ಹಾರಾಡುವ ಹಕ್ಕಿ
ಬಾಳೊಂದು ಭಾವಗೀತೆ ಸಂಗಮ
ಮನಸೊಂದು ಮಾಯಾ ಜಂಗಮ
ಹಾರಾಡುವ ಹಕ್ಕಿ ತಿರುಗಿ ಬಂತು
ಗಾಳಿಪಟದಂತೆ ಮೇಲೆ ಹಾರಿ ನಿಂತು
ಬದುಕೊಂದು ಉಯ್ಯಾಲೆ ತಿಳಿ
ಸೋಲು ಗೆಲುವಿನ ಆಟ ಕೇಳಿ
ತಾಳ್ಮೆ ಇರದ ಭಾವನೆ ನಮ್ಮದು
ದಿಕ್ಕಿಲ್ಲದ ಗುರಿಯಿರದ ಜೀವನ ನಮ್ಮದು
ದಾರದಂತೆ ಜೀವನ ಹಿಡಿದು ಸಾಗಿ
ಜಾರಿ ಬೀಳುವ ಸಂಭ್ರಮ ಮೇಲಾಗಿ
ಅರಿತು ಅರಿಯದೆ ಮನ ಹೇಳಲಾಗಿ
ತಿಳಿದು ಬಾಳೊ ನೀ ಮನುಜನಾಗಿ
ಭುವಿಗೂ ಬಾನಿಗೂ ಏನಿ ಅಂತರ
ಪತಂಗ ಹಾರೊ ಸಂಚಲನ ನಿರಂತರ
ಬದುಕು ಹಾರುವ ಚಿಟ್ಟೆ ಅನಂತರ
ಬಿರುಗಾಳಿಗೇ ಸಿಗದೆ ಬಾಳು ಆನಂತರ
– ಕವಿತಾ ಮಾಲಿ ಪಾಟೀಲ ಜೇವರ್ಗಿ.