾವಿಸಿದಳು. ಏನೇ ಹಾಗಲಿ ಹೋಗೋಣ ಎಂದು ಮನೆಯೊಳಗೆ ಹೋದಳು. ಚಿತ್ರಳ ಮನೆಯಲ್ಲಿ ಮೂರು-ನಾಲ್ಕು ದಿನದ ಕೆಲಸ ಹಾಗೇ ಇತ್ತು. ಚಿತ್ರ ಪಡಸಾಲೆ ಕ್ಲೀನ್ ಮಾಡುತ್ತಿದ್ದಳು. ಮಗಳು ಭೂಮಿಕಾ ನ್ಯೂಸ್ ಪೇಪರ ಜೋಡಿಸುತ್ತಿದ್ದಳು. ಅಯ್ಯೋ! ಇಂತಹ ಚಿಕ್ಕ ವಯಸ್ಸಿನಲ್ಲಿಯೇ ಜೀತ ಇಟ್ಟಿದ್ದಾರೆ.” ಎಂದು ಮಗು ಭೂಮಿಕಾನನ್ನು ಕಂಡು ಆಲೊಚಿಸಿ. ಬೆನ್ನು ಮಾಡಿ ಮನೆ ಕ್ಲೀನ್ ಮಾಡುತ್ತಿದ್ದ ಚಿತ್ರಳನ್ನು ಆ ಮನೆಯ ಕೆಲಸದವಳು ಎಂದು.
‘ಅಮ್ಮ’….ಎAದು ಚೈತ್ರ ಬಾಗಿಲ ಬಳಿಯಿಂದ ಕರೆದಳು. ಚಿತ್ರಳ ಕಿವಿಯಲ್ಲಿ ಬಿದ್ದರು. ‘ಅತ್ತೆಯನ್ನು ಯಾರೋ ಕರೆತಿರಬೇಕೆಂದು’ ಹಿಂದಕ್ಕೆ ನೋಡದೆ ಕೆಲಸಲದಲ್ಲಿ ತೊಡಗಿದ್ದಳು. ಚೈತ್ರ ಮತ್ತೊಮ್ಮೆ.
“ಅಮ್ಮ ಕೆಲಸದವರೇ” ಎಂದು ಕರೆದಳು. ಆವಾಗ ಚಿತ್ರ ಹಿಂದೆ ನೋಡಿದಳು. ನೋಡಿದ ಚಿತ್ರ. ಚೈತ್ರಳನ್ನು ಗುರುತು ಹಿಡಿದಳು. ಬೆಳ್ಳನೆ ಬಿಳಿಸೀರೆ, ತೆಳ್ಳಗೆ, ಕೈಯಲ್ಲಿ ಬಳೆಯಿಲ್ಲ, ಹಣೆಯಲ್ಲಿ ಕುಂಕುಮವಿಲ್ಲ. ವಿಧವೆ ಹೆಂಗಸನನ್ನು ಚೈತ್ರ ಗುರುತಿಸಲು ಕಷ್ಟವಾಯಿತು. ಪಡಸಾಲೆಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ‘ಪ್ರೋಷಿ’ ಎಂದು ಅವಳ ಹತ್ತಿರ ಬಂದಳು. ಮತ್ತೊಮ್ಮೆ ‘ಪ್ರೋಷಿ’ ಎಂದಳು. ಆಶ್ಚರ್ಯಗೊಂಡ ಚೈತ್ರ ‘ಕ್ರೋಷಿ’ ಎಂದು ತಬ್ಬಿಕೊಂಡಳು ಇಬ್ಬರ ಕಣ್ಣಲ್ಲಿ ನೀರು ಬಂತು. ಚಿತ್ರಳಗಿಂತ, ಚೈತ್ರ ಹೆಚ್ಚಾಗಿ ಅಳುತ್ತಿದ್ದಳು.
“ಕ್ರೋಷಿ ಏನಿದು ನಿನ್ನ ಪರಿಸ್ಥಿತಿ. ಇದು ನಿನ್ನ ಮನೆನಾ? ಅಥವಾ ಬೇರೆಯವರ ಮನೆಯ ಆಳಾಗಿ ಇರುವೆಯಾ?”.
ಏನು ಹೇಳದೆ ಚಿತ್ರ ಸುಮ್ಮನಿದ್ದಳು. “ನಿನ್ನ ಮನೆಯವರೆಲ್ಲಿ? ನಿನ್ನ ಕಷ್ಟ ಆಗಲೇ ಕಲ್ಯಾಣಿ ಹೇಳಿದ್ದಾರೆ. ನಿನ್ನನ್ನೂ ಕಣ್ಣಾರೆ ಕಂಡ ನಾನು ಇಲ್ಲಿಂದ ಹೋಗುವುದಿಲ್ಲ. ಅವರಿಗೊಂದು ಪಾಠ ಕಲಿಸುವೆ.”
“ಚೈತ್ರ ದಯವಿಟ್ಟು ತಾಳ್ಮೆಯಿಂದ ಇರು.”
“ತಾಳ್ಮೆ? ಚಿತ್ರ ನೀನು ಗಂಡನನ್ನು ಕಳೆದುಕೊಂಡು, ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಾ ತಾಳ್ಮೆಯಿಂದ ಇರುವೆ. ಏನಾದರೂ ಲಾಭ ದೊರಕಿದ್ದರೇ ಹೇಳು”. ಸುಮ್ಮನಿದ್ದ ಚಿತ್ರಳನ್ನು ಕಂಡು, ತಾನೂ ಎರಡು ನಿಮಿಷ ಸುಮ್ಮನಾದಳು. ಚಿತ್ರ ಚೈತ್ರಳನ್ನು ತನ್ನ ಕೋಣೆಗೆ ಕರೆದುಕೊಂಡು ಹೋದಳು. ಮನೆಯಲ್ಲಿ ಅತ್ತೆ ಮಾತ್ರ ಮಲಗಿದ್ದಳು. ಮಾವ ಆಫೀಸಿಗೆ ಹೋಗಿದ್ದರು. ನಂದಿನಿಯು ಕಾಲೇಜಿಗೆ ಹೋಗಿದ್ದಳು. ರಾತ್ರಿ ೮.೩೦ಕ್ಕೆ ಊಟಕ್ಕೆ ಕುಳಿತರು. ಚಿತ್ರ ಹಾಗೂ ಭೂಮಿಕಾ, ಚೈತ್ರ ಕೋಣೆಯಲ್ಲಿಯೇ ಇದ್ದರು.
“ಏ! ದರಿದ್ರ ಇಲ್ಲಿ ಬಾರೇ”. ಎಂದು ನಂದಿನಿ ಕೂಗಿದಳು. ಭೂಮಿಕಾ ಕೋಣೆಯಿಂದ ಓಡಿದಳು.
“ದರಿದ್ರ? ದರಿದ್ರ ಅಂದರೇ ಯಾರು ಚಿತ್ರ”.
“ನನ್ನ ಮಗಳು ಭೂಮಿ”. ಚೈತ್ರಳ ಕೋಪ ನೆತ್ತಿಗೆ ತಾಕಿತ್ತು.
“ಏನು ನೋಡ್ತಾ ಇದೀಯಾ? ನನ್ನ ಕಾಲಲ್ಲಿ ಸ್ಯಾಂಡಲ್ ಇದೆ. ಅದನ್ನು ಹೊಯ್ಯಿದು. ಆ ಸ್ಯಾಂಡಲ್ ಜೋಡಿ ಸೇರಿಸು.” ಎಂದು ನಂದಿನಿ ಭೂಮಿಕಾಳಿಗೆ ಏಳಿದಳು. ಭೂಮಿ ಬಾಗಿ ತೆಗೆದುಕೊಳ್ಳುತ್ತಿರಬೇಕಾದರೆ ಅವಳ ಅತ್ತೆಯ ಕಾಲು ತಾಗಿತು. ಆ ಸಮಯದಲ್ಲಿಯೇ ಆ ನಂದಿನಿಯು ಸಾಂಬಾರು ಹಾಕಿಕೊಳ್ಳುತ್ತಿದ್ದರು. ಒಂದೇ ಒಂದು ಹನಿ ಅವಳ ಡ್ರೆಸ ಮೇಲೆ ಬಿದ್ದಿತು. ಅಷ್ಟಕ್ಕೇ ನಂದಿನಿಯು ಬಾಗಿದ ಭೂಮಿಕಾಳ ಕೂದಲು ಹಿಡಿದು ಅವಳ ಬಲಗೈಯನ್ನು ಸುಡುವ ಸಾಂಬಾರಿನಲ್ಲಿ ಇಟ್ಟಳು. ಮಗು ‘ಅಮ್ಮ’ ಎಂದು ಜೋರಾಗಿ ಚೀರಿತು. ಅದನ್ನು ಚೈತ್ರ ನೋಡುತ್ತಿದ್ದಳು. ಅವಳ ಕೈಯನ್ನು ಬಿಡದೆ ಗಟ್ಟಿಯಾಗಿ ಹಿಡಿದು ನಿಂತಿದ್ದಳು. ಮಗು ಚೀರಿದ ಶಬ್ದ ಕೇಳಿ ಚೈತ್ರ. ಚಿತ್ರಳಿಂದ ಬಿಡಿಸಿಕೊಂಡು ಬಂದಳು. ಬಂದ ತಕ್ಷಣ ನಂದಿನಿಯ ಕೆನ್ನೆಗೆ ನೀಡಿದಳು. ಭಯಂಕರ ಏಟು, ಮಗು ಭೂಮಿಯನ್ನು ಹತ್ತಿರಕ್ಕೆ ಕರೆದಳು. ಆ ಸಮಯಕ್ಕೆ ಅಜ್ಜ-ಅಜ್ಜಿ ಎದ್ದು ನಿಂತರು.
“ಏಯ್! ಯಾರೇ ನೀನು.” ಎಂದಳು ನಂದಿನಿ, ಅದಕ್ಕೆ ಪ್ರತಿಯಾಗಿ ಚೈತ್ರಳು.
“ಏಯ! ಇನ್ನೊಂದು ಮಾತು ಹೊರಗಡೆ ಬಂದರೆ ಹಲ್ಲು ಉದುರಿಸುವೆ, ನೆನಪಿರಲಿ”. ಅವಳ ಮಾತಿಗೆ ಮನೆಯ ಆರತಿಯನ್ನೇ ಆ ರೀತಿ ಶಿಕ್ಷಿಸುತ್ತೀರಾ ಥೂ….” ಎಂದಳು ಚೈತ್ರ.
“ಇದನ್ನೆಲ್ಲಾ ಕೇಳೋಕೆ ನೀನ್ಯಾರು?” ಎಂದಳು ಅಜ್ಜಿ.
“ಯಾರಾದರೇನು ನಾನು? ನನ್ನ ಪ್ರಶ್ನೆಗೆ ಉತ್ತರಿಸಿ ಅಷ್ಟೇ”.
“ಇವಳನ್ನು ಮನೆಯಲ್ಲಿ ಇಟ್ಟುಕೊಂಡದ್ದೇ ಪಾಪ, ಪಾಪಿ ನನ್ನ ಮಗನನ್ನೇ ಸಾಯಿಸಿದ ಪಿಶಾಚಿ” ಎಂದರು ಅಜ್ಜ.
“ಬಾರಿಗೆ ಕಾಲಿನವಳು. ಇವಳು ಮುಟ್ಟಿದಿರೇ ಮನುಷ್ಯರೇ ಒಣಗುವರು. ಮೈಯಲ್ಲಾ ವಿಷ ತುಂಬಿದೆ” ಎಂದಳು ನಂದಿನಿ.
“ಬೆಳಿಗ್ಗೆ ಎದ್ದು ಇವಳ ಮುಖ ನೋಡೋದು ಇರಲಿ. ಅವಳ ವಸ್ತುಗಳನ್ನು ನೋಡಿದರು ಯಾವ ಕೆಲಸವೂ ಆಗುವುದಿಲ್ಲ” ಎಂದಳು ಅಜ್ಜಿ.
“ಓ….ಓ…..ಓ….ಹೌದೇ? ಇಷ್ಟೆಲ್ಲಾ ಇವಳಿಂದ ನಿಮಗೆ ತೊಂದರೆ. ನೀವು ತಿನ್ನುತ್ತಿರಲ್ಲ ಮೃಷ್ಟಾನ್ನ ಭೋಜನ ಮಾಡಿದ್ದು ಯಾರು? ತಿರುಗಾಡುವ ನೆಲ ಸ್ವಚ್ಛಗೊಳಿಸುವವರಾರು?. ನೀವು ಕುಡಿಯುವ ನೀರು ಮುಟ್ಟುವವರಾರು?. ನೀವು ಹಾಕಿಕೊಳ್ಳುವ ಬಟ್ಟೆಯನ್ನು ಮುಟ್ಟಿ ಮೈಲಿಗೆ ಮಾಡುವವರಾರು? ನಿಮ್ಮನ್ನು ಮೈಲಿಗೆ ಮಾಡಿದ್ದಲ್ಲದೇ, ದಿನಾಲೂ ದೇವರನ್ನು ಮುಟ್ಟುವವರಾರು? ದಿನಕ್ಕೆ ಹತ್ತಾರು ಜೊತೆ ಬಟ್ಟೆ ಬಿಡುತ್ತೀರಲ್ಲ. ಅದನ್ನು ಪ್ರತಿಯೊಂದು ಕಣ ಬಿಡದೆ ಸ್ವಚ್ಛಗೊಳಿಸುವವರಾರು? ನೀವು ಹಾಕಿಕೊಳ್ಳುವ ಚಪ್ಪಲಿಯನ್ನು ನಿಮ್ಮ ಕಾಲಿಗೆ ಹಾಕುವವರಾರು?. ಅಡಿಯಿಂದ ಮುಡಿ, ಮುಡಿಯಿಂದ ಅಡಿಗೆ ಮನುಷ್ಯನಿಗೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಪ್ರತಿ ನಿತ್ಯ ಮುಟ್ಟುವುದು ಯಾವುದು? ಪಿಶಾಚಿ, ಬಾರಿಗೆ ಕಾಲಿನವಳು, ಶಕುನಿ ಚಿತ್ರ ತಾನೇ? ಮನೆಯಲ್ಲಿ ಇಟ್ಟುಕೊಂಡಿದ್ದೆ ಮಹಾಪಾಪ. ಆದರೇ ಪಿಶಾಚಿ ತಯಾರಿಸಿದ ಮೃಷ್ಟಾನ್ನ ಭೋಜನ ಊಟ ಮಾಡುತ್ತೀರಲ್ಲ? ಸರ. ಬೆಳಗ್ಗೆ ಎದ್ದು ಅವಳ ಮುಖ ನೋಡಲು ಹಾಗಾದ ನಿಮಗೆ ಅವಳು ತನ್ನ ಕೈಯರ ನೀಡಿದ ಸೀರೆಯನ್ನು ಮೈಯಲ್ಲಾ ಉಟ್ಟುಕೊಂಡು ಹೋಗುತ್ತೀರಲ್ಲ. ಆವಾಗ ಯಾವ ಕೆಲಸವೂ ಆಗುವುದಿಲ್ಲವೋ ನಿಮಗೆ ಮೇಡಂ? ಮೈಯಲ್ಲಾ ವಿಷ ತುಂಬಿದ ಚಿತ್ರ. ಅವಳು ಮಾಡಿದ ಪ್ರತಿಯೊಂದು ಕೆಲಸ ವಿಷಯವಾಗಬೇಕಿತಲ್ಲವೆ?. ಯಾಕೆ? ಯಾಕೆ? ಹೆಣ್ಣನ್ನು ದ್ವೇಷಿಸುತ್ತೀರಾ? ಹೆಣ್ಣಿನ ಕಷ್ಟಕ್ಕೆ ಹೆಣ್ಣು ಸ್ಪಂದಿಸದಿದ್ದರೆ ಮತ್ತಾö್ಯರು ಸ್ಪಂದಿಸುವರು? ಕೆಲಸಕ್ಕಾದರೂ ಅವಳು ಬೇಕು. ಬೇರೆ ಯಾವುದಕ್ಕೂ ಬೇಡವೆ? ಮಾತನಾಡಿ”. ಚೈತ್ರ ಇದನ್ನೆಲ್ಲಾ ಒಂದೇ ಒಂದು ಉಸಿರು ಬಿಡುವದೊರಳಗೆ ಹೇಳಿ ಮುಗಿಸಿದವಳು. ಇವಳ ಮಾತಿಗೆ ಸೊಕ್ಕು, ಅಹಂಕಾರ, ದ್ವೇಷದಲ್ಲಿ ಮೆರೆಯುತ್ತಿದ್ದವರಿಗೆ, ಮೊಸರಿನಲ್ಲಿ ತೆಗೆದ ಬೆಣ್ಣೆಯಂತೆ ಅವರ ಅಹಂಕಾರ ತೆಗೆದು ಹಾಕಿದಳು.
“ಗಂಡನನ್ನು ಕಳೆದುಕೊಂಡ ಎಳೆಯ ವಯಸ್ಸಿನಲ್ಲಿಯೇ ಚಿಕ್ಕ ಮಗು. ಗಂಡನ ನೋವೆ ಅಪಾರ ಅವಳಿಗೆ, ಹಾಗೋ-ಹೀಗೋ ಮಗಳ ಮುಖ ನೋಡಿ ಬದುಕುತ್ತಿರುವ ಆ ಗೊಂಬೆಗೆ ಶಿಕ್ಷೆ? ಮದುವೆಯಾಗಿ ಬಂದಾಗ ಸೊಸೆಯನ್ನು ಪ್ರೀತಿಯಿಂದ ಕಂಡ ನೀವು, ಮಗ ಸತ್ತ ಮೇಲೆ ಹೀಗೇಕೆ? ಸೊಸೆ ಗರ್ಭಿಣಿಯಿದ್ದಾಗ ವಾತ್ಸಲ್ಯದಿಂದಿದ್ದ ನೀವು, ಹೆಣ್ಣು ಮಗು ಜನಿಸಿದೆ ಎಂದು ಕೋಪ. ಈ ಕಂದಮ್ಮನನ್ನು ಪ್ರೀತಿಯಿಂದ ಕಾಣಿ, ಯಾಕೆ ಗಂಡು ಮೊಮ್ಮಗನಾದರೇ ಮಾತ್ರ ವಂಶ ಬೆಳಗೊತ್ತಾನೆಯೇ? ಹೆಣ್ಣು ನಿಮ್ಮ ಮನೆಯನ್ನು ಸುಟ್ಟು ಹಾಕುತ್ತಾ? ಹೆಣ್ಣೆಂದರೆ ಕೀಳು ಭಾವನೆ ಏಕೆ ನಿಮಗೆ? ನೀವು ಒಂದು ಹೆಣ್ಣು. ನಿಮ್ಮನ್ನು ಹೆತ್ತವಳು ಹೆಣ್ಣು. ಆ ಕಂದಮ್ಮಳಿಗೆ ಆ ಪರಿ ಶಿಕ್ಷೆ ನೀಡುತ್ತಿರಲ್ಲ ಹೃದಯ ಇಲ್ಲ ನಿಮಗೆ?.” ಎಂದು ಚೈತ್ರ ಕೆಮ್ಮುತ್ತಿದ್ದಳು.
“ಚೈತ್ರ ಇಲ್ಲಿಂದ ಹೊರಟೋಗು ನನ್ನ ಮನೆಯ ವಿಷಯ ನನಗಿರಲಿ ದಯವಿಟ್ಟು ಹೊರಡು”. ಎಂದು ಚಿತ್ರ ಚೈತ್ರಗಳಿಗೆ ಬೇಡಿಕೊಳ್ಳುತ್ತಿದ್ದಳು.
“ಚಿತ್ರ ನಿನ್ನ ಸಮಸ್ಯೆ ಸಂಬAಧದ ಸಮಸ್ಯೆ ಎಂದು ನಾನು ಪರಿಹರಿಸುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆ” ಚೈತ್ರ ಹೇಳಿ, ಸಮಾಧಾನಗೊಳ್ಳುತ್ತಾ, ಪ್ರೀತಿಯಿಂದ,
“ಸರ್! ನಿಮ್ಮ ಸೊಸೆ, ನಿಮ್ಮ ಮೊಮ್ಮಗಳಿಗೆ ಯಾವೋದು ಒಂದು ಕೆಟ್ಟ ಯೋಚನೆಯಿಂದ ಆ ಕಂದಮ್ಮನ ಜೀವನ ಹಾಳು ಮಾಡುತ್ತೀರಾ? ಮನೆಯ ಎಲ್ಲಾ ಕೆಲಸ ಮಾಡುವುದು ಸೊಸೆಯ ಕರ್ತವ್ಯ. ಹಾಗಂತ ಅದನ್ನೇ ಉದ್ದೇಶ ಪೂರ್ವಕವಾಗಿ ಮಾಡಬೇಡಿ. ದಯವಿಟ್ಟು. ಮೇಡಂ! ನಿಮಗೂ ವಯಸ್ಸಿಗೆ ಬಂದAತಹ ಮಗಳಿದ್ದಾಳೆ. ಅವರು ಮದುವೆಯಾಗಿ ಮತ್ತೊಂದು ಮನೆಗೆ ಹೋಗುತ್ತಾರೆ. ಆಕೆಗೂ ಇಂತಹ ಕಷ್ಟ ಬಂದರೆ ಸಹಿಸುವಿರಾ ನೀವು? ಹೆಣ್ಣೊಂದು ನೀವು ನಿಮಗೂ ಹೆತ್ತ ಕರುಳು ಎನ್ನುವರು, ನಿಮ್ಮ ಮಗಳ ಬಟ್ಟೆ ಮೇಲೆ ಒಂದೇ ಒಂದು ಹನಿ ಸಾಂಬಾರು ಬಿದ್ದರೆ ನಿಮಗೆ ನೋವು. ಆದರೇ ಸುಡುವ ಸಾಂಬಾರಿನಲ್ಲಿ ಆ ಹಸುಗೂಸಿನ ಐದು ಬೆರಳನ್ನು ಐದು ನಿಮಿಷ ಇಟ್ಟಿದ್ದಾಳೆ. ನಿಮ್ಮ ಮಗಳು. ಆವಾಗ ಕಂದಮ್ಮನ ಹೆತ್ತ ಕರುಳು ಏನಾಗಿರಬಾರದು? ಯೋಚಿಸಿ ಅಮ್ಮ. ನಂದಿನಿ ನೀನು ವಿದ್ಯಾವಂತೆ, ನಿನಗೂ ಯೋಚಿಸುವ ಶಕ್ತಿಯಿದೆ. ಮಗು ತಪ್ಪು ಮಾಡಿದರೆ ಘೋರ ಶಿಕ್ಷೆ ನೀಡುತ್ತಿಯಲ್ಲ. ನೀನು ಒಂದು ಹೆಣ್ಣಾ? ಯೋಚಿಸು.” ಎಂದ ಚೈತ್ರಳ ಮುಖ ಸೋತೋಗಿತ್ತು. ‘ಏನು ಹೇಳಿದರು ಇವರಿಗೆ ವ್ಯರ್ಥ’ ಎಂದು ಆಲೊಚಿಸುತ್ತಿದ್ದಳು. ಆ ಮೂವರು ಒಂದೇ ಬಾರಿಗೆ, ಒಂದೇ ಧ್ವನಿಯಲ್ಲಿ ‘ಕ್ಷಮಿಸಿ’ ಎಂದರು. ಅದಕ್ಕೇ ಚೈತ್ರ “ನನಗಲ್ಲ. ಈ ಮನೆಯ ಸೊಸೆ ಮತ್ತು ಮೊಮ್ಮಗಳಿಗೆ! ಎಂದಳು. ನೇರವಾಗಿ ಹೋಗಿ ಕ್ಷಮೆಯಾಚನೆ ಮಾಡಿದರು. ಚೈತ್ರ. ಚಿತ್ರಳಿಗೆ ಹೇಳಿ ತನ್ನ ಊರಕಡೆ ನಡೆದಳು.
ಮನೆಯಲ್ಲಿ ಗುಸು ಗುಸು ಮಾತನಾಡುತ್ತಿದ್ದರು. “ಮುಂಜಾನೆಯಿAದ ಚೈತ್ರ ಕೋಣೆಯಿಂದ ಹೊರಗಡೆ ಬಂದಿಲ್ಲವೆAದರೇ ಚೈತ್ರಳಿಗೆ ವರ ಒಪ್ಪಿಗೆಯಾಗಿರಬೇಕು.” ಎಂದು ಮಾತನಾಡುತ್ತಿದ್ದರು. ತೊಟ್ಟಿಲಲ್ಲಿ ಕುಳಿತ ಅಪ್ಪಾಜಿಯ ಮುಖದಲ್ಲಿ ನಗು ಚೆಲ್ಲಿತ್ತು. “ಮಗಳು ಮದುವೆಗೆ ಒಪ್ಪಿಗೆ ನೀಡಿದ್ದಾಳೆ ತಾನೇ” ಎಂದು ಅಪ್ಪಾಜಿ ಚೈತ್ರಳ ಗೆಳತಿಗೆ ಕೇಳಿದರು. ಅದಕ್ಕೆ ಅವಳು “ನೀಡಿದ್ದಾಳೆ ಅಂಕಲ್” ಎಂದಳು. ಆವಾಗಲೇ ಚೈತ್ರ, ಚಿತ್ರಳ ಮನೆಯಿಂದ ತನ್ನ ಮನೆಗೆ ಕಾಲಿಟ್ಟಳು. ಎಲ್ಲರೂ ಕುಳಿತಿದ್ದನ್ನು ಕಂಡು ಯಾರಿಗೂ ಗೊತ್ತಾಗದಂತೆ ತನ್ನ ಕೋಣೆಗೆ ಸೇರಿದಳು. ಬಾಗಿಲ ಬಳಿಯಿಂದ ಗೆಳತಿಯನ್ನು ಸನ್ನೆ ಆಡಿ ಕರೆದಳು.
ಗೆಳತಿಯು ಕೋಣೆಗೆ ಹೋಗಿ “ಏಯ್! ಚೈತ್ರ ಏನೇ ಈವಾಗ ಬಂದಿದ್ದೀಯಾ? ಮುಂಜಾನೆಯಿAದ ನಿನ್ನ ಮನೆಯವರನ್ನೆಲ್ಲ ಮ್ಯಾನೇಜ್ ಮಾಡಿ ಮಾಡಿ ಸಾಕಾಯ್ತು.” ಚೈತ್ರ ಅವಸರದಿಂದ,
“ಸರಿ….ಸರಿ….ಏನಾಯ್ತು ವರ ಬಂದಿದ್ನ?.”
“ವರ ಬಂದಾಯ್ತು. ನಿಮ್ಮ ಮನೆಯವರೆಲ್ಲ ಒಪ್ಪಿದ್ದು ಆಯಿತು. ನಿನ್ನ ಮದುವೇನು ಆಗೋದು ಗ್ಯಾರಂಟಿ. ವರ ತುಂಬ ಸುಂದರ ಕಣೆ, ನನಗಂತೂ ತುಂಬ ಇಷ್ಟವಾದ. ಅಮ್ಮ ನಾನು ಮುಂಜಾನೆಯಿAದ “ಚೈತ್ರ ಒಳಗೆ ಕುಳಿತಿದ್ದಾಳೆ, ಅವಳಿಗೆ ಒಪ್ಪಿಗೆಯಾಗಿದೆ! ಎಂದು ಸುಳ್ಳು ಹೇಳಿದ್ದೇವೆ”.
“ಓ ಗಾಡ್, ನಾನು ವರನನ್ನೇ ನೋಡಿಲ್ವಲ್ಲೆ?” ಈವಾಗಲೇ ಹೋಗಿ ಅಪ್ಪಾಜಿಗೆ ಹೇಳುವೆ” ಎಂದು ಮುಂದಾದಳು. ತಡೆದ ಗೆಳತಿ,
“ನಿನಗೇನು ಹುಚ್ಚ. ಅಪ್ಪಾಜಿಗೆ ನೀನು ಇವತ್ತು ಮನೆಯಲ್ಲಿ ಇರಲಿಲ್ಲ. ಎಂಬ ಸುದ್ಧಿ ಗೊತ್ತಾಯಿತೆಂದರೆ ಅಮ್ಮನನ್ನು, ನನ್ನನ್ನು, ನಿನ್ನನ್ನು ಕೊಲ್ಲುತ್ತಾರೆ ಅಷ್ಟೇ”.
“ನಾನೇನು ಮಾಡಲಿ ಇವಾಗ?.”
“ಏನೂ ಮಾಡ್ಬೇಡ, ಮದುವೆಗೆ ಒಪ್ಪಿಕೋ. ಒಳ್ಳೇಯವರ. ರಾಜಕೀಯ ವ್ಯಕ್ತಿ ಲಕ್ಷಣವಾಗಿದ್ದಾನೆ”.
“ಹೆಸರೇನಾದರೂ ಗೊತ್ತಾ ಅವರದು?”.
“ನನಗೆ ನೆನಪಿಲ್ಲ ಕಣೆ”.
“ನಿನಗೇನು ನೆನಪಿರುತ್ತದೆ ಹೇಳು”. ಎಲ್ಲಾ ಕೆಲಸ ಹಾಳು ಮಾಡಿದೆ”. ಆವಾಗಲೇ ಅಮ್ಮ ಬಂದಳು.
“ಚೈತ್ರ ಇವಾಗ ಬಂದೇನಮ್ಮಾ?”. ಅಮ್ಮ ಕೇಳಿದರು.
“ಅಮ್ಮ. ಇವಳು, ನೀನೂ ಕೂಡ ವರ ನನಗೆ ಒಪ್ಪಿಗೆಯಾಗಿದೆ ಎಂದು ಅಪ್ಪಾಜಿಗೆ ಹೇಳಿದ್ದಿರಂತೆ. ಮುಂದೇನು ಮಾಡೋದು?”.
“ಏನೂ ಮಾಡೋದಿಲ್ಲ. ನಿನ್ನ ಅಪ್ಪಾಜಿ ಅವಾಗಲೇ ಮದುವೆ ಸಿದ್ಧತೆ ನಡೆಸಿದ್ದರೆ, ವರನಿಗೂ ಕೂಡ ಒಪ್ಪಿಗೆಯಾಗಿದೆ ಅಂತೆ”.
“ಅಲ್ಲಮ್ಮ….ಆದರೆ ವರ ನೋಡಿದ್ದು ನನ್ನ ಗೆಳತಿಯನಲ್ವ? ನಾಳೆ ನಾನು ವಧು ಎಂದರೆ ?”.
“ವರನಿಗೆ ಇವಳೆ ವಧು. ಆ ದಿನ ನೀವು ಸರಿಯಾಗೆ ನೋಡಿಲ್ಲ ಅಂತೇಳಿದರೆ ಆಯ್ತು. ತುಂಬ ಸುಂದರವಾಗಿದ್ದಾನೆ. ಒಪ್ಪಿಕೋ ನನಗೂ ಸಂತೋಷ. ಎಲ್ಲಾರಿಗೂ ಸಂತೋಷ.” ಎಂದರು ಅಮ್ಮ. ಚೈತ್ರ ಏನು ಹೇಳದೆ ಮೌನಸ್ಥಳಾದಳು. ಕೊನೆಗೊಂದು ನಿರ್ಧಾರಕ್ಕೆ ಬಂದಳು. ಅಯ್ಯೋ! ಚೈತ್ರಳಿಗೇನು ಗೊತ್ತು ತನ್ನ ಬಾಳ ಸಂಗಾತಿ ಚಂದ್ರ ಎಂದು. ಚಂದ್ರನಿಗೇನು ಗೊತ್ತಾ ಮುಂದೆ ತನ್ನ ಅರ್ಧಂಗಿಣಿ ಆಗುವಳು ಚೈತ್ರ ಎಂದು. ಹೀಗೆ ಮದುವೆ ಕಾರ್ಡ ಹಂಚಿದ್ದಾಳೆ. ಕಲ್ಯಾಣಿಯವರಿಗೂ ನೀಡಿದ್ದಾಳೆ. ಚಿತ್ರಳ ಮನೆಗೂ ಹೋದಳು. ಚಿತ್ರಳ ಮನೆಯಲ್ಲಿ ಆಕೆ ತನ್ನ ಅತ್ತೆಗೆ ಮಾತನಾಡಿಸುತ್ತಿದ್ದಳು. ಅವಳ ಮುಖದಲ್ಲಿ ನಗು ಕಾಣುತ್ತಿತ್ತು. ಮಗಳು ಭೂಮಿಕಾ ಆಗ ತಾನೇ ಶಾಲೆಯಿಂದ ಮನೆಗೆ ಬಂದಳು. ಮನೆಯಲ್ಲಿ ಅಜ್ಜ, ನಂದಿನಿ ಇರಲಿಲ್ಲ. ಆಗ ತಾನೇ ಬಂದು ನಿಂತು ಕೊಂಡAತಹ ಚೈತ್ರಳನ್ನು ಅಜ್ಜಿ ಕಂಡು ಮನೆಯೊಳಗೆ ಕರೆದಳು. ಸಂತೋಷವಾಗಿ ಮಾತನಾಡಿದರು. ಚಿತ್ರ ಮೊದಲಿನಿಗಿಂತೂ ಈವಾಗ ಚೆನ್ನಗಾಗಿದ್ದಾಳೆ. ಇದನ್ನೆಲ್ಲಾ ಕೇಳಿದ ಚೈತ್ರಳಿಗೆ ಸಂತೋಷವಾಯಿತು. ಮದುವೆ ಕಾರ್ಡು ನೀಡಿ. “ಮದುವೆಗೆ ಎಲ್ಲರೂ ಬನ್ನಿ” ಎಂದು ಹೇಳಿ ಹೊರಟಳು. ಮದುವೆ ಕಾರ್ಡುಗಳನ್ನು ಎಲ್ಲಾರಿಗೂ ಹಂಚಿದ ಚೈತ್ರ ಕಾರ್ಡು ತೆಗೆದು ಒಂದು ಬಾರಿಯಾದರೂ ನೋಡಿರಲಿಲ್ಲ. ರಾತ್ರಿ ಮಲಗಿದ್ದಳು. “ಮದುವೆಗೆ ಎಲ್ಲರನ್ನು ಕರೆದಿರುವೆ. ಆದರೇ ಚಂದ್ರನಿಗೆ ಕರೆಯೋಣವ? ಬೇಡ್ವ?” ಯಾವುದಕ್ಕೂ ನಿರ್ಧಾರ ಮಾಡಲಿಲ್ಲ. ಚಂದ್ರನು ಅವಳ ವರ ಎಂದು ಅವಳಿಗೇನು ಗೊತ್ತು? ಚಂದ್ರನು ಸಹ ಮನೆಯವರ ಒಪ್ಪಿಗೆ ಮೇರೆಗೆ ಒಪ್ಪಿಕೊಂಡಿದ್ದ. ಚೈತ್ರಳಂತೆ ಎಲ್ಲಾರಿಗೂ ಹಂಚಿದ ಆದರೇ ಲಗ್ನ ಪತ್ರಿಕೆಯನ್ನು ನೋಡಿರಲಿಲ್ಲ. ಅವನು ಕೂಡ ಚೈತ್ರಳನ್ನು ಮದುವೆಗೆ ಕರೆಯಬೇಕೆಂದಿದ್ದ ಆದರೇ ಕರೆಯಲಿಲ್ಲ.
ಮದುವೆ ಸಮಾರಂಭ ನಡೆದಿದೆ. ನೆಂಟರು, ಗೆಳತಿಯರು, ಗೆಳೆಯರು ಮದುವೆಗೆ ಬಂದಿದ್ದಾರೆ. ಚೈತ್ರ ಅಪ್ಪಾಜಿಯನ್ನು ಕರೆದು.
“ಅಪ್ಪಾಜಿ ಇವಾಗಲಾದರೂ ವರನ ಹೆಸರಾದರು ಹೇಳಿ ಅಪ್ಪಾಜಿ”. ಎಂದು ಬೇಡಿದಳು.
ಆದರೇ ಅಪ್ಪಾಜಿ ಹದಿನೈದು ದಿನದ ಒಂದೆ ನೀಡಿದ ಉತ್ತರ “ನಿನಗೇನು ಗೊತ್ತಿಲ್ವ?. ಎಂದು ಹೇಳಿದ ಮಾತು ಮತ್ತೊಮ್ಮೆ ಹೇಳಿದರು. ವರನು ಸಹ ಸುಮ್ಮನೆ ಕುಳಿತಿದ್ದ. ಚೈತ್ರಳ ಗೆಳತಿ ಚಂದ್ರನ ಹತ್ತಿರ ಬಂದು,
“ಸರ್. ನಿಮ್ಮನ್ನು ಮದುವೆಯಾಗುವ ವಧುನಾನ್ನಲ್ಲ”.
“ಮತ್ತಾö್ಯರು?”.
“ನನ್ನ ಗೆಳತಿ”. ಚಂದ್ರನಿಗೇನು ಗೊತ್ತಾಗಲಿಲ್ಲ. ಅವಸರದಲ್ಲಿ ಹಸೆ ಮಣೆಗೆ ಕರೆದುಕೊಂಡು ಹೋದರು. ಪಕ್ಕದಲ್ಲಿಯೇ ಚೈತ್ರಳು ಬಂದು ಕುಳಿತಳು. ಒಮ್ಮೆಯೂ ಸಹ ಒಬ್ಬರ ಮೊಗ ಒಬ್ಬರು ನೋಡದೆ ಕುಳಿತರು.ಮದುವೆಗೆ ಡಾಕ್ಟರ ಕಲ್ಯಾಣಿಯವರು, ಚಿತ್ರ ಹಾಗೂ ಅವಳ ಮನೆಯ ಸದಸ್ಯರು, ಭೂಮಿಕಾ ಬಂದರು. ಚಂದ್ರನು ಚೈತ್ರಳಿಗೆ ಮಾಂಗಲ್ಯ ಕಟ್ಟಿಯೇ ಬಿಟ್ಟ. ಆವಾಗ ಚಂದ್ರನು ಚೈತ್ರಳ ಮುಖವನ್ನು ನೋಡಿದ. ಜೊತೆಗೆ ಚೈತ್ರಳು ಸಹ ಚಂದ್ರನನ್ನು ನೋಡಿದಳು. ಇಬ್ಬರಿಗೂ ಆಶ್ಚರ್ಯವೋ ಆಶ್ಚರ್ಯ. ಎಲ್ಲವೂ ಒಳ್ಳೇದಾಯಿತೆಂದು ಇನ್ನೇನು ಮಾಡುವುದು ಹೇಳಿ?. ಮದುವೆ ಸಮಾರಂಭದ ಅವಸರ ಚಂದ್ರ. ಚೈತ್ರ ಒಬ್ಬರಿಗೊಬ್ಬರರು ಮಾತನಾಡಲು ಸಮಯವಿರಲಿಲ್ಲ. ಚಿತ್ರ ಸಾಗರ ಅವರ ಸನಿಹ ಬಂದು ನಗುತ್ತಾ “ಚೈತ್ರದ ಚಂದ್ರಮ”. ಎಂದು ಕರೆದಳು. ಯಾರ ಮೇಲೆ ಯಾರಿಗೂ ಕೋಪ ಇರದೆ ಹಾರಿ ಹೋಗಿತ್ತು. ಎಲ್ಲರೂ ಮದುವೆಯ ಸಮಾರಂಭವನ್ನು ಖುಷಿಯಿಂದ ಅನುಭವಿಸಿದರು.

   – ಅನೀತಾ ದುಬೈ. ಯಾದಗಿರಿ

ಕಾದಂಬರಿಕಾರರ ಪರಿಚಯ: 

ಕು.ಅನೀತಾ ದುಬೈ.ಯಾದಗಿರಿ

ಉದಯೋನ್ಮುಖ ಯುವ ಕಾದಂಬರಿಕಾರ್ತಿ ಕು. ಅನಿತಾ ದುಬೈ. ಇವರು ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ  ಗ್ರಾಮದವರು. ಡಿ.ಇಡಿ ಮತ್ತು ಬಿ.ಎ.ಪದವೀಧರರು. ‘ಸಂಸ್ಕೃತಿ ಮರೆತಾಗ’ ಎಂಬ ಕಾದಂಬರಿ ಪ್ರಕಟಿಸಿದ್ದು, ಈ ಕಾದಂಬರಿ 2019 ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಸಹಾಯ ಧನಕ್ಕೆ ಆಯ್ಕೆಯಾಗಿದೆ.