ಗಾಂಧಿ ತಾತ
ತಾತ ತಾತ ನಮ್ಮ ತಾತ
ಇವರೆ ನಮ್ಮ ಗಾಂಧಿ ತಾತ
ಶಾಂತಿ ದೂತ ರಾಷ್ಟ್ರಪಿತ
ಮಹಾತ್ಮಾ ಗಾಂಧಿ ತಾತ .
ಕೈಯಲ್ಲಿ ಕೋಲು ಹಿಡಿದು
ತನ್ನ ಕರಾಮತ್ತು ತೋರಿಸಿದಾತ
ಬರಿ ಗಾಲಿನಲ್ಲಿ ನಡೆದು
ಬ್ರಿಟಿಷರಿಗೆ ಬೆವರಿಳಿಸಿದಾತ.
ಬಿಸಿಲು ಮಳೆ ಚಳಿ ಎನ್ನದೆ
ಮುಂದೆ ನುಗ್ಗಿ ನಡೆದಾತ
ಶತ್ರುವಿನ ಗುಂಡಿಗೆ ಹೆದರದೆ
ಹೋರಾಟಕ್ಕೆ ಹೊರಟು ನಿಂತಾತ
ಜನತಾ ಸ್ವಾತಂತ್ರ್ಯಕ್ಕಾಗಿ ಪಣತೊಟ್ಟು
ಹಗಲಿರುಳು ಸತ್ಯಾಗ್ರಹ ಮಾಡಿದಾತ
ಸತ್ಯ ಅಹಿಂಸೆಯ ಸಿದ್ದಾಂತ ಕೊಟ್ಟು
ಸ್ವಾತಂತ್ರ್ಯ ತಂದು ಕೊಟ್ಟಾತ
ಜಾತಿ ಮತ ಪಂಥ ಬಿಟ್ಟು
ಆಚರಿಸುವ ನಾವು ಜಯಂತಿಯ
ಭಾವೈಕ್ಯತೆಯ ಸಸಿಯ ನೆಟ್ಟು
ಹೇಳುವ ನಾನೊಬ್ಬ ಭಾರತೀಯ.
✍️ ರೇಣುಕಾ ವಾಯ್.ಎ.