Oplus_131072

ಹಳ್ಳಿ ಹುಡುಗಿ.

ಏನ್ ಚಂದ ಹಳ್ಳಿ ಹುಡುಗಿ
ಫ್ಯಾಷನ್ ಮಾಡಂಗಿಲ್ಲ
ಚೂಡಿದಾರ ಹಾಕಂಗಿಲ್ಲ
ಲಂಗ ದಾವಣಿ ತೊಟ್ಟಾಳಲ್ಲ//

ಏನ್ ಚಂದ ಹಳ್ಳಿ ಹುಡುಗಿ,,,,,

ಸೆಲ್ಪಿ ಅಂತಾ ಹೇಳಿ ಮೂಗು ಮುಸುಡಿ ತಿರುವಂಗಿಲ್ಲ
ಕಿವೀಲಿ ಹೆಡ್ ಫೋನ್ ಇಟ್ಕಂಡು ಹಾಡು ಕೇಳಂಗಿಲ್ಲ//

ಏನ್ ಚಂದ ಹಳ್ಳಿ ಹುಡುಗಿ,,,

ಹಣೇಲಿ ಕುಂಕುಮ ಕೈಯನ ಬಳೆ ಭಾರಿ ಕಾಣ್ತಾವಲ್ಲ
ಕೊರಳ ಮುತ್ತಿನ ಸರ ಕಾಲ್ಗೆಜ್ಜೆ
ಫಳಫಳ ಹೊಳಿತಾವಲ್ಲ//

ಏನ್ ಚಂದ ಹಳ್ಳಿ ಹುಡುಗಿ,,,

ಫೇಸ್ಬುಕ್ ವಾಟ್ಸಾಪ್ ನೋಡಾಕಂತ
ಮೊಬೈಲ್ ಮುಟ್ಟಂಗಿಲ್ಲ
ಇನ್ ಸ್ಟಾ ಸ್ನ್ಯಾಪ್ ಚಾಟ್ ಅಂತೇಳಿ ಮೊಬೈಲ್ ಪರದೇ
ಸರಸಂಗಿಲ್ಲ//

ಏನ್ ಚಂದ ಹಳ್ಳಿ ಹುಡುಗಿ,,,
ಮುಖಕ್ಕೆ ಪೌಡರ್ ತುಟಿಗೆ ಲಿಪ್ ಸ್ಟಿಕ್ ಒಟ್ಟಾ ಹಚ್ಚಂಗಿಲ್ಲ
ಐ ಬ್ರೋ ಬಾಬ್ ಕಟ್ ಅಂತೂ ಒಟ್ಟಾ ಮಾಡ್ಸೇ ಇಲ್ಲ//

ಏನ್ ಚಂದ ಹಳ್ಳಿ ಹುಡುಗಿ,,,

ಆಟದಾಗ ಪಾಠದಾಗ ಮುಂದೆ ಇದ್ದಾಳಲ್ಲ
ಒಳ್ಳೇ ಅಂಕ ತೆಗೆದು ಸರಕಾರಿ ನೌಕರಿ ಹಿಡಿದಾಳಲ್ಲ

ಏನ್ ಚಂದ ಹಳ್ಳಿ ಹುಡುಗಿ,,,

– ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ

ಕವಿ ಪರಿಚಯ:

ಸಾಹಿತಿ ಕೊಟ್ರೇಶ ಜವಳಿ ಯವರು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದವರು. 44 ವರ್ಷದ ವಯೋಮಾನದವರಾದ ಇವರು ಮೆಟ್ರಿಕ್ ವರೆಗೆ ಮಾತ್ರ ಅಧ್ಯಯನ ಮಾಡಿ, ಕನ್ನಡ ಸಾಹಿತ್ಯದಲ್ಲಿ ತುಂಬ ಆಸಕ್ತಿಯಿಂದ ಕವಿತೆಗಳನ್ನು ಬರೆಯುತ್ತಿದ್ದಾರೆ. 2024 ರಲ್ಲಿ ಇವರು ‘ಕಾವ್ಯ ಕಲ್ಪವಲ್ಲರಿ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ