Oplus_131072

ದೀಪಾವಳಿ.

ವರ್ಷಕ್ಕೊಮ್ಮೆ ಬರುವದು
ದೀಪಾವಳಿ
ತರುವದು ಎಲ್ಲರಿಗೂ
ಸಡಗರದ ಸಂಭ್ರಮ
ಬಾಗಿಲ ಮುಂದೆ
ಬಣ್ಣ ಬಣ್ಣದ ರಂಗೋಲಿ.

ಹೊತ್ತಿ ಬೆಳಗುವವು
ಸಣ್ಣ ಸಣ್ಣ
ದೀಪಗಳು
ಮುಗಿಲಿಗೇರಿತು
ಪಟಾಕಿಗಳ
ಶಬ್ದ
ಹೊಗೆ ಮಾಡಿತು.

ಪರಿಸರ ಮಾಲಿನ್ಯ
ಹಚ್ಚಬೇಡಿ ಪಟಾಕಿಗಳ
ಮಾಡಬೇಡಿ ಮಾಲಿನ್ಯ
ಎಲ್ಲರ ಮನೆಗಳಲ್ಲಿ
ದೀಪಗಳ ಬೆಳಕು.

ಮನೆ – ಮನಗಳಲ್ಲಿ
ಅಜ್ಞಾನದ
ಕತ್ತಲೆಯೊಡೆದು
ಜ್ಞಾನದ ಜ್ಯೋತಿ
ಹಚ್ಚುವಾ !
ನಿಜ ದೀಪಾವಳಿ
ಆಚರಿಸುವಾ !

ಶೋಭಾ ಔರಾದೆ.ಹುಮನಾಬಾದ.

ಕವಯತ್ರಿ ಪರಿಚಯ:

ಶೋಭಾ ಔರಾದೆ. ಹುಮನಾಬಾದ

ಕವಯತ್ರಿ ಶೋಭಾ ಔರಾದೆ ‘ಯವರು ಬೀದರ ಜಿಲ್ಲೆ ಹುಮನಾಬಾದಿನವರು ಬಿ.ಎ. ಬಿ.ಇಡಿ. ಪದವಿಧರ ರಾದ ಇವರು 1997 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲಿದ್ದು , ಸದ್ಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರದ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದಾರೆ. ‘ಬಯಲು ಬಯಲನ್ನೆ ಬಿತ್ತಿ’ (ಅಧ್ಯಾತ್ಮಿಕ) ‘ವಚನ ಸಿರಿ, ‘ವಚನ ವೀಳ್ಯ’ (ವಚನ ಸಂಕಲನ) ‘ಸೊಲ್ಲೆತ್ತಿ ಹಾಡೇನ ಮಹಾಂತನ (ತ್ರಿಪದಿ) ‘ಹಳೆ ಹಾಡು ಹೊಸ ಭಾವ‘ (ಜಾನಪದ) ‘ವೀರ ಗಣಾಚಾರಿ ಮಡಿವಾಳ ಮಾಚಿದೇವರು‘ (ಚರಿತ್ರೆ) ‘ನಾನು ದೇವರಲ್ವೇನಮ್ಮಾ’ (ಮಕ್ಕಳ ಕವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ