ಹರಟೆ ಹೊಡೆದ ಗುರುತಿತ್ತು
ಮನದ ನಿತ್ಯದ ನಿಲ್ಲದ ವಿಲಾಪವದು
ಬಾಳು ತಾಗಿಸಿಕೊಂಡ ಕಡು ಹೊಡೆತಕ್ಕೆ
ಬೇಸಿಗೆ ಆತುರದುಸಿರದು ಬಾಳ ಬೇಗುದಿಗೆ
ಅಶಾಂತಿಯ ಗಾಳಿ ಹಡದಿಯಾಸಿತ್ತು ಬಿಡದೆ
ಕಾಡಿ ಬೇಡಿದರು ಬಿಡದ ಮಾತುಗಳಿಂದು
ಮಾತು ಬಾರದೆ ಮೂಕವಾಗಿವೆ
ಮುಂಗತ್ತಲೆಯಲ್ಲಿ ಬಾಡುವ ಹೂವಂತೆ
ಮನವು ಮುದುಡಿತ್ತು ನಗೆಯ ಕಾಣದೆ
ಸೋಲುಗಳು ಹರಟೆ ಹೊಡೆದ
ಮಾಸದ ಗುರುತು ಮನದಲ್ಲಿತ್ತು
ಕತ್ತಲೆ ಕಾಲ ಕರಗದಿದ್ದರೂ ಬಾಳ ಪ್ರೇಮ
ಬೆಳಗಿದ್ದು ಆ ಮುಗ್ಧ ಮಕ್ಕಳ ನಗುವಿಂದ
ಅರಳುವ ಮುದ್ದಿನ ಮನಗಳ ಕಂಡು
ನುಂಗಿದ ಸಾಲು ನೋವು ಮರೆತಿರುವೆ
ನಾಡಿನ ನಾಳೆಯ ಜ್ಞಾನಿಗಳೆದುರು
ಕಲಿಯುವ ಮಡಿವಂತ ಮಗುವಾಗಿರುವೆ.
– ಶಾರದ ಎಸ್.ಜಿ. ಯಡ್ರಾಮಿ