ಶ್ರೀ ಗುರು ರಾಘವೇಂದ್ರ ಗೀತೆ.
ಪುಣ್ಯದ ತಾಣವು ಮಂತ್ರಾಲಯ
ಭಕ್ತಾದಿಗಳ ಸ್ವರ್ಗದ ನಿಲಯ !
ನಿರ್ಮಲ ಭಾವನೆ ತುಂಬಿದ ಅಲೆಯ !
ಭಕ್ತಿ ಭಾವ ತುಂಬಿವೆ ಸಹಸ್ರ ಹೃದಯ !
ತುಂಗಾ ನದಿಯಲಿ ನಿರ್ಮಲ ಸ್ನಾನ !
ಜಪಿಸುವ ನಾವು ಅಮೃತ ಪಾನ !
ಕಣಕಣದಲಿ ತುಂಬಿದೆ ನಿನ್ನಯ ಧ್ಯಾನ !
ಆತ್ಮಾನಂದದಿ ನಿನ್ನಯ ಗಾನ !
ನೆಲೆಸಿದ ಭೂಮಿಯು ಹೂರಾಶಿಗಳ ದಾರಿ !
ಪಕ್ಷಿಗಳು ಹಾಡುತ್ತಿವೆ ಸ್ವಾಗತ ಕೋರಿ !
ಕುಸುಮಗಳು ಅರಳಿವೆ ಸೌಗಂಧವ ಬೀರಿ !
ತೋರುತಿವೆ ರಾಘವೇಂದ್ರರ ಸ್ಮರಣೆಯದಾರಿ !
ಥಳಥಳ ಹೊಳೆಯುವ ನಿನ್ ಪುಥಳಿ ಶಿಲೆಯು !
ಹೃದಯಗಳನ್ನು ತುಂಬಿಸಿದೆ, ಭಕ್ತಿಯ ಅಲೆಯು
ಕುಲಕೋಟಿ ಜನರ ಬಾಯಿಯಲಿ
ನಿನ್ನ ನಾಮದ ಸೇಲೆಯು !
ಜಪಿಸುವ ಭಕ್ತರನು ಆವರಿಸಿದೆ ನಿನ್ನ
ಭಕ್ತಿಯ ಬಲೆಯು !
–ರವಿ ಎಸ್. ಮೋಘಾ, ಕಿಣ್ಣಿ(ಸಡಕ) ಕಲಬುರಗಿ
ಕವಿ ಪರಿಚಯ:
ರವಿ ಎಸ್. ಮೋಘಾ ರವರು ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಕಿಣ್ಣಿ ಸಡಕ ಗ್ರಾಮದವರಾಗಿದ್ದು ಚಿಂಚೋಳಿ ತಾಲೂಕಿನ ನೇಮುನಾಯಕ ತಾಂಡಾದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಲನಚಿತ್ರ ಡಿಪ್ಲೊಮಾದಲ್ಲಿ ಚಲನ ಚಿತ್ರ ನಿರ್ದೇಶನ ತರಬೇತಿ ಪಡೆದ ಇವರು ಸಿನಿಮಾ ಕ್ಷೇತ್ರದಲ್ಲಿ ಗುರ್ತಿಸಿ ಕೊಂಡಿದ್ದರು. ಮತ್ತು ಬಾಲ್ಯದಿಂದಲೂ ಕತೆ,,ಕವನ ಕಾದಂಬರಿ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡ ಇವರು 1990 ರಲ್ಲಿ ಇವರು ಬರೆದ ‘ಅರಳದ ತಾವರೆಗಳು’ ಎಂಬ ಕಾದಂಬರಿ ಕಲ್ಯಾಣ ಸಿರಿಗನ್ನಡ ಅಂತರ್ಜಾಲ ತಾಣದ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಿಸಲಾಗುತ್ತಿದೆ. ಇವರ ಕತೆ ಕವನ ಲೇಖನ ಬರಹಗಳು ಅಂದಿನ ‘ನಟರಾಜ’ ಎಂಬ ಸಿನಿಮಾ ಮಾಸ ಪತ್ರಿಕೆ ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.