ದಸರಾ ಸಂಭ್ರಮ
ಕರ್ನಾಟಕದ ಸೊಬಗಿನ ನಾಡಹಬ್ಬ ದಸರ
ನವದಿನ ನವಶಕ್ತಿ ದೇವತೆಯ ಆಡಂಬರ
ಮೈಸೂರು ರಾಜಒಡೆಯರ ಆಳ್ವಿಕೆಯ ಸಡಗರ
ಒಡ್ಡೋಲಗ ನೋಡಲು ಬಲು ಸುಂದರ//
ನೋಡಲಂದ ಅರಮನೆಯ ದೀಪಗಳ ಅಲಂಕಾರ
ಜೀವಂತವಾಗಿದೆ ನಾಡಿನ ಸಂಸ್ಕೃತಿ ಸಂಸ್ಕಾರ
ನಿತ್ಯವೂ ದೇವಿಗೆ ಪೂಜೆಯ ಸತ್ಕಾರ
ಸವಿಯಲು ಆನಂದ ನಯನ ಮನೋಹರ//
ನವರಾತ್ರಿ ನವೋಲ್ಲಾಸ ಜೀವನ ಉತ್ಸಾಹಕರ
ದೇವಿಗೆ ನಿತ್ಯವೂ ಸುಂದರ ಅಲಂಕಾರ
ದುಷ್ಟ ಸಂಹಾರಕ್ಕೆ ಎತ್ತಿದ್ದಳು ಅವತಾರ
ಗಜಪಡೆ ಸಜ್ಜಾಗಿದೆ ಹೊರಲು ಅಂಬಾರಿಭಾರ//
ಪ್ರತಿದಿನ ಭಕ್ತಿಯಲ್ಲಿ ಬನ್ನಿವೃಕ್ಷ ಪೂಜಿಸುವರು
ವಿವಿಧ ಬೇಡಿಕೆ ಸಲ್ಲಿಸುವರು ಮಹಿಳೆಯರು
ಅಭಯ ಆಶೀರ್ವಾದ ನೀಡುವನು ದೇವರು
ದೇವಿಯ ದರ್ಶನದಿಂದ ಎಲ್ಲರೂ ಪಾವನರಾದರು//
ರಾವಣನ ಸಂಹಾರದಿಂದ ರಕ್ಕಸಗುಣ ನಾಶವಾಗಿದೆ
ಶ್ರೀರಾಮನ ಸಮರದ ವಿಜಯದ ಪ್ರತೀಕವಾಗಿದೆ
ಪಾಂಡವರ ಅಜ್ಞಾತವಾಸ ಮುಗಿದ ದಿನವಾಗಿದೆ
ವಿಜಯವ ಆಚರಿಸುವ ಭಾಗ್ಯ ನಮ್ಮದಾಗಿದೆ
ಎಸ್ ವಿ ಶಾಂತಕುಮಾರ ಪಲ್ಲಾಗಟ್ಟಿ. ಜಗಳೂರು.
ದಾವಣಗೆರೆ