ಚುಕ್ಕಿ.
ಚುಕ್ಕಿಯೇ ಚುಕ್ಕಿಯೇ ದೂರದೂರಿನ ಬೆಳ್ಳಕ್ಕಿಯೇ ನಕ್ಕರೆ.
ನೀನೆಷ್ಟು ಅಂದವೋ ಬಲು ಚೆಂದವೋ ।।
ನಿನ್ನ ಹಾಗೆ ಹೊಳೆಯುವರು, ಯಾರಿಲ್ಲ ಈ ಮೊಗದಿ
ಕತ್ತಲ ಹೊತ್ತಲ್ಲಿ ಬರುವೆ ನೀ ಹಿತ್ತಲಿನಲ್ಲಿ ಈ ಜಗದಿ ।।
ಆಗಸದ ಸಾಗರದಲ್ಲಿ, ಹೊಳೆಯುವ ಮೀನಿನಂತೆ
ದೂರದ ಬಯಲಲ್ಲಿ, ಹಚ್ಚಿಟ್ಟ ಬೆಳ್ಳಿ ದೀಪದಂತೆ ।।
ಗೆಳೆಯರನ್ನು ಎಣಿಸುವೆ, ಗೆಳೆತನವ ಬಯಸುವೆ
ಓ ಚುಕ್ಕಿಯೇ ಬರಲು ನಿನ್ನ ಹತ್ತಿರ ದಾರಿ ಕೇಳುವೆ.
– ಕು.ಭಾಗ್ಯಲಕ್ಷ್ಮೀ.
10 ನೇ ತರಗತಿ ವಿದ್ಯಾರ್ಥಿನಿ . ಸರ್ಕಾರಿ ಕನ್ಯಾ ಪ್ರೌಢ ಶಾಲೆ ಕಮಲಾಪೂರ. ಜಿ.ಕಲಬುರಗಿ