Oplus_131072

ಇತಿಹಾಸವನ್ನು ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ.

ಇತ್ತೀಚಿಗೆ ವಿಜಯವಾಣಿ ಸುದ್ದಿ ವಾಹಿನಿಯಲ್ಲಿ ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯನಂದ ಸರಸ್ವತಿ ಎಂಬುವವರು ಆರ್ಯ ಜನಾಂಗದ ಮೂಲ ನೆಲೆಯ ಕುರಿತು ‘ವಾಸ್ತವ ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ’ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನ ಹಸಿ ಸುಳ್ಳಿನಿಂದ ಕೂಡಿದೆ.

ಇಡೀ ಲೇಖನದ ತುಂಬ ಸ್ವಾಮಿ ನಿರ್ಭಯನಂದ ಸರಸ್ವತಿ ಅವರು ಹೇಳಲು ಹೊರಟಿರುವ ಏಕೈಕ ವಿಷಯವೆಂದರೆ, ಅದು ಆರ್ಯರು ಹೊರಗಿನಿಂದ ಬಂದವರಲ್ಲ ಈ ದೇಶದ ಮೂಲ ನಿವಾಸಿಗಳು ಎಂಬುವಂತ ಶುದ್ಧ ಸುಳ್ಳಿನ ಮಾತು.

ಭವಿಷ್ಯ ಈ ಸ್ವಾಮೀಜಿಯವರಿಗೆ ಇತಿಹಾಸದ ಪರಿಜ್ಞಾನ ಇಲ್ಲವೇನೋ ! ಎಂದೇನಿಸುತ್ತದೆ. ಅಥವಾ ಗೊತ್ತಿದ್ದರೂ ಸಹ ಬೇಕು ಅಂತಲೇ ಈ ರೀತಿ ಹೇಳಿದ್ದಾರೋ ತಿಳಿಯದು.

ಆರ್ಯರಾದ ನಾವೇ ಈ ನೆಲದ ಮೂಲ ನಿವಾಸಿಗಳು ಎಂದು ಇವರು ಸುಳ್ಳು ಹೇಳುತ್ತಿರುವುದು ನೋಡಿದರೆ ಅಸುರ ದ್ರಾವಿಡರು ಮೂಲತಃ ಈ ನೆಲದವರಲ್ಲ.! ಇಲ್ಲಿನ ನಾಗರಿಕತೆಯ ನಗರಗಳನ್ನು ಕಟ್ಟಿದವರು ನಾವೇ.! ಅಸುರ ದ್ರಾವಿಡರೆ ಹೊರಗಿನಿಂದ ಬಂದು ಇದನ್ನು ನಾಶ ಮಾಡಿದರು ಎಂಬಂತೆ ಬಿಂಬಿಸಿ ಅಸುರ ದ್ರಾವಿಡರ ಚರಿತ್ರೆಯ ಒದೆ ಮಾಡುವ ಹುನ್ನಾರದಂತೆ ಕಂಡುಬರುತ್ತದೆ.

ಆದರೆ ನಿಜವಾದ ಚರಿತ್ರೆ ಏನ್ ಹೇಳುತ್ತದೆ ಎಂದರೆ, ಈ ಅಲೆಮಾರಿ ಬಿಳಿ ಬಣ್ಣದ ಆರ್ಯರು ಕ್ರಿ.ಪೂ ೧೮೦೦ ರಿಂದ ನೂರಾರು ವರ್ಷಗಳವರೆಗೆ ತಂಡೋಪ ತಂಡವಾಗಿ ಮಧ್ಯೆ ಏಷ್ಯಾದ ಇಂದಿನ ಇರಾನ್ ಮತ್ತು ಇರಾಕ್ ಕಡೆಯಿಂದ ತಮ್ಮ ದನಗಳಿಗೆ ಮೇವನ್ನು ಹುಡುಕುತ್ತಾ ಖೈಬರ್ ಕಣಿವೆಗಳ ಮೂಲಕ ಸಿಂಧೂ ನದಿ ಬಯಲಿಗೆ ವಲಸೆ ಬಂದಿದ್ದಾರೆ ಎಂದು.

ಈ ವೇಳೆಗಾಗಲೇ ದ್ರಾವಿಡರಾದ ಅಸುರ ರಕ್ಷಸರು ನಾಗರಿಕತೆಯ ತುತ್ತ ತುದಿಯಲ್ಲಿದರು. ಸಿಂಧೂ ಬಯಲಿನಲ್ಲಿದ ಅಸುರರ ಸಂಪತ್ ಭರಿತ ಅಸುರ ಪುರಿಗಳನ್ನು ಕಂಡು ಅಲೆಮಾರಿ ಆರ್ಯರು ಬೆಚ್ಚಿ ಬೆರಗಾಗಿ ಹೋದರು. ಇಂತಹ ಸುವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಿದ ನಗರಗಳಲ್ಲೆ ನೆಲೆ ನಿಲ್ಲಬೇಕೆಂದು ನಿರ್ಧರಿಸಿ, ಇಲ್ಲಿನ ಮೂಲನಿವಾಸಿ ದ್ರಾವಿಡರ ಬಳಿ ಆರ್ಯರು ಇರಲು ಸ್ವಲ್ಪ ಸ್ಥಳವನ್ನು ಬೇಡಿಕೊಂಡರು.

ದಯಾಳುಗಳಾದ ಅಸುರರು ದಿಕ್ಕಿಲ್ಲದವರಂತೆ ಅಲಿಯುತ ಬಂದ ಆರ್ಯರಿಗೆ ಕರುಣೆ ತೋರಿ ಇರಲು ಸ್ವಲ್ಪ ಸ್ಥಳವನ್ನು ನೀಡಿದರು.

ಕಾಲ ಕಳೆದಂತೆ ಆರ್ಯರೊಳಗೆ ದುರಾಸೆ ಮೂಡಿ ಅಧಿಕಾರಕ್ಕಾಗಿ ಹಪಹಪಿಸತೊಡಗಿದರು. ವಂಚಕರಂತೆ ವಾಮ ಮಾರ್ಗಗಳನ್ನು ಪ್ರಾರಂಭಿಸಿ ಅಸುರ ರಾಕ್ಷಸರ ಬಳಿ ಕೆಲಸಕ್ಕೆ ಸೇರಿಕೊಂಡು ತಮ್ಮ ನೀಚ ಬುದ್ಧಿಯಿಂದ ಕೊಟ್ಟಿಲ್ಲ ತಂತ್ರಗಳನ್ನು ಉಪಯೋಗಿಸಿ ಅಸುರ ಗಣಗಳ ಮಧ್ಯೆ ವೈಷಮ್ಯದ ಬೀಜ ಬಿತ್ತಿದರು.

ಪರಸ್ಪರ ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟಿ ವೈಮನಸುಗಳನ್ನು ಸೃಷ್ಟಿಸಿ ಕಂದಕಗಳನ್ನುಂಟು ಮಾಡಿದರು. ನರಿಗಳಂತೆ ಮುಖವಾಡ ತೊಟ್ಟು ಅಸುರ ರಾಕ್ಷಸ ಅರಸರ ಕೊಲೆ ಮಾಡಿದರು. ಮತ್ತೊಂದು ಕಡೆಯಿಂದ ಇಂದ್ರ ಪದವಿಯನ್ನು ಸೃಷ್ಟಿಸಿ ಒಂದೊಂದಾಗಿಯೇ ಅಸುರರ ನಗರಗಳು ನಾಶ ಮಾಡುತ್ತ ಮುಂದೆ ಸಾಗತೊಡಗಿದರು.
ಇದಕ್ಕೆ ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಎಂದು ಪ್ರಚಾರ ನೀಡಿದರು.

ಮಾನ್ಯ ಸ್ವಾಮಿ ನಿರ್ಭಯನಂದ ಸರಸ್ವತಿ ಅವರೆ ! ತಾವು ಸಿಂಧೂ ಬಯಲಿನ ನಾಗರಿಕತೆಗಳನ್ನು ನಾಶ ಮಾಡಿದ್ದು ಆರ್ಯರಲ್ಲ ಎಂದು ಹೇಳುತ್ತಿರುವಿರಿ. ಆದರೆ ನಿಮ್ಮ ಕೈಯಲ್ಲಿರುವ ಧರ್ಮ ಗ್ರಂಥಗಳು ಆರ್ಯರೆಂದೆ ಹೇಳುತ್ತೇವೆಯಲ್ಲ ಅದಕ್ಕೆ ಏನಂತೀರಿ. ?
ಋಗ್ವೇದದಲ್ಲಿ ‘ಅಸುರರ ಪುರಗಳನ್ನು ನಾಶ ಮಾಡಿದ ಇಂದ್ರನೆ ನಾವು ಈ ಹೋಮಕ್ಕೆ ಅರ್ಪಿಸುತ್ತಿರುವ ಸೋಮರಸವನ್ನು ಸ್ವೀಕರಿಸು, ಮಾಂಸದ ಈ ಹಸಿವು ಸ್ವೀಕರಿಸು’ ಎಂಬಂತ ಮಂತ್ರಗಳಿವೆಯಲ್ಲ ಇದಕ್ಕೆ ನೀವೇನು ಹೇಳುವಿರಿ. ?

ಆರ್ಯರು ವಿದೇಶದಿಂದ ಬಂದವರೆಂಬುವುದಕ್ಕೆ ನಮ್ಮ ವೇದದಲ್ಲಿ ಉಲ್ಲೇಖವಿಲ್ಲ ಎನ್ನುವ ನೀವು ಋಗ್ವೇದದ 10ನೇ ಶ್ಲೋಕದಲ್ಲಿ “ಆರ್ಯರು ಮತ್ತು ಅನಾರ್ಯರ ನಡುವೆ ಯುದ್ಧ ನಡೆದಾಗ ವೈದಿಕ ಬ್ರಾಹ್ಮಣರು ಉತ್ತರ ದೃವದಿಂದ ಭಾರತಕ್ಕೆ ಬಂದ ಜನಾಂಗದವರಾಗಿದ್ದೇವೆ.” ಎಂಬ ಹೇಳಿಕೆ ಇದೆಯಲ್ಲ ಇದಕ್ಕೆ ಏನೆನ್ನುವಿರಿ.?

ಆರ್ಯರು ವಿದೇಶಿಗರು ಎಂಬುದಕ್ಕೆ ಬ್ರಾಹ್ಮಣರೇ ಹೇಳಿದ ಕೆಲವೊಂದಿಷ್ಟು ಉದಾಹರಣೆಗಳು ಈ ಕೆಳಗೆ ನೀಡಿರುವೆ ನೋಡಿ.

೧. ಬಾಲಗಂಗಾಧರ್ ತಿಲಕ:- ಅವರು ತಮ್ಮ The Arctic Home in the Vedas ಎಂಬ ಪುಸ್ತಕದಲ್ಲಿ ಬ್ರಹ್ಮಣರು ವಿದೇಶದಿಂದ ವಲಸೆ ಬಂದವರು ಎಂಬುದು ಒಪ್ಪಿಕೊಳ್ಳುತ್ತಾರೆ.

೨. ಜವಾಹರಲಾಲ್ ನೆಹರು:- Discovery of India ಎಂಬ ಪುಸ್ತಕದಲ್ಲಿ ನಾವು (ಬ್ರಾಹ್ಮಣರು) ಮಧ್ಯ ಏಷ್ಯಾದಿಂದ ಬಂದವರಾಗಿದ್ದೇವೆ ಎಂದು ದಾಖಲಿಸಿದ್ದಾರೆ. ಹಾಗೂ ವಿದೇಶದಲ್ಲಿ ಓದುತ್ತಿದ್ದ ತಮ್ಮ ಮಗಳಾದ ಇಂದಿರಾ ಗಾಂಧಿಗೆ ಬರೆದ ಸುಮಾರು 30 ಪತ್ರಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

೩. ಕೇದಾರನಾಥದ ಪಾಂಡೇ ಬ್ರಾಹ್ಮಣನಾದ ರಾಹುಲ್ ಸಾಂಸ್ಕೃತಾಯನ ತನ್ನ Olga to Gong ಎಂಬ ಕೃತಿಯಲ್ಲಿ ಬ್ರಾಹ್ಮಣರು ಮಧ್ಯ ಏಷ್ಯಾದಿಂದ ಗಂಗಾ ನದಿಯ ಬಯಲು ಪ್ರದೇಶಕ್ಕೆ ಹೇಗೆ ವಲಸೆ ಬಂದರು ಎಂಬುವುದು ಸವಿಸ್ತರವಾಗಿ ಬರೆದಿದ್ದಾರೆ.

೪. ವಿ.ಡಿ ಸಾವರ್ಕರ್:- सहा सोनेरी पाने ಎಂಬ ತಮ್ಮ ಮರಾಠಿ ಪುಸ್ತಕದಲ್ಲಿ ನಾವು ವಿದೇಶದಿಂದ ಬಂದ ವಲಸಿಗರಾಗಿದ್ದೇವೆ ಎಂದು ಹೇಳಿದ್ದಾರೆ.

೫. ‘ಸಾರೇ ಜಂಹಾಸೆ ಅಚ್ಛಾ’ ಎಂಬ ಹಾಡು ಬರೆದ ಕಾಶ್ಮೀರ ಪಂಡಿತನಾದ ಇಕ್ಬಾಲ್ ಅಹಮದ್ ಅವರು ಸಹ ನಾವು ವಿದೇಶದಿಂದ ಬಂದವರೆಂದು ಹೇಳುತ್ತಾರೆ.

೬. ರಾಜಾರಾಮ ಮೋಹನ ರಾಯ್ ಅವರು ಇಂಗ್ಲೆಂಡಿನಲ್ಲಿ “ನಾನು ನನ್ನ ಮಾತ್ರ ಭೂಮಿಗೆ ಹಿಂತಿರುಗಿ ಬಂದಿದ್ದೇನೆ” ಎಂದು ಭಾಷಣ ಮಾಡಿರುವುದು ದಾಖಲೆ ಇದೆ.

೭. ಗಾಂಧಿಯು ೧೮೯೪ ರಲ್ಲಿ ದಕ್ಷಿಣ ಆಫ್ರಿಕದ ವಿಧಾನಸಭೆಗೆ ಬೆರದ ಒಂದು ಪತ್ರದಲ್ಲಿ ನಾವು ಏರೋಪಿನರ್ ಎಂದು ಉಲ್ಲೇಖಿಸಿದ್ದಾರೆ.

೮. ಬ್ರಹ್ಮ ಸಮಾಜದ ನಾಯಕರಾದ ಸುಭಾಷ್ ಚಂದ್ರ ಸೇನ್ ಎಂಬುವವರು ೧೮೭೭ ರಲ್ಲಿ ಕೋಲ್ಕತ್ತಾದಲ್ಲಿ ಮಾತನಾಡುತ್ತಾ, “ಬ್ರಿಟಿಷರು ಭಾರತಕ್ಕೆ ಬಂದ ಪ್ರಯುಕ್ತ ನಮ್ಮ ನಿಜವಾದ ಅಣ್ಣತಮ್ಮಂದಿರ ಪುನರ್ಮಿಲನವಾಗಿದೆ” ಎಂದು ತುಂಬಿದ ಸಭೆಯಲ್ಲಿ ಹೇಳಿದ್ದಾರೆ.

ತಮಗೆ ಇದಕ್ಕಿಂತಲೂ ಹೆಚ್ಚಿಗೆ ದಾಖಲೆ ಬೇಕಿದ್ದರೆ, ಅಮೇರಿಕದ ‘Salt lake City’ಯ ‘University of Utaha (USA)’ ಎಂಬ ವಿಶ್ವವಿದ್ಯಾಲಯದಲ್ಲಿಯ ಮಾನವ ವಂಶ ಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಗ್ರಹಿಸಿರುವ DNA. Report ಸಹ ಭಾರತದ ಬ್ರಾಹ್ಮಣರು, ಕ್ಷತ್ರೀಯರು ಮತ್ತು ವೈಶ್ಯರು ಇವರೆಲ್ಲಾ ವಿದೇಶಿಯರಾಗಿದ್ದಾರೆ ಎಂದು ಹೇಳುತ್ತದೆ. ಬೇಕಾದರೆ ತಾವು ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿ ಅದಕ್ಕೆ ತಗಲುವ ಶುಲ್ಕ ಪಾವತಿಸಿ ತರಿಸಿಕೊಂಡು ನೋಡಬಹುದು.

ಮಾನ್ಯ ಸ್ವಾಮಿ ನಿರ್ಭಯನಂದ ಸರಸ್ವತಿ ಅವರೆ, ಸುಳ್ಳು ಭವಿಷ್ಯದ ದೃಷ್ಟಿಯಿಂದ ಈ ಸಮಾಜಕ್ಕೆ ತುಂಬಾ ಅಪಾಯಕಾರಿ ! ಸಮಾಜದಲ್ಲಿ ಸುಳ್ಳು ಬಿತ್ತುವ ಈ ನಿಮ್ಮ ಖಂತ್ರಿ ಬುದ್ಧಿ ನಿಲ್ಲಿಸಿ. ಇತಿಹಾಸ ತಿರುಚುವ ನಿಮ್ಮ ಚಾಳಿ ಬಿಟ್ಟುಬಿಡಿ. ಏಕೆಂದರೆ ಜನ ಬುದ್ಧಿವಂತರಾಗಿದ್ದಾರೆ ಇದು ನಿಮ್ಮ ಬುಡಕ್ಕೆ ಬರುವ ಸಾಧ್ಯತೆಗಳೆ ಹೆಚ್ಚು.

ಅಶ್ವಜೀತ ದಂಡಿನ ಬೀದರ್.

 

5 thoughts on “ಇತಿಹಾಸವನ್ನು ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ.”
  1. ಆರ್ಯ ದ್ರಾವಿಡ ಸಿದ್ಧಾಂತ ಆಂಗ್ಲರ ಸುಳ್ಳು ಸಿದ್ಧಾಂತ ಇದರಲ್ಲಿ ಯಾವುದೇ ಆಧಾರಗಲಿಲ್ಲ. ಸ್ವತಃ ಡಾ ಬಾಬಾಸಾಹೇಬ್ ಅಂಬೇಡ್ಕರ್ ಸಹ ಆರ್ಯ ದ್ರಾವಿಡ ಸಿದ್ಧಾಂತವನ್ನು ಒಪ್ಪಿಲ್ಲ. ಪ್ರಸ್ತುತ ಲೇಖನದಲ್ಲೂ ಲೇಖಕರು ಇನ್ನೂ ಆಂಗ್ಲರ ಗುಂಗಿನಲ್ಲಿ ಇದ್ದಾರೆ ಅನ್ಸುತ್ತದೆ. ಸುಳ್ಳು ಇತಿಹಾಸ ಆಂಗ್ಲರದೋ, ಭಾರತೀಯರಾದೋ ಮೊದಲು ತಿಳಿಯುದು ಒಳಿತು. ಕಮ್ಯುನಿಸ್ಟ್ ಇತಿಹಾಸವನ್ನು ಕೇಳುವ ಭಾರತೀಯರು ಪ್ರಸ್ತುತ ಕಡಿಮೆ ಜನ ಇರುವರು

    – ಮೃತುಂಜಯ ಎಸ್. ಬಳ್ಳಾರಿ.

  2. ಲೇಖನದಲ್ಲಿ ಲೇಖಕರು ಉಲ್ಲೇಖಿಸಿರುವ ಈ ಹೆಸರೊಳ್ಳವರು ಆಂಗ್ಲರೆ..!?👇
    ೧. ಬಾಲಗಂಗಾಧರ್ ತಿಲಕ
    ೨. ಜವಾಹರಲಾಲ್ ನೆಹರು
    ೩.ರಾಹುಲ್ ಸಾಂಸ್ಕೃತಾಯನ
    ೪. ವಿ.ಡಿ ಸಾವರ್ಕರ್
    ೫.ಇಕ್ಬಾಲ್ ಅಹಮದ್
    ೬. ರಾಜಾರಾಮ ಮೋಹನ ರಾಯ್
    ೭. ಗಾಂಧಿ
    ೮.ಸುಭಾಷ್ ಚಂದ್ರ ಸೇನ್
    ಇವರ್ಯಾರು ಆಂಗ್ಲರಿಲ್ಲ ಬದಲಾಗಿ ಸ್ವತಃ ಆರ್ಯ ಜನಾಂಗದವರಾಗಿದ್ದಾರೆ.

    ಎಂತಲು ಹೆಚ್ಚಾಗಿ ವೈಜ್ಞಾನಿಕವಾಗಿ DNA. Report ಇದೆ . ಅದಕ್ಕೆ ಏನಂತೀರಾ !?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ