Oplus_131072

ಹಾರಕೂಡೇಶ್ವರ ವಚನಗಳು

ಏನೋ ಮಾಡಲು ಹೋಗಿ
ನಾನೇನೋ ಮಾಡಿದೆನಯ್ಯಾ  !
ಎಲ್ಲಿಗೋ ಹೋಗದು ಮರೆತು
ಇನ್ನೆಲ್ಲಿಗೋ ನೆಡೆದೆನಯ್ಯಾ  !
ದಾರಿ ಎರಡಾದುದನ್ನು ಕಂಡು
ಬೆರಗಾಗಿ ನಿಂತೆನಯ್ಯಾ  !
ದಾರಿ ತೋರೋ ಹರ ಹರ ಹಾರಕೂಡೇಶ್ವರ.

ಮೂರೇನೆಂಬುದು ಅರಿಯಲಿಲ್ಲ
ಆರು ಗುಣಗಳು ಬಿಡಲಿಲ್ಲ
ಈ ಜನ !
ಒಂಭತ್ತರ ಲೆಕ್ಕವು
ಮಾಡುವರು ನೋಡಾ !
ಹರ ಹರ ಹಾರಕೂಡೇಶ್ವರ !

ಜೇಡರ ಹುಳುವಿನಂತೆ
ಬಂದು ಬಿದ್ದೇನು ಭವದೊಳಗೆ
ಮುದ್ದು ಮಾಡಿ ಹೆಣೆದೊಡೆ
ಎದ್ದು ಬರಲು ಆಗದೆ
ಸಂಸಾರವೆಂಬ ಬಲೆಯಲ್ಲಿ
ಬಿದ್ದು ಬಳಲುತ್ತಿರುವೆ
ಎನ್ನಳಲು ಕೇಳೊ !
ಹರ ಹರ ಹಾರಕೂಡೇಶ್ವರ !

ಮಚ್ಚೇಂದ್ರ ಪಿ ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ