Oplus_131072

ದಸರಾ ಹಬ್ಬದ ನಾಣ್ಣುಡಿ.

ದಸರಾ ಹಬ್ಬದ ಬಗ್ಗೆ ಒಂದು ನಾಣ್ನುಡಿ ಇದೆ ಅದೇನಂದ್ರೆ
“ಬನ್ನಿ ತಗೊಂಡು ಬಂಗಾರದ ಹಾಗೆ ಬಾಳೋಣು”.
ಈ ನಾಣ್ನುಡಿ ಕೇಳಿ ಒಂದು ಮಾತು ನೆನಪಿಗೆ ಬರುತ್ತದೆ, “ಕೂಡಿ ಬಾಳಿದರೆ ಸ್ವರ್ಗ ಸುಖ” ಈ ಮಾತು ಅರ್ಥ ಮಾಡಿಕೊಂಡು ನಡೆದರೆ ಸ್ವರ್ಗ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಅದು ನಮ್ಮ ನಿಮ್ಮೊಳಗೆ ಇದೆ. ಅದು ಪ್ರೀತಿ ವಿಶ್ವಾಸದಿಂದ ಜಾತಿ ಧರ್ಮ ಭಾಷೆ ಮತ ಪಂಥ ಭೇದ ಮರೆತು ಬಾಳಿದಾಗಲೇ ಕಾಣಲು ಸಾಧ್ಯ.

ಜೀವನ ಅಂದ್ರೆ ಹೀಗೆ ಅದು ಎಲ್ಲರೂ ಒಟ್ಟಾಗಿ , ಒಂದಾಗಿ ಸೇರಿ ಕಷ್ಟ ಸುಖ ಸಂತೋಷಗಳನ್ನು ಹಂಚಿಕೊಳ್ಳುವ ಮೂಲಕ ನೆಮ್ಮದಿಯ ಬದುಕು ಸಾಗಿಸಬೇಕು. ಆಗಲೇ ಮಾನವರ ಬದುಕು ಸಾರ್ಥಕ ಎನಿಸುತ್ತದೆ. ಆ ನಿರೀಕ್ಷೆಯಲ್ಲಿಯೇ ಹಿಂದಿನಿಂದಲೂ ನಾವು ಅನೇಕ ಹಬ್ಬಗಳನ್ನು ನಾವ ಆಚರಿಸುತ್ತಾ ಬಂದಿದ್ದೇವೆ.

ದಸರಾ , ವಿಜಯದಶಮಿ ಆಚರಣೆಯ ವಿಶೇಷ ಅಂದ್ರೆ , ಬನ್ನಿ ಮುಡಿಯುವುದು ಆಗ ಈ ನಾಣ್ನುಡಿ ಬನ್ನಿ ತಗೊಂಡು ಬಂಗಾರದ ಹಾಗೆ ಬಾಳೋಣು ಎಂದು ಹೇಳುವುದು ನಮ್ಮ ದೊಡ್ಡ ಗುಣ.
ಬನ್ನಿ , ಈ ಪದವು ಕನ್ನಡ ಭಾಷೆಯಲ್ಲಿ ನಮ್ಮಲ್ಲಿ ಸಾಮಾನ್ಯವಾಗಿ , ಕರೆಯೋಲೆ , ಆಮಂತ್ರಣ ಅಥವಾ ಸ್ವಾಗತ ಎಂಬುದಾಗಿ ಆತ್ಮೀಯತೆಯ ಸಂಕೇತವಾಗಿ ಬಳಸಲ್ಪಡುತ್ತದೆ.
ಈ ಉದ್ದೇಶವನ್ನು ಹೊಂದಿ ಆಚರಿಸವ ನಾಡಿನ ಬಹುದೊಡ್ಡ ನಾಡಹಬ್ಬ ಈ ದಸರಾ.

ಈ ವಿಜಯದಶಮಿ ಹಬ್ಬದ ದಿನ ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯುವುದು ಅಥವಾ ಪರಸ್ಪರರ ಬನ್ನಿ ಪತ್ರಿಯ ವಿನಿಮಯವು ನಡೆಯುತ್ತದೆ.
ಈ ಪ್ರಕ್ರಿಯೆಯು ಪರಸ್ಪರರಲ್ಲಿ ಆತ್ಮೀಯತೆಯ ಸ್ವಾಗತ ಹಾಗೆ ಎಲ್ಲರೂ ಬೆರೆತು ಕೂಡಿ ಬಾಳುವ ಧ್ಯೇಯ ಹೊಂದಿದ ಭಾವೈಕ್ಯತೆಯ ಸಂಕೇತವಾಗಿದೆ.

ಯಾರೇ ಆಗಿರಲಿ ಪ್ರತಿ ಹಬ್ಬಕ್ಕೂ ಒಂದೊಂದು ಅರ್ಥ ಇರುತ್ತದೆ. ಅದನ್ನು ಸರಿಯಾಗಿ ನಾವು ಅರ್ಥ ಮಾಡಿಕೊಂಡು ನಡೆಯಬೇಕು ಮತ್ತು ಆಚರಿಸಬೇಕು. ಇಲ್ಲ ಅಂದ್ರೆ ಮಾನವ ಜನ್ಮಕ್ಕೆ ಅರ್ಥವೇ ಇರುವುದಿಲ್ಲ.

ಆದ್ದರಿಂದ, ಬಂಗಾರದಂತಹ ಜೀವನಕ್ಕೆ ಪ್ರೇರಣೆ ನೀಡುವ , ಎಲ್ಲರನ್ನೂ ಒಂದೇ ಎಂದು ತನ್ನತ್ತ ಕೈಬೀಸಿ ಕರೆಯುವ , ಈ ಮಾನವೀಯತೆಯ ಸದಾಶಯವನ್ನ ಹೊತ್ತು ಬಂದ ಈ ಪವಿತ್ರ ಬನ್ನಿ ಹಬ್ಬ ನಿಜಕ್ಕೂ ಎಷ್ಟೊಂದು ಅರ್ಥಪೂರ್ಣ ಅಲ್ಲವೇ.

– ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು

ಲೇಖಕರ ಪರಿಚಯ:

ಡಾ.ಮಹೇಂದ್ರ ಕುರ್ಡಿ.ಹಟ್ಟಿ ಚಿನ್ನದ ಗಣಿ ರಾಯಚೂರು.

ಡಾ.ಮಹೇಂದ್ರ ಕುರ್ಡಿ ರವರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮದವರು ಬಿ.ಎ.ಎಲ್.ಎಲ್.ಬಿ.ಕಾನೂನು ಪದವೀಧರ ರಾಗಿದ್ದು, ಸದ್ಯ ಹಟ್ಟಿ ಚಿನ್ನದ ಗಣಿಯ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಾಹಿಸುತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿ ಬೆಳೆಸಿಕೊಂಡಿರುವ ಇವರು ‘ಹೊನ್ನಸಿರಿ’ ಬಂಗಾರದ ಶಿಲೆಯ ಮ್ಯಾಲೆ’ ಎಂಬ ಕವನ ಸಂಕಲನಗಳು, ಹಾಗೂ ‘ಮನ ಮಂಥನ ಸಿರಿ’ ಭಾಗ-1.2. ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ