Oplus_131072

ಹಚ್ಚೋಣ ದೀಪವ

ಹಚ್ಚೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಅಜ್ಞಾನವೆಂಬ ಕತ್ತಲೆಅಳಸಿ ಜ್ಞಾನಾವೆಂಬ
ಜ್ಯೋತಿ ಬೆಳಗುವ…
ಹಚ್ಚೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಸಮತೆಯ ಸಾರುತ
ಸರ್ವಜನಾಂಗದ ಶಾಂತಿ ಬಯಸುತ..
ಆತ್ಮ ಜ್ಯೋತಿ ಬೆಳಗುವ
ಹಚ್ಚೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಕಷ್ಟ-ನಷ್ಟಗಳ, ದುಃಖ ದುಮ್ಮಾನಗಳ ದೂರ ಮಾಡೆಂದು ಪ್ರಾರ್ಥನೆ ಗೈಯುತ
ಜ್ಯೋತಿಯು ಬೆಳಗುವ.
ಹಚ್ಹೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ದುಷ್ಟ ರಾಕ್ಷಸ ದುರ್ಗುಣ ಸುಟ್ಟು
ಶಿಷ್ಟ ರಕ್ಷಕರ ಸದ್ಗುಣದ ಜ್ಯೋತಿಯು ಬೆಳಗುವ
ಹಚ್ಚೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಮನದ ಮಲಿನತೆ ತೊಳೆದು
ತನುವ ನಿಷ್ಕಲ್ಮಶದ ಜ್ಯೋತಿಯು ಬೆಳಗುವ
ಹಚ್ಹೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಜಾತಿ ಧರ್ಮಗಳ ಗೊಡವೆಗೆ
ಗೋಡೆಯ ಕಟ್ಟಿ
ಗುಲ್ಲೆಬ್ಬಿಸುವ ಸ್ವಾರ್ಥಿಗಳ
ಸಮಾಧಿ ಮಾಡಿ
ಸರ್ವೋದಯ ನವೋದಯದ
ಜ್ಯೋತಿಯು ಬೆಳಗುವ
ಹಚ್ಚೋಣ ದೀಪವ
ಅಂತರಂಗದಿ ಹಚ್ಚೋಣ ದೀಪವ.!!

ಓಂಕಾರ ಪಾಟೀಲ್.ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ