ಚರಗಾ ಚೆಲ್ಲುವಾ
ಸಂಗಪ್ಪಾ ಬಸಪ್ಪಾ ನೀಲವ್ವ ನಿಂಗವ್ವ
ಹರ್ಯಾಗೆದ್ದ ಅಡಗಿ ಮಾಡೀರಿಲ್ಲೊ
ಎತ್ತಿನ ಮೈ ತೊಳದು ಚಕ್ಕಡಿ ಪೂಜಾ
ಸುದ್ದಾ ಆತು ಬರ್ರಿ ಚರಗಾ ಚೆಲ್ಲಾಕ
ಹೋಗೂಣು//
ಎಳ್ಳಮಾಸಿ ಸಂಕ್ರಮಣಾಅಂದ್ರ ಖುಷಿ
ಭಾಳ ನನ್ನ ಹಿರ್ಯಾಗ ಒದರಾಕತ್ತಾನ
ನೀಲವ್ವಾ ಮಕ್ಳು ಮೊಮ್ಮಕ್ಳನ ಕರಿ
ಏ ಪಾರು ಶಿವಾ ಹತ್ರಿ ಚಕ್ಕಡ್ಯಾಗ ನಡ್ರಿ
ಹತ್ತೋಣ//
ಎರಿ ಹೊಲದಾಗ ಮುತ್ತಿನ ಜ್ವಾಳದ
ರಾಸಿ ಕಣದ ಪೂಜಾ ಮಾಡಿ ಸೀರಿ ಭೂತಾಯಿಗೆ ಏರ್ಸಿ ಹಾಡ್ಕೊಂತ
ಆರ್ತಿ ಮಾಡೋಣ //
ಗಿಡದನೆಳ್ಳಿಗೆ ಕುಂತಕಲ್ಲಿಟ್ಟುಪೂಜಾ
ಮಾಡಿ ತಂದ ಬುತ್ರೊಟ್ಟಿ ಹೋಳ್ಗಿ
ಸೆಜ್ಜಿರೊಟ್ಟಿಕಾಳಪಲ್ಯಾಸ್ಯಾಂಡ್ಗಿಹಪ್ಳಾ
ದೇವ್ರಗೆತೋರ್ಸಿಬರ್ರಿಪೋರಾಚರಗಾ
ಚೆಲ್ಲೋಣ//
ರೈತರಂದ್ರ ಅನ್ನ ಕೊಡೊ ದೇವ್ರು
ಛೊಲೊ ಬೆಳಿ ಬೆಳ್ಯಾಕ ಬಿಸಲು
ಮಳಿಗಾಳಿ ಭೂತಾಯಿ ಹಕ್ಕಿಪಕ್ಷಿಗಳ್ನ
ನೆನೆಸ್ಕೊಂತತಿನ್ನಾಕ್ಕೊಟ್ಟುನಮಸ್ಕಾರ
ಮಾಡೋಣ//
– ಅನ್ನಪೂರ್ಣ ಸಕ್ರೋಜಿ ಪುಣೆ