Oplus_131072

ಇವರೆ ನೋಡು ಗಾಂಧಿ ತಾತ

ಇವರೆ ನೋಡು ಗಾಂಧಿ ತಾತ
ದೇಶಕ್ಕೆಂದೆ ಮಡಿದರು
ನಾಡ ಜನರ ಬದುಕಿಸಲೆಂದು
ಅಹಿಂಸಾ ಮಾರ್ಗ ಹಿಡಿದರು.

ಜನರ ನೋವು ಜನರ ಹಸಿವು
ದಾಸ್ಯದ ಬೇಗೆ ಸಹಿಸುತ
ನಾಡ ಜನರ ಒಗ್ಗೂಡಿಸಿ
ದೇಶಕೆ ಮುಕ್ತಿ ತಂದರು

ಗುಜರಾತಿನ ಪೋರಬಂದರಿನಲಿ ಉದಯಿಸಿ
ನಾಡ ಜನರ ಎದೆಯಲಿ ದೇಶಪ್ರೇಮದ ಕಿಡಿ ಹಚ್ಚಿಸಿ
ಲಾಠಿ ಕೋವಿ ಮದ್ದುಗುಂಡಿಗೆ ಬೆದರದೆ
ಇವರು ನಡೆದರು

ಸತ್ಯ ಧರ್ಮ ಶಾಂತಿ ಜಪವ ಪಠಿಸುತ
ನಿತ್ಯ ಸತ್ಯ ತಪವ ಮಾಡುತ
ನುಡಿದಂತೆ ನಡೆಯುತ
ಗಾಂಧಿ ತಾತ ವಿಶ್ವಧಾತ ರಾಷ್ಟ್ರ ಪಿತನು ಎನಿಸುತ

ಚರಕ ಹಿಡಿದು ನೂಲು ತೆಗೆದು
ತನ್ನ ಮಾನ ಮುಚ್ಚಲು
ಸ್ವದೇಶಿ ವಸ್ತು ಸ್ವಯಂ ಶಿಸ್ತು
ಇವರ ಆಸ್ತಿ ಆಗಲು

ನಡುಗಿತು ಪರದೇಶಿ ಎದೆಗಳು
ಬೆದರಿತು ವಿದೇಶಿ ಪಡೆಗಳು
ಮಧ್ಯರಾತ್ರಿ ದೇಶ ತೊರೆದು
ಹೊರಟಿತು ಆ ಜನಗಳು

ಸಿಕ್ಕಿತು ನಮಗೆ ಮುಕುತಿ‌
ಹಾರಿತು ದೇಶದ ಕೀರುತಿ
ನಮಗಾದರು  ಶಾಂತಿ ಮೂರುತಿ
ಹೆಚ್ಚಲಿ ದೇಶದ ಜನರಲಿ ಜಾಗೃತಿ

ವಿಮಲ ಆದರ್ಶ. ಸಹಶಿಕ್ಷಕಿ
– ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸನಮಕ್ಕಿ ಹೆಬ್ರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ