Oplus_131072

ಜವಾಬ್ದಾರಿತನ..!

 

ವೀಣಾ ಹೇಮಂತ್ ಗೌಡ ಪಾಟೀಲ್.

 

ತುಸು ಹಿಂದುಮುಂದಾಗಬಹುದು…ಆದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಆ ದಿನ ಬಂದೇ ಬರುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವುದನ್ನು ಯಾರು ಯಾರಿಗೂ ಕಲಿಸಬೇಕಾಗಿಲ್ಲ. ಬದುಕಿನಲ್ಲಿ ಎದುರಿಸುವ ಸಮಯ ಸಂದರ್ಭಗಳು ವ್ಯಕ್ತಿಯನ್ನು ಜವಾಬ್ದಾರಿಯುತವಾಗಿಸುತ್ತವೆ. ತಾವು ಕೈಗೊಳ್ಳುವ ಕಾರ್ಯಗಳು ಮತ್ತು ಅವುಗಳ ಪರಿಣಾಮಗಳ ಜವಾಬ್ದಾರಿಯನ್ನು ಹೊರುವ ಮೂಲಕ ಅವರು ತಾವು ಮಾಡುವ ತಪ್ಪುಗಳನ್ನು ಪರಾಮರ್ಶೆ ಮಾಡಿ ತಿದ್ದಿಕೊಳ್ಳುತ್ತಾರೆ. ಹೊಸ ಸವಾಲುಗಳನ್ನು ಎದುರಿಸುವಾಗ ಹಿಂಜರಿಯದೆ, ಯಾರನ್ನೂ ಹೊಣೆಯಾಗಿಸದೆ ಎದುರಿಸುವ ಅವರು ಈ ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಾರೆ.

ನಂಬಿಕೆ….ಯಾವುದೇ ಸಂಬಂಧದ ಬುನಾದಿ ನಂಬಿಕೆ ಎಂದು ಅರಿತಿದ್ದು ತಮ್ಮ ಕೆಲಸ ಮತ್ತು ನಡವಳಿಕೆಗಳಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ನಿರಂತರವಾದ ಬದ್ಧತೆ ಪ್ರಬುದ್ಧತೆಯನ್ನು ಮೂಡಿಸುವುದಲ್ಲದೆ ವೈಯುಕ್ತಿಕ ಮತ್ತು ಆದ್ಯೋಗಿಕ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಸ್ವಯಂಶಿಸ್ತನ್ನು ಅಳವಡಿಸಿಕೊಳ್ಳುವುದು… ಜೀವನದ ಎಲ್ಲಾ ಆಯಾಮಗಳಲ್ಲಿ ಸ್ವಯಂಶಿಸ್ತು ಅತ್ಯವಶ್ಯಕ.ನಿಖರವಾದ ಗುರಿಗಳನ್ನು ತಲುಪಲು ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಈ ಆಧುನಿಕ ಆರೋಗ್ಯವಂತ ಜೀವನಶೈಲಿ ಮತ್ತು ಆರ್ಥಿಕ ವ್ಯವಹಾರಗಳನ್ನು ಇಟ್ಟುಕೊಳ್ಳುವುದು ಅತ್ಯವಶ್ಯಕ. ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಗುರಿಯನ್ನು ತಲುಪುವೆಡೆ ಅಚಲ ಶ್ರದ್ಧೆ ಹೊಂದಿರುವ ಮೂಲಕ ಪ್ರತಿ ಹಂತದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದು.

ವೈಯಕ್ತಿಕ ಬೆಳವಣಿಗೆ ಮತ್ತು ಜೀವನಪರ್ಯಂತದ ಕಲಿಕೆಗಳು ನಮಗೆ ಹೊಸ ವಿಷಯಗಳ ಕುರಿತಾದ ಜ್ಞಾನ, ಕೌಶಲಗಳು ಮತ್ತು ಅನುಭವಗಳನ್ನು ನೀಡಲಾಗಿದೆ. ಬೆಳವಣಿಗೆ ಎಂಬುದು ನಿರಂತರ ಪ್ರಕ್ರಿಯೆ ಎಂಬ ಅರಿವನ್ನು ಮೂಡಿಸುವುದರ ಜೊತೆಗೆ ತಮ್ಮ ಸುರಕ್ಷತಾ ಕವಚದಿಂದ ಹೊರಬಂದು ಸವಾಲುಗಳನ್ನು ಎದುರಿಸುವ ಮತ್ತು ಅವುಗಳನ್ನು ನಿರ್ವಹಿಸುವುದನ್ನು ಕಲಿಯುತ್ತಾರೆ.

ಓದುವುದು, ಕಾರ್ಯಗಾರಗಳಲ್ಲಿ ಭಾಗವಹಿಸುವುದು, ಹೊಸ ಹೊಸ ವಿಷಯಗಳನ್ನು ಕಲಿಯುವ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸದಾ ಹೊಸತನದೆಡೆಗೆ ಬದಲಾಗುತ್ತಿರುವ ಪ್ರಪಂಚದೊಂದಿಗೆ ಹೊಂದಾಣಿಕೆಯ ಹೆಜ್ಜೆ ಹಾಕಬೇಕು. ಧನಾತ್ಮಕ ಮಾನಸಿಕ ಸ್ಥಿತಿಯು ನಿಮ್ಮದಾಗಿದ್ದರೆ ನಿಮ್ಮ ಸುತ್ತಲಿನ ಎಲ್ಲರನ್ನೂ ನೀವು ಆಕರ್ಷಿಸುತ್ತೀರಿ. ಗಟ್ಟಿ ಮುಟ್ಟಾದ ಮತ್ತು ಅರ್ಥಪೂರ್ಣವಾದ ಸಂಬಂಧಗಳನ್ನು ಹೊಂದಲು ಒಳ್ಳೆಯ ಜಾಣ್ಮೆ ಮತ್ತು ಅರ್ಥ ಮಾಡಿಕೊಳ್ಳುವ ಭಾವನಾತ್ಮಕ ಸ್ವಭಾವ ಬೇಕು. ಮನುಷ್ಯ ತನ್ನ ಭಾವನೆಗಳು ಮತ್ತು ಅದರ ಪರಿಣಾಮಗಳ ಕುರಿತು ಸ್ವಯಂ ಅರಿವನ್ನು ಬೆಳೆಸಿಕೊಳ್ಳಬೇಕು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ.ಸಹಾನುಭೂತಿಯ ವರ್ತನೆಯಿಂದ ಒಳ್ಳೆಯ ಸಂವಹನ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಬಹುದು. ಇದರಿಂದ ಪರಸ್ಪರ ಗೌರವ ಮತ್ತು ತಿಳುವಳಿಕೆ.

ತಿಳುವಳಿಕೆಯುಳ್ಳ ವ್ಯಕ್ತಿ ಇತರರನ್ನು ಯಾವುದೇ ರೀತಿಯ ಸಾಮಾಜಿಕ ಆರ್ಥಿಕ ಬೌದ್ಧಿಕ ಹಿನ್ನೆಲೆಯ ಇಸಂಗಳಿಗೆ ಗೌರವಿಸುತ್ತಾನೆ. ಗಮನವಿಟ್ಟು ಕೇಳುತ್ತಾನೆ ಮತ್ತು ವಿವಿಧ ಆಯಾಮಗಳಲ್ಲಿ ವಿಷಯವನ್ನು ಗುರುತಿಸುವ ಮತ್ತು ಗೌರವಿಸುವ ಶಕ್ತಿಯನ್ನು ಹೊಂದುತ್ತಾನೆ. ಇದು ವ್ಯಕ್ತಿ ಗೌರವಕ್ಕೆ ಆತ ಕೊಡುವ ಮಾನ್ಯತೆಯನ್ನು ಹೊಂದಿದೆ. ತನ್ನ ಕೆಲಸ ಕಾರ್ಯಗಳಿಂದ ಆತ ಗೌರವಕ್ಕೆ ಅರ್ಹನಾಗುತ್ತಾನೆ.

ನೈತಿಕತೆ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಗ್ರ ವ್ಯಕ್ತಿತ್ವದಲ್ಲಿ ಬದಲಾವಣೆ ತರುತ್ತಾನೆ. ಪ್ರಾಮಾಣಿಕತೆ, ಗೌರವ ಮತ್ತು ನಿರಂತರ ಬದ್ಧತೆಯನ್ನು ತೋರುವ ವ್ಯಕ್ತಿ ತನ್ನ ವೈಯಕ್ತಿಕ ಮತ್ತು ಉದ್ಯೋಗಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. ಸತ್ಯ ಮತ್ತು ನ್ಯಾಯಪರತೆಗಳು ಆತನ ವ್ಯಕ್ತಿತ್ವದಲ್ಲಿ ಮತ್ತು ಕಾರ್ಯಗಳಲ್ಲಿ ಅಡಕ ಕ್ರಿಯೆ.ವ್ಯಕ್ತಿಯ ಒಳ್ಳೆಯ ಹವ್ಯಾಸಗಳು ಮತ್ತು ತತ್ವಗಳನ್ನು ಯೋಜಿಸಿದರೆ ಬೇರೆಯವರ ಗೌರವಕ್ಕೂ ಪಾತ್ರವಾಗಿದೆ

ಅಧಿಕಾರದ ಸೂತ್ರಗಳನ್ನು ಹಿಡಿಯುವುದು ನಾಯಕತ್ವವಲ್ಲ… ಮುಂದಾಳತ್ವವನ್ನು ವಹಿಸಿ ಇತರರಿಗೆ ಸ್ಪೂರ್ತಿಯಾಗುವುದು ನಿಜವಾದ ನಾಯಕತ್ವದ ಲಕ್ಷಣ.

ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ತಾವು ಕೈಗೊಂಡ ನಿರ್ಧಾರಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದು ಮತ್ತು ಅವರ ಸುತ್ತಲಿನ ಜನರನ್ನು ಅವರ ಅತ್ಯುನ್ನತ ಮಟ್ಟಕ್ಕೆ ಪ್ರೋತ್ಸಾಹಿಸುವುದು ನಾಯಕತ್ವದ ಲಕ್ಷಣವಾಗಿದೆ ಈ ಹವ್ಯಾಸವು ಬೇರೆಯವರನ್ನು ಸಕರ್ಾರಗೊಳಿಸುತ್ತದೆ ಮತ್ತು ಮನೆ ಮನಗಳಲ್ಲಿ ಧನಾತ್ಮಕತೆಯನ್ನು ತುಂಬುವ ಮೂಲಕ ಒಳ್ಳೆಯ ವಾತಾವರಣವನ್ನು ಸೃಷ್ಟಿಸುತ್ತದೆ.

ಮೇಲ್ಕಂಡ ಹವ್ಯಾಸಗಳು ವ್ಯಕ್ತಿಯನ್ನು ಹುಡುಗಾಟದಿಂದ ಜವಾಬ್ದಾರಿಯುತವಾಗಿ, ಚಂಚಲತೆಯಿಂದ ಪ್ರಬುದ್ಧತೆಯೆಡೆಗೆ ಬದಲಾಯಿಸುವ ಸಾಧನಗಳ ವ್ಯಕ್ತಿತ್ವದಲ್ಲಿ ಉತ್ತಮತೆಯನ್ನು ತರುತ್ತದೆ. ಅಂತಹ ಪ್ರಬುದ್ಧತೆ ಎಲ್ಲ ಯುವ ಶಕ್ತಿಯ ಬಾಳನ್ನು ಬೆಳಗಲಿ ಎಂಬ ಹಾರಿಕೆಸೋಣ.

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ

 

ಲೇಖಕಿಯರ ಪರಿಚಯ:

ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ ಚೈತನ್ಯ ‘ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ