Oplus_131072

ಚಾಮುಂಡೇಶ್ವರಿ.

ಭಜಿಸುವೆವು ನಿತ್ಯವು ದುರ್ಗಾದೇವಿಯೆ ನಿನಗೆ ಮನದಲ್ಲಿ
ಕರುಣಿಸು ತಾಯಿ ಸೌಭಾಗ್ಯವನು ನಮಗೆ ಹರಸುತಲಿ
ದುರ್ಗುಣಗಳ ತ್ಯಜಿಸುವೆವು ಪರಮೇಶ್ವರಿಯ ಚರಣದಲಿ
ಅಹಂಕಾರದ ಬಲಿ ನೀಡುವೆವು ತಾಯಿ ನಿನ್ನ ಅಡಿಯಲ್ಲಿ

ಭವಾನಿ ಮಾತೆ ಜಗದಾಂಬೆಗೆ ಪರಿಪರಿ ಬೇಡುವೇವು
ಬೀರು ದುಷ್ಟರ ಮದವ ಕೀಳಿ ಚಾಮುಂಡಿ ಶಾಂತಿಯ ಹೂವು
ಬ್ರಷ್ಟ ಜನಗಳ ಮನವನು ತೊಳೆದು ಮಾನವರನ್ನಾಗಿಸು
ದಾನವ ಬುದ್ಧಿಗೆ ಗತಿಯನು ಕಾಣಿಸಿ ಧರಣಿಯಿಂದ ತೊಲಗಿಸು

ನವನವ ವೇಶದಿ ಸೇವೆಯ ಹೆಸರಲಿ ಹಲವರು ಬರುತಿಹರು
ಕಪ್ಪ ಕಾಣಿಕೆ ಗುಟ್ಟಲ್ಲಿ ಪಡೆದು ಗಪ್ಪಾಗಿ ಹೋಗುತಿಹರು
ಸೋಗಲಾಡಿಗಳ ಮುಖವನು ಬಯಲು ಮಾಡಮ್ಮ
ಸಾಂಗದಿ ಸಾಗುವ ಧರ್ಮಕಾರ್ಯಕೆ ಒಲವು ನೀಡಮ್ಮ

ಸರ್ವ ಜನಾಂಗದ ಶಾಂತಿಯ ತೋಟಕೆ ಇರಲಮ್ಮ ಕರುಣೆ
ಪರಿಹರಿಸು ಕಾಳಿಕಾದೇವಿಯೆ ನಿಷ್ಕಲ್ಮಶ ಭಕ್ತರ ಬವಣೆ
ಹಾಕಿರುವೇವು ಮಹಿಷಾಸುರಮರ್ಧಿನಿ ಮನದಲಿ ಮಣೆ
ಭಕ್ತಿಯಿಂದಲಿ ಪ್ರಾರ್ಥಿಸುವೇವು ಜನನಿ ನುಡಿಸುತಲಿ ವೀಣೆ.

  –   ಮಾಣಿಕ ನೇಳಗಿ.ತಾಳಮಡಗಿ

ಮಾಣಿಕ ನೇಳಗಿ.ತಾಳಮಡಗಿ

ಸಾಹಿತಿ ಮಾಣಿಕ ನೇಳಗಿ ಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದವರು.

ಬಿ.ಎ. ಎಂ.ಎ ಕನ್ನಡ ಪದವಿಧರರಾಗಿದ್ದು, 1999ರಿಂದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಇವರು ಈಗ ಬೀದರ  ಜಿಲ್ಲೆಯಲ್ಲಿ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.’ ಬದಲಾಗೋಣ. ಭರವಸೆ,ದಾಂಪತ್ಯ ಸವಿ, ಹರಿತವಾಗಲಿ (ಕವನ ಸಂಕಲನ) ‘ಬವಣೆ’ ‘ಗಾಂಧಿಜಿಗೆ ನಮನ‘ (ಹನಿಗವನ) ‘ರುಕ್ಕಿಣಿಯ ಆತುರ’ (ಕಥಾಸಂಕಲನ) ‘ಸಂಕೀರ್ಣ‘ (ಲೇಖನ) ‘ಮಾನವಿಯತೆ‘ (ಚಿಂತನ) ಎಂಬ ಕೃತಿಗಳು ಬರೆದಿದ್ದಾರೆ. ಇವರಿಗೆ ‘ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ,ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ