Oplus_131072

ಹನುಮನ ಜಾತ್ರೆ

ಅಜ್ಜಾ ಬಂದಾನ ಕರಿಯಾಕ
ಅವ್ರೂರಿನ ಜಾತ್ರೇ ಮಾಡಾಕ
ಹನುಮನ ತೇರು ಎಳಿಯಾಕ
ಭಕ್ತಿಯಿಂದ ಅವಗ ಕೈ ಮುಗಿಬೇಕ//

ಬಗೆ ಬಗೆ ಬಣ್ಣದ ಪಟಗಳು
ಹೂಗಳ ಸುಂದರ ಹಾರಗಳು
ಕಟ್ಟಿಗೆ ತೇರು ಸಿಂಗಾರ
ಒಟ್ಟಿಗೆ ಬಾಳು ಬಂಗಾರ//

ಅಜ್ಜ ಕೊಡಿಸಿದ ಮಿಠಾಯಿ
ತಲೆಗೆ ಸಿಕ್ಕಿಸಿದ ತುರಾಯಿ
ಕೊಡಿಸಿದ ಬಗೆ ಬಗೆ ಆಟಿಕೆ
ಮಾಡಲಿಲ್ಲ ಬೂಟಾಟಿಕೆ//

ತಿರುಗುವ ಚಕ್ರವ ಹತ್ತಿಸಿದ
ಬೆಂಡು ಬೆತ್ತಾಸ ಕೊಡಿಸಿದ
ಗೋಬಿ ಪಾನೀಪೂರಿ ತಿನ್ನಿಸಿದ
ಸುಂದರ ಬಳೆಗಳ ಕೊಡಿಸಿದ/

ಊರನ್ನೆಲ್ಲಾ ಸುತ್ತಿದೆವು
ಜಾತ್ರೆ ಸಂಭ್ರಮ ನೋಡಿದೆವು
ಹಿರಿ ಹಿರಿ ಹಿರಿ ಹಿಗ್ಗಿದೆವು
ತಕ ತಕ ತಕ ತಕ ಕುಣಿದೆವು/

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ